Interesting: ಪಟ್‌ ಪಟ್‌ ಒಡೆಯಲು ಖುಷಿ ಆಗುವ bubble wrap ನಿಜಕ್ಕೂ ಹುಟ್ಟಿದ್ದೇಕೆ ಗೊತ್ತಾ? - Vistara News

ನಿಮಗಿದು ಗೊತ್ತೇ?

Interesting: ಪಟ್‌ ಪಟ್‌ ಒಡೆಯಲು ಖುಷಿ ಆಗುವ bubble wrap ನಿಜಕ್ಕೂ ಹುಟ್ಟಿದ್ದೇಕೆ ಗೊತ್ತಾ?

ಈಗ ಕಂಪ್ಯೂರ್‌, ಎಲೆಕ್ಟ್ರಾನಿಕ್‌ ವಸ್ತುಗಳಿಗೆ ಹಾನಿಯಾಗದಂತೆ ಸುತ್ತಿಡಲು ಬಳಸುವ bubble wrap ನಿಜಕ್ಕೂ ಮೊದಲು ಉತ್ಪಾದನೆ ಆದದ್ದು ಯಾಕೆ? Interesting ಮಾಹಿತಿ ಇಲ್ಲಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಗಾಜು, ಕನ್ನಡಿ, ಪಿಂಗಾಣಿ ಅಥವಾ ಅಂಥ ಸೂಕ್ಷ್ಮ ವಸ್ತುಗಳನ್ನು ಸಾಗಿಸುವಾಗ ಪುಟ್ಟ-ಪುಟ್ಟ ಗಾಳಿ ಗುಳ್ಳೆಗಳಿರುವ ಪ್ಲಾಸ್ಟಿಕ್ ಹೊದಿಕೆಯನ್ನು ಆ ವಸ್ತುಗಳ ಮೇಲೆ ಸುತ್ತುವುದನ್ನು ನಾವೆಲ್ಲ ಕಂಡೇ ಇರುತ್ತೇವೆ. ಇದರಿಂದ ಆ ವಸ್ತುವನ್ನು ಸುರಕ್ಷಿತವಾಗಿ ಸಾಗಿಸಲು ಅನುಕೂಲ ಎಂಬುದು ಹೌದಾದರೂ, ಹೆಚ್ಚಿನವರಿಗೆ ಈ ಬಬಲ್ ರ‍್ಯಾಪ್ (Bubble wrap) ಅಥವಾ ಗುಳ್ಳೆ ಹೊದಿಕೆಗಳು ಪ್ರಿಯವಾಗುವುದು ಆ ಗುಳ್ಳೆಗಳನ್ನು ಒಡೆಯಲೋಸುಗ!

ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎರಡು ಬೆರಳಿನಲ್ಲಿ ಆ ಗಾಳಿಗುಳ್ಳೆಯನ್ನು ʻಪಟ್ʼ ಎಂದು ಒಡೆದು ಸಂಭ್ರಮಿಸುವುದನ್ನು ನೋಡಲು ಮೋಜೆನಿಸುತ್ತದೆ. ಪ್ಯಾಕಿಂಗ್ಗಾಗಿ ಈ ಗಾಳಿಗುಳ್ಳೆಗಳ ಹೊದಿಕೆಯನ್ನು ಬಳಸಬೇಕೆಂಬ ಉಪಾಯ ಮೊದಲಿಗೆ ಬಂದಿದ್ದು ಯಾರಿಗೆ?
ವಿಷಯವೇನೆಂದರೆ, ಇದು ತಯಾರಾಗಿದ್ದು ವಸ್ತುಗಳ ಸಾಗಾಣಿಕೆಗಾಗಿ ಅಲ್ಲವೇ ಅಲ್ಲ. ಅದನ್ನು ಅಲ್ಫ್ರೆಡ್ ಫೀಲ್ಡಿಂಗ್ ಮತ್ತು ಮಾರ್ಕ್ ಶಾವೆನ್ನಸ್ ಎಂಬಿಬ್ಬರು ಗೋಡೆಯ ಅಲಂಕರಣಕ್ಕೆ ಹಚ್ಚುವ ವಾಲ್‌ ಪೇಪರ್‌ ಎಂದು 1957ರಲ್ಲಿ ಸೃಷ್ಟಿಸಿದ್ದರು. ಆದರೆ ಗೋಡೆ ತುಂಬಾ ಗುಳ್ಳೆ ಬಂದಂತೆ ಕಾಣುವ ಅದರ ಅಂದಗೆಡುಕ ಸ್ವರೂಪವನ್ನು ಜನ ಇಷ್ಟಪಡಲಿಲ್ಲ. ಹಾಗಾಗಿ ತಯಾರಿಸಿದ ವಾಲ್‌ ಪೇಪರ್‌ಗಳನ್ನು ಅವರು ಐಬಿಎಂ ಕಂಪ್ಯೂಟರ್ಸ್‌ ಗೆ ಮಾರಾಟ ಮಾಡಿದರು.

ಅದನ್ನೇನು ಮಾಡುವುದು ಎಂದು ಐಬಿಎಂಗೂ ಮೊದಲು ಬಗೆಹರಿಯಲಿಲ್ಲ. ಆದರೆ ತನ್ನ ಕಂಪ್ಯೂಟರ್ಗಳನ್ನು ಸಾಗಾಣಿಕೆ ಮಾಡುವಾಗ ಆಗುತ್ತಿದ್ದ ಹಾನಿ ತಪ್ಪಿಸಲು ಅವುಗಳನ್ನು ಬಳಸಬಹುದು ಎಂದು ಕಂಪೆನಿಗೆ ಅನಿಸಿತು. ಅಂದಿನಿಂದ ಇಂದಿನವರೆಗೆ ಈ ಬಬಲ್ ‌ರ‍್ಯಾಪರ್‌ಗಳನ್ನು ಹಾನಿಯಾಗದಂತೆ ವಸ್ತುಗಳನ್ನು ಸಾಗಿಸಲು ಮತ್ತು ಕೈತುರಿಕೆ ಆದಾಗ ʻಪಟ್ʼ ಎಂದು ಗುಳ್ಳೆ ಒಡೆಯಲು ಪ್ರಪಂಚದಾದ್ಯಂತ ಬಳಸಲಾಗುತ್ತದೆ.

ಇದನ್ನೂ ಓದಿದೆ| ದಾಖಲೆ ಬರೆದ ಬಾಳೆ ಹಣ್ಣು ಮೇಳ, ಜೋಡಿಸಲಿಕ್ಕೇ 3 ದಿನ ಬೇಕಾಯ್ತಂತೆ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ನಿಮಗಿದು ಗೊತ್ತೇ?

Mosquito magnets | ಸೊಳ್ಳೆಗಳು ನಿಮ್ಮನ್ನೇ ಹುಡುಕಿ ಬರುತ್ತವೆಯೇ! ಇಲ್ಲಿದೆ ಕಾರಣ

ಸೊಳ್ಳೆಗಳನ್ನು ಬಳಿಗೆ ಸೆಳೆಯುವವರು ತಮ್ಮ ಜೀವನವಿಡೀ ಬದಲಾಗುವುದಿಲ್ಲ. ಅವರಿಗೆ ಸೊಳ್ಳೆ ಕಾಟ ತಪ್ಪಿದ್ದಲ್ಲ- ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅದ್ಯಾಕೆ ಹಾಗೆ?

VISTARANEWS.COM


on

Mosquito
Koo

ಹತ್ತಾರು ಜನರ ನಡುವೆ ಕುಳಿತಾಗ ನಿಮಗೆ ಮಾತ್ರ ಸೊಳ್ಳೆ ಕಚ್ಚುವಂತೆ ಭಾಸವಾಗುತ್ತದೆಯೇ? ಯಾರಿಗೂ ಕಾಣದ ಸೊಳ್ಳೆಗಳು ನಿಮ್ಮನ್ನೇ ಹುಡುಕಿಕೊಂಡು ಬಂದು ಕಚ್ಚುತ್ತವೆಯೆಂಬ ಭ್ರಮೆ ನಿಮಗಿದೆಯೇ? ಇದು ಭ್ರಮೆಯಲ್ಲ ಎನ್ನುತ್ತವೆ ವೈಜ್ಞಾನಿಕ ಅಧ್ಯಯನಗಳು. ಸೊಳ್ಳೆಗಳು ಕೆಲವರತ್ತಲೇ ಸದಾ ಆಕರ್ಷಿತವಾಗುತ್ತವೆ ಎಂಬುದು ಇತ್ತೀಚಿನ ಸಂಶೋಧನೆಯೊಂದರ ಸಾರ.

ಇದೆಂಥ ಆಕರ್ಷಣೆ ಮಾರಾಯರೆ! ಸಂಪತ್ತು, ಯಶಸ್ಸು, ಕೀರ್ತಿ ಅಥವಾ ಹೆಸರನ್ನೋ ಆಕರ್ಷಿಸುವಂತಿದ್ದರೆ ಎಷ್ಟು ಒಳ್ಳೆಯದಿತ್ತು. ಸುಂದರ ರೂಪಿನಿಂದ ಸಂಗಾತಿಯನ್ನು ಆಕರ್ಷಿಸುವುದಾಗಿದ್ದರೆ ಇನ್ನೂ ಒಳ್ಳೆಯದಿತ್ತು. ಎಲ್ಲಾ ಬಿಟ್ಟು ರಕ್ತ ಹೀರಿ, ರೋಗ ತರಿಸುವ ಸೊಳ್ಳೆ! ಅದೂ ಹೆಣ್ಣು ಸೊಳ್ಳೆ!! ನಮ್ಮದೃಷ್ಟವೇ ಖೊಟ್ಟಿ ಎಂದು ಲೊಚಗುಟ್ಟಬಹುದು. ವಿಷಯವೇನೆಂದರೆ, ಸೊಳ್ಳೆಗಳನ್ನು ಸೂಜಿಗಲ್ಲಿನಂತೆ (“mosquito magnets”) ಸೆಳೆಯುವ ಈ ಮಹಾಶಯರ ಚರ್ಮದ ಮೇಲೆ ಉಳಿದವರಿಗಿಂತ ಹೆಚ್ಚಿನ ಪ್ರಮಾಣದ ಕಾರ್ಬಾಕ್ಸಿಲಿಕ್‌ ಆಮ್ಲ ಜಮಾವಣೆ ಆಗುತ್ತದೆ. ಎಲ್ಲರ ಚರ್ಮದ ಮೇಲೂ ಜಮಾವಣೆಯಾಗುವ ಈ ಆಮ್ಲದ ಪ್ರಮಾಣ ಬೇರೆಯಾಗಿಯೇ ಇರುತ್ತದೆ. ಹಾಗಾಗಿ ಕಾರ್ಬಾಕ್ಸಿಲಿಕ್‌ ಆಮ್ಲದ ವಾಸನೆ ಹೆಚ್ಚು ಸೂಸುವವರು ಉಳಿದವರಿಗಿಂತ ನೂರು ಪಟ್ಟು ಹೆಚ್ಚಾಗಿ ಸೊಳ್ಳೆಗಳನ್ನು ಆಕರ್ಷಿಸುತ್ತಾರೆ ಎನ್ನುತ್ತಾರೆ ನ್ಯೂಯಾರ್ಕ್‌ನ ರಾಕ್ಫೆಲ್ಲರ್‌ ವಿಶ್ವವಿದ್ಯಾಲಯದ ಅಧ್ಯಯನಕಾರರು.

ಇದನ್ನೂ ಓದಿ | ಚೀತಾ, ಚಿರತೆ, ಜಾಗ್ವಾರ್‌ | ಇವುಗಳ ನಡುವಿನ ವ್ಯತ್ಯಾಸ ತಿಳಿದಿರಲಿ!

ಸೊಳ್ಳೆಗಳನ್ನು ಸೂಜಿಗಲ್ಲಿನಂತೆ ಸೆಳೆಯುವ ಈ ಜನ ಎಲ್ಲೇ ಹೋಗಲಿ, ಎಂಥಾ ವಸ್ತ್ರಗಳನ್ನೇ ತೊಡಲಿ, ಎಂಥಾ ಆಹಾರವನ್ನೇ ಸೇವಿಸಲಿ, ಎಂಥಾ ಡಿಯೋಡರೆಂಟ್‌ ಸುರಿದುಕೊಳ್ಳಲಿ ಅಥವಾ ಅವರಿಗೆ ಎಷ್ಟೇ ವಯಸ್ಸಾಗಲಿ- ಗಂಟುಬಿದ್ದಿರುವ ಈ ಗ್ರಹಚಾರ ಸುಲಭಕ್ಕೆ ಬಿಡುವುದಿಲ್ಲ ಎನ್ನುತ್ತಾರೆ ತಜ್ಞರು. ಇದಕ್ಕಾಗಿ ಹಲವಾರು ತಿಂಗಳುಗಳವರೆಗೆ ವಿಸ್ತೃತವಾಗಿ ಪ್ರಯೋಗಗಳನ್ನು ನಡೆಸಲಾಯಿತು. “ಈ ಸುದ್ದಿ ಸಿಹಿಯೋ ಕಹಿಯೋ ಗೊತ್ತಿಲ್ಲ, ಆದರೆ ಸೊಳ್ಳೆಗಳನ್ನು ಸೆಳೆಯುವವರು ತಮ್ಮ ಜೀವನವಿಡೀ ಬದಲಾಗುವುದಿಲ್ಲ. ಅವರಿಗೆ ಸೊಳ್ಳೆ ಕಾಟ ತಪ್ಪಿದ್ದಲ್ಲ” ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಪ್ರಯೋಗದ ವಿವರ: ಒಟ್ಟು ೬೪ ಮಂದಿ ಪಾಲ್ಗೊಂಡಿದ್ದ ಈ ಪ್ರಯೋಗದ ವಿವರ ಹೀಗಿದೆ. ಚರ್ಮದ ವಾಸನೆಯನ್ನು ಚನ್ನಾಗಿ ಹೀರಬಲ್ಲಂಥ ನೈಲಾನ್‌ ಸ್ಟಾಕಿಂಗ್ಸ್‌ ಹಾಕಿಕೊಳ್ಳಲು ಎಲ್ಲರಿಗೂ ಹೇಳಲಾಗಿತ್ತು. ನಂತರ ಈ ವಸ್ತ್ರಗಳನ್ನು ಉದ್ದನೆಯ ಕೊಳವೆಯೊಂದರ ತುದಿಗೆ ಇರಿಸಿ, ಅದರೊಳಗೆ ಈಡೆಸ್ ಹೆಣ್ಣು ಸೊಳ್ಳೆಗಳನ್ನು ಬಿಡಲಾಗಿತು. ಒಬ್ಬೊಬ್ಬ ವ್ಯಕ್ತಿಯ ವಸ್ತವನ್ನೂ ಒಂದಕ್ಕಿಂತ ಹೆಚ್ಚು ಕೊಳವೆಯೊಳಗೆ ಇರಿಸಿ, ಎಲ್ಲಾ ಕೊಳವೆಯೊಳಗೂ ಆಯಾ ವಸ್ತ್ರಗಳಿಗೆ ಇಂಥವೇ ಪ್ರತಿಕ್ರಿಯೆ ಬರುತ್ತದೆಯೇ ಎಂಬುದನ್ನು ಪರಿಶೀಲಿಸಲಾಯಿತು. ಹೌದು, ಕೆಲವರ ವಸ್ತ್ರಗಳು ಸೊಳ್ಳೆಗಳು ಸೂಜಿಗಲ್ಲಿನಂತೆ ಸೆಳೆದವು. ಕೆಲವರ ವಸ್ತ್ರಗಳಂತೂ ಸುಮಾರು ನೂರು ಪಟ್ಟು ಹೆಚ್ಚು ಆಕರ್ಷಣೀಯವಾಗಿ ಸೊಳ್ಳೆಗಳಿಗೆ ಕಂಡವು. ಈ ರೀತಿಯ ಪ್ರಯೋಗಗಳನ್ನು ಮತ್ತೆಮತ್ತೆ ಮಾಡಿದಾಗಲೂ ಫಲಿತಾಂಶದಲ್ಲಿ ವಿಶೇಷ ವ್ಯತ್ಯಾಸ ಕಂಡುಬರಲಿಲ್ಲ ಎನ್ನುತ್ತಾರೆ ಅಧ್ಯಯನಕಾರರು. ಸೊಳ್ಳೆಗಳು ಪದೇಪದೆ ಕಚ್ಚುತ್ತಿವೆ ಎಂದರೆ ಯಾವುದಕ್ಕೂ ಸ್ವಲ್ಪ ಜಾಗ್ರತೆ ವಹಿಸಿ.

ಇದನ್ನೂ ಓದಿ | Egg usage: ಹೊಟ್ಟೆ ಸೇರುವ ಮೊದಲೇ ಮೊಟ್ಟೆಯ ಬಗೆಗೆ ನಿಮಗಿವು ತಿಳಿದಿರಲಿ!

Continue Reading

ಆರೋಗ್ಯ

Chromotherapy | ಬಣ್ಣದ ಔಷಧಿಯಲ್ಲ, ಬಣ್ಣವೇ ಔಷಧಿ!

ಬಣ್ಣಗಳು ನಮ್ಮ ಮನಸ್ಸಿನ ಆರೋಗ್ಯದ ಮೇಲೆ ನಾನಾ ಬಗೆಯಲ್ಲಿ ಪರಿಣಾಮ ಬೀರುವುದನ್ನು ನೀವು ಗಮನಿಸಿರಬಹುದು. ಇದನ್ನು ಆಧರಿಸಿದ ಚಿಕಿತ್ಸಾ ಕ್ರಮವೇ color therapy ಅಥವಾ chromotherapy.

VISTARANEWS.COM


on

color
Koo

ಬಣ್ಣಗಳಿಗೆ ಅದ್ಭುತ ಶಕ್ತಿಯಿದೆ. ಕಳೆಗುಂದಿದ ನಮ್ಮ ಮೂಡ್‌ ಅನ್ನು ಇದ್ದಕ್ಕಿದ್ದಂತೆ ಸರಿ ಮಾಡುವ, ಖುಷಿಯನ್ನು ಪಸರಿಸುವ ಸಾಮರ್ಥ್ಯ ಬಣ್ಣಗಳಿಗಿವೆ. ಗಾಢ ಹಾಗೂ ಬೆಚ್ಚನೆಯ ಭಾವ ಕೊಡುವ ಬಣ್ಣಗಳು ಒಮ್ಮಿಂದೊಮ್ಮೆ ನಮ್ಮ ದೇಹಕ್ಕೆ ಮನಸ್ಸಿಗೆ ರಿಲ್ಯಾಕ್ಸ್‌ ಕೊಡಬಹುದು. ಹಾಗಾಗಿ ಬಣ್ಣಗಳನ್ನೇ ಇಟ್ಟುಕೊಂಡು ಮನುಷ್ಯನ ಭಾವನೆಗಳಿಗೆ, ಮನಸ್ಸಿಗೆ ಚಿಕಿತ್ಸೆ ಕೊಡಬಹುದು. ಇದಕ್ಕೆ ಕಲರ್‌ ಥೆರಪಿ ಅಥವಾ ಕ್ರೋಮೋಥೆರಪಿ ಎಂದೂ ಕರೆಯುತ್ತಾರೆ.

ವಿಜ್ಞಾನಿಗಳು ಹೇಳುವ ಪ್ರಕಾರ, ಬಹಳಷ್ಟು ನಮ್ಮ ದೈಹಿಕ ಸಮಸ್ಯೆಗಳ ಮೂಲ ಮಾನಸಿಕ ಸಮಸ್ಯೆಯಲ್ಲೇ ಇರುತ್ತದೆ. ಅಂದರೆ, ನಾವು ನೆಮ್ಮದಿಯಾಗಿದ್ದಂತೆ ಮೇಲ್ನೋಟಕ್ಕೆ ಕಂಡರೂ, ಮನಸ್ಸಿನಾಳದಲ್ಲಿ ಬಾಧಿಸುವ ವಿಚಾರಗಳು ನಮ್ಮ ದೇಹದ ಸಮಸ್ಯೆಗಳ ಮೂಲಕ ವ್ಯಕ್ತವಾಗಬಹುದು. ಅಂದರೆ, ಮನಸ್ಸಿನಾಳದಲ್ಲಿ ಹುದುಗಿದ ಬೇಸ, ದುಃಖಗಳನ್ನು ವ್ಯಕ್ತಪಡಿಸಲಾಗದೆ ತೊಳಲುವ ಮಂದಿಗೆ ಹಲವಾರು ದೈಹಿಕ ಸಮಸ್ಯೆಗಳ ರೂಪದಲ್ಲಿ ಅವರನ್ನು ಕಾಡುತ್ತವೆ. ಮುಖ್ಯವಾಗಿ, ದೇಹದ ವಿವಿಧ ಭಾಗಗಳಲ್ಲಿ ಕಾಣಿಸಿಕೊಳ್ಳುವ ನೋವುಗಳು ಮಾನಸಿಕ ತಳಮಳದ ಪ್ರತಿಫಲನವೂ ಆಗಿರುವ ಸಾಧ್ಯತೆಗಳಿರುತ್ತದೆ. ಹಾಗಾಗಿ ಇಂತಹ ಸಂದರ್ಭಗಳಲ್ಲಿ ಈ ಬಣ್ಣಗಳ ಮೂಲಕ ಚಿಕಿತ್ಸೆ ನೀಡುವುದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ಇಳಿದುಬಂದಿದೆ.

ಉದಾಹರಣೆಗೆ, ನೀಲಿ ಬಣ್ಣದ ಬೆಳಕನ್ನು ಹೊಂದಿದ ಕೋಣೆಯಲ್ಲಿ ಕೂತು ಶಾಂತಿ ಸಮಾಧಾನವನ್ನು ಕಂಡುಕೊಳ್ಳುವುದು, ಪಿಂಕ್‌ ಬಣ್ಣದ ಬೆಳಕಿನಲ್ಲಿ ಕೂತು ತುಮುಲಗಳಿಂದ ಹೊರಬರುವುದಕ್ಕೆ ನೆರವಾಗುತ್ತದೆ. ಆದರೆ, ಇದನ್ನು ತಜ್ಞರ ಸಹಕಾರದಿಂದ ಮಾಡುವುದು ಮುಖ್ಯವಾಗುತ್ತದೆ.

ತಲೆನೋವಿಗೆ ಬಣ್ಣಗಳು ಬಹಳ ಒಳ್ಳೆಯ ಔಷಧಿಯಂತೆ. ಮೈಗ್ರೇನ್‌ ಹಾಗೂ ಪದೇ ಪದೇ ತಲೆನೋವಿನಿಂದ ಬಳಲುವವರಿಗೆ ಬಣ್ಣಗಳ ಥೆರಪಿ ಚೆನ್ನಾಗಿ ಕೆಲಸ ಮಾಡುತ್ತದೆ ಎನ್ನುತ್ತಾರೆ ವೈದ್ಯರು. ಇದಕ್ಕೆ ಪ್ರತ್ಯೇಕವಾಗಿ ಬಣ್ಣಗಳ ಟ್ರೀಟ್ಮೆಂಟ್‌ ತೆಗೆದುಕೊಳ್ಳುವ ಅಗತ್ಯವೂ ಇಲ್ಲ. ಸುಮ್ಮನೆ ಪ್ರಶಾಂತವಾದ ಹಸಿರು ಹಸಿರಿನ ಪ್ರಕೃತಿಯಲ್ಲಿ ಸುಮ್ಮನೆ ಕೆಲಹೊತ್ತು ಕಳೆದರೂ ಸಾಕು, ತಲೆನೋವು ಎಷ್ಟೋ ಬೆಟರ್‌ ಅನಿಸುತ್ತದೆ. ಇಲ್ಲಿ ಹಸಿರು ಬಣ್ಣ ನಮ್ಮ ತಲೆನೋವಿನ ಶಮನದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.

ಇದನ್ನೂ ಓದಿ: ಈಗೀಗ 30-40ನೇ ವಯಸ್ಸಿನಲ್ಲೇ ಸ್ತನ ಕ್ಯಾನ್ಸರ್‌ ಕಾಡುವುದೇಕೆ? ಎಲ್ಲಿ ಎಡವಿದ್ದೇವೆ ನಾವು?

ವಿಜ್ಞಾನಿಗಳ ಪ್ರಕಾರ, ಪ್ರಕೃತಿಯ ಸಂಗವೇ ಒಂದು ಥೆರಪಿ. ಪ್ರಕೃತಿಯ ಒಡನಾಟ ಇದ್ದರೆ ಧ್ಯಾನದಂತಹ ಮನೋನಿಗ್ರಹ ಚಟುವಟಿಕೆಗಳ ಅಗತ್ಯವೂ ಇಲ್ಲ. ಪ್ರಕೃತಿ ಕೊಡುವ ಶಾಂತಿ, ನೆಮ್ಮದಿ ಕೊಡುತ್ತದೆ. ವೈಜ್ಞಾನಿಕವಾಗಿಯೂ ಪ್ರಕೃತಿಯಲ್ಲಿರುವ ಹಸಿರು ಬಣ್ಣ ನೋವು ನಿವಾರಕ ಎಂಬುದು ಸಾಬೀತಾಗಿದೆ.

ಕ್ರೋಮೋಥೆರಪಿಯಲ್ಲಿ ಯಾವ ಬಣ್ಣ ದೇಹದ ಯಾವ ಭಾಗದೊಂದಿಗೆ ವಿಶೇಷ ಸಂಬಂಧ ಹೊಂದಿದೆ ಎಂದು ನೋಡೋಣ.

೧. ಕೆಂಪು: ಕೆಂಪು ಎಂದರೆ ಶಕ್ತಿ, ಇದು ರಕ್ತಪರಿಚಲನೆ ಹಾಗೂ ಉಸಿರಾಟಕ್ಕೆ ನೇರ ಸಂಬಂಧ ಹೊಂದಿದೆ. ಹಾಗಾಗಿ ಈ ಬಣ್ಣ ರಕ್ತದೊತ್ತಡವನ್ನು ಸಹಜ ಸ್ಥಿತಿಗೆ ತರುವಲ್ಲಿ ಸಹಾಯ ಮಾಡುವುದಲ್ಲದೆ, ಹೃದಯವನ್ನು ಆರೋಗ್ಯವಾಗಿರಿಸಲು ನೆರವಾಗುತ್ತದೆ.

೨. ಹಳದಿ: ಹಳದಿ ಬಣ್ಣ ಜೀರ್ಣಾಂಗ ವ್ಯವಸ್ಥೆ ಹಾಗೂ ನರಮಂಡಲವನ್ನು ಪ್ರತಿನಿಧಿಸುತ್ತದೆ. ಇದಲ್ಲದೆ, ಉಸಿರಾಟದ ತೊಂದರೆ, ಅಸ್ತಮಾ ಮತ್ತಿತರ ಕಾಯಿಲೆಗಳ ಗುಣಪಡಿಸುವಿಕೆಯಲ್ಲಿ ಹಳದಿ ಬಣ್ಣ ಸಹಾಯ ಮಾಡುತ್ತದೆ.

೩. ನೀಲಿ: ನೀಲಿ ಎಂದರೆ ಶಾಂತಿ, ನೆಮ್ಮದಿ. ಇದು ಶೀತ, ಕೆಮ್ಮು, ಜ್ವರ, ತಲೆನೋವು ಮತ್ತಿತರ ಸಮಸ್ಯೆಯ ಪರಿಹಾರದಲ್ಲಿ ಪಾತ್ರ ವಹಿಸುತ್ತದೆ.

೪. ನೇರಳೆ ಮತ್ತು ಇಂಡಿಗೋ: ಈ ಬಣ್ಣಗಳು ಕಣ್ಣಿಗೆ ಒಳ್ಳೆಯದು. ಕಿವಿ ಹಾಗೂ ಮೂಗಿನ ಸಂಬಂಧಿ ತೊಂದರೆಗೂ ಈ ಬಣ್ಣಗಳು ಒಳ್ಳೆಯದು. ನಮ್ಮ ಮಾಂಸಖಂಡಗಳನ್ನು ರಿಲ್ಯಾಕ್ಸ್‌ ಮಾಡಿಸಿ, ಶಾಂತಿ, ನೆಮ್ಮದಿಯ ಭಾವ ಮೂಡಿಸುವಲ್ಲಿ ಈ ಬಣ್ಣದ ಸಹಾಯ ಮಾಡುತ್ತದೆ.

ಇದನ್ನೂ ಓದಿ: Kids food: ಮಕ್ಕಳು ಲಂಬೂಜಿ ಆಗಬೇಕಾದರೆ ಅವರ ಆಹಾರದಲ್ಲಿ ಇವು ಇರಲಿ

Continue Reading

ದೇಶ

world snake day | ಇದು ಭಾರತದ ಉರಗ ವಿಚಾರ – ಇಲ್ಲಿದೆ ಕ್ಯೂರಿಯಸ್‌ ಸಮಾಚಾರ

ಹಾವುಗಳ ಬಗ್ಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ ಜುಲೈ 16ರಂದು ವಿಶ್ವ ಹಾವು ದಿನವನ್ನು ಪ್ರಪಂಚದಾದ್ಯಂತ ಆಚರಣೆಗೆ ತರಲಾಗಿದೆ. ವಿಶ್ವದಲ್ಲಿ ಒಟ್ಟು 3,500ಕ್ಕೂ ಹೆಚ್ಚು ಪ್ರಭೇದದ ಹಾವುಗಳಿದ್ದು, ಇವುಗಳಲ್ಲಿ ಭಾರತದ ಪ್ರಮುಖ ಪ್ರಭೇದಗಳ ಇಂಟ್ರೆಸ್ಟಿಂಗ್‌ ಮಾಹಿತಿಯನ್ನು ತಿಳಿಯೋಣ.

VISTARANEWS.COM


on

world snake day
Koo

ಹಾವು ಎಂದಾಕ್ಷಣ ಒಂದು ರೀತಿಯ ಭಯ ನಮ್ಮಲ್ಲಿ ಮೂಡುತ್ತದೆ. ಇದು ಸರೀಸೃಪ ಜಾತಿಗೆ ಸೇರಿರುವ ಜೀವಿಯಾಗಿದೆ. ಹಾವುಗಳ ಬಗ್ಗೆ ಮನುಷ್ಯರಿಗೆ ಇರುವ ಸಾಮಾನ್ಯ ಕಲ್ಪನೆ ಅಂದರೆ ಕಚ್ಚಿದರೆ ಸಾವು ಗ್ಯಾರಂಟಿ ಎಂಬುದು. ಆದರೆ, ಎಲ್ಲ ಹಾವುಗಳೂ ವಿಷಪೂರಿತ ಅಲ್ಲ, ಕಚ್ಚುವುದೂ ಇಲ್ಲ. ಇವುಗಳ ಬಗ್ಗೆ ನಮಗೆ ತಿಳಿವಳಿಕೆ ಕಡಿಮೆ ಇರುತ್ತದೆ. ಇನ್ನೊಂದು ವಿಚಾರವೆಂದರೆ ಹಾವು ತಾನಾಗೇ ಬಂದು ಕಚ್ಚುವುದು ಬಹಳವೇ ಕಡಿಮೆ. ಆದರೆ, ಅವುಗಳಿಗೆ ತೊಂದರೆ ಕೊಟ್ಟರೆ ಮಾತ್ರ ಪರಿಣಾಮವನ್ನು ಎದುರಿಸಲು ಸಿದ್ಧರಾಗಿರಬೇಕು. ಭಾರತದಲ್ಲಿ ಕಾಣಸಿಗುವ ಪ್ರಮುಖ ಹಾವುಗಳ ಬಗ್ಗೆ ಇಲ್ಲಿದೆ ಸಣ್ಣ ಝಲಕ್‌.

ಇದನ್ನೂ ಓದಿ| Snakes in Bangalore | ಕಬ್ಬನ್‌ ಪಾರ್ಕ್‌ನಲ್ಲಿ ನಾಗರಹಾವು ಸೆರೆ

Continue Reading

ನಿಮಗಿದು ಗೊತ್ತೇ?

ಮೊಸಳೆ ಬಾಯಿ ತೆರೆದರೆ ಭಯಂಕರ, ಅಗಿಯೋಕೆ ಮಾತ್ರ ಬರಲ್ಲ!

ಮೊಸಳೆ ಬಾಯಿ ತೆರೆದರೆ ನೋಡಲು ಭಯಂಕರವಾಗಿ ಕಾಣಿಸುತ್ತದೆ. ಆದರೆ ಅವುಗಳಿಗೆ ಅಗಿಯೋಕೆ ಬರೋಲ್ಲ. ಹಾಗಂತ ಮೊಸಳೆ ಬಾಯಿಯಲ್ಲಿ ನಿಮ್ಮ ತಲೆ ಇಟ್ಟು ಪರೀಕ್ಷಿಸಲು ಹೋಗಬೇಡಿ!

VISTARANEWS.COM


on

crocodile
Koo

ಬಾಯಿ ಬಿಟ್ಟರೆ ತಮ್ಮ ಹಲ್ಲುಗಳ ದೆಸೆಯಿಂದಲೇ ನೋಡುಗರಲ್ಲಿ ಗಾಬರಿ ಹುಟ್ಟಿಸುವ ಮೊಸಳೆಗಳಿಗೆ ಅಗಿಯುವುದಕ್ಕೆ ಬರುವುದಿಲ್ಲ ಎಂದರೆ ನಂಬುವ ಮಾತೇ? ಆದರೆ ನಂಬಲೇ ಬೇಕು! ಗರಗಸದಂತಹ ಹಲ್ಲುಗಳಿಗೆ ಖ್ಯಾತವಾಗಿರುವ ಈ ಸರೀಸೃಪಗಳ ದವಡೆಗಳು, ಮೇಲೆ-ಕೆಳಗೆ ಮಾತ್ರ ಚಲಿಸಬಲ್ಲವು. ಉಳಿದ ಪ್ರಾಣಿಗಳಂತೆ ಅಡ್ಡಡ್ಡ ಚಲನೆ ಸಾ‍ಧ್ಯವಿಲ್ಲ.

ಹಾಗಂತ ಮೊಸಳೆ ಬಾಯಿಗೆ ತಲೆ ಕೊಡೋಕೆ ಹೋಗಬೇಡಿ. ಅದು ಸಲೀಸಾಗಿ ನಿಮ್ಮನ್ನು ಅರ್ಧಕ್ಕೆ ಕತ್ತರಿಸಿಬಿಡಬಲ್ಲುದು.

ಹಾಗಿದ್ದರೆ ಮಾಂಸಾಹಾರಿ ಪ್ರಾಣಿಗಳಾದ ಮೊಸಳೆಗಳು ಹೇಗೆ ತಿಂದು ಜೀರ್ಣಿಸಿಕೊಳ್ಳುತ್ತವೆ ಎಂಬುದು ಸಹಜ ಪ್ರಶ್ನೆ. ಮೀನು, ಹಕ್ಕಿ, ಕಪ್ಪೆ, ಇಲಿಯಂಥ ಪ್ರಾಣಿಗಳು ಅವುಗಳ ನಿತ್ಯದ ಆಹಾರ. ಹಾಗೆಂದು ಕೆಲವೊಮ್ಮೆ ದೊಡ್ಡ ಪ್ರಾಣಿಗಳನ್ನು ತಿನ್ನುವುದೂ ಉಂಟು ಅಥವಾ ಅಪರೂಪಕ್ಕೊಮ್ಮೆ ತಮ್ಮದೇ ಜಾತಿಯ ಮೊಸಳೆಯನ್ನೇ ಭಕ್ಷಿಸುವುದೂ ಹೌದು. ಬೇಟೆ ಸಣ್ಣದಾಗಿದ್ದರೆ, ಅವುಗಳನ್ನು ಹಾಗೆಯೇ ಗುಳುಂ ಮಾಡುತ್ತವೆ. ದೊಡ್ಡದಾಗಿದ್ದರೆ ಸೀಳಿ ತುಂಡಾಗಿಸಿಕೊಂಡು ನುಂಗುತ್ತವೆ. ಆದರೆ ಉಳಿದ ಪ್ರಾಣಿಗಳಂತೆ ಅಗಿದು-ನುರಿದು ತಿನ್ನುವುದು ಅವಕ್ಕೆ ಅಸಾಧ್ಯ.

ತಮ್ಮ ನೈಸರ್ಗಿಕ ಆವಾಸದಲ್ಲಿರುವ ಮೊಸಳೆಗಳು ಬೇಟೆಯಾಡಿದ ನಂತರ, ಆ ಪ್ರಾಣಿಯನ್ನು ನುಂಗಲು ಸಾಧ್ಯವಿರುವ ತುಂಡುಗಳನ್ನಾಗಿ ಮಾಡಿಕೊಳ್ಳುತ್ತವೆ. ಅದೇ ಬಂಧನದಲ್ಲಿರುವ ಮೊಸಳೆಗಳಿಗೆ ಬೇಟೆಯಾಡುವ ಕಷ್ಟ ಮತ್ತು ಆನಂದ ಎರಡೂ ಇರುವುದಿಲ್ಲವಾದ್ದರಿಂದ, ತಮಗಾಗಿ ತಂದ ಮೀನು, ಇಲಿ-ಹೆಗ್ಗಣಗಳನ್ನೇ ನುಂಗಬೇಕಾಗುತ್ತದೆ. ಮೊಸಳೆಗಳಿಗೆ ಹೊಟ್ಟೆಯಿರುವುದು ಒಂದಲ್ಲ, ನಾಲ್ಕು! ಹಾಗಾಗಿ ಪ್ರಾಣಿಗಳನ್ನು ಜಗಿಯದೆ ಇಡಿಯಾಗಿ ನುಂಗಿದರೂ ಪಚನ ಮಾಡುವ ಹೆಚ್ಚಿನ ಸವಲತ್ತು ಅದಕ್ಕೆ ನಿಸರ್ಗದತ್ತವಾಗಿ ಸಿದ್ಧಿಸಿದೆ. ಅಲ್ಲದೆ, ಬೇರೆಲ್ಲ ಪ್ರಾಣಿಗಳಿಂತ ಹೆಚ್ಚಾಗಿಯೇ ಜಠರ ರಸ ಅದರ ಉದರದಲ್ಲಿ ಇರುತ್ತದಂತೆ.

ಮಿಯಾಮಿ ವಿಜ್ಞಾನ ವಸ್ತುಸಂಗ್ರಹಾಲಯದ ತಜ್ಞರ ಪ್ರಕಾರ, ಆಸ್ಟ್ರಿಚ್‌ನಂತೆಯೇ ಮೊಸಳೆಗಳೂ ಸಣ್ಣ ಕಲ್ಲುಗಳನ್ನು ನುಂಗುತ್ತವಂತೆ… ಹೊಟ್ಟೆಯಲ್ಲಿ ಅವುಗಳನ್ನು ರುಬ್ಬುವುದು ಸುಲಭ ಎಂಬ ಕಾರಣಕ್ಕೆ! ದೊಡ್ಡ ಬೇಟೆಯನ್ನೇನಾದರೂ ನುಂಗಿದರೆ, ಮುಂದಿನ ಹಲವು ದಿನಗಳ ಕಾಲ ಅವುಗಳಿಗೆ ಆಹಾರವೇ ಬೇಕಿಲ್ಲ. ಇರುವ ನಾಲ್ಕು ಜಠರದ ಪೈಕಿ ಒಂದಾದಮೇಲೊಂದರಲ್ಲಿ ಆಹಾರವನ್ನು ಜೀರ್ಣಿಸುತ್ತಾ ಕಾಲಕಳೆಯುತ್ತವೆ.

ಹೆಣ್ಣು ಮೊಸಳೆ ೧೨-೪೮ ಮೊಟ್ಟೆಗಳನ್ನು ಒಂದು ಸಲಕ್ಕೆ ಇಡುತ್ತದೆ. ಇವು ಒಡೆಯಲು ೫೫-೧೦೦ ದಿನಗಳವರೆಗೆ ಬೇಕಾಗುತ್ತದೆ. ಹುಟ್ಟಿದ ಮರಿಗಳು ೭-೧೦ ಇಂಚು ಉದ್ದವಿರುತ್ತವೆ. ಅವುಗಳ ಪ್ರಬೇಧದ ಆಧಾರದ ಮೇಲೆ, ೪-೧೫ ವರ್ಷಗಳ ಅವಧಿಯಲ್ಲಿ ಮೊಸಳೆಗಳು ಪ್ರಾಯಪ್ರಬುದ್ಧವಾಗುತ್ತವೆ. ಜೀವಿತಾವಧಿಯೂ ಪ್ರಬೇಧವನ್ನಾಧರಿಸಿ, ೪೦-೮೦ ವರ್ಷಗಳು.

ಇದನ್ನೂ ಓದಿ | ಖ್ಯಾತ ಫುಟ್‌ಬಾಲರ್‌ ಝಿಝು ಬಗ್ಗೆ ನಿಮಗಿದು ಗೊತ್ತೆ?

Continue Reading
Advertisement
Maarige Daari
ಪ್ರಮುಖ ಸುದ್ದಿ8 mins ago

Maarige Daari : ‘ಮಾರಿಗೆ ದಾರಿ” ಫಸ್ಟ್ ಲುಕ್ ಟೀಸರ್ ಬಿಡುಗಡೆ, ಇಲ್ಲಿದೆ ವಿಡಿಯೊ

Mansoon
ಪ್ರಮುಖ ಸುದ್ದಿ20 mins ago

Monsoon : ಮಳೆ ವರದಿ; ಕರ್ನಾಟಕದಲ್ಲಿ ಜೂನ್ 1ರಂದೇ ಮಾನ್ಸೂನ್ ಮಳೆ ಆರಂಭ

bbmp waste disposal
ಬೆಂಗಳೂರು36 mins ago

Waste Disposal: ಕಸ ವಿಲೇವಾರಿ ಇನ್ನು ಬಿಬಿಎಂಪಿ ಕೆಲಸ ಅಲ್ಲ! ಅದಕ್ಕಾಗಿಯೇ ಬರುತ್ತಿದೆ ಹೊಸ ಸಂಸ್ಥೆ

Aishwarya Rai
Latest41 mins ago

Aishwarya Rai : ಮುದ್ದಿನ ಮಗಳು ಆರಾಧ್ಯಳ ಜತೆ ಅಮ್ಮನ ಬರ್ತ್​​ಡೇ ಆಚರಿಸಿದ ಐಶ್ವರ್ಯಾ ರೈ; ಇಲ್ಲಿವೆ ಚಿತ್ರಗಳು

Drowned in water
ಕಲಬುರಗಿ43 mins ago

Drowned in water : ಕುಡಿದ ಮತ್ತಿನಲ್ಲಿ ಈಜಲು ಹೋದ ಯುವಕ ನೀರುಪಾಲು; ಸಾವಿನ ಕೊನೆ ಕ್ಷಣ ಮೊಬೈಲ್‌ನಲ್ಲಿ ಸೆರೆ

Viral Video
ಪ್ರಮುಖ ಸುದ್ದಿ1 hour ago

Viral Video: ಚಲಿಸುವ ಬೈಕ್​ನಲ್ಲಿ ಆಲಿಂಗನ, ಬಿಸಿ ಚುಂಬನ; ಲಜ್ಜೆಯಿಲ್ಲದ ಜೋಡಿಯ ಸ್ಟಂಟ್​ ವಿಡಿಯೊ ವೈರಲ್​

suspicious death Self Harming By Hight court lawyer
ಕ್ರೈಂ2 hours ago

Suspicious Death: ವಕೀಲೆಯ ಅನುಮಾನಾಸ್ಪದ ಸಾವಿನ ಪ್ರಕರಣ; ಪೋಸ್ಟ್ ಮಾರ್ಟಮ್ ರಿಪೋರ್ಟ್ ಹೇಳಿದ್ದೇನು?

bulldozer justice
ಪ್ರಮುಖ ಸುದ್ದಿ2 hours ago

Bulldozer justice : ಅಸ್ಸಾಂ ಸರ್ಕಾರಕ್ಕೆ ತಿರುಗುಬಾಣವಾದ ಬುಲ್ದೋಜರ್ ನ್ಯಾಯ! ನೆಲಸಮಗೊಳಿಸಿದ ಮನೆ ಮಾಲೀಕರಿಗೆ 30 ಲಕ್ಷ ಪರಿಹಾರ!

assault case koratagere
ಕ್ರೈಂ2 hours ago

Assault Case: ಗೃಹ ಸಚಿವರ ಕ್ಷೇತ್ರದಲ್ಲಿ ಭೂಸೇನೆ ಯೋಧನ ಮೇಲೆಯೇ ಮಾರಣಾಂತಿಕ ಹಲ್ಲೆ; ಇಲ್ಲಿ ಕೇಳೋರೇ ಇಲ್ವಾ?

Rameshwaram Cafe
ಪ್ರಮುಖ ಸುದ್ದಿ2 hours ago

Rameshwaram Cafe : ಅವಧಿ ಮುಗಿದ ವಸ್ತುಗಳಲ್ಲಿ ತಿಂಡಿ ತಯಾರಿ, ರಾಮೇಶ್ವರಂ ಕೆಫೆ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ1 day ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ2 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು3 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು3 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ4 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ5 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ5 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ5 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ7 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌