Maha shivaratri 2024: ಇಶಾ ಫೌಂಡೇಷನ್‌ನ ವರ್ಣರಂಜಿತ ಶಿವರಾತ್ರಿ ಕಾರ್ಯಕ್ರಮದ Live ಇಲ್ಲಿ ನೋಡಿ - Vistara News

ಧಾರ್ಮಿಕ

Maha shivaratri 2024: ಇಶಾ ಫೌಂಡೇಷನ್‌ನ ವರ್ಣರಂಜಿತ ಶಿವರಾತ್ರಿ ಕಾರ್ಯಕ್ರಮದ Live ಇಲ್ಲಿ ನೋಡಿ

Maha shivaratri 2024: ಕೊಯಮತ್ತೂರಿನ ಇಶಾ ಫೌಂಡೇಷನ್‌ನಲ್ಲಿ ಈ ಬಾರಿಯೂ ಶಿವರಾತ್ರಿ ವಿಶೇಷ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತವೆ. ಶುಕ್ರವಾರ ಸಂಜೆ ಆರಂಭವಾಗಿರುವ ವರ್ಣರಂಜಿತ ಕಾರ್ಯಕ್ರಮಗಳು ಶನಿವಾರ ಬೆಳಗಿನವರೆಗೆ ನಡೆಯಲಿವೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರಿನ ಇಶಾ ಫೌಂಡೇಷನ್‌ ಯೋಗ ಕೇಂದ್ರದಲ್ಲಿ ಪ್ರತಿ ವರ್ಷ ಶಿವರಾತ್ರಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ಬಾರಿಯೂ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಧ್ಯಾನ, ಬೆಳಕಿನ ಪ್ರದರ್ಶನ, ಸಿಡಿಮದ್ದುಗಳ ಪ್ರದರ್ಶನ ಮತ್ತು ಸಂಗೀತ ಸುಧೆಗಳು ಮನಸೂರೆಗೊಳ್ಳುತ್ತವೆ. ಈ ಬಾರಿಯ ಶಿವರಾತ್ರಿ ವಿಶೇಷ ಕಾರ್ಯಕ್ರಮಗಳ ಲೈವ್‌ ಇಲ್ಲಿದೆ. ಶುಕ್ರವಾರ ಸಂಜೆ ಆರಂಭವಾಗಿರುವ ವರ್ಣರಂಜಿತ ಕಾರ್ಯಕ್ರಮಗಳು ಶನಿವಾರ ಬೆಳಗಿನವರೆಗೆ ನಡೆಯಲಿವೆ.

ಶಿವರಾತ್ರಿಯ ಹಿನ್ನೆಲೆ ಏನು?

ವರ್ಷದ ಅಷ್ಟೂ ದಿನಕ್ಕೂ ಒಂದೊಂದು ಹೆಸರಿಟ್ಟು ಹಬ್ಬ ಮಾಡುವ ದೇಶ ನಮ್ಮದು. ವರ್ಷವಿಡೀ ಸಂಭ್ರಮಿಸುತ್ತ ಬದುಕನ್ನು ಚಂದವಾಗಿರುವ ದೇಶದಲ್ಲಿ ಶಿವರಾತ್ರಿಯ ಆಚರಣೆಗೊಂದು ವಿಶೇಷ ಮಹತ್ವವಿದೆ. ತ್ರಿಮೂರ್ತಿಗಳಲ್ಲಿ ಒಬ್ಬನಾದ ಈತ ಸೃಷ್ಟಿಯಲ್ಲಿ ಸ್ಥಿತಿಯಿಂದ ಹೊರತಾದ ಎಲ್ಲವನ್ನೂ ಲಯ ಮಾಡುವವ. ಹೊಸ ಹುಟ್ಟಿಗೆ ಅವಕಾಶ ಉಂಟಾಗುವುದು ಹಳತೆಲ್ಲ ಹೋದಾಗಲೇ ತಾನೇ? ಅಂದರೆ ಹೊಸ ಹುಟ್ಟೆಂದರೆ ಹೊಸ ಶಕ್ತಿಯ ಹುಟ್ಟೂ ಹೌದು. ಶಿವರಾತ್ರಿಯೆಂದರೆ (Maha Shivaratri 2024) ಹೊಸಶಕ್ತಿಯನ್ನು ಮೈಗೂಡಿಸಿಕೊಳ್ಳುವುದು ಎಂಬ ಭಾವವೂ ಇದೆ. ಇನ್ನೂ ಸರಳವಾಗಿ ಹೇಳಬೇಕೆಂದರೆ, ಉಪವಾಸದಿಂದ ಬೇಡದ್ದನ್ನು ಕಳೆದುಕೊಂಡು, ಜಗನ್ನಿಯಾಮಕನ ಧ್ಯಾನದಿಂದ ಹೊಸಶಕ್ತಿಯನ್ನು ಮೈಗೂಡಿಸಿಕೊಳ್ಳುವ ಕಾಲ.

ಇದನ್ನೂ ಓದಿ | Maha Shivaratri 2024: ಮಹಾಶಿವರಾತ್ರಿ: ಧ್ಯಾನಪ್ರಿಯ ಶಿವನ ನೆನೆಯಲೊಂದು ದಿನ

ಪೌರಾಣಿಕ ಹಿನ್ನೆಲೆ

ಈ ಆಚರಣೆಗೆ ಹಲವು ರೀತಿಯ ಪೌರಾಣಿಕ ಹಿನ್ನೆಲೆಗಳಿವೆ. ಶಿವ ಮತ್ತು ಶಕ್ತಿಯರು ಒಂದಾಗಿ ಅಖಂಡ ಶಕ್ತಿಯೊಂದು ಉದ್ಭವಿಸಿದ ದಿನವಿದು. ದೇವಾಸುರರು ಸಮುದ್ರ ಮಥನ ನಡೆಸಿದ ಕಾಲದಲ್ಲಿ, ಅಮೃತಕ್ಕಿಂತ ಮೊದಲು ವಿಷ ಹೊರಬಂತು. ಲೋಕವನ್ನು ಉಳಿಸುವುದಕ್ಕಾಗಿ ಶಿವ ಆ ವಿಷಯವನ್ನು ಕುಡಿದ. ಆ ಹಾಲಾಹಲ ಆತನ ಗಂಟಲಿನಲ್ಲಿ ನಿಲ್ಲುವಂತೆ ಮಾಡಿದಳು ಪಾರ್ವತಿ. ಇದರಿಂದ ಆತ ನೀಲಕಂಠನಾದ ಈ ಸಂದರ್ಭವನ್ನೂ ಶಿವರಾತ್ರಿಯಲ್ಲಿ ನೆನಪಿಸಲಾಗುತ್ತದೆ. ಇದಲ್ಲದೆ, ದೀರ್ಘ ತಪಸ್ಸಿನ ನಂತರ ಈಶ್ವರ ಲಿಂಗರೂಪಿಯಾಗಿ ಉದ್ಭವಿಸಿದ ಕಥಾನಕವೂ ಇದೆ. ಅದನ್ನು ಕಣ್ತುಂಬಿಕೊಳ್ಳುವುದಕ್ಕೆ ರಾತ್ರಿಯ ಜಾಗರಣೆ ಮಾಡಬೇಕೆನ್ನುವ ಪ್ರತೀತಿಯಿದೆ.

ಗಂಗಾವತರಣ

ಇನ್ನೊಂದು ಹಿನ್ನೆಲೆಯೆಂದರೆ ಗಂಗಾವತರಣದ್ದು. ಭಗೀರಥನ ಪ್ರಾರ್ಥನೆಯಂತೆ ಭೂಮಿಗಿಳಿಯಲು ಭಾಗೀರಥಿ ಒಡಂಬಟ್ಟಿದ್ದರೂ, ಧರಗಿಳಿಯುವ ರೀತಿ ಹೇಗೆ ಎಂಬುದು ಬಗೆಹರಿದಿರಲಿಲ್ಲ. ಕಾರಣ, ಗಂಗೆ ತನ್ನ ಪೂರ್ಣ ಶಕ್ತಿಯನ್ವಯ ಧರೆಗೆ ಧುಮ್ಮಿಕ್ಕಿದ್ದರೆ ಲೋಕವೇ ಅಲ್ಲೋಲಕಲ್ಲೋಲ ಆಗುತ್ತಿತ್ತು. ಹಾಗಾಗಿ ಆಕೆಯನ್ನು ತನ್ನ ಜಟೆಯಲ್ಲಿ ಬಂಧಿಸಿದ ಶಿವ ಗಂಗಾಧರನಾದ. ಅಲ್ಲಿಂದ ಆಕೆ ಧಾರೆಯಾಗಿ ಭೂಮಿಗೆ ಪ್ರವಹಿಸಿದಳು ಎನ್ನುತ್ತವೆ ಪುರಾಣಗಳು. ಈ ಹಿನ್ನೆಲೆಯಲ್ಲಿ ಶಿವಲಿಂಗಕ್ಕೆ ಜಲಾಭಿಷೇಕವೂ ಶ್ರೇಷ್ಠವೇ ಎನ್ನಲಾಗುತ್ತದೆ.

ಆಚರಣೆ ಹೇಗೆ?

ಇವೆಲ್ಲ ಶಿವರಾತ್ರಿಯ ಆಚರಣೆಗಿರುವ ನಾನಾ ಹಿನ್ನೆಲೆಗಳು. ಆದರೆ ಆಚರಣೆಯನ್ನು ಹೇಗೆ ಮಾಡಬೇಕು? ಉಪವಾಸ, ಧ್ಯಾನ ಮತ್ತು ಭಜನೆ ಈ ಆಚರಣೆಯ ಮುಖ್ಯ ಅಂಗಗಳು.

ಉಪವಾಸ

ದೇಹ ಮತ್ತು ಮನಸ್ಸುಗಳ ಶುದ್ಧೀಕರಣಕ್ಕೆ ಇದು ಅತ್ಯಂತ ಮಹತ್ವದ್ದು ಎಂದು ಹೇಳಲಾಗುತ್ತದೆ. ಈಗಿನ ಭಾಷೆಯಲ್ಲಿ ಹೇಳುವುದಾದರೆ, ದೇಹ-ಮನಸ್ಸುಗಳನ್ನು ಡಿಟಾಕ್ಸ್‌ ಮಾಡುವ ಕ್ರಮವಿದು. ಆರೋಗ್ಯದ ಸಮಸ್ಯೆ ಇರುವವರಿಗೆ, ಮಕ್ಕಳಿಗೆ, ವೃದ್ಧರಿಗೆ, ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಉಪವಾಸದ ನೇಮವಿಲ್ಲ.

ಧ್ಯಾನ

ವರ್ಷವಿಡೀ ಧ್ಯಾನ-ಪೂಜೆ-ಜಪ-ತಪಗಳನ್ನು ಆಚರಿಸುವುದು ಇಂದಿನ ದಿನಗಳಲ್ಲಿ ಆಗದ ಮಾತು. ಅದಕ್ಕಾಗಿ ದಿನವೊಂದನ್ನು ಮೀಸಲಿರಿಸಿ, ಅಂದಿನ ದಿನ ಕುಂದಿಲ್ಲದಂತೆ ವ್ರತಾಚರಣೆಯಲ್ಲಿ ತೊಡಗುವುದು ಸೂಕ್ತ. ಅಂದಿನ ಧ್ಯಾನ, ಜಪದಿಂದ ವಿಶೇಷ ಶಕ್ತಿ ಸಂಚಯನವಾಗುತ್ತದೆಂಬ ನಂಬಿಕೆ ದೇಶದೆಲ್ಲೆಡೆ ಪ್ರಚಲಿತದಲ್ಲಿದೆ.

ಜಪ

ʻನಮಃ ಶಿವಾಯʼ ಎಂಬ ಪಂಚಾಕ್ಷರಿ ಮಂತ್ರದ ಜಪ ಶ್ರೇಯಸ್ಕರ ಎಂದು ಹೇಳಲಾಗುತ್ತದೆ. ಸೃಷ್ಟಿಯ ಪಂಚತತ್ವಗಳಾದ ಭೂಮಿ, ಜಲ, ಅಗ್ನಿ, ವಾಯು, ಆಕಾಶ ತತ್ವಗಳನ್ನು ಈ ಪಂಚಾಕ್ಷರಿ ಮಂತ್ರ ಸೂಚಿಸುತ್ತದೆ. ಈ ಮಂತ್ರವು ಉತ್ಪಾದಿಸುವ ಧ್ವನಿ ತರಂಗಗಳು ಮನಸ್ಸಿಗೆ ಏಕಾಗ್ರತೆ ಮತ್ತು ದೇಹಕ್ಕೆ ಚೈತನ್ಯವನ್ನು ನೀಡುತ್ತವೆ ಎಂಬ ಮಾತಿದೆ. ನಿಜ ಭಕ್ತಿಯಿಂದ ಈ ಮಂತ್ರದ ಮೂಲಕ ಶಿವನನ್ನು ಜಪಿಸಿದರೆ ಬದುಕು ಬದಲಿಸಿಕೊಳ್ಳಬಹುದು ಎನ್ನುತ್ತಾರೆ ಪ್ರಾಜ್ಞರು.

ಇದನ್ನೂ ಓದಿ | Maha Shivaratri 2024: ಮಹೇಶ್ವರನ ಕುರಿತು ಎಷ್ಟೊಂದು ಕುತೂಹಲಕರ ಸಂಗತಿಗಳು!

ಪೂಜೆ

ಶಿವನಿಗೆ ಬಿಲ್ವಪತ್ರೆ, ಬಿಳಿಯ ಹೂಗಳು, ಭಸ್ಮ, ವಿಭೂತಿಯಂಥ ವಸ್ತುಗಳಿಂದ ಪೂಜಿಸುವುದು ಶ್ರೇಷ್ಠ ಎನ್ನಲಾಗುತ್ತದೆ. ಸರಳವಾದ ಜಲಾಭಿಷೇಕವೂ ಮಹಾದೇವನಿಗೆ ಮೆಚ್ಚುಗೆಯೆ. ಉಳಿದಂತೆ, ಪೂಜಾ ವಿಧಾನಗಳೆಲ್ಲ ಆಯಾ ಪ್ರಾಂತ್ಯಗಳ ಆಚರಣೆ ಅಥವಾ ಅವರವರ ಭಕ್ತಿಗೆ ಬಿಟ್ಟಿದ್ದು. ಬಾಹ್ಯದ ಪೂಜಾಡಂಬರಕ್ಕಿಂತಲೂ ಆಂತರಿಕವಾದ ಶುದ್ಧ ಭಕ್ತಿಯಿಂದ ನಿವೇದಿಸಿಕೊಳ್ಳುವುದು ಮಹಾದೇವನಿಗೆ ಪ್ರಿಯವಾಗುವಂಥದ್ದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Hindu Population: ಹಿಂದೂಗಳ ಜನಸಂಖ್ಯೆ ಶೇ.7.8 ಕುಸಿತ; ಮುಸ್ಲಿಮರ ಸಂಖ್ಯೆ ಶೇ.43.15 ಏರಿಕೆ!

ಭಾರತದ ಬಹುಸಂಖ್ಯಾತ ಹಿಂದೂಗಳ ಜನಸಂಖ್ಯೆ (Hindu Population) ಕಳೆದ 65 ವರ್ಷಗಳಲ್ಲಿ ಶೇ. 7.8ರಷ್ಟು ಕುಸಿತವಾಗಿದ್ದು, ಅಲ್ಪಸಂಖ್ಯಾತರ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. 1950 ಮತ್ತು 2015ರ ನಡುವೆ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆಯ ಪಾಲು ಶೇ. 43.15ರಷ್ಟು ಹೆಚ್ಚಾಗಿದೆ. ಕ್ರಿಶ್ಚಿಯನ್ನರು ಶೇ.5.38, ಸಿಖ್ಖರು ಶೇ.6.58 ಮತ್ತು ಬೌದ್ಧರ ಜನಸಂಖ್ಯೆ ಪ್ರಮಾಣದಲ್ಲಿ ಸ್ವಲ್ಪ ಹೆಚ್ಚಳವಾಗಿದೆ.

VISTARANEWS.COM


on

By

Hindu population
Koo

ಭಾರತದ ಬಹುಸಂಖ್ಯಾತ ಹಿಂದೂಗಳ ಜನಸಂಖ್ಯೆ (Hindu Population) 1950 ಮತ್ತು 2015ರ ನಡುವೆ ಶೇ. 7.8ರಷ್ಟು ಕುಸಿತವಾಗಿದೆ ಎಂದು ಪ್ರಧಾನಮಂತ್ರಿಯ ( Prime Minister) ಆರ್ಥಿಕ ಸಲಹಾ ಮಂಡಳಿ (Economic Advisory Council) (EAC- PM) ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.

ಭಾರತದಲ್ಲಿ ಹಿಂದೂ ಜನಸಂಖ್ಯೆಯು ಕುಗ್ಗಿದರೆ, ಮುಸ್ಲಿಂ (muslim), ಕ್ರಿಶ್ಚಿಯನ್ (Christian), ಬೌದ್ಧ (Buddhist) ಮತ್ತು ಸಿಖ್ಖರು (Sikhs) ಸೇರಿದಂತೆ ಅಲ್ಪಸಂಖ್ಯಾತರ ಜನಸಂಖ್ಯೆ ಬಹುತೇಕ ಹೆಚ್ಚಾಗಿದೆ. ಆದರೆ ಜೈನ (jain) ಮತ್ತು ಪಾರ್ಸಿಗಳ (Parsis ) ಸಂಖ್ಯೆ ಕುಸಿತವಾಗಿದೆ.

1950 ಮತ್ತು 2015ರ ನಡುವೆ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆಯ ಪಾಲು ಶೇ. 43.15ರಷ್ಟು ಹೆಚ್ಚಾಗಿದೆ. ಕ್ರಿಶ್ಚಿಯನ್ನರು ಶೇ.5.38, ಸಿಖ್ಖರು ಶೇ.6.58 ಮತ್ತು ಬೌದ್ಧರ ಜನಸಂಖ್ಯೆ ಪ್ರಮಾಣದಲ್ಲಿ ಸ್ವಲ್ಪ ಹೆಚ್ಚಳವಾಗಿದೆ.

ಪ್ರಧಾನಮಂತ್ರಿಯ ಆರ್ಥಿಕ ಸಲಹಾ ಮಂಡಳಿ ಪ್ರಕಾರ 65 ವರ್ಷಗಳಲ್ಲಿ ಭಾರತದ ಜನಸಂಖ್ಯೆಯಲ್ಲಿ ಹಿಂದೂಗಳ ಪಾಲು 1950ರಲ್ಲಿ ಶೇ. 84ರಿಂದ 2015ರಲ್ಲಿ ಶೇ.78ಕ್ಕೆ ಕುಸಿತವಾಗಿದೆ. ಆದರೆ ಮುಸ್ಲಿಮರ ಸಂಖ್ಯೆ ಇದೇ ಅವಧಿಯಲ್ಲಿ ಶೇ.9.84ರಿಂದ ಶೇ.14.09ಕ್ಕೆ ಏರಿಕೆಯಾಗಿದೆ.


ಮ್ಯಾನ್ಮಾರ್‌, ನೇಪಾಳದಲ್ಲೂ ಕುಸಿತ

ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳ ಜನಸಂಖ್ಯೆಯ ಕುಗ್ಗುವಿಕೆ ಶೇ. 7.8ರಷ್ಟಿದ್ದರೆ, ಮ್ಯಾನ್ಮಾರ್‌ನಲ್ಲಿ ಶೇ. 10ರಷ್ಟು ಕುಸಿತವಾಗಿದೆ. ಇದು ನೆರೆಹೊರೆಯ ರಾಷ್ಟ್ರದಲ್ಲಿ ಎರಡನೇ ಅತ್ಯಂತ ಮಹತ್ವದ ಕುಸಿತವಾಗಿದೆ. ಭಾರತವನ್ನು ಹೊರತುಪಡಿಸಿ, ನೇಪಾಳದ ಬಹುಸಂಖ್ಯಾತ ಸಮುದಾಯವಾದ ಹಿಂದೂಗಳ ಜನಸಂಖ್ಯೆಯ ತನ್ನ ಪಾಲಿನಲ್ಲಿ ಶೇ. 3.6ರಷ್ಟು ಕುಸಿತವನ್ನು ಕಂಡಿದೆ.

167 ದೇಶಗಳ ಮೌಲ್ಯಮಾಪನ

ಮೇ 2024ರಲ್ಲಿ ಬಿಡುಗಡೆಯಾದ ಈ ಅಧ್ಯಯನವು ಪ್ರಪಂಚದಾದ್ಯಂತ 167 ದೇಶಗಳಲ್ಲಿನ ಪ್ರವೃತ್ತಿಯನ್ನು ಮೌಲ್ಯಮಾಪನ ಮಾಡಿದೆ. ಭಾರತದ ಕಾರ್ಯಕ್ಷಮತೆಯು ದೊಡ್ಡ ಜಾಗತಿಕ ಪ್ರವೃತ್ತಿಗಳೊಂದಿಗೆ ಸ್ಥಿರವಾಗಿದೆ ಎನ್ನುತ್ತಾರೆ ಅಧ್ಯಯನಕಾರರು. ಅಲ್ಪಸಂಖ್ಯಾತರು ಭಾರತದಲ್ಲಿ ಕೇವಲ ರಕ್ಷಿಸಲ್ಪಟ್ಟಿಲ್ಲ, ನಿಜವಾಗಿಯೂ ಬೆಳೆಯುತ್ತಿದ್ದಾರೆ ಎಂಬುದನ್ನು ಈ ಅಂಕಿ ಅಂಶಗಳು ತೋರಿಸಿವೆ ಎನ್ನುತ್ತಾರೆ ತಜ್ಞರು.

ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಹೆಚ್ಚಳ

ಭಾರತದ ಜನಸಂಖ್ಯೆಯ ಬೆಳವಣಿಗೆಯ ಕಥೆಯು ಅದರ ನೆರೆಹೊರೆಯ ದೇಶಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. 1950 ಮತ್ತು 2015ರ ನಡುವೆ ಭಾರತ ದೇಶದ ಜನಸಂಖ್ಯೆಯಲ್ಲಿ ಭಾರತೀಯ ಬಹುಸಂಖ್ಯಾತ ಸಮುದಾಯವಾದ ಹಿಂದೂಗಳ ಪಾಲು ಶೇ. 7.8ರಷ್ಟು ಕಡಿಮೆಯಾಗಿದೆ. ಆದರೆ ಮುಸ್ಲಿಮರು ಬಹುಸಂಖ್ಯಾತರಾಗಿರುವ ನೆರೆಯ ದೇಶಗಳಲ್ಲಿ ಮುಸ್ಲಿಂ ಸಮುದಾಯದ ಪಾಲು ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ಮುಸ್ಲಿಮರ ಜನಸಂಖ್ಯೆಯಲ್ಲಿ ಬಾಂಗ್ಲಾದೇಶವು ಶೇ. 18.5ರಷ್ಟು ಏರಿಕೆಯನ್ನು ಕಂಡಿದ್ದು, ಅನಂತರ ಪಾಕಿಸ್ತಾನದಲ್ಲಿ ಶೇ. 3.75 ಮತ್ತು ಅಫ್ಘಾನಿಸ್ತಾನದಲ್ಲಿ 0.29ರಷ್ಟು ಹೆಚ್ಚಳವಾಗಿದೆ.

1971ರಲ್ಲಿ ಬಾಂಗ್ಲಾದೇಶದ ರಚನೆಯ ಹೊರತಾಗಿಯೂ ಪಾಕಿಸ್ತಾನವು ಬಹುಸಂಖ್ಯಾತ ಧಾರ್ಮಿಕ ಪಂಗಡದ (ಹನಾಫಿ ಮುಸ್ಲಿಂ) ಪಾಲನ್ನು ಶೇ. 3.75ರಷ್ಟು ಹೆಚ್ಚಿಸಿಕೊಂಡಿದೆ ಮತ್ತು ಒಟ್ಟು ಮುಸ್ಲಿಂ ಜನಸಂಖ್ಯೆಯ ಪಾಲಿನಲ್ಲಿ ಶೇ.10ರಷ್ಟು ಹೆಚ್ಚಾಗಿದೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ. ಮ್ಯಾನ್ಮಾರ್‌ನಲ್ಲಿ ಥೇರವಾಡ ಬೌದ್ಧರ ಬಹುಪಾಲು ಜನಸಂಖ್ಯೆಯು 65 ವರ್ಷಗಳಲ್ಲಿ ಶೇ. 10ರಷ್ಟು ಕುಸಿದಿದೆ.

ನೇಪಾಳದಲ್ಲಿ ಬಹುಸಂಖ್ಯಾತ ಹಿಂದೂ ಜನಸಂಖ್ಯೆಯಲ್ಲಿ ಶೇ. 3.6 ಕುಸಿತವನ್ನು ಕಂಡಿದೆ. ಮಾಲ್ಡೀವ್ಸ್‌ನಲ್ಲಿ ಬಹುಪಾಲು ಗುಂಪಿನ (ಶಾಫಿ ಸುನ್ನಿಗಳು) ಪಾಲು ಶೇ.1.47ರಷ್ಟು ಕುಸಿದಿದೆ.

ಬೌದ್ಧ ಜನಸಂಖ್ಯೆಯಲ್ಲಿ ಏರಿಕೆ

ಬಹುಪಾಲು ಬೌದ್ಧ ಜನಸಂಖ್ಯೆಯನ್ನು ಹೊಂದಿರುವ ಭಾರತದ ನೆರೆಯ ದೇಶಗಳಾದ ಭೂತಾನ್ ಮತ್ತು ಶ್ರೀಲಂಕಾ ಕ್ರಮವಾಗಿ ಶೇ. 17.6 ಮತ್ತು ಶೇ. 5.25ರಷ್ಟು ಏರಿಕೆ ಕಂಡಿವೆ.

ಇದನ್ನೂ ಓದಿ: Viral Video: ಅಂಬಾನಿಗಿಂತಲೂ ರಿಚ್‌ ಈತ.. ಗದ್ದೆ ಉಳುಮೆಗೆ 20 ಲಕ್ಷದ ಕಾರೇ ಬೇಕು..!

ಒಟ್ಟು ಜನಸಂಖ್ಯೆಯ ಪಾಲಿನ ಅಲ್ಪಸಂಖ್ಯಾತರ ಅನುಪಾತದಲ್ಲಿನ ಬದಲಾವಣೆಯು ದೇಶದಲ್ಲಿ ಅಲ್ಪಸಂಖ್ಯಾತರ ಸ್ಥಾನಮಾನಕ್ಕೆ ವಿಶ್ವಾಸಾರ್ಹವಾಗಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಇದು ಅಲ್ಪಸಂಖ್ಯಾತರನ್ನು ವ್ಯಾಖ್ಯಾನಿಸುವುದು ಸೇರಿದಂತೆ ನೀತಿಗಳ ಮೂಲಕ ಪೋಷಿಸಲು ಕಾರಣವಾಗುತ್ತದೆ. ಜಾಗತಿಕವಾಗಿ ಇದೊಂದು ಅಪರೂಪದ ಘಟನೆ ಎಂದು ಅಧ್ಯಯನ ಹೇಳಿದೆ.

Continue Reading

ಫ್ಯಾಷನ್

Akshaya Tritiya Jewellery: ಅಕ್ಷಯ ತೃತೀಯಕ್ಕೆ ಬಂದಿವೆ ವೈವಿಧ್ಯಮಯ ಫ್ಯಾಷನ್‌ ಜ್ಯುವೆಲರಿಗಳು!

ಅಕ್ಷಯ ತೃತೀಯ ಆಗಮಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಈ ಜನರೇಷನ್‌ನವರು ಇಷ್ಟಪಡುವಂತಹ ಊಹೆಗೂ ಮೀರಿದ ನಾನಾ ವೆರೈಟಿ ಡಿಸೈನ್‌ನ ಬಂಗಾರದ ಫ್ಯಾಷನ್‌ ಜ್ಯುವೆಲರಿಗಳು (Akshaya Tritiya Jewellery) ಎಂಟ್ರಿ ನೀಡಿವೆ. ಯಾವ್ಯಾವ ಬಗೆಯವು ಈ ಸೀಸನ್‌ಗೆ ಕಾಲಿಟ್ಟಿವೆ? ಎಂಬುದರ ಬಗ್ಗೆ ಜ್ಯುವೆಲ್‌ ಡಿಸೈನರ್‌ಗಳು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Akshaya Tritiya Jewellery
ಚಿತ್ರಕೃಪೆ: ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಈ ಜನರೇಷನ್‌ನವರು ಇಷ್ಟಪಡುವಂತಹ ನಾನಾ ವೆರೈಟಿ ಡಿಸೈನ್‌ನ ಫ್ಯಾಷನ್‌ ಜ್ಯುವೆಲರಿಗಳು ಎಂಟ್ರಿ ನೀಡಿವೆ. ಚಿಕ್ಕ ಮಕ್ಕಳಿಂದ ಹಿಡಿದು ಯುವತಿಯರು, ಉದ್ಯೋಗಸ್ಥ ಮಹಿಳೆಯರು ಹಾಗೂ ಗೃಹಿಣಿಯರು ಕೂಡ ಇಷ್ಟಪಡುವಂತಹ ಸಿಂಪಲ್‌ ಫ್ಯಾಷನ್‌ ಜ್ಯುವೆಲರಿಗಳು (Akshaya Tritiya Jewellery), ಕಾರ್ಪೋರೇಟ್‌ ಕ್ಷೇತ್ರದ ಮಹಿಳೆಯರು ಧರಿಸುವಂತಹ ಬಿಗ್‌ ಹಾಗೂ ಹ್ಯಾಂಗಿಂಗ್‌ ಫ್ಯಾಷನ್‌ ಜ್ಯುವೆಲರಿಗಳು ಕಾಲಿಟ್ಟಿವೆ.

Akshaya Tritiya Jewellery

ವೈವಿಧ್ಯಮಯ ಜ್ಯುವೆಲರಿಗಳು

ಈ ಬಾರಿ ಕಳೆದ ಬಾರಿಗಿಂತ ಅತಿ ಹೆಚ್ಚು ಫ್ಯಾಷನ್‌ ಜ್ಯುವೆಲರಿಗಳು ಕಾಲಿಟ್ಟಿವೆ. ಮೊದಲೆಲ್ಲ ಕೇವಲ ದೊಡ್ಡ ಬ್ರಾಂಡ್‌ಗಳಲ್ಲಿ ಮಾತ್ರ ದೊರಕುತ್ತಿದ್ದ ಬಂಗಾರದ ಫ್ಯಾಷನ್‌ ಜ್ಯುವೆಲರಿಗಳು ಇದೀಗ ಸಾಮಾನ್ಯ ಬ್ರಾಂಡ್‌ಗಳಲ್ಲೂ ಬಂದಿರುವುದು ವಿಶೇಷ. ಇನ್ನು, ಕಡಿಮೆ ಗ್ರಾಮ್‌ಗಳಲ್ಲೂ ದೊರಕುತ್ತಿರುವುದು ಗ್ರಾಹಕರನ್ನು ಆಕರ್ಷಿಸಲು ಪ್ರಮುಖ ಕಾರಣ. ಇದರಿಂದಾಗಿ ಸಾಮಾನ್ಯ ಜನರು ಕೂಡ ಫ್ಯಾಷನ್‌ ಜ್ಯುವೆಲರಿಗಳತ್ತ ವಾಲಿದ್ದಾರೆ. ಪರಿಣಾಮ, ಫ್ಯಾಷನ್‌ ಜ್ಯುವೆಲರಿಗಳು ಸಖತ್‌ ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಜ್ಯುವೆಲ್‌ ಮಾರಾಟಗಾರರು.

Akshaya Tritiya Jewellery

ಫ್ಯಾಷನ್‌ ಜ್ಯುವೆಲರಿಗಳ ಲೋಕ

ಪುಟ್ಟ ಚಿಕ್ಕ ಸ್ಟಡ್ಸ್‌ನಂತಹ ಫ್ಲೋರಲ್‌, ಟ್ರಾಪಿಕಲ್‌, ನಕ್ಷತ್ರ, ರಂಗೋಲಿ ಡಿಸೈನ್‌ನಂತಹ ಫ್ಯಾಷನ್‌ ಜ್ಯುವೆಲರಿಗಳು, ಜಿಯಾಮೆಟ್ರಿಕಲ್‌ ಡಿಸೈನ್‌ನ ಹ್ಯಾಂಗಿಂಗ್‌ ಫ್ಯಾಷನ್‌ ಜ್ಯುವೆಲರಿಗಳು, ಬಿಗ್‌ ಹರಳಿನೊಂದಿಗೆ ಮಿಕ್ಸ್‌ ಮ್ಯಾಚ್‌ ಮಾಡಿರುವಂತಹ ಡಿಸೈನ್‌ನ ಫ್ಯಾಷನ್‌ ಜ್ಯುವೆಲರಿಗಳು, ಇಮ್ಯಾಜೀನ್‌ಗೂ ಸಿಗದ ವೆರೈಟಿ ಡಿಸೈನ್‌ಗಳು, ಇನ್ನು, ಉಡುಪಿಗೆ ಮ್ಯಾಚ್‌ ಆಗುವಂತಹ ಫ್ಯಾಷನ್‌ ಜ್ಯುವೆಲರಿಗಳು ಸೇರಿದಂತೆ ನಾನಾ ಬಗೆಯವು ಟ್ರೆಂಡ್‌ನಲ್ಲಿವೆ. ಜ್ಯುವೆಲರಿ ಶಾಪ್‌ಗಳು ಕೂಡ ಫ್ಯಾಷೆನಬಲ್‌ ಜ್ಯುವೆಲರಿಗಳನ್ನು ಗ್ರಾಹಕರ ಮನೋಭಿಲಾಷೆಗೆ ತಕ್ಕಂತೆ ಆರ್ಡರ್‌ ತೆಗೆದುಕೊಂಡು ನೀಡುತ್ತಿವೆ. ಆ ಸೌಲಭ್ಯವನ್ನು ನೀಡಿವೆ. ಅಷ್ಟು ಮಾತ್ರವಲ್ಲದೇ, ಕಾಲೇಜು ಹುಡುಗಿಯರಿಗೆ ಪ್ರಿಯವಾಗುವಂತಹ ಇಂದು ಮಾರುಕಟ್ಟೆಯಲ್ಲಿ ಪ್ರಚಲಿತದಲ್ಲಿರುವ ಫ್ಯಾಷನ್‌ ಜ್ಯುವೆಲರಿಗಳನ್ನು ಬಿಡುಗಡೆಗೊಳಿಸಿವೆ.

Akshaya Tritiya Jewellery

ಫ್ಯಾಷನ್‌ ಜ್ಯುವೆಲರಿಗಳನ್ನು ಖರೀದಿಸುವವರು ಗಮನದಲ್ಲಿಟ್ಟುಕೊಳ್ಳಬೇಕಾದ ಸಂಗತಿಗಳಿವು

  • ಆದಷ್ಟೂ ಲೈಟ್‌ವೈಟ್‌ನವನ್ನು ಆಯ್ಕೆ ಮಾಡಿ.
  • ಟ್ರೆಂಡಿ ಡಿಸೈನ್‌ನವನ್ನು ಸೆಲೆಕ್ಟ್‌ ಮಾಡಿ ಖರೀದಿಸಿ.
  • ಮಕ್ಕಳಿಗಾದಲ್ಲಿ ಸಿಂಪಲ್‌ ಸ್ಟಡ್ಸ್‌ ಡಿಸೈನ್‌ನವನ್ನು ಕೊಳ್ಳಿ.
  • ಕಾಲೇಜು ಯುವತಿಯರಾದಲ್ಲಿ ಬಹುತೇಕ ಔಟ್‌ಫಿಟ್‌ಗಳಿಗೆ ಮ್ಯಾಚ್‌ ಆಗುವಂತದ್ದನ್ನು ನೋಡಿ.
  • ಉದ್ಯೋಗಸ್ಥ ಮಹಿಳೆಯರು ಅಗಲವಾದ ಡಿಸೈನ್‌ನವನ್ನು ಆಯ್ಕೆ ಮಾಡಬಹುದು.
  • ಹೆವಿ ಭಾರವಿರುವಂಥದ್ದನ್ನು ಅವಾಯ್ಡ್‌ ಮಾಡಿ.
  • ಬೀಡ್ಸ್‌ ಇರುವಂತವು ರೀಸೇಲ್‌ ಮಾಡುವಾಗ ಉತ್ತಮ ಬೆಲೆ ದೊರಕುವುದಿಲ್ಲ ಎಂಬುದು ನೆನಪಿರಲಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Akshaya Tritiya 2024: ಅಕ್ಷಯ ತೃತೀಯದಂದು ಬಂಗಾರ ಖರೀದಿಸುವವರಿಗೆ ಇಲ್ಲಿದೆ ಉಪಯುಕ್ತ ಟಿಪ್ಸ್‌

Continue Reading

ಧಾರ್ಮಿಕ

Akshaya Tritiya 2024: ಅಕ್ಷಯ ತೃತೀಯ ಅಂದರೆ ಚಿನ್ನ ಖರೀದಿಯೊಂದೇ ಅಲ್ಲ! ಹೀಗೆ ಮಾಡಿಯೂ ಸಮೃದ್ಧಿ ಹೊಂದಬಹುದು!

‘ಅಕ್ಷಯ’ ಎಂಬ ಹೆಸರಿನ ಅರ್ಥ ಶಾಶ್ವತ ಮತ್ತು ‘ತೃತೀಯ’ ಎಂದರೆ ಮೂರನೇ ಚಂದ್ರನ ದಿನವನ್ನು ಸೂಚಿಸುತ್ತದೆ. ಅಕ್ಷಯ ತೃತೀಯದಂದು ವಿಷ್ಣು ದೇವರು ಆರನೇ ಅವತಾರವಾದ ಪರಶುರಾಮನ ರೂಪದಲ್ಲಿ ಅವತರಿಸಿದನೆಂದು ನಂಬಲಾಗಿದೆ. ಈ ದಿನದಂದು ಗಂಗಾ ದೇವಿಯು ಸ್ವರ್ಗದಿಂದ ಭೂಮಿಗೆ ಇಳಿದಳು ಎಂದೂ ಹೇಳಲಾಗುತ್ತದೆ. ಅಕ್ಷಯ ತೃತೀಯ ದಿನ ಆಚರಿಬಹುದಾದ ಹಲವು ಸಂಪ್ರದಾಯಗಳಿವೆ. ಈ ಬಗ್ಗೆ ಅರಿತುಕೊಂಡು ನೀವು, ಕುಟುಂಬದೊಂದಿಗೆ ಅಕ್ಷಯ ತೃತಿಯವನ್ನು (Akshaya Tritiya 2024) ಆಚರಿಸಿ.

VISTARANEWS.COM


on

By

Akshaya Tritiya 2024
Koo

ಪವಿತ್ರ ಯುಗ ಮತ್ತು ಸತ್ಯ ಯುಗದ ಆರಂಭವನ್ನು ಸೂಚಿಸುವ ಅಕ್ಷಯ ತೃತೀಯ (Akshaya Tritiya 2024) ವೈಶಾಖ ಮಾಸದ ಮೂರನೇ ಚಂದ್ರನ ದಿನ ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಈ ದಿನವು ಹಿಂದೂ (hindu) ಸಂಸ್ಕೃತಿಯಲ್ಲಿ (culture) ಬಹಳ ಮಹತ್ವವನ್ನು ಹೊಂದಿದೆ. ಹೀಗಾಗಿ ಈ ದಿನ ಹೊಸ ಉದ್ಯಮಗಳನ್ನು ಪ್ರಾರಂಭಿಸಲು, ಹೂಡಿಕೆ ಮಾಡಲು, ಚಿನ್ನ (gold) ಅಥವಾ ಆಸ್ತಿಯನ್ನು (property) ಖರೀದಿಸಲು, ಮದುವೆ ಅಥವಾ ಇತರ ಶುಭ ಸಂದರ್ಭಗಳಿಗೆ ಉತ್ತಮ ಸಮಯ ಎಂದೇ ಪರಿಗಣಿಸಲಾಗಿದೆ.

‘ಅಕ್ಷಯ’ ಎಂಬ ಹೆಸರಿನ ಅರ್ಥ ಶಾಶ್ವತ ಮತ್ತು ‘ತೃತೀಯ’ ಎಂದರೆ ಮೂರನೇ ಚಂದ್ರನ ದಿನವನ್ನು ಸೂಚಿಸುತ್ತದೆ. ಹಿಂದೂ ಪುರಾಣಗಳ ಪ್ರಕಾರ ಅಕ್ಷಯ ತೃತೀಯದಂದು ವಿಷ್ಣು ದೇವರು ಆರನೇ ಅವತಾರವಾದ ಪರಶುರಾಮನ ರೂಪದಲ್ಲಿ ಅವತರಿಸಿದನೆಂದು ನಂಬಲಾಗಿದೆ. ಈ ದಿನದಂದು ಗಂಗಾ ದೇವಿಯು ಸ್ವರ್ಗದಿಂದ ಭೂಮಿಗೆ ಇಳಿದಳು ಎಂದೂ ಹೇಳಲಾಗುತ್ತದೆ.

ಅಕ್ಷಯ ತೃತಿಯವನ್ನು ಪವಿತ್ರ ನದಿಗಳಲ್ಲಿ ವಿಶೇಷವಾಗಿ ಗಂಗಾದಲ್ಲಿ ಸ್ನಾನ ಮಾಡಲು ಮತ್ತು ಸಮೃದ್ಧಿ ಹಾಗೂ ಯೋಗಕ್ಷೇಮಕ್ಕಾಗಿ ಆಶೀರ್ವಾದವನ್ನು ಪಡೆಯಲು ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ಅಕ್ಷಯ ತೃತೀಯ 2024 ಅನ್ನು ಮೇ 10 ರಂದು ಶುಕ್ರವಾರ ಆಚರಿಸಲಾಗುತ್ತಿದೆ.

ಅಕ್ಷಯ ತೃತೀಯವನ್ನು ಸರಿಯಾದ ರೀತಿಯಲ್ಲಿ ಆಚರಿಸಲು ಅನುಸರಿಸಬೇಕಾದ ಕೆಲವು ಪ್ರಮುಖ ಆಚರಣೆಗಳಿವೆ. ಅವುಗಳ ಪರಿಚಯ ಇಲ್ಲಿದೆ.


ಚಿನ್ನ ಖರೀದಿಸಿ

ಅಕ್ಷಯ ತೃತೀಯದಲ್ಲಿ ಹೆಚ್ಚಿನ ಜನರು ಅನುಸರಿಸುವ ಪ್ರಮುಖ ಸಂಪ್ರದಾಯವೆಂದರೆ ಚಿನ್ನ ಖರೀದಿ. ಈ ದಿನದಂದು ಚಿನ್ನವನ್ನು ಖರೀದಿಸುವುದು ಸಮೃದ್ಧಿ ಮತ್ತು ಅದೃಷ್ಟವನ್ನು ಸ್ವಾಗತಿಸುತ್ತದೆ ಎಂಬ ನಂಬಿಕೆ ಇದೆ. ಜನರು ಈ ದಿನದಂದು ಚಿನ್ನದ ಆಭರಣಗಳು, ನಾಣ್ಯಗಳಲ್ಲಿ ಹೂಡಿಕೆ ಮಾಡುತ್ತಾರೆ.


ಚಾರಿಟಿ

ಅಕ್ಷಯ ತೃತೀಯದ ಪ್ರಮುಖ ಅಂಶವೆಂದರೆ ದಾನ. ಈ ದಿನದಂದು ಅಗತ್ಯವಿರುವವರಿಗೆ ದಾನ ನೀಡುವುದು ಆಶೀರ್ವಾದ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಅನೇಕ ಜನರು ಆಹಾರ, ಬಟ್ಟೆ, ಹಣ ಅಥವಾ ಇತರ ರೀತಿಯ ದಾನವನ್ನು ಹಿಂದುಳಿದವರಿಗೆ ದಾನ ಮಾಡುತ್ತಾರೆ. ಈ ಅಭ್ಯಾಸವು ನಿರ್ಗತಿಕರಿಗೆ ಸಹಾಯ ಮಾಡುವುದಲ್ಲದೆ ಸಹಾನುಭೂತಿ ಮತ್ತು ಸಹಾನುಭೂತಿಯ ಭಾವವನ್ನು ಬೆಳೆಸುತ್ತದೆ.


ಮರಗಳನ್ನು ನೆಡುವುದು

ಇದು ಪ್ರಕೃತಿಗೆ ಮರಳಿ ನೀಡುವ ಮತ್ತು ಗ್ರಹಕ್ಕೆ ಹಸಿರು ಭವಿಷ್ಯವನ್ನು ಖಾತ್ರಿಪಡಿಸುವ ಒಂದು ಮಾರ್ಗವಾಗಿದೆ. ಇತ್ತೀಚಿನ ವರ್ಷಗಳಲ್ಲಿ, ಜನರು ಪರಿಸರ ಸುಸ್ಥಿರತೆಯ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ. ಅಕ್ಷಯ ತೃತೀಯವು ಹೆಚ್ಚು ಮರಗಳನ್ನು ನೆಡಲು ಮತ್ತು ಹಸಿರು ವಾತಾವರಣವನ್ನು ನಿರ್ಮಿಸಲು ಉತ್ತಮ ಅವಕಾಶವಾಗಿದೆ. ಮರಗಳನ್ನು ನೆಡುವ ಮೂಲಕ ನಾವು ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯನ್ನು ತಡೆಯಬಹುದು.

ಇದನ್ನೂ ಓದಿ: Akshaya Tritiya 2024: ಅಕ್ಷಯ ತೃತೀಯದಂದು ಏನು ಮಾಡಬೇಕು, ಏನು ಮಾಡಬಾರದು?

ಉಪವಾಸ

ಅಕ್ಷಯ ತೃತೀಯಕ್ಕೆ ಸಂಬಂಧಿಸಿದ ಇತರ ಪ್ರಮುಖ ಆಚರಣೆಗಳು ಉಪವಾಸ, ದೇವಾಲಯಗಳಿಗೆ ಭೇಟಿ ನೀಡುವುದು ಮತ್ತು ಪೂಜೆಗಳು ಮತ್ತು ಪ್ರಾರ್ಥನೆಗಳನ್ನು ಮಾಡುತ್ತೇವೆ. ಸ್ವೀಕರಿಸಿದ ಎಲ್ಲಾ ಆಶೀರ್ವಾದಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಮತ್ತು ನಿರಂತರ ಮಾರ್ಗದರ್ಶನ ಮತ್ತು ರಕ್ಷಣೆಯನ್ನು ಪಡೆಯಲು ಈ ದಿನ ಸೂಕ್ತವಾಗಿದೆ. ಅನೇಕ ಜನರು ಇಡೀ ದಿನ ಉಪವಾಸ ಮಾಡುತ್ತಾರೆ ಮತ್ತು ಮನೆಯಲ್ಲಿ ಪೂಜೆಗಳನ್ನು ನಡೆಸುತ್ತಾರೆ. ಹೀಗೆ ಮಾಡುವ ಮೂಲಕವೂ ಜೀವನದಲ್ಲಿ ಸಮೃದ್ಧಿ, ನೆಮ್ಮದಿ ಹೊಂದಬಹುದು.

Continue Reading

ತುಮಕೂರು

Tumkur News: ಜೂ. 9ಕ್ಕೆ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ವಾರ್ಷಿಕೋತ್ಸವ

Tumkur News: ಕೊರಟಗೆರೆ ತಾಲೂಕಿನ ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ 18ನೇ ವಾರ್ಷಿಕೋತ್ಸವ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯರ ಮತ್ತು ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತ್ಯೋತ್ಸವ, ಉಚಿತ ಸಾಮೂಹಿಕ ವಿವಾಹ, ಜನಜಾಗೃತಿ ಧರ್ಮ ಸಮಾವೇಶವನ್ನು ಜೂ.9 ರಂದು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಮಠದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

VISTARANEWS.COM


on

Shrikhshetra Siddrabetta Balehonnur Khasa Shakha Math 18th year Anniversary on June 9 says sri veerabhadra shivacharya swamiji
Koo

ಕೊರಟಗೆರೆ: ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ 18ನೇ ವಾರ್ಷಿಕೋತ್ಸವವನ್ನು ಜೂ.9ರಂದು ಆಯೋಜನೆ ಮಾಡಲಾಗಿದೆ ಎಂದು ಸಿದ್ದರಬೆಟ್ಟದ ಶ್ರೀಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ (Tumkur News) ತಿಳಿಸಿದರು.

ತಾಲೂಕಿನ ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದಲ್ಲಿ 18ನೇ ವಾರ್ಷಿಕೋತ್ಸವದ ಪೂರ್ವಭಾವಿ ಸಭೆಯಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಪ್ರತಿ ವರ್ಷದಂತೆ ಈ ವರ್ಷವೂ ಸಹ ಮಠದ ಸದ್ಭಕ್ತರ ಸಹಕಾರದಿಂದ ಶ್ರೀ ಮಠದ 18ನೇ ವಾರ್ಷಿಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಶ್ರೀ ಮಠದಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದು ದೇಶ ಸೇರಿದಂತೆ ರಾಜ್ಯದ ಮೂಲೆ ಮೂಲೆಯಲ್ಲಿ ಉನ್ನತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: Akshaya Tritiya 2024: ಅಕ್ಷಯ ತೃತೀಯದಂದು ಬಂಗಾರ ಖರೀದಿಸುವವರಿಗೆ ಇಲ್ಲಿದೆ ಉಪಯುಕ್ತ ಟಿಪ್ಸ್‌

ಇನ್ಪೋಸಿಸ್ ಫೌಂಡೇಶನ್‌ ಮುಖ್ಯಸ್ಥೆ ಡಾ. ಸುಧಾಮೂರ್ತಿ ಅವರ ಸಲಹೆಯಂತೆ ಕಳೆದ 17 ವರ್ಷಗಳಿಂದಲೂ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದ್ದು, ಸುಮಾರು 800ಕ್ಕೂ ಹೆಚ್ಚು ವಿವಾಹಗಳು ನಡೆದಿದೆ. ಇದರಿಂದ ಸಾಕಷ್ಟು ಬಡ ಕುಟುಂಬಗಳಿಗೆ ಅನುಕೂಲವಾಗಿದೆ ಎಂದರು.

ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕಾ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಭಗವತ್ಪಾದರ ದಿವ್ಯ ಸಾನಿಧ್ಯದಲ್ಲಿ ಮತ್ತು ಸಿದ್ದರಬೆಟ್ಟದ ಶ್ರೀಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ 18ನೇ ವಾರ್ಷಿಕೋತ್ಸವ, ಶ್ರೀ ಜಗದ್ಗುರು ರೇಣುಕಾಚಾರ್ಯರ ಮತ್ತು ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತ್ಯೋತ್ಸವ, ಉಚಿತ ಸಾಮೂಹಿಕ ವಿವಾಹ, ಜನಜಾಗೃತಿ ಧರ್ಮ ಸಮಾವೇಶ ನಡೆಯಲಿದೆ ಎಂದು ಹೇಳಿದರು.

ಇದನ್ನೂ ಓದಿ: Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

ಈ ಸಂದರ್ಭದಲ್ಲಿ ತುಮಕೂರು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಮೋಹನ್‌ ಕುಮಾರ್, ತಾಲೂಕು ಉಪಾಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ನಾಗರಾಜು, ಮಹಿಳಾ ಘಟಕದ ಅಧ್ಯಕ್ಷೆ ಗೀತಾ ನಾಗರಾಜು, ಬಿಜೆಪಿ ಮಂಡಲದ ತಾಲೂಕು ಅಧ್ಯಕ್ಷ ದರ್ಶನ್, ಪರ್ವತಯ್ಯ ಸೇರಿದಂತೆ ಮಠದ ಭಕ್ತರು ಹಾಜರಿದ್ದರು.

Continue Reading
Advertisement
SSLC Result 2024 what is the reason for most of the students fail in SSLC
ಕರ್ನಾಟಕ4 mins ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Aavesham Releases On OTT Fahadh Faasil Hit Malayalam Film
ಮಾಲಿವುಡ್13 mins ago

Aavesham Releases On OTT: ಸದ್ದಿಲ್ಲದೆ ಒಟಿಟಿಗೆ ಎಂಟ್ರಿ ಕೊಟ್ಟ ಫಹಾದ್ ಫಾಸಿಲ್ ಅಭಿನಯದ ʻಆವೇಶಂʼ!

Sslc exam Result 2024
ಶಿಕ್ಷಣ15 mins ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

T20 World Cup 2024
ಕ್ರೀಡೆ20 mins ago

T20 World Cup 2024: ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸಿದ ಪಪುವಾ ನ್ಯೂಗಿನಿಯಾ, ಐರ್ಲೆಂಡ್

Sunita Williams
ವಿದೇಶ29 mins ago

Sunita Williams: ಸುನೀತಾ ವಿಲಿಯಮ್ಸ್‌ ಗಗನಯಾತ್ರೆ ಮತ್ತೆ ಸ್ಥಗಿತ; ಮೇ 17ಕ್ಕೆ ಮುಂದೂಡಿಕೆ

Ananya Panday Aditya Roy Kapur parties with Sara Ali Khan
ಬಾಲಿವುಡ್31 mins ago

Ananya Panday: ಅನನ್ಯಾ ಪಾಂಡೆ ಜತೆ ಆದಿತ್ಯ ರಾಯ್ ಕಪೂರ್ ಬ್ರೇಕಪ್‌? ಸೈಫ್‌ ಪುತ್ರಿ ಜತೆ ಲವ್‌ ಸ್ಟಾರ್ಟ್‌!

SSLC Result 2024 secret behind 20 percent grace marks
ಕರ್ನಾಟಕ42 mins ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

gold rate today sreeleela
ಚಿನ್ನದ ದರ55 mins ago

Gold Rate Today: ಚಿನ್ನದ ಮಾರುಕಟ್ಟೆ ಇಳಿಮುಖ; 22 ಮತ್ತು 24 ಕ್ಯಾರಟ್‌ ಬಂಗಾರದ ದರಗಳಲ್ಲಿ ಇಳಿಕೆ

SSLC Result 2024 78 schools get zero results in SSLC exams
ಬೆಂಗಳೂರು59 mins ago

SSLC Result 2024: ಎಸ್‌ಎಸ್‌ಎಲ್‌ಸಿ ಎಕ್ಸಾಂನಲ್ಲಿ ಸಿಕ್ಸರ್‌ ಬಾರಿಸಿದ ಗ್ರಾಮೀಣ ಪ್ರತಿಭೆಗಳು; 78 ಶಾಲೆಗಳಲ್ಲಿ ಶೂನ್ಯ ರಿಸಲ್ಟ್‌!

Viral video
ವೈರಲ್ ನ್ಯೂಸ್60 mins ago

Viral Video: ಬಸ್‌, ರೈಲಿನಲ್ಲಿ ಮಾತ್ರ ಅಲ್ಲ.. ಫ್ಲೈಟ್‌ನಲ್ಲೂ ನಡೆಯುತ್ತೆ ಸೀಟಿಗಾಗಿ ಮಾರಾಮಾರಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

SSLC Result 2024 what is the reason for most of the students fail in SSLC
ಕರ್ನಾಟಕ4 mins ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ15 mins ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ42 mins ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

SSLC Result 2024 78 schools get zero results in SSLC exams
ಬೆಂಗಳೂರು59 mins ago

SSLC Result 2024: ಎಸ್‌ಎಸ್‌ಎಲ್‌ಸಿ ಎಕ್ಸಾಂನಲ್ಲಿ ಸಿಕ್ಸರ್‌ ಬಾರಿಸಿದ ಗ್ರಾಮೀಣ ಪ್ರತಿಭೆಗಳು; 78 ಶಾಲೆಗಳಲ್ಲಿ ಶೂನ್ಯ ರಿಸಲ್ಟ್‌!

SSLC Result 2024 SSLC students get 20 percent grace marks but result is very poor
ಶಿಕ್ಷಣ1 hour ago

SSLC Result 2024: ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಸಿಕ್ತು 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌! ಆದ್ರೂ ಫಲಿತಾಂಶ ತೀರಾ ಕಳಪೆ

SSLC Exam Result 2024 Announce
ಬೆಂಗಳೂರು3 hours ago

SSLC Result 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಶೇ. 73.40 ವಿದ್ಯಾರ್ಥಿಗಳು ಪಾಸ್‌, ಉಡುಪಿ ಫಸ್ಟ್‌, ಯಾದಗಿರಿ ಲಾಸ್ಟ್‌

Dina Bhavishya
ಭವಿಷ್ಯ1 day ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ2 days ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ2 days ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ2 days ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

ಟ್ರೆಂಡಿಂಗ್‌