Madras High Court: ವೇಶ್ಯಾವಾಟಿಕೆ ಅಡ್ಡಕ್ಕೆ ರಕ್ಷಣೆ ಕೋರಿ ವಕೀಲನಿಂದ ಅರ್ಜಿ; ಹೈಕೋರ್ಟ್‌ ಫುಲ್‌ ಗರಂ - Vistara News

ದೇಶ

Madras High Court: ವೇಶ್ಯಾವಾಟಿಕೆ ಅಡ್ಡಕ್ಕೆ ರಕ್ಷಣೆ ಕೋರಿ ವಕೀಲನಿಂದ ಅರ್ಜಿ; ಹೈಕೋರ್ಟ್‌ ಫುಲ್‌ ಗರಂ

Madras high court: ರಾಜಾ ಮುರುಗನ್‌ ಎಂಬಾತ ಸಲ್ಲಿಸಿದ್ದ ಈ ಅರ್ಜಿಯನ್ನು ತಿರಸ್ಕರಿಸಿದ ಕೋರ್ಟ್‌ ಆತನಿಗೆ ₹ 10,000 ದಂಡ ವಿಧಿಸಿದೆ. ಮದ್ರಾಸ್ ಹೈಕೋರ್ಟ್‌ ಮಧುರೈ ಪೀಠದ ನ್ಯಾಯಮೂರ್ತಿ ಬಿ ಪುಗಳೇಂದಿ ಅವರು ವಕೀಲನ ನೋಂದಣಿ ಪತ್ರದ ನೈಜತೆ ಮತ್ತು ಆತನ ಶಿಕ್ಷಣ ಪ್ರಮಾಣಪತ್ರಗಳನ್ನು ಪರಿಶೀಲಿಸುವಂತೆ ತಮಿಳುನಾಡು ಮತ್ತು ಪುದುಚೇರಿ ವಕೀಲರ ಪರಿಷತ್ತಿಗೆ ಇತ್ತೀಚೆಗೆ ಆದೇಶಿಸಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚೆನ್ನೈ: ವೇಶ್ಯಾವಾಟಿಕೆ ಅಡ್ಡಕ್ಕೆ ರಕ್ಷಣೆ ಕೋರಿ ವ್ಯಕ್ತಿಯೊಬ್ಬ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಘಟನೆ ತಮಿಳುನಾಡಿನಲ್ಲಿ ವರದಿಯಾಗಿದೆ. ಕನ್ಯಾಕುಮಾರಿ(Kanyakumari)ಯಲ್ಲಿ ಈ ಘಟನೆ ನಡೆದಿದ್ದು, ತನ್ನನ್ನು ತಾನು ವಕೀಲನೆಂದು ಹೇಳಿಕೊಂಡು ವೇಶ್ಯಾವಾಟಿಕೆ ಅಡ್ಡಕ್ಕೆ ರಕ್ಷಣೆ ಕೊಡಿ ಎಂದು ಮದ್ರಾಸ್‌ ಹೈಕೋರ್ಟ್‌ಗೆ(Madras high court) ಅರ್ಜಿ ಸಲ್ಲಿಸಿದ್ದಾನೆ. ಇನ್ನು ಅರ್ಜಿ ಬಗ್ಗೆ ಕೋರ್ಟ್‌ ತೀರ ಅಸಮಾಧಾನ ವ್ಯಕ್ತಪಡಿಸಿದೆ.

ರಾಜಾ ಮುರುಗನ್‌ ಎಂಬಾತ ಸಲ್ಲಿಸಿದ್ದ ಈ ಅರ್ಜಿಯನ್ನು ತಿರಸ್ಕರಿಸಿದ ಕೋರ್ಟ್‌ ಆತನಿಗೆ ₹ 10,000 ದಂಡ ವಿಧಿಸಿದೆ. ಮದ್ರಾಸ್ ಹೈಕೋರ್ಟ್‌ ಮಧುರೈ ಪೀಠದ ನ್ಯಾಯಮೂರ್ತಿ ಬಿ ಪುಗಳೇಂದಿ ಅವರು ವಕೀಲನ ನೋಂದಣಿ ಪತ್ರದ ನೈಜತೆ ಮತ್ತು ಆತನ ಶಿಕ್ಷಣ ಪ್ರಮಾಣಪತ್ರಗಳನ್ನು ಪರಿಶೀಲಿಸುವಂತೆ ತಮಿಳುನಾಡು ಮತ್ತು ಪುದುಚೇರಿ ವಕೀಲರ ಪರಿಷತ್ತಿಗೆ ಇತ್ತೀಚೆಗೆ ಆದೇಶಿಸಿದೆ.

ಸಮಾಜದಲ್ಲಿ ವಕೀಲರ ಹೆಸರಿಗೆ ಮಸಿ ಬಳಿಯುತ್ತಿರುವುದರ ಬಗ್ಗೆ ವಕೀಲರ ಪರಿಷತ್ತು ಚಿತ್ತ ಹರಿಸಲು ಇದು ಸಕಾಲ ಎಂದ ನ್ಯಾಯಾಲಯ, ವಕೀಲರ ಪರಿಷತ್ತಿನಲ್ಲಿ ಅಧಿಕೃತ ಕಾಲೇಜುಗಳಿಂದ ಪದವಿ ಪಡೆದವರನ್ನು ಮಾತ್ರ ನೋಂದಣಿ ಮಾಡಿಕೊಳ್ಳಬೇಕು. ಸಮವಸ್ತ್ರ ಧರಿಸಿದ್ದ ವಕೀಲರೊಬ್ಬರು ತಾನು ವೇಶ್ಯಾವಾಟಿಕೆ ನಡೆಸುತ್ತಿದ್ದು ಅದಕ್ಕೆ ರಕ್ಷಣೆ ಕೋರುವಂತೆ ಅರ್ಜಿ ಸಲ್ಲಿಸಿರುವುದು ನ್ಯಾಯಾಲಯವನ್ನು ಆಘಾತಕ್ಕೀಡುಮಾಡಿದೆ ಎಂದು ಹೈಕೋರ್ಟ್‌ ಹೇಳಿತು.

ತಾನು ʼಫ್ರೆಂಡ್ಸ್ ಫಾರ್ ಎವರ್ʼ ಎಂಬ ಟ್ರಸ್ಟ್ ಸ್ಥಾಪಿಸಿದ್ದು ಇದರ ಮುಖ್ಯ ಉದ್ದೇಶ ತನ್ನ ಸದಸ್ಯರು ಹಾಗೂ ಗ್ರಾಹಕರಿಗೆ ತೈಲ ಅಭ್ಯಂಜನ ಮತ್ತಿತರ ಲೈಂಗಿಕ ಸೇವೆಯಂತಹ ವಯಸ್ಕರ ಮನರಂಜನೆ ಚಟುವಟಿಕೆಗಳನ್ನು ಉತ್ತೇಜಿಸುವುದಾಗಿದೆ. ಸ್ಥಳೀಯ ಪೊಲೀಸರು ತಮ್ಮ ಟ್ರಸ್ಟ್‌ ಮೇಲೆ ದಾಳಿ ನಡೆಸಿ ಅದರ ಚಟುವಟಿಕೆಗಳಿಗೆ ಅಡ್ಡಿಪಡಿಸುತ್ತಿದ್ದಾರೆ. ಲೈಂಗಿಕ ಚಟುವಟಿಕೆಗಳನ್ನು ತಮಿಳುನಾಡು ಅನೈತಿಕ ಮಾನವ ಕಳ್ಳಸಾಗಣೆ (ತಡೆ) ಕಾಯಿದೆ ಕಾನೂನುಬಾಹಿರ ಎಂದು ಘೋಷಿಸಿಲ್ಲ ಎಂದಿದ್ದ ಅರ್ಜಿದಾರ ಲೈಂಗಿಕ ಕಾರ್ಯಕರ್ತರನ್ನು ಘನತೆಯಿಂದ ನಡೆಸಿಕೊಳ್ಳಬೇಕು ಎಂದು ಬುದ್ಧದೇವ್‌ ಕರ್ಮಾಸ್ಕರ್‌ ಮತ್ತು ಪ. ಬಂಗಾಳ ಸರ್ಕಾರ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪನ್ನು ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದ್ದ.

ವಿಚಾರಣೆ ನಡೆಸಿದ ಕೋರ್ಟ್‌ ಅರ್ಜಿದಾರರು ತಮಿಳುನಾಡು ಕಾಯಿದೆ ಮತ್ತು ಸುಪ್ರೀಂ ಕೋರ್ಟ್‌ ತೀರ್ಪನ್ನು ತಪ್ಪಾಗಿ ಗ್ರಹಿಸಿದ್ದಾರೆ. ಈ ಕಾನೂನುಗಳು ಲೈಂಗಿಕ ಕಾರ್ಯಕರ್ತರನ್ನು ರಕ್ಷಿಸುವ ಮತ್ತು ಪುನರ್ಸವಸತಿ ಕಲ್ಪಿಸುವ ಉದ್ದೇಶ ಹೊಂದಿವೆಯೇ ವಿನಾ ವೇಶ್ಯಾಗೃಹ ನಡೆಸುವುದು ಕಾನೂನು ಬದ್ಧ ಎಂದು ಎಂದಿಗೂ ಹೇಳಿಲ್ಲ ಎಂಬುದಾಗಿ ಹೈಕೋರ್ಟ್‌ ಸ್ಪಷ್ಟಪಡಿಸಿತು.

ಹಿಂದಿನ ಆದೇಶವೊಂದರಲ್ಲಿ, ನ್ಯಾಯಾಲಯವ ಅರ್ಜಿದಾರ ನಿಜವಾಗಿಯೂ ವಕೀಲರೇ ಎಂದು ಖಚಿತಪಡಿಸಿಕೊಳ್ಳಲು ಅವರ ದಾಖಲಾತಿ ಪ್ರಮಾಣಪತ್ರ ಮತ್ತು ಕಾನೂನು ಪದವಿ ಪ್ರಮಾಣಪತ್ರಗಳನ್ನು ಹಾಜರುಪಡಿಸುವಂತೆ ಸೂಚಿಸಿತ್ತು. ಆದರೆ ಅರ್ಜಿದಾರ ದಾಖಲೆಗಳನ್ನು ಸಲ್ಲಿಸಲು ವಿಫಲವಾಗಿದ್ದ. ವ್ಯತಿರಿಕ್ತವಾಗಿ ಮುರುಗನ್ ಅಪ್ರಾಪ್ತ ಬಾಲಕಿಯ ಬಡತನದ ಲಾಭ ಪಡೆದು ಶೋಷಣೆ ಮಾಡಿದ್ದ. ಅರ್ಜಿಯಿಂದ ಕೋಪಗೊಂಡ ನ್ಯಾಯಾಲಯವು ಮುರುಗನ್ ಅವರ ಕಾನೂನು ಶಿಕ್ಷಣ ಮತ್ತು ವಕೀಲರ ಸಂಘದ ಸದಸ್ಯತ್ವವನ್ನು ಪರಿಶೀಲಿಸಲು ಅವರ ದಾಖಲಾತಿ ಪ್ರಮಾಣಪತ್ರ ಮತ್ತು ಕಾನೂನು ಪದವಿಯನ್ನು ಹಾಜರುಪಡಿಸುವಂತೆ ಒತ್ತಾಯ ಮಾಡಿದೆ.

ಇದನ್ನೂ ಓದಿ: NEET UG 2024: ಸುಪ್ರೀಂ ಕೋರ್ಟ್‌ ಆದೇಶದ ಬಳಿಕ ನೀಟ್‌ ಪರಿಷ್ಕೃತ ಫಲಿತಾಂಶ ಪ್ರಕಟ; ಇಲ್ಲಿದೆ ಡೈರೆಕ್ಟ್‌ ಲಿಂಕ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

News Rules: ಗೂಗಲ್‌ ಮ್ಯಾಪ್‌ ಶುಲ್ಕದಿಂದ LPG ದರದವರೆಗೆ; ಆ.1ರಿಂದ ಏನೇನು ಬದಲಾವಣೆ?

News Rules:ಎಲ್ಪಿಜಿ ಗ್ಯಾಸ್ ಸಿಲಿಂಡರ್ ದರಗಳನ್ನು ಪ್ರತಿ ತಿಂಗಳ ಮೊದಲ ದಿನದಂದು ನಿಗದಿಪಡಿಸಲಾಗುತ್ತದೆ. ಸರ್ಕಾರ ಕಳೆದ ತಿಂಗಳು 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಕಡಿಮೆ ಮಾಡಿದೆ. ಈ ಬಾರಿಯೂ ಸಿಲಿಂಡರ್ ಬೆಲೆಯನ್ನು ಸರ್ಕಾರ ಕಡಿಮೆ ಮಾಡುತ್ತದೆ ಎಂದು ಊಹಿಸಲಾಗಿದೆ.

VISTARANEWS.COM


on

News Rules
Koo

ಹೊಸದಿಲ್ಲಿ: ಆ.1ರಿಂದ ಕೆಲವು ಹೊಸ ನಿಯಮಗಳು(News Rules) ಜಾರಿಗೆ ಬರಲಿವೆ. ಹೊಸ ತಿಂಗಳು ಬಂದಾಗಲೆಲ್ಲಾ ಕೆಲವು ಹೊಸ ನಿಯಮಗಳು ಜಾರಿಗೆ ಬರುತ್ತವೆ. ಪ್ರತಿ ತಿಂಗಳು ಯಾವುದಾದರೂ ಹಣಕಾಸು ನಿಯಮಗಳು ಬದಲಾಗುತ್ತಿರುತ್ತವೆ. ಅವು ನೇರವಾಗಿ ಜನಸಾಮಾನ್ಯರ ಮೇಲೆ ಪರಿಣಾಮ ಬೀರುತ್ತವೆ. ಮುಂದಿನ ತಿಂಗಳು, ದೇಶದ ಅತಿದೊಡ್ಡ ಖಾಸಗಿ ವಲಯದ ಸಾಲದಾತ ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್ ನಿಯಮಗಳನ್ನು ಮಾರ್ಪಡಿಸುತ್ತದೆ ಮತ್ತು ಗೂಗಲ್ ಭಾರತದಲ್ಲಿ ಗೂಗಲ್ ನಕ್ಷೆ(Google Map)ಗಳ ಶುಲ್ಕವನ್ನು ಸಹ ಬದಲಾಯಿಸುತ್ತದೆ. ಈ ಹೊಸ ನಿಯಮಗಳು 1 ಆಗಸ್ಟ್ 2024 ರಂದು ಜಾರಿಗೆ ಬರುತ್ತವೆ. ಮುಂದಿನ ತಿಂಗಳು ಬದಲಾಗುವ ವಿಷಯಗಳನ್ನು ಕೆಳಗೆ ನೀಡಲಾಗಿದೆ.

ಎಲ್‌ಪಿಜಿ ದರ

ಎಲ್ಪಿಜಿ ಗ್ಯಾಸ್ ಸಿಲಿಂಡರ್ ದರಗಳನ್ನು ಪ್ರತಿ ತಿಂಗಳ ಮೊದಲ ದಿನದಂದು ನಿಗದಿಪಡಿಸಲಾಗುತ್ತದೆ. ಸರ್ಕಾರ ಕಳೆದ ತಿಂಗಳು 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಕಡಿಮೆ ಮಾಡಿದೆ. ಈ ಬಾರಿಯೂ ಸಿಲಿಂಡರ್ ಬೆಲೆಯನ್ನು ಸರ್ಕಾರ ಕಡಿಮೆ ಮಾಡುತ್ತದೆ ಎಂದು ಊಹಿಸಲಾಗಿದೆ. ಸಿಲಿಂಡರ್‌ ದರದಲ್ಲಿ ಗಣನೀಯ ಬದಲಾವಣೆಯಾಗುವ ಸಾಧ್ಯತೆ ಇದೆ.

ಗೂಗಲ್‌ ಮ್ಯಾಪ್‌ ಶುಲ್ಕ ಏರಿಕೆ

Google Maps ಭಾರತದಲ್ಲಿನ ತನ್ನ ನಿಯಮಗಳಿಗೆ ಗಮನಾರ್ಹ ಬದಲಾವಣೆಗಳನ್ನು ಮಾಡಿದೆ, ಇದು ಆಗಸ್ಟ್ 1, 2024 ರಿಂದ ದೇಶಾದ್ಯಂತ ಅನ್ವಯಿಸುತ್ತದೆ. ಕಂಪನಿಯು ಭಾರತದಲ್ಲಿ ತನ್ನ ಸೇವೆಗಳ ಶುಲ್ಕವನ್ನು 70% ವರೆಗೆ ಕಡಿಮೆ ಮಾಡಿದೆ. ಹೆಚ್ಚುವರಿಯಾಗಿ, ಗೂಗಲ್ ನಕ್ಷೆಗಳು ಈಗ ತನ್ನ ಸೇವೆಗಳಿಗೆ ಡಾಲರ್‌ಗಳಿಗಿಂತ ಭಾರತೀಯ ರೂಪಾಯಿಗಳಲ್ಲಿ ಶುಲ್ಕ ವಿಧಿಸುತ್ತವೆ. ಆದಾಗ್ಯೂ, ಈ ಬದಲಾವಣೆಯು ಸಾಮಾನ್ಯ ಬಳಕೆದಾರರ ಮೇಲೆ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸದ ಕಾರಣ ಅವರ ಮೇಲೆ ಪರಿಣಾಮ ಬೀರುವುದಿಲ್ಲ.

HDFC ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ನಿಯಮ

ಬಾಡಿಗೆ ಪಾವತಿಸಲು CRED, Cheq, MobiKwik, ಫ್ರೀಚಾರ್ಜ್ ಮತ್ತು ಇತರ ರೀತಿಯ ಸೇವೆಗಳನ್ನು ಬಳಸುವ ಗ್ರಾಹಕರಿಗೆ ವಹಿವಾಟಿನ ಮೊತ್ತದ 1% ಶುಲ್ಕ ವಿಧಿಸಲಾಗುತ್ತದೆ, ಇದನ್ನು ಪ್ರತಿ ವಹಿವಾಟಿಗೆ 3,000 ರೂ.ಗಳಿಗೆ ನಿರ್ಬಂಧಿಸಲಾಗುತ್ತದೆ.

ಯುಟಿಲಿಟಿ ಶುಲ್ಕ

ಯುಟಿಲಿಟಿ ಮತ್ತು ಬಾಡಿಗೆ ವಹಿವಾಟುಗಳ ಮೇಲೆ ಆಗಸ್ಟ್ 1, 2024 ರಿಂದ ಜಾರಿಗೆ ಬರುವಂತೆ ಈ ಕೆಳಗಿನ ಶುಲ್ಕಗಳನ್ನು ವಿಧಿಸಲು ನಿರ್ಧರಿಸಲಾಗಿದೆ: ಇದು ₹ 50,000 ಕ್ಕಿಂತ ಹೆಚ್ಚಿನ ಯುಟಿಲಿಟಿ ಪಾವತಿಗಳ ಮೇಲೆ 1% ಅನ್ನು ವಿಧಿಸುತ್ತದೆ, ಗರಿಷ್ಠ ₹ 3,000 ಕ್ಕೆ ಒಳಪಟ್ಟಿರುತ್ತದೆ. ವಿಮೆ ಮತ್ತು ನೇರ ಶಾಲಾ/ಕಾಲೇಜು ಪಾವತಿಗಳು ಈ ವ್ಯಾಪ್ತಿಯಿಂದ ಹೊರಗಿದೆ. ಬ್ಯಾಂಕ್ ವಿಳಂಬ ಪಾವತಿ ಶುಲ್ಕಗಳು ಮತ್ತು ಸುಲಭ-EMI ಶುಲ್ಕಗಳನ್ನು ಕೂಡ ಹೆಚ್ಚಿಸುತ್ತದೆ.

ಇದನ್ನೂ ಓದಿ: Income Tax Return: ಹಳೆಯ ತೆರಿಗೆ ಪದ್ದತಿ ಕೊನೆಯಾಗುತ್ತಾ? CBDT ಅಧ್ಯಕ್ಷ ಹೇಳೋದೇನು?

Continue Reading

ಕರ್ನಾಟಕ

BJP Protest: ಸಂಸತ್ ಬಳಿ ರಾಜ್ಯ ಬಿಜೆಪಿ ಸಂಸದರ ಪ್ರತಿಭಟನೆ; ವಾಲ್ಮೀಕಿ ನಿಗಮ ಅಕ್ರಮ, ಮುಡಾ ಹಗರಣ ಸಿಬಿಐ ತನಿಖೆಗೆ ನೀಡಲು ಆಗ್ರಹ

BJP Protest: ನವ ದೆಹಲಿಯ ನೂತನ ಸಂಸತ್ ಭವನದ ಮಕರ ದ್ವಾರದ ಬಳಿ ನಡೆದ ಪ್ರತಿಭಟನೆಯಲ್ಲಿ ರಾಜ್ಯದ ಬಿಜೆಪಿ ಸಂಸದರಾದ ಬಸವರಾಜ್ ಬೊಮ್ಮಾಯಿ, ಜಗದೀಶ್ ಶೆಟ್ಟರ್, ವಿಶ್ವೇಶ್ವರ ಹೆಗಡೆ ಕಾಗೇರಿ, ಯಧುವೀರ್ ಒಡೆಯರ್, ಡಾ. ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು.

VISTARANEWS.COM


on

BJP Protest
Koo

ನವ ದೆಹಲಿ: ವಾಲ್ಮೀಕಿ ನಿಗಮ ಅಕ್ರಮ ಮತ್ತು ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಹಾಗೂ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಸಂಸತ್ ಆವರಣದಲ್ಲಿ ರಾಜ್ಯದ ಬಿಜೆಪಿ ಸಂಸದರು ಶುಕ್ರವಾರ ಪ್ರತಿಭಟನೆ (BJP Protest) ನಡೆಸಿದರು.

ನೂತನ ಸಂಸತ್ ಭವನದ ಮಕರ ದ್ವಾರದ ಬಳಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಸಂಸದರಾದ ಬಸವರಾಜ್ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ, ಪಿ.ಸಿ. ಮೋಹನ್, ಬಿ.ವೈ ರಾಘವೇಂದ್ರ, ವಿಶ್ವೇಶ್ವರ ಹೆಗಡೆ ಕಾಗೇರಿ, ಯಧುವೀರ್ ಒಡೆಯರ್, ಡಾ. ಮಂಜುನಾಥ್, ಕ್ಯಾ. ಬ್ರಿಜೇಶ್ ಚೌಟಾ, ರಮೇಶ್ ಜಿಗಜಿಣಗಿ, ಪಿಸಿ ಗದ್ದಿಗೌಡರ್, ಜೆಡಿಎಸ್‌ ಸಂಸದ ಮಲ್ಲೇಶ್ ಬಾಬು, ರಾಜ್ಯಸಭಾ ಸದಸ್ಯರಾದ ಜಗ್ಗೇಶ್, ಈರಣ್ಣ ಕಡಾಡಿ, ನಾರಾಯಣ ಸಾ ಭಾಂಡಗೆ, ಲೆಹರ್ ಸಿಂಗ್ ಸೇರಿ ಹಲವರು ಭಾಗಿಯಾಗಿದ್ದರು.

ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿದ ವಾಲ್ಮೀಕಿ ಹಗರಣ

ರಾಜ್ಯಸಭೆಯಲ್ಲೂ ವಾಲ್ಮೀಕಿ ಹಗರಣ ಪ್ರತಿಧ್ವನಿಸಿದೆ. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಈ ಬಗ್ಗೆ ಪ್ರಸ್ತಾಪ ಮಾಡಿದ್ದು, ಕಾಂಗ್ರೆಸ್ ಸದಸ್ಯರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇದೇ ವಿಚಾರವಾಗಿ ಮಾತನಾಡಲು ನಮಗೂ ಅವಕಾಶ ಕೊಡಿ ಎಂದು ಕಾಂಗ್ರೆಸ್ ಸದಸ್ಯರು ಪಟ್ಟುಹಿಡಿದಿದ್ದಾರೆ.

ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣ ದುರುಪಯೋಗ ಆಗಿದೆ ಎಂದು ಕಡಾಡಿ ಕಿಡಿಕಾರಿದರು. ಕರ್ನಾಟಕದ ಅಭಿವೃದ್ಧಿ ಇಟ್ಟ ಹಣವನ್ನು ಹಾಡ ಹಗಲೇ ಲೂಟಿ ಮಾಡಿದ್ದಾರೆ. 187 ಕೋಟಿ ತೆಲಂಗಾಣ ಚುನಾವಣೆಗೆ ಬಳಕೆ ಮಾಡಲಾಗಿದೆ. ಇದನ್ನು ರಾಜಕೀಯ ಮಾಡಲು ಕಾಂಗ್ರೆಸ್ ಹೊರಟಿದೆ. ಹಾಗಾಗಿ ಈ ಸದನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕಡಾಡಿ ಆಗ್ರಹಿಸಿದರು. ಈ ವೇಳೆ ಆಸನದದಿಂದ ಎದ್ದು ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ನಿತ್ಯ ಒಂದು ಅವ್ಯವಹಾರ ಹೊರ ಬರುತ್ತಿದೆ: ಈರಣ್ಣ ಕಡಾಡಿ

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ನಿತ್ಯ ಒಂದು ಅವ್ಯವಹಾರ ಹೊರ ಬರುತ್ತಿದೆ. ಗ್ಯಾರಂಟಿ ಯೋಜನೆಗಳಿಗೆ ಬೇರೆ ಬೇರೆ ಇಲಾಖೆ ಹಣ ಬಳಕೆಯಾಗಿದೆ. ವಾಲ್ಮೀಕಿ ನಿಗಮ ಮಂಡಳಿ ಹಣವನ್ನು ದುರ್ಬಳಕೆ ಮಾಡಿಕೊಂಡಿದೆ. ಶೋಷಿತ ಜನಾಂಗದ ಹಣವನ್ನು ಚುನಾವಣೆ ಬಳಕೆಗೆ ಬಳಸಿದೆ. ಮುಡಾದಲ್ಲಿ ಸಿಎಂ ಕುಟುಂಬಸ್ಥರಿಂದ ಅಕ್ರಮವಾಗಿದೆ. ಶೋಷಿತರ ರಕ್ಷಣೆ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಅವರ ಹಣ ಕೊಳ್ಳೆ‌ ಹೊಡೆಯುತ್ತಿದ್ದಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ | MUDA Scam: ಮುಡಾ ಜಮೀನಿನ ಸಂಪೂರ್ಣ ದಾಖಲೆಗಳನ್ನು ತೆರೆದಿಟ್ಟ ಸಿಎಂ ಸಿದ್ದರಾಮಯ್ಯ; ಇಲ್ಲಿದೆ ವಿವರ

ಹಣ ದುರುಪಯೋಗ ಬಗ್ಗೆ ಚರ್ಚಿಸಲು ಕಾಂಗ್ರೆಸ್ ಸಿದ್ಧವಿಲ್ಲ. ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿ ಚರ್ಚೆ ಆಗದಂತೆ ನೋಡಿಕೊಂಡಿದೆ. ಬಿಜೆಪಿ ನಿರಂತರ ಹೋರಾಟ ಮಾಡುತ್ತಿದೆ. ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಸಿಬಿಐ ತನಿಖೆಗೆ ಆಗ್ರಹಿಸಿದ್ದೇವೆ. ಎಐಸಿಸಿಗೂ ಕರ್ನಾಟಕದಿಂದ ಹಣ ಹೋಗಿದೆ ಎಂದು ಜನರು ಮಾತನಾಡುತ್ತಿದ್ದಾರೆ, ಇದರಿಂದ ಹೊರ ಬರಲು ಸಿಎಂ ರಾಜೀನಾಮೆ ‌ನೀಡಬೇಕು ಎಂದು ಆಗ್ರಹಿಸಿದರು.

Continue Reading

Latest

Ram Mandir Watch: 34 ಲಕ್ಷ ರೂ.ಗೆ ಮಾರಾಟವಾಯಿತು ʼರಾಮ ಜನ್ಮಭೂಮಿʼ ಸ್ಪೆಷಲ್‌ ವಾಚ್!

Ram Mandir Watch: ಸ್ವಿಸ್ ವಾಚ್ ತಯಾರಕ ಕಂಪನಿಯೊಂದು ರಾಮ ಜನ್ಮಭೂಮಿ ಲಿಮಿಟೆಡ್ ಎಡಿಷನ್ ವಾಚ್ ಅನ್ನು ಬಿಡುಗಡೆ ಮಾಡಿದೆ. ಈ ವಾಚ್ ಎರಡು ಆವೃತ್ತಿಗಳಲ್ಲಿ ಬರುತ್ತದೆ. ಇದೀಗ ಈ ವಾಚ್ 34 ಲಕ್ಷ ರೂ.ಗೆ ಮಾರಾಟವಾಗಿದ್ದು, ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಾಚ್‌ನಲ್ಲಿ ಮುಳ್ಳು 9 ಗಂಟೆಗೆ ಬಂದಾಗ ರಾಮ ಮಂದಿರವನ್ನು ತೋರಿಸಿದರೆ, 6 ಗಂಟೆಗೆ “ಜೈ ಶ್ರೀ ರಾಮ್” ಎಂದು ಹೇಳುತ್ತದೆ. ಕೇಸರಿ ಬಣ್ಣದ ಬೆಲ್ಟ್ ಹೊಂದಿರುವ ಈ ವಾಚ್‌ನಲ್ಲಿ ಭಗವಾನ್ ರಾಮ ಮತ್ತು ಭಗವಾನ್ ಹನುಮಂತನ ಚಿತ್ರ ಸಹ ಕಾಣಿಸುತ್ತದೆ. ಈ ಕುರಿತ ವಿವರ ಇಲ್ಲಿದೆ.

VISTARANEWS.COM


on

Ram Mandir Watch
Koo


ನವದೆಹಲಿ: ಅಯೋಧ್ಯೆಯಲ್ಲಿ ಈ ವರ್ಷದ ಆರಂಭದಲ್ಲಿ ಹಿಂದೂಗಳ ಆರಾಧ್ಯ ದೇವರಾದ ಶ್ರೀರಾಮ ಮಂದಿರದ ಉದ್ಘಾಟನೆಯನ್ನು ಬಹಳ ವಿಜೃಂಭಣೆಯಿಂದ ನಡೆಸಲಾಗಿತ್ತು. ಲಕ್ಷಾಂತರ ಹಿಂದೂಗಳು ದೂರದೂರಿನಿಂದ ಶ್ರೀರಾಮನ ದರ್ಶನಕ್ಕೆ ಬಂದಿದ್ದರು. ಶ್ರೀರಾಮ ಮಂದಿರದ ಪ್ರತಿಷ್ಠಾಪನೆಯ ಬಳಿಕ ಇದೀಗ ರಾಮ ಮಂದಿರ ಪ್ರತಿಷ್ಠಾಪನಾ ಸಮಾರಂಭವನ್ನು ನೆನಪಿಸುವಂತಹ ವಾಚ್ (Ram Mandir Watch) ಒಂದನ್ನು ಬಿಡುಗಡೆ ಮಾಡಲಾಗಿದೆ.

ಸ್ವಿಸ್ ವಾಚ್ ತಯಾರಕ ಕಂಪನಿಯೊಂದು ಭಾರತೀಯ ರಿಟೇಲ್‌ ಉದ್ದಿಮೆಯ ಸಹಯೋಗದೊಂದಿಗೆ ರಾಮ ಜನ್ಮಭೂಮಿ ಲಿಮಿಟೆಡ್ ಎಡಿಷನ್ ವಾಚ್ ಅನ್ನು ಬಿಡುಗಡೆ ಮಾಡಿದೆ. ಈ ವಾಚ್ ಎರಡು ಆವೃತ್ತಿಗಳಲ್ಲಿ ಬರುತ್ತದೆ. ಇದೀಗ ಈ ವಾಚ್ 34 ಲಕ್ಷ ರೂ.ಗೆ ಮಾರಾಟವಾಗಿದ್ದು, ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಿಗ್ನೇಚರ್ ಎಪಿಕ್ ಎಸ್ಕ್‌ಸ್ಕೆಲೆಟನ್ ಸೀರಿಸ್ ಅನ್ನು ಆಧರಿಸಿ ಎಥೋಸ್ ಮತ್ತು ಜಾಕೋಬ್ ಅಂಡ್ ಕೋ ಸಹಯೋಗದೊಂದಿಗೆ ಈ ಐಷಾರಾಮಿ ವಾಚ್ ಅನ್ನು ಬಿಡುಗಡೆ ಮಾಡಲಾಗಿದೆ. “ಈ ವಾಚ್ ಅನ್ನು ಭಾರತದ ಆಳವಾದ ಸಾಂಸ್ಕೃತಿಕ ಪರಂಪರೆಗೆ ಗೌರವ ಸಲ್ಲಿಸಲು ವಿನ್ಯಾಸಗೊಳಿಸಲಾಗಿದೆ ಮತ್ತು ಇದು ಇದುವರೆಗೆ ಮಾಡಿದ ಅತ್ಯಂತ ವಿಶಿಷ್ಟವಾದ ಸಹಯೋಗದ ವಾಚ್‍ಗಳಲ್ಲಿ ಒಂದಾಗಿದೆ” ಎಂದು ಕಂಪನಿ ಹೇಳಿಕೊಂಡಿದೆ.

ಈ ವಾಚ್‍ನಲ್ಲಿ ಮುಳ್ಳು 9 ಗಂಟೆಗೆ ಬಂದಾಗ ರಾಮ ಮಂದಿರವನ್ನು ತೋರಿಸಿದರೆ, 6 ಗಂಟೆಗೆ “ಜೈ ಶ್ರೀ ರಾಮ್” ಎಂದು ಹೇಳುತ್ತದೆ! ಕೇಸರಿ ಬಣ್ಣದ ಬೆಲ್ಟ್ ಹೊಂದಿರುವ ಈ ವಾಚ್‍ನಲ್ಲಿ ಭಗವಾನ್ ರಾಮ ಮತ್ತು ಭಗವಾನ್ ಹನುಮಂತನ ಚಿತ್ರ ಸಹ ಕಾಣಿಸುತ್ತದೆ. ಈ ವಾಚ್‍ಗಾಗಿ ಆಯ್ಕೆ ಮಾಡಿದ ಬಣ್ಣವು ಆಧ್ಯಾತ್ಮಿಕತೆ, ಶುದ್ಧತೆ ಮತ್ತು ಭಕ್ತಿಯ ಸಾರವನ್ನು ಪ್ರತಿನಿಧಿಸುತ್ತದೆ. ಇದು ಹಿಂದೂ ಧರ್ಮದ ಮೌಲ್ಯಗಳನ್ನು ಬಿಂಬಿಸುತ್ತದೆ. ಈ ವಾಚ್‍ನ ಪ್ರತಿಯೊಂದು ವಿವರವನ್ನು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಕಂಪನಿಯ ಪ್ರಕಾರ, ಕೇವಲ 49 ಸೀಮಿತ ಆವೃತ್ತಿಯ ವಾಚ್‍ಗಳನ್ನು ತಯಾರಿಸಲಾಗಿದ್ದು, ಅದರಲ್ಲಿ 35 ವಾಚುಗಳು ಈಗಾಗಲೇ ಮಾರಾಟಕ್ಕೆ ಸಿದ್ಧವಾಗಿವೆ ಎನ್ನಲಾಗಿದೆ.

ಹಲವು ವರ್ಷಗಳ ನ್ಯಾಯಾಂಗ ಹೋರಾಟ ಮತ್ತು ಹಲವಾರು ವಿವಾದಗಳು, ಸಂಘರ್ಷದ ನಂತರ ಸುಪ್ರೀಂ ಕೋರ್ಟ್ 2019ರಲ್ಲಿ ದೇವಾಲಯವನ್ನು ನಿರ್ಮಿಸಲು ಹಿಂದೂಗಳಿಗೆ ವಿವಾದಿತ ಭೂಮಿಯನ್ನು ಹಸ್ತಾಂತರಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 2020ರಲ್ಲಿ ರಾಮಮಂದಿರಕ್ಕೆ (ಭೂಮಿ ಪೂಜೆ) ಅಡಿಪಾಯ ಹಾಕಿದ್ದರು. ನಾಲ್ಕು ವರ್ಷಗಳ ನಂತರ ಭವ್ಯ ದೇವಾಲಯವನ್ನು ನಿರ್ಮಿಸಿ ಗರ್ಭಗುಡಿಯಲ್ಲಿ ರಾಮ್ ಲಲ್ಲಾರನ್ನು ಸ್ಥಾಪಿಸಿ ಭರ್ಜರಿಯಾಗಿ ಪ್ರತಿಷ್ಠಾಪನಾ ಸಮಾರಂಭ ನಡೆಸಿದ್ದರು.

ಇದನ್ನೂ ಓದಿ: ‘ಮಿಸ್ಟರ್ ಬೀನ್’ ಖ್ಯಾತಿಯ ರೋವನ್ ಅಟ್ಕಿನ್ಸನ್ ಹಾಸಿಗೆ ಹಿಡಿದಿದ್ದಾರೆಯೇ? ಭಾರೀ ವೈರಲಾಗ್ತಿದೆ ಈ ಫೋಟೊ

ಈ ದೇವಾಲಯವು ಹಿಂದೂಗಳ ನಂಬಿಕೆಯ ಕೇಂದ್ರ ಬಿಂದುವಾಗಿದೆ. ಇಡೀ ಸಂಕೀರ್ಣವನ್ನು ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲಾಗಿದೆ. ಅಯೋಧ್ಯೆಯ ರಾಮ ಮಂದಿರಕ್ಕೆ ನಿತ್ಯ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ.

Continue Reading

ದೇಶ

Sundar Pichai: ಗೂಗಲ್‌ ಸಿಇಒ ಸುಂದರ್‌ ಪಿಚೈಗೆ ಗೌರವ ಡಾಕ್ಟರೇಟ್‌ ಪ್ರದಾನ-ಫೋಟೋ ವೈರಲ್‌

Sundar Pichai:ಇನ್ನು ಈ ವಿಚಾರವನ್ನು ಸುಂದರ್‌ ಪಿಚೈ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದಾರೆ. ಕಳೆದ ವಾರ ನನ್ನ ಅಲ್ಮಾ ಮೇಟರ್ ಐಐಟಿ ಖರಗ್‌ಪುರದಿಂದ ಗೌರವ ಡಾಕ್ಟರೇಟ್ ಸ್ವೀಕರಿಸಲು ನಾನು ಕೃತಜ್ಞನಾಗಿದ್ದೇನೆ. ನನ್ನ ಪೋಷಕರು ಯಾವಾಗಲೂ ನನ್ನ ಡಾಕ್ಟರೇಟ್ ಪಡೆಯಬೇಕೆಂದು ಆಶಿಸುತ್ತಿದ್ದರು, ಈ ಗೌರವ ಸ್ವೀಕರಿಸುತ್ತಿರುವುದಕ್ಕೆ ಬಹಳ ಸಂತಸವಾಗುತ್ತಿದೆ ಎಂದಿದ್ದಾರೆ.

VISTARANEWS.COM


on

Sundar Pichai
Koo

ಹೊಸದಿಲ್ಲಿ: ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ನೀಡಿರುವ ಕೊಡುಗೆಯನ್ನು ಗುರುತಿಸಿ ಗೂಗಲ್‌ ಸಿಇಒ(Google CEO) ಸುಂದರ್‌ ಪಿಚೈ(Sundar Pichai) ಮತ್ತು ಅವರ ಪತ್ನಿಗೆ ಅಂಜಲಿ ಪಿಚೈ ಅವರಿಗೆ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಲಾಗಿದೆ. ಖರಗ್‌ಪುರ ಐಐಟಿ(IIT Kharagpur) ಈ ಗೌರವ ಡಾಕ್ಟರೇಟ್‌ ಪ್ರದಾನ ಮಾಡಿದೆ.

ಇನ್ನು ಈ ವಿಚಾರವನ್ನು ಸುಂದರ್‌ ಪಿಚೈ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದಾರೆ. ಕಳೆದ ವಾರ ನನ್ನ ಅಲ್ಮಾ ಮೇಟರ್ ಐಐಟಿ ಖರಗ್‌ಪುರದಿಂದ ಗೌರವ ಡಾಕ್ಟರೇಟ್ ಸ್ವೀಕರಿಸಲು ನಾನು ಕೃತಜ್ಞನಾಗಿದ್ದೇನೆ. ನನ್ನ ಪೋಷಕರು ಯಾವಾಗಲೂ ನನ್ನ ಡಾಕ್ಟರೇಟ್ ಪಡೆಯಬೇಕೆಂದು ಆಶಿಸುತ್ತಿದ್ದರು, ಈ ಗೌರವ ಸ್ವೀಕರಿಸುತ್ತಿರುವುದಕ್ಕೆ ಬಹಳ ಸಂತಸವಾಗುತ್ತಿದೆ ಎಂದಿದ್ದಾರೆ.

IIT ಯಲ್ಲಿನ ಶಿಕ್ಷಣ ಮತ್ತು ತಂತ್ರಜ್ಞಾನದ ಅಧ್ಯಯನ ನನ್ನನ್ನು Googleನಂತಹ ಅತಿದೊಡ್ಡ ಸಂಸ್ಥೆಯ ಅತಿ ದೊಡ್ಡ ಹುದ್ದೆಯನ್ನು ಅಲಂಕರಿಸುವಂತೆ ಮಾಡಿತು. ಹಾಗೂ ಹೆಚ್ಚಿನ ಜನರು ತಂತ್ರಜ್ಞಾನವನ್ನು ಪ್ರವೇಶಿಸಲು ಸಹಾಯ ಮಾಡಿತು. ತಂತ್ರಜ್ಞಾನದಲ್ಲಿ ಐಐಟಿಯ ಪಾತ್ರವು AI ಕ್ರಾಂತಿಯೊಂದಿಗೆ ಮಾತ್ರ ಪ್ರಾಮುಖ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ನಾನಿ ಅಲ್ಲಿ ಕಳೆದ ಕೆಲವು ಸಮಯಕ್ಕಾಗಿ ನಾನು ಯಾವಾಗಲೂ ಕೃತಜ್ಞರಾಗಿರುತ್ತೇನೆ ಎಂದು ಅವರು ಹೇಳಿದರು.

ಅವರು ಗೌರವ ಪದವಿ ಸ್ವೀಕರಿಸುತ್ತಿರುವ ಎರಡು ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ. ಸುಂದರ್ ಪಿಚೈ ಅವರಿಗೆ ಡಾಕ್ಟರ್ ಆಫ್ ಸೈನ್ಸ್ (ಆನರಿಸ್ ಕಾಸಾ) ಪ್ರಶಸ್ತಿಯನ್ನು ನೀಡಲಾಯಿತು. ಅವರ ಪತ್ನಿ ಅಂಜಲಿ ಪಿಚೈ ಅವರಿಗೆ ಪ್ರತಿಷ್ಠಿತ ಹಳೆಯ ವಿದ್ಯಾರ್ಥಿ ಪ್ರಶಸ್ತಿಯನ್ನು ನೀಡಲಾಯಿತು. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ಸಮಾರಂಭದಲ್ಲಿ ಅವರು ತಮ್ಮ ಪ್ರಶಸ್ತಿಗಳನ್ನು ಸ್ವೀಕರಿಸಿದರು.

ಪಿಚೈ ಪೋಸ್ಟ್‌ಗೆ ನೆಟ್ಟಿಗರ ಪ್ರತಿಕ್ರಿಯೆ

ಇನ್ನು ಸುಂದರ್‌ ಪಿಚೈ ಅವರ ಪೋಸ್ಟ್‌ ಅನೇಕ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅಭಿನಂದನೆ ಸಲ್ಲಿಸಿದ್ದಾರೆ. ಐಐಟಿಯ ವಿದ್ಯಾರ್ಥಿ ಎಂದಿಗೂ ಐಐಟಿಯ ವಿದ್ಯಾರ್ಥಿಯೇ ಆಗಿರುತ್ತಾನೆ. ಸುಂದರ್‌ ಪಿಚೈ ಬರೀ ಹೆಸರಲ್ಲ ಅದೊಂದು ಅದ್ಭುತ ಎಂದು ಒಬ್ಬ ಬರೆದುಕೊಂಡಿದ್ದಾನೆ. ಪಿಚೈ ಒಬ್ಬ ಅದ್ಬುತ ವ್ಯಕ್ತಿ ಅಭಿನಂದನೆಗಳು ಎಂದು ಮತ್ತೊಬ್ಬ ನೆಟ್ಟಿಗ ಬರೆದುಕೊಂಡಿದ್ದಾನೆ.

ಸುಂದರ್ ಪಿಚೈ ಅವರಿಗೆ ಗೌರವ ಪದವಿ ನೀಡಿದ್ದು ಏಕೆ?

ಡಿಜಿಟಲ್ ರೂಪಾಂತರ, ಕೈಗೆಟುಕುವ ತಂತ್ರಜ್ಞಾನ ಮತ್ತು ಹೊಸ ಆವಿಷ್ಕಾರಗಳಿಗೆ ಅವರ ಗಮನಾರ್ಹ ಕೊಡುಗೆಯನ್ನು ಗುರುತಿಸಿ ಸುಂದರ್‌ ಪಿಚೈ ಅವರಿಗೆ ಈ ಗೌರವ ಪ್ರದಾನ ಮಾಡಲಾಯಿತು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಐಐಟಿ-ಖರಗ್‌ಪುರದ 69 ನೇ ಘಟಿಕೋತ್ಸವದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಪ್ರಶಸ್ತಿ ಪ್ರದಾನ ಮಾಡಿದರು. ಅಂದು ಪಿಚೈ ಅವರು ಗೈರು ಹಾಜರಾಗಿದ್ದ ಕಾರಣ ಜುಲೈ 23 ರಂದು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಇದನ್ನೂ ಓದಿ: Kargil Vijay Diwas 2024: ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಕ್ಷಣವೂ ಯೋಚಿಸದ ಈ ವೀರ ಯೋಧರಿಗೊಂದು ಸಲಾಮ್

Continue Reading
Advertisement
Viral Video
Latest1 min ago

Viral Video: ಸಿಂಧೂರ ಹಚ್ಚುವಾಗ ಕುಸಿದುಬಿದ್ದ ವಧು; ಎದ್ದೂಬಿದ್ದು ಓಡಿದ ವರ!

Ragging Case
Latest12 mins ago

Ragging Case: ಜೂನಿಯರ್ ವಿದ್ಯಾರ್ಥಿಗಳನ್ನು ಕ್ರೂರವಾಗಿ ಥಳಿಸಿದ ಸೀನಿಯರ್‌ಗಳು! ತಲ್ಲಣ ಮೂಡಿಸುವ ವಿಡಿಯೊ

Namratha Gowda new look photos got viral
ಸ್ಯಾಂಡಲ್ ವುಡ್21 mins ago

Namratha Gowda: ಕಪ್ಪು ಬಣ್ಣದ ಲಾಂಗ್ ಗೌನ್‌ನಲ್ಲಿ ಹಾಟ್‌ ಆಗಿ ಕಂಡ ನಮ್ರತಾ ಗೌಡ!

SL vs IND 1st T20I
ಕ್ರೀಡೆ21 mins ago

SL vs IND 1st T20I: ನಾಳೆ ಭಾರತ-ಲಂಕಾ ಮೊದಲ ಟಿ20; ಇತ್ತಂಡಗಳ ದಾಖಲೆ, ಪಿಚ್​ ರಿಪೋರ್ಟ್ ವರದಿ ಹೇಗಿದೆ?

News Rules
ದೇಶ28 mins ago

News Rules: ಗೂಗಲ್‌ ಮ್ಯಾಪ್‌ ಶುಲ್ಕದಿಂದ LPG ದರದವರೆಗೆ; ಆ.1ರಿಂದ ಏನೇನು ಬದಲಾವಣೆ?

Anti dengue month and larval survey programme in yadgiri
ಆರೋಗ್ಯ29 mins ago

Yadgiri News: ಡೆಂಗ್ಯೂ ಉಲ್ಬಣಗೊಳ್ಳದಂತೆ ಮುನ್ನೆಚ್ಚರಿಕೆ ವಹಿಸಿ: ಡಿಸಿ ಡಾ. ಸುಶೀಲ

Genius Mutta Kannada movie release in August
ಕರ್ನಾಟಕ30 mins ago

Kannada New Movie: ʼಜೀನಿಯಸ್ ಮುತ್ತʼನಿಗೆ ಸಾಥ್ ನೀಡಿದ ʼಚಿನ್ನಾರಿ ಮುತ್ತʼ; ಆಗಸ್ಟ್‌ನಲ್ಲಿ ಸಿನಿಮಾ ರಿಲೀಸ್‌

Glittering Entrepreneurs vedike inauguration in bengaluru
ಬೆಂಗಳೂರು37 mins ago

Bengaluru News: ಮಹಿಳೆಗೆ ಮಾತ್ರ ಅಸಾಧ್ಯವಾದುದನ್ನು ಸಾಧಿಸುವ ಶಕ್ತಿಯಿದೆ; ದಿವ್ಯಾ ರಂಗೇನಹಳ್ಳಿ

Samsung has launched a new range of ACs in chilled water based cassette units
ಕರ್ನಾಟಕ49 mins ago

Samsung AC: ಹೊಸ ಶ್ರೇಣಿಯ ಎಸಿಗಳನ್ನು ಬಿಡುಗಡೆ ಮಾಡಿದ ಸ್ಯಾಮ್‌ಸಂಗ್; ಇದರ ವಿಶೇಷತೆ ಏನೇನು?

BJP Protest
ಕರ್ನಾಟಕ1 hour ago

BJP Protest: ಸಂಸತ್ ಬಳಿ ರಾಜ್ಯ ಬಿಜೆಪಿ ಸಂಸದರ ಪ್ರತಿಭಟನೆ; ವಾಲ್ಮೀಕಿ ನಿಗಮ ಅಕ್ರಮ, ಮುಡಾ ಹಗರಣ ಸಿಬಿಐ ತನಿಖೆಗೆ ನೀಡಲು ಆಗ್ರಹ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ22 hours ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್1 day ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ1 day ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ1 day ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ2 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ3 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

Udupi News
ಉಡುಪಿ3 days ago

Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

murder case
ರಾಮನಗರ3 days ago

Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ

karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ6 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

ಟ್ರೆಂಡಿಂಗ್‌