prerane morning spiritual thoughts in kannada about Spiritual Meaning of MoneyPrerane : ಅರ್ಥವು ಅನರ್ಥವೇ? ಈ ಬಗ್ಗೆ ಶಂಕರಭಗವತ್ಪಾದರು ಹೇಳಿದ್ದಾದರೂ ಏನು? - Vistara News

ಧಾರ್ಮಿಕ

Prerane : ಅರ್ಥವು ಅನರ್ಥವೇ? ಈ ಬಗ್ಗೆ ಶಂಕರಭಗವತ್ಪಾದರು ಹೇಳಿದ್ದಾದರೂ ಏನು?

“ಪ್ರೇರಣೆʼʼ (Prerane) ಇದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಬಿತ್ತುವ ಬೆಳಗಿನ ಹೊಳಹು. ಪ್ರತಿ ನಿತ್ಯ ಧಾರ್ಮಿಕ ಚಿಂತಕರು, ಪ್ರವಚನಕಾರರು, ಆಧ್ಯಾತ್ಮ ಚಿಂತಕರು ಇಲ್ಲಿ ಬರೆಯುತ್ತಿದ್ದಾರೆ. ಹಣದ ಕುರಿತ ಆಧ್ಯಾತ್ಮಿಕ ನೋಟ ಇಲ್ಲಿದೆ.

VISTARANEWS.COM


on

shankaracharya and money
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
prerane morning spiritual thoughts in kannada

ಕೆ.ಎಸ್.ರಾಜಗೋಪಾಲನ್
“ಅರ್ಥ” ಎಂಬ ಪದಕ್ಕೆ ನಾನಾರ್ಥಗಳುಂಟು. ಅದರಲ್ಲಿ ಲೌಕಿಕವಾದ ಸುಖಕ್ಕೆ ಸಾಧನವಾದ “ಧನ” ಎಂಬರ್ಥವೂ ಉಂಟು. ಇಂತಹ “ಅರ್ಥ”ದ ಬಗ್ಗೆ ಸ್ವಲ್ಪ ಚಿಂತನೆಯನ್ನು ಮಾಡೋಣ.

ಲೌಕಿಕ ಸುಖವನ್ನು ಬಯಸುವವನಿಗೆ ಅರ್ಥವು ಅನಿವಾರ್ಯವೇ ಸರಿ! “ಧನಮೂಲಮಿದಮ್ ಜಗತ್”, “ದುಡ್ಡೇ ದೊಡ್ಡಪ್ಪ” ಎಂಬ ಮಾತುಗಳು ಎಲ್ಲರಿಗೂ ತಿಳಿದದ್ದೇ. ಹಣವಂತರ ಪ್ರಭಾವವನ್ನು ಗಮನಿಸಿ ಹಣದ ಮಹಿಮೆಯನ್ನು ಹಾಡಿ ಹೊಗಳುವ ಹತ್ತಾರು ಸುಭಾಷಿತಗಳಿವೆ.

ಆಗಾಗ್ಗೆ ಕೆಲವು ಸಂತರು ಹಾಗೂ ದಾರ್ಶನಿಕರು, ಮನುಷ್ಯನು ಹಣದ ಹಿಂದೆ ಹೋಗಿ ಎಷ್ಟೆಲ್ಲ ಪಾಡು ಪಡುವನೆಂದು
ಮನಗಂಡು, “ಹಣವನ್ನು ದೂರವಿಡಿ” ಎನ್ನುತ್ತಾ ಹಣವನ್ನು ಜರೆದಿರುವುದೂ ಉಂಟು. ಹಣವನ್ನು ತೆಗಳುವ ಸುಭಾಷಿತಗಳೂ ಲಭ್ಯ. ಹಣದ ಬಗ್ಗೆ ಪ್ರಶಂಸೆ, ನಿಂದನೆ…ಎರಡನ್ನೂ ಓದುವ ನಮಗೆ ಅರ್ಥದ ಬಗ್ಗೆ ಜಿಜ್ಞಾಸೆ ಹುಟ್ಟುವುದು ಸಹಜವೇ. ಶಂಕರಭಗವತ್ಪಾದರು ತಮ್ಮ ಭಜಗೋವಿಂದ ಸ್ತೋತ್ರದಲ್ಲಿ “ಏಕೆ ದುಡ್ಡಿನ ಚಿಂತೆ?” ಎಂದು ಕಳಕಳಿಯಿಂದ ಕೇಳುತ್ತಾರೆ. (ಕಾತೇ ಕಾಂತಾ? ಧನಗತ ಚಿಂತಾ?) ಮತ್ತೊಂದೆಡೆಯಲ್ಲಿ ಹೀಗೆ ಎಚ್ಚರಿಸುತ್ತಾರೆ.

“ಹಣವು ಎಂದೆಂದಿಗೂ ಅನರ್ಥಕರವೇ ಎಂದು ಭಾವಿಸು. ಅದರಿಂದ ಎಳ್ಳೆನಿತು ಸುಖವಿಲ್ಲ. ಇದು ದಿಟ. ಮಗನ ದೆಸೆಯಿಂದಲೂ ಹಣವಂತರಿಗೆ ಭೀತಿ… ಇದೇ ಎಲ್ಲೆಡೆಯಲ್ಲಿಯೂ ಇರುವ ಪ್ರಕೃತಿನಿಯಮ (ʻʻಅರ್ಥಮನರ್ಥಂ ಭಾವಯ ನಿತ್ಯಂ, ನಾಸ್ತಿ ತತಃ ಸುಖಲೇಶಃ ಸತ್ಯಂI ಪುತ್ರಾದಪಿ ಧನಭಾಜಾಂ ಭೀತಿಃ, ಸರ್ವತ್ರೈಷಾ ವಿಹಿತಾ ರೀತಿಃII) ಧನಾರ್ಜನೆಯಲ್ಲೇ ಮುಳುಗಿಹೋದವರನ್ನು ಹೀಗೆ ಎಚ್ಚರಿಸಿದ ಶಂಕರರು ಅರ್ಥದ ಬಗೆಗೆ ನಮ್ಮ ನಿಲುವು ಹೇಗಿರಬೇಕೆಂದು ಸ್ಪಷ್ಟಪಡಿಸಿದ್ದಾರೆ. ಈ ಅಂಶವನ್ನು ವಿವರಿಸುತ್ತಾ ಶ್ರೀರಂಗಮಹಾಗುರುಗಳು ಹೀಗೆ ನುಡಿದಿದ್ದಾರೆ; “ಶಂಕರರು ಲೋಕಜೀವನದ ಬಗ್ಗೆ ನಿರಾಸೆಯನ್ನು ತೋರಿಸಲಿಲ್ಲ; ಭೌತಿಕ ಜೀವನವನ್ನೂ ಬೇಡವೆನ್ನಲಿಲ್ಲ. ಭೌತಿಕಜೀವನವನ್ನು ಮಾಡು. ಜೀವನಕ್ಕೆ ಬೇಕಾದ ಉದ್ಯೋಗವನ್ನೂ ಮಾಡು. “ಮೂಢ ಜಹೀಹಿ ಧನಾಗಮತೃಷ್ಣಾಂ, ಕುರು ಸದ್ಬುದ್ಧಿಂ ಮನಸಿವಿತೃಷ್ಣಾಂ, ಯಲ್ಲಭಸೇ ನಿಜಕರ್ಮೋಪಾತ್ತಂ ವಿತ್ತಂ ತೇನ ವಿನೋದಯ ಚಿತ್ತಮ್”.

ಜೀವನದಲ್ಲಿ ಧನವು ಬೇಕು. ಆದರೆ ಧನದ ಅರ್ಥವು ದಾಹ ಹುಟ್ಟಬಾರದು. “ದೊಡ್ಡದಾಹ” (ಮರಣಕಾಲದಲ್ಲಿ ಬರುವ ಬಾಯಾರಿಕೆ) ವಾಗಿಬಿಟ್ಟರೆ ಎಷ್ಟು ನೀರು ಸುರಿದರೂ ಅದು ಅಡಗುವುದಿಲ್ಲ. ಆ ರೀತಿಯಾದ ಧನದಾಹ ಬೇಡ. “ಬಾಯಾರಿತು, ಒಂದು ಲೋಟ ನೀರು ಕುಡಿದೆ” ಎಂದು ಅಷ್ಟರಲ್ಲಿ ನಿಲ್ಲಲಿ. ಹಾಗೆ ದಾಹರಹಿತವಾದ ಸದ್ಬುದ್ಧಿಯನ್ನು ಬೆಳೆಸಿಕೊಳ್ಳೀಪ್ಪಾ. ನಿನ್ನ ವೃತ್ತಿಗೆ ಅನುಗುಣವಾದ ಕರ್ಮದಿಂದ ನೀನೇನನ್ನು ಪಡೆಯುವಿಯೋ ಅದರಲ್ಲಿ ನಿನಗೆ ಬೇಕಾದ ರೀತಿ ಸಂತೋಷಪಡು.[ಎನ್ನುತ್ತಾರೆ] ಹೀಗೆ, ಶಂಕರರು ಭೌತಿಕಜೀವನವನ್ನು ಬೇಡವೆನ್ನದೆ, ಅದನ್ನು ಒಂದು ಹತೋಟಿಯಲ್ಲಿಟ್ಟುಕೊಳ್ಳುವಂತೆ ಆದೇಶವಿತ್ತಿದ್ದಾರೆ”. (ಅಮರವಾಣೀ-7-235).

ಮನುಷ್ಯನು ತಾನು ಗಳಿಸಿದ ಹಣವೆಲ್ಲವನ್ನೂ ದಾನಮಾಡಿಬಿಡಬೇಕೆಂದು ಯಾವ ಋಷಿಯೂ ಹೇಳಿಲ್ಲ. ನ್ಯಾಯವಾದ ಮಾರ್ಗದಿಂದ ಸಂಪಾದಿಸಿದ ಹಣವನ್ನು ಕೇವಲ ಸ್ವಾರ್ಥಕ್ಕಾಗಿ ಬಳಸದೇ, ತನ್ನ ಕುಟುಂಬಕ್ಕಾಗಿ ಇಷ್ಟು, ತನ್ನ ಸಮಾಜಕ್ಕಿಷ್ಟು, ತನ್ನನ್ನು ಆಶ್ರಯಿಸಿದವರಿಗಿಷ್ಟು, ಭಗವತ್ಕಾರ್ಯಕ್ಕಿಷ್ಟು, ಎಂದು ಅರ್ಥವಿಭಾಗವನ್ನು ಮಾಡಿಕೊಂಡೇ ಹಣವನ್ನು ವ್ಯಯಮಾಡಬೇಕೆನ್ನುತ್ತದೆ, ಆರ್ಷನೋಟ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಶ್ರೀರಂಗಮಹಾಗುರುಗಳು ಒಮ್ಮೆ ತಮ್ಮ ಆಪ್ತರೊಡನೆ ಶ್ರೀರಂಗಪಟ್ಟಣಕ್ಕೆ ಭೇಟಿಕೊಟ್ಟಾಗ, ಭಗವತ್ಪ್ರಸಾದವನ್ನು
ಕಾವೇರಿಯಲ್ಲಿದ್ದ ಮೀನುಗಳಿಗೂ ಕೊಟ್ಟು, ನಂತರ ತಾವು ಸ್ವೀಕರಿಸಿದ್ದನ್ನು ಭಕ್ತರು ನೆನಪಿಸಿಕೊಳ್ಳುತ್ತಾರೆ (ಯೋಗೇಶ್ವರ ಶ್ರೀರಂಗ 319). ಹೀಗೆ, ಮನುಷ್ಯನು ಅರ್ಥವಿಭಾಗವನ್ನು ಮಾಡುವಾಗ, ಸುತ್ತಲಿನ ಪಶುಪಕ್ಷಿಪ್ರಾಣಿಗಳನ್ನೂ ಮರೆಯುವಂತಿಲ್ಲ. ಶ್ರೀರಂಗಮಹಾಗುರುಗಳು ಒಮ್ಮೆ ಈ ಸುಂದರ ನೋಟವನ್ನು ದಯಪಾಲಿಸಿದ್ದರು. “ಅರ್ಥವು ಅನರ್ಥವಾಗದೇ, ಪರಮಾರ್ಥದಲ್ಲಿ ನಿಂತು ಸಾರ್ಥಕವಾಗುವ ಪಕ್ಷೇ ಅದನ್ನು ಕ್ಷಣಕ್ಷಣದಲ್ಲಿಯೂ ನಾವು ಸಂಪಾದಿಸಲು ಉದ್ಯಮಿಸುತ್ತೇವೆ” (ಶ್ರೀರಂಗ ವಚನಾಮೃತ 1-59). ಧನದಾಹವಿಲ್ಲದೆ, ನ್ಯಾಯವಾದ ವೃತ್ತಿಯಿಂದ ಗಳಿಸಿದ ಅರ್ಥವು ಸದ್ವಿನಿಯೋಗವಾದಾಗ, ಅದು ಅನರ್ಥವಾಗದೇ, ಜೀವನ ಸಾರ್ಥಕವಾಗುವುದರಲ್ಲಿ ಸಹಕಾರಿಯಾಗುತ್ತದೆ.

– ಲೇಖಕರು ಆಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು,
ಅಷ್ಟಾಂಗಯೋಗ ವಿಜ್ಞಾನಮಂದಿರಂ

ಇದನ್ನೂ ಓದಿ : Prerane : ವಿದ್ಯಾಭ್ಯಾಸವೋ? ವಿದ್ಯಾಭಾಸವೋ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Ram Navami 2024: ವನವಾಸದ ವೇಳೆ ಶ್ರೀರಾಮ ಭೇಟಿ ನೀಡಿದ ಈ ಸ್ಥಳಗಳೀಗ ಪವಿತ್ರ

Ram Navami 2024: 14 ವರ್ಷಗಳ ವನವಾಸದ ಸಮಯದಲ್ಲಿ ಶ್ರೀರಾಮನು ಪತ್ನಿ ಸೀತೆ ಮತ್ತು ಸಹೋದರ ಲಕ್ಷ್ಮಣನ ಜೊತೆ ಅನೇಕ ಪ್ರದೇಶಗಳನ್ನು ಸುತ್ತಿದ್ದಾನೆ. ಈ ಬಗ್ಗೆ ರಾಮಾಯಣದಲ್ಲಿ ಉಲ್ಲೇಖಿಸಲಾಗಿದೆ. ಅಂತಹ ಪ್ರಮುಖ ಸ್ಥಳಗಳ ಬಗ್ಗೆ ಮಾಹಿತಿ ಇಲ್ಲಿದೆ.

VISTARANEWS.COM


on

Sri Rama
Koo

ಶ್ರೀರಾಮನ ಕೋಟ್ಯಂತರ ಹಿಂದೂಗಳ ಆರಾಧ್ಯ ದೇವ. ಹಿಂದೂ ಧರ್ಮದಲ್ಲಿ ದಸರಾ, ರಾಮನವಮಿ, ದೀಪಾವಳಿಯಂತಹ ಹಬ್ಬಗಳನ್ನು ಶ್ರೀರಾಮನ (Sri Rama) ಹೆಸರಿನಿಂದಲೇ ಆಚರಿಸಲಾಗುತ್ತದೆ. ರಾಮಾಯಣವು ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ ಒಂದಾಗಿದೆ. ಇದರಲ್ಲಿ ಶ್ರೀರಾಮನ ಜೀವನ ಚರಿತ್ರೆಯನ್ನು ಉಲ್ಲೇಖಿಸಲಾಗಿದೆ. 14 ವರ್ಷಗಳ ವನವಾಸದ ಸಮಯದಲ್ಲಿ ಶ್ರೀರಾಮನು ಪತ್ನಿ ಸೀತೆ ಮತ್ತು ಸಹೋದರ ಲಕ್ಷ್ಮಣನ ಜೊತೆ ಅನೇಕ ಪ್ರದೇಶಗಳನ್ನು ಸುತ್ತಿದ್ದಾನೆ. ಈ ಬಗ್ಗೆ ರಾಮಾಯಣದಲ್ಲಿ ಉಲ್ಲೇಖಿಸಲಾಗಿದೆ. ಆ ಸ್ಥಳಗಳು ಈಗಲೂ ಪ್ರಖ್ಯಾತವಾಗಿವೆ. ಅಂತಹ ಪ್ರಮುಖ ಸ್ಥಳಗಳ ಬಗ್ಗೆ ಮಾಹಿತಿ ಇಲ್ಲಿದೆ.

Sri Rama

ಅಯೋಧ್ಯೆ

ಇದು ಉತ್ತರ ಪ್ರದೇಶದ ಸರಯೂ ನದಿಯ ದಡದ ಮೇಲಿದೆ. ರಾಮಾಯಣದ ಪ್ರಕಾರ ಇದು ಶ್ರೀರಾಮನ ಜನ್ಮಸ್ಥಳವಾಗಿದೆ. ತನ್ನ ತಂದೆಯ ಆಜ್ಞೆಯಂತೆ ಶ್ರೀರಾಮನು 14 ವರ್ಷ ವನವಾಸವನ್ನು ಈ ಸ್ಥಳದಿಂದಲೇ ಪ್ರಾರಂಭಿಸಿದ ಎನ್ನಲಾಗುತ್ತದೆ.

Sri Rama

ಪ್ರಯಾಗರಾಜ್‌

ಇದು ಉತ್ತರ ಪ್ರದೇಶದ ತ್ರಿವೇಣಿ ಸಂಗಮಕ್ಕೆ ಸಮೀಪದಲ್ಲಿರುವ ನಗರವಾಗಿದೆ. ಇದನ್ನು ಮೊದಲ ಅಲಹಾಬಾದ್ ಎಂದು ಕರೆಯಲಾಗುತ್ತಿತ್ತು. ಶ್ರೀರಾಮನು ವನವಾಸದ ಸಮಯದಲ್ಲಿ ಸೀತೆ ಮತ್ತು ಲಕ್ಷ್ಮಣನ ಜೊತೆ ಇಲ್ಲಿ ಋಷಿ ಭಾರದ್ವಾಜರ ಆಶ್ರಮದಲ್ಲಿ ಸ್ವಲ್ಪ ಸಮಯ ಕಳೆದು ನಂತರ ಗಂಗಾ ನದಿಯನ್ನು ದಾಟಿ ತಮ್ಮ ಪ್ರಯಾಣವನ್ನು ಮುಂದುವರಿಸಿದ ಎನ್ನಲಾಗುತ್ತದೆ.

Sri Rama

ಚಿತ್ರಕೂಟ

ಮಧ್ಯಪ್ರದೇಶ ಸತ್ನಾ ಜಿಲ್ಲೆಯಲ್ಲಿರುವ ಚಿತ್ರಕೂಟ ಪವಿತ್ರ ಯಾತ್ರಾ ಸ್ಥಳವಾಗಿದೆ. ವನವಾಸದ ಸಮಯದಲ್ಲಿ ರಾಮ ತನ್ನ ಸಹೋದರ ಭರತನನ್ನು ಇಲ್ಲಿ ಭೇಟಿ ಮಾಡಿದ ಎನ್ನಲಾಗುತ್ತದೆ. ಹಾಗೇ ಈ ಸ್ಥಳದಲ್ಲಿರುವಾಗ ತನ್ನ ತಂದೆ ದಶರಥನ ಸಾವಿನ ಸುದ್ದಿಯನ್ನು ತಿಳಿದು ದುಃಖಿಸಿದನು ಎನ್ನಲಾಗುತ್ತದೆ. ಅಯೋಧ್ಯೆಗೆ ಮರಳಲು ನಿರಾಕರಿಸಿದ ರಾಮನ ಪಾದುಕೆಗಳನ್ನು ಭರತನು ಈ ಸ್ಥಳದಿಂದ ಅಯೋಧ್ಯೆಗೆ ತೆಗೆದುಕೊಂಡು ಹೋಗಿ ಸಿಂಹಾಸನದ ಮೇಲೆ ಇರಿಸಿದ ಎನ್ನಲಾಗುತ್ತದೆ.

Sri Rama

ಪಂಚವಟಿ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಪಂಚವಟಿ ಪ್ರಾಚೀನ ನಗರವಾಗಿದೆ. ಇಲ್ಲಿ ಶ್ರೀರಾಮನು ತನ್ನ ವಾಸ ಸ್ಥಳವನ್ನು ನಿರ್ಮಿಸಿ ಸೀತೆ ಮತ್ತು ಲಕ್ಷ್ಮಣನ ಜೊತೆ ವಾಸವಾಗಿದ್ದ ಎನ್ನಲಾಗುತ್ತದೆ. ಸೀತೆ ಮಾಯಾಜಿಂಕೆಯನ್ನು ಈ ಸ್ಥಳದಲ್ಲಿ ನೋಡಿದ್ದಳು ಮತ್ತು ರಾವಣನು ಸೀತೆಯನ್ನು ಇಲ್ಲಿಂದಲೇ ಅಪಹರಿಸಿದ ಎಂಬ ಉಲ್ಲೇಖವಿದೆ. ಇಲ್ಲಿ ಸೀತಾ ಗುಹೆ, ಕಪಾಲೇಶ್ವರ ಮಂದಿರದಂತಹ ಅನೇಕ ಪುರಾತನ ದೇವಾಲಯಗಳಿವೆ.

Sri Rama

ದಂಡಕಾರಣ್ಯ

ಇದು ರಾವಣನ ಸಹೋದರಿ ಶೂರ್ಪನಕಾ ರಾಮನನ್ನು ಭೇಟಿಯಾದ ಸ್ಥಳ. ಈ ಸ್ಥಳದಲ್ಲಿ ರಾಮನನ್ನು ಕಂಡು ಶೂರ್ಪನಕಾ ಮನಸೋತು ವಿವಾಹದ ಬೇಡಿಕೆ ಇಟ್ಟಳು ಎನ್ನಲಾಗುತ್ತದೆ. ಈ ಸ್ಥಳ ಈಗ ಛತ್ತೀಸ್‌ಗಢ, ಒರಿಸ್ಸಾ ಮತ್ತು ಆಂಧ್ರಪ್ರದೇಶದಲ್ಲಿ ಬರುತ್ತದೆ. ಇಲ್ಲಿಗೆ ಪ್ರವಾಸಿಗರು ದೂಧಸಾಗರ ಜಲಪಾತ ಮತ್ತು ಸುಲಾ ದ್ರಾಕ್ಷಿತೋಟ ನೋಡಲು ಬರುತ್ತಾರೆ.

Sri Rama

ಕಿಷ್ಕಿಂದಾ

ರಾಮಾಯಣದ ಪ್ರಕಾರ ಇದು ವಾನರ ರಾಜ್ಯ. ಇಲ್ಲಿ ವಾನರ ರಾಜ ವಾಲಿ ಮತ್ತು ಅವನ ಸಹೋದರ ಸುಗ್ರೀವ ಉತ್ತರಾಧಿಕಾರಿಯಾಗಿದ್ದರು. ಕಿಷ್ಕಿಂದಾ ಕರ್ನಾಟಕದ ಹಂಪಿ ಬಳಿ ತುಂಗಾಭದ್ರಾ ನದಿಯ ಸುತ್ತಮುತ್ತಲಿನ ಸ್ಥಳವಾಗಿದೆ. ಇಲ್ಲಿ ಹಲವಾರು ಪ್ರಸಿದ್ಧ ದೇವಾಲಯಗಳಿವೆ.

ಇದನ್ನೂ ಓದಿ: Breast Cancer: ಮಹಿಳೆಯರೇ ಹುಷಾರ್‌; 2040ರ ವೇಳೆಗೆ ಸ್ತನ ಕ್ಯಾನ್ಸರ್‌ಗೆ 10 ಲಕ್ಷ ಜನ ಬಲಿಯಾಗಲಿದ್ದಾರಂತೆ!

ರಾಮೇಶ್ವರಂ

ಇದು ತಮಿಳುನಾಡಿನಲ್ಲಿರುವ ದ್ವೀಪ ನಗರವಾಗಿದೆ. ಇಲ್ಲಿ ರಾಮ ತನ್ನ ಪತ್ನಿ ಸೀತೆಯನ್ನು ರಾವಣನಿಂದ ರಕ್ಷಿಸಲು ವಾನರ ಸೇನೆಯ ಸಹಾಯದಿಂದ ಶ್ರೀಲಂಕಾಗೆ ಹೋಗಲು ರಾಮಸೇತುವೆಯನ್ನು ನಿರ್ಮಿಸಿದ ಎನ್ನಲಾಗುತ್ತದೆ. ಈಗಲೂ ಇಲ್ಲಿ ರಾಮಸೇತುವಿನ ಕುರುಹುಗಳಿವೆ. ರಾಮೇಶ್ವರಂಗೆ ಉತ್ತರ ಭಾರತದಿಂದಲೂ ಸಾವಿರಾರು ಯಾತ್ರಿಕರು ಭೇಟಿ ನೀಡುತ್ತಾರೆ.

Continue Reading

ಪ್ರಮುಖ ಸುದ್ದಿ

Ram Navami 2024: ರಾಮ ನವಮಿಯನ್ನು ವಿಶೇಷವಾಗಿ ಆಚರಿಸುವ ಟಾಪ್‌ 5 ಸ್ಥಳಗಳಿವು

Ram Navami 2024: ರಾಮ ನವಮಿ ಎಂಬ ಹೆಸರು ಕೇಳುತ್ತಲೇ ಮನಸ್ಸಿನಲ್ಲಿ ಸಡಗರ ತುಂಬಿ ತುಳುಕುತ್ತದೆ. ಹಬ್ಬದ ತಯಾರಿ ಈಗಾಗಲೇ ಜೋರಾಗಿ ನಡೆದಿದೆ. ದೇಶದ ಕೆಲವು ಭಾಗಗಳಲ್ಲಿ ರಾಮ ನವಮಿಯನ್ನು ಬಹಳ ಸಡಗರದಿಂದ ಆಚರಿಸಲಾಗುತ್ತದೆ. ಆ ಸ್ಥಳಗಳು ಯಾವುವು? ಅವುಗಳ ವಿಶೇಷತೆ ಏನು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

Rama Navami
Koo

ಬೆಂಗಳೂರು: ರಾಮ ನವಮಿಯನ್ನು (Rama Navami) ಶ್ರೀರಾಮನ ಜನ್ಮದಿನವೆಂದು ಆಚರಿಸಲಾಗುತ್ತದೆ. ರಾಜ ದಶರಥ ಮತ್ತು ರಾಣಿ ಕೌಸಲ್ಯ ದೇವಿಯ ಪುತ್ರನಾಗಿ ಶ್ರೀವಿಷ್ಣುವು ಶ್ರೀರಾಮನ ಅವತಾರದಲ್ಲಿ ದುಷ್ಟ ರಾವಣನನ್ನು ಸಂಹಾರ ಮಾಡಲು ಈ ದಿನ ಭೂಮಿಯ ಮೇಲೆ ಜನ್ಮ ತಾಳಿದನು ಎಂದು ನಂಬಲಾಗಿದೆ. ಹಾಗಾಗಿ ಏಪ್ರಿಲ್ 17ರಂದು ಭಾರತದಾದ್ಯಂತ ರಾಮನವಮಿಯನ್ನು ಬಹಳ ವಿಜೃಂಭನೆಯಿಂದ ಆಚರಿಸಲಾಗುತ್ತದೆ. ಆದರೆ ದೇಶದ ಈ ಕೆಲವು ಸ್ಥಳಗಳಲ್ಲಿ ರಾಮನವಮಿಯನ್ನು ಬಹಳ ವಿಶೇಷವಾಗಿ ಆಚರಿಸುತ್ತಾರೆ. ಆ ಸ್ಥಳಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

ಉತ್ತರ ಪ್ರದೇಶದ ಅಯೋಧ್ಯೆ

ಭಗವಾನ್ ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಭವ್ಯ ಶ್ರೀ ರಾಮ ಮಂದಿರ ಇತ್ತೀಚೆಗಷ್ಟೇ ಉದ್ಘಾಟನೆಗೊಂಡಿದೆ. ಇಲ್ಲಿ ರಾಮ ನವಮಿಯನ್ನು ಬಹಳ ವಿಶೇಷವಾಗಿ ಆಚರಿಸಲಾಗುತ್ತದೆ. ಅಯೋಧ್ಯೆ ಧಾಮದಲ್ಲಿ ರಾಮನವಮಿ ಮೇಳವನ್ನು ನಡೆಸಲಾಗುತ್ತಿದ್ದು, ಇದು ಸುಮಾರು 25 ಲಕ್ಷ ಭಕ್ತರನ್ನು ಸೆಳೆಯುವ ನಿರೀಕ್ಷೆಯಿದೆ ಎನ್ನಲಾಗಿದೆ. ಜೊತೆಗೆ ಹನುಮಾನ್ ಗಢಿ ಮತ್ತು ಕನಕ ಭವನದಂತಹ ಇತರ ದೇವಾಲಯಗಳಿಗೂ ನೀವು ಭೇಟಿ ನೀಡಬಹುದು. ರಾಮ ಮಂದಿರ ಆವರಣದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಬಿಹಾರದ ಸೀತಾ ಮಢಿ

ಸೀತಾ ಮಾತೆಯ ಜನ್ಮ ಸ್ಥಳವಾಗಿ ಪೂಜೆ ಮಾಡಲಾಗುತ್ತಿರುವ ಬಿಹಾರದ ಸೀತಾ ಮಢಿಯು ರಾಮಭಕ್ತರಿಗೆ ರಾಮ ನವಮಿಯನ್ನು ಆಚರಿಸಲು ಇರುವ ವಿಶೇಷ ಸ್ಥಳವಾಗಿದೆ. ಇಲ್ಲಿನ ಜಾನಕಿ ಮಂದಿರದಲ್ಲಿ ರಾಮನವಮಿಯನ್ನು ಬಹಳ ವಿಶೇಷವಾಗಿ ಉತ್ಸಾಹದಿಂದ ಆಚರಿಸುತ್ತಾರೆ. ಈ ದಿನ ಸಾವಿರಾರು ಭಕ್ತರು ಇಲ್ಲಿಗೆ ಬರುತ್ತಾರೆ. ಈ ದಿನ ಮಂದಿರವನ್ನು ಸುಂದರವಾಗಿ ಅಲಂಕರಿಸಲಾಗುತ್ತದೆ.

ತೆಲಂಗಾಣದ ಭದ್ರಾಚಲಂ

‘ದಕ್ಷಿಣದ ಅಯೋಧ್ಯೆ’ ಎಂದು ಕರೆಯಲ್ಪಡುವ ತೆಲಂಗಾಣದ ಭದ್ರಾಚಲಂನಲ್ಲಿರುವ ಸೀತಾ ರಾಮಚಂದ್ರ ಸ್ವಾಮಿ ದೇವಾಲಯದಲ್ಲಿ ರಾಮನವಮಿಯನ್ನು ಬಹಳ ಸಡಗರದಿಂದ ಆಚರಿಸಲಾಗುತ್ತದೆ. ಇಲ್ಲಿ ರಾಮ ನವಮಿಯನ್ನು ರಾಮನು ಸೀತಾಮಾತೆಯನ್ನು ವಿವಾಹವಾದ ದಿನ ಎಂದು ಆಚರಿಸಲಾಗುತ್ತದೆ. ಹಾಗಾಗಿ ಈ ದಿನ ದೇವಾಲಯದಲ್ಲಿ ವಿವಾಹ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಹಾಗೆಯೇ ಸಂಪ್ರದಾಯದ ಭಾಗವಾಗಿ ದೈವಿಕ ದಂಪತಿಗಳಿಗೆ ವಸ್ತ್ರಗಳು ಮತ್ತು ಮುತ್ಯಾಲ ತಾಳಂಬ್ರಲು ನೀಡಲಾಗುತ್ತದೆ. ಈ ದಿನ ದೇವಾಲಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಪ್ರವಚನಗಳು ಮತ್ತು ದೇವತೆಗಳ ಭವ್ಯವಾದ ಮೆರವಣಿಗೆ ನಡೆಯುತ್ತದೆ.

ತಮಿಳುನಾಡಿನ ರಾಮೇಶ್ವರಂ

ರಾಮೇಶ್ವರಂನಲ್ಲಿ ರಾವಣನಿಂದ ಸೀತೆಯನ್ನು ರಕ್ಷಿಸಲು ರಾಮನು ಶ್ರೀಲಂಕಾವನ್ನು ತಲುಪಲು ಸೇತುವೆಯನ್ನು ನಿರ್ಮಿಸಿದನ್ನು ನಂಬಲಾಗಿದೆ. ಇಲ್ಲಿನ ಶ್ರೀ ಕೋದಂಡರಾಮಸ್ವಾಮಿ ದೇವಸ್ಥಾನದಲ್ಲಿ ರಾಮನವಮಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇದು ರಾವಣನನ್ನು ಕೊಂದ ಪಾಪ ವಿಮೋಚನೆಗಾಗಿ ರಾಮನು ಶಿವನನ್ನು ಪೂಜಿಸಿದ ಸ್ಥಳ ಎನ್ನಲಾಗುತ್ತದೆ.

ಇದನ್ನೂ ಓದಿ: Theft Case : ಹಗಲಿನಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್‌; ರಾತ್ರಿಯಲ್ಲಿ ಬೈಕ್ ಕದಿಯುವ ಕಳ್ಳ

ತಮಿಳುನಾಡಿನ ಕೊಯಮತ್ತೂರು

ಇಲ್ಲಿನ ಅರುಲ್ಮಿಗು ಕೋದಂಡರಾಮರ ದೇವಸ್ಥಾನದಲ್ಲಿ ಬೆಳಗ್ಗೆ ಸೂರ್ಯದೇವನಿಗೆ ಪ್ರಾರ್ಥನೆಗಳನ್ನು ಸಲ್ಲಿಸುತ್ತ ರಾಮನವಮಿಯನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಇಲ್ಲಿ ಅಂದು ರಾಮಾಯಣ ಮತ್ತು ರಾಮಚರಿತಮಾನಸದಂತಹ ಪವಿತ್ರ ಗ್ರಂಥಗಳ ಪಠಣಗಳು, ಉತ್ಸವವನ್ನು ಒಳಗೊಂಡ ಮೆರವಣಿಗೆ ಇತ್ಯಾದಿ ವಿಶೇಷ ಆಚರಣೆಗಳನ್ನು ಮಾಡಲಾಗುತ್ತದೆ. ಹಾಗೆಯೇ ಭಕ್ತರಿಗೆ ಹಣ್ಣುಗಳು ಮತ್ತು ಸಿಹಿ ತಿಂಡಿಗಳನ್ನು ಧಾರಾಳವಾಗಿ ವಿತರಿಸಲಾಗುತ್ತದೆ.

Continue Reading

ಪ್ರಮುಖ ಸುದ್ದಿ

Watch Video: ಹರಿದ್ವಾರದಲ್ಲಿ ಭಕ್ತರನ್ನು ಅಮಾನುಷವಾಗಿ ಥಳಿಸಿದ ಅರ್ಚಕರು!

Viral News: ಉತ್ತರಾಖಂಡದ ಹರಿದ್ವಾರದಲ್ಲಿರುವ ಸಿದ್ಧಪೀಠ ಶ್ರೀ ದಕ್ಷಿಣ ಕಾಳಿ ಮಂದಿರದಲ್ಲಿ ಪಾರ್ಕಿಂಗ್ ವಿಷಯಕ್ಕೆ ಸಂಬಂಧಪಟ್ಟಂತೆ ನಡೆದ ಸಣ್ಣ ಜಗಳ ಹಿಂಸಾಚಾರಕಕ್ಕೆ ತಿರುಗಿದೆ. ಸಿಬ್ಬಂದಿಗಳು ದೊಣ್ಣೆಯಿಂದ ಭಕ್ತರನ್ನು ಬೆನ್ನಟ್ಟಿ ಹಲ್ಲೆ ನಡೆಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

VISTARANEWS.COM


on

Viral News
Koo

ಹೆಚ್ಚಾಗಿ ದೇವಸ್ಥಾನಗಳಲ್ಲಿ ಜನಸಂದಣಿ ಹೆಚ್ಚಾಗಿರುವ ಕಾರಣ ನೂಕು ನುಗ್ಗಲು ಇರುತ್ತದೆ. ಆ ನಡುವೆ ಭಕ್ತರು, ಅರ್ಚಕರು ಹಾಗೂ ದೇವಸ್ಥಾನದ ಆಡಳಿತ ಸಿಬ್ಬಂದಿಗಳ ನಡುವೆ ಸಣ್ಣ ಪುಟ್ಟ ವಿಚಾರಕ್ಕೆ ಜಗಳ, ಗಲಾಟೆಗಳು ನಡೆಯುತ್ತಿರುತ್ತದೆ (Viral News). ಇದು ಸರ್ವೇ ಸಾಮಾನ್ಯ. ಆದರೆ ಉತ್ತರಾಖಂಡದ ಹರಿದ್ವಾರದಲ್ಲಿರುವ ಮಂದಿರವೊಂದರಲ್ಲಿ ಅರ್ಚಕರು, ಸಿಬ್ಬಂದಿ ಮತ್ತು ಭಕ್ತರ ನಡುವೆ ಹಿಂಸಾತ್ಮಕ ಘರ್ಷಣೆ ನಡೆದಿರುವುದಾಗಿ ತಿಳಿದು ಬಂದಿದೆ.

ಉತ್ತರಾಖಂಡದ ಹರಿದ್ವಾರದಲ್ಲಿರುವ ಸಿದ್ಧಪೀಠ ಶ್ರೀ ದಕ್ಷಿಣ ಕಾಳಿ ಮಂದಿರದಲ್ಲಿ ಈ ಘಟನೆ ನಡೆದಿದೆ. ಅರ್ಚಕರು ಮತ್ತು ದೇವಸ್ಥಾನದ ಸಿಬ್ಬಂದಿಗಳು ಭಕ್ತರನ್ನು ದೊಣ್ಣೆಯಿಂದ ಥಳಿಸುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಉತ್ತರ ಪ್ರದೇಶದ ಸಹರಾನ್ ಪುರದಿಂದ ಆಗಮಿಸಿದ ಭಕ್ತರು ಪಾರ್ಕಿಂಗ್ ರಸೀದಿ ವಿಚಾರಕ್ಕೆ ಜಗಳ ತೆಗೆದು ಹಿಂಸಾಚಾರಕ್ಕೆ ಮುಂದಾಗಿದ್ದಾರೆ. ಆಗ ತಿರುಗಿ ಬಿದ್ದ ಅರ್ಚಕರು ಹಾಗೂ ಸಿಬ್ಬಂದಿಗಳು ದೊಣ್ಣೆಯಿಂದ ಭಕ್ತರನ್ನು ಬೆನ್ನಟ್ಟಿ ಹಲ್ಲೆ ನಡೆಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಗಾಯಗೊಂಡ ಭಕ್ತರು ಅರ್ಚಕರು ಮತ್ತು ಸಿಬ್ಬಂದಿಗಳ ಹೊಡೆತದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಮಾಹಿತಿ ತಿಳಿದ ಚಾಂಡಿ ಘಾಟ್ ಚೌಕಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು ಎನ್ನಲಾಗಿದೆ.

ಪೊಲೀಸರು ತಿಳಿಸಿದ ಪ್ರಕಾರ, ಸಹರಾನ್ ಪುರದ ಕೆಲವು ಭಕ್ತರು ಏಪ್ರಿಲ್ 14ರಂದು ಸಿದ್ಧಪೀಠ ಶ್ರೀ ದಕ್ಷಿಣ ಕಾಳಿ ಮಂದಿರಕ್ಕೆ ಬಂದಿದ್ದರು. ಅವರು ಕಾರನ್ನು ದೇವಾಲಯದ ಆವರಣಕ್ಕೆ ತೆಗೆದುಕೊಂಡು ಹೋದಾಗ ಸಿಬ್ಬಂದಿ ರಸೀದಿ ಹರಿಯಲು ಹೇಳಿದರು. ಈ ಬಗ್ಗೆ ಅವರ ನಡುವೆ ವಾಗ್ದಾದ ನಡೆದು ಘಟನೆ ಹಿಂಸಾಚಾರಕ್ಕೆ ತಿರುಗಿದೆ ಎನ್ನಲಾಗಿದೆ. ಘಟನೆಯ ನಂತರ ಭಕ್ತರು ಮತ್ತು ಅವರ ಬೆಂಬಲಿಗರು ದೇವಸ್ಥಾನದಿಂದ ಹೊರನಡೆದರು. ಈ ಬಗ್ಗೆ ದೇವಾಲಯದ ಆಡಳಿತ ಮಂಡಳಿಯು ಪೊಲೀಸರಿಗೆ ದೂರು ನೀಡಿದೆ ಎನ್ನಲಾಗಿದೆ.

ಇದನ್ನೂ ಓದಿ: Ayodhya Ramanavami: ರಾಮನವಮಿ ವೇಳೆ ಅಯೋಧ್ಯೆ ಸುರಕ್ಷತೆಗೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆ

ಪೊಲೀಸ್ ಅಧಿಕಾರಿ ನಿತೇಶ್ ಶರ್ಮಾ ಅವರು ದಕ್ಷಿಣಾ ಪೀಠಾಧೀಶ್ವರ ಸ್ವಾಮಿ ಕೈಲಾಶನಂದ ಗಿರಿ ಅವರಿಂದ ಘಟನೆಯ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ಸದ್ಯಕ್ಕೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಹಾಗಾಗಿ ದೂರು ಬಂದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

Jain Monks: ₹200 ಕೋಟಿ ಮೌಲ್ಯದ ಆಸ್ತಿ ದಾನ ಮಾಡಿ ಸನ್ಯಾಸಿಗಳಾದ ದಂಪತಿ!

Jain Monks: ಭಾವೇಶ್‌ ಅವರ ಇಬ್ಬರು ಮಕ್ಕಳೂ ಈಗಾಗಲೇ ಸನ್ಯಾಸ ಸ್ವೀಕರಿಸಿದ್ದಾರೆ! ಇವರ 19 ವರ್ಷದ ಮಗಳು ಮತ್ತು 16 ವರ್ಷದ ಮಗ 2022ರಲ್ಲಿ ಸನ್ಯಾಸ ಸ್ವೀಕರಿಸಿದ್ದರು. ಈಗ ತಂದೆ- ತಾಯಿ ಇವರ ಹೆಜ್ಜೆಗಳನ್ನು ಅನುಸರಿಸುತ್ತಿದ್ದಾರೆ.

VISTARANEWS.COM


on

bhavesh bhandari couple jain monks
ಭಾವೇಶ್‌ ಭಂಡಾರಿ ದಂಪತಿ ಹಾಗೂ ಪುತ್ರ
Koo

ಸೂರತ್: ಗುಜರಾತ್‌ನ ಶ್ರೀಮಂತ ಜೈನ ದಂಪತಿಗಳು (Jain couple) ತಮ್ಮ ಸುಮಾರು ₹200 ಕೋಟಿ ಮೌಲ್ಯದ ಆಸ್ತಿಪಾಸ್ತಿಗಳನ್ನು ದೇಣಿಗೆ (Donation) ನೀಡಿ ಸನ್ಯಾಸ (monkhood) ಸ್ವೀಕರಿಸಿದ್ದು, ಮೋಕ್ಷಕ್ಕಾಗಿ ಮುಂದಿನ ಪ್ರಯಾಣ ಬೆಳೆಸಲು ಸಜ್ಜಾಗಿದ್ದಾರೆ. ಫೆಬ್ರವರಿಯಲ್ಲಿ ನಡೆದ ಸಮಾರಂಭದಲ್ಲಿ ಉದ್ಯಮಿ ಭಾವೇಶ್ ಭಂಡಾರಿ (Bhavesh Bhandari) ಮತ್ತು ಅವರ ಪತ್ನಿ ತಮ್ಮ ಎಲ್ಲಾ ಸಂಪತ್ತನ್ನು ದಾನ ಮಾಡಿದರು. ಈ ತಿಂಗಳ ಕೊನೆಯಲ್ಲಿ ನಡೆಯುವ ದೀಕ್ಷಾ (Deeksha) ಸಮಾರಂಭದಲ್ಲಿ ಅವರು ಅಧಿಕೃತವಾಗಿ ಜೈನ (Jain Monks) ಸನ್ಯಾಸಿಗಳಾಗಲಿದ್ದಾರೆ.

ವಿಶೇಷ ಎಂದರೆ, ಭಾವೇಶ್‌ ಅವರ ಇಬ್ಬರು ಮಕ್ಕಳೂ ಈಗಾಗಲೇ ಸನ್ಯಾಸ ಸ್ವೀಕರಿಸಿದ್ದಾರೆ! ಇವರ 19 ವರ್ಷದ ಮಗಳು ಮತ್ತು 16 ವರ್ಷದ ಮಗ 2022ರಲ್ಲಿ ಸನ್ಯಾಸ ಸ್ವೀಕರಿಸಿದ್ದರು. ಈಗ ತಂದೆ- ತಾಯಿ ಇವರ ಹೆಜ್ಜೆಗಳನ್ನು ಅನುಸರಿಸುತ್ತಿದ್ದಾರೆ. ಭಾವೇಶ್‌ ಕಟ್ಟಡ ನಿರ್ಮಾಣ ಉದ್ಯಮದಲ್ಲಿದ್ದರು. ತಮ್ಮ ಭೌತಿಕ ಸ್ವತ್ತುಗಳನ್ನು ತ್ಯಜಿಸಿ ತಪಸ್ವಿ ಮಾರ್ಗವನ್ನು ಸೇರುತ್ತಿರುವ ಭಾವೇಶ್‌ ಕುಟುಂಬವನ್ನು ಅವರ ಸಮುದಾಯದ ಮಂದಿ ಕೊಂಡಾಡಿದ್ದಾರೆ.

ಏಪ್ರಿಲ್ 22ರಂದು ಸನ್ಯಾಸ ಪ್ರತಿಜ್ಞೆಯನ್ನು ತೆಗೆದುಕೊಂಡ ನಂತರ ದಂಪತಿ ಎಲ್ಲಾ ಕುಟುಂಬ ಸಂಬಂಧಗಳನ್ನು ಕಡಿದುಕೊಳ್ಳಬೇಕಾಗುತ್ತದೆ. ಯಾವುದೇ ಭೌತಿಕ ವಸ್ತುಗಳನ್ನು ಇಟ್ಟುಕೊಳ್ಳಲು ಅವಕಾಶವಿಲ್ಲ. ನಂತರ ಅವರು ಭಾರತದಾದ್ಯಂತ ಬರಿಗಾಲಿನಲ್ಲಿ ನಡೆಯುತ್ತಾರೆ ಹಾಗೂ ಭಿಕ್ಷೆಯಿಂದ ಮಾತ್ರ ಬದುಕುತ್ತಾರೆ.

ಮುಂದೆ ಈ ಜೈನ ಸನ್ಯಾಸಿಗಳು ಕೇವಲ ಎರಡು ಬಿಳಿ ವಸ್ತ್ರಗಳನ್ನು ಮಾತ್ರ ಹೊಂದಿರುತ್ತಾರೆ. ಭಿಕ್ಷೆಗಾಗಿ ಒಂದು ಬಟ್ಟಲು ಮತ್ತು “ರಾಜೋಹರಣ” ಎಂದು ಕರೆಯಲಾಗುವ ಬಿಳಿ ಪೊರಕೆಯನ್ನು ಬಳಸುತ್ತಾರೆ. ಇದನ್ನು ಜೈನ ಸನ್ಯಾಸಿಗಳು ಕುಳಿತುಕೊಳ್ಳುವ ಜಾಗವನ್ನು ಕ್ರಿಮಿಕೀಟಗಳಿಲ್ಲದಂತೆ ಸ್ವಚ್ಛಗೊಳಿಸುವುದಕ್ಕಾಗಿ ಬಳಸಲಾಗುತ್ತದೆ. ಕೀಟಗಳಿಗೆ ಹಿಂಸೆಯಾಗಬಾರದು ಎಂಬ ಅಹಿಂಸೆಯ ಮಾರ್ಗದ ಆಚರಣೆ ಇದು.

ಅಪಾರ ಸಂಪತ್ತಿಗೆ ಹೆಸರಾದ ಭಂಡಾರಿ ಕುಟುಂಬದ ಈ ನಿರ್ಧಾರ ದೇಶದ ಗಮನ ಸೆಳೆದಿದೆ. ಈ ಹಿಂದೆಯೂ ಜೈನ ಸಮುದಾಯದ ಭವರಲಾಲ್ ಜೈನ್ ಮುಂತಾದ ಕೆಲವು ಉದ್ಯಮಿಗಳು ಸನ್ಯಾಸ ಸಂಯಮದ ಜೀವನ ನಡೆಸಲು ಕೋಟ್ಯಂತರ ಹಣವನ್ನು ದಾನ ಮಾಡಿದ್ದರು. ಭವರಲಾಲ್ ಜೈನ್ ಭಾರತದಲ್ಲಿ ಸೂಕ್ಷ್ಮ ನೀರಾವರಿ ವ್ಯವಸ್ಥೆಯನ್ನು ಪ್ರಾರಂಭಿಸಿದವರು. ಜೈನ ಧರ್ಮದಲ್ಲಿ ʼದೀಕ್ಷೆʼ ತೆಗೆದುಕೊಳ್ಳುವುದು ಗಮನಾರ್ಹವಾದ ಬದ್ಧತೆ. ಅಲ್ಲಿ ವ್ಯಕ್ತಿಯು ಭೌತಿಕ ಸೌಕರ್ಯಗಳಿಲ್ಲದೆ ಭಿಕ್ಷೆಯಿಂದ ಬದುಕುತ್ತಾನೆ ಮತ್ತು ದೇಶದಾದ್ಯಂತ ಬರಿಗಾಲಿನಲ್ಲಿ ಅಲೆದಾಡುತ್ತಾನೆ.

ಆಸ್ತಿ ತ್ಯಾಗದ ದಿನ ಭಂಡಾರಿ ದಂಪತಿಗಳು ಇನ್ನಿತರ 35 ಮಂದಿಯೊಂದಿಗೆ ನಾಲ್ಕು ಕಿಲೋಮೀಟರ್‌ಗಳವರೆಗೆ ಮೆರವಣಿಗೆಯಲ್ಲಿ ಸಾಗಿದರು. ಅಲ್ಲಿ ಅವರು ತಮ್ಮ ಮೊಬೈಲ್ ಫೋನ್‌ಗಳು, ಕೂಲರ್‌ಗಳು ಸೇರಿದಂತೆ ಎಲ್ಲಾ ಆಸ್ತಿಯನ್ನು ದಾನ ಮಾಡಿದರು. ಮೆರವಣಿಗೆಯ ವೀಡಿಯೊಗಳಲ್ಲಿ ರಾಜಮನೆತನದವರಂತೆ ಪೋಷಾಕು ಧರಿಸಿರುವ ರಥದ ಮೇಲೆ ದಂಪತಿಗಳು ಕಂಡುಬಂದಿದ್ದಾರೆ.

ಕಳೆದ ವರ್ಷ ಗುಜರಾತ್‌ನಲ್ಲಿ ಬಹು-ಮಿಲಿಯನೇರ್ ವಜ್ರ ವ್ಯಾಪಾರಿ ಮತ್ತು ಅವರ ಪತ್ನಿ ಇದೇ ರೀತಿ ಮಾಡಿದ್ದರು. ಅವರ 12 ವರ್ಷದ ಮಗ ಸನ್ಯಾಸತ್ವ ಅಳವಡಿಸಿಕೊಂಡ ಐದು ವರ್ಷಗಳ ನಂತರ ಅವರು ದೀಕ್ಷೆ ತೆಗೆದುಕೊಂಡರು. ಪ್ರಾಸಂಗಿಕವಾಗಿ, ಅವರ ದೀಕ್ಷಾ ಸಮಾರಂಭಕ್ಕೆ ದಂಪತಿಗಳು ಜಾಗ್ವಾರ್ ಕಾರಿನಲ್ಲಿ ಬಂದಿದ್ದರು. ಅವರ ಪುತ್ರ ಫೆರಾರಿ ಸವಾರಿ ಮಾಡಿದ್ದರು.

2017ರಲ್ಲಿ ಮಧ್ಯಪ್ರದೇಶದ ಶ್ರೀಮಂತ ದಂಪತಿಗಳು ₹100 ಕೋಟಿ ದೇಣಿಗೆ ನೀಡಿ ಸನ್ಯಾಸಿಗಳಾಗಿದ್ದು, ಅದಕ್ಕೆ ಮುನ್ನ ತಮ್ಮ ಮೂರು ವರ್ಷದ ಮಗಳನ್ನು ಆಕೆಯ ಅಜ್ಜಿಯ ಬಳಿ ಬಿಟ್ಟ ಸುದ್ದಿ ಮಾಡಿದ್ದರು. ಸುಮಿತ್ ರಾಥೋರ್ (35) ಮತ್ತು ಅವರ ಪತ್ನಿ ಅನಾಮಿಕಾ (34) ಈ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದರು. ಸುಮಿತ್ ಸನ್ಯಾಸಿಯಾಗುವ ಒಂದು ದಿನದ ಮೊದಲು, ಗುಜರಾತ್ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗ (GSCPCR) ಮಗುವಿನ ಭವಿಷ್ಯ ಹಾಗೂ ಸುರಕ್ಷತೆಗಾಗಿ ಹೆತ್ತವರು ತೆಗೆದುಕೊಂಡ ಕ್ರಮಗಳ ಬಗ್ಗೆ ನಾಗರಿಕ ಮತ್ತು ಪೊಲೀಸ್ ಆಡಳಿತದಿಂದ ವರದಿಯನ್ನು ಕೇಳಿತ್ತು.

ಇದನ್ನೂ ಓದಿ: Akshay Kumar: ಜೈನ ಸನ್ಯಾಸಿಯ 180 ದಿನಗಳ ಉಪವಾಸ ಬ್ರೇಕ್‌ ಮಾಡಿದ ಅಕ್ಷಯ್ ಕುಮಾರ್!

Continue Reading
Advertisement
Lok Sabha Election 2024 Farmer farm set on fire in support of CN Manjunath
Lok Sabha Election 202421 mins ago

Lok Sabha Election 2024: ಡಾ. ಮಂಜುನಾಥ್‌ ಬೆಂಬಲಿಸಿದ ರೈತನ ಜಮೀನಿಗೆ ಬೆಂಕಿ; ಇದು ಕೈ ಕಾರ್ಯಕರ್ತರ ಕೃತ್ಯ ಎಂದ ಬಿಜೆಪಿ!

Actor Dwarakish
ಸಿನಿಮಾ26 mins ago

‌Actor Dwarakish: ಚಿತ್ರರಂಗ ಮಾತ್ರವಲ್ಲ, ರಾಜಕೀಯಕ್ಕೂ ಎಂಟ್ರಿ ಕೊಟ್ಟಿದ್ದ ದ್ವಾರಕೀಶ್!

Uttarakaanda Movie
ಸ್ಯಾಂಡಲ್ ವುಡ್32 mins ago

Uttarakaanda Movie: ಶಿವಣ್ಣ- ಧನಂಜಯ್‌ ಅಭಿನಯದ ʼಉತ್ತರಕಾಂಡʼ ಚಿತ್ರಕ್ಕೆ ಚೈತ್ರಾ ಆಚಾರ್‌ ಎಂಟ್ರಿ

IND vs BNG
ಕ್ರೀಡೆ54 mins ago

IND vs BNG: ಬಾಂಗ್ಲಾ ಟಿ20 ಸರಣಿಗೆ ಆಯ್ಕೆಯಾದ ಕನ್ನಡತಿ ಶ್ರೇಯಾಂಕಾ ಪಾಟೀಲ್

Aditya Srivastava
ಪ್ರಮುಖ ಸುದ್ದಿ1 hour ago

UPSC Results 2023: ಎಂಎನ್‌ಸಿ ಕೆಲಸ ಬಿಟ್ಟ ಆದಿತ್ಯಗೆ ಯುಪಿಎಸ್‌ಸಿ ಫಸ್ಟ್‌ ರ‍್ಯಾಂಕ್;‌ ಯಾರಿವರು?

Robbery Case In Bengaluru
ಬೆಂಗಳೂರು1 hour ago

Robbery case : ಎಎಸ್‌ಐ ಬೈಕ್‌ ಎಗರಿಸಿ ಹೆದ್ದಾರಿಯಲ್ಲಿ ರಾಬರಿ; ಖತರ್ನಾಕ್‌ ಗ್ಯಾಂಗ್‌ ಅರೆಸ್ಟ್‌

Arun Yogiraj
ಕಿರುತೆರೆ1 hour ago

Arun Yogiraj: ಕಿರುತೆರೆಗೆ ಕಾಲಿಟ್ಟ ಅಯೋಧ್ಯೆ ರಾಮಲಲ್ಲಾ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್‌; ಯಾವ ಕಾರ್ಯಕ್ರಮ?

UPSC Result 2024:
ಪ್ರಮುಖ ಸುದ್ದಿ1 hour ago

UPSC Result 2024: ಯುಪಿಎಸ್‌ಸಿ ಫಲಿತಾಂಶ ಪ್ರಕಟ; ಆದಿತ್ಯ ಶ್ರೀವಾಸ್ತವ ಪ್ರಥಮ ರ್‍ಯಾಂಕ್

mohammed shami
ಕ್ರೀಡೆ2 hours ago

Mohammed Shami: ‘ಕ್ರಿಕೆಟ್​ಗೆ ಮರಳುವ ಹಸಿವು ಹೆಚ್ಚಾಗಿದೆ’; ಚೇತರಿಕೆಯ ಅಪ್‌ಡೇಟ್‌ ನೀಡಿದ ಶಮಿ

lok sabha Election 2024 digital QR code voter slip
Lok Sabha Election 20242 hours ago

Lok Sabha Election 2024: ಬೆಂಗಳೂರಿನಲ್ಲಿ ದೊರೆಯಲಿದೆ ಕ್ಯುಆರ್‌ ಕೋಡ್ ಸಹಿತ ವೋಟರ್‌ ಸ್ಲಿಪ್‌:‌ ಏನಿದರ ಉಪಯೋಗ?

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya
ಭವಿಷ್ಯ11 hours ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20241 day ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20242 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ2 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ3 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ4 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ4 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ5 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

Lok Sabha Election 2024 Rahul Gandhi should apologise for lying demand BS Yediyurappa
Lok Sabha Election 20245 days ago

Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

ಟ್ರೆಂಡಿಂಗ್‌