B.L Santhosh: ಎಕ್ಸಿಟ್‌ ಪೋಲ್‌ಗಳ ಬಗ್ಗೆ ಬಿಜೆಪಿ ಮುಖಂಡ ಬಿ.ಎಲ್‌ ಸಂತೋಷ್‌ ಹೇಳಿದ್ದೇನು? - Vistara News

ಕರ್ನಾಟಕ

B.L Santhosh: ಎಕ್ಸಿಟ್‌ ಪೋಲ್‌ಗಳ ಬಗ್ಗೆ ಬಿಜೆಪಿ ಮುಖಂಡ ಬಿ.ಎಲ್‌ ಸಂತೋಷ್‌ ಹೇಳಿದ್ದೇನು?

ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ಹಾಗೂ ಪುತ್ತೂರಿನಲ್ಲಿ ಪಕ್ಷಕ್ಕೆ ಕಂಡುಬಂದಿರುವ ಪ್ರತಿರೋಧದ ಬಗ್ಗೆ ಬಿ.ಎಲ್‌ ಸಂತೋಷ್‌ ಟ್ವಿಟ್ಟರ್‌ನಲ್ಲಿ ತಿರುಗೇಟು ನೀಡಿದ್ದಾರೆ.

VISTARANEWS.COM


on

Post Against BL Santosh; Case Filed Against Dinesh Amin Mattu, Bindu Gowda and others
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್‌ ಹೆಚ್ಚಿನ ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿರುವ ಕುರಿತು, ಬಿಜೆಪಿ ಮುಖಂಡ ಬಿ.ಎಲ್‌ ಸಂತೋಷ್‌ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ʼʼಅಂಕಿಸಂಖ್ಯೆಗಳು ನಿಮ್ಮ ಊಹೆಯಷ್ಟೇʼʼ ಎಂದಿದ್ದಾರೆ.

ʼʼಎಲ್ಲ ಸಮೀಕ್ಷೆದಾರರಿಗೆ ಗೌರವದಿಂದ ಹೇಳಬಯಸುತ್ತೇನೆ- ಬಿಜೆಪಿಗೆ 2014ರಲ್ಲಿ 282 ಸ್ಥಾನ, 2019ರಲ್ಲಿ 303 ಸ್ಥಾನ, 2022ರಲ್ಲಿ 156 ಸ್ಥಾನ, ಅಥವಾ 2018ರಲ್ಲಿ 104 ಸ್ಥಾನ ದೊರೆಯಬಹುದು ಎಂದು ಯಾವ ಸಮೀಕ್ಷೆಯೂ ನುಡಿದಿರಲಿಲ್ಲ. 2018ರಲ್ಲಿ 24,000 ಬೂತ್‌ಗಳಲ್ಲಿ ನಾವು ಲೀಡ್‌ ಪಡೆದಿದ್ದೆವು. ಆದರೆ 14 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷ ಯಾವ ಬೂತ್‌ನಲ್ಲಿಯೂ ಮುನ್ನಡೆ ಸಾಧಿಸಿರಲಿಲ್ಲ. ಈ ಸಲ ಈ ಎಲ್ಲ ವಿಧಾನಸಭಾ ಕ್ಷೇತ್ರಗಳೂ ನಮ್ಮ ಪರವಾಗಿರಲಿದ್ದು, 31,000 ಬೂತ್‌ಗಳಲ್ಲಿ ನಾವೇ ಲೀಡ್‌ ಪಡೆಯಲಿದ್ದೇವೆ. ಉಳಿದ ಅಂಕಿಸಂಖ್ಯೆಗಳು ನಿಮ್ಮ ಊಹೆಯಷ್ಟೇʼʼ ಎಂದು ಸಂತೋಷ್‌ ಟ್ವೀಟ್‌ ಮಾಡಿದ್ದಾರೆ.

ಮತದಾನಕ್ಕೆ ಮುನ್ನಾ ದಿನ ಅವರು ಬಹುಚರ್ಚಿತ ಪುತ್ತೂರು ವಿಧಾನಸಭೆ ಕ್ಷೇತ್ರದ ಬಗ್ಗೆ ಸುದೀರ್ಘ ಟ್ವೀಟ್‌ ಮಾಡಿದ್ದರು. ಈ ಟ್ವೀಟ್‌ ಮತದಾರರಿಗಿಂತಲೂ ಹೆಚ್ಚಾಗಿ ಹಿಂದುತ್ವ ಕಾರ್ಯಕರ್ತರನ್ನೇ ಉದ್ದೇಶಿಸಿದಂತಿತ್ತು:

ʼʼನಿರಂತರ ದಾಳಿಗಳ ನಡುವೆಯೂ ಪುತ್ತೂರಿನಲ್ಲಿ ಬಿಜೆಪಿ ಗೆದ್ದರೆ ಏನು ಮಾಡುತ್ತೀರಿ? ಕಟು ಟೀಕೆ, ಮುಸುಕಿನ ಗುದ್ದು, ಸೋಶಿಯಲ್‌ ಮೀಡಿಯಾ ಪ್ರಚಾರ, ಅತ್ಯುಚ್ಛ ಸ್ವರದ ಭಾಷಣಗಳು, ಇವುಗಳಿಗೆಲ್ಲ ಏನು ಬೆಲೆ? ನಮ್ಮ ವೈಯಕ್ತಿಕ ಜೀವನದಲ್ಲೂ ನಾವು ಎಲ್ಲರಿಗೂ ಸ್ವೀಕಾರಾರ್ಹವಲ್ಲದ ಕೆಲವು ನಿರ್ಧಾರ ತೆಗೆದುಕೊಳ್ಳುತ್ತೇವೆ. ಆದರೆ ಎಲ್ಲ ಕಡೆಯೂ ನಾವು ಬಂಡಾಯ ಏಳುತ್ತೇವಾ?ʼʼ

“ಸಮಾಜ ಇಷ್ಟೊಂದು ಸವಾಲುಗಳನ್ನು ಎದುರಿಸುತ್ತಿರುವಾಗ ವೈಯಕ್ತಿಕ ಮಹತ್ವಾಕಾಂಕ್ಷೆಗಳು ಮುಖ್ಯವಾಗಬಾರದು. ಆದರೆ ಇವು ಮಹತ್ವದ ಬಣ್ಣ ಪಡೆದು ವೈಯಕ್ತಿಕ ಹಿತಾಸಕ್ತಿಗಳೊಂದಿಗೆ ವಿಜೃಂಭಿಸಿವೆ. ರಾಜ್ಯ ಬಿಜೆಪಿ ಅಧ್ಯಕ್ಷರನ್ನು ʼಪಿಟೀಲುʼ ಎಂದು ಸದಾ ವ್ಯಂಗ್ಯವಾಡುವುದನ್ನು ಹೇಗೆ ಸಮರ್ಥಿಸುತ್ತೀರಿ? ಅವರೇನು ತಪ್ಪು ಮಾಡಿದ್ದಾರೆ? ಇದರಿಂದ ಏನು ಸಾಧಿಸಿದಂತಾಯಿತು? ಸಮಗ್ರ ವಿವೇಕ ಹಾಗೂ ವೈಯಕ್ತಿಕ ಪ್ರತಿಭೆಗಳ ನಡುವೆ ನಾವು ಮೊದಲಿನದನ್ನೇ ಆರಿಸಬೇಕು.ʼʼ

ʼʼಇಂದು ಅಂತಿಮ ದಿನ. ನಮ್ಮ ಶಕ್ತಿ ತಳಮಟ್ಟದಲ್ಲಿದೆ. ಸೋಶಿಯಲ್‌ ಮೀಡಿಯಾ ಅಥವಾ ರಸ್ತೆ ಮೇಲಿನ ಸದ್ದುಗಳಿಗಿಂತ ನಮ್ಮ ವಿಶ್ವಾಸ ಇರುವುದು ಚುನಾವಣೆ ವಿಧಾನದಲ್ಲಿ. ಬಿಜೆಪಿ ಗೆಲ್ಲಲಿದೆ. ಆದರೆ ಒಂದು ವೇಳೆ ಫಲಿತಾಂಶ ಇದಕ್ಕೆ ವಿರುದ್ಧವಾದರೆ, ಅಥವಾ ಕಾಂಗ್ರೆಸ್‌ ಗೆದ್ದರೆ (ಅಸಾಧ್ಯ) ಅನೇಕ ಕಾರ್ಯಕರ್ತರು ಮುಂದಿನ ತಲೆಮಾರುಗಳಿಗೆ ಉತ್ತರದಾಯಿಗಳಾಗಬೇಕಾಗುತ್ತದೆ. ಜಾತಿ, ವೈಯಕ್ತಿಕ ಮಹತ್ವಾಕಾಂಕ್ಷೆ, ದ್ವೇಷ, ಇಗೋಗಳಿಗಿಂತಲೂ ದೊಡ್ಡ ವಿವೇಕವೇ ಉಳಿಯಲಿ. ಬಿಜೆಪಿಯೇ ಭರವಸೆ.ʼʼ ಎಂದು ಸಂತೋಷ್‌ ಟ್ವೀಟ್‌ ಮಾಡಿದ್ದರು.

ಪುತ್ತೂರಿನಲ್ಲಿ ಹಿಂದುತ್ವ ಕಾರ್ಯಕರ್ತ ಅರುಣ್‌ಕುಮಾರ್‌ ಪುತ್ತಿಲ ಅವರು ಬಿಜೆಪಿ ಟಿಕೆಟ್‌ ಸಿಗದುದರಿಂದ ಬಂಡಾಯವೆದ್ದು ಸ್ವತಂತ್ರರಾಗಿ ಸ್ಪರ್ಧಿಸಿದ್ದಾರೆ. ದೊಡ್ಡ ಪ್ರಮಾಣದ ಹಿಂದುತ್ವ ಕಾರ್ಯಕರ್ತರು ಅವರನ್ನು ಬೆಂಬಲಿಸಿದ್ದು, ಪುತ್ತಿಲ ಅವರಿಗೆ ಭಾರಿ ಬೆಂಬಲ ಕಣದಲ್ಲಿ ಕಂಡುಬಂದಿತ್ತು.

ಇದನ್ನೂ ಓದಿ: ಬಿ.ಎಲ್. ಸಂತೋಷ್‌ ವಿರುದ್ಧ ಪೋಸ್ಟ್‌: ದಿನೇಶ್ ಅಮಿನ್ ಮಟ್ಟು ವಿರುದ್ಧ ಕೇಸ್‌, ಒಬ್ಬನ ಬಂಧನ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು ಗ್ರಾಮಾಂತರ

Anekal News : ಯುವತಿ ಕೈ ಬಲಿ ಪಡೆದ ಅಕ್ರಮ ಡ್ರೈ ಕ್ಲೀನಿಂಗ್ ಕಾರ್ಖಾನೆ; ಚಿಕಿತ್ಸೆ ಕೊಡಿಸದೆ ಮಾಲೀಕ ಎಸ್ಕೇಪ್‌

Anekal News : ಕಾರ್ಖಾನೆ ಮಾಲೀಕನ ನಿರ್ಲಕ್ಷ್ಯಕ್ಕೆ ಯುವತಿಯೊಬ್ಬಳು ಕೈ ಕಳೆದುಕೊಂಡು ನರಳಾಡುತ್ತಿದ್ದಾಳೆ. ಯುವತಿಯನ್ನು ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವ ಮಾತಾಡಿದ್ದ ಮಾಲೀಕ ಉಲ್ಟಾ ಹೊಡೆದು ಪರಾರಿ ಆಗಿದ್ದಾನೆ.

VISTARANEWS.COM


on

By

anekla news
Koo

ಬೆಂಗಳೂರು ಗ್ರಾಮಾಂತರ: ಆಕೆ ಬಡ ಕುಟುಂಬದಲ್ಲಿ ಹುಟ್ಟಿದ ಹೆಣ್ಣು ಮಗಳು. ಅನಾರೋಗ್ಯದಿಂದ ಬಳಲುತ್ತಿರುವ ಅಪ್ಪ-ಅಮ್ಮನಿಗೆ ಆಕೆಯೇ ಆಧಾರವಾಗಿದ್ದಳು. ಒಪ್ಪೊತ್ತಿನ ಊಟಕ್ಕಾಗಿ 21 ವರ್ಷದ ಯುವತಿ ಕಾರ್ಖಾನೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದಳು. ಆದರೆ ತಿಂಗಳು ಕಳೆಯುವಷ್ಟರಲ್ಲಿ ಮಾಲೀಕರ ನಿರ್ಲಕ್ಷ್ಯಕ್ಕೆ ಕೈ ಕಳೆದುಕೊಂಡು ಆಸ್ಪತ್ರೆಯಲ್ಲಿ ನರಳಾಡುತ್ತಿದ್ದಾಳೆ. ಬೆಂಗಳೂರು ಹೊರವಲಯದ ಆನೇಕಲ್ (Anekal News) ತಾಲೂಕಿನ ಸಿ.ಕೆ ಪಾಳ್ಯದಲ್ಲಿ ಇಂತಹದೊಂದು ಮನಕಲುಕುವ ಘಟನೆ ನಡೆದಿದೆ.

ಅನಾರೋಗ್ಯ ಪೀಡಿತ ‌ಪೋಷಕರ ಪಾಲನೆ ಜವಾಬ್ದಾರಿ ಹೊತ್ತಿದ್ದ ಗಾಯಾಳು ಸುಮಿತ್ರಾ ಒಂದೂವರೆ ತಿಂಗಳ ಹಿಂದೆ ವಿ.ಕೆ.ಆರ್ ಡ್ರೈ ಕ್ಲೀನರ್ ಕಾರ್ಖಾನೆಗೆ ಕೆಲಸಕ್ಕೆ ಸೇರಿದ್ದಳು. ತಿಂಗಳು ಕಳೆದರು ಸಂಬಳ ಕೊಡದ ಕಾರಣಕ್ಕೆ ಇನ್ನೂ 15 ದಿನಗಳು ನೋಡಿ, ಕೆಲಸ ಬಿಟ್ಟು ಬಿಡುವ ನಿರ್ಧಾರ ಮಾಡಿದ್ದಳು. ಆದರೆ ವಿಧಿಯಾಟ ಬೇರೆಯೇ ಆಗಿತ್ತು. ಬಟ್ಟೆ ಐರನ್ ಮಾಡುವ ಮೆಷಿನ್‌ಗೆ ಸಿಲುಕಿದ ಸುಮಿತ್ರಾ ಬಲಗೈ ಕಳೆದುಕೊಂಡಿದ್ದಳು.

ತನಗೆ ಐರನ್ ಮೆಷಿನ್ ಅಪರೇಟ್ ಮಾಡಲು ಬರುವುದಿಲ್ಲ ಎಂದರು ಬಿಡದೇ ಮಾಲೀಕಿ ರಂಜಿತಾ ಒತ್ತಾಯಿಸಿದ್ದರು. ಐರನ್ ಮೆಷಿನ್‌ನಲ್ಲಿ ಬಟ್ಟೆ ಕೊಡಲು ಹೋಗಿ ಕೈ ಸಿಲುಕಿತ್ತು. ಕಾರ್ಖಾನೆಯಲ್ಲಿ ಒಬ್ಬಳೇ ಇದ್ದ ಕಾರಣಕ್ಕೆ ಕಿರುಚಾಡಿದರೂ ಯಾರೂ ನೆರವಿಗೆ ಬರಲಿಲ್ಲ. ಒಂದು ಗಂಟೆ ಬಳಿಕ ಕೂಗಾಟ ಕೇಳಿ ಪಕ್ಕದ ಕಾರ್ಖಾನೆಯವರು ನೆರವಿಗೆ ಧಾವಿಸಿದ್ದರು. ಆದರೆ ಅಷ್ಟೊತ್ತಿಗಾಗಲೇ ಕೈ ಬಹುತೇಕ ಸುಟ್ಟು ಹೋಗಿತ್ತು ಎಂದು ಗಾಯಾಳು ಸುಮಿತ್ರಾ ಕಣ್ಣೀರು ಹಾಕಿದ್ದಾಳೆ.

ಇದನ್ನೂ ಓದಿ: Actor Darshan: ಎರಡೇ ಎರಡೇಟು ಬಿಟ್ಟಿದ್ದೆ, ಹಿಂಗಾಗೋಯ್ತು ಸಾರ್‌! ಪೊಲೀಸರ ಮುಂದೆ ದರ್ಶನ್‌ ಹೇಳಿಕೆ!

ಚಿಕಿತ್ಸೆ ಕೊಡಿಸದೆ ಎಸ್ಕೇಪ್‌

ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವ ಮಾತಾಡಿದ್ದ ಮಾಲೀಕ ಅಭಿಷೇಕ್ ಕೆಲ ಹೊತ್ತಿನಲ್ಲಿಯೇ ಉಲ್ಟಾ ಹೊಡೆದಿದ್ದಾನೆ. ಐದು ಲಕ್ಷ ರೂ. ಕಟ್ಟಿದರೆ ಕೂಡಲೇ ಸರ್ಜರಿ ಮಾಡಿ ಯುವತಿ ಕೈ ಉಳಿಸಬಹುದು ಎಂದು ವೈದ್ಯರು ಹೇಳಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಯುವತಿ ಪೋಷಕರನ್ನು ಯಾಮಾರಿಸಿ ಬಿಳಿ ಹಾಳೆ ಮೇಲೆ ಒತ್ತಾಯಪೂರ್ವಕವಾಗಿ ಸಹಿ ಮಾಡಿಸಿಕೊಂಡು, ಚಿಕಿತ್ಸೆ ಕೊಡಿಸದೇ ಪರಾರಿಯಾಗಿದ್ದಾನೆ. ಈ ಬಗ್ಗೆ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೆ ನಿರ್ಲಕ್ಷ್ಯ ಪ್ರಕರಣ ದಾಖಲಿಸಿ ಸುಮ್ಮನಾಗಿದ್ದಾರೆ. ಯುವತಿಗೆ ನ್ಯಾಯ ಕೊಡಿಸುವ ಗೋಜಿಗೆ ಹೋಗಿಲ್ಲ.‌

ಯುವತಿ ಸಹಾಯಕ್ಕೆ ಧಾವಿಸಿದ ಸನ್‌ ರೇ ಆಸ್ಪತ್ರೆ

ಸುಮಿತ್ರಾ ಕುಟುಂಬಸ್ಥರು ಕಡು ಬಡವರಾಗಿದ್ದು, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಗಳಿಗೆ ಚಿಕಿತ್ಸೆ ಕೊಡಿಸಲು ಆಗದೇ ಕಂಗಲಾಗಿದ್ದರು. ಇವರ ಸಂಕಷ್ಟಕ್ಕೆ ಸ್ಪಂದಿಸಿದ ಸನ್ ರೇ ಎಂಬ ಖಾಸಗಿ ಆಸ್ಪತ್ರೆ ವೈದ್ಯರು ಸಹಾಯಕ್ಕೆ ಧಾವಿಸಿದ್ದರು. ಸುಮಿತ್ರಾ ಪೋಷಕರಿಂದ ಯಾವುದೇ ಹಣ ಪಡಯದೇ ಚಿಕಿತ್ಸೆ ನೀಡಿದ್ದಾರೆ. ಕೈ ಕಳೆದುಕೊಂಡ ಯುವತಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾಳೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಉತ್ತರ ಕನ್ನಡ

Uttara Kannada News: ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರಿಗೆ ಮೊಬೈಲ್ ಕೊಡುಗೆ

Uttara Kannada News: ಪೋಷಣ್ ಅಭಿಯಾನ ಕಾರ್ಯಕ್ರಮದ ಮೂಲಕ ಜಿಲ್ಲೆಯಲ್ಲಿ ಮಕ್ಕಳು ಮತ್ತು ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರ ಯೋಗಕ್ಷೇಮದ ಬಗ್ಗೆ ನಿರಂತರವಾಗಿ ನಿಗಾ ಇರಿಸುವ ಉದ್ದೇಶದಿಂದ, ನೂತನ ವೈಶಿಷ್ಠಗಳಿಂದ ಕೂಡಿದ ಹೊಸ ಮೊಬೈಲ್‌ನ್ನು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮೇಲ್ವಿಚಾರಕರಿಗೆ ವಿತರಿಸಲಾಗುತ್ತಿದೆ. ಪೋಷಣ್ ಟ್ರ್ಯಾಕರ್ ಆಪ್‌ನ ಸುಲಲಿತ ಕಾರ್ಯ ನಿರ್ವಹಣೆಗೆ ಸೇರಿದಂತೆ ಕ್ಷೇತ್ರ ಮಟ್ಟದಲ್ಲಿ ಅಗತ್ಯವಿರುವ ಇತರೆ ಯಾವುದೇ ಮಾಹಿತಿಯನ್ನು ಸಂಗ್ರಹಿಸಿ, ವರದಿ ಮಾಡಲು ಇದು ನೆರವು ನೀಡಲಿದ್ದು, ಅಂಗನವಾಡಿ ಸಿಬ್ಬಂದಿಗಳು ಇನ್ನಷ್ಟು ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಿಳಿಸಿದ್ದಾರೆ.

VISTARANEWS.COM


on

Anganwadi workers and supervisors will get the new mobile in uttara Kannada district
Koo

ಕಾರವಾರ: ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಅನುಷ್ಠಾನಗೊಂಡಿರುವ ಪೋಷಣ್ ಅಭಿಯಾನ ಕಾರ್ಯಕ್ರಮದ ದೈನಂದಿನ ಪ್ರಗತಿಯನ್ನು ಪೋಷಣ್ ಟ್ರ್ಯಾಕರ್ ತಂತ್ರಾಂಶದಲ್ಲಿ ದಾಖಲಿಸಲು ಹಾಗೂ ಇತರೆ ತಾಂತ್ರಿಕ ವರದಿಗಳನ್ನು ನೀಡಲು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕರಿಗೆ ಹೊಸ ಸ್ಯಾಮ್ಸಂಗ್ ಮೊಬೈಲ್‌ಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಜಿಲ್ಲೆಯ (Uttara Kannada News) ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕರ ಕೈ ಸೇರಲಿದೆ.

ಈಗಾಗಲೇ ಅಂಕೋಲಾ ತಾಲೂಕಿನ 236 ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮೇಲ್ವಿಚಾರಕರಿಗೆ, ಭಟ್ಕಳದ 235, ಹಳಿಯಾಳದ 256, ಹೊನ್ನಾವರದ 341, ಜೋಯಿಡಾದ 220, ಕಾರವಾರದ 253, ಕುಮಟಾದ 293, ಮುಂಡಗೋಡದ 201, ಸಿದ್ದಾಪುರದ 237, ಶಿರಸಿಯ 389, ಯಲ್ಲಾಪುರದ 205 ಸೇರಿದಂತೆ ಒಟ್ಟು 2782 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 84 ಮೇಲ್ವಿಚಾರಕರಿಗೆ ಹಾಗೂ ಬಫರ್ ಸ್ಟಾಕ್‌ನಲ್ಲಿನ 143 ಸೇರಿದಂತೆ ಒಟ್ಟು 3009 ಹೊಸ ಮೊಬೈಲ್‌ಗಳು ಜಿಲ್ಲೆಗೆ ಪೂರೈಕೆಯಾಗಿದ್ದು, ಸಂಬಂಧಪಟ್ಟ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಮೂಲಕ ಹಂಚಿಕೆ ಮಾಡಲಾಗುತ್ತಿದೆ. ಈ ಮೊಬೈಲ್‌ಗಳಿಗೆ ಇಲಾಖೆಯ ಮೂಲಕವೇ ಪ್ರತೀ ತಿಂಗಳು ನಿಗದಿತ ಮೊತ್ತದ ಕರೆನ್ಸಿಯನ್ನು ರೀಚಾರ್ಜ್ ಮಾಡಲಾಗುತ್ತದೆ.

ಇದನ್ನೂ ಓದಿ: Paris Olympics 2024: ಒಲಿಂಪಿಕ್ಸ್ ಆಯೋಜನೆ; ಫ್ರಾನ್ಸ್​ ಅಧ್ಯಕ್ಷರಿಗೆ ಶುಭ ಕೋರಿದ ಪ್ರಧಾನಿ ಮೋದಿ

ಪೋಷಣ್ ಅಭಿಯಾನ ಕಾರ್ಯಕ್ರಮದ ಮೂಲಕ 0-6 ವರ್ಷದೊಳಗಿನ ಮಕ್ಕಳಲ್ಲಿ ಕುಂಠಿತ ಬೆಳವಣಿಗೆಯನ್ನು ಕಡಿಮೆಗೊಳಿಸುವ, ಕಿಶೋರಿಯರಲ್ಲಿ ಮತ್ತು ಮಹಿಳೆಯರಲ್ಲಿ ರಕ್ತ ಹೀನತೆಯನ್ನು ತಡೆಗಟ್ಟುವ ಮತ್ತು ಕಡಿಮೆ ತೂಕದ ಮಗುವಿನ ಜನನವನ್ನು ಕಡಿಮೆಗೊಳಿಸುವ ಗುರಿಯನ್ನು ಹೊಂದಿದೆ.

ಜಿಲ್ಲೆಯಲ್ಲಿ ಮೇ ಮಾಹೆಯಲ್ಲಿ 67,472 ಮಕ್ಕಳು ಅಂಗನವಾಡಿಗಳಲ್ಲಿ ನೋಂದಣಿಯಾಗಿದ್ದು, ಇದರಲ್ಲಿ 66,406 ಮಕ್ಕಳ ಎತ್ತರ ಮತ್ತು ತೂಕವನ್ನು ಅಳತೆ ಮಾಡಲಾಗಿದ್ದು, ಮಕ್ಕಳಲ್ಲಿನ ಆರೋಗ್ಯಕರ ಬೆಳವಣಿಗೆ ಪ್ರಮಾಣ ಶೇ.98.42 ರಷ್ಟು ಕಂಡುಬಂದಿದೆ. ಹಾಗೂ ಅ ಪರೀಕ್ಷಾ ಅವಧಿಯಲ್ಲಿ ತೀವ್ರ ಅಪೌಷ್ಠಿಕತೆಯ 262 ಮತ್ತು ಮಧ್ಯಮ ತೀವ್ರ ಅಪೌಷ್ಠಿಕತೆಯ 1178 ಮಕ್ಕಳು ಕಂಡುಬಂದಿದ್ದು, ಈ ಮಕ್ಕಳಲ್ಲಿ ಪೌಷ್ಠಿಕತೆಯನ್ನು ಹೆಚ್ಚಿಸಲು ಅಗತ್ಯವಿರುವ ಪೌಷ್ಠಿಕ ಆಹಾರ ವಿತರಣೆ ಸೇರಿದಂತೆ ಎಲ್ಲಾ ಅಗತ್ಯ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಪ್ರಸ್ತುತ ನೀಡಿರುವ ಮೊಬೈಲ್ ಮೂಲಕ ಪೋಷಣ್ ಟ್ರ್ಯಾಕರ್ ತಂತ್ರಾಂಶದಲ್ಲಿ, ಜಿಲ್ಲೆಯ ಅಂಗನವಾಡಿಯಲ್ಲಿರುವ ಮಕ್ಕಳ ವಯಸ್ಸು, ಎತ್ತರ, ತೂಕ ಆರೋಗ್ಯದ ಸ್ಥಿತಿಗತಿ ಸೇರಿದಂತೆ ಮಕ್ಕಳ ಸಮಗ್ರ ಆರೋಗ್ಯದ ವಿವರಗಳನ್ನು ದಾಖಲು ಮಾಡುವುದರ ಮೂಲಕ ಮಕ್ಕಳಲ್ಲಿ ಕಂಡು ಬರುವ ಅಪೌಷ್ಠಿಕತೆಗೆ ಸಕಾಲದಲ್ಲಿ ಸೂಕ್ತ ನೆರವು ನೀಡಿ, ಅವರು ಆರೋಗ್ಯವಂತರಾಗಿ ಬೆಳವಣಿಗೆ ಹೊಂದಲು ಬೇಕಾದ ಎಲ್ಲಾ ಅಗತ್ಯ ಪೂರಕ ವ್ಯವಸ್ಥೆಗಳನ್ನು ಒದಗಿಸುವ ಉದ್ದೇಶ ಹೊಂದಲಾಗಿದೆ.

ಅಂಗನವಾಡಿಯಲ್ಲಿ ಪ್ರತಿದಿನ ನಡೆಯುವ ಚಟುವಟಿಕೆಗಳನ್ನು ಕೂಡಾ ಈ ಮೊಬೈಲ್ ಮೂಲಕ ದಾಖಲಿಸಲಾಗುತ್ತಿದ್ದು, ಪ್ರತಿದಿನ ಅಂಗನವಾಡಿ ತೆರೆದಿರುವ ಬಗ್ಗೆ, ಮಕ್ಕಳು ಹಾಜರಾಗಿರುವ ಬಗ್ಗೆ, ಮಕ್ಕಳಿಗೆ ಪೌಷ್ಠಿಕ ಉಪಹಾರ ನೀಡುವ ಕುರಿತ ಪೋಟೋಗಳನ್ನೂ ಹಾಗೂ ಗರ್ಭಿಣಿ ಸ್ತಿçÃಯರು ಮತ್ತು ಬಾಣಂತಿಯ ಅರೋಗ್ಯ ವಿಚಾರಣೆಗೆ ಪ್ರತಿದಿನ ಮನೆ ಭೇಟಿ ನೀಡುವ ವಿವರಗಳನ್ನೂ ಸಹ ಈ ತಂತ್ರಾಂಶದಲ್ಲಿ ಅಳವಡಿಸಲಾಗುತ್ತಿದ್ದು, ಅಂಗನವಾಡಿ ಕಾರ್ಯಕತೆಯರು ಅಳವಡಿಸುವ ಈ ಎಲ್ಲಾ ಮಾಹಿತಿಯು ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ನೇರವಾಗಿ ದೊರೆಯುವಂತೆ ತಂತ್ರಾಂಶ ಸಿದ್ದಪಡಿಸಲಾಗಿದೆ.

ಇದನ್ನೂ ಓದಿ: T20 World Cup 2024 Super 8: ಸೂಪರ್​-8 ಪಂದ್ಯಗಳ ವೇಳಾಪಟ್ಟಿ ಪ್ರಕಟ; ಭಾರತಕ್ಕೆ ಆಫ್ಘಾನ್​ ಮೊದಲ ಎದುರಾಳಿ

ಪೋಷಣ್ ಅಭಿಯಾನ ಕಾರ್ಯಕ್ರಮದ ಮೂಲಕ ಜಿಲ್ಲೆಯಲ್ಲಿ ಮಕ್ಕಳು ಮತ್ತು ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರ ಯೋಗಕ್ಷೇಮದ ಬಗ್ಗೆ ನಿರಂತರವಾಗಿ ನಿಗಾ ಇರಿಸುವ ಉದ್ದೇಶದಿಂದ, ನೂತನ ವೈಶಿಷ್ಠಗಳಿಂದ ಕೂಡಿದ ಹೊಸ ಮೊಬೈಲ್‌ನ್ನು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮೇಲ್ವಿಚಾರಕರಿಗೆ ವಿತರಿಸಲಾಗುತ್ತಿದೆ. ಪೋಷಣ್ ಟ್ರ್ಯಾಕರ್ ಆಪ್‌ನ ಸುಲಲಿತ ಕಾರ್ಯ ನಿರ್ವಹಣೆಗೆ ಸೇರಿದಂತೆ ಕ್ಷೇತ್ರ ಮಟ್ಟದಲ್ಲಿ ಅಗತ್ಯವಿರುವ ಇತರೆ ಯಾವುದೇ ಮಾಹಿತಿಯನ್ನು ಸಂಗ್ರಹಿಸಿ, ವರದಿ ಮಾಡಲು ಇದು ನೆರವು ನೀಡಲಿದ್ದು, ಅಂಗನವಾಡಿ ಸಿಬ್ಬಂದಿಗಳು ಇನ್ನಷ್ಟು ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಿಳಿಸಿದ್ದಾರೆ.

Continue Reading

ಕರ್ನಾಟಕ

Petrol Diesel Price: ಜನರಿಗೆ ಸಿದ್ದರಾಮಯ್ಯ ಸರ್ಕಾರ ಶಾಕ್; ಪೆಟ್ರೋಲ್‌, ಡೀಸೆಲ್‌ ಬೆಲೆ 3 ರೂ. ಏರಿಕೆ

Petrol Diesel Price: ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ಮಾರಾಟ ತೆರಿಗೆ ಏರಿಕೆ ಕುರಿತು ಕಳೆದ ಮಾರ್ಚ್‌ನಲ್ಲಿಯೇ ಆರ್ಥಿಕ ಇಲಾಖೆಯು ರಾಜ್ಯ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿತ್ತು. ಆದರೆ, ಚುನಾವಣೆ ಸಂದರ್ಭದಲ್ಲಿ ಬೆಲೆಯೇರಿಕೆ ಮಾಡಿದರೆ ರಾಜ್ಯ ಸರ್ಕಾರದ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಾರೆ, ಮತಗಳು ಸಿಗುವುದಿಲ್ಲ ಎಂದು ಸಿದ್ದರಾಮಯ್ಯ ಅವರು ಕಡತ ವಾಪಸ್‌ ಕಳುಹಿಸಿದ್ದರು. ಈಗ ಚುನಾವಣೆ ಮುಗಿದ ಕಾರಣ ಬೆಲೆಯೇರಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

VISTARANEWS.COM


on

Petrol Diesel Price
Koo

ಬೆಂಗಳೂರು: ರಾಜ್ಯದ ಜನರಿಗೆ ಐದು ಉಚಿತ ಗ್ಯಾರಂಟಿಗಳನ್ನು ನೀಡಿರುವ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಮದ್ಯದ ಬೆಲೆ ಹಾಗೂ ಆಸ್ತಿ ನೋಂದಣಿ ಶುಲ್ಕವನ್ನು ಹೆಚ್ಚಿಸಿ ಸಂಪನ್ಮೂಲ ಕ್ರೋಡೀಕರಣಕ್ಕೆ ಮುಂದಾಗಿತ್ತು. ಈಗ ರಾಜ್ಯದ ಜನರಿಗೆ ಮತ್ತೊಂದು ಬೆಲೆಯೇರಿಕೆಯ ಬರೆಯನ್ನು ಕರ್ನಾಟಕ ಸರ್ಕಾರ ಎಳೆದಿದೆ. ಹೌದು, ಕರ್ನಾಟಕದಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಏರಿಕೆ (Petrol Diesel Price) ಮಾಡಿ ರಾಜ್ಯ ಸರ್ಕಾರ ಆದೇಶ (Karnataka Government) ಹೊರಡಿಸಿದೆ. ಒಂದು ಲೀಟರ್‌ ಪೆಟ್ರೋಲ್‌ಗೆ 3 ರೂ. ಹಾಗೂ ಡೀಸೆಲ್‌ಗೆ 3.5 ರೂ. ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ಮಾರಾಟ ತೆರಿಗೆಯನ್ನು ರಾಜ್ಯ ಸರ್ಕಾರ ಹೆಚ್ಚಿಸಿದೆ. ಇದರಿಂದ ಒಂದು ಲೀಟರ್‌ ಡೀಸೆಲ್‌ಗೆ ರಾಜ್ಯದ ಜನ 89.20 ರೂ. ನೀಡಬೇಕಾದರೆ, ಲೀಟರ್‌ ಪೆಟ್ರೋಲ್‌ಗೆ 103 ಆಗಲಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಪೆಟ್ರೋಲ್‌ಗೆ ರಾಜ್ಯ ಸರ್ಕಾರವು ಇದುವರೆಗೆ ಶೇ.25.92ರಷ್ಟು ಮಾರಾಟ ತೆರಿಗೆ ವಿಧಿಸುತ್ತಿತ್ತು. ಈಗ ಶೇ.3.9ರಷ್ಟು ಹೆಚ್ಚಳ ಮಾಡಿದ್ದು, ಇನ್ನು ಮುಂದೆ ಒಟ್ಟು ಶೇ.29.84ರಷ್ಟು ತೆರಿಗೆ ವಸೂಲಿ ಮಾಡಲಿದೆ. ಇನ್ನು ಡೀಸೆಲ್‌ ಮೇಲಿನ ಮಾರಾಟ ತೆರಿಗೆಯನ್ನು ಶೇ.4.1ರಷ್ಟು ಏರಿಕೆ ಮಾಡಲಾಗಿದ್ದು, ರಾಜ್ಯ ಸರ್ಕಾರ ಇನ್ನು ಶೇ.18.44ರಷ್ಟು ತೆರಿಗೆ ವಸೂಲಿ ಮಾಡಲಿದೆ.

Rs 8 to 10 price cut in Petrol and Diesel, PM Modi to announce on year end

ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ಮಾರಾಟ ತೆರಿಗೆ ಏರಿಕೆ ಕುರಿತು ಕಳೆದ ಮಾರ್ಚ್‌ನಲ್ಲಿಯೇ ಆರ್ಥಿಕ ಇಲಾಖೆಯು ರಾಜ್ಯ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿತ್ತು. ಆದರೆ, ಚುನಾವಣೆ ಸಂದರ್ಭದಲ್ಲಿ ಬೆಲೆಯೇರಿಕೆ ಮಾಡಿದರೆ ರಾಜ್ಯ ಸರ್ಕಾರದ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಾರೆ, ಮತಗಳು ಸಿಗುವುದಿಲ್ಲ ಎಂದು ಸಿದ್ದರಾಮಯ್ಯ ಅವರು ಕಡತ ವಾಪಸ್‌ ಕಳುಹಿಸಿದ್ದರು. ಈಗ ಮತ್ತೆ ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆತೀಕ್‌ ಅವರು ಸಿದ್ದರಾಮಯ್ಯ ಅವರ ಎದುರು ಕಡತ ಮುಂದಿರಿಸಿದ್ದು, ಇದಕ್ಕೆ ಸಿದ್ದರಾಮಯ್ಯ ಅಂಕಿತ ಹಾಕಿದ್ದಾರೆ.

ಸಿದ್ದರಾಮಯ್ಯ ಅವರು ಸಹಿ ಹಾಕಿದ ಮರುದಿನವೇ ಅಂದರೆ, ಜೂನ್‌ 15ರಂದು ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಲಾಗಿದೆ. ಇದರಿಂದಾಗಿ ತಕ್ಷಣದಿಂದಲೇ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಏರಿಕೆ ಆಗಿದೆ. ಮದ್ಯದ ಬೆಲೆಯೇರಿಕೆ ಮಾಡುವ ಮೂಲಕ ರಾಜ್ಯ ಸರ್ಕಾರವು ಖಜಾನೆಗೆ ಹಣ ತುಂಬಿಸಿಕೊಳ್ಳುತ್ತಿದೆ. ಆಸ್ತಿ ನೋಂದಣಿ ಶುಲ್ಕವನ್ನೂ ಏರಿಕೆ ಮಾಡಿದೆ. ಈಗ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಏರಿಕೆ ಮಾಡುವ ಮೂಲಕ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕಿದೆ

ಇದನ್ನೂ ಓದಿ: Modi 3.0: ಶೀಘ್ರ ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್‌, ಡೀಸೆಲ್‌? ಕೇಂದ್ರ ಸಚಿವರು ಹೇಳಿದ್ದೇನು?

Continue Reading

ಉತ್ತರ ಕನ್ನಡ

Self Harming : ಪೊಲೀಸ್‌ ಠಾಣೆ ಎದುರೇ ಬೆಂಕಿ ಹಚ್ಚಿಕೊಂಡ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವು

Self harming : ವಿನಾಕಾರಣ‌ ತನಗೆ ಪೊಲೀಸರು ಕಿರುಕುಳ ಕೊಡುತ್ತಿದ್ದಾರೆ ಎಂದು ಆರೋಪಿ ವ್ಯಕ್ತಿಯೊಬ್ಬ ಠಾಣೆ ಆವರಣದಲ್ಲಿಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ತೀವ್ರ ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

VISTARANEWS.COM


on

By

Self harming
Koo

ಕಾರವಾರ: ಉತ್ತರಕನ್ನಡ ಜಿಲ್ಲೆಯ ಜೋಯಿಡಾದ ರಾಮನಗರ ಪೊಲೀಸ್ ಠಾಣೆಯ ಪಿಎಸ್ಐ ಮಾನಸಿಕ ಕಿರುಕುಳ (Self Harming) ನೀಡುತ್ತಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ಠಾಣೆ ಎದುರೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ತೀವ್ರ ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾರೆ. ರಾಮನಗರ ಹನುಮಾನ್ ಗಲ್ಲಿಯ ನಿವಾಸಿ ಭಾಸ್ಕರ್ ಬೋಂಡೆಲ್ಕರ್ ಮೃತ ದುರ್ದೈವಿ.

ಈ ಹಿಂದೆ‌‌ ಜೂಜಾಟ ಪ್ರಕರಣ‌ ಸಂಬಂಧ ಭಾಸ್ಕರ್ ಮೇಲೆ ಪ್ರಕರಣ ದಾಖಲು ಮಾಡಲಾಗಿತ್ತು. ಈ ನಡುವೆ ಕಳೆದ ಗುರುವಾರ ಜಮೀನು ವಿಚಾರಕ್ಕೆ ಭಾಸ್ಕರ್‌ ಮದ್ಯ ಸೇವಿಸಿ ಬೈಕ್‌ ಮೂಲಕ ಠಾಣೆಗೆ ತೆರಳಿದ್ದ. ಮದ್ಯ ಸೇವಿಸಿದ್ದರಿಂದ ಬೈಕ್ ಠಾಣೆಯಲ್ಲಿ ಬಿಟ್ಟು ಹೋಗುವಂತೆ ಪಿಎಸ್ಐ ಬಸವರಾಜ್‌ ಸೂಚಿಸಿದ್ದರು.

ಇಷ್ಟಕ್ಕೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಮದ್ಯದ ಅಮಲಿನಲ್ಲಿ ಭಾಸ್ಕರ್‌ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಕೂಡಲೇ ಬೆಂಕಿ ನಂದಿಸಿ ಗಂಭೀರವಾದ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಭಾಸ್ಕರ್‌ನನ್ನು ಬೆಳಗಾವಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಇನ್ನೂ ಆಸ್ಪತ್ರೆಗೆ ಹೋಗುವಾಗ ವಿಡಿಯೋ ಮಾಡಿ‌ ಪೊಲೀಸ್ ಕಿರುಕುಳ ಬಗ್ಗೆ ತಿಳಿಸಿದ್ದ. ಸದ್ಯ ಚಿಕಿತ್ಸೆ ಫಲಕಾರಿಯಾಗದೆ ಭಾಸ್ಕರ್‌ ಶನಿವಾರ ಮೃತಪಟ್ಟಿದ್ದಾರೆ.

ಕೊಪ್ಪಳದಲ್ಲಿ ಕರೆಂಟ್‌ ಶಾಕ್‌ಗೆ ವ್ಯಕ್ತಿ ಸಾವು

ವಿದ್ಯುತ್ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ. ಬಸವರಾಜ್ ಚನ್ನಪ್ಪ ಬಂಡಾರಿ (50) ಮೃತ ದುರ್ದೈವಿ. ಲೈನ್‌ಮ್ಯಾನ್‌ವೊಬ್ಬ ವಿದ್ಯುತ್ ದುರಸ್ಥಿಗಾಗಿ ಕಲಬುರಗಿ ತಾಲೂಕಿನ ಲಿಂಗನಬಂಡಿ ಗ್ರಾಮದ ನಿವಾಸಿಯಾಗಿರುವ ಚನ್ನಪ್ಪನನ್ನು ಜತೆಗೆ ಕರೆದುಕೊಂಡು ಬಂದಿದ್ದ ಎನ್ನಲಾಗಿದೆ. ಘಟನೆ ನಡೆಯುತ್ತಿದ್ದಂತೆ ಲೈನ್‌ಮ್ಯಾನ್‌ ನಾಪತ್ತೆ ಆಗಿದ್ದಾನೆ. ಬೇವೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Electric shock : ನೇರಳೆ ಮರವೇರಿದ ಬಾಲಕನಿಗೆ ಕರೆಂಟ್‌ ಶಾಕ್‌; ಕೆಳಗೆ ಬಿದ್ದೊಡನೆ ಹಾರಿಹೋಯ್ತು ಪ್ರಾಣಪಕ್ಷಿ

ನಿದ್ದೆಗೆ ಜಾರಿದ 3 ವರ್ಷದ ಬಾಲಕನನ್ನು ಕಚ್ಚಿ ಸಾಯಿಸಿದ ನಾಗರಹಾವು

ಚಿಕ್ಕಬಳ್ಳಾಪುರ: ನಾಗರಹಾವು ಕಚ್ಚಿ (Snake Bite) 3 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಗುಮ್ಮವಾರಂಡ್ಲಪಲ್ಲಿ ಗ್ರಾಮದಲ್ಲಿ ಘಟನೆ ನಡೆದಿದೆ. ದೀಕ್ಷಿತ್ (3) ಮೃತ ದುರ್ದೈವಿ.

ಮಾಲತಿ-ಸುರೇಶ ದಂಪತಿಯ ಏಕೈಕ ಪುತ್ರ ದೀಕ್ಷಿತ್ ಮನೆಯ ಕಾಂಪೌಂಡ್‌ನ ಮುಂದೆ ಮಲಗಿದ್ದಾಗ ನಾಗರಹಾವು ಕಚ್ಚಿದೆ. ಕೂಡಲೇ ಅಸ್ವಸ್ಥಗೊಂಡಿದ್ದ ದೀಕ್ಷಿತ್‌ನನ್ನು ಆಸ್ಪತ್ರೆಗೆ ಕರೆತರಲಾಗಿದೆ. ಆದರೆ ಸಕಾಲಕ್ಕೆ ಬಾಗೇಪಲ್ಲಿ ಆಸ್ಪತ್ರೆಯ ಸ್ಟಾಪ್ ನರ್ಸ್ ಬೋಮ್ಮಣ್ಣ ಸ್ಪಂದಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ವೈದ್ಯರು ಬಂದು ನೋಡುವಷ್ಟರಲ್ಲಿ ಮಗುವಿನ ಸ್ಥಿತಿ ಚಿಂತಾಜನಕವಾಗಿತ್ತು ಎಂದು ಪೋಷಕರು ಗೋಳಾಡಿದ್ದಾರೆ.

ಮೀನು ಹಿಡಿಯಲು ನದಿಗೆ ಇಳಿದವನು ನಾಪತ್ತೆ

ಕೃಷ್ಣ ನದಿಯಲ್ಲಿ ಮೀನುಗಾರಿಕೆಗೆ ಇಳಿದ ವ್ಯಕ್ತಿಯೊಬ್ಬ ನಾಪತ್ತೆಯಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಕುಲ್ಲಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಬಾವುಸಾಬ್ ಗಬಾಡೆ ನಾಪತ್ತೆಯಾದವರು.

Sanke Bite.. Drowned in water
ನಾಪತ್ತೆಯಾಗಿರುವ ಬಾವುಸಾಬ್‌ಗಾಗಿ ಹುಡುಕಾಟ

ನದಿಯಲ್ಲಿ ನಾಪತ್ತೆಯಾದ ಮೀನುಗಾರ ಬಾವುಸಾಬ್‌ ಗಬಾಡೆಗಾಗಿ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಸ್ಥಳಕ್ಕೆ ಬನಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನದಿಯಲ್ಲಿ ಶೋಧಕಾರ್ಯ ಮುಂದುವರಿದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Suresh Gopi
ದೇಶ2 mins ago

Suresh Gopi: ಇಂದಿರಾ ಗಾಂಧಿ ಭಾರತದ ಮಾತೆ ಎಂದ ಬಿಜೆಪಿ ಸಂಸದ ಸುರೇಶ್‌ ಗೋಪಿ

anekla news
ಬೆಂಗಳೂರು ಗ್ರಾಮಾಂತರ9 mins ago

Anekal News : ಯುವತಿ ಕೈ ಬಲಿ ಪಡೆದ ಅಕ್ರಮ ಡ್ರೈ ಕ್ಲೀನಿಂಗ್ ಕಾರ್ಖಾನೆ; ಚಿಕಿತ್ಸೆ ಕೊಡಿಸದೆ ಮಾಲೀಕ ಎಸ್ಕೇಪ್‌

Viral Video
Latest11 mins ago

Viral Video: ಜೀವಂತ ಹಾವನ್ನೇ ತರಕಾರಿಯಂತೆ ಕಚ್ಚಿ ತಿಂದ ಬೆಡಗಿ! ಈ ವಿಡಿಯೊ ನೋಡುವ ಮುನ್ನ ಯೋಚಿಸಿ!

Anganwadi workers and supervisors will get the new mobile in uttara Kannada district
ಉತ್ತರ ಕನ್ನಡ17 mins ago

Uttara Kannada News: ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರಿಗೆ ಮೊಬೈಲ್ ಕೊಡುಗೆ

Petrol Diesel Price
ಕರ್ನಾಟಕ31 mins ago

Petrol Diesel Price: ಜನರಿಗೆ ಸಿದ್ದರಾಮಯ್ಯ ಸರ್ಕಾರ ಶಾಕ್; ಪೆಟ್ರೋಲ್‌, ಡೀಸೆಲ್‌ ಬೆಲೆ 3 ರೂ. ಏರಿಕೆ

Pakistan Cricket Board
ಕ್ರಿಕೆಟ್38 mins ago

Pakistan Cricket Board: ಟಿ20 ವಿಶ್ವಕಪ್​ನಿಂದ ಹೊರಬಿದ್ದ ಬೆನ್ನಲ್ಲೇ ಹೊಸ ನಿಯಮ ಜಾರಿಗೆ ತಂದ ಪಾಕ್​ ಕ್ರಿಕೆಟ್​ ಮಂಡಳಿ

Uorfi Javed and Orry were spotted outside a restaurant in Mumbai
ಬಾಲಿವುಡ್55 mins ago

Uorfi Javed: ನೈಟ್‌ ಪಾರ್ಟಿಯ ಕಿಲಾಡಿ ಓರಿ ಮತ್ತು ಉರ್ಫಿ ಮದುವೆ ಆಗ್ತಾರಾ?

Windfall Tax
ವಾಣಿಜ್ಯ1 hour ago

Windfall Tax: ಕಚ್ಚಾ ತೈಲದ ಲಾಭ ತೆರಿಗೆಯನ್ನು ಪ್ರತಿ ಟನ್‌ಗೆ 3,250 ರೂ.ಗೆ ಇಳಿಸಿದ ಸರ್ಕಾರ

Mallikarjun Kharge
ದೇಶ1 hour ago

Mallikarjun Kharge: ಶೀಘ್ರವೇ ಮೋದಿ ಸರ್ಕಾರ ಪತನ; ಭವಿಷ್ಯ ನುಡಿದ ಮಲ್ಲಿಕಾರ್ಜುನ ಖರ್ಗೆ

Self harming
ಉತ್ತರ ಕನ್ನಡ1 hour ago

Self Harming : ಪೊಲೀಸ್‌ ಠಾಣೆ ಎದುರೇ ಬೆಂಕಿ ಹಚ್ಚಿಕೊಂಡ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಯಾದಗಿರಿ3 hours ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ23 hours ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು24 hours ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು1 day ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ1 day ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ4 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ4 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ4 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ4 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

ಟ್ರೆಂಡಿಂಗ್‌