ಪೆಟ್ರೋಲ್‌ ಸಿಗುತ್ತಿಲ್ಲ, ಎಟಿಎಂಗಳೂ ಖಾಲಿ- ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಬಗ್ಗೆ ಮಾಜಿ ಕ್ರಿಕೆಟರ್‌ ಟ್ವೀಟ್‌

ವಿದೇಶ

ಪೆಟ್ರೋಲ್‌ ಸಿಗುತ್ತಿಲ್ಲ, ಎಟಿಎಂಗಳೂ ಖಾಲಿ- ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಬಗ್ಗೆ ಮಾಜಿ ಕ್ರಿಕೆಟರ್‌ ಟ್ವೀಟ್‌

ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ (Pakistan Economic Crisis) ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಹೀಗೆ ಮುಂದುವರಿದರೆ ಶ್ರೀಲಂಕಾದ ಸ್ಥಿತಿಯೇ ಇಲ್ಲೂ ಉಂಟಾಗಬಹುದು ಎಂದು ವಿಶ್ಲೇಷಿಸಲಾಗಿದೆ.

VISTARANEWS.COM


on

Pakistan Economic Crisis
ಮಾಜಿ ಕ್ರಿಕೆಟರ್‌ ಮೊಹಮ್ಮದ್‌ ಹಫೀಜ್‌ ಮತ್ತು ಅವರು ಮಾಡಿರುವ ಟ್ವೀಟ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಾಹೋರ್‌: ಪಾಕಿಸ್ತಾನದಲ್ಲಿ ರಾಜಕೀಯ, ಆರ್ಥಿಕ, ಸಾಮಾಜಿಕ ಅಸ್ಥಿರತೆಗಳು ತಾಂಡವವಾಡುತ್ತಿವೆ. ಪಾಕಿಸ್ತಾನ ಈಗಿನ ಸರ್ಕಾರದ ವಿರುದ್ಧ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ನೇತೃತ್ವದಲ್ಲಿ ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಇದೆಲ್ಲದರ ಮಧ್ಯೆ ಪಾಕಿಸ್ತಾನದ ಮಾಜಿ ಕ್ರಿಕೆಟರ್‌ ಮೊಹಮ್ಮದ್‌ ಹಫೀಜ್‌ ಮಾಡಿರುವ ಒಂದು ಟ್ವೀಟ್‌ ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟಿನ ಸ್ಥಿತಿಯನ್ನು ಎತ್ತಿ ತೋರಿಸಿದೆ. ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌, ಈಗಿನ ಪ್ರಧಾನಿ ಶೆಹಬಾಜ್‌ ಶರೀಫ್‌ ಮತ್ತಿತರ ಪ್ರಮುಖ ರಾಜಕಾರಣಿಗಳನ್ನು ಟ್ಯಾಗ್‌ ಮಾಡಿರುವ ಮೊಹಮ್ಮದ್‌ ಹಫೀಜ್‌, ಲಾಹೋರ್‌ನ ಯಾವುದೇ ಪೆಟ್ರೋಲ್‌ ಸ್ಟೇಶನ್‌ಗಳಲ್ಲೂ ಇಂಧನಗಳು ಸಿಗುತ್ತಿಲ್ಲ. ಎಟಿಎಂ ಮಶಿನ್‌ಗಳಲ್ಲಿ ಹಣವಿಲ್ಲ. ರಾಜಕೀಯ ನಿರ್ಧಾರಗಳು, ಸಮಸ್ಯೆಗಳಿಂದಾಗಿ ಸಾಮಾನ್ಯ ಜನರು ಯಾಕೆ ಸಂಕಷ್ಟಪಡಬೇಕು ಎಂದು ಪ್ರಶ್ನಿಸಿದ್ದಾರೆ.

ಇಮ್ರಾನ್‌ ಪಾಕಿಸ್ತಾನವನ್ನು ದಿವಾಳಿ ಮಾಡುತ್ತಿದ್ದಾರೆ. ಇಲ್ಲಿನ ಆರ್ಥಿಕ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಆರೋಪಿಸಿದ್ದ ಪ್ರತಿಪಕ್ಷಗಳ ಸಂಸದರೆಲ್ಲ ಸೇರಿ, ಏಪ್ರಿಲ್‌ ಪ್ರಾರಂಭದಲ್ಲಿ ಇಮ್ರಾನ್‌ ಖಾನ್‌ ವಿರುದ್ಧ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದರು. ಆದರೆ ಡೆಪ್ಯೂಟಿ ಸ್ಪೀಕರ್‌ ಖಾಸಿಂ ಖಾನ್‌ ಸೂರಿ ಸಂಸತ್ತನ್ನೇ ವಿಸರ್ಜಿಸುವ ಮೂಲಕ ಇಮ್ರಾನ್‌ ಖಾನ್‌ರನ್ನು ಪಾರು ಮಾಡಿದ್ದರು. ಮತ್ತೆ ಕೇಸ್‌ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು. ಡೆಪ್ಯೂಟಿ ಸ್ಪೀಕರ್‌ ಸಂಸತ್ತು ವಿಸರ್ಜಿಸಿದ್ದು ಸಂವಿಧಾನ ಬಾಹಿರ ಎಂದು ಕೋರ್ಟ್‌ ತೀರ್ಪು ನೀಡಿದ ಬಳಿಕ ಇಮ್ರಾನ್‌, ಪ್ರಧಾನಿ ಹುದ್ದೆ ತ್ಯಜಿಸಿದ್ದರು.‌

ಇದನ್ನೂ ಓದಿ: ಛೋಟಾ ಪಾಕಿಸ್ತಾನ್‌ ಎಂದ ಇಬ್ಬರ ಬಂಧನ: ಎನ್‌ಕೌಂಟರ್‌ ಮಾಡಿ ಬಿಸಾಕಿ ಎಂದ ಪ್ರಮೋದ್‌ ಮುತಾಲಿಕ್‌

ಹೊಸ ಪ್ರಧಾನಿ ಶೆಹಬಾಜ್‌ ಶರೀಫ್‌ ಆಡಳಿತ ಬಂದು ಒಂದು ತಿಂಗಳಾಗಿದೆ. ಪಾಕಿಸ್ತಾನದ ಆರ್ಥಿಕ ಅಭಿವೃದ್ಧಿ ಇನ್ನಷ್ಟು ಕುಂಠಿತವಾಗಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ದಿವಾಳಿಯಾದ ಶ್ರೀಲಂಕಾ ಚಿತ್ರಣ ನಮ್ಮ ಕಣ್ಣಮುಂದಿದೆ. ಪಾಕಿಸ್ತಾನ ಕೂಡ ಅದೇ ದಾರಿಯಲ್ಲಿ ಹೊರಟಂತಿದೆ ಎಂದು ಆರ್ಥಿಕ ತಜ್ಞರೂ ಅಭಿಪ್ರಾಯಪಟ್ಟಿದ್ದಾರೆ.

ಮೊಹಮ್ಮದ್‌ ಹಫೀಜ್‌ ಯಾರು?
ಹಫೀಜ್‌ ಪಾಕಿಸ್ತಾನದ ಮಾಜಿ ಕ್ರಿಕೆಟರ್‌. 2003-2021ರವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚಿ, ಆಲ್‌ರೌಂಡರ್‌ ಎನಿಸಿಕೊಂಡಿದ್ದರು. ಒಟ್ಟು 55 ಟೆಸ್ಟ್‌ಗಳು, 218 ಏಕದಿನ ಪಂದ್ಯಗಳು ಮತ್ತು 119 ಟಿ20 ಮ್ಯಾಚ್‌ಗಳನ್ನು ಆಡಿದ್ದಾರೆ. ಇತ್ತೀಚೆಗೆ ಪಾಕಿಸ್ತಾನ ದೇಶೀಯ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ತಂಡಗಳ ಸಂಖ್ಯೆ ಕಡಿಮೆ ಮಾಡಬೇಕು ಎಂಬ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ನಿರ್ಧಾರವನ್ನು ಪ್ರಶ್ನಿಸಿದ್ದರು. ಹಾಗೇ, ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ತೆಗೆದುಕೊಳ್ಳಬಹುದಾದ ಕೆಲವು ಸುಧಾರಣಾ ನಿಯಮಗಳ ಬಗ್ಗೆಯೂ ಸಲಹೆ ನೀಡಿದ್ದರು.

ಇದನ್ನೂ ಓದಿ: ಪಾಕ್‌ನಲ್ಲಿ ಇಮ್ರಾನ್‌ ಖಾನ್‌ ಬಲಪ್ರದರ್ಶನ; ಸರ್ಕಾರಕ್ಕೆ 6 ದಿನಗಳ ಗಡುವು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral Video: ಯುವತಿ ತಲೆಗೆ ಬಲವಂತವಾಗಿ ಹಿಜಾಬ್‌ ಹಾಕಿದ ಪಾಕ್‌ ಯುವಕ; ಮುಂದೇನಾಯ್ತು?

Viral Video: ಪಾಕಿಸ್ತಾನದಲ್ಲಿ ಮಹಿಳೆಯರು ಹೇಗಿರಬೇಕು, ಯಾವ ರೀತಿ ಉಡುಗೆಗಳನ್ನು ಧರಿಸಬೇಕು ಎಂದು ಹೇಳಲು ಮುಂದಾದ ವ್ಯಕ್ತಿಗೆ ಯೂಟ್ಯೂಬರ್ ಮಹಿಳೆ ನೀಡಿದ ದಿಟ್ಟ ಉತ್ತರವೇನು ಗೊತ್ತೇ?

VISTARANEWS.COM


on

By

Viral Video
Koo

ಇಸ್ಲಾಮಾಬಾದ್: ಯೂಟ್ಯೂಬರ್ (YouTuber) ಮಹಿಳೆಗೆ ಪಾಕಿಸ್ತಾನದ (Pakistan) ಯುವಕನೊಬ್ಬ ಬಲವಂತವಾಗಿ ತಲೆಗೆ ಸ್ಕಾರ್ಫ್ (scarf) ಹೊದಿಸಲು ಪ್ರಯತ್ನಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (viral video) ಆಗಿದ್ದು, ಲಕ್ಷಾಂತರ ಮಂದಿ ಇದನ್ನು ವೀಕ್ಷಿಸಿ ಯೂಟ್ಯೂಬರ್ ಶೈಲಾ ಖಾನ್ ನ (YouTuber Shaila Khan) ದಿಟ್ಟತನದ ಮಾತಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಯೂಟ್ಯೂಬರ್ ಶೈಲಾ ಖಾನ್ ದಾರಿಹೋಕರನ್ನು ಸಂದರ್ಶನ ಮಾಡುತ್ತಿರುತ್ತಾರೆ. ಈ ವೇಳೆ ವ್ಯಕ್ತಿಯೊಬ್ಬ ಆಕೆಗೆ ಎದುರಾಗಿ ಇಸ್ಲಾಮಿಕ್ ದೇಶದಲ್ಲಿ ಮಾಡಬೇಕಾದ ಸರಿಯಾದ ಕೆಲಸವನ್ನು ಹೇಳಲು ನಿರ್ಧರಿಸುತ್ತಾನೆ.

ಆತ ಯೂಟ್ಯೂಬರ್ ಶೈಲಾ ಖಾನ್ ಶಾಲು, ಸ್ಕಾರ್ಫ್ ಅನ್ನು ತಲೆಗೆ ಸುತ್ತಿಕೊಳ್ಳದೆ ತನ್ನ ಮುಂದೆ ನಿಂತಿರುವುದು ಆಕೆ ಮಾಡಿರುವ “ಅಪರಾಧ” ಎನ್ನುವಂತ ಮಾತನಾಡುತ್ತಾನೆ. ಮಹಿಳೆ ಹೇಗೆ ಡ್ರೆಸ್ ಮಾಡಿಕೊಳ್ಳಬೇಕು ಎಂಬ ಬಗ್ಗೆ ಆತ ಟೀಕೆಗಳನ್ನು ಮುಂದುವರಿಸುತ್ತಾನೆ. ಅಷ್ಟೇ ಅಲ್ಲದೇ ತನ್ನ ಕುತ್ತಿಗೆಯಲ್ಲಿದ್ದ ಶಾಲ್ ನಿಂದ ಆಕೆಯ ತಲೆಯನ್ನು ಮುಚ್ಚಲು ಪ್ರಯತ್ನಿಸುತ್ತಾನೆ. ಎಕ್ಸ್ ನಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ಯೂಟ್ಯೂಬರ್ ಶೈಲಾ ಖಾನ್ ಬೀದಿಯಲ್ಲಿ ನಿಂತಿದ್ದ ಕೆಲವು ಜನರಲ್ಲಿ ಸಂದರ್ಶಿಸುತ್ತಿರುತ್ತಾರೆ. ಇರಾನ್-ಇಸ್ರೇಲ್ ಸಂಘರ್ಷದ ಬಗ್ಗೆ ಅವರ ಅಭಿಪ್ರಾಯಗಳನ್ನು ಕೇಳುತ್ತಿರುತ್ತಾರೆ. ಕೆಲವು ಸೆಕೆಂಡುಗಳ ಬಳಿಕ ವ್ಯಕ್ತಿಯೊಬ್ಬ ಆಕೆಯ ಬಳಿ ಮಾತನಾಡಲು ಮುಂದಾಗಿದ್ದಾನೆ. ನೀನು ಇಸ್ಲಾಮಿಕ್ ರಾಷ್ಟ್ರದಲ್ಲಿರುವೆ. ಅಲ್ಲಾನ ಆದೇಶಗಳನ್ನು ಅನುಸರಿಸಬೇಕು ಎಂದು ಹೇಳುತ್ತಾನೆ.

ನೀವು ನಿಮ್ಮ ತಲೆಯನ್ನು ಮುಚ್ಚಿಕೊಳ್ಳದೆ ಇಸ್ಲಾಮಿಕ್ ದೇಶದಲ್ಲಿ ನನ್ನ ಮುಂದೆ ನಿಂತಿದ್ದೀರಿ ಎಂದು ಆ ವ್ಯಕ್ತಿ ಯೂಟ್ಯೂಬರ್‌ ಶೈಲಾ ಖಾನ್ ಗೆ ಹೇಳುತ್ತಾನೆ. ಅನಂತರ, ಅವನು ಅವಳ ತಲೆಗೆ ಶಾಲನ್ನು ಸುತ್ತಲು ಪ್ರಯತ್ನಿಸುತ್ತಿರುವಾಗ ಶೈಲಾ ಖಾನ್ ಅದನ್ನು ತೀವ್ರವಾಗಿ ವಿರೋಧಿಸುತ್ತಾರೆ ಮತ್ತು ತಕ್ಷಣವೇ ಅವನಿಗೆ ತನ್ನ ಒಪ್ಪಿಗೆ ಇದಕ್ಕೆ ಎಷ್ಟು ಮುಖ್ಯ ಎಂಬುದನ್ನು ಹೇಳುತ್ತಾಳೆ. ಆತನ ಕೃತ್ಯವನ್ನು ಖಂಡಿಸಿದ ಆಕೆ, ಇಸ್ಲಾಮಿಕ್ ನಂಬಿಕೆಗಳು ಮತ್ತು ನೈತಿಕತೆಗಳು ಯಾವಾಗಲೂ ದುಪಟ್ಟಾ ಧರಿಸಲು ಏಕೆ ಸೀಮಿತವಾಗಿದೆ ಎಂದು ಪ್ರಶ್ನಿಸಿದ್ದಾಳೆ.


ಶಾಲನ್ನು ಆತನಿಗೆ ಹಿಂದಿರುಗಿಸುತ್ತಾ, ಅವಳು ತನ್ನದೇ ಆದ ಶಿರಸ್ತ್ರಾಣವನ್ನು ಹೊಂದಿದ್ದಾಳೆ ಎಂದು ಪ್ರತಿಪಾದಿಸುತ್ತಾಳೆ. ಅವಳು ತನ್ನ ತಲೆಯನ್ನು ಮುಚ್ಚಲು ಬಯಸುತ್ತಾಳೆಯೇ ಎಂಬುದಕ್ಕೆ ಅದು ತನ್ನ “ನಿರ್ಧಾರ” ಎಂದು ಹೇಳುತ್ತಾಳೆ. ಅವಳ ಅನುಮತಿಯಿಲ್ಲದೆ ಅವನು ಅವಳನ್ನು ಮುಟ್ಟಿದ್ದೇ ದೊಡ್ಡ ಪಾಪ ಎಂದು ಅವಳು ಅವನಿಗೆ ಹೇಳುತ್ತಾಳೆ. ಇಸ್ಲಾಂ ನಿಮಗೆ ಕಲಿಸುವುದು ಇದನ್ನೇ? ಎಂದು ಅವಳು ಆತನನ್ನು ಪ್ರಶ್ನಿಸಿದ್ದಾಳೆ.

ಸಾಮಾಜಿಕ ಕಿರುಕುಳದ ಆಧಾರದ ಮೇಲೆ ತನ್ನ ನಡವಳಿಕೆಗಾಗಿ ಆತನನ್ನು ಬಂಧಿಸಬಹುದು ಎಂದು ಯೂಟ್ಯೂಬರ್ ಶೈಲಾ ಖಾನ್ ಆತನನ್ನು ಎಚ್ಚರಿಸುತ್ತಾಳೆ. ಆದರೆ ಆತ ತಾನು ಮಾಡಿರುವುದು ತಪ್ಪು ಎಂದು ಒಪ್ಪಿಕೊಳ್ಳಲು ನಿರಾಕರಿಸುತ್ತಾನೆ ಮತ್ತು ತನ್ನದೇ ಸರಿ ಎಂದು ಅಭಿಪ್ರಾಯ ಮಂಡಿಸುತ್ತಾನೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋ ಗೆ ಹಲವಾರು ಮಂದಿ ಕಾಮೆಂಟ್ ಮಾಡಿದ್ದಾರೆ. ಮತಾಂಧ ವ್ಯಕ್ತಿಯ ವಿರುದ್ಧ ದಿಟ್ಟವಾಗಿ ಮಾತನಾಡಿದ ಯೂಟ್ಯೂಬರ್ ಮಹಿಳೆಯನ್ನು ಸಾಕಷ್ಟು ಮಂದಿ ಹೊಗಳಿದ್ದಾರೆ.

ಒಬ್ಬ ಬಳಕೆದಾರ “ಬ್ರೇವ್ ಪಾಕಿಸ್ತಾನಿ ಗರ್ಲ್ ಯೂಟ್ಯೂಬರ್” ಎಂದು ಹೇಳಿದ್ದು, ಮತ್ತೊಬ್ಬ “ತಮ್ಮ ಪರವಾಗಿ ನಿಂತಿರುವ ಹುಡುಗಿಗೆ ಹ್ಯಾಟ್ಸ್ ಆಫ್!! ಅಂತಹ ದೇಶದಲ್ಲಿ ಹಾಗೆ ಮಾಡಲು ಧೈರ್ಯ ಬೇಕು!! ಎಂದು ಕಾಮೆಂಟ್ ಮಾಡಿದ್ದಾನೆ. ಪಾಕಿಸ್ತಾನದಲ್ಲಿ ಈ ವ್ಯಕ್ತಿಯ ವರ್ತನೆ ಎಲ್ಲಿಯವರೆಗೆ ವ್ಯಾಪಕವಾಗಿದೆಯೋ ಅಲ್ಲಿಯವರೆಗೆ ಅದು ಕೆಳಗಿಳಿಯುತ್ತದೆ ಮತ್ತು ಹೊರಗಿರುತ್ತದೆ ಎಂದು ಮತ್ತೊಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾನೆ.

ಇದನ್ನೂ ಓದಿ: Viral Video: ಎಸಿ ಕೋಚ್ ಸಿಗದಕ್ಕೆ ಸಿಟ್ಟಿಗೆದ್ದು ರೈಲಿನ ಬಾಗಿಲಿನ ಗಾಜನ್ನೇ ಪುಡಿ ಪುಡಿ ಮಾಡಿದ!

Continue Reading

ವಿದೇಶ

Elon Musk: ಮೋದಿ ಭೇಟಿಗಾಗಿ ಈ ತಿಂಗಳು ಭಾರತಕ್ಕೆ ಬರಲ್ಲ ಎಲಾನ್‌ ಮಸ್ಕ್;‌ ಕೊಟ್ಟ ಕಾರಣ ಇದು

Elon Musk: ಭಾರತಕ್ಕೆ ಎಲಾನ್‌ ಮಸ್ಕ್‌ ಅವರು ಏಪ್ರಿಲ್‌ 21 ಹಾಗೂ 22ರಂದು ಆಗಮಿಸಬೇಕಿತ್ತು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಬೇಕಿತ್ತು. ಆದರೆ, ಕೊನೆಯಲ್ಲಿ ಕ್ಷಣದಲ್ಲಿ ಅವರು ಭಾರತದ ಭೇಟಿಯನ್ನು ಮುಂದೂಡಿದ್ದಾರೆ. ಆದರೆ, ಇದೇ ವರ್ಷ ಭಾರತಕ್ಕೆ ಭೇಟಿ ನೀಡುವುದು ಖಚಿತ ಎಂಬುದಾಗಿ ಅವರು ಹೇಳಿದ್ದಾರೆ.

VISTARANEWS.COM


on

Elon Musk
Koo

ವಾಷಿಂಗ್ಟನ್‌: ಎಲೆಕ್ಟ್ರಾನಿಕ್‌ ಕಾರುಗಳ ಉತ್ಪಾದನೆಯ ದೈತ್ಯ ಟೆಸ್ಲಾ ಕಂಪನಿ ಸಿಇಒ ಎಲಾನ್‌ ಮಸ್ಕ್‌ (Elon Musk) ಅವರು ಭಾರತಕ್ಕೆ ಭೇಟಿ ನೀಡುವುದನ್ನು ಮುಂದೂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಭೇಟಿಗಾಗಿ ಭಾರತಕ್ಕೆ ಎಲಾನ್‌ ಮಸ್ಕ್‌ ಅವರು ಏಪ್ರಿಲ್‌ 21 ಹಾಗೂ 22ರಂದು ಆಗಮಿಸಬೇಕಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಎಲಾನ್‌ ಮಸ್ಕ್‌ ಅವರು ಭಾರತದ ಭೇಟಿಯನ್ನು ಮುಂದೂಡಿಕೆ ಮಾಡಿದ್ದಾರೆ.

ಭಾರತದ ಭೇಟಿಯನ್ನು ಮುಂದೂಡಿರುವ ಕುರಿತು ಎಲಾನ್‌ ಮಸ್ಕ್‌ ಅವರೇ ಮಾಹಿತಿ ನೀಡಿದ್ದಾರೆ. “ಟೆಸ್ಲಾ ಕಂಪನಿಯ ಅತಿ ಹೆಚ್ಚು ಜವಾಬ್ದಾರಿಗಳಿರುವ ಕಾರಣ ಭಾರತದ ಭೇಟಿಯನ್ನು ಮುಂದೂಡಲು ಬೇಸರವಾಗುತ್ತಿದೆ. ಆದರೆ, ಇದೇ ವರ್ಷದಲ್ಲಿಯೇ ಭಾರತಕ್ಕೆ ನಾನು ಭೇಟಿ ನೀಡುವುದು ನಿಶ್ಚಿತ” ಎಂದು ಎಲಾನ್‌ ಮಸ್ಕ್‌ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.

ಎಲಾನ್‌ ಮಸ್ಕ್‌ ಅವರು ಅಮೆರಿಕದಲ್ಲಿ ಏಪ್ರಿಲ್‌ 23ರಂದು ನಡೆಯುವ ಮಹತ್ವದ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಲಿದ್ದಾರೆ. ಅವರು ಟೆಸ್ಲಾ ಕಂಪನಿಯ ಮೊದಲ ತ್ರೈಮಾಸಿದಲ್ಲಿ ನಡೆಸಿದ ವಹಿವಾಟು ಕುರಿತು ಮಾಹಿತಿ ಒದಗಿಸಲಿದ್ದಾರೆ. ಇದರ ಜತೆಗೆ ಹಲವು ಸಭೆಗಳು ಕೂಡ ಇರುವುದರಿಂದ ಅವರು ಭಾರತದ ಭೇಟಿಯನ್ನು ಮುಂದೂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಮೋದಿ ಭೇಟಿಯ ಅಜೆಂಡಾ ಏನು?

ಭಾರತದಲ್ಲಿ ಟೆಸ್ಲಾ ಕಾರು ಉತ್ಪಾದನೆ ಘಟಕ ಸ್ಥಾಪಿಸಲು ಟೆಸ್ಲಾ ಕಂಪನಿಯು ಹಲವು ವರ್ಷಗಳಿಂದ ಮಾತುಕತೆ ನಡೆಸುತ್ತಲೇ ಇದೆ. ಭಾರತದ ಷರತ್ತುಗಳು, ಟೆಸ್ಲಾ ಘಟಕ ಸ್ಥಾಪಿಸಲು ಮಸ್ಕ್‌ ಹಾಕಿಕೊಂಡಿರುವ ನಿಯಮಗಳಿಂದಾಗಿ ಘಟಕ ಸ್ಥಾಪನೆ ಮುಂದೂಡಿಕೆಯಾಗುತ್ತಲೇ ಇದೆ. ಆದರೆ, ಈ ಬಾರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ಮೂಲಕ ಘಟಕ ಸ್ಥಾಪನೆಯ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದೇ ಹೇಳಲಾಗುತ್ತಿದೆ. ಹಾಗಾಗಿ, ಎಲಾನ್‌ ಮಸ್ಕ್‌ ಅವರು ಭಾರತಕ್ಕೆ ಭೇಟಿ ನೀಡುರುವುದು ಮಹತ್ವ ಪಡೆದಿದೆ.

ಎಲಾನ್‌ ಮಸ್ಕ್‌ ಅವರು ಕೆಲ ತಿಂಗಳ ಹಿಂದಷ್ಟೇ ಭಾರತದ ಪರವಾಗಿ ಮಾತನಾಡಿದ್ದರು. “ವಿಶ್ವಸಂಸ್ಥೆಯು ಬದಲಾವಣೆ ತರಲು ಹಿಂಜರಿಯುತ್ತಿದೆ. ವಿಶ್ವಸಂಸ್ಥೆಯ ಕಾಯಂ ಸದಸ್ಯತ್ವ ಪಡೆದಿರುವ ಬಲಿಷ್ಠ ರಾಷ್ಟ್ರಗಳು ತಾವು ಹೊಂದಿರುವ ಹೆಚ್ಚಿನ ಅಧಿಕಾರವನ್ನು ಬಳಸಿಕೊಳ್ಳಲು ಬಯಸುತ್ತಿವೆ. ಇದೇ ಕಾರಣಕ್ಕಾಗಿ ಆಫ್ರಿಕಾ ಹಾಗೂ ಭಾರತಕ್ಕೆ ಇದುವರೆಗೆ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ ಸಿಕ್ಕಿಲ್ಲ. ಹಾಗಾಗಿ, ವಿಶ್ವಸಂಸ್ಥೆಯು ನಿಯಮಗಳನ್ನು ಬದಲಿಸಬೇಕು. ಜಗತ್ತಿನಲ್ಲೇ ಭಾರತ ಜನಪ್ರಿಯ ದೇಶವಾದರೂ ಇದುವರೆಗೆ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ ಸಿಗದಿರುವುದು ಅಸಂಬದ್ಧವಾಗಿದೆ. ಭಾರತ ಹಾಗೂ ಆಫ್ರಿಕಾಗೆ ಕಾಯಂ ಸದಸ್ಯತ್ವ ನೀಡಬೇಕು” ಎಂದು ಎಲಾನ್‌ ಮಸ್ಕ್‌ ಅವರು ಕಳೆದ ಜನವರಿಯಲ್ಲಿ ಆಗ್ರಹಿಸಿದ್ದರು.

ಇದನ್ನೂ ಓದಿ: ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಕಾಯಂ ಸ್ಥಾನ ನೀಡಿ ಎಂಬ ಮಸ್ಕ್‌ ಆಗ್ರಹಕ್ಕೆ ಅಮೆರಿಕವೂ ಸಾಥ್, ಶೀಘ್ರವೇ ಗುಡ್‌ ನ್ಯೂಸ್?

Continue Reading

ವಿದೇಶ

China Missile : ಪಾಕಿಸ್ತಾನಕ್ಕೆ ಗುಟ್ಟಾಗಿ ಕ್ಷಿಪಣಿ ಕಳುಹಿಸಿದ ಚೀನಾದ ಎರಡು ಕಂಪನಿಗಳಿಗೆ ಅಮೆರಿಕದ ನಿರ್ಬಂಧ

China Missile: ಪಾಕಿಸ್ತಾನದ ಮಿತ್ರ ರಾಷ್ಟ್ರವಾದ ಚೀನಾ, ಇಸ್ಲಾಮಾಬಾದ್​ನ ಮಿಲಿಟರಿ ಆಧುನೀಕರಣ ಕಾರ್ಯಕ್ರಮಕ್ಕೆ ಶಸ್ತ್ರಾಸ್ತ್ರ ಮತ್ತು ರಕ್ಷಣಾ ಉಪಕರಣಗಳ ಪ್ರಮುಖ ಪೂರೈಕೆ ಮಾಡುವ ದೇಶವಾಗಿದೆ. ಬೆಲಾರಸ್​​ನ ಮಿನ್ಸ್ಕ್ ವ್ಹೀಲ್ ಟ್ರಾಕ್ಟರ್ ಸ್ಥಾವರವು ಪಾಕಿಸ್ತಾನದ ದೀರ್ಘ-ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿ ಯೋಜೆ ವಿಶೇಷ ವಾಹನ ಚಾಸಿಸ್ ಅನ್ನು ಪೂರೈಸಿದೆ.

VISTARANEWS.COM


on

China Missile
Koo

ವಾಷಿಂಗ್ಟನ್: ದೂರಗಾಮಿ ಕ್ಷಿಪಣಿ ಸೇರಿದಂತೆ ಪಾಕಿಸ್ತಾನದ ಬ್ಯಾಲಿಸ್ಟಿಕ್ ಕ್ಷಿಪಣಿ ಯೋಜನೆಗಳಿಗೆ ಪೂರಕವಾಗಿರುವ ವಸ್ತುಗಳನ್ನು ರಹಸ್ಯವಾಗಿ ಪೂರೈಸಿದ್ದಕ್ಕಾಗಿ ಮೂರು ಚೀನೀ ಕಂಪನಿಗಳು ( China Missile) ಮತ್ತು ಬೆಲಾರಸ್​​ನ ಒಂದು ಕಂಪನಿಗೆ ಅಮೆರಿಕ ನಿರ್ಬಂಧಗಳನ್ನು ವಿಧಿಸಿದೆ ಎಂದು ಅಲ್ಲಿನ ವಿದೇಶಾಂಗ ಇಲಾಖೆ ಪ್ರಕಟಿಸಿದೆ. ಕ್ಸಿಯಾನ್ ಲಾಂಗ್ಡೆ ಟೆಕ್ನಾಲಜಿ ಡೆವಲಪ್ಮೆಂಟ್, ಚೀನಾದ ಟಿಯಾಂಜಿನ್ ಕ್ರಿಯೇಟಿವ್ ಸೋರ್ಸ್ ಇಂಟರ್​ನ್ಯಾಷನಲ್ ಟ್ರೇಡ್ ಆ್ಯಂಡ್ ಗ್ರ್ಯಾನ್ಪೆಕ್ಟ್ ಕಂಪನಿ ಲಿಮಿಟೆಡ್ ಮತ್ತು ಬೆಲಾರಸ್​ನ ಮಿನ್ಸ್ಕ್ ವ್ಹೀಲ್ ಟ್ರಾಕ್ಟರ್ ಪ್ಲಾಂಟ್ ಕಂಪನಿಗಳು ನಿರ್ಬಂಧಕ್ಕೆ ಒಳಗಾಗಿವೆ.

ಈ ಕಂಪನಿಗಳು “ಸಾಮೂಹಿಕ ವಿನಾಶಕಾರಿ ಶಸ್ತ್ರಾಸ್ತ್ರಗಳ ಪ್ರಸರಣಕ್ಕೆ ಭೌತಿಕವಾಗಿ ಕೊಡುಗೆ ನೀಡಿದ ಅಥವಾ ಭೌತಿಕವಾಗಿ ಕೊಡುಗೆ ನೀಡುವ ಅಪಾಯವನ್ನುಂಟುಮಾಡುವ ಚಟುವಟಿಕೆಗಳು ಅಥವಾ ವಹಿವಾಟುಗಳಲ್ಲಿ ತೊಡಗಿವೆ. ಅಂತಹ ವಸ್ತುಗಳನ್ನು ಪಾಕಿಸ್ತಾನದಲ್ಲಿ ತಯಾರಿಸುವ, ಸ್ವಾಧೀನಪಡಿಸಿಕೊಳ್ಳುವ, ಅಭಿವೃದ್ಧಿಪಡಿಸುವ, ವರ್ಗಾಯಿಸುವ ಅಥವಾ ಬಳಸುವ ಯಾವುದೇ ಪ್ರಯತ್ನಗಳನ್ನು ನಡೆಸಲಾಗಿದೆ, ಎಂದು ಅಲ್ಲಿನ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ಶುಕ್ರವಾರ ಹೇಳಿದ್ದಾರೆ.

ಕಳವಳಕಾರಿ ಚಟುವಟಿಕೆಗಳನ್ನು ಬೆಂಬಲಿಸುವ ಖರೀದಿ ಜಾಲಗಳನ್ನು ಅಡ್ಡಿಪಡಿಸಲು ಕ್ರಮ ಕೈಗೊಳ್ಳಲು ಅಮೆರಿಕ ಬದ್ಧವಾಗಿದೆ ಎಂದು ಮಿಲ್ಲರ್ ಹೇಳಿದ್ದಾರೆ.

ಇದನ್ನೂ ಓದಿ: Electoral Bond : ಎನ್​ಡಿಎ ಅಧಿಕಾರಕ್ಕೆ ಬಂದರೆ ಚುನಾವಣಾ ಬಾಂಡ್​ ವ್ಯವಸ್ಥೆ ಮರುಜಾರಿ; ನಿರ್ಮಲಾ ಸೀತಾರಾಮನ್​

ಪಾಕಿಸ್ತಾನದ ಮಿತ್ರ ರಾಷ್ಟ್ರವಾದ ಚೀನಾ, ಇಸ್ಲಾಮಾಬಾದ್​ನ ಮಿಲಿಟರಿ ಆಧುನೀಕರಣ ಕಾರ್ಯಕ್ರಮಕ್ಕೆ ಶಸ್ತ್ರಾಸ್ತ್ರ ಮತ್ತು ರಕ್ಷಣಾ ಉಪಕರಣಗಳ ಪ್ರಮುಖ ಪೂರೈಕೆ ಮಾಡುವ ದೇಶವಾಗಿದೆ. ಬೆಲಾರಸ್​​ನ ಮಿನ್ಸ್ಕ್ ವ್ಹೀಲ್ ಟ್ರಾಕ್ಟರ್ ಸ್ಥಾವರವು ಪಾಕಿಸ್ತಾನದ ದೀರ್ಘ-ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿ ಯೋಜೆ ವಿಶೇಷ ವಾಹನ ಚಾಸಿಸ್ ಅನ್ನು ಪೂರೈಸಿದೆ.

ಚೀನಾದ ಕ್ಸಿಯಾನ್ ಲಾಂಗ್ಡೆ ಟೆಕ್ನಾಲಜಿ ಡೆವಲಪ್ಮೆಂಟ್ ಕಂಪನಿ ಲಿಮಿಟೆಡ್, ಪಾಕಿಸ್ತಾನದ ದೀರ್ಘ-ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮಕ್ಕೆ ಫಿಲಮೆಂಟ್ ವೈಂಡಿಂಗ್ ಯಂತ್ರ ಸೇರಿದಂತೆ ಕ್ಷಿಪಣಿ ಸಂಬಂಧಿತ ಉಪಕರಣಗಳನ್ನು ಪೂರೈಸಿದೆ. ರಾಕೆಟ್ ಮೋಟರ್ ಕೇಸ್ ಗಳನ್ನು ತಯಾರಿಸಲು ಫಿಲಮೆಂಟ್ ವೈಂಡಿಂಗ್ ಯಂತ್ರಗಳನ್ನು ಬಳಸಬಹುದು.

ಇದರಲ್ಲಿ ಸ್ಟಿರ್ ವೆಲ್ಡಿಂಗ್ ಉಪಕರಣಗಳು (ಬಾಹ್ಯಾಕಾಶ ಉಡಾವಣಾ ವಾಹನಗಳಲ್ಲಿ ಬಳಸುವ ಪ್ರೊಪೆಲ್ಲಂಟ್ ಟ್ಯಾಂಕ್​ಗಳನ್ನು ತಯಾರಿಸಲು ಬಳಸಬಹುದು ಎಂದು ಯುನೈಟೆಡ್ ಸ್ಟೇಟ್ಸ್ ನಿರ್ಣಯಿಸುತ್ತದೆ. ದೊಡ್ಡ ವ್ಯಾಸದ ರಾಕೆಟ್ ಮೋಟರ್ ಗಳನ್ನು ಪರೀಕ್ಷಿಸಲು ಉಪಕರಣಗಳನ್ನು ತಯಾರಿಸಲು ಗ್ರಾನ್ ಪೆಕ್ಟ್ ಕಂಪನಿಯು ಪಾಕಿಸ್ತಾನದ ಸುಪಾರ್ಕೊದೊಂದಿಗೆ ಕೆಲಸ ಮಾಡಿತು. ಗ್ರ್ಯಾನ್ಪೆಕ್ಟ್ ಕಂಪನಿ ಲಿಮಿಟೆಡ್ ಪಾಕಿಸ್ತಾನದ ಎನ್ಡಿಸಿಗೆ ದೊಡ್ಡ ವ್ಯಾಸದ ರಾಕೆಟ್ ಮೋಟರ್ಗಳನ್ನು ಪರೀಕ್ಷಿಸಲು ಉಪಕರಣಗಳನ್ನು ಪೂರೈಸಲು ಸಹ ಕೆಲಸ ಮಾಡಿತು.

Continue Reading

ವೈರಲ್ ನ್ಯೂಸ್

Ancient snake: ಭಾರತದಲ್ಲಿತ್ತು 1000 ಕಿಲೋ ತೂಕ, 50 ಅಡಿ ಉದ್ದದ ʼವಾಸುಕಿʼ ಹಾವು!

Ancient snake: 2005ರಲ್ಲಿ ಗುಜರಾತ್‌ನಲ್ಲಿ ಪತ್ತೆಯಾದ ಪಳೆಯುಳಿಕೆಗಳು, ಭೂಮಿಯ ಮೇಲೆ ಅಸ್ತಿತ್ವದಲ್ಲಿದ್ದ ಅತಿದೊಡ್ಡ ಹಾವಿನದ್ದು ಆಗಿವೆ. ಇದನ್ನು ಸಂಶೋಧಕರು “ವಾಸುಕಿ ಇಂಡಿಕಸ್” ಎಂದು ಹೆಸರಿಸಿದ್ದಾರೆ. ಇದು 4.7 ಕೋಟಿ ವರ್ಷಗಳ ಹಿಂದೆ ಕಚ್‌ನ ಜವುಗು ಪ್ರದೇಶಗಳಲ್ಲಿ ವಾಸಿಸಿತ್ತು.

VISTARANEWS.COM


on

Ancient snake vasuki indicus
Koo

ಹೊಸದಿಲ್ಲಿ: ಜಗತ್ತಿನ ಅತೀ ದೊಡ್ಡ, ಭಾರೀ ಗಾತ್ರದ ಹಾವು (big snake) ಭಾರತದಲ್ಲಿ ಬದುಕಿತ್ತು ಎಂಬುದು ಇದೀಗ ಸಂಶೋಧನೆಯಿಂದ ಗೊತ್ತಾಗಿದೆ. ಗುಜರಾತ್‌ನಲ್ಲಿ ಪತ್ತೆಯಾದ ಪ್ರಾಚೀನ ಹಾವೊಂದರ (Ancient snake) ಪಳೆಯುಳಿಕೆಗಳು (follisls) ಅದರ ಭಾರೀ ಗಾತ್ರ ಹಾಗೂ ತೂಕವನ್ನು ತಿಳಿಯಪಡಿಸಿವೆ. ಅದು ಸುಮಾರು 50 ಅಡಿ ಉದ್ದ ಹಾಗೂ 1,000 ಕೆಜಿ ತೂಕವಿತ್ತಂತೆ!

2005ರಲ್ಲಿ ಗುಜರಾತ್‌ನಲ್ಲಿ ಪತ್ತೆಯಾದ ಪಳೆಯುಳಿಕೆಗಳು, ಭೂಮಿಯ ಮೇಲೆ ಅಸ್ತಿತ್ವದಲ್ಲಿದ್ದ ಅತಿದೊಡ್ಡ ಹಾವಿನದ್ದು ಆಗಿವೆ. ಇದನ್ನು ಸಂಶೋಧಕರು “ವಾಸುಕಿ ಇಂಡಿಕಸ್” ಎಂದು ಹೆಸರಿಸಿದ್ದಾರೆ. ಇದು 4.7 ಕೋಟಿ ವರ್ಷಗಳ ಹಿಂದೆ ಕಚ್‌ನ ಜವುಗು ಪ್ರದೇಶಗಳಲ್ಲಿ ವಾಸಿಸಿತ್ತು. ನಿನ್ನೆ ವಿಜ್ಞಾನ ಪತ್ರಿಕೆಗಳಲ್ಲಿ ಇದು ವರದಿಯಾಗಿದೆ. ಈ ಜಾತಿಯ ಹಾವು 36ರಿಂದ ಸುಮಾರು 50 ಅಡಿ ಉದ್ದದವರೆಗೂ ಬೆಳೆಯುತ್ತಿತ್ತು.

ಗಾತ್ರದಲ್ಲಿ ʼವಾಸುಕಿʼಯ ಗಾತ್ರ ಹಾಗೂ ತೂಕ ಈಗ ಅಳಿವಿನಂಚಿನಲ್ಲಿರುವ ʼಟೈಟಾನೊಬೊವಾʼವನ್ನು ಮೀರಿರಬಹುದು. ಇದು 42 ಅಡಿ ಅಳತೆಯ ಅತಿದೊಡ್ಡ ಹಾವು. ಇದು 1 ಟನ್ ಅಥವಾ 1,000 ಕಿಲೋಗ್ರಾಂಗಳಷ್ಟು ತೂಕವನ್ನು ಹೊಂದಿರಬಹುದು ಎಂದು ಸಂಶೋಧಕರು ಹೇಳುತ್ತಾರೆ. ಇಂದು ಜೀವಂತವಾಗಿರುವ ಅತಿದೊಡ್ಡ ಹಾವೆಂದರೆ ಏಷ್ಯಾದ 33 ಅಡಿ ಉದ್ದದ ರೆಟಿಕ್ಯುಲೇಟೆಡ್ ಹೆಬ್ಬಾವು.

“ಅದರ ದೊಡ್ಡ ಗಾತ್ರವನ್ನು ಪರಿಗಣಿಸಿದರೆ, ವಾಸುಕಿಯು ನಿಧಾನವಾಗಿ ಚಲಿಸುವ ಹೊಂಚುದಾಳಿ ಪರಭಕ್ಷಕವಾಗಿತ್ತು. ಅದು ಅನಕೊಂಡಗಳು ಮತ್ತು ಹೆಬ್ಬಾವುಗಳಂತೆ ಸುತ್ತುವರಿದು ಬಿಗಿಯುವಿಕೆಯ ಮೂಲಕ ತನ್ನ ಬೇಟೆಯನ್ನು ಪಡೆಯುತ್ತಿತ್ತು” ಎಂದು ಐಐಟಿ-ರೂರ್ಕಿಯಲ್ಲಿ ಪ್ಯಾಲಿಯಂಟಾಲಜಿಯ ಪೋಸ್ಟ್‌ ಡಾಕ್ಟರಲ್ ಸಂಶೋಧಕ ಮತ್ತು ಅಧ್ಯಯನದ ಪ್ರಮುಖ ಲೇಖಕ ದೇಬಜಿತ್ ದತ್ತಾ ಹೇಳುತ್ತಾರೆ. “ಈ ಹಾವು ಕರಾವಳಿಯ ಸಮೀಪವಿರುವ ಜೌಗು ಪ್ರದೇಶದಲ್ಲಿ ಜಾಗತಿಕ ತಾಪಮಾನವು ಇಂದಿನಕ್ಕಿಂತ ಹೆಚ್ಚಿರುವ ಸಮಯದಲ್ಲಿ ವಾಸಿಸುತ್ತಿತ್ತು” ಎಂದಿದ್ದಾರೆ.

ಹಿಂದೂ ಪುರಾಣಗಳಲ್ಲಿ ʼವಾಸುಕಿʼ ಎಂಬ ಭಾರೀ ನಾಗರಾಜನ ಕತೆಗಳು ಇವೆ. ಇದನ್ನು ಸಾಮಾನ್ಯವಾಗಿ ಶಿವನ ಕುತ್ತಿಗೆಗೆ ಸುತ್ತುವಂತೆ ಚಿತ್ರಿಸಲಾಗುತ್ತದೆ. ಸಮುದ್ರ ಮಥನಕ್ಕೆ ಈ ಹಾವನ್ನು ಬಳಸಿಕೊಳ್ಳಲಾಗಿತ್ತು ಎಂದು ಕತೆಯಿದೆ. ಈ ಹಿನ್ನೆಲೆಯಲ್ಲಿ ಸಂಶೋಧಕರು ಇದಕ್ಕೆ ʼವಾಸುಕಿ ಇಂಡಿಕಸ್ʼ ಎಂಬ ಹೆಸರನ್ನು ನೀಡಿದ್ದಾರೆ.

“ಇದು ಬಹಳ ಸಾಂಕೇತಿಕವಾಗಿದೆ” ಎಂದು ನಾಮಕರಣದ ನಂತರ ದತ್ತ ಹೇಳಿದ್ದಾರೆ. “ವಾಸುಕಿ ನಮ್ಮ ಸರ್ಪರಾಜ. ಹೀಗಾಗಿ ಇಲ್ಲಿರುವ ಅಸಾಧಾರಣವಾದ ದೊಡ್ಡ ಗಾತ್ರದ ಹಾವೂ ಅದೇ” ಎಂದು ಅವರು ವಿವರಿಸಿದರು.

ವಾಸುಕಿ ಇಂಡಿಕಸ್‌ನ ಪಳೆಯುಳಿಕೆಯನ್ನು IIT-ರೂರ್ಕಿಯ ಪ್ರಾಗ್ಜೀವಶಾಸ್ತ್ರದ ಪ್ರಾಧ್ಯಾಪಕ ಸುನಿಲ್ ಬಾಜಪೇಯಿ ಅವರು 2005ರಲ್ಲಿ ಕಂಡುಹಿಡಿದರು. ಅವರು ಕಚ್‌ನಲ್ಲಿರುವ ಕಲ್ಲಿದ್ದಲು ಗಣಿಯಲ್ಲಿ ಅವಶೇಷಗಳನ್ನು ಪತ್ತೆಹಚ್ಚಿದರು.

ಆ ಸಮಯದಲ್ಲಿ, ʼಸೈಂಟಿಫಿಕ್ ಅಮೇರಿಕನ್ʼ ಪ್ರಕಾರ, ಅವಶೇಷಗಳು ಈಗಾಗಲೇ ತಿಳಿದಿರುವ ಇತಿಹಾಸಪೂರ್ವ ಜಾತಿಯ ಮೊಸಳೆಗೆ ಸೇರಿವೆ ಎಂದು ಬಾಜಪೇಯಿ ನಂಬಿದ್ದರು. 2022ರವರೆಗೆ ಪಳೆಯುಳಿಕೆ ಅವರ ಪ್ರಯೋಗಾಲಯದಲ್ಲಿ ಇತ್ತು. ಅದೇ ವರ್ಷ ಪ್ರಯೋಗಾಲಯಕ್ಕೆ ಸೇರಿದ ದತ್ತಾ ಅವುಗಳನ್ನು ಪರೀಕ್ಷಿಸಲು ಪ್ರಾರಂಭಿಸಿದರು. ಆ ಚೂರುಗಳು ಬೇರೆ ಜಾತಿಗೆ ಸೇರಿದವು ಎಂದು ಇಬ್ಬರಿಗೂ ಅರಿವಾಯಿತು.

“ಪಳೆಯುಳಿಕೆಯು 2005ರಲ್ಲಿ ಕಂಡುಬಂದಿದೆ, ಆದರೆ ನಾನು ಬೇರೆ ಬೇರೆ ಪಳೆಯುಳಿಕೆಗಳ ಮೇಲೆ ಕೆಲಸ ಮಾಡುತ್ತಿರುವುದರಿಂದ, ಅದು ಹಾಗೇ ಉಳಿಯಿತು. 2022ರಲ್ಲಿ ನಾವು ಪಳೆಯುಳಿಕೆಯನ್ನು ಮರು-ಪರಿಶೀಲಿಸಲು ಪ್ರಾರಂಭಿಸಿದ್ದೇವೆ. ಆರಂಭದಲ್ಲಿ ಅದರ ಗಾತ್ರದಿಂದಾಗಿ, ಇದು ಮೊಸಳೆ ಎಂದು ನಾನು ಭಾವಿಸಿದೆ. ಆದರೆ ನಂತರ ಅದು ಹಾವಿನದ್ದಾಗಿದೆ ಎಂದು ಅರಿತುಕೊಂಡೆವು” ಎಂದು ಬಾಜಪೇಯಿ ತಿಳಿಸಿದರು.

ಇದನ್ನೂ ಓದಿ: Hottest Year: 1.25 ಲಕ್ಷ ವರ್ಷಗಳಲ್ಲೇ 2023 ಅತಿ ಬಿಸಿಯಾದ ವರ್ಷ, ಕಾರಣ ಏನು?

Continue Reading
Advertisement
Protest against Neha murder case in Yadgiri
ಯಾದಗಿರಿ1 min ago

Yadgiri News: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹತ್ಯೆ ಖಂಡಿಸಿ ಯಾದಗಿರಿಯಲ್ಲಿ ಪ್ರತಿಭಟನೆ

Ballari Lok Sabha Congress candidate e Tukaram election campaign in Hagaribommanahalli
ರಾಜಕೀಯ2 mins ago

Lok Sabha Election 2024: ದೇಶದಲ್ಲಿ ಕ್ರಾಂತಿ ಮಾಡಿದ್ದು ಕಾಂಗ್ರೆಸ್‌ ಪಕ್ಷ: ಈ. ತುಕಾರಾಂ

Loka sabha election-2024
Lok Sabha Election 20243 mins ago

Loka sabha election-2024: ಮೋದಿ ಗೆದ್ದಿದ್ದ ವಡೋದರ ಕ್ಷೇತ್ರದಲ್ಲಿ ಬಿಜೆಪಿಯಿಂದ ಅಚ್ಚರಿಯ ಅಭ್ಯರ್ಥಿ!

Job News
ಉದ್ಯೋಗ6 mins ago

Job News: ಕೆಪಿಎಸ್‌ಸಿಯ 1 ಹುದ್ದೆಗೆ ಸರಾಸರಿ 508 ಅರ್ಜಿ ಸಲ್ಲಿಕೆ; ಒಟ್ಟು 1.95 ಲಕ್ಷ ಅಭ್ಯರ್ಥಿಗಳಿಂದ ಅಪ್ಲಿಕೇಷನ್‌

Road accident Car overturns near Holalkere Shivamogga man killed and two others injured
ಕರ್ನಾಟಕ7 mins ago

Road Accident: ಹೊಳಲ್ಕೆರೆ ಬಳಿ ಕಾರು ಪಲ್ಟಿ; ಶಿವಮೊಗ್ಗ ಮೂಲದ ವ್ಯಕ್ತಿ ಸಾವು, ಇನ್ನಿಬ್ಬರಿಗೆ ಗಾಯ

ಕರ್ನಾಟಕ17 mins ago

Neha Murder Case: ನೇಹಾ ಕೇಸ್ ತನಿಖೆಗೂ ಮೊದಲೇ ಪ್ರೀ ಜಡ್ಜ್ ಮೆಂಟ್: ಗೃಹಸಚಿವರ ವಿರುದ್ಧ ಜೋಶಿ ಆಕ್ರೋಶ

IPL 2024
ಕ್ರೀಡೆ31 mins ago

IPL 2024: ಕ್ಯಾಚ್​ ಬಿಟ್ಟ ಹೂಡಾಗೆ ಬೆಸ್ಟ್​ ಫೀಲ್ಡರ್ ಅವಾರ್ಡ್​​; ಇದರ ಹಿಂದಿದೆ ಬಲವಾದ ಕಾರಣ

Modi in Karnataka Bomb blasts and Neha murder case Modi attacks Congress government
Lok Sabha Election 20241 hour ago

Modi in Karnataka: ಬಾಂಬ್ ಸ್ಫೋಟ, ನೇಹಾ ಹತ್ಯೆ ಪ್ರಕರಣ; ಕಾಂಗ್ರೆಸ್ ಸರ್ಕಾರದ ವಿರುದ್ಧ ಮೋದಿ ವಾಗ್ದಾಳಿ

Farmers Protest
ದೇಶ1 hour ago

Farmers Protest: ರೈತರ ಪ್ರತಿಭಟನೆ; ಅಂಬಾಲಾ-ಅಮೃತಸರ ಮಾರ್ಗದ 54 ರೈಲು ಸಂಚಾರ ರದ್ದು

Vinesh Phogat
ಕ್ರೀಡೆ1 hour ago

Vinesh Phogat: ಖೇಲ್ ರತ್ನ ಪ್ರಶಸ್ತಿಯನ್ನು ಪಾದಚಾರಿ ಮಾರ್ಗದಲ್ಲಿ ತೊರೆದಿದ್ದ ವಿನೇಶ್ ಫೋಗಟ್​ಗೆ ಒಲಿದ ಒಲಿಂಪಿಕ್ಸ್​ ಟಿಕೆಟ್​

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ4 hours ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20244 hours ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20246 hours ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

Rain News
ಮಳೆ8 hours ago

Rain News : ಸಿಡಿಲಿಗೆ ವ್ಯಕ್ತಿ ಸೇರಿ ಜಾನುವಾರುಗಳು ಮೃತ್ಯು; ವ್ಯಾಪಕ ಮಳೆಗೆ ಜನರು ಕಂಗಾಲು

Neha Murder Case
ಹುಬ್ಬಳ್ಳಿ9 hours ago

Neha Murder Case : ನನ್ನ ಮಗನಿಗೆ ಶಿಕ್ಷೆ ಆಗಲಿ; ಇಬ್ಬರೂ ಲವ್‌ ಮಾಡ್ತಿದ್ದರು ಅನ್ನೋದು ಸತ್ಯ ಎಂದ ಫಯಾಜ್‌ ತಾಯಿ

Dina Bhavishya
ಭವಿಷ್ಯ15 hours ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ1 day ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ2 days ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ4 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ5 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

ಟ್ರೆಂಡಿಂಗ್‌