ಕ್ರೈಂ
Dacoity Case: ಡಕಾಯಿತಿ ಮಾಡಲೆಂದೇ ವಾಟ್ಸ್ಯಾಪ್ ಗ್ರೂಪ್ ಮಾಡಿಕೊಂಡಿದ್ದ ಖದೀಮರು ಅಂದರ್!
ಇಂದು ಯಾವ ಮನೆಗೆ ನುಗ್ಗುವುದು, ಎಲ್ಲಿ ಹೇಗೆ ದರೋಡೆ ಮಾಡುವುದು ಎಂಬುದನ್ನು ಮೆಸೇಜ್‌ಗಳ ಮೂಲಕ ಇವರು ಕಮ್ಯೂನಿಕೇಟ್ ಮಾಡುತ್ತಿದ್ದರು ಎಂದು ಗೊತ್ತಾಗಿದೆ.
ಬೆಳಗಾವಿ: ಡಕಾಯಿತಿ ಮಾಡಲೆಂದೇ (dacoity case) ವಾಟ್ಸ್ಯಾಪ್ ಗ್ರೂಪ್ ಕ್ರಿಯೇಟ್ ಮಾಡಿದ್ದ 9 ಮಂದಿ ಖದೀಮರನ್ನು ಗೋಕಾಕ ಪೊಲೀಸರು ಬಂಧಿಸಿದ್ದಾರೆ.
ಈ ಖತರ್‌ನಾಕ್ ಖೂಳರು ವಾಟ್ಸ್ಯಾಪ್‌ನಲ್ಲಿ ಗ್ರೂಪ್ ಕ್ರಿಯೇಟ್ ಮಾಡಿಕೊಂಡಿದ್ದರು. ಅದರ ಮೂಲಕ ಇಂದು ಯಾವ ಮನೆಗೆ ನುಗ್ಗುವುದು, ಎಲ್ಲಿ ಹೇಗೆ ದರೋಡೆ ಮಾಡುವುದು ಎಂಬುದನ್ನು ಮೆಸೇಜ್‌ಗಳ ಮೂಲಕ ಕಮ್ಯೂನಿಕೇಟ್ ಮಾಡುತ್ತಿದ್ದರು ಎಂದು ಗೊತ್ತಾಗಿದೆ.
ವಿವಿಧ ಠಾಣೆಗಳ ಒಟ್ಟು 6 ಪ್ರಕರಣಗಳಲ್ಲಿ ಈ ದರೋಡೆಕೋರರು ಭಾಗಿಯಾಗಿದ್ದು, ಒಟ್ಟು 9 ಜನ ಖದೀಮರನ್ನು ಗೋಕಾಕ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಚಿನ್ನಾಭರಣ, ವಾಹನ, ದ್ವಿಚಕ್ರವಾಹನ ಸೇರಿ 7,89,700 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೆಣಚಿನಮರಡಿ ಗ್ಯಾಂಗ್ ಹಾಗೂ ಎಸ್ಪಿ ಗ್ಯಾಂಗ್ ಎಂಬ ಹೆಸರಿನಲ್ಲಿ ಇವರು ಎರಡು ಗ್ರೂಪ್ ಮಾಡಿಕೊಂಡಿದ್ದರು. ಬೆಣಚಿನಮರಡಿ ಗ್ಯಾಂಗ್‌ನ 7 ಹಾಗೂ ಎಸ್ಪಿ ಗ್ಯಾಂಗ್‌ನ 2 ಖದೀಮರನ್ನು ಹೆಡೆಮುರಿ ಕಟ್ಟಲಾಗಿದೆ. ಈ ಆರೋಪಿಗಳನ್ನು ದುರ್ಗಪ್ಪ ವಡ್ಡರ್, ನಾಗಪ್ಪ ಮಾದರ್, ಯಲ್ಲಪ್ಪ ಗೀಸನಿಂಗವ್ವಗೋಳ, ಕೃಷ್ಣಾ ಪೂಜೇರಿ, ರಾಮಸಿದ್ದ ತಸ್ಪಿ, ಬೀರಸಿದ್ದ ಗುಂಡಿ, ಉದ್ದಪ್ಪ ಖಿಲಾರಿ, ಪರಶುರಾಮ್ ಗೊಂದಳಿ, ಆಕಾಶ ತಳವಾರ ಎಂದು ಗುರುತಿಸಲಾಗಿದೆ. ಗೋಕಾಕ ನಗರ, ಗೋಕಾಕ ಗ್ರಾಮೀಣ ಹಾಗೂ ಅಂಕಲಗಿ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಕಿಡ್‌ನ್ಯಾಪ್, ಕಳವಿಗೆ ಆರ್‌ಎಸ್‌ಎಸ್ ಹೆಸರು ಬಳಕೆ!
ಬೆಂಗಳೂರು: ವ್ಯಕ್ತಿಯೊಬ್ಬನನ್ನು ಕಿಡ್ನಾಪ್ ಮಾಡಲು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಹೆಸರು ದುರ್ಬಳಕೆ ಮಾಡಿದ ಪ್ರಕರಣ ವರದಿಯಾಗಿದೆ. ಮೂವರನ್ನು ಬಂಧಿಸಲಾಗಿದೆ. ದೂರು ದಾಖಲಾದ ಬಳಿಕ ಕಾರ್ಯಾಚರಣೆ ವೇಳೆ ದನದ ಮಾಂಸ ಕಳ್ಳತನದ ಅಸಲಿ ಕಹಾನಿ ಬಯಲಾಗಿದೆ. ಇದೇ ತಿಂಗಳ 10ರಂದು ಕಿಡ್ನಾಪ್ ನಡೆದಿತ್ತು. ಜಾವಿದ್ ಬೇಗ್ ಎಂಬಾತನನ್ನು ಕಾರ್‌ನಲ್ಲಿ ಬಂದಿದ್ದ ಮೂವರು ವಾಹನ ಸಮೇತ ಕಿಡ್ನಾಪ್ ಮಾಡಿದ್ದರು.
ಜಾವೀದ್ ರಾಮನಗರದಿಂದ ತಿಲಕನಗರಕ್ಕೆ ಬರುತ್ತಿದ್ದು, ದನದ ಮಾಂಸ ಗಾಡಿಯಲ್ಲಿಟ್ಟುಕೊಂಡು ಅಂಗಡಿ ಡೆಲಿವರಿಗೆಂದು ತರುತ್ತಿದ್ದರು. ಈ ವೇಳೆ ಮೈಕೊ ಸಿಗ್ನಲ್ ಬಳಿ ಮೂವರು ಕಿಡ್ನಾಪರ್ಸ್ ಅಡ್ಡ ಹಾಕಿದ್ದರು. ತಾವು ಆರ್‌ಎಸ್‌ಎಸ್‌ನವರೆಂದು ತಡೆದು ವಾಹನ ಸಮೇತ ಜಾವಿದ್‌ರನ್ನು ಕರೆದೊಯ್ದಿದ್ದರು.
ಬಳಿಕ ಬಿಟ್ಟು ಕಳುಹಿಸಬೇಕಾದರೆ ಒಂದು ಲಕ್ಷ ರೂ. ಹಣ ಕೊಡು ಎಂದು ಡಿಮ್ಯಾಂಡ್ ಮಾಡಿದ್ದರು. ಕೊನೆಗೆ ಹತ್ತು ಸಾವಿರ ಪಡೆದು ಬಿಟ್ಟು ಕಳುಹಿಸಿದ್ದರು. ದನದ ಮಾಂಸ ಸಾಗಿಸುತಿದ್ದ ತನ್ನ ಗಾಡಿಯನ್ನು ಕೇಳಿದಾಗ, ಸೇಂಟ್ ಜಾನ್ ಸಿಗ್ನಲ್ ಬಳಿ ಬಿಟ್ಟಿರುವುದಾಗಿ ಹೇಳಿದ್ದರು. ಸಿಗ್ನಲ್ ಬಳಿ ಹೋದಾಗ ಕೇವಲ ಗಾಡಿ ಇದ್ದು, ಅದರಲ್ಲಿ ಮಾಂಸ ಇರಲಿಲ್ಲ. ನಂತರ ಜಾವೀದ್ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದಾಗ ಅಸಲಿ ಕಹಾನಿ ಹೊರಬಿದ್ದಿದೆ.
ಮಾಂಸ ಡೆಲಿವರಿಯಾಗಬೇಕಿದ್ದ ಅಂಗಡಿಯ ಮಾಲೀಕ ಮಹಮದ್ ಎಂಬಾತನಿಂದಲೇ ಕಿಡ್ನಾಪ್ ನಡೆದಿದ್ದು ಬಯಲಿಗೆ ಬಂದಿದೆ. ಚಾಲಕನನ್ನು ಬೆದರಿಸಲು ಈತ ಆರ್‌ಎಸ್‌ಎಸ್ ಹೆಸರು ಬಳಸಿದ್ದ. ಮೂವರು ಯುವಕರನ್ನು ಬಿಟ್ಟು ಕಿಡ್ನಾಪ್ ಕೃತ್ಯ ಮಾಡಿಸಿದ್ದ. ದನದ ಮಾಂಸ ಕದಿಯಲೆಂದೇ ಈ ಕೃತ್ಯ ನಡೆಸಿದ್ದು, ರಾಮನಗರದಿಂದಲೇ ಫಾಲೋ ಮಾಡಿಸಿದ್ದ. ಬಳಿಕ ಮಾಂಸ ತನ್ನ ಅಂಗಡಿಗೆ ತರಿಸಿಕೊಂಡು ಗಾಡಿ ಕಳುಹಿಸಿದ್ದ. ನಂತರ ಮಾಂಸ ಡೆಲಿವರಿಯಾಗಿಲ್ಲ ಎಂದು ಕಥೆ ಕಟ್ಟಿದ್ದ. ಸದ್ಯ ಅಂಗಡಿ ಮಾಲೀಕ ಮಹಮದ್ ಸಹಿತ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: Viral News : ಏನೋ ಮಾಡಲು ಹೋಗಿ..; ಗಂಡನಿಗೆ ಬುದ್ಧಿ ಕಲಿಸಲೆಂದು ಗೆಳೆಯರಿಂದ ಚಿನ್ನ ಕಳವು ಮಾಡಿಸಿ ಸಿಕ್ಕಿಬಿದ್ಳು!
ಕರ್ನಾಟಕ
Bangalore Bandh : ಬಲವಂತದಿಂದ ಬಂದ್ ಮಾಡಿಸುವಂತಿಲ್ಲ; ಮೆರವಣಿಗೆಗೆ ಅವಕಾಶವಿಲ್ಲ, ಸೆಕ್ಷನ್ ಜಾರಿ ಎಂದ ಕಮಿಷನರ್
Bangalore Bandh : ಸೆ. 26ರ ಬಂದ್ ವೇಳೆ ಬಲವಂತದಿಂದ ಅಂಗಡಿ ಮುಂಗಟ್ಟು ಮುಚ್ಚಿಸುವಂತಿಲ್ಲ, ಜನ ಸಂಚಾರ ತಡೆಯುವಂತಿಲ್ಲ. ಹಾನಿಗಳಿಗೆ ಸಂಘಟನೆಗಳೇ ಹೊಣೆ ಎಂದು ಕಮಿಷನರ್ ಬಿ. ದಯಾನಂದ್ ಎಚ್ಚರಿಸಿದ್ದಾರೆ.
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಪ್ರತಿಭಟಿಸಿ (Cauvery Water Dispute) ಜಲ ಸಂರಕ್ಷಣಾ ಸಮಿತಿ ಕರೆ ನೀಡಿರುವ ಸೆ. 26ರ ಬೆಂಗಳೂರು ಬಂದ್ (Bangalore Bandh) ಸಂದರ್ಭದಲ್ಲಿ ಬಲವಂತವಾಗಿ ಬಂದ್ ಮಾಡಿಸುವಂತಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ ದಯಾನಂದ್ (Police Commissioner B Dayanand) ತಿಳಿಸಿದ್ದಾರೆ.
ಬಂದ್ ವಿಚಾರದಲ್ಲಿ ಸಂಘಟಕರು ಮತ್ತು ಸಾರ್ವಜನಿಕರಿಗೆ ಸ್ಪಷ್ಟತೆ ನೀಡಲು ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಅವರು ವಿಷಯವನ್ನು ಸ್ಪಷ್ಟಪಡಿಸಿದರು. ಟೌನ್‌ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ಮೆರವಣಿಗೆ (No permission for Procession) ನಡೆಸುವ ಸಂಘಟಕರ ಮನವಿಯನ್ನು ಅವರು ತಿರಸ್ಕರಿಸಿದರು. ಯಾವುದೇ ಪ್ರತಿಭಟನೆ ಮತ್ತು ಮೆರವಣಿಗೆಗೆ ಅವಕಾಶವಿಲ್ಲ ಎಂದು ತಿಳಿಸಿದರು.
ಬಲವಂತದಿಂದ ಯಾರೂ ಬಂದ್ ಮಾಡಿಸುವಂತಿಲ್ಲ. ಯಾವುದೇ ರೀತಿಯ ಬಂದ್‌ಗೆ ಅವಕಾಶವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಹೀಗಾಗಿ ಜನರು ಸ್ವಯಂಪ್ರೇರಿತವಾಗಿ ಪಾಲ್ಗೊಂಡರೆ ಆಕ್ಷೇಪ ಇಲ್ಲ. ಹಾಗಂತ ಯಾರನ್ನೂ ತಡೆಯುವುದು, ಅಂಗಡಿಗಳನ್ನು ಮುಚ್ಚಿಸುವುದು ಮೊದಲಾದ ಕೆಲಸಗಳನ್ನು ಮಾಡುವಂತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಬಂದ್ ವೇಳೆ ಯಾವುದಾದರೂ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಅದಕ್ಕೆ ಬಂದ್‌ಗೆ ಕರೆ ನೀಡಿದ ಸಂಘಟನೆಗಳೇ ಹೊಣೆಯಾಗುತ್ತವೆ ಎಂದು ಎಚ್ಚರಿಸಿದರು.
ಹೆಚ್ಚುವರಿ ಭದ್ರತಾ ವ್ಯವಸ್ಥೆ
ಬಂದ್ ಹೆಸರಿನಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗಬಾರದು ಎಂದು ಹೈಕೋರ್ಟ್ ಹೇಳಿದೆ. ಸರ್ಕಾರ ಜನರಿಗೆ ಸೂಕ್ತ ಭದ್ರತಾ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದೇವೆ ಎಂದು ಹೇಳಿದ ದಯಾನಂದ್, ಪ್ರತಿಭಟನೆ ವೇಳೆ ಆಹಿತಕರ ಘಟನೆ ನಡೆಯಬಾರದು ಎಂಬ ಕಾರಣಕ್ಕಾಗಿ ಹೆಚ್ಚುವರಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಸೋಮವಾರ ಮಧ್ಯರಾತ್ರಿಯಿಂದಲೇ ನಿಷೇಧಾಜ್ಞೆ ಜಾರಿ
ಪ್ರತಿಭಟನೆಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕಟ್ಟೆಚ್ಚರ ವಹಿಸಲಾಗಿದೆ. ಒತ್ತಾಯ ಪೂರಕವಾಗಿ ಬಂದ್ ಮಾಡಿದರೆ ಅಂತವರು ವಿರುದ್ಧ ಸೂಕ್ತವಾದ ಕ್ರಮ ಕೈಗೊಳ್ಳಲಾಗುವುದು. ಸೋಮವಾರ ಮಧ್ಯ ರಾತ್ರಿಯಿಂದ ಮಂಗಳವಾರ ಮಧ್ಯರಾತ್ರಿಯವರಿಗೆ ಐಪಿಸಿ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಬಿಗಿ ಪೊಲೀಸ್ ಬಂದೋಬಸ್ತ್
ಬೆಂಗಳೂರಲ್ಲಿ ಭದ್ರತೆಗಾಗಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. 60 ಕೆಎಸ್‌ಆರ್‌ಪಿ ಮತ್ತು 40 ಸಿಎಆರ್ ತುಕಡಿ ನಿಯೋಜನೆ ಮಾಡಿದ್ದೇವೆ. ಹೋಂ ಗಾರ್ಡ್ ಸಿಬ್ಬಂದಿಗಳೂ ಇರುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: Bangalore Bandh : ನಾಯಕರ ಪ್ರತಿಷ್ಠೆಯಿಂದ ಬೆಂಗಳೂರಿಗೆ ಡಬಲ್ ಬಂದ್ ಬಿಸಿ, ಬೇಕಿತ್ತಾ ಎರಡೆರಡು ಬಂದ್?
ಕಮಿಷನರ್ ಹೇಳಿದ ಪ್ರಮುಖ ಅಂಶಗಳು
- ಬಲವಂತದ ಬಂದ್‌ಗೆ ಅವಕಾಶವಿಲ್ಲ. ಅಂಗಡಿಗಳನ್ನು ಮುಚ್ಚಿಸುವಂತಿಲ್ಲ. ಜನರ ಸಂಚಾರವನ್ನು ತಡೆಯುವಂತಿಲ್ಲ ಬೆ
- ಬೆಂಗಳೂರಿನಲ್ಲಿ ಸೋಮವಾರ ರಾತ್ರಿ 12ರಿಂದಲೇ ನಿಷೇಧಾಜ್ಞೆ ಜಾರಿ, ಪೊಲೀಸ್ ಬಿಗಿ ಬಂದೋಬಸ್ತ್
- ಸಂಘಟಕರು ಬೆಂಗಳೂರು ಪುರಭವನದಿಂದ ಫ್ರೀಡಂ ಪಾರ್ಕ್ ವರೆಗೆ ಪ್ರತಿಭಟನೆ ಮಾಡಲು ಅನುಮತಿ ಕೊರಿದ್ದಾರೆ. ಆದರೆ, ಬಹಿರಂಗ ಮೆರವಣಿಗೆಗೆ ಪ್ರತಿಭಟನೆಗೆ, ಅನುಮತಿ ಕೊಡಲು ಸಾಧ್ಯವಿಲ್ಲ
- ನಾಳೆಯ ವಾತಾವರಣ ನೋಡಿಕೊಂಡು ಅವಶ್ಯಕತೆ ಇದ್ದರೆ ಸಾರಿಗೆ ಬಸ್ಸುಗಳಿಗೆ ಭದ್ರತೆ ಕೊಡುತ್ತೇವೆ.
- ಅಗತ್ಯವಿದ್ದಲ್ಲಿ ತಮಿಳುನಾಡು ಸಾರಿಗೆ ಬಸ್ ಗಳಿಗೆ ಭದ್ರತೆಯನ್ನು ಒದಗಿಸುತ್ತೇವೆ
- ಹಿಂದೆ ಪ್ರತಿಭಟನೆ, ಬಂದ್ ನಡೆದಾಗ ಎಲ್ಲೆಲ್ಲಿ ಅವಘಡ ನಡೆದಿತ್ತೋ ಅಲ್ಲಿ ಹೆಚ್ಚಿನ ಭದ್ರತೆ ನೀಡಲಿದ್ದೇವೆ.
- ಪ್ರತಿಭಟನೆ ವೇಳೆ ಯಾವುದಾದರೂ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿಯಾದ್ರೆ, ಪ್ರತಿಭಟನೆ ಸಂಘಟನೆಗಳು ಅಥವಾ ಹೋರಾಟಗಾರರೇ ಅದನ್ನು ಭರಿಸಬೇಕಾಗುತ್ತದೆ.
ಕರ್ನಾಟಕ
Bangalore bandh : ರಾಜಧಾನಿಯ ಎಲ್ಲ ಶಾಲೆ, ಕಾಲೇಜುಗಳಿಗೆ ನಾಳೆ ರಜೆ ಘೋಷಣೆ; ಬೆಂಗಳೂರು ಬಂದ್ ಕಾರಣ
Bangalore Bandh : ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ಸೆ. 26ರಂದು ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಬೆಂಗಳೂರು: ಸೆಪ್ಟೆಂಬರ್ 26ರಂದು ವಿವಿಧ ಸಂಘಟನೆಗಳು ಬಂದ್ (Bangalore bandh) ಘೋಷಿಸಿರುವುದರಿಂದ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೆಂಗಳೂರು ನಗರದ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ (Holiday announced for Bangalore Schools and Colleges) ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಅವರು ಪ್ರಕಟಿಸಿದ್ದಾರೆ.
ಕಾವೇರಿ ನೀರು ಬಿಡುಗಡೆಯನ್ನು ಪ್ರತಿಭಟಿಸಿ ಜಲಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಆಯೋಜಿಸಿರುವ ಬಂದ್‌ನಿಂದಾಗಿ ಮಕ್ಕಳಿಗೆ ಯಾವುದೇ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಸರ್ಕಾರ ಈ ಕ್ರಮ ಕೈಗೊಂಡಿದೆ.
ಈಗಾಗಲೇ ಹಲವಾರು ಖಾಸಗಿ ಶಾಲೆಗಳು ರಜೆಯನ್ನು ಘೋಷಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗಳು ಮಕ್ಕಳನ್ನು ಶಾಲೆಗೆ ಬರದಂತೆ ಸೂಚಿಸಿದೆ.
ಮಂಗಳವಾರದ ಬಂದ್‌ಗೆ ಹಲವಾರು ಸಂಘ ಸಂಸ್ಥೆಗಳು ಬೆಂಬಲ ನೀಡಿರುವುದರಿಂದ ಅಂಗಡಿ ಮುಂಗಟ್ಟುಗಳು ಮಚ್ಚಿರುವ ಸಾಧ್ಯತೆ ಇದೆ. ಸರ್ಕಾರಿ ಬಸ್‌ಗಳು ಇರಬಹುದಾದರೂ ಪ್ರತಿಭಟನೆ ವೇಳೆ ತಡೆದು ನಿಲ್ಲಿಸುವ ಅಪಾಯವಿದೆ.
ಖಾಸಗಿ ವಾಹನಗಳು, ಟ್ಯಾಕ್ಸಿ, ಆಟೋಗಳು ಬಂದ್ ಇರುವ ಸಾಧ್ಯತೆ ಇದೆ. ಹೀಗಾಗಿ ಮಕ್ಕಳು ತೊಂದರೆಗೆ ಸಿಲುಕದಿರಲಿ ಎಂದು ಜಿಲ್ಲಾಡಳಿತ ಪೂರ್ವಭಾವಿಯಾಗಿ ಈ ನಿರ್ಧಾರವನ್ನು ಪ್ರಕಟಿಸಿದೆ. ಇದರೊಂದಿಗೆ ಮಕ್ಕಳ ಹೆತ್ತವರು ನಿರಾಳರಾಗಿದ್ದಾರೆ.
ಬೆಂಗಳೂರು ವಿವಿ ಪರೀಕ್ಷೆಗಳು ಮುಂದಕ್ಕೆ
ಬೆಂಗಳೂರು ವಿವಿಯ ಎರಡು ಪರೀಕ್ಷೆಗಳು ಮುಂದೂಡಲಾಗಿದೆ. 2 ಮತ್ತು 4ನೇ ಸ್ನಾತಕೋತ್ತರ ಸೆಮಿಸ್ಟರ್ ಪರೀಕ್ಷೆಗಳು ಮಂಗಳವಾರ ನಡೆಯಬೇಕಾಗಿತ್ತು. ಅವುಗಳನ್ನು ಸೆಪ್ಟೆಂಬರ್ 27ಕ್ಕೆ ನಡೆಸಲಾಗುವುದು ಎಂದು ತಿಳಿಸಲಾಗಿದೆ.
ಬೆಂಗಳೂರು ಬಂದ್ ಗೆ ಬೆಂಬಲ ನೀಡಿರುವ ಸಂಘಟನೆಗಳು
ರಾಜ್ಯ ರೈತ ಸಂಘಟನೆಗಳ ಒಕ್ಕೂಟ.
ರಾಜ್ಯ ಕಬ್ಬು ಬೆಳೆಗಾರರ ಸಂಘ.
ಕಬಿನಿ ರೈತ ಹಿತರಕ್ಷಣಾ ಸಮಿತಿ
ಆಮ್ ಆದ್ಮಿ ಪಕ್ಷ.
ಜಯ ಕರ್ನಾಟಕ ಜನಪರ ವೇದಿಕೆ.
BBMP ಕಾರ್ಮಿಕರ ಸಂಘ.
KSRTC ಕನ್ನಡ ಕಾರ್ಮಿಕರ ಸಂಘ.
ಓಲಾ ಉಬರ್ ಮಾಲಿಕರ ಮತ್ತು ಚಾಲಕರ ಸಂಘ.
ಕಾರು ಆಟೋ ಮಿನಿ ಬಸ್ ಚಾಲಕರು ಮತ್ತು ಮಾಲೀಕರ ಸಂಘ 37 ಸಂಘಟನೆಗಳ ಒಕ್ಕೂಟ..
ಕಾರ್ಮಿಕ ಪಡೆ.
ಕರವೇ ಕನ್ನಡಿಗರ ಸಾರಥ್ಯ.
ಕರವೇ ಕನ್ನಡ ಸೇನೆ.
ನಮ್ಮ ನಾಡ ರಕ್ಷಣಾ ವೇದಿಕೆ.
ಕರ್ನಾಟಕ ಸಿಂಹ ಘರ್ಜನೆ ವೇದಿಕೆ.
ಕರುನಾಡ ಕಾವಲು ಪಡೆ.
ಕನ್ನಡಿಗರ ರಕ್ಷಣ ವೇದಿಕೆ
ತಮಿಳು ಸಂಘಮ್
ಕರವೇ ಸ್ವಾಭಿಮಾನ ವೇದಿಕೆ
ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್
ಪ್ರವಾಸಿ ರಾಜಸ್ಥಾನಿ ಮಂಡಲ
ಕರ್ನಾಟಕ ಮರಾಠ ಮಂಡಲ
ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್
ಕರ್ನಾಟಕ ರಾಜ್ಯ ಕಾರ್ಮಿಕರ ಹಿತ ರಕ್ಷಣಾ ವೇದಿಕೆ.
ಹೊಯ್ಸಳ ಸೇನೆ.
ಕರವೇ ಗಜ ಸೇನೆ.
ಹೊಯ್ಸಳ ಸೇನೆ.
ಜೈ ಕರುನಾಡ ಯುವ ಸೇನೆ.
ಕರುನಾಡ ಯುವ ಪಡೆ.
ಕೆಂಪೇಗೌಡ ಸೇನೆ.
ಒಕ್ಕಲಿಗರ ಯುವ ವೇದಿಕೆ.
ನೆರವು ಕಟ್ಟದ ಕಾರ್ಮಿಕ ಸಂಘ.
ಅಕಿಲ ಕರ್ನಾಟಕ ಯುವ ಸೇನೆ.
ಯುವ ಶಕ್ತಿ ಕರ್ನಾಟಕ.
ದಲಿತ ಸಂರಕ್ಷಣಾ ಸಮಿತಿ
ಕರ್ನಾಟಕ ಸಮರ ಸೇನೆ.
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಸೇನೆ.
ದಲಿತ ಜನಸೇನಾ.
ರಾಷ್ಟ್ರೀಯ ಚಾಲಕರ ಒಕ್ಕೂಟ.
ಕರ್ನಾಟಕ ಮರಾಠ ವೆಲ್ಫೇರ್ ಅಸೋಸಿಯೇಷನ್.
ಕನ್ನಡ ಮೊದಲು ತಂಡ.
ಕರುನಾಡ ಸೇವಕರು.
ಅಖಿಲ ಕರ್ನಾಟಕ ಕಥೋಲಿಕ್ ಕ್ರೈಸ್ತರ ಕನ್ನಡ ಸಂಘ.
ಕರುನಾಡ ಜನ ಬೆಂಬಲ ವೇದಿಕೆ.
ಕರ್ನಾಟಕ ದಲಿತ ಜನಸೇನೆ.
ಜೈ ಭಾರತ ಚಾಲಕ ಸಂಘ.
ರಾಜ್ಯ ಕರ್ನಾಟಕ ಸೇನೆ.
ಅಖಂಡ ಕರ್ನಾಟಕ ರಕ್ಷಣಾ ವೇದಿಕೆ.
ಕರುನಾಡ ಸೇನೆ.
ಕರ್ನಾಟಕ ವೇದಿಕೆ.
ಕನ್ನಡ ಸಾಹಿತ್ಯ ಪರಿಷತ್ತು.
ರಾಷ್ಟ್ರೀಯ ಕಾರ್ಮಿಕರ ಹಕ್ಕು & ಭ್ರಷ್ಟಾಚಾರ ವೇದಿಕೆ.
ಕರ್ನಾಟಕ ಜನಪರ ವೇದಿಕೆ.
ನಮ್ಮಿನಿ ರೇಡಿಯೋ.
ಹಸಿರು ಕರ್ನಾಟಕ.
ರಾಜ್ಯ ಒಕ್ಕಲಿಗರ ಯುವ ಸೇನೆ.
ಅಖಿಲ ಕರ್ನಾಟಕ ಯುವ ಕನ್ನಡಿಗರ ವೇದಿಕೆ.
ಕರ್ನಾಟಕ ಚಾಲಕ ವೇದಿಕೆ.
ಕರ್ನಾಟಕ ಕನ್ನಡಿಗರ ವೇದಿಕೆ.
ಕರ್ನಾಟಕ ಯುವರಕ್ಷಣಾ ವೇದಿಕೆ.
ಸುವರ್ಣ ಕರ್ನಾಟಕ ಹಿತರಕ್ಷಣ.
ಕಾವೇರಿ ಕನ್ನಡಿಗರ ವೇದಿಕೆ.
ಅಖಿಲ ಭಾರತ ಕಾರ್ಮಿಕ ಹಿತರಕ್ಷಣಾ ವೇದಿಕೆ.
ಜೈ ಭಾರತ ರಕ್ಷಣಾ ವೇದಿಕೆ.
ಕನ್ನಡ ಮನಸುಗಳು.
ಕರುನಾಡು ವಿದ್ಯಾರ್ಥಿ ಸಂಘಗಳು
ರಂಗಭೂಮಿ ಕಲಾವಿದರ ಸಂಘ
ಜೈನ ಸಂಘಟನೆ
ಕರ್ನಾಟಕ ಕ್ರೈಸ್ತ ಸಂಘಟನೆ
ಸರ್ ಎಂ ವಿಶ್ವೇಶ್ವರಯ್ಯ ಅಭಿಮಾನಿ ಬಳಗ
ನಾಡಗೌಡ ಕೆಂಪೇಗೌಡ ಟ್ರಸ್ಟ್
ಎಸ್ ಪಿ ರಸ್ತೆ ವ್ಯಾಪಾರಿಗಳ ಸಂಘ
ವೀರಾಂಜನೇಯ ಕನ್ನಡ ಯುವಕರ ಸಂಘ
ಸಿರವಿ ಸಮಾಜ
ಕರ್ನಾಟಕ ರಾಜ್ಯ ಪುರೋಹಿತ ಯುವಶಕ್ತಿ ಸಂಘಟನೆ
ಬೆಂಗಳೂರು ಬಂದ್ ಬೆಂಬಲಿಸಿದವರ ಮುಂದುವರಿದ ಸಂಘ ಸಂಸ್ಥೆಗಳ ಪಟ್ಟಿ
ಬೆಂಗಳೂರು ಎಪಿಎಂಸಿ ವರ್ತಕರ ಸಂಘ
ಸಮತಾ ಸೈನಿಕ ದಳ
ಎಪ್ ಕೆ ಸಿ ಸಿ ಐ
ಕಾಶಿಯ ಸಣ್ಣ ಕೈಗಾರಿಕೆಗಳ ಒಕ್ಕೂಟ
ಕರ್ನಾಟಕ ಸಾಂಸ್ಕೃತಿಕ ವೇದಿಕೆ
ಬಿಡಬ್ಲ್ಯೂಎಸ್‌ಎಸ್‌ಬಿ ನೌಕರರ ಸಂಘ
ಬಿಡಿಎ ನೌಕರರ ಸಂಘ
ಬಿಡಿಎ ವಾಹನ ಚಾಲಕರ ಸಂಘ
ಕರ್ನಾಟಕ ರಾಜ್ಯ ರೈತ ಸಂಘ
ಎಐಟಿಯುಸಿ ಕೆಎಸ್ಆರ್ಟಿಸಿ ನೌಕರರ ಸಂಘ
ಬೆಂಗಳೂರು ಜುವೆಲರ್ಸ್ ಅಸೋಸಿಯೇಷನ
ಕರ್ನಾಟಕ ವಕೀಲರ ಸಂಘ
ಬೆಂಗಳೂರು ವಕೀಲರ ಸಂಘ
ಕೆಆರ್ ಮಾರ್ಕೆಟ್ ಆಲ್ ಟ್ರೇಡರ್ಸ್ ಅಸೋಸಿಯೇಷನ್
ಕೆ ಆರ್ ಮಾರ್ಕೆಟ್ ಹೂವು ಮಾರಾಟಗಾರ ಒಕ್ಕೂಟ
ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್
ಬೀದಿ ಬದಿ ವ್ಯಾಪಾರಿಗಳ ಸಂಘ
ಮಂಡ್ಯ ಕಾವೇರಿ ರೈತ ಹಿತರಕ್ಷಣ ಸಮಿತಿ
ರಾಮನಗರ ಜಿಲ್ಲಾ ಬಂದ್
ಮಂಡ್ಯ ಜಿಲ್ಲೆಯ ಮಳವಳ್ಳಿ ಬಂದ್
ಮೈಸೂರು ಜಿಲ್ಲೆಯ
ಟಿ ನರಸೀಪುರ ಬಂದ್
ಕರ್ನಾಟಕ
Jai Shriram : ಬೈಕ್‌ನಲ್ಲಿ ಮಸೀದಿ ಆವರಣಕ್ಕೆ ನುಗ್ಗಿ ಜೈಶ್ರೀರಾಂ ಘೋಷಣೆ ಕೂಗಿ ಪುಂಡಾಟ
ಮಂಗಳೂರು: ಕೋಮು ಸೂಕ್ಷ್ಮ ಜಿಲ್ಲೆಯಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (Dakshina Kannada District) ಶಾಂತಿಯನ್ನು ಕದಡುವ ಪ್ರಯತ್ನಗಳು (Attmpt to disturb peace) ಆಗಾಗ ನಡೆಯುತ್ತಲೇ ಇರುತ್ತವೆ. ಇದರ ಭಾಗವೋ ಎಂಬಂತೆ ಯುವಕರ ತಂಡವೊಂದು ಬೈಕ್‌ನಲ್ಲಿ ಮಸೀದಿ ಆವರಣ (Mosque compound) ಪ್ರವೇಶ ಮಾಡಿ ಅಲ್ಲಿ ಜೈಶ್ರೀರಾಂ (Jai shriram) ಎಂದು ಘೋಷಣೆ ಕೂಗಿದೆ.
ದ.ಕ ಜಿಲ್ಲೆಯ ಕಡಬ ತಾಲೂಕಿನ ಮರ್ಧಾಳ ಎಂಬಲ್ಲಿ ಘಟನೆ ನಡೆದಿದೆ. ಮರ್ಧಾಳ ಬದ್ರಿಯಾ ಜುಮಾ ಮಸೀದಿಯಲ್ಲಿ (Mardhala Badriya Jumma Masjid) ಯಾವುದೋ ಕಾರ್ಯಕ್ರಮ ನಡೆಯುತ್ತಿದ್ದು, ಅದಕ್ಕಾಗಿ ಮಸೀದಿಯನ್ನು ಅಲಂಕರಿಸಲಾಗಿದೆ. ಇದರ ನಡುವೆಯೇ ಇಬ್ಬರು ಪುಂಡರು ಕಾಂಪೌಂಡ್ ಪ್ರವೇಶಿಸಿ ಕಿಡಿಗೇಡಿತನ ಪ್ರದರ್ಶಿಸಿದ್ದಾರೆ.
ಭಾನುವಾರ ರಾತ್ರಿ ಸುಮಾರು 11 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಮಸೀದಿಯ ಆವರಣದಲ್ಲಿ ಸಾಕಷ್ಟು ಬೆಳಕು ಇರುವಂತೆಯೇ ಇಬ್ಬರು ಕಿಡಿಗೇಡಿಗಳು ಗೇಟ್ ತೆರೆದಿದ್ದ ಆವರಣದೊಳಗೆ ಪ್ರವೇಶ ಮಾಡಿದ್ದಾರೆ.
ಮಸೀದಿಯ ಆವರಣವನ್ನು ಪ್ರವೇಶ ಮಾಡಿದ ಕಿಡಿಗೇಡಿಗಳು ಮಸೀದಿ ಆವರಣದಲ್ಲಿ ಬೈಕ್ ಹಿಂತಿರುಗಿಸಿ ತೆರಳಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇವರು ಒಳಗೆ ಬಂದಿದ್ದು ಮಾತ್ರವಲ್ಲ ಜೈಶ್ರೀರಾಂ ಘೋಷಣೆ ಕೂಗಿದ್ದಾರೆ ಎಂದು ಮಸೀದಿ ಧರ್ಮಗುರುಗಳು ದೂರು ನೀಡಿದ್ದಾರೆ. ಒಳಗೆ ಪ್ರವೇಶ ಮಾಡಿದ ಕಿಡಿಗೇಡಿಗಳು ಧರ್ಮಗುರುಗಳನ್ನು ಕಂಡು ತಕ್ಷಣವೇ ಬೈಕ್ ತಿರುಗಿಸಿ ಹಿಂದೆ ಹೋಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Eid milad holiday : ಈದ್ ಮಿಲಾದ್ ಹಬ್ಬಕ್ಕೆ ಮೀನು ವ್ಯಾಪಾರಕ್ಕೆ ಕಡ್ಡಾಯ ರಜೆ: ಬ್ಯಾನರ್ ವಿರುದ್ಧ ಹಿಂದುಗಳ ಆಕ್ರೋಶ
ಧರ್ಮಗುರುಗಳು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಎರಡು ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಪರಿಸರದ ವಿವಿಧ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳು ಯಾವುದೋ ದುರುದ್ದೇಶದಿಂದ ಇಲ್ಲವೇ ಜೈ ಶ್ರೀರಾಂ ಘೋಷಣೆ ಕೂಗಿ ಭಯ ಹುಟ್ಟಿಸುವ ಉದ್ದೇಶದಿಂದ ಈ ರೀತಿ ಮಾಡಿರುವ ಸಾಧ್ಯತೆಗಳಿವೆ. ಇದರ ನಡುವೆ ಕೆಲವು ಕಿಡಿಗೇಡಿ ಯುವಕರು ಊರಿನಲ್ಲಿ ಸಮಸ್ಯೆ ಸೃಷ್ಟಿಸುವ ಉದ್ದೇಶದಿಂದ ಮಸೀದಿಯ ಆವರಣಕ್ಕೆ ಬಂದು ಈ ರೀತಿ ಮಾಡಿರುವ ಸಾಧ್ಯತೆ ಇದೆ.
ರಾತ್ರಿ ಹನ್ನೊಂದು ಗಂಟೆಯ ಹೊತ್ತಿಗೆ ಇಲ್ಲಿ ಒಂದಷ್ಟು ಓಡಾಟವೂ ಇತ್ತು. ಈ ಘಟನೆ ನಡೆಯುವ ಕೆಲವೇ ಕ್ಷಣಗಳ ಒಂದು ಒಂದು ಕಾರು ಮಸೀದಿ ಬಳಿಯಿಂದ ಹೊರಟು ಹೋಗಿತ್ತು. ಬೈಕ್‌ಧಾರಿಗಳು ನೇರವಾಗಿ ಮಸೀದಿಯ ಒಳಗೇ ಪ್ರವೇಶ ಮಾಡಿರುವುದು ನೋಡಿದರೆ ಮೊದಲೇ ತೀರ್ಮಾನ ಮಾಡಿ ಬಂದವರಂತೆ ಕಾಣಿಸುತ್ತಾರೆ. ಹೀಗಾಗಿ ಯಾವುದಾರೂ ಸಂಚೂ ಇರಬಹುದು ಎಂಬ ಅಭಿಪ್ರಾಯವಿದೆ. ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಕರ್ನಾಟಕ
Murder Case : ಜಮೀನು ವಿವಾದಕ್ಕೆ ಅಣ್ಣನನ್ನೇ ಇರಿದು ಕೊಂದ ತಮ್ಮ!
Murder Case : ಚಿಕ್ಕಬಳ್ಳಾಪುರದಲ್ಲಿ ಜಮೀನು ವಿವಾದಕ್ಕೆ (Land Dispute) ಅಣ್ಣ-ತಮ್ಮಂದಿರ ನಡುವೆ ಗಲಾಟೆ ನಡೆದಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ.
ಚಿಕ್ಕಬಳ್ಳಾಪುರ : ಇಲ್ಲಿನ ಶಿಡ್ಲಘಟ್ಟ ತಾಲ್ಲೂಕಿನ ಚಿಕ್ಕದಾಸರಹಳ್ಳಿ ಗ್ರಾಮದಲ್ಲಿ ತಮ್ಮನೇ ಅಣ್ಣನನ್ನು ಹತ್ಯೆ (Murder case) ಮಾಡಿದ್ದಾನೆ. ಮುನಿಯಪ್ಪ ಅಲಿಯಾಸ್ ಮುನೇಯ (50) ಹತ್ಯೆಯಾದವರು. ಬ್ಯಾಟರಾಯಪ್ಪ (48) ಕೊಲೆ ಆರೋಪಿಯಾಗಿದ್ದಾನೆ.
ಹಲವು ದಿನಗಳಿಂದ ಇವರಿಬ್ಬರ ನಡುವೆ ಜಮೀನು ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು. ಇಬ್ಬರ ನಡುವೆಯೂ ಮುಸುಕಿನ ಗುದ್ದಾಟ ಇತ್ತು. ಸೋಮವಾರವು ಸಣ್ಣದಾಗಿ ಶುರುವಾದ ಗಲಾಟೆಯು ವಿಕೋಪಕ್ಕೆ ತಿರುಗಿದೆ. ಈ ವೇಳೆ ಸಿಟ್ಟಿಗೆದ್ದ ಬ್ಯಾಟರಾಯಪ್ಪ ಸ್ವಂತ ಅಣ್ಣನಿಗೆ ಚಾಕಿವಿನಿಂದ ಇರಿದು ಕೊಂದಿದ್ದಾನೆ.
ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ.
ಇದನ್ನೂ ಓದಿ: Kamala Hemmige: ಖ್ಯಾತ ಲೇಖಕಿ ಕಮಲಾ ಹೆಮ್ಮಿಗೆ ಇನ್ನಿಲ್ಲ
ಆಸ್ತಿಗಾಗಿ ಬಡಿದಾಡುತ್ತಿದ್ದ ಅಣ್ಣ-ತಮ್ಮಂದಿರ ಬಿಡಿಸಲು ಹೋದವ ಹೆಣವಾದ
ಬೆಂಗಳೂರು: ಇಲ್ಲಿನ ಸುಬ್ರಮಣ್ಯಪುರ ಠಾಣಾ ವ್ಯಾಪ್ತಿಯ ಶಾರದನಗರದಲ್ಲಿ ವ್ಯಕ್ತಿಯೊಬ್ಬ ಬರ್ಬರವಾಗಿ (murder Case) ಕೊಲೆಯಾಗಿದ್ದಾನೆ. ಗಣೇಶ್ ನಾಯ್ಕ್ ಹತ್ಯೆಯಾದವನು. ನಾರಾಯಣ್ ಕೊಲೆ ಆರೋಪಿಯಾಗಿದ್ದಾನೆ.
ಆಸ್ತಿ ವಿಚಾರವಾಗಿ ಅಣ್ಣ-ತಮ್ಮಂದಿರ ನಡುವೆ ಗಲಾಟೆ ನಡೆಯುತ್ತಿತ್ತು. ಒಬ್ಬರಿಗೊಬ್ಬರು ಕೈ ಮೀಲಾಯಿಸುವ ಹಂತಕ್ಕೆ ಹೋದಾಗ ಗಣೇಶ್ ನಾಯ್ಕ್ ಮಧ್ಯ ಪ್ರವೇಶ ಮಾಡಿದ್ದರು. ಈ ವೇಳೆ ಗಲಾಟೆ ವಿಕೋಪಕ್ಕೆ ತಿರುಗಿದ್ದು ಗಣೇಶ್ ನಾಯ್ಕ್‌ನ ಕೊಲೆಯಲ್ಲಿ ಅಂತ್ಯವಾಗಿದೆ.
ನಾರಾಯಣ ಹಾಗೂ ಮಲ್ಲೇಶ್ ಸಹೋದರರಾಗಿದ್ದು, ಇವರಿಬ್ಬರ ನಡುವೆ ಸಣ್ಣ ಪುಟ್ಟ ಗಲಾಟೆ ನಡೆಯುತ್ತಿತ್ತು. ಮೃತ ಗಣೇಶ್ ನಾಯಕ್ ಹಾಗೂ ಮಲ್ಲೇಶ್ ಸ್ನೇಹಿತರಾಗಿದ್ದರು. ಗಣೇಶ್ ನಾಯಕ್ ಯಾವಾಗಲು ಮಲ್ಲೇಶ್ ಮನೆಯಲ್ಲೇ ಇರುತ್ತಿದ್ದ. ಈ ವಿಚಾರಕ್ಕೆ ನಾರಾಯಣ್ ಹಲವು ಬಾರಿ ಗಣೇಶ್ ನಾಯಕ್‌ಗೆ ಬೈಯುತ್ತಿದ್ದ.
ಭಾನುವಾರ ರಾತ್ರಿಯೂ ಕುಡಿದ ನಶೆಯಲ್ಲಿ ಮಲ್ಲೇಶ್ ಮನೆ ಬಳಿ ನಾರಾಯಣ್ ಬಂದಿದ್ದ. ಈ ವೇಳೆ ಅಣ್ಣನ ಮನೆಯಲ್ಲೇ ಇದ್ದ ಗಣೇಶ ನಾಯ್ಕ್ ಕಂಡು ಹಲ್ಲೆಗೆ ಮುಂದಾಗಿದ್ದ. ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದ ನಾರಾಯಣ್, ಬಾರ್ ಬೆಂಡಿಂಗ್‌ಗೆ ಬಳಸುವ ರಾಡ್‌ನಿಂದ ಹೊಡೆದಿದ್ದಾನೆ.
ರಾಡ್‌ನಿಂದ ಹೊಡೆದ ರಭಸಕ್ಕೆ ಗಣೇಶ್ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಮಧ್ಯರಾತ್ರಿ ಘಟನೆ ನಡೆದಿದ್ದು, ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಪೊಲೀಸರಿಗೆ ಮಾಹಿತಿ ರವಾನೆ ಆಗಿದೆ. ಸದ್ಯ ಹತ್ಯೆ ಮಾಡಿ ಆರೋಪಿ ನಾರಾಯಣ್ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಸುಬ್ರಮಣ್ಯಪುರ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
-
ಕ್ರಿಕೆಟ್21 hours ago
IND vs AUS: ಸರಣಿ ವಶಪಡಿಸಿಕೊಂಡ ಭಾರತ; ದ್ವಿತೀಯ ಪಂದ್ಯದಲ್ಲಿ 99 ರನ್ ಗೆಲುವು
-
ಸುವಚನ15 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ವಿದೇಶ6 hours ago
Akshardham : ವಿದೇಶದಲ್ಲಿನ ಅತೀ ದೊಡ್ಡ ದೇವಾಲಯ ಉದ್ಘಾಟನೆಗೆ ಸಜ್ಜು; ಏನಿದರ ವಿಶೇಷ?
-
ದೇಶ20 hours ago
Viral News: ಎಲ್ಕೆಜಿ ಬಾಲಕನಿಗೆ ಕಾಲು ಮುರಿಯುವ ಹಾಗೆ ಬಡಿದ ಮೇಷ್ಟ್ರು , ಗಾಯಗಳನ್ನು ನೋಡಿ ಬೆಚ್ಚಿದ ಅಮ್ಮ
-
ದೇಶ20 hours ago
India Canada Row : ಖಲಿಸ್ತಾನಿ ಉಗ್ರರ ಕಡೆಗೆ ಮೃದು ಧೋರಣೆ; ಟ್ರುಡೊ ವಿರುದ್ಧ ಆರ್ಯ ಮತ್ತೆ ವಾಗ್ದಾಳಿ
-
ಕರ್ನಾಟಕ23 hours ago
Janata Darshan: ನಾಳೆ ರಾಜ್ಯಾದ್ಯಂತ ಏಕ ಕಾಲಕ್ಕೆ ʼಜನತಾ ದರ್ಶನʼ
-
ಕ್ರಿಕೆಟ್23 hours ago
IND vs AUS: ಅಯ್ಯರ್ ಬ್ಯಾಟಿಂಗ್ ಆವೇಶ ಕಂಡು ನಿಟ್ಟುಸಿರು ಬಿಟ್ಟ ಆಯ್ಕೆ ಸಮಿತಿ
-
ಆರೋಗ್ಯ24 hours ago
Tips For Eyes: ಕಣ್ಣು ಅದುರುವುದಕ್ಕೆ ಶಕುನ ಕಾರಣವಲ್ಲ! ಮತ್ತೇನು ಕಾರಣ?