Praveen Nettaru Murder: ಪ್ರವೀಣ್‌ ಹತ್ಯೆ ಆರೋಪಿ ತುಫೈಲ್‌ನನ್ನು NIA ಹಿಡಿದದ್ದು ಹೀಗೆ! Vistara News

ಕ್ರೈಂ

Praveen Nettaru Murder: ಪ್ರವೀಣ್‌ ಹತ್ಯೆ ಆರೋಪಿ ತುಫೈಲ್‌ನನ್ನು NIA ಹಿಡಿದದ್ದು ಹೀಗೆ!

ಪ್ರವೀಣ್ ನೆಟ್ಟಾರು ಹತ್ಯೆಯ ನಂತರ ತುಫೈಲ್‌ ಸೇರಿದಂತೆ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದರು. ಮಡಿಕೇರಿ ಮೂಲದ ತುಫೈಲ್ ಅಮೃತಹಳ್ಳಿಯ ದಾಸರಹಳ್ಳಿಯ ಭುವನೇಶ್ವರಿ ನಗರದಲ್ಲಿ ವಾಸವಿದ್ದ. ಸ್ಥಳೀಯರ ಮಾಹಿತಿ ಪ್ರಕಾರ ಕಳೆದೆರಡು ತಿಂಗಳಿನಿಂದ ಈತ ಇಲ್ಲಿ ವಾಸವಾಗಿದ್ದ.

VISTARANEWS.COM


on

thufail praveen murderer
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪಿಎಫ್‌ಐ ಕಾರ್ಯಕರ್ತ ತುಫೈಲ್‌ನನ್ನು ಎನ್‌ಐಎ ಅಧಿಕಾರಿಗಳು ಬೆಂಗಳೂರಿನಲ್ಲಿ ನಿನ್ನೆ ತಡರಾತ್ರಿ ನಡೆದ ರೋಚಕ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ. ಹತ್ಯೆ ಪ್ರಕರಣದ ಮೂವರು ಆರೋಪಿಗಳು ಇನ್ನೂ ತಲಾಶೆಯಾಗಬೇಕಿದೆ.

ಪ್ರವೀಣ್ ನೆಟ್ಟಾರು ಹತ್ಯೆಯ ನಂತರ ತುಫೈಲ್‌ ಸೇರಿದಂತೆ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದರು. ಆರೋಪಿಗಳ ಪತ್ತೆಗೆ ಎನ್‌ಐಎ ಬಹುಮಾನ ಘೋಷಿಸಿತ್ತು. ತುಫೈಲ್ ಪತ್ತೆಗೆ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಮಹಮ್ಹದ್ ಮುಸ್ತಾಫ, ಉಮ್ಮರ್ ಫಾರೂಖ್, ಅಬೂಬಕರ್ ಸಿದ್ದಿಕ್ ತಲೆಮರೆಸಿಕೊಂಡಿರುವ ಇನ್ನು ಮೂವರು ಆರೋಪಿಗಳಾಗಿದ್ದಾರೆ. ಇವರ ಮೇಲೂ ತಲೆಗೂ ಬಹುಮಾನ ಘೋಷಿಸಲಾಗಿದೆ.

ಮಡಿಕೇರಿ ಮೂಲದ ತುಫೈಲ್ ಅಮೃತಹಳ್ಳಿಯ ದಾಸರಹಳ್ಳಿಯ ಭುವನೇಶ್ವರಿ ನಗರದಲ್ಲಿ ವಾಸವಿದ್ದ. ಸ್ಥಳೀಯರ ಮಾಹಿತಿ ಪ್ರಕಾರ ಕಳೆದೆರಡು ತಿಂಗಳಿನಿಂದ ಈತ ಇಲ್ಲಿ ವಾಸವಾಗಿದ್ದ. ಅಪಾರ್ಟ್‌ಮೆಂಟಿನ ಮೊದಲ ಮಹಡಿಯಲ್ಲಿ ವಾಸವಿದ್ದ. ಅಕ್ಕಪಕ್ಕದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದ ತುಫೈಲ್ ಅಪರೂಪಕ್ಕೆ ಮಾತ್ರ ಮನೆಯಿಂದ ಹೊರಗೆ ಬರುತ್ತಿದ್ದ. ಅಕ್ಕಪಕ್ಕದಲ್ಲಿ ಯಾರಿಗೂ ಅನುಮಾನ ಬಾರದಂತೆ ಗೌಪ್ಯ ಕಾಪಾಡಿಕೊಂಡಿದ್ದ. ನಂಜುಂಡಪ್ಪ ಎಂಬುವವರಿಗೆ ಸೇರಿದ ಅಪಾರ್ಟ್‌ಮೆಂಟ್ ಇದಾಗಿದ್ದು, ಮಹಮ್ಮದ್ ಶಫಿ ಎಂಬವನಿಗೆ ಮನೆ ಬಾಡಿಗೆ ನೀಡಲಾಗಿತ್ತು. ಸೋಮವಾರಪೇಟೆ ನಿವಾಸಿಯಾದ ಮಹಮದ್ ಶಫಿ ಇಲ್ಲಿ ಎರಡೂವರೆ ವರ್ಷದಿಂದ ತಂಗಿದ್ದಾನೆ.

ಈತನನ್ನು ಬಂಧಿಸಲು ಬಂದಿದ್ದ ಎನ್‌ಐಎ ಅಧಿಕಾರಿಗಳು ಪ್ಲಂಬರ್‌ಗಳಂತೆ ಆಟೋದಲ್ಲಿ ಬಂದಿದ್ದರು. ಮೊದಲಿಗೆ ಇಬ್ಬರು ಅಧಿಕಾರಿಗಳು ಪೈಪ್ ರಿಂಚ್ ತೆಗೆದುಕೊಂಡು ತುಫೈಲ್ ಕೊಠಡಿ ಪ್ರವೇಶಿದ್ದರು. ಈ ವೇಳೆ ಮನೆಯಲ್ಲಿ ಮಟನ್ ಕಟ್ ಮಾಡುತ್ತಿದ್ದ ತುಫೈಲ್‌ ಅಧಿಕಾರಿಗಳನ್ನು ನೋಡಿ ಅವರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದ. ತಕ್ಷಣ ಎಂಟ್ರಿಯಾದ ಎನ್‌ಐಎ ಪೂರ್ತಿ ತಂಡ, ಆರೋಪಿಯನ್ನು ಹೆಡೆಮುರಿ ಕಟ್ಟಿತ್ತು. ಸುಮಾರು ಹತ್ತಕ್ಕೂ ಹೆಚ್ಚು ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದರು.

ಇದನ್ನೂ ಓದಿ: Praveen Nettaru murder: ತಲೆ ಮರೆಸಿಕೊಂಡಿದ್ದ ಪಿಎಫ್‌ಐ ಮುಖಂಡ, ಪ್ರವೀಣ್‌ ಕೊಲೆ ಆರೋಪಿ ಬೆಂಗಳೂರಿನಲ್ಲಿ ಬಂಧನ

ಇದೀಗ ತುಫೈಲ್‌ನನ್ನು ವಿಚಾರಣೆ ನಡೆಸಲಾಗುತ್ತಿದ್ದು, ಇನ್ನುಳಿದ ಮೂವರಿಗಾಗಿ ಶೋಧ ಮುಂದುವರಿಸಲಾಗಿದೆ. ಮಹಮ್ಮದ್ ಮುಸ್ತಾಫನ ಪತ್ತೆಗಾಗಿ 5 ಲಕ್ಷ, ಉಮ್ಮರ್ ಫಾರೂಖ್‌ಗೆ 2 ಲಕ್ಷ, ಅಬೂಬಕರ್ ಸಿದ್ದಿಕ್‌ಗೆ 2 ಲಕ್ಷ ಘೋಷಣೆ ಮಾಡಲಾಗಿದೆ. ನಾಲ್ವರೂ ನಿಷೇಧಿತ ಸಂಘಟನೆ ಪಿಎಫ್‌ಐನ ಸಕ್ರಿಯ ಕಾರ್ಯಕರ್ತರಾಗಿದ್ದಾರೆ.

ಇದನ್ನೂ ಓದಿ: Praveen Nettaru: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; 20 ಆರೋಪಿಗಳ ವಿರುದ್ಧ ಎನ್​ಐಎ ಸಲ್ಲಿಸಿದ ಚಾರ್ಜ್​ಶೀಟ್​​ನಲ್ಲಿ ಏನಿದೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

Child trade : IVFಗೆ ಗಾರ್ಮೆಂಟ್ಸ್‌ ಯುವತಿಯರ ಅಂಡಾಣು!; ಮಕ್ಕಳ ಮಾರಾಟ ಗ್ಯಾಂಗ್‌ ಕರಾಮತ್ತು

Child trade : ಬೆಂಗಳೂರಿನ ಸಿಸಿಬಿ ಪೊಲೀಸರು ದೊಡ್ಡದೊಂದು ಮಕ್ಕಳ ಮಾರಾಟ ಜಾಲವನ್ನು ಭೇದಿಸಿದ್ದಾರೆ. ಈ ಜಾಲವು ಮಕ್ಕಳನ್ನು ಕೃತಕ ಗರ್ಭಧಾರಣೆ ಮೂಲಕ ಸೃಷ್ಟಿಸಿ ಮಾರಾಟ ಮಾಡುತ್ತಿತ್ತು!

VISTARANEWS.COM


on

Child trade in Bangalore
ಬಂಧಿತರ ಮಕ್ಕಳ ಮಾರಾಟ ಜಾಲದ ಆರೋಪಿಗಳು
Koo

ಬೆಂಗಳೂರು: ಬೆಂಗಳೂರಿನಲ್ಲಿ ಬಯಲಾಗಿರುವ ಮಕ್ಕಳ ಮಾರಾಟ ಜಾಲದ (Child trade) ಭಯಾನಕ ಕೃತ್ಯಗಳು ಒಂದರ ಹಿಂದೊಂದರಂತೆ ಬಯಲಾಗುತ್ತಿವೆ. ಕಳೆದ ಹಲವು ವರ್ಷಗಳಿಂದ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರದಲ್ಲಿ ಮಕ್ಕಳನ್ನು ಮಾರಾಟ ಮಾಡುವ ಜಾಲ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಲಾಗಿದ್ದು, ಇವರ ಪೈಕಿ ಎಂಟು ಮಂದಿಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು (CCB Police) ಬಂಧಿಸಿದ್ದಾರೆ. ಇವರ ಪೈಕಿ ಒಬ್ಬಾಕೆ ಮಗುವನ್ನು ಮಾರಾಟ ಮಾಡಿದವಳಾಗಿದ್ದರೆ, ಉಳಿದವರು ಮಾರಾಟ ಜಾಲದವರು.

ಈ ಗ್ಯಾಂಗ್‌ ಮಕ್ಕಳ ಬೇಡಿಕೆ ಇಡುವ ಗ್ರಾಹಕರು ಮತ್ತು ಮಕ್ಕಳನ್ನು ಹೆತ್ತು ಮಾರಾಟ ಮಾಡುವ ಬಡವರ ನಡುವೆ ಆಪರೇಷನ್‌ ನಡೆಸುತ್ತಿತ್ತು. ಅದರ ನಡುವೆ, ತಾನೇ ಕೃತಕ ಗರ್ಭಧಾರಣೆ (ಐವಿಎಫ್‌) ಮೂಲಕವೂ ಮಕ್ಕಳನ್ನು ಪಡೆಯುವ ತಂತ್ರಗಳನ್ನು ಮಾಡುತ್ತಿತ್ತು. ಇದಕ್ಕೆ ಗಾರ್ಮೆಂಟ್ಸ್‌ ಯುವತಿಯರನ್ನೂ ಬಳಸಿಕೊಳ್ಳಲಾಗುತ್ತಿದೆ ಎಂದೂ ಹೇಳಲಾಗಿದೆ.

ಸಾಮಾನ್ಯವಾಗಿ ಆಗಲೇ ಎರಡಕ್ಕಿಂತ ಹೆಚ್ಚು ಮಕ್ಕಳಿದ್ದು, ಬಳಿಕ ಗರ್ಭಧಾರಣೆಯಾದ ಹಂತದಲ್ಲಿ ಆರ್ಥಿಕ ಸಂಕಷ್ಟದಿಂದಾಗಿ ಗರ್ಭಪಾತ ಮಾಡಿಸಲು ಮುಂದಾಗುವ ಬಡವರನ್ನೇ ಟಾರ್ಗೆಟ್‌ ಮಾಡುತ್ತಿತ್ತು ಈ ತಂಡ. ಅವರ ಮನವೊಲಿಸಿ ಅವರಿಗೆ ಹಣ ಕೊಡುವ ಆಮಿಷ ಒಡ್ಡಿ, ಮಕ್ಕಳನ್ನು ಹೆತ್ತು ತಮಗೆ ನೀಡುವಂತೆ ಮಾಡುತ್ತಿದ್ದರು.

ಈ ನಡುವೆ, ಐವಿಎಫ್‌ ತಂತ್ರಜ್ಞಾನದ ಮೂಲಕ ಬಾಡಿಗೆ ತಾಯಂದಿರ ಮೂಲಕ ಮಕ್ಕಳನ್ನು ಪಡೆಯುವ ತಂತ್ರವೂ ಇವರಲ್ಲಿತ್ತು. ಇದಕ್ಕಾಗಿ ಹದಿಹರೆಯದ ಯುವತಿಯರ ಅಂಡಾಣುಗಳನ್ನು ಬಳಸಲಾಗುತ್ತಿತ್ತು ಎಂಬ ಮಾಹಿತಿ ಇದೆ. ಅದರಲ್ಲೂ ಮುಖ್ಯವಾಗಿ ಬಡತನದ ಕಾರಣಕ್ಕಾಗಿ ಅಂಡಾಣು ಮಾರಾಟಕ್ಕೆ ಮುಂದಾಗುವ ಗಾರ್ಮೆಂಟ್ಸ್‌ ಕಾರ್ಮಿಕ ಯುವತಿಯರನ್ನು ಈ ಟೀಮ್‌ ಟಾರ್ಗೆಟ್‌ ಮಾಡಿತ್ತು ಎನ್ನಲಾಗಿದೆ. ಸಣ್ಣ ವಯಸ್ಸಿನ ಹೆಣ್ಮಕ್ಕಳಲ್ಲಿ ಹೆಚ್ಚು ಫಲವಂತಿಕೆ ಇರುವ ಅಂಡಾಣುಗಳು ಇರುತ್ತವೆ. ಅವರ ಅಂಡಾಣುಗಳನ್ನು ಬಳಸಿಕೊಂಡು ಪುರುಷನೊಬ್ಬನ ವೀರ್ಯಾಣು ಬಳಸಿ ಭ್ರೂಣಗಳನ್ನು ಕೃತಕವಾಗಿ ಸೃಷ್ಟಿಸಿ ಅದನ್ನು ಬೇರೊಬ್ಬ ಹೆಣ್ಣಿನ ಹೊಟ್ಟೆಯಲ್ಲಿ ಬೆಳೆಸಲಾಗುತ್ತಿತ್ತು. ಇದೆಲ್ಲವೂ ಒಬ್ಬ ನುರಿತ ವೈದ್ಯರು ಮತ್ತು ತಂತ್ರಜ್ಞರ ಸಹಕಾರದಿಂದಲೇ ನಡೆಯುತ್ತಿತ್ತು ಎನ್ನಲಾಗಿದೆ. ಈ ರೀತಿ ಅಂಡಾಣು ಮಾರಾಟ ಮಾಡುವ ಯುವತಿಯರಿಗೆ ಒಳ್ಳೆಯ ಹಣ ಕೂಡಾ ನೀಡಲಾಗುತ್ತಿತ್ತು ಎನ್ನುವುದು ಸಿಸಿಬಿ ತನಿಖೆಯಿಂದ ಬಯಲಾಗಿದೆ.

ತಮಿಳುನಾಡಿನಿಂದ ಆಪರೇಟ್‌ ಮಾಡುತ್ತಿದ್ದ ತಂಡ

ಈಗ ಸಿಕ್ಕಿಬಿದ್ದಿರುವ ಎಂಟು ಮಂದಿಯ ತಂಡ, ತಮಿಳುನಾಡಿನಿಂದ ಪ್ರಮುಖವಾಗಿ ಕಾರ್ಯಾಚರಣೆ ಮಾಡುತ್ತಿತ್ತು. ಈ ತಂಡದಲ್ಲಿರುವ ರಾಧಾ ಎಂಬಾಕೆ ಈ ಹಿಂದೆ ತಮಿಳುನಾಡಿನ ಆಸ್ಪತ್ರೆಯಲ್ಲಿ ಬಾಡಿಗೆ ತಾಯ್ತನದ ಏಜೆಂಟ್‌ ಆಗಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ. ಯಾರು ಮಗು ಬೇಕು ಅನ್ನುತ್ತಾರೆ, ಯಾರಿಗೆ ಬಾಡಿಗೆ ತಾಯ್ತನದ ಮೂಲಕ ಮಗು ಬೇಕು ಎನ್ನುವುದರ ಅರಿವು ಆಕೆಗೆ ಚೆನ್ನಾಗಿತ್ತು ಎನ್ನಲಾಗಿದೆ. ಮಹಾಲಕ್ಷ್ಮಿ ಎಂಬಾಕೆ ಕರ್ನಾಟಕದಲ್ಲಿ ಏಜೆಂಟ್‌ ಆಗಿದ್ದು, ತಮಿಳುನಾಡಿನ ಕೊಂಡಿಯಾಗಿದ್ದಾಳೆ.

ಈ ಟೀಮ್‌ ಮಕ್ಕಳ ಮಾರಾಟದಲ್ಲಿ ಬಣ್ಣ, ಲಿಂಗದ ಆಧಾರದಲ್ಲಿ ದರ ನಿರ್ಣಯ ಮಾಡುತ್ತಿದೆ. ತುಂಬ ಬೆಳ್ಳಗಿರುವ ಮಕ್ಕಳಾದರೆ, ಗಂಡು ಮಕ್ಕಳಾದರೆ ಹೆಚ್ಚು ಹಣ ಕೇಳಿದರೆ, ಹೆಣ್ಣು ಮಕ್ಕಳಿಗೆ ಸ್ವಲ್ಪ ಕಡಿಮೆ ದರ ಇರುತ್ತದೆ ಎನ್ನಲಾಗಿದೆ. ಗಂಡು ಮಕ್ಕಳನ್ನು ಐದರಿಂದ ಹತ್ತು ಲಕ್ಷಕ್ಕೆ ಮಾರಾಟ ಮಾಡಿದರೆ ಹೆಣ್ಣು ಮಕ್ಕಳಿಗೆ ನಾಲ್ಕುರಿಂದ ಐದು ಲಕ್ಷ ರೂ. ಇರುತ್ತದೆಯಂತೆ. ಮಗುವನ್ನು ಹೆತ್ತು ಕೊಡುವ ಮಹಿಳೆಯರಿಗೆ ಒಂದುವರೆಯಿಂದ ಎರಡು ಲಕ್ಷ ರೂ ನೀಡುತ್ತಾರೆ ಎನ್ನುವುದು ಸಿಸಿಬಿ ತನಿಖೆಯ ವೇಳೆ ಬಯಲಾಗಿದೆ.

Continue Reading

ಕರ್ನಾಟಕ

Gender Detection: ಭ್ರೂಣ ಹತ್ಯೆ 900 ಅಲ್ಲ, 1500ಕ್ಕೂ ಹೆಚ್ಚು! ಹಲವು ಜಿಲ್ಲೆಗಳಲ್ಲಿ ದಂಧೆ

Gender Detection : ಬೆಂಗಳೂರಿನಲ್ಲಿ ಪತ್ತೆಯಾದ ಭ್ರೂಣ ಹತ್ಯೆ ಪ್ರಕರಣದಲ್ಲಿ ನಡೆದದ್ದು 900 ಭ್ರೂಣಗಳ ಹತ್ಯೆಯಲ್ಲ, 1500ಕ್ಕೂ ಹೆಚ್ಚು ಎಂಬ ಸಂಗತಿ ಬಯಲಾಗಿದೆ.

VISTARANEWS.COM


on

Feticide in Bangalore
ಭ್ರೂಣ ಹತ್ಯೆ ಪ್ರಕರಣದಲ್ಲಿ ಬಂಧಿತರು ಇವರು
Koo

ಬೆಂಗಳೂರು: ರಾಜ್ಯದಲ್ಲಿ ಪತ್ತೆಯಾದ ಭ್ರೂಣ ಹತ್ಯೆ ದಂಧೆಯ (Feticide scam) ಹಿಂದಿನ ಕರಾಳ ಸತ್ಯಗಳು ಒಂದರ ಹಿಂದೊಂದರಂತೆ ಬಯಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಹೊರಬೀಳುತ್ತಿರುವ ಅಂಕಿ ಅಂಶಗಳನ್ನು ಕಂಡು ತಾವೇ ಶಾಕ್‌ ಆಗಿದ್ದಾರೆ. ಆರಂಭದಲ್ಲಿ 900 ಭ್ರೂಣಗಳ ಹತ್ಯೆ ನಡೆದಿರಬಹುದು ಎಂದು ಹೇಳಲಾಗಿತ್ತು. ಆದರೆ, ಈಗ ಅದು 1500ಕ್ಕೂ ಹೆಚ್ಚು ಅಂಶ ಬಯಲಾಗಿದೆ (Gender Detection). ಜತೆಗೆ ಇದೊಂದು ಕೋಟ್ಯಂತರ ರೂ. ದಂಧೆ ಎಂದು ಹೇಳಲಾಗುತ್ತಿದೆ.

ಭ್ರೂಣ ಹತ್ಯೆ ಕೇಸಲ್ಲಿ ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸರು ಇಬ್ಬರು ವೈದ್ಯರು, ಮೂವರು ಲ್ಯಾಬ್ ಟೆಕ್ನಿಷಿಯನ್‌ಗಳು, ಮಧ್ಯವರ್ತಿಗಳು ಸೇರಿ ಒಟ್ಟು 9 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಈ ವೇಳೆ ಈ ಆರೋಪಿಗಳು ಕಳೆದ ಎರಡು ವರ್ಷದಿಂದ ಈ ಕೃತ್ಯವೆಸಗುತ್ತಿರುವುದಾಗಿ ಬಾಯಿ ಬಿಟ್ಟಿದ್ದರು. ಆ ಮಾಹಿತಿ ಅಧಾರದ ಮೇಲೆ ಸುಮಾರು 900 ಭ್ರೂಣ ಹತ್ಯೆ ಮಾಡಿರಬಹುದು ಎನ್ನಲಾಗಿತ್ತು.. ಆದ್ರೆ ತನಿಖೆ ಮುಂದುವರೆಸಿದಂತೆ ಕಳೆದ ಮೂರು ತಿಂಗಳಲ್ಲೇ 242 ಭ್ರೂಣ ಹತ್ಯೆ ಮಾಡಿರೋದು ಪತ್ತೆಯಾಗಿದೆ. ಇದನ್ನು ನಗರ ಪೊಲೀಸ್‌ ಆಯುಕ್ತ ಬಿ. ದಯಾನಂದ್‌ ಅವರು ದೃಢಪಡಿಸಿದ್ದಾರೆ.

ಆ ಲೆಕ್ಕದಲ್ಲಿ ನೋಡಿದ್ರೆ ಎರಡು ವರ್ಷದಲ್ಲಿ ವರ್ಷಕ್ಕೆ ಕನಿಷ್ಠ ಒಂದು ಸಾವಿರ ಅಂದ್ರೂ ಕೂಡ ಎರಡು ಸಾವಿರದಷ್ಟು ಭ್ರೂಣ ಹತ್ಯೆ ಮಾಡಿರೋದು ಗೊತ್ತಾಗಿದೆ.. ಭ್ರೂಣ ಪತ್ತೆಗೆ 20 ಸಾವಿರ ರೂ. ಚಾರ್ಜ್‌ ಮಾಡುತ್ತಿರುವ ದಂಧೆಕೋರರು ಅದು ಹೆಣ್ಣು ಭ್ರೂಣ ಎಂದು ತಿಳಿದ ಮೇಲೆ ಅದರ ಹತ್ಯೆಗೆ ಹೆಚ್ಚುವರಿಯಾಗಿ ಮೂವತ್ತು ಸಾವಿರ ರೂ. ವಸೂಲಿ ಮಾಡುತ್ತಿದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ.

ಈ ನಡುವೆ ದಂಧೆಯಲ್ಲಿ ಭಾಗಿಯಾಗಿದ್ದು ತಲೆ ಮರೆಸಿಕೊಂಡಿರುವ ಮತ್ತಿಬ್ಬರು ಮಧ್ಯವರ್ತಿಗಳ ಪತ್ತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ದಂಧೆಗೆ ಸಹಕಾರ ನೀಡುತ್ತಿರುವ ವೈದ್ಯರು ಹಾಗೂ ಹತ್ಯೆ ಮಾಡಿಸಿದ ಪೋಷಕರನ್ನು ಕೂಡಾ ಪತ್ತೆ ಹಚ್ಚುವ ಕೆಲಸವೂ ಸಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಂಧೆಕೋರರು ಬೆಂಗಳೂರು ಮಾತ್ರವಲ್ಲದೆ ಮೈಸೂರು ಮತ್ತು ಮಂಡ್ಯದಲ್ಲೂ ಭ್ರೂಣ ಹತ್ಯೆ ವ್ಯವಹಾರ ನಡೆಸಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಬಯ್ಯಪ್ಪನಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿರುವ ಕುರಿತ ಎಫ್‌ಐಆರ್‌ನ್ನು ಜಿಲ್ಲಾಡಳಿತಕ್ಕೆ ಕಳುಹಿಸಿಕೊಡಲಾಗಿತ್ತು.

ಇದನ್ನೂ ಓದಿ: Child Trade : ಒಂದು ಮಗು ಹೆತ್ತು ಕೊಟ್ರೆ ತಾಯಿಗೆ 3 ಲಕ್ಷ, ಏಜೆಂಟ್‌ಗೆ 5 ಲಕ್ಷ ರೂ.!

ಬಯ್ಯಪ್ಪನ ಹಳ್ಳಿಯಲ್ಲಿ ದಾಖಲಾದ ಎಫ್‌ಐಆರ್‌ಗಳ ಮಾಹಿತಿಗಳನ್ನು ಪಡೆದುಕೊಂಡಿದ್ದೇವೆ. ಮಂಡ್ಯದಲ್ಲೂ ಮೂರು ಪ್ರಕರಣಗಳು ನಡೆದಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಇಂಥ ಪ್ರಕರಣಗಳು ನಡೆಯುತ್ತಿರುವುದು ವಿಷಾದನೀಯ ಎಂದು ಮಂಡ್ಯ ಜಿಲ್ಲಾಧಿಕಾರಿ ಕುಮಾರ್‌ ತಿಳಿಸಿದರು.

ಸ್ಕ್ಯಾನಿಂಗ್ ಸೆಂಟರ್ ನಲ್ಲಿ ಅನಧಿಕೃತವಾಗಿ ಹೆಣ್ಣು ಭ್ರೂಣ ಪತ್ತೆ ಮಾಡುವ ಪ್ರಕರಣಗಳ ಬಗ್ಗೆ ಆರೋಗ್ಯ ಇಲಾಖೆ, ಸಿಇಓ ಜೊತೆ ಸಭೆ ಮಾಡಿದ್ದೇನೆ. ಭ್ರೂಣ ಹತ್ಯೆ ಬಗ್ಗೆ ಒಂದು ಆಂದೋಲನದ ಮೂಲಕ ಅರಿವು ಮೂಡಿಸಲಾಗುವುದು ಎಂದು ಹೇಳಿದರು. ಮೈಸೂರು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರು ಕೂಡಾ ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಬಂಧಿತ ಆರೋಪಿಗಳು ಯಾರೆಲ್ಲ?

ಭ್ರೂಣ ಹತ್ಯೆ ಪ್ರಕರಣದಲ್ಲಿ ಮೊದಲು ಬಂಧಿತರಾಗಿದ್ದವರು ಶಿವನಂಜೇಗೌಡ, ವೀರೇಶ್, ನವೀನ್ ಮತ್ತು ನಯನ್. ಇವರನ್ನು ವಿಚಾರಣೆಗೆ ಒಳಪಡಿಸಿದಾಗ ವೈದ್ಯರು ಮತ್ತು ಇತರ ವೈದ್ಯಕೀಯ ಸಿಬ್ಬಂದಿಗಳ ಸಂಚು ಬಯಲಾಗಿತ್ತು. ಚನ್ನೈ ಮೂಲದ ಡಾ ತುಳಸಿರಾಮ್, ಮೈಸೂರಿನ ಖಾಸಗಿ ಆಸ್ಪತ್ರೆಯ ರಿಸಪ್ಷನಿಷ್ಟ್ ರೀಜ್ಮಾ, ಡಾ.ಚಂದನ್ ಬಲ್ಲಾಳ್ ಮತ್ತು ಪತ್ನಿ ಮೀನಾ, ಲ್ಯಾಬ್ ಟೆಕ್ನೀಶಿಯನ್ ನಿಸ್ಸಾರ್ ಅವರನ್ನು ಬಂಧಿಸಲಾಯಿತು. ಹೀಗೆ ಒಟ್ಟಾರೆ ಬಂಧಿತರ ಸಂಖ್ಯೆ 9.

Continue Reading

ಕರ್ನಾಟಕ

Robbery Case : `ಗೇ’ ಆ್ಯಪ್‌ನಲ್ಲಿ ಸಿಕ್ಕ ಮಹಾಶೂರ; ಮೀಟ್‌ ಮಾಡಲು ಬಂದವ ಲೂಟ್‌ ಮಾಡಿದ!

Robbery Case : ಗೇ ಡೇಟಿಂಗ್‌ ಆ್ಯಪ್‌ನಿಂದ ಪರಿಚಿತನಾದವನೇ ದರೋಡೆಕೋರನಾದ ಘಟನೆಯೊಂದು ಬೆಂಗಳೂರಲ್ಲಿ ನಡೆದಿದೆ. ಈ ಸಂಬಂಧ ಯುವಕನೊಬ್ಬ ಠಾಣೆ ಮೆಟ್ಟಿಲೇರಿದ್ದಾನೆ.

VISTARANEWS.COM


on

By

gay app robbery case in Bengaluru
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಈಗಂತೂ ಆನ್‌ಲೈನ್‌ನಲ್ಲಿ ನೂರಾರು ಡೇಟಿಂಗ್‌ ಆ್ಯಪ್‌ಗಳು (Dating App) ಸಿಗುತ್ತವೆ. ಇದರ ಹಿಂದೆ ಬಿದ್ದ ಯುವಜನತೆ ಮೋಸ ಹೋಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಸದ್ಯ ಆಡುಗೋಡಿಯಲ್ಲಿ ಗ್ರೈಂಡರ್ (GRINDR) ಎಂಬ ಗೇ ಡೇಟಿಂಗ್‌ ಆ್ಯಪ್‌ (Gay App) ಮೂಲಕ ಪರಿಚಯ ಆದವನೇ ದರೋಡೆಕೋರನಾಗಿ ಎಲ್ಲವನ್ನೂ (Robbery Case) ದೋಚಿ ಹೋಗಿದ್ದಾನೆ.

ನದೀಂ ಎಂಬಾತನಿಗೆ ಗ್ರೈಂಡರ್ ಗೇ ಡೇಟಿಂಗ್‌ ಆ್ಯಪ್‌ನಲ್ಲಿ ಫರ್ಹಾನ್ ಎಂಬಾತ ಪರಿಚಿತನಾಗಿದ್ದ. ಕೆಲ ದಿನಗಳ ಕಾಲ ಮಾತುಕತೆಯಲ್ಲಿದ್ದ ಇವರ ಸ್ನೇಹವು ಮತ್ತೊಂದು ಹಂತಕ್ಕೆ ತಲುಪಿತ್ತು. ಭೇಟಿ ಮಾಡುವ ಉದ್ದೇಶದಿಂದ ಕಳೆದ ನ. 22ರಂದು ನದೀಂ, ಗೇ ಆ್ಯಪ್‌ನಲ್ಲಿ ಆರ್ಡರ್‌ ಮಾಡಿ ಫರ್ಹಾನ್‌ನನ್ನು ಕರೆಸಿಕೊಂಡಿದ್ದ.

ಸಂಜೆ ಸುಮಾರು 4 ಗಂಟೆಗೆ ನದೀಂ ಮನೆಗೆ ಬಂದಿದ್ದ ಫರ್ಹಾನ್‌ ಕೆಲಕಾಲ ಮಾತುಕತೆಯಲ್ಲಿ ತೊಡಗಿದ್ದರು. ಈ ನಡುವೆ ವಾಷ್‌ ರೂಂಗೆ ಎಂದು ಒಳಹೋದ ಫರ್ಹಾನ್‌ ತನ್ನ ಗ್ಯಾಂಗ್‌ಗೆ ಕಾಲ್‌ ಮಾಡಿ ಕರೆಸಿಕೊಂಡಿದ್ದ. 4-5 ಮಂದಿ ಮನೆಯ ಬಾಗಿಲನ್ನು ಬಡಿದು ತೆಗೆಯುವಂತೆ ಬೆದರಿಸಿದ್ದಾರೆ. ಈ ವೇಳೆ ಭಯಗೊಂಡ ನದೀಂ ಫರ್ಹಾನ್‌ ಇದ್ದ ವಾಷ್‌ ರೂಮ್‌ನ ಬಾಗಿಲು ಲಾಕ್‌ ಮಾಡಿದ್ದಾರೆ.

ಇದನ್ನೂ ಓದಿ:Road Accident : ಬರ್ತ್‌ಡೇ ದಿನವೇ ಡೆತ್‌ಡೇ; ಸ್ನೇಹಿತರಿಬ್ಬರ ಪ್ರಾಣ ತೆಗೆದ ಬಸ್‌!

ಬಳಿಕ ಮನೆಯ ಬಾಗಿಲು ಬಡಿಯುತ್ತಿದ್ದ ಅಪರಿಚಿತರಿಗೆ ನೀವು ಇಲ್ಲಿಂದ ಹೋಗಿ ಇಲ್ಲದಿದ್ದರೆ ಪೊಲೀಸ್‌ರಿಗೆ ಫೋನ್‌ ಮಾಡುವುದಾಗಿ ನದೀಂ ಹೇಳಿದ್ದಾನೆ. ಈ ವೇಳೆ ವಾಷ್ ರೂಂ ಬಾಗಿಲಿನ ಲಾಕ್‌ ಮುರಿದು ಹೊರಗೆ ಬಂದ ಫರ್ಹಾನ್‌, ಮನೆಯ ಬಾಗಿಲು ತೆಗೆದಿದ್ದಾನೆ. ಬಾಗಿಲು ತೆರೆಯದಂತೆ ಕೇಳಿಕೊಂಡರೂ, ಅಪರಿಚಿತರ ಒಳಬರಲು ಸಹಾಯ ಮಾಡಿದ್ದಾನೆ ಎಂದು ನದೀಂ ದೂರಲ್ಲಿ ಉಲ್ಲೇಖಿಸಿದ್ದಾರೆ.

ಬಾಗಿಲು ತೆರೆಯುತ್ತಿದ್ದ ಒಳನುಗ್ಗಿದ ಅಪರಿಚಿತರು, ಅವಾಚ್ಯ ಶಬ್ದಗಳಿಂದ ನಿಂದಿಸಿ ದೊಣ್ಣೆಯಿಂದ ದೈಹಿಕವಾಗಿ ಹೆಲ್ಲೆ ಮಾಡಿ ಜೀವ ಬೇದರಿಕೆ ಹಾಕಿದ್ದಾರೆ. ಮಾತ್ರವಲ್ಲದೇ ನದೀಂ ಬಳಿಯಿದ್ದ 45 ಸಾವಿರ ಮೌಲ್ಯದ ಮೊಬೈಲ್, ದುಬಾರಿ ವಾಚ್‌ಗಳು ಸೇರಿ ಗೂಗಲ್ ಹಾಗೂ ಫೋನ್ ಪೇ ಮೂಲಕ ಹಣವನ್ನು ವರ್ಗಾಯಿಸಿಕೊಂಡು ಪರಾರಿ ಆಗಿದ್ದಾರೆ.

ಸದ್ಯ ಫರ್ಹಾನ್ ಹಾಗು ಇನ್ನಿತರರ ವಿರುದ್ಧ ನದೀಂ ದೂರು ನೀಡಿದ್ದಾರೆ. ಆಡುಗೋಡಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Continue Reading

ಕರ್ನಾಟಕ

Operation Tiger : ಮಹಿಳೆ ಸಹಿತ ಇಬ್ಬರ ಬಲಿ ಪಡೆದ ನರಹಂತಕ ಹುಲಿ ಕೊನೆಗೂ ಸೆರೆ; ಹೇಗಿತ್ತು ಆಪರೇಷನ್?

Operation Tiger : ಮೈಸೂರಿನ ನಂಜನಗೂಡು ತಾಲೂಕಿನಲ್ಲಿ ಅರಣ್ಯಾಧಿಕಾರಿಗಳ ಸಾಹಸಿಕ ಕಾರ್ಯಾಚರಣೆಯಲ್ಲಿ ಹುಲಿಯೊಂದು ಸೆರೆಯಾಗಿದೆ. ಇದು ಇಬ್ಬರನ್ನು ಬಲಿ ಪಡೆದಿತ್ತು.

VISTARANEWS.COM


on

Operation Tiger in Nanjanagudu
ನಂಜನಗೂಡಿನಲ್ಲಿ ಸೆರೆಯಾದ ಹುಲಿ
Koo

ಮೈಸೂರು: ನವೆಂಬರ್‌ 25ರಂದು ನಂಜನಗೂಡು ತಾಲೂಕಿನ ಬಳ್ಳೂರು ಹುಂಡಿ ಗ್ರಾಮದಲ್ಲಿ ದನಗಳನ್ನು ಮೇಯಿಸಲು ಹೋಗಿದ್ದ ರೈತ ಮಹಿಳೆ ರತ್ನಮ್ಮ (55) ಸೇರಿದಂತೆ ಒಂದೇ ತಿಂಗಳಲ್ಲಿ ಇಬ್ಬರು ದನಗಾಹಿಗಳನ್ನು ಬಲಿ ಪಡೆದ ನರಹಂತಕ ಹುಲಿಯನ್ನು (Killer Tiger) ಕೊನೆಗೂ ಸೆರೆ ಹಿಡಿಯಲಾಗಿದೆ (Tiger Captured). ಕಳೆದ ಮೂರು ದಿನಗಳಿಂದ ಅರಣ್ಯ ಇಲಾಖೆ ನಡೆಸುತ್ತಿದ್ದ ಕಾರ್ಯಾಚರಣೆ (Operation Tiger) ಕೊನೆಗೂ ಸೋಮವಾರ ರಾತ್ರಿ 1.30ರ ಸುಮಾರಿಗೆ ಯಶಸ್ವಿಯಾಗಿದ್ದು, ಹುಲಿಯನ್ನು ಜೀವಂತವಾಗಿ ಸೆರೆ ಹಿಡಿಯಲಾಗಿದೆ.

ನಂಜನಗೂಡು ತಾಲೂಕಿನ ನಾಗಣಾಪುರದಲ್ಲಿ ಹುಲಿ ಸೆರೆಯಾಗಿದೆ. ಗ್ರಾಮ ಹೊರವಲಯದಲ್ಲಿ ಹಸುವಿನ ಮಾಂಸವನ್ನು ಇಡಲಾಗಿತ್ತು. ಮತ್ತು ಅದರ ಬರುವಿಕೆಗಾಗಿ ಕಳೆದ ಕೆಲವು ದಿನಗಳಿಂದ ಕಾವಲು ಕಾಯಲಾಗುತ್ತಿತ್ತು. ಸೋಮವಾರ ರಾತ್ರಿ ಆಗಮಿಸಿದ ಹುಲಿ ಮಾಂಸಕ್ಕೆ ಬಾಯಿ ಹಾಕುತ್ತಿದ್ದಂತೆಯೇ ದೂರದಿಂದಲೇ ಅದಕ್ಕೆ ಅರಿವಳಿಕೆ ಔಷಧವನ್ನು ಶೂಟ್‌ ಮಾಡಲಾಯಿತು. ಹೊಡೆತ ತಿಂದ ಹುಲಿ ಸುಮಾರು ಒಂದು ಕಿಮೀ ದೂರದವರೆಗೆ ಸಾಗಿ ಕುಸಿದು ಬಿದ್ದಿದೆ. ಬಳಿಕ ಅದನ್ನು ಬೋನಿಗೆ ಹಾಕಿ ಸಾಗಿಸಲಾಗಿದೆ.

ಮೇ 25ರಂದು ಮಧ್ಯಾಹ್ನ ರತ್ನಮ್ಮ ಅವರು ದನ ಮೇಯಿಸಲು ಕಾಡಂಚಿಗೆ ತೆರಳಿದ್ದರು. ಈ ವೇಳೆ ಬಳ್ಳೂರು ಗ್ರಾಮದ ಹುಂಡಿಯಲ್ಲಿ ಹುಲಿ ಅವರ ಮೇಲೆ ಎರಗಿ ಕೊಂದು ಹಾಕಿತ್ತು. ಮಾತ್ರವಲ್ಲ, ಅವರ ದೇಹದ ಎಡಭಾಗವನ್ನು ತಿಂದು ಹಾಕಿತ್ತು. ಅದಕ್ಕಿಂತ ಮೊದಲು ಇಲ್ಲಿ ಹುಲಿ ಎರಡು ಬಾರಿ ದಾಳಿ ಮಾಡಿತ್ತು. ಒಮ್ಮೆ ಇನ್ನೊಬ್ಬ ದನಗಾಹಿಯನ್ನು ಕೊಂದು ಹಾಕಿತ್ತು.

Operation Tiger in Nanjanagudu
ಹುಲಿಯನ್ನು ಹಿಡಿಯಲು ಬೋನನ್ನು ಸಿದ್ಧಪಡಿಸಲಾಗಿರುವುದು

ಈ ಘಟನೆ ಸ್ಥಳೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಜನರು ಅರಣ್ಯಾಧಿಕಾರಿಗಳ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದ್ದರು. ಇದಾದ ಬಳಿಕ ಅರಣ್ಯ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಹುಲಿ ಬೇಟೆಗೆ ಶುರು ಮಾಡಿದ್ದರು. ಹಿರಿಯ ಅಧಿಕಾರಿಗಳು ಸೇರಿದಂತೆ ಸುಮಾರು 200 ಸಿಬ್ಬಂದಿಗಳನ್ನು ಸೇರಿಸಿಕೊಂಡು ಕಾರ್ಯಾಚರಣೆ ಆರಂಭವಾಗಿತ್ತು.

ಹುಲಿಯ ಜಾಡನ್ನು ಪತ್ತೆ ಹಚ್ಚುವ ಕೆಲಸ, ಅದರ ಚಲನವಲನಗಳ ಮೇಲೆ ಕಣ್ಣಿಡುವ ಕೆಲಸ ನಡೆಯಿತು. ಡ್ರೋನ್‌ಗಳನ್ನು ಬಳಸಿ ಆ ಪ್ರದೇಶದ ಎಲ್ಲ ಕಡೆ ಜಾಲಾಡಲಾಯಿತು. ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹೆಡಿಯಾಳ ಅರಣ್ಯ ವಲಯದಲ್ಲಿ ಭಾರಿ ಹುಡುಕಾಟವೇ ನಡೆಯಿತು. ಇದಕ್ಕೆ ಪಾರ್ಥ, ರೋಹಿತ್‌ ಮತ್ತು ಹಿರಣ್ಯ ಎಂಬ ಆನೆಗಳ ಬಳಕೆಯೂ ನಡೆಯಿತು. ಗ್ರಾಮದ ಹಲವು ಕಡೆಗಳಲ್ಲಿ ಬೋನುಗಳನ್ನು ಇರಿಸಲಾಗಿತ್ತು. ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಧಿಕಾರಿ ಕುಮಾರ್ ಪುಷ್ಕರ್ ಅವರೇ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದರು.

ಕೊನೆಗೂ ಹುಲಿಯ ಜಾಡು ಸಿಕ್ಕಿತು!

ನವೆಂಬರ್‌ 25ರಿಂದಲೇ ಅರಣ್ಯ ಇಲಾಖೆ ಅಧಿಕಾರಿಗಳು ಈ ಹುಲಿಯನ್ನು ಹೇಗಾದರೂ ಹಿಡಿಯಲೇಬೇಕು ಎಂಬ ಶಪಥ ತೊಟ್ಟು ಕಾರ್ಯಾಚರಣೆ ಆರಂಭಿಸಿದ್ದರು. ಹುಲಿಯ ಜಾಡುಗಳನ್ನು ಹಿಡಿದಾಗ ಅದು ಒಂದು ನಿರ್ದಿಷ್ಟ ಪ್ರದೇಶಕ್ಕೆ ಬರುತ್ತದೆ ಎನ್ನುವುದರ ಸುಳಿವು ಸಿಕ್ಕಿತು.

Operation Tiger in Nanjanagudu
ಹುಲಿಯ ಜಾಡು ಹಿಡಿಯಲು ಡ್ರೋನ್‌ ಕೂಡಾ ಬಳಸಲಾಗಿತ್ತು

ಅರಣ್ಯಾಧಿಕಾರಿಗಳು ಆ ಭಾಗದ ಕೆಲವು ಕಡೆ ಬೋನುಗಳನ್ನು ಇಟ್ಟರು. ಆದರೆ, ಅವುಗಳು ಬೋನುಗಳು ಎಂದು ಗೊತ್ತಾಗದಂತೆ ಅವುಗಳಿಗೆ ಬಳಿಗಳನ್ನು ಸುತ್ತಿದರು. ಇತ್ತ ಒಂದು ನಿರ್ದಿಷ್ಟ ಜಾಗದಲ್ಲಿ ಹಸುವಿನ ಮಾಂಸವನ್ನು ಹಾಕಲಾಗಿತ್ತು.

Operation Tiger in NanjanaguduOperation Tiger in Nanjanagudu
ಹುಲಿ ಕಾರ್ಯಾಚರಣೆಗೆ ಆನೆಗಳನ್ನೂ ಬಳಸಲಾಗಿತ್ತು

ಹುಲಿ ಈ ಮಾಂಸವನ್ನು ವಾಸನೆ ಆಧರಿಸಿ ಇಲ್ಲಿಗೆ ಬಂದರೆ ಅದರ ಮೇಲೆ ಅರಿವಳಿಕೆ ಶೂಟ್‌ ಮಾಡಲು ಅನುಕೂಲವಾಗುವಂತೆ ಬೋವಿನಲ್ಲಿ ವ್ಯವಸ್ಥೆ ಸಜ್ಜುಗೊಳಿಸಿ ಇಡಲಾಗಿತ್ತು. ಆದರೆ, ಹುಲಿಗೆ ಯಾವ ಸಂಶಯವೂ ಬಾರದಂತೆ ಈ ವಾಹನವನ್ನು ಕೂಡಾ ಬಳ್ಳಿಗಳಿಂದ ಮುಚ್ಚಲಾಗಿತ್ತು. ಅಲ್ಲಿ ಮನುಷ್ಯರ ಚಲನವಲನದ ಯಾವ ಸುಳಿವೂ ಸಿಗದಂತೆ ಮುನ್ನೆಚ್ಚರಿಕೆ ವಹಿಸಿ ಕಾಯಲಾಗುತ್ತಿತ್ತು. ಡ್ರೋನ್‌ ಸೇರಿದಂತೆ ಬೇರೆ ಕ್ಯಾಮೆರಾಗಳು ಕೂಡಾ ಮರೆಯಲ್ಲಿ ಸಜ್ಜಾಗಿದ್ದವು.

ದನದ ಮಾಂಸ ಇಟ್ಟು ಕಾಯುವ ಕಾರ್ಯಾಚರಣೆಯ ರಿಹರ್ಸಲ್

ಮಧ್ಯರಾತ್ರಿ 1.05ಕ್ಕೆ ಆಗಮಿಸಿದ ಹುಲಿ

ನಂಜನಗೂಡು ತಾಲೂಕಿನ ನಾಗಣಾಪುರದಲ್ಲಿ ಹುಲಿ ಕಾರ್ಯಾಚರಣೆ ನಡೆದಿತ್ತು. ರಾತ್ರಿ 1.05ರ ಹೊತ್ತಿಗೆ ಹುಲಿ ಆ ಭಾಗಕ್ಕೆ ಬಂದಿತ್ತು. ಅದು ಮಾಂಸದ ಬಳಿಗೆ ಹೋಗುತ್ತಿದ್ದಂತೆಯೇ ಸ್ವಲ್ಪವೇ ದೂರದಲ್ಲಿ ಮರೆಯಲ್ಲಿ ಬೋನಿನಲ್ಲಿ ಕುಳಿತಿದ್ದ ಬಂಡೀಪುರ ವೈದ್ಯಾಧಿಕಾರಿ ಡಾ.ವಾಸಿಂ ಅವರು ಅಲ್ಲಿಂದಲೇ ಅರಿವಳಿಕೆ ಮದ್ದು ಶೂಟ್ ಮಾಡಿದಾಗ ಮಧ್ಯ ರಾತ್ರಿ 1.15 ಆಗಿತ್ತು.

Operation Tiger in Nanjanagudu
ಬಳ್ಳಿಗಳಿಂದ ಮುಚ್ಚಿದ ಬೋನಿನಿಂದ ಹುಲಿಯ ಮೇಲೆ ಅರಿವಳಿಕೆ ಶೂಟ್

ವೈದ್ಯಾಧಿಕಾರಿಗಳ ಅರಿವಳಿಕೆ ಶೂಟ್‌ನಿಂದ ವಿಚಲಿತವಾದ ಹುಲಿ ಅಲ್ಲಿಂದ ಕಾಲ್ಕಿತ್ತಿದೆ. ಆದರೆ, ಅದಕ್ಕೆ ಹೆಚ್ಚು ದೂರ ಹೋಗುವುದು ಸಾಧ್ಯವಾಗಿಲ್ಲ. ಹಾಗಂತ ಅದು ಹೋದ ಭಾಗಕ್ಕೆ ಒಮ್ಮೆಗೇ ನುಗ್ಗುವುದು ಕೂಡಾ ಸಾಧುವಾಗಿರಲಿಲ್ಲ. ಹಾಗಾಗಿ ಎಲ್ಲ ಪರಿಸ್ಥಿತಿಗಳನ್ನು ವಿಶ್ಲೇಷಿಸಿ ಕೊನೆಗೆ ಹುಲಿ ಹೋದ ಜಾಡನ್ನು ಅನುಸರಿಸಿದಾಗ ಸುಮಾರು ಒಂದು ಕಿ.ಮೀ. ದೂರದಲ್ಲಿ ಹುಲಿ ಬಿದ್ದಿರುವುದು ಕಂಡಿತು.‌

ಇದನ್ನೂ ಓದಿ: Tiger Attack: ಮಹಿಳೆಯ ಅರ್ಧ ದೇಹವನ್ನೇ ತಿಂದ ನರಭಕ್ಷಕ; ಮೈಸೂರಲ್ಲಿ ಹುಲಿ ದಾಳಿಗೆ ಮತ್ತೆ ಬಲಿ

ಬಳಿಕ ಅದನ್ನು ಬಲೆ ಹಾಕಿ ದಿಗ್ಬಂಧಿಸಲಾಯಿತು. ಪ್ರಜ್ಞೆ ತಪ್ಪಿದ್ದ ಹುಲಿಯನ್ನು ಬಳಿಕ ಸುಮಾರು 3 ಗಂಟೆಯ ಹೊತ್ತಿಗೆ ಗ್ರಾಮಸ್ಥರಿಗೆ ತೋರಿಸಲಾಯಿತು. ಹುಲಿಯನ್ನು ರಾತ್ರಿಯೇ ಮೈಸೂರಿನ ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ಶಿಫ್ಟ್‌ ಮಾಡಲಾಯಿತು. ಹುಲಿಯ ಆರೋಗ್ಯ ತಪಾಸಣೆಯ ಬಳಿಕ ಅರಣ್ಯ‌ ಇಲಾಖೆ ಮುಂದಿನ ಕ್ರಮ ಕೈಗೊಳ್ಳಲಿದೆ.

Continue Reading
Advertisement
PM Narendra Modi phone call to workers, who rescued from collapsed tunnel
ದೇಶ1 hour ago

ಸುರಂಗದಿಂದ ರಕ್ಷಿಸಲಾದ ಕಾರ್ಮಿಕರಿಗೆ ಪ್ರಧಾನಿ ಮೋದಿ ದೂರವಾಣಿ ಕರೆ!

mantralaya mutt
ಕರ್ನಾಟಕ2 hours ago

ಮಂತ್ರಾಲಯ ಮಠಕ್ಕೆ ಭಕ್ತರೊಬ್ಬರಿಂದ ಹೆಲಿಕಾಪ್ಟರ್‌ ಕೊಡುಗೆ

Uttarakhand CM announces rs 1 lakh rupees to trapped labourers Who rescued after 17 days
ದೇಶ2 hours ago

ಬದುಕುಳಿದು ಬಂದ ಕಾರ್ಮಿಕರಿಗೆ 1 ಲಕ್ಷ ಪರಿಹಾರ ಎಂದ ಉತ್ತರಾಖಂಡ ಸಿಎಂ ಧಾಮಿ

Maxwell
ಕ್ರಿಕೆಟ್2 hours ago

Ind vs Aus : ಮ್ಯಾಕ್ಸ್​ವೆಲ್​ ಸ್ಫೋಟಕ ಶತಕ; 3ನೇ ಪಂದ್ಯದಲ್ಲಿ ಭಾರತಕ್ಕೆ ಸೋಲು

Siddaramaiah
ಕರ್ನಾಟಕ3 hours ago

ಕಾರ್ಮಿಕರಿಗೆ ಮರುಹುಟ್ಟು ನೀಡಿದ ರಕ್ಷಣಾ ಸಿಬ್ಬಂದಿಗೆ ಸಿದ್ದರಾಮಯ್ಯ ಧನ್ಯವಾದ

Uttarkashi Tunnel Rescue and Makeshift hospital
ದೇಶ3 hours ago

ಸುರಂಗದಿಂದ 41 ಕಾರ್ಮಿಕರ ರಕ್ಷಣೆ; ಮುಂದೇನಾಗುತ್ತದೆ ಎಂಬುದರ ಕಂಪ್ಲೀಟ್‌ ಮಾಹಿತಿ ಇಲ್ಲಿದೆ

Top 10 news
ಕರ್ನಾಟಕ3 hours ago

VISTARA TOP 10 NEWS: ಸುರಂಗದಲ್ಲಿ ಸಿಲುಕಿದ್ದ ಎಲ್ಲ ಕಾರ್ಮಿಕರ ರಕ್ಷಣೆ, ಮಕ್ಕಳ ಮಾರಾಟ ಬೃಹತ್​ ಜಾಲ ಪತ್ತೆ ಮತ್ತಿತರ ದಿನದ ಪ್ರಮುಖ ಸುದ್ದಿಗಳು

Uttarakhand Tunnel Collapse
EXPLAINER4 hours ago

150 ಮೀಟರ್‌ ಸುರಂಗ ಕುಸಿತ, 57 ಮೀಟರ್‌ ಕೊರೆತ! 41 ಕಾರ್ಮಿಕರನ್ನು ರಕ್ಷಿಸಿದ್ದು ಹೇಗೆ?

Uttarkashi Tunnel rescue success makes us emotional says PM Narendra Modi
ದೇಶ4 hours ago

ಕಾರ್ಮಿಕರ ರಕ್ಷಣೆಯ ಯಶಸ್ಸು ನಮ್ಮನ್ನೆಲ್ಲ ಭಾವುಕರನ್ನಾಗಿಸಿದೆ ಎಂದ ಪ್ರಧಾನಿ ಮೋದಿ

Ruturaj Gaikwad
ಕ್ರಿಕೆಟ್4 hours ago

Ruturaj Gaikwad : ಆಸ್ಟ್ರೇಲಿಯಾ ವಿರುದ್ಧ ಶತಕ ಬಾರಿಸಿ ವಿಶೇಷ ಸಾಧನೆ ಮಾಡಿದ ಋತುರಾಜ್​

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Bigg Boss- Saregamapa 20 average TRP
ಕಿರುತೆರೆ1 month ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ4 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Sphoorti Salu
ಸುವಚನ6 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Dina Bhavishya
ಪ್ರಮುಖ ಸುದ್ದಿ20 hours ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

Cm Siddaramaiah in Janatha Darshan
ಕರ್ನಾಟಕ1 day ago

Janatha Darshan : ಜನಸ್ಪಂದನದಲ್ಲಿ ಸ್ವೀಕಾರವಾಗಿದ್ದು 3812 ಅರ್ಜಿ; ಇವುಗಳ ಸ್ಟೇಟಸ್‌ ಈಗ ಹೇಗಿದೆ?

CM Siddaramaiah Janatha Darshan
ಕರ್ನಾಟಕ1 day ago

Janatha Darshan : ಸಮಸ್ಯೆಗಳ ಪರಿಹಾರಕ್ಕೆ ಹದಿನೈದು ದಿನ ಗಡುವು ಕೊಟ್ಟ ಸಿಎಂ; ಕುಳಿತಲ್ಲೇ ಸಿದ್ದು ಊಟ!

Cm Siddaramaiah in Janatha Darshan
ಕರ್ನಾಟಕ1 day ago

Janatha Darshan : ಜಿಲ್ಲಾ ಮಟ್ಟದ ಸಮಸ್ಯೆ ಬೆಂಗಳೂರಿಗೆ ಬಂದರೆ ಸಹಿಸಲ್ಲ; ಸಿಎಂ ಖಡಕ್‌ ಎಚ್ಚರಿಕೆ

CM Janatha Darshana solved mysore citizens problem
ಕರ್ನಾಟಕ1 day ago

Janatha Darshan : ಮಾಲೀಕನ ಮನೆ ಹರಾಜು; ಲೀಸ್‌ ದುಡ್ಡಿಗೆ ಯಾರು ಗ್ಯಾರಂಟಿ? ಕಂಗೆಟ್ಟ ಕುಟುಂಬಕ್ಕೆ ಸಿಎಂ ರಕ್ಷಣೆ!

Shivajingar School building collapses The children escaped unhurt
ಕರ್ನಾಟಕ1 day ago

Building collapse : ಏಕಾಏಕಿ ಕುಸಿದು ಬಿದ್ದ ಶಾಲಾ ಕಟ್ಟಡ; ಪ್ರಾಣಾಪಾಯದಿಂದ ಚಿಣ್ಣರು ಪಾರು

CM Siddaramaiah Janatha Darshan
ಕರ್ನಾಟಕ1 day ago

Janatha Darshan : ಸಿಎಂಗೆ ದೂರು ನೀಡಬೇಕೇ? ಜನತಾ ದರ್ಶನಕ್ಕೆ ಹೋಗಬೇಕಿಲ್ಲ; ಈ ನಂಬರ್‌ಗೆ ಕರೆ ಮಾಡಿ!

read your daily horoscope predictions for november 27 2023
ಪ್ರಮುಖ ಸುದ್ದಿ2 days ago

Dina Bhavishya: ನಿಮ್ಮನ್ನು ಉರುಳಿಸಲು ಪಿತೂರಿ ಮಾಡ್ತಾರೆ ಹುಷಾರ್‌!

Danger Influenza People are suffering from the flu
ಆರೋಗ್ಯ2 days ago

Viral fever: ಡೆಡ್ಲಿ ಚೀನಾ ವೈರಸ್‌; ಮಕ್ಕಳಿಗೆ ಇದರಿಂದ ಅಪಾಯ ಇದೆಯಾ?

BY Vijayendra and HD Kumarswamy
ಕರ್ನಾಟಕ2 days ago

BJP JDS Alliance: ಎಚ್‌ಡಿಕೆ-ವಿಜಯೇಂದ್ರ ಭೇಟಿ; 28ಕ್ಕೆ 28 ಸ್ಥಾನ ಗೆಲ್ಲುವ ಪಣ!

ಟ್ರೆಂಡಿಂಗ್‌