Tahawwur Rana: 26/11 ಮುಂಬೈ ದಾಳಿಯ ಭಾಗವಾಗಿದ್ದ ಪಾಕ್‌ ಮೂಲದ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಒಪ್ಪಿಗೆ - Vistara News

ವಿದೇಶ

Tahawwur Rana: 26/11 ಮುಂಬೈ ದಾಳಿಯ ಭಾಗವಾಗಿದ್ದ ಪಾಕ್‌ ಮೂಲದ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಒಪ್ಪಿಗೆ

Tahawwur Rana: ಭಾರತದ ಕಾನೂನು ಹೋರಾಟಕ್ಕೆ ಜಯ ಲಭಿಸಿದ್ದು, 2008ರ 26/11 ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಶಾಮೀಲಾಗಿರುವ ಪಾಕ್‌ ಮೂಲದ ಕೆನಡಾ ಉದ್ಯಮಿ ತಹವ್ವೂರ್‌ ರಾಣಾನನ್ನು ಹಸ್ತಾಂತರಿಸಬೇಕೆಂದು ಕೋರಿದ್ದ ಭಾರತದ ಮನವಿಯನ್ನು ಅಮೆರಿಕ ಕೋರ್ಟ್‌ ಅಂಗೀಕರಿಸಿದೆ. “ರಾಣಾ ಭಾಗಿಯಾಗಿದ್ದ ಅಪರಾಧ ಕೃತ್ಯವು ಅಮೆರಿಕ ಮತ್ತು ಭಾರತದ ನಡುವಿನ ಹಸ್ತಾಂತರ ಒಪ್ಪಂದದ ನಿಯಮದ ಅಡಿಯಲ್ಲಿ ಬರುತ್ತದೆ. ಹೀಗಾಗಿ ರಾಣಾನ ಹಸ್ತಾಂತರಕ್ಕೆ ಯಾವುದೇ ಕಾನೂನು ತೊಡಕು ಎದುರಾಗುವುದಿಲ್ಲʼʼ ಎಂದು ಅಮೆರಿಕದ 9ನೇ ಸರ್ಕ್ಯೂಟ್‌ನ ಮೇಲ್ಮನವಿ ನ್ಯಾಯಾಲಯ ಸ್ಪಷ್ಪಪಡಿಸಿದೆ.

VISTARANEWS.COM


on

Tahawwur Rana
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಾಷಿಂಗ್ಟನ್‌: 2008ರ 26/11 ಮುಂಬೈ ಭಯೋತ್ಪಾದಕ ದಾಳಿ (26/11 Mumbai terror attacks)ಯಲ್ಲಿ ಶಾಮೀಲಾಗಿರುವ ಪಾಕ್‌ ಮೂಲದ ಕೆನಡಾ ಉದ್ಯಮಿ ತಹವ್ವೂರ್‌ ರಾಣಾ (Tahawwur Rana)ನನ್ನು ಹಸ್ತಾಂತರಿಸಬೇಕೆಂದು ಕೋರಿದ್ದ ಭಾರತದ ಮನವಿಯನ್ನು ಅಮೆರಿಕ ಕೋರ್ಟ್‌ ಅಂಗೀಕರಿಸಿದೆ. ಉಭಯ ದೇಶಗಳ ನಡುವಿನ ಹಸ್ತಾಂತರ ಒಪ್ಪಂದದ ಪ್ರಕಾರ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಬಹುದು ಎಂದು ಮಹತ್ವದ ತೀರ್ಪು ನೀಡಿದೆ.

ಮುಂಬೈ ದಾಳಿಯ ಮುನ್ನ ಬೇಹುಗಾರಿಕೆ ನಡೆಸಲು ಡೇವಿಡ್ ಕೋಲ್ಮನ್ ಹೆಡ್ಲಿಗೆ ರಾಣಾ ಸಹಾಯ ಮಾಡಿದ್ದಾನೆ ಮತ್ತು 24 ವಿದೇಶಿ ಪ್ರಜೆಗಳು ಸೇರಿದಂತೆ 166 ಜನರ ಸಾವಿಗೆ ಕಾರಣವಾದ ಈ ದಾಳಿಯನ್ನು ಸಂಘಟಿಸುವಲ್ಲಿ ಲಷ್ಕರ್-ಎ-ತೈಬಾ (LeT) ಸಂಘಟನೆಗೆ ಬೆಂಬಲವನ್ನು ಒದಗಿಸಿದ್ದಾನೆ ಎಂದು ಭಾರತೀಯ ಅಧಿಕಾರಿಗಳು ಆರೋಪಿಸಿ, ಆತನನ್ನು ಹಸ್ತಾಂತರಿಸಬೇಕು ಎಂದು ಮನವಿ ಸಲ್ಲಿಸಿದ್ದರು. ಮುಂಬೈ ಮತ್ತು ಕೋಪನ್ ಹ್ಯಾಗನ್ ಸೇರಿದಂತೆ ಅಮೆರಿಕ ಹೊರಗೆ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಪಿತೂರಿ ಮಾಡಿದ್ದಾಕ್ಕಾಗಿ ರಾಣಾನನ್ನು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್‌ (FBI) 2009ರಲ್ಲಿ ಬಂಧಿಸಿತ್ತು.

“ರಾಣಾ ಭಾಗಿಯಾಗಿದ್ದ ಅಪರಾಧ ಕೃತ್ಯವು ಅಮೆರಿಕ ಮತ್ತು ಭಾರತದ ನಡುವಿನ ಹಸ್ತಾಂತರ ಒಪ್ಪಂದದ ನಿಯಮದ ಅಡಿಯಲ್ಲಿ ಬರುತ್ತದೆ. ಹೀಗಾಗಿ ರಾಣಾನ ಹಸ್ತಾಂತರಕ್ಕೆ ಯಾವುದೇ ಕಾನೂನು ತೊಡಕು ಎದುರಾಗುವುದಿಲ್ಲʼʼ ಎಂದು ಅಮೆರಿಕದ 9ನೇ ಸರ್ಕ್ಯೂಟ್‌ನ ಮೇಲ್ಮನವಿ ನ್ಯಾಯಾಲಯ ಸ್ಪಷ್ಪಪಡಿಸಿದೆ.

ಕಳೆದ ವರ್ಷ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಮುಂಬೈ ಪೊಲೀಸ್‌ನ ಅಪರಾಧ ವಿಭಾಗವು ಹೆಡ್ಲಿಯೊಂದಿಗೆ ರಾಣಾ ಸಹ-ಪಿತೂರಿಗಾರ ಮಾತ್ರವಲ್ಲ, ದಾಳಿ ನಡೆಸುವ ಯೋಜನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾನೆ ಎಂದು ಉಲ್ಲೇಖಿಸಿತ್ತು. 2020ರಲ್ಲಿ ರಾಣಾ ಹಸ್ತಾಂತರಕ್ಕಾಗಿ ಭಾರತವು ಸಲ್ಲಿಸಿದ್ದ ಮನವಿಗೆ ಜೋ ಬೈಡನ್ ಸರ್ಕಾರ ಬೆಂಬಲ ಸೂಚಿಸಿತ್ತು. 2023ರ ಮೇ 1ರಂದು ನ್ಯಾಯಾಲಯವು ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಸಮ್ಮತಿ ಸೂಚಿಸಿತ್ತು. ಬಳಿಕ ಇದರ ವಿರುದ್ಧ 63 ವರ್ಷದ ರಾಣಾ ಕ್ಯಾಲಿಫೋರ್ನಿಯಾದ ಹೇಬಿಯಸ್ ನ್ಯಾಯಾಲಯದ ಮೊರೆ ಹೋಗಿದ್ದ. ಅದಾಗ್ಯೂ 2023ರ ಆಗಸ್ಟ್ 10ರಂದು ಈ ಅರ್ಜಿಯನ್ನು ಕೋರ್ಟ್‌ ತಿರಸ್ಕರಿಸಿತ್ತು. ನಂತರ ಆತ ಸರ್ಕ್ಯೂಟ್ ನ್ಯಾಯಾಲಯವನ್ನು ಸಂಪರ್ಕಿಸಿದ್ದ. ಇದೀಗ ಇಲ್ಲೂ ಹಿನ್ನಡೆಯಾಗಿದೆ.

ಇನ್ನೂ ಅವಕಾಶವಿದೆ

ಅಚ್ಚರಿ ಎಂದರೆ ರಾಣಾಗೆ ತೀರ್ಪಿನ ವಿರುದ್ಧ ಇನ್ನೂ ಮೇಲ್ಮನವಿ ಸಲ್ಲಿಸುವ ಆಯ್ಕೆ ಇದೆ. ಭಾರತಕ್ಕೆ ಗಡೀಪಾರು ಮಾಡುವುದನ್ನು ತಡೆಯುವಂತೆ ಮನವಿ ಸಲ್ಲಿಸಲು ಹಲವು ಮಾರ್ಗಗಳಿವೆ ಎಂದು ಮೂಲಗಳು ತಿಳಿಸಿವೆ. ಅಮೆರಿಕ ಕಾನೂನಿನ ಪ್ರಕಾರ, ರಾಣಾನನ್ನು ಭಾರತಕ್ಕೆ ಹಸ್ತಾಂತರಿಸದಿದ್ದರೆ 2027ರಲ್ಲಿ ಜೈಲು ಶಿಕ್ಷೆ ಪೂರ್ಣಗೊಂಡ ನಂತರ ಆತನನ್ನು ತಾಯ್ನಾಡಾದ ಕೆನಡಾಕ್ಕೆ ಗಡೀಪಾರು ಮಾಡಲಾಗುತ್ತದೆ.

ಭಯೋತ್ಪಾದಕ ದಾಳಿಯ ಕರಾಳ ನೆನಪು

2008ರ ನವೆಂಬರ್ 26ರಂದು ಲಷ್ಕರ್-ಎ-ತೊಯ್ಬಾದ 10 ಭಯೋತ್ಪಾದಕರು ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ ಮುಂಬೈಗೆ ಬಂದು, ನಗರದಾದ್ಯಂತ ಹಲವು ಸ್ಥಳಗಳಲ್ಲಿ ದಾಳಿ ಮಾಡಿದರು. ದಾಳಿಯಲ್ಲಿ 26 ವಿದೇಶಿ ನಾಗರಿಕರು ಸೇರಿದಂತೆ 166 ಜನರು ಸಾವನ್ನಪ್ಪಿದ್ದರು.

ಇದನ್ನೂ ಓದಿ: Sajid Mir: ಮುಂಬೈ ದಾಳಿಯ ಉಗ್ರನಿಗೆ ಪಾಕ್‌ ಜೈಲಿನಲ್ಲೇ ವಿಷ ಪ್ರಾಶನ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Air India Hostess: ಹೋಟೆಲ್‌ನಲ್ಲಿ ಏರ್‌ ಇಂಡಿಯಾ ಗಗನಸಖಿ ಮೇಲೆ ಹಲ್ಲೆ; ನೆಲಕ್ಕೆ ಕೆಡವಿ ಎಳೆದಾಡಿದ ದುಷ್ಕರ್ಮಿ

Air India Hostess: ಏರ್‌ ಇಂಡಿಯಾ ವಿಮಾನದ ಗಗನಸಖಿಯೊಬ್ಬರ ಮೇಲೆ ಇಂಗ್ಲೆಂಡ್‌ನ ಲಂಡನ್‌ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಹಲ್ಲೆ ನಡೆದಿರುವ ಆಘಾತಕಾರಿ ಘಟನೆ ನಡೆದಿದೆ. ಗಗನಸಖಿ ತಂಗಿದ್ದ ಹೋಟೆಲ್‌ ರೂಮ್‌ಗೆ ನುಗ್ಗಿದ ಅಪರಿಚಿತನೊಬ್ಬ ಹಲ್ಲೆ ನಡೆಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ಲಂಡನ್‌ನ ಹೀಥ್ರೂನಲ್ಲಿರುವ ರಾಡಿಸನ್ ರೆಡ್ ಹೋಟೆಲ್‌ನಲ್ಲಿ ಆಗಸ್ಟ್‌ 15ರಂದು ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

VISTARANEWS.COM


on

Air India Hostess
Koo

ಲಂಡನ್‌: ಏರ್‌ ಇಂಡಿಯಾ ವಿಮಾನದ ಗಗನಸಖಿ (Air India Hostess)ಯೊಬ್ಬರ ಮೇಲೆ ಇಂಗ್ಲೆಂಡ್‌ನ ಲಂಡನ್‌ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಹಲ್ಲೆ ನಡೆದಿರುವ ಆಘಾತಕಾರಿ ಘಟನೆ ನಡೆದಿದೆ. ಗಗನಸಖಿ ತಂಗಿದ್ದ ಹೋಟೆಲ್‌ ರೂಮ್‌ಗೆ ನುಗ್ಗಿದ ಅಪರಿಚಿತನೊಬ್ಬ ಹಲ್ಲೆ ನಡೆಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಲಂಡನ್‌ನ ಹೀಥ್ರೂನಲ್ಲಿರುವ ರಾಡಿಸನ್ ರೆಡ್ ಹೋಟೆಲ್‌ನಲ್ಲಿ ಆಗಸ್ಟ್‌ 15ರಂದು ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಏರ್ ಇಂಡಿಯಾ ವಿಮಾನದ ಹಲವು ಸಿಬ್ಬಂದಿ ತಂಗಿರುವ ಈ ಹೋಟೆಲ್‌ಗೆ ನುಗ್ಗಿದ ದುಷ್ಕರ್ಮಿ ಏಕಾಏಕಿ ದಾಳಿ ನಡೆಸಿದ್ದಾನೆ. ಸದ್ಯ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ಹಲ್ಲೆಗೊಳಗಾದ ಗಗನಸಖಿಗೆ ಸೂಕ್ತ ಚಿಕಿತ್ಸೆ ನೀಡಿ ಭಾರತಕ್ಕರ ಕರೆತರಲಾಗುತ್ತಿದೆ ಎಂದು ವರದಿಯಾಗಿದೆ.

“ಪ್ರಮುಖ ಅಂತಾರಾಷ್ಟ್ರೀಯ ಹೋಟೆಲ್‌ನಲ್ಲಿ ನಡೆದ ಈ ಕಾನೂನುಬಾಹಿರ ಒಳನುಸುಳುವಿಕೆಯಿಂದ ಆಘಾತಕ್ಕೆ ಒಳಗಾಗಿದ್ದೇವೆ. ಇದು ನಮ್ಮ ಸಿಬ್ಬಂದಿಯೊಬ್ಬರ ಮೇಲೆ ಪರಿಣಾಮ ಬೀರಿದೆ. ಕೌನ್ಸಿಲಿಂಗ್‌ ಸೇರಿದಂತೆ ನಮ್ಮ ಸಹೋದ್ಯೋಗಿಗಳಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಿದ್ದೇವೆʼʼ ಎಂದು ಏರ್‌ ಇಂಡಿಯಾ ತಿಳಿಸಿದೆ.

ಏರ್‌ ಇಂಡಿಯಾ ವಿಮಾನದ ಸಿಬ್ಬಂದಿ ತಂಗಿರುವ ಹೋಟೆಲ್‌ನಲ್ಲಿ ಮಧ್ಯರಾತ್ರಿಯ ವೇಳೆಗೆ ಈ ಘಟನೆ ನಡೆದಿದೆ. ʼʼಗಗನಸಖಿ ತಮ್ಮ ರೂಮ್‌ನಲ್ಲಿ ನಿದ್ರಿಸುತ್ತಿದ್ದರು. ಮಧ್ಯರಾತ್ರಿ ಸುಮಾರು 1.30ರ ವೇಳೆಗೆ ಆಗಂತುಕನೊಬ್ಬ ಗಗನಸಖಿಯ ರೂಮ್‌ಗೆ ನುಗ್ಗಿದ. ಅನಿರೀಕ್ಷಿತ ಘಟನೆಯಿಂದ ಆಘಾತಕ್ಕೊಳಗಾದ ಆಕೆ ಕೂಡಲೇ ಸಹಾಯಕ್ಕಾಗಿ ಕೂಗಿಕೊಂಡರು. ಸಿಟ್ಟಿನಿಂದ ಆತ ಹ್ಯಾಂಗರ್‌ನಿಂದ ಹಲ್ಲೆ ನಡೆಸಿದ. ಅಲ್ಲದೆ ತಪ್ಪಿಸಿಕೊಳ್ಳಲು ಯತ್ನಿಸಿದ ಆಕೆಯನ್ನು ನೆಲಕ್ಕೆ ಕೆಡವಿ ಎಳೆದಾಡಿದ್ದಾನೆʼʼ ಎಂದು ಮೂಲಗಳು ತಿಳಿಸಿವೆ.

ಈ ದಾಳಿಯಿಂದ ಗಗನಸಖಿ ತೀವ್ರವಾಗಿ ಗಾಯಗೊಂಡಿದ್ದರು. ನಂತರ ಪೊಲೀಸರನ್ನು ಕರೆಸಿ ಆತನನ್ನು ಅವರ ವಶಕ್ಕೆ ಒಪ್ಪಿಸಲಾಯಿತು. ದಾಳಿಗೊಳಗಾದ ಗಗನಸಖಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಅವರೊಂದಿಗೆ ಸ್ನೇಹಿತರು ಉಳಿದುಕೊಂಡಿದ್ದರು. ಈ ಹಿಂದೆಯೂ ವಿಮಾನ ಸಿಬ್ಬಂದಿ ತಮಗಾಗುತ್ತಿರುವ ಕರಾಳ ಅನುಭವಗಳ ಬಗ್ಗೆ ದೂರು ನೀಡಿದ್ದರು. ಸೂಕ್ತ ದೀಪದ ವ್ಯವಸ್ಥೆ ಇಲ್ಲದಿರುವುದು, ಪದೇ ಪದೆ ಬಾಗಿಲು ತಟ್ಟುವುದು ಇತ್ಯಾದಿ ಅನುಭವಗಳ ಬಗ್ಗೆ ಮಾಹಿತಿ ನೀಡಿದ್ದರು. ಸದ್ಯ ದುಷ್ಕರ್ಮಿ ಯಾಕಾಗಿ ಈ ದಾಳಿ ನಡೆಸಿದ್ದಾನೆ ಎನ್ನುವ ಬಗ್ಗೆ ಮಾಹಿತಿ ಲಭಿಸಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಇದನ್ನೂ ಓದಿ: Air India: ಟೀಮ್​ ಇಂಡಿಯಾ ಆಟಗಾರರನ್ನು ಕರೆ ತಂದ ಏರ್‌ ಇಂಡಿಯಾಗೆ ವರದಿ ಕೇಳಿದ ಡಿಜಿಸಿಎ; ಕಾರಣವೇನು?

ಏರ್‌ ಇಂಡಿಯಾ ಹೇಳಿದ್ದೇನು?

ಏರ್ ಇಂಡಿಯಾ ವಕ್ತಾರರು ಈ ಘಟನೆ ಬಗ್ಗೆ ಮಾತನಾಡಿ, ವಿಮಾನಯಾನ ಸಿಬ್ಬಂದಿಗೆ ಕೌನ್ಸಿಲಿಂಗ್‌ ಸೇರಿದಂತೆ ಸಾಧ್ಯವಿರುವ ಎಲ್ಲ ನೆರವನ್ನು ನೀಡಲು ಬದ್ಧ ಎಂದು ಹೇಳಿದ್ದಾರೆ. ಜತೆಗೆ ತನ್ನ ಸಿಬ್ಬಂದಿಯ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಏರ್‌ ಇಂಡಿಯಾ ಆದ್ಯತೆ ನೀಡುತ್ತದೆ ಎಂದು ಭರವಸೆ ನೀಡಿದ್ದಾರೆ. ʼʼಈ ವಿಷಯವನ್ನು ಕಾನೂನಿನ ವ್ಯಾಪ್ತಿಗೆ ತರಲು ಏರ್ ಇಂಡಿಯಾ ಸ್ಥಳೀಯ ಪೊಲೀಸರೊಂದಿಗೆ ಸಮಾಲೋಚನೆ ನಡೆಸುತ್ತಿದೆ. ಜತೆಗೆ ಇಂತಹ ಘಟನೆ ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಹೋಟೆಲ್ ಆಡಳಿತ ಮಂಡಳಿಗೆ ಸೂಚಿಸಲಾಗಿದೆʼʼ ಎಂದು ವಕ್ತಾರರು ಹೇಳಿದ್ದಾರೆ.

Continue Reading

ದೇಶ

PM Narendra Modi: ರಾಜತಾಂತ್ರಿಕ ಮಾತುಕತೆಯೇ ಸಂಘರ್ಷಕ್ಕೆ ಪರಿಹಾರ..ದೂರವಾಣಿ ಮೂಲಕ ಮೋದಿ- ನೆತನ್ಯಾಹು ಸಂಭಾಷಣೆ

PM Narendra Modi: ಇಸ್ರೇಲ್‌ನ ಸೇನಾ ಕಾರ್ಯಾಚರಣೆಯಲ್ಲಿ ಗಾಜಾಪಟ್ಟಿಯನ್ನು ಸಂಪೂರ್ಣವಾಗಿ ಪುಡಿಗಟ್ಟಲಾಗಿದೆ. ಅಲ್ಲದೇ 40,000 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರನ್ನು ಇಸ್ರೇಲ್‌ ಸೇನೆ ಕೊಂದಿದೆ. ಪ್ಯಾಲೇಸ್ಟಿನಿಯನ್ ಆರೋಗ್ಯ ಅಧಿಕಾರಿಗಳ ಪ್ರಕಾರ. 17,000 ಹಮಾಸ್ ಉಗ್ರನ್ನು ಮಟ್ಟಹಾಕುವಲ್ಲಿ ಇಸ್ರೇಲ್‌ ಯಶಸ್ವಿಯಾಗಿದೆ. ಎಲ್ಲಾ ಒತ್ತೆಯಾಳುಗಳನ್ನು ತಕ್ಷಣವೇ ಬಿಡುಗಡೆ ಮಾಡಲು ಮತ್ತು ಮಾನವೀಯತೆ ತೋರುವಂತೆ ನೆತನ್ಯಾಹು ಜೊತೆಗಿನ ಮಾತುಕತೆ ವೇಳೆ ಪ್ರಧಾನಿ ಮೋದಿ ಪುನರುಚ್ಚರಿಸಿದರು.

VISTARANEWS.COM


on

PM Narendra Modi
Koo

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ಇಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು(Benjamin Netanyahu) ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಸರಿ ಸುಮಾರು ಒಂದು ವರ್ಷದಿಂದ ಭುಲೆದ್ದಿರುವ ಸಂಘರ್ಷವನ್ನು ಪರಸ್ಪರ ಮಾತುಕತೆ ಮತ್ತು ರಾಜತಾಂತ್ರಿಕತೆ ಮೂಲಕ ಶೀಘ್ರ ಮತ್ತು ಶಾಂತಿಯುತವಾಗಿ ಪರಿಹರಿಸುವಂತೆ ಮೋದಿ ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ಪಶ್ಚಿಮ ಏಷ್ಯಾದಲ್ಲಿ ಕಳೆದ ವರ್ಷ ಅಕ್ಟೋಬರ್ 7 ರಂದು ಪ್ಯಾಲೇಸ್ಟಿನಿಯನ್‌ ಮೂಲದ ಹಮಾಸ್ ಉಗ್ರರು ಇಸ್ರೇಲ್‌ಗೆ ನುಗ್ಗಿ ಸುಮಾರು 1,200 ಜನರನ್ನು ಕೊಂದು, ಸುಮಾರು 250 ಜನರನ್ನು ಅಪಹರಿಸಿ ಒತ್ತೆಯಾಳುಗಳನ್ನಾಗಿರಿಸಿಕೊಂಡ ನಂತರ ಈ ಸಂಘರ್ಷ ಶುರುವಾಗಿತ್ತು. ಇಸ್ರೇಲ್‌ನ ಸೇನಾ ಕಾರ್ಯಾಚರಣೆಯಲ್ಲಿ ಗಾಜಾಪಟ್ಟಿಯನ್ನು ಸಂಪೂರ್ಣವಾಗಿ ಪುಡಿಗಟ್ಟಲಾಗಿದೆ. ಅಲ್ಲದೇ 40,000 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರನ್ನು ಇಸ್ರೇಲ್‌ ಸೇನೆ ಕೊಂದಿದೆ. ಪ್ಯಾಲೇಸ್ಟಿನಿಯನ್ ಆರೋಗ್ಯ ಅಧಿಕಾರಿಗಳ ಪ್ರಕಾರ. 17,000 ಹಮಾಸ್ ಉಗ್ರನ್ನು ಮಟ್ಟಹಾಕುವಲ್ಲಿ ಇಸ್ರೇಲ್‌ ಯಶಸ್ವಿಯಾಗಿದೆ. ಎಲ್ಲಾ ಒತ್ತೆಯಾಳುಗಳನ್ನು ತಕ್ಷಣವೇ ಬಿಡುಗಡೆ ಮಾಡಲು ಮತ್ತು ಮಾನವೀಯತೆ ತೋರುವಂತೆ ನೆತನ್ಯಾಹು ಜೊತೆಗಿನ ಮಾತುಕತೆ ವೇಳೆ ಪ್ರಧಾನಿ ಮೋದಿ ಪುನರುಚ್ಚರಿಸಿದರು.

ಉಭಯ ನಾಯಕರು ಪಶ್ಚಿಮ ಏಷ್ಯಾದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಯನ್ನು ಚರ್ಚಿಸಿದ್ದಾರೆ. ಉಭಯ ನಾಯಕರು ದ್ವಿಪಕ್ಷೀಯ ಸಹಕಾರದ ವಿವಿಧ ಅಂಶಗಳನ್ನು ಮತ್ತು ಭಾರತ-ಇಸ್ರೇಲ್ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಬಗ್ಗೆಯೂ ಚರ್ಚಿಸಿದ್ದಾರೆ. ಅಲ್ಲದೇ ಸದಾ ಪರಸ್ಪರರ ಜೊತೆ ಸಂಪರ್ಕ ಕಾಪಾಡಿಕೊಳ್ಳುವ ಬಗ್ಗೆಯೂ ಚರ್ಚೆ ನಡೆಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಥವಾ MEA ಹೇಳಿದೆ.

ಇಸ್ರೇಲ್ ಮತ್ತು ಹಮಾಸ್ ನಡುವಿನ ಹೋರಾಟವನ್ನು ಕೊನೆಗೊಳಿಸಲು ಮತ್ತು ಉಳಿದ ಒತ್ತೆಯಾಳುಗಳನ್ನು ಮುಕ್ತಗೊಳಿಸಲು ಇಂದು ದೋಹಾದಲ್ಲಿ ನಡೆಯಬೇಕಾಗಿದ್ದ ಗಾಜಾ ಕದನ ವಿರಾಮ ಮಾತುಕತೆಗಳನ್ನು ಶುಕ್ರವಾರ ರದ್ದುಗೊಂಡಿದೆ. ಇದುವರೆಗಿನ ಮಾತುಕತೆಯಲ್ಲಿ ಹಮಾಸ್‌ ಪ್ರತಿನಿಧಿಗಳು ನೇರವಾಗಿ ಔಆಗಿಯಾಗಿರಲೇ ಇಲ್ಲ. ಕಳೆದ ವರ್ಷ ಡಿಸೆಂಬರ್‌ನಲ್ಲಿ, ಅಂದರೆ ಗಾಜಾದಲ್ಲಿ ಯುದ್ಧ ಪ್ರಾರಂಭವಾದ ಎರಡು ತಿಂಗಳ ನಂತರ, ಪ್ರಧಾನಿ ಮೋದಿ ಅವರು ಬೆಂಜಮಿನ್ ನೆತನ್ಯಾಹು ಅವರಿಗೆ ಭಾರತದ “ಸ್ಥಿರ ನಿಲುವು” ಯನ್ನು ಪುನರುಚ್ಚರಿಸಿದ್ದಾರೆ. ಅಲ್ಲದೇ ಈ ಪ್ರದೇಶದಲ್ಲಿ ಸ್ಥಿರತೆ ಮತ್ತು ಸಂಘರ್ಷದಿಂದ ಬಾಧಿತರಾದವರಿಗೆ ಮಾನವೀಯ ನೆರವು ನೀಡಲು ಭಾರತ ಕರೆ ನೀಡುತ್ತದೆ ಎಂದು ಅವರು ಹೇಳಿದ್ದಾರೆ.

ಇನ್ನು ಇಂದು ಪ್ರಧಾನಿ ನರೇಂದ್ರ ಮೋದಿಗೆ ಬಾಂಗ್ಲಾದೇಶ ಸರ್ಕಾರದ ಹಂಗಾಮಿ ಮುಖ್ಯ ಸಲಹೆಗಾರ ಮೊಹಮ್ಮದ್‌ ಯೂನಸ್‌(Muhammad Yunus) ಕರೆ ಮಾಡಿ ಬಾಂಗ್ಲಾದೇಶ(Bangladesh Unrest)ದ ಪ್ರಸ್ತುತ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಸಿದ್ದಾರೆ.

ಇದನ್ನೂ ಓದಿ: Israel attack: ಗಾಜಾದ ವಸತಿ ಶಾಲೆ ಮೇಲೆ ಇಸ್ರೇಲ್ ದಾಳಿ; 100ಕ್ಕೂ ಹೆಚ್ಚು ಮಂದಿ ಸಾವು

Continue Reading

ವಿದೇಶ

Saarthi AI: ಕೆಲ್ಸ ಕಳ್ಕೊಂಡ ಕೋಪಕ್ಕೆ ಬಾಸ್‌ನ ಪಾಸ್‌ಪೋರ್ಟ್‌, ವೀಸಾಕ್ಕೆ ಕನ್ನ- ಉದ್ಯೋಗಿಯ ಕಿತಾಪತಿಗೆ ಬೆಂಗಳೂರು ಸಿಇಒ ಹೈರಾಣ

Saarthi AI: ಹೂಡಿಕೆದಾರರ ಒತ್ತಡದಿಂದಾಗಿ ಕಂಪನಿ ಕೆಲವು ಉದ್ಯೋಗಿಗಳನ್ನು ಲಾಭದ ದೃಷ್ಟಿಯಿಂದ ತೆಗೆದುಹಾಕಬೇಕಾದ ಪರಿಸ್ಥಿತಿ ಎದುರಾಗಿತ್ತು. ಇದೀಗ ಉದ್ಯೋಗಿಗಳು ತಮ್ಮ ಅಮೆರಿಕ ವೀಸಾ ಮತ್ತು ಪಾಸ್‌ಪೋರ್ಟನ್ನು ಕದ್ದಿದ್ದಾರೆ. ಹೀಗಾಗಿ ವಿದೇಶ ಪ್ರಯಾಣಕ್ಕೆ ಸಾಧ್ಯವಾಗುತ್ತಿಲ್ಲ. ಸಂಕಷ್ಟದಲ್ಲಿ ಸಿಲುಕಿರುವುದಾಗಿ ಕಂಪನಿ ಸಂಸ್ಥಾಪಕ ಮತ್ತು ಸಿಇಒ(CEO) ವಿಶ್ವನಾಥ್‌ ಝಾ ಎಂದು ಗಂಭೀರ ಆರೋಪ ಮಾಡಿದ್ದಾರೆ.

VISTARANEWS.COM


on

Saarthi AI
Koo

ನವದೆಹಲಿ: ಕಳೆದ ವರ್ಷ ಆರ್ಥಿಕ ಸಂಕಷ್ಟಕ್ಕೀಡಾಗಿ ಅನೇಕರನ್ನು ಉದ್ಯೋಗದಿಂದ ಏಕಾಏಕಿ ವಜಾಗೊಳಿಸಿ ಭಾರೀ ಸುದ್ದಿಯಾಗಿದ್ದ ಬೆಂಗಳೂರು ಮೂಲದ ಸ್ಟಾರ್ಟ್‌ಅಪ್‌ ಕಂಪನಿ ಸಾರಥಿ AI(Saarthi AI) ಇದೀಗ ಮತ್ತೆ ಸುದ್ದಿಯಲ್ಲಿದೆ. ತಮ್ಮ ಪಾಸ್‌ಪೋರ್ಟನ್ನು ಕಂಪನಿಯ ಹಿರಿಯ ಉದ್ಯೋಗಿಯೊಬ್ಬರು ಕದ್ದಿದ್ದಾರೆ ಎಂದು ಕಂಪನಿ ಸಂಸ್ಥಾಪಕ ಮತ್ತು ಸಿಇಒ(CEO) ವಿಶ್ವನಾಥ್‌ ಝಾ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಹೂಡಿಕೆದಾರರ ಒತ್ತಡದಿಂದಾಗಿ ಕಂಪನಿ ಕೆಲವು ಉದ್ಯೋಗಿಗಳನ್ನು ಲಾಭದ ದೃಷ್ಟಿಯಿಂದ ತೆಗೆದುಹಾಕಬೇಕಾದ ಪರಿಸ್ಥಿತಿ ಎದುರಾಗಿತ್ತು. ಇದೀಗ ಉದ್ಯೋಗಿಗಳು ತಮ್ಮ ಅಮೆರಿಕ ವೀಸಾ ಮತ್ತು ಪಾಸ್‌ಪೋರ್ಟನ್ನು ಕದ್ದಿದ್ದಾರೆ. ಹೀಗಾಗಿ ವಿದೇಶ ಪ್ರಯಾಣಕ್ಕೆ ಸಾಧ್ಯವಾಗುತ್ತಿಲ್ಲ. ಸಂಕಷ್ಟದಲ್ಲಿ ಸಿಲುಕಿರುವುದಾಗಿ ಹೇಳಿದ್ದಾರೆ. ಈ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಕಳುವಾಗಿರುವ ಪಾಸ್‌ಪೋರ್ಟ್‌ ಬಹಳ ಕಷ್ಟಪಟ್ಟು ವಾಪಾಸ್‌ ಪಡೆದಿದ್ದೇನೆ. ಆದರೆ ಅಮೆರಿಕ ವೀಸಾ ವಾಪಸ್‌ ಸಿಗುವುದು ಬಹಳ ಕಷ್ಟ ಇದೆ. ಪಡೆಯಲು ಇನ್ನೂ ಸಾಧ್ಯವಾಗುತ್ತಿಲ್ಲ ಎಂದರು. ಇನ್ನು ನೌಕರರ ವೇತನ ತಡೆಹಿಡಿಯಲಾಗಿದೆ ಎಂಬ ಆರೋಪವನ್ನು ಅವರು ತಳ್ಳಿಹಾಕಿದರು. ಯಾವುದೇ ಸಂಬಳವನ್ನು ತಡೆಹಿಡಿಯಲಾಗಿಲ್ಲ ಮತ್ತು ಈ ಆರೋಪಗಳು AI ಸ್ಟಾರ್ಟ್‌ಅಪ್‌ಗೆ ಮಾನಹಾನಿ ಮಾಡುವ ತಂತ್ರವಾಗಿದೆ. ಹಲವಾರು ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳೊಂದಿಗೆ ವ್ಯವಹಾರ ಮಾತುಕತೆ ನಡೆಸುತ್ತಿರುವುದರಿಂದ ನಾವು ಪ್ರಮುಖ ಸ್ಥಾನಗಳನ್ನು ತುಂಬುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಝಾ ಹೇಳಿದರು.

ಕಂಪನಿಯ ಪ್ರಸ್ತುತ ಮತ್ತು ಮಾಜಿ ಉದ್ಯೋಗಿಗಳು ಹೇಳಲು ವಿಭಿನ್ನ ಕಥೆಯನ್ನು ಹೊಂದಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಡೆಸಲಾದ ಸಾಮೂಹಿಕ ವಜಾಗೊಳಿಸುವಿಕೆಯು ಸಾರಥಿ AI ನ ಉದ್ಯೋಗಿಗಳನ್ನು 40 ಉದ್ಯೋಗಿಗಳಿಗೆ ಇಳಿಸಿತು. ಅನೇಕ ಉದ್ಯೋಗಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಆದರೆ ಅವರು ತಮ್ಮ ಬಾಕಿ ಇರುವ ಸಂಬಳವನ್ನು ಇನ್ನೂ ಸ್ವೀಕರಿಸಿಲ್ಲ ಎಂದು ಹೇಳಿದರು.

ಆದರೆ ಈ ಬಗ್ಗೆ ಮಾಜಿ ಉದ್ಯೋಗಿಯೊಬ್ಬರು ಪ್ರತಿಕ್ರಿಯಿಸಿದ್ದು, “ಸಂಸ್ಥೆಯು ಈಗ ಒಂದು ವರ್ಷದಿಂದ 50ಕ್ಕೂ ಹೆಚ್ಚು ಉದ್ಯೋಗಿಗಳ ಸಂಬಳವನ್ನು ಹೊಂದಿದೆ ಮತ್ತು ಯಾವುದೇ ಕಾನೂನು ನೋಟಿಸ್‌ಗಳಿಗೆ ಸಹ ಉತ್ತರಿಸಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Google lay off : ಗೂಗಲ್‌ ಮಾತೃಸಂಸ್ಥೆ ಆಲ್ಫಬೆಟ್‌ನಲ್ಲಿ 12,000 ಉದ್ಯೋಗಿಗಳ ವಜಾ

ಆರ್ಥಿಕ ಹಿಂಜರಿತದ ಭೀತಿಯ ಹಿನ್ನೆಲೆಯಲ್ಲಿ ದೈತ್ಯ ಟೆಕ್ ಕಂಪನಿಗಳು ತಮ್ಮ ವೆಚ್ಚವನ್ನು ಕಡಿಮೆ ಮಾಡುವುದಕ್ಕಾಗಿ ಉದ್ಯೋಗಗಳನ್ನು ಕಡಿತ(Intel Layoffs) ಮಾಡುತ್ತಿವೆ. ಎರಡು ವಾರಗಳ ಹಿಂದೆ ಅಮೆರಿಕದ ಚಿಪ್ ತಯಾರಕ ಇಂಟೆಲ್(Intel) ಶೇ.15ಕ್ಕಿಂತಲೂ ಹೆಚ್ಚಿನ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ನಿರ್ಧರಿಸಿದ್ದು, ಇದರಿಂದ 20 ಶತಕೋಟಿ ಡಾಲರ್‌ ವೆಚ್ಚ ಕಡಿಮೆಯಾಗಲಿದೆ.

ಇಂಟೆಲ್ ಇತ್ತೀಚೆಗೆ ಕೊನೆಗೊಂಡ ತ್ರೈಮಾಸಿಕದಲ್ಲಿ $1.6 ಶತಕೋಟಿ ನಷ್ಟವನ್ನು ವರದಿ ಮಾಡಿದ್ದರಿಂದ ಈ ವರ್ಷ ಅಂದಾಜು $20 ಶತಕೋಟಿ ವೆಚ್ಚವನ್ನು ಕಡಿತಗೊಳಿಸುವ ಯೋಜನೆ ರೂಪಿಸಿದೆ. ಈ ಬಗ್ಗೆ ಇಂಟೆಲ್ ಮುಖ್ಯ ಕಾರ್ಯನಿರ್ವಾಹಕ ಪ್ಯಾಟ್ ಗೆಲ್ಸಿಂಗರ್ ಪ್ರತಿಕ್ರಿಯಿಸಿದ್ದು, ನಾವು ಪ್ರಮುಖ ಉತ್ಪನ್ನ ಮತ್ತು ಪ್ರಕ್ರಿಯೆ ತಂತ್ರಜ್ಞಾನದ ಮೈಲಿಗಲ್ಲುಗಳನ್ನು ಮುಟ್ಟಿದರೂ ಸಹ ನಮ್ಮ Q2 ಆರ್ಥಿಕ ಕಾರ್ಯಕ್ಷಮತೆ ನಿರಾಶಾದಾಯಕವಾಗಿತ್ತು. ಮುಂದಿನ ಅರ್ಧವಾರ್ಷಿಕ ನಾವು ಹಿಂದೆ ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಸವಾಲಿನವುಗಳಾಗಿವೆ ಎಂದು ಹೇಳಿದ್ದಾರೆ.

Continue Reading

ವಿದೇಶ

Matthew Perry Death Case: ಅಮೆರಿಕನ್ ನಟನ ಸಾವಿಗೆ ಕಾರಣವಾಗಿದ್ದು ಲಾಸ್‌ ಏಂಜಲೀಸ್‌ನ ಈ ʼಮಾದಕದ್ರವ್ಯಗಳ ರಾಣಿʼ!

“ಕೆಟಮೈನ್ ಕ್ವೀನ್ ಆಫ್ ಲಾಸ್ ಏಂಜಲೀಸ್” ಎಂದು ಕರೆಯಲ್ಪಡುವ ಉಭಯ ಬ್ರಿಟಿಷ್ ಮತ್ತು ಅಮೆರಿಕನ್ ಪ್ರಜೆ ಜಸ್ವೀನ್ ಕಳೆದ ವರ್ಷ ಮೃತಪಟ್ಟಿದ್ದ 54 ವರ್ಷದ ಅಮೆರಿಕನ್ ನಟ ಮ್ಯಾಥ್ಯೂ ಪೆರ್ರಿ ಸಾವಿಗೆ ಕಾರಣವಾಗುವ (Matthew Perry Death Case) ಕೆಟಮೈನ್‌ನ ಮಾರಕ ಡೋಸ್ ಅನ್ನು ಪೂರೈಸಿದ್ದಳು ಎಂದು ಆರೋಪಿಸಲಾಗಿದೆ.

VISTARANEWS.COM


on

By

Matthew Perry Death Case
Koo

ಕಳೆದ ವರ್ಷ ಮೃತಪಟ್ಟಿದ್ದ ಅಮೆರಿಕನ್ ನಟ (American actor) ಮ್ಯಾಥ್ಯೂ ಪೆರ್ರಿ (Matthew Perry Death case) ಸಾವಿನ ಹಿಂದೆ “ಕೆಟಮೈನ್ ಕ್ವೀನ್ ಆಫ್ ಲಾಸ್ ಏಂಜಲೀಸ್” (Ketamine Queen of Los Angeles) ಎಂದು ಕರೆಯಲ್ಪಡುವ ಜಸ್ವೀನ್ ಸಂಘಾ ಅವರ ಕೈವಾಡ ಇರುವುದಾಗಿ ತನಿಖೆಯಿಂದ ತಿಳಿದು ಬಂದಿದೆ. ಮ್ಯಾಥ್ಯೂ ಪೆರ್ರಿ ಸಾವಿಗೆ ಕಾರಣವಾದ ಡ್ರಗ್ಸ್ ಅನ್ನು ಜಸ್ವೀನ್ ಸಂಘಾ ಪೂರೈಸಿರುವ ಆರೋಪವಿದೆ. 41 ವರ್ಷದ ಜಸ್ವೀನ್ ಸಂಘಾ ಎಂಬ ಮಹಿಳೆ ಸ್ನೇಹಿತನಾಗಿದ್ದ ನಟ ಮ್ಯಾಥ್ಯೂ ಪೆರ್ರಿ ಸಾವಿನ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದಾರೆ. ವಿಚಾರಣೆಯನ್ನು ನಡೆಸಲಾಗುತ್ತಿದೆ.

“ಕೆಟಮೈನ್ ಕ್ವೀನ್ ಆಫ್ ಲಾಸ್ ಏಂಜಲೀಸ್” ಎಂದು ಕರೆಯಲ್ಪಡುವ ಉಭಯ ಬ್ರಿಟಿಷ್ ಮತ್ತು ಅಮೆರಿಕನ್ ಪ್ರಜೆ ಜಸ್ವೀನ್ ಕಳೆದ ವರ್ಷ ಮೃತಪಟ್ಟಿದ್ದ 54 ವರ್ಷದ ಅಮೆರಿಕನ್ ನಟ ಮ್ಯಾಥ್ಯೂ ಪೆರ್ರಿ ಸಾವಿಗೆ ಕಾರಣವಾಗುವ ಕೆಟಮೈನ್‌ನ ಮಾರಕ ಡೋಸ್ ಅನ್ನು ಪೂರೈಸಿದ್ದಳು ಎಂದು ಆರೋಪಿಸಲಾಗಿದೆ.

Matthew Perry Death Case
Matthew Perry Death Case


ಸಂಘಾ ತನ್ನ ಮನೆಯಿಂದಲೇ ಡ್ರಗ್ ಸಾಮ್ರಾಜ್ಯವನ್ನು ನಡೆಸುತ್ತಿದ್ದಳು. ಅಲ್ಲಿ ಅವಳು ಮೆಥಾಂಫೆಟಮೈನ್‌, ಕೊಕೇನ್ ಮತ್ತು ಪ್ರಿಸ್ಕ್ರಿಪ್ಷನ್ ಡ್ರಗ್ಸ್ ಅನ್ನು ಸಂಗ್ರಹಿಸಿ, ಪ್ಯಾಕ್ ಮಾಡಿ ಮತ್ತು ಮಾರಾಟ ಮಾಡುತ್ತಿದ್ದಳು ಎನ್ನಲಾಗಿದೆ. ಆಕೆಯ ಮನೆಯ ಮೇಲೆ ದಾಳಿ ನಡೆಸಿದ ಫೆಡರಲ್ ಏಜೆಂಟ್‌ ಗಳಿಗೆ 79 ಬಾಟಲಿಗಳ ದ್ರವ ಕೆಟಮೈನ್ ಮತ್ತು ಸುಮಾರು 2,000 ಮೆಥ್ ಮಾತ್ರೆಗಳು ಸಿಕ್ಕಿವೆ. ಸಂಘಾ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಎರಡು ಬೇರೆಬೇರೆ ಸಂದರ್ಭಗಳಲ್ಲಿ ಪೆರ್ರಿಗಾಗಿ ಕೆಟಮೈನ್‌ನ 50 ಬಾಟಲುಗಳನ್ನು ತನ್ನ ಸಹಾಯಕನ ಮೂಲಕ ನೀಡಿದ್ದಳು ಎಂದು ಆರೋಪಿಸಲಾಗಿದೆ.

ಅಕ್ಟೋಬರ್ 13ರಂದು ಪೆರ್ರಿಗೆ ಮೊದಲು ಕೆಟಮೈನ್ ಅನ್ನು ಪೂರೈಸಲಾಗಿತ್ತು. ಒಂದು ವಾರದ ಅನಂತರ ಮತ್ತೆ 25 ಬಾಟಲಿಗಳನ್ನು ಪೂರೈಕೆ ಮಾಡಲಾಗಿತ್ತು. ಪೆರ್ರಿ ಮೂರು ದಿನಗಳಲ್ಲಿ ಆರು ಡೋಸ್‌ ಪಡೆದಿದ್ದು, ಬಳಿಕ ಮೃತಪಟ್ಟಿದ್ದ. ಆತನ ಶವ ಒಳಾಂಗಣ ಪೂಲ್‌ನಲ್ಲಿ ಪತ್ತೆಯಾಗಿತ್ತು.

ಇದನ್ನೂ ಓದಿ: Techie Missing: ಕಾಣೆಯಾದ ಟೆಕ್ಕಿ ಪತ್ತೆ, ಪ್ರಕರಣಕ್ಕೆ ಟ್ವಿಸ್ಟ್‌; ಜೈಲಿಗಾದ್ರೂ ಹಾಕಿ, ಆದ್ರೆ ಹೆಂಡತಿ ಹತ್ರ ಹೋಗಲ್ಲ ಎಂದು ರೋದನ!

ಪೆರ್ರಿಯ ಮರಣದ ಬಳಿಕ ಈಕೆ ತನ್ನ ಸಹಾಯಕನಿಗೆ ಪೆರ್ರಿಯ ನಡುವಿನ ಸಂದೇಶಗಳನ್ನು ಅಳಿಸಲು ಹೇಳಿದ್ದಳು. ಆದರೆ ಅದು ಆನ್‌ಲೈನ್ ಪಾವತಿಗಳನ್ನು ಕೇಳುತ್ತಿರುವುದನ್ನು ತೋರಿಸಿತ್ತು. ಕೆಲವು ದಿನಗಳ ಬಳಿಕ ಪೆರ್ರಿ ಸಾವಿಗೆ ಕೆಟಮೈನ್ ಕಾರಣ ಎನ್ನುವುದು ದೃಢ ಪಟ್ಟ ಹಿನ್ನೆಲೆಯಲ್ಲಿ ಆಕೆಯ ವಿರುದ್ಧ ಪ್ರಕರಣ ದಾಖಲಿಸಲಾಯಿತು. ಆಕೆ ಒಂದು ವೇಳೆ ತಪ್ಪಿತಸ್ಥಳೆಂದು ದೃಢಪಟ್ಟರೆ ಕನಿಷ್ಠ 10 ವರ್ಷಗಳ ಗರಿಷ್ಠ ಜೀವಾವಧಿ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎನ್ನಲಾಗಿದೆ. ಹಿಟ್ ಟಿವಿ ಸಿಟ್‌ಕಾಮ್ ಫ್ರೆಂಡ್ಸ್‌ನಲ್ಲಿ ವ್ಯಂಗ್ಯಾತ್ಮಕ ಚಾಂಡ್ಲರ್ ಬಿಂಗ್ ಪಾತ್ರದಲ್ಲಿ ವಿಶ್ವಾದ್ಯಂತ ಖ್ಯಾತಿಯನ್ನು ಗಳಿಸಿದ ಪೆರ್ರಿ ಮಾದಕ ವ್ಯಸನ ಮತ್ತು ಖಿನ್ನತೆಗೆ ಒಳಗಾಗಿದ್ದರು.

Continue Reading
Advertisement
Air India Hostess
ವಿದೇಶ14 mins ago

Air India Hostess: ಹೋಟೆಲ್‌ನಲ್ಲಿ ಏರ್‌ ಇಂಡಿಯಾ ಗಗನಸಖಿ ಮೇಲೆ ಹಲ್ಲೆ; ನೆಲಕ್ಕೆ ಕೆಡವಿ ಎಳೆದಾಡಿದ ದುಷ್ಕರ್ಮಿ

70th National Film Awards Nithya Menen REACTS For 1st Time
ಕಾಲಿವುಡ್17 mins ago

70th National Film Awards : ರಾಷ್ಟ್ರ ಪ್ರಶಸ್ತಿ ಗೆದ್ದ ಬಳಿಕ ನಿತ್ಯಾ ಮೆನನ್ ಪ್ರತಿಕ್ರಿಯಿಸಿದ್ದು ಹೀಗೆ!

Accident News:
ಪ್ರಮುಖ ಸುದ್ದಿ40 mins ago

Accident News : ನರಗುಂದಲ್ಲಿ ಭೀಕರ ಅಫಘಾತ; ಸಾರಿಗೆ ಬಸ್​ ಗುದ್ದಿ ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರ ದುರ್ಮರಣ

Neeraj Chopra
ಕ್ರೀಡೆ42 mins ago

Neeraj Chopra: ಲಾಸಾನ್ನೆ ಡೈಮಂಡ್‌ ಲೀಗ್‌ನಲ್ಲಿ ನೀರಜ್‌ ಸ್ಪರ್ಧೆ; ಆಗಸ್ಟ್​ 22ಕ್ಕೆ ಟೂರ್ನಿ

Liquor theft:
ಪ್ರಮುಖ ಸುದ್ದಿ1 hour ago

Liquor Theft : ಡಾಬಾದಿಂದ ಲೋಕಲ್ ಬ್ರಾಂಡ್​ ಎಣ್ಣೆ ಕದಿಯುತ್ತಿದ್ದವನ ಮುಖ ಸಿಸಿಟಿವಿಯಲ್ಲಿ ಸೆರೆ

Thalapathy Vijay plays both father and son in this time travel saga.
ಕಾಲಿವುಡ್1 hour ago

Thalapathy Vijay: ದಳಪತಿ ವಿಜಯ್‌ ಕೊನೆ ಚಿತ್ರದ ಟ್ರೈಲರ್‌ ಔಟ್‌;  ಅಬ್ಬರಿಸಿದ ನಟ!

Kolkata Doctor Murder Case
ದೇಶ1 hour ago

Kolkata Doctor Murder Case: ಜನರಲ್ಲಿ ಗೊಂದಲ ಮೂಡಿಸುವ ಮಮತಾ ಬ್ಯಾನರ್ಜಿ ಸಿಎಂ ಹುದ್ದೆಗೆ ರಾಜೀನಾಮೆ ನೀಡಲಿ; ನಿರ್ಭಯಾ ತಾಯಿ

virat kohli
ಕ್ರೀಡೆ1 hour ago

Virat Kohli: ಕೊಹ್ಲಿಯ ಮೊದಲ ಅಂತಾರಾಷ್ಟ್ರೀಯ ಪಂದ್ಯಕ್ಕೆ ತುಂಬಿತು 16 ವರ್ಷ

Chikkodi News
ಪ್ರಮುಖ ಸುದ್ದಿ2 hours ago

Chikkodi News : ಒಮ್ಮೆ ಶಾಸಕರಿಂದ ಮತ್ತೊಮ್ಮೆ ಸಂಸದರಿಂದ; ಒಂದೇ ಗ್ರಾಮ ಪಂಚಾಯಿತಿ ಕಟ್ಟಡ ಎರಡೆರಡು ಬಾರಿ ಉದ್ಘಾಟನೆ!

Tahawwur Rana
ವಿದೇಶ2 hours ago

Tahawwur Rana: 26/11 ಮುಂಬೈ ದಾಳಿಯ ಭಾಗವಾಗಿದ್ದ ಪಾಕ್‌ ಮೂಲದ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಒಪ್ಪಿಗೆ

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 week ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 week ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 week ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌