Terrorists in Bengaluru: ಬೆಂಗಳೂರಿನಲ್ಲಿ ಉಗ್ರರು: ಹಿಂದುತ್ವವಾದಿಗಳೂ ಟಾರ್ಗೆಟ್‌! ವಿಶೇಷ ಗುಂಡುಗಳು ಬಂದದ್ದು ಎಲ್ಲಿಂದ? Vistara News

ಕರ್ನಾಟಕ

Terrorists in Bengaluru: ಬೆಂಗಳೂರಿನಲ್ಲಿ ಉಗ್ರರು: ಹಿಂದುತ್ವವಾದಿಗಳೂ ಟಾರ್ಗೆಟ್‌! ವಿಶೇಷ ಗುಂಡುಗಳು ಬಂದದ್ದು ಎಲ್ಲಿಂದ?

ಬಂಧಿಸಲಾದ ಐವರೂ ಶಂಕಿತರನ್ನು (Terrorists in Bengaluru) ಸಿಸಿಬಿ ತೀವ್ರ ವಿಚಾರಣೆ ನಡೆಸಿದೆ. ವಿಚಾರಣೆ ವೇಳೆ ಹಲವು ಸ್ಫೋಟಕ ಮಾಹಿತಿಗಳು ಬಹಿರಂಗವಾಗಿವೆ. ಮುಂದಿನ ಹಂತದಲ್ಲಿ ಶಂಕಿತರ ಬಳಿ ಪತ್ತೆಯಾದ ವೆಪನ್ಸ್ ಬಗ್ಗೆ ಪರಿಶೀಲನೆ ನಡೆಯಲಿದೆ.

VISTARANEWS.COM


on

Terrorists in Bangalore
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬೆಂಗಳೂರಿನಲ್ಲಿ ಪತ್ತೆ ಹಚ್ಚಿ ಬಂಧಿಸಲಾಗಿರುವ ಶಂಕಿತ ಭಯೋತ್ಪಾದಕರ (Terrorists in Bengaluru) ಮೊಬೈಲ್‌ಗಳಲ್ಲಿ ಕೆಲ ಹಿಂದುತ್ವವಾದಿಗಳ ಹೆಸರು ಮತ್ತು ಫೊಟೋ ಶೇರ್ ಆಗಿದ್ದು, ಇವರ ಹತ್ಯೆ ಸಂಚು ಕೂಡ ನಡೆದಿತ್ತು ಎಂಬ ಶಂಕೆ ವ್ಯಕ್ತವಾಗಿದೆ. ಜತೆಗೆ, ಪೊಲೀಸರಿಗೆ ಮಾತ್ರ ಲಭ್ಯವಾಗುವ ವೀಶೇಷ ಗುಂಡುಗಳೂ ಕೂಡ ಇವರ ಬಳಿ ಕಂಡುಬಂದಿವೆ. ಈ ಉಗ್ರರು ಆಗಸ್ಟ್‌ 15ರ ಸ್ವಾತಂತ್ರ್ಯ ದಿನದಂದು ದೊಡ್ಡ ಮಟ್ಟದ ಸ್ಪೋಟಕ್ಕೆ ಸಂಚು ನಡೆಸಿದ್ದರು ಮತ್ತು ಹಿಂದು ನಾಯಕರನ್ನು ಟಾರ್ಗೆಟ್‌ ಮಾಡಲು ಮುಂದಾಗಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.

ಶಂಕಿತ ಉಗ್ರರು ಅರೆಸ್ಟ್ ಪ್ರಕರಣದಲ್ಲಿ ಇಂದಿನಿಂದ ಸಿಸಿಬಿ ಪೊಲೀಸರ ಅಸಲಿ ತನಿಖೆ ಶುರುವಾಗಲಿದೆ. ಈಗಾಗಲೇ ಮೊದಲ ಹಂತದಲ್ಲಿ ಐವರೂ ಶಂಕಿತರನ್ನು ಸಿಸಿಬಿ ತೀವ್ರ ವಿಚಾರಣೆ ನಡೆಸಿದೆ. ವಿಚಾರಣೆ ವೇಳೆ ಹಲವು ಸ್ಫೋಟಕ ಮಾಹಿತಿಗಳು ಬಹಿರಂಗವಾಗಿವೆ. ಮುಂದಿನ ಹಂತದಲ್ಲಿ ಶಂಕಿತರ ಬಳಿ ಪತ್ತೆಯಾದ ವೆಪನ್ಸ್ ಬಗ್ಗೆ ಪರಿಶೀಲನೆ ನಡೆಯಲಿದೆ.

ಶಸ್ತ್ರಾಸ್ತ್ರಗಳ ಬಗ್ಗೆ ಕೂಲಂಕಷ ತನಿಖೆ ಆಗಬೇಕಿದೆ. ಶಂಕಿತರ ಬಳಿ ವಿಶೇಷ ಗುಂಡುಗಳು ಪತ್ತೆಯಾಗಿದ್ದು, ಸದ್ಯ ಇದು ಸಿಸಿಬಿ ಪೊಲೀಸರ ನಿದ್ದೆ ಕೆಡಿಸಿದೆ. ಇವರ ಬಳಿ ಹದಿನೈದು ವಿಶೇಷ ಗುಂಡುಗಳು ಪತ್ತೆಯಾಗಿದ್ದು, ಇವುಗಳನ್ನು ಪೊಲೀಸ್ ಆಫೀಸರ್‌ಗಳು ಮತ್ತು ಡಿಫೆನ್ಸ್ ಅಧಿಕಾರಿಗಳಿಗೆ ಮಾತ್ರ ಬಳಸಲು ಪ್ರಾವಿಷನ್ ಇರುತ್ತದೆ. ಸಾಮಾನ್ಯರಿಗೆ ಈ ಗುಂಡುಗಳು ಸಿಕ್ಕುವುದಿಲ್ಲ. ಹಾಗಾದರೆ ಶಂಕಿತರ ಕೈಗೆ ಸ್ಪೆಷಲ್ ಗುಂಡುಗಳು ಹೇಗೆ ಬಂದವು, ಯಾರಿಂದ ಈ ಗುಂಡುಗಳು ಖರೀದಿಯಾಗಿವೆ ಎಂಬುದರ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ.

ಈ ಮಾದರಿಯ ಗುಂಡುಗಳು ಓಪನ್ ಮಾರ್ಕೆಟ್‌ನಲ್ಲಿ ಮಾರಾಟವಾಗುವುದಿಲ್ಲ. ಪೊಲೀಸ್, ಮಿಲಿಟರಿ ಮತ್ತು ವಿದೇಶಿ ಟೆರರ್ ಸಂಘಟನೆಗಳು ಬಳಸುವಂತಹ ಗುಂಡುಗಳು ಇವು. ಇವು 303 ಹೆವೀ ರೈಫಲ್‌ಗಿಂತ ಕೆಳ ಹಂತದ ವೆಪನ್‌ಗೆ ಬಳಸುವ ಗುಂಡುಗಳಾಗಿವೆ. ಗುಂಡನ್ನು ಬ್ಯಾರಲ್ ಮಾದರಿಯ ಪಿಸ್ತೂಲ್‌ಗೆ ಹಾಕಿಕೊಂಡು ಫೈರ್ ಮಾಡಲಾಗುತ್ತದೆ. ಸಾಮಾನ್ಯ ಪಿಸ್ತೂಲಿಗಿಂತ ಇದು ಡೇಂಜರಸ್ ಬುಲೆಟ್ಸ್ ಆಗಿದ್ದು, ಎಲ್ಲಿಂದ ಬಂದಿವೆ ಅನ್ನುವ ವಿಚಾರಣೆಯನ್ನು ಸದ್ಯ ಸಿಸಿಬಿ ನಡೆಸುತ್ತಿದೆ.

ದಾಳಿ ವೇಳೆ 7 ಕಂಟ್ರಿಮೇಡ್ ಪಿಸ್ತೂಲ್‌ಗಳು, 42 ಜೀವಂತ ಗುಂಡುಗಳು, ಸ್ಯಾಟಲೈಟ್ ಪೋನ್ ಪತ್ತೆಯಾಗಿದ್ದವು. ಸದ್ಯ ಕಂಟ್ರಿಮೇಡ್ ಪಿಸ್ತೂಲ್ ಮತ್ತು ಜೀವಂತ ಗುಂಡುಗಳನ್ನು ಎಫ್‌ಎಸ್‌ಎಸ್‌ಎಲ್‌ಗೆ ಕಳಿಸಲಾಗುತ್ತಿದೆ. ಪಿಸ್ತೂಲನ್ನು ಈವರೆಗೆ ಬಳಸಲಾಗಿದೆಯೇ, ಆ ಪಿಸ್ತೂಲುಗಳ ಮೂಲಕ ಟ್ರೈನಿಂಗ್ ಪಡೆಯಲಾಗಿದೆಯೇ, ಎನ್ನುವುದರ ಬಗ್ಗೆ ಎಫ್‌ಎಸ್‌ಎಲ್‌ನಿಂದ ರಿಪೋರ್ಟ್ ಕೇಳಲಾಗುತ್ತಿದೆ. ಮದ್ದುಗುಂಡುಗಳು, ಡ್ರ್ಯಾಗರ್, ಸ್ಯಾಟಲೈಟ್ ಮೊಬೈಲ್ ಕೂಡ ಅಲ್ಲಿಗೆ ರವಾನಿಸಿ, ಅವುಗಳ ಬಗ್ಗೆಯೂ ರಿಪೋರ್ಟ್ ಪಡೆಯಲಾಗುತ್ತಿದೆ. ಹತ್ತು ದಿನಗಳಲ್ಲಿ ರಿಪೋರ್ಟ್ ಸಿಸಿಬಿ ಪೊಲೀಸರ ಕೈ ಸೇರಲಿದೆ.

ಹಿಂದೂ ನಾಯಕರ ಹತ್ಯೆ ಸಂಚು?

ಬಂಧಿತರಿಗೆ‌ ಉತ್ತರಪ್ರದೇಶದಿಂದ ವೆಪನ್ ಪೂರೈಕೆ ಆಗಿದೆ ಎನ್ನಲಾಗುತ್ತಿದ್ದು, ಸುಹೈಲ್, ಮುದಾಸಿರ್, ಉಮ್ಮರ್, ತಬ್ರೇಜ್, ಮಹಮ್ಮದ್ ರಬ್ಬಾನಿ ಇವರು ಜುನೈದ್ ಹೇಳಿದಂತೆ ಕೆಲಸ ಮಾಡುತ್ತಿದ್ದರು. ಜುನೈದ್ ‌ನೀಡುವ ಸೂಚನೆ ಪಾಲನೆ ಮಾಡುತ್ತಿದ್ದರು. ಸದ್ಯ ಸಿಸಿಬಿ ಪ್ರಾಥಮಿಕ ತನಿಖೆ ವೇಳೆ ಕಂಡುಬಂದ ವಿಚಾರ ಎಂದರೆ, ಕೇವಲ ಸ್ಥಳಗಳಷ್ಟೇ ಶಂಕಿತರ ಟಾರ್ಗೆಟ್ ಆಗಿರಲಿಲ್ಲ.‌ ಹಿಂದೂ ಮುಖಂಡರನ್ನೂ ಇವರು ಟಾರ್ಗೆಟ್ ಮಾಡಿದ್ದರು ಎನ್ನಲಾಗಿದೆ.

ಹಿಂದೂ ಮುಖಂಡರು, ಹಿಂದುತ್ವ ಫಾಲೋ ಮಾಡುವ ರಾಜಕಾರಣಿಗಳು ಈ ಶಂಕಿತರ ಮುಖ್ಯ ಟಾರ್ಗೆಟ್ ಆಗಿದ್ದರು. ಇದೇ ಕಾರಣಕ್ಕೆ ಕಂಟ್ರಿಮೇಡ್ ಪಿಸ್ತೂಲುಗಳನ್ನು ಉತ್ತರಪ್ರದೇಶದಿಂದ ಜುನೈದ್ ಬೆಂಗಳೂರಿಗೆ ಸಪ್ಲೈ ಮಾಡಿದ್ದ. ಗನ್ ಜೊತೆಗೆ ಅದಕ್ಕೆ ಬೇಕಾದ ಗುಂಡುಗಳೂ ಸಪ್ಲೈ ಆಗಿದ್ದವು. ಆನ್‌ಲೈನ್‌ನಲ್ಲಿ ಯಾವುದೇ ವ್ಯವಹಾರ ಮಾಡದ ಜುನೈದ್, ಸಿಕ್ಕಿರುವ ಗನ್, ಗುಂಡು, ವಾಕಿಟಾಕಿ ಹಾಗೂ ಬೇಕಾದ ಹಣವನ್ನು ತನ್ನ ಹುಡುಗರ ಮೂಲಕವೇ ಪೂರೈಸಿದ್ದ.

ಈತ ವಾಟ್ಸ್ಯಾಪ್‌ ಮತ್ತು ಇನ್‌ಸ್ಟಾಗ್ರಾಮ್ ಕಾಲ್‌ನಲ್ಲಿ ಮಾತನಾಡುತ್ತಿದ್ದ. ನಿರ್ದಿಷ್ಟ ಜಾಗಕ್ಕೆ ಆರೋಪಿಗಳನ್ನು ಕರೆಸುತ್ತಿದ್ದ. ಅಲ್ಲಿಗೆ ಜುನೈದ್ ಕಳುಹಿಸಿದ ಹುಡುಗರು ವಸ್ತುಗಳನ್ನ ತಂದು ಆರೋಪಿಗಳಿಗೆ ಕೊಟ್ಟು ಹೋಗುತ್ತಿದ್ದರು. ಆರೋಪಿಗಳಿಗೂ ಬ್ಯಾಗ್ ಕೊಟ್ಟವರ ಹೆಸರು ಮತ್ತು ಗುರುತು ಗೊತ್ತಾಗದಂತೆ ಜುನೈದ್ ಆಪರೇಟ್ ಮಾಡುತ್ತಿದ್ದ. ಖುದ್ದಾಗಿ ಬಂದು ಮಾಡಬೇಕಾದ ಕೆಲಸ ಏನು, ಹೇಗೆ, ಯಾವಾಗ ಮಾಡಬೇಕು ಎಂಬುದಾಗಿ ತಿಳಿಸುತ್ತೇನೆ ಎಂದು ಜುನೈದ್ ಹೇಳಿದ್ದ. ಹಿಂದೂ ನಾಯಕರ ಹತ್ಯೆ ಸಂಚು ಆಯಾಮದಲ್ಲಿಯೂ ಸಿಸಿಬಿ ತನಿಖೆ ನಡೆಸಿದ್ದು, ಮೊಬೈಲ್ ರಿಟ್ರೀವ್‌ಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ: Terrorists in Bengaluru : ಜೈಲಲ್ಲಿ ಟ್ರೇನಿಂಗ್‌, ಹಿಂದು ಮನೆಯಲ್ಲಿ ವಾಸ; ಏನಿದು ಬೆಂಗಳೂರು ಸ್ಫೋಟದ ಉಗ್ರ ಸಂಚು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

TN Seetharam: ನನ್ನ ರಾಜಕೀಯ ಪ್ರವೇಶಕ್ಕೆ ಪ್ರೊ. ನಂಜುಂಡಸ್ವಾಮಿ ಕಾರಣ: ಸಿಎಂ ಸಿದ್ದರಾಮಯ್ಯ

TN Seetharam : ನನ್ನ ರಾಜಕೀಯ ಜೀವನ ಪ್ರವೇಶಕ್ಕೆ ಪ್ರೊ. ನಂಜುಂಡಸ್ವಾಮಿಯವರೇ ಕಾರಣ ಎಂದು ಸಿಎಂ ಸಿದ್ದರಾಮಯ್ಯ ಅವರು ತಮ್ಮ ಹಳೇ ಜೀವನವನ್ನು ಮೆಲುಕು ಹಾಕಿದ್ದಾರೆ. ಅಲ್ಲದೆ, ತಾವು ಸ್ಕೂಟರ್‌ನಲ್ಲಿ ಓಡಾಡುತ್ತಿದ್ದ ದಿನಗಳ ಬಗ್ಗೆ ಹಂಚಿಕೊಂಡಿದ್ದಾರೆ. ಜತೆಗೆ ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಂ ಅವರು ಬದುಕಿನ ವಿವಿಧ ಸ್ತರಗಳ ಅನುಭವವಿರುವ ಕ್ರಿಯಾಶೀಲ ವ್ಯಕ್ತಿ ಎಂದು ಬಣ್ಣಿಸಿದ್ದಾರೆ.

VISTARANEWS.COM


on

TN Seetharam Book release function
Koo

ಬೆಂಗಳೂರು: ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಂ (TN Seetharam) ಅವರೊಂದಿಗೆ ನನಗೆ 40 ವರ್ಷಗಳ ಒಡನಾಟವಿದ್ದು, ಇವರು ಬದುಕಿನ ವಿವಿಧ ಸ್ತರಗಳ ಅನುಭವವಿರುವ ಕ್ರಿಯಾಶೀಲ ವ್ಯಕ್ತಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು. ಅಲ್ಲದೆ, ಇದೇ ವೇಳೆ ತಮ್ಮ ರಾಜಕೀಯ ಜೀವನವನ್ನು (Political Life) ಮೆಲುಕು ಹಾಕಿದ ಸಿಎಂ, ಪ್ರೊ. ನಂಜುಂಡಸ್ವಾಮಿ (Prof Nanjundaswamy) ಅವರಿಂದಲೇ ತಾವು ರಾಜಕೀಯವನ್ನು ಪ್ರವೇಶ ಮಾಡಿದ್ದಾಗಿ ವಿವರಿಸಿದರು.

ಸಾವಣ್ಣ ಪ್ರಕಾಶನದಿಂದ ಹೊರತರಲಾದ ಖ್ಯಾತ ನಿರ್ದೇಶಕ, ಲೇಖಕ ಟಿ.ಎನ್.ಸೀತಾರಾಂ ಅವರ “ನೆನಪಿನ ಪುಟಗಳು” ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಟಿ.ಎನ್.ಸೀತಾರಾಂ ಸುಮಾರು 40 ವರ್ಷಗಳ ಒಡನಾಟವಿರುವ ಆಪ್ತ ಸ್ನೇಹಿತ. ನಾನು ಲಂಕೇಶ್ ಪತ್ರಿಕಾಲಯಕ್ಕೆ ಭೇಟಿ ನೀಡುತ್ತಿದ್ದೆ. ಕಾನೂನು ವಿದ್ಯಾರ್ಥಿಯಾಗಿದ್ದಾಗ ಪ್ರೊ. ನಂಜುಂಡಸ್ವಾಮಿಯವರು ಕಾನೂನು ಕಾಲೇಜಿನ ಪ್ರಾಧ್ಯಾಪಕರಾಗಿದ್ದರು. ಆಗ ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿಯಿದ್ದ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸುತ್ತಿದ್ದರು. ಸಮಾಜವಾದಿ ಯುವಜನಸಭಾದಲ್ಲಿ ನಾನು ಸದಸ್ಯನಾಗಲು ನೆರವಾದರು. 1971ರಲ್ಲಿ ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾಗಿದ್ದಾಗ, ಸರ್ಕಾರದ ವಿರುದ್ಧ ನಡೆದ ಚಳವಳಿಯಲ್ಲಿ ನಾನು ಭಾಗಿಯಾಗಿದ್ದೆ. ನನ್ನ ರಾಜಕೀಯ ಜೀವನ ಪ್ರಾರಂಭವಾಗಲು ಪ್ರೊ. ನಂಜುಂಡಸ್ವಾಮಿಯವರೇ ಕಾರಣ ಎಂದರು.

TN Seetharam Book release function

ಸ್ಕೂಟರ್‌ನಲ್ಲಿ ಓಡಾಡುತ್ತಿದ್ದ ನೆನಪು

ಜನತಾಪಾರ್ಟಿಯಲ್ಲಿ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸಿ, ಪಕ್ಷದ ನಾಯಕರು ನನಗೆ ಪ್ರೋತ್ಸಾಹ ನೀಡಿದರು. ನಂತರ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆ ಗೆದ್ದ ನಂತರ ರಾಮಕೃಷ್ಣ ಹೆಗಡೆಯವರಿಗೆ ಬೆಂಬಲ ಸೂಚಿಸಿದೆ. ಬಳಿಕ ಕಾವಲು ಸಮಿತಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದೆ. 1984ರಲ್ಲಿ ರೇಷ್ಮೆ ಸಚಿವನಾಗಿ ಕೆಲಸ ಮಾಡಿದೆ. 1985ರಲ್ಲಿ ಜನತಾದಳದ ಪರವಾಗಿ ನಿಂತು ಜಯ ಸಾಧಿಸಿದ ನಂತರ ಪಶುಸಂಗೋಪನೆ ಸಚಿವನಾಗಿ ಕೆಲಸ ನಿರ್ವಹಿಸಿದೆ. ಆ ಸಂದರ್ಭದಲ್ಲಿ ಕಾರಣಾಂತರಗಳಿಂದ ಸಚಿವ ಸ್ಥಾನ ಕಳೆದುಕೊಳ್ಳಬೇಕಾಯಿತು. ಆ ಸಂದರ್ಭದಲ್ಲಿ ತನ್ನ ಬಳಿಯಿದ್ದ ಸ್ಕೂಟರ್‌ನಲ್ಲಿ ಓಡಾಡುತ್ತಿದ್ದ ನೆನಪುಗಳನ್ನು ಮುಖ್ಯಮಂತ್ರಿಯವರು ಸ್ಮರಿಸಿಕೊಂಡರು.

TN Seetharam Book release function

ಬಹುಮುಖ ಪ್ರತಿಭೆ

ಟಿ.ಎನ್. ಸೀತಾರಾಂ ಅವರು ಬದುಕಿನ ಎಲ್ಲ ಸ್ತರಗಳ ಅನುಭವ ಇರುವವರು. ಅವರ ವಿದ್ಯಾರ್ಥಿ ದೆಸೆ, ಸ್ನೇಹಿತರ ಒಡನಾಟ, ರಾಜಕೀಯ, ಕಲಾ ಸೇವೆಯಲ್ಲಿ ತೊಡಗಿರುವ ಸೀತಾರಾಂ ಅವರು ಬಹುಮುಖ ಪ್ರತಿಭೆ. ರಾಮಕೃಷ್ಣ ಹೆಗಡೆಯವರ ಆಪ್ತರಾಗಿರುವವರು. ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಿದ್ದರೆ, ಶಾಸಕರಾಗುವ ಸಾಧ್ಯತೆಯೂ ಇತ್ತು. ರಾಮಕೃಷ್ಣ ಹೆಗಡೆಯವರಿಗೆ ಬಹಳ ಜನಪ್ರಿಯತೆ ಇದ್ದ ಕಾರಣ, ಜನತಾ ಪಾರ್ಟಿ ಪರವಾದ ಅಲೆ ಇತ್ತು. ಆದರೆ, ಅವರು ಚುನಾವಣಾ ರಾಜಕಾರಣದಲ್ಲಿ ಯಶಸ್ವಿಯಾಗಲಿಲ್ಲ. ಒಂದು ವೇಳೆ ಅವರು ಗೆದ್ದಿದ್ದರೆ, ನಮಗೆಲ್ಲ ರಾಜಕಾರಣದಲ್ಲಿ ಮುಂದೆ ಬರಲು ಅವಕಾಶ ಸಿಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಈಗ ಅವರು ನೆನಪಿನ ಪುಟಗಳ ಪುಸ್ತಕವನ್ನು ಉತ್ತಮವಾಗಿ ಹಾಗೂ ಸತ್ಯವನ್ನೇ ಬರೆದಿದ್ದಾರೆ. ನನ್ನ ಉತ್ತಮ ಸ್ನೇಹಿತರಾಗಿರುವ ಟಿ.ಎನ್.ಸೀತಾರಾಂ ಅವರು ಬರೆದಿರುವ ಕೃತಿಯನ್ನು ಅತ್ಯಂತ ಸಂತೋಷದಿಂದ ಬಿಡುಗಡೆ ಮಾಡಿದ್ದೇನೆ ಎಂದು ತಿಳಿಸಿದರು.

ಖ್ಯಾತ ನಟ, ರಾಜಕಾರಣಿ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಅರಸು ನಂತರ ಅವರಂತೆಯೇ ಸರ್ವ ಜನಾಂಗದ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಎಂದರೆ ಸಿದ್ದರಾಮಯ್ಯ. ಅವರು ತಾವೇ ಮಾಡಿಸಿದ ಜಾತಿ ಜನಗಣತಿಯನ್ನು ಒಪ್ಪಿಕೊಂಡು, ಅದರ ಅನುಷ್ಠಾನಕ್ಕೆ ಮುಂದಾಬೇಕು ಎಂದು ಹೇಳಿದರು.

ಕೃತಿಯ ಲೇಖಕ ಟಿ.ಎನ್‌. ಸೀತಾರಾಮ್‌ ಮಾತನಾಡಿ, ತಮ್ಮ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಡನಾಟವನ್ನು ನೆನಪಿಸಿಕೊಂಡರು. ಎತ್ತರಕ್ಕೇರಿದರೂ ಸ್ವಲ್ಪವೂ ಗರ್ವ ಇರದ ರಾಜಕಾರಣಿ ಎಂದರೆ ಸಿದ್ದರಾಮಯ್ಯ. ನಾನು ಹಲವಾರು ಮುಖ್ಯಮಂತ್ರಿಗಳೊಂದಿಗೆ ಒಡನಾಟ ಹೊಂದಿದ್ದರೂ, ಸಿದ್ದರಾಮಯ್ಯರನ್ನು ಹೆಚ್ಚು ಇಷ್ಟ ಪಡಲು ಇದೇ ಕಾರಣ ಎಂದು ಹೇಳಿದರು.

ಇದನ್ನೂ ಓದಿ: Shiva Rajkumar: ಲೋಕಸಭೆಗೆ ಸ್ಪರ್ಧಿಸಿ ಎಂದ ಡಿಕೆಶಿ; ನಾನು ರಾಜಕೀಯಕ್ಕೆ ಬರಲ್ಲ ಎಂದ ಶಿವರಾಜ್‌ಕುಮಾರ್!

ಕಾರ್ಯಕ್ರಮದಲ್ಲಿ ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ, ಲೇಖಕರಿಯರ ಸಂಘದ ಅಧ್ಯಕ್ಷೆ, ಕವಯತ್ರಿ ಎಚ್‌.ಎಲ್‌. ಪುಷ್ಪಾ, ಪತ್ರಕರ್ತ ಹಾಗೂ ಸಾಹಿತಿ ಜೋಗಿ, ಸಾವಣ್ಣ ಪ್ರಕಾಶನದ ಜಮೀಲ್‌ ಸಾವಣ್ಣ ಉಪಸ್ಥಿತರಿದ್ದರು.

Continue Reading

ಕರ್ನಾಟಕ

Corruption Case: ನರೇಗಾದಲ್ಲಿ 150 ಕೋಟಿ ರೂ. ಭ್ರಷ್ಟಾಚಾರ; ನಾಲ್ವರು ಪಿಡಿಒಗಳ ಅಮಾನತು

Corruption Case: 33 ಗ್ರಾಮ‌ ಪಂಚಾಯತಿಗಳಲ್ಲಿ 150 ಕೋಟಿ ರೂ. ಭ್ರಷ್ಟಾಚಾರ ನಡೆದ ಹಿನ್ನೆಲೆಯಲ್ಲಿ ದೇವದುರ್ಗ ತಾಲೂಕಿನ ನಾಲ್ವರು ಪಿಡಿಒಗಳನ್ನು ಅಮಾನತು ಮಾಡಲಾಗಿದೆ.

VISTARANEWS.COM


on

pdo new
Koo

ರಾಯಚೂರು: ನರೇಗಾದಲ್ಲಿ ವ್ಯಾಪಕ ಭ್ರಷ್ಟಾಚಾರ ಕಂಡುಬಂದ ಹಿನ್ನೆಲೆಯಲ್ಲಿ ದೇವದುರ್ಗ ತಾಲೂಕಿನ ನಾಲ್ವರು ಪಿಡಿಒಗಳನ್ನು ಅಮಾನತು ಮಾಡಲಾಗಿದೆ. 33 ಗ್ರಾಮ‌ ಪಂಚಾಯತಿಗಳಲ್ಲಿ 150 ಕೋಟಿ ರೂ. ಮೊತ್ತದ ಭ್ರಷ್ಟಾಚಾರ ಸಂಬಂಧ ರಾಜ್ಯ ಸಾಮಾಜಿಕ ಲೆಕ್ಕ ಪರಿಶೋಧನಾ ಸಮಿತಿ ದೂರು ನೀಡಿದ್ದರಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯತಿ ಸಿಇಒ ಆದೇಶ ಹೊರಡಿಸಿದ್ದಾರೆ.

ಜಾಲಹಳ್ಳಿ ಪಿಡಿಒ ಪತ್ತೆಪ್ಪ ರಾಠೋಡ, ಶಾವಂತಗೇರ ಪಿಡಿಒ ಗುರುಸ್ವಾಮಿ, ಕ್ಯಾದಿಗೇರ ಪಿಡಿಒ ಸಿ.ಬಿ.ಪಾಟೀಲ್, ಗಾಣದಾಳ ಪಿಡಿಒ ಮಲ್ಲಪ್ಪ ಅಮಾನತುಗೊಂಡವರು. ಇಲಾಖೆ ವಿಚಾರಣೆ ಕಾಯ್ದಿರಿಸಿ ನಾಲ್ವರನ್ನು ಜಿಲ್ಲಾ ಪಂಚಾಯಿತಿ ಸಿಇಒ ಪಾಂಡ್ವೆ ರಾಹುಲ್ ತುಕಾರಾಮ ಅಮಾನತು ಮಾಡಿದ್ದಾರೆ.

ಇದನ್ನೂ ಓದಿ | Accident Case : ಕಿಟಕಿ ಒರೆಸುವಾಗ ಜಾರಿದ ಕಾಲು; 5ನೇ ಮಹಡಿಯಿಂದ ಬಿದ್ದು ಮಹಿಳೆ ಸಾವು

ವಾಹನ ಅಪಹರಿಸಿ 50 ಲಕ್ಷ ರೂ. ದರೋಡೆ, ಇಬ್ಬರ ಮೇಲೆ ಹಲ್ಲೆ

Robbery Case

ಮಡಿಕೇರಿ: ವಾಹನವನ್ನು ಅಪಹರಿಸಿ 50 ಲಕ್ಷ ರೂ. ದರೋಡೆ (Robbery Case ) ಮಾಡಿದಲ್ಲದೆ ಇಬ್ಬರ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ ಪ್ರಕರಣ ಕೊಡಗು‌ ಜಿಲ್ಲೆ ಪೊನ್ನಂಪೇಟೆ ತಾಲೂಕಿನ ದೇವರಪುರದಲ್ಲಿ ಶನಿವಾರ ಮುಂಜಾನೆ 3 ಗಂಟೆಗೆ ವೇಳೆಗೆ ಘಟನೆ ನಡೆದಿದ್ದು. ಕೇರಳ ಮೂಲದ ಗುತ್ತಿಗೆದಾರ ಶಂಜ್ಜಾದ್ ಕೆ ಮತ್ತು ಅಫ್ನು ಎಂಬುವುರ ಹಲ್ಲೆಗೊಳಲಾಗಿದ್ದಾರೆ. ಅವರು ಮೈಸೂರಿನಿಂದ ಕೇರಳಕ್ಕೆ ಹೋಗುತ್ತಿದ್ದ ವೇಳೆಯಲ್ಲಿ ದರೋಡೆಗೆ ಒಳಗಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದರೋಡೆಗೆ ಒಳಗಾದವರು ಕೇರಳದಿಂದ ಚಿನ್ನ ತಂದು ಮೈಸೂರಲ್ಲಿ ಮಾರಿ‌ ಹಣದ ಸಮೇತ ಹಿಂತಿರುಗುತ್ತಿದ್ದರು. ಅವರು ಐಷಾರಾಮಿ ಮಿನಿ ಕೂಪರ್ ಕಾರಿನಲ್ಲಿ ವಾಪಸ್​​ ಹೋಗುತ್ತಿದ್ದರು. ದೇವರಪುರ ಬಳಿ ಅವರ ಕಾರಿಗೆ ಲಾರಿಯನ್ನು ಅಡ್ಡ ಇರಿಸಿ ನಿಲ್ಲಿಸಿದ್ದಾರೆ. ಬಳಿಕ ಅವರನ್ನು ಬೇರೆ ಕಾರಿಗೆ ಹತ್ತಿಸಿಕೊಂಡು ಅಪಹರಣ ಮಾಡಿದ್ದಾರೆ.

ಇದನ್ನೂ ಓದಿ | Car Accident: ಚಾಲಕನ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ನಾಲ್ವರ ದುರ್ಮರಣ

ಬೇರೆ ದರೋಡೆಕೋರರು ಅವರ ಮಿನಿ ಕೂಪರ್ ಕಾರನ್ನೂ ಜತೆಗೆ ತೆಗೆದುಕೊಂಡ ಹೋಗಿದ್ದಾರೆ. ಅರ್ಧದಲ್ಲಿ ತೋಟವೊಂದರ ಬಳಿ ಶಂಜ್ಜಾದ್ ಮತ್ತು ಅಫ್ನು ಬಿಟ್ಟು ದರೋಡೆಕೋರರು ಅಲ್ಲಿಂದ ತೆರಳಿದ್ದಾರೆ. ಅವರು ಆ ಬಳಿಕ ಮುಖ್ಯ ರಸ್ತೆ ಸೇರಿ ಪೊಲೀಸ್ ಠಾಣೆ ತಲುಪಿ ದೂರು ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Shiva Rajkumar: ಲೋಕಸಭೆಗೆ ಸ್ಪರ್ಧಿಸಿ ಎಂದ ಡಿಕೆಶಿ; ನಾನು ರಾಜಕೀಯಕ್ಕೆ ಬರಲ್ಲ ಎಂದ ಶಿವರಾಜ್‌ಕುಮಾರ್!

Shiva Rajkumar: ನಟ ಶಿವರಾಜ್‌ ಕುಮಾರ್‌ ಅವರಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಈಡಿಗ ಸಮಾವೇಶದಲ್ಲಿ ಆಫರ್‌ ನೀಡಿದ್ದಾರೆ. ಆದರೆ, ಸಿನಿಮಾ ಜೀವನದಿಂದ ನಾನು ಹೊರಗೆ ಬರಲ್ಲ. ನನಗೆ ರಾಜಕೀಯ ಬೇಡ ಎಂದು ನಯವಾಗಿಯೇ ತಿರಸ್ಕಾರ ಮಾಡಿದ್ದಾರೆ.

VISTARANEWS.COM


on

Actor Shivarajkumar rejects DKS offer
Koo

ಬೆಂಗಳೂರು: ನಟ ಶಿವರಾಜ್‌ಕುಮಾರ್‌ (Shiva Rajkumar) ಅವರಿಗೆ ಲೋಕಸಭೆಗೆ (Lok Sabha Election 2024) ಸ್ಪರ್ಧೆ ಮಾಡುವಂತೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್‌ (DCM DK Shivakumar) ಆಹ್ವಾನ ನೀಡಿದ್ದಾರೆ. ಆದರೆ, ಈ ಆಫರ್‌ ಅನ್ನು ಶಿವರಾಜ್‌ಕುಮಾರ್‌ ಅವರು ಅಷ್ಟೇ ನಯವಾಗಿ ತಿರಸ್ಕಾರ ಮಾಡಿದ್ದಾರೆ. ನನಗೆ ಬಣ್ಣ ಹಚ್ಚುವುದಷ್ಟೇ ಗೊತ್ತು. ನಮ್ಮ ತಂದೆಯವರು ನನಗೆ ಅದನ್ನು ಮಾತ್ರ ಹೇಳಿಕೊಟ್ಟಿದ್ದಾರೆ. ನಾನು ಅದನ್ನು ಮಾತ್ರವೇ ಮಾಡುತ್ತೇನೆ. ಯಾವುದೇ ಕಾರಣಕ್ಕೂ ನಾನು ರಾಜಕೀಯಕ್ಕೆ ಬರುವುದಿಲ್ಲ. ಆದರೆ, ನನ್ನ ಹೆಂಡತಿ ಗೀತಾ (Geetha Shivarajkumar) ರಾಜಕೀಯ ಎಂದರೆ ಇಷ್ಟವಿದೆ. ಆಕೆ ರಾಜಕಾರಣದ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದವಳು. ಹೆಂಡತಿ ಇಷ್ಟಪಟ್ಟಿದ್ದನ್ನು ನೆರವೇರಿಸುವವನೇ ಗಂಡ. ಹಾಗಾಗಿ ಆಕೆಗೆ ನನ್ನ ಬೆಂಬಲ ಇರುತ್ತದೆ ಎಂದು ನೇರವಾಗಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಈಡಿಗ ಸಮಾವೇಶದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ವೇದಿಕೆಯಲ್ಲಿ ಕುಳಿತಿದ್ದಾಗ ನಾನು ನಟ ಶಿವರಾಜ್‌ಕುಮಾರ್‌ ಅವರಿಗೆ ಹೇಳಿದೆ. ನೀವು ರಾಜಕೀಯಕ್ಕೆ ಬಂದು ಬಿಡಿ. ನಿಮಗೆ ಲೋಕಸಭೆಗೆ ಟಿಕೆಟ್‌ ಕೊಡುತ್ತೇವೆ ಎಂದು ಹೇಳಿದೆ. ಅದಕ್ಕೆ ಶಿವಣ್ಣ ಅವರು ನಾನು ಈಗಾಗಲೇ ಐದಾರು ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ ಎಂದು ಹೇಳಿದರು. ಅದಕ್ಕೆ ನಾನು ಹೇಳಿದ್ದೇನೆಂದರೆ, ಎಲ್ಲರಿಗೂ ರಾಜಕೀಯದಲ್ಲಿ ಒಳ್ಳೆಯ ಅವಕಾಶ ಸಿಗುವುದಿಲ್ಲ. ಲೋಕಸಭೆಯನ್ನು ಪ್ರವೇಶ ಮಾಡುವ ಭಾಗ್ಯ ಸಿಗಲಾರದು. ನಿಮಗೆ ಈಗ ಆ ಅದೃಷ್ಟ ಬಂದಿದೆ ಬನ್ನಿ ಎಂದು ಹೇಳಿದ್ದೇನೆ ಎಂಬುದಾಗಿ ಹೇಳಿದರು.

ಹೆಂಡತಿ ಇಷ್ಟಪಟ್ಟಿದ್ದನ್ನು ನೆರವೇರಿಸುವವನೇ ಗಂಡ

ಡಿ.ಕೆ. ಶಿವಕುಮಾರ್‌ ಭಾಷಣದ ಬಳಿಕ ಮಾತನಾಡಿದ ಶಿವರಾಜ್‌ಕುಮಾರ್‌, ನಾನು ರಾಜಕೀಯಕ್ಕೆ ಎಂದೂ ಬರಲಾರೆ. ನಮಗೆಲ್ಲ ರಾಜಕೀಯ ಬೇಡ ಸ್ವಾಮಿ. ಬಂಗಾರಪ್ಪ ಅವರ ಮಗಳನ್ನು ನಾನು ಮದುವೆಯಾಗಿದ್ದೇನೆ. ಅವರ ರಕ್ತದಲ್ಲಿ ರಾಜಕೀಯ ಇದೆ. ಅವರು ಮಾಡಲಿ. ಸಮಾಜಕ್ಕೆ ಯಾರಾದರೂ ಒಳ್ಳೆಯದನ್ನು ಮಾಡುತ್ತಾರೆಂದರೆ ಅದಕ್ಕೆ ನನ್ನ ಬೆಂಬಲ ಇದ್ದೇ ಇರುತ್ತದೆ. ಹೆಂಡತಿ ಇಷ್ಟಪಡುತ್ತಿರುವುದನ್ನು ನೆರವೇರಿಸಿದವನೇ ಗಂಡ. ಹಾಗಾಗಿ ಅವರಿಗೆ ನಾನು ಸಪೋರ್ಟ್‌ ಮಾಡುತ್ತೇನೆ ಎಂದು ಹೇಳಿದರು.

ಬಂಗಾರಪ್ಪ ಅವರೇ ನನ್ನನ್ನು ರಾಜಕೀಯಕ್ಕೆ ಕರೆದಿಲ್ಲ

ನಾನು ಗೀತಾ ಅವರನ್ನು ಮದುವೆಯಾದ ದಿನದಿಂದಲೂ ನಮ್ಮ ಮಾವನವರಾದ ಬಂಗಾರಪ್ಪ ಅವರಾಗಲೀ, ಭಾವ ಮೈದುನ ಮಧು ಬಂಗಾರಪ್ಪ ಅವರಾಗಲೀ ಎಂದೂ ಸಹ ನನಗೆ ರಾಜಕೀಯಕ್ಕೆ ಬರುವಂತೆ ಆಹ್ವಾನ ನೀಡಿಲ್ಲ. ಅದರಲ್ಲಿ ಆಸಕ್ತಿ ಇಲ್ಲ ಎಂಬ ಕಾರಣಕ್ಕೆ ಅವರು ನನ್ನನ್ನು ಕರೆಯಲಿಲ್ಲ. ನನಗೆ ಬಣ್ಣ ಹಚ್ಚುವುದು ಮಾತ್ರ ಗೊತ್ತಿದೆ. ನಮ್ಮ ತಂದೆಯವರಾದ ಡಾ. ರಾಜ್‌ಕುಮಾರ್‌ ಅವರು ನಮಗೆ ಅದನ್ನು ಮಾತ್ರ ಹೇಳಿಕೊಟ್ಟಿದ್ದಾರೆ ಎಂದು ಶಿವರಾಜ್‌ಕುಮಾರ್ ಹೇಳಿದರು. ‌

ಇದನ್ನೂ ಓದಿ: Congress Karnataka: ಸಿಎಂ ಈಡಿಗ ಪಾಲಿಟಿಕ್ಸ್‌; ಸಿದ್ದರಾಮಯ್ಯ ವಿರುದ್ಧ ಗುಡುಗಿದ ಬಿ.ಕೆ. ಹರಿಪ್ರಸಾದ್!

ನನಗೆ ರಾಜಕೀಯದಲ್ಲಿ ಯಾವುದೇ ಆಸಕ್ತಿ ಇಲ್ಲ

ರಾಜಕೀಯಕ್ಕೆ ಎಂದೇ ಒಳ್ಳೆ ಒಳ್ಳೆಯವರು ಇದ್ದಾರೆ. ಅವರು ರಾಜಕೀಯವನ್ನು ಮುಂದುವರಿಸಿಕೊಂಡು ಹೋಗಲಿ. ನನಗೆ ರಾಜಕೀಯದಲ್ಲಿ ಯಾವುದೇ ಆಸಕ್ತಿ ಇಲ್ಲ ಎಂದು ಹೇಳುವ ಮೂಲಕ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರ ಆಫರ್‌ ಅನ್ನು ನಯವಾಗಿಯೇ ತಿರಸ್ಕರಿಸಿದರು.

Continue Reading

ಕರ್ನಾಟಕ

Road Accident : ಸಾವಿನಲ್ಲೂ ಒಂದಾದ ಪ್ರೇಮಿಗಳು; ರಸ್ತೆ ಅಪಘಾತದಲ್ಲಿ ಮೃತ್ಯು

Road Accident : ಶಾಲ್‌ ಬಸ್‌ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಅಪಘಾತದಲ್ಲಿ ಪ್ರೇಮಿಗಳು ಮೃತಪಟ್ಟಿದ್ದಾರೆ.

VISTARANEWS.COM


on

By

ramanagar road accident
Koo

ರಾಮನಗರ: ನೂರಾರು ಕನಸುಗಳನ್ನು ಹೊತ್ತಿದ್ದ ಆ ಜೋಡಿ ಸಾವಿನಲ್ಲೂ ಒಂದಾಗಿದೆ. ಶಾಲಾ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ (Road Accident) ಡಿಕ್ಕಿಯಾಗಿದ್ದು, ಅಪಘಾತದಲ್ಲಿ ಪ್ರೇಮಿಗಳು (Lovers Death) ಮೃತಪಟ್ಟಿದ್ದಾರೆ. ಕೆಬ್ಬೆಹಳ್ಳಿ ಗ್ರಾಮದ ದೀಪು (25), ತಿಪ್ಪೂರು ಗ್ರಾಮದ ಶೈಲ (20) ಮೃತ ದುರ್ದೈವಿಗಳು.

ಶನಿವಾರ ರಾತ್ರಿ ಕನಕಪುರ ತಾಲೂಕಿನ ಕೋಡಿಹಳ್ಳಿ ಮುಖ್ಯ ರಸ್ತೆಯ ನಾರಾಯಣಪುರದ ನಂಜಪ್ಪನ ಕಟ್ಟೆ ಬಳಿ ಈ ದುರ್ಘಟನೆ ನಡೆದಿದೆ. ಶೈಲಾಳನ್ನು ಮನೆಗೆ ಡ್ರಾಪ್‌ ಮಾಡುವ ಸಲುವಾಗಿ ಕನಕಪುರದಿಂದ ದೀಪು ತನ್ನ ಕಾರಲ್ಲಿ ಹೊರಟ್ಟಿದ್ದರು. ಈ ವೇಳೆ ಎದುರಿಗೆ ಬಂದ ಶಾಲಾ ಬಸ್‌ವೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಛಿದ್ರ ಛಿದ್ರಗೊಂಡಿದ್ದು, ಒಳಗಿದ್ದ ದೀಪು, ಶೈಲು ಗಂಭೀರ ಗಾಯಗೊಂಡಿದ್ದರು.

ಅಪಘಾತದಲ್ಲಿ ಶೈಲ ಸ್ಥಳದಲ್ಲೇ ಮೃತಪಟ್ಟಿದ್ದರೆ, ಗಂಭೀರ ಗಾಯಗೊಂಡಿದ್ದ ದೀಪುನನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸುವಾಗ ಜೀವ ಬಿಟ್ಟಿದ್ದಾನೆ. ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

Lorry Accident in manglore

ಸುರತ್ಕಲ್ ಟೋಲ್ ಬೂತ್‌ಗೆ ಲಾರಿ ಡಿಕ್ಕಿ!

ಮಂಗಳೂರು ಹೊರ ವಲಯದ ಎನ್‌ಐಟಿಕೆ ಬಳಿಯ ಸುರತ್ಕಲ್ ಟೋಲ್ ಬೂತ್‌ಗೆ ಲಾರಿ ಡಿಕ್ಕಿ ಹೊಡೆದಿದೆ. ನಿನ್ನೆ ತಡರಾತ್ರಿಯಲ್ಲಿ ಲಾರಿ ಅಪಘಾತ ನಡೆದಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟೋಲ್ ಸಂಗ್ರಹ ನಿಲ್ಲಿಸಿ ಒಂದು ವರ್ಷ ಕಳೆದಿತ್ತು. ಆದರೆ ವರ್ಷವಾದರೂ ಟೋಲ್ ಬೂತ್ ತೆರವು ಮಾಡಿಲ್ಲ. ಬೂತ್ ತರೆವು ಮಾಡುವಂತೆ ಪ್ರತಿಭಟನೆಯೂ ನಡೆದಿತ್ತು. ಬೂತ್ ಶಿಥಿಲಗೊಂಡಿರುವ ಬಗ್ಗೆ ಸ್ಥಳೀಯರು ಗಮನ ಸೆಳೆದು, ಅಪಘಾತ ಸಂಭವಿಸುವ ಬಗ್ಗೆ ಎಚ್ಚರಿಕೆ ನೀಡಿದ್ದರು. ಆದರೆ ಬೆಳಕಿನ ವ್ಯವಸ್ಥೆ ಇಲ್ಲದ ಕಾರಣಕ್ಕೆ ಈ ಅಪಘಾತ ಸಂಭವಿಸಿದೆ.

ಲಾರಿಯು ಬೆಂಗಳೂರಿನಿಂದ ಉಡುಪಿಗೆ ಬರುತ್ತಿದ್ದಾಗ ಮಳೆಯಲ್ಲಿ ಡಿವೈಡರ್ ಕಾಣದೆ ಅಪಘಾತ ನಡೆದಿದೆ. ಟೋಲ್ ಎಂಟ್ರಿ ಪಾಯಿಂಟ್‌ನ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದು, ಅದರ ರಭಸಕ್ಕೆ ಟೋಲ್ ಒಳಗೆ ಲಾರಿ ಉರುಳಿ ಬಿದ್ದಿದೆ. ಅಪಘಾತದಿಂದ ಟೋಲ್ ಗೇಟ್ ಬಹುತೇಕ ಜಖಂಗೊಂಡಿದೆ. ಸಣ್ಣಪುಟ್ಟ ಗಾಯದೊಂದಿಗೆ ಚಾಲಕ ಪಾರಾಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading
Advertisement
Vishnu Deo Sai New chief minister of Chhattisgarh
ದೇಶ13 mins ago

Chhattisgarh CM: ವಿಷ್ಣು ದೇವ ಸಾಯಿ ಛತ್ತೀಸ್‌ಗಢದ ನೂತನ ಮುಖ್ಯಮಂತ್ರಿ

TN Seetharam Book release function
ಕರ್ನಾಟಕ14 mins ago

TN Seetharam: ನನ್ನ ರಾಜಕೀಯ ಪ್ರವೇಶಕ್ಕೆ ಪ್ರೊ. ನಂಜುಂಡಸ್ವಾಮಿ ಕಾರಣ: ಸಿಎಂ ಸಿದ್ದರಾಮಯ್ಯ

Vidyut Jammwal
ಬಾಲಿವುಡ್24 mins ago

Vidyut Jammwal: ಬೆತ್ತಲಾಗಿ ಹಿಮಾಲಯದಲ್ಲಿದ್ದಾರೆ ಈ ಫೇಮಸ್‌ ನಟ! ಸೋಷಿಯಲ್‌ ಮೀಡಿಯಾದಲ್ಲಿ ಫೋಟೊ!

England vs West Indies, 3rd ODI
ಕ್ರಿಕೆಟ್28 mins ago

WI vs ENG: ಇಂಗ್ಲೆಂಡ್​ ವಿರುದ್ಧ 25 ವರ್ಷಗಳ ಬಳಿಕ ಸೇಡು ತೀರಿಸಿಕೊಂಡ ವೆಸ್ಟ್​ ಇಂಡೀಸ್​

pdo new
ಕರ್ನಾಟಕ28 mins ago

Corruption Case: ನರೇಗಾದಲ್ಲಿ 150 ಕೋಟಿ ರೂ. ಭ್ರಷ್ಟಾಚಾರ; ನಾಲ್ವರು ಪಿಡಿಒಗಳ ಅಮಾನತು

sukhdev
ದೇಶ33 mins ago

ರಜಪೂತ ನಾಯಕನ ಹತ್ಯೆ ಸಂಚು ನಡೆದಿದ್ದು ಕೆನಡಾದಲ್ಲಿ; ಇದರ ಹಿಂದೆ ಇರೋದು ಯಾರು?

BJP likely to choose cm for Chhattisgarh chief minister
ದೇಶ39 mins ago

ಛತ್ತೀಸ್‌ಗಢಗೆ ಇಂದೇ ಸಿಎಂ ಫೈನಲ್! ಯಾರಾಗ್ತಾರೆ ಮುಖ್ಯಮಂತ್ರಿ?

Karavali prajwal devaraj
South Cinema51 mins ago

Prajwal Devaraj: ಕೋಣದ ಮೇಲೆ ಪ್ರಜ್ವಲ್ ಸವಾರಿ; ‘ಕರಾವಳಿ’ ಟೀಸರ್ ಔಟ್‌!

Dog killing
ದೇಶ56 mins ago

Viral Video : ನಾಯಿಮರಿಯನ್ನು ನೆಲಕ್ಕೆ ಬಡಿದು ತುಳಿದು ಸಾಯಿಸಿದ ಕ್ರೂರಿ, ಭಯಾನಕ ವಿಡಿಯೊ ಇಲ್ಲಿದೆ

Actor Shivarajkumar rejects DKS offer
ಕರ್ನಾಟಕ58 mins ago

Shiva Rajkumar: ಲೋಕಸಭೆಗೆ ಸ್ಪರ್ಧಿಸಿ ಎಂದ ಡಿಕೆಶಿ; ನಾನು ರಾಜಕೀಯಕ್ಕೆ ಬರಲ್ಲ ಎಂದ ಶಿವರಾಜ್‌ಕುಮಾರ್!

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ1 week ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

DCC Bank Recruitment 2023
ಉದ್ಯೋಗ11 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ3 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Actor Shivarajkumar rejects DKS offer
ಕರ್ನಾಟಕ58 mins ago

Shiva Rajkumar: ಲೋಕಸಭೆಗೆ ಸ್ಪರ್ಧಿಸಿ ಎಂದ ಡಿಕೆಶಿ; ನಾನು ರಾಜಕೀಯಕ್ಕೆ ಬರಲ್ಲ ಎಂದ ಶಿವರಾಜ್‌ಕುಮಾರ್!

HD Kumaraswamy attack on congress
ಕರ್ನಾಟಕ4 hours ago

HD Kumaraswamy: ಬಿಜೆಪಿಗೆ ‌50 ಶಾಸಕರ ಕರ್ಕೊಂಡು ಬರ್ತೇವೆ ಎಂದಿರುವ ಕಾಂಗ್ರೆಸ್‌ ನಾಯಕ!

Dina Bhavishya
ಪ್ರಮುಖ ಸುದ್ದಿ12 hours ago

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

read your daily horoscope predictions for december 9 2023
ಪ್ರಮುಖ ಸುದ್ದಿ1 day ago

Dina bhavishya: ಗೌಪ್ಯ ವಿಷಯ ಹೇಳುವಾಗ ಈ ರಾಶಿಯವರು ಎಚ್ಚರ!

Actress Leelavathi felicitated
South Cinema2 days ago

Actress Leelavathi: ನಮ್ಮಮ್ಮ ಲೀಲಮ್ಮ-ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ನೀಡಿ ಗೌರವಿಸಿದ್ದ ಫಿಲ್ಮ್‌ ಚೇಂಬರ್

Actress Leelavati and Rajkumar film
South Cinema2 days ago

Actress Leelavathi: ಲೀಲಾವತಿಗೆ ಸಂದ ಪ್ರಶಸ್ತಿಗಳ ಗರಿ; ಇಲ್ಲಿದೆ ಸಿನಿ ಜರ್ನಿ ಲಿಸ್ಟ್‌

Actress Leelavati and Rajkumar film
South Cinema2 days ago

Actress Leelavathi: ತೆರೆಯಲ್ಲಿ ಮೋಡಿ ಮಾಡಿದ್ದ ಡಾ.ರಾಜ್‌ಕುಮಾರ್‌-ಲೀಲಾವತಿ ಜೋಡಿ!

PM Narenda modi and Moulvi thanveer Peera
ಕರ್ನಾಟಕ2 days ago

CM Siddaramaiah: ಮೌಲ್ವಿ ಫೋಟೊ ಹಾಕಿ ಮೋದಿ ಟಾರ್ಗೆಟ್‌ ಮಾಡಿದ ಯತ್ನಾಳ್‌ ಎಂದ ಸಿದ್ದರಾಮಯ್ಯ

Dina Bhavishya
ಪ್ರಮುಖ ಸುದ್ದಿ2 days ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ3 days ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

ಟ್ರೆಂಡಿಂಗ್‌