ಕ್ರೈಂ
Murder case: ರಾಜಧಾನಿಯಲ್ಲಿ ಮಹಿಳೆಯ ಕತ್ತು ಕೊಯ್ದು ಭೀಕರ ಹತ್ಯೆ
ಸುಮಾರು 45 ವರ್ಷ ವಯಸ್ಸಿನ ಮಹಿಳೆಯನ್ನು ಹತ್ಯೆ ಮಾಡಲಾಗಿದೆ. ಮಹಿಳೆಯ ವಿವರಗಳನ್ನು ಕಲೆ ಹಾಕಲಾಗುತ್ತಿದ್ದು, ಪರಿಚಿತರೇ ಕೊಂದು ಹಾಕಿರುವ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ.
ಬೆಂಗಳೂರು: ರಾಜಧಾನಿಯಲ್ಲಿ ಮಹಿಳೆಯೊಬ್ಬರನ್ನು ಅಪರಿಚಿತ ದುಷ್ಕರ್ಮಿಗಳು ಕತ್ತು ಕುಯ್ದು ಭೀಕರವಾಗಿ ಕೊಂದು (Murder case) ಹಾಕಿದ್ದಾರೆ.
ನಗರದ ವಿವೇಕ್ ನಗರ ಈಸ್ಟ್ ರೋಡ್ ಬಳಿ ಘಟನೆ ನಡೆದಿದೆ. ಸುಮಾರು 45 ವರ್ಷ ವಯಸ್ಸಿನ ಮಹಿಳೆಯನ್ನು ಹತ್ಯೆ ಮಾಡಲಾಗಿದೆ. ಮಹಿಳೆಯ ವಿವರಗಳನ್ನು ಕಲೆ ಹಾಕಲಾಗುತ್ತಿದ್ದು, ಪರಿಚಿತರೇ ಕೊಂದು ಹಾಕಿರುವ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ. ವಿವೇಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಶೆಯಲ್ಲಿ ಪುಂಡಾಟ, ಕಾರುಗಳಿಗೆ ಜಖಂ
ಬೆಂಗಳೂರು: ಮಾದಕ ದ್ರವ್ಯದ ನಶೆಯಲ್ಲಿ ಪುಂಡಾಟ ನಡೆಸಿ ರಸ್ತೆ ಬದಿ ನಿಂತಿದ್ದ ಕಾರುಗಳನ್ನು ಜಖಂಗೊಳಿಸಿದ ಮೂವರು ಯುವಕರನ್ನು ಸ್ಥಳೀಯರೇ ಹಿಡಿದು ತದುಕಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯತ್ರಿನಗರ ಮೊದಲನೇ ಮುಖ್ಯ ರಸ್ತೆಯಲ್ಲಿ ನಡೆದ ಘಟನೆಯಿದು.
ಮದ್ಯದ ನಶೆಯಲ್ಲಿ ಈ ಹುಚ್ಚಾಟ ನಡೆಸಿದ್ದಾರೆ ಎನ್ನಲಾಗಿದ್ದು, ರಾತ್ರಿಯಾದರೆ ಜಾಲಿ ರೈಡ್‌ಗಾಗಿ ಹೊರಬೀಳುವ ಈ ನಿಶಾಚರಿ ದುಷ್ಕರ್ಮಿಗಳು ನಿವಾಸಿಗಳ ನೆಮ್ಮದಿಗೆ ಕೊಳ್ಳಿ ಇಟ್ಟು ಹೈರಾಣಾಗಿಸುತ್ತಿರುವುದಂತೂ ಸತ್ಯ. ಹಾಗೇ ಚಂದ್ರು ನಾಯ್ಡು@ ಸೇಟು ಎಂಬ ಕಾರು ಚಾಲಕ ತನ್ನಿಬ್ಬರು ಸ್ನೇಹಿತರ ಜತೆ ಸೇರಿ ಹೀಗೆ ಅವಾಂತರ ಸೃಷ್ಟಿಸಿದ್ದಾನೆ.
ಹಿಂದೆ ಇದೇ ಏರಿಯಾದ ನಿವಾಸಿಯಾಗಿದ್ದ ಈತ ಇತ್ತೀಚೆಗೆ ಸುಬ್ರಮಣ್ಯ ನಗರಕ್ಕೆ ಶಿಫ್ಟ್ ಆಗಿದ್ದ. ಇಂದು ತನ್ನ ಗೆಳೆಯರ ಜೊತೆಗೂಡಿ ಮದ್ಯ ಸೇವಿಸಿ ಐ20 ಕಾರು ಚಲಾಯಿಸಿಕೊಂಡು ಬಂದು ಏರಿಯಾದಲ್ಲಿದ್ದ 12ಕ್ಕೂ ಅಧಿಕ ಕಾರ್, 10ಕ್ಕೂ ಅಧಿಕ ಬೈಕ್‌ಗಳಿಗೆ ಡಿಕ್ಕಿ ಹೊಡೆದು ಪುಂಡಾಟ ಮೆರೆದಿದ್ದಾನೆ. ರಸ್ತೆ ಬದಿ ನಿಂತಿದ್ದ 20ಕ್ಕೂ ಹೆಚ್ಚು ವಾಹನಗಳನ್ನು ಇವರು ಜಖಂ ಮಾಡಿದ್ದಾರೆ. ಈ ಯುವಕರ ಪುಂಡಾಟ ಹೆಚ್ಚಾದಾಗ ಸ್ಥಳೀಯರೇ ಗಾಡಿಯನ್ನು ಚೇಸ್ ಮಾಡಿ ಹಿಡಿದು ಇಬ್ಬರು ಯುವಕರಿಗೂ ಥಳಿಸಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಈ ಸಂಬಂಧ ಮಲ್ಲೇಶ್ವರ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕರ್ತವ್ಯಲೋಪ ಆರೋಪ, ಪೊಲೀಸ್ ಇನ್‌ಸ್ಪೆಕ್ಟರ್ ಅಮಾನತು
ಬೆಂಗಳೂರು: ಕರ್ತವ್ಯಲೋಪ ಆರೋಪದಡಿ ಪೊಲೀಸ್ ಇನ್‌ಸ್ಪೆಕ್ಟರ್ ಶ್ರೀಕಾಂತ್ ಎಫ್. ತೋಟಗಿ ಎಂಬವರನ್ನು ಅಮಾನತು ಮಾಡಲಾಗಿದೆ.
ಇತ್ತೀಚೆಗೆ ಹೊಟೇಲ್, ಬಾರ್, ಪಬ್‌ಗಳ ಮೇಲೆ ಸಿಸಿಬಿ ದಾಳಿ ನಡೆಸಿತ್ತು. ಬಾರ್‌ಗಳಲ್ಲಿ ಹೊರ ರಾಜ್ಯದ ಹುಡುಗಿಯರನ್ನು ಬಳಸಿಕೊಂಡು ಲೈಂಗಿಕ ಪ್ರಚೋದನೆ ನೀಡಲಾಗುತ್ತಿತ್ತು. ಈ ಸಂಬಂಧ ಮೂರು ಜನರನ್ನು ಸಿಸಿಬಿ ಬಂಧಿಸಿತ್ತು. ಅವಧಿ ಮೀರಿ ಬಾರ್ ಕಾರ್ಯ ನಿರ್ವಹಿಸಿದ್ದರೂ ನಿರ್ಲಕ್ಷ್ಯ ವಹಿಸಿದ ಆರೋಪ ಹಿನ್ನೆಲೆಯಲ್ಲಿ ಅಶೋಕನಗರ ಪೊಲೀಸ್ ಇನ್‌ಸ್ಪೆಕ್ಟರ್ ಅಮಾನತುಗೊಳಿಸಿ ಪೊಲೀಸ್ ಆಯುಕ್ತ ದಯಾನಂದ್ ಆದೇಶ ನೀಡಿದ್ದಾರೆ.
ಇದನ್ನೂ ಓದಿ: Crime News: ಶೀಲ ಶಂಕಿಸಿ ಪತ್ನಿಯ ಮರ್ಮಾಂಗಕ್ಕೆ ಚೂರಿಯಿಂದ ಇರಿದ!
ಕರ್ನಾಟಕ
Murder Case : ನೀರಿನ ತೊಟ್ಟಿಯಲ್ಲಿ ತೇಲುತ್ತಿತ್ತು ಮಗುವಿನ ಶವ; ಮೊಮ್ಮಗಳನ್ನೇ ಕೊಂದು ಬಿಟ್ಟನಾ!
Family Dispute : ಕೌಟುಂಬಿಕ ಕಲಹಕ್ಕೆ ತಾತನೇ ಮೊಮ್ಮಗಳನ್ನು ಹತ್ಯೆ ಮಾಡಿದ್ದಾಗಿ ಮೃತಳ ತಾಯಿ ಪೊಲೀಸ್ ಠಾಣೆ (Murder Case) ಮೆಟ್ಟಿಲೇರಿದ್ದಾಳೆ.
ಚಿಕ್ಕಬಳ್ಳಾಪುರ: ಇಲ್ಲಿನ ಬಾಗೇಪಲ್ಲಿ ತಾಲೂಕಿನ ರೇಚನಾಯಕನಪಲ್ಲಿ ಗ್ರಾಮದಲ್ಲಿ ನೀರಿನ ತೊಟ್ಟಿಯಲ್ಲಿ 2 ವರ್ಷದ ಹೆಣ್ಣು ಮಗುವೊಂದು ಶವವಾಗಿ (murder case) ಪತ್ತೆಯಾಗಿದೆ. ಶ್ರೀಲಲಿತಾರೆಡ್ಡಿ (2) ಮೃತ ದುರ್ದೈವಿ.
ಮಗುವಿನ ಸಾವಿನ ಹಿಂದೆ ತಾತ ಸೋಮಶೇಖರರೆಡ್ಡಿಯ ಕೈವಾಡವಿದೆ ಎಂದು ಶಂಕಿಸಲಾಗಿದೆ. ಕನ್ಯಾಕುಮಾರಿ ಹಾಗೂ ರಾಜಶೇಖರರೆಡ್ಡಿ ದಂಪತಿಯ ಮಗುವನ್ನು ಮಾವ ಸೋಮಶೇಖರರೆಡ್ಡಿ ಹತ್ಯೆ ಮಾಡಿರಬಹುದೆಂದು ಆರೋಪಿಸಿದ್ದಾರೆ.
ಕೌಟುಂಬಿಕ ಕಲಹ ಹಿನ್ನೆಲೆ ಕೊಲೆ ಮಾಡಿರಬಹುದೆಂದು ಆರೋಪಿಸಿ ಮಾವನ ಮೇಲೆ ಸೊಸೆ ಕನ್ಯಾಕುಮಾರಿ ದೂರು ನೀಡಿದ್ದಾರೆ. ಪಾತಪಾಳ್ಯ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ನೇಣಿಗೆ ಶರಣಾದ ಯುವಕ, ಕೊಲೆ ಶಂಕೆ!
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೇ ಮತ್ತೊಂದು ಅನುಮಾನಾಸ್ಪದ ಸಾವು ಪ್ರಕರಣ ವರದಿ ಆಗಿದೆ. ಇಲ್ಲಿನ ಶಿಡ್ಲಘಟ್ಟ ತಾಲೂಕಿನ ಅಲಗುರ್ಕಿ ಗ್ರಾಮದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಅಲಗುರ್ಕಿ ಗ್ರಾಮದ ರವಿ (24) ಮೃತ ದುರ್ದೈವಿ.
ಹತ್ಯೆ ಮಾಡಿ ಮನೆಯಲ್ಲೇ ನೇಣು ಹಾಕಿರುವ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ದಿಬ್ಬೂರಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ.
ಇದನ್ನೂ ಓದಿ: Murder Case : ಮಲಗಿದ್ದವಳ ಮೇಲೆ ಕಲ್ಲು ಎತ್ತಿಹಾಕಿ ಕೊಂದ; ಬಳಿಕ ಮರಕ್ಕೆ ನೇಣು ಬಿಗಿದುಕೊಂಡ ಕುಡುಕ ಪತಿ!
ಮನೆಯಲ್ಲಿ ನೇತಾಡುತ್ತಿತ್ತು ಹೆಂಡ್ತಿ ಶವ; ಚಿತೆಯ ಫೋಟೊ ಹಾಕಿದ ಗಂಡ!
ಚಿತ್ರದುರ್ಗ: ಇಲ್ಲಿನ ಆಂಜನೇಯ ಕ್ಲಾತ್ ಬಳಿ ಮನೆಯಲ್ಲಿ ಗೃಹಿಣಿಯೊಬ್ಬಳು ನೇಣು ಬಿಗಿದ ಸ್ಥಿತಿಯಲ್ಲಿ (Suspicious death) ಪತ್ತೆಯಾಗಿದ್ದಾಳೆ. ಚಳ್ಳಕೆರೆ ನಗರದ ಸತ್ಯ ತೆಲಗಿ (21) ಮೃತಳು.
3 ವರ್ಷದ ಹಿಂದೆ ಪ್ರಜ್ವಲ್ ತೆಲಗಿ ಎಂಬಾತನೊಂದಿಗೆ ಸತ್ಯಳಾ ಮದುವೆ ಆಗಿತ್ತು. ಆತನೇ ಹತ್ಯೆ ಮಾಡಿ ನೇಣು ಹಾಕಿದ್ದಾನೆ ಎಂದು ಮೃತ ಪೋಷಕರು ಆರೋಪಿಸಿದ್ದಾರೆ. ಪ್ರಜ್ವಲ್ ದಿನನಿತ್ಯ ಕುಡಿದು ಬಂದು ಪತ್ನಿ ಸತ್ಯಾಳಿಗೆ ಹೊಡೆಯುತ್ತಿದ್ದ ಎನ್ನಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿ ಸತ್ಯಳಿಗೆ ಇಲ್ಲ. ಅವಳ ಗಂಡನೇ ಅವಳನ್ನು ಹೊಡೆದು ಬಡಿದು ಕೊಲೆ ಮಾಡಿದ್ದಾನೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: Road Accident : ಹಿಟ್ ಆ್ಯಂಡ್ ರನ್; ಬೈಕ್ ಸವಾರ ಸತ್ತರೂ ನೋಡದೆ ಹೋದ ಕಾರು ಚಾಲಕ!
ಆತನ ಸ್ಟೇಟಸ್‌ನಲ್ಲಿ ಏನಿದೆ?
ಇನ್ನು ಸತ್ಯಾಳ ಪತಿ ಪ್ರಜ್ವಲ್ ತನ್ನ ವಾಟ್ಸ್‌ಪ್ ಸ್ಟೇಟಸ್‌ನಲ್ಲಿ ಮಾರ್ಮಿಕವಾಗಿ ಬರಹವೊಂದನ್ನು ಹಾಕಿಕೊಂಡಿದ್ದಾನೆ. ಉಸಿರಿನ ತೊಂದರೆಯಿಂದ ಅಸುನೀಗಿದ ಹೆಣವೊಂದು ಚಿತೆಯಲ್ಲಿ ಉರಿಯುತ್ತಿತ್ತು. ಉರಿಯುತ್ತಿದ್ದ ಹೆಣವು ಒಣ ಕಟ್ಟಿಗೆಯೊಂದಿಗೆ ವಾಗ್ವಾದಕ್ಕಿಳಿದಿತ್ತು. ನನ್ನನ್ನೇಕೆ ಸುಡುತ್ತಿರುವೆ? ಇದಕ್ಕೆ ಒಣ ಕಟ್ಟಿಗೆಯ ಉತ್ತರ ಹೀಗಿತ್ತು. ನನ್ನ ಹಸಿರಾಗಿರಲು ಬಿಟ್ಟಿದ್ದರೆ ಇಂದು ನಿನ್ನ ಉಸಿರು ಉಳಿಯುತ್ತಿತ್ತು. ನಾನು ಬೆಂದು ಕೆಂಡವಾಗುತ್ತಿರಲಿಲ್ಲ, ನೀನು ಸುಟ್ಟು ಬೂದಿಯೂ ಆಗುತ್ತಿರಲಿಲ್ಲ ಎಂದು ಚಿತೆಯ ಫೋಟೊದೊಂದಿಗೆ ಮೇಲಿನ ಬರಹವನ್ನು ಪ್ರಜ್ವಲ್ ಹಾಕಿದ್ದಾನೆ.
ವಾಟ್ಸಪ್ ಸ್ಟೇಟಸ್‌ನಲ್ಲಿ ಈ ರೀತಿಯ ಮಾರ್ಮಿಕವಾಗಿ ಸ್ಟೇಟಸ್ ಹಾಕಿದ್ದಕ್ಕೆ ಸತ್ಯಳ ಸಹೋದರ ಕಿಶೋರ್ ಗಂಭೀರ ಆರೋಪವನ್ನು ಮಾಡಿದ್ದಾರೆ. ಆತ ವಾಟ್ಸಪ್‌ನಲ್ಲಿ ಆ ಸ್ಟೇಟಸ್ ಹಾಕಿದ್ದು ಯಾಕೆ ? ನನ್ನ ತಂಗಿಯನ್ನು ಅವನೇ ಏನೋ ಮಾಡಿದ್ದಾನೆ. ಪೊಲೀಸರು ಈ ಸಂಬಂಧ ಸೂಕ್ತವಾದ ತನಿಖೆಯನ್ನು ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಇತ್ತ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿದ್ದ ಮೃತದೇಹವನ್ನು ಕೆಳಗಿಸಿ, ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಕರ್ನಾಟಕ
Murder Case : ಮಲಗಿದ್ದವಳ ಮೇಲೆ ಕಲ್ಲು ಎತ್ತಿಹಾಕಿ ಕೊಂದ; ಬಳಿಕ ಮರಕ್ಕೆ ನೇಣು ಬಿಗಿದುಕೊಂಡ ಕುಡುಕ ಪತಿ!
Murder Case : ರಾಯಚೂರಲ್ಲಿ ಮಲಗಿದ್ದ ಪತ್ನಿ ಮೇಲೆ ಕಲ್ಲು ಎತ್ತಿಹಾಕಿ ಕೊಂದು ಬಳಿಕ ತಾನೂ ಮರಕ್ಕೆ ನೇಣು ಬಿಗಿದುಕೊಂಡು ಕುಡುಕ ಪತಿಯೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ.
ರಾಯಚೂರು: ರಾಯಚೂರಿನ ಮಾನ್ವಿ ತಾಲೂಕಿನ ರಾಜೋಳ್ಳಿ ಗ್ರಾಮದಲ್ಲಿ ಪತ್ನಿಯನ್ನು ಹತ್ಯೆಗೈದು (Murder case) ಪತಿ ನೇಣಿಗೆ ಶರಣಾಗಿದ್ದಾನೆ. ಅಂಬಮ್ಮ (31) ಹತ್ಯೆಯಾದ ದುರ್ದೈವಿ.
ಅಂಬಮ್ಮ ಪತಿ ಖಾಸಿಂಮಪ್ಪ ಎಂಬಾತ ಪತ್ನಿ ಮಲಗಿದ್ದಾಗ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾನೆ. ಕೊಲೆಗೈದು ಬಳಿಕ ಅರೋಲಿ ಸೀಮಾದ ಅಡವಿಯಲ್ಲಿ ನೇಣಿಗೆ ಶರಣಾಗಿದ್ದಾನೆ.
ಕೊಲೆ ಬಳಿಕ ಖಾಸಿಂಮಪ್ಪನಿಗಾಗಿ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಮರಕ್ಕೆ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆ ಆಗಿದೆ. ಖಾಸಿಂಮಪ್ಪ ಕುಡಿತದ ಚಟವನ್ನು ಮೈಗೆ ಅಂಟಿಸಿಕೊಂಡಿದ್ದ. ನಿತ್ಯ ಕುಡಿದು ಬಂದು ಪತ್ನಿಗೆ ಮಾನಸಿಕ , ದೈಹಿಕವಾಗಿ ಕಿರುಕುಳವನ್ನು ನೀಡುತ್ತಿದ್ದ. ಇದೇ ವಿಚಾರಕ್ಕಾಗಿ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಇತ್ತ ತಂದೆ-ತಾಯಿ ಮೃತಪಟ್ಟಿದ್ದರಿಂದ ಮಕ್ಕಳಿಬ್ಬರು ಅನಾಥರಾಗಿದ್ದಾರೆ. ಸ್ಥಳಕ್ಕೆ ಮಾನ್ವಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Accident Case : ಚಲಿಸುತ್ತಿದ್ದಾಗಲೇ ಸುಟ್ಟು ಕರಕಲಾದ ಕಾರು; ಬೈಕ್‌ಗೆ ಬಸ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು
3 ವರ್ಷದ ಮಗುವಿನ ಕತ್ತು ಹಿಸುಕಿ ಬಾವಿಗೆ ಹಾರಿದ ತಾಯಿ
ತಾಯಿಯೊಬ್ಬಳು ತನ್ನ ಮೂರು ವರ್ಷದ ಮಗುವಿನ ಕತ್ತು ಹಿಸುಕಿ ಕೊಂದು ತಾನು ಬಾವಿಗೆ ಹಾರಿ ಆತ್ಮಹತ್ಯೆ (Mother Kills daugher and self) ಮಾಡಿಕೊಂಡಿದ್ದಾಳೆ. ಕೌಟುಂಬಿಕ ಕಲಹದ (Family dispute) ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ (Mother-child death) ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ವಿರೂಪಸಂದ್ರ ಗ್ರಾಮದಲ್ಲಿ ಘಟನೆ ನಡೆದಿದೆ. ಸುಧಾಮಣಿ (32) ಎಂಬ ಮಹಿಳೆ ಮೂರು ವರ್ಷದ ಮಗು (Three year old daughter killed) ಸಾನ್ವಿಯ ಕತ್ತು ಹಿಸುಕಿ ಕೊಂದು ಬಳಿಕ ತಾನು ಅಲ್ಲೇ ಇರುವ ಬಾವಿಗೆ ಹಾರಿ ಪ್ರಾಣ (Mother jumps into well) ಕಳೆದುಕೊಂಡಿದ್ದಾಳೆ.
ಸುಧಾಮಣಿ ಹಾಗು ಪತಿ ರವಿ ನಡುವೆ ನಡುವೆ ಐದು ವರ್ಷದ ಹಿಂದೆ ಮದುವೆ ನಡೆದಿತ್ತು. ಇವರ ಮಧ್ಯೆ ಆಗಾಗ ಜಗಳ ಆಗುತ್ತಿತ್ತು. ಕೌಟುಂಬಿಕ ಕಲಹದಿಂದ ಆಕೆಗೆ ನೆಮ್ಮದಿ ಇರಲಿಲ್ಲ ಎಂದು ಹೇಳಲಾಗಿದೆ.
ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಯಿ-ಮಗಳ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಐದು ವರ್ಷದಿಂದ ಒಂದು ದಿನವೂ ನೆಮ್ಮದಿ ಇಲ್ಲ
ವಿಸ್ತಾರ ನ್ಯೂಸ್ ಜತೆ ಮಾತನಾಡಿದ ಸುಧಾಮಣಿಯ ತಾಯಿ ತನ್ನ ಮಗಳು ಕಳೆದ ಐದು ವರ್ಷಗಳಿಂದಲೂ ನೋವಿನಲ್ಲೇ ಜೀವನ ಕಳೆದಿದ್ದಾಳೆ ಎಂದರು. ಗಂಡ ರವಿ, ಮನೆಯವರು ಚಿತ್ರಹಿಂಸೆ ನೀಡಿದ್ದಾರೆ ಎಂದರು.
ಕುಡಿದು ಬಂದು ಗಲಾಟೆ ಮಾಡುತ್ತಿದ್ದ ರವಿ ಕೆಲವೊಮ್ಮೆ ಮೂರ್ನಾಲ್ಕು ದಿನವೂ ಬರುತ್ತಲೇ ಇರಲಿಲ್ಲ. ಕೊನೆಗೆ ನಾವೇ ಹೋಗಿ ಫೋನ್ ಮಾಡಿ ಕರೆಸಿ ರಾಜೀ ಮಾಡುತ್ತಿದ್ದೆವು. ಅವನು ಮನೆಗೆ ಬಂದರೂ ನೆಮ್ಮದಿ ಇಲ್ಲ, ಬಾರದಿದ್ದರೆ ದಿಕ್ಕಿಲ್ಲ ಎಂಬ ಸ್ಥಿತಿಯಲ್ಲಿದ್ದಳು ಸುಧಾಮಣಿ ಎಂದರು.
ಹಾಗಂತ ನಿನಗೆ ಈ ನರಕ ಬೇಡ, ನಮ್ಮ ಮನೆಗೆ ಬಂದು ಬಿಡು ಎಂದು ಕೇಳಿದರೂ ಆಕೆ ಕೇಳುತ್ತಿರಲಿಲ್ಲ. ನಿಮಗೆ ಭಾರವಾಗಿ ಬದುಕುವುದಿಲ್ಲ ಅನ್ನುತ್ತಿದ್ದಳು. ಈಗ ಅವಳೇ ಹೋಗಿಬಿಟ್ಟಿದ್ದಾಳೆ. ಪುಟ್ಟ ಮಗುವೂ ಇಲ್ಲ ಎಂದು ನೋವಿನಿಂದ ಹೇಳಿದರು.
ಕುತ್ತಿಗೆ ಹಿಸುಕಿ ಚಾಪೆಯಲ್ಲಿ ಮಲಗಿಸಿ…
ಶನಿವಾರ ಬೆಳಗ್ಗೆ 10 ಗಂಟೆಯ ಹೊತ್ತಿಗೆ ಸುಧಾಮಣಿ ಮನೆಯಿಂದ ಹೊರ ಹೋಗಿದ್ದನ್ನು ಕೆಲವರು ನೋಡಿದ್ದಾರೆ. ಆದರೆ, ಆಕೆ ಮರಳಿ ಬಂದಿಲ್ಲ. ಎಷ್ಟು ಹೊತ್ತಾದರೂ ಬಂದಿಲ್ಲವಲ್ಲ, ಮಗು ಏನು ಮಾಡುತ್ತಿದೆ ಎಂದು ಒಳಗೆ ಇಣುಕಿ ನೋಡಿದರೆ ಅದು ಚೆನ್ನಾಗಿ ನಿದ್ದೆ ಮಾಡಿದಂತೆ ಮಲಗಿದೆ. ಆದರೂ ಸಂಶಯದಿಂದ ಅಕ್ಕಪಕ್ಕದವರು ಹೋಗಿ ನೋಡಿದರೆ ಮಗು ಮಲಗಿದ್ದು ನಿಜ. ಆದರೆ ಜೀವ ಇರಲಿಲ್ಲ.
ಬಹುಶಃ ಸುಧಾಮಣಿ ಮಗುವನ್ನು ಕತ್ತು ಹಿಸುಕಿ ಕೊಂದು ಹಾಗೇ ಚಾಪೆಯಲ್ಲಿ ಮಲಗಿಸಿ, ಅದರ ಮೇಲೊಂದು ಬಟ್ಟೆಯನ್ನು ಹಾಸಿ ಹೋಗಿದ್ದಾಳೆ ಅನಿಸುತ್ತದೆ. ಈ ನಡುವೆ ಸುಧಾಮಣಿ ಎಲ್ಲಿದ್ದಾಳೆ ಎಂದು ಹುಡುಕಿದರೆ ಆಕೆಯ ಚಪ್ಪಲಿ ಅಲ್ಲಿನ ಒಂದು ಬಾವಿಯ ಬಳಿ ಕಾಣಿಸಿದೆ. ಬಗ್ಗಿ ನೋಡಿದರೆ ಒಳಗೆ ಸುಧಾಮಣಿಯ ಶವ ಕಾಣಿಸಿದೆ. ಅದನ್ನು ಮೇಲೆತ್ತಲಾಗಿದೆ.
ಕಣ್ಮರೆಯಾಗಿದ್ದಾನೆ ರವಿ, ಅವನ ಕೈವಾಡವಿದೆಯಾ?
ಈ ನಡುವೆ, ಸುಧಾಮಣಿಯ ಪತಿ ರವಿ ಘಟನೆ ನಡೆದು ಹಲವು ಗಂಟೆಗಳೇ ಕಳೆದರೂ ನಾಪತ್ತೆಯಾಗಿದ್ದಾನೆ. ಇಡೀ ಊರಿಗೇ ವಿಷಯ ಗೊತ್ತಾಗಿದೆ. ಹಾಗಿದ್ದರೂ ಅವನು ಬಂದಿಲ್ಲ ಎಂದರೆ ಒಂದೋ ಅವನು ಭಯದಿಂದ ತಪ್ಪಿಸಿಕೊಂಡಿರಬೇಕು. ಇಲ್ಲವೇ ಈ ಸಾವಿನಲ್ಲಿ ಅವನ ಕೈವಾಡವೂ ಇರಬೇಕು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಊರಿನಲ್ಲಿ ತಾಯಿ ಮಗುವಿನ ಸಾವು ಎಲ್ಲರನ್ನೂ ಕಂಗೆಡಿಸಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಕರ್ನಾಟಕ
Mother-Child death : 3 ವರ್ಷದ ಮಗುವಿನ ಕತ್ತು ಹಿಸುಕಿ ಬಾವಿಗೆ ಹಾರಿದ ತಾಯಿ; ಎಷ್ಟು ಕಷ್ಟ ಅನುಭವಿಸಿದ್ದಳೋ?
Mother-child death: ಐದು ವರ್ಷಗಳಿಂದ ಆಕೆಗೆ ನೆಮ್ಮದಿ ಇರಲಿಲ್ಲ. ಈಗ ಮಗುವನ್ನೂ ಕೊಂದು ತಾನೂ ಚಿರನಿದ್ರೆಗೆ ಜಾರಿದ್ದಾಳೆ. ಆಕೆಯ ಈ ಸ್ಥಿತಿಗೆ ಕಾರಣನಾದವನು ಅವಳ ಗಂಡ ಎನ್ನುತ್ತಾರೆ ಆಕೆಯ ಮನೆಯವರು.
ಚಿಕ್ಕಬಳ್ಳಾಪುರ: ತಾಯಿಯೊಬ್ಬಳು ತನ್ನ ಮೂರು ವರ್ಷದ ಮಗುವಿನ ಕತ್ತು ಹಿಸುಕಿ ಕೊಂದು ತಾನು ಬಾವಿಗೆ ಹಾರಿ ಆತ್ಮಹತ್ಯೆ (Mother Kills daugher and self) ಮಾಡಿಕೊಂಡಿದ್ದಾಳೆ. ಕೌಟುಂಬಿಕ ಕಲಹದ (Family dispute) ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ (Mother-child death) ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ವಿರೂಪಸಂದ್ರ ಗ್ರಾಮದಲ್ಲಿ ಘಟನೆ ನಡೆದಿದೆ. ಸುಧಾಮಣಿ (32) ಎಂಬ ಮಹಿಳೆ ಮೂರು ವರ್ಷದ ಮಗು (Three year old daughter killed) ಸಾನ್ವಿಯ ಕತ್ತು ಹಿಸುಕಿ ಕೊಂದು ಬಳಿಕ ತಾನು ಅಲ್ಲೇ ಇರುವ ಬಾವಿಗೆ ಹಾರಿ ಪ್ರಾಣ (Mother jumps into well) ಕಳೆದುಕೊಂಡಿದ್ದಾಳೆ.
ಸುಧಾಮಣಿ ಹಾಗು ಪತಿ ರವಿ ನಡುವೆ ನಡುವೆ ಐದು ವರ್ಷದ ಹಿಂದೆ ಮದುವೆ ನಡೆದಿತ್ತು. ಇವರ ಮಧ್ಯೆ ಆಗಾಗ ಜಗಳ ಆಗುತ್ತಿತ್ತು. ಕೌಟುಂಬಿಕ ಕಲಹದಿಂದ ಆಕೆಗೆ ನೆಮ್ಮದಿ ಇರಲಿಲ್ಲ ಎಂದು ಹೇಳಲಾಗಿದೆ.
ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಯಿ-ಮಗಳ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಐದು ವರ್ಷದಿಂದ ಒಂದು ದಿನವೂ ನೆಮ್ಮದಿ ಇಲ್ಲ
ವಿಸ್ತಾರ ನ್ಯೂಸ್ ಜತೆ ಮಾತನಾಡಿದ ಸುಧಾಮಣಿಯ ತಾಯಿ ತನ್ನ ಮಗಳು ಕಳೆದ ಐದು ವರ್ಷಗಳಿಂದಲೂ ನೋವಿನಲ್ಲೇ ಜೀವನ ಕಳೆದಿದ್ದಾಳೆ ಎಂದರು. ಗಂಡ ರವಿ, ಮನೆಯವರು ಚಿತ್ರಹಿಂಸೆ ನೀಡಿದ್ದಾರೆ ಎಂದರು.
ಕುಡಿದು ಬಂದು ಗಲಾಟೆ ಮಾಡುತ್ತಿದ್ದ ರವಿ ಕೆಲವೊಮ್ಮೆ ಮೂರ್ನಾಲ್ಕು ದಿನವೂ ಬರುತ್ತಲೇ ಇರಲಿಲ್ಲ. ಕೊನೆಗೆ ನಾವೇ ಹೋಗಿ ಫೋನ್ ಮಾಡಿ ಕರೆಸಿ ರಾಜೀ ಮಾಡುತ್ತಿದ್ದೆವು. ಅವನು ಮನೆಗೆ ಬಂದರೂ ನೆಮ್ಮದಿ ಇಲ್ಲ, ಬಾರದಿದ್ದರೆ ದಿಕ್ಕಿಲ್ಲ ಎಂಬ ಸ್ಥಿತಿಯಲ್ಲಿದ್ದಳು ಸುಧಾಮಣಿ ಎಂದರು.
ಹಾಗಂತ ನಿನಗೆ ಈ ನರಕ ಬೇಡ, ನಮ್ಮ ಮನೆಗೆ ಬಂದು ಬಿಡು ಎಂದು ಕೇಳಿದರೂ ಆಕೆ ಕೇಳುತ್ತಿರಲಿಲ್ಲ. ನಿಮಗೆ ಭಾರವಾಗಿ ಬದುಕುವುದಿಲ್ಲ ಅನ್ನುತ್ತಿದ್ದಳು. ಈಗ ಅವಳೇ ಹೋಗಿಬಿಟ್ಟಿದ್ದಾಳೆ. ಪುಟ್ಟ ಮಗುವೂ ಇಲ್ಲ ಎಂದು ನೋವಿನಿಂದ ಹೇಳಿದರು.
ಕುತ್ತಿಗೆ ಹಿಸುಕಿ ಚಾಪೆಯಲ್ಲಿ ಮಲಗಿಸಿ…
ಶನಿವಾರ ಬೆಳಗ್ಗೆ 10 ಗಂಟೆಯ ಹೊತ್ತಿಗೆ ಸುಧಾಮಣಿ ಮನೆಯಿಂದ ಹೊರ ಹೋಗಿದ್ದನ್ನು ಕೆಲವರು ನೋಡಿದ್ದಾರೆ. ಆದರೆ, ಆಕೆ ಮರಳಿ ಬಂದಿಲ್ಲ. ಎಷ್ಟು ಹೊತ್ತಾದರೂ ಬಂದಿಲ್ಲವಲ್ಲ, ಮಗು ಏನು ಮಾಡುತ್ತಿದೆ ಎಂದು ಒಳಗೆ ಇಣುಕಿ ನೋಡಿದರೆ ಅದು ಚೆನ್ನಾಗಿ ನಿದ್ದೆ ಮಾಡಿದಂತೆ ಮಲಗಿದೆ. ಆದರೂ ಸಂಶಯದಿಂದ ಅಕ್ಕಪಕ್ಕದವರು ಹೋಗಿ ನೋಡಿದರೆ ಮಗು ಮಲಗಿದ್ದು ನಿಜ. ಆದರೆ ಜೀವ ಇರಲಿಲ್ಲ.
ಬಹುಶಃ ಸುಧಾಮಣಿ ಮಗುವನ್ನು ಕತ್ತು ಹಿಸುಕಿ ಕೊಂದು ಹಾಗೇ ಚಾಪೆಯಲ್ಲಿ ಮಲಗಿಸಿ, ಅದರ ಮೇಲೊಂದು ಬಟ್ಟೆಯನ್ನು ಹಾಸಿ ಹೋಗಿದ್ದಾಳೆ ಅನಿಸುತ್ತದೆ. ಈ ನಡುವೆ ಸುಧಾಮಣಿ ಎಲ್ಲಿದ್ದಾಳೆ ಎಂದು ಹುಡುಕಿದರೆ ಆಕೆಯ ಚಪ್ಪಲಿ ಅಲ್ಲಿನ ಒಂದು ಬಾವಿಯ ಬಳಿ ಕಾಣಿಸಿದೆ. ಬಗ್ಗಿ ನೋಡಿದರೆ ಒಳಗೆ ಸುಧಾಮಣಿಯ ಶವ ಕಾಣಿಸಿದೆ. ಅದನ್ನು ಮೇಲೆತ್ತಲಾಗಿದೆ.
ಇದನ್ನೂ ಓದಿ: Suspicious death : ಮನೆಯಲ್ಲಿ ನೇತಾಡುತ್ತಿತ್ತು ಹೆಂಡ್ತಿ ಶವ; ಚಿತೆಯ ಫೋಟೊ ಹಾಕಿದ ಗಂಡ!
ಕಣ್ಮರೆಯಾಗಿದ್ದಾನೆ ರವಿ, ಅವನ ಕೈವಾಡವಿದೆಯಾ?
ಈ ನಡುವೆ, ಸುಧಾಮಣಿಯ ಪತಿ ರವಿ ಘಟನೆ ನಡೆದು ಹಲವು ಗಂಟೆಗಳೇ ಕಳೆದರೂ ನಾಪತ್ತೆಯಾಗಿದ್ದಾನೆ. ಇಡೀ ಊರಿಗೇ ವಿಷಯ ಗೊತ್ತಾಗಿದೆ. ಹಾಗಿದ್ದರೂ ಅವನು ಬಂದಿಲ್ಲ ಎಂದರೆ ಒಂದೋ ಅವನು ಭಯದಿಂದ ತಪ್ಪಿಸಿಕೊಂಡಿರಬೇಕು. ಇಲ್ಲವೇ ಈ ಸಾವಿನಲ್ಲಿ ಅವನ ಕೈವಾಡವೂ ಇರಬೇಕು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಊರಿನಲ್ಲಿ ತಾಯಿ ಮಗುವಿನ ಸಾವು ಎಲ್ಲರನ್ನೂ ಕಂಗೆಡಿಸಿದೆ.
ಕರ್ನಾಟಕ
Cauvery Protest : ಸೆ. 26ರಂದು ಬೆಂಗಳೂರು ಬಂದ್; 150ಕ್ಕೂ ಅಧಿಕ ಸಂಘಟನೆಗಳ ಜಂಟಿ ಕರೆ, ಸ್ತಬ್ಧವಾಗಲಿದೆ ರಾಜಧಾನಿ
Cauvery Protest : ಸೆ. 26ರಂದು ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದೆ. ಅಂದು ಯಾವುದೇ ರೀತಿಯ ವ್ಯಾಪಾರ, ವಹಿವಾಟು, ಸಂಚಾರ, ಸಾರಿಗೆ, ಶಾಲೆ, ಕಾಲೇಜು ಇರುವುದಿಲ್ಲ ಎಂದು ಸಂಯೋಜಕರು ಹೇಳಿದ್ದಾರೆ.
ಬೆಂಗಳೂರು: ಕಾವೇರಿ ನೀರಿನ ಉಳಿವಿಗಾಗಿ ಸೆಪ್ಟೆಂಬರ್ 26ರಂದು (ಮಂಗಳವಾರ) ಬೆಂಗಳೂರು ಬಂದ್‌ಗೆ (Bangalore bandh on September 26) ಕರೆ ನೀಡಲಾಗಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ (Freedom Park Bangalore) ಕರ್ನಾಟಕ ಜಲ ಸಂರಕ್ಷಣಾ ಸಮಿತಿ (Karnataka Jala Samrakshana Samiti) ನೇತೃತ್ವದಲ್ಲಿ ಶನಿವಾರ ನಡೆದ ಬೃಹತ್ ಪ್ರತಿಭಟನಾ ಮತ್ತು ಸಮಾಲೋಚನಾ ಸಭೆಯಲ್ಲಿ (Cauvery Protest) ಸೆಪ್ಟೆಂಬರ್ 26ರಂದು ಬಂದ್‌ಗೆ ಕರೆ ನೀಡಲು ನಿರ್ಧರಿಸಲಾಯಿತು. ಸುಮಾರು 150ಕ್ಕೂ ಅಧಿಕ ಸಂಘಟನೆಗಳು ಈ ಬಂದ್‌ಗೆ ಬೆಂಬಲ ನೀಡಲಿದೆ ಎಂದು ಪ್ರಕಟಿಸಲಾಗಿದೆ.
ಕರ್ನಾಟಕ ಜಲಸಂರಕ್ಷಣಾ ಸಮಿತಿಯಿಂದ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಮಹತ್ವದ ಸಭೆಯಲ್ಲಿ ಬೆಂಗಳೂರಿನ ಪ್ರಮುಖ ಅಪಾರ್ಟ್ ಮೆಂಟ್ ಅಸೋಸಿಯೇಷನ್, ಲೇಔಟ್ ಅಸೋಸಿಯೇಷನ್, ಹೋಟೆಲ್ ಮಾಲೀಕರ ಸಂಘ, ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು, ಐಟಿ ಕಂಪನಿಗಳು ಭಾಗಿಯಾಗಿದ್ದವು.
ಆಮ್ ಆದ್ಮಿ ಪಾರ್ಟಿಯ ಮುಖ್ಯಮಂತ್ರಿ ಚಂದ್ರು (Mukhyamantri Chandru), ರೈತ ಮುಖಂಡ ಕುರುಬೂರು ಶಾಂತಕುಮಾರ್ (Kuruburu Shantakumar), ಬಿಬಿಎಂಪಿ ನೌಕರರ ಸಂಘದ ಅಧ್ಯಕ್ಷ ಅಮೃತ್ ರಾಜ್, ಜಯ ಕರ್ನಾಟಕ ಸಂಘಟನೆ ಮುಖಂಡರು, ಶಾಶ್ವತ ನೀರಾವರಿ ಹೋರಾಟ ಸಮಿತಿ, ಜಲ ಸಂರಕ್ಷಣಾ ಸಮಿತಿ ಮುಖಂಡರಿಂದ ಅಭಿಪ್ರಾಯ ಮಂಡನೆಯಾದ ಬಳಿಕ ಸೆ. 26ರಂದು ಬಂದ್‌ಗೆ ಕರೆ ನೀಡಲು ನಿರ್ಧರಿಸಲಾಯಿತು.
ರಾಜಸ್ತಾನಿ ಸಂಘಟನೆಗಳ ಒಕ್ಕೂಟದಿಂದಲೂ ಕಾವೇರಿ ಹೋರಾಟಕ್ಕೆ ಸಾಥ್
ʻʻಬಂದ್ ಮಾಡಿದ್ರೆ ನಾವು ಬೆಂಬಲ ಕೊಡ್ತೇವೆ. ಯಾಕೆಂದರೆ ಕಾವೇರಿ ಋಣ ನಮ್ಮ ಮೇಲೆಯೂ ಇದೆ. ಅದಕ್ಕಾಗಿ ನಾವು ಈ ಹೋರಾಟಕ್ಕೆ ಬೆಂಬಲ ಕೊಡ್ತೀವೆʼʼ ಎಂದ ರಾಜಸ್ತಾನಿ ಸಂಘಟನೆ ಮುಖ್ಯಸ್ಥರು ಹೇಳಿದರು.
ಮಂಗಳವಾರದ ಬಂದ್ ಹೇಗಿರಲಿದೆ?
ಸಂಘಟನೆಗಳ ನಾಯಕರು ಮಾಡಿರುವ ಪ್ಲ್ಯಾನ್ ಪ್ರಕಾರ ಮುಂದಿನ ಮಂಗಳವಾರ ಎಲ್ಲಾ ಸಾರ್ವಜನಿಕ ಸೇವೆಗಳು ಸ್ಥಗಿತವಾಗಲಿವೆ.
-ಅಂಗಡಿ ಮುಂಗಟ್ಟುಗಳು ಬಂದ್
– ಎಲ್ಲ ರೀತಿಯ ಸಂಚಾರ ವ್ಯವಸ್ಥೆ ಸ್ಥಗಿತ
-ಶಾಲಾ ಕಾಲೇಜ್, ಸರ್ಕಾರಿ ಕಚೇರಿ ಕಾರ್ಯ ಚಟುವಟಿಕೆ ಸ್ಥಗಿತ
– ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಂದ್
ಹೀಗೆ ಹಾಲು, ತರಕಾರಿ, ಪತ್ರಿಕೆ, ಆಸ್ಪತ್ರೆ, ಮೆಡಿಕಲ್ ಸೇರಿದಂತೆ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲವೂ ಬಂದ್ ಆಗಬೇಕು ಎನ್ನುವುದು ಸಂಘಟಕರ ನಿರೀಕ್ಷೆಯಾಗಿದೆ.
ಅಂದು ಟೌನ್ ಹಾಲ್ ಬಳಿ ಬೃಹತ್ ಪ್ರತಿಭಟನೆ ನಡೆದು ನಂತರ ಫ್ರೀಡಂ ಪಾರ್ಕ್ ವರೆಗೂ ಮೆರವಣಿಗೆ ನಡೆಸಲಾಗುವುದು ಎಂದು ತಿಳಿಸಲಾಗಿದೆ.
ಇದನ್ನೂ ಓದಿ: Cauvery Protest : ಕಾಂಗ್ರೆಸ್ ಪಕ್ಷ ತಮಿಳುನಾಡಿನ ಏಜೆಂಟ್ ಎಂದ ಬಿಎಸ್‌ವೈ, ಬಿಜೆಪಿಯಿಂದ ಬೀದಿಗಿಳಿದು ಹೋರಾಟ
ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಜಯ ಕರ್ನಾಟಕ ಸಂಘಟನೆ
ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆ ಮತ್ತು ಸಮಾಲೋಚನೆಯಲ್ಲಿ ಪಾಲ್ಗೊಂಡ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಬಳಿಕ ಪ್ರತ್ಯೇಕವಾಗಿ ವಿಧಾನಸೌಧ ಮುತ್ತಿಗೆಗೆ ತಯಾರಿ ನಡೆಸಿದರು. ಅವರನ್ನು ಬಳಿಕ ಬಂಧಿಸಲಾಯಿತು.
-
ಕರ್ನಾಟಕ24 hours ago
Heart Attack: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಡಿಜೆ ಸದ್ದಿಗೆ ಹಾರಿಹೋಯ್ತು ಯುವಕನ ಪ್ರಾಣ!
-
ಸುವಚನ18 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕರ್ನಾಟಕ9 hours ago
Suspicious death : ಮನೆಯಲ್ಲಿ ನೇತಾಡುತ್ತಿತ್ತು ಹೆಂಡ್ತಿ ಶವ; ಚಿತೆಯ ಫೋಟೊ ಹಾಕಿದ ಗಂಡ!
-
ದೇಶ13 hours ago
Kamal Haasan: ಸನಾತನ ಧರ್ಮದ ವಿಷಯದಲ್ಲಿ ‘ಮಗು’ ಉದಯನಿಧಿ ಮೇಲೆ ದಾಳಿ ಎಂದ ಕಮಲ್ ಹಾಸನ್
-
ವೈರಲ್ ನ್ಯೂಸ್4 hours ago
Viral Video : ಅಬ್ಬಾ ಏನು ಧೈರ್ಯ; ವೇಗವಾಗಿ ಚಲಿಸುತ್ತಿದ್ದ ಟ್ರಕ್ನ ಚಕ್ರದ ಪಕ್ಕದಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆದ !
-
ಅಂಕಣ17 hours ago
ವಿಸ್ತಾರ ಅಂಕಣ: ಮಣ್ಣು ಬರೀ ಮಣ್ಣಲ್ಲ, ಅದು ನಮ್ಮ ಭಾವಕೋಶ, ನಾವು ಮಣ್ಣಿನ ಮಕ್ಕಳು!
-
ದೇಶ23 hours ago
‘ದ್ವೇಷದ ಸಂತೆಯಲ್ಲಿ ಪ್ರೀತಿಯ ಅಂಗಡಿ’! ಡ್ಯಾನಿಶ್ ಅಲಿಯನ್ನು ಭೇಟಿಯಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
-
South Cinema6 hours ago
Silk Smitha: ಸಿಲ್ಕ್ ಸ್ಮಿತಾ ಶವದ ಮೇಲೆ ಅತ್ಯಾಚಾರ ; ನಟಿಯ ಪುಣ್ಯತಿಥಿಯಂದು ಅಚ್ಚರಿಯ ಸತ್ಯ ಹೊರಬಿತ್ತು!