ತಂತ್ರಜ್ಞಾನ
TTD Mobile App: ಜಿಯೋ ಸಹಕಾರದಿಂದ ಹೊಸ ಆ್ಯಪ್ ಬಿಡುಗಡೆ ಮಾಡಿದ ತಿರುಮಲ ತಿರುಪತಿ ದೇಗುಲ; ಭಕ್ತರಿಗೇನು ಅನುಕೂಲ?
ಭಕ್ತರಿಗಾಗಿ ತಿರುಮಲ ತಿರುಪತಿ ದೇವಸ್ಥಾನದಿಂದ ಒಂದು ಡಿಜಿಟಲ್ ಗೇಟ್ ವೇಯನ್ನು ನಾವು ಹೊರತಂದಿದ್ದೇವೆ ಎಂದು ಟಿಟಿಡಿ ಕಾರ್ಯಕಾರಿ ಅಧಿಕಾರಿ ಎ.ವಿ.ಧರ್ಮಾರೆಡ್ಡಿ ತಿಳಿಸಿದ್ದಾರೆ.
ತಿರುಮಲ ತಿರುಪತಿ ದೇವಸ್ಥಾನವು, ಜಿಯೋ ಪ್ಲಾಟ್ಫಾರ್ಮ್ ಸಹಕಾರದಿಂದ ‘ಶ್ರೀ ಟಿಟಿ ದೇವಸ್ಥಾನಂ (Sri TT Devasthanams)’ ಎಂಬ ಮೊಬೈಲ್ ಆ್ಯಪ್ನ್ನು (TTD Mobile App) ಬಿಡುಗಡೆ ಮಾಡಿದೆ. ತಿರುಪತಿ ದೇಗುಲ ಅಪಾರ ಸಂಖ್ಯೆಯಲ್ಲಿ ಭಕ್ತರನ್ನು ಹೊಂದಿದೆ. ಅವರಿಗೆ ತಿಮ್ಮಪ್ಪನ ದರ್ಶನ ವ್ಯವಸ್ಥೆಯನ್ನು ಇನ್ನಷ್ಟು ಸರಳ ಮತ್ತು ಅನುಕೂಲಕರವಾಗಿಸಿಕೊಡಲು ಈ ಆ್ಯಪ್ ಹೊರತಂದಿದ್ದಾಗಿ ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ತಿಳಿಸಿದ್ದಾರೆ.
ಅಂದಹಾಗೇ, ಜಿಯೋ ಪ್ಲಾಟ್ಫಾರ್ಮ್ ಈ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಈ ಆ್ಯಪ್ ಅಭಿವೃದ್ಧಿ ಪಡಿಸಿ ದೇವಸ್ಥಾನಕ್ಕೆ ದೇಣಿಗೆಯನ್ನಾಗಿ ನೀಡಿದೆ. ತಿರುಮಲ ತಿರುಪತಿ ದೇವಸ್ಥಾನದ ಐಟಿ ವಿಭಾಗವೂ ಆ್ಯಪ್ ಅಭಿವೃದ್ಧಿಯಲ್ಲಿ ಕೈ ಜೋಡಿಸಿತ್ತು. ಈ ಆ್ಯಪ್ನ್ನು ಕ್ಲೌಡ್ ಕಂಪ್ಯೂಟಿಂಗ್ ತಂತ್ರಜ್ಞಾನ ಬಳಸಿಕೊಂಡು ರಚಿಸಲಾಗಿದೆ.
Sri TT Devasthanams ಆ್ಯಪ್‌ನಲ್ಲಿ ದೇವರ ದರ್ಶನಕ್ಕೆ ಟಿಕೆಟ್ ಬುಕ್ ಮಾಡುವ ಆಯ್ಕೆಯಿಂದ ಹಿಡಿದು, ಯಾತ್ರಾರ್ಥಿಗಳು ವಸತಿಗೂ ಬುಕ್ಕಿಂಗ್ ಮಾಡಿಕೊಳ್ಳಬಹುದು. ದೇವರಿಗೆ ಅರ್ಜಿತ ಸೇವೆಗೆ ಕಾಯ್ದಿರಿಸುವ ಆಯ್ಕೆಯನ್ನೂ ಆ್ಯಪ್‌ನಲ್ಲಿ ನೀಡಲಾಗಿದೆ. ಹೀಗಾಗಿ ಯಾರಾದರೂ ತಿರುಮಲ ತಿರುಪತಿ ದೇಗುಲಕ್ಕೆ ಭೇಟಿ ಕೊಡುವವರು ಇದ್ದರೆ ಅಂಥವರು ಈ ಆ್ಯಪ್ ಡೌನ್ಲೋಡ್ ಮಾಡಿಕೊಂಡರೆ ಉಪಯೋಗ ಆಗುತ್ತದೆ ಎಂದು ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಹೇಳಿದ್ದಾರೆ.
ಇದನ್ನೂ ಓದಿ: NIMBUS app: ಬಿಎಂಟಿಸಿ ಬಸ್ಸುಗಳ ಓಡಾಟದ ಮಾಹಿತಿ ನೀಡುವ ಆ್ಯಪ್ ಈ ವಾರ ಲಭ್ಯ
ಆ್ಯಪ್ ಬಗ್ಗೆ ಮಾಹಿತಿ ನೀಡಿದ ಟಿಟಿಡಿ ಕಾರ್ಯಕಾರಿ ಅಧಿಕಾರಿ ಎ.ವಿ.ಧರ್ಮಾ ರೆಡ್ಡಿ, ‘ಭಕ್ತರಿಗಾಗಿ ತಿರುಮಲ ತಿರುಪತಿ ದೇವಸ್ಥಾನದಿಂದ ಒಂದು ಡಿಜಿಟಲ್ ಗೇಟ್ ವೇಯನ್ನು ನಾವು ಹೊರತಂದಿದ್ದೇವೆ. ಇದರಲ್ಲಿ ದೇವರ ದರ್ಶನಕ್ಕೆ ಟಿಕೆಟ್ ಬುಕ್ಕಿಂಗ್ ಮಾಡುವ ಜತೆ, ದೇವಸ್ಥಾನದಲ್ಲಿ ನಡೆಯುವ ವಿಶೇಷ ಪೂಜೆ, ಉತ್ಸವ, ಕಾರ್ಯಕ್ರಮದ ಬಗ್ಗೆಯೂ ಮಾಹಿತಿಯನ್ನು ಅಪ್ಡೇಟ್ ಮಾಡುತ್ತಿರುತ್ತೇವೆ. ಹೀಗಾಗಿ ಭಕ್ತರಿಗೆ ಇನ್ನಷ್ಟು ಪ್ರಯೋಜನ ಆಗಲಿದೆ. ಈ ಆ್ಯಪ್ ಹೊರತರಲು ನಮ್ಮ ದೇಗುಲದ ಐಟಿ ವಿಭಾಗ ಮತ್ತು ಜಿಯೋ ಪ್ಲಾಟ್ಫಾರ್ಮ್ ಸತತ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದವು’ ಎಂದು ಹೇಳಿದ್ದಾರೆ.
ಆಟೋಮೊಬೈಲ್
Hyundai Motor : ಹೊಸ ಪೀಳಿಗೆಯ ಹ್ಯುಂಡೈ ವೆರ್ನಾ ಬಿಡುಗಡೆ; ಬೆಲೆ, ಫೀಚರ್ಗಳ ಬಗ್ಗೆ ಇಲ್ಲಿದ ಮಾಹಿತಿ
ಹೊಸ ಪೀಳಿಗೆಯ ಹ್ಯುಂಡೈ ವೆರ್ನಾ ಭಾರತದ ರಸ್ತೆಗೆ ಇಳಿದಿದ್ದು ಹಲವಾರು ಹೊಸ ಫೀಚರ್ಗಳೊಂದಿಗೆ ಗ್ರಾಹಕರನ್ನು ಆಕರ್ಷಿಸಲು ಮುಂದಾಗಿದೆ.
ನವ ದೆಹಲಿ: ದಕ್ಷಿಣ ಕೊರಿಯಾ ಮೂಲದ ಕಂಪನಿಯ ಹ್ಯುಂಡೈ ಮೋಟಾರ್ (Hyundai Motor) ತನ್ನ ಜನಪ್ರಿಯ ಸೆಡಾನ್ ಕಾರು ವೆರ್ನಾದ ನೂತನ ಆವೃತ್ತಿಯನ್ನು ಮಂಗಳವಾರ (ಮಾರ್ಚ್ 21ರಂದು) ಬಿಡುಗಡೆ ಮಾಡಿದೆ. ಕಾರಿನ ಆರಂಭಿಕ ಬೆಲೆ 10.89 ಲಕ್ಷ ರೂಪಾಯಿಗಳಾಗಿದ್ದು, ಟಾಪ್ ಎಂಡ್ ವೇರಿಯೆಂಟ್ಗೆ 17.38 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ. ಹೊಸ ಕಾರಿನಲ್ಲಿ ಎಡಿಎಎಸ್ ಫೀಚರ್ ಸೇರ್ಪಡೆಯಾಗಿದೆ. ಆದರೆ ಡೀಸೆಲ್ ವೇರಿಯೆಂಟ್ ಕಾರನ್ನು ಬಿಡುಗಡೆ ಮಾಡಿಲ್ಲ. ಬಿಡುಗಡೆಗೆ ಮೊದಲೇ ಕಂಪನಿ ಬುಕಿಂಗ್ ಆರಂಭ ಮಾಡಿತ್ತು. ಅಂತೆಯೇ ಮಂಗಳವಾರಕ್ಕೆ 8000 ಮಂದಿ ಆಸಕ್ತಿ ತೋರಿದ್ದಾರೆ. ಗ್ರಾಹಕರು 25 ಸಾವಿರ ರೂಪಾಯಿ ಪಾವತಿ ಮಾಡಿ ಅನ್ಲೈನ್ ಅಥವಾ ಶೋ ರೂಮ್ಗೆ ತೆರಳಿ ಕಾರನ್ನು ಬುಕ್ ಮಾಡಬಹುದು ಎಂದು ಹ್ಯುಂಡೈ ಮೋಟಾರ್ ಹೇಳಿದೆ.
ಎಷ್ಟು ದೊಡ್ಡದಿದೆ ಹೊಸ ಸೆಡಾನ್?
ಹೊಸ ಹ್ಯುಂಡೈ ವೆರ್ನಾ 1765 ಎಮ್ಎಮ್ (mili meter) ಅಗಲವಿದ್ದು, 2670 ಎಮ್ಎಮ್ ವೀಲ್ ಬೇಸ್ ಹೊಂದಿದೆ. ಕಾರಿನ ಒಟ್ಟಾರೆ ಉದ್ದ 4535 ಎಮ್ಎಮ್ ಹಾಗೂ 1, 475 ಎಮ್ಎಮ್ ಎತ್ತರವಿದೆ. ಹೊಸ ವೆರ್ನಾದಲ್ಲಿ 528 ಲೀಟರ್ ಬೂಟ್ ಸ್ಪೇಸ್ (ಡಿಕ್ಕಿ ಜಾಗ) ನೀಡಲಾಗಿದೆ.
ಬಣ್ಣಗಳು ಯಾವುದು?
ಇಎಕ್ಸ್, ಎಸ್, ಎಸ್ಎಕ್ಸ್, ಹಾಗೂ ಎಸ್ಎಕ್ (ಓ) ಎಂಬ ನಾಲ್ಕು ವೇರಿಯೆಂಟ್ಗಳಲ್ಲಿ ಕಾರು ಲಭ್ಯವಿದೆ. ಅದೇ ರೀತಿ 7 ಸಿಂಗಲ್ ಟೋನ್, ಎರಡು ಡ್ಯುಯಲ್ ಟೋನ್ ಕಲರ್ ಆಯ್ಕೆ ನೀಡಲಾಗಿದೆ. ಬ್ಲ್ಯಾಕ್ ಆ್ಯಂಡ್ ಬೀಗ್ ಹಾಗೂ ಬ್ಲ್ಯಾಕ್ ಆ್ಯಂಡ್ ರೆಡ್ ಎಂಬ ಎರಡು ಬಣ್ಣಗಳ ಇಂಟೀರಿಯರ್ ಹೊಂದಿದೆ.
ವಿನ್ಯಾಸ ಹೇಗಿದೆ?
ಹ್ಯುಂಡೈ ಕಂಪನಿಯ ಸೆನ್ಸ್ಯುಯಸ್ ಸ್ಪೋರ್ಟಿ ಲುಕ್ ಅನ್ನು ವೆರ್ನಾ ಕಾರು ಕೂಡ ಹೊಂದಿದೆ. ಸ್ಪ್ಲಿಟ್ ಹೆಡ್ ಲ್ಯಾಂಪ್ ಸೆಟ್ಅಪ್, ಪ್ಯಾರಾಮೆಟ್ರಿಕ್ ಜ್ಯುಯೆಲ್ ಗ್ರಿಲ್, ಫುಲ್ ವಿಡ್ತ್ ಎಲ್ಇಡಿ ಡಿಆರ್ಎಲ್ ಸ್ಟ್ರಿಪ್ ಬಾನೆಟ್ ಹಾಗೂ ಬಂಪರ್ ಅನ್ನು ಪ್ರತ್ಯೇಕಿಸುತ್ತದೆ. ಸ್ಟ್ರಾಂಗ್ ಕ್ಯಾರೆಕ್ಟರ್ ಲೈನ್ನೊಂದಿಗೆ ಸೈಡ್ಪ್ರೊಫೈಲ್ ಅತ್ಯಾಕರ್ಷಕವಾಗಿ ಕಾಣುತ್ತದೆ ಹಾಗೂ 16 ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ ಹೊಂದಿದೆ.
ಹಿಂಭಾಗದಲ್ಲಿ ಎಚ್ ಆಕೃತಿಯ ಕನೆಕ್ಟೆಡ್ ಟೈಲ್ ಲ್ಯಾಂಪ್, ಎಲ್ಇಡಿ ಲೈಟ್ ಬಾರ್ ಹಿಂಭಾಗವನ್ನು ಪೂರ್ತಿ ಆವರಿಸಿಕೊಂಡಿದೆ. ಅದೇ ರೀತಿ ಡ್ಯುಯಲ್ ಟೋನ್ ಬಂಪರ್ ಕೂಡ ಇದೆ.
ಹೊಸ ವೆರ್ನಾದ ಕ್ಯಾಬಿನ್ನಲ್ಲಿ ಎರಡು ಟಚ್ ಸ್ಕ್ರೀನ್ ಸೆಟ್ಅಪ್ ಹೊಂದಿದೆ. 10.25 ಇಂಚಿನ ಎಚ್‌ಡಿ ಟಚ್ ಸ್ಕ್ರೀನ್ ಹಾಗೂ 10.25 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿದೆ. 64 ಆಂಬಿಯೆಂಟ್ ಕಲರ್ ಲೈಟ್, ಪವರ್ ಅಡ್ಜೆಸ್ಟೆಬಲ್ ಡ್ರೈವಿಂಗ್ ಸೀಟ್, ವೆಂಟಿಲೇಟೆಡ್ ಫ್ರಂಟ್ ಸೀಟ್ ಹೊಂದಿದೆ.
ಇದನ್ನೂ ಓದಿ : Oscar 2023 : ನಾಟು ನಾಟು ಹಾಡಿಗೆ ಡಾನ್ಸ್ಮಾಡಿದ ಟೆಸ್ಲಾ ಕಾರುಗಳು! ಇಲ್ಲಿದೆ ನೋಡಿ ವಿಡಿಯೊ
10.25 ಇಂಚಿನ ಇನ್ಪೋಟೈನ್ಮೆಂಟ್ ಸಿಸ್ಟಮ್ನಲ್ಲಿ ಆಂಡ್ರಾಯ್ಡ್ ಅಟೋ ಹಾಗೂ ಆ್ಯಪಲ್ ಕಾರ್ ಪ್ಲೇ, ಬ್ಲೂ ಟೂತ್ ಕನೆಕ್ಟಿವಿಟಿ ಸಿಸ್ಟಮ್ ಹೊಂದಿದೆ. ಹಿಂದಿ ಹಾಗೂ ಇಂಗ್ಲಿಷ್ ವಾಯ್ಸ್ ಕಮಾಂಡ್ ಮೂಲಕ ಸನ್ರೂಫ್, ವೆಂಟಿಲೇಟೆಡ್ ಸೀಟ್, ಎಸಿ ಆನ್ ಮತ್ತಿತರ ಕೆಲಸಗಳನ್ನು ಮಾಡಲು ಸಾಧ್ಯವಿದೆ.
ಸೇಫ್ಟಿ ಎಷ್ಟಿದೆ?
ಹೊಸ ವೆರ್ನಾ ಡ್ರೈವರ್ ಅಸಿಸ್ಟನ್ಸ್ ಸಿಸ್ಟಮ್ ಹೊಂದಿದೆ. ಆಟೋನೊಮಸ್ ಎಮರ್ಜೆನ್ಸಿ ಬ್ರೇಕಿಂಗ್, ಲೇನ್ ಕೀಪ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಸೇಫ್ ಎಕ್ಸಿಟ್ ವಾರ್ನಿಂಗ್ ಇತ್ಯಾದಿ ಫೀಚ್ಗಳನ್ನು ಇದು ಹೊಂದಿದೆ. ಆರು ಏರ್ ಬ್ಯಾಗ್, ಎಬಿಎಸ್ ವಿತ್ ಇಬಿಡಿ, ಟ್ರ್ಯಾಕ್ಷನ್ ಕಂಟ್ರೋಲ್, ಟಿಪಿಎಮ್ಎಸ್, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್ ಹೊಂದಿದೆ.
ಎಂಜಿನ್ ಸಾಮರ್ಥ್ಯ?
ಹೊಸ ಹ್ಯುಂಡೈ ಎಂಜಿನ್ ಬಿಎಸ್2 ಫೇಸ್ 2ನ ಮಾನದಂಡಗಳಾದ ಆರ್ಡಿಇ ಹಾಗೂ ಎ20 ಪೆಟ್ರೋಲ್ ಆಯ್ಕೆಗಳನ್ನು ಹೊಂದಿದೆ. 1.5 ಲೀಟರ್ನ ಪೆಟ್ರೋಲ್ ಎಂಜಿನ್ 115 ಪಿಎಸ್ ಪವರ್ ಹಾಗೂ 144 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. 1.5 ಲೀಟರ್ನ ಟರ್ಬೊ ಪೆಟ್ರೋಲ್ ಎಂಜಿನ್ 160 ಪಿಎಸ್ ಪವರ್ ಹಾಗೂ 253 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಆರು ಸ್ಪೀಡ್ನ ಮ್ಯಾನುಯಲ್ ಗೇರ್ ಬಾಕ್ಸ್ ಹಾಗೂ 7 ಸ್ಪೀಡ್ನ ಡಿಸಿಟಿ ಗೇರ್ ಬಾಕ್ಸ್ಗಳನ್ನು ಹೊಸ ವೆರ್ನಾ ಹೊಂದಿದೆ. ಡೀಸೆಲ್ ಎಂಜಿನ್ನ ಕಾರುಗಳನ್ನು ಹ್ಯುಂಡೈ ಬಿಡುಗಡೆ ಮಾಡಿಲ್ಲ.
ಮೈಲೇಜ್ ಎಷ್ಟು?
1.5 ಲೀಟರ್ನ ಎಮ್ಪಿಐ ಪೆಟ್ರೋಲ್ ಎಂಜಿನ್ 18.60 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ. ಐವಿಟಿ ಗೇರ್ ಬಾಕ್ಸ್ ಹೊಂದಿರುವ ಕಾರುಗಳು 19.60 ಕಿಲೋ ಮೀಟರ್ ಮೈಲೇಜ್ ಕೊಡುತ್ತದೆ. ಜಿಡಿಐ ಎಂಜಿನ್ ಹಾಗೂ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿರು ಕಾರು 20 ಕಿಲೋ ಮೀಟರ್ ಹಾಗೂ ಡಿಸಿಟಿ ಗೇರ್ ಬಾಕ್ಸ್ ಹೊಂದಿರುವ ಕಾರು 20.60 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳುತ್ತದೆ.
ತಂತ್ರಜ್ಞಾನ
Stop Tobacco App: ಸಾರ್ವಜನಿಕ ಸ್ಮೋಕಿಂಗ್ ಮೇಲೆ ‘ಸ್ಟಾಪ್ ಟಬ್ಯಾಕೋ’ ನಿಗಾ, ಆ್ಯಪ್ ಬಳಸಿ ದೂರು ನೀಡು ಮಗಾ
Stop Tobacco app: ಧೂಮಪಾನ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ. ಈ ಹಿನ್ನೆಲೆಯಲ್ಲಿ ಸ್ಮೋಕಿಂಗ್ (Smoking) ನಿಯಂತ್ರಣಕ್ಕಾಗಿ ಕಾನೂನು ಜಾರಿ ಮಾಡಲಾಗಿದೆ. ಸಾರ್ವಜನಿಕ ಸ್ಮೋಕಿಂಗ್ ನಿಷೇಧಿಸಲಾಗಿದೆ. ಹೀಗಿದ್ದೂ, ಈ ಪ್ರವೃತ್ತಿಗೆ ಕಡಿವಾಣ ಬಿದ್ದಿಲ್ಲ. ಈಗ ಸ್ಟಾಪ್ ಟಬ್ಯಾಕೋ ಆ್ಯಪ್ ಮೂಲಕ ಸ್ಮೋಕಿಂಗ್ ಕುರಿತು ದೂರು ನೀಡಬಹುದು.
ಬೆಂಗಳೂರು, ಕರ್ನಾಟಕ: ಸಾರ್ವಜನಿಕ ಹಿತಾಸಕ್ತಿಗಾಗಿ ಸರ್ಕಾರವು ಅನೇಕ ಆ್ಯಪ್‌ಗಳನ್ನು ಬಿಡುಗಡೆ ಮಾಡಿದೆ. ಈ ಪೈಕಿ ‘ಸ್ಟಾಪ್ ಟಬ್ಯಾಕೋ'(Stop Tobacco) ಗಮನ ಸೆಳೆಯುತ್ತಿದೆ. ಸಾರ್ಜನಿಕ ಸ್ಥಳಗಳಲ್ಲಿ ಧೂಮಪಾನ (Smoking) ಮಾಡುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸ್ಮೋಕಿಂಗ್ ಮಾಡುವುದರಿಂದ ಅದರ ದುಷ್ಪರಿಣಾಮ ಇತರರಿಗೂ ಆಗುತ್ತದೆ. ಈ ಹಿನ್ನೆಲೆಯಲ್ಲಿ ನಿಷೇಧಿಸಲಾಗಿದೆ. ಹೀಗಿದ್ದೂ, ಈ ಪ್ರವೃತ್ತಿಗೆ ಕಡಿವಾಣ ಬಿದ್ದಿಲ್ಲ. ಎಲ್ಲೆಂದರಲ್ಲಿ ಜನರು ಸ್ಮೋಕ್ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಕಡಿವಾಣ ಹಾಕಲು ಜಿಪಿಎಸ್ ಆಧಾರಿತ ಮೊಬೈಲ್ ಆ್ಯಪ್ ಸ್ಟಾಪ್ ಟಬ್ಯಾಕೋ ಲಾಂಚ್ ಮಾಡಲಾಗಿದೆ. ಈ ಆ್ಯಪ್‌ನಲ್ಲಿ ದೂರುಗಳು ದಾಖಲಾಗುತ್ತಿವೆ.
ಫೆಬ್ರವರಿ 28ರಂದು ಈ ಆ್ಯಪ್ ಲಾಂಚ್ ಮಾಡಲಾಗಿದೆ. ಈವರೆಗೆ 50 ದೂರುಗಳು ದಾಖಲಾಗಿವೆ. ಸಾರ್ವಜನಿಕ ಸ್ಮೋಕಿಂಗ್ ತಡೆಯಲು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಗ ಸಂಸ್ಥೆಯಾಗಿರುವ ರಾಜ್ಯ ತಂಬಾಕು ನಿಯಂತ್ರಣ ಕೋಶ(STCC) ಈ ಆ್ಯಪ್ ಲಾಂಚ್ ಮಾಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸ್ಮೋಕಿಂಗ್ ಪ್ರವೃತ್ತಿಯನ್ನು ಕಡಿಮೆ ಮಾಡುವುದೇ ಈ ಆ್ಯಪ್ ಬಿಡುಗಡೆಯ ಪ್ರಮುಖ ಉದ್ದೇಶವಾಗಿದೆ.
ಆ್ಯಪ್ ಲಾಂಚ್ ಆದಾಗಿನಿಂದಲೂ ಈವರೆಗೆ 200 ಡೌನ್ಲೋಡ್ ಆಗಿದೆ. ನಿಧಾನವಾಗಿ ಆ್ಯಪ್ ಜನಪ್ರಿಯವಾಗುತ್ತಿದೆ. ಈ ಆ್ಯಪ್ ಮೂಲಕ ದಾಖಲಾಗಿರುವ ದೂರುಗಳನ್ನು ಪರಿಶೀಲಿಸಿ, ಈವರೆಗೆ ಮೂರ್ನಾಲ್ಕು ಜನರ ವಿರುದ್ಧ ಕ್ರಮ ಕೂಡ ಕೈಗೊಳ್ಳಲಾಗಿದೆ. ವಿಶೇಷವಾಗಿ ಅಂಗಡಿ ಮಾಲೀಕರು ನೋ ಸ್ಮೋಕಿಂಗ್ ಫಲಕ ಪ್ರದರ್ಶನ ಮಾಡಿದೇ ಇದ್ದದ್ದಕ್ಕೆ ಮತ್ತು ಧೂಮಪಾನಕ್ಕೆ ಅವಕಾಶ ಮಾಡಿ ಕೊಟ್ಟಿದ್ದಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ. ಇಂಥ ಅಂಗಡಿಗಳ ಸುತ್ತ ಮುತ್ತ ಸ್ಮೋಕಿಂಗ್ ಮಾಡುತ್ತಿರುವವರಿಗೆ ದಂಡ ಕೂಡ ವಿಧಿಸಲಾಗಿದೆ. ಬೆಂಗಳೂರಿನ ಗಾಂಧಿನಗರ, ಎಚ್ಎಸ್ಆರ್ ಲೇ ಔಟ್, ಬಾಣಸವಾಡಿ ಪ್ರದೇಶಗಳಿಂದ ಹೆಚ್ಚು ದೂರುಗಳು ದಾಖಲಾಗಿವೆ. ಬೆಳಗಾವಿ ಮತ್ತು ದಕ್ಷಿನ ಕನ್ನಡ ಜಿಲ್ಲೆಗಳಿಂದಲೂ ಪ್ರಕರಣಗಳು ದಾಖಲಾಗಿವೆ ಎಂದು ಸ್ಟೇಟ್ ಟಬ್ಯಾಕೋ ಕಂಟ್ರೋಲ್ ಪ್ರೋಗ್ರಾಮ್ ಮುಖ್ಯಸ್ಥ ಪ್ರಭಾಕರ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ವಿಶ್ವ ಆರೋಗ್ಯ ಸಂಸ್ಥೆ(WHO)ಯ ಪ್ರಕಾರ, ತಂಬಾಕು ನಿಯಂತ್ರಣ ವಿಷಯದಲ್ಲಿ ಜಗತ್ತಿನಲ್ಲೇ ಬೆಂಗಳೂರು ಅತ್ಯುತ್ತಮ ನಗರವಾಗಿದೆ. ತಂಬಾಕು ಉತ್ಪಾದನೆ ಮತ್ತು ಉತ್ಪನ್ನಗಳ ಸೇವನೆ ತಡೆಗೆ ಅನೇಕ ಕ್ರಮಗಳನ್ನು ಕರ್ನಾಟಕ ಸರ್ಕಾರವು ಕೈಗೊಂಡಿದೆ. ಈ ವಿಷಯದಲ್ಲಿ ಹಲವು ಸಂಘ ಸಂಸ್ಥೆಗಳು ಕೈಗೊಡಿಸಿವೆ. ಜನರಲ್ಲಿ ಧೂಮಪಾನದಿಂದಾಗುವ ಆರೋಗ್ಯ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವುದು ಹಾಗೂ ಸಂಬಂಧಿಸಿದ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿರುವುದರಿಂದ ಸಾರ್ವಜನಿಕ ಸ್ಮೋಕಿಂಗ್ ನಿಯಂತ್ರಣದಲ್ಲಿದೆ ಎನ್ನಲಾಗಿದೆ.
ಆಟೋಮೊಬೈಲ್
Oscar 2023 : ನಾಟು ನಾಟು ಹಾಡಿಗೆ ಡಾನ್ಸ್ಮಾಡಿದ ಟೆಸ್ಲಾ ಕಾರುಗಳು! ಇಲ್ಲಿದೆ ನೋಡಿ ವಿಡಿಯೊ
ಮ್ಯೂಸಿಕ್ಗೆ ತಕ್ಕ ಹಾಗೆ ಕಾರಿನ ಎಲ್ಲ ಲೈಟ್ಗಳನ್ನು ಫ್ಲ್ಯಾಶ್ ಮಾಡುವ ಪ್ರೋಗ್ರಾಮ್ ಮೂಲಕ ಟೆಸ್ಲಾ ಕಾರುಗಳ ಲೈಟ್ ಶೋ ನೀಡಿದೆ.
ನ್ಯೂಜೆರ್ಸಿ: ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಸಿನಿಮಾದ ಹಾಡು ನಾಟು ನಾಟು ಹಾಡು, 2023ನೇ ಅವೃತ್ತಿಯ ಆಸ್ಕರ್ನ (Oscar 2023) ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದ ಪ್ರಶಸ್ತಿ ಗೆದ್ದಿದೆ. ಇದರೊಂದಿಗೆ ಆರ್ಆರ್ಆರ್ ಸಿನಿಮಾದ ಹಾಗೂ ನಾಟುನಾಟು ಹಾಡಿನ ಖ್ಯಾತಿ ಜಗದಗಲಕ್ಕೆ ಹರಡಿದೆ. ಆ ಹಾಡಿನ ಎನರ್ಜಿ ಹಾಗೂ ಟೆಂಪೊಗೆ ಮೆಚ್ಚಿದ ಮಂದಿ ಮ್ಯೂಸಿಕ್ ಕೇಳಿದ ತಕ್ಷಣ ಹೆಜ್ಜೆ ಹಾಕುತ್ತಿದ್ದಾರೆ. ಅಭಿಮಾನಿಗಳು ಹೆಜ್ಜೆ ಹಾಕೊದೇನೋ ಸರಿ. ಈ ಹಾಡು ಕೇಳಿದ ತಕ್ಷಣ ಕಾರುಗಳು ಡಾನ್ಸ್ ಮಾಡಲು ಶುರು ಮಾಡಿದರೆ ಹೇಗಿರಬಹುದು. ಕಣ್ಣಿಗೆ ಹಬ್ಬ ಗ್ಯಾರಂಟಿ. ಈ ರೀತಿಯಾಗಿ ನಾಟು ನಾಟು ಹಾಡಿಗೆ ಡಾನ್ಸ್ ಮಾಡಿದ್ದು ಸ್ವಯಂ ಚಾಲನೆ (ಸೆಲ್ಫ್ ಡ್ರೈವ್) ಮಾಡುವ ಸಾಮರ್ಥ್ಯ ಹೊಂದಿರುವ ಟೆಸ್ಲಾ ಕಾರು.
ಆರ್ಆರ್ಆರ್ ಮೂವಿ ತಂಡ ವಿಡಿಯೊವನ್ನು ಶೇರ್ ಮಾಡಿದೆ
ಹೌದು, ಅಮೆರಿಕದ ನ್ಯೂಜೆರ್ಸಿಯಲ್ಲಿ ಹಲವು ಕಾರುಗಳು ಒಟ್ಟಿಗೆ ನಾಡು ನಾಟು ಹಾಡಿಗೆ ಗೌರವ ಸಲ್ಲಿಸಿದೆ. ಆದರೆ, ಕಾರುಗಳು ಎದ್ದು ನಿಂತು ಡಾನ್ಸ್ ಮಾಡಿಲ್ಲ. ಬದಲಾಗಿ ಲೈಟುಗಳನ್ನು ಮಿಟುಕಿಸುವ ಮೂಲಕ ಹಾಡನ್ನು ಸಿಂಕ್ ಮಾಡಿದೆ. ಹಲವಾರು ಕಾರುಗಳು ಏಕಕಾಲಕ್ಕೆ ಹಾಡಿನ ಅಬ್ಬರಕ್ಕೆ ತಕ್ಕಂತೆ ಲೈಟ್ ಬೆಳಗಿಸುವುದು ಆಕರ್ಷಕವಾಗಿ ಕಂಡಿದೆ.
ಇದನ್ನೂ ಓದಿ : Naatu Naatu: ನಾಟು ನಾಟು ಹಾಡಿಗೆ ದೆಹಲಿಯಲ್ಲಿ ಜರ್ಮನಿ ರಾಯಭಾರ ಕಚೇರಿ ಸಿಬ್ಬಂದಿ ಡಾನ್ಸ್, ಮೋದಿ ಶ್ಲಾಘನೆ
ಆರ್ಆರ್ಆರ್ ಮೂವಿ ತಂಡ ವಿಡಿಯೊವನ್ನು ಶೇರ್ ಮಾಡಿಕೊಂಡಿದ್ದು, ನಿಮ್ಮೆಲ್ಲರ ಪ್ರೀತಿಗೆ ಆಭಾರಿ ಎಂದು ಹೇಳಿದೆ. ಅಂದ ಹಾಗೆ ವಿಡಿಯೊಕ್ಕೆ ಸಿಕ್ಕಾಪಟ್ಟೆ ಲೈಕ್ಸ್ಗಳು ಬಂದಿವೆ. ಕೆಲವರು ಇದಕ್ಕೆ ರೋಮಾಂಚನ ಎಂದು ಕಾಮೆಂಟ್ ಬರೆದಿದ್ದಾರೆ.
ಟೆಸ್ಲಾ ಟಾಯ್ಬಾಕ್ಸ್ ಫೀಚರ್ (Tesla Toybox)
ಟೆಸ್ಲಾ ಕಾರಿನಲ್ಲಿ ಟಾಯ್ ಬಾಕ್ಸ್ (Tesla Toybox) ಎಂಬ ಫೀಚರ್ ಇದೆ. ಇದರ ಮೂಲಕ ಲೈಟ್ ಶೋ ಮೂಲಕ ಚಾಲಕರಿಗೆ ವಿಭಿನ್ನ ಅನುಭವ ಪಡೆಯುವ ಅವಕಾಶ ನೀಡಲಾಗಿದೆ. ಈ ಫೀಚರ್ ಆಕ್ಟಿವೇಟ್ ಮಾಡಿದರೆ ಕಾರಿನ ಹೆಡ್ಲೈಟ್, ಟೈಲ್ ಲೈಟ್, ಇಂಡಿಕೇಟರ್ಗಳು ಹಾಗೂ ಇಂಟೀರಿಯರ್ ಲೈಟ್ಗಳು ಮ್ಯೂಸಿಕ್ಗೆ ತಕ್ಕ ಹಾಗೆ ಫ್ಲ್ಯಾಶ್ ಆಗುತ್ತವೆ. ಜತೆಗೆ ಬಣ್ಣವನ್ನೂ ಬದಲಿಸುತ್ತವೆ.
ಅದೇ ರೀತಿ ಟೆಸ್ಲಾದ ಸೌಂಡ್ ಸಿಸ್ಟಮ್ ಪ್ರೋಗ್ರಾಮ್ನ ಮೂಲಕವೂ ಸಂಪೂರ್ಣ ಆಡಿಯೊ ವಿಷುವಲ್ ಅನುಭವ ಪಡೆಯಲು ಸಾಧ್ಯವಿದೆ. ಮಾಡೆಲ್ ಎಕ್ಸ್, ಮಾಡೆಲ್ ಎಸ್ ಹಾಗೂ ಮಾಡೆಲ್ 3ಯಲ್ಲಿ ಈ ಫಿಚರ್ ಇದೆ.
ಗ್ಯಾಜೆಟ್ಸ್
Honor 70 Lite 5G ಸ್ಮಾರ್ಟ್‌ಫೋನ್ ಲಾಂಚ್, ಹೊಸ ಫೀಚರ್ಸ್‌ಗಳೇನು?
ಚೀನಾ ಮೂಲದ ಹಾನರ್ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಹಾನರ್ 70 ಲೈಟ್ 5ಜಿ ಫೋನ್(Honor 70 Lite 5G), ಬ್ಯಾಟರಿ, ಕ್ಯಾಮೆರಾ ಹಾಗೂ ಇತರ ಫೀಚರ್ಸ್‌ಗಳಿಂದಾಗಿ ಗಮನ ಸೆಳೆಯುತ್ತಿದೆ.
ನವದೆಹಲಿ: ಇತ್ತೀಚೆಗಷ್ಟೇ ಸ್ಪೇನ್‌ನ ಬಾರ್ಸಿಲೋನಾದಲ್ಲಿ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಹಾನರ್ ಕಂಪನಿಯು ಮ್ಯಾಜಿಕ್ 5 ಸಿರೀಸ್‌ನಲ್ಲಿ ಮ್ಯಾಜಿಕ್ 5 ಮತ್ತು ಮ್ಯಾಜಿಕ್ 5 ಪ್ರೋ ಸ್ಮಾರ್ಟ್‌ಫೋನ್ ಲಾಂಚ್ ಮಾಡಿತ್ತು. ಇವುಗಳ ಜತೆಗೆ ಕಂಪನಿಯ ಮೊದಲ ಫೋಲ್ಡೇಬಲ್ ಸ್ಮಾರ್ಟ್‌ಫೋನ್ ಹಾನರ್ ಮ್ಯಾಜಿಕ್ ವಿಎಸ್ ಕೂಡ ಲಾಂಚ್ ಆಗಿತ್ತು. ಈಗ ಕಂಪನಿಯು ಜಾಗತಿಕ ಮಾರುಕಟ್ಟೆಗೆ ಹಾನರ್ 70 ಲೈಟ್ 5ಜಿ (Honor 70 Lite 5G) ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ.
ಈ ಹಾನರ್ 70 ಲೈಟ್ 5ಜಿ ಸ್ಮಾರ್ಟ್‌ಫೋನ್ ಒಂದೇ ವೆರಿಯಂಟ್‌ನಲ್ಲಿ ಮಾರಾಟಕ್ಕೆ ಲಭ್ಯವಿದೆ. 4 ಜಿಬಿ RAM ಹಾಗೂ 128 ಜಿಬಿ ಸ್ಟೋರೇಜ್ ವೆರಿಯಂಟ್ ಫೋನ್ ಬೆಲೆ 199 ಪೌಂಡ್ ಎಂದು ಹೇಳಲಾಗುತ್ತಿದೆ. ಅಂದರೆ, ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಅದು ಅಂದಾಜು 20 ಸಾವಿರ ರೂ. ಆಗಬಹುದು. ಭಾರತೀಯ ಮಾರುಕಟ್ಟೆಗೆ ಯಾವಾಗ ಈ ಫೋನ್ ಲಾಂಚ್ ಆಗಲಿದೆ ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ.
ಟೈಟಾನಿಯಂ ಸಿಲ್ವರ್, ಓಷನ್ ಬ್ಲೂ, ಮಿಡ್ನೈಟ್ ಬ್ಲಾಕ್ ಎಂಬ ಮೂರು ಬಣ್ಣಗಳ ಆಯ್ಕೆಯಲ್ಲಿ ಈ ಸ್ಮಾರ್ಟ್‌ಫೋನ್ ಗ್ರಾಹಕರಿಗೆ ಸಿಗಲಿದೆ. ಆದರೆ, ಈ ಮೂರು ಬಣ್ಣಗಳ ಫೋನ್ ಎಲ್ಲ ಮಾರುಕಟ್ಟೆಗಳಲ್ಲಿ ಸಿಗುತ್ತದೆ ಎಂಬುದಕ್ಕೆ ಗ್ಯಾರಂಟಿ ಇಲ್ಲ. ಈ ಬಗ್ಗೆ ವೆಬ್‌ಸೈಟ್‌ನಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
Honor 70 Lite 5G ವಿಶೇಷತೆಗಳೇನು?
Honor 70 Lite 5G ಸ್ಮಾರ್ಟ್‌ಫೋನ್ ಡುಯಲ್ ಸಿಮ್‌ಗೆ ಸಪೋರ್ಟ್ ಮಾಡುತ್ತದೆ. ಮ್ಯಾಜಿಕ್ ಯುಐ ಜತೆ ಆಂಡ್ರಾಯ್ಡ್ 12 ಸಂಯೋಜಿಸಲಾಗಿದೆ. 6.5 ಇಂಚ್ ಎಚ್‌ಡಿ ಪ್ಲಸ್ ಎಲ್‌ಸಿಡಿ ಡಿಸ್‌ಪ್ಲೇ ಇದ್ದು, Adreno 619 GPU ಜತೆ Snapdragon 480+ ಪ್ರೊಸೆಸರ್ ನೀಡಲಾಗಿದೆ. 4 ಜಿಬಿ RAM ಇದೆ.
ಕ್ಯಾಮೆರಾ ಹೇಗಿದೆ?
Honor 70 Lite 5G ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಟ್ರಿಪಲ್ ಕ್ಯಾಮೆರಾ ಸೆಟ್ ಅಪ್ ಇದೆ. ಮೂರು ಕ್ಯಾಮೆರಾಗಳನ್ನು ಚೌಕಾಕಾರದ ಡಿಸೈನ್‌ನಲ್ಲಿ ಸೆಟ್ ಅಪ್ ಮಾಡಲಾಗಿದೆ. ಮೂರು ಕ್ಯಾಮೆರಾಗಳ ಪೈಕಿ ಮೊದಲನೇ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಕ್ಯಾಮೆರಾವಾಗಿದೆ. ಉಳಿದೆರಡು ಕ್ಯಾಮೆರಾಗಳು 2 ಮೆಗಾ ಪಿಕ್ಸೆಲ್ ಕ್ಯಾಮೆರಾಗಳಾಗಿವೆ. ಫೋನ್ ಮುಂಭಾಗದಲ್ಲಿ 8 ಮೆಗಾ ಪಿಕ್ಸೆಲ್ ಕ್ಯಾಮಾರವನ್ನು ಸೆಲ್ಫಿಗಾಗಿ ನೀಡಲಾಗಿದೆ. ಚಾಟ್ ಮತ್ತು ವಿಡಿಯೋ ಕರೆಗಳಿಗಾಗಿ ಬಳಸಿಕೊಳ್ಳಬಹುದು.
ಇದನ್ನೂ ಓದಿ: ಸ್ಮಾರ್ಟ್‌ಫೋನ್ ಕಳೆದು ಹೋಗಿದೆಯೇ? IMEI Number ಮೂಲಕ ಟ್ರ್ಯಾಕ್ ಅಥವಾ ಬ್ಲಾಕ್ ಮಾಡಬಹುದು!
5000mAh ಬ್ಯಾಟರಿ ಇದ್ದು, 122.5 ವ್ಯಾಟ್ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತದೆ. ಫೇಸ್ ಅನ್‌ಲಾಕ್ ಇದ್ದು, ಫೋನ್ ಬದಿಯಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್ ಇದೆ. 128 ಜಿಬಿ ಇಂಟರ್ನಲ್ ಸ್ಟೋರೇಜ್ ಇದೆ. ಕನೆಕ್ಟಿವಿಟಿ ಬಗ್ಗೆ ಹೇಳುವುದಾದರೆ, 5G, Wi-Fi 802.11ac, ಬ್ಲೂಟೂತ್ 5.1, GPS, USB ಟೈಪ್-C ಪೋರ್ಟ್, NFC, OTG ಮತ್ತು 3.5mm ಆಡಿಯೋ ಜ್ಯಾಕ್ ಸೌಲಭ್ಯಗಳಿವೆ.
-
ಸುವಚನ14 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ20 hours ago
ವಿಸ್ತಾರ ಸಂಪಾದಕೀಯ: ಪಬ್ಲಿಕ್ ಪರೀಕ್ಷೆ ಗೊಂದಲ; ವಿದ್ಯಾರ್ಥಿಗಳು, ಪೋಷಕರ ಮೇಲೆ ಮಾನಸಿಕ ಒತ್ತಡ
-
ಕರ್ನಾಟಕ23 hours ago
Life changing story : ನಿಂದನೆಯೇ ವರವಾಯಿತು, ಹಠ ತೊಟ್ಟು ವಕೀಲನಾಗಿ ಕರಿಕೋಟು ಧರಿಸಿ ವಾದಿಸಿ ಗೆದ್ದ ಯುವಕ!
-
ಆಟೋಮೊಬೈಲ್21 hours ago
Oscar 2023 : ನಾಟು ನಾಟು ಹಾಡಿಗೆ ಡಾನ್ಸ್ಮಾಡಿದ ಟೆಸ್ಲಾ ಕಾರುಗಳು! ಇಲ್ಲಿದೆ ನೋಡಿ ವಿಡಿಯೊ
-
ಕ್ರಿಕೆಟ್5 hours ago
IND VS AUS: ಭಾರತ-ಆಸ್ಟ್ರೇಲಿಯಾ ಅಂತಿಮ ಏಕದಿನ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ9 hours ago
Shivamogga politics : ಯುಗಾದಿ, ರಂಜಾನ್ಗೆ ಶುಭ ಕೋರಿ ಫ್ಲೆಕ್ಸ್ ಹಾಕಿಸಿದ ಆಯನೂರು, ಹರಕು ಬಾಯಿ ಮುಚ್ಚಲಿ ಅಂದಿದ್ದು ಯಾರಿಗೆ?
-
ಧಾರ್ಮಿಕ7 hours ago
Ugadi 2023 : ಜಗದ ಆದಿ ಈ ಯುಗಾದಿ!
-
ಅಂಕಣ9 hours ago
ನನ್ನ ದೇಶ ನನ್ನ ದನಿ ಅಂಕಣ: ಪಂಜಾಬ್ ನಾಶವಾಗುವುದು ಒಳ್ಳೆಯ ಲಕ್ಷಣವಲ್ಲ