H3N2 Virus : ಹಾಸನದ ವ್ಯಕ್ತಿ H3N2ಗೆ ಬಲಿ, ಕೋವಿಡ್‌ನಂತೆ ದೇಶದ ಮೊದಲ ಸಾವು ರಾಜ್ಯದಲ್ಲೆ, ಹರಿಯಾಣದಲ್ಲಿ 2ನೇ ಮೃತ್ಯು - Vistara News

ಆರೋಗ್ಯ

H3N2 Virus : ಹಾಸನದ ವ್ಯಕ್ತಿ H3N2ಗೆ ಬಲಿ, ಕೋವಿಡ್‌ನಂತೆ ದೇಶದ ಮೊದಲ ಸಾವು ರಾಜ್ಯದಲ್ಲೆ, ಹರಿಯಾಣದಲ್ಲಿ 2ನೇ ಮೃತ್ಯು

ಹಾಸನ ಜಿಲ್ಲೆ ಆಲೂರು ತಾಲೂಕಿನ ಮೂಲದ 78 ವರ್ಷದ ಹಿರಿಯ ನಾಗರಿಕರೊಬ್ಬರು ಮಾರ್ಚ್ 1ರಂದು ಆಲೂರಿನಲ್ಲಿ ಮೃತಪಟ್ಟಿದ್ದರು. ಇವರಿಗೆ H3N2 ಪಾಸಿಟಿವ್‌ (H3N2 death in karnataka) ಇದ್ದುದು ದೃಢವಾಗಿದೆ.

VISTARANEWS.COM


on

h3n2 virus
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹಾಸನ: ಎಚ್‌3ಎನ್‌2 ಇನ್‌ಫ್ಲುಯೆಂಜಾ ಜ್ವರಕ್ಕೆ (H3N2 Virus) ಹಾಸನದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಇದು ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲೇ ಎಚ್‌3ಎನ್‌2ಗೆ ಮೊದಲ ಬಲಿಯಾಗಿದೆ. ಈ ನಡುವೆ ಹರಿಯಾಣದಲ್ಲಿ ಇನ್ನೊಬ್ಬರು ಸಾವನ್ನಪ್ಪಿದ್ದಾರೆ. ಇದುವರೆಗೆ ಮಾರಣಾಂತಿಕವಾಗದು ಎಂಬ ನಂಬಿಕೆ ಇದ್ದ ಈ ವೈರಸ್‌ ಈಗ ಜೀವ ಬಲಿಗೆ ಕಾರಣವಾಗಿದ್ದು ಆತಂಕ ಮೂಡಿಸಿದೆ.

ಹಾಸನ ಜಿಲ್ಲೆ ಆಲೂರು ತಾಲೂಕಿನ ಮೂಲದ 78 ವರ್ಷದ ಹಿರಿಯ ನಾಗರಿಕರೊಬ್ಬರು ಮಾರ್ಚ್ 1ರಂದು ಆಲೂರಿನಲ್ಲಿ ಮೃತಪಟ್ಟಿದ್ದರು. ಇವರಿಗೆ H3N2 ಪಾಸಿಟಿವ್‌ ಇದ್ದುದು ದೃಢವಾಗಿದೆ. ಜ್ಚರ, ಗಂಟಲುನೋವು, ಕೆಮ್ಮಿನಿಂದ ಇವರು ಬಳಲುತ್ತಿದ್ದರು. ಮೃತರಿಗೆ H3N2 ಇದ್ದುದನ್ನು ಆರೋಗ್ಯ ಇಲಾಖೆ ದೃಢಪಡಿಸಿದ್ದು, ಈ ಸೋಂಕಿನ ಬಗ್ಗೆ ಇನ್ನಷ್ಟು ಆತಂಕ ಮೂಡಿಸಿದೆ.

H3N2 ವೈರಸ್‌ನಿಂದ ರಾಜ್ಯದಲ್ಲಿ ಆಗುತ್ತಿರುವ ಮೊದಲ ಸಾವು ಇದಾಗಿದೆಯಲ್ಲದೆ, ದೇಶದಲ್ಲಿಯೇ ಮೊದಲ ಸಾವು ಕೂಡ ಆಗಿದೆ. ಕೋವಿಡ್‌ ವೈರಸ್‌ನ ಮೊದಲ ಸಾವು ಕೂಡ ಕರ್ನಾಟಕದ ಕಲಬುರಗಿಯಲ್ಲಿ ಆಗಿದ್ದುದನ್ನು ಇಲ್ಲಿ ಸ್ಮರಿಸಬಹುದು.

ಮೃತ ವ್ಯಕ್ತಿ ಇರುವ ಗ್ರಾಮದ ಸುತ್ತಮುತ್ತಲ‌ ಹಳ್ಳಿಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಅನಾರೋಗ್ಯ ಪೀಡಿತರು ಹಾಗು ವೃದ್ಧರನ್ನು ಹೆಚ್ಚಿನ ಪರೀಕ್ಷೆಗೆ ಒಳಪಡಿಸಲಾಗಿದೆ. ಗಂಟಲು ದ್ರವವನ್ನು ಲ್ಯಾಬ್‌ಗೆ ಕಳಿಸಲಾಗಿದೆ ಎಂದು ವಿಸ್ತಾರ ನ್ಯೂಸ್‌ಗೆ ಡಿಎಚ್‌ಒ ಡಾ.ಶಿವಸ್ವಾಮಿ ಮಾಹಿತಿ ನೀಡಿದ್ದಾರೆ.

ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹೆಚ್3ಎನ್2 ವೈರಸ್ ಪತ್ತೆಯಾಗಿದೆ. ರಾಜ್ಯದಲ್ಲಿ ಸುಮಾರು 50ಕ್ಕೂ ಹೆಚ್ಚು ಕೇಸ್‌ಗಳು ದಾಖಲಾಗಿವೆ. ಹಾಸನದಲ್ಲಿ ಆರು ಮಂದಿಯಲ್ಲಿ ಈ ವೈರಸ್ ಪತ್ತೆಯಾಗಿದೆ. ಕೋವಿಡ್‌ ನಂತರ ಆತಂಕ ಮೂಡಿಸಿರುವ ಈ ಜ್ವರದಿಂದ ಕೋಮಾರ್ಬಿಡಿಟೀಸ್‌ ಇರುವವರು ಹಾಗೂ ಹಿರಿಯ ನಾಗರಿಕರಿಗೆ ಹೆಚ್ಚಿನ ಆತಂಕವಿದ್ದು, ಎಚ್ಚರದಿಂದ ಇರುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.

ಡಯಾಬಿಟೀಸ್‌ ಮುಂತಾದ ಕಾಯಿಲೆಗಳು ಹಾಗೂ 60 ವರ್ಷ ಮೇಲ್ಪಟ್ಟವರ ಮೇಲೆ ನಿಗಾ ಇಡಲು ಆರೋಗ್ಯ ಇಲಾಖೆ ಮುಂದಾಗಿದೆ. ಜ್ವರ ಕಾಣಿಸಿಕೊಂಡವರು ಸ್ವಯಂ ಚಿಕಿತ್ಸೆ ತೆಗೆದುಕೊಳ್ಳದೇ ವೈದ್ಯರ ಭೇಟಿ ಮಾಡಲು ಸೂಚಿಸಲಾಗಿದೆ.

ಇದನ್ನೂ ಓದಿ: H3N2 Influenza: ಕೊವಿಡ್ 19ಗೂ-ಎಚ್​3ಎನ್​2ಗೂ ಏನು ಸಂಬಂಧ?-ಐಸಿಯು ದಾಖಲಾತಿ ಕೇಸ್​​ ಹೆಚ್ಚಾಗುತ್ತಿರುವ ಆತಂಕ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Healthcare Tips For Women: 30 ವರ್ಷದ ಬಳಿಕ ಮಹಿಳೆಯರು ಮಾಡಿಸಿಕೊಳ್ಳಲೇಬೇಕಾದ ಆರೋಗ್ಯ ಪರೀಕ್ಷೆಗಳಿವು

ಇತ್ತೀಚಿನ ದಿನಗಳಲ್ಲಿ ಪೌಷ್ಟಿಕತೆ ಮತ್ತು ಫಿಟ್‌ನೆಸ್‌ ಬಗ್ಗೆ ನಗರ ಪ್ರದೇಶದ ಒಂದಿಷ್ಟು ಮಹಿಳೆಯರು ಗಮನ ನೀಡುತ್ತಿದ್ದಾರೆ. ಆದರೆ ಮಹಿಳೆಯರ ಸ್ವಾಸ್ಥ್ಯ ರಕ್ಷಣೆಗೆ ಇದಿಷ್ಟೇ ಸಾಲದು. ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ನಿಯಮಿತವಾಗಿ ಮಾಡಿಸಿಕೊಳ್ಳುವುದು ಒಳ್ಳೆಯದು. ಯಾವುದವು? ಈ ಬಗ್ಗೆ (Healthcare tips for women) ಇಲ್ಲಿದೆ ಮಾಹಿತಿ.

VISTARANEWS.COM


on

Healthcare Tips For Women
Koo

ಕುಟುಂಬದ ಎಲ್ಲರ ದೇಖರೇಖಿ ಮಾಡುವ ಭರದಲ್ಲಿ, ವೃತ್ತಿಯ ಅಥವಾ ಉದ್ಯೋಗದ ಒತ್ತಡಗಳನ್ನು ಎದುರಿಸುವ ನಡುವಲ್ಲಿ, ಮಹಿಳೆಯರಿಗೆ ತಮ್ಮ ಆರೋಗ್ಯದ ಬಗ್ಗೆ ಗಮನ ಹೋಗುವುದು ಕಡಿಮೆ. ಆದರೆ ವೈಯಕ್ತಿಯ ಸ್ವಾಸ್ಥ್ಯ ಎನ್ನುವ ಕಲ್ಪನೆ ಇತ್ತೀಚೆಗೆ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ಫಿಟ್‌ನೆಟ್‌ ಮತ್ತು ಸತ್ವಭರಿತ ಆಹಾರದ ಸೇವನೆಯತ್ತ ನಗರ ಪ್ರದೇಶಗಳ ಒಂದಿಷ್ಟು ಮಹಿಳೆಯರು ಮನಮಾಡಿದ್ದಾರೆ. ಇದಿಷ್ಟೇ ಅಲ್ಲ, 30ರ ವಯೋಮಾನದ ನಂತರ ಮಹಿಳೆಯರು (Healthcare tips for women) ತಮ್ಮ ದೇಹಾರೋಗ್ಯದ ಬಗ್ಗೆ ಹಲವು ರೀತಿಯಲ್ಲಿ ಗಮನ ನೀಡಬೇಕಾಗುತ್ತದೆ. ಇದಕ್ಕೆ ನೆರವಾಗುವಂಥ ಒಂದಿಷ್ಟು ವೈದ್ಯಕೀಯ ಪರೀಕ್ಷೆಗಳನ್ನೂ ಕಾಲಕಾಲಕ್ಕೆ ಮಾಡಿಸಬೇಕಾಗುತ್ತದೆ. ಯಾವುವು ಆ ಪರೀಕ್ಷೆಗಳು? ಅದರಿಂದ ಏನಾಗುತ್ತದೆ?

HPV and Pap test

ಎಚ್‌ಪಿವಿ ಮತ್ತು ಪ್ಯಾಪ್‌ ಟೆಸ್ಟ್‌

ಗರ್ಭ ಕೊರಳಿನ ಕ್ಯಾನ್ಸರ್‌ ಪತ್ತೆಗೆ ಅಗತ್ಯವಾದ ಪರೀಕ್ಷೆಗಳಿವು. 30 ವರ್ಷದ ನಂತರ ಮಹಿಳೆಯರು ಪ್ರತಿ ಐದು ವರ್ಷಗಳಿಗೊಮ್ಮೆ ಈ ಪರೀಕ್ಷೆಗಳನ್ನು ಮಾಡಿಸಬೇಕು. ಇದರಿಂದ ಗರ್ಭಕೊರಳಿನ ಕೋಶಗಳಲ್ಲಿ ಯಾವುದಾದರೂ ಅಸಾಮಾನ್ಯ ಬೆಳವಣಿಗೆಗಳಿದ್ದರೆ ಮುಂಚಿತವಾಗಿಯೇ ಪತ್ತೆಯಾಗುತ್ತದೆ. ಇಂಥ ಕ್ಯಾನ್ಸರ್‌ಕಾರಕ ಕೋಶಗಳ ಇರುವಿಕೆ ಪ್ರಾರಂಭದಲ್ಲೇ ಪತ್ತೆಯಾದರೆ ಚಿಕಿತ್ಸೆಯನ್ನೂ ಪರಿಣಾಮಕಾರಿಯಾಗಿ ನೀಡುವುದಕ್ಕೆ, ಪೂರ್ಣ ಗುಣವಾಗುವುದಕ್ಕೆ ಸಾಧ್ಯವಿದೆ. ಎಚ್‌ಪಿವಿ ಪರೀಕ್ಷೆಯಿಂದ ಕ್ಯಾನ್ಸರ್‌ಗೆ ಕಾರಣವಾಗುವ ಹ್ಯೂಮನ್‌ ಪ್ಯಾಪಿಲೋಮ ವೈರಸ್‌ನ ಇರುವಿಕೆ ಪತ್ತೆ ಮಾಡಬಹುದು.

Mammogram

ಮ್ಯಾಮೊಗ್ರಾಮ್‌

ಸ್ತನ ಕ್ಯಾನ್ಸರ್‌ನ ಪತ್ತೆಗೆ ಈ ಪರೀಕ್ಷೆಯನ್ನು ಮಾಡಲಾಗುತ್ತದೆ. 30ರ ನಂತರ ಸ್ತನ ಪರೀಕ್ಷೆಗಳನ್ನು ಮಾಡಿಕೊಳ್ಳುವುದು ಅಗತ್ಯ. 40ರ ನಂತರ ಎರಡು ವರ್ಷಕ್ಕೊಮ್ಮೆ ಮ್ಯಾಮೊಗ್ರಾಮ್‌ ಮಾಡಿಸಿಕೊಳ್ಳುವುದು ಸೂಕ್ತ. ಈ ಪರೀಕ್ಷೆಯಲ್ಲಿ ಪ್ರಾರಂಭಿಕ ಹಂತದಲ್ಲಿರುವ ಕ್ಯಾನ್ಸರ್‌ ಕೋಶಗಳನ್ನು ಪತ್ತೆ ಮಾಡಬಹುದು. ಇದರಿಂದ ಚಿಕಿತ್ಸೆಯೂ ಪರಿಣಾಮಕಾರಿಯಾಗಿ, ಬದುಕುಳಿಯುವ ಪ್ರಮಾಣವೂ ಹೆಚ್ಚುತ್ತದೆ.

Bone Health In Winter

ಮೂಳೆ ಸಾಂದ್ರತೆ ಪರೀಕ್ಷೆ

ವಯಸ್ಸು ಹೆಚ್ಚುತ್ತಿದ್ದಂತೆ ಮಹಿಳೆಯರನ್ನು ಕಾಡುವ ಹಲವು ತೊಂದರೆಗಳ ಪೈಕಿ ಆಸ್ಟಿಯೊಪೊರೊಸಿಸ್‌ ಸಹ ಒಂದು. ಈ ಕಾಯಿಲೆಯಲ್ಲಿ, ಮೂಳೆಗಳು ಅಲ್ಲಲ್ಲಿ ಟೊಳ್ಳಾಗಿ ಮುರಿಯುವ ಸಾಧ್ಯತೆ ಉಂಟಾಗುತ್ತದೆ. ಮೂಳೆ ಸಾಂದ್ರತೆ ಪರೀಕ್ಷೆ ಅಥವಾ ಡೆಕ್ಸಾ ಸ್ಕ್ಯಾನ್‌ನಿಂದ ಮೂಳೆಗಳ ಸಾಂದ್ರತೆ ಎಲ್ಲಾದರೂ ಕಡಿಮೆಯಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಬಹುದು.

Drinks That Control Blood pressure

ಬಿಪಿ ಪರೀಕ್ಷೆ

ಒತ್ತಡದ ಜೀವನದಿಂದಾಗಿ ರಕ್ತದ ಏರೊತ್ತಡದ ಸಮಸ್ಯೆ 30ರ ನಂತರವೇ ಕಾಣಬರುತ್ತಿದೆ. ಇದರಿಂದ ಹೃದಯದ ತೊಂದರೆಗಳು, ಪಾರ್ಶ್ವವಾಯುವಿನಂಥ ಸಮಸ್ಯೆಗಳಿಗೆ ದಾರಿಯಾಗುತ್ತದೆ. ಹಾಗಾಗಿ ಸಮಸ್ಯೆಯ ಆರಂಭವನ್ನು ಗುರುತಿಸಿದರೆ, ಅದನ್ನು ಹತೋಟಿಯಲ್ಲಿ ತರುವುದಕ್ಕೆ ಬೇಕಾದ ಜೀವನಶೈಲಿಯ ಬದಲಾವಣೆಗಳನ್ನು ಮಾಡಿಕೊಳ್ಳಲು ಅನುಕೂಲ

Image Of Diabetes Control

ಮಧುಮೇಹ ಪರೀಕ್ಷೆ

ಸಕ್ಕರೆ ಕಾಯಿಲೆಯಂತೂ ಮಕ್ಕಳಾದಿಯಾಗಿ ಎಲ್ಲ ವಯೋಮಾನದ ಜನರನ್ನು ಬಾಧಿಸುತ್ತಿದೆ. 30ರ ನಂತರ ಮಹಿಳೆಯರು ಈ ಪರೀಕ್ಷೆಯನ್ನು ಮಾಡಿಸಿಕೊಳ್ಳುತ್ತಿದ್ದರೆ ಮಧುಮೇಹ-ಪೂರ್ವ ‍ಸ್ಥಿತಿಯಲ್ಲೇ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಡಯಾಬಿಟಿಸ್‌ ರಿವರ್ಸಲ್‌ ಎನ್ನುವುದು ಈಗಿನ ಹೊಸ ಸಾಧ್ಯತೆ.

ಕೊಲೆಸ್ಟ್ರಾಲ್‌ ತಪಾಸಣೆ

ಲಿಪಿಡ್‌ ಪರೀಕ್ಷೆ ಅಥವಾ ಕೊಲೆಸ್ಟ್ರಾಲ್‌ ಪರೀಕ್ಷೆಯೂ 30 ನಂತರ ಬೇಕಾಗುತ್ತದೆ. ದೇಹದ ಚಯಾಪಚಯ ಸರಿಯಾಗಿ ಇಲ್ಲದಿದ್ದಾಗ ಬಾಧಿಸಬಹುದಾದ ತೊಂದರೆಗಳಲ್ಲಿ ಕೊಲೆಸ್ಟ್ರಾಲ್‌ ಹೆಚ್ಚಳವೂ ಒಂದು. ಇದನ್ನೂ ಪ್ರಾರಂಭದಲ್ಲಿ ಪತ್ತೆ ಮಾಡಿದರೆ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಂಡು, ವೈದ್ಯರ ಸಲಹೆಯ ಮೇಲೆಗೆ ಚಿಕಿತ್ಸೆಯನ್ನೂ ತೆಗೆದುಕೊಂಡರೆ ಹೃದಯವನ್ನು ಜೋಪಾನ ಮಾಡಿಕೊಳ್ಳಬಹುದು.

ಥೈರಾಯ್ಡ್‌ ಪರೀಕ್ಷೆ

ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಕಾಣಬರುತ್ತಿರುವ ಸಮಸ್ಯೆಯಿದು. ಕೆಲವೊಮ್ಮ ಅಟೊಇಮ್ಯೂನ್‌ ಕಾಯಿಲೆಗಳೂ ಇದಕ್ಕೆ ಕಾರಣವಾಗಿರಬಹುದು. ಆದರೆ ಥೈರಾಯ್ಡ್‌ ಹೆಚ್ಚು-ಕಡಿಮೆ ಇಲ್ಲದಂತೆ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಎಂಬುದನ್ನು ೩೦ರ ನಂತರ ನೋಡಬೇಕಾಗುತ್ತದೆ. ತೂಕ ಏರಿಳಿತ, ಸುಸ್ತು, ಕೂದಲು ಉದುರುವುದು ಮುಂತಾದ ಲಕ್ಷಣಗಳಿದ್ದರೆ ವೈದ್ಯರ ಸಲಹೆಯ ಮೇರೆಗೆ ಈ ಪರೀಕ್ಷೆಯನ್ನು ಶೀಘ್ರವಾಗಿ ಮಾಡಿಸಬೇಕಾಗಬಹುದು. ಥೈರಾಯ್ಡ್‌ ಸಮಸ್ಯೆಯ ಲಕ್ಷಣಗಳು ಇಲ್ಲದಿದ್ದರೆ, 30ರ ನಂತರ ಪ್ರತಿ ಎರಡು ವರ್ಷಗಳಿಗೆ ನೋಡಿದರೆ ಸಾಕಾಗುತ್ತದೆ.

Cancer test

ಕೊಲೊರೆಕ್ಟಲ್‌ ಕ್ಯಾನ್ಸರ್‌ ಪರೀಕ್ಷೆ

ಇದು ಕರುಳು ಮತ್ತು ಗುದದ್ವಾರದ ನಡುವಿನ ಭಾಗದ ಪರೀಕ್ಷೆ. ಇದನ್ನು ಸಾಮಾನ್ಯವಾಗಿ 50ರ ನಂತರ ಮಾಡಿಸಲು ಸೂಚಿಸಲಾಗುತ್ತದೆ. ಆದರೆ ಕುಟುಂಬದಲ್ಲಿ ಇಂಥ ಪ್ರಕರಣಗಳಿದ್ದರೆ, ಮುಂಚಿತವಾಗಿಯೇ ಮಾಡಿಸುವುದು ಸೂಕ್ತ. ಕೊಲೊನೊಸ್ಕೊಪಿಯಂಥ ಪರೀಕ್ಷೆಗಳಲ್ಲಿ ಪ್ರಾರಂಭಿಕ ಹಂತದಲ್ಲೇ ಸಮಸ್ಯೆಗಳನ್ನು ಪತ್ತೆ ಮಾಡಬಹುದು.

ಇದನ್ನೂ ಓದಿ: Benefits of Bamboo Shoots: ಮೂಳೆಗಳ ನೋವು, ಮಲಬದ್ಧತೆ ನಿವಾರಣೆಗೆ ಎಳೆಯ ಬಿದಿರು ಸೇವನೆ ಮದ್ದು

Continue Reading

ಆರೋಗ್ಯ

Mangoes for Health: ದಿನಕ್ಕೆ ಎಷ್ಟು ಮಾವಿನ ಹಣ್ಣು ತಿಂದರೆ ಆರೋಗ್ಯಕ್ಕೆ ಒಳ್ಳೆಯದು?

ಮಾವಿನ ಹಣ್ಣು (Mangoes for Health) ಕೊಟ್ಟರೆ ಎಷ್ಟೂ ತಿನ್ನುತ್ತೇವೆ ಎನ್ನುವವರಿದ್ದಾರೆ. ಹಾಗಂತ ದಿನಕ್ಕೆ 10 ಮಾವಿನ ಹಣ್ಣು ತಿನ್ನಲಾದೀತೇ? ಹಾಗೆ ತಿಂದರೆ ಆರೋಗ್ಯದ ಗತಿ ಏನು? ಹಾಗಾದರೆ ಒಂದೇ ತಿನ್ನಬೇಕೆ? ಎರಡು ತಿಂದರೆ ಸಾಕೇ? ಮಾವಿನ ಹಣ್ಣು ಇಷ್ಟವೆಂದು ಕಷ್ಟ ಬೀಳುವಷ್ಟು ಸೇವಿಸಬಹುದೇ? ದಿನಕ್ಕೆ ಎಷ್ಟು ಮಾವಿನ ಹಣ್ಣು ತಿಂದರೆ ಸಾಕು ಮತ್ತು ಬೇಕು? ಅದನ್ನು ಹೇಗೆ ತಿಳಿಯುವುದು? ಈ ಲೇಖನ ಓದಿ.

VISTARANEWS.COM


on

Mangoes for Health
Koo

ಮಾವಿನ ಹಣ್ಣಿನ (Mangoes for Health) ಋತು ಪ್ರಾರಂಭವಾಗಿದೆ. ಆ ಹಣ್ಣಿನ ಜಾತಿ, ಬಣ್ಣ, ಆಕೃತಿ, ಗಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ, ಅದರ ರುಚಿ ಮತ್ತು ಪರಿಮಳಕ್ಕೆ ಮನಸೋಲುವ ದೇಶ ನಮ್ಮದು. ಹಾಗಾಗಿ ಮಾವಿನ ಕಾಲವನ್ನು ದೊಡ್ಡ ಹಬ್ಬದಂತೆಯೇ ಸಂಭ್ರಮಿಸುತ್ತೇವೆ. ಮಿಡಿಯಾಗಿದ್ದಾಗ ಉಪ್ಪಿನಕಾಯಿ ಹಾಕುವುದರಿಂದ ಹಿಡಿದು, ಕಾಯಿ, ಹಣ್ಣುಗಳವರೆಗೆ ಸಿಹಿ-ಖಾರದ ಹಲವು ಅಡುಗೆಗಳನ್ನು ಮಾಡುತ್ತೇವೆ. ಇನ್ನು ಹಣ್ಣುಗಳನ್ನು ಹಾಗೆಯೇ ತಿನ್ನುವುದಕ್ಕೆ ದಾಕ್ಷಿಣ್ಯ ಮಾಡಿಕೊಳ್ಳುವವರು ಹುಡುಕಿದರೂ ಸಿಗಲಿಕ್ಕಿಲ್ಲ. ಈ ಹಣ್ಣಿನ ಘಮ-ರುಚಿಯ ಮೇಲೆ ಆಣೆ-ಭಾಷೆಗಳನ್ನು ಹಾಕುವವರೂ ಇರಬಹುದೆಂದರೆ ಇದರ ಜನಪ್ರಿಯತೆಯನ್ನು ಯಾರೂ ಊಹಿಸಬಹುದು. ವಿಷಯವೀಗ ಅದಲ್ಲ, ದಿನಕ್ಕೆ ಎಷ್ಟು ಮಾವಿನ ಹಣ್ಣು ತಿನ್ನಬಹುದು?
ಕೊಟ್ಟರೆ ಎಷ್ಟೂ ತಿನ್ನುತ್ತೇವೆ ಎನ್ನುವವರಿದ್ದಾರೆ. ಹಾಗಂತ ದಿನಕ್ಕೆ 10 ಮಾವಿನ ಹಣ್ಣು ತಿನ್ನಲಾದೀತೇ? ಹಾಗೆ ತಿಂದರೆ ಆರೋಗ್ಯದ ಗತಿ ಏನು? ಹಾಗಾದರೆ ಒಂದೇ ತಿನ್ನಬೇಕೆ? ಎರಡು ತಿಂದರೆ ಸಾಕೇ? ಅದರಲ್ಲೂ ಮಧುಮೇಹವಿದ್ದವರು ಮಾವಿನ ಹಣ್ಣಿನ ಪ್ರಿಯರಾಗಿದ್ದರೆ… ಅವರ ಕಷ್ಟ ಹೇಳಿ ಸುಖವಿಲ್ಲ. ಹಾಗಾದರೆ ಮಧುಮೇಹಿಗಳು ಮಾವು ತಿನ್ನಲೇಬಾರದೇ? ತಿಂದರೆ ಎಷ್ಟು?- ಇಂಥ ಹಲವು ಪ್ರಶ್ನೆಗಳು ಕಾಡಬಹುದು ಮಾವಿನ ಪ್ರಿಯರನ್ನು. ಈ ಪ್ರಶ್ನೆಗಳಿಗೆ ಉತ್ತರಿಸಲು ಈ ಲೇಖನದಲ್ಲಿ ಯತ್ನಿಸಲಾಗಿದೆ.

National Mango Day 2023

ಸತ್ವಗಳೇನಿವೆ?

ಒಂದು ಮಾವಿನ ಹಣ್ಣನ್ನು ಸಣ್ಣದು, ದೊಡ್ಡದು- ಹೀಗೆಲ್ಲ ವರ್ಣಿಸಿದರೆ ಗೊಂದಲ ಹೆಚ್ಚಾಗುತ್ತದೆ. ಹಾಗಾಗಿ ಒಂದು ಕಪ್‌ ಅಥವಾ 165 ಗ್ರಾಂ ಮಾವಿನ ಹಣ್ಣು ಎಷ್ಟು ಕ್ಯಾಲರಿಗಳನ್ನು ನಮಗೆ ನೀಡುತ್ತದೆ ಎಂಬುದನ್ನು ತಿಳಿಯೋಣ. 165 ಗ್ರಾಂ ತಾಜಾ ಮಾವಿನ ಹಣ್ಣಿನಲ್ಲಿ ಅಂದಾಜು 100 ಕ್ಯಾಲರಿ ದೊರೆಯುತ್ತದೆ. ಅದರಲ್ಲಿ 1.4 ಗ್ರಾಂ ಪ್ರೊಟೀನ್‌, 25 ಗ್ರಾಂ ಪಿಷ್ಟ, 2.8ಗ್ರಾಂ ನಾರು ಮತ್ತು 23 ಗ್ರಾಂ ಸಕ್ಕರೆ ಪ್ರಮುಖವಾದವು. ಅದಲ್ಲದೆ, ದೈನಂದಿನ ಅಗತ್ಯದ ಶೇ. 67ರಷ್ಟು ವಿಟಮಿನ್‌ ಸಿ ಇದಿಷ್ಟೇ ಮಾವಿನ ಹಣ್ಣಿನಿಂದ ದೊರೆಯುತ್ತದೆ. ಜೊತೆಗೆ, ಫೋಲೇಟ್‌, ತಾಮ್ರ, ಮೆಗ್ನೀಶಿಯಂ ಹಲವು ವಿಟಮಿನ್‌ಗಳು ಈ ಹಣ್ಣಿನಲ್ಲಿವೆ.

ಎಷ್ಟು ತಿನ್ನಬಹುದು?

ಎರಡು ಕಪ್‌ ಮಾವಿನ ಹಣ್ಣು ಅಥವಾ 330 ಗ್ರಾಂ ಮಾವಿನ ಹಣ್ಣನ್ನು (ಮಧ್ಯಮ ಗಾತ್ರದ ಎರಡು ಹಣ್ಣು ಎಂದಿಟ್ಟುಕೊಳ್ಳಿ) ಒಂದು ದಿನಕ್ಕೆ ಸೇವಿಸಿದರೆ ಸಾಕು ಎಂಬುದು ಆಹಾರ ತಜ್ಞರ ಲೆಕ್ಕಾಚಾರ. ಇಷ್ಟೊಂದು ರುಚಿಯಾದ ಹಣ್ಣನ್ನು ದಿನಕ್ಕೊಂದು ನಾಲ್ಕಾರು ತಿನ್ನುವಂತಿಲ್ಲವೇ ಎಂದು ಮರುಗಿದರೆ, ಊಹುಂ. ಇದರಲ್ಲಿರುವ ಸಕ್ಕರೆಯಂಶವೇ ಈ ಮಿತಿಯನ್ನು ಅನುಸರಿಸಲು ಕಾರಣ. ಜೊತೆಗೆ ನಾರು ಸಹ ಇರುವುದರಿಂದ, ಅತಿಯಾಗಿ ತಿಂದರೆ ಅತಿಸಾರ ಅಥವಾ ಡಯರಿಯ ಕಾಡುವುದರಲ್ಲಿ ಅನುಮಾನವಿಲ್ಲ. ಮಿತಿಮೀರಿ ತಿಂದರೆ ತೂಕ ಹೆಚ್ಚುವುದಂತೂ ನಿಶ್ಚಿತ. ಹಾಗಾಗಿ ಮಾವಿನ ಹಣ್ಣನ್ನು ದಿನವೂ ಸೇವಿಸಬಹುದು, ಆದರೆ ಮಿತವಾಗಿ.

Health Tips For diabetic patients

ಮಧುಮೇಹಿಗಳು…?

ಅವರಿಗೆ ಈ ಹಣ್ಣು ನಿಷಿದ್ಧವಂತೂ ಅಲ್ಲ. ಆದರೆ ಸರಿಯಾದ ಪ್ರಮಾಣದ ಹಣ್ಣನ್ನು ಸರಿಯಾದ ರೀತಿಯಲ್ಲಿ ತಿನ್ನುವುದು ಮುಖ್ಯ. ಯಾವುದೇ ಆಹಾರವನ್ನು ತಿಂದರೂ ಸಕ್ಕರೆಯಂಶ ವ್ಯತ್ಯಾಸವಾಗುವುದು ಖಚಿತ. ಆದರೆ ಗ್ಲೈಸೆಮಿಕ್‌ ಸೂಚಿ ಕಡಿಮೆಯಿರುವ ಆಹಾರಗಳಿಂದ ಈ ಏರಿಳಿತವನ್ನು ಮಿತಿಯಲ್ಲಿ ಇರಿಸಿಕೊಳ್ಳಲು ಸಾಧ್ಯವಾಗುತ್ತದೆ. ಅದರಲ್ಲೂ ಋತುಮಾನದ ಹಣ್ಣುಗಳು ಎಲ್ಲರ ಆರೋಗ್ಯಕ್ಕೂ ಅಗತ್ಯ.
ಊಟ, ತಿಂಡಿಯ ಜೊತೆಗೆ ಅಥವಾ ನಂತರ ಮಾವಿನ ಹಣ್ಣನ್ನು ಮಧುಮೇಹಿಗಳು ಸೇವಿಸದಿದ್ದರೆ ಒಳ್ಳೆಯದು. ಅವೆರಡರ ನಡುವಿನ ತಿಂಡಿಯಂತೆ ಇದನ್ನು ಅಲ್ಪಪ್ರಮಾಣದಲ್ಲಿ ಸೇವಿಸಿ ನೋಡಿ. ಉದಾ, ಮೊದಲಿಗೆ ಅರ್ಧ ಹಣ್ಣು ಸೇವಿಸಿ, ಎರಡು ತಾಸುಗಳ ನಂತರ ರಕ್ತದಲ್ಲಿನ ಸಕ್ಕರೆಯಂಶವನ್ನು ಅಳೆಯಿರಿ. ಇದು ಮಿತಿಯಲ್ಲಿ ಇದೆಯೆಂದಾದರೆ ಅರ್ಧ ಹಣ್ಣನ್ನು ನೀವು ಸೇವಿಸಬಹುದು. ಒಂದೊಮ್ಮೆ ಸಕ್ಕರೆಯಂಶ ಏರಿದೆಯೆಂದರೆ, ಹಣ್ಣಿನ ಪ್ರಮಾಣವನ್ನು ಕಡಿಮೆ ಮಾಡಿ. ಈ ಹಣ್ಣನ್ನು ಜ್ಯೂಸ್‌ ಅಥವಾ ಶೇಕ್‌ ಮಾಡಿ ಸೇವಿಸುವುದಕ್ಕಿಂತ ಹಣ್ಣನ್ನು ಹಾಗೆಯೇ ತಿನ್ನಿ. ಇದರಿಂದ ಹಣ್ಣಿನ ನಾರೂ ದೇಹ ಸೇರುತ್ತದೆ. ಉಳಿದ ಹಣ್ಣು, ತರಕಾರಿಗಳ ಜೊತೆಗೆ ಸಲಾಡ್‌ ಮಾಡಿ ಅದಕ್ಕೆ ಕೊಂಚ ಮಾವು ಸೇರಿಸಿದರೆ ಸಮಸ್ಯೆಯಾಗದು.

ಇದನ್ನೂ ಓದಿ: ORS: ಒಆರ್‌ಎಸ್‌ ಜೀವಜಲ; ಯಾರು, ಎಷ್ಟು ಪ್ರಮಾಣದಲ್ಲಿ ಸೇವಿಸಬಹುದು?

Continue Reading

ಆರೋಗ್ಯ

ORS: ಒಆರ್‌ಎಸ್‌ ಜೀವಜಲ; ಯಾರು, ಎಷ್ಟು ಪ್ರಮಾಣದಲ್ಲಿ ಸೇವಿಸಬಹುದು?

ನಮಗೆ ನಿಜಕ್ಕೂ ಒಆರ್‌ಎಸ್‌ (ORS) ಅಗತ್ಯ ಬೀಳುವುದು ಯಾವಾಗ? ಮಧುಮೇಹ ಇದ್ದವರೂ ಇದನ್ನು ಕುಡಿಯಬಹುದೇ? ಮಕ್ಕಳಿಗೂ ಸೂಕ್ತವೇ? ಒಆರ್‌ಎಸ್‌ ಪುಡಿ ಒಳ್ಳೆಯದೋ ಅಥವಾ ಜ್ಯೂಸ್‌ ರೀತಿಯಲ್ಲಿರುವ ಒಆರ್‌ಎಸ್‌ ಒಳ್ಳೆಯದೋ? ಈ ಕುರಿತು ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

drinking ors
Koo

ಬಿಸಿಲಿನ ಝಳ (ORS) ನೆತ್ತಿ ಸುಡುವಂತಿದೆ. ತಾಪಮಾನ 40 ಡಿಗ್ರಿ ಸೆ. ಆಚೀಚೆ ಬರುತ್ತಿದ್ದಂತೆ ನಿರ್ಜಲೀಕರಣಕ್ಕೆ ತುತ್ತಾಗದಂತೆ ಕಾಪಾಡಿಕೊಳ್ಳಲು ಹಲವು ಪ್ರಯತ್ನಗಳಲ್ಲಿ ಜನ ನಿರತರಾಗಿರುವುದು ಕಂಡುಬರುತ್ತದೆ. ಅವುಗಳಲ್ಲಿ ಪ್ರಮುಖ ಪೇಯವೆಂದರೆ ಒಆರ್‌ಎಸ್‌ ಅಥವಾ ಓರಲ್‌ ರಿಹೈಡ್ರೇಶನ್‌ ಸೊಲ್ಯೂಶನ್‌. ದೇಹಕ್ಕೆ ಅಗತ್ಯವಾದ ನೀರು, ಸಕ್ಕರೆ ಮತ್ತು ಲವಣಗಳನ್ನು ಹೊಂದಿರುವ ಈ ದ್ರಾವಣದ ಸೇವನೆಯಿಂದ ನಿರ್ಜಲೀಕರಣಕ್ಕೆ ತುತ್ತಾಗಿ ಪ್ರಾಣಾಪಾಯ ಆಗುವುದರಿಂದ ಪಾರಾಗಬಹುದು. ಆದರೆ ಇದನ್ನು ಯಾರು, ಎಷ್ಟು ಕುಡಿಯಬಹುದು? ಸೆಕೆಗೆ ತತ್ತರಿಸುತ್ತಿರುವ ಈ ದಿನಗಳಲ್ಲಿ ಒಆರ್‌ಎಸ್‌ನಂಥವು ಎಷ್ಟು ಬೇಕಿದ್ದರೂ ಹೊಟ್ಟೆ ಸೇರುತ್ತವೆ. ಆದರೆ ಇದನ್ನು ಎಷ್ಟು ಕುಡಿದರೆ ಸಾಕು ಮತ್ತು ಬೇಕು? ನಿರ್ಜಲೀಕರಣದಿಂದ ಕಳೆದುಕೊಂಡ ಖನಿಜಾಂಶಗಳನ್ನು ಮತ್ತು ನೀರನ್ನು ದೇಹಕ್ಕೆ ಮರಳಿ ಒದಗಿಸಿಕೊಡುವ ವ್ಯವಸ್ಥಿತವಾದ ಮಾರ್ಗವಿದು. ಬೇಸಿಗೆಯ ತೀವ್ರತೆ ವಿಪರೀತವಾದ ಮೇಲೆ ರಾಜಧಾನಿಯೊಂದರಲ್ಲೇ ಒಆರೆಸ್‌ ಮಾರಾಟ ಶೇ. ೬೦ರಷ್ಟು ಹೆಚ್ಚಿದೆ. ಅದರಲ್ಲೂ ವಾಂತಿ, ಡಯರಿಯಾ, ಸುಸ್ತು ಮತ್ತು ನಿರ್ಜಲೀಕರಣದ ಲಕ್ಷಣಗಳು ಕಾಣುತ್ತಿದ್ದಂತೆ ಒಂದು ಸ್ಯಾಶೆ ಒಆರೆಸ್‌ ನೀರಿಗೆ ಬೆರೆಸಿ ಕುಡಿದರೆ, ಜೀವಕ್ಕೆ ತಂಪಾಗುತ್ತದೆ ಎಂಬುದು ಬಹುತೇಕ ಮಂದಿಗೆ ಅನುಭವಕ್ಕೆ ಬಂದಿದೆ. ಆದರೆ ನಮಗೆ ನಿಜಕ್ಕೂ ಓಆರೆಸ್‌ ಅಗತ್ಯ ಬೀಳುವುದು ಯಾವಾಗ? ಮಧುಮೇಹ ಇದ್ದವರೂ ಇದನ್ನು ಕುಡಿಯಬಹುದೇ? ಮಕ್ಕಳಿಗೂ ಸೂಕ್ತವೇ? ಒಆರೆಸ್‌ ಪುಡಿ ಒಳ್ಳೆಯದೋ ಅಥವಾ ಜ್ಯೂಸ್‌ ರೀತಿಯಲ್ಲಿರುವ ಒಆರೆಸ್ಸೆಲ್‌ ಒಳ್ಳೆಯದೋ?

ors drink

ಏನಿದು ಒಆರ್‌ಎಸ್‌

ರಾಬರ್ಟ್‌ ಕ್ರೇನ್‌ ಎಂಬಾತ ಇದರ ಮಹತ್ವವನ್ನು ತಿಳಿಸಿಕೊಟ್ಟವ. 1960ರ ಸುಮಾರಿಗೆ ವಾಂತಿ, ಅತಿಸಾರದಿಂದ ಆಗುತ್ತಿದ್ದ ಪ್ರಾಣಾಪಾಯಗಳನ್ನು ತಡೆಯುವುದಕ್ಕೆ ಈ ದ್ರಾವಣದ ಸೇವನೆಯನ್ನು ಜಾರಿಗೆ ತರಲಾಗಿತ್ತು. ವಾಂತಿ-ಭೇದಿಯಿಂದ ಆಗುತ್ತಿದ್ದ ನಿರ್ಜಲೀಕರಣ ತಪ್ಪಿಸಲು ರಕ್ತನಾಳಕ್ಕೆ ಗ್ಲೂಕೋಸ್‌ ಕೊಡುವ ಪದ್ಧತಿ ಆಗ ಚಾಲ್ತಿಯಲ್ಲಿತ್ತು. ಆದರೆ ಎಲ್ಲ ಕಡೆಯೂ ಚಿಕಿತ್ಸೆಯನ್ನು ನೀಡಲಾಗುತ್ತಿರಲಿಲ್ಲ. ಆಗ ಒಆರೆಸ್‌ ಎಂಬ ಜೀವಜಲದ ಸೇವನೆ ವರದಾನವಾಗಿ ಪರಿಣಮಿಸಿತ್ತು. ಇದು ಗ್ಲೂಕೋಸ್‌, ಸೋಡಿಯಂ ಕ್ಲೋರೈಡ್‌, ಪೊಟಾಶಿಯಂ ಕ್ಲೋರೈಡ್‌ ಮತ್ತು ಸೋಡಿಯಂ ಸಿಟ್ರೇಟ್‌ಗಳ ಮಿಶ್ರಣವಾಗಿದೆ. ಜೊತೆಗೆ ಜಿಂಕ್‌ ಸಹ ಸೇರಿರುವುದರಿಂದ ವಾಂತಿ- ಅತಿಸಾರದ ಲಕ್ಷಣಗಳ ಉಪಶಮನಕ್ಕೆ ನೆರವಾಗುತ್ತದೆ.

ಯಾವಾಗ ಕುಡಿಯಬೇಕು?

ನಿರ್ಜಲೀಕರಣದ ಪ್ರಾರಂಭಿಕ ಲಕ್ಷಣಗಳು ಗೋಚರವಾಗುತ್ತಿದ್ದಂತೆ ಒಆರೆಸ್‌ ಸೇವನೆಯನ್ನು ಪ್ರಾರಂಭಿಸುವುದು ಸೂಕ್ತ. ಅಂದರೆ ತೀವ್ರ ಬಾಯಾರಿಕೆ. ತುಟಿಗಳೆಲ್ಲ ಒಣಗಿದಂತಾಗುವುದು, ಮೂತ್ರ ಕಡಿಮೆಯಾಗುವುದು, ಮೂತ್ರದ ಬಣ್ಣ ಗಾಢವಾಗುವುದು, ಸುಸ್ತು, ಆಯಾಸ, ತಲೆ ಸುತ್ತುವುದು, ತಲೆಯೊಳಗೆ ನೋವು… ಇಂಥ ಯಾವುದೇ ಅನುಭವಕ್ಕೆ ಬಂದರೂ ಒಆರೆಸ್‌ ಸೇವನೆಯನ್ನು ಆರಂಭಿಸಬಹುದು. ಬಿಸಿಲಿನ ತೀವ್ರತೆ ಸಿಕ್ಕಾಪಟ್ಟೆ ಇರುವ ದಿನಗಳಲ್ಲಿ, ಮನೆಯೊಳಗಿದ್ದರೂ ಸುಸ್ತು, ಆಯಾಸ, ಸಂಕಟ ಕಾಡುತ್ತಿರುವ ಹೊತ್ತಿನಲ್ಲಿ ಒಂದು ಲೋಟ ಒಆರೆಸ್‌ ನೀರು ಕುಡಿಯುವುದು ಜೀವವನ್ನು ತಂಪಾಗಿಸುತ್ತದೆ.

ಎಷ್ಟು ಕುಡಿಯಬೇಕು?

ಇದು ಆ ವ್ಯಕ್ತಿಯ ದೇಹಸ್ಥಿತಿಯನ್ನು ಅವಲಂಬಿಸಿದೆ. ನಿರ್ಜಲೀಕರಣದ ಲಕ್ಷಣಗಳು ಸ್ವಲ್ಪ ಅಥವಾ ಮಧ್ಯಮ ಪ್ರಮಾಣದಲ್ಲಿದ್ದರೆ, ಸುಮಾರು 20-25 ಎಂ.ಎಲ್‌ನಷ್ಟು ಒಆರೆಸ್‌ ದ್ರಾವಣವನ್ನು ಒಮ್ಮೆ ಗುಟುಕರಿಸುವುದು. ಪ್ರತಿ 10-15 ನಿಮಿಷಗಳಿಗೆ ಇದನ್ನೇ ನಿಯಮಿತವಾಗಿ ಮುಂದುವರಿಸುವುದು. ದಾಹ ಕಡಿಮೆಯಾಗಿ, ಬಾಯಿ ಒಣಗುವುದು ನಿಂತು, ಮೂತ್ರ ಹೆಚ್ಚಾಗಿ, ಮೂತ್ರದ ಬಣ್ನ ತಿಳಿಯಾಗಿ, ಸುಸ್ತು ಕಡಿಮೆಯಾಗುವವರೆಗೂ ಇದನ್ನೇ ಮುಂದುವರಿಸಬೇಕು. ಅಗತ್ಯವಿದ್ದರೆ ಇದನ್ನು ದಿನವಿಡೀ ಮಾಡಬಹುದು. ಆದರೆ ನಿರ್ಜಲೀಕರಣ ತೀವ್ರವಾಗಿದ್ದರೆ ಒಆರೆಸ್‌ ಪ್ರಮಾಣ ಹೆಚ್ಚು ಬೇಕಾಗುತ್ತದೆ. ಇದಕ್ಕೆ ವೈದ್ಯರಲ್ಲಿ ಸಲಹೆ ಕೇಳುವುದು ಒಳಿತು.

ಯಾರೆಲ್ಲ ಕುಡಿಯಬಹುದು?

ಬೇಸಿಗೆಯ ಹೊಡೆತ ತೀವ್ರವಾಗಿರುವ ಈ ದಿನಗಳಲ್ಲಿ ಬಹುತೇಕ ಎಲ್ಲರೂ ಇದನ್ನು ಸೇವಿಸಬಹುದು. ಆದರೆ ಹೃದ್ರೋಗಿಗಳು, ಕಿಡ್ನಿ ಸಮಸ್ಯೆ ಇರುವವರು ವೈದ್ಯರ ಸಲಹೆಯನ್ನು ತೆಗೆದುಕೊಳ್ಳಬೇಕು. ಅಗತ್ಯವಿದ್ದಾಗ ಮಧುಮೇಹಿಗಳು ಸಹ ಇದನ್ನು ಸೇವಿಸಬಹುದು. ಆದರೆ ನಿಯಮಿತವಾಗಿ ಸೇವಿಸುವ ಅಗತ್ಯವಿದ್ದರೆ ಸಕ್ಕರೆಯಂಶದ ಮೇಲೆ ಕಣ್ಣಿಡಬೇಕಾಗುತ್ತದೆ. ಹಾಗಾಗಿ ಅವರೂ ವೈದ್ಯರಲ್ಲಿ ಸಮಾಲೋಚನೆ ಮಾಡುವುದು ಕ್ಷೇಮ. ಇದರಿಂದ ಯಾವಾಗ, ಎಷ್ಟು ಕುಡಿಯಬಹುದು ಎಂಬುದು ಸ್ಪಷ್ಟವಾಗುತ್ತದೆ.

Boy Drinking Water from Glass

ಮಕ್ಕಳಿಗೆ ನೀಡಬಹುದೇ?

ಖಂಡಿತ. ಆರು ತಿಂಗಳ ನಂತರದ ಶಿಶುಗಳಿಗೂ ಒಆರೆಸ್‌ನಿಂದ ಅನುಕೂಲವಾಗುತ್ತದೆ. ಬಿಸಿಲ ದಿನಗಳಲ್ಲಿ, 6-24 ತಿಂಗಳ ಮಕ್ಕಳಿಗೆ, ದಿನಕ್ಕೆ 20 ಚಮಚ ಒಆರೆಸ್‌ ನೀಡಬಹುದು. 2-5 ವರ್ಷದ ಮಕ್ಕಳಿಗೆ 40 ಚಮಚ ಒಆರೆಸ್‌ ನೀಡಬಹುದು. 5 ವರ್ಷಕ್ಕೆ ಮೇಲ್ಪಟ್ಟ ಮಕ್ಕಳಿಗೆ ಅವು ಕುಡಿದು ತಡೆಯುವಷ್ಟು ನೀಡಬಹುದು. ವಯಸ್ಕರಿಗಿಂತ ಮಕ್ಕಳೇ ಹೆಚ್ಚು ನಿರ್ಜಲೀಕರಣಕ್ಕೆ ತುತ್ತಾಗುವುದರಿಂದ ಒಆರೆಸ್‌ ದ್ರಾವಣ ಎಳೆಯರ ಪಾಲಿನ ಜೀವಜಲ.

ಯಾವುದು ಒಳ್ಳೆಯದು?

ವಾಂತಿ, ಅತಿಸಾರದಂಥ ತೊಂದರೆ ಇರುವಾಗ ಒಆರ್‌ಎಸ್‌ ಪುಡಿಯೇ ಸೂಕ್ತವಾದದ್ದು. ಅದರ ಮೇಲೆ ನಮೂದಿಸಿರುವ ಪ್ರಮಾಣವನ್ನು ತಪ್ಪದೆ ಪಾಲಿಸಬೇಕು. ಒಆರೆಸೆಲ್‌ನಲ್ಲಿ ಬಣ್ಣ ಮತ್ತು ಸುವಾಸನೆಯನ್ನು ಸೇರಿಸಿರುವ ಸಾಧ್ಯತೆ ಹೆಚ್ಚಿರುವುದರಿಂದ, ಚಿಕಿತ್ಸೆಗೆ ಪುಡಿಯೇ ಸೂಕ್ತ. ಹಾಗಲ್ಲದೆ ಬೇಸಿಗೆಯ ಹೊಡೆತ ತಡೆಯುವಾಗ, ಸಾಮಾನ್ಯ ಸುಸ್ತು, ಆಯಾಸಗಳ ಪರಿಹಾರಕ್ಕಾದರೆ ಯಾವುದನ್ನಾದರೂ ಬಳಸಬಹುದು.

ಇದನ್ನೂ ಓದಿ: Baking Soda: ಅಡುಗೆ ಸೋಡಾ ನಿಜಕ್ಕೂ ಆರೋಗ್ಯಕ್ಕೆ ಕೆಟ್ಟದ್ದಾ?

Continue Reading

ಆರೋಗ್ಯ

World Malaria Day: ಮಲೇರಿಯಾದಿಂದ ಮಕ್ಕಳನ್ನು ರಕ್ಷಿಸಿಕೊಳ್ಳುವುದು ಹೇಗೆ?

ಮಲೇರಿಯಾವನ್ನು (World Malaria Day) ನಿಯಂತ್ರಿಸಲು ಮತ್ತು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಜಾಗತಿಕ ಮಟ್ಟದಲ್ಲಿ ಜಾಗೃತಿಯನ್ನು ಮೂಡಿಸುವ ಹಿನ್ನೆಲೆಯಲ್ಲಿ ಪ್ರತಿವರ್ಷ ಏಪ್ರಿಲ್ 25 ರಂದು ʼವಿಶ್ವ ಮಲೇರಿಯಾ ದಿನʼವನ್ನು ಆಚರಿಸಲಾಗುತ್ತದೆ. ಪ್ರಸಕ್ತ ವರ್ಷ ಈ ದಿನವನ್ನು ʼಜಗತ್ತಿನಾದ್ಯಂತ ಮಲೇರಿಯಾ ವಿರುದ್ಧದ ಹೋರಾಟಕ್ಕೆ ಒತ್ತುʼ ಎಂಬ ಥೀಮ್‌ನೊಂದಿಗೆ ಆಚರಿಸಲಾಗುತ್ತಿದೆ. ಮಲೇರಿಯಾ ಕಾಯಿಲೆಯು ಮಕ್ಕಳ ಮೇಲೆ ಬೀರುವ ಪರಿಣಾಮ ಮತ್ತು ಪೋಷಕರು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಇಲ್ಲಿದೆ ಉಪಯುಕ್ತ ಮಾಹಿತಿ.

VISTARANEWS.COM


on

World Malaria Day April 25
Koo

ಪ್ರಪಂಚದಾದ್ಯಂತ ಮಲೇರಿಯಾವನ್ನು (World Malaria Day) ನಿಯಂತ್ರಿಸಲು ಮತ್ತು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಜಾಗತಿಕ ಮಟ್ಟದಲ್ಲಿ ಜಾಗೃತಿಯನ್ನು ಮೂಡಿಸುವ ಹಿನ್ನೆಲೆಯಲ್ಲಿ ಪ್ರತಿವರ್ಷ ಏಪ್ರಿಲ್ 25 ರಂದು ʼವಿಶ್ವ ಮಲೇರಿಯಾ ದಿನʼವನ್ನು ಆಚರಿಸಲಾಗುತ್ತದೆ. ಪ್ರಸಕ್ತ ವರ್ಷ ಈ ದಿನವನ್ನು ʼಜಗತ್ತಿನಾದ್ಯಂತ ಮಲೇರಿಯಾ ವಿರುದ್ಧದ ಹೋರಾಟಕ್ಕೆ ಒತ್ತುʼ ಎಂಬ ಥೀಮ್‌ನೊಂದಿಗೆ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಲೇರಿಯಾ ಕಾಯಿಲೆಯು ಮಕ್ಕಳ ಮೇಲೆ ಬೀರುವ ಪರಿಣಾಮ ಜೊತೆಗೆ ಪೋಷಕರು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಬೆಂಗಳೂರಿನ ಕಿಂಡರ್ ಆಸ್ಪತ್ರೆಯ ಮಕ್ಕಳ ತಜ್ಞರಾದ ಶಿಲ್ಪಾ ಪಾಂಡ್ಯ ಅವರು ವಿವರಿಸಿದ್ದಾರೆ.

Dr. Shilpa Pandya Consultant Neonatology and Paediatrics

ಪ್ರಶ್ನೆ: ಮಲೇರಿಯಾ ಹರಡುವುದು ಹೇಗೆ?

ಉತ್ತರ: ಮಲೇರಿಯಾವು ಸೊಳ್ಳೆಯಿಂದ ಹರಡುವ ರೋಗವಾಗಿದ್ದು, ಪ್ಲಾಸ್ಮೋಡಿಯಂ ಫಾಲ್ಸಿಪಾರಮ್‌ ಎಂಬುದು ಇದಕ್ಕೆ ಕಾರಣವಾಗಿದೆ. ಈ ಕಾಯಿಲೆಯು ಮಕ್ಕಳು ಮತ್ತು ವಯಸ್ಕರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ವ್ಯಕ್ತಿಯು ಸೊಳ್ಳೆಯ ಕಡಿತಕ್ಕೆ ಒಳಗಾದ ನಂತರ ಮಲೇರಿಯಾದ ಪರಾವಲಂಬಿಗಳು ಆ ವ್ಯಕ್ತಿಯ ಯಕೃತ್ ಅನ್ನು ಸೇರಿಕೊಂಡು ಯಕೃತ್ತಿನ ಜೀವಕೋಶಗಳಲ್ಲಿ ದ್ವಿಗುಣಗೊಂಡು ಕೆಂಪು ರಕ್ತ ಕಣಗಳನ್ನು ಸೋಂಕಿಗೆ ಒಳಪಡಿಸುತ್ತವೆ. ಜ್ವರ, ತಲೆನೋವು, ವಾಕರಿಕೆ, ವಾಂತಿ ಮತ್ತು ಕೆಲವೊಮ್ಮೆ ಅತಿಸಾರ ಬೇಧಿಯಾಗುವುದು ಈ ಕಾಯಿಲೆಯ ಲಕ್ಷಣಗಳು. ಕಾಯಿಲೆ ಅತಿಯಾದಾಗ ಅಂಗಾಂಗ ವೈಫಲ್ಯಕ್ಕೆ ಕಾರಣವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಸಕಾಲಕ್ಕೆ ಚಿಕಿತ್ಸೆ ತೆಗೆದುಕೊಳ್ಳುವುದು ಅತ್ಯಗತ್ಯ ಎನ್ನುತ್ತಾರೆ ಮಕ್ಕಳ ತಜ್ಞರಾದ ಶಿಲ್ಪಾ ಪಾಂಡ್ಯ.

ಪ್ರಶ್ನೆ: ಮಕ್ಕಳಲ್ಲಿ ಕಂಡುಬರುವ ಮಲೇರಿಯಾದ ಸಾಮಾನ್ಯ ಲಕ್ಷಣಗಳೇನು?

ಉತ್ತರ: ಮಲೇರಿಯಾ ಸೋಂಕಿತ ಮಕ್ಕಳು ಸಾಮಾನ್ಯವಾಗಿ ಜ್ವರದಿಂದ ಬಳಲುತ್ತಿರುತ್ತಾರೆ. ಅದಲ್ಲದೆ ಶೀತ, ತಲೆನೋವು, ವಾಕರಿಕೆ, ವಾಂತಿ ಮತ್ತು ಭೇದಿ ಲಕ್ಷಣಗಳು ಕೂಡ ಕಾಣಿಸಿಕೊಳ್ಳುತ್ತದೆ. ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಮಲೇರಿಯಾ ಹೊಂದಿರುವ ಎಲ್ಲಾ ಮಕ್ಕಳು ಜ್ವರದ ಜೊತೆಗೆ ಶೀತವನ್ನು ಹೊಂದಿರುವುದಿಲ್ಲ. ಆದರೆ ಅಸ್ವಸ್ಥತೆ ಅಥವಾ ಆಯಾಸದಂತಹ ಇತರ ರೋಗಲಕ್ಷಣಗಳನ್ನೂ ಹೊಂದಿರಬಹುದು.

Image Of Foods For Fight Against Dengue Fever

ಪ್ರಶ್ನೆ: ಮಲೇರಿಯಾ ಪೀಡಿತ ಮಗುವಿನ ಆರೈಕೆ ಹೇಗಿರಬೇಕು?

ಉತ್ತರ: ಮಲೇರಿಯಾ ಪೀಡಿತ ಮಗುವಿನ ಆರೈಕೆಯಲ್ಲಿ ಪೋಷಕರು ಪ್ರಮುಖ ಪಾತ್ರವಹಿಸುತ್ತಾರೆ. ಕಾಯಿಲೆಯಿಂದ ಕೂಡಿರುವ ಮಗುವಿಗೆ ಪ್ಯಾರಾಸಿಟಮಾಲ್‌ನಂತಹ ಜ್ವರ ನಿಯಂತ್ರಿಸುವ ಔಷಧಗಳನ್ನು ನೀಡುವುದು, ಮಗುವಿಗೆ ಸಾಕಷ್ಟು ವಿಶ್ರಾಂತಿ ನೀಡುವುದು ಮತ್ತು ಮಗುವಿನ ದೇಹ ಹೈಡ್ರೇಟೆಡ್ ಆಗಿರಲು ಸಾಕಷ್ಟು ನೀರು ಕುಡಿಯಲು ಅವರನ್ನು ಪ್ರೋತ್ಸಾಹಿಸುವುದರ ಜೊತೆಗೆ ಉತ್ತಮ ಆರೈಕೆಯನ್ನು ಒದಗಿಸುವುದು ಅತ್ಯಗತ್ಯ. ಮುಖ್ಯವಾಗಿ ವೈದ್ಯರ ಸಲಹೆಯ ಮೇರೆಗೆ ಮಗುವನ್ನು ಆರೈಕೆ ಮಾಡುವ ಮೂಲಕ ಸೋಂಕು ಮುಕ್ತವಾಗುವಂತೆ ನೋಡಿಕೊಳ್ಳುವುದು ಪೋಷಕರ ಜವಾಬ್ದಾರಿ.

ಪ್ರಶ್ನೆ: ಮಲೇರಿಯಾ ಪೀಡಿತ ಮಗುವಿನಲ್ಲಿ ಕಂಡುಬರುವ ಅಪಾಯಕಾರಿ ಚಿಹ್ನೆಗಳು ಯಾವುವು?

ಉತ್ತರ: ಮಲೇರಿಯಾದಿಂದ ಬಳಲುತ್ತಿರುವ ಮಗುವು ಕಾಮಾಲೆ (ಚರ್ಮ ಮತ್ತು ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುವುದು), ರೋಗಗ್ರಸ್ತವಾಗುವಿಕೆ, ಮೂತ್ರ ಅಥವಾ ಮಲದಲ್ಲಿ ರಕ್ತ ಕಂಡುಬರುವುದು ಅಥವಾ ಸೂಕ್ತ ಔಷಧಿಗಳನ್ನು ತೆಗೆದುಕೊಂಡರೂ ನಿರಂತರವಾಗಿ ಜ್ವರ ಕಾಣಿಸಿಕೊಳ್ಳುವಂತಹ ಅಪಾಯಕಾರಿ ಚಿಹ್ನೆಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರ ಸಲಹೆ ತೆಗೆದುಕೊಳ್ಳುವುದು ಪೋಷಕರ ಕರ್ತವ್ಯ.

ಪ್ರಶ್ನೆ: ಮಲೇರಿಯಾದ ಬಗೆಗೆ ಪೋಷಕರಲ್ಲಿ ಇರುವ ತಪ್ಪುಕಲ್ಪನೆಗಳೇನು?

ಉತ್ತರ: ಮಲೇರಿಯಾ ಕಾಯಿಲೆಯ ಬಗೆಗೆ ಪೋಷಕರಲ್ಲಿ ಹಲವಾರು ತಪ್ಪುಕಲ್ಪನೆಗಳಿವೆ. ಅವುಗಳ ಕುರಿತಾಗಿ ಮಕ್ಕಳ ತಜ್ಞೆ ಶಿಲ್ಪಾ ಪಾಂಡ್ಯ ಅವರು ಹೇಳುತ್ತಾರೆ.

ತಪ್ಪುಕಲ್ಪನೆ: ಮಲೇರಿಯಾವು ಕಲುಷಿತ ನೀರಿನ ಸೇವನೆ ಅಥವಾ ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ಹರಡುತ್ತದೆ.
ಸತ್ಯಾಂಶ: ಮಲೇರಿಯಾವು ಸೊಳ್ಳೆ ಕಡಿತ ಅಥವಾ ರಕ್ತ ವರ್ಗಾವಣೆಯ ಮೂಲಕ ಮಾತ್ರ ಹರಡುತ್ತದೆ. ನೀರು ಅಥವಾ ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ಹರಡುವುದಿಲ್ಲ.

ತಪ್ಪುಕಲ್ಪನೆ: ಮಲೇರಿಯಾ ಸೋಂಕಿತ ತಾಯಂದಿರು ಸ್ತನ್ಯಪಾನ ಮಾಡಬಾರದು!
ಸತ್ಯಾಂಶ: ಮಲೇರಿಯಾ ಪರಾವಲಂಬಿಗಳು ಎದೆ ಹಾಲಿನ ಮೂಲಕ ಹರಡುವುದಿಲ್ಲ. ಆದರೆ ತಾಯಿಯು ಮಗುವಿಗೆ ಹಾಲುಣಿವಾಗ ಕೆಲವು ಔಷಧಿಗಳ ಸೇವನೆ ಬಗೆಗೆ ಎಚ್ಚರಿಕೆವಹಿಸುವುದು ಅತ್ಯಗತ್ಯ.

ತಪ್ಪುಕಲ್ಪನೆ: ಸೋಂಕಿತ ಮಗುವಿನ ಸಂಪರ್ಕದಿಂದ ಮಕ್ಕಳಿಗೆ ಮಲೇರಿಯಾ ಹರಡುತ್ತದೆ.
ಸತ್ಯಾಂಶ: ಸೋಂಕಿತ ಮಗುವಿನ ಸಂಪರ್ಕದಿಂದ, ಸೋಂಕಿತ ಮಗು ಬಳಸುವ ಬಟ್ಟೆ ಅಥವಾ ಪಾತ್ರೆಗಳಂತಹ ವಸ್ತುಗಳನ್ನು ಹಂಚಿಕೊಳ್ಳುವುದರಿಂದ ಮಕ್ಕಳಿಗೆ ಮಲೇರಿಯಾ ಹರಡುವುದಿಲ್ಲ.

ತಪ್ಪುಕಲ್ಪನೆ: ಮಲೇರಿಯಾ ಸೋಂಕು ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತದೆ.
ಸತ್ಯಾಂಶ: ವಿಭಿನ್ನ ಜಾತಿಯ ಪರಾವಲಂಬಿಗಳಿಂದ ಮನುಷ್ಯರಲ್ಲಿ ಮತ್ತೆ ಮಲೇರಿಯಾ ಸೋಂಕು ಕಾಣಿಸಿಕೊಳ್ಳಬಹುದು. ಹೀಗಾಗಿ ರೋಗನಿರೋಧಕ ಶಕ್ತಿ ಶಾಶ್ವತವಲ್ಲ.

ತಪ್ಪುಕಲ್ಪನೆ: ಮಲೇರಿಯಾ ಕಾಯಿಲೆಗೆ ಲಸಿಕೆ ಲಭ್ಯವಿದೆ!
ಸತ್ಯಾಂಶ: ಈ ಕಾಯಿಲೆಗೆ ಲಸಿಕೆ ಕಂಡುಹಿಡಿಯಲು ಸಂಶೋಧನೆ ನಡೆಯುತ್ತಿದ್ದು, ಸದ್ಯ ಮಾರುಕಟ್ಟೆಯಲ್ಲಿ ಯಾವುದೇ ಲಸಿಕೆ ಲಭ್ಯವಿಲ್ಲ.

How to control mosquitoes?

ಪ್ರಶ್ನೆ: ಪೋಷಕರು ತಮ್ಮ ಮಕ್ಕಳನ್ನು ಮಲೇರಿಯಾದಿಂದ ಹೇಗೆ ರಕ್ಷಿಸಿಕೊಳ್ಳಬಹುದು ?

ಉತ್ತರ: ಪೋಷಕರು ತಮ್ಮ ಮಕ್ಕಳನ್ನು ಮಲೇರಿಯಾದಿಂದ ರಕ್ಷಿಸಿಕೊಳ್ಳಲು ಹಲವು ಕ್ರಮಗಳನ್ನು ತೆಗೆದುಕೊಳ್ಳಬಹುದು. ಅವುಗಳೆಂದರೆ

  • ಸೊಳ್ಳೆಗಳನ್ನು ದೂರವಿಡಲು ಸೊಳ್ಳೆ ನಿವಾರಕಗಳು ಮತ್ತು ಸೊಳ್ಳೆ ಬತ್ತಿಗಳನ್ನು ಬಳಸುವುದು.
  • ಬೆಳಗ್ಗೆ ಮತ್ತು ಮುಸ್ಸಂಜೆ ವೇಳೆ ಸೊಳ್ಳೆಗಳು ಹೆಚ್ಚು, ಹೀಗಾಗಿ ಮಕ್ಕಳು ಮೈತಂಬಾ ಉಡುಪುಗಳನ್ನು ಧರಿಸುವಂತೆ ನೋಡಿಕೊಳ್ಳಬೇಕು.
  • ಮನೆಯ ಆವರಣದಲ್ಲಿ ನೀರು ನಿಂತಿದ್ದರೆ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಹಾಗಾಗಿ ಮನೆಯ ಸುತ್ತ ನಿಂತ ನೀರನ್ನು ಸ್ವಚ್ಛಗೊಳಿಸುವುದು ಪ್ರಮುಖವಾದುದು.
  • ಎರಡು ತಿಂಗಳೊಳಗಿನ ಶಿಶುಗಳಿಗೆ ಸೊಳ್ಳೆ ಪರದೆಗಳನ್ನು ಬಳಸುವುದು ಮುಖ್ಯ.
  • ಸೊಳ್ಳೆಗಳು ಹೆಚ್ಚಿರುವ ಮುಂಜಾನೆ ಮತ್ತು ಮುಸ್ಸಂಜೆ ಸಮಯದಲ್ಲಿ ಮಕ್ಕಳು ಹೊರಾಂಗಣ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಪೋಷಕರು ನೋಡಿಕೊಳ್ಳಬೇಕು.
  • ಸೊಳ್ಳೆ ಕಡಿತ ಮತ್ತು ನೈರ್ಮಲ್ಯ ಅಭ್ಯಾಸಗಳ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡಬೇಕು ಎನ್ನುವುದು ತಜ್ಞರ ಸಲಹೆ.
Mosquitoes Dangerous Animal Mosquitoes: Responsible for transmitting diseases like malaria, dengue fever, and Zika virus, mosquitoes are considered one of the most dangerous animals due to the diseases they carry.

ಈ ವರ್ಷ 2024ರ ಥೀಮ್/ವಿಷಯದ ಕುರಿತಾಗಿ “ಮಲೇರಿಯಾವು ತಡೆಗಟ್ಟಬಹುದಾದ ಕಾಯಿಲೆಯಾಗಿದೆ. ಆದರೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಮಲೇರಿಯಾದಿಂದ ಮೃತಹೊಂದುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮಲೇರಿಯಾ ನಿಯಂತ್ರಣಕ್ಕೆ ಮುಂದಾಗೋಣ ಮತ್ತು ಅನಗತ್ಯ ಜೀವಹಾನಿಯನ್ನು ತಡೆಗಟ್ಟೋಣ” ಎಂದು ವೈದ್ಯೆ ಶಿಲ್ಪಾ ಪಾಂಡ್ಯ (ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು: 6364409651, 6364466240) ಅಭಿಪ್ರಾಯ ಪಡುತ್ತಾರೆ.

ಇದನ್ನೂ ಓದಿ: World Malaria Day: ಮಲೇರಿಯಾ ಮತ್ತು ಡೆಂಗ್ಯು ನಡುವಿನ ವ್ಯತ್ಯಾಸ ಏನು? ಗುರುತಿಸುವುದು ಹೇಗೆ?

Continue Reading
Advertisement
Narendra modi
ಪ್ರಮುಖ ಸುದ್ದಿ24 mins ago

Lok Sabha Election : ಎನ್​ಡಿಎಗೆ ಶುಭ ಶಕುನ : 2ನೇ ಹಂತದ ಮತದಾನದ ಬಳಿಕ ಪ್ರಧಾನಿ ಮೋದಿ ಹೀಗಿತ್ತು

Udupi Sri Krishna Temple
ಕರ್ನಾಟಕ41 mins ago

Udupi Sri Krishna Temple: ಮತದಾನದ ದಿನ ಕಮಲಾರೂಢನಾದ ಉಡುಪಿ ಕೃಷ್ಣ! ಇಲ್ಲಿದೆ ಫೋಟೊ ಝಲಕ್‌

IPL 2024
ಕ್ರೀಡೆ51 mins ago

IPL 2024 : ಅಂಕಪಟ್ಟಿಯ ಅಗ್ರಸ್ಥಾನಿ ರಾಜಸ್ಥಾನ್​ಗೆ ಸವಾಲೊಡ್ಡುವುದೇ ಲಕ್ನೊ ಸೂಪರ್​ ಜೈಂಟ್ಸ್​​

Lok Sabha Election 2024 2 villagers who boycotted voting cast their votes in evening
ಕರ್ನಾಟಕ1 hour ago

Lok Sabha Election 2024: ಮತದಾನ ಬಹಿಷ್ಕರಿಸಿದ್ದ 2 ಗ್ರಾಮದ ಜನ, ಸಂಜೆಗೆ ಮನವೊಲಿಕೆ; 7 ಗಂಟೆ ದಾಟಿದರೂ ಮುಗಿಯದ ಮತದಾನ

Modi in Karnataka stay in Belagavi tomorrow and Huge gatherings at five places
Lok Sabha Election 20242 hours ago

Modi in Karnataka: ನಾಳೆ ರಾಜ್ಯಕ್ಕೆ ಮೋದಿ, ಬೆಳಗಾವಿಯಲ್ಲಿ ವಾಸ್ತವ್ಯ; 2 ದಿನ ಪ್ರವಾಸ, 5 ಕಡೆ ಬೃಹತ್‌ ಸಮಾವೇಶ

BJP National President JP Nadda Election campaign in Surapura
ಕರ್ನಾಟಕ2 hours ago

Lok Sabha Election 2024: ದೇಶದ ರಕ್ಷಣೆಗಾಗಿ ಮತ್ತೆ ಬಿಜೆಪಿಯನ್ನು ಬೆಂಬಲಿಸಿ: ಜೆ.ಪಿ.ನಡ್ಡಾ

deepfake
ತಂತ್ರಜ್ಞಾನ2 hours ago

Deep Fakes: ಶೇ. 75 ಭಾರತೀಯರು ಡೀಪ್‌ಫೇಕ್‌ಗೆ ಒಳಗಾಗಿದ್ದಾರೆ; ಗೊತ್ತಾಗಿದ್ದು ಶೇ.22 ಮಂದಿಗೆ ಮಾತ್ರ!

Lok Sabha Election 2024 Bjp workers clash in Chikmagalur
Lok Sabha Election 20242 hours ago

Lok Sabha Election 2024: ಚಿಕ್ಕಮಗಳೂರಲ್ಲಿ ಬಿಜೆಪಿ ಕಾರ್ಯಕರ್ತರ ಮಧ್ಯೆಯೇ ಮಾರಾಮಾರಿ; ಮುಖಂಡನ ತಲೆಗೆ ಏಟು!

lok sabha election
ಪ್ರಮುಖ ಸುದ್ದಿ3 hours ago

Lok Sabha Election : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಮುಕ್ತಾಯ; ದಾಖಲೆ ಪ್ರಮಾಣದಲ್ಲಿ ಮತ ಚಲಾವಣೆ

Karnataka weather Forecast
ಮಳೆ3 hours ago

Karnataka Weather : ಹಾಟ್‌ ಸಿಟಿಯಾದ ಬೆಂಗಳೂರು; ಇನ್ನು 3 ದಿನಗಳು ಈ ಜಿಲ್ಲೆಗಳು ಕಾದ ಕೆಂಡ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ9 hours ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 202410 hours ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 202410 hours ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ16 hours ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ1 day ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ1 day ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ1 day ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20241 day ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ3 days ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

ಟ್ರೆಂಡಿಂಗ್‌