ಕ್ರೈಂ
Kidnap Case: ಕಿಡ್‌ನ್ಯಾಪ್, ದನದ ಮಾಂಸ ಕಳವಿಗೆ ಆರ್‌ಎಸ್‌ಎಸ್ ಹೆಸರು ಬಳಕೆ! ನಾಲ್ವರ ಬಂಧನ
ದನದ ಮಾಂಸ ಡೆಲಿವರಿ ತೆಗೆದುಕೊಳ್ಳಬೇಕಾದ ಅಂಗಡಿ ಮಾಲಿಕನೇ ಅದನ್ನು ಅಪಹರಿಸಿದ, ವಾಹನ ಚಾಲಕನನ್ನು ಕಿಡ್‌ನ್ಯಾಪ್ ಮಾಡಿದ ಪ್ರಕರಣ ನಡೆದಿದೆ.
ಬೆಂಗಳೂರು: ವ್ಯಕ್ತಿಯೊಬ್ಬನನ್ನು ಕಿಡ್ನಾಪ್ (Kidnap case) ಮಾಡಲು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಹೆಸರು ದುರ್ಬಳಕೆ ಮಾಡಿದ ಪ್ರಕರಣ ವರದಿಯಾಗಿದೆ. ನಾಲ್ವರನ್ನು ಬಂಧಿಸಲಾಗಿದೆ.
ದೂರು ದಾಖಲಾದ ಬಳಿಕ ಕಾರ್ಯಾಚರಣೆ ವೇಳೆ ದನದ ಮಾಂಸ ಕಳ್ಳತನದ ಅಸಲಿ ಕಹಾನಿ ಬಯಲಾಗಿದೆ. ಇದೇ ತಿಂಗಳ 10ರಂದು ಕಿಡ್ನಾಪ್ ನಡೆದಿತ್ತು. ಜಾವಿದ್ ಬೇಗ್ ಎಂಬಾತನನ್ನು ಕಾರ್‌ನಲ್ಲಿ ಬಂದಿದ್ದ ಮೂವರು ವಾಹನ ಸಮೇತ ಕಿಡ್ನಾಪ್ ಮಾಡಿದ್ದರು.
ಜಾವೀದ್ ರಾಮನಗರದಿಂದ ತಿಲಕನಗರಕ್ಕೆ ಬರುತ್ತಿದ್ದು, ದನದ ಮಾಂಸ ಗಾಡಿಯಲ್ಲಿಟ್ಟುಕೊಂಡು ಅಂಗಡಿ ಡೆಲಿವರಿಗೆಂದು ತರುತ್ತಿದ್ದರು. ಈ ವೇಳೆ ಮೈಕೊ ಸಿಗ್ನಲ್ ಬಳಿ ಮೂವರು ಕಿಡ್ನಾಪರ್ಸ್ ಅಡ್ಡ ಹಾಕಿದ್ದರು. ತಾವು ಆರ್‌ಎಸ್‌ಎಸ್‌ನವರೆಂದು ತಡೆದು ವಾಹನ ಸಮೇತ ಜಾವಿದ್‌ರನ್ನು ಕರೆದೊಯ್ದಿದ್ದರು.
ಬಳಿಕ ಬಿಟ್ಟು ಕಳುಹಿಸಬೇಕಾದರೆ ಒಂದು ಲಕ್ಷ ರೂ. ಹಣ ಕೊಡು ಎಂದು ಡಿಮ್ಯಾಂಡ್ ಮಾಡಿದ್ದರು. ಕೊನೆಗೆ ಹತ್ತು ಸಾವಿರ ಪಡೆದು ಬಿಟ್ಟು ಕಳುಹಿಸಿದ್ದರು. ದನದ ಮಾಂಸ ಸಾಗಿಸುತಿದ್ದ ತನ್ನ ಗಾಡಿಯನ್ನು ಕೇಳಿದಾಗ, ಸೇಂಟ್ ಜಾನ್ ಸಿಗ್ನಲ್ ಬಳಿ ಬಿಟ್ಟಿರುವುದಾಗಿ ಹೇಳಿದ್ದರು. ಸಿಗ್ನಲ್ ಬಳಿ ಹೋದಾಗ ಕೇವಲ ಗಾಡಿ ಇದ್ದು, ಅದರಲ್ಲಿ ಮಾಂಸ ಇರಲಿಲ್ಲ. ನಂತರ ಜಾವೀದ್ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದಾಗ ಅಸಲಿ ಕಹಾನಿ ಹೊರಬಿದ್ದಿದೆ.
ಮಾಂಸ ಡೆಲಿವರಿಯಾಗಬೇಕಿದ್ದ ಅಂಗಡಿಯ ಮಾಲೀಕ ಮಹಮದ್ ಎಂಬಾತನಿಂದಲೇ ಕಿಡ್ನಾಪ್ ನಡೆದಿದ್ದು ಬಯಲಿಗೆ ಬಂದಿದೆ. ಚಾಲಕನನ್ನು ಬೆದರಿಸಲು ಈತ ಆರ್‌ಎಸ್‌ಎಸ್ ಹೆಸರು ಬಳಸಿದ್ದ. ಮೂವರು ಯುವಕರನ್ನು ಬಿಟ್ಟು ಕಿಡ್ನಾಪ್ ಕೃತ್ಯ ಮಾಡಿಸಿದ್ದ. ದನದ ಮಾಂಸ ಕದಿಯಲೆಂದೇ ಈ ಕೃತ್ಯ ನಡೆಸಿದ್ದು, ರಾಮನಗರದಿಂದಲೇ ಫಾಲೋ ಮಾಡಿಸಿದ್ದ. ಬಳಿಕ ಮಾಂಸ ತನ್ನ ಅಂಗಡಿಗೆ ತರಿಸಿಕೊಂಡು ಗಾಡಿ ಕಳುಹಿಸಿದ್ದ. ನಂತರ ಮಾಂಸ ಡೆಲಿವರಿಯಾಗಿಲ್ಲ ಎಂದು ಕಥೆ ಕಟ್ಟಿದ್ದ. ಸದ್ಯ ಅಂಗಡಿ ಮಾಲೀಕ ಮಹಮದ್ ಸಹಿತ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: Hassan News: ಕುಡಿತದ ಬಾಜಿ ಕಟ್ಟಿ ಪ್ರಾಣ ಕಳೆದುಕೊಂಡ ವ್ಯಕ್ತಿ; 10 ಪ್ಯಾಕೆಟ್ ಮದ್ಯ ಕುಡಿಯುವ ಚಾಲೆಂಜ್!
ಅವಿಭಾಗೀಕೃತ
Instagram fight: ಇನ್‌ಸ್ಟಾಗ್ರಾಂನಲ್ಲಿ ಬೈದ ಎಂದು 16ರ ಬಾಲಕನನ್ನು ತಲ್ವಾರ್‌ನಿಂದ ಕಡಿದು ಕೊಂದ ಸ್ನೇಹಿತರು!
Instagram Fight: ಇನ್‌ಸ್ಟಾ ಗ್ರಾಂನಲ್ಲಿ ಏನೋ ಮೆಸೇಜ್ ಹಾಕಿದ ಎಂದು ನಾಲ್ವರು ಬಾಲಕರು ಸೇರಿ 16 ವರ್ಷದ ಬಾಲಕನನ್ನು ತಲವಾರಿನಿಂದ ಕಡಿದು ಕೊಂದಿದ್ದಾರೆ. ಇದು ಎಲ್ಲೆಲ್ಲೋ ನಡೆದ ಘಟನೆಯಲ್ಲ, ಬೆಳಗಾವಿಯ ಕಿತ್ತೂರಿನಲ್ಲಿ.
ಬೆಳಗಾವಿ: ಸಾಮಾಜಿಕ ಜಾಲ ತಾಣಗಳ ದುಷ್ಪರಿಣಾಮ (Social Media side effects) ಒಬ್ಬ ಬಾಲಕನ ಪ್ರಾಣವನ್ನೇ (16 year old boy murdered) ಕಿತ್ತುಕೊಂಡಿದೆ. ಇನ್‌ಸ್ಟಾ ಗ್ರಾಂ ವೇದಿಕೆಯಲ್ಲಿ (Instagram fight) ಆಡಿದ ಒಂದು ಸಣ್ಣ ಮಾತಿನಿಂದ 16 ವರ್ಷದ ಬಾಲಕನೊಬ್ಬನ ಸಾವಿಗೆ ಕಾರಣವಾಗಿದೆ.
ಇನ್‌ಸ್ಟಾ ಗ್ರಾಂ ಮೆಸೇಜ್‌ನಲ್ಲಿ ಬೈದಿದ್ದ ಎಂಬ ಒಂದೇ ಕಾರಣವನ್ನು ಇಟ್ಟುಕೊಂಡು ಒಬ್ಬ ಬಾಲಕನನ್ನು ಕೊಲೆ ಮಾಡಿದ ಭೀಕರ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ನಡೆದಿದೆ. ಕೇವಲ ಹದಿನಾರು ವರ್ಷದ ಬಾಲಕನನ್ನು ತಲವಾರಿನಿಂದ ಕಡಿದು ಕೊಲೆ (Murder by friends) ಮಾಡಲಾಗಿದೆ. ಹಾಗಂತ ಕೊಲೆ ಮಾಡಿದವರು ದೊಡ್ಡವರೇನಲ್ಲ. ಅವನದೇ ವಯಸ್ಸಿನ ನಾಲ್ಕು ಮಂದಿ ಬಾಲಕರು ಸೇರಿ ಈ ಕೊಲೆ ಮಾಡಿದ್ದಾರೆ. ಜತೆಗೆ ಅವರು ಅವನ ಸ್ನೇಹಿತರೇ ಬೇರೆ.
ಈ ಜಗಳ ಶುರುವಾಗಿದ್ದು ಯಾವಾಗ? ಏನು ಮೆಸೇಜ್ ಮಾಡಿದ್ದ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಆದರೆ, ಬುಧವಾರ ಸಂಜೆ ಪ್ರಜ್ವಲ್ ಸಂಕದ್‌ನನ್ನು ಕರೆಸಿಕೊಂಡ ಈ ನಾಲ್ವರು ಬಾಲಕರು ಅವನ ಮೇಲೆ ಯದ್ವಾತದ್ವಾ ತಲವಾರು ಬೀಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಆತನ ತಲೆಯನ್ನೇ ಗುರಿ ಮಾಡಿಕೊಂಡು ದಾಳಿ ಮಾಡಲಾಗಿದೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರಜ್ವಲ್‌ನನ್ನು ಆತನ ಪೋಷಕರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರಾದರೂ ತಡರಾತ್ರಿ ಆತ ಚಿಕಿತ್ಸೆ ಫಲಕಾರಿಯಾಗದೆ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Murder Case : ಜಮೀನು ವಿವಾದಕ್ಕೆ ಅಣ್ಣನನ್ನೇ ಇರಿದು ಕೊಂದ ತಮ್ಮ!
ಸಾಮಾಜಿಕ ಜಾಲತಾಣವೇ ಬದುಕಾದರೆ ದುರಂತ
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳೇ ನಮ್ಮ ಬದುಕನ್ನು ನಿರ್ಧರಿಸುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಜಗತ್ತು ಜಾಲತಾಣಗಳಿಂದಲೇ ನಡೆಯುತ್ತಿದೆ ಎನ್ನುಷ್ಟು ಅಡಿಕ್ಟ್ ಆಗಿಬಿಟ್ಟಿರುವುದರಿಂದ ಅಲ್ಲಿ ನಡೆಯುವ ಬೆಳವಣಿಗೆಗಳು ಬದುಕನ್ನೇ ಬದಲಿಸಿ ಬಿಡುತ್ತವೆ.
ಫೇಸ್ ಬುಕ್‌ನಲ್ಲೋ, ಇನ್‌ಸ್ಟಾ ಗ್ರಾಂನಲ್ಲೋ ಹಾಕಿದ ಫೋಟೊ, ವಿಡಿಯೊಗಳಿಗೆ ಬರುವ ವ್ಯೂಸ್ ಮತ್ತು ಕಮೆಂಟ್‌ಗಳಿಂದಲೇ ಖುಷಿಪಡುವವರು, ಕಮೆಂಟ್ ಬಾರದಿದ್ದರೆ ಮರುಗುವವರು, ವ್ಯೂಸ್ ಇಲ್ಲದಿದ್ದರೆ ಕೊರಗುವವರು ಹೆಚ್ಚಾಗಿದ್ದಾರೆ.
ಇದೇ ಹೊತ್ತಿಗೆ ಅದರಲ್ಲಿ ಬರುವ ನೆಗೆಟಿವ್ ಕಮೆಂಟ್‌ಗಳಿಂದ ಬದುಕೇ ಮುಗಿದು ಹೋಯಿತು ಎಂಬಂತೆ ಬೇಜಾರು ಮಾಡಿಕೊಳ್ಳುವವರು, ನೆಗೆಟಿವ್ ಕಮೆಂಟ್ ಹಾಕಿದವರ ಮೇಲೆ ಮಾತಿನ, ಬರಹದ ದ್ವೇಷ ಸಾಧಿಸಲು ಹೊರಡುವುದು ಹೆಚ್ಚಾಗುತ್ತಿದೆ. ಕೆಲವರು ಇದನ್ನೊಂದು ಸಾಮಾಜಿಕ ಅಂತಸ್ತು ಎಂದು ಪರಿಗಣಿಸಿ ದೈಹಿಕವಾಗಿಯೇ ಹಲ್ಲೆ ನಡೆಸುತ್ತಾರೆ.
ಇಲ್ಲಿ ಸಾಮಾಜಿಕ ಜಾಲತಾಣವೇ ಬದುಕಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ಅದರಲ್ಲೂ ಸಣ್ಣ ಸಣ್ಣ ಮಕ್ಕಳು ಕೂಡಾ ಈಗ ಜಾಲತಾಣದಲ್ಲೇ ಮುಳುಗಿರುವುದರಿಂದ ಅವರಿಗೆ ಒಳಿತು ಕೆಡುಕಿನ ಬಗ್ಗೆ ಅರಿವಿಲ್ಲದೆ ಅಪಾಯಕಾರಿ ಸೇಡಿಗೆ ಮುಂದಾಗುತ್ತಾರೆ. ಬಹುಶಃ ಪ್ರಜ್ವಲ್ ಕೊಲೆಗೆ ಇಂಥ ಸಣ್ಣ ಸಂಗತಿಗಳೇ ಕಾರಣ ಆಗಿರಬಹುದು. ಏನೇ ಆದರೂ ಒಬ್ಬ ಬೆಳೆಯುವ ಹುಡುಗ ಸಾವು ಕಂಡಿದ್ದಾನೆ. ಅವನದೇ ವಯಸ್ಸಿನ ಮಕ್ಕಳು ಹಂತಕರಾಗಿ ನಿಂತಿದ್ದಾರೆ.
ಕ್ರೈಂ
ದೂರು ನೀಡಲು ಹೋದ ದಲಿತ ಮಹಿಳೆ ಮೇಲೆಯೇ ಅತ್ಯಾಚಾರ ಎಸಗಿದ ಪಿಎಸ್‌ಐ; ಇದೆಂಥಾ ಅನಾಚಾರ!
ಪೊಲೀಸ್ ಠಾಣೆಗೆ ದೂರು ನೀಡಲು ಬಂದ ದಲಿತ ಮಹಿಳೆ ಮೇಲೆಯೇ ಪಿಎಸ್‌ಐ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಹೀನ ಕೃತ್ಯ ಎಸಗಿದ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
ಲಖನೌ: ಮಳೆ, ಚಳಿ, ಬಿಸಿಲು, ಹಗಲು, ರಾತ್ರಿ ಎನ್ನದೆ ಕಾರ್ಯನಿರ್ವಹಿಸುವ, ಜನರಿಗೆ ರಕ್ಷಣೆ ಒದಗಿಸುವ ಪೊಲೀಸರ ಬಗ್ಗೆ ಸಮಾಜದಲ್ಲಿ ಗೌರವ ಇದೆ. ಸೈನಿಕರು ಗಡಿ ರಕ್ಷಣೆ ಮಾಡಿದರೆ, ಪೊಲೀಸರು ದೇಶವನ್ನು ಆಂತರಿಕವಾಗಿ ರಕ್ಷಣೆ ಮಾಡುತ್ತಾರೆ. ಹೀಗೆ, ಜನರನ್ನು ಕಾಯಬೇಕಾದ, ಅವರಿಗೆ ರಕ್ಷಣೆ ನೀಡಬೇಕಾದ ಪೊಲೀಸ್ ಅಧಿಕಾರಿಯೊಬ್ಬ ಉತ್ತರ ಪ್ರದೇಶದಲ್ಲಿ (Uttar Pradesh) ಹೀನ ಕೃತ್ಯ ಎಸಗಿದ್ದಾನೆ. ದೂರು ನೀಡಲೆಂದು ಪೊಲೀಸ್ ಠಾಣೆಗೆ ಬಂದ ದಲಿತ ಮಹಿಳೆಯೊಬ್ಬರ (Dalit Woman) ಮೇಲೆಯೇ ಅತ್ಯಾಚಾರ ಎಸಗುವ ಮೂಲಕ ಪೊಲೀಸ್ ವೃತ್ತಿ ಮಾತ್ರವಲ್ಲ ಮನುಷ್ಯ ಕುಲಕ್ಕೇ ಕಂಟಕ ಎನಿಸುವ ಕೆಲಸ ಮಾಡಿದ್ದಾನೆ.
ಉತ್ತರ ಪ್ರದೇಶದ ಪ್ರಯಾಗರಾಜ್ ಜಿಲ್ಲೆಯ ಝಂಘಾಯಿ ಪೊಲೀಸ್ ಠಾಣೆಯಲ್ಲಿ ಎಸ್‌ಐ ಆಗಿರುವ ಸುಧೀರ್ ಕುಮಾರ್ ಎಂಬಾತನು ದಲಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಸೆಪ್ಟೆಂಬರ್ 21ರಂದು ಮಹಿಳೆಯೊ ಪೊಲೀಸ್ ಠಾಣೆಗೆ ಬಂದಿದ್ದಾರೆ. ಆಕೆಯ ದೂರು ದಾಖಲಿಸಿಕೊಂಡು, ನ್ಯಾಯ ಒದಗಿಸಬೇಕಾದ ಎಸ್‌ಐ, ಮಹಿಳೆಗೆ ಮತ್ತು ಬರುವ ಔಷಧ ಇರುವ ಪಾನೀಯ ನೀಡಿ, ಬಳಿಕ ಕಾರಿನಲ್ಲಿ ಎತ್ತಿಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.
ಇದಾದ ಬಳಿಕ ಮಹಿಳೆಯು ಸುಧೀರ್ ಕುಮಾರ್ ಪಾಂಡೆ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 376 (ಅತ್ಯಾಚಾರ), 120 ಬಿ (ಕ್ರಿಮಿನಲ್ ಪಿತೂರಿ) ಹಾಗೂ ಎಸ್‌ಸಿ, ಎಸ್‌ಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹಾಗೆಯೇ, ಕೂಡಲೇ ಸುಧೀರ್ ಕುಮಾರ್ ಪಾಂಡೆಯನ್ನು ಅಮಾನತುಗೊಳಿಸಲಾಗಿದೆ. ಕೃತ್ಯ ಎಸಗಿದ ಸುಧೀರ್ ಕುಮಾರ್ ಪಾಂಡೆ ಈಗ ತಲೆಮರಿಸಿಕೊಂಡಿದ್ದಾನೆ. ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: Physical Abuse : ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ; ನೊಂದ ದಂಪತಿಯ ಆತ್ಮಹತ್ಯೆ
ದಲಿತ ಮಹಿಳೆಗೆ ಹಲವು ದಿನಗಳಿಂದ ಕೆಲವು ದುಷ್ಕರ್ಮಿಗಳು ಲೈಂಗಿಕ ಕಿರುಕುಳ ನೀಡುತ್ತಿದ್ದರು. ಹಾಗೆಯೇ, ಆಕೆಗೆ ಜೀವ ಬೆದರಿಕೆಯನ್ನೂ ಹಾಕಿದ್ದರು. ಇದರಿಂದ ವಿಚಲಿತರಾದ ಮಹಿಳೆಯು ಅವರ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದರು. ಆದರೆ, ಆ ಮಹಿಳೆ ಮೇಲೆಯೇ ಪೊಲೀಸ್ ಅಧಿಕಾರಿ ಅತ್ಯಾಚಾರ ಎಸಗಿರುವುದು ನೀಚ ಕೃತ್ಯವಾಗಿದೆ. ಇನ್ನುಮುಂದೆ ಹೆಣ್ಣುಮಕ್ಕಳು ಪೊಲೀಸ್ ಠಾಣೆಗೂ ಒಬ್ಬರೇ ಹೋಗಬಾರದು ಎಂಬ ಸಂದೇಶ ರವಾನೆಯಾದಂತಾಗಿದೆ.
ಕರ್ನಾಟಕ
Elephant Attack : ಹಾಲು ತರಲು ಹೋಗುತ್ತಿದ್ದ ವೃದ್ಧನ ಬೆನ್ನಟ್ಟಿ ದಾಳಿ ಮಾಡಿದ ಕಾಡಾನೆ ಹಿಂಡು, ಗಂಭೀರ ಗಾಯ
Elephant Attack : ಕೊಡಗು ಜಿಲ್ಲೆಯಲ್ಲಿ ಆನೆಗಳ ಹಿಂಡು ಹಾಲು ತರಲು ಹೋಗುತ್ತಿದ್ದ ವೃದ್ಧರ ಮೇಲೆ ದಾಳಿ ಮಾಡಿದೆ. ಇತ್ತೀಚೆಗೆ ಹಲವಾರು ಮಂದಿಯನ್ನು ಆನೆಗಳು ಸಾಯಿಸಿದ್ದು, ಇವರು ಅದೃಷ್ಟವಶಾತ್ ಬಚಾವಾಗಿದ್ದಾರೆ.
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಆನೆಗಳು ಮತ್ತು ಮಾನವ ಸಂಘರ್ಷ (Elephant and Human Conflict) ಮುಂದುವರೆದಿದ್ದು ಕಾಡಾನೆ ಹಿಂಡೊಂದು (Wild Elephants) ಹಾಲು ತರಲು ಹೋಗುತ್ತಿದ್ದ ವೃದ್ಧರೊಬ್ಬರ (Elephant attack on Old Man) ಮೇಲೆ ದಾಳಿ ಮಾಡಿದೆ. ಮೂರು ಆನೆಗಳ ಹಿಂಡು ನುಗ್ಗಿ ಬಂದಿದ್ದು, ಗಾಯಗೊಂಡ ವೃದ್ಧರ ಸ್ಥಿತಿ ಗಂಭೀರವಾಗಿದೆ.
ಕೊಡಗು ಜಿಲ್ಲೆ (Kodagu News) ವಿರಾಜಪೇಟೆ ತಾಲ್ಲೂಕಿನ ಕಡಂಗ ಮರೂರು ಗ್ರಾಮದಲ್ಲಿ ನಡೆದಿದೆ. ಕಡಂಗ ಮರೂರು ಗ್ರಾಮದ 73 ವರ್ಷ ನಿವಾಸಿ ಅಮ್ಮಂಡ ಸುಬ್ರಹ್ಮಣಿ ಅವರು ಮನೆಯಿಂದ ಹಾಲು ತರಲು ಅಂಗಡಿಗೆ ತೆರಳುವ ಸಂದರ್ಭದಲ್ಲಿ ಕಡಂಗ ಮರೂರು ಗ್ರಾಮದ ಭದ್ರಕಾಳಿ ದೇವಾಲಯದ ಸಮೀಪದ ತೋಟದಿಂದ ಏಕಾ ಏಕಿ ಬಂದ ಮೂರು ಕಾಡಾನೆಗಳು ಸುಬ್ರಹ್ಮಣಿ ಮೇಲೆ ದಾಳಿ ನಡೆಸಿದೆ.
ಕಾಡಾನೆ ದಾಳಿಯಿಂದ ಕೈ ಕಾಲುಗಳಿಗೆ ತೀವ್ರ ಪಟ್ಟಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಡಗು ಜಿಲ್ಲೆಯಲ್ಲಿ ದಿನಬೆಳಗಾದರೆ ಸಾಕು ಕಾಡಿನಿಂದ ನಾಡಿಗೆ ಲಗ್ಗೆ ಇಡೋ ಕಾಡಾನೆಗಳು ರೈತರು ಬೆಳೆದ ಬೆಳೆಗಳನ್ನ ನಾಶ ಪಡಿಸುವುದರೊಂದಿಗೆ ಜನರ ಮೇಲು ಕೂಡ ದಾಳಿ ನಡೆಸುತ್ತಿವೆ.
ಜನರು ಓಡಾಲು ಕೂಡ ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆನೆ ಮಾನವ ಸಂಘರ್ಷಕ್ಕೆ ಕಡಿವಾಣ ಹಾಕುವಂತ್ತೆ ಕೊಡಗಿನ ಜನತೆ ಒತ್ತಾಯಿಸುತ್ತಿದ್ದಾರೆ.
ಅರಣ್ಯ ಸಿಬ್ಬಂದಿಯನ್ನೇ ಬಲಿ ಪಡೆದಿತ್ತು ಕಾಡಾನೆ
ಕಳೆದ ಸೆಪ್ಟೆಂಬರ್ 4ರಂದು ಆನೆಗಳ ಹಾವಳಿಯನ್ನು ನಿಯಂತ್ರಿಸುವುದಕ್ಕಾಗಿ ರೂಪಿಸಲಾದ ರ‍್ಯಾಪಿಡ್ ರೆಸ್ಪಾನ್ಸ್ ಟೀಮ್‌ನ (Rapid Response Team- RRT) ಸದಸ್ಯರೊಬ್ಬರನ್ನೇ ಆನೆ ದಾಳಿ ಮಾಡಿ ಕೊಂದಿತ್ತು.
ಕೊಡಗಿನ ಆನೆಕಾಡು ಅರಣ್ಯ ಪ್ರದೇಶದಲ್ಲಿ ಕ್ಷಿಪ್ರ ಪ್ರತಿಕ್ರಿಯೆ ದಳವೊಂದು (Rapid Response Team- RRT) ಕಾರ್ಯಾಚರಿಸುತ್ತಿದ್ದು, ಇದು ಆನೆಗಳ ಚಲನವಲನಗಳ ಮೇಲೆ ಗಮನ ಇಡುತ್ತದೆ. ಈ ತಂಡದಲ್ಲಿ RRT ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಗಿರೀಶ್ (35) ಅವರೇ ದಾಳಿಗೆ ಒಳಗಾಗಿ ಪ್ರಾಣ ಕಳೆದುಕೊಂಡಿದ್ದರು. ಮಡಿಕೇರಿ ಸಮೀಪದ ಕೆದಕಲ್ ಬಳಿ ಗಿರೀಶ್ ಅವರು ತಂಡದ ಇದರ ಸದಸ್ಯರ ಜತೆಗೆ ಆನೆ ಕಾರ್ಯಾಚರಣೆಗೆ ತೆರಳಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಕಾಡಾನೆ ದಾಳಿ ದಾಳಿ ನಡೆಸಿತ್ತು.
ಆಗಸ್ಟ್ 27ಕ್ಕೆ ಹಸುವನ್ನು ಹುಡುಕಲು ಹೋದ ರೈತ ಸಾವು
ಕಳೆದ ಆಗಸ್ಟ್ 27ರಂದು ಸೋಮವಾಪೇಟೆ ತಾಲ್ಲೂಕಿನ ಅಡಿಯನಾಡೂರು ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಆನೆಯೊಂದು 60 ವರ್ಷದ ಕೃಷಿಕ ಈರಪ್ಪ ಎಂಬವರನ್ನು ಆನೆ ಕೊಂದು ಹಾಕಿತ್ತು.
ಅಂದು ಮುಂಜಾನೆ ಈರಪ್ಪ ತಮ್ಮ ಮನೆಯ ಹಾಲು ಕರೆಯುವ ಹಸು ಕಾಣುತ್ತಿಲ್ಲ ಅಂತ ಹುಡುಕಿಕೊಂಡು ಹೋಗಿದ್ದರು. ಈ ಸಂದರ್ಭದಲ್ಲಿ ಗೌರಿ ಗದ್ದೆಯ ಸಮೀಪ ಏಕಾಏಕಿ ನುಗ್ಗಿ ಬಂದ ಕಾಡಾನೆ ಈರಪ್ಪ ಮೇಲೆ ದಾಳಿ ನಡೆಸಿದೆ. ಆನೆ ಈರಪ್ಪ ಅವರ ಎದೆಯ ಮೇಲೆಯೇ ನೇರವಾಗಿ ಕಾಲಿಟ್ಟಿದೆ. ದಾಳಿಗೆ ಸಿಲುಕಿದ ಈರಪ್ಪ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.
ಇದನ್ನೂ ಓದಿ: Elephant attack : ಕಾಡಾನೆ ದಾಳಿಗೆ ಮತ್ತೊಬ್ಬ ವೃದ್ಧ ಬಲಿ!
ಆಗಸ್ಟ್ 20ರಂದು ವಾಕಿಂಗ್ ಮಾಡುತ್ತಿದ್ದ ಮಹಿಳೆ ಮೃತ್ಯು
ಕಳೆದ ಆಗಸ್ಟ್ 2೦ರಂದು ವಿರಾಜಪೇಟೆ ತಾಲೂಕಿನ ಬಾಡಗ ಬಾಣಂಗಾಲ ಗ್ರಾಮದಲ್ಲಿ ಮನೆ ಸಮೀಪ ವಾಕಿಂಗ್ ಮಾಡುತ್ತಿದ್ದ ಆಯಿಶಾ (63) ಎಂಬವರು ಆನೆ ದಾಳಿಗೆ ಒಳಗಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಅದಕ್ಕಿಂತ ಒಂದು ವಾರದ ಹಿಂದೆ ಕೂಡ ಆನೆ ದಾಳಿಗೆ ಟ್ರಾಕ್ಟರ್ ಚಾಲಕರೊಬ್ಬರು ಮೃತ ಪಟ್ಟಿದ್ದರು. ಕಳೆದ ಒಂದು ತಿಂಗಳಲ್ಲಿ ಮರಗೋಡು, ಸಿದ್ದಾಪುರ ಸಮೀಪದ ಬಾಣಂಗಾಲ ಇದೀಗ ಸೋಮವಾರಪೇಟೆ ಭಾಗದಲ್ಲಿ ಕಾಡಾನೆ ದಾಳಿಯಾಗಿದ್ದು ಕಾಡಾನೆ ದಾಳಿಯಲ್ಲಿ ಮೂರು ಜನ ಮೃತಪಟ್ಟಂತಾಗಿದೆ.
ನಾಲ್ಕು ದಿನದ ಹಿಂದೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನಲ್ಲಿ ಮಹಿಳೆ ಮೇಲೆ ಆನೆ ದಾಳಿ ಮಾಡಿ ಮೃತಪಟ್ಟಿದ್ದರು. ಕೆಲವು ತಿಂಗಳ ಹಿಂದೆ ಕೊಡಗಿನಲ್ಲಿ ಒಂದೇ ದಿನ ಅಜ್ಜ ಮತ್ತು ಮೊಮ್ಮಗನನ್ನು ಆನೆ ಬಲಿ ಪಡೆದಿತ್ತು.
ಕರ್ನಾಟಕ
Mandya Accident: ಕೆಎಸ್ಸಾರ್ಟಿಸಿ ಬಸ್ ಡಿಕ್ಕಿ ಹೊಡೆದ ಕಾರು; ನಾಲ್ವರು ಸ್ಥಳದಲ್ಲೇ ದುರ್ಮರಣ
Mandya accident: ನಾಗಮಂಗಲ ಸಮೀಪ ಬೆಳ್ಳೂರು ಕ್ರಾಸ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಬಸ್‌ಗೆ ಕಾರು ಡಿಕ್ಕಿ ಹೊಡೆದು ನಡೆದ ದುರಂತವಿದು.
ಮಂಡ್ಯ: ಬೆಂಗಳೂರು – ಮಂಗಳೂರು ಹೆದ್ದಾರಿಯಲ್ಲಿ (Bangalore-Mangalore High way) ನಾಗಮಂಗಲ ಸಮೀಪ ನಡೆದಿರುವ ಭೀಕರ ಅಪಘಾತದಲ್ಲಿ (Mandya accident) ನಾಲ್ವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ (Four dead on spot). ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್‌ನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗೆ ಕಾರು ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ.
ಹಾಸನ ಕಡೆಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಕೆ.ಎಸ್‌ಆರ್ಟಿಸಿ ಬಸ್‌ಗೆ ಹಿಂದಿನಿಂದ ವೇಗವಾಗಿ ಬಂದ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಹೀಗಾಗಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅತಿಯಾದ ವೇಗವೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಸಾವನ್ನಪ್ಪಿರುವವರ ಗುರುತು ಇನ್ನೂ ಪತ್ತೆಯಾಗಿಲ್ಲ.
ಬೆಳ್ಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಮೃತರ ಗುರುತು ಪತ್ತೆಗಾಗಿ ಪ್ರಯತ್ನಿಸುತ್ತಿದ್ದಾರೆ.
ಅಪಘಾತ ಹೇಗಾಯಿತು?
ಕೆಎಸ್‌ಆರ್‌ಟಿಸಿ ಬಸ್ಸು ಹಾಸನ ಕಡೆಯಿಂದ ಬೆಂಗಳೂರು ಕಡೆಗೆ ಬರುತ್ತಿತ್ತು. ಈ ವೇಳೆ ಆದಿಚುಂಚನಗಿರಿ ಮೆಡಿಕಲ್ ಆಸ್ಪತ್ರೆ ಎದುರು ಜನರನ್ನು ಇಳಿಸಲು ಬಸ್ ನಿಲ್ಲಿಸಲಾಗಿತ್ತು. ಈ ವೇಳೆ ವೇಗವಾಗಿ ಧಾವಿಸಿ ಬಂದ ಕಾರು ನಿಂತಿದ್ದ ಬಸ್ಸಿಗೆ ಡಿಕ್ಕಿ ಹೊಡೆದಿದೆ.
KA-02 MM 1802 ನಂಬರಿನ ಸ್ವಿಫ್ಟ್ ಕಾರು ಇದಾಗಿದ್ದು, ಕಾರಿನಲ್ಲಿದ್ದ ಓರ್ವ ಮಹಿಳೆ, ಮೂವರು ಪುರುಷರು ಸೇರಿ ನಾಲ್ವರು ಮೃತಪಟ್ಟಿದ್ದಾರೆ.
ಇದನ್ನೂ ಓದಿ: Iraq Fire Accident: ಮದುವೆ ಮನೆಯಲ್ಲಿ ಅಗ್ನಿ ದುರಂತ; ಮದುಮಕ್ಕಳು ಸೇರಿ 114 ಜನರ ಸಾವು!
ಡಿವೈಡರ್‌ಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ವಿದ್ಯಾರ್ಥಿಗಳ ಸಾವು
ಕಲಬುರಗಿ: ರಸ್ತೆ ಡಿವೈಡರ್‌ಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿರುವುದು ನಗರದ ರಿಂಗ್ ರಸ್ತೆಯ ನಾಗನಹಳ್ಳಿ ಬಳಿಯ ರೈಲ್ವೆ ಬ್ರಿಡ್ಜ್ ಬಳಿ ಮಂಗಳವಾರ ನಡೆದಿದೆ. ಹುಟ್ಟುಹಬ್ಬದ ಪಾರ್ಟಿಗೆ ಹೋಗುತ್ತಿದ್ದಾಗ ಅಪಘಾತವಾಗಿದೆ (Bike Accident).
ಅಂಬಿಕಾ ನಗರದ ಅಲಿ ಅಬ್ಬಾಸ್ ಹಾಗೂ ರೆಹಮತ್ ನಗರದ ಇರ್ಫಾನ್ ಮೃತ ವಿದ್ಯಾರ್ಥಿಗಳು. ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಅಬ್ಬಾಸ್ ಅಲಿ, ಸ್ನೇಹಿತ ಇರ್ಫಾನ್ ಜತೆ ಬೈಕ್‌ನಲ್ಲಿ ಪಾರ್ಟಿಗೆ ಹೊರಟಿದ್ದ. ವೇಗವಾಗಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಬೈಕ್ ಡಿವೈಡರ್‌ಗೆ ಡಿಕ್ಕಿಯಾಗಿದೆ. ಈ ವೇಳೆ ತಲೆಗೆ ಗಂಭೀರ ಗಾಯಗಳಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು 10ನೇ ತರಗತಿ ಓದುತ್ತಿದ್ದರು. ಸ್ಥಳಕ್ಕೆ ಸಂಚಾರ-2 ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
-
ದೇಶ13 hours ago
UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!
-
ವಿದೇಶ20 hours ago
Great auction: ಅಮೆರಿಕದ ಅಪರೂಪದ ನೋಟು 3.9 ಕೋಟಿ ರೂ.ಗೆ ಮಾರಾಟ!
-
South Cinema23 hours ago
Heart attack : ಹಿರಿಯ ನಟ ಬ್ಯಾಂಕ್ ಜನಾರ್ದನ್ಗೆ ಹೃದಯಾಘಾತ?
-
ಸುವಚನ8 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ13 hours ago
Manipur Horror: ಅಪಹರಿಸಿ ಕೊಂದ್ರಲ್ಲಾ… ನಮ್ಮ ಮಕ್ಕಳು ಮಾಡಿದ ತಪ್ಪಾದ್ರೂ ಏನು? ಹತ್ಯೆಗೀಡಾದ ವಿದ್ಯಾರ್ಥಿಗಳ ಪೋಷಕರ ಪ್ರಶ್ನೆ
-
ಕರ್ನಾಟಕ23 hours ago
Bengaluru Bandh : ಪೊಲೀಸರಿಗೆ ಕೊಟ್ಟ ಊಟದಲ್ಲಿ ಸಿಕ್ಕಿತು ಫ್ರೈಡ್ ಇಲಿ!
-
ದೇಶ14 hours ago
GST Evasion: ಜಿಎಸ್ಟಿ ವಂಚಿಸಿದ ಬಿಜೆಪಿ ನಾಯಕಿಯ ಸಕ್ಕರೆ ಕಾರ್ಖಾನೆಯ 19 ಕೋಟಿ ರೂ. ಮೌಲ್ಯದ ಸೊತ್ತು ಜಪ್ತಿ!
-
ಆಟೋಮೊಬೈಲ್20 hours ago
Viral News : ಅಮ್ಮನ ಕಾರಿನಲ್ಲಿಯೇ ಮನೆ ಬಿಟ್ಟು ಹೋದ ಪುಟಾಣಿ ಮಕ್ಕಳು, 300 ಕಿ. ಮೀ ದೂರ ಹೋಗಿ ಸಿಕ್ಕಿಬಿದ್ದರು