Teachers Day | ಗಣಿತ ಕಷ್ಟವಲ್ಲ, ಸುಲಲಿತವೆಂದ ಈ ಶಿಕ್ಷಕರ ಶಾಲೆಯಲ್ಲಿ ಗಣಿತಕ್ಕೆ ಶೇ.100 ಫಲಿತಾಂಶ! - Vistara News

ಕರ್ನಾಟಕ

Teachers Day | ಗಣಿತ ಕಷ್ಟವಲ್ಲ, ಸುಲಲಿತವೆಂದ ಈ ಶಿಕ್ಷಕರ ಶಾಲೆಯಲ್ಲಿ ಗಣಿತಕ್ಕೆ ಶೇ.100 ಫಲಿತಾಂಶ!

Teachers Day | ರಾಷ್ಟ್ರೀಯ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಗಣಿತ, ವಿಜ್ಞಾನ ಬೋಧಿಸುವ ಶಿಕ್ಷಕರು ಗಣಿತದಲ್ಲಿ ಯಾವ ಮಕ್ಕಳೂ ಹಿಂದುಳಿಯದಂತೆ ನೋಡಿಕೊಳ್ಳುತ್ತಿದ್ದಾರೆ. ಅವರಿಗೆ ಸುಲಭ, ಸರಳ ರೀತಿಯಲ್ಲಿ ಲೆಕ್ಕಾಚಾರದ ತಂತ್ರಗಳನ್ನು ಹೇಳಿಕೊಡುವ ಮೂಲಕ ಮಾದರಿ ಶಿಕ್ಷಕರಾಗಿದ್ದಾರೆ.

VISTARANEWS.COM


on

ಶಿವಮೊಗ್ಗ ರಘು ೨
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Teacher's Day

ಶಿವಮೊಗ್ಗ: ಗಣಿತ ಎಂದರೆ ಕಬ್ಬಿಣದ ಕಡಲೆಯಲ್ಲ, ಇದು ಸುಲಲಿತ ಎಂದು ಹೇಳಿಕೊಡುತ್ತಿರುವ ಶಿಕ್ಷಕರೊಬ್ಬರು (Teachers Day) ಶಿವಮೊಗ್ಗದಲ್ಲಿದ್ದಾರೆ. ಈಗ ಇವರು ಬೋಧಿಸುತ್ತಿರುವ ಶಾಲೆಯಲ್ಲಿ ಗಣಿತ ವಿಷಯದಲ್ಲಿ ನೂರಕ್ಕೆ ನೂರು ಫಲಿತಾಂಶ ಲಭ್ಯವಾಗುತ್ತಿದ್ದು, ಮಕ್ಕಳ ಲೆಕ್ಕಾಚಾರವನ್ನು ಸರಿದಾರಿಗೆ ತರುವ ಕೆಲಸವನ್ನು ಮಾಡುತ್ತಿದ್ದಾರೆ.

ಶಿವಮೊಗ್ಗ ನಗರದ ಬಸವನಗುಡಿಯ ಬಿ.ಎಂ.ರಘು ಎಂಬ ಶಿಕ್ಷಕರು ಶೈಕ್ಷಣಿಕವಾಗಿ ಮಕ್ಕಳ ಪ್ರಗತಿಗೆ ಶ್ರಮಿಸುತ್ತಿರುವವರು. ಇವರು ಎನ್ಇಎಸ್ ಪ್ರೌಢಶಾಲೆಯಲ್ಲಿ ಗಣಿತ ಹಾಗೂ ವಿಜ್ಞಾನ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ್ದು, ಪ್ರಸ್ತುತ ರಾಷ್ಟ್ರೀಯ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಗಣಿತ, ವಿಜ್ಞಾನ ಬೋಧಿಸುವ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ರಘು

ಗಣಿತವನ್ನು ಅತ್ಯಂತ ಸರಳವಾಗಿ ಬೋಧಿಸುವುದು ಇವರ ವಿಶೇಷತೆ. ಹೀಗಾಗಿ ಎನ್ಇಎಸ್ ಪ್ರೌಢಶಾಲೆಯಲ್ಲಿ ಹಲವು ವರ್ಷಗಳಿಂದ ಎಸ್ಎಸ್ಎಲ್‌ಸಿ ಗಣಿತ ವಿಷಯದಲ್ಲಿ ಶೇ.100 ಫಲಿತಾಂಶ ಲಭ್ಯವಾಗುತ್ತಿದೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಆಯೋಜಿಸಿರುವ ಅನೇಕ ಕಾರ್ಯಾಗಾರಗಳಲ್ಲಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಕೇವಲ ಗಣಿತ ಮಾತ್ರವಲ್ಲದೆ ವಿಜ್ಞಾನದಲ್ಲೂ ಅತ್ಯುತ್ತಮ ಶಿಕ್ಷಕ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ | Teachers’ Day | ನೀತಿಕತೆ, ಬೆಡಗುಗಳೊಂದಿಗೆ ಕಲಿಕೆಗೆ ಮೆರಗು ನೀಡಿದ ಶಿಕ್ಷಕ!

ಶಾಲೆಯ ಗೋಡೆಗಳಲ್ಲಿ ಶೈಕ್ಷಣಿಕ ಮಾದರಿ

ಗಣಿತ ಸೂತ್ರಗಳು, ಆಕೃತಿಗಳು, ಘನಾಕೃತಿಗಳು, ಗಣಿತ ಸಾಧಕರು ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಶಾಲೆಯ ಗೋಡೆಯಲ್ಲಿ ಚಿತ್ರಗಳ ರೂಪದಲ್ಲಿ ಕೊಡಲಾಗಿದೆ. ಇದು ಪ್ರತಿ ಬಾರಿ ಕಣ್ಣಿಗೆ ಕಾಣಿಸುವುದರಿಂದ ಮಕ್ಕಳ ಕಲಿಕೆಗೆ ಪೂರಕವಾಗಲಿದೆ. ಅಲ್ಲದೆ, ಗಣಿತ ಲ್ಯಾಬ್‌ ಅನ್ನು ಸಹ ಇವರು ತೆರೆದಿದ್ದಾರೆ. ಜತೆಗೆ ಮಕ್ಕಳಿಗೆ ಪಾಠ ಮಾಡುವ ವೇಳೆ ಪ್ರಾಯೋಗಿಕವಾಗಿಯೇ ಹೇಳಿಕೊಡುತ್ತಿದ್ದಾರೆ. ಇದು ಸುಲಭ ಹಾಗೂ ಸರಳವಾಗಿ ಅರಿಯಲು ಸಹಾಯಕವಾಗುತ್ತಿದೆ.

ಸಂದ ಪ್ರಶಸ್ತಿಗಳು:
ದಾವಣಗೆರೆ ಜಿಲ್ಲಾ ಮಟ್ಟದಲ್ಲಿ ಪ್ರಧಾನ ಸಂಪನ್ಮೂಲ ವ್ಯಕ್ತಿಯಾಗಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ತರಬೇತಿ ನೀಡುವುದರೊಂದಿಗೆ ಹಾಗೂ ಎಸ್‌ಎಸ್‌ಎಲ್‌ಸಿಗೆ ಸಂಬಂಧಿಸಿದ ವಿವಿಧ ಜಿಲ್ಲೆಗಳ ಶೈಕ್ಷಣಿಕ ಪರಾಮರ್ಶೆ ನಡೆಸಿದ್ದಕ್ಕಾಗಿ ದಾವಣಗೆರೆ ಜಿಲ್ಲಾ ಮಟ್ಟದ ಸಾಧಕ ಶಿಕ್ಷಕ ಪ್ರಶಸ್ತಿ, ತಾರಾ ಮಂಡಲ ಸಂಘಟಿಸಿದ್ದ ವಿಜ್ಞಾನ ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ಅಂತಾರಾಷ್ಟ್ರೀಯ ಖಗೋಳ ವಿಜ್ಞಾನ ವರ್ಷದ ಪ್ರಶಸ್ತಿ ದೊರೆತಿದೆ. ಶಿವಮೊಗ್ಗ ನಗರ ಪಾಲಿಕೆಯ ಕಲಾ ದಸರಾ ಪ್ರಶಸ್ತಿ, ಸಾಗರದ ಸಹೃದಯ ಗೌರವ ಪ್ರಶಸ್ತಿ, ಬೆಂಗಳೂರಿನ ತಾಯ್ನಾಡು ಕನ್ನಡ ರಕ್ಷಣಾ ವೇದಿಕೆಯಿಂದ 2015ರ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ರತ್ನ ಪ್ರಶಸ್ತಿ ಹೆಸರಿನ ರಾಜ್ಯ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ, ಬೆಳಗಾವಿಯ ಡಾ.ಸ.ಜ. ನಾಗಲೋಟಮಠ ಅಂತಾರಾಷ್ಟ್ರೀಯ ಪ್ರತಿಷ್ಠಾನ ವತಿಯಿಂದ 2015-16ನೇ ಸಾಲಿನ ರಾಜ್ಯ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಹೀಗೆ ಅನೇಕ ಗೌರವಗಳಿಗೆ ಇವರು ಪಾತ್ರರಾಗಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾಡಳಿತ, ತಾಲೂಕಾಡಳಿತ, ಜಿಲ್ಲಾ ಪಂಚಾಯಿತಿಗಳಿಂದಲೂ ಜಿಲ್ಲಾ ಮಟ್ಟಗಳಲ್ಲಿ ಅಭಿನಂದನಾ ಪತ್ರಗಳೊಂದಿಗೆ ಸನ್ಮಾನಿಸಲಾಗಿದೆ. ಕುಮಟಾದ ಆದಿ ಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ 2013 ಮತ್ತು 2014ರಲ್ಲಿ ನಡೆದ ತಾಲೂಕು ಮಟ್ಟದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸನ್ಮಾನಿತಗೊಂಡಿದ್ದು, ಇನ್ನೂ ಅನೇಕ ಸಂಘ-ಸಂಸ್ಥೆಗಳಿಂದ ಗೌರವಕ್ಕೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ | Teachers Day | ಸರ್ಕಾರಿ ಶಾಲೆಗೆ ಸೊಗಸು ತಂದ ಕೆ.ರಾಂಪುರದ ಶಿಕ್ಷಕ ಚಂದ್ರಶೇಖರ ರೆಡ್ಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದಕ್ಷಿಣ ಕನ್ನಡ

Panjurli Daiva: ಶರತ್‌ ಶೆಟ್ಟಿ ಕೊಲೆ ಆರೋಪಿ ಶರಣಾಗತಿ; ಎಳೆತಂದು ನಿಲ್ಲಿಸಿತೇ ಪಂಜುರ್ಲಿ ದೈವ?

ಪಂಜುರ್ಲಿ ದೈವ (Panjurli Daiva) , “ಆರೋಪಿಯನ್ನು ಪಾತಾಳದಲ್ಲಿದ್ದರೂ ಹುಡುಕಿ ಮುಂದೆ ನಿಲ್ಲಿಸುತ್ತೇನೆ” ಎಂದು ಅಭಯ ನೀಡಿತ್ತು. ಒಂದು ವರ್ಷಕ್ಕೂ ಅಧಿಕ ಕಾಲದಿಂದ ತಲೆಮರೆಸಿಕೊಂಡಿದ್ದ ಆರೋಪಿ ಇದೀಗ ಕೋರ್ಟ್‌ಗೆ ಶರಣಾಗಿರುವುದರ ಹಿಂದೆ ಪಂಜುರ್ಲಿ ದೈವದ ಮಹಿಮೆ ಇದೆ ಎಂದು ಸ್ಥಳೀಯರು ನಂಬಿದ್ದಾರೆ. ಪ್ರಕರಣದ ಸಂಬಂಧ ಈಗಾಗಲೇ ಹಲವರ ಬಂಧನ ನಡೆದಿದೆ.

VISTARANEWS.COM


on

panjurli daiva sharat shetty murder
ಎಡಚಿತ್ರದಲ್ಲಿ ಕೊಲೆಯಾದ ಶರತ್‌ ಶೆಟ್ಟಿ, ಬಲಚಿತ್ರದಲ್ಲಿ ಆರೋಪಿ ಯೋಗೀಶ್‌ ಆಚಾರ್ಯ.
Koo

ಉಡುಪಿ: ತುಳುನಾಡಿನ (Tulunadu) ಆರಾಧ್ಯ ದೈವವಾದ ಪಂಜುರ್ಲಿ ದೈವದ (Panjurli Daiva) ಕಾರಣಿಕ ಎಂದೇ ವ್ಯಾಖ್ಯಾನಿಸಲಾಗುತ್ತಿರುವ ಘಟನೆಯೊಂದು ಉಡುಪಿ (Udupi news) ಜಿಲ್ಲೆಯಲ್ಲಿ ನಡೆದಿದೆ. ಪಾಂಗಾಳದಲ್ಲಿ ನಡೆದಿದ್ದ ಶರತ್‌ ಶೆಟ್ಟಿ (Sharat Shetty murder) ಎಂಬಾತನ ಕೊಲೆಯ ಪ್ರಮುಖ ಆರೋಪಿಯೊಬ್ಬ ಶರಣಾಗತನಾಗಿದ್ದಾನೆ. ಇದಕ್ಕೂ ಮುನ್ನ ಕೊಲೆಯಾದಾತನ ಕುಟುಂಬಿಕರು ಪಂಜುರ್ಲಿ ದೈವ ಮೊರೆ ಹೋಗಿದ್ದರು.

2023ರ ಫೆಬ್ರವರಿ 5ರಂದು ಉಡುಪಿಯ ಪಾಂಗಾಳ ಎಂಬಲ್ಲಿ ಬಬ್ಬು ಸ್ವಾಮಿ ದೈವಸ್ಥಾನದ ನೇಮದಲ್ಲಿ ಭಾಗವಹಿಸಿದ್ದ ಶರತ್ ಶೆಟ್ಟಿ (42) ಅವರು ದುಷ್ಕರ್ಮಿಗಳಿಗೆ ಬಲಿಯಾಗಿದ್ದರು. ಮಾತುಕತೆಗೆ ಎಂದು ಕರೆದಿದ್ದ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಇರಿದು ಕೊಲೆ ಮಾಡಿ ಎಸ್ಕೇಪ್ ಆಗಿದ್ದರು. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳು ಪತ್ತೆಯಾಗಿರಲಿಲ್ಲ.

ಬಳಿಕ ಕುಟುಂಬಸ್ಥರು ಮಾರ್ಚ್ 24, 2023ರಂದು ಪಾಂಗಾಳದ ಮನೆಯಲ್ಲಿ ವರ್ತೆ ಪಂಜುರ್ಲಿಗೆ ನೇಮೋತ್ಸವವನ್ನು ಆಯೋಜಿಸಿ, ದೈವದ ಮೊರೆ ಹೋಗಿದ್ದರು. ಈ ಸಂದರ್ಭದಲ್ಲಿ ಪಂಜುರ್ಲಿ ದೈವ (Panjurli Daiva) , “ಆರೋಪಿಯನ್ನು ಪಾತಾಳದಲ್ಲಿದ್ದರೂ ಹುಡುಕಿ ಮುಂದೆ ನಿಲ್ಲಿಸುತ್ತೇನೆ” ಎಂದು ಅಭಯ ನೀಡಿತ್ತು.

ಅಚ್ಚರಿ ಎಂಬಂತೆ, ಮೇ.23ರಂದು ಪ್ರಕರಣ ಎ1 ಆರೋಪಿ ಯೋಗೀಶ್ ಆಚಾರ್ಯ ನ್ಯಾಯಾಲಯದ ಮುಂದೆ ಶರಣಾಗಿದ್ದಾನೆ. ಒಂದು ವರ್ಷ ಮೂರು ತಿಂಗಳು ತಲೆಮರೆಸಿಕೊಂಡಿದ್ದ ಈತ ಉಡುಪಿ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯಕ್ಕೆ ವಕೀಲರ ಮೂಲಕ ಹಾಜರಾಗಿದ್ದಾನೆ. ಯೋಗೀಶ್ ಆಚಾರ್ಯನನ್ನು ಮೇ 30ರ ವರೆಗೆ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದೆ.

ಒಂದು ವರ್ಷಕ್ಕೂ ಅಧಿಕ ಕಾಲದಿಂದ ತಲೆಮರೆಸಿಕೊಂಡಿದ್ದ ಆರೋಪಿ ಇದೀಗ ಕೋರ್ಟ್‌ಗೆ ಶರಣಾಗಿರುವುದರ ಹಿಂದೆ ಪಂಜುರ್ಲಿ ದೈವದ ಮಹಿಮೆ ಇದೆ ಎಂದು ಸ್ಥಳೀಯರು ನಂಬಿದ್ದಾರೆ. ಪ್ರಕರಣದ ಸಂಬಂಧ ಈಗಾಗಲೇ ಹಲವರ ಬಂಧನ ನಡೆದಿದೆ.

ತುಳುನಾಡಿನ ಪಂಜುರ್ಲಿ ದೈವದ ಬಗ್ಗೆ ರಿಷಭ್‌ ಶೆಟ್ಟಿ ನಟನೆಯ ʼಕಾಂತಾರʼ ಚಿತ್ರದ ಬಳಿಕ ಹೊರಗಡೆಯೂ ಹೆಚ್ಚು ಅರಿವು ಮೂಡಿತ್ತು. ದಕ್ಷಿಣ ಕನ್ನಡ ಹಾಗೂ ಉಡುಪಿಯ ಕರಾವಳಿಯಲ್ಲಿ ನ್ಯಾಯನಿರ್ಣಯಗಳಿಗೆ ದೈವದ ಕೋಲದಲ್ಲಿ ಪ್ರಶ್ನೆ ಹಾಕುವುದು ಹಾಗೂ ದೈವದಿಂದ ʼಅಭಯʼ ಪಡೆಯುವುದು ಸಾಮಾನ್ಯವಾಗಿ ಕಂಡುಬರುತ್ತದೆ.

ಇದನ್ನೂ ಓದಿ: Glenn Maxwell: ಕಾಂತಾರದ ‘ಪಂಜುರ್ಲಿ’ ಬಲದಿಂದ ಮ್ಯಾಕ್ಸ್‌ವೆಲ್‌ 201 ರನ್ ಚಚ್ಚಿದರೇ?

Continue Reading

ಕರ್ನಾಟಕ

Prajwal Revanna Case: ಬೆಂಗಳೂರಿಗೆ ಪ್ರಜ್ವಲ್‌ ರೇವಣ್ಣ ಟಿಕೆಟ್ ಬುಕ್; ನಾಳೆ ಮಧ್ಯಾಹ್ನ ಜರ್ಮನಿಯಿಂದ ಪ್ರಯಾಣ

Prajwal Revanna Case: ಬೆಂಗಳೂರಿಗೆ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಬುಕ್ ಮಾಡಿಕೊಂಡಿರುವ ಪ್ರಜ್ವಲ್‌ ರೇವಣ್ಣ, ಮೇ 30ರಂದು ಮಧ್ಯಾಹ್ನ ಜರ್ಮನಿಯಲ್ಲಿ ಫ್ಲೈಟ್‌ ಹತ್ತಲಿದ್ದಾರೆ. ಅವರು ಬೆಂಗಳೂರಿಗೆ ಆಗಮಿಸುತ್ತಲೇ ವಶಕ್ಕೆ ಪಡೆಯಲು ಎಸ್‌ಐಟಿ ಅಧಿಕಾರಿಗಳು ಕಾಯುತ್ತಿದ್ದಾರೆ.

VISTARANEWS.COM


on

Prajwal Revanna Case
Koo

ಬೆಂಗಳೂರು: ಮೇ 31ರಂದು ಭಾರತಕ್ಕೆ ಆಗಮಿಸುವುದಾಗಿ ಹೇಳಿದ್ದ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna Case) ಅವರು, ಇದೀಗ ಬೆಂಗಳೂರಿಗೆ ಟಿಕೆಟ್‌ ಮಾಡಿರುವುದು ಕಂಡುಬಂದಿದೆ. ಜರ್ಮನಿಯ ಮ್ಯೂನಿಚ್‌ನಿಂದ ಬೆಂಗಳೂರಿಗೆ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಬುಕ್ ಮಾಡಿಕೊಂಡಿರುವ ಪ್ರಜ್ವಲ್‌ ರೇವಣ್ಣ, ಮೇ 30ರಂದು ಮಧ್ಯಾಹ್ನ ಜರ್ಮನಿಯಲ್ಲಿ ಫ್ಲೈಟ್‌ ಹತ್ತಲಿದ್ದಾರೆ.

ಲುಫ್ತಾನ್ಸಾ ಏರ್‌ಲೈನ್ಸ್‌ ಮೂಲಕ ಫ್ಲೈಟ್ ಟಿಕೆಟ್ ಬುಕ್ ಮಾಡಿರುವ ಪ್ರಜ್ವಲ್ ರೇವಣ್ಣ, ಗುರುವಾರ ಮಧ್ಯಾಹ್ನ 12.05ಕ್ಕೆ ಮ್ಯೂನಿಚ್‌ನಲ್ಲಿ ಫ್ಲೈಟ್ ಹತ್ತಲಿದ್ದಾರೆ. ಮಧ್ಯರಾತ್ರಿ 12.30ಕ್ಕೆ ಬೆಂಗಳೂರು ಏರ್‌ಪೋರ್ಟ್‌ಗೆ ಆಗಮಿಸಲಿದ್ದಾರೆ. ಪ್ರಜ್ವಲ್‌ ರೇವಣ್ಣ ಅವರು ಆಗಮಿಸುತ್ತಲೇ ವಶಕ್ಕೆ ಪಡೆಯಲು ಎಸ್‌ಐಟಿ ಸಜ್ಜಾಗಿದ ಎಂದು ಈಗಾಗಲೇ ಗೃಹ ಸಚಿವ ಪರಮೇಶ್ವರ್‌ ಹೇಳಿದ್ದಾರೆ.

ಮೇ 27ರಂದು ವಿಡಿಯೊದಲ್ಲಿ ಮಾತನಾಡಿದ್ದ ಪ್ರಜ್ವಲ್‌ ರೇವಣ್ಣ, ನಾನು ಶುಕ್ರವಾರ (ಮೇ 31) ಕರ್ನಾಟಕಕ್ಕೆ ಆಗಮಿಸಿ, ಎಸ್‌ಐಟಿ ತನಿಖೆಗೆ ಸಹಕಾರ ನೀಡುತ್ತೇನೆ. ನನಗೆ ಕಾನೂನಿನ ಮೇಲೆ ಅಪಾರ ಗೌರವವಿದೆ. ನನ್ನ ವಿರುದ್ಧ ರಾಹುಲ್‌ ಗಾಂಧಿ ಸೇರಿ ಕಾಂಗ್ರೆಸ್‌ ನಾಯಕರು ಮಾಡಿದ ಆರೋಪಗಳನ್ನು ಕೇಳಿ ನನಗೆ ಶಾಕ್‌ ಆಯಿತು. ಇದೇ ಕಾರಣಕ್ಕಾಗಿ ನಾನು ಕೆಲ ದಿನಗಳಿಂದ ಐಸೋಲೇಷನ್‌ನಲ್ಲಿ ಇದ್ದೆ. ವಿದೇಶ ಪ್ರವಾಸವು ಮೊದಲೇ ನಿಗದಿಯಾಗಿತ್ತು. ನಾನು ವಿದೇಶಕ್ಕೆ ಬಂದ ಬಳಿಕ ಪ್ರಕರಣ ತಿಳಿಯಿತು. ನನ್ನ ವಿರುದ್ಧ ರಾಹುಲ್‌ ಗಾಂಧಿ ಸೇರಿ ಎಲ್ಲರೂ ವೇದಿಕೆ ಮೇಲೆಯೇ ಹೇಳಿಕೆಗಳನ್ನು ಕೊಟ್ಟರು. ಆ ಮೂಲಕ ರಾಜಕೀಯ ಪಿತೂರಿ ನಡೆಸಿದರು. ಆದರೂ, ನಾನು ರಾಜ್ಯಕ್ಕೆ ಆಗಮಿಸಿ ತನಿಖೆಗೆ ಸಹಕಾರ ನೀಡುತ್ತೇನೆ. ನಾನು ಈ ಪ್ರಕರಣದಿಂದ ಆರೋಪಮುಕ್ತನಾಗಿ ಹೊರಬರುತ್ತೇನೆ ಎಂಬ ವಿಶ್ವಾಸವಿದೆ ಎಂಬುದಾಗಿ ಹೇಳಿದ್ದರು.

ಏರ್‌ಪೋರ್ಟ್‌ನಲ್ಲೇ ಎಸ್‌ಐಟಿ ಠಿಕಾಣಿ

ಲೈಂಗಿಕ ದೌರ್ಜನ್ಯ (Physical Abuse) ಪ್ರಕರಣದ ಆರೋಪಿ, ಹಾಸನ ಸಂಸದ ಪ್ರಜ್ವಲ್ ರೇವಣ್ಣ (Hassan MP ‌Prajwal Revanna Case) ಭಾರತಕ್ಕೆ ಬರುತ್ತಿದ್ದಂತೆ ವಶಕ್ಕೆ ಪಡೆಯಲು ಸಿದ್ಧತೆ ನಡೆಸಿಕೊಂಡಿರುವ ಎಸ್‌ಐಟಿ (SIT) ತಂಡ, ಏರ್‌ಪೋರ್ಟ್‌ನಲ್ಲಿಯೇ (Kempegowda International Airport – KIA) ಸದ್ಯ ಠಿಕಾಣಿ ಹಾಕಿದೆ.

ಇದನ್ನೂ ಓದಿ | Prajwal Revanna Case: ಎರಡು ಎಫ್ಐಆರ್ ರದ್ದು ಕೋರಿ ಹೈಕೋರ್ಟ್‌ಗೆ ಎಚ್.ಡಿ.ರೇವಣ್ಣ ಅರ್ಜಿ

ಶುಕ್ರವಾರ ಬೆಳಗ್ಗೆ 10.30ಕ್ಕೆ ಎಸ್‌ಐಟಿ ಮುಂದೆ ಬರುವುದಾಗಿ ಪ್ರಜ್ವಲ್ ವಿಡಿಯೋದಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ ಅಷ್ಟರವರೆಗೂ ಕಾಯಲು ಎಸ್‌ಐಟಿ ಸಿದ್ದವಾಗಿಲ್ಲ. ಯಾಕೆಂದರೆ ಬರುವುದಾಗಿ ತಿಳಿಸಿ ಪ್ರಜ್ವಲ್‌ ದೇಶದೊಳಗೇ ತಲೆ ಮರೆಸಿಕೊಳ್ಳಬಹುದು ಎಂಬ ಆತಂಕವೂ ಇದೆ. ಹೀಗಾಗಿ ಅದಕ್ಕೂ ಮುನ್ನವೇ, ಅಂದರೆ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಲೇ ಆರೆಸ್ಟ್‌ ಮಾಡಲು ಎಸ್‌ಐಟಿ ಸಜ್ಜಾಗಿದೆ.

ನಾಳೆ ರಾತ್ರಿ 12.35ಕ್ಕೆ ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್-2ಗೆ ಜರ್ಮನಿಯಿಂದ ಬರಲಿರುವ ಲುಫ್ತಾನ್ಸಾ ವಿಮಾನದಲ್ಲಿ ಪ್ರಜ್ವಲ್‌ ಲ್ಯಾಂಡ್ ಆಗಲಿದ್ದಾರೆ ಎಂದು ಗೊತ್ತಾಗಿದೆ. ವಿಮಾನದಿಂದ ಇಳಿದ ಬಳಿಕ ಪ್ರಜ್ವಲ್‌ ಇಮಿಗ್ರೇಷನ್‌‌‌‌‌ ಡೆಸ್ಕ್‌‌ಗೆ ಬರಬೇಕು. ಪಾಸ್‌ಪೋರ್ಟ್‌ಗೆ ಸ್ಟಾಂಪ್‌‌‌ ಹಾಕಿಸಬೇಕು. ಈಗ ಲುಕೌಟ್‌ ನೋಟೀಸ್‌ ಇರುವುದರಿಂದ ಇಮಿಗ್ರೇಶನ್‌ ಅಧಿಕಾರಿಗಳು ಪ್ರಜ್ವಲ್‌ ಅವರನ್ನು ವಶಕ್ಕೆ ಪಡೆಯಲಿದ್ದಾರೆ. ಏರ್‌‌ಪೋರ್ಟ್‌ ಅಧಿಕಾರಿಗಳಿಂದ SITಗೆ ಪ್ರಜ್ವಲ್ ಹಸ್ತಾಂತರ ನಡೆಯಲಿದೆ.

ಲುಫ್ತಾನ್ಸಾ ಏರ್‌ಲೈನ್ಸ್‌ನಲ್ಲಿ ಪ್ರಜ್ವಲ್‌ ಟಿಕೆಟ್ ಕಾಯ್ದಿರಿಸಿರುವುದರಿಂದ ಅಲರ್ಟ್ ಆಗಿರುವ ಎಸ್ಐಟಿ ತಂಡ, ಏರ್‌ಪೋರ್ಟ್‌ನಲ್ಲಿಯೇ ಠಿಕಾಣಿ ಹೂಡಿದೆ. ಎರಡು ಮೂರು ಬಾರಿ ಪ್ರಜ್ವಲ್‌ ಟಿಕೆಟ್ ಬುಕ್ ಮಾಡಿ‌ ಕೊನೆ ಗಳಿಗೆಯಲ್ಲಿ ಕ್ಯಾನ್ಸಲ್ ಮಾಡಿಕೊಂಡಿದ್ದರು. ಹಾಗಾಗಿ ಎಸ್ಐಟಿ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಏರ್ಪೋರ್ಟ್‌ನಲ್ಲಿ ಬೀಡು ಬಿಟ್ಟಿದ್ದಾರೆ. 31ರಂದು ಬರುದಾಗಿ ಹೇಳಿ ಒಂದು ದಿನ ಮುಂಚಿತವಾಗಿಯೇ ಬಂದ್ರೆ ಕಷ್ಟ ಎಂದು ಏರ್ಪೋರ್ಟ್‌ನಲ್ಲಿ ಎರಡೆರಡು ತಂಡಗಳು ಕಾಯುತ್ತಿವೆ.

ಪ್ರಜ್ವಲ್‌ ಬಂದ ಬಳಿಕ ನಡೆಯುವ ಪ್ರಕ್ರಿಯೆ ಏನು?

ಪ್ರಜ್ವಲ್ ರೇವಣ್ಣನನ್ನು ವಶಕ್ಕೆ ಪಡೆದ ಬಳಿಕ ಮೆಡಿಕಲ್ ಟೆಸ್ಟ್‌ ಮತ್ತಿತರ ಅಗತ್ಯ ವಿಧಿವಿಧಾನಗಳು ನಡೆಯಲಿವೆ. ನಂತರ ತನಿಖೆ ನಡೆಸಲು ಎಸ್ಐಟಿ ತಯಾರಿ ಮಾಡಿಕೊಳ್ಳುತ್ತಿದೆ. ಎರಡು ಕೋನಗಳಲ್ಲಿ ಪ್ರಜ್ವಲ್ ರೇವಣ್ಣರನ್ನು ವಿಚಾರಣೆ ಮಾಡಲು ಸಿದ್ಧತೆ ನಡೆಸಲಾಗಿದೆ. ತನಿಖೆ ವೇಳೆ ಪ್ರಜ್ವಲ್ ರೇವಣ್ಣ ಎರಡು ತರಹದ ಪ್ರತಿಕ್ರಿಯೆ ನೀಡುವ ಸಾಧ್ಯತೆಯಿದ್ದು, ತಪ್ಪು ಒಪ್ಪಿಕೊಳ್ಳಬಹುದು ಅಥವಾ ತಾನು ಮಾಡಿಯೇ ಇಲ್ಲ ಅನ್ನಬಹುದು. ಈ ಎರಡೂ ಆಯಾಮಗಳಲ್ಲೂ ಎಸ್‌ಐಟಿ ತನಿಖೆ ಮಾಡಬೇಕಿದೆ.

ಪ್ರಜ್ವಲ್ ರೇವಣ್ಣ ತಪ್ಪು ಒಪ್ಪಿಕೊಂಡರೆ ಎಸ್‌ಐಟಿ ಕೆಲಸ ಸರಾಗವಾಗಲಿದೆ. ಆರೋಪಿತನ ಹೇಳಿಕೆ ದಾಖಲಿಸಿಕೊಂಡು ಸ್ಥಳ ಮಹಜರು ಮಾಡಲಾಗುತ್ತದೆ. ಎಲ್ಲೆಲ್ಲಿ ಕೃತ್ಯ ಎಸಗಲಾಗಿದೆ ಎಂದು ಸಂತ್ರಸ್ತೆ ನೀಡಿರುವ ಹೇಳಿಕೆ ಆಧಾರದಲ್ಲಿ ಕರೆದೊಯ್ದು ಸ್ಥಳ ಮಹಜರು ಮಾಡುತ್ತಾರೆ. ಎಂಪಿ ಗೆಸ್ಟ್ ಹೌಸ್, ಹೊಳೆನರಸೀಪುರದ ಫಾರ್ಮ್ ಹೌಸ್ ಸೇರಿ ಹಲವೆಡೆ ಪರಿಶೀಲನೆ ನಡೆಸಲಿದ್ದಾರೆ.

ಇದನ್ನೂ ಓದಿ | Rahul Gandhi: ನೋಡ ನೋಡ್ತಿದ್ದಂತೆ ತಲೆ ಮೇಲೆ ನೀರು ಸುರಿದುಕೊಂಡ ರಾಹುಲ್‌ ಗಾಂಧಿ! ವಿಡಿಯೋ ಇದೆ

ಪ್ರಜ್ವಲ್‌ ತಮ್ಮ ಮೇಲಿರುವ ಆರೋಪ ತಳ್ಳಿ ಹಾಕಿದರೆ ಸಂತ್ರಸ್ತೆ ಹೇಳಿಕೆ ಪ್ರಾಮುಖ್ಯತೆ ಪಡೆಯಲಿದೆ. ಆಕೆಯ ಹೇಳಿಕೆ ಆಧಾರದ ಮೇಲೆ ಚಾರ್ಜ್ ಶೀಟ್ ಸಲ್ಲಿಕೆ ನಡೆಯುತ್ತದೆ. ಈಗಾಗಲೇ ಸಂತ್ರಸ್ತೆ ಹೇಳಿಕೆ ದಾಖಲಿಸಿರುವ ಎಸ್ಐಟಿ, ಜೊತೆಗೆ ಸ್ಥಳ ಮಹಜರು ನಡೆಸಿ ಒಂದಷ್ಟು ಸಾಕ್ಷ್ಯಗಳನ್ನು ಕಲೆಹಾಕಿದೆ. ಇದರ ಜೊತೆಗೆ ಆರೋಪಿ ಹೇಳಿಕೆಯನ್ನೂ ದಾಖಲಿಸಿಕೊಂಡು ಚಾರ್ಜ್ ಶೀಟ್ ಸಲ್ಲಿಸಲಾಗುತ್ತದೆ.

Continue Reading

ಪ್ರಮುಖ ಸುದ್ದಿ

ಅಧಿಕಾರಕ್ಕೆ ಬಂದ್ರೆ ನಿಮ್ಮ ಖಾತೆಗೆ ಟಕಾಟಕ್ 1 ಲಕ್ಷ ಎಂದಿದ್ದ ರಾಹುಲ್ ಗಾಂಧಿ! ಪೋಸ್ಟ್ ಆಫೀಸ್ ಮುಂದೆ ಮುಸ್ಲಿಂ ಮಹಿಳೆಯರ ನೂಕುನುಗ್ಗಲು!!

ಲೋಕಸಭೆ ಚುನಾವಣೆ (Lok Sabha Election 2024) ಪ್ರಚಾರದಲ್ಲಿ ರಾಹುಲ್‌ ಗಾಂಧಿ, ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದ ಕೂಡಲೇ ನಿಮ್ಮ ಖಾತೆಗೆ ಹಣ ಜಮಾವಣೆ ಮಾಡುವುದಾಗಿ ಘೋಷಣೆ ಮಾಡಿದ್ದರು. ಈ ಘೋಷಣೆಯ ಬೆನ್ನಲ್ಲೇ ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಡಿಜಿಟಲ್ ಖಾತೆ (post payments Bank digital account) ತೆರೆಯಲು ಮಹಿಳೆಯರು ಮುಗಿಬಿದ್ದಿದ್ದಾರೆ.

VISTARANEWS.COM


on

ರಾಹುಲ್‌ ಗಾಂಧಿ rahul gandhi ippb account 2
Koo

ವಿಶೇಷ ವರದಿ: ಅಭಿಷೇಕ್ ಬಿ.ವಿ, ವಿಸ್ತಾರ ನ್ಯೂಸ್

ಬೆಂಗಳೂರು: ಇಂಡಿಯಾ ಮೈತ್ರಿಕೂಟ (INDIA bloc) ಅಧಿಕಾರಕ್ಕೆ ಬಂದ ನಂತರದ ದಿನವೇ ಮಹಿಳೆಯರ (women) ಖಾತೆಗೆ ʼಟಕಾ ಟಕ್ ಹಣʼ ಜಮಾವಣೆ ಮಾಡಲಾಗುವುದು ಎಂಬ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಘೋಷಣೆ ಪರಿಣಾಮ, ಪೋಸ್ಟ್‌ ಆಫೀಸ್‌ಗಳಲ್ಲಿ (Post Office) ಖಾತೆ ತೆರೆಯಲು ಮಹಿಳೆಯರು ಮುಗಿಬಿದ್ದಿದ್ದಾರೆ. ಇವರಲ್ಲಿ ಹೆಚ್ಚಾಗಿ ಮುಸ್ಲಿಂ ಮಹಿಳೆಯರೇ ಕಂಡು ಬರುತ್ತಿದ್ದಾರೆ.

ಲೋಕಸಭೆ ಚುನಾವಣೆ (Lok Sabha Election 2024) ಪ್ರಚಾರದಲ್ಲಿ ಇಂಡಿಯಾ ಒಕ್ಕೂಟ, ಅಧಿಕಾರ ಬಂದ ಕೂಡಲೇ ಸರ್ಕಾರ ನಿಮ್ಮ ಖಾತೆಗೆ ಹಣ ಜಮಾವಣೆ ಮಾಡುವುದಾಗಿ ಘೋಷಣೆ ಮಾಡಿತ್ತು. ಈ ಘೋಷಣೆಯ ಬೆನ್ನಲ್ಲೇ ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಡಿಜಿಟಲ್ ಖಾತೆ (post payments Bank digital account) ತೆರೆಯಲು ಮಹಿಳೆಯರು ಮುಗಿಬಿದ್ದಿದ್ದಾರೆ. ಪ್ರತಿ ತಿಂಗಳು 8500 ರೂ. ಹಣ ಬರಲಿದೆ ಎಂಬ ನಿರೀಕ್ಷೆಯಲ್ಲಿ ಪೋಸ್ಟ್ ಆಫೀಸ್ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ.

ಕಳೆದ 15 ದಿನದಿಂದ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಖಾತೆ ತೆರೆಯಲು ಮಹಿಳೆಯರು ಮುಗಿಬೀಳುತ್ತಿರುವುದು ಕಂಡುಬಂದಿದೆ. ಮಹಿಳೆಯರ ನಿಯಂತ್ರಣ ಮಾಡಲಾರದೆ ಬೆಂಗಳೂರಿನ ಅಂಚೆ ಕೇಂದ್ರ ಕಚೇರಿಯ ಸಿಬ್ಬಂದಿ ಹೈರಾಣಾಗುತ್ತಿದ್ದಾರೆ. ನಿತ್ಯ ಬೆಳಗ್ಗೆ 4 ಗಂಟೆಯಿಂದಲೇ ಕಚೇರಿ ಮುಂದೆ ಮುಗಿಬೀಳುತ್ತಿರುವ ಸುತ್ತಮುತ್ತಲಿನ ಶಿವಾಜಿನಗರ, ವಸಂತನಗರ ಮುಂತಾದೆಡೆಗಳ ಮಹಿಳೆಯರು, ಅವರ ಜೊತೆಗೆ ಬರುತ್ತಿರುವ ಪುರುಷರು ಅಂಚೆ ಕಚೇರಿ ಆವರಣವನ್ನು ಅಕ್ಷರಶಃ ಸಂತೆಯಾಗಿಸಿದ್ದಾರೆ.

ಮಹಿಳೆಯರ ನಿಯಂತ್ರಣ ಸಾಧ್ಯವಾಗದೆ ಅಂಚೆ ಸಿಬ್ಬಂದಿ ಟೋಕ‌ನ್ ವಿತರಿಸಲು ಆರಂಭಿಸಿದ್ದಾರೆ. ಬೆಳಗ್ಗೆ 4 ಗಂಟೆಗೆ ಟೋಕನ್ ವಿತರಣೆ ಆರಂಭವಾಗುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಕ್ಯೂ ನಿಂತು ಮಹಿಳೆಯರು ಟೋಕನ್ ಪಡೆಯುತ್ತಿದ್ದಾರೆ.

ಖಾತೆ ತೆರೆಯುತ್ತಿರುವ ಮಹಿಳೆಯರಿಗೂ ಹಣ ಬರುವ ಬಗ್ಗೆ ಖಚಿತ ಮಾಹಿತಿ ಇಲ್ಲ! “ಅಕೌಂಟ್‌ಗೆ ಹಣ ಬರುತ್ತೆ ಅಂತ ಅಕ್ಕಪಕ್ಕದವರು ಹೇಳಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಂದು ಲಕ್ಷ ಹಣ ನೀಡುತ್ತಾರಂತೆ. ಮೋದಿ ಬಂದ್ರೆ 2 ಸಾವಿರ ನೀಡುತ್ತಾರಂತೆ. ಯಾರು ಬಂದ್ರೇನು ನಮಗೆ ಹಣ ಬರುತ್ತೆ ಅಂತ ಹೇಳಿದ್ರು. ಅದಕ್ಕೆ ಬಂದಿದ್ದೇವೆ. ಬೆಳಗ್ಗೆ 5 ಗಂಟೆಗೆ ಬಂದಿದ್ದೇವೆ. ಯಾವ ಅಧಿಕಾರಿಗಳೂ ಹೇಳಿಲ್ಲ, ನೆರೆಮನೆಯವರು, ಸ್ಥಳೀಯರು ಹೇಳಿದರು” ಎಂಬುದು ಖಾತೆಗಾಗಿ ಕ್ಯೂ ನಿಂತ ಮಹಿಳೆಯರ ಹೇಳಿಕೆ.

ಹೆಡ್‌ ಪೋಸ್ಟ್‌ ಮಾಸ್ಟರ್‌ ಹೇಳೋದೇನು?

“ನಮ್ಮಲ್ಲಿ ಮೊದಲಿನಿಂದಲೂ IPPB ಖಾತೆ ಮಾಡುತ್ತಿದ್ದೇವೆ. ಆದರೆ ಕೆಲ ದಿನಗಳಿಂದ ಜನರ ಸಂಖ್ಯೆ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಅಕೌಂಟ್‌ಗೆ ಹಣ ಹಾಕ್ತಾರೆ ಅಂತ ಜನ ಬರುತ್ತಿದ್ದಾರೆ. ಹಣ ಬರುವ ಬಗ್ಗೆ ನಮಗೆ ಯಾವುದೇ ಸೂಚನೆ ಇಲ್ಲ. ಆದರೆ ವದಂತಿ ಹರಡಿ ಜನರು ಜಾಸ್ತಿ ಜಾಸ್ತಿ ಬರ್ತಿದ್ದಾರೆ” ಎಂದು ಹೆಡ್ ಪೋಸ್ಟ್ ಮಾಸ್ಟರ್ ಮಂಜೇಶ್ ಹೇಳಿದ್ದಾರೆ.

“ಈ ಖಾತೆಯಿಂದ ಬೇರೆ ಬೇರೆ ಪ್ರಾಧಿಕಾರಗಳಿಗೆ ಹಣ ಕಟ್ಟಬಹುದು. 200 ರೂ. ಮಾತ್ರ ಜಮಾ ಮಾಡಿಸಿ ಖಾತೆ ತೆರೆಯುತ್ತಿದ್ದೇವೆ. ಜನರು ಹೆಚ್ಚಾಗಿದ್ದರಿಂದ ಈಗ ಹೆಚ್ಚಿನ ಸಿಬ್ಬಂದಿ ನೇಮಿಸಿದ್ದೇವೆ. ನಿತ್ಯ 1 ಸಾವಿರ ಅಕೌಂಟ್ ಮಾಡಿ ಕೊಡ್ತಿದ್ದೇವೆ. ಜನರಿಗೆ ಮಾಹಿತಿ ಕೊರತೆ ಇರೋದರಿಂದ ಮುಗಿಬೀಳ್ತಿದ್ದಾರೆ. ಇದಕ್ಕೆ ಯಾವುದೇ ಕೊನೆ ದಿನಾಂಕ ಇಲ್ಲ. ಯಾವ ಅಂಚೆ ಕಚೇರಿಯಲ್ಲಾದರೂ ಅಕೌಂಟ್ ಮಾಡಿಸಬಹುದು” ಎಂದು ಹೆಡ್ ಪೋಸ್ಟ್ ಮಾಸ್ಟರ್ ಮಂಜೇಶ್ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: Rahul Gandhi: ನೋಡ ನೋಡ್ತಿದ್ದಂತೆ ತಲೆ ಮೇಲೆ ನೀರು ಸುರಿದುಕೊಂಡ ರಾಹುಲ್‌ ಗಾಂಧಿ! ವಿಡಿಯೋ ಇದೆ

Continue Reading

ಪ್ರಮುಖ ಸುದ್ದಿ

DK Shivakumar: ಕುತೂಹಲ ಕೆರಳಿಸಿದ ಡಿಕೆಶಿ- ಉಪರಾಷ್ಟ್ರಪತಿ ಭೇಟಿ; ʼಬಿಜೆಪಿಗೆ ಸೇರ್ತೀರಾʼ ಎಂದ ನೆಟ್ಟಿಗರು!

DK Shivakumar: ಪಕ್ಷದ ವಿಧಾನ ಪರಿಷತ್‌ ಅಭ್ಯರ್ಥಿ ಆಯ್ಕೆ ಮಾಡುವ ಸಂಬಂಧ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಸರಣಿ ಸಭೆಗಳನ್ನು ನಡೆಸಲು ದಿಲ್ಲಿಗೆ ಆಗಮಿಸಿದ್ದಾರೆ. ಇಂದು ಮುಂಜಾನೆ ಉಪರಾಷ್ಟ್ರಪತಿಗಳಿಂದ ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಬ್ರೇಕ್ ಫಾಸ್ಟ್‌ಗೆ ಆಹ್ವಾನ ಬಂದಿತ್ತು.

VISTARANEWS.COM


on

dk shivakumar jagdeep dhankar
Koo

ಹೊಸದಿಲ್ಲಿ: ದೆಹಲಿ ಪ್ರವಾಸದಲ್ಲಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DCM DK Shivakumar) ಅವರು ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ (Vice President Jagdeep Dhankar) ಅವರನ್ನು ಕರ್ನಾಟಕ ಭವನದಲ್ಲಿ ಮಂಗಳವಾರ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಈ ಭೇಟಿ ಇದೀಗ ಕುತೂಹಲ ಕೆರಳಿಸಿದೆ.

ಇಂದು ಮುಂಜಾನೆ ಉಪರಾಷ್ಟ್ರಪತಿಗಳಿಂದ ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಬ್ರೇಕ್ ಫಾಸ್ಟ್‌ಗೆ ಆಹ್ವಾನ ಬಂದಿತ್ತು. ಉಪರಾಷ್ಟ್ರಪತಿಗಳನ್ನು ಭೇಟಿಯಾದ ಚಿತ್ರವನ್ನು ನಂತರ ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಡಿಕೆಶಿ, “ಗೌರವಾನ್ವಿತ ಉಪರಾಷ್ಟ್ರಪತಿಗಳಾದ ಶ್ರೀ ಜಗದೀಪ್‌ ಧನಕರ್‌ ಅವರನ್ನು ಇಂದು ರಾಜಭವನದಲ್ಲಿ ಸೌಹಾರ್ದಯುತವಾಗಿ ಭೇಟಿಯಾದೆ. ಈ ವೇಳೆ ಪ್ರಾದೇಶಿಕ ಹಾಗೂ ರಾಷ್ಟ್ರೀಯ ವಿಚಾರಗಳ ಕುರಿತು ಪರಸ್ಪರ ಚರ್ಚಿಸಿದೆವು” ಎಂದು ಬರೆದುಕೊಂಡಿದ್ದಾರೆ.

ಇದಕ್ಕೆ ನೆಟ್ಟಿಗರಿಂದ ವಿಧವಿಧವಾದ ಪ್ರತಿಕ್ರಿಯೆಗಳು ಕಂಡುಬಂದವು. “ಶುಭವಾಗಲಿ ನಿಮಗೆ. ಆದಷ್ಟೂ ಶೀಘ್ರ ಬಿಜೆಪಿಗೆ ನೀವು ಬರುವಂತಾಗಲಿ. ನಂತರ, ರಾಜ್ಯದ ಮುಖ್ಯಮಂತ್ರಿ ಆಗಲಿ ಎಂದು ಆಶಿಸುತ್ತೇನೆ” ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. “ಇದೆಲ್ಲ ಬೇಡ ನಮಗೆ ಸಿಎಂ ಆಗಬೇಕು” ಎಂದು ಮತ್ತೊಬ್ಬರು ಬರೆದಿದ್ದಾರೆ.

ಪಕ್ಷದ ವಿಧಾನ ಪರಿಷತ್‌ ಅಭ್ಯರ್ಥಿ ಆಯ್ಕೆ ಮಾಡುವ ಸಂಬಂಧ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಸರಣಿ ಸಭೆಗಳನ್ನು ನಡೆಸಲು ದಿಲ್ಲಿಗೆ ಆಗಮಿಸಿದ್ದಾರೆ. ದೆಹಲಿಗೆ ಬರುತ್ತಿದ್ದಂತೆ ರಣದೀಪ್‌ ಸುರ್ಜೆವಾಲಾ ಜೊತೆಗೆ ಸಭೆ ನಡೆಸಿದ್ದು, ಬಳಿಕ ಕರ್ನಾಟಕ ಭವನದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಿದರು. ರಾತ್ರಿ 10 ಗಂಟೆಗೆ ಕೆ.ಸಿ ವೇಣುಗೋಪಾಲ್ ಜೊತೆ ಸಭೆ ನಡೆಸಿ ಸಿಎಂ ಹಾಗೂ ಡಿಸಿಎಂ ನಾಳೆ ಬೆಳಿಗ್ಗೆ ಖರ್ಗೆ ಜೊತೆಗೆ ಅಂತಿಮ ಸಭೆ ನಡೆಸಲಿದ್ದಾರೆ. ನಿರೀಕ್ಷೆಗೂ ಮೀರಿ ಆಕಾಂಕ್ಷಿಗಳ ಹೆಸರು ಪಟ್ಟಿಯಲ್ಲಿರುವುದರಿಂದ ಅಭ್ಯರ್ಥಿ ಆಯ್ಕೆ ಸಂಬಂಧ ಕಗ್ಗಂಟು ಬಗೆಹರಿಯದಾಗಿದೆ.

ಕೆಲವು ದಿನಗಳ ಹಿಂದೆ ಒಕ್ಕಲಿಗರ ಸಭೆಯಲ್ಲಿ ಮಾತನಾಡುತ್ತ ಡಿಕೆಶಿ, ತಾವು ಮುಂದಿನ ಸಿಎಂ (Next CM) ಆಗುವ ಬಗ್ಗೆ ಸುಳಿವನ್ನು ನೀಡಿದ್ದರು. “ಏನು ಆಗಬೇಕೆಂದಿದೆಯೋ ಅದು ದೆಹಲಿಯಲ್ಲಿ ತೀರ್ಮಾನ ಆಗಿದೆ. ಅಲ್ಲದೆ, ಸ್ವಲ್ಪ ದಿನ ಕಾಯಿರಿ” ಎಂದು ಹೇಳಿದ್ದರು. ಆ ಮೂಲಕ ಕೆಲವೇ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಬದಲಾವಣೆ ಆಗಲಿದೆ ಎಂಬ ಸುಳಿವನ್ನು ನೀಡಿದ್ದಾರೆ.

ಇದನ್ನೂ ಓದಿ: ವಿಧಾನ ಪರಿಷತ್‌ ಚುನಾವಣೆ: ಖರ್ಗೆ, ಸಿದ್ದು, ಡಿಕೆಶಿ ಆಪ್ತರಿಗೆ ಸ್ಥಾನ ಕೊಡಿಸಲು 2+2+2+1=7 ಫಾರ್ಮುಲಾ; ಏನಿದು?

Continue Reading
Advertisement
Viral Video
ವೈರಲ್ ನ್ಯೂಸ್21 mins ago

Viral Video: ಇವನೇ ನಿಜವಾದ ಹೀರೋ! ಇವರ ಧೈರ್ಯ, ಶೌರ್ಯಕ್ಕೆ ಸರಿಸಾಟಿಯೇ ಇಲ್ಲ; ವೈರಲಾಯ್ತು ವಿಡಿಯೋ

TOP 5 Movies big budget Movie in OTT
ಒಟಿಟಿ24 mins ago

TOP 5 Movies: ಒಟಿಟಿಯಲ್ಲಿ ನೋಡಲೇಬೇಕಾದ ಟಾಪ್‌ 5 ಬಿಗ್‌ ಬಜೆಟ್‌ ಸಿನಿಮಾಗಳು!

panjurli daiva sharat shetty murder
ದಕ್ಷಿಣ ಕನ್ನಡ41 mins ago

Panjurli Daiva: ಶರತ್‌ ಶೆಟ್ಟಿ ಕೊಲೆ ಆರೋಪಿ ಶರಣಾಗತಿ; ಎಳೆತಂದು ನಿಲ್ಲಿಸಿತೇ ಪಂಜುರ್ಲಿ ದೈವ?

Money Guide
ಮನಿ-ಗೈಡ್44 mins ago

Money Guide: ಮೇ 31ರೊಳಗೆ ಪ್ಯಾನ್‌-ಆಧಾರ್‌ ಲಿಂಕ್‌ ಆಗದಿದ್ದರೆ ಟಿಡಿಎಸ್ ದುಪ್ಪಟ್ಟು ಕಡಿತ; ಹೀಗೆ ಲಿಂಕ್‌ ಮಾಡಿ

Prajwal Revanna Case
ಕರ್ನಾಟಕ45 mins ago

Prajwal Revanna Case: ಬೆಂಗಳೂರಿಗೆ ಪ್ರಜ್ವಲ್‌ ರೇವಣ್ಣ ಟಿಕೆಟ್ ಬುಕ್; ನಾಳೆ ಮಧ್ಯಾಹ್ನ ಜರ್ಮನಿಯಿಂದ ಪ್ರಯಾಣ

Gold Rate Today
ಚಿನ್ನದ ದರ1 hour ago

Gold Rate Today: ಇಂದು ಚಿನ್ನದ ಬೆಲೆಯಲ್ಲಿ ತುಸು ಏರಿಕೆ; ಖರೀದಿಗೆ ಮುನ್ನ ದರ ಗಮನಿಸಿ

World Digestive Health Day
ಆರೋಗ್ಯ1 hour ago

World Digestive Health Day: ಜೀರ್ಣಕ್ರಿಯೆಯಲ್ಲಿ ತೊಡಕು ಅನಾರೋಗ್ಯಕ್ಕೆ ದಾರಿ; ಈ ಸಲಹೆ ಪಾಲಿಸಿ

ರಾಹುಲ್‌ ಗಾಂಧಿ rahul gandhi ippb account 2
ಪ್ರಮುಖ ಸುದ್ದಿ1 hour ago

ಅಧಿಕಾರಕ್ಕೆ ಬಂದ್ರೆ ನಿಮ್ಮ ಖಾತೆಗೆ ಟಕಾಟಕ್ 1 ಲಕ್ಷ ಎಂದಿದ್ದ ರಾಹುಲ್ ಗಾಂಧಿ! ಪೋಸ್ಟ್ ಆಫೀಸ್ ಮುಂದೆ ಮುಸ್ಲಿಂ ಮಹಿಳೆಯರ ನೂಕುನುಗ್ಗಲು!!

All Eyes on Rafah
ವಿದೇಶ2 hours ago

All Eyes on Rafah: ಪ್ಯಾಲೆಸ್ತೀನ್‌ಗೆ ಬೆಂಬಲಿಸಿ ರೋಹಿತ್‌ ಪತ್ನಿ ಪೋಸ್ಟ್‌; ಫುಲ್‌ ಟ್ರೋಲ್‌- ಏನಿದು ʼಆಲ್‌ ಐಸ್‌ ಆನ್‌ ರಫಾʼ?

Sujay Hegde Manasare actor Engagement with Prerana
ಕಿರುತೆರೆ2 hours ago

Sujay Hegde: ನಿಶ್ಚಿತಾರ್ಥ ಮಾಡಿಕೊಂಡ ‘ಮನಸಾರೆ’ ಧಾರಾವಾಹಿಯ ನಟ ಸುಜಯ್ ಹೆಗಡೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ19 hours ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 day ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ3 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು3 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ6 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌