Modi in Karnataka | ಮೈಸೂರಿನಲ್ಲಿ ಪ್ರಧಾನಿ ಇಷ್ಟಪಟ್ಟ ʼಮೈಸೂರ್‌ ಪಾಕ್‌ʼ ಇತಿಹಾಸ ಗೊತ್ತೆ? - Vistara News

ಆಹಾರ/ಅಡುಗೆ

Modi in Karnataka | ಮೈಸೂರಿನಲ್ಲಿ ಪ್ರಧಾನಿ ಇಷ್ಟಪಟ್ಟ ʼಮೈಸೂರ್‌ ಪಾಕ್‌ʼ ಇತಿಹಾಸ ಗೊತ್ತೆ?

Modi in Karnataka | ಅರಮನೆಯಲ್ಲಿ ಪ್ರಧಾನಿ ಮೋದಿಯವರು ಮೈಸೂರ್‌ ಪಾಕ್‌ ರುಚಿಯನ್ನು ಸವಿದು ಆನಂದಪಟ್ಟಿದ್ದಾರೆ. ಮೈಸೂರ್‌ ಪಾಕ್‌ ಬಗ್ಗೆ ನಿಮಗೆಷ್ಟು ಗೊತ್ತು?

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೈಸೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಆಗಮಿಸಿ (Modi in Karnataka) ಮೈಸೂರು ಅರಮನೆಯಲ್ಲಿ ರುಚಿರುಚಿಯಾದ ತಿನಿಸುಗಳನ್ನು ಸವಿದಿದ್ದಾರೆ. ಅದರಲ್ಲೂ ಕರ್ನಾಟಕದ ಜನಪ್ರಿಯ ಸಿಹಿತಿನಿಸು ಮೈಸೂರ್‌ ಪಾಕ್‌ನ ರುಚಿಯನ್ನು ಮೆಚ್ಚಿದ್ದಾರೆ.

ಮೈಸೂರು ಪಾಕ್‌ ಕರ್ನಾಟಕದ ಅತ್ಯಂತ ಜನಪ್ರಿಯ ಸಿಹಿ. ನಮ್ಮ ರಾಜ್ಯದ ಯಾವುದೇ ಮೂಲೆಗೆ ಹೋದರೂ ಅಲ್ಲಿನ ಊಟ ಹಾಗೂ ಭಕ್ಷಗಳ ಸಾಲಿನಲ್ಲಿ ಮೈಸೂರು ಪಾಕ್‌ ಇದ್ದೇ ಇರುತ್ತದೆ. ಗಿಫ್ಟ್‌ ಪ್ಯಾಕ್‌ಗಳ ನಡುವೆಯೂ ಮೈಸೂರ್‌ ಪಾಕ್‌ನ ಎರಡು ತುಣುಕುಗಳು ಇದ್ದೇ ಇರುತ್ತವೆ. ಇಂತಿಪ್ಪ ಸಿಹಿಯನ್ನು ಕರ್ನಾಟಕಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿಯವರು ಮೆಚ್ಚಿದ್ದಾರೆ. ಪ್ರಧಾನಿಯರು ಮೈಸೂರು ಪಾಕ್‌ ತಿಂದ ಬೆನ್ನಲ್ಲೆ ಈ ಸ್ವೀಟ್‌ನ ಜಿಐ ಟ್ಯಾಗ್‌ ಚರ್ಚೆಗೆ ಜೀವ ಬಂದಿದೆ. ಈ ಸಿಹಿ ತಿನಿಸು ಕರ್ನಾಟಕ ಮೂಲದ್ದು ಎಂಬುದಕ್ಕೆ ಐತಿಹಾಸಿಕ ಪುರಾವೆಗಳು ಇದ್ದರೂ ತಮಿಳುನಾಡು ಇತ್ತೀಚಿನ ದಿನಗಳಲ್ಲಿ ನಮ್ಮದು ಎಂಬುದಾಗಿ ಕ್ಯಾತೆ ತೆಗೆಯುತ್ತಿದೆ. ಇದೀಗ ನರೇಂದ್ರ ಮೋದಿಯವರು ಮೈಸೂರಿನಲ್ಲೇ ಬಂದು ಸಿಹಿ ತಿನ್ನುವ ಮೂಲಕ ಕರ್ನಾಟಕಕ್ಕೆ ಜಿಐ ಟ್ಯಾಗ್‌ ಸಿಗುವ ಸಾಧ್ಯತೆಗಳಿವೆ ಎಂಬುದಾಗಿ ಹೇಳಲಾಗುತ್ತಿದೆ. ಯಾವುದಾದರೂ ಒಂದು ವಸ್ತು ಆ ಪ್ರದೇಶಕ್ಕೆ ಸಂಬಂಧಿಸಿದ್ದು, ಆ ಪ್ರದೇಶದಲ್ಲಿ ಹುಟ್ಟಿಕೊಂಡಿದ್ದು ಎಂದು ಅಧಿಕೃತಗೊಳಿಸಲು ಭಾರತ ಸರಕಾರದಿಂದ ಜಿ.ಐ ಟ್ಯಾಗ್‌ ನೀಡಲಾಗುತ್ತದೆ. ಉದಾಹರಣೆಗೆ, ಡಾರ್ಜಿಲಿಂಗ್‌ ಟೀ, ಕಾಂಚೀಪುರಂ ಸಿಲ್ಕ್‌, ಮೈಸೂರು ಸ್ಯಾಂಡಲ್‌ ಸೋಪ್‌.

ಮೈಸೂರು ಪಾಕ್‌ ಎಲ್ಲಿಯದ್ದು?

ಮೈಸೂರ್‌ ಪಾಕ್‌ ಎಂಬ ಹೆಸರು ಕೇಳುತ್ತಿದ್ದಂತೆಯೇ ಮೊದಲು ನೆನಪಾಗುವುದು ಕರ್ನಾಟಕದ ಐತಿಹಾಸಿಕ ನಗರಿ ಮೈಸೂರು. ಹಾಗನ್ನಿಸುವುದರಲ್ಲಿ ತಪ್ಪೇನಿಲ್ಲ, ಮೈಸೂರ್‌ ಪಾಕ್‌ ಮೊದಲು ಸಿದ್ಧಗೊಂಡಿದ್ದು ಮೈಸೂರು ಅರಮನೆಯಲ್ಲಿ ಎಂದು ಇತಿಹಾಸ ಹೇಳುತ್ತದೆ. ಮೈಸೂರ್‌ ಪಾಕ್ ತಯಾರಿಯ ಹಿಂದೆ ಒಂದು‌ ಸುಂದರ ಕಥೆಯೂ ಇದೆ.

ಕಾಕಾಸುರ ಮಾದಪ್ಪ ಎಂಬುವವರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಜಯ ಚಾಮರಾಜ ಒಡೆಯರ್ ಆಡಳಿತಾವಧಿಯಲ್ಲಿ ಅರಮನೆಯ ಪಾಕಶಾಲೆಯಲ್ಲಿ ಬಾಣಸಿಗರಾಗಿದ್ದರು. ರಾಜ ಕುಟುಂಬಕ್ಕೆ ಬೇಕಾದ ಎಲ್ಲ ಸಿಹಿ ತಿನಿಸನ್ನು ಅವರೇ ತಯಾರಿಸುತ್ತಿದ್ದರು. ಸಿಹಿ ತಿನಿಸು ತಯಾರಿಸುವಲ್ಲಿ ಅವರದ್ದು ಪಳಗಿದ ಕೈ. ಪಾಕಶಾಸ್ತ್ರದ ಬಗ್ಗೆ ಇವರಿಗಿದ್ದ ಜ್ಞಾನವೂ ಅಪಾರ. ಒಂದು ದಿನ ಕಾಕಾಸುರ ಮಾದಪ್ಪ ಅವರನ್ನು ಕರೆದು ಮಹಾರಾಜರು ʼಯಾವುದಾದರೂ ಒಂದು ಹೊಸ ಬಗೆಯ ಸಿಹಿ ತಿನಿಸು ತಯಾರಿಸುʼ ಎಂದು ಆಜ್ಞೆ ಮಾಡಿದರು. ಮಹಾರಾಜರು ಆಜ್ಞೆ ಮಾಡಿದ ಮೇಲೆ ಮಗಿಯಿತು. ಮರು ಮಾತನಾಡುವಂತಿಲ್ಲ, ತಿನಿಸು ತಯಾರಿಸಬೇಕಿತ್ತು ಅಷ್ಟೇ. ತಮ್ಮ ಪಾಕ ಜ್ಞಾನವನ್ನು ಬಳಸಿಕೊಂಡ ಅವರು ಕಡಲೆ ಹಿಟ್ಟು, ಸಕ್ಕರೆ ಹಾಗೂ ತುಪ್ಪ ಸೇರಿಸಿ ಪಾಕ ಬರಿಸಿ ಒಂದು ಸಿಹಿ ತಯಾರಿಸಿ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಬಡಿಸಿದರು. ತಿನಿಸಿನ ರುಚಿಯನ್ನು ಮಹಾರಾಜರು ಮೆಚ್ಚಿದರು. ಆದರೆ ಹೆಸರೇ ಇಲ್ಲದ ಆ ಸ್ವೀಟ್‌ ಅನ್ನು ಏನೆಂದು ಕರೆಯುವುದು ಎಂಬ ಚರ್ಚೆ ಅರಮನೆಯ ಪಾಕಶಾಲೆಯಲ್ಲಿ ಶುರುವಾಯಿತು. ಮೈಸೂರಿನಲ್ಲಿ ತಯಾರಾದ ಕಾರಣ ʼಮೈಸೂರು ಪಾಕʼ ಎಂದು ಹೆಸರಿಡಲು ಮಹಾರಾಜರು ನಿರ್ಧರಿಸಿದರು. ಅದೇ ಹೆಸರು ಮುಂದುವರಿದು ಮೈಸೂರ್ ಪಾಕ್ ಎಂದೇ ಜನಪ್ರಿಯವಾಯಿತು.

ಮಾದಪ್ಪನವರದ್ದೇ ಮೊದಲ ಅಂಗಡಿ

ಅರಮನೆಯ ಅಡುಗೆಮನೆಯಲ್ಲಿ ಇದರ ಆವಿಷ್ಕಾರವಾದ ನಂತರ, ಮಾದಪ್ಪನವರ ಕುಟುಂಬ ಇದನ್ನು ಅಂಗಡಿಯಲ್ಲಿ ಮಾರಾಟ ಮಾಡಲು ಶುರು ಮಾಡಿದರು. ಮೈಸೂರಿನ ಸಯ್ಯಾಜಿ ರಾವ್ ರಸ್ತೆಯಲ್ಲಿ ಅಂಗಡಿಯೊಂದನ್ನು ಶುರು ಮಾಡಿದರು.

ಮೈಸೂರ್‌ ಪಾಕ್‌ ತಯಾರಿಸಲು ಎರಡು ವಿಧಾನ:

ಮೈಸೂರು ಪಾಕ್ ಎರಡು ರೀತಿಯಲ್ಲಿ ಮಾಡಬಹುದು. ಹದವಾದ ಪಾಕದಲ್ಲಿ ಮಾಡಿದರೆ ಅತ್ಯಂತ ಮೃದುವಾಗಿರುತ್ತದೆ, ಬಾಯಲ್ಲಿ ಇಡುತ್ತಿದ್ದಂತೆ ಕರಗಿ ಹೋಗುತ್ತದೆ. ಇನ್ನೊಂದು ಬಗೆಯೆಂದರೆ, ಸ್ವಲ್ಪ ಏರು ಪಾಕದಲ್ಲಿ ಮಾಡಬಹುದು. ಆಗ ಅದು ಗಟ್ಟಿಯಾಗಿ ಇರುತ್ತದೆ. ಎರಡೂ ಬಗೆಯ ಮೈಸೂರ್‌ ಪಾಕ್‌ ಅದರದ್ದೇ ಆದ ರೀತಿಯಲ್ಲಿ ರುಚಿಯಾಗಿರುತ್ತದೆ.

ಇದನ್ನೂ ಓದಿ: Modi in Karnataka | ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ಮೈಸೂರಿಗೆ ಬಂದಿದ್ದೇನೆ : ಪ್ರಧಾನಿ ಮೋದಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Indian Chutneys: ವಿಶ್ವದ ಟಾಪ್ 50 ಅಚ್ಚುಮೆಚ್ಚಿನ ತಿನಿಸುಗಳಲ್ಲಿ ಭಾರತದ ಈ ಎರಡು ಚಟ್ನಿಗಳು!

Indian Chutneys: ಅಡುಗೆ ಎಂಬ ಶಬ್ದ ಕಿವಿಯ ಮೇಲೆ ಇದ್ದರೆ ಹೊಟ್ಟೆ ಜಾಗೃತವಾಗುತ್ತದೆ. ರುಚಿಯಾದ ಅಡುಗೆಯನ್ನು ಚಪ್ಪರಿಸಿ ತಿನ್ನುವುದೇ ಒಂದು ಭಾಗ್ಯ. ಇನ್ನು ಮಸಾಲೆ ಸಾಮಗ್ರಿಗಳನ್ನು ಬಳಸಿ ಮಾಡುವ ಭಾರತದ ಅಡುಗೆಗಳು ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿವೆ. ಭಾರತದ ಅಡುಗೆಗೆ ಈಗ ಇನ್ನೊಂದು ಗರಿ ಮೂಡಿದೆ. ಅದೇನೆಂದರೆ ಊಟದ ಎಲೆಯ ತುದಿಯ ಮೇಲೆ ಬೀಳುವ ಚಟ್ನಿ  ಈಗ ವಿಶ್ವದ 50 ಡಿಪ್‌ ಗಳಲ್ಲಿ ಸ್ಥಾನ ಪಡೆದಿದೆಯೆಂತೆ.  

VISTARANEWS.COM


on

Indian Chutneys
Koo

ಬೆಂಗಳೂರು: ಚಟ್ನಿ ಎಂದಾಗ ಬಾಯಲ್ಲಿ ನೀರು ಬರುವುದು ಸಹಜ. ದೋಸೆ, ಇಡ್ಲಿ ಮಾಡಿದಾಗ ಸಾಂಬಾರಿನ ಹಂಗಿಲ್ಲದೇ ಚಟ್ನಿ ಜೊತೆ ಇವುಗಳನ್ನು ಸವಿಯಬಹುದು. ಇನ್ನು ಬಿಸಿ ಬಿಸಿ ಅನ್ನದ (Rice) ಜೊತೆಗೆ ಈ ಚಟ್ನಿಯ ಕಾಂಬಿನೇಷನ್‌ ಸೂಪರ್‌ ಆಗಿರುತ್ತದೆ. ಹೆಚ್ಚಾಗಿ  ನಾವು ಕೊತ್ತಂಬರಿಸೊಪ್ಪಿನ ಚಟ್ನಿ, ಮಾವಿನಕಾಯಿ ಚಟ್ನಿ (Mango Chutney), ಟೊಮೆಟೊ ಚಟ್ನಿ, ಶೇಂಗಾ ಚಟ್ನಿ ಮಾಡುತ್ತೇವೆ. ಇನ್ನು ಹಲವು ಬಗೆಯ ತರಕಾರಿಗಳನ್ನು ಬಳಸಿ ರುಚಿ ರುಚಿಯಾದ ಚಟ್ನಿಗಳನ್ನು ಮಾಡಬಹುದು. ಚಟ್ನಿಯ ಕುರಿತು ಯಾಕಿಷ್ಟು ಪೀಠಿಕೆಯೆಂದರೆ, ಇದೀಗ ಭಾರತದ ಚಟ್ನಿಗಳಲ್ಲಿ (Indian Chutneys)ಎರಡು ಚಟ್ನಿಗಳು ವಿಶ್ವದ 50 ಡಿಪ್ ಗಳಲ್ಲಿ ಸ್ಥಾನ ಪಡೆದಿವೆಯಂತೆ!

ಟೇಸ್ಟ್ ಅಟ್ಲಾಸ್ ಇತ್ತೀಚೆಗೆ ಜೂನ್ 2024ರ  ಶ್ರೇಯಾಂಕದ ಪ್ರಕಾರ ವಿಶ್ವದ 50 ಅತ್ಯುತ್ತಮ ಡಿಪ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಭಾರತೀಯ ಮಿಕ್ಸ್ ಚಟ್ನಿ  42ನೇ ಸ್ಥಾನ ಪಡೆದುಕೊಂಡಿದೆ. ಈ ಚಟ್ನಿಯನ್ನು ಬೇಯಿಸಿದ ಹಣ್ಣು ಮತ್ತು ತರಕಾರಿಗಳಿಂದ ತಯಾರಿಸಲಾಗುತ್ತದೆ. ಹಣ್ಣು ಹಾಗೂ ತರಕಾರಿಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಅದಕ್ಕೆ ಜೀರಿಗೆ, ಏಲಕ್ಕಿ, ಹುಣಸೆಹಣ್ಣು, ಶುಂಠಿ ಮತ್ತು ಅರಿಶಿನದಂತಹ ವಿವಿಧ ಮಸಾಲೆಗಳನ್ನು ಬೆರೆಸಿ ತಯಾರಿಸಲಾಗುತ್ತದೆಯಂತೆ. ಇದನ್ನು “ಭಾರತದ ರಾಷ್ಟ್ರೀಯ ಕಾಂಡಿಮೆಂಟ್ಸ್”ಎಂದು ಕರೆಯಲಾಗಿದೆ. ಹಾಗೇ ಟೇಸ್ಟ್ ಅಟ್ಲಾಸ್ ನ ಪಟ್ಟಿಯಲ್ಲಿ 47 ನೇ ಸ್ಥಾನದಲ್ಲಿ ನಮಗೆ ಪ್ರಿಯವಾದಂತಹ ಕೊತ್ತಂಬರಿ ಚಟ್ನಿ (ಧನಿಯಾ ಚಟ್ನಿ) ಹಾಗೂ ಕೊನೆಯ ಅಂದರೆ 50 ನೇ ಸ್ಥಾನದಲ್ಲಿ ಮಾವಿನ ಚಟ್ನಿ ಇದೆ. ಇದನ್ನು ಮಾವಿನ ಹಣ್ಣಿನಿಂದ ತಯಾರಿಸಲಾಗುತ್ತದೆ. ಈ ಮಾವಿನ ಚಟ್ನಿ ಹುಳಿ, ಸಿಹಿ ಮತ್ತು ಮಸಾಲೆಯ ಸುವಾಸನೆಯಿಂದ ಕೂಡಿತ್ತು ಎನ್ನಲಾಗಿದೆ.

ಅಲ್ಲದೇ ಈ ಪಟ್ಟಿಯಲ್ಲಿ ಲೆಬನಾನ್ ನಿಂದ ಟೌಮ್ ಮೊದಲ ಸ್ಥಾನದಲ್ಲಿದ್ದರೆ , ಮೆಕ್ಸಿಕನ್ ನ ಜನಪ್ರಿಯ ಡಿಲೈಟ್ ಗ್ವಾಕಮೋಲ್ 4ನೇ ಸ್ಥಾನದಲ್ಲಿದೆ. ಹಮ್ಮಸ್ 10 ನೇ ಸ್ಥಾನವನ್ನು ಪಡೆದುಕೊಂಡಿದೆ.

ಇದಕ್ಕೂ ಮೊದಲು ಹಲವಾರು ಭಾರತೀಯ ಭಕ್ಷ್ಯಗಳು ಟೇಸ್ಟ್ ಅಟ್ಲಾಸ್ ನ ಟಾಪ್ 50 ಪಟ್ಟಿಗಳಲ್ಲಿ ಸ್ಥಾನ ಪಡೆದಿತ್ತು. ವಡಾ ಪಾವ್, ಮಹಾರಾಷ್ಟ್ರದ ಪ್ರಸಿದ್ಧ ಬೀದಿ ಶೈಲಿಯ ತಿಂಡಿ ವಿಶ್ವದ ಅತ್ಯುತ್ತಮ ಸ್ಯಾಂಡ್ ವಿಚ್ ಗಳಲ್ಲಿ ಹೆಸರು ಪಡೆದಿವೆ.  ಅಷ್ಟೇ ಅಲ್ಲದೇ ಮೂರು ಭಾರತೀಯ ಸಿಹಿತಿಂಡಿಗಳು ವಿಶ್ವದ 10 ಅತ್ಯುತ್ತಮ ರೈಸ್ ಪುಡಿಂಗ್ ಗಳಲ್ಲಿ ಸ್ಥಾನ ಪಡೆದಿವೆ.

ಇದೇ ರೀತಿ ಭಾರತೀಯ ಎಲ್ಲಾ ಭಕ್ಷ್ಯಗಳು ವಿಶ್ವದ ಎಲ್ಲಾ ಕಡೆ ಮೆಚ್ಚುಗೆಯನ್ನು ಗಳಿಸುವಂತಾಗಲಿ. ಎಲ್ಲರ ನಾಲಿಗೆಯ ರುಚಿಯನ್ನು ಹೆಚ್ಚಿಸುವಂತಾಗಲಿ.

Continue Reading

ಆಹಾರ/ಅಡುಗೆ

Dry Fruits: ಈ ಒಣಹಣ್ಣುಗಳನ್ನು ಬೆಳಗ್ಗೆ ಎದ್ದ ಕೂಡಲೇ ತಿನ್ನುವುದು ಒಳ್ಳೆಯದಲ್ಲ!

ಬೆಳಗ್ಗೆ ಎದ್ದ ಕೂಡಲೇ ಕೆಲವು ಬಗೆಯ ಬೀಜಗಳು ಹಾಗೂ ಒಣ ಹಣ್ಣುಗಳು ತಿನ್ನಲು ಯೋಗ್ಯವಲ್ಲ ಎಂಬ ವಿಚಾರ ನಿಮಗೆ ಗೊತ್ತೇ? ಹೌದು. ಎಲ್ಲ ಒಣ ಹಣ್ಣುಗಳೂ (dry fruits) ಕೂಡಾ ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ತಿನ್ನುವುದು ಯೋಗ್ಯವಲ್ಲ. ಒಣಹಣ್ಣುಗಳಲ್ಲಿ ಸಕ್ಕರೆಯ ಅಂಶ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಬೆಳಗ್ಗೆ ಎದ್ದ ಕೂಡಲೇ ಅವನ್ನು ತಿನ್ನುವುದರಿಂದ ಇವು ನಮ್ಮ ಜೀರ್ಣಕ್ರಿಯೆಯ ಮೇಲೆ ಅಡ್ಡ ಪರಿಣಾಮ ಬೀರಬಹುದಂತೆ. ಅಷ್ಟೇ ಅಲ್ಲ, ರಕ್ತದಲ್ಲಿರುವ ಸಕ್ಕರೆಯ ಪ್ರಮಾಣ ಒಡನೆಯೇ ಏರುತ್ತದೆ. ಯಾವೆಲ್ಲ ಒಣಹಣ್ಣುಗಳನ್ನು ನೀವು ಬೆಳಗ್ಗಿನ ಹೊತ್ತಿನಲ್ಲಿ ಎದ್ದ ಕೂಡಲೇ ತಿನ್ನಬಾರದು ಎಂಬುದರ ಮಾಹಿತಿ ಇಲ್ಲಿದೆ.

VISTARANEWS.COM


on

dry fruits
Koo

ಒಣ ಹಣ್ಣುಗಳು ಹಾಗೂ ಬೀಜಗಳು (dry fruits) ಬೆಳಗ್ಗೆ ಎದ್ದ ಕೂಡಲೇ ತಿಂದರೆ ಒಳ್ಳೆಯದು ಎಂಬುದು ಈಗ ಬಹುತೇಕ ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಹೀಗಾಗಿ ರಾತ್ರಿ ಮಲಗುವ ಸಂದರ್ಭವೇ ಇವನ್ನೆಲ್ಲ ನೆನೆ ಹಾಕಿ ಇಟ್ಟುಕೊಂಡು ಬೆಳಗ್ಗೆ ಎದ್ದ ಕೂಡಲೇ ತಿನ್ನುತ್ತೇವೆ. ನಮ್ಮ ಆರೋಗ್ಯಕ್ಕೆ ಒಳ್ಳೆಯದನ್ನೇ ನಾವು ಮಾಡುತ್ತಿದ್ದೇವೆ ಎಂದು ನಾವು ಅಂದುಕೊಳ್ಳುತ್ತೇವೆ. ಆದರೆ, ಬೆಳಗ್ಗೆ ಎದ್ದ ಕೂಡಲೇ ಕೆಲವು ಬಗೆಯ ಬೀಜಗಳು ಹಾಗೂ ಒಣ ಹಣ್ಣುಗಳು ತಿನ್ನಲು ಯೋಗ್ಯವಲ್ಲ ಎಂಬ ವಿಚಾರ ನಿಮಗೆ ಗೊತ್ತೇ? ಹೌದು. ಎಲ್ಲ ಒಣ ಹಣ್ಣುಗಳೂ ಕೂಡಾ ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ತಿನ್ನುವುದು ಯೋಗ್ಯವಲ್ಲ. ಒಣಹಣ್ಣುಗಳಲ್ಲಿ ಸಕ್ಕರೆಯ ಅಂಶ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಬೆಳಗ್ಗೆ ಎದ್ದ ಕೂಡಲೇ ಅವನ್ನು ತಿನ್ನುವುದರಿಂದ ಇವು ನಮ್ಮ ಜೀರ್ಣಕ್ರಿಯೆಯ ಮೇಲೆ ಅಡ್ಡ ಪರಿಣಾಮ ಬೀರಬಹುದಂತೆ. ಅಷ್ಟೇ ಅಲ್ಲ, ರಕ್ತದಲ್ಲಿರುವ ಸಕ್ಕರೆಯ ಪ್ರಮಾಣ ಒಡನೆಯೇ ಏರುತ್ತದೆ. ಹೀಗಾಗಿ, ಇವನ್ನು ಬೇರೆ ಹೊತ್ತಿನಲ್ಲಿ ಸೇವಿಸುವುದು ಉಚಿತ. ಬನ್ನಿ, ಯಾವೆಲ್ಲ ಒಣಹಣ್ಣುಗಳನ್ನು ನೀವು ಬೆಳಗ್ಗಿನ ಹೊತ್ತಿನಲ್ಲಿ ಎದ್ದ ಕೂಡಲೇ ತಿನ್ನಬಾರದು ಎಂಬುದನ್ನು ನೋಡೋಣ.

Raisins Weight Loss Dry Fruits

ಒಣದ್ರಾಕ್ಷಿ

ಒಣದ್ರಾಕ್ಷಿ ಅತ್ಯಂತ ಸಿಹಿಯಾದ ಒಣಹಣ್ಣು. ಇದರಲ್ಲಿ ಸಕ್ಕರೆಯ ಪ್ರಮಾಣ ಅಧಿಕವಾಗಿರುತ್ತದೆ. ಇದರ ಸೇವನೆಯಿಂದ ಅನೇಕ ಆರೋಗ್ಯಕರ ಲಾಭಗಳಿರುವುದು ನಿಜವಾದರೂ, ಇದನ್ನು ಖಾಲಿ ಹೊಟ್ಟೆಯಲ್ಲಿ ಎದ್ದ ಕೂಡಲೇ ತಿನ್ನುವುದರಿಂದ ರಕ್ತದಲ್ಲಿ ಸಕ್ಕರೆಯ ಮಟ್ಟ ದಿಢೀರ್‌ ಏರಿಕೆಯಾಗುವ ಸಾಧ್ಯತೆ ಹೆಚ್ಚು. ಕೆಲವು ಬೀಜಗಳ ಜೊತೆಗೆ ಇದನ್ನು ಸೇರಿಸಿ ತಿನ್ನಬಹುದಾದರೂ, ಬೆಳಗಿನ ಸೇವನೆ ಅಷ್ಟು ಒಳ್ಳೆಯದಲ್ಲ.

Figs Dry Fruits For Hair Fall

ಒಣ ಅಂಜೂರ

ನಾರಿನಂಶ ಅತ್ಯಂತ ಅಧಿಕವಾಗಿರುವ ಒಣ ಅಂಜೂರದ ಹಣ್ಣು ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು. ಮಲಬದ್ಧತೆ ಸಮಸ್ಯೆ ಇರುವ ಮಂದಿಗೆ, ಪೋಷಕಾಂಶಗಳ ಕೊರತೆ ಇರುವ ಮಂದಿಗೆ ಇದು ಒಳ್ಳೆಯ ಆಹಾರ. ವಿಟಮಿನ್‌ಗಳು, ಖನಿಜಾಂಶಗಳು ಇದರಲ್ಲಿ ಹೇರಳವಾಗಿ ಇರುವುದರಿಂದ ಇದೊಂದು ಸಂಪೂರ್ಣ ಆಹಾರ ಕೂಡಾ. ಆದರೆ ಸಕ್ಕರೆಯ ಅಂಶ ಇದರಲ್ಲಿ ಹೆಚ್ಚಿರುವುದರಿಂದ ಇದನ್ನು ತಿನ್ನುವುದರಿಂದ ರಕ್ತದಲ್ಲಿ ದಿಢೀರ್‌ ಸಕ್ಕರೆಯ ಮಟ್ಟ ಏರಿಕೆಯಾಗುವ ಸಂಭವವೂ ಇದೆ. ಜೊತೆಗೆ ಗ್ಯಾಸ್‌, ಹೊಟ್ಟೆಯುಬ್ಬರದಂತಹ ಸಮಸ್ಯೆಯನ್ನೂ ತಂದೊಡ್ಡಬಹುದು. ಇದಕ್ಕಾಗಿ, ಒಣ ಅಂಜೂರವನ್ನು ಬೇರೆ ಒಣಬೀಜಗಳ ಜೊತೆಗೆ ಸೇರಿಸಿ ತಿನ್ನಬಹುದು. ಆದರೂ ಎದ್ದ ಕೂಡಲೇ ತಿನ್ನುವ ಅಭ್ಯಾಸದಿಂದ ದೂರವಿಡುವುದು ಒಳ್ಳೆಯದು.

Fresh Medjool Dates

ಖರ್ಜೂರ

ಕಬ್ಬಿಣಾಂಶ ಸೇರಿದಂತೆ ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುವ ಖರ್ಜೂರ ಕೂಡಾ ಬೆಳಗ್ಗೆ ಎದ್ದ ಕೂಡಲೇ ತಿನ್ನಬಹುದಾದ ಒಣ ಹಣ್ಣಲ್ಲ. ಸಾಕಷ್ಟು ಸಿಹಿಯಾಗಿರುವ ಖರ್ಜೂರವನ್ನು ತಿಂದ ತಕ್ಷಣ ರಕ್ತದಲ್ಲಿ ಸಕ್ಕರೆಯ ಅಂಶ ಏರುವ ಸಾಧ್ಯತೆಗಳೇ ಹೆಚ್ಚು. ಖರ್ಜೂರವನ್ನು ಬೇರೆ ಬೀಜಗಳ ಜೊತೆ ಸೇರಿಸಿ ತಿನ್ನಬಹುದಾದರೂ, ಬೇರೆ ಹೊತ್ತಿನಲ್ಲಿ ತಿನ್ನುವುದು ಉತ್ತಮ.

Dried apricots Weight Loss Dry Fruits

ಒಣ ಆಪ್ರಿಕಾಟ್‌

ಒಣ ಆಪ್ರಿಕಾಟ್‌ ಹಣ್ಣಿನಲ್ಲಿ ಸಾಕಷ್ಟು ಪೋಷಕಾಂಶಗಳೂ, ಖನಿಜಾಂಶಗಳೂ ಇರುವುದರ ಜೊತೆಗೆ ಸಕ್ಕರೆಯ ಅಂಶವೂ ಸಾಕಷ್ಟಿದೆ. ಬೆಳಗ್ಗೆಯೇ ಹೆಚ್ಚಿನ ಪ್ರಮಾಣದಲ್ಲಿ ತಿಂದರೆ ಇದರ ಸಕ್ಕರೆಯ ಅಂಶ ನೇರವಾಗಿ ರಕ್ತಕ್ಕೆ ಸೇರಿ ಸಕ್ಕರೆಯ ಅಂಶ ದಿಢೀರ್‌ ಏರಬಹುದು. ಅಷ್ಟೇ ಅಲ್ಲ, ಜೀರ್ಣದ ಸಮಸ್ಯೆಗಳೂ ಬರಬಹುದು. ಬೇರೆ ಬೀಜಗಳು ಹಾಗೂ ಧಾನ್ಯಗಳ ಜೊತೆಯಲ್ಲಿ ಬೇರೆ ಹೊತ್ತಿನಲ್ಲಿ ತೆಗೆದುಕೊಳ್ಳುವುದು ಒಳ್ಳೆಯದು.

Prunes Dry Fruits for Womens Health

ಪ್ರೂನ್‌

ಈ ಒಣಹಣ್ಣಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಾರಿನಂಶವಿದೆ. ಖನಿಜಾಂಶ, ಪೋಷಕಾಂಶಗಳೂ ಇವೆ. ನಾರಿನಂಶವಿರುವುದರಿಂದ ಬೆಳಗಿನ ಹೊತ್ತು ತಿನ್ನುವುದು ಒಳ್ಳೆಯದೇ ಆದರೂ, ಸಕ್ಕರೆ ಹೆಚ್ಚಿರುವುದರಿಂದ ದಿಢೀರ್‌ ಸಕ್ಕರೆಯ ಮಟ್ಟ ಏರುವ ಅಪಾಯವೂ ಇದೆ. ಹಾಗಾಗಿ, ಬೆಳಗಿನ ಹೊತ್ತು ಇದರಿಂದ ದೂರವಿಡಬಹುದು. ಅಥವಾ ಬೇರೆ ಒಣಬೀಜಗಳ ಜೊತೆಗೆ ಸೇರಿಸಿ ಬೇರೆ ಹೊತ್ತಿನಲ್ಲಿ ತಿನ್ನಬಹುದು.

Continue Reading

ಆರೋಗ್ಯ

Super Food For Kids: ನಿಮ್ಮ ಮಕ್ಕಳು ಜಾಣರಾಗಿ ಹೆಚ್ಚು ಅಂಕ ಗಳಿಸಬೇಕೆ? ಈ ಆಹಾರಗಳನ್ನು ಕೊಡಿ

ಮಕ್ಕಳಿಗೆ ಹೆಚ್ಚಿನ ಪೋಷಕಾಂಶಗಳ ಅಗತ್ಯವಿರುತ್ತದೆ. ಹೀಗಾಗಿ ಅವರ ನಿತ್ಯದ ಆಹಾರದಲ್ಲಿ ಕೆಲವೊಂದು ಪದಾರ್ಥಗಳು ಇರಲೇಬೇಕು. ಇದು ಅವರ ದೇಹಾರೋಗ್ಯ ಮಾತ್ರವಲ್ಲ ಮೆದುಳಿನ ಆರೋಗ್ಯಕ್ಕೂ ಬಹಳ ಒಳ್ಳೆಯದು. ಅಂತಹ ಆಹಾರ ಪದಾರ್ಥಗಳು (Super Food For Kids) ಯಾವುದು ಗೊತ್ತೇ? ಇಲ್ಲಿದೆ ಪೋಷಕರಿಗೆ ಉಪಯುಕ್ತ ಮಾಹಿತಿ.

VISTARANEWS.COM


on

By

Super Food For Kids
Koo

ನೆನಪಿನ ಶಕ್ತಿ (memory), ಏಕಾಗ್ರತೆ (concentration) ಮತ್ತು ಮೆದುಳಿನ ಕಾರ್ಯವನ್ನು (brain function) ಸುಧಾರಿಸುವ ಪ್ರಮುಖ ಅಂಶಗಳಲ್ಲಿ ಒಂದಾಗಿರುವುದರಿಂದ ಮಕ್ಕಳಿಗೆ (childrens) ಸರಿಯಾದ ಆಹಾರವನ್ನು (Super Food For Kids) ಆಯ್ಕೆ ಮಾಡುವುದು ಬಹಳ ಮುಖ್ಯ. ಮಕ್ಕಳು ಮೆದುಳು ಉತ್ತೇಜಕವಾಗಿ ಕಾರ್ಯನಿರ್ವಹಿಸುವ ಪೌಷ್ಟಿಕ ಆಹಾರಗಳನ್ನು (nutritious foods) ಸೇವಿಸಬೇಕು. ಮಗುವಿನ ಮೆದುಳನ್ನು ಶಕ್ತಿಯುತವಾಗಿ ಮತ್ತು ಚುರುಕಾಗಿಸಬಲ್ಲ ಕೆಲವು ಆಹಾರ ಪದಾರ್ಥಗಳು ಹೀಗಿವೆ.


ಹಾಲು

ಹೆಚ್ಚಿನ ಮಕ್ಕಳು ಹಾಲನ್ನು ಕುಡಿಯಲು ಇಷ್ಟಪಡುವುದಿಲ್ಲ. ಆದರೆ ಇದು ಮಗುವಿನ ಮೆದುಳನ್ನು ಚುರುಕುಗೊಳಿಸುವ ಅತ್ಯಂತ ಪ್ರಮುಖ ಆಹಾರ ಪದಾರ್ಥವಾಗಿದೆ. ಹಾಲಿನಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ, ವಿಟಮಿನ್ ಡಿ ಮತ್ತು ಪ್ರೊಟೀನ್ ಇದ್ದು ಇದು ಮಗುವಿನ ಮೆದುಳಿನ ಕಾರ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.


ಮೊಟ್ಟೆ

ಮೊಟ್ಟೆಗಳಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಡಿ ಮತ್ತು ಪ್ರೊಟೀನ್ ಇದೆ. ಇದು ನಮ್ಮ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಮಗುವಿನ ಮೆದುಳನ್ನು ಆರೋಗ್ಯಕರವಾಗಿ ಮತ್ತು ತೀಕ್ಷ್ಣವಾಗಿಡುವಲ್ಲಿ ಮೊಟ್ಟೆಗಳು ತುಂಬಾ ಪರಿಣಾಮಕಾರಿಯಾಗಿರುವುದರಿಂದ ದೈನಂದಿನ ಆಹಾರದಲ್ಲಿ ಮೊಟ್ಟೆಗಳನ್ನು ಅಳವಡಿಸಿಕೊಳ್ಳಬೇಕು. ಮೊಟ್ಟೆಗಳಲ್ಲಿ ಇರುವ ಕೋಲೀನ್ ಮಕ್ಕಳ ಜ್ಞಾಪಕಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.


ಗೋಡಂಬಿ

ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್, ವಿಟಮಿನ್‌ ಮತ್ತು ಖನಿಜಗಳನ್ನು ಒಳಗೊಂಡಿರುವ ಕಾರಣ ವಯಸ್ಸಿನ ಹೊರತಾಗಿಯೂ ಗೋಡಂಬಿ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಮಗುವಿನ ಮೆದುಳನ್ನು ಆರೋಗ್ಯವಾಗಿಡಲು ಅವರ ದೈನಂದಿನ ಆಹಾರದಲ್ಲಿ ಗೋಡಂಬಿಯನ್ನು ಸೇರಿಸಲು ಪ್ರಯತ್ನಿಸಿ.


ಧಾನ್ಯಗಳು

ಧಾನ್ಯಗಳು ಮಕ್ಕಳಿಗೆ ಪ್ರೋಟೀನ್, ವಿಟಮಿನ್ ಮತ್ತು ಖನಿಜಗಳ ಉತ್ತಮ ಮೂಲವಾಗಿದೆ. ಕಿಡ್ನಿ ಮತ್ತು ಪಿಂಟೋ ಧಾನ್ಯಗಳು ಯಾವುದೇ ರೀತಿಯ ಧಾನ್ಯಗಳು ಹೆಚ್ಚು ಒಮೆಗಾ 3 ಅನ್ನು ಹೊಂದಿರುತ್ತದೆ. ಧಾನ್ಯಗಳು ಅನ್ನು ಸಲಾಡ್‌ನೊಂದಿಗೆ ಬೆರೆಸಿ ಅಥವಾ ಕರಿ ಮಾಡುವ ಮೂಲಕ ಬಡಿಸಬಹುದು. ಧಾನ್ಯಗಳು ಜ್ಞಾಪಕ ಶಕ್ತಿ ಹೆಚ್ಚಿಸಲು ಮತ್ತು ಮೆದುಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Benefits Of Cherries: ಚೆರ್ರಿ ಹಣ್ಣು ರುಚಿಗಷ್ಟೇ ಅಲ್ಲ, ಉತ್ತಮ ಆರೋಗ್ಯಕ್ಕೂ ಹಿತಕರ!


ಮೀನು

ಮಕ್ಕಳಿಗೆ ಪ್ರತಿದಿನ ಮೀನನ್ನು ಬಡಿಸಲು ಪ್ರಯತ್ನಿಸಿ. ಯಾಕೆಂದರೆ ಇದು ಆರೋಗ್ಯದ ಒಟ್ಟಾರೆ ಬೆಳವಣಿಗೆಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಮೀನಿನಲ್ಲಿ ಹೆಚ್ಚಿನ ಪ್ರಮಾಣದ ಒಮೆಗಾ 3 ಇದ್ದು ಇದು ಜೀವಕೋಶಗಳ ನಿರ್ಮಾಣಕ್ಕೆ ಸಹಾಯ ಮಾಡುತ್ತದೆ.


ತರಕಾರಿಗಳು

ತರಕಾರಿಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಮೆದುಳಿನ ಕೋಶಗಳನ್ನು ಆರೋಗ್ಯಕರವಾಗಿಡಲು ತರಕಾರಿಗಳು ಸಹಾಯ ಮಾಡುತ್ತದೆ. ಟೊಮ್ಯಾಟೊ, ಸಿಹಿ ಆಲೂಗಡ್ಡೆ, ಕುಂಬಳಕಾಯಿ, ಕ್ಯಾರೆಟ್ ಮತ್ತು ಪಾಲಕ್ ಮೊದಲಾದ ತರಕಾರಿಗಳನ್ನು ಮಗುವಿನ ನಿಯಮಿತ ಆಹಾರದಲ್ಲಿ ಸೇರಿಸಬೇಕು.

Continue Reading

ಆರೋಗ್ಯ

ICMR Guidelines: ಕಬ್ಬಿನ ಹಾಲು ಕುಡಿದರೆ ಆರೋಗ್ಯಕ್ಕೆ ಹಾನಿಯೆ? ICMR ಅಭಿಪ್ರಾಯ ಹೀಗಿದೆ

ಭಾರತದಲ್ಲಿ ವಿಶೇಷವಾಗಿ ಬೇಸಿಗೆಯಲ್ಲಿ ಹೆಚ್ಚಿನವರು ಆರೋಗ್ಯಕರವೆಂದು ಕಬ್ಬಿನ ರಸವನ್ನು ಸೇವಿಸುತ್ತಾರೆ. ಆದರೆ ಇದರಲ್ಲಿ ಹೆಚ್ಚಿನ ಸಕ್ಕರೆಯಂಶ ಇರುತ್ತದೆ. ಐಸಿಎಂಆರ್ ಮಾರ್ಗಸೂಚಿ (ICMR Guidelines) ಪ್ರಕಾರ ಬೇಸಗೆಯಲ್ಲಿ ಕಬ್ಬಿಣ ರಸದ ಸೇವನೆಯನ್ನುಆದಷ್ಟು ಕಡಿಮೆ ಮಾಡಿದರೆ ಒಳ್ಳೆಯದು.

VISTARANEWS.COM


on

By

ICMR Guidelines
Koo

ಕೆಲವೆಡೆ ಮಳೆ (rain) ಸುರಿದರೂ ಇನ್ನು ಕೆಲವೆಡೆ ಬಿಸಿಲಿನ (summer) ತೀವ್ರತೆ ಇನ್ನೂ ಕಡಿಮೆಯಾಗಿಲ್ಲ. ಬೇಸಿಗೆಯ ಶಾಖದಿಂದ ದೇಹಾರೋಗ್ಯವನ್ನು ಕಾಪಾಡಿಕೊಳ್ಳಲು ಅನೇಕರು ಕಬ್ಬಿನ ರಸ (sugercane juice), ಹಣ್ಣಿನ ರಸ (fruit juice) ಮತ್ತು ಕೋಲ್ಡ್ ಕಾಫಿಗಳಂತಹ (cold coffee) ಪಾನೀಯಗಳನ್ನು ಸೇವಿಸುತ್ತಾರೆ. ಆದರೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR Guidelines) ಜನಪ್ರಿಯ ಬಾಯಾರಿಕೆ ತಣಿಸುವ ಈ ಪಾನೀಯಗಳ ಅತಿಯಾದ ಸೇವನೆಯ ಬಗ್ಗೆ ಎಚ್ಚರಿಕೆಯನ್ನು ನೀಡಿದೆ.

ಭಾರತದಲ್ಲಿ ವಿಶೇಷವಾಗಿ ಬೇಸಿಗೆಯಲ್ಲಿ ಹೆಚ್ಚಿನವರು ಆರೋಗ್ಯಕರವೆಂದು ಕಬ್ಬಿನ ರಸವನ್ನು ಸೇವಿಸುತ್ತಾರೆ. ಆದರೆ ಇದರಲ್ಲಿ ಹೆಚ್ಚಿನ ಸಕ್ಕರೆಯಂಶ ಇರುತ್ತದೆ. ಆದ್ದರಿಂದ ಇದರ ಸೇವನೆಯನ್ನು ಕಡಿಮೆ ಮಾಡಬೇಕು ಎನ್ನುತ್ತದೆ ಐಸಿಎಂಆರ್. ತಂಪು ಪಾನೀಯಗಳು ನೀರು ಅಥವಾ ತಾಜಾ ಹಣ್ಣುಗಳಿಗೆ ಪರ್ಯಾಯವಲ್ಲ. ಹೀಗಾಗಿ ಆದಷ್ಟು ತಂಪು ಪಾನೀಯಗಳ ಸೇವನೆಯನ್ನು ಕಡಿಮೆ ಮಾಡಬೇಕು. ಬದಲಿಗೆ ಮಜ್ಜಿಗೆ, ಸಕ್ಕರೆ ಸೇರಿಸದೆ ನಿಂಬೆ ನೀರು, ಸಂಪೂರ್ಣ ಹಣ್ಣಿನ ರಸ ಮತ್ತು ತೆಂಗಿನ ನೀರು ಸೇವನೆ ಒಳ್ಳೆಯದು ಎಂದು ಹೇಳಿದೆ.

ಕಬ್ಬಿನ ರಸ ಅಪಾಯಕಾರಿ ಏಕೆ?

ಆಹಾರ ತಜ್ಞರ ಪ್ರಕಾರ ಕಬ್ಬಿನ ರಸದಲ್ಲಿ ನೈಸರ್ಗಿಕ ಸಕ್ಕರೆ ಪ್ರಮಾಣ ಸಮೃದ್ಧವಾಗಿದೆ. ಇದು ವಿಶೇಷವಾಗಿ ಬಿಸಿ ವಾತಾವರಣದಲ್ಲಿ ಹಲವಾರು ಆರೋಗ್ಯ ಅಪಾಯಗಳನ್ನು ಉಂಟುಮಾಡುತ್ತದೆ ಎನ್ನುತ್ತಾರೆ.
ನಿರ್ಜಲೀಕರಣ

ಹೆಚ್ಚಿನ ಸಕ್ಕರೆ ಸೇವನೆಯು ದೇಹದಲ್ಲಿ ಹೆಚ್ಚಿನ ನೀರಿನ ನಷ್ಟಕ್ಕೆ ಕಾರಣವಾಗಬಹುದು. ಸಕ್ಕರೆಯು ಚಯಾಪಚಯಗೊಳಿಸಲು ದೇಹಕ್ಕೆ ಹೆಚ್ಚಿನ ನೀರು ಬೇಕಾಗುತ್ತದೆ. ದೇಹವು ಈಗಾಗಲೇ ಬೆವರಿನ ಮೂಲಕ ಗಮನಾರ್ಹವಾದ ನೀರನ್ನು ಕಳೆದುಕೊಂಡಾಗ ಬೇಸಿಗೆಯಲ್ಲಿ ಇದು ವಿಶೇಷವಾಗಿ ಸಮಸ್ಯಾತ್ಮಕವಾಗಿದೆ.

ಮಧುಮೇಹ

ಕಬ್ಬಿನ ರಸದಿಂದ ದೇಹ ಸಕ್ಕರೆಯನ್ನು ತ್ವರಿತವಾಗಿ ಹೀರಿಕೊಳ್ಳುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟದಲ್ಲಿ ಏರುಪೇರಾಗುವುದು. ಇನ್ಸುಲಿನ್ ಪ್ರತಿರೋಧ ಮತ್ತು ಟೈಪ್ 2 ಮಧುಮೇಹದ ಅಪಾಯವನ್ನು ಇದು ಹೆಚ್ಚಿಸುತ್ತದೆ.

ತೂಕ ಹೆಚ್ಚಳ

ಸಕ್ಕರೆ ಪಾನೀಯಗಳಿಂದ ಹೆಚ್ಚಿನ ಕ್ಯಾಲೋರಿಗಳು ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಇದು ಮಧುಮೇಹ ಮತ್ತು ಹೃದಯರಕ್ತನಾಳದ ಕಾಯಿಲೆಗಳಂತಹ ಆರೋಗ್ಯ ಸಮಸ್ಯೆಗಳನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತದೆ.

ಹಣ್ಣು ಮತ್ತು ಹಣ್ಣಿನ ರಸ ಯಾವುದು ಒಳ್ಳೆಯದು?

ಹಣ್ಣುಗಳು ಪೌಷ್ಟಿಕಾಂಶದ ಫೈಬರ್ ಅನ್ನು ಹೊಂದಿರುತ್ತವೆ. ಇದು ಜ್ಯೂಸ್ ಮಾಡುವಾಗ ಹೊರಹಾಕಲ್ಪಡುತ್ತದೆ. ಫೈಬರ್ ನಿಮ್ಮನ್ನು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವವನ್ನು ಕೊಡುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಸಂಪೂರ್ಣ ಹಣ್ಣುಗಳನ್ನು ಅಗಿಯುವುದರಿಂದ ಲಾಲಾರಸದ ಉತ್ಪಾದನೆ ಹೆಚ್ಚಿಸುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ ಆದರೆ ಸಕ್ಕರೆ ಹೀರಿಕೊಳ್ಳುವಿಕೆಯ ವೇಗವನ್ನು ನಿಯಂತ್ರಿಸುತ್ತದೆ.

ನೀರು ಮತ್ತು ತಂಪು ಪಾನೀಯ

ಹಲವು ಬಾರಿ ನೀರಿಗೆ ಬದಲಾಗಿ ತಂಪು ಪಾನೀಯಗಳನ್ನು ಸೇವಿಸುತ್ತೇವೆ. ಇದು ಆರೋಗ್ಯಕರವಲ್ಲ ಎನ್ನುತ್ತಾರೆ ಆಹಾರ ತಜ್ಞರು. ತಂಪು ಪಾನೀಯಗಳು ಹೆಚ್ಚಿನ ಪ್ರಮಾಣದ ಸಕ್ಕರೆಗಳನ್ನು ಹೊಂದಿರುತ್ತವೆ. ಇದು ಹೆಚ್ಚಿನ ಕ್ಯಾಲೋರಿ ಸೇವನೆ ಮತ್ತು ಸಂಭಾವ್ಯ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಅನೇಕ ತಂಪು ಪಾನೀಯಗಳು ಕೃತಕ ಸುವಾಸನೆ, ಬಣ್ಣ ಮತ್ತು ಸಂರಕ್ಷಕಗಳನ್ನು ಒಳಗೊಂಡಿರುತ್ತವೆ. ಇದು ಕಾಲಾನಂತರದಲ್ಲಿ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟು ಮಾಡುತ್ತದೆ. ತಂಪು ಪಾನೀಯಗಳಲ್ಲಿನ ಕೆಫೀನ್ ಮತ್ತು ಆಮ್ಲೀಯ ಅಂಶವು ಮೂತ್ರವರ್ಧಕ ಪರಿಣಾಮವನ್ನು ಹೊಂದಿರುತ್ತದೆ. ಇದು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಭಾರತದಂತಹ ಬಿಸಿ ವಾತಾವರಣದಲ್ಲಿ ಇದು ವಿಶೇಷವಾಗಿ ಅಪಾಯಕಾರಿ.

ಬೇಸಿಗೆಯಲ್ಲಿ ಚಹಾ, ಕಾಫಿ

ಪ್ರತಿದಿನ ಎಷ್ಟು ಕಾಫಿ ಮತ್ತು ಚಹಾವನ್ನು ಸೇವಿಸುತ್ತೀರಿ ಎಂಬುದರ ಬಗ್ಗೆ ಗಮನವಿರಲಿ. ಬರಿ ಹೊಟ್ಟೆಗೆ ಚಹಾ, ಕಾಫಿ ಸೇವನೆಯನ್ನು ತಪ್ಪಿಸಿ. ಕುಡಿಯಲೇ ಬೇಕು ಅನಿಸಿದರೆ ಉಪಹಾರ ಮತ್ತು ಮಧ್ಯಾಹ್ನ ಊಟದ ಮಧ್ಯದ ಸಮಯಕ್ಕೆ ಮುಂದೂಡಿ. ಇಲ್ಲವಾದರೆ ದಾಲ್ಚಿನ್ನಿ, ಅರಿಶಿನದಂತಹ ಗಿಡಮೂಲಿಕೆಗಳನ್ನು ಮತ್ತು ಕ್ಯಾಮೊಮೈಲ್, ಮಲ್ಲಿಗೆ, ದಾಸವಾಳದ ಚಹಾದಂತಹ ಹೂವುಗಳನ್ನು ಕುಡಿಯಬಹುದು.

ದೇಹದ ಸಮಸ್ಯೆ ಆಲಿಸಿ

ಬೇಸಿಗೆಯಲ್ಲಿ ನಡುಗುವಿಕೆ, ಆತಂಕ ಅಥವಾ ನಿದ್ರೆಯ ಸಮಸ್ಯೆಗಳನ್ನು ಅನುಭವಿಸಿದರೆ ಆದಷ್ಟು ವಿಶ್ರಾಂತಿ ಪಡೆಯಿರಿ. ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸಿ.

ನಿರ್ಜಲೀಕರಣವಾಗದಂತೆ ತಡೆಯುವುದು ಹೇಗೆ?

ಬೇಸಿಗೆಯಲ್ಲಿ ಆರೋಗ್ಯವಾಗಿರಲು ದೇಹವನ್ನು ಹೈಡ್ರೀಕರಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಇದಕ್ಕಾಗಿ ಪ್ರತಿದಿನ ಕನಿಷ್ಠ 8- 10 ಗ್ಲಾಸ್ ನೀರನ್ನು ಕುಡಿಯಿರಿ. ದೇಹದಲ್ಲಿ ಬೆವರಿನ ಮೂಲಕ ಕಳೆದುಹೋಗುವ ಲವಣ ಮತ್ತು ಖನಿಜಗಳನ್ನು ಪುನಃ ತುಂಬಿಸಲು ಮನೆಯಲ್ಲಿ ಅಥವಾ ವಾಣಿಜ್ಯಿಕವಾಗಿ ಲಭ್ಯವಿರುವ ಎಲೆಕ್ಟ್ರೋಲೈಟ್ ಪರಿಹಾರಗಳನ್ನು ಬಳಸಿ.

ಇದನ್ನೂ ಓದಿ: Heatwave Effect: ಬೇಸಿಗೆಗೂ ಕಣ್ಣಿನ ಸಮಸ್ಯೆಗೂ ಇದೆ ನಂಟು!

ದೇಹದಲ್ಲಿ ಜಲಸಂಚಯನವನ್ನು ಹೆಚ್ಚಿಸಲು ಆಹಾರದಲ್ಲಿ ಕಲ್ಲಂಗಡಿ, ಸೌತೆಕಾಯಿ ಮತ್ತು ಕಿತ್ತಳೆಯಂತಹ ನೀರು-ಭರಿತ ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಿ. ಆಲ್ಕೋಹಾಲ್ ಮತ್ತು ಸಕ್ಕರೆ ಪಾನೀಯಗಳು ನಿರ್ಜಲೀಕರಣದ ಅಪಾಯವನ್ನು ಹೆಚ್ಚಿಸಬಹುದು. ಇದನ್ನು ಮಿತವಾಗಿ ಸೇವಿಸಿ ಅಥವಾ ಸಂಪೂರ್ಣವಾಗಿ ತಪ್ಪಿಸಬೇಕು.

Continue Reading
Advertisement
Hassan Ali
ದೇಶ1 hour ago

Hassan Ali: ರಿಯಾಸಿ ಉಗ್ರರ ದಾಳಿ ಖಂಡಿಸಿದ ಪಾಕ್‌ ಕ್ರಿಕೆಟಿಗ ಹಸನ್‌ ಅಲಿ; ಆಲ್‌ ಐಸ್‌ ಆನ್‌ ವೈಷ್ಣೋದೇವಿ ಎಂದಿದ್ದೇಕೆ?

IND vs USA
ಪ್ರಮುಖ ಸುದ್ದಿ1 hour ago

IND vs USA: ಅರ್ಶದೀಪ್​ ಮಾರಕ ದಾಳಿಗೆ ಪತರುಗುಟ್ಟಿದ ಅಮೆರಿಕ; ಟೀಮ್​ ಇಂಡಿಯಾ ಸೂಪರ್​-8 ಪ್ರವೇಶ

disqualification for hanawala Gram Panchayat Vice President and Cancellation of membership ordered
ಕರ್ನಾಟಕ1 hour ago

Koppala News: ಹಣವಾಳ ಗ್ರಾ.ಪಂ ಉಪಾಧ್ಯಕ್ಷೆಗೆ ಅನರ್ಹತೆಯ ಶಿಕ್ಷೆ; ಸದಸ್ಯತ್ವ ರದ್ದುಗೊಳಿಸಿ ಆದೇಶ

Court Order
ದೇಶ2 hours ago

ಬಾಲಕಿಯ ಒಳ ವಸ್ತ್ರ ಕಳಚಿ ಬೆತ್ತಲೆಗೊಳಿಸುವುದು ಅತ್ಯಾಚಾರ ಯತ್ನವಲ್ಲ ಎಂದ ಹೈಕೋರ್ಟ್! ನಿಮ್ಮ ಅಭಿಪ್ರಾಯವೇನು?

Virat Kohli
ಕ್ರೀಡೆ2 hours ago

Virat Kohli: ಟಿ20 ವಿಶ್ವಕಪ್​ನಲ್ಲಿ ಮೊದಲ ಗೋಲ್ಡನ್​ ಡಕ್ ಸಂಕಟಕ್ಕೆ ಸಿಲುಕಿದ ವಿರಾಟ್​ ಕೊಹ್ಲಿ

Mumbai
ಪ್ರಮುಖ ಸುದ್ದಿ3 hours ago

300 ಕೋಟಿ ರೂ. ಆಸ್ತಿಗಾಗಿ 1 ಕೋಟಿ ರೂ. ಸುಪಾರಿ ಕೊಟ್ಟು ಮಾವನನ್ನೇ ಕೊಲ್ಲಿಸಿದ ದುಷ್ಟ ಸೊಸೆ!

ICC T20 Rankings
ಕ್ರೀಡೆ3 hours ago

ICC T20 Rankings: ಅಗ್ರಸ್ಥಾನದಲ್ಲೇ ಮುಂದುವರಿದ ಟೀಮ್​ ಇಂಡಿಯಾ; ಕುಸಿತ ಕಂಡ ಪಾಕ್

Rain News
ಪ್ರಮುಖ ಸುದ್ದಿ4 hours ago

Rain News: ವಿಜಯನಗರ, ಕೊಪ್ಪಳ ಜಿಲ್ಲೆಯಲ್ಲಿ ಮಳೆ ಆರ್ಭಟ; ಕೆರೆಯಂತಾದ ರಸ್ತೆಗಳು!

Chellagurki Shri Yerrithathanavara Maharathotsava in Ballari
ಧಾರ್ಮಿಕ4 hours ago

Ballari News: ಭಕ್ತಿ ಭಾವದಿಂದ ನಡೆದ ಚೇಳ್ಳಗುರ್ಕಿ ಶ್ರೀ ಎರ‍್ರಿತಾತ ಮಹಾರಥೋತ್ಸವ

Narendra Modi
ದೇಶ4 hours ago

Narendra Modi: ಆಂಧ್ರದಲ್ಲಿ ಮೆಗಾ ಸ್ಟಾರ್‌, ಪವರ್‌ ಸ್ಟಾರ್‌ ಜತೆ ‘ಪೊಲಿಟಿಕಲ್‌ ಸ್ಟಾರ್’‌ ಮೋದಿ; Video ನೋಡಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ1 day ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ1 day ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ1 day ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ2 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ5 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ5 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌