Russia Ukraine War: ರಷ್ಯಾ ಸೇನೆಯಲ್ಲಿರುವ ಭಾರತೀಯರು ಶೀಘ್ರ ತಾಯ್ನಾಡಿಗೆ; ವಿದೇಶಾಂಗ ಸಚಿವಾಲಯದ ಭರವಸೆ - Vistara News

ವಿದೇಶ

Russia Ukraine War: ರಷ್ಯಾ ಸೇನೆಯಲ್ಲಿರುವ ಭಾರತೀಯರು ಶೀಘ್ರ ತಾಯ್ನಾಡಿಗೆ; ವಿದೇಶಾಂಗ ಸಚಿವಾಲಯದ ಭರವಸೆ

Russia Ukraine War: ರಷ್ಯಾ ಸೇನೆಯಲ್ಲಿರುವ 20 ಭಾರತೀಯ ಸೈನಿಕರನ್ನು ಮರಳಿ ಕರೆತರಲು ಸಾಧ್ಯವಾದಷ್ಟು ಎಲ್ಲ ಪ್ರಯತ್ನ ಮಾಡುತ್ತಿರುವುದಾಗಿ ವಿದೇಶಾಂಗ ಸಚಿವಾಲಯ ತಿಳಿಸಿದೆ.

VISTARANEWS.COM


on

Russia Ukraine War
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ರಷ್ಯಾ-ಉಕ್ರೇನ್‌ ಯುದ್ಧ (Russia Ukraine War) ಮುಂದುವರಿದಿದೆ. ಈ ಮಧ್ಯೆ ರಷ್ಯಾ ಸೇನೆಯಲ್ಲಿ ಕನಿಷ್ಠ 20 ಭಾರತೀಯರಿದ್ದು ಅವರನ್ನು ತಾಯ್ನಾಡಿಗೆ ಮರಳಿ ಕರೆತರುವ ಪ್ರಯತ್ನ ನಡೆಸುತ್ತಿದ್ದೇವೆ ಎಂದು ವಿದೇಶಾಂಗ ಸಚಿವಾಲಯ (Ministry of External Affairs) ಗುರುವಾರ ತಿಳಿಸಿದೆ. ʼʼಈ ಎಲ್ಲ ಭಾರತೀಯರನ್ನು ಕರೆತರಲು ಭಾರತ ಸರ್ಕಾರ ರಷ್ಯಾದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮಾತುಕತೆ ನಡೆಸುತ್ತಿದೆʼʼ ಎಂದು ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದರು.

ʼʼಈ ಭಾರತೀಯರನ್ನು ಶೀಘ್ರವಾಗಿ ಬಿಡುಗಡೆಗೊಳಿಸಲು ಭಾರತ ಸರ್ಕಾರ ತೀವ್ರವಾಗಿ ಶ್ರಮಿಸುತ್ತಿದೆʼʼ ಎಂದು ಒತ್ತಿ ಹೇಳಿದ ರಣಧೀರ್ ಜೈಸ್ವಾಲ್, ʼʼರಷ್ಯಾದಲ್ಲಿರುವ ಭಾರತೀಯರಿಗೆ ಯುದ್ಧ ವಲಯಕ್ಕೆ ಹೋಗದಂತೆ ಎಚ್ಚರಿಕೆ ನೀಡಲಾಗಿದೆʼʼ ಎಂದು ಹೇಳಿದರು. “ರಷ್ಯಾದ ಸೈನ್ಯದಲ್ಲಿ ಸಹಾಯಕ ಸಿಬ್ಬಂದಿಯಾಗಿ ಅಥವಾ ಸಹಾಯಕರಾಗಿ ಕೆಲಸ ಮಾಡಲು ಈ 20 ಮಂದಿ ಅಲ್ಲಿಗೆ ಹೋಗಿದ್ದರು. ಇವರು ನಮ್ಮನ್ನು ಸಂಪರ್ಕಿಸಿ ತಾಯ್ನಾಡಿಗೆ ಮರಳಲು ಸಹಾಯ ಕೋರಿದ್ದಾರೆ” ಎಂದು ಮಾಹಿತಿ ನೀಡಿದರು.

ಫೆಬ್ರವರಿ 26ರಂದು, 2022ರ ರಷ್ಯಾ-ಉಕ್ರೇನ್‌ ಯುದ್ಧದಲ್ಲಿ ಸಿಕ್ಕಿಬಿದ್ದ ಹಲವು ಭಾರತೀಯರನ್ನು ಈಗಾಗಲೇ ರಷ್ಯಾದ ಸೈನ್ಯದಿಂದ ಬಿಡುಗಡೆ ಮಾಡಲಾಗಿದೆ ಎಂದು ಎಂಇಎ ಹೇಳಿದೆ. “ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ನವದೆಹಲಿಯ ರಷ್ಯಾ ರಾಯಭಾರ ಕಚೇರಿಯೊಂದಿಗೆ ಫಲಪ್ರದ ಮಾತುಕತೆ ನಡೆಸಿದ ಪರಿಣಾಮ ಹಲವು ಭಾರತೀಯರನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ” ಎಂದು ಎಂಇಎ ತಿಳಿಸಿದೆ. ರಷ್ಯಾದ ಸೈನಿಕರಾಗಿ ನಿಯುಕ್ತಿಗೊಂಡ ಜಮ್ಮು ಮತ್ತು ಕಾಶ್ಮೀರಕ್ಕೆ ಸೇರಿದ ಇಬ್ಬರು ಯುವಕರ ಕುಟುಂಬಗಳು ಇತ್ತೀಚೆಗೆ ಅವರನ್ನು ಮರಳಿ ಕರೆತರಲು ಸಹಾಯ ಮಾಡುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಮನವಿ ಸಲ್ಲಿಸಿತ್ತು.

ಪೋಷಕರು ಹೇಳಿದ್ದೇನು?

ʼʼಭಾರತೀಯ ಯುವಕರಿಗೆ ಹಣದ ಆಮಿಷವೊಡ್ಡಿ, ಅವರನ್ನು ಸೇನೆಯ ಏಜೆಂಟ್‌ಗಳನ್ನಾಗಿ ರಷ್ಯಾ ನೇಮಕ ಮಾಡಿಕೊಂಡಿದೆ. ಇವರನ್ನು ರಕ್ಷಿಸಿ, ಭಾರತಕ್ಕೆ ಕಳುಹಿಸಬೇಕುʼʼ ಎಂದು ಯುವಕರ ಪೋಷಕರು ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ್ದ ರಣಧೀರ್ ಜೈಸ್ವಾಲ್, “ರಷ್ಯಾ ಸೇನೆಯ ಸಹಾಯಕರಾಗಿ ಭಾರತದ ಕೆಲ ಯುವಕರನ್ನು ನೇಮಿಸಲಾಗಿದೆ ಎಂಬುದು ಗೊತ್ತಾಗಿದೆ. ರಷ್ಯಾ ಅಧಿಕಾರಿಗಳ ಜತೆ ಈ ಕುರಿತು ಭಾರತದ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ. ಭಾರತದ ಯುವಕರು ರಷ್ಯಾ ಸೇನೆಗೆ ನೆರವು ನೀಡುವ ಮುನ್ನ ಎಚ್ಚರದಿಂದ ಇರಬೇಕು” ಎಂದು ಹೇಳಿದ್ದರು.

ಇದನ್ನೂ ಓದಿ: ರಷ್ಯಾ-ಉಕ್ರೇನ್​ ನಾಯಕರ ನಡುವೆ ಶಾಂತಿ ಮಾತುಕತೆ ಸಾಧ್ಯವಾಗಿಸಲು ಭಾರತದ ಪ್ರಧಾನಿಯಿಂದ ಮಾತ್ರ ಸಾಧ್ಯ ಎಂದ ಫ್ರೆಂಚ್​ ಪತ್ರಕರ್ತೆ

ವಾಯು ದಾಳಿಗೆ ಭಾರತದ ಯುವಕ ಬಲಿ

ರಷ್ಯಾದಲ್ಲಿ ಉಕ್ರೇನ್‌ ಮಾಡಿದ ಡ್ರೋನ್‌ ದಾಳಿಯಲ್ಲಿ 4 ದಿನಗಳ ಹಿಂದೆ ಭಾರತ ಮೂಲದ ಯುವಕನೊಬ್ಬ ಮೃತಪಟ್ಟಿದ್ದಾನೆ. ರಷ್ಯಾ ಹಾಗೂ ಉಕ್ರೇನ್‌ ಗಡಿಯಲ್ಲಿ ನಡೆದ ಈ ದಾಳಿಯಲ್ಲಿ ಭಾರತದ 23 ವರ್ಷದ ಯುವಕ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ. ಮೃತನನ್ನು ಗುಜರಾತ್‌ನ ಸೂರತ್‌ ಜಿಲ್ಲೆಯ ಹೇಮಿಲ್‌ ಅಶ್ವಿನ್‌ಭಾಯಿ ಮಂಗುಕಿಯಾ ಎಂದು ಗುರುತಿಸಲಾಗಿದೆ. ರಷ್ಯಾದ ಸೇನೆಯ ಸಹಾಯಕನಾಗಿ 2023ರ ಡಿಸೆಂಬರ್‌ನಲ್ಲಿ ಈತ ಸೇರ್ಪಡೆಯಾಗಿದ್ದ. ಈತನು ಸೇನೆಯ ಏಜೆಂಟ್‌ ಆಗಿ ಕೆಲಸ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ. ರಷ್ಯಾದಲ್ಲಿ ನಿಗದಿತ ಗುರಿಗಳ ಮೇಲೆ ಉಕ್ರೇನ್‌ ವಾಯುದಾಳಿ ನಡೆಸಿದೆ. ದಾಳಿಯಲ್ಲಿ ಭಾರತದ ಹಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

America Shootout: ಅಮೆರಿಕದಲ್ಲಿ ಮತ್ತೆ ಶೂಟೌಟ್‌; 4 ಪೊಲೀಸರು ಬಲಿ

America Shootout: ಅಮೆರಿಕದಲ್ಲಿ ಮತ್ತೆ ಶೂಟೌಟ್‌ ಆಗಿದ್ದು, ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಗೆ ನಾಲ್ವರು ಪೊಲೀಸ್‌ ಅಧಿಕಾರಿಗಳು ಬಲಿಯಾಗಿದ್ದು, ಮತ್ತೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ

VISTARANEWS.COM


on

America Shootout
Koo

ಶಾರ್ಲೆಟ್‌: ಅಮೆರಿಕದಲ್ಲಿ ಮತ್ತೆ ಶೂಟೌಟ್‌(America Shootout) ಆಗಿದ್ದು, ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಗೆ ನಾಲ್ವರು ಪೊಲೀಸ್‌ ಅಧಿಕಾರಿಗಳು(Police officers) ಬಲಿಯಾಗಿದ್ದು, ಮತ್ತೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉತ್ತರ ಕೆರೋಲಿನಾ(North Carolina)ದ ಮನೆಯೊಂದಕ್ಕೆ ಬಂದೂಕುಧಾರಿ(ಯೊಬ್ಬ ನುಗ್ಗಿದ್ದ. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆತನನ್ನು ಹಿಡಿಯ ಮುಂದಾದರು. ಈ ವೇಳೆ ಗುಂಡಿನ ಚಕಮಕಿ ನಡೆದಿದ್ದು, ನಾಲ್ವರು ಪೊಲೀಸರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಘಟನೆ ಬಗ್ಗೆ ಶಾರ್ಲೆಟ್‌-ಮೆಕ್ಲೆನ್‌ಬರ್ಗ್‌ ಪೊಲೀಸ್‌ ಅಧಿಕಾರಿ ಜಾನಿ ಜೆನ್ನಿಂಗ್ಸ್‌ ಮಾಹಿತಿ ನೀಡಿದ್ದು, ಅಮಾಯಕ ಜನರ ರಕ್ಷಣೆಗೆಂದು ಕೆಲವು ಪೊಲೀಸರು ಸ್ಥಳಕ್ಕೆ ತೆರಳಿದ್ದರು. ಈ ವೇಳೆ ದುಷ್ಕರ್ಮಿ ಇದ್ದಕ್ಕಿದ್ದಂತೆ ಗುಂಡು ಹಾರಿಸಲು ಶುರು ಮಾಡಿದ್ದಾನೆ. ದುರಾದೃಷ್ಟವಶಾತ್‌ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪ್ರಾಣದ ಹಂಗು ತೊರೆದು ಹೋರಾಡಿದ ನಮ್ಮ ನಾಲ್ವರು ಧೀರ ಪೊಲೀಸ್‌ ಅಧಿಕಾರಿಗಳನ್ನು ಕಳೆದುಕೊಂಡಿದ್ದೇವೆ. ಸತತ ಮೂರು ಗಂಟೆಗಳ ಕಾರ್ಯಾಚರಣೆ ಬಳಿಕ ಮನೆಯೊಳಗೆ ಪೊಲೀಸರಿಗೆ ನುಗ್ಗಲು ಸಾಧ್ಯವಾಗಿತ್ತು. ಮನೆಯ ಹೊರಗೆ ನಿಲ್ಲಿಸಿದ್ದ ಶಸ್ತ್ರ ಸಜ್ಜಿತ ಪೊಲೀಸ್‌ ವಾಹನಗಳು, ಮರ ಗಿಡಗಳು ಸಂಪೂರ್ಣವಾಗಿ ಗುಂಡಿನ ದಾಳಿಗೆ ಧ್ವಂಸಗೊಂಡಿದ್ದವು. ಕೊನೆಗೂ ದುಷ್ಕರ್ಮಿಯನ್ನು ಹೊಡೆದುರುಳಿಸುವಲ್ಲಿ ಪೊಲೀಸರು ಯಶಸ್ವಿಯಾದರು ಎಂದು ತಿಳಿಸಿದರು.

ಮನೆಯ ಒಳಗೆ ಪ್ರವೇಶಿಸಿದಾಗ ಮತ್ತೋರ್ವ ದುಷ್ಕರ್ಮಿ ಹಾಗೂ ಮಹಿಳೆ ಮತ್ತು 17 ವರ್ಷದ ಬಾಲಕ ಅಲ್ಲಿದ್ದರು. ದುಷ್ಕರ್ಮಿಯನ್ನು ಪೊಲೀಸರು ಅರೆಸ್ಟ್‌ ಮಾಡಿದ್ದು, ಅವರ ಹೆಸರು ಬಹಿರಂಗಪಡಿಸಿಲ್ಲ. ಇನ್ನು ಮಹಿಳೆ ಮತ್ತು ಬಾಲಕನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ ಎನ್ನಲಾಗಿದೆ. ಹುತಾತ್ಮರಾದ ಅಧಿಕಾರಿಗಳ ಕುಟುಂಬಸ್ಥರನ್ನು ಭೇಟಿಯಾಗಿರುವ ಅಲ್ಲಿನ ಗವರ್ನರ್‌ ಸಾಂತ್ವನ ಹೇಳಿದ್ದಾರೆ. ಇನ್ನು ಗಾಯಗೊಂಡಿರುವ ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಈ ದುರ್ಘಟನೆಗೆ ಕಾರಣ ಏನು? ದುಷ್ಕರ್ಮಿ ಏಕೆ ಅಲ್ಲಿದ್ದ? ಮಹಿಳೆ ಮತ್ತು ಬಾಲಕ ಏಕೆ ಅಲ್ಲಿದ್ದರು ಹೀಗೆ ಅನೇಕ ಪ್ರಶ್ನೆಗಳಿಗೆ ತನಿಖೆಯಲ್ಲಿ ಉತ್ತರ ಸಿಗಲಿದೆ ಎಂದು ಜೆನ್ನಿಂಗ್‌ ಹೇಳಿದಾರೆ.

ಇದನ್ನೂ ಓದಿ:Hassan Pen Drive Case: ಪೆನ್‌ ಡ್ರೈವ್‌ ಹೊರ ಬಿಡುವ ಚಿಲ್ಲರೆ ಕೆಲಸ ಮಾಡಲ್ಲ; ಅಸೆಂಬ್ಲಿಗೆ ಬರುವಂತೆ ಎಚ್‌ಡಿಕೆಗೆ ಡಿಕೆಶಿ ಸವಾಲು

ಅಮೆರಿಕದಲ್ಲಿ ಕಳೆದ ವರ್ಷವೂ ಒಂದೇ ದಿನ ಮೂರು ಸ್ಥಳಗಳಲ್ಲಿ ಶೂಟೌಟ್‌ ನಡೆದಿತ್ತು ಘಟನೆಯಲ್ಲಿ ಒಟ್ಟು 9 ಜನರು ಮೃತಪಟ್ಟಿದ್ದರು. ಫಿಲಡೆಲ್ಫಿಯಾದಲ್ಲಿ ಮೊದಲು ಇಬ್ಬರ ನಡುವೆ ಗಲಾಟೆ-ಜಗಳ ಶುರುವಾಗಿತ್ತು. ಅವರು ಕೆಲವೇ ಹೊತ್ತಲ್ಲಿ ಪರಸ್ಪರ ಗುಂಡು ಹಾರಿಸಿಕೊಳ್ಳಲು ಶುರು ಮಾಡಿದ್ದರು. ಈ ಹೊಡೆದಾಟದಲ್ಲಿ ಅಲ್ಲಿಯೇ ಇದ್ದ ಬಾರ್‌ & ರೆಸ್ಟೋರೆಂಟ್‌ ಮೇಲೆ ಗುಂಡು ಹಾರಿಸಿದ್ದರಿಂದ ಮೂವರು ಮೃತಪಟ್ಟಿದ್ದರು. 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಅಮೆರಿಕಾದಲ್ಲಿ ಇತ್ತೀಚೆಗೆ ಪದೇಪದೆ ಗುಂಡಿನ ದಾಳಿಯಾಗುತ್ತಿದೆ. ಇದಕ್ಕೂ ಮುನ್ನ ಟೆಕ್ಸಾಸ್‌ನ ಶಾಲೆಯೊಂದರಲ್ಲಿ ನಡೆದ ಶೂಟೌಟ್‌ನಲ್ಲಿ 19 ವಿದ್ಯಾರ್ಥಿಗಳು ಮತ್ತು ಮೂವರು ಶಿಕ್ಷಕಿಯರು ಮೃತಪಟ್ಟಿದ್ದರು. ಅದಾದ ಮೇಲೆ ಓಕ್ಲಹಾಮಾದ ಆಸ್ಪತ್ರೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಸರ್ಜನ್‌ ಸೇರಿ ಐವರ ಸಾವಾಗಿತ್ತು. ಅಷ್ಟಕ್ಕೇ ನಿಲ್ಲದೆ, ಮಿಲ್ವಾಕಿಯ ದಕ್ಷಿಣದಲ್ಲಿ ರೇಸಿನ್‌ ಪ್ರದೇಶದ ಸ್ಮಶಾನದಲ್ಲಿ ಮತ್ತು ಮಧ್ಯಪಶ್ಚಿಮ ಭಾಗದಲ್ಲಿರುವ ಅಯೋವಾದಲ್ಲಿನ ಕಾರ್ನರ್‌ ಸ್ಟೋನ್‌ ಚರ್ಚ್‌ನಲ್ಲಿ ಕೂಡ ಶೂಟೌಟ್‌ ಆಗಿತ್ತು.

Continue Reading

ದೇಶ

Covishield Vaccine: ಕೋವಿಡ್‌ ಲಸಿಕೆಯಿಂದ ಬರುತ್ತೆ ರಕ್ತ ಹೆಪ್ಪುಗಟ್ಟೋ ಕಾಯಿಲೆ! ವಿವರ ನಿಮಗೆ ತಿಳಿದಿರಲಿ

Covishield Vaccine: ಕೋವಿಶೀಲ್ಡ್, ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಅಭಿವೃದ್ಧಿಪಡಿಸಿದ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ತಯಾರಿಸಲ್ಪಟ್ಟ ಲಸಿಕೆ. ನ್ಯಾಯಾಲಯದ ದಾಖಲೆಗಳ ಪ್ರಕಾರ ಅಪರೂಪದ ಸಂದರ್ಭಗಳಲ್ಲಿ ಅದು ಟಿಟಿಎಸ್‌ ಸ್ಥಿತಿಗೆ ಕಾರಣವಾಗಬಹುದು. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಈ ಲಸಿಕೆಯನ್ನು ಭಾರತದಾದ್ಯಂತ ವ್ಯಾಪಕವಾಗಿ ನೀಡಲಾಗಿದೆ.

VISTARANEWS.COM


on

covishield vaccine
Koo

ಹೊಸದಿಲ್ಲಿ: ಬ್ರಿಟಿಷ್ ಔಷಧೀಯ ದೈತ್ಯ ಕಂಪನಿ ಅಸ್ಟ್ರಾಜೆನೆಕಾ (AstraZeneca), ತನ್ನ ಕೋವಿಡ್-19 (Covid 19) ಲಸಿಕೆ ಕೋವಿಶೀಲ್ಡ್ (Covishield Vaccine)‌ ಇದು ಥ್ರಂಬೋಸಿಸ್ ವಿಥ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (Thrombosis with Thrombocytopenia Syndrome – TTS) ಎಂಬ ಅಪರೂಪದ ಅಡ್ಡ ಪರಿಣಾಮವನ್ನು ಉಂಟುಮಾಡಬಹುದು ಎಂದು ಒಪ್ಪಿಕೊಂಡಿದೆ. ಕಂಪನಿಯ ವಿರುದ್ಧ ದಾಖಲಾಗಿರುವ ಒಂದು ಮೊಕದ್ದಮೆಯ ಸಂದರ್ಭದಲ್ಲಿ ಇದನ್ನು ಒಪ್ಪಿಕೊಳ್ಳಲಾಗಿದೆ.

ಈ ಮೊಕದ್ದಮೆಯಲ್ಲಿ ಲಸಿಕೆಗೆ ಸಂಬಂಧಿಸಿ ಗಂಭೀರ ದೈಹಿಕ ಹಾನಿ ಮತ್ತು ಸಾವುಗಳನ್ನು ಆರೋಪಿಸಲಾಗಿದೆ. ಕೋವಿಶೀಲ್ಡ್, ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಅಭಿವೃದ್ಧಿಪಡಿಸಿದ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ತಯಾರಿಸಲ್ಪಟ್ಟ ಲಸಿಕೆ. ನ್ಯಾಯಾಲಯದ ದಾಖಲೆಗಳ ಪ್ರಕಾರ ಅಪರೂಪದ ಸಂದರ್ಭಗಳಲ್ಲಿ ಅದು ಟಿಟಿಎಸ್‌ ಸ್ಥಿತಿಗೆ ಕಾರಣವಾಗಬಹುದು. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಈ ಲಸಿಕೆಯನ್ನು ಭಾರತದಾದ್ಯಂತ ವ್ಯಾಪಕವಾಗಿ ನೀಡಲಾಗಿದೆ.

ಟಿಟಿಎಸ್ ಎಂದರೇನು?

ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (ಟಿಟಿಎಸ್) ಜೊತೆಗಿನ ಥ್ರಂಬೋಸಿಸ್ ಅಪರೂಪದ ಸ್ಥಿತಿಯಾಗಿದ್ದು, ದೇಹದಲ್ಲಿನ ಅಸಾಮಾನ್ಯ ಸ್ಥಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಉಂಟಾಗುತ್ತದೆ. ರಕ್ತದಲ್ಲಿನ ಪ್ಲೇಟ್‌ಲೆಟ್‌ಗಳ ಸಂಖ್ಯೆಯು ಕಡಿಮೆಯಾಗುತ್ತದೆ. ಪ್ಲೇಟ್‌ಲೆಟ್‌ಗಳು ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುವ ಸಣ್ಣ ಕೋಶಗಳು. ಆದ್ದರಿಂದ ಅವು ತುಂಬಾ ಕಡಿಮೆ ಇರುವುದು ಅಪಾಯಕಾರಿ.

ಅಡೆನೊವೈರಲ್ ವೆಕ್ಟರ್ COVID-19 ಲಸಿಕೆಗಳನ್ನು ಪಡೆದ ಜನರಲ್ಲಿ ಈ ಸ್ಥಿತಿಯನ್ನು ಗಮನಿಸಲಾಗಿದೆ. ಉದಾಹರಣೆಗೆ Vaxzevria, Covishield (AstraZeneca) ಮತ್ತು Johnson & Johnson/Janssen COVID-19 ಲಸಿಕೆ ಪಡೆದವರಲ್ಲಿ. ದೇಹದ ರೋಗನಿರೋಧಕ ವ್ಯವಸ್ಥೆಯು ಲಸಿಕೆಗೆ ಪ್ರತಿಕ್ರಿಯಿಸಿ, ರಕ್ತದ ಹೆಪ್ಪುಗಟ್ಟುವಿಕೆಯಲ್ಲಿ ಒಳಗೊಂಡಿರುವ ಪ್ರೋಟೀನ್ ಮೇಲೆ ದಾಳಿ ಮಾಡುವ ಪ್ರತಿಕಾಯಗಳನ್ನು ತಯಾರಿಸುವುದರಿಂದ TTS ಸಂಭವಿಸುತ್ತದೆ.

TTS ಅನ್ನು 2 ಹಂತಗಳಾಗಿ ವರ್ಗೀಕರಿಸಲಾಗಿದೆ.

ಹಂತ 1

  • ಅಪರೂಪದ ರಕ್ತ ಹೆಪ್ಪುಗಟ್ಟುವಿಕೆ, ಮೆದುಳು ಅಥವಾ ಕರುಳಿನಲ್ಲಿ, ಕೆಲವೊಮ್ಮೆ ಕಾಲುಗಳು ಅಥವಾ ಶ್ವಾಸಕೋಶಗಳಲ್ಲಿ.
  • ಕಡಿಮೆ ಪ್ಲೇಟ್ಲೆಟ್ ಎಣಿಕೆ (ಪ್ರತಿ ಮೈಕ್ರೋಲೀಟರ್‌ಗೆ 150,000ಕ್ಕಿಂತ ಕಡಿಮೆ).
  • ಧನಾತ್ಮಕ PF4 ವಿರೋಧಿ ELISA ಪರೀಕ್ಷೆಗಳು ರೋಗನಿರ್ಣಯವನ್ನು ಖಚಿತಪಡಿಸಲು ಸಹಾಯ ಮಾಡುತ್ತದೆ.
  • ಹಂತ 1 ಪ್ರಕರಣಗಳು ಸಾಮಾನ್ಯವಾಗಿ ಹೆಚ್ಚು ತೀವ್ರವಾಗಿರುತ್ತವೆ ಮತ್ತು ಅಪಾಯಕಾರಿಯಾಗಿರುತ್ತವೆ.
  • ಇದು ಯುವ ಜನರಲ್ಲಿ ಹೆಚ್ಚು ಸಾಮಾನ್ಯವಾಗಿದೆ.

ಹಂತ 2

  • ಕಾಲುಗಳು ಅಥವಾ ಶ್ವಾಸಕೋಶಗಳಲ್ಲಿರುವಂತೆ ಸಾಮಾನ್ಯ ರಕ್ತ ಹೆಪ್ಪುಗಟ್ಟುವಿಕೆ.
  • ಕಡಿಮೆ ಪ್ಲೇಟ್ಲೆಟ್ ಎಣಿಕೆ (ಪ್ರತಿ ಮೈಕ್ರೋಲೀಟರ್‌ಗೆ 150,000ಕ್ಕಿಂತ ಕಡಿಮೆ).
  • ರೋಗನಿರ್ಣಯಕ್ಕೆ ಧನಾತ್ಮಕ PF4 ELISA ಪರೀಕ್ಷೆ ಅಗತ್ಯ.

ರೋಗಲಕ್ಷಣಗಳು

TTSನ ಲಕ್ಷಣಗಳು ತೀವ್ರವಾದ ತಲೆನೋವು, ಹೊಟ್ಟೆ ನೋವು, ಕಾಲುಗಳಲ್ಲಿ ಊತ, ಉಸಿರಾಟದ ತೊಂದರೆ, ಚಿಂತನೆಯಲ್ಲಿ ಸಮಸ್ಯೆ, ದೇಹದ ಕಂಪನಗಳು. ಲಸಿಕೆ ಪಡೆದ ನಂತರ ಯಾರಲ್ಲಾದರೂ ಈ ಚಿಹ್ನೆಗಳು ಕಂಡುಬಂದರೆ ಅವರು ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು.

ಇದನ್ನೂ ಓದಿ: Covishield Vaccine: ಕೋವಿಶೀಲ್ಡ್‌ನಿಂದ ಅಡ್ಡ ಪರಿಣಾಮವಿದೆ ಎಂದು ಕೊನೆಗೂ ಒಪ್ಪಿಕೊಂಡ ತಯಾರಿಕೆ ಕಂಪನಿ ಅಸ್ಟ್ರಾಜೆನೆಕಾ

Continue Reading

ಪ್ರಮುಖ ಸುದ್ದಿ

Gurpatwant Singh Pannun: ಪನ್ನುನ್‌ ಹತ್ಯೆ ಸಂಚಿನಲ್ಲಿ ʼರಾʼ ಕೈವಾಡ: ವಾಷಿಂಗ್ಟನ್‌ ವರದಿಗೆ ಭಾರತ ಕಟು ಟೀಕೆ

Gurpatwant Singh Pannun: ವಿಕ್ರಮ್ ಯಾದವ್ ಎಂದು ಗುರುತಿಸಲಾದ ರಾ ಅಧಿಕಾರಿಯು ಯುಎಸ್‌ನಲ್ಲಿ ಗುರುಪತ್‌ವಂತ್ ಸಿಂಗ್ ಪನ್ನುನ್ ಹತ್ಯೆಯ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್‌ನ “ತನಿಖಾ” ವರದಿ ಮಾಡಿತ್ತು. ಈ ಬಳಿಕ MEA ಹೇಳಿಕೆ ಬಂದಿದೆ. ಆ ಸಂದರ್ಭದಲ್ಲಿ ಬೇಹುಗಾರಿಕಾ ಸಂಸ್ಥೆಯ ಮುಖ್ಯಸ್ಥ ಸಮಂತ್ ಗೋಯೆಲ್ ಆಗಿದ್ದರು ಎಂದು ವರದಿ ತಿಳಿಸಿದೆ.

VISTARANEWS.COM


on

Khalistani Separatist Gurpatwant Singh Pannun
Koo

ಹೊಸದಿಲ್ಲಿ: ಅಮೆರಿಕದಲ್ಲಿ ಖಲಿಸ್ತಾನಿ ನಾಯಕ (Khalistan Leader) ಗುರುಪತ್‌ವಂತ್ ಸಿಂಗ್ ಪನ್ನುನ್ (Gurpatwant Singh Pannun) ಹತ್ಯೆಯ ಸಂಚಿನಲ್ಲಿ (murder plot) ಭಾರತದ ʼರಾʼ (RAW) ಅಧಿಕಾರಿಯ ಕೈವಾಡದ ಕುರಿತು ವಾಷಿಂಗ್ಟನ್ ಪೋಸ್ಟ್ (Washington Post) ಮಾಡಿದ ವರದಿಗೆ ಭಾರತ ಮಂಗಳವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ವರದಿಯನ್ನು “ಅನುಚಿತ ಮತ್ತು ಆಧಾರರಹಿತ” ಎಂದು ಟೀಕಿಸಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್, “ಅಮೆರಿಕ ಹಂಚಿಕೊಂಡಿರುವ ಭದ್ರತಾ ಕಳವಳಗಳನ್ನು ಪರಿಶೀಲಿಸಲು ಭಾರತ ಸರ್ಕಾರವು ರಚಿಸಿರುವ ಉನ್ನತ ಮಟ್ಟದ ಸಮಿತಿಯ ತನಿಖೆ ನಡೆಯುತ್ತಿದೆ. ಸಂಘಟಿತ ಅಪರಾಧಿಗಳು, ಭಯೋತ್ಪಾದಕರು ಮತ್ತು ಇತರರ ನೆಟ್‌ವರ್ಕ್‌ಗಳ ಬಗ್ಗೆ ಸರ್ಕಾರವು ಊಹಾತ್ಮಕ ಮತ್ತು ಬೇಜವಾಬ್ದಾರಿಯುತ ಕಾಮೆಂಟ್‌ಗಳನ್ನು ಮಾಡುವುದಿಲ್ಲ ಹಾಗೂ ಅಂಥ ವರದಿಗಳು ಸಹಾಯಕವಾಗುವುದಿಲ್ಲ” ಎಂದಿದ್ದಾರೆ.

ವಿಕ್ರಮ್ ಯಾದವ್ ಎಂದು ಗುರುತಿಸಲಾದ ರಾ ಅಧಿಕಾರಿಯು ಯುಎಸ್‌ನಲ್ಲಿ ಗುರುಪತ್‌ವಂತ್ ಸಿಂಗ್ ಪನ್ನುನ್ ಹತ್ಯೆಯ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್‌ನ “ತನಿಖಾ” ವರದಿ ಮಾಡಿತ್ತು. ಈ ಬಳಿಕ MEA ಹೇಳಿಕೆ ಬಂದಿದೆ. ಆ ಸಂದರ್ಭದಲ್ಲಿ ಬೇಹುಗಾರಿಕಾ ಸಂಸ್ಥೆಯ ಮುಖ್ಯಸ್ಥ ಸಮಂತ್ ಗೋಯೆಲ್ ಆಗಿದ್ದರು ಎಂದು ವರದಿ ತಿಳಿಸಿದೆ.

ಖಲಿಸ್ತಾನ್ ಚಳವಳಿಯ ಪ್ರಮುಖ ಉಗ್ರರಲ್ಲಿ ಒಬ್ಬನಾದ ಗುರುಪತ್ವಂತ್ ಸಿಂಗ್ ಪನ್ನುನ್, ಸಿಖ್ಸ್ ಫಾರ್ ಜಸ್ಟಿಸ್‌ನ ಕಾನೂನು ಸಲಹೆಗಾರ ಮತ್ತು ವಕ್ತಾರನಾಗಿದ್ದಾನೆ. ಇದು ಪ್ರತ್ಯೇಕ ಸಿಖ್ ದೇಶದ ಕಲ್ಪನೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಭಾರತ ಸರ್ಕಾರ ಗುರುಪತ್ವಂತ್ ಸಿಂಗ್ ಪನ್ನೂನ್‌ನನ್ನು ಭಯೋತ್ಪಾದಕ ಎಂದು ಘೋಷಿಸಿದೆ.

ಏತನ್ಮಧ್ಯೆ, ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಯ ಸಂಚಿನ ಆರೋಪಗಳನ್ನು ಭಾರತ ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಶ್ವೇತಭವನ ಸೋಮವಾರ ಹೇಳಿದೆ. ಆದಾಗ್ಯೂ, ಈ ವಿಷಯದ ಬಗ್ಗೆ ಎಫ್‌ಬಿಐ ತನಿಖೆ ಮತ್ತು ನ್ಯಾಯಾಂಗ ಇಲಾಖೆ ಸಲ್ಲಿಸಿದ ಕ್ರಿಮಿನಲ್ ಮೊಕದ್ದಮೆಯ ಬಗ್ಗೆ ಪ್ರತಿಕ್ರಿಯಿಸಿಲ್ಲ. ವಾಷಿಂಗ್ಟನ್ ಪೋಸ್ಟ್‌ನ ವರದಿಯ ಕುರಿತು ಪ್ರಶ್ನೆಗಳಿಗೆ ಉತ್ತರಿಸಿದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರ್, ತನಿಖೆ ನಡೆಯುತ್ತಿದೆ ಮತ್ತು ನ್ಯಾಯಾಂಗ ಇಲಾಖೆ (ಡಿಒಜೆ) ಕ್ರಿಮಿನಲ್ ತನಿಖೆ ನಡೆಸುತ್ತಿದೆ ಎಂದು ಹೇಳಿದರು.

“ಭಾರತವು ಯುನೈಟೆಡ್ ಸ್ಟೇಟ್ಸ್‌ನ ಪ್ರಮುಖ ಕಾರ್ಯತಂತ್ರದ ಪಾಲುದಾರ ಮತ್ತು ನಾವು ಹಲವಾರು ಕ್ಷೇತ್ರಗಳಲ್ಲಿ ನಮ್ಮ ಸಹಕಾರವನ್ನು ವಿಸ್ತರಿಸಲು ಮಹತ್ವಾಕಾಂಕ್ಷೆಯ ಕಾರ್ಯಸೂಚಿಯನ್ನು ಅನುಸರಿಸುತ್ತಿದ್ದೇವೆ” ಎಂದು ಅವರು ಪ್ರತಿಪಾದಿಸಿದರು

ಸುದ್ದಿ ವರದಿಯ ಬಗ್ಗೆ, “ಇದು ಗಂಭೀರ ವಿಷಯವಾಗಿದೆ ಮತ್ತು ನಾವು ಬಹಳ ಗಂಭೀರವಾಗಿ ಪರಿಗಣಿಸುತ್ತಿದ್ದೇವೆ. ತಾವು ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ಭಾರತ ಸರ್ಕಾರವು ನಮ್ಮೊಂದಿಗೆ ಸ್ಪಷ್ಟವಾಗಿ ಹೇಳಿದೆ” ಎಂದು ಜೀನ್-ಪಿಯರ್ ಹೇಳಿದರು. “ನಾವು ಅದರ ಆಧಾರದ ಮೇಲೆ ಭಾರತ ಸರ್ಕಾರದಿಂದ ಉತ್ತರದಾಯಿತ್ವವನ್ನು ನಿರೀಕ್ಷಿಸುತ್ತೇವೆ. ನಾವು ನಮ್ಮ ಕಳವಳ ವ್ಯಕ್ತಪಡಿಸುವುದನ್ನು ಮುಂದುವರಿಸಲಿದ್ದೇವೆ” ಎಂದಿದ್ದಾರೆ.

ಕಳೆದ ವರ್ಷ ಜೂನ್‌ನಲ್ಲಿ ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಸರ್ರೆಯಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್‌ನನ್ನು ಮಾರಣಾಂತಿಕ ಗುಂಡಿನ ದಾಳಿಯಲ್ಲಿ ಕೊಲ್ಲಲಾಗಿತ್ತು. ಯುಎಸ್‌ನಲ್ಲಿ ಪನ್ನುನ್‌ನನ್ನು ಕೊಲ್ಲುವ ಸಂಚು ಜೂನ್ 18ರಂದು ಬಯಲಾಗಿತ್ತು.

ಇದನ್ನೂ ಓದಿ: ಖಲಿಸ್ತಾನಿ ಉಗ್ರರಿಂದ ಕೇಜ್ರಿವಾಲ್‌ಗೆ 133 ಕೋಟಿ ರೂ. ಸಂದಾಯ; ಪನ್ನುನ್‌ ಸ್ಫೋಟಕ ಮಾಹಿತಿ

Continue Reading

ವಿದೇಶ

Pakistan: ಭಾರತ ಸೂಪರ್‌ ಪವರ್‌ ಆಗುತ್ತಿದೆ, ಪಾಕಿಸ್ತಾನ ಮಾತ್ರ ಭಿಕ್ಷೆ ಬೇಡ್ತಿದೆ; ಪಾಕ್ ಸಂಸತ್ ನಲ್ಲೇ ರೋದನ!

Pakistan: ಇಡೀ ಪ್ರಪಂಚದಲ್ಲೇ ಭಾರತ ಬಲಿಷ್ಠ ರಾಷ್ಟ್ರವಾಗಿ ಬೆಳೆಯುತ್ತಿದೆ. ನಾವು ಮಾತ್ರ ಹಣಕಾಸಿನ ಸಹಾಯಕ್ಕಾಗಿ ಭಿಕ್ಷೆ ಬೇಡುತ್ತಿದ್ದೇವೆ ಎಂದು ಪಾಕಿಸ್ತಾನದ ವಿಪಕ್ಷ ನಾಯಕ ಮೌಲಾನ ಫಜ್ಲೂರ್‌ ರೆಹಮಾನ್‌ ಹೇಳಿದ್ದಾರೆ.

VISTARANEWS.COM


on

Koo

ಪಾಕಿಸ್ತಾನ: ಆರ್ಥಿಕ ದಿವಾಳಿತನ(Bankruptcy) ದಿಂದ ತೀರ ಸಂಕಷ್ಟಕ್ಕೆ ಬಿದ್ದಿರುವ ಪಾಕಿಸ್ತಾನ(Pakistan) ಪ್ರಜೆಗಳು ಭಾರತದ ಆಡಳಿತ ವೈಖರಿ ಬಗ್ಗೆ ಹೊಗಳುತ್ತಿರುವ ವಿಡಿಯೋಗಳು ಆಗಾಗ ವೈರಲ್‌ ಆಗುತ್ತಿರುತ್ತವೆ. ಇದೀಗ ಸ್ವತಃ ಅಲ್ಲಿನ ವಿಪಕ್ಷ ನಾಯಕನೇ ಭಾರತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಡೀ ಪ್ರಪಂಚದಲ್ಲೇ ಭಾರತ(India) ಬಲಿಷ್ಠ ರಾಷ್ಟ್ರವಾಗಿ ಬೆಳೆಯುತ್ತಿದೆ. ನಾವು ಮಾತ್ರ ಹಣಕಾಸಿನ ಸಹಾಯಕ್ಕಾಗಿ ಭಿಕ್ಷೆ ಬೇಡುತ್ತಿದ್ದೇವೆ ಎಂದು ಪಾಕಿಸ್ತಾನದ ವಿಪಕ್ಷ ನಾಯಕ ಮೌಲಾನ ಫಜ್ಲೂರ್‌ ರೆಹಮಾನ್‌(Maulana Fazlur Rehman) ಹೇಳಿದ್ದಾರೆ. ಅವರು ಪಾಕಿಸ್ತಾನ ಸಂಸತ್‌ನಲ್ಲಿ ಸರ್ಕಾರ ವೈಫಲ್ಯದ ವಿರುದ್ಧ ವಾಗ್ದಾಳಿ ನಡೆಸುತ್ತಾ ಭಾರತದ ವಿಚಾರವನ್ನು ಪ್ರಸ್ತಾಪಿಸಿದರು. ಭಾರತ ಜಾಗತಿಕ ಮಟ್ಟದಲ್ಲಿ ಸೂಪರ್‌ ಪವರ್‌ಫುಲ್‌ ರಾಷ್ಟ್ರವಾಗಿ ಬೆಳೆಯುತ್ತಿದೆ ಪಾಕಿಸ್ತಾನ ಮಾತ್ರ ದಿವಾಳಿತನದ ಸಾಗುತ್ತಿದೆ. 1947ರಲ್ಲಿ ಭಾರತ ಮತ್ತು ಪಾಕಿಸ್ತಾನ ಸ್ವಾತಂತ್ರ್ಯ ಪಡೆದುಕೊಂಡಿತ್ತು. ಇಂದು ಭಾರತದ ಸ್ಥಿತಿ ಎಲ್ಲಿದೆ ಹಾಗೂ ನಮ್ಮ ಸ್ಥಿತಿ ಎಲ್ಲಿದೆ? ಇಷ್ಟಕ್ಕೆಲ್ಲಾ ಯಾರು ಹೊಣೆ ಎಂದು ಜಮಾತ್‌ ಉಲೇಮಾ ಎ-ಇಸ್ಲಾಂನ ಅಧ್ಯಕ್ಷರೂ ಆಗಿರುವ ಫಜ್ಲೂರ್‌ ರೆಹಮಾನ್‌ ಕಟುವಾಗಿ ಪ್ರಶ್ನಿಸಿದ್ದಾರೆ.

ಅವರು ಇತ್ತೀಚೆಗೆ ನಡೆದ ಚುನಾವಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಎಂಥಾ ಚುನಾವಣೆ? ಇಲ್ಲಿ ಸೋಲುಂಡವರಿಗೆ ತೃಪ್ತಿಯೇ ಇಲ್ಲ ಮತ್ತು ಗೆದ್ದವರಿಗೆ ಸಂತೋಷವೇ ಇಲ್ಲ. ಪ್ರಸ್ತುತ ಆಡಳಿತ ನಡೆಸುತ್ತಿರುವ ಸರ್ಕಾರದ ಸದಸ್ಯರು ನೈತಿಕತೆಯನ್ನು ಮರೆತು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಮಾರಾಟ ಮಾಡುತ್ತಿದ್ದಾರೆ. ಗೋಡೆಗಳ ಹಿಂದೆ ನಮ್ಮನ್ನು ನಿಯಂತ್ರಿಸುವ ಶಕ್ತಿಗಳಿವೆ, ಮತ್ತು ನಾವು ಕೇವಲ ಕೈಗೊಂಬೆಗಳಾಗಿದ್ದಾಗ ಅವರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಫಜ್ಲುರ್ ರೆಹಮಾನ್ ಕಿಡಿ ಕಾರಿದರು.

ಅರಮನೆಗಳಲ್ಲಿ ಸರ್ಕಾರಗಳು ರಚನೆಯಾಗುತ್ತವೆ, ಮತ್ತು ಅಧಿಕಾರಶಾಹಿಗಳು ಪ್ರಧಾನ ಮಂತ್ರಿ ಯಾರು ಎಂದು ನಿರ್ಧರಿಸುತ್ತಾರೆ – ನಾವು ಎಷ್ಟು ದಿನ ರಾಜಿ ಮಾಡಿಕೊಳ್ಳಬೇಕಿದೆ? ಎಷ್ಟು ದಿನ ನಾವು ಶಾಸಕರಾಗಿ ಆಯ್ಕೆಯಾಗಲು ಬಾಹ್ಯ ಶಕ್ತಿಗಳಿಂದ ಸಹಾಯ ಪಡೆಯಬೇಕಿದೆ? ಪಾಕಿಸ್ತಾನ ಮುಸ್ಲಿಂ ಲೀಗ್ (ನವಾಜ್) ಮತ್ತು ಪಾಕಿಸ್ತಾನ್ ಪೀಪಲ್ಸ್ ಪಕ್ಷ ಅಧಿಕಾರದಿಂದ ಕೆಳಗಿಳಿದು ಪಿಟಿಐಗೆ ಸರ್ಕಾರ ರಚಿಸಲು ಅವಕಾಶ ನೀಡಬೇಕೆಂದು ರೆಹಮಾನ್ ಒತ್ತಾಯಿಸಿದ್ದಾರೆ. ಈ ಅಧಿಕಾರವನ್ನು ಬಿಟ್ಟುಬಿಡಿ. ಬಂದು ಇಲ್ಲಿ [ವಿರೋಧ ಪಕ್ಷದ ಬೆಂಚುಗಳಲ್ಲಿ] ಕುಳಿತುಕೊಳ್ಳಿ, ಮತ್ತು ಪಿಟಿಐ ಬಹುಮತ ಸಾಬೀತುಪಡಿಸುವಲ್ಲಿ ಯಶಸಿಯಾದರೆ ಅವರಿಗೆ ಸರ್ಕಾರವನ್ನು ಬಿಟ್ಟುಕೊಡಿ ಎಂದು ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಸಿಎಂ ಹುದ್ದೆ ಅಲಂಕಾರಿಕ ಅಲ್ಲ; 24×7 ಜನರಿಗೆ ಲಭ್ಯ ಇರಬೇಕು; ರಾಜೀನಾಮೆ ನೀಡದ ಕೇಜ್ರಿವಾಲ್‌ಗೆ ಕೋರ್ಟ್‌ ಚಾಟಿ

ಈ ವರ್ಷದ ಫೆಬ್ರುವರಿಯಲ್ಲಿ ಸಂಸತ್ತಿನ ಚುನಾವಣೆಯನ್ನು ನಡೆಸಿದ ಪಾಕಿಸ್ತಾನದಲ್ಲಿ ಯಾವುದೇ ಪಕ್ಷವು ಬಹುಮತವನ್ನು ಗಳಿಸಲಿಲ್ಲ. ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪಿಎಂಎಲ್-ಎನ್ ಸರ್ಕಾರ ರಚಿಸಲು ಪಿಪಿಪಿಯೊಂದಿಗೆ ಮೈತ್ರಿ ರಚಿಸಿ ಶೆಹಬಾಜ್ ಷರೀಫ್ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು. ಪ್ರಸ್ತುತ ಪಾಕಿಸ್ತಾನ ಬಹುದೊಡ್ಡ ಮಟ್ಟದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಆದಾಗ್ಯೂ, IMF ನಿಧಿಯ ಸಹಾಯದಿಂದ, ಆರ್ಥಿಕ ಸ್ಥಿರತೆಯನ್ನು ಶೀಘ್ರದಲ್ಲೇ ಸಾಧಿಸಬಹುದು ಎಂದು ಸರ್ಕಾರ ಆಶಿಸಿದೆ.

Continue Reading
Advertisement
National Commission for Women enters Prajwal Hassan Pen Drive Case Letter to DG to submit report within 3 days
ಕ್ರೈಂ28 seconds ago

Hassan Pen Drive Case: ಪ್ರಜ್ವಲ್‌ ಕೇಸ್‌ಗೆ ರಾಷ್ಟ್ರೀಯ ಮಹಿಳಾ ಆಯೋಗ ಎಂಟ್ರಿ; 3 ದಿನದಲ್ಲಿ ವರದಿ ಕೊಡಲು ಡಿಜಿಗೆ ಪತ್ರ

T20 World Cup 2024
ಕ್ರೀಡೆ14 mins ago

T20 World Cup 2024: ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸಿದ ಇಂಗ್ಲೆಂಡ್​, ದಕ್ಷಿಣ ಆಫ್ರಿಕಾ

America Shootout
ವಿದೇಶ24 mins ago

America Shootout: ಅಮೆರಿಕದಲ್ಲಿ ಮತ್ತೆ ಶೂಟೌಟ್‌; 4 ಪೊಲೀಸರು ಬಲಿ

Hassan Pen Drive Case does not work as a discharge petal says DK Shivakumar
ರಾಜಕೀಯ1 hour ago

Hassan Pen Drive Case: ಪೆನ್‌ ಡ್ರೈವ್‌ ಹೊರ ಬಿಡುವ ಚಿಲ್ಲರೆ ಕೆಲಸ ಮಾಡಲ್ಲ; ಅಸೆಂಬ್ಲಿಗೆ ಬರುವಂತೆ ಎಚ್‌ಡಿಕೆಗೆ ಡಿಕೆಶಿ ಸವಾಲು

Toyota Kirloskar Motor Introduces New G-AT Grade of Toyota Rumion
ದೇಶ2 hours ago

Toyota Kirloskar Motor: ಟೊಯೊಟಾ ರುಮಿಯಾನ್‌ G-AT ಬುಕ್ಕಿಂಗ್‌ ಶುರು! ಏನಿದರ ವಿಶೇಷ?

Rohit Sharma Birthday
ಕ್ರೀಡೆ2 hours ago

Rohit Sharma Birthday: ಬೌಲರ್​ ಆಗಿದ್ದ ರೋಹಿತ್​ ಹಿಟ್​ಮ್ಯಾನ್​ ಆಗಿದ್ದೇಗೆ?; ಕ್ರಿಕೆಟ್​ ಜರ್ನಿಯೇ ರೋಚಕ

covishield vaccine
ದೇಶ2 hours ago

Covishield Vaccine: ಕೋವಿಡ್‌ ಲಸಿಕೆಯಿಂದ ಬರುತ್ತೆ ರಕ್ತ ಹೆಪ್ಪುಗಟ್ಟೋ ಕಾಯಿಲೆ! ವಿವರ ನಿಮಗೆ ತಿಳಿದಿರಲಿ

Supreme Court
ದೇಶ2 hours ago

Supreme Court: 14 ವರ್ಷದ ಬಾಲಕಿಯ ಗರ್ಭಪಾತಕ್ಕೆ ಅನುಮತಿ ನೀಡಿ, ಬಳಿಕ ನಿರ್ಧಾರ ವಾಪಸ್‌ ಪಡೆದ ಸುಪ್ರೀಂ

Ballari City MLA Nara Bharat Reddy Election Campaign for Ballari Lok Sabha Constituency Congress Candidate E Tukaram
ಬಳ್ಳಾರಿ2 hours ago

Lok Sabha Election 2024: ಬಳ್ಳಾರಿಗೆ ಕೈಗಾರಿಕೆಗಳನ್ನು ತಂದ ಶ್ರೇಯಸ್ಸು ಕಾಂಗ್ರೆಸ್ ಪಕ್ಷದ್ದು: ನಾರಾ ಭರತ್ ರೆಡ್ಡಿ

maoists killed bastar
ಪ್ರಮುಖ ಸುದ್ದಿ2 hours ago

Maoists killed: ಭದ್ರತಾ ಪಡೆಗಳ ಜತೆ ಗುಂಡಿನ ಚಕಮಕಿ, ಏಳು ಮಾವೋವಾದಿಗಳು ಫಿನಿಶ್

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ10 hours ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20241 day ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20241 day ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20242 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20242 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20242 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20242 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest2 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌