Viral Video: ನಾಯಿಯಾಗಲು 12 ಲಕ್ಷ ರೂಪಾಯಿ ವ್ಯಯಿಸಿದ ವ್ಯಕ್ತಿ; ಈತನೀಗ ಥೇಟ್‌ ಶ್ವಾನ

ವಿದೇಶ

Viral Video: ನಾಯಿಯಾಗಲು 12 ಲಕ್ಷ ರೂಪಾಯಿ ವ್ಯಯಿಸಿದ ವ್ಯಕ್ತಿ; ಈತನೀಗ ಥೇಟ್‌ ಶ್ವಾನ

Japanese Man Becomes Dog: ಈ ಫೋಟೋದಲ್ಲಿ ಕಾಣುತ್ತಿರುವುದು ನಾಯಿಯೂ ಅಲ್ಲ, ಗೊಂಬೆಯೂ ಅಲ್ಲ. ಜಪಾನ್‌ನ ವ್ಯಕ್ತಿ ಟೋಕೋ. ಕೃತಿಯಲ್ಲೂ ಶ್ವಾನದಂತೆ ಆಡುತ್ತಾರೆ.

VISTARANEWS.COM


on

japanese man becomes dog
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಟೋಕಿಯೋ: ನಮ್ಮಲ್ಲಿ ದೇಹದ ಅಂಗಾಂಗಗಳ ಆಕಾರವನ್ನು ಬದಲಿಸಿಕೊಳ್ಳುವ ಜನರು ಅನೇಕರಿದ್ದಾರೆ. ಮೂಗು, ತುಟಿ, ಕೆನ್ನೆ, ಗಲ್ಲ, ಸ್ತನದ ಆಕಾರ ಮಾರ್ಪಾಡು ಸರ್ಜರಿ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಅದಕ್ಕೂ ಮಿಗಿಲಾಗಿ ಕೆಲವರಂತೂ ಇಡೀ ಮುಖ, ದೇಹವನ್ನೇ ಮಾರ್ಪಾಡು ಮಾಡಿಕೊಂಡಿದ್ದರ ಬಗ್ಗೆಯೂ ಓದಿದ್ದೇವೆ. ಆದರೆ ಜಪಾನ್‌ನ ಈ ವ್ಯಕ್ತಿ ಎಲ್ಲರಿಗಿಂತ ವಿಭಿನ್ನ. ತಾವು ನಾಯಿಯಾಗಲು ಅಥವಾ ನಾಯಿಯಂತೆ ಕಾಣಲು (Japanese Man Becomes Dog) ಬರೋಬ್ಬರಿ 2 ಮಿಲಿಯ್‌ ಯೆನ್‌( 12 ಲಕ್ಷ ರೂಪಾಯಿ) ಖರ್ಚು ಮಾಡಿದ್ದಾರೆ. ಬಳಿಕ ತಾವು ಥೇಟ್‌ ಶ್ವಾನದಂತೆ ಕಾಣುವ ಫೋಟೋವನ್ನು ಟ್ವಿಟರ್‌ ಅಕೌಂಟ್‌ @toco_eevee ನಲ್ಲಿ ಪೋಸ್ಟ್‌ ಮಾಡಿಕೊಂಡಿದ್ದಾರೆ. ಅದನ್ನು ನೋಡಿದ ನೆಟ್ಟಿಗರು ದಂಗುಬಡಿದಿದ್ದಾರೆ !

ಇದು ಯಾರಿಗಾದರೂ ವಿಚಿತ್ರ ಅನ್ನಿಸುವ ವಿಷಯವೇ ಹೌದು. ವ್ಯಕ್ತಿಯ ಹೆಸರು ಟೋಕೋ. ಇವರಿಗೆ ತಾವು ನಾಯಿಯಂತೆ ಕಾಣಿಸಬೇಕು. ಅದರಂತೆ ವರ್ತಿಸಬೇಕು ಎಂಬುದು ಬಹುದೊಡ್ಡ ಆಸೆ. ಆದರೆ ಇಲ್ಲೊಂದು ಸಣ್ಣ ಟ್ವಿಸ್ಟ್‌ ಎಂದರೆ ಟೋಕೋ ಅದಕ್ಕಾಗಿ ಯಾವುದೇ ಸರ್ಜರಿಗೆ ಒಳಗಾಗಿಲ್ಲ. ವೈದ್ಯಕೀಯ ಚಿಕಿತ್ಸೆಯನ್ನೂ ಪಡೆದುಕೊಂಡಿಲ್ಲ. ಬದಲಿಗೆ ಜೆಪ್ಪೆಟ್‌ ಎಂಬ ಒಂದು ಪ್ರೊಫೆಶನಲ್‌ ಏಜೆನ್ಸಿ ಸಹಾಯದಿಂದ ಶ್ವಾನವಾಗಿ ಬದಲಾಗಿದ್ದಾರೆ. ಜೆಪ್ಪೆಟ್‌ ಎಂಬುದು ಮನರಂಜನೆ, ಚಲನಚಿತ್ರ, ಜಾಹೀರಾತು ಕ್ಷೇತ್ರಗಳಿಗೆ, ಅವರಿಗೆ ಅಗತ್ಯವಿರುವ ವಿನ್ಯಾಸದ ವೇಷಭೂಷಣಗಳು, ಶಿಲ್ಪಾಕೃತಿಗಳನ್ನು ಒದಗಿಸುವ ಸಂಸ್ಥೆ. ಹಲವು ಟಿವಿ ಕಾರ್ಯಕ್ರಮಗಳಿಗೂ ವಿಶೇಷ ಕಾಸ್ಟ್ಯೂಮ್‌ಗಳನ್ನು ಇದು ನೀಡುತ್ತದೆ. ಇದೇ ಜಿಪ್ಪೆಟ್‌ ಟೋಕೋ ಆಸೆಯನ್ನೂ ನೆರವೇರಿಸಿಕೊಟ್ಟಿದೆ.

ಇದನ್ನೂ ಓದಿ: ಪ್ರೀತಿಯ ಶ್ವಾನದ ಜತೆಗೊಂದು ಹ್ಯಾಪಿ ಜರ್ನಿ ..!

ಟೋಕೋಗೆ ತಾವು ಶ್ವಾನದಂತೆ ಕಾಣಬೇಕು ಎಂಬುದು ಒಂದು ಆಸೆಯಾಗಿದ್ದರೆ, ಕೋಲಿ ತಳಿಯ ನಾಯಿಯಂತೇ ಕಾಣಿಸಬೇಕು ಎಂಬುದು ಮತ್ತೊಂದು ಬಯಕೆ. ಹೀಗಾಗಿ ಜೆಪ್ಪೆಟ್‌ ಕೋಲಿ ತಳಿ ಶ್ವಾನಗಳಿಗೆ ಚರ್ಮ, ಕಾಲು, ಮುಖ, ಬಾಲವೆಲ್ಲ ಹೇಗಿರುತ್ತದೆಯೋ ಯಥಾಪ್ರಕಾರವಾಗಿಯೇ ಕಾಸ್ಟ್ಯೂಮ್‌ ಡಿಸೈನ್‌ ಮಾಡಿ ಕೊಟ್ಟಿತ್ತು. ಈ ಕಾಸ್ಟ್ಯೂಮ್‌ ತಯಾರಿಸಲು 40 ದಿನ ತೆಗೆದುಕೊಂಡಿದೆ. ಇದರ ಬೆಲೆ ಬರೋಬ್ಬರಿ 12 ಲಕ್ಷ ರೂಪಾಯಿ. ಜಪಾನ್‌ ಕರೆನ್ಸಿ ಯೆನ್‌ನಲ್ಲಿ ಹೇಳುವುದಾರೆ 2 ಮಿಲಿಯನ್‌ ಯೆನ್‌.

ಟೋಕೋ ತನ್ನ ಆಸೆಯ ಬಗ್ಗೆ ಮಾತನಾಡಿ, ನಾನು ಕೋಲಿ ನನ್ನ ನೆಚ್ಚಿನ ತಳಿ. ಹಾಗಾಗಿ ಇದನ್ನೆ ಆಯ್ಕೆ ಮಾಡಿಕೊಂಡೆ. ಇನ್ನು ನಾಯಿಯ ಕಾಸ್ಟ್ಯೂಮ್‌ ಹಾಕಿಕೊಂಡಾಗ ನನ್ನ ಕೃತಿ ನಾಜೂಕಾಗಿ ಇರಬೇಕು. ನಾನು ಮಾನಸಿಕವಾಗಿಯೂ ಶ್ವಾನವೇ ಆಗಬೇಕು. ಚೂರೇಚೂರು ಅತಿರೇಕ ವರ್ತನೆ ಮಾಡಿದರೂ ವೇಷಕ್ಕೂ-ಕೃತಿಗೂ ಸಂಬಂಧವಿಲ್ಲ ಎನ್ನಿಸುತ್ತದೆ. ನಾಯಿಯ ವೇಷ ಹಾಕಿದಾಗ ನಾನು ಮನುಷ್ಯ ಎಂಬುದನ್ನೇ ಸಂಪೂರ್ಣವಾಗಿ ಮರೆಯಬೇಕು ಎಂದು ಹೇಳಿದ್ದಾರೆ ಎಂದು ಜಪಾನ್‌ನ ಮಾಧ್ಯಮವೊಂದು ವರದಿ ಮಾಡಿದೆ. ಇನ್ನು ಟೋಕೋ ಸ್ವಂತ ಯೂಟ್ಯೂಬ್‌ ಚಾನೆಲ್‌ ಹೊಂದಿದ್ದು, ಅದರಲ್ಲೂ ವಿಡಿಯೋಗಳನ್ನು ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: Viral Video: ಪತ್ನಿಗಾಗಿ 90 ಸಾವಿರ ರೂ. ಮೌಲ್ಯದ ಹೊಸ ಸ್ಕೂಟರ್‌ ಖರೀದಿಸಿದ ಭಿಕ್ಷುಕ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ವಿದೇಶ

Google Map: ಗೂಗಲ್ ಮ್ಯಾಪ್‌‌ನಲ್ಲಿ ಕೇಳುವ ಧ್ವನಿ ಯಾರದಿರಬಹುದೆಂದು ಎಂದಾದರೂ ಯೋಚಿಸಿದ್ದೀರಾ?

ಗೂಗಲ್ ಮ್ಯಾಪ್ (Google Map) ಮೂಲಕ ಪ್ರಪಂಚದಾದ್ಯಂತದ ಜನರಿಗೆ ಮಾರ್ಗದರ್ಶನ ನೀಡುತ್ತಿರುವುದು ಆಸ್ಟ್ರೇಲಿಯನ್ ಮಹಿಳೆ. ಇದಕ್ಕಾಗಿ ಅವರು 2002ರಲ್ಲಿ 50 ಗಂಟೆಗಳ ಆಡಿಯೋ ರೆಕಾರ್ಡ್ ಮಾಡಿದ್ದರು. ಅವರ ಉಚ್ಛಾರಣೆ ಸ್ಪಷ್ಟವಾಗಿದೆ ಮತ್ತು ಕೇಳಲು ಹಿತಕರವಾಗಿದೆ ಎಂದು ಗೂಗಲ್ ಅವರನ್ನು ಆಯ್ಕೆ ಮಾಡಿತು. ಆ ಮಹಿಳೆ ಯಾರು, ಅವರು ಬೆಳೆದು ಬಂದ ಹಾದಿ ಹೇಗಿತ್ತು ಎನ್ನುವ ಕುರಿತು ಇಲ್ಲಿದೆ ಮಾಹಿತಿ.

VISTARANEWS.COM


on

By

Google Map
Koo

ಬಹುತೇಕ ಮಂದಿ ಇಂದು ಗೂಗಲ್ ಮ್ಯಾಪ್ (Google Map) ಬಳಸುತ್ತಿದ್ದಾರೆ. ಇದರಲ್ಲಿ ಕೇಳುವ ಧ್ವನಿಯನ್ನು ಆಲಿಸಿ ತಮಗೆ ಬೇಕಾದ ಸ್ಥಾನವನ್ನು ತಲುಪುತ್ತಿದ್ದಾರೆ. ಈ ಧ್ವನಿ ಆಸ್ಟ್ರೇಲಿಯಾದ ಮಹಿಳೆಯೊಬ್ಬರದ್ದು (Australian woman). ತಮ್ಮ ಧ್ವನಿಯಿಂದಲೇ (voice) ಇಂದು ಪ್ರಪಂಚದಾದ್ಯಂತದ ಜನರನ್ನು ತಲುಪಿದ್ದಾರೆ ಆಸ್ಟ್ರೇಲಿಯಾದ ಕರೆನ್ ಜಾಕೋಬ್ಸೆನ್.

ಅಂತಾರಾಷ್ಟ್ರೀಯ ಕನ್ಸರ್ಟ್ ಕಲಾವಿದ, ಗೀತರಚನೆಕಾರ ಮತ್ತು ವೃತ್ತಿಪರ ಧ್ವನಿ ನೀಡುವ ಕಲಾವಿದೆ ಕರೆನ್ ಜಾಕೋಬ್ಸೆನ್ ಅವರು ಜಿಪಿಎಸ್ ಗಾಗಿ ಧ್ವನಿ ನೀಡಿದ ಬಳಿಕ ಪ್ರಪಂಚದಾದ್ಯಂತ ಮನೆ ಮಾತಾದರು. ಅವರ ಧ್ವನಿಯು ವಿಶಿಷ್ಟವಾದ ಪಾಪ್ ಸಂಸ್ಕೃತಿಯ ಸ್ಥಾನಮಾನಕ್ಕೆ ಕಾರಣವಾಯಿತು.

ವಿಶ್ವದಾದ್ಯಂತ ಒಂದು ಬಿಲಿಯನ್ ಜಿಪಿಎಸ್ ಮತ್ತು ಸ್ಮಾರ್ಟ್‌ಫೋನ್ ಸಾಧನಗಳಲ್ಲಿ, ‘ಸಿರಿ’ಯ ಮೂಲ ಆಸ್ಸೀ (Aussie) ಧ್ವನಿಯನ್ನು ಒಳಗೊಂಡಂತೆ ಅವರು ಎಲ್ಲಿಗೆ ಹೋಗಬೇಕು,ಪ್ರತಿದಿನ ಏನು ಮಾಡಬೇಕೆಂದು ನಮಗೆ ತಿಳಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.

Google Map


ಭವಿಷ್ಯದ ಕನಸು ಕಂಡ ಏಳು ವರ್ಷದ ಬಾಲಕಿ

1970ರ ದಶಕದ ಅಂತ್ಯದ ವೇಳೆಗೆ ಏಳು ವರ್ಷದ ಕರೆನ್ ಜಾಕೋಬ್ಸೆನ್ ದೂರದರ್ಶನದಲ್ಲಿ ಒಲಿವಿಯಾ ನ್ಯೂಟನ್ ಜಾನ್ ಅವರನ್ನು ನೋಡಿ ಮುಂದೆ ತಾನು ಜೀವನದಲ್ಲಿ ಏನು ಮಾಡಬೇಕು ಎಂದು ನಿರ್ಧರಿಸಿದರು. ವೃತ್ತಿಪರ ಗಾಯಕನಾಗಲು ಅಮೆರಿಕಕ್ಕೆ ತೆರಳಿದರು.

ಬ್ರಿಸ್ಬೇನ್‌ನಲ್ಲಿ ವೃತ್ತಿಜೀವನ ಪ್ರಾರಂಭ

ಕರೆನ್ ಬ್ರಿಸ್ಬೇನ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಪ್ರಶಸ್ತಿ ವಿಜೇತ ಗಾಯಕರು, ಗೀತರಚನೆಕಾರರೊಂದಿಗೆ ವೇದಿಕೆ ಹಂಚಿಕೊಂಡ ಜಾಕೋಬ್ಸೆನ್ ಪ್ರಮುಖ ಕ್ರೀಡಾಕೂಟಗಳಲ್ಲಿ ರಾಷ್ಟ್ರಗೀತೆ ಪ್ರದರ್ಶನಗಳನ್ನು ನೀಡಿದರು.

ಎಲ್ಲವನ್ನೂ ಬದಲಾಯಿಸಿದ ಕರೆ

ನ್ಯೂಯಾರ್ಕ್ ನಗರದಲ್ಲಿ ಕರೆನ್ ತಮ್ಮ ಧ್ವನಿಯಿಂದ ಧ್ವನಿ ವ್ಯವಸ್ಥೆಗೆ ಪಠ್ಯವನ್ನು ರೆಕಾರ್ಡ್ ಮಾಡಲು ಆಡಿಷನ್ ಮಾಡಿದರು. ಅದು ತಮ್ಮನ್ನು ಜಗತ್ತಿನ ಮೂಲೆ ಮೂಲೆಗೆ ಕೊಂಡೊಯ್ಯುತ್ತದೆ ಎಂಬುದನ್ನು ಅವರು ಊಹಿಸಿರಲಿಲ್ಲ.
ಕರೆನ್ ಮೊದಲ ಬಾರಿಗೆ 2002ರಲ್ಲಿ ಜಿಪಿಎಸ್ ಗಾಗಿ 50 ಗಂಟೆಗಳ ಆಡಿಯೋ ರೆಕಾರ್ಡ್ ಮಾಡಿದರು. ತಮ್ಮ ಆಸ್ಟ್ರೇಲಿಯನ್ ಉಚ್ಛಾರಣೆ ಸ್ಪಷ್ಟ ವಾಗಿದೆ ಮತ್ತು ಕೇಳಲು ಆರಾಮದಾಯಕವಾಗಿದೆ ಎಂದು ಗೂಗಲ್ ಅವರನ್ನು ಆಯ್ಕೆ ಮಾಡಿತು.

ಆ ಒಂದು ವಾಯ್ಸ್-ಓವರ್ ಬುಕಿಂಗ್‌ನಿಂದ ಅವರು ಸಬಲೀಕರಣ ಬ್ರ್ಯಾಂಡ್ ಜಿಪಿಎಸ್ ಗರ್ಲ್ ಅನ್ನು ರಚಿಸಿದರು. ಜೀವನ ಮತ್ತು ವ್ಯವಹಾರಕ್ಕೆ ನಿರ್ದೇಶನ ನೀಡುವ, ಮರು ಲೆಕ್ಕಾಚಾರ ಪ್ರಕ್ರಿಯೆಗಾಗಿ ಐದು ದಿಕ್ಕುಗಳೊಂದಿಗೆ ಬದಲಾವಣೆಯನ್ನು ಶಕ್ತಿಯುತವಾಗಿ ನ್ಯಾವಿಗೇಟ್ ಮಾಡುವುದು ಹೇಗೆ ಎಂಬುದನ್ನು ತೋರಿಸುತ್ತಾರೆ.


ಎರಡು ಆಲ್ಬಮ್‌ ಬಿಡುಗಡೆ

ಕರೆನ್ ತಮ್ಮದೇ ಸ್ವಂತ ಬ್ಯಾನರ್ ನಡಿ 2024 ರಲ್ಲಿ ಎರಡು ಆಲ್ಬಮ್‌ಗಳೊಂದಿಗೆ 12 ರೆಕಾರ್ಡ್‌ಗಳನ್ನು ಬಿಡುಗಡೆ ಮಾಡಿದ್ದಾರೆ. ಅವರ ಹಾಡುಗಳನ್ನು ಯುಎಸ್ ನೆಟ್‌ವರ್ಕ್ ಟೆಲಿವಿಷನ್‌ಗೆ ಪರವಾನಗಿ ನೀಡಲಾಗಿದೆ.

2023ರಲ್ಲಿ ಮಿಸೋಜಿನಿ ಓಪಸ್ ಪಾಪ್ ಆರ್ಕೆಸ್ಟ್ರಾದಲ್ಲಿ ಕರೆನ್‌ ಏಕವ್ಯಕ್ತಿ ವಾದಕರಾಗಿ ಕ್ವೀನ್ಸ್‌ಲ್ಯಾಂಡ್ ಸಿಂಫನಿ ಆರ್ಕೆಸ್ಟ್ರಾದ ಸಂಗೀತಗಾರರೊಂದಿಗೆ ಸಹ-ಕಮಿಷನಿಂಗ್ ಪಾಲುದಾರ ಎಂಇಸಿಸಿಯ ಆಡಿಟೋರಿಯಂನಲ್ಲಿ ಪ್ರದರ್ಶಿಸಿದರು.

ಕರೆನ್ ಅವರು ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಜೂಲಿಯಾ ಗಿಲ್ಲಾರ್ಡ್ ಅವರ ಸಾಂಪ್ರದಾಯಿಕ ಸ್ತ್ರೀದ್ವೇಷದ ಭಾಷಣವನ್ನು ಪದವನ್ನು ವಿಭಿನ್ನ ಸಂಗೀತ ಶೈಲಿಗಳಲ್ಲಿ 18 ಚಲನೆಗಳಲ್ಲಿ ಹೊಂದಿಸಿದ್ದಾರೆ. ಇದನ್ನು ವುಡ್‌ಫೋರ್ಡ್ ಫೋಕ್ ಫೆಸ್ಟಿವಲ್‌ನಲ್ಲಿ ಪ್ರದರ್ಶಿಸಲಾಯಿತು ಮತ್ತು ಆಸ್ಟ್ರೇಲಿಯನ್ ಇಂಡಿಪೆಂಡೆಂಟ್ ರೆಕಾರ್ಡ್ (AIR) ಅವಾರ್ಡ್ಸ್ 2024 ರಲ್ಲಿ ಅತ್ಯುತ್ತಮ ಸ್ವತಂತ್ರ ಶಾಸ್ತ್ರೀಯ ಆಲ್ಬಮ್‌ಗೆ ನಾಮನಿರ್ದೇಶನಗೊಂಡ ಪೂರ್ಣ ಉದ್ದದ ಪರಿಕಲ್ಪನೆಯ ಆಲ್ಬಂ ಆಗಿ ಬಿಡುಗಡೆಯಾಯಿತು.

ಹಲವಾರು ಕಾರ್ಯಕ್ರಮಗಳಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡಿರುವ ಅವರು ಎರಡು ಜರ್ನಲ್ ಶೈಲಿಯ ಪುಸ್ತಕಗಳನ್ನು ಬರೆದಿದ್ದಾರೆ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಅನಾಥಾಶ್ರಮದ ಹುಡುಗಿಯು ಅಮೇರಿಕನ್ ಕಂಪೆನಿಯ ಸಿಇಒ ಆದ ಕಥೆ

2022 ರಿಂದ ವಿಟ್ಸಂಡೆಸ್ ಸಾಂಗ್ ರೈಟರ್ ಫೆಸ್ಟಿವಲ್‌ನ ಸಂಸ್ಥಾಪಕರಾಗಿರುವ ಕರೆನ್ ಸದ್ಯ ಈ ಪ್ರದೇಶದಲ್ಲಿ ಕಲೆ ಮತ್ತು ಸಂಸ್ಕೃತಿಯನ್ನು ಅಭಿವೃದ್ಧಿಪಡಿಸುವಲ್ಲಿ ಸಕ್ರಿಯರಾಗಿದ್ದಾರೆ. ಇದು ಮುಂದಿನ ಪೀಳಿಗೆಯ ಗೀತರಚನೆಕಾರರಿಗೆ ಅವಕಾಶಗಳನ್ನು ಒದಗಿಸುವ ವಾರ್ಷಿಕ ಉತ್ಸವವನ್ನು ಏರ್ಪಡಿಸುವ ಯೋಜನೆಯನ್ನು ಹೊಂದಿದೆ.

Continue Reading

ವಿದೇಶ

Lenovo Company: ಹೊಟೇಲ್ ಲಾಬಿಯಲ್ಲಿ ಮೂತ್ರ ವಿಸರ್ಜನೆ ಮಾಡಿದ ಸೇಲ್ಸ್ ಮ್ಯಾನ್ ವಜಾ! ದಾವೆ ಹೂಡಿದ ನೌಕರ!

ಲೆನೆವೊ ಕಂಪ್ಯೂಟರ್ ಮಾರಾಟಗಾರನೊಬ್ಬ (Lenovo Company) ಟೈಮ್ಸ್ ಸ್ಕ್ವೇರ್ ಹೊಟೇಲ್ ಲಾಬಿಯಲ್ಲಿ ಮೂತ್ರ ಮಾಡಿದ್ದಾನೆ ಎಂಬ ದೂರಿನ ಮೇರೆಗೆ ಕಂಪನಿ ಆತನನ್ನು ಕೆಲಸದಿಂದ ವಜಾಗೊಳಿಸಿದೆ. ಈ ಹಿನ್ನೆಲೆಯಲ್ಲಿ ನ್ಯೂಯಾರ್ಕ್ ಸ್ಟೇಟ್ ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಸಲ್ಲಿಸಿದ ಮೊಕದ್ದಮೆಯ ಪ್ರಕಾರ 66 ವರ್ಷದ ರಿಚರ್ಡ್ ಬೆಕರ್ ಎಂಬವರು ಕಂಪೆನಿಯಿಂದ ಕನಿಷ್ಠ 1.5 ಮಿಲಿಯನ್‌ ಡಾಲರ್ ಪರಿಹಾರ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

VISTARANEWS.COM


on

By

Lenovo Company
Koo

ನ್ಯೂಯಾರ್ಕ್: ಹೊಟೇಲ್ ಲಾಬಿಯಲ್ಲಿ (Hotel Lobby) ಮೂತ್ರ ವಿಸರ್ಜನೆ ಮಾಡಿದ್ದಕ್ಕಾಗಿ ಸೇಲ್ಸ್‌ಮ್ಯಾನ್ ಹುದ್ದೆಯಿಂದ ವಜಾಗೊಳಿಸಿದ ಚೀನಾದ (china) ಕಂಪ್ಯೂಟರ್ ದೈತ್ಯ, ಅಮೆರಿಕನ್ (America) ಅಂಗಸಂಸ್ಥೆಯಾದ ಲೆನೊವೊ ಕಂಪನಿ (Lenovo Company) ವಿರುದ್ಧ 1.5 ಮಿಲಿಯನ್ ಡಾಲರ್ ಪರಿಹಾರಕ್ಕೆ ಒತ್ತಾಯಿಸಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ.

ಲೆನೊವೊ ಕಂಪ್ಯೂಟರ್ ಮಾರಾಟಗಾರರೊಬ್ಬರು ಟೈಮ್ಸ್ ಸ್ಕ್ವೇರ್ ಹೊಟೇಲ್ ಲಾಬಿಯಲ್ಲಿ ಮೂತ್ರ ಮಾಡಿದ್ದಾನೆ ಎಂಬ ದೂರಿನ ಮೇರೆಗೆ ಕಂಪೆನಿ ಆತನನ್ನು ಕೆಲಸದಿಂದ ವಜಾಗೊಳಿಸಿದೆ. ನ್ಯೂಯಾರ್ಕ್ ಸ್ಟೇಟ್ ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಸಲ್ಲಿಸಿದ ಮೊಕದ್ದಮೆಯ ಪ್ರಕಾರ 66 ವರ್ಷದ ರಿಚರ್ಡ್ ಬೆಕರ್ ಎಂಬವರು ಕನಿಷ್ಠ 1.5 ಮಿಲಿಯನ್‌ ಡಾಲರ್ ಪರಿಹಾರ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

ಕಂಪನಿಯು ನ್ಯೂಯಾರ್ಕ್ ನಗರದ ಮಾನವ ಹಕ್ಕುಗಳ ಕಾನೂನುಗಳನ್ನು ಉಲ್ಲಂಘಿಸಿ ಅಂಗವೈಕಲ್ಯದ ಆಧಾರದ ಮೇಲೆ ತಾರತಮ್ಯವನ್ನು ಮಾಡಿದೆ ಎಂದು ಅವರು ಆರೋಪಿಸಿದ್ದಾರೆ. ಮೊಕದ್ದಮೆಯ ಪ್ರಕಾರ, ಬೆಕರ್ ಫೆಬ್ರವರಿಯಲ್ಲಿ ಕೆಲಸದ ನಡುವೆ ಭೋಜನದ ಬಳಿಕ ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನ ಬಳಿಯ ತನ್ನ ಹೊಟೇಲ್ ಗೆ ಹಿಂದಿರುಗುತ್ತಿದ್ದಾಗ ಅವರು ಅನಿವಾರ್ಯ ಕಾರಣದಿಂದ ಮುಖ್ಯ ಲಾಬಿಯಿಂದ ಪ್ರತ್ಯೇಕ ಮಹಡಿಯಲ್ಲಿರುವ ವೆಸ್ಟಿಬುಲ್‌ನಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾರೆ.


ಸಹೋದ್ಯೋಗಿಯೊಬ್ಬರು ಬೆಕರ್ ಮೂತ್ರ ವಿಸರ್ಜಿಸುತ್ತಿರುವುದನ್ನು ಗಮನಿಸಿ ಸ್ಪಷ್ಟವಾದ ದ್ವೇಷ ಮತ್ತು ದುರುದ್ದೇಶದ ಕಾರಣದಿಂದ ಅವರ ವಿರುದ್ಧ ಕಂಪನಿಗೆ ದೂರು ನೀಡಿದ್ದಾರೆ. ಅವರ ನಡವಳಿಕೆಯು ಯಾರಿಗೂ ಯಾವುದೇ ಹಾನಿಯನ್ನುಂಟು ಮಾಡದಿದ್ದರೂ ಸಹ ತಕ್ಷಣವೇ ಹೆಚ್ ಆರ್‌ಗೆ ದೂರು ನೀಡಿ ಕೆಲಸದಿಂದ ವಜಾಗೊಳ್ಳಲು ಕಾರಣವಾಗಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: IBM: ಐಬಿಎಂನಲ್ಲಿ ಮತ್ತೊಂದು ಸುತ್ತಿನ ಉದ್ಯೋಗ ಕಡಿತ; ಚೀನಾದ ಕಚೇರಿ ಬೆಂಗಳೂರಿಗೆ ಸ್ಥಳಾಂತರ

ಬೆಕರ್ ಅವರು 2016ರಿಂದ ದೀರ್ಘಕಾಲದ ಮೂತ್ರಕೋಶದ ತೊಂದರೆಯನ್ನು ಎದುರಿಸುತ್ತಿದ್ದಾರೆ. ಮೂತ್ರಶಾಸ್ತ್ರಜ್ಞರ ಬಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲೆನೊವೊ ಸಹೋದ್ಯೋಗಿಗಳು ಮತ್ತು ವ್ಯವಸ್ಥಾಪಕರು ಅವರ ಸ್ಥಿತಿಯ ಬಗ್ಗೆ ತಿಳಿದಿದ್ದರು ಎಂದು ನ್ಯಾಯಾಲಯದಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಯಾವುದೇ ಸಹಾನುಭೂತಿ, ಕಾನೂನಿನ ಅನುಸರಣೆಯನ್ನು ಮಾಡದೆ ಘಟನೆಯ ಕೆಲವು ದಿನಗಳ ಬಳಿಕ ಕೆಲಸದಿಂದ ವಜಾಗೊಳಿಸಲಾಯಿತು. ಬಳಿಕ ತಾನು ನಿರುದ್ಯೋಗಿಯಾಗಿರುವುದಾಗಿ ಆತ ತಿಳಿಸಿದ್ದಾನೆ. ಈ ಬಗ್ಗೆ ಕಂಪೆನಿ ಮಾತ್ರ ಇದುವರೆಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

Continue Reading

ವಿದೇಶ

IBM: ಐಬಿಎಂನಲ್ಲಿ ಮತ್ತೊಂದು ಸುತ್ತಿನ ಉದ್ಯೋಗ ಕಡಿತ; ಚೀನಾದ ಕಚೇರಿ ಬೆಂಗಳೂರಿಗೆ ಸ್ಥಳಾಂತರ

IBM: ಅಮೆರಿಕ ಮೂಲದ ಐಟಿ ದಿಗ್ಗಜ ಸಂಸ್ಥೆ ಇಂಟರ್‌ನ್ಯಾಷನಲ್ ಬಿಸಿನೆಸ್ ಮಷಿನ್ಸ್ ಚೀನಾದ ಪ್ರಮುಖ ಸಂಶೋಧನಾ ವಿಭಾಗವನ್ನು ಮುಚ್ಚಲು ನಿರ್ಧರಿಸಿದೆ. ಇದರಿಂದ 1,000ಕ್ಕೂ ಮಂದಿ ತಮ್ಮ ಉದ್ಯೋಗಗಳನ್ನು ಕಳೆದುಕೊಳ್ಳಲಿದ್ದಾರೆ. ಕಂಪನಿಯು ಬೆಂಗಳೂರಿನಲ್ಲಿ ಕಚೇರಿ ತೆರೆಯಲಿದೆ ಎಂದು ಮೂಲಗಳು ತಿಳಿಸಿವೆ.

VISTARANEWS.COM


on

IBM
Koo

ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ಅಮೆರಿಕ ಮೂಲದ ಐಟಿ ದಿಗ್ಗಜ ಸಂಸ್ಥೆ ಇಂಟರ್‌ನ್ಯಾಷನಲ್ ಬಿಸಿನೆಸ್ ಮಷಿನ್ಸ್ (IBM) ಚೀನಾದ ಪ್ರಮುಖ ಸಂಶೋಧನಾ ವಿಭಾಗವನ್ನು ಮುಚ್ಚಲು ನಿರ್ಧರಿಸಿದೆ. ಇದರಿಂದ 1,000ಕ್ಕೂ ಮಂದಿ ತಮ್ಮ ಉದ್ಯೋಗಗಳನ್ನು ಕಳೆದುಕೊಳ್ಳಲಿದ್ದಾರೆ (Layoffs). ಕಂಪನಿಯು ಬೆಂಗಳೂರಿನಲ್ಲಿ ಕಚೇರಿ ತೆರೆಯಲಿದೆ ಎಂದು ಮೂಲಗಳು ತಿಳಿಸಿವೆ.

ಐಬಿಎಂ ಚೀನಾದಲ್ಲಿರುವ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಟೆಸ್ಟಿಂಗ್‌ ಶಾಖೆಗಳನ್ನು ಮುಚ್ಚಲು ನಿರ್ಧರಿಸಿದೆ ಎಂದು ವರದಿಯೊಂದು ಹೇಳಿದೆ. ಆರ್ಥಿಕ ಕುಸಿತದ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಜತೆಗೆ ಚೀನಾ ಸ್ಥಳೀಯ ಕಂಪನಿಗಳ ಪರವಾಗಿದೆ ಎಂಬ ಆತಂಕದಿಂದಾಗಿ ವಿದೇಶಿ ಹೂಡಿಕೆ ಭಾಗಶಃ ನಿಧಾನಗೊಂಡಿರುವುದು ಕೂಡ ಕಚೇರಿ ಸ್ಥಳಾಂತರಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ಕಚೇರಿ ತೆರೆಯುವ ಸಾಧ್ಯತೆ ಇದೆ. ವಿಶ್ವದ ಅತಿದೊಡ್ಡ ತಂತ್ರಜ್ಞಾನ ಸೇವೆಗಳ ಕಂಪನಿಯಾದ ಐಬಿಎಂ ಸದ್ಯ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಉದ್ಯೋಗ ಕಡಿತ

ಐಬಿಎಂ ಕೆಲವು ತಿಂಗಳ ಹಿಂದೆಯೂ ಉದ್ಯೋಗ ಕಡಿತಗೊಳಿಸಿತ್ತು. ಮಾರ್ಕೆಟಿಂಗ್ ಮತ್ತು ಸಂವಹನ ವಿಭಾಗದಲ್ಲಿ ಉದ್ಯೋಗ ಕಡಿತಗೊಂಡಿತ್ತು. ಐಬಿಎಂನ ಮುಖ್ಯ ಸಂವಹನ ಅಧಿಕಾರಿ ಜೊನಾಥನ್ ಅಡಾಶೆಕ್ ಅವರು ಇಲಾಖೆಯ ಉದ್ಯೋಗಿಗಳೊಂದಿಗೆ ನಡೆಸಿದ ಸಭೆಯಲ್ಲಿ ವಜಾಗೊಳಿಸುವ ನಿರ್ಧಾರವನ್ನು ಪ್ರಕಟಿಸಿದ್ದರು. ಐಬಿಎಂ 3,900 ಜನರನ್ನು ಕೆಲಸದಿಂದ ತೆಗೆಯಲಿರುವುದಾಗಿ ಜನವರಿಯಲ್ಲಿ ಹೇಳಿತ್ತು. ಈ ಕಾರ್ಯದಿಂದ ಸಂಸ್ಥೆಗೆ 400 ಮಿಲಿಯನ್ ಡಾಲರ್ (33,12,92,00,000 ರೂ.) ಹಣ ಉಳಿತಾಯವಾಗಿದೆ ಎಂದು ಅಂದಾಜಿಸಲಾಗಿದೆ. ಈ ಹಣವನ್ನು ಪುನಾರಚನೆ ಕಾರ್ಯಗಳಿಗೆ ಬಳಸಲಾಗುವುದು ಎಂದು ಅಂದು ಐಬಿಎಂನ ಚೀಫ್ ಫೈನಾನ್ಷಿಯಲ್ ಆಫೀಸರ್ ಜೇಮ್ಸ್ ಕೆವನಾಘ್ ತಿಳಿಸಿದ್ದರು.

2022ರಿಂದ ಈಚೆಗೆ ವಿವಿಧ ಟೆಕ್ ಕಂಪನಿಗಳ ಬಹಳಷ್ಟು ಉದ್ಯೋಗಿಗಳು ಉದ್ಯೋಗ ಕಳೆದುಕೊಂಡಿದ್ದಾರೆ. ಈ ವರ್ಷ 204 ಟೆಕ್ ಕಂಪನಿಗಳು ಉದ್ಯೋಗ ಕಡಿತದ ನಿರ್ಧಾರ ಕೈಗೊಂಡಿವೆ. ಇದರಿಂದ 49,978 ಮಂದಿ ಟೆಕ್ಕಿಗಳು ಕೆಲಸ ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: Lays off: 200 ಉದ್ಯೋಗಿಗಳ ಹಬ್ಬದ ಖುಷಿ ಕಿತ್ತುಕೊಂಡ ಎಲ್‌&ಟಿ ಟೆಕ್ನಾಲಜಿ ಸರ್ವೀಸ್!

Continue Reading

ದೇಶ

Sunita Williams: ಸುನೀತಾ ವಿಲಿಯಮ್ಸ್‌ ಇಲ್ಲದೆಯೇ ಭೂಮಿಗೆ ಹಿಂದಿರುಗಲಿದೆ ಸ್ಟಾರ್‌ಲೈನರ್ ನೌಕೆ- 1 ಶತಕೋಟಿ ಡಾಲರ್‌ ನಷ್ಟ

Sunita Williams: ಇತ್ತೀಚಿನ ಬೆಳವಣಿಗೆಯು ಬೋಯಿಂಗ್‌ನ ಸಂಕಟವನ್ನು ಹೆಚ್ಚಿಸಿದೆ. ಹೀಗಾಗಿ ಇದು ಖಾಲಿಯಾಗಿ ಹಿಂದಿರುಗುತ್ತಿದ್ದು, ಇದರ ಅಂದಾಜು ನಷ್ಟವು 1 ಬಿಲಿಯನ್ ಡಾಲರ್ ಮೀರಿದೆ ಎಂದು CNBC ವರದಿ ಮಾಡಿದೆ. ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಈಗ ಐಎಸ್‌ಎಸ್‌ನಲ್ಲಿ ಆರು ತಿಂಗಳ ವಿಸ್ತೃತ ವಾಸ್ತವ್ಯದ ನಂತರ ಫೆಬ್ರವರಿ 2025 ರಲ್ಲಿ ಎಲೋನ್ ಮಸ್ಕ್‌ನ ಸ್ಪೇಸ್‌ಎಕ್ಸ್‌ನ ಕ್ರ್ಯೂ-9 ವಾಹನದಲ್ಲಿ ಹಿಂತಿರುಗುತ್ತಾರೆ. ಸ್ಟಾರ್‌ಲೈನರ್‌ನ ಥ್ರಸ್ಟರ್‌ಗಳೊಂದಿಗಿನ ಸಮಸ್ಯೆಗಳಿಂದಾಗಿ ಮೂಲ ಒಂಬತ್ತು ದಿನಗಳ ಪರೀಕ್ಷಾ ಹಾರಾಟವು ವಿಳಂಬವಾಗಿದೆ.

VISTARANEWS.COM


on

Sunita Williams
Koo

ವಾಷಿಂಗ್ಟನ್‌: ಭಾರತ ಮೂಲದ ವಿಶ್ವವಿಖ್ಯಾತ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ (Sunita Williams) ಅವರು ಮೂರನೇ ಬಾರಿಗೆ ಬಾಹ್ಯಾಕಾಶ ಯಾನ ಕೈಗೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಆದರೆ, ಸುನೀತಾ ವಿಲಿಯಮ್ಸ್‌ ಹಾಗೂ ಮತ್ತೊಬ್ಬ ಗಗನಯಾತ್ರಿ ಬುಚ್ ವಿಲ್ಮೋರ್ (Butch Wilmore) ತಾಂತ್ರಿಕ ದೋಷದಿಂದಾಗಿ ಬಾಹ್ಯಕಾಶದಲ್ಲೇ ಸಿಲುಕಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಇದೀಗ ಈ ಬಗ್ಗೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ(NASA) ಮಹತ್ವದ ಸುದ್ದಿಯೊಂದನ್ನು ಹೊರಹಾಕಿದ್ದು, ಈ ಇಬ್ಬರು ಗಗನಯಾತ್ರಿಗಳನ್ನ ಹೊತ್ತೊಯ್ದಿದ್ದ ಬೋಯಿಂಗ್‌ನ ಸ್ಟಾರ್‌ಲೈನರ್ ಕ್ಯಾಪ್ಸುಲ್ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ISS) ಖಾಲಿಯಾಗಿ ಹಿಂದಿರುಗುತ್ತದೆ ಎಂದು NASA ಶನಿವಾರ ಘೋಷಿಸಿದೆ.

ಇತ್ತೀಚಿನ ಬೆಳವಣಿಗೆಯು ಬೋಯಿಂಗ್‌ನ ಸಂಕಟವನ್ನು ಹೆಚ್ಚಿಸಿದೆ. ಹೀಗಾಗಿ ಇದು ಖಾಲಿಯಾಗಿ ಹಿಂದಿರುಗುತ್ತಿದ್ದು, ಇದರ ಅಂದಾಜು ನಷ್ಟವು 1 ಬಿಲಿಯನ್ ಡಾಲರ್ ಮೀರಿದೆ ಎಂದು CNBC ವರದಿ ಮಾಡಿದೆ. ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಈಗ ಐಎಸ್‌ಎಸ್‌ನಲ್ಲಿ ಆರು ತಿಂಗಳ ವಿಸ್ತೃತ ವಾಸ್ತವ್ಯದ ನಂತರ ಫೆಬ್ರವರಿ 2025 ರಲ್ಲಿ ಎಲೋನ್ ಮಸ್ಕ್‌ನ ಸ್ಪೇಸ್‌ಎಕ್ಸ್‌ನ ಕ್ರ್ಯೂ-9 ವಾಹನದಲ್ಲಿ ಹಿಂತಿರುಗುತ್ತಾರೆ. ಸ್ಟಾರ್‌ಲೈನರ್‌ನ ಥ್ರಸ್ಟರ್‌ಗಳೊಂದಿಗಿನ ಸಮಸ್ಯೆಗಳಿಂದಾಗಿ ಮೂಲ ಒಂಬತ್ತು ದಿನಗಳ ಪರೀಕ್ಷಾ ಹಾರಾಟವು ವಿಳಂಬವಾಗಿದೆ.

ಮುಂದಿನ ಫೆಬ್ರವರಿಯಲ್ಲಿ ಬುಚ್ ಮತ್ತು ಸುನಿತಾ ಕ್ರ್ಯೂ -9 ರೊಂದಿಗೆ ಹಿಂತಿರುಗುತ್ತಾರೆ ಮತ್ತು ಸ್ಟಾರ್ಲೈನರ್ ಸಿಬ್ಬಂದಿಯಿಲ್ಲದೆ ಹಿಂತಿರುಗುತ್ತಾರೆ ಎಂದು ನಾಸಾ ನಿರ್ವಾಹಕ ಬಿಲ್ ನೆಲ್ಸನ್ ಹೇಳಿದ್ದಾರೆ. ಬೋಯಿಂಗ್ ಬಾಹ್ಯಾಕಾಶ ನೌಕೆಯ ಥ್ರಸ್ಟರ್ ಅಸಮರ್ಪಕ ಕಾರ್ಯಗಳಿಂದ ಸುನಿತಾ ವಿಲಿಯಮ್ಸ್‌ ಮತ್ತು ಬುಚ್‌ ಹಿಂತಿರುಗುವುದು ವಿಳಂಬವಾಗಿದೆ ಎಂದು ಅವರು ಹೇಳಿದರು.

ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರು ಬೋಯಿಂಗ್‌ ಸಂಸ್ಥೆಯ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನವನ್ನು ಜೂನ್‌ 5ರಂದು ಆರಂಭಿಸಿದ್ದರು. ಜೂನ್‌ 6ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ಸ್ಟೇಷನ್‌ ತಲುಪಿದ್ದ ಅವರು ಒಂದು ವಾರ ಸಂಶೋಧನೆ ನಡೆಸಿ ವಾಪಸಾಗಬೇಕಿತ್ತು. ಆದರೆ, ತಾಂತ್ರಿಕ ಕಾರಣದಿಂದ ಅವರು ಅಲ್ಲಿಯೇ ಸಿಲುಕಿದ್ದಾರೆ.

ಸುನೀತಾ ವಿಲಿಯಮ್ಸ್‌ ಹಿನ್ನೆಲೆ

ಭಾರತದ ಮೂಲದ ಡಾ. ದೀಪಕ್‌ ಪಾಂಡ್ಯಾ ಮತ್ತು ಬೋನಿ ಪಾಂಡ್ಯ ಪುತ್ರಿಯಾಗಿರುವ 59 ವರ್ಷದ ಸುನೀತಾ, ಬಾಹ್ಯಾಕಾಶಕ್ಕೆ ಹೋದ ಮೊದಲ ಮಹಿಳಾ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಮೊದಲ ಬಾರಿಗೆ 2006ರಲ್ಲಿ ಯಶಸ್ವಿ ಗಗನಯಾತ್ರೆ ಕೈಗೊಂಡಿದ್ದರು. ಇದಾದ ಬಳಿಕ 2012ರಲ್ಲಿ ಮತ್ತೆ ಗಗನಯಾತ್ರೆ ಕೈಗೊಂಡಿದ್ದರು. ಅವರು ಬಾಹ್ಯಾಕಾಶದಲ್ಲಿ ಬರೋಬ್ಬರಿ 322 ದಿನಗಳನ್ನು ಕಳೆದಿದ್ದಾರೆ. ಸುನೀತಾ ವಿಲಿಯಮ್ಸ್ ಅತೀ ಹೆಚ್ಚು ಬಾರಿ ಬಾಹ್ಯಾಕಾಶಕ್ಕೆ ಹಾರಿದ ಹಾಗೂ ಬಾಹ್ಯಾಕಾಶದಲ್ಲಿ ಅಧ್ಯಯನ ನಡೆಸಿದ ಮಹಿಳಾ ಗಗನ ಯಾತ್ರಿ ಎಂದೂ ಗುರುತಿಸಲ್ಪಡುತ್ತಿದ್ದಾರೆ.

ಇದುವರೆಗೆ ಸುನೀತಾ ವಿಲಿಯಮ್ಸ್ ಗರಿಷ್ಠ ಬಾಹ್ಯಾಕಾಶ ಪ್ರಯಾಣ ಮಾಡಿದ್ದಾರೆ. ಮಹತ್ವದ ಅಧ್ಯಯನಕ್ಕಾಗಿ ಮಂಗಳವಾರ ಮೂರನೇ ಬಾರಿ ಬಾಹ್ಯಾಕಾಶಕ್ಕೆ ಹಾರಲಿದ್ದ ಸುನೀತಾ ವಿಲಿಯಮ್ಸ್ ಎಲ್ಲ ತಯಾರಿ ಮಾಡಿಕೊಂಡಿದ್ದರು. ʼʼಕೊಂಚ ನರ್ವಸ್ ಆಗಿದ್ದೇನೆ. ಆದರೆ ಮತ್ತೆ ತವರಿಗೆ ಮರಳು ಅನುಭವವಾಗುತ್ತಿದೆ. ಬಾಹ್ಯಕಾಶವೇ ನನಗೆ ತವರಾಗಿದೆʼʼ ಎಂದು ಸುನೀತಾ ವಿಲಿಯಮ್ಸ್ ಹೇಳಿದ್ದರು.

Sunita Williams: ಮುಂದಿನ ವರ್ಷ ಫೆಬ್ರುವರಿಯಲ್ಲಿ ಭೂಮಿಗೆ ಮರಳಲಿದ್ದಾರೆ ಸುನೀತಾ ವಿಲಿಯಮ್ಸ್;‌ ನಾಸಾ ಘೋಷಣೆ

Continue Reading
Advertisement
Kodava Family Hockey Tournament Website Launched
ಕೊಡಗು1 ತಿಂಗಳು ago

Kodagu News : ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ವೈಬ್ ಸೈಟ್ ಲೋಕಾರ್ಪಣೆ

Bengaluru News
ಬೆಂಗಳೂರು1 ತಿಂಗಳು ago

Bengaluru News : ಮಾಡಲಿಂಗ್‌ನಲ್ಲಿ ಗಿನ್ನಿಸ್‌ ರೆಕಾರ್ಡ್‌ ಮಾಡಲು ಹೊರಟ ಹಳ್ಳಿಹೈದ

Dina Bhavishya
ಭವಿಷ್ಯ1 ತಿಂಗಳು ago

Dina Bhavishya : ಯಾವುದಾದರೂ ಪ್ರಸಂಗಗಳಿಂದ ನಿಮ್ಮ ಮೇಲೆ ಅಪವಾದ ಬರುವ ಸಾಧ್ಯತೆ ಎಚ್ಚರಿಕೆ ಇರಲಿ

Gadag News Father commits suicide by throwing three children into river
ಗದಗ1 ತಿಂಗಳು ago

Gadag News : ಮೂವರು ಮಕ್ಕಳನ್ನು ನದಿಗೆ ಎಸೆದು, ಆತ್ಮಹತ್ಯೆ ಮಾಡಿಕೊಂಡ ತಂದೆ!

Dina Bhavishya
ಭವಿಷ್ಯ1 ತಿಂಗಳು ago

Dina Bhavishya: ಪ್ರಯತ್ನದಲ್ಲಿ ನಂಬಿಕೆ ಇಟ್ಟು ಕಾರ್ಯದಲ್ಲಿ ಮುನ್ನುಗ್ಗಿ, ಯಶಸ್ಸು ಖಂಡಿತ

Dina Bhavishya
ಭವಿಷ್ಯ1 ತಿಂಗಳು ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗಲಿದೆ

Bengaluru airport
ಬೆಂಗಳೂರು1 ತಿಂಗಳು ago

Bengaluru Airport : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೈಗರ್‌ ವಿಂಗ್ಸ್‌; 2ನಲ್ಲಿ ಅತಿದೊಡ್ಡ ವರ್ಟಿಕಲ್‌ ಗಾರ್ಡನ್‌ ಅನಾವರಣ

Dina Bhavishya
ಭವಿಷ್ಯ1 ತಿಂಗಳು ago

Dina Bhavishya : ಈ ರಾಶಿಯವರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಆಲೋಚಿಸಿ

Dina Bhavishya
ಭವಿಷ್ಯ1 ತಿಂಗಳು ago

Dina Bhavishya : ಸದಾ ಕಲ್ಪನೆಯಲ್ಲಿ ಕನಸುಗಳನ್ನು ಕಾಣುತ್ತಾ ಕಾಲಹರಣ ಮಾಡ್ಬೇಡಿ

dina bhavishya read your daily horoscope predictions for november 4 2024
ಭವಿಷ್ಯ1 ತಿಂಗಳು ago

Dina Bhavishya : ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಶುಭ ಸುದ್ದಿ

galipata neetu
ಕಿರುತೆರೆ1 ವರ್ಷ ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ1 ವರ್ಷ ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ1 ವರ್ಷ ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ1 ವರ್ಷ ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 ತಿಂಗಳುಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್4 ತಿಂಗಳುಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್4 ತಿಂಗಳುಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ4 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ4 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ4 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ4 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು4 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ4 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌