Jallikattu: ರಾಜ್ಯ ಗಡಿಯಲ್ಲಿ ಜಲ್ಲಿಕಟ್ಟು ವೇಳೆ ಹೋರಿ ತಿವಿದು ಒಬ್ಬನ ಸಾವು - Vistara News

ಪ್ರಮುಖ ಸುದ್ದಿ

Jallikattu: ರಾಜ್ಯ ಗಡಿಯಲ್ಲಿ ಜಲ್ಲಿಕಟ್ಟು ವೇಳೆ ಹೋರಿ ತಿವಿದು ಒಬ್ಬನ ಸಾವು

ತಮಿಳುನಾಡಿನಲ್ಲಿ ಜಲ್ಲಿಕಟ್ಟು ಆಚರಣೆ ವೇಳೆ ಆಗಾಗ ಆಗುತ್ತಿರುವ ಅವಘಡ ಪರಂಪರೆ ಮುಂದುವರಿದಿದೆ. ತಮಿಳುನಾಡಿನ ಕೆಲವರಪಲ್ಲಿ ಸಮೀಪ ಸಪ್ಲಮ್ಮ ದೇವಿ ಜಾತ್ರೆ ಅಂಗವಾಗಿ ಆಯೋಜಿಸಿದ ಜಲ್ಲಿಕಟ್ಟಿನ ವೇಳೆ ಈ ದುರ್ಘಟನೆ ನಡೆದಿದೆ.

VISTARANEWS.COM


on

jallikattu
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು ಗ್ರಾಮಾಂತರ: ಕರ್ನಾಟಕ- ತಮಿಳುನಾಡು ಗಡಿಯಲ್ಲಿ ನಡೆದ ಅಪಾಯಕಾರಿ ಜಲ್ಲಿಕಟ್ಟು ಆಚರಣೆಯೊಂದರ ವೇಳೆ ಹೋರಿ ತಿವಿದು ಒಬ್ಬ ಸಾವಿಗೀಡಾಗಿ, ಆರು ಮಂದಿ ಗಾಯಗೊಂಡಿದ್ದಾರೆ.

ತಮಿಳುನಾಡಿನಲ್ಲಿ ಜಲ್ಲಿಕಟ್ಟು ಆಚರಣೆ ವೇಳೆ ಆಗಾಗ ಆಗುತ್ತಿರುವ ಅವಘಡ ಪರಂಪರೆ ಮುಂದುವರಿದಿದೆ. ತಮಿಳುನಾಡಿನ ಕೆಲವರಪಲ್ಲಿ ಸಮೀಪ ಸಪ್ಲಮ್ಮ ದೇವಿ ಜಾತ್ರೆ ಅಂಗವಾಗಿ ಆಯೋಜಿಸಿದ ಜಲ್ಲಿಕಟ್ಟಿನ ವೇಳೆ ಈ ದುರ್ಘಟನೆ ನಡೆದಿದೆ.

ಹೊಸೂರು, ಡೆಂಕಣಿಕೋಟೆ, ಥಳಿ, ಬಾಗಲೂರು ಸೇರಿದಂತೆ ಹಲವು ಕಡೆಗಳಿಂದ ಇದಕ್ಕೆ ಸುಮಾರು 500ಕ್ಕೂ ಹೆಚ್ಚು ಹೋರಿಗಳನ್ನು ಆಚರಣೆಗೆ ಕರೆತರಲಾಗಿತ್ತು. ಹತ್ತಾರು ಊರುಗಳಿಂದ ಬಂದ ಸಾವಿರಾರು ಜನರು ಭಾಗಿಯಾಗಿದ್ದರು. ಈ ವೇಳೆ ಗೂಳಿ ದಾಳಿಗೆ ಓರ್ವ ಬಲಿಯಾಗಿ, ಆರು ಮಂದಿಗೆ ಗಂಭೀರ ಗಾಯಗಳಾಗಿವೆ. ಸೂಳಗಿರಿ ಸಮೀಪದ ಆರೋಪಲ್ಲಿ ಗ್ರಾಮದ ಮಂಜು (25) ಮೃತ ಯುವಕ.

ಪೊಂಗಲ್ ಹಬ್ಬದ ಬಳಿಕ ತಮಿಳುನಾಡಿನಲ್ಲಿ ಅಲ್ಲಲ್ಲಿ ಜಲ್ಲಿಕಟ್ಟು ಸ್ಪರ್ಧೆ ಆಚರಣೆ ನಡೆಯುತ್ತಿದ್ದು, ಈ ಅಪಾಯಕಾರಿ ಸ್ಪರ್ಧೆಗೆ ಎಲ್ಲಿಲ್ಲದ ಕ್ರೇಜ್ ಇದ್ದು, ಸಾವಿರಾರು ಜನ ಆಗಮಿಸುತ್ತಾರೆ. ರಾಜ್ಯ ಹಾಗೂ ಹೊರರಾಜ್ಯಗಳಿಂದಲೂ ಜಲ್ಲಿಕಟ್ಟು ವೀಕ್ಷಣೆಗೆ ಆಗಮಿಸುತ್ತಾರೆ. ಕರ್ನಾಟಕ, ಆಂಧ್ರ, ತೆಲಂಗಾಣದಿಂದಲೂ ರಾಸುಗಳು ಆಗಮಿಸುತ್ತವೆ. ಕಾಲಿಗೆ ಗೆಜ್ಜೆ, ಕುತ್ತಿಗೆಗೆ ಗೆಜ್ಜೆ ಸರ, ಕೊಂಬಿಗೆ ಬಣ್ಣ ಬಣ್ಣದ ತಡಿಕೆಯಿಂದ ರಾಸುಗಳ ಸಿಂಗಾರ ಮಾಡಿ ಬಿಡಲಾಗುತ್ತದೆ. ರಾಸುಗಳ ಮುಡಿಗೆ ಕಟ್ಟಿದ ಬಹುಮಾನವನ್ನು ಪಡೆಯಲು ಅವುಗಳನ್ನು ಹಿಡಿಯಲು ಯುವಕರು ಹೋರಾಟ ನಡೆಸುತ್ತಾರೆ. ಈ ವೇಳೆ ರಾಸುಗಳ ದಾಳಿಯಿಂದ ಸಾವು ನೋವು ಸಂಭವಿಸುವುದು ಸಾಮಾನ್ಯವಾಗಿದೆ.

ಅಪಾಯಕಾರಿ ಜಲ್ಲಿಕಟ್ಟು ಕ್ರೀಡೆಯನ್ನು ಕರ್ನಾಟಕ ರಾಜ್ಯದಲ್ಲಿ ನಿಷೇಧಿಸಲಾಗಿದ್ದು, ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸಾಹಸ ಕ್ರೀಡೆಯಾಗಿ ನೆರವೇರುತ್ತಿದೆ.

ಇದನ್ನೂ ಓದಿ: ಜಲ್ಲಿಕಟ್ಟು ನೋಡಲು ಹೋಗಿದ್ದ 14 ವರ್ಷದ ಬಾಲಕನಿಗೆ ತಿವಿದ ಹೋರಿ; ದಾರುಣವಾಗಿ ಮೃತಪಟ್ಟ ಹುಡುಗ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಶಿಕ್ಷಣ

What After SSLC ?: ವಿಜ್ಞಾನ, ವಾಣಿಜ್ಯ, ಕಲೆ; ಎಸ್‌ಎಸ್‌ಎಲ್‌ಸಿ ನಂತರ ಮುಂದೇನು ಓದಬಹುದು?

What After SSLC ?: ವೃತ್ತಿಯನ್ನು ಆಯ್ಕೆ ಮಾಡುವುದು ಜೀವನದ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರವು ಕಡಿಮೆ ಅವಧಿಯಲ್ಲಿ ಯಶಸ್ಸಿನ ದೊಡ್ಡ ಎತ್ತರವನ್ನು ತಲುಪಲು ಸಹಾಯ ಮಾಡುತ್ತದೆ. ವಿದ್ಯಾರ್ಥಿಗಳು ತಮ್ಮ ಕೌಶಲ್ಯ, ಆಸಕ್ತಿಗಳು ಮತ್ತು ಸಾಮರ್ಥ್ಯಗಳಿಗೆ ಅನುಗುಣವಾಗಿ ತಮ್ಮ ನೆಚ್ಚಿನ ಕ್ಷೇತ್ರವನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ಅದಕ್ಕಾಗಿ ಎಸ್‌ಎಸ್‌ಎಲ್‌ಸಿ ಮುಗಿಸಿರುವ ವಿದ್ಯಾರ್ಥಿಗಳೇ ನಿಮಗೆ ಸೂಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

What After SSLC ?
Koo

ಬೆಂಗಳೂರು: ಎಸ್‌ಎಸ್‌ಎಲ್‌ಸಿ (Best Courses After SSLC) ಬಳಿಕ ಮುಂದೇನು ಎಂಬ ಚಿಂತೆಯಲ್ಲಿದ್ದೀರಾ? ವಿಜ್ಞಾನ (Science), ವಾಣಿಜ್ಯ (Commerce) ಅಥವಾ ಕಲೆ (Arts) ಈ ಮೂರು ವಿಷಯಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಗೊಂದಲವಿದೆಯೇ ? ಯಾವ ವಿಷಯವನ್ನು ಆಯ್ಕೆ ಮಾಡಿದರೆ ಮುಂದೆ ಯಾವ ಉದ್ಯೋಗಕ್ಕೆ (What After SSLC ?) ಸೇರಿಕೊಳ್ಳಬಹುದು ಎನ್ನುವ ಪ್ರಶ್ನೆ ಕಾಡುತ್ತಿದೆಯೇ ? ಹಾಗಿದ್ದರೆ ಇಲ್ಲಿದೆ ನಿಮಗೆ ಸೂಕ್ತ ಮಾಹಿತಿ.

10ನೇ ತರಗತಿಯ ಫಲಿತಾಂಶಗಳು ಹೊರಬಂದ ಅನಂತರ ಹೆಚ್ಚಿನ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಾಮಾನ್ಯ ಗೊಂದಲಗಳು ಇದಾಗಿದೆ. ಅನೇಕ ವಿದ್ಯಾರ್ಥಿಗಳು ತಮ್ಮ ಸ್ನೇಹಿತರು ಅಥವಾ ಪೋಷಕರ ಒತ್ತಡದಿಂದಾಗಿ ತಮ್ಮ ಮಾರ್ಗವನ್ನು ಆಯ್ಕೆ ಮಾಡುವಾಗ ತಪ್ಪುಗಳನ್ನು ಮಾಡುತ್ತಾರೆ. ವೃತ್ತಿಯನ್ನು ಆಯ್ಕೆ ಮಾಡುವುದು ಜೀವನದ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರವು ಕಡಿಮೆ ಅವಧಿಯಲ್ಲಿ ಯಶಸ್ಸಿನ ದೊಡ್ಡ ಎತ್ತರವನ್ನು ತಲುಪಲು ಸಹಾಯ ಮಾಡುತ್ತದೆ. ವಿದ್ಯಾರ್ಥಿಗಳು ತಮ್ಮ ಕೌಶಲ್ಯ, ಆಸಕ್ತಿಗಳು ಮತ್ತು ಸಾಮರ್ಥ್ಯಗಳಿಗೆ ಅನುಗುಣವಾಗಿ ತಮ್ಮ ನೆಚ್ಚಿನ ಕ್ಷೇತ್ರವನ್ನು ಆಯ್ಕೆ ಮಾಡುವುದು ಬಹಳ ಮುಖ್ಯ.

ವಿಜ್ಞಾನ, ವಾಣಿಜ್ಯ ಅಥವಾ ಕಲೆ ಈ ಮೂರರಲ್ಲಿ ಯಾವುದು ಎನ್ನುವುದು ಹೆಚ್ಚಿನ ವಿದ್ಯಾರ್ಥಿಗಳು ಎದುರಿಸುವ ಸಾಮಾನ್ಯ ಗೊಂದಲವಾಗಿದೆ. ಕೆಲವು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಏನನ್ನು ಬಯಸುತ್ತಾರೆ ಎಂಬುದರ ಬಗ್ಗೆ ಬಹಳ ಸ್ಪಷ್ಟತೆಯನ್ನು ಹೊಂದಿರುತ್ತಾರೆ. ಆದರೆ ಮತ್ತೊಂದೆಡೆ 10ನೇ ತರಗತಿಯ ಅನಂತರ ತಮ್ಮ ವೃತ್ತಿಯನ್ನು ಆಯ್ಕೆ ಮಾಡುವಾಗ ಗೊಂದಲಕ್ಕೊಳಗಾಗುವ ಮತ್ತು ಮುಂದಿನ ಭವಿಷ್ಯದ ಬಗ್ಗೆ ಸುಳಿವೇ ಇಲ್ಲದ ಅನೇಕ ವಿದ್ಯಾರ್ಥಿಗಳಿದ್ದಾರೆ. ಸರಿಯಾದ ಮಾರ್ಗವನ್ನು ಆರಿಸುವುದು ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರಕ್ಕೂ ಸಾಕಷ್ಟು ಅವಕಾಶಗಳಿವೆ. ಆದರೆ ಒಬ್ಬರು ಯಾವಾಗಲೂ ತಮ್ಮ ಆಸಕ್ತಿಗಳಿಗೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಬೇಕು.

10ನೇ ತರಗತಿಯಲ್ಲಿ ಉತ್ತೀರ್ಣರಾದ ಅನಂತರ ಟಾಪ್ 5 ವೃತ್ತಿ ಆಯ್ಕೆಗಳ ಕುರಿತು ಮಾಹಿತಿ

ವಿಜ್ಞಾನ

ವಿಜ್ಞಾನವು ಎಂಜಿನಿಯರಿಂಗ್, ವೈದ್ಯಕೀಯ ಮತ್ತು ಸಂಶೋಧನಾ ಪಾತ್ರಗಳಂತಹ ಅನೇಕ ವೃತ್ತಿ ಆಯ್ಕೆಗಳನ್ನು ನೀಡುತ್ತದೆ. ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಇದು ಅತ್ಯಂತ ನೆಚ್ಚಿನ ವೃತ್ತಿ ಆಯ್ಕೆಯಾಗಿದೆ. ವಿಜ್ಞಾನ ಆಯ್ಕೆ ಮಾಡುವ ಪ್ರಮುಖ ಪ್ರಯೋಜನವೆಂದರೆ 12 ನೇ ತರಗತಿಯ ಅನಂತರ ವಿಜ್ಞಾನದಿಂದ ವಾಣಿಜ್ಯಕ್ಕೆ ಅಥವಾ ವಿಜ್ಞಾನಕ್ಕೆ ಕಲೆಗೆ ಬದಲಾಯಿಸಬಹುದು. 12 ನೇ ತರಗತಿಯ ಅನಂತರ ವಿಜ್ಞಾನ ವಿಷಯಕ್ಕೆ ಸಂಬಂಧಿಸಿ ಹಲವಾರು ವೃತ್ತಿ ಆಯ್ಕೆಗಳು ಲಭ್ಯವಿದೆ. ವಿಜ್ಞಾನ ವಿಭಾಗದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ ಮುಖ್ಯ ವಿಷಯಗಳಾಗಿವೆ. ಆದರೆ ಗಣಿತವನ್ನು ಇಷ್ಟಪಡದ ಅಥವಾ ಅದರಲ್ಲಿ ಆಸಕ್ತಿಯಿಲ್ಲದ ಅನೇಕ ವಿದ್ಯಾರ್ಥಿಗಳಿದ್ದಾರೆ. ಆದರೆ ನೀವು ವೈದ್ಯಕೀಯ ವೃತ್ತಿಯನ್ನು ಮುಂದುವರಿಸಲು ಬಯಸಿದರೆ ನೀವು ಗಣಿತವನ್ನು ಬಿಟ್ಟು ಇತರ ವಿಷಯಗಳನ್ನು ಆರಿಸಿಕೊಳ್ಳಬಹುದು.

ವೃತ್ತಿ ಆಯ್ಕೆಗಳು

ವಿಜ್ಞಾನ ವಿದ್ಯಾರ್ಥಿಗಳಿಗೆ ಐದು ಪ್ರಮುಖ ವೃತ್ತಿ ಆಯ್ಕೆಗಳಿವೆ. ಬಿಟೆಕ್/ಬಿಇ, ಬ್ಯಾಚುಲರ್ ಆಫ್ ಮೆಡಿಸಿನ್ ಮತ್ತು ಬ್ಯಾಚುಲರ್ ಆಫ್ ಸರ್ಜರಿ (MBBS), ಬ್ಯಾಚುಲರ್ ಆಫ್ ಫಾರ್ಮಸಿ, ಬ್ಯಾಚುಲರ್ ಆಫ್ ಮೆಡಿಕಲ್ ಲ್ಯಾಬ್ ಟೆಕ್ನಾಲಜಿ, ಬಿಎಸ್ ಸಿ ಹೋಮ್ ಸೈನ್ಸ್ / ಫೊರೆನ್ಸಿಕ್ ಸೈನ್ಸ್.

ವಾಣಿಜ್ಯ

ವಿಜ್ಞಾನದ ಅನಂತರ ವಾಣಿಜ್ಯ ವಿಷಯವು ಎರಡನೇ ಅತ್ಯಂತ ಜನಪ್ರಿಯ ವೃತ್ತಿ ಆಯ್ಕೆಯಾಗಿದೆ. ವ್ಯಾಪಾರಕ್ಕೆ ವಾಣಿಜ್ಯವು ಉತ್ತಮವಾಗಿದೆ. ಸಂಖ್ಯೆ, ಹಣಕಾಸು ಮತ್ತು ಅರ್ಥಶಾಸ್ತ್ರ ಇಷ್ಟದ ವಿಷಯವಾಗಿದ್ದರೆ ವಾಣಿಜ್ಯ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು. ಚಾರ್ಟರ್ಡ್ ಅಕೌಂಟೆಂಟ್, ಎಂಬಿಎ, ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಹೂಡಿಕೆಯಂತಹ ವ್ಯಾಪಕವಾದ ಆಯ್ಕೆಗಳನ್ನು ಇದು ನೀಡುತ್ತದೆ. ಅಕೌಂಟೆನ್ಸಿ, ಹಣಕಾಸು ಮತ್ತು ಅರ್ಥಶಾಸ್ತ್ರದೊಂದಿಗೆ ಪರಿಚಿತರಾಗಿರುವ ವಾಣಿಜ್ಯ ವಿದ್ಯಾರ್ಥಿಗಳಿಗೆ ವೃತ್ತಿ ಆಯ್ಕೆಗಳು ಇಂತಿವೆ. ಚಾರ್ಟರ್ಡ್ ಅಕೌಂಟೆಂಟ್, ವ್ಯಾಪಾರ ನಿರ್ವಹಣೆ, ಜಾಹೀರಾತು ಮತ್ತು ಮಾರಾಟ ನಿರ್ವಹಣೆ, ಡಿಜಿಟಲ್ ಮಾರ್ಕೆಟಿಂಗ್, ಮಾನವ ಸಂಪನ್ಮೂಲ ಅಭಿವೃದ್ಧಿ.

ಕಲೆ ಅಥವಾ ಮಾನವಶಾಸ್ತ್ರ

ಕಲೆ ಅಥವಾ ಮಾನವೀಯ ವಿಷಯಗಳ ಬಗ್ಗೆ ಶೈಕ್ಷಣಿಕ ಸಂಶೋಧನೆಯಲ್ಲಿ ಆಸಕ್ತಿ ಹೊಂದಿರುವವರು ಸೃಜನಶೀಲರಾಗಿದ್ದರೆ ಮತ್ತು ಮಾನವೀಯತೆಗೆ ಆಳವಾಗಿ ಧುಮುಕಲು ಬಯಸಿದರೆ ಕಲೆ ಅತ್ಯುತ್ತಮ ಆಯ್ಕೆಯಾಗಿದೆ. ಕಲಾ ವಿದ್ಯಾರ್ಥಿಗಳಿಗೆ ಇತಿಹಾಸ, ರಾಜ್ಯಶಾಸ್ತ್ರ, ಭೂಗೋಳಶಾಸ್ತ್ರ ಮುಖ್ಯ ವಿಷಯಗಳು.
ಆರ್ಟ್ಸ್ ಈಗ ವೃತ್ತಿಜೀವನದ ಪರ್ಯಾಯವನ್ನು ನೀಡುತ್ತದೆ. ಇದು ವಿಜ್ಞಾನ ಮತ್ತು ವಾಣಿಜ್ಯದಿಂದ ನೀಡಲಾಗುವ ಸಮಾನವಾಗಿ ಲಾಭದಾಯಕವಾಗಿದೆ. ಕಲಾ ವಿದ್ಯಾರ್ಥಿಗಳಿಗೆ ವೃತ್ತಿಯಲ್ಲಿ ಉತ್ಪನ್ನ ವಿನ್ಯಾಸ, ಮಾಧ್ಯಮ / ಪತ್ರಿಕೋದ್ಯಮ, ಫ್ಯಾಷನ್ ತಂತ್ರಜ್ಞಾನ, ವೀಡಿಯೊ ರಚನೆ ಮತ್ತು ಸಂಪಾದನೆ, ಮಾನವ ಸಂಪನ್ಮೂಲ ತರಬೇತಿ, ಶಾಲಾ ಬೋಧನೆ ಇತ್ಯಾದಿ ಕ್ಷೇತ್ರಗಳಿಗೆ ಪ್ರವೇಶ ಪಡೆಯಬಹುದು.

ಐಟಿಐ- ಕೈಗಾರಿಕಾ ತರಬೇತಿ ಸಂಸ್ಥೆ

ಎಸ್ ಎಸ್ ಎಲ್ ಸಿ ಪೂರ್ಣಗೊಳಿಸಿದ ಅನಂತರ ಸುಲಭವಾಗಿ ಉದ್ಯೋಗವನ್ನು ಬಯಸುವ ವಿದ್ಯಾರ್ಥಿಗಳಿಗೆ ಕೋರ್ಸ್‌ಗಳನ್ನು ಒದಗಿಸುವ ತರಬೇತಿ ಕೇಂದ್ರಗಳಾಗಿವೆ ಐಟಿಐ. ಯಾವುದೇ ತಾಂತ್ರಿಕ ಕೋರ್ಸ್ ಅನ್ನು ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಲು ಬಯಸುವ ವಿದ್ಯಾರ್ಥಿಗಳಿಗೆ ಐಟಿಐ ಕೋರ್ಸ್‌ಗಳು ಉತ್ತಮ ಅವಕಾಶಗಳನ್ನು ಒದಗಿಸುತ್ತದೆ. ಐಟಿಐಯಲ್ಲಿ ಕೋರ್ಸ್ ಪೂರ್ಣಗೊಳಿಸುವ ವಿದ್ಯಾರ್ಥಿಯು ಕೈಗಾರಿಕಾ ಕೌಶಲ್ಯಗಳಲ್ಲಿ ತರಬೇತಿ ಪಡೆಯಬಹುದು ಮತ್ತು ಅದೇ ಕ್ಷೇತ್ರದಲ್ಲಿ ಕೆಲಸ ಮಾಡುವ ಮೂಲಕ ಜೀವನ ನಿರ್ವಹಣೆ ಮಾಡಬಹುದು. ಐಟಿಐ ಅನಂತರ ವೃತ್ತಿ ಆಯ್ಕೆಗಳು ಇಂತಿವೆ. ಪಿಡಬ್ಲ್ಯೂಡಿಗಳು ಮತ್ತು ಇತರ ಸಾರ್ವಜನಿಕ ವಲಯಗಳಲ್ಲಿ ಉದ್ಯೋಗಾವಕಾಶ, ಖಾಸಗಿ ವಲಯಗಳಲ್ಲಿ ಉದ್ಯೋಗಗಳು, ಸ್ವಯಂ ಉದ್ಯೋಗ, ವಿದೇಶಗಳಲ್ಲಿ ಉದ್ಯೋಗ, ವಿಶೇಷತೆಯಲ್ಲಿ ಹೆಚ್ಚಿನ ಅಧ್ಯಯನಗಳಿಗೆ ಅವಕಾಶವಿದೆ.

ಪಾಲಿಟೆಕ್ನಿಕ್ ಕೋರ್ಸ್‌

10ನೇ ತರಗತಿಯ ಅನಂತರ ವಿದ್ಯಾರ್ಥಿಗಳು ಮೆಕ್ಯಾನಿಕಲ್, ಸಿವಿಲ್, ಕೆಮಿಕಲ್, ಕಂಪ್ಯೂಟರ್, ಆಟೋಮೊಬೈಲ್ ನಂತಹ ಪಾಲಿಟೆಕ್ನಿಕ್ ಕೋರ್ಸ್‌ಗಳಿಗೆ ಹೋಗಬಹುದು. ಈ ಕಾಲೇಜುಗಳು 3 ವರ್ಷ, 2 ವರ್ಷ ಮತ್ತು 1 ವರ್ಷದ ಡಿಪ್ಲೊಮಾ ಕೋರ್ಸ್‌ಗಳನ್ನು ಒದಗಿಸುತ್ತದೆ. ಪಾಲಿಟೆಕ್ನಿಕ್ ಕೋರ್ಸ್ ಅನಂತರ ವೃತ್ತಿಯಲ್ಲಿ ಮುಖ್ಯವಾಗಿ ಖಾಸಗಿ ವಲಯದ ಉದ್ಯೋಗಗಳು, ಸರ್ಕಾರಿ ವಲಯದ ಉದ್ಯೋಗಗಳು, ಉನ್ನತ ಅಧ್ಯಯನಗಳು, ಸ್ವಯಂ ಉದ್ಯೋಗಿ, ಸ್ವಂತ ವ್ಯಾಪಾರವನ್ನು ನಡೆಸಲು ಅವಕಾಶವಿದೆ.

ಇದನ್ನೂ ಓದಿ: SSLC Result 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಶೇ. 73.40 ವಿದ್ಯಾರ್ಥಿಗಳು ಪಾಸ್‌, ಉಡುಪಿ ಫಸ್ಟ್‌, ಯಾದಗಿರಿ ಲಾಸ್ಟ್‌

Continue Reading

ಪ್ರಮುಖ ಸುದ್ದಿ

SSLC Result 2024: ಶೇ.100 ಅಂಕಗಳೊಂದಿಗೆ ಬಾಗಲಕೋಟೆಯ ಅಂಕಿತಾ ಪ್ರಥಮ; ಎಸ್ಸೆಸ್ಸೆಲ್ಸಿ ಟಾಪರ್ಸ್ ಪಟ್ಟಿ ಇಲ್ಲಿದೆ

SSLC Result 2024: ಮೊದಲ ಸ್ಥಾನ ಪಡೆದ ಅಂಕಿತಾ ಬಸಪ್ಪ ಮುಧೋಳ ಮೆಲ್ಲಿಗೇರಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಳೆ. 7 ಮಂದಿ ಎರಡನೇ ರ್ಯಾಂಕ್‌ ಪಡೆದಿದ್ದಾರೆ. ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ವಿವರ ಹೀಗಿದೆ:

VISTARANEWS.COM


on

sslc result 2024 ankita basappa first rank toppers list
Koo

ಬೆಂಗಳೂರು: 2023-24ರ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ (SSLC Result 2024) ಪ್ರಕಟವಾಗಿದ್ದು, ಬಾಗಲಕೋಟೆಯ ಅಂಕಿತಾ ಬಸಪ್ಪ ಕೊನ್ನೂರು (Ankita Basappa) ಶೇ.100 ಅಂಕ ಗಳಿಸಿ (625/625) ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಏಳು ಮಂದಿ 625ರಲ್ಲಿ 624 ಅಂಕ ಪಡೆದು ದ್ವಿತೀಯ ಸ್ಥಾನ ಗಳಿಸಿದ್ದಾರೆ. 14 ಮಂದಿ ತೃತೀಯ ಸ್ಥಾನಿಗಳಾಗಿದ್ದಾರೆ.

ಅಂಕಿತಾ ಬಸಪ್ಪ ಮುಧೋಳ ಮೆಲ್ಲಿಗೇರಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಳೆ. ಅತಿ ಹೆಚ್ಚು ಅಂಕ ಪಡೆದು ದ್ವಿತೀಯ ಹಾಗೂ ತೃತೀಯ ರ್‍ಯಾಂಕ್‌ ವಿದ್ಯಾರ್ಥಿಗಳ (SSLC toppers) ವಿವರ ಹೀಗಿದೆ:

ಪ್ರಥಮ ರ್‍ಯಾಂಕ್‌ (625/625)

1) ಅಂಕಿತಾ ಬಸಪ್ಪ- ಮುಧೋಳ ಮೆಲ್ಲಿಗೇರಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ (625/625)

ದ್ವಿತೀಯ ರ್‍ಯಾಂಕ್ (624/625)

ಮೇಧಾ ಪಿ. ಶೆಟ್ಟಿ (ಹೋಲಿ ಚೈಲ್ಡ್‌ ಹೈಸ್ಕೂಲ್‌, ಅಶೋಕನಗರ, ಬೆಂಗಳೂರು)
ಹರ್ಷಿತಾ ಡಿಎಂ (ವಾಸವಿ ಇಂಗ್ಲಿಷ್‌ ಹೈಸ್ಕೂಲ್‌, ಶಿರಾ)
ಚಿನ್ಮಯ್ (ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹೈಸ್ಕೂಲ್, ಬೆಳ್ತಂಗಡಿ)
ಸಿದ್ದಾಂತ್ (‌ಶ್ರಮಣರತ್ನ ಶ್ರೀ 108 ಆಚಾರ್ಯ ಸುಬಲ ಸಾಗರ ವಿದ್ಯಾಮಂದಿರ, ಶೇಡ್ಬಾಳ, ಅಥಣಿ)
ದರ್ಶನ್ (ಮಾರಿಕಾಂಬ ಪಿಯು ಕಾಲೇಜು, ಶಿರಸಿ)
ಚಿನ್ಮಯ್ (ಸಿದ್ದಿವಿನಾಯಕ ಹೈಸ್ಕೂಲ್‌, ಶಿರಸಿ)
ಶ್ರೀರಾಮ್ (ಶಾರದಾಂಬ ಹೈಸ್ಕೂಲ್‌, ಶಿರಸಿ)

ತೃತೀಯ ರ್‍ಯಾಂಕ್ (623/625)

ಸೌರವ್‌ ಕೌಶಿಕ್‌ (ವಿವಿಎಸ್‌ ಸರ್ದಾರ್‌ ಪಟೇಲ್‌ ಹೈಸ್ಕೂಲ್‌, ರಾಜಾಜಿನಗರ ಬೆಂಗಳೂರು)
ಅಂಕಿತಾ ಆನಂದ್‌ (ವಿವಿಎಸ್‌ ಸರ್ದಾರ್‌ ಪಟೇಲ್‌ ಹೈಸ್ಕೂಲ್‌, ರಾಜಾಜಿನಗರ ಬೆಂಗಳೂರು)
ಧೀರಜ್‌ ಪ್ರೀತಂ ರೆಡ್ಡಿ (ಸೇಂಟ್‌ ಪ್ಲಾರೆಟ್‌ ಹೈಸ್ಕೂಲ್‌, ಜಾಲಹಳ್ಳಿ, ಬೆಂಗಳೂರು)
ಮಾನ್ಯತಾ ಎಸ್.‌ ಮಯ್ಯ (ಎನ್‌ಇಟಿ ಪಬ್ಲಿಕ್‌ ಸ್ಕೂಲ್‌, ಬೆಂಗಳೂರು)
ಮೋನಿಷ್‌ ಸಾಯಿ ಎಸ್‌ಎನ್‌ (ಬಿಜಿಎಸ್‌ ಪಬ್ಲಿಕ್‌ ಸ್ಕೂಲ್‌, ಬಾಗೇಪಲ್ಲಿ)
ದರ್ಶಿತಾ ಎ. (ಶ್ರೀ ಮಹಾವೀರ ಜೈನ್‌ ಹೈಸ್ಕೂಲ್‌, ಕೋಲಾರ)
ಜಾಹ್ನವಿ ಎಸ್.‌ (ಬಿಕೆಎಸ್‌ವಿಬಿ ಹೈಸ್ಕೂಲ್‌, ವಿಜಯನಗರ ಮೈಸೂರು)
ಡಿ.ಎಸ್‌ ಧನ್ವಿ (ಸದ್ವಿದ್ಯಾ ಹೈಸ್ಕೂಲ್‌, ವಿಜಯನಗರ, ಮೈಸೂರು)
ನವನೀತ್‌ ಕೆ.ಸಿ (ಮೊರಾರ್ಜಿ ದೇಸಾಯಿ ವಸತಿ ಶಾಲೆ, ಮಂಡ್ಯ)
ಸಹನಾ ಎನ್.‌ (ಕಾರ್ಕಳ ಜ್ಞಾನಸುಧಾ ಹೈಸ್ಕೂಲ್‌, ಕುಕ್ಕಂದೂರು ಉಡುಪಿ)
ಅನನ್ಯಾ ಗೌಡ (ಸರ್ವೋದಯ ಕಾನ್ವೆಂಟ್‌, ಹಾಸನ)
ನಿಸರ್ಗಾ ಎಚ್‌.ಜಿ (ಯುನೈಟೆಡ್‌ ಹೈಸ್ಕೂಲ್‌, ಹಾಸನ)
ಪವಿತ್ರಾ ಕೊನ್ನೂರು (ಸರ್ಕಾರಿ ಆದರ್ಶ ವಿದ್ಯಾಲಯ, ಮುದ್ದೇಬಿಹಾಳ)
ತೃಪ್ತಿ ರಾಮಚಂದ್ರ ಗೌಡ (ಸಿದ್ದಿವಿನಾಯಕ ಹೈಸ್ಕೂಲ್‌, ಶಿರಸಿ)

ರಾಜ್ಯದ 78 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ದಾಖಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಲಿತಾಂಶ ಕುಸಿತವಾಗಿದೆ. 2022-23ರಲ್ಲಿ 83.89% ಮಂದಿ ಪಾಸ್ ಆಗಿದ್ದು, ಈ ಬಾರಿ 73.40% ಮಂದಿ ಉತ್ತೀರ್ಣರಾಗಿದ್ದಾರೆ. ಶೇಕಡಾ 10.49%ರಷ್ಟು ಫಲಿತಾಂಶ ಕುಸಿತವಾಗಿದೆ.

ಈ ಬಾರಿಯೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ನಗರ ಪ್ರದೇಶದ 3.59 ಲಕ್ಷ ಮಂದಿ ಪಾಸಾಗಿ 72.83% ಪಡೆದಿದ್ದರೆ, ಗ್ರಾಮೀಣ ಪ್ರದೇಶದ 2.71 ಲಕ್ಷ ಮಂದಿ ಉತ್ತೀರ್ಣರಾಗಿ 74.17% ಫಲಿತಾಂಶ ದಾಖಲಿಸಿದ್ದಾರೆ. ಸರ್ಕಾರಿ ಶಾಲೆಗಳ 2.43 ಲಕ್ಷ ಮಂದಿ ಪಾಸಾಗಿ ಶೇಕಡಾ 72.46, ಅನುದಾನಿತ ಶಾಲೆಗಳ 1.50 ಲಕ್ಷ ಮಂದಿ ಪಾಸಾಗಿ ಶೇಕಡಾ 72.22, ಅನುದಾನರಹಿತ ಶಾಲೆಗಳ 2.23 ಮಂದಿ ಉತ್ತೀರ್ಣರಾಗಿ ಶೇಕಡಾ 86.46 ಫಲಿತಾಂಶ ಒದಗಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ರಾಜ್ಯಕ್ಕೆ ಉಡುಪಿ ಮೊದಲ ಸ್ಥಾನ, ದಕ್ಷಿಣ ಕನ್ನಡ ಎರಡನೇ ಸ್ಥಾನ ಹಾಗೂ ಶಿವಮೊಗ್ಗ ಮೂರನೇ ಸ್ಥಾನ ಪಡೆದರೆ, ಯಾದಗಿರಿ ಕೊನೆಯ ಸ್ಥಾನವನ್ನು ಪಡೆದಿದೆ. ಪಾಸಾಗಲಿ, ಫೇಲಾಗಲಿ 3 ಬಾರಿ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಲಾಗಿದೆ. ಪಾಸಾದರು ಸಹ ಅಂಕ ಹೆಚ್ಚಿಸಿಕೊಳ್ಳಲು ಮತ್ತೆ ಪರೀಕ್ಷೆ-2, ಪರೀಕ್ಷೆ-3 ಬರೆಯಬಹುದು.

ಇದನ್ನೂ ಓದಿ: SSLC Result 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಶೇ. 73.40 ವಿದ್ಯಾರ್ಥಿಗಳು ಪಾಸ್‌, ಉಡುಪಿ ಫಸ್ಟ್‌, ಯಾದಗಿರಿ ಲಾಸ್ಟ್‌

Continue Reading

ಬೆಂಗಳೂರು

SSLC Result 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಶೇ. 73.40 ವಿದ್ಯಾರ್ಥಿಗಳು ಪಾಸ್‌, ಉಡುಪಿ ಫಸ್ಟ್‌, ಯಾದಗಿರಿ ಲಾಸ್ಟ್‌

SSLC Result 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದ್ದು, ಕಳೆದ ವರ್ಷಕ್ಕಿಂತ ಶೇ. 30ರಷ್ಟು ಕಡಿಮೆ ಆಗಿದೆ. ಉಡುಪಿ ಮೊದಲ ಸ್ಥಾನ, ದಕ್ಷಿಣ ಕನ್ನಡ ಎರಡನೇ ಸ್ಥಾನ ಹಾಗೂ ಶಿವಮೊಗ್ಗ ಮೂರನೇ ಸ್ಥಾನ ಪಡೆದರೆ, ಯಾದಗಿರಿ ಕೊನೆ ಸ್ಥಾನವನ್ನು ಪಡೆದಿದೆ. ಕಳೆದ ವರ್ಷ ರಾಜ್ಯಕ್ಕೆ ಚಿತ್ರದುರ್ಗ ಜಿಲ್ಲೆ ಪ್ರಥಮ ಸ್ಥಾನಗಳಿಸಿದ್ದರೆ, ಮಂಡ್ಯ ಎರಡನೇ ಹಾಗೂ ಹಾಸನ ಮೂರನೇ ಸ್ಥಾನವನ್ನು ಬಾಚಿಕೊಂಡಿತ್ತು.

VISTARANEWS.COM


on

By

SSLC Exam Result 2024 Announce
ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಿಸಿದ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀ
Koo

ಬೆಂಗಳೂರು: 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ (SSLC Exam Result 2024) ಫಲಿತಾಂಶವನ್ನು ಗುರುವಾರ (ಮೇ 9) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದೆ. ಮಂಡಳಿ ಅಧ್ಯಕ್ಷೆ ಎನ್. ಮಂಜು ಶ್ರೀ, ಪರೀಕ್ಷಾ ವಿಭಾಗದ ನಿರ್ದೇಶಕ ಗೋಪಾಲ ಕೃಷ್ಣ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದರು. ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ವೆಬ್‌ಸೈಟ್‌ನಲ್ಲಿ https://karresults.nic.in ಮೇ 9ರ ಬೆಳಗ್ಗೆ 10.30ರ ನಂತರ ವೀಕ್ಷಿಸಬಹುದಾಗಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿ ಫಲಿತಾಂಶವನ್ನು ತಡವಾಗಿ ಬಿಡುಗಡೆ ಮಾಡಲಾಗಿತ್ತು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ರಾಜ್ಯಕ್ಕೆ ಉಡುಪಿ ಮೊದಲ ಸ್ಥಾನ, ದಕ್ಷಿಣ ಕನ್ನಡ ಎರಡನೇ ಸ್ಥಾನ ಹಾಗೂ ಶಿವಮೊಗ್ಗ ಮೂರನೇ ಸ್ಥಾನ ಪಡೆದರೆ, ಯಾದಗಿರಿ ಕೊನೆಯ ಸ್ಥಾನವನ್ನು ಪಡೆದಿದೆ. ಪಾಸಾಗಲಿ, ಫೇಲಾಗಲಿ 3 ಬಾರಿ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಲಾಗಿದೆ. ಪಾಸಾದರು ಸಹ ಅಂಕ ಹೆಚ್ಚಿಸಿಕೊಳ್ಳಲು ಮತ್ತೆ ಪರೀಕ್ಷೆ-2, ಪರೀಕ್ಷೆ-3 ಬರೆಯಬಹುದು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಲಿತಾಂಶ ಕುಸಿತ ಕಂಡಿದೆ. 2022-23ರಲ್ಲಿ 83.89% ಇದ್ದರೆ, ಈ ಬಾರಿ 73.40% ಮಂದಿ ಪಾಸ್, ಶೇಕಡಾ 10.49% ರಷ್ಟು ಫಲಿತಾಂಶ ಕುಸಿತವಾಗಿದೆ

SSLC Exam Result 2024 Announce

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಮಾ.25ರಿಂದ ಏ.6ರ ವರೆಗೆ ನಡೆದಿತ್ತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟು 2750 ಪರೀಕ್ಷಾ ಕೇಂದ್ರಗಳಲ್ಲಿ 8,59,967 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 6, 31,204 ವಿದ್ಯಾರ್ಥಿಗಳು ಉತೀರ್ಣರಾಗಿದ್ದು, ಶೇ. 73.40 ರಷ್ಟು ಫಲಿತಾಂಶ ಬಂದಿದೆ.

ಎಸ್ಎಸ್ಎಲ್‌ಸಿ ಫಲಿತಾಂಶ ನೋಡುವುದು ಹೇಗೆ?

-ಅಧಿಕೃತ ವೆಬ್‌ಸೈಟ್‌ karresults.nic.in ಗೆ ಭೇಟಿ ನೀಡಿ
-ಮುಖಪುಟದಲ್ಲಿ SSLC Results 2024 ಲಿಂಕ್ ಅನ್ನು ಕ್ಲಿಕ್ ಮಾಡಿ
-ಹೊಸ ಲಾಗಿನ್ ಪುಟವು ತೆರೆಯುತ್ತದೆ
-ನಿಮ್ಮ ಅಪ್ಲಿಕೇಶನ್ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ
-ಆಗ ಫಲಿತಾಂಶ ಕಾಣಿಸಿಕೊಳ್ಳುತ್ತದೆ.
-ಅಲ್ಲಿ ಡೌನ್ಲೋಡ್ ಮಾಡುವ ಅವಕಾಶವಿದೆ
-10.30 ನಂತರ ಅಧಿಕೃತ ಜಾಲತಾಣದಲ್ಲಿ ಫಲಿತಾಂಶ ನೋಡಬಹುದು

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೈಂ

HD Revanna Case Jailed: ಎಚ್‌.ಡಿ ರೇವಣ್ಣ ಪರ ಸುದ್ದಿಗೋಷ್ಠಿ ನಡೆಸಿದ ನಾಲ್ವರ ಬಂಧನ; ಕಾರ್ತಿಕ್‌ ಬಂಧನಕ್ಕೂ ಕ್ಷಣಗಣನೆ

HD Revanna Case Jailed: ಯುವ ಜನತಾದಳ‌ ಮಾಜಿ ಅಧ್ಯಕ್ಷ ಎಚ್.ಕೆ.ಸುಜಯ್, ಕಪ್ಪಡಿ‌ ಗ್ರಾಮದ ಮಧು, ಹೆಬ್ಬಾಳು ಗ್ರಾಮ ಪಂಚಾಯತ್ ಸದಸ್ಯ ಮನು,‌ ವಕೀಲ‌ ತಿಮ್ಮಪ್ಪ ಎಂಬವರನ್ನು ಬಂಧಿಸಲಾಗಿದೆ. ಇವರು ಸಂತ್ರಸ್ತ ಮಹಿಳೆಯ ಕಿಡ್ನಾಪ್‌ಗೆ ಸಹಕರಿಸಿದ್ದರು ಎಂದು ಆರೋಪಿಸಲಾಗಿದೆ.

VISTARANEWS.COM


on

hd revanna jailed prajwal revanna case
Koo

ಮೈಸೂರು: ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಂದ ಸಂತ್ರಸ್ತ ಮಹಿಳೆಯನ್ನು ಕಿಡ್ನಾಪ್‌ (Kidnap case) ಮಾಡಿಸಲಾಗಿದೆ ಎನ್ನಲಾದ ಪ್ರಕರಣದಲ್ಲಿ ಮತ್ತೆ ನಾಲ್ವರನ್ನು ಎಸ್ಐಟಿ (SIT) ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ಈ ಪ್ರಕರಣದಲ್ಲಿ ರೇವಣ್ಣ ಬಂಧಿತರಾಗಿ ವಿಚಾರಣಾಧೀನ ಕೈದಿಯಾಗಿ (HD Revanna Case Jailed) ಜೈಲಿನಲ್ಲಿದ್ದಾರೆ.

ಯುವ ಜನತಾದಳ‌ ಮಾಜಿ ಅಧ್ಯಕ್ಷ ಎಚ್.ಕೆ.ಸುಜಯ್, ಕಪ್ಪಡಿ‌ ಗ್ರಾಮದ ಮಧು, ಹೆಬ್ಬಾಳು ಗ್ರಾಮ ಪಂಚಾಯತ್ ಸದಸ್ಯ ಮನು,‌ ವಕೀಲ‌ ತಿಮ್ಮಪ್ಪ ಎಂಬವರನ್ನು ಬಂಧಿಸಲಾಗಿದೆ. ಇವರು ಸಂತ್ರಸ್ತ ಮಹಿಳೆಯ ಕಿಡ್ನಾಪ್‌ಗೆ ಸಹಕರಿಸಿದ್ದರು ಎಂದು ಆರೋಪಿಸಲಾಗಿದೆ. ಕೆ.ಆರ್.ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ನಾಲ್ವರೂ ನಿನ್ನೆ ಎಚ್‌.ಡಿ ರೇವಣ್ಣ ಪರ ಸುದ್ದಿಗೋಷ್ಠಿ ನಡೆಸಿ ಪೊಲೀಸರು ತಾರತಮ್ಯ ಎಸಗುತ್ತಿರುವ ಕುರಿತು ಆರೋಪಿಸಿದ್ದರು.

ಕಾರ್ತಿಕ್‌ ಬಂಧನಕ್ಕೆ ಬಲೆ ಬೀಸಿದ ಪೊಲೀಸರು

ಹಾಸನ ಸಂಸದ ಪ್ರಜ್ವಲ್ ರೇವಣ್ಣರದ್ದು (Hassan MP Prajwal revanna case) ಎನ್ನಲಾದ ಅಶ್ಲೀಲ ವೀಡಿಯೋ ವೈರಲ್ (viral video) ಆರೋಪ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಬಳಿಕ ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್‌ಗೆ ಬಂಧನ ಭೀತಿ ಎದುರಾಗಿದೆ. ಕಾರ್ತಿಕ್, ಪುಟ್ಟಿ ಅಲಿಯಾಸ್ ಪುಟ್ಟರಾಜ್, ನವೀನ್ ಗೌಡ ಹಾಗು ಚೇತನ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಏಪ್ರಿಲ್ 23ರಂದು ಹಾಸನ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಎಡಿಟ್ ಮಾಡಿ ಸಂಸದ ಪ್ರಜ್ವಲ್ ಅವರ ಅಶ್ಲೀಲ ಫೋಟೋ ವೀಡಿಯೋ ಸೃಷ್ಟಿ ಮಾಡಿ ಪೆನ್ ಡ್ರೈವ್ ಮೂಲಕ ಹಂಚಿಕೊಂಡ ಆರೋಪವಿದೆ. ಕಾರ್ತಿಕ್, ಪುಟ್ಟರಾಜ್, ನವೀನ್ ಗೌಡ, ಶರತ್ ಆಲಿಯಾಸ್ ಕ್ವಾಲಿಟಿ ಬಾರ್ ಶರತ್ ವಿರುದ್ಧ ಜೆಡಿಎಸ್‌ ದೂರು ಕೊಟ್ಟಿತ್ತು.

ನವೀನ್ ಗೌಡ ಮತ್ತು ಇತರರು ಎಂದು ಸೆನ್ ಠಾಣೆ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದರು. ನ್ಯಾಯಾಲಯಕ್ಕೆ ರಿಮೈಂಡರ್ ಅರ್ಜಿ ಮೂಲಕ ಕಾರ್ತಿಕ್, ಪುಟ್ಟರಾಜು ಹಾಗೂ ಚೇತನ್ ಎಂಬ ಹೆಸರು ಉಲ್ಲೇಖಿಸಿ ಮಾಹಿತಿ ರವಾನಿಸಿದ್ದರು. ತಮ್ಮ ವಿರುದ್ಧ ಕೇಸ್ ದಾಖಲಾಗುತ್ತಲೆ ಆರೋಪಿಗಳು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ನಿನ್ನೆ ಹಾಸನದ ಮೂರನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಅರ್ಜಿ ವಜಾ ಆಗಿದೆ.

ಅರ್ಜಿ ವಜಾ ಬೆನ್ನಲ್ಲೇ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಪೆನ್ ಡ್ರೈವ್ ವೈರಲ್ ಆರೋಪ ಪ್ರಕರಣ ಇನ್ನೂ ಎಸ್ಐಟಿಗೆ ಹಸ್ತಾಂತರ ಆಗಿಲ್ಲ. ಈ ಹಿನ್ನೆಲೆಯಲ್ಲಿ ಹಾಸನ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇಂದು ರೇವಣ್ಣ ಮತ್ತೊಂದು ಜಾಮೀನು ಅರ್ಜಿ ವಿಚಾರಣೆ

ಮಹಿಳೆ ಅಪಹರಣ (kidnap) ಕೇಸ್‌ನಲ್ಲಿ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಾಜಿ ಸಚಿವ ಹೆಚ್. ಡಿ ರೇವಣ್ಣ ಅವರ ಇನ್ನೊಂದು ಜಾಮೀನು ಅರ್ಜಿ ಇಂದು ಜನಪ್ರತಿನಿಧಿ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಗಾಗಲಿದೆ. ಮಗ, ಹಾಸನ ಸಂಸದ (Hassan MP) ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ (Prajwal Revanna Case) ಪ್ರಕರಣದಲ್ಲಿಯೂ ಆರೋಪಿಯಾಗಿರುವ ರೇವಣ್ಣ ಅವರಿಗೆ ನಿನ್ನೆಯ ವಿಚಾರಣೆಯಲ್ಲಿ ಬೇಲ್‌ ಸಿಕ್ಕಿಲ್ಲ.

ಬೆಳಗ್ಗೆ ಹನ್ನೊಂದು ಗಂಟೆ ನಂತರ ಜನಪ್ರತಿನಿಧಿ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಹೆಚ್.ಡಿ ರೇವಣ್ಣ ಪರ ಹಿರಿಯ ವಕೀಲ ಸಿ.ವಿ ನಾಗೇಶ್ ವಾದ ಮಂಡಿಸಲಿದ್ದಾರೆ. 65 ವರ್ಷದವರಾಗಿರುವ ಹೆಚ್.ಡಿ ರೇವಣ್ಣ ಈಗಾಗಲೇ ಪ್ರಕರಣ, ಮಗನ ಮೇಲಿನ ಆರೋಪದಿಂದ ಮಾನಸಿಕವಾಗಿ ನೊಂದಿದ್ದಾರೆ. ನಾಲ್ಕು ದಿನಗಳ ಕಾಲ ಕಸ್ಟಡಿಯಲ್ಲಿದ್ದು ವಿಚಾರಣೆ ಎದುರಿಸಿದ್ದಾರೆ. ಕಸ್ಟಡಿ ವೇಳೆ ಅನಾರೋಗ್ಯದ ಸಮಸ್ಯೆ ಎದುರಿಸಿದ್ದಾರೆ ಎಂಬ ಮಾಹಿತಿಯಿದೆ. ಹೊಟ್ಟೆ ಉರಿ ಸಮಸ್ಯೆ ಎಂದು ನ್ಯಾಯಾಧೀಶರ ಮುಂದೆ ಅಳಲು ತೋಡಿಕೊಂಡಿದ್ದರು. ಇಂದು ಇದೇ ವಿಚಾರವನ್ನು ಮತ್ತೆ ಜನಪ್ರತಿನಿಧಿ ನ್ಯಾಯಾಲಯದಲ್ಲಿ ವಕೀಲರು ಉಲ್ಲೇಖ ಮಾಡಲಿದ್ದಾರೆ. ಹಲವಾರು ವರ್ಷ ರಾಜ್ಯ ಸಚಿವರಾಗಿದ್ದು ಸೇವೆ ಸಲ್ಲಿಸಿರುವ ರೇವಣ್ಣ, ಪ್ರಕರಣದ ಗುರುತ್ವ ಅರಿತು ತನಿಕೆಗೆ ಸಹಕಾರ ಒದಗಿಸುತ್ತಿದ್ದಾರೆ. ಈ ಎಲ್ಲ ವಿಚಾರಗಳಿಂದ ಹೆಚ್.ಡಿ ರೇವಣ್ಣಗೆ ಬೇಲ್ ಸಿಗಬೇಕು ಎಂದು ವಾದಿಸುವ ಸಾಧ್ಯತೆ ಇದೆ.

ಎಸ್ಐಟಿ ಮತ್ತೆ ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲಿದೆ. ಈಗಾಗಲೇ ರೇವಣ್ಣ ತನಿಖೆ ಸರಿಯಾಗಿ ಸಹಕರಿಸಿಲ್ಲ ಎಂದು ಎಸ್‌ಐಟಿ ಹೇಳಿದೆ. ಸಮರ್ಪಕವಾಗಿ ವಿಚಾರಣೆ ಆಗಿಲ್ಲ. ಮತ್ತೊಂದು ಕಡೆ ಹೆಚ್. ಡಿ ರೇವಣ್ಣ ಮಾಜಿ ಸಚಿವ, ಶಾಸಕ ಹಾಗೂ ಪ್ರಭಾವ ಉಳ್ಳ ವ್ಯಕ್ತಿಯಾಗಿದ್ದಾರೆ. ಹೊರ ಬಂದ ಮೇಲೆ ತಮ್ಮ ಪ್ರಭಾವ ಬಳಸಿ ಸಾಕ್ಷ್ಯ ನಾಶ ಮಾಡುವ, ಸಂತ್ರಸ್ತೆಯರನ್ನು ಕಾಂಟ್ಯಾಕ್ಟ್ ಮಾಡುವ ಸಾಧ್ಯತೆ ಇದೆ. ಈ ಅಂಶಗಳ ಹಿನ್ನೆಲೆಯಲ್ಲಿ ಜಾಮೀನು ನೀಡಬಾರದು ಎಂದು ಸರ್ಕಾರದ ಪರ ವಕೀಲರು ಆಕ್ಷೇಪಣೆ ಸಲ್ಲಿಸಲಿದ್ದಾರೆ.

ಇದನ್ನೂ ಓದಿ: HD Revanna Jailed: ಇಂದು ಜನಪ್ರತಿನಿಧಿ ನ್ಯಾಯಾಲಯದಲ್ಲಿ ಹೆಚ್.ಡಿ ರೇವಣ್ಣ ಭವಿಷ್ಯ ನಿರ್ಧಾರ

Continue Reading
Advertisement
What After SSLC ?
ಶಿಕ್ಷಣ5 mins ago

What After SSLC ?: ವಿಜ್ಞಾನ, ವಾಣಿಜ್ಯ, ಕಲೆ; ಎಸ್‌ಎಸ್‌ಎಲ್‌ಸಿ ನಂತರ ಮುಂದೇನು ಓದಬಹುದು?

sslc result 2024 ankita basappa first rank toppers list
ಪ್ರಮುಖ ಸುದ್ದಿ16 mins ago

SSLC Result 2024: ಶೇ.100 ಅಂಕಗಳೊಂದಿಗೆ ಬಾಗಲಕೋಟೆಯ ಅಂಕಿತಾ ಪ್ರಥಮ; ಎಸ್ಸೆಸ್ಸೆಲ್ಸಿ ಟಾಪರ್ಸ್ ಪಟ್ಟಿ ಇಲ್ಲಿದೆ

SSLC Exam Result 2024 Announce
ಬೆಂಗಳೂರು31 mins ago

SSLC Result 2024: ಎಸ್‌ಎಸ್‌ಎಲ್‌ಸಿ ರಿಸಲ್ಟ್‌; ಫಸ್ಟ್‌ ಬೆಂಚ್‌ಗೆ ಬಂದ ಉಡುಪಿ; ಲಾಸ್ಟ್‌ ಬೆಂಚ್‌ನಲ್ಲೇ ಉಳಿದ ಯಾದಗಿರಿ!

IPL 2024
ಕ್ರೀಡೆ38 mins ago

IPL 2024: 17ನೇ ಆವೃತ್ತಿಯ ಐಪಿಎಲ್​ನಿಂದ ಅಧಿಕೃತವಾಗಿ ಹೊರಬಿದ್ದ 5 ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್​

Kerala Governor
ದೇಶ41 mins ago

Kerala Governor: ರಾಮಲಲ್ಲಾನಿಗೆ ಶಿರಬಾಗಿ ನಮಸ್ಕರಿಸಿದ ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌; ವಿಡಿಯೋ ನೋಡಿ

Air India Express
ದೇಶ47 mins ago

Air India Express: 30 ಸಿಬ್ಬಂದಿಯನ್ನು ವಜಾಗೊಳಿಸಿದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌; ಇಂದು 74 ವಿಮಾನಗಳ ಹಾರಾಟ ರದ್ದು

Rashmika Mandanna Signed Salman Khan Sikandar
ಟಾಲಿವುಡ್56 mins ago

Rashmika Mandanna: ಸಲ್ಮಾನ್ ಖಾನ್ ಜತೆ ನ್ಯಾಷನಲ್‌ ಕ್ರಶ್‌ ರಶ್ಮಿಕಾ ರೊಮ್ಯಾನ್ಸ್‌!

Jyothi Rai video Leak miscreants say to subscribe to the youtube channel
ಕಿರುತೆರೆ1 hour ago

Jyothi Rai: ಯುಟ್ಯೂಬ್‌ ಸಬ್‌ಸ್ಕ್ರೈಬ್‌ ಮಾಡಿದ್ರೆ ಜ್ಯೋತಿ ರೈ ವಿಡಿಯೊ ಅಪ್‌ಲೋಡ್‌ ಮಾಡ್ತೀನಿ ಎಂದ ಕಿಡಿಗೇಡಿ!

Viral News
ಕ್ರೀಡೆ1 hour ago

Viral News: ಐಪಿಎಲ್ ಪಂದ್ಯದ ವೇಳೆ ಕೇಜ್ರಿವಾಲ್ ಪರ ಘೋಷಣೆ; 6 ಮಂದಿ ಬಂಧನ

SSLC Exam Result 2024 Announce
ಬೆಂಗಳೂರು1 hour ago

SSLC Result 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಶೇ. 73.40 ವಿದ್ಯಾರ್ಥಿಗಳು ಪಾಸ್‌, ಉಡುಪಿ ಫಸ್ಟ್‌, ಯಾದಗಿರಿ ಲಾಸ್ಟ್‌

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

SSLC Exam Result 2024 Announce
ಬೆಂಗಳೂರು1 hour ago

SSLC Result 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಶೇ. 73.40 ವಿದ್ಯಾರ್ಥಿಗಳು ಪಾಸ್‌, ಉಡುಪಿ ಫಸ್ಟ್‌, ಯಾದಗಿರಿ ಲಾಸ್ಟ್‌

Dina Bhavishya
ಭವಿಷ್ಯ1 day ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ2 days ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ2 days ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ2 days ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ3 days ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ3 days ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ3 days ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ4 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

ಟ್ರೆಂಡಿಂಗ್‌