Solar Eclipse 2024: ಇಂದು ವರ್ಷದ ಮೊದಲ ಸೂರ್ಯಗ್ರಹಣ; ಎಲ್ಲಿ, ಯಾವಾಗ ಗೋಚರ? - Vistara News

ಸೂರ್ಯ ಗ್ರಹಣ

Solar Eclipse 2024: ಇಂದು ವರ್ಷದ ಮೊದಲ ಸೂರ್ಯಗ್ರಹಣ; ಎಲ್ಲಿ, ಯಾವಾಗ ಗೋಚರ?

Solar Eclipse 2024: ವರ್ಷದ ಮೊದಲ ಸೂರ್ಯಗ್ರಹಣ ನಾಳೆ ನಡೆಯಲಿದ್ದು, ಈ ಬಾರಿ ಭಾರತದಲ್ಲಿ ಇದು ಗೋಚರವಾಗುವುದಿಲ್ಲ. ಸೂರ್ಯಗ್ರಹಣ ಯಾಕೆ ನಡೆಯುತ್ತದೆ? ಎಲ್ಲಿ, ಯಾವಾಗ ಗೋಚರವಾಗುತ್ತದೆ ಎನ್ನುವ ಮಾಹಿತಿ ಇಲ್ಲಿದೆ.

VISTARANEWS.COM


on

Solar Eclipse 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಈ ವರ್ಷದ ಮೊದಲ ಸೂರ್ಯಗ್ರಹಣ (Solar Eclipse 2024) ಏಪ್ರಿಲ್ 8ರಂದು ಸೋಮವಾರ ನಡೆಯಲಿದೆ. ಆದರೆ ಇದು ಭಾರತದಲ್ಲಿ (india) ಗೋಚರವಾಗುವುದಿಲ್ಲ. ನಾಸಾ (NASA) ನೀಡಿರುವ ಮಾಹಿತಿ ಪ್ರಕಾರ ಈ ಬಾರಿ ಸೂರ್ಯಗ್ರಹಣವು ಉತ್ತರ ಅಮೆರಿಕ (north america) ಖಂಡದಾದ್ಯಂತ ಕಾಣಿಸುತ್ತದೆ. ಮೆಕ್ಸಿಕೋ (Mexico), ಯುನೈಟೆಡ್ ಸ್ಟೇಟ್ಸ್ (United States) ಮತ್ತು ಕೆನಡಾದಲ್ಲಿ (Canada) ಸ್ಥಳೀಯ ಕಾಲಮಾನ ಬೆಳಗ್ಗೆ 11.07ರ ಸುಮಾರಿಗೆ ಸೂರ್ಯಗ್ರಹಣ ಪ್ರಾರಂಭವಾಗಲಿದೆ. ಪೆಸಿಫಿಕ್ ಕರಾವಳಿಯ ಪ್ರದೇಶದ ಮೆಕ್ಸಿಕೋದಲ್ಲಿ ಮೊದಲು ಸೂರ್ಯಗ್ರಹಣ ಗೋಚರವಾಗಲಿದೆ.

ಚಂದ್ರನ ನೆರಳು ಪೂರ್ತಿಯಾಗಿ ಸೂರ್ಯನ ಮೇಲೆ ಬಿದ್ದಾಗ ಸಂಪೂರ್ಣ ಸೂರ್ಯಗ್ರಹಣ ಸಂಭವಿಸುತ್ತದೆ. ಇದರ ಪರಿಣಾಮವಾಗಿ ಸೂರ್ಯನ ಬೆಳಕು ಭೂಮಿಯ ಮೇಲೆ ಬೀಳುವುದನ್ನು ತಡೆಯುತ್ತದೆ. ಚಂದ್ರನ ನೆರಳು ಭೂಮಿಯ ಮೇಲ್ಮೈಯಲ್ಲಿ ವೇಗವಾಗಿ ಚಲಿಸುವಾಗ ಸೂರ್ಯಗ್ರಹಣ ಗೋಚರವಾಗುತ್ತದೆ. ಸೂರ್ಯನ ಹೊರ ಪದರ ಚಂದ್ರನ ಮೇಲೆ ಸುತ್ತುವರಿದು ಸುಂದರವಾದ ಪ್ರಭಾವಲಯದಂತೆ ಹೊಳೆಯುತ್ತದೆ. ಇದು ನಿರ್ದಿಷ್ಟ ಅವಧಿಯವರೆಗೆ ಮಾತ್ರ ಸಂಭವಿಸುತ್ತದೆ.

ಭಾರತದಲ್ಲಿ ಗೋಚರಿಸುವುದಿಲ್ಲ

ಈ ಬಾರಿ ಸೂರ್ಯಗ್ರಹಣವು ಭಾರತದಲ್ಲಿ ಗೋಚರವಾಗುವುದಿಲ್ಲ. ಯಾಕೆಂದರೆ ಸೂರ್ಯಗ್ರಹಣ ಸಂಭವಿಸಿದಾಗ ಭಾರತದಲ್ಲಿ ಮಧ್ಯರಾತ್ರಿಯಾಗಿರುತ್ತದೆ.

ಇದನ್ನೂ ಓದಿ: Ugadi 2024: ವೀಕೆಂಡ್‌ನಲ್ಲಿ ಶುರುವಾದ ಯುಗಾದಿ ಶಾಪಿಂಗ್‌; ದುಬಾರಿ ಬೆಲೆಯಲ್ಲೂ ಜೋರಾದ ಖರೀದಿ


ಎಲ್ಲಿ ಕಾಣಿಸುತ್ತದೆ?

ಸೂರ್ಯ ಗ್ರಹಣವು ಈ ಬಾರಿ ಉತ್ತರ ಅಮೆರಿಕ ಖಂಡದಾದ್ಯಂತ ಕಾಣಿಸುತ್ತದೆ. ಮೆಕ್ಸಿಕೋ, ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಲ್ಲಿ ಕಾಣಿಸುತ್ತದೆ. ಟೆಕ್ಸಾಸ್, ಒಕ್ಲಹೋಮ, ಅರ್ಕಾನ್ಸಾಸ್, ಮಿಸೌರಿ, ಇಲಿನಾಯ್ಸ್, ಕೆಂಟುಕಿ, ಇಂಡಿಯಾನಾ, ಓಹಿಯೋ, ಪೆನ್ಸಿಲ್ವೇನಿಯಾ, ನ್ಯೂಯಾರ್ಕ್, ವರ್ಮೊಂಟ್, ನ್ಯೂ ಹ್ಯಾಂಪ್‌ಶೈರ್ ಮತ್ತು ಮೈನೆ ಮೊದಲಾದ ರಾಜ್ಯಗಳಲ್ಲಿ ಸಂಪೂರ್ಣ ಸೂರ್ಯಗ್ರಹಣ ಗೋಚರವಾಗುವುದು.

ಹೇಗೆ ನೋಡಬೇಕು?:

ಸೂರ್ಯಗ್ರಹಣವನ್ನು ನೇರವಾಗಿ ನೋಡಬಾರದು. ಇದರಿಂದ ಶಾಶ್ವತ ಕಣ್ಣಿನ ಹಾನಿ ಅಥವಾ ಕುರುಡುತನಕ್ಕೆ ಕಾರಣವಾಗಬಹುದು. ಗ್ರಹಣವನ್ನು ಸುರಕ್ಷಿತವಾಗಿ ವೀಕ್ಷಿಸಲು ಸೌರ ವೀಕ್ಷಣಾ ಕನ್ನಡಕ ಅಥವಾ ಸೋಲಾರ್ ಫಿಲ್ಟರ್‌ ಗಳನ್ನು ಬಳಸಬೇಕು.

ಕೆಮರಾ, ದೂರದರ್ಶಕ ಮತ್ತು ಸ್ಮಾರ್ಟ್‌ಫೋನ್‌ಗಳು ಗ್ರಹಣ ವೀಕ್ಷಣೆಯ ಅನುಭವವನ್ನು ಹೆಚ್ಚಿಸುತ್ತದೆ. ಆದರೂ ಈ ಸಂದರ್ಭದಲ್ಲಿ ಕಣ್ಣುಗಳಿಗೆ ನೇರವಾಗಿ ಸೂರ್ಯನ ಕಿರಣ ಬೀಳುವ ಸಾಧ್ಯತೆ ಇದೆ. ಹೀಗಾಗಿ ಇದರಲ್ಲಿ ಸೂರ್ಯಗ್ರಹಣ ನೋಡದೇ ಇರುವುದು ಉತ್ತಮ.

ಕಳೆದ ವರ್ಷವೂ ಸಂಭವಿಸಿತ್ತು

2023ರ ಅಕ್ಟೋಬರ್‌ನಲ್ಲಿ ಭಾರತ ಹೊರತುಪಡಿಸಿ ಜಗತ್ತಿನ ಹಲವೆಡೆ ಸೂರ್ಯಗ್ರಹಣ ಗೋಚರವಾಗಿತ್ತು. ಆಗಸದಲ್ಲಿ ಸೂರ್ಯನು ಮಿನುಗುವ ಅನೇಕ ಫೋಟೊಗಳು ಲಭ್ಯವಾಗಿತ್ತು. ಸೂರ್ಯನು ಕೆಂಪು ಆಕಾರ ತಳೆದಿರುವ, ಅರ್ಧ ಚಂದ್ರದ ರೀತಿ ಗೋಚರವಾಗಿತ್ತು.

ಟೆಕ್ಸಾಸ್‌ನಲ್ಲಿ ಆರಂಭವಾಗಿ ಮೆಕ್ಸಿಕೋ, ಯುಕಾಟಾನ್ ಪೆನಿನ್ಸುಲಾ, ಗ್ವಾಟೆಮಾಲಾ, ಹೊಂಡಾರುಸ್, ನಿಕರಾಗುವಾ, ಕೋಸ್ಟರಿಕಾದಲ್ಲಿ ಗೋಚರಿಸಿತ್ತು. ಪನಾಮ, ಮಧ್ಯ ಅಮೆರಿಕ, ಉತ್ತರ ಅಮೆರಿಕ, ಕೊಲಂಬಿಯಾ ಮತ್ತು ಬ್ರೆಜಿಲ್‌ನಲ್ಲೂ ಗೋಚರಿಸುವುದರ ಜತೆಗೆ ಅಲಾಸ್ಕಾ ಮತ್ತು ಅರ್ಜೆಂಟೀನಾದಲ್ಲೂ ಗ್ರಹಣ ಸಂಭವಿಸಿತ್ತು. ಹೀಗಾಗಿ ಈ ಭಾಗದಲ್ಲಿ ಮಾತ್ರ ಗ್ರಹಣ ಪರಿಣಾಮ ಉಂಟಾಗಿದೆ. ಭಾರತದಲ್ಲಿ ಇದರ ಪರಿಣಾಮ ಇರುವುದಿಲ್ಲ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Solar Eclipse 2022 | ಗ್ರಹಣದ ಆಚರಣೆ ಮೂಢನಂಬಿಕೆ ಎಂದು ಮಾಂಸಾಹಾರ ಸೇವಿಸಿದರು!

ವಿಜ್ಞಾನದ ಕಡೆ ನಮ್ಮ ನಡಿಗೆ ಎನ್ನುವ ಕಾರ್ಯಕ್ರಮದ ಮೂಲಕ ಸೂರ್ಯಗ್ರಹಣದ (Solar Eclipse 2022) ಕುರಿತು ಇರುವ ನಂಬಿಕೆಯನ್ನು ಸಾಹಿತಿಗಳು ವಿರೋಧಿಸಿದರು.

VISTARANEWS.COM


on

By

Koo

ಆನೇಕಲ್: ಸೂರ್ಯಗ್ರಹಣ (Solar Eclipse 2022) ಸಂದರ್ಭದಲ್ಲಿ ಪೂಜೆ-ಪುನಸ್ಕಾರ, ಹೋಮ-ಹವನಗಳು ನಡೆಯುತ್ತಿದ್ದರೆ, ಇತ್ತ ಸೂರ್ಯಗ್ರಹಣದ ಸಂದರ್ಭದಲ್ಲಿ ಮಾಡುವ ಆಚರಣೆಗಳು ಮೂಢನಂಬಿಕೆ ಎಂದು ವಿರೋಧಿಸಿದ ಸಾಹಿತಿಗಳು ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

“ವಿಜ್ಞಾನದ ಕಡೆಗೆ ನಮ್ಮ ನಡಿಗೆ” ಎಂದು ಘೋಷವಾಕ್ಯದೊಂದಿಗೆ ಆನೇಕಲ್ ತಾಲೂಕಿನ ಬಂಡಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತಿಗಳು, ಹೋರಾಟಗಾರರು ಭಾಗಿಯಾಗಿದ್ದರು.

ಆನೇಕಲ್ ಮೌಢ್ಯ ವಿರೋಧಿ ವೇದಿಕೆಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸೂರ್ಯಗ್ರಹಣದ ವೇಳೆಯೇ ಹಣ್ಣು, ಮೊಟ್ಟೆ, ಮಾಂಸ ಹಾಗೂ ವಿವಿಧ ರೀತಿಯ ಆಹಾರವನ್ನು ಸೇವನೆ ಮಾಡಲಾಯಿತು. ಆ ಮೂಲಕ ಸೂರ್ಯಗ್ರಹಣಕ್ಕೆ ಸ್ವಾಗತ ಕೋರಲಾಯಿತು.

ಮೂಢನಂಬಿಕೆ ಬಿಡಿ ವಿಜ್ಞಾನಕ್ಕೆ ಮಹತ್ವ ಕೊಡಿ‌. ಗ್ರಹಣದ ಬಗ್ಗೆ ಜ್ಯೋತಿಷಿಗಳ ಮಾತು ನಂಬಬೇಡಿ ಎಂದು ಹೇಳಿಕೆ ನೀಡುವ ಮೂಲಕ ಆಹಾರ ಸೇವಿಸಿ ವಿಜ್ಞಾನದ ಮಹತ್ವದ ಕುರಿತು ತಿಳಿಹೇಳಿದರು.

ಇದನ್ನೂ ಓದಿ | Solar Eclipse 2022 | ಗ್ರಹಣ ವೇಳೆ ಒನಕೆ ಪರೀಕ್ಷೆ ಯಶಸ್ವಿ; ಮೋಕ್ಷವಾಗುತ್ತಿದ್ದಂತೆ ನೆಲಕ್ಕುರುಳಿತು!

Continue Reading

ಕರ್ನಾಟಕ

Solar Eclipse | ಚಿಕ್ಕಮಗಳೂರಿನ ಜಯಪುರ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ, ಹಲವರು ಭಾಗಿ

ಚಿಕ್ಕಮಗಳೂರು ಜಿಲ್ಲೆಯ ಜಯಪುರದ ಮಸೀದಿಯಲ್ಲಿ ಸೂರ್ಯ ಗ್ರಹಣದ ಸಂದರ್ಭದಲ್ಲಿ ಜಗತ್ತಿಗೆ ಒಳಿತಾಗಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

VISTARANEWS.COM


on

ಕೊಪ್ಪದ ಜಯಪುರ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ
Koo

ಚಿಕ್ಕಮಗಳೂರು: ಸೂರ್ಯ ಗ್ರಹಣ ಜಗತ್ತಿಗೆಲ್ಲ ಒಂದೇ ಎನ್ನುವ ಸಂದೇಶ ರವಾನಿಸುವಂತೆ ಚಿಕ್ಕಮಗಳೂರಿನ ಮಸೀದಿಯೊಂದರಲ್ಲಿ ಕೇತುಗ್ರಸ್ತ ಸೂರ್ಯ ಗ್ರಹಣದ ಸಂದರ್ಭದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಕೊಪ್ಪ ತಾಲೂಕಿನ ಜಯಪುರದ ಬದ್ರಿಯಾ ಮಸೀದಿಯಲ್ಲಿ ಪ್ರಾರ್ಥನೆ ನಮಾಜ್‌ ಮಾಡಲಾಯಿತು ಮತ್ತು ಗ್ರಂಥ ಪಠನದೊಂದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಖತೀಬರಾದ ಅಬ್ದುಲ್ ರಶೀದ್ ಅವರು ಪ್ರಾರ್ಥನೆಯ ನೇತೃತ್ವ ವಹಿಸಿದ್ದರು. ಹತ್ತಾರು ಮುಸ್ಲಿಮರು. ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.

ಇದನ್ನೂ ಓದಿ | Solar Eclipse 2022 | ಗ್ರಹಣ ವೇಳೆ ಒನಕೆ ಪರೀಕ್ಷೆ ಯಶಸ್ವಿ; ಮೋಕ್ಷವಾಗುತ್ತಿದ್ದಂತೆ ನೆಲಕ್ಕುರುಳಿತು!

Continue Reading

ಕರ್ನಾಟಕ

Solar Eclipse | ಗ್ರಹಣದ ವೇಳೆ ಪಲಾವ್‌ ತಿಂದರು, ಖಾರ, ಮಂಡಕ್ಕಿ, ಸ್ವೀಟ್‌ ತಿನ್ನಿ, ಮೌಢ್ಯ ಬಿಡಿ ಎಂದರು!

ಒಂದು ಕಡೆ ಸೂರ್ಯಗ್ರಹಣವನ್ನು ಭಕ್ತಿ ನೆಲೆಯಲ್ಲಿ ನೋಡಿದರೆ ಇನ್ನು ಕೆಲವರು ಪ್ರಾಕೃತಿಕ ವಿಸ್ಮಯದ ನೆಲೆಯಲ್ಲಿ ನೋಡಿದ್ದಾರೆ. ಮೌಢ್ಯಾಚರಣೆ ಬೇಡ ಎನ್ನುವುದು ಇವರ ಆಗ್ರಹ.

VISTARANEWS.COM


on

Hosapete palav
ಹೊಸಪೇಟೆಯಲ್ಲಿ ಮಿರ್ಚಿ ಮಂಡಕ್ಕಿ ಸೇವನೆ
Koo

ಧಾರವಾಡ/ಶಿವಮೊಗ್ಗ/ಹೊಸಪೇಟೆ: ಒಂದು ಕಡೆ ಗ್ರಹಣವನ್ನು ಧಾರ್ಮಿಕ ಮತ್ತು ಭಕ್ತಿಯ ನೆಲೆಯಲ್ಲಿ ನೋಡಿದರೆ ಇನ್ನು ಕೆಲವರು ಮೌಢ್ಯಾಚರಣೆ ಬೇಡ ಎಂಬ ಬಗ್ಗೆ ಜಾಗೃತಿ ಮೂಡಿಸಿದರು.

ಧಾರವಾಡದ ಕಲಾಭವನದ ಎದುರು ಸಮಾನ ಮನಸ್ಕರ ವೇದಿಕೆ ಸದಸ್ಯರು ಗ್ರಹಣದ ವೇಳೆ ಪಲಾವ್ ಮಾಡಿ ತಿಂದರು. ಶಂಕರ್ ಹಲಗತ್ತಿ ನೇತೃತ್ವದಲ್ಲಿ ಪಲಾವ್ ಸಿದ್ಧಪಡಿಸಿ ಅದನ್ನು ಅಲ್ಲಿದ್ದವರಿಗೆ ಹಂಚಲಾಯಿತು. ಗ್ರಹಣದ ವೇಳೆ ಉಪಹಾರ ಸೇರಿದಂತೆ ಭೋಜನ ನಿಷೇಧದ ಹಿನ್ನೆಲೆಯಲ್ಲಿ ಸಮಾನ ಮನಸ್ಕರರು ಗ್ರಹಣದ ವೇಳೆಯಲ್ಲೇ ಪಲಾವ್ ಸವಿದು ಮೌಢ್ಯ ಆಚರಣೆ ಮಾಡದಂತೆ ಕರೆ ನೀಡಿದರು.

ಧಾರವಾಡದಲ್ಲಿ

ಶಿವಮೊಗ್ಗದಲ್ಲಿ
ಶಿವಮೊಗ್ಗದಲ್ಲಿ ಮೌಢ್ಯ ತೊರೆದು ಗ್ರಹಣ ವೀಕ್ಷಿಸಲು ವಿಜ್ಞಾನ ಪರಿಷತ್ ಮನವಿ ಮಾಡಿತ್ತು. ಹವ್ಯಾಸಿ ಖಗೋಳ ವೀಕ್ಷಕರಾದ ಹಾರೋನಹಳ್ಳಿ ಸ್ವಾಮಿ ನೇತೃತ್ವದಲ್ಲಿ ಗ್ರಹಣ ವೀಕ್ಷಣೆ ಮಾಡಲಾಯಿತು. ಗ್ರಹಣ ಸಮಯದಲ್ಲಿ ಖಾರ, ಮಂಡಕ್ಕಿ, ಸ್ವೀಟ್ ತಿಂದು ಮೌಢ್ಯ ಬಿಡಲು ಮನವಿ ಮಾಡಲಾಯಿತು.

ಶಿವಮೊಗ್ಗದಲ್ಲಿ ಖಾರ ಮಂಡಕ್ಕಿ ಸೇವನೆ

ಹೊಸಪೇಟೆಯಲ್ಲಿ ಒಗ್ಗರಣೆ ಮಿರ್ಚಿ!
ವಿಜಯ ನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮಾನವ ಬಂಧುತ್ವ ವೇದಿಕೆ, ಅಂಬೇಡ್ಕರ್ ಸಂಘಟನೆ, ವಿಜ್ಞಾನ ಪರಿಷತ್ ವತಿಯಿಂದ ವಿಚಾರವಾದಿಗಳು ಸೂರ್ಯಗ್ರಹಣದ ಸಮಯದಲ್ಲಿ ಒಗ್ಗರಣೆ- ಮಿರ್ಚಿ ಸವಿದರು.

ನಾನಾ ಪ್ರಗತಿಪರ ಸಂಘಟನೆಗಳ ನಾಯಕರಿಂದ ಜಾಗೃತಿಯ ಮಾತುಗಳು ಕೇಳಿಬಂದವು. ʻʻಮೌಢ್ಯ ಬಿತ್ತುವ ಕೆಲಸ ಮಾಡಲಾಗುತ್ತಿದೆ, ಇದೊಂದು ವೈಜ್ಞಾನಿಕ ವಿಸ್ಮಯ. ಅದನ್ನ ನೋಡಬೇಕು, ಎಲ್ಲರೂ ಆನಂದಿಸಬೇಕು. ಮನುವಾದಿಗಳ ಕುತಂತ್ರದಿಂದ ಮೌಢ್ಯ ಬಿತ್ತಲಾಗುತ್ತಿದೆʼʼ ಎಂದು ಆರೋಪಿಸಲಾಯಿತು.

Continue Reading

ದೇಶ

Solar Eclipse | ದೇಶದ ನಾನಾ ಭಾಗಗಳಲ್ಲಿನ ಸೂರ್ಯಗ್ರಹಣದ ವಿಸ್ಮಯದ ಝಲಕ್‌ಗಳು!

ಮಂಗಳವಾರ ದೇಶದ ವಿವಿಧ ಭಾಗಗಳಲ್ಲಿ ಕೇತುಗ್ರಸ್ತ ಸೂರ್ಯ ಗ್ರಹಣವು (Solar Eclipse) ಗೋಚರಿಸಿದ್ದು, ಆಕಾಶದಲ್ಲಿ ಜರುಗಿದ ಈ ವಿಸ್ಮಯ ಕ್ಷಣಗಳು ನಿಮಗಾಗಿ….

VISTARANEWS.COM


on

Solar Elipse
Koo

ದೀಪಾವಳಿಯ ದಿನವಾದ ಮಂಗಳವಾರ ಕೇತುಗ್ರಸ್ತ ಸೂರ್ಯಗ್ರಹಣವು (Solar Eclipse) ಆಕಾಶಕಾಯ ವೀಕ್ಷಕರನ್ನು ಚಕಿತಗೊಳಿಸಿದೆ. ಭಾರತದಲ್ಲಿ ಪೂರ್ಣ ಪ್ರಮಾಣದಲ್ಲಿ ಸೂರ್ಯಗ್ರಹಣ ಗೋಚರಿಸದಿದ್ದರೂ, ದೇಶದ ವಿವಿಧೆಡೆ ಅಲ್ಪ ಮಟ್ಟಿಗೆ ಕಂಡಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ಏರ್ಪಡಿಸಲಾಗಿತ್ತು. ಭಕ್ತರು ನದಿ ಹಾಗೂ ಸಮುದ್ರ ಸ್ನಾನ ಮಾಡಿ, ಗ್ರಹಣ ಕಾಲದ ಸಮಯವನ್ನು ಕಳೆದರು. ಟರ್ಕಿಯಲ್ಲಿ ಪೂರ್ಣ ಪ್ರಮಾಣದ ಸೂರ್ಯಗ್ರಹಣ ಕಂಡಿದೆ. ನಮ್ಮ ದೇಶದ ವಿವಿಧ ಭಾಗಗಳಲ್ಲಿ ಗೋಚರಿಸಿದ ಸೂರ್ಯ ಗ್ರಹಣದ ಝಲಕ್‌ಗಳು ಇಲ್ಲಿವೆ.

Solar eclipse
ಪಂಜಾಬ್‌ನ ಅಮೃತಸರದಲ್ಲಿ ಸೂರ್ಯಗ್ರಹಣದ ಝಲಕ್.
ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕೇತುಗ್ರಸ್ತ ಸೂರ್ಯಗ್ರಹಣ ಕಂಡಿದ್ದು ಹೀಗೆ…
ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ಬಂಗಾರವರ್ಣದ ಸೂರ್ಯ.
ಚಂಡೀಗಢದ ಆಕಾಶದಲ್ಲಿ ಸೂರ್ಯ ವಿಸ್ಮಯ ಕಂಡಿದ್ದು ಹೀಗೆ…
ರಾಷ್ಟ್ರ ರಾಜಧಾನಿ ದಿಲ್ಲಿ ನಗರದಲ್ಲಿ ಸೂರ್ಯಗ್ರಹಣ ಚಮತ್ಕಾರ.
ಜಮ್ಮು ನಗರದಲ್ಲಿ ಸೂರ್ಯ ಗ್ರಹಣದ ಮನೋಹರ ದೃಶ್ಯ.
ಹರ್ಯಾಣದ ಕುರುಕ್ಷೇತ್ರದಲ್ಲಿ ಸೂರ್ಯ ಕಂಡಿದ್ದು ಹೀಗೆ…
ಉತ್ತರ ಪ್ರದೇಶದ ಲಖನೌ‌ ನಗರದಲ್ಲಿ ಚಂದ್ರನಾದ ಸೂರ್ಯ!
Ring of Fire- ಟರ್ಕಿಯಲ್ಲಿ ಕಂಡ ಪೂರ್ಣ ಪ್ರಮಾಣದ ಸೂರ್ಯಗ್ರಹಣ

ಇದನ್ನೂ ಓದಿ | Horoscope Today | ಸೂರ್ಯ ಗ್ರಹಣದ ಈ ದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ನೋಡೋಣ

Continue Reading
Advertisement
Drowned in water
ದಕ್ಷಿಣ ಕನ್ನಡ21 mins ago

Drowned In water : ಹೆತ್ತವರ ಕಣ್ಣೇದುರಿಗೆ ನೇತ್ರಾವತಿ ನದಿಯಲ್ಲಿ ಕೊಚ್ಚಿ ಹೋದರು ಪುತ್ರಿಯರು

ED Raid
ದೇಶ34 mins ago

ED Raid: ಇಡಿ ಭರ್ಜರಿ ಬೇಟೆ; ಕಾಂಗ್ರೆಸ್‌ ಮುಖಂಡನ ಆಪ್ತ ಕಾರ್ಯದರ್ಶಿ ಮನೆಯಿಂದ 25 ಕೋಟಿ ರೂ. ವಶ

Mahanati Show Gagana Comedy About Rishi actor
ಕಿರುತೆರೆ44 mins ago

Mahanati Show: ‘ಮಹಾನಟಿʼ ವೇದಿಕೆಯಲ್ಲಿ ನಟ ರಿಷಿ ಫೋನ್‌ ನಂಬರ್‌ ಕೇಳಿದ ಚಿತ್ರದುರ್ಗದ ಗಗನಾ!

amethi unrest
ದೇಶ58 mins ago

Amethi Unrest: ಕಾಂಗ್ರೆಸ್‌ ಕಚೇರಿ ಮೇಲೆ ಕಿಡಿಗೇಡಿಗಳಿಂದ ಅಟ್ಯಾಕ್‌; ಬಿಜೆಪಿಯ ದುಷ್ಕೃತ್ಯ ಎಂದು ಆರೋಪ

Paris Olympics
ಕ್ರೀಡೆ2 hours ago

Paris Olympics: ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ​ಭಾರತದ ಪುರುಷರ & ಮಹಿಳೆಯರ ರಿಲೇ ತಂಡ

Prajwal Revanna Case
ಕರ್ನಾಟಕ2 hours ago

Prajwal Revanna Case: ಗಂಡ, ಮಗನ ಕೇಸ್‌ನಿಂದ ಭವಾನಿ ರೇವಣ್ಣಗೂ ಕಾನೂನು ಕಂಟಕ?

Boat Capsize
ವೈರಲ್ ನ್ಯೂಸ್2 hours ago

Boat Capsizes: ಜಲಾವೃತ ಸೇತುವೆಗೆ ದೋಣಿ ಡಿಕ್ಕಿ; ಶಾಕಿಂಗ್‌ ವಿಡಿಯೋ ವೈರಲ್‌

T20 World Cup 2024
ಕ್ರೀಡೆ2 hours ago

T20 World Cup 2024: ಟಿ20 ವಿಶ್ವಕಪ್​ಗೆ ಪಾಕ್​ ಉಗ್ರರಿಂದ ಭಯೋತ್ಪಾದಕ ದಾಳಿಯ ಎಚ್ಚರಿಕೆ

Megha Dhade bigg boss marathi winner crptic post about rahul gandhi
ಸಿನಿಮಾ2 hours ago

Megha Dhade: ನಮ್ಮ ದೇಶ ಬಿಟ್ಟು ನರಕಕ್ಕೆ ಹೋಗಿ ಎಂದು ರಾಹುಲ್‌ ಗಾಂಧಿ ವಿರುದ್ಧ ʻಬಿಗ್‌ ಬಾಸ್‌ʼ ವಿಜೇತೆ ಆಕ್ರೋಶ!

Prajwal Revanna Case
ಕರ್ನಾಟಕ2 hours ago

Prajwal Revanna Case: ಎಚ್‌.ಡಿ.ರೇವಣ್ಣರಿಗೆ ಇಂದು ಜಾಮೀನು ಸಿಗುತ್ತಾ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ7 hours ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ16 hours ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ17 hours ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ18 hours ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ2 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ3 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ3 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ4 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ4 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

ಟ್ರೆಂಡಿಂಗ್‌