An MTech graduate who wanted to live in a village and became a farmerVillage life : ಎಂಟೆಕ್‌ ಓದಿದ್ದರೂ ಕೃಷಿಕನಾದ ಯುವಕ, ಫ್ಲ್ಯಾಟ್‌ನಿಂದ ಹಳ್ಳಿಗೆ ಬಂದ ಯುವತಿ

ಕೃಷಿ

Village life : ಎಂಟೆಕ್‌ ಓದಿದ್ದರೂ ಕೃಷಿಕನಾದ ಯುವಕ, ಫ್ಲ್ಯಾಟ್‌ನಿಂದ ಹಳ್ಳಿಗೆ ಬಂದ ಯುವತಿ

Village life ಸಾಮಾನ್ಯವಾಗಿ ಹಳ್ಳಿಗಳಿಂದ ನಗರಕ್ಕೆ ಯುವಜನರ ವಲಸೆ ಹೆಚ್ಚುತ್ತಿರುವ ಸಂದರ್ಭವಿದು. ಆದರೆ ಅಪರೂಪಕ್ಕೆ ನಗರದಿಂದ ಹಳ್ಳಿಗೆ ಬಂದು ನೆಲಸುವ ಹಾಗೂ ಕೃಷಿ ಪರಂಪರೆಯನ್ನು ಉಳಿಸಿ ಬೆಳೆಸುವವರೂ ಇದ್ದಾರೆ. ಅಂಥ ಒಂದು ಉದಾಹರಣೆ ಇಲ್ಲಿದೆ.

VISTARANEWS.COM


on

village life
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸಾಮಾನ್ಯವಾಗಿ ಹಳ್ಳಿಗಳಲ್ಲಿ ಯುವ ಜನತೆ ಉಳಿಯುತ್ತಿಲ್ಲ, ಅವುಗಳು ವೃದ್ಧಾಶ್ರಮಗಳಾಗುತ್ತಿವೆ. ಈಗಿನ ಹುಡುಗ-ಹುಡುಗಿಯರೆಲ್ಲ ನಗರ, ಪಟ್ಟಣ ಸೇರುತ್ತಿದ್ದಾರೆ. ಓದಿ ಯಾವುದಾದರೂ ಕಂಪನಿಯಲ್ಲಿ ಕೆಲಸಕ್ಕೆ ಸೇರಿ ಅಲ್ಲಿಯೇ ಲೈಫ್ಟ್‌ ಸೆಟ್ಲ್‌ ಮಾಡಿಕೊಳ್ಳುತ್ತಾರೆ. ಇದರ ಪರಿಣಾಮ ಹಳ್ಳಿಗಳಲ್ಲಿ (Village life) ಯುವ ಜನತೆಯನ್ನೇ ಕಾಣಲು ಸಿಗುತ್ತಿಲ್ಲ. ಹಳ್ಳಿಗಳಲ್ಲೂ ಯುವ ರೈತರಿಗೆ ಸ್ಥಿತಿವಂತರಾಗಿದ್ದರೂ ಮದುವೆಯಾಗಲು ಹೆಣ್ಣು ಕೊಡುವವರಿಲ್ಲ ಎಂಬ ಅಳಲು ಸಾಮಾನ್ಯ. ಆದರೆ ಪ್ರವಾಹದ ವಿರುದ್ಧ ಈಜುವವರೂ ಇದ್ದಾರೆ.

ಇದು ಅಂಥ ಒಂದು ಉದಾಹರಣೆ. ಈ ಬಗ್ಗೆ ಲೇಖಕ ಹಾಗೂ ಸಾಮಾಜಿಕ ಚಿಂತಕ ಮಹೇಶ್‌ ಪುಚ್ಚಪ್ಪಾಡಿ ಅವರು ಜಾಲತಾಣದಲ್ಲೊಂದು ಪೋಸ್ಟ್‌ ಮಾಡಿದ್ದಾರೆ. ಅವರ ಸ್ನೇಹಿತ ಸುಬ್ರಹ್ಮಣ್ಯ ಪ್ರಸಾದ ಎಂಬವರ ವಿವಾಹ ಇತ್ತೀಚೆಗೆ ನೆರವೇರಿತು. ವಿಶೇಷ ಎಂದರೆ ಎಂಟೆಕ್‌ ಓದಿರುವ ಸುಬ್ರಹ್ಮಣ್ಯ ಪ್ರಸಾದ ಅವರು ಆಧುನಿಕ ಕೃಷಿಯ ಬಗ್ಗೆ ಅಪಾರ ಆಸಕ್ತಿ, ಒಲವು ಹೊಂದಿರುವವರು. ಕೃಷಿ ಸಂಸ್ಕೃತಿಯನ್ನು ಉಳಿಸಬೇಕು ಎಂಬ ತುಡಿತ ಇರುವವರು. ಎಲ್ಲರೂ ವಿದ್ಯಾವಂತರಾಗಿ ನಗರಕ್ಕೆ ತೆರಳಿದರೆ ಸುಬ್ರಹ್ಮಣ್ಯ ಪ್ರಸಾದ ಅವರು ನಗರದಿಂದ ಹಳ್ಳಿಗೆ ಮರಳಿದ್ದಾರೆ. ಪತ್ನಿಯೂ ನಗರ ಬಿಟ್ಟು ಹಳ್ಳಿಗೆ ಮರಳಿದ್ದಾರೆ.

ಮಹೇಶ್‌ ಪುಚ್ಚಪ್ಪಾಡಿ ಹೀಗೆ ವಿವರಿಸಿದ್ದಾರೆ- ನನ್ನ ಮಿತ್ರ, ಹಿತೈಷಿ ನನ್ನೂರಿನ ಸುಬ್ರಹ್ಮಣ್ಯ ಪ್ರಸಾದ ಅವರ ವಿವಾಹ ಕಾರ್ಯಕ್ರಮ. ಹುಡುಗ ಎಂಟೆಕ್‌ ಪದವೀಧರ. ಕೆಲವು ಸಮಯ ಉಪನ್ಯಾಸಕನಾಗಿ ಕೆಲಸ ಮಾಡಿದ್ದ. ಕೃಷಿ ಭೂಮಿ ಉಳಿಸಬೇಕು, ಬೆಳೆಸಬೇಕು ಎಂದು ಕೃಷಿಗೆ ಬಂದ. ಎಲ್ಲೇ ಕೃಷಿ ಕಾರ್ಯಕ್ರಮ ಇರಲಿ ಅಲ್ಲಿನ ಮಾಹಿತಿ ಪಡೆಯುತ್ತಾನೆ ಆಧುನಿಕ ಕೃಷಿಯ ಬಗ್ಗೆ ಅಧ್ಯಯನ ಮಾಡುತ್ತಾನೆ. ಕೃಷಿ, ಭಾರತೀಯ ಸಂಪ್ರದಾಯ, ಪರಂಪರೆ ಎಂಬ ಸಿದ್ಧಾಂತದ ಅನುಯಾಯಿಯೂ ಆಗಿದ್ದ. ಕೃಷಿಯಲ್ಲಿ ತೊಡಗಿಸಿಕೊಂಡ ಕೆಲ ಸಮಯದ ಬಳಿಕ ವೈವಾಹಿಕ ಬದುಕಿಗೆ ಕಾಲಿಡುತ್ತಿದ್ದಾನೆ. ಎಷ್ಟೇ ವಿದ್ಯಾವಂತನಾದರೂ ಕೃಷಿಯಲ್ಲಿ ಸಾಕಷ್ಟು ಆದಾಯ ಇದ್ದರೂ ಕೃಷಿಕನ ಕಡೆಗೆ ಮನಸ್ಸು ಮಾಡದ ಸಮಾಜ ಇದು. ಈ ಎಲ್ಲಾ ಸವಾಲುಗಳ ನಡುವೆ ಈತನಿಗೆ ಮಂಗಳೂರು ನಗರದಲ್ಲಿರುವ ಯುವತಿಯ ಜೊತೆ ವಿವಾಹ.

ಪ್ರವಾಹದ ವಿರುದ್ಧದ ಆಯ್ಕೆ ಇಬ್ಬರದೂ. ಎಲ್ಲರೂ ವಿದ್ಯಾವಂತರಾಗಿ ನಗರಕ್ಕೆ ತೆರಳಿದರೆ, ಸುಬ್ರಹ್ಮಣ್ಯ ಪ್ರಸಾದ ಕಲಿತು ಕೃಷಿಗೆ ಬಂದ. ಹಳ್ಳಿಯಿಂದ ನಗರದ ಪ್ಲಾಟ್‌ ಗೆ ತೆರಳುವ ಹುಡುಗಿಯರು ಹೆಚ್ಚಾಗಿರುವಾಗ ಪ್ಲಾಟ್‌ ನಿಂದ ಹಳ್ಳಿಗೆ ಬಂದ ಯುವತಿ. ಇಬ್ಬರ ಆಯ್ಕೆಯೂ ಪ್ರವಾಹದ ವಿರುದ್ಧ. ಸವಾಲುಗಳ ನಡುವೆಯೂ ಹಳ್ಳಿಯಲ್ಲಿ ಬದುಕು ಕಟ್ಟಿಕೊಳ್ಳುವುದು ಸುಲಭ. ಸುಬ್ರಹ್ಮಣ್ಯ ಪ್ರಸಾದ ಈ ಸವಾಲನ್ನು ಮೊದಲೇ ತೆಗೆದುಕೊಂಡಿದ್ದಾನೆ. ಅದು ಅವನಿಗೆ ಅನಿವಾರ್ಯವೂ ಆಗಿರಬಹುದು. ಆದರೆ ಎಂಟೆಕ್‌ ಪದವಿಯಾಗಿ ಹಳ್ಳಿಯಲ್ಲಿ ನಿಲ್ಲುವ ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳುವುದು ಸುಲಭ ಅಲ್ಲ. ಅವನ ಹುಡುಗಿಯೂ ಅಂತಹದ್ದೇ ನಿರ್ಧಾರ ತೆಗೆದುಕೊಂಡಿರಬೇಕು.

ಈಗ ಸಮಾಜ ಮಾಡಬೇಕಾದ್ದು ಇಷ್ಟೇ, ಅವರ ಜೊತೆ ಮಾತನಾಡುವಾಗ, ನೀನೇನು ಹಳ್ಳಿಗೆ ಬಂದೆ , ನೀನೇನು ಹಳ್ಳಿಯಲ್ಲಿ ಉಳಿದೆ, ಎಂತ ಕೆಲಸ , ಕಷ್ಟ ಆಗಲಿಕ್ಕಿಲ್ಲವಾ ? ಹೀಗೇ ಹತ್ತಾರು ಪ್ರಶ್ನೆ ಕೇಳಿ ಅವರನ್ನು ಮಾನಸಿಕವಾಗಿ ಸೋಲಿಸಬೇಡಿ. ಅವರ ಇಬ್ಬರ ಆಯ್ಕೆ ಸರಿಯಾಗಿದೆ. ನಾವೆಲ್ಲಾ ಇದನ್ನು ಆದರ್ಶ ಎಂದು ಹೇಳಬೇಕಾಗಿಲ್ಲ, ಮಾದರಿ ಅಂತ ಹೇಳೋಣ ಅಷ್ಟೇ. ಆದರ್ಶ ಏಕೆ ಅಲ್ಲ ಅಂದರೆ, ಎಲ್ಲರೂ ಈ ರೀತಿ ಮಾಡಲಾರರು. ಮಾದರಿ ಏಕೆಂದರೆ ಸವಾಲನ್ನು ಮೆಟ್ಟಿ ಅವರು ಕೈಗೊಂಡ ನಿರ್ಧಾರ. ಗ್ರಾಮೀಣ ಭಾರತದಲ್ಲಿ ಇಂತಹ ಯುವ ಮನಸ್ಸುಗಳು ಹೆಚ್ಚಾಗಲಿ ಎನ್ನುವ ಆಶಯ ವ್ಯಕ್ತಪಡಿಸೋಣ. ಹೀಗೆ ವಿವರಿಸಿದ್ದಾರೆ ಲೇಖಕ ಮಹೇಶ್‌ ಪುಚ್ಚಪ್ಪಾಡಿ.

ಇದನ್ನೂ ಓದಿ:ಗೋ ಸಂಪತ್ತು: ದುಡಿಮೆಗೆ ಮತ್ತು ಉತ್ಕೃಷ್ಟ ಹಾಲಿಗೆ ಹೆಸರಾದ ಹಳ್ಳಿಕಾರ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

CM Siddaramaiah : ರೈತ ವಿರೋಧಿ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ; ಸಿದ್ದರಾಮಯ್ಯ ಭರವಸೆ

CM Siddaramaiah : ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ. ಅವರು ರೈತ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

VISTARANEWS.COM


on

CM Siddaramaiah Pro Nanjundaswamy
Koo

ಬೆಂಗಳೂರು: ರೈತರು ನೀಡಿದ ಹಕ್ಕೊತ್ತಾಯಗಳನ್ನು (Demands of Farmers) ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕೇಂದ್ರದ ಬಿಜೆಪಿ ಸರ್ಕಾರ ಜಾರಿ ಮಾಡಿರುವ ರೈತ ವಿರೋಧಿ “ಭೂ ಸುಧಾರಣಾ ಕಾಯ್ದೆ 2020″ಕ್ಕೆ (Land Reform Act 2020) ತಿದ್ದುಪಡಿ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಭರವಸೆ ನೀಡಿದರು.

ಕರ್ನಾಟಕ ರಾಜ್ಯ ರೈತ ಸಂಘ ಫ್ರೀಡಂ ಪಾರ್ಕ್ ನಲ್ಲಿ ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ 88ನೇ ಜನ್ಮ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ರೈತ ಸಮಾವೇಶವನ್ನು ಉದ್ಘಾಟಿಸಿದ ಬಳಿಕ ರೈತ ಪರ ಬಜೆಟ್ ರೂಪಿಸಲು ರೈತ ಸಂಘ ನೀಡಿದ ಹಕ್ಕೊತ್ತಾಯಗಳನ್ನು ಸ್ವೀಕರಿಸಿ ಮಾತನಾಡಿದರು.

CM Siddaramaiah Pro Nanjundaswamy

ನಂಜುಂಡಸ್ವಾಮಿಯವರು ಸಂಘಟಿಸಿದ ಸ್ಟಡಿ ಸರ್ಕಲ್ ಮೂಲಕ ಹಲವು ವಿಚಾರಗಳ ಒಳನೋಟ ದೊರೆಯಿತು. ಸಮಾಜವಾದಿ ಆರ್ಥಿಕತೆ, ಸಮಾಜವಾದಿ ರಾಜಕಾರಣದ ಬಗ್ಗೆ ಸ್ಪಷ್ಟತೆ ಸಿಕ್ಕಿತು. ಈ ಸ್ಟಡಿ ಸರ್ಕಲ್ ಗೆ ಬಹಳ ಮಂದಿ ಉಪನ್ಯಾಸಕರು, ಪ್ರೊಫೆಸರ್ ಗಳು, ಸಾಹಿತಿಗಳು ಬರುತ್ತಿದ್ದರು. ಇವರೆಲ್ಲರ ಮಾರ್ಗದರ್ಶನ ನನಗೆ ಅನುಕೂಲವಾಯಿತು ಎಂದರು.

ನಂಜುಂಡಸ್ವಾಮಿಯವರು ಕಡೆಯವರೆಗೂ ರೈತರ ಪರವಾಗಿ ಕ್ರಿಯಾಶೀಲವಾಗಿದ್ದರು. ಸಮಾಜವಾದಿ ಆಶಯಗಳ ಪರವಾಗಿದ್ದ ಇವರು ಬೆಳೆಸಿದ ರೈತ ಚಳವಳಿ ರೈತರ ಸಮಸ್ಯೆ ಪರಿಹಾರಕ್ಕೆ ಆಸರೆ ಆಯಿತು. ರೈತ ಹೋರಾಟ ಮತ್ತು ರೈತ ಸಮಾವೇಶಗಳಲ್ಲಿ ಭಾಗವಹಿಸುವುದು ನನಗೂ ಬಹಳ ಸಂತಸ ಮತ್ತು ಹೆಮ್ಮೆಯ ವಿಷಯ. ನಂಜುಂಡಸ್ವಾಮಿ ಮತ್ತು ರೈತ ಹೋರಾಟ ಸಮಾಜ ಮತ್ತು ಸರ್ಕಾರಗಳ ಮೇಲೆ ಪರಿಣಾಮ ಬೀರಿದೆ ಎಂದರು. ನಂಜುಂಡ ಸ್ವಾಮಿಯವರ ರೈತ ಹೋರಾಟ ನನಗೆ ರಾಜಕೀಯ ಪ್ರೇರಣೆ ಎಂದು ಮುಖ್ಯಮಂತ್ರಿ ಸಿ.ಎಂ.ಸಿದ್ದರಾಮಯ್ಯ ಅವರು ಇದೇ ಸಂದರ್ಭದಲ್ಲಿ ಸ್ಮರಿಸಿದರು.

CM Siddaramaiah Pro Nanjundaswamy

ಇದನ್ನೂ ಓದಿ : CM Janaspandana: ಒಂದು ತಿಂಗಳೊಳಗೆ ಜನ ಸ್ಪಂದನೆ ಅರ್ಜಿ ಬಗೆಹರಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ

ಬಡಗಲಾಪುರ ನಾಗೇಂದ್ರ ಅವರು ಅಧ್ಯಕ್ಷತೆ ವಹಿಸಿದ್ದ ರೈತ ಸಮಾವೇಶದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರಾದ ಆಳಂದ ಶಾಸಕ ಬಿ.ಆರ್. ಪಾಟೀಲ್, ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ದಲಿತ ಮುಖಂಡ ಮಾವಳ್ಳಿ ಶಂಕರ್, ಹಿಂದುಳಿದ ಮತ್ತು ಶೋಷಿತ ಸಮುದಾಯಗಳ ಒಕ್ಕೂಟದ ಅಧ್ಯಕ್ಷರಾದ ರಾಮಚಂದ್ರಪ್ಪ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಸಂಚಾಲಕರಾದ ಕುಮಾರ್ ಸಮತಳ ಸೇರಿ ಹಲವು ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು

Continue Reading

ದೇಶ

Bharat Ratna: ದೇಶದ ಹಸಿವು ನೀಗಿಸಿದ `ಹಸಿರು ಕ್ರಾಂತಿ’ಯ ಪಿತಾಮಹನಿಗೆ ಭಾರತ ರತ್ನ ಗೌರವ

Bharat Ratna: ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂದೇ ಗುರುತಿಸಿಕೊಂಡಿದ್ದ ಖ್ಯಾತ ವಿಜ್ಞಾನಿ ಡಾ.ಎಂ.ಎಸ್‌. ಸ್ವಾಮಿನಾಥನ್‌ ಅವರಿಗೆ ಕೇಂದ್ರ ಸರ್ಕಾರ ಇಂದು ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಿದೆ.

VISTARANEWS.COM


on

swaminathan
Koo

ನವದೆಹಲಿ: ಭಾರತದ ಹಸಿರು ಕ್ರಾಂತಿಯ (Green revolution) ಪಿತಾಮಹ ಎಂದೇ ಗುರುತಿಸಿಕೊಂಡಿದ್ದ ಖ್ಯಾತ ವಿಜ್ಞಾನಿ ಡಾ.ಎಂ.ಎಸ್‌.ಸ್ವಾಮಿನಾಥನ್‌ (M.S.Swaminathan) ಅವರಿಗೆ ಕೇಂದ್ರ ಸರ್ಕಾರ ಇಂದು ಭಾರತ ರತ್ನ (Bharat Ratna)ಪ್ರಶಸ್ತಿಯನ್ನು ಘೋಷಿಸಿದೆ. ಆಗಸ್ಟ್ 7, 1925ರಂದು ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ ಜನಿಸಿದ್ದ ಅವರ ಪೂರ್ತಿ ಹೆಸರು ಮನ್ಕೊಂ‌ಬು ಸಾಂಬಶಿವನ್‌ ಸ್ವಾಮಿನಾಥನ್‌. ಕಳೆದ ವರ್ಷ ಸೆಪ್ಟೆಂಬರ್‌ 28ರಂದು ತಮ್ಮ 98ನೇ ವಯಸ್ಸಿನಲ್ಲಿ ನಿಧನ ಹೊಂದಿದ ಅವರಿಗೆ ಮರಣೋತ್ತರವಾಗಿ ಭಾರತ ಈ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಎಂ.ಎಸ್.ಸ್ವಾಮಿನಾಥನ್ ಅವರು ಹೆಚ್ಚು ಇಳುವರಿ ನೀಡುವ ಭತ್ತದ ತಳಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದು ಭಾರತದ ಕಡಿಮೆ ಆದಾಯದ ರೈತರು ಹೆಚ್ಚಿನ ಇಳುವರಿಯನ್ನು ಉತ್ಪಾದಿಸಲು ಸಹಾಯ ಮಾಡಿದ್ದಲ್ಲದೆ, ಆ ದಿನಗಳ ಭಾರತದ ಜನಸಂಖ್ಯೆಯ ಬೆಳವಣಿಗೆಗೆ ತಕ್ಕಂತೆ ಸಾಕಷ್ಟು ಆಹಾರ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ಸ್ವಾಮಿನಾಥನ್ ಅವರು ವಿವಿಧ ಇಲಾಖೆಗಳಲ್ಲಿ ಹಲವು ಕಾಲ ಸೇವೆ ಸಲ್ಲಿಸಿದ್ದಾರೆ. ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ನಿರ್ದೇಶಕ (1961-72), ICARನ ಡೈರೆಕ್ಟರ್ ಜನರಲ್, ಭಾರತ ಸರ್ಕಾರದ ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆ ಕಾರ್ಯದರ್ಶಿ (1972-79), ವಿಜ್ಞಾನ ಮತ್ತು ಕೃಷಿ ಇಲಾಖೆ ಆಕ್ಟಿಂಗ್ ಡೆಪ್ಯುಟಿ ಚೇರ್ಮನ್ ಮತ್ತು ನಂತರ ಸದಸ್ಯ, ಯೋಜನಾ ಆಯೋಗ (1980-82), ಫಿಲಿಪೈನ್ಸ್‌ನ ಇಂಟರ್‌ನ್ಯಾಷನಲ್‌ ರೈಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಡೈರೆಕ್ಟರ್ ಜನರಲ್ (1982-88) ಆಗಿ ಸೇವೆ ಸಲ್ಲಿಸಿದ್ದರು.

2004ರಲ್ಲಿ, ಸ್ವಾಮಿನಾಥನ್ ಅವರನ್ನು ರೈತರ ಕುರಿತ ರಾಷ್ಟ್ರೀಯ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ರೈತರ ಆತ್ಮಹತ್ಯೆ ಪ್ರಕರಣಗಳ ಹಿನ್ನೆಲೆಯಲ್ಲಿ ಅವರ ಸಂಕಷ್ಟಗಳನ್ನು ಪರಿಶೀಲಿಸಲು ಆಯೋಗವನ್ನು ಸ್ಥಾಪಿಸಲಾಗಿತ್ತು. ಆಯೋಗವು 2006ರಲ್ಲಿ ವರದಿಯನ್ನು ಸಲ್ಲಿಸಿತು. ಕನಿಷ್ಠ ಬೆಂಬಲ ಬೆಲೆ (MSP) ಸರಾಸರಿ ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ 50 ಪ್ರತಿಶತದಷ್ಟು ಹೆಚ್ಚಿರಬೇಕು ಎಂದು ವರದಿ ಸೂಚಿಸಿತ್ತು.

ಕೃಷಿ ಸಚಿವಾಲಯದ ಪ್ರಧಾನ ಕಾರ್ಯದರ್ಶಿ

ಸ್ವಾಮಿನಾಥನ್ ಅವರು 1979 ಮತ್ತು 1980ರಲ್ಲಿ ಕೃಷಿ ಸಚಿವಾಲಯದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. 1980ರಿಂದ 1982ರವರೆಗೆ ಭಾರತದ ಯೋಜನಾ ಆಯೋಗದಲ್ಲಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಯ ಉಸ್ತುವಾರಿ ವಹಿಸಿದ್ದರು.

ಗೋಧಿ ತಳಿಯ ಬಗ್ಗೆ ಸಂಶೋಧನೆ

1950ರ ದಶಕದಲ್ಲಿ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಯುವ ವಿಜ್ಞಾನಿಯಾಗಿದ್ದ ಸ್ವಾಮಿನಾಥನ್ ಅವರು ಡಾ. ನಾರ್ಮನ್ ಬೋರ್ಲಾಗ್ ಅವರ ಹೊಸದಾಗಿ ಅಭಿವೃದ್ಧಿಪಡಿಸಿದ ಮೆಕ್ಸಿಕನ್ ಕುಬ್ಜ ಗೋಧಿ ತಳಿಯ ಬಗ್ಗೆ ತಿಳಿದುಕೊಂಡಿದ್ದರು. ಈ ಬಗ್ಗೆ ಆಸಕ್ತರಾದ ಅವರು ಹೆಚ್ಚಿನ ಸಂಶೋಧನೆಗಾಗಿ ಡಾ. ನಾರ್ಮನ್ ಬೋರ್ಲಾಗ್ ಅವರನ್ನು ಭಾರತಕ್ಕೆ ಆಹ್ವಾನಿಸಿದ್ದರು. ಬಳಿಕ ಇಬ್ಬರು ವಿಜ್ಞಾನಿಗಳು ಗೋಧಿ ಪ್ರಭೇದಗಳನ್ನು ಅಭಿವೃದ್ಧಿಪಡಿಸಲು ಕೆಲಸ ಮಾಡಿದ್ದರು. ಈ ತಳಿ ಹೆಚ್ಚಿನ ಇಳುವರಿ ನೀಡುತ್ತದೆ ಮತ್ತು ಸಾಕಷ್ಟು ಬಲವಾದ ಕಾಂಡದ ರಚನೆಗಳನ್ನು ಹೊಂದಿದೆ. ಇದು ಭಾರತದ ಕೃಷಿ ಲೋಕದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿತು. ನಾಲ್ಕು ಋತುಗಳಲ್ಲಿ ಗೋಧಿಯ ಒಟ್ಟು ಬೆಳೆ ಇಳುವರಿಯನ್ನು 12 ಮಿಲಿಯನ್ ಟನ್‌ಗಳಿಂದ 23 ಮಿಲಿಯನ್ ಟನ್‌ಗಳಿಗೆ ಹೆಚ್ಚಿಸುವ ಮೂಲಕ ಧಾನ್ಯ ಆಮದಿನ ಮೇಲಿನ ಭಾರತದ ಅವಲಂಬನೆಯನ್ನು ಕೊನೆಗೊಳಿಸಿತು.

ವಿವಿಧ ಪ್ರಶಸ್ತಿ

ಸ್ವಾಮಿನಾಥನ್ ಅವರ ಕೊಡುಗೆಯನ್ನು ಪರಿಗಣಿಸಿ ಹಲವು ರಾಷ್ಟ್ರೀಯ ಅಂತಾರಾಷ್ಟ್ರೀಯ ಪ್ರಶಸ್ತಿ ನೀಡಲಾಗಿದೆ. ಭಾರತದಲ್ಲಿ ಹೆಚ್ಚು ಇಳುವರಿ ನೀಡುವ ಗೋಧಿ ಮತ್ತು ಅಕ್ಕಿ ತಳಿಗಳ ಪರಿಚಯವನ್ನು ಅಭಿವೃದ್ಧಿಪಡಿಸಲು ಮತ್ತು ಮುನ್ನಡೆಸಿದ್ದಕ್ಕಾಗಿ ಅವರು 1987ರಲ್ಲಿ ಮೊದಲ ವಿಶ್ವ ಆಹಾರ ಪ್ರಶಸ್ತಿಯನ್ನು ಪಡೆದರು. 1971ರಲ್ಲಿ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಮತ್ತು 1986ರಲ್ಲಿ ಆಲ್ಬರ್ಟ್ ಐನ್‌ಸ್ಟೈನ್ ವರ್ಲ್ಡ್ ಸೈನ್ಸ್ ಪ್ರಶಸ್ತಿಯನ್ನು ಸ್ವಾಮಿನಾಥನ್‌ ಅವರಿಗೆ ನೀಡಲಾಗಿತ್ತು. 1967ರಲ್ಲಿ ಪದ್ಮಶ್ರೀ, 1972ರಲ್ಲಿ ಪದ್ಮಭೂಷಣ ಮತ್ತು 1989ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿತ್ತು. ಇದೀಗ ಭಾರತ ರತ್ನ ಪ್ರಶಸ್ತಿ ಅವರಿಗೆ ಸಂದಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಲೇಖನ: ಭಾರತದ ಆಧುನಿಕ, ಪ್ರಗತಿಪರ ಕೃಷಿಗೆ ಎಂ ಎಸ್ ಸ್ವಾಮಿನಾಥನ್ ಅಡಿಪಾಯ

Continue Reading

ಕೃಷಿ

Horticultrure Fair 2024 : ಐಐಎಚ್‌ಆರ್‌ನಲ್ಲಿ ಮಾ. 5ರಿಂದ 7ರವರೆಗೆ ತೋಟಗಾರಿಕಾ ಮೇಳ

Horticulture fair 2024 :‌ ತೋಟಗಾರಿಕಾ ಬೆಳೆಗಳನ್ನು ಇನ್ನಷ್ಟು ಸಮೃದ್ಧವಾಗಿ ಹೇಗೆ ಬೆಳೆಸಬಹುದು ಎಂಬ ಬಗ್ಗೆ ಕೃಷಿಕರಿಗೆ ಮಾಹಿತಿ ನೀಡುವ, ಸುಧಾರಿತ ತಂತ್ರಜ್ಞಾನಗಳನ್ನು ತೆರೆದಿಡುವ ರಾಷ್ಟ್ರೀಯ ತೋಟಗಾರಿಕಾ ಮೇಳ ಬೆಂಗಳೂರಿನಲ್ಲಿ ನಡೆಯಲಿದೆ. ಅದಕ್ಕೆ ಸಂಬಂಧಿಸಿದ ಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

Horticulture-fair-2024-1
Koo

ಬೆಂಗಳೂರು: ತೋಟಗಾರಿಕಾ ಕ್ಷೇತ್ರದಲ್ಲಿ ಹೊಸ ಹೊಸ ಸಂಶೋಧನೆಗಳ ಮೂಲಕ ರೈತರಿಗೆ ನೆರವಾಗುತ್ತಿರುವ, ಮುಂದಿನ ಪೀಳಿಗೆಯಲ್ಲಿ ಕೃಷಿ ಪ್ರೀತಿಯನ್ನು ಹುಟ್ಟಿಸುತ್ತಿರುವ ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (Indian Institute of Horticultural Research-IIHR) ನಡೆಸುವ ವಾರ್ಷಿಕ ರಾಷ್ಟ್ರೀಯ ತೋಟಗಾರಿಕಾ ಮೇಳ (National Horticulture Fair 2024) ಈ ಬಾರಿ ಮಾರ್ಚ್‌ 5ರಿಂದ 7ರವರೆಗೆ ಮೂರು ದಿನ ನಡೆಯಲಿದೆ (Horticultrure Fair 2024).

ತೋಟಗಾರಿಕೆಯಲ್ಲಿ ಮುಂದಿನ ಪೀಳಿಗೆಯ ತಂತ್ರಜ್ಞಾನಗಳನ್ನು ಬಳಸಿ ಸಹನೀಯ ಅಭಿವೃದ್ಧಿ ನಡೆಸುವುದು ಎಂಬ ಧ್ಯೇಯವಾಕ್ಯದೊಂದಿಗೆ ಈ ಬಾರಿಯ ತೋಟಗಾರಿಕಾ ಮೇಳ ನಡೆಯಲಿದೆ. ಸ್ಮಾರ್ಟ್‌ ಕೃಷಿ, ನಿಯಂತ್ರಿತ ವಾತಾವರಣದಲ್ಲಿ ಕೃಷಿ ಮಾಡುವುದು, ವಿಸ್ತಾರ ಭೂಮಿಯ ಬದಲು ಎತ್ತರೆತ್ತರಕ್ಕೆ ಕೃಷಿ ಬೆಳವಣಿಗೆ, ಸಂಪನ್ಮೂಲಗಳ ಗರಿಷ್ಠ ಬಳಕೆ, ಫಸಲು ಹೆಚ್ಚಿಸುವಿಕೆ ಸೇರಿದಂತೆ ಹಲವು ವಿಚಾರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳುವ ನವೀನ ವಿಧಾನಗಳನ್ನು ಇಲ್ಲಿ ಪರಿಚಯಿಸಲಾಗುತ್ತದೆ.

Horticulture-fair-2024

ಈ ಬಾರಿ ಪರಿಚಯಿಸುವ ಪ್ರಮುಖ ತಂತ್ರಜ್ಞಾನ ಆಧರಿತ ತಳಿಗಳು

  1. ಅರ್ಕ ನಿಹಿರ: ಇದೊಂದು ಬಗೆಯ ಮೆಣಸಿನ ಕಾಯಿ ಆಗಿದ್ದು, ಒಂದು ಹೆಕ್ಟೇರ್ ಪ್ರದೇಶದಲ್ಲಿ 30 ಟನ್‌ ಹಸಿರು/7.5 ಟನ್‌ ಒಣ ಮೆಣಸು ಬೆಳೆ ನೀಡುತ್ತದೆ.
  2. ಅರ್ಕ ಭೃಂಗರಾಜ್‌: ಒಂದು ಹೆಕ್ಟೇರ್‌ ಪ್ರದೇಶದಲ್ಲಿ 6ರಿಂದ 6.5 ಟನ್‌ ಉತ್ತಮ ಗುಣಮಟ್ಟದ ಭೃಂಗರಾಜವನ್ನು ಬೆಳೆಯಬಹುದು.
  3. ಅರ್ಕ ಎತ್ತರ ಬೆಳೆಯುವ ಬೆಳೆ: ಹನ್ನೊಂದು ಅಂತಸ್ತುಗಳಲ್ಲಿ ಎತ್ತರೆತ್ತರಕ್ಕೆ ಬೆಳೆಯುವ ತಂತ್ರಜ್ಞಾನ. ಇದು ಶೇಕಡಾ 80ರಷ್ಟು ನೀರಿನ ಉಳಿತಾಯ ಮಾಡುತ್ತದೆ. ಕಡಿಮೆ ಜಾಗದಲ್ಲಿ ಹೆಚ್ಚು ಬೆಳೆ ಬೆಳೆಯಬಹುದು.
  4. ಅರ್ಕ ಈರುಳ್ಳಿ ಪ್ಲ್ಯಾಂಟರ್:‌ ಒಂದು ಗಂಟೆಯಲ್ಲಿ 0.12 ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡುವ ಸಾಮರ್ಥ್ಯ ಹೊಂದಿದೆ. ಇದರಿಂದ ಶೇ. 35ರಷ್ಟು ಶ್ರಮ ಶಕ್ತಿ ಕಡಿಮೆಯಾಗುತ್ತದೆ.
  5. ವಿಟಮಿನ್‌ ಡಿ ಸಂವರ್ಧನಾ ತಂತ್ರಜ್ಞಾನ: ಕೃತಕ ಅಣಬೆ ಬೇಸಾಯದಲ್ಲಿ ಎಲ್ಲರಿಗೂ ಅಗತ್ಯವಿರುವ ವಿಟಮಿನ್‌ ಡಿ ಪೋಷಕಾಂಶವನ್ನು ಹೆಚ್ಚಿಸುವ ತಂತ್ರಜ್ಞಾನ. ಇಲ್ಲಿ ಯುವಿ-ಬಿ ಕಿರಣಗಳ ಮೂಲಕ ಅಣಬೆಯಲ್ಲಿ ವಿಟಮಿನ್‌ ಡಿ ತುಂಬಲಾಗುತ್ತದೆ.

ಇನ್ನೂ ಏನೇನಿರುತ್ತದೆ?

ಬೀಜ ಮತ್ತು ಬಿತ್ತನೆ ಸಾಮಗ್ರಿಗಳು, ನೀರಾವರಿ ವ್ಯವಸ್ಥೆಗಳು, ಐಐಎಚ್‌ಆರ್‌ ಒದಗಿಸುವ ಸೇವೆಗಳು, ಹಸಿರು ಮನೆ ನಿರ್ಮಾಣ ಮಾಹಿತಿ ಮತ್ತು ಸಲಕರಣೆಗಳು, ಸಸ್ಯ ಪೋಷಕಾಂಶಗಳು, ಕೀಟನಾಶಕಗಳು, ಆಹಾರ ಸಂಸ್ಕರಣೆ ಮತ್ತು ಪ್ಯಾಕೇಜಿಂಗ್‌ ತಂತ್ರಗಳು, ಕೃಷಿ ರಫ್ತು ಸೇವೆಗಳ ಮಾಹಿತಿ, ಹಣಕಾಸು ನೆರವು ಸಿಗುವ ಬಗ್ಗೆ ಸ್ಪಷ್ಟ ಜ್ಞಾನ, ಸಾವಯವ ಕೃಷಿ ಮತ್ತು ಮಾರುಕಟ್ಟೆ ಮಾಹಿತಿ ಸೇರಿ ಹಲವು ವಿಚಾರಗಳು ಇಲ್ಲಿ ತೆರೆದುಕೊಳ್ಳಲಿವೆ.

ಇದನ್ನೂ ಓದಿ : Budget 2024: ಕೃಷಿ, ಹೂಡಿಕೆ, ಉದ್ಯೋಗ ಸೃಷ್ಟಿಗೆ ಇದು ಬೆಸ್ಟ್‌ ಬಜೆಟ್‌: ಎಚ್.ಡಿ. ಕುಮಾರಸ್ವಾಮಿ

ಪ್ರದರ್ಶನ ಮಳಿಗೆಗಳು ಲಭ್ಯವಿವೆ

ತೋಟಗಾರಿಕಾ ಮೇಳ ನಡೆಯುವ ಸಂದರ್ಭದಲ್ಲಿ ಹಲವಾರು ಪ್ರದರ್ಶನ ಮಳಿಗೆಗಳು ಇರುತ್ತವೆ. ನೀವು ಯಾವುದಾದರೂ ವಿಭಾಗದಲ್ಲಿ ತಜ್ಞರಾಗಿದ್ದು, ರೈತರಿಗೆ ನಿಮ್ಮ ತಂತ್ರಜ್ಞಾನವನ್ನು ತೋರಿಸಬೇಕು ಎಂದು ಬಯಸಿದರೆ ಅದಕ್ಕೆ ಅವಕಾಶವಿದೆ. ಇಲ್ಲಿ ಕಡಿಮೆ ಬೆಲೆಯಲ್ಲಿ ಸ್ಟಾಲ್‌ಗಳು ಲಭ್ಯವಿವೆ. ಸ್ಟಾಲ್‌ಗಳ ಮಾಹಿತಿಯನ್ನು ಪಡೆಯಲು ಲಾಗ್‌ ಇನ್‌ ಮಾಡಿ :https://nhf2024.in ಅಥವಾ ರಾಷ್ಟ್ರೀಯ ತೋಟಗಾರಿಕಾ ಮೇಳದ ಹೆಲ್ಪ್‌ಲೈನ್‌ ನಂಬರ್‌ 9403891704ನ್ನು ಸಂಪರ್ಕಿಸಬಹುದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಲು ಇಲ್ಲಿದೆ ಸಂಪರ್ಕ ಸಂಖ್ಯೆ

ತೋಟಗಾರಿಕಾ ಮೇಳ, ಅಲ್ಲಿನ ಸ್ಟಾಲ್‌ಗಳು ಮತ್ತಿತರ ವಿಚಾರಗಳಿಗೆ ಸಂಬಂಧಿಸಿ ಐಐಎಚ್‌ಆರ್‌ನ ಪ್ರಿನ್ಸಿಪಾಲ್‌ ಸೈಂಟಿಸ್ಟ್‌ ಮತ್ತು ತೋಟಗಾರಿಕಾ ಮೇಳದ ಸಂಘಟನಾ ಕಾರ್ಯದರ್ಶಿ ಡಾ. ಎಂ.ವಿ. ಧನಂಜಯ ಅವರನ್ನು ಸಂಪರ್ಕಿಸಬಹುದು. ಅವರ ದೂರವಾಣಿ ಸಂಖ್ಯೆ: 080-28446010, ಮೊಬೈಲ್‌ ಸಂಖ್ಯೆ: 93790 79274
Email : nhf.iihr@icar.gov.in
Website : https://nhf2024.in/and https://iihr.res.in

Continue Reading

ಶಿವಮೊಗ್ಗ

Shivamogga News: ಮಣ್ಣಿನ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಡಾ. ಗಣಪತಿ

Shivamogga News: ರಿಪ್ಪನ್‌ಪೇಟೆ ಪಟ್ಟಣ ಸಮೀಪದ ಗವಟೂರು ಗ್ರಾಮದ ಕೃಷಿಕ ರಾಮಚಂದ್ರ ಅವರ ತೋಟದಲ್ಲಿ ರೋಟರಿ ಕ್ಲಬ್ ರಿಪ್ಪನ್‌ಪೇಟೆ ಹಾಗೂ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ ಇವರ ಸಹಯೋಗದಲ್ಲಿ ಮಣ್ಣೇ ಹೊನ್ನು ಕಾರ್ಯಕ್ರಮ ಜರುಗಿತು.

VISTARANEWS.COM


on

Soil conservation is everyones duty says Dr Ganapati
Koo

ರಿಪ್ಪನ್‌ಪೇಟೆ: ಮಣ್ಣಿನ ಸಂರಕ್ಷಣೆ (Soil Conservation) ಮಾಡುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಗಣಪತಿ ಹೇಳಿದರು.

ಪಟ್ಟಣ ಸಮೀಪದ ಗವಟೂರು ಗ್ರಾಮದ ಕೃಷಿಕ ರಾಮಚಂದ್ರ ಎಂಬುವವರ ತೋಟದಲ್ಲಿ ರೋಟರಿ ಕ್ಲಬ್ ರಿಪ್ಪನ್‌ಪೇಟೆ ಹಾಗೂ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ “ಮಣ್ಣೇ ಹೊನ್ನು” ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಮಣ್ಣಿನ ಫಲವತ್ತತೆ ನೈಸರ್ಗಿಕವಾದುದು, ಇತ್ತೀಚೆಗೆ ಅಧಿಕ ರಾಸಾಯನಿಕಗಳ ಬಳಕೆಯಿಂದ ಮಣ್ಣು ತನ್ನ ಫಲವತ್ತತೆಯ ಜೊತೆಗೆ ತನ್ನ ಆರೋಗ್ಯವನ್ನು ಕಳೆದುಕೊಳ್ಳುತ್ತಿದೆ ಎಂದ ಅವರು, ಇತ್ತೀಚೆಗೆ ಮಣ್ಣಿನಲ್ಲಿ ಕಂಡುಬರುತ್ತಿರುವ ಸಮಸ್ಯೆಗಳು ಹಾಗೂ ಅದರ ನಿವಾರಣೆಗೆ ಕೃಷಿಕರು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು.

ಇದನ್ನೂ ಓದಿ: Tumkur News: ಪಾವಗಡದಲ್ಲಿ ವಿಷಕಾರಿ ಸೊಪ್ಪು ಸೇವಿಸಿ 42 ಕುರಿಗಳ ಸಾವು

ಡಾ. ಕೆ.ಎಸ್. ನಿರಂಜನ್ ಮಾತನಾಡಿ , ಮಣ್ಣು ಪರೀಕ್ಷೆ ಏಕೆ ಮಾಡಬೇಕು, ಮಣ್ಣು ಮಾದರಿಯನ್ನು ವೈಜ್ಞಾನಿಕ ರೀತಿಯಲ್ಲಿ ಹೇಗೆ ತೆಗೆಯುವುದು , ಮಣ್ಣಿನಲ್ಲಿರುವ ಪೋಷಕಾಂಶಗಳ ಬಗ್ಗೆ ತಿಳಿಯುವ ಬಗೆ ಹಾಗೂ ಅಡಿಕೆ ಸಿಪ್ಪೆಯಿಂದ ಗೊಬ್ಬರ ಮಾಡುವ ವಿಧಾನದ ಮಾಹಿತಿ ನೀಡಿ, ಕೃಷಿ ಮತ್ತು ತೋಟಗಾರಿಕೆಗೆ ಸಂಭಂದಪಟ್ಟ ಯಾವುದೇ ಸಮಸ್ಯೆಯಿದ್ದಲ್ಲಿ ರೈತರು ನೇರವಾಗಿ ವಿಶ್ವವಿದ್ಯಾಲಯವನ್ನು ಸಂಪರ್ಕಿಸಬಹುದು ಆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳುವುದರ ಜತೆಗೆ ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಆರ್ಥಿಕ ಅಭಿವೃದ್ಧಿ ಹೊಂದಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರೈತರಿಗೆ ಮಣ್ಣಿನ ಮಾದರಿ ತೆಗೆಯುವ ಬಗ್ಗೆ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು. ರೋಟರಿ ಸಂಸ್ಥೆ ಅಧ್ಯಕ್ಷ ದೇವದಾಸ್ ಆರ್.ಎಚ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ರಿಪ್ಪನ್‌ಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ. ಎಂ.ಪರಮೇಶ್, ಕೃಷಿ ಸಂಪರ್ಕ ಕೇಂದ್ರದ ಅಧಿಕಾರಿ ಶಾಂತಮೂರ್ತಿ, ಗ್ರಾಮ ಪಂಚಾಯತಿ ಸದಸ್ಯ ಗಣಪತಿ ಎಚ್.ಎಸ್. , ಕೃಷಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ. ಎಸ್. ಜಿ. ಶಶಿಕಲಾ ಹಾಗೂ ರೋಟರಿ ಸಂಸ್ಥೆಯ ಎಂ.ಬಿ ಲಕ್ಷ್ಮಣಗೌಡ, ಡಾ. ಬಿ.ಕೆ.ಶಿವಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ: Job Alert: ಪದವಿ ಪೂರೈಸಿದವರಿಗೆ ಉದ್ಯೋಗಾವಕಾಶ; ಮ್ಯಾನೇಜರ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

ದೇವದಾಸ್ ಆರ್.ಎಚ್. ಸ್ವಾಗತಿಸಿದರು. ಕು. ನವ್ಯ ನಿರೂಪಿಸಿದರು. ರೋಟರಿ ಸಂಸ್ಥೆ ಕಾರ್ಯದರ್ಶಿ ಎಂ.ರಾಮಚಂದ್ರ ವಂದಿಸಿದರು.

Continue Reading
Advertisement
indian penal code
ದೇಶ3 mins ago

New Laws: ಐಪಿಸಿ ಮೂಲೆಗೆ; ಜುಲೈ 1ರಿಂದಲೇ ಹೊಸ ಕಾನೂನು ಜಾರಿ, ಏನೆಲ್ಲ ಬದಲು?

bankok
ವೈರಲ್ ನ್ಯೂಸ್11 mins ago

Guinness World Records: ಬರೋಬ್ಬರಿ 168 ಅಕ್ಷರಗಳನ್ನೊಳಗೊಂಡ ಈ ನಗರದ ಹೆಸರಿನಲ್ಲಿದೆ ವಿಶ್ವ ದಾಖಲೆ

Amazon Sweets
ವಾಣಿಜ್ಯ20 mins ago

Empower HER Exhibition : ಎಫ್‌ಕೆಸಿಸಿಐ ಆವರಣದಲ್ಲಿ ಮಹಿಳಾ ಉದ್ದಿಮೆದಾರರಿಂದ ಯಶಸ್ವಿ ವಸ್ತು ಪ್ರದರ್ಶನ ಮತ್ತು ಮಾರಾಟ

Actor Manoj Rajput Arrested On Allegations Of Raping
ಸಿನಿಮಾ20 mins ago

Actor Manoj Rajput: ಅತ್ಯಾಚಾರ ಎಸಗಿದ ಆರೋಪದ ಮೇಲೆ ನಟ ಮನೋಜ್ ರಜಪೂತ್ ಬಂಧನ

40 percent commission Court summons CM No defamation if advertised says Siddaramaiah
ರಾಜಕೀಯ35 mins ago

40 percent commission: ಸಿಎಂಗೆ ಕೋರ್ಟ್‌ ಸಮನ್ಸ್;‌ ಜಾಹೀರಾತು ಕೊಟ್ಟರೆ ಮಾನನಷ್ಟ ಆಗಲ್ಲ: ವಕೀಲರು ಉತ್ತರಿಸುತ್ತಾರೆಂದ ಸಿದ್ದರಾಮಯ್ಯ

Shah Rukh Kahan
ಪ್ರಮುಖ ಸುದ್ದಿ42 mins ago

Shah rukh Khan : ಕನ್ನಡದಲ್ಲಿ ಮಾತನಾಡಿ ಅಭಿಮಾನಿಗಳ ಮನಗೆದ್ದ ಶಾರುಖ್​ ಖಾನ್​

PM Narendra Modi is determined to make India a developing country by 2047 says Pralhad Joshi
ರಾಜಕೀಯ1 hour ago

PM Narendra Modi: ಮೋದಿ ಚಿಂತೆ ಮಾಡುವವರಲ್ಲ, ಚಿಂತನೆ ಮಾಡುವ ಪ್ರಧಾನಿ: ಪ್ರಲ್ಹಾದ್‌ ಜೋಶಿ

Idli
ವೈರಲ್ ನ್ಯೂಸ್1 hour ago

Biodiversity: ದಿನಾ ಇಡ್ಲಿ ತಿಂತೀರಾ? ಹಾಗಾದ್ರೆ ಜೀವವೈವಿಧ್ಯ ಹಾನಿಗೆ ನಿಮ್ಮದೇ ಹೆಚ್ಚಿನ ಕೊಡುಗೆ!

Anil John Sequeira youngest judge in Karnataka
ದಕ್ಷಿಣ ಕನ್ನಡ1 hour ago

Anil John Sequeira : ಬಂಟ್ವಾಳ ಯುವಕನ ಅಪರೂಪದ ಸಾಧನೆ; 25ನೇ ವಯಸ್ಸಿಗೆ ನ್ಯಾಯಾಧೀಶರಾಗಿ ಆಯ್ಕೆ

Sachin Tendulkar
ಪ್ರಮುಖ ಸುದ್ದಿ2 hours ago

Sachin Tenulkar : ಒಡಿಐನಲ್ಲಿ ಸಚಿನ್​ ಮೊದಲ ದ್ವಿಶತಕ ಬಾರಿಸಿ ಇತಿಹಾಸ ಸೃಷ್ಟಿಸಿದ ದಿನವಿದು

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ4 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Varthur Santhosh
ಮಂಡ್ಯ3 hours ago

Varthur Santhosh: ಮತ್ತೆ ಹಳ್ಳಿಕಾರ್‌ ಒಡೆಯ ವಿವಾದ; ವರ್ತೂರ್‌ ಸಂತೋಷ್ ವಿರುದ್ಧ ಕಾನೂನು ಸಮರ

read your daily horoscope predictions for february 24 2024
ಭವಿಷ್ಯ10 hours ago

Dina Bhavishya : ಹೂಡಿಕೆ ವ್ಯವಹಾರದಲ್ಲಿ ಈ ರಾಶಿಯವರಿಗೆ ಸಿಗಲಿದೆ ಸಂಗಾತಿ ಸಾಥ್‌

Staff nurses attempt to convert at health centre in Ratagal village
ಕಲಬುರಗಿ23 hours ago

Forced Conversion : ಆಪರೇಶನ್‌ ಮತಾಂತರ; ನರ್ಸ್‌ಗಳಿಂದ ಹಿಂದೂಗಳ ಬ್ರೈನ್‌ ವಾಶ್‌

Fire breaks out in auto shed Burnt autos
ಬೆಂಗಳೂರು1 day ago

Fire Accident : ಬೆಂಗಳೂರಿನಲ್ಲಿ ತಡರಾತ್ರಿ ಭಾರೀ ಅಗ್ನಿ ಅವಘಡ! 40-50 ಆಟೋಗಳು ಬೆಂಕಿಗಾಹುತಿ

He sent a private photo video of his girlfriend
ಬೆಳಗಾವಿ1 day ago

Belgavi News : ನವ ವಿವಾಹಿತೆಯ ಖಾಸಗಿ ವಿಡಿಯೊ ಹರಿಬಿಟ್ಟು ಹಳೇ ಪ್ರೇಮಿ ಕಿತಾಪತಿ!

read your daily horoscope predictions for february 23 2024
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಆಫೀಸ್‌ನಲ್ಲಿ ಬಾಸ್‌ನ ಕಿರಿಕಿರಿಯಿಂದ ದಿನಪೂರ್ತಿ ಟೆನ್ಷನ್‌!

Catton Candy contain cancer Will there be a ban in Karnataka
ಬೆಂಗಳೂರು2 days ago

cotton candy Ban : ಕರ್ನಾಟಕದಲ್ಲಿ ಬ್ಯಾನ್‌ ಆಗುತ್ತಾ ಬಾಂಬೆ ಮಿಠಾಯಿ; ಕ್ಯಾನ್ಸರ್​​ ಕಾರಕ ವಿಷ ಪತ್ತೆ!

Swarnavalli Mutt appoints successor ceremony
ಕರ್ನಾಟಕ2 days ago

Swarnavalli Mutt: ಸ್ವರ್ಣವಲ್ಲೀ ಶ್ರೀಗಳ ಶಿಷ್ಯ ಸ್ವೀಕಾರ ಸಂಪನ್ನ; ಇಲ್ಲಿದೆ ಲೈವ್‌ ವಿಡಿಯೊ

read your daily horoscope predictions for february 21 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಸಂಗಾತಿಯ ವರ್ತನೆಯು ಕೋಪ, ಮುಜುಗರವನ್ನುಂಟು ಮಾಡುತ್ತೆ!

read your daily horoscope predictions for february 20 2024
ಭವಿಷ್ಯ4 days ago

Dina Bhavishya : ಈ ದಿನ ಆತುರದಲ್ಲಿ ಈ ರಾಶಿಯವರು ಯಾವ ತೀರ್ಮಾನವನ್ನು ಮಾಡ್ಬೇಡಿ!

ಟ್ರೆಂಡಿಂಗ್‌