Baby Death: ಹೋಮ್‌ ವರ್ಕ್‌ ಮಾಡುತ್ತಿದ್ದ ಬಾಲಕಿಗೆ ಸಾವಾಗಿ ಕಾಡಿದ ಪೆನ್‌! - Vistara News

Latest

Baby Death: ಹೋಮ್‌ ವರ್ಕ್‌ ಮಾಡುತ್ತಿದ್ದ ಬಾಲಕಿಗೆ ಸಾವಾಗಿ ಕಾಡಿದ ಪೆನ್‌!

Baby Death: ಮನೆಯಲ್ಲಿ ಚಿಕ್ಕಮಕ್ಕಳು ಪೆನ್, ಪೆನ್ಸಿಲ್ ಹಿಡಿದುಕೊಂಡು ಆಡುವುದು ಸಾಮಾನ್ಯ. ಮನೆಯಲ್ಲಿ ಹಾಸಿಗೆಯ ಮೇಲೆ ಕುಳಿತು ತನ್ನ ಪುಸ್ತಕಗಳೊಂದಿಗೆ ಆಟವಾಡುತ್ತಿದ್ದ ಬಾಲಕಿಯೊಬ್ಬಳು ಬ್ಯಾಲೆನ್ಸ್ ತಪ್ಪಿ ಮಂಚದಿಂದ ಕೆಳಗೆ ಬಿದ್ದಿದ್ದಳು. ಆಗ ಅವಳು ಹಿಡಿದಿದ್ದ ಪೆನ್ ಕಿವಿಯ ಮೇಲ್ಭಾಗದಿಂದ ನೇರವಾಗಿ ತಲೆಯನ್ನು ಚುಚ್ಚಿತು. ವೈದ್ಯರು ಆಕೆಗೆ ಸರ್ಜರಿ ಮಾಡಿ ಪೆನ್ ಹೊರಗೆ ತೆಗೆದರೂ ಕೂಡ ಗಂಭೀರ ಸ್ಥಿತಿಯಲ್ಲಿದ್ದ ಆಕೆ ಸೋಂಕಿಗೆ ಒಳಗಾಗಿ ಕೊನೆಯುಸಿರೆಳಿದಿದ್ದಾಳೆ.

VISTARANEWS.COM


on

Baby Death
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶಾಲೆಗೆ ಹೋಗುವ ಮಕ್ಕಳ ಕೈಯಲ್ಲಿ ಪೆನ್ನು, ಪೆನ್ಸಿಲ್ ಕೊಟ್ಟಾಗ ಅವರು ತಮ್ಮ ತಲೆ, ಕಣ್ಣು, ಕೈಗೆ ಕೆಲವೊಮ್ಮೆ ಚುಚ್ಚಿಸಿಕೊಳ್ಳುವುದಿದೆ. ಆದರೆ ಪೆನ್‌ನಿಂದ ಸಾವು ಸಂಭವಿಸಿದ ಸುದ್ದಿ ಹಿಂದೆಂದೂ ಕೇಳಿದ್ದಿಲ್ಲ. ತೆಲಂಗಾಣದ ಭದ್ರಾದ್ರಿ ಕೊಥಗುಡೆಮ್ ಜಿಲ್ಲೆಯ ಭದ್ರಾಚಲಂನ ಸುಭಾಷ್ ನಗರದಲ್ಲಿ ಬರೆಯಲು ಇಟ್ಟುಕೊಂಡಿದ್ದ ಪೆನ್‌ನಿಂದ ಬಾಲಕಿಯ ಸಾವು ಸಂಭವಿಸಿದ ದುರ್ಘಟನೆ ನಡೆದಿದೆ. 5 ವರ್ಷದ ಬಾಲಕಿ (Baby Death) ತಲೆಗೆ ಪೆನ್ ಚುಚ್ಚಿದ ಪರಿಣಾಮ ಸಾವನಪ್ಪಿದ್ದಾಳೆ.

ರಿಯಾನ್ಶಿಕಾ ಪೆನ್ನು ಚುಚ್ಚಿ ಸಾವನಪ್ಪಿದ ಬಾಲಕಿ. ಈಕೆ ಯುಕೆಜಿಯಲ್ಲಿ ಓದುತ್ತಿದ್ದಳು. ಜುಲೈ 1ರಂದು ತನ್ನ ಮನೆಯಲ್ಲಿ ಹಾಸಿಗೆಯ ಮೇಲೆ ಕುಳಿತು ಹೋಮ್‌ ವರ್ಕ್‌ ಮಾಡುತ್ತ ತನ್ನ ಪುಸ್ತಕಗಳೊಂದಿಗೆ ಆಟವಾಡುತ್ತಿದ್ದಾಗ, ಬ್ಯಾಲೆನ್ಸ್ ತಪ್ಪಿ ಮಂಚದಿಂದ ಕೆಳಗೆ ಬಿದ್ದಿದ್ದಾಳೆ. ಆಗ ಅವಳು ಹಿಡಿದಿದ್ದ ಪೆನ್ ಅವಳ ಕಿವಿಯ ಮೇಲ್ಭಾಗದಿಂದ ನೇರವಾಗಿ ತಲೆಗೆ ಆಳವಾಗಿ ಚುಚ್ಚಿದೆ. ಪೆನ್ನಿನ ಸುಮಾರು ಅರ್ಧದಷ್ಟು ಭಾಗ ಅವಳ ತಲೆಯೊಳಗೆ ತೂರಿ ಹೋಗಿತ್ತು ಎನ್ನಲಾಗಿದೆ.

ತಕ್ಷಣ ಆಕೆಯ ಹೆತ್ತವರಾದ ಮಣಿಕಂಠ ಮತ್ತು ಸ್ವರೂಪಾ ಅವರು ಅವಳನ್ನು ಭದ್ರಾಚಲಂ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ನಂತರ ವೈದ್ಯರ ಸಲಹೆಯ ಮೇರೆಗೆ ಉತ್ತಮ ಚಿಕಿತ್ಸೆಗಾಗಿ ಖಮ್ಮಂನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿದರು. ಅಲ್ಲಿ ವೈದ್ಯರು ಆಕೆಗೆ ಸರ್ಜರಿ ಮಾಡಿ ಪೆನ್ ಅನ್ನು ಹೊರಗೆ ತೆಗೆದರೂ ಕೂಡ ಗಂಭೀರ ಸ್ಥಿತಿಯಲ್ಲಿದ್ದ ಆಕೆ ಸೋಂಕಿಗೆ ಒಳಗಾಗಿ ಸಾವನಪ್ಪಿದ್ದಾಳೆ.

ಕೊನೆಗೂ ನೂರಾರು ವರ್ಷ ಬಾಳಿ ಬದುಕುಬೇಕಾಗಿದ್ದ ಆ ಪುಟ್ಟ ಬಾಲಕಿಯ ಜೀವ ಕೇವಲ ಒಂದು ಚಿಕ್ಕ ಪೆನ್ನಿನಿಂದ ಅಂತ್ಯ ಕಂಡಿದ್ದು ದುರಂತವೇ ಸರಿ. ಹಾಗಾಗಿ ಈ ಘಟನೆಯಿಂದ ಎಲ್ಲಾ ಪೋಷಕರು ಎಚ್ಚೆತ್ತುಕೊಳ್ಳುವುದು ಉತ್ತಮ. ನಿಮಗೆ ಎಷ್ಟೇ ಕೆಲಸವಿದ್ದರೂ ಕೂಡ ನಿಮ್ಮ ಮಕ್ಕಳ ಬಗ್ಗೆ ಒಂದು ಗಮನವಿಟ್ಟಿರಿ. ಇಲ್ಲವಾದರೆ ಇಂತಹ ದುರಂತಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ:ಬೆಂಗಳೂರಿನಲ್ಲಿ ನಡುರಸ್ತೆಯಲ್ಲೇ ಕಳ್ಳರು ಬ್ಯಾಗ್‌ ಕಸಿದು ಓಡುತ್ತಾರೆ! ಪೋಲಿಸ್ರು ಏನ್‌ ಮಾಡ್ತಿದ್ದಾರೋ!

ಈ ಹಿಂದೆ ಮೇ ತಿಂಗಳಿನಲ್ಲಿ ನೇಪಾಳದಲ್ಲಿ 7 ವರ್ಷದ ಬಾಲಕನೊಬ್ಬ ಆಕಸ್ಮಿಕವಾಗಿ 10 ಸೆಂ.ಮೀ ಉದ್ದದ ಪೆನ್ಸಿಲ್ ಅನ್ನು ನುಂಗಿ ಬಿಟ್ಟಿದ್ದ. ಇದರಿಂದ ಆತ ಹೊಟ್ಟೆ ನೋವಿನಿಂದ ನರಳಿದ್ದು, ನಂತರ ಪೋಷಕರು ವೈದ್ಯರ ಬಳಿ ಕರೆದುಕೊಂಡು ಹೋದಾಗ ಬಾಲಕನ ಎದೆ ಮತ್ತು ಹೊಟ್ಟೆಯ ಎಕ್ಸ್-ರೇ ಸ್ಕ್ಯಾನ್ ಮಾಡಿಸಿದ ವೈದ್ಯರಿಗೆ ಪೆನ್ಸಿಲ್ ಅವನ ಹೊಟ್ಟೆಯಲ್ಲಿ ಇರುವುದು ತಿಳಿದು ಬಂದಿತ್ತು. ನಂತರ 4 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಯ ಮೂಲಕ ಅದನ್ನು ಆತನ ಹೊಟ್ಟೆಯಿಂದ ಹೊರಗೆ ತೆಗೆಯಲಾಗಿತ್ತು. ಇದರಿಂದ ಆತ ಪ್ರಾಣಾಪಾಯದಿಂದ ಪಾರಾಗಿದ್ದ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Home remedies for Dengue: ಸರಳ ಮನೆ ಮದ್ದು ಬಳಸಿ; ಡೆಂಗ್ಯೂ ಅಪಾಯದಿಂದ ಪಾರಾಗಿ!

Home remedies for Dengue: ಡೆಂಗ್ಯೂ ಜ್ವರಕ್ಕೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಲು ತುರ್ತು ವೈದ್ಯಕೀಯ ಆರೈಕೆ ಅಗತ್ಯ. ಡೆಂಗ್ಯೂ ರೋಗಲಕ್ಷಣಗಳನ್ನು ನಿಯಂತ್ರಿಸಲು ಸಹಾಯ ಮಾಡುವ ಕೆಲವು ಪರಿಣಾಮಕಾರಿ ಮನೆಮದ್ದುಗಳಿವೆ (Home Remedies). ಈ ಪರಿಹಾರಗಳು ಹೆಚ್ಚಿನ ಜ್ವರವನ್ನು ತಗ್ಗಿಸಬಹುದು ಮತ್ತು ರೋಗಲಕ್ಷಣಗಳಿಂದ ಸ್ವಲ್ಪ ವಿಶ್ರಾಂತಿ ನೀಡುವುದು. ಡೆಂಗ್ಯೂ ವ್ಯಾಪಿಸಿರುವ ಈ ಸಂದರ್ಭದಲ್ಲಿ ಸರಳ ಮನೆಮದ್ದುಗಳ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

By

Home remedies for Dengue
Koo

ಬೆಂಗಳೂರು (bengaluru) (Home remedies for Dengue) ಸೇರಿದಂತೆ ರಾಜ್ಯಾದ್ಯಂತ ಡೆಂಗ್ಯೂವಿನ (Dengue ) ಅಬ್ಬರ ಹೆಚ್ಚಾಗಿದೆ. ಡೆಂಗ್ಯೂ ಸೊಳ್ಳೆಯಿಂದ ಹರಡುವ ರೋಗವಾಗಿದ್ದು, ಎಚ್ಚರ ತಪ್ಪಿದರೆ ಇದು ಪ್ರಾಣಾಪಾಯಕ್ಕೂ ಕಾರಣ ಆಗುತ್ತದೆ. ಆದರೆ ಕೆಲವು ಮನೆ ಮದ್ದಿನಿಂದ (Home Remedies) ಇದರಿಂದ ಬೇಗನೆ ಚೇತರಿಸಿಕೊಳ್ಳಲು ಸಾಧ್ಯವಿದೆ.

ಮಳೆಗಾಲದಲ್ಲಿ (rainy season) ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತವೆ. ಯಾಕೆಂದರೆ ನಿಂತ ನೀರು ಸೊಳ್ಳೆಗಳ ಉತ್ಪತ್ತಿ ಕೇಂದ್ರವಾಗಿರುತ್ತದೆ. ವಿಪರೀತ ಜ್ವರ, ತಲೆನೋವು, ಕಣ್ಣುಗಳ ಹಿಂದೆ ನೋವು, ಆಯಾಸ, ಕೀಲು ನೋವು, ಚರ್ಮದ ದದ್ದು, ವಾಕರಿಕೆ ಮತ್ತು ವಾಂತಿ ಡೆಂಗ್ಯೂನ ಕೆಲವು ಪ್ರಮುಖ ಲಕ್ಷಣಗಳಾಗಿವೆ.

ಡೆಂಗ್ಯೂ ಜ್ವರಕ್ಕೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಲು ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿದೆ. ಡೆಂಗ್ಯೂ ರೋಗಲಕ್ಷಣಗಳನ್ನು ನಿಯಂತ್ರಿಸಲು ಸಹಾಯ ಮಾಡುವ ಕೆಲವು ಪರಿಣಾಮಕಾರಿ ಮನೆಮದ್ದುಗಳಿವೆ. ಈ ಪರಿಹಾರಗಳು ಹೆಚ್ಚಿನ ಜ್ವರವನ್ನು ತಗ್ಗಿಸಬಹುದು ಮತ್ತು ರೋಗಲಕ್ಷಣಗಳಿಂದ ನಿಮಗೆ ಸ್ವಲ್ಪ ವಿಶ್ರಾಂತಿ ನೀಡಬಹುದು. ಡೆಂಗ್ಯೂ ಮತ್ತು ಅದರ ತೊಡಕುಗಳನ್ನು ನಿಯಂತ್ರಿಸಲು ಸಹಾಯ ಮಾಡುವ ಕೆಲವು ಪರಿಹಾರಗಳು ಇಲ್ಲಿವೆ.


ಅಮೃತ ಬಳ್ಳಿ ರಸ

ಡೆಂಗ್ಯೂ ಜ್ವರಕ್ಕೆ ಅಮೃತ ಬಳ್ಳಿ ರಸ ಸುಪ್ರಸಿದ್ಧ ಪರಿಹಾರವಾಗಿದೆ. ಅಮೃತ ಬಳ್ಳಿಯ ರಸ ಚಯಾಪಚಯವನ್ನು ಸುಧಾರಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬಲವಾದ ರೋಗ ನಿರೋಧಕ ಶಕ್ತಿಯು ಡೆಂಗ್ಯೂ ಜ್ವರವನ್ನು ಪರಿಣಾಮಕಾರಿಯಾಗಿ ಹೋರಾಡಲು, ಪ್ಲೇಟ್ಲೆಟ್ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನೀವು ಒಂದು ಲೋಟ ನೀರಿನಲ್ಲಿ ಅಮೃತಬಳ್ಳಿ ಸಸ್ಯದ ಎರಡು ಸಣ್ಣ ಕಾಂಡಗಳನ್ನು ಕುದಿಸಬಹುದು. ಸ್ವಲ್ಪ ಬೆಚ್ಚಗಿರುವಾಗ ಈ ನೀರನ್ನು ಸೇವಿಸಿ. ನೀವು ಒಂದು ಕಪ್ ಬೇಯಿಸಿದ ನೀರಿಗೆ ಕೆಲವು ಹನಿ ಅಮೃತ ಬಳ್ಳಿಯ ರಸವನ್ನು ಸೇರಿಸಿ ಮತ್ತು ದಿನಕ್ಕೆ ಎರಡು ಬಾರಿ ಕುಡಿಯಬಹುದು. ಆದರೆ ಇದನ್ನು ಅತಿಯಾಗಿ ಸೇವಿಸುವುದು ಒಳ್ಳೆಯದಲ್ಲ.


ಪಪ್ಪಾಯ ಎಲೆಯ ರಸ

ಡೆಂಗ್ಯೂ ರೋಗಿಗಳಲ್ಲಿ ಪ್ಲೇಟ್‌ಲೆಟ್ ಸಂಖ್ಯೆ ಕಡಿಮೆಯಾಗುವುದರಿಂದ, ಪ್ಲೇಟ್‌ಲೆಟ್ ಸಂಖ್ಯೆಯನ್ನು ಹೆಚ್ಚಿಸಲು ಪಪ್ಪಾಯ ಎಲೆಯ ರಸವು ಉತ್ತಮ ಪರಿಹಾರವಾಗಿದೆ. ಪಪ್ಪಾಯ ಎಲೆಯ ರಸವು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ಇದು ಡೆಂಗ್ಯೂ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತದೆ. ಕೆಲವು ಪಪ್ಪಾಯ ಎಲೆಗಳನ್ನು ತೆಗೆದುಕೊಂಡು ಅದರಿಂದ ರಸವನ್ನು ಹೊರತೆಗೆಯಲು ಅವುಗಳನ್ನು ಪುಡಿಮಾಡಿ. ಉತ್ತಮ ಫಲಿತಾಂಶಕ್ಕಾಗಿ ದಿನಕ್ಕೆ ಎರಡು ಬಾರಿ ಪಪ್ಪಾಯ ಎಲೆಯ ರಸವನ್ನು ಸಣ್ಣ ಪ್ರಮಾಣದಲ್ಲಿ ಸೇವಿಸಬಹುದು.


ತಾಜಾ ಪೇರಳೆ ರಸ

ಪೇರಳೆ ರಸವು ಬಹು ಪೋಷಕಾಂಶಗಳಿಂದ ತುಂಬಿರುತ್ತದೆ. ಇದರಲ್ಲಿ ವಿಟಮಿನ್ ಸಿಯು ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಡೆಂಗ್ಯೂ ಜ್ವರಕ್ಕೆ ಚಿಕಿತ್ಸೆ ನೀಡಲು ಆಹಾರದಲ್ಲಿ ತಾಜಾ ಪೇರಳೆ ರಸವನ್ನು ಸೇರಿಸಬಹುದು. ಪೇರಳೆ ರಸವು ನಿಮಗೆ ಇತರ ಆರೋಗ್ಯ ಪ್ರಯೋಜನಗಳನ್ನೂ ನೀಡುತ್ತದೆ. ದಿನಕ್ಕೆ ಎರಡು ಬಾರಿ ಒಂದು ಕಪ್ ಪೇರಳೆ ರಸವನ್ನು ಕುಡಿಯಬಹುದು ಅಥವಾ ಜ್ಯೂಸ್ ಬದಲಿಗೆ ತಾಜಾ ಪೇರಳೆ ಹಣ್ಣನ್ನು ಕೂಡ ತಿನ್ನಬಹುದು.


ಮೆಂತ್ಯ ಬೀಜಗಳು

ಮೆಂತ್ಯ ಬೀಜಗಳು ಡೆಂಗ್ಯೂ ಜ್ವರವನ್ನು ನಿಯಂತ್ರಿಸಲು ಸಹಾಯ ಮಾಡುವ ಬಹು ಪೋಷಕಾಂಶವಿರುವ ಔಷಧ ಕೆಲವು ಮೆಂತ್ಯ ಬೀಜಗಳನ್ನು ಒಂದು ಕಪ್ ಬಿಸಿ ನೀರಿನಲ್ಲಿ ನೆನೆಸಿಟ್ಟು ತಣ್ಣಗಾದ ಬಳಿಕ ದಿನಕ್ಕೆ ಎರಡು ಬಾರಿ ಕುಡಿಯಿರಿ. ಮೆಂತ್ಯ ನೀರಿನಲ್ಲಿ ವಿಟಮಿನ್ ಸಿ, ಕೆ ಮತ್ತು ಫೈಬರ್‌ ಸಮೃದ್ಧವಾಗಿರುವ ಕಾರಣ ಇತರ ಆರೋಗ್ಯ ಪ್ರಯೋಜನಗಳನ್ನು ಸಹ ನೀಡುತ್ತದೆ. ಮೆಂತ್ಯ ನೀರು ಜ್ವರವನ್ನು ಕಡಿಮೆ ಮಾಡುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.


ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳು

ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳುವುದು ಡೆಂಗ್ಯೂವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಡೆಂಗ್ಯೂ ಜ್ವರದಿಂದ ತ್ವರಿತವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಬಲವಾದ ರೋಗನಿರೋಧಕ ಶಕ್ತಿಯು ಡೆಂಗ್ಯೂನ ಆರಂಭಿಕ ರೋಗಲಕ್ಷಣಗಳನ್ನು ಸಹ ತಡೆಯುತ್ತದೆ. ಸಿಟ್ರಸ್ ಹಣ್ಣುಗಳು, ಬೆಳ್ಳುಳ್ಳಿ, ಬಾದಾಮಿ, ಅರಿಶಿನ ಮತ್ತು ಇನ್ನೂ ಕೆಲವು ಆಹಾರ ಸಾಮಗ್ರಿಗಳಲ್ಲಿ ; ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅಂಶಗಳಿರುತ್ತವೆ. ಇವುಗಳನ್ನು ಆಹಾರದಲ್ಲಿ ಸೇರಿಸಿ ನಿಯಮಿತವಾಗಿ ಸೇವಿಸಿ.

ಇದನ್ನೂ ಓದಿ: Period Insomnia: ಋತುಸ್ರಾವ ಸಮಯದಲ್ಲಿ ನಿದ್ದೆಯ ಸಮಸ್ಯೆಯೇ?; ಇಲ್ಲಿವೆ ಸರಳ ಟಿಪ್ಸ್‌ಗಳು

ಡೆಂಗ್ಯೂನ ಲಕ್ಷಣಗಳು ಕಂಡುಬಂದರೆ ತಕ್ಷಣ ಪರೀಕ್ಷಿಸಿಕೊಳ್ಳಬೇಕು. ಈ ಪರಿಹಾರಗಳು ಡೆಂಗ್ಯೂ ಜ್ವರವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಮಾತ್ರ ಸಹಾಯ ಮಾಡುತ್ತದೆ. ಆದರೆ ಹೆಚ್ಚು ಕಾಲ ಮನೆಮದ್ದುಗಳನ್ನು ಅವಲಂಬಿಸಬೇಡಿ. ಕೂಡಲೇ ವೈದ್ಯರನ್ನು ಕಾಣಿರಿ.

Continue Reading

Latest

Murder Case: ಕದ್ದುಮುಚ್ಚಿ ಸರಸವಾಡುತ್ತಿದ್ದ ಮಹಿಳೆ ಸಿಕ್ಕಿಬಿದ್ದಾಗ ಗಂಡನನ್ನೇ ಕೊಂದಳು!

Murder Case: ಅನೈತಿಕ ಸಂಬಂಧದಲ್ಲಿ ತೊಡಗಿ ಬದುಕಿನ ನೆಮ್ಮದಿಯನ್ನು ಕಳೆದುಕೊಳ್ಳುವವರ ಸಂಖ್ಯೆ ಜಾಸ್ತಿಯಾಗಿದೆ. ಕ್ಷಣದ ಖುಷಿಗಾಗಿ ಬದುಕಿಡೀ ಕಂಬಿ ಎಣಿಸುವ ಸ್ಥಿತಿಗೆ ತಲುಪುತ್ತಿದ್ದಾರೆ. ಇಂತಹದ್ದೇ ಒಂದು ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.ಪ್ರಿಯಕರನಿಗಾಗಿ ಪತಿಯನ್ನೇ ಕತ್ತರಿಯಿಂದ ಪತ್ನಿಯೊಬ್ಬಳು ಕ್ರೂರವಾಗಿ ಕೊಲೆ ಮಾಡಿದ್ದಾಳೆ. ಶವವನ್ನು ಶೌಚಾಲಯದ ಚಾವಣಿಯ ಮೇಲೆ ಎಸೆದು ಸ್ಥಳದಿಂದ ಪರಾರಿಯಾಗಿದ್ದಾಳೆ. ಆದರೆ ಈಗ ಆಕೆ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

VISTARANEWS.COM


on

Murder Case
Koo

ಇತ್ತೀಚಿನ ದಿನಗಳಲ್ಲಿ ಅಕ್ರಮ ಸಂಬಂಧದ ಪ್ರಕರಣಗಳು ಮತ್ತು ಇದಕ್ಕೆ ಸಂಬಂಧಿಸಿದ ಕೊಲೆ ಪ್ರಕರಣಗಳು ಹೆಚ್ಚು ಸಂಭವಿಸುತ್ತಿವೆ. ಪರ ಪುರುಷರ ಸಂಗಕ್ಕೆ ಬೀಳುವ ಕೆಲವು ಮಹಿಳೆಯರು ತಮ್ಮ ಪತಿ ಹಾಗೂ ಹೆತ್ತ ಮಕ್ಕಳನ್ನು ಕೊಲ್ಲಲೂ ಹಿಂಜರಿಯುವುದಿಲ್ಲ. ಇದೀಗ ಅಂತಹದೊಂದು ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಗ್ರೇಟರ್ ನೋಯ್ಡಾದ ಎಟಿಎಸ್ ವೃತ್ತದ ಬಳಿ ಒಂದು ವಾರದ ಹಿಂದೆ ಕತ್ತರಿಯಿಂದ ಪತಿಯನ್ನು ಕ್ರೂರವಾಗಿ ಕೊಲೆ(Murder Case) ಮಾಡಿದ ವಿವಾಹಿತ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಪೂಜಾ ಮತ್ತು ಪ್ರಹ್ಲಾದ್ ಕೊಲೆ ಮಾಡಿದ ಆರೋಪಿಗಳು. ಮಹೇಶ್ ಕೊಲೆಯಾದ ಬಲಿಪಶು. ಪೂಜಾ ಮತ್ತು ಪ್ರಹ್ಲಾದ್ ಒಂದೇ ಗ್ರಾಮದವರಾಗಿದ್ದು, ಇವರ ನಡುವೆ ಪ್ರೀತಿ ಮೂಡಿತ್ತು. ಆದರೆ ಮಹೇಶ್‍ನನ್ನು ಮದುವೆಯಾದ ಪೂಜಾ ಪತಿಯ ಜೊತೆ ಗ್ರೇಟರ್ ನೋಯ್ಡಾದ ಬಿರೋಂಡಾಕ್ಕೆ ಬಂದಿದ್ದಳು. ಅಲ್ಲಿ ಮಹೇಶ್ ನೈರ್ಮಲ್ಯ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಈ ಸಮಯದಲ್ಲಿ, ಪೂಜಾ ತನ್ನ ಪ್ರಿಯಕರ ಪ್ರಹ್ಲಾದ್‍ಗೆ ಕೆಲಸ ಹುಡುಕಲು ಸಹಾಯ ಮಾಡುವ ನೆಪದಲ್ಲಿ ಗ್ರೇಟರ್ ನೋಯ್ಡಾಕ್ಕೆ ಕರೆದಳು. ಅಲ್ಲಿ ಪ್ರಹ್ಲಾದ್‍ಗೆ ಎನ್ಎಫ್ಎಲ್ ಸೊಸೈಟಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಏನೋ ಸಿಕ್ಕಿದೆ. ಆದರೆ ಆತ ಆಗಾಗ ಪೂಜಾಳನ್ನು ಭೇಟಿ ಮಾಡಲು ಪ್ರಾರಂಭಿಸಿದ. ಅಲ್ಲದೇ ಇವರ ನಡುವೆ ಅಕ್ರಮ ಸಂಬಂಧ ಮುಂದುವರಿಯಿತು ಎನ್ನಲಾಗಿದೆ.

ಆದರೆ ಜುಲೈ 1ರ ರಾತ್ರಿ ಮಹೇಶ್ ಇಲ್ಲದಿದ್ದಾಗ ಪ್ರಹ್ಲಾದ್ ಪೂಜಾಳ ಮನೆಗೆ ಭೇಟಿ ನೀಡಿದ್ದಾನೆ. ಆದರೆ, ಮಹೇಶ್ ಅನಿರೀಕ್ಷಿತವಾಗಿ ಮನೆಗೆ ಹಿಂದಿರುಗಿದಾಗ ಪ್ರಹ್ಲಾದ್ ಜೊತೆ ಪತ್ನಿ ಇರುವುದನ್ನು ಕಂಡು ಸಿಟ್ಟಾಗಿದ್ದಾನೆ. ಈ ವೇಳೆ ಪೂಜಾ ಮತ್ತು ಪ್ರಹ್ಲಾದ್ ಮಹೇಶ್ ಮೇಲೆ ಕತ್ತರಿಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ನಂತರ ಅವರು ಶವವನ್ನು ಶೌಚಾಲಯದ ಚಾವಣಿಯ ಮೇಲೆ ಎಸೆದು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಕೊಲೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದರು.

ಇದನ್ನೂ ಓದಿ: 1.92 ಲಕ್ಷ ರೂ. ಬೆಲೆಯ ʼಹುಕುಮ್‌ ಕಿ ರಾಣಿʼ ಸೀರೆಯಲ್ಲಿ ಮಿಂಚಿದ ದೀಪಿಕಾ ಪಡುಕೋಣೆ!

ಈಗ ಆರೋಪಿಗಳಾದ ಪೂಜಾ ಮತ್ತು ಪ್ರಹ್ಲಾದ್ ಅವರನ್ನು ಗ್ರೇಟರ್ ನೋಯ್ಡಾದ ಎಟಿಎಸ್ ವೃತ್ತದ ಬಳಿ ಪೊಲೀಸರು ಬಂಧಿಸಿದ್ದಾರೆ ಮತ್ತು ಕೊಲೆಗೆ ಬಳಸಿದ ಕತ್ತರಿಯನ್ನು ವಶಪಡಿಸಿಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ನಿಬಂಧನೆಗಳ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ ಮತ್ತು ಗ್ರೇಟರ್ ನೋಯ್ಡಾದ ಸ್ಥಳೀಯ ಬೀಟಾ 2 ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading

Latest

Deepika Padukone: 1.92 ಲಕ್ಷ ರೂ. ಬೆಲೆಯ ʼಹುಕುಮ್‌ ಕಿ ರಾಣಿʼ ಸೀರೆಯಲ್ಲಿ ಮಿಂಚಿದ ದೀಪಿಕಾ ಪಡುಕೋಣೆ!

Deepika Padukone: ತಾಯ್ತನ ಎನ್ನುವುದು ಹೆಣ್ಣಿಗೆ ಒಂದು ಸಂಭ್ರಮ. ನಟಿ ದೀಪಿಕಾ ಪಡುಕೋಣೆ ಕೂಡ ಈಗ ಆ ಸಂಭ್ರಮದಲ್ಲಿ ತೇಲುತ್ತಿದ್ದಾರೆ. ಈಗಾಗಲೇ ತಮ್ಮ ಬೇಬಿ ಬಂಪ್ ತೋರಿಸಿ ಸಖತ್ ಸುದ್ದಿಯಲ್ಲಿರುವ ದೀಪಿಕಾ ಈಗ ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ಅವರ ಸಂಗೀತ ಸಮಾರಂಭದಲ್ಲಿ ವಿಶೇಷವಾದ ಸೀರೆಯೊಂದನ್ನು ಧರಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.ತೋರಣಿಯ ಹುಕುಮ್ ಕಿ ರಾಣಿ ಸೀರೆಯಲ್ಲಿ ಸಖತ್ ಆಗಿ ಕಂಗೊಳಿಸಿದ್ದಾರೆ. ಈ ಸೀರೆಯ ವಿಶೇಷತೆ ಏನೆಂಬುದರ ಮಾಹಿತಿ ಇಲ್ಲಿದೆ.

VISTARANEWS.COM


on

Deepika Padukone
Koo

ಮುಂಬೈ : ಸಿನಿಮಾ ತಾರೆಯರು ಹಾಗೂ ಪ್ರಸಿದ್ಧ ಶ್ರೀಮಂತ ಕುಟುಂಬದವರು ಯಾವುದೇ ವಸ್ತುಗಳನ್ನು ಧರಿಸಿದರೂ ಅದು ಹೆಚ್ಚು ಸುದ್ದಿಯಾಗುತ್ತದೆ. ಅದರಲ್ಲೂ ಬಾಲಿವುಡ್ ನಟಿಯರು ತೊಡುವ ಸೀರೆ, ಫ್ಯಾಶನ್ ಡ್ರೆಸ್‌ಗಳು ಹೆಚ್ಚು ಜನರ ಗಮನವನ್ನು ಸೆಳೆಯುತ್ತದೆ. ಇದೀಗ ನಟಿ ದೀಪಿಕಾ ಪಡುಕೋಣೆ(Deepika Padukone )ಯವರ ಸೀರೆಯೊಂದು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.

ತಾಯಿಯಾಗುವ ಸಂಭ್ರಮದಲ್ಲಿರುವ ನಟಿ ದೀಪಿಕಾ ಪಡುಕೋಣೆ ತನ್ನ ಬೇಬಿ ಬಂಪ್ ಅನ್ನು ತುಂಬಾ ವಿಶೇಷವಾದ ಲುಕ್‌ನಲ್ಲಿ ತೋರಿಸಲು ಪ್ರಾರಂಭಿಸಿದ್ದಾರೆ. ಹಾಗೇ ಗರ್ಭಿಣಿಯರು ತಮ್ಮ ಬೇಬಿ ಬಂಪ್‌ನಲ್ಲಿ ಯಾವ ರೀತಿ ಫ್ಯಾಷನ್ ಡ್ರೆಸ್ ಧರಿಸಬಹುದು ಎಂದು ತೋರಿಸಿಕೊಡುತ್ತಿದ್ದಾರೆ.

ಇತ್ತೀಚೆಗೆ ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ಅವರ ಸಂಗೀತ ಸಮಾರಂಭಕ್ಕಾಗಿ ಅವರು ಧರಿಸಿದ ಸೀರೆ ಅನೇಕರನ್ನು ಆಕರ್ಷಿಸಿದೆ. ದೀಪಿಕಾ ಪಡುಕೋಣೆ ಸೊಗಸಾದ ತೋರಣಿ ಸೀರೆಯಲ್ಲಿ ಸಖತ್‌ ಆಗಿ ಕಾಣಿಸಿಕೊಂಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ನಟಿ ದೀಪಿಕಾ ಪಡುಕೋಣೆಯವರು ತೋರಣಿಯ ‘ಹುಕುಮ್‌ ಕಿ ರಾಣಿ’ ಸೀರೆಯನ್ನು ಧರಿಸಿದ್ದರು, ಇದರ ಬೆಲೆ 1.92 ಲಕ್ಷ ರೂ.ಗಳಾಗಿವೆ. ಈ ಸೀರೆ ಸಮಕಾಲೀನ ವಿನ್ಯಾಸದೊಂದಿಗೆ ಐಷಾರಾಮಿ ಮತ್ತು ಸಾಂಪ್ರದಾಯಿಕ ಸೌಂದರ್ಯವನ್ನು ಒಳಗೊಂಡಿದೆ ಎನ್ನಲಾಗಿದೆ. ನಟಿ ದೀಪಿಕಾ ಅವರು ನೇರಳೆ ಬಣ್ಣದಲ್ಲಿ ವಿನ್ಯಾಸಗೊಳಿಸಲಾದ ಸೀರೆಯನ್ನು ಧರಿಸಿದ್ದು, ಸೆರಗಿನ ಮೇಲಿನ ಫ್ರೇಮಿಂಗ್ ಅನ್ನು ಸುಚಾ ಜರ್ದೋಜ್‌ನಲ್ಲಿ ರಚಿಸಲಾಗಿದೆ. ಮತ್ತು ಕೈ ಕಸೂತಿ ಡೋರಿಯಾ ಕೂಡ ಎಲ್ಲರ ಕಣ್ಮನ ಸೆಳೆಯುವಂತಿದೆ.

ಬ್ರಾಂಡ್ ಪ್ರಕಾರ, ಇದರೊಂದಿಗೆ ಬರುವ ರವಿಕೆಯು ಸಾಂಪ್ರದಾಯಿಕ ರಜಪೂತಾನಾ ಚನಿಯಾ ಚೋಲಿಯಿಂದ ಸ್ಫೂರ್ತಿ ಪಡೆದಿದೆ. ಆದರೆ ಸುಚಾ ಜರ್ದೋಜ್ ಮತ್ತು ಶುದ್ಧ ಮೋಟಿಯಾ ಕೈಯಿಂದ ನೇಯ್ದ ಟ್ಯಾಸೆಲ್‌ಗಳಲ್ಲಿನ ಚಿಡಿ ವಿನ್ಯಾಸಗಳು ಸುಂದರವಾಗಿದೆ. ದೀಪಿಕಾ ಅವರು ಈ ಸೊಗಸಾದ ಸೀರೆಗೆ ಸರಿ ಹೊಂದುವಂತಹ ಆಭರಣಗಳನ್ನು ಧರಿಸಿದ್ದು, ಅವರ ನೋಟವನ್ನು ಮತ್ತಷ್ಟು ಹೆಚ್ಚಿಸಿದೆ. ಕಿವಿಯೋಲೆಗಳು ಮತ್ತು ಚೋಕರ್ ಸೇರಿದಂತೆ ಅವರು ಧರಿಸಿದ ಆಭರಣ ಆ ಸೀರೆಯ ವಿನ್ಯಾಸಗಳಿಗೆ ಸಖತ್‌ ಮ್ಯಾಚಿಂಗ್‌ ಆಗಿದೆ.

ಭದ್ರ ಸಂಜಲಿ ಎಂಬ ಹೆಸರಿನ ಸೀರೆಯು ತೋರಣಿ ಕ್ಲಾಸಿಕ್ಸ್‌ನ ಒಂದು ಭಾಗವಾಗಿದೆ. ಭದ್ರ ಸಂಜಲಿ ಸೀರೆಯು ಸುಂದರವಾದ ಕಸೂತಿಯಿಂದ ಅಲಂಕರಿಸಲ್ಪಟ್ಟಿದೆ. ಸಂಗೀತ ಸಮಾರಂಭದಂತಹ ಭವ್ಯವಾದ ಆಚರಣೆಗಳಿಗೆ ಇದು ಪರಿಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಸೀರೆಯ ಮೇಲಿನ ವಿನ್ಯಾಸಗಳು ಕರಣ್ ತೋರಣಿಯವರ ವಿನ್ಯಾಸಗಳ ವಿಶಿಷ್ಟ ಲಕ್ಷಣವನ್ನು ಮತ್ತು ಕುಶಲಕರ್ಮಿಗಳ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ ಎನ್ನಲಾಗಿದೆ. ಭಾರತದ ಸಂಪ್ರದಾಯದ ಸೌಂದರ್ಯವನ್ನು ಎತ್ತಿ ತೋರಿಸುವಲ್ಲಿ ಹೆಸರುವಾಸಿಯಾದ ಕರಣ್ ತೋರಣಿ ಅವರು ಭದ್ರ ಸಂಜಲಿ ಸೀರೆಯೊಂದಿಗೆ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

ಇದನ್ನೂ ಓದಿ: ಸ್ವಾಗತಿಸಲು ಖುಷಿಯಿಂದ ಕಾಯುತ್ತಿದ್ದ ಕಪ್ಪು ವರ್ಣದ ಮಹಿಳೆಗೆ ಜೋ ಬೈಡನ್ ಅವಮಾನ; ನಾಚಿಕೆಯಾಗಬೇಕು ಅಮೆರಿಕಕ್ಕೆ!

ಆದರೆ ಈ ಸೀರೆಯನ್ನು ತಯಾರು ಮಾಡಲು ಸುಮಾರು 3400 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿತು ಎನ್ನಲಾಗಿದೆ. 16ನೇ ಶತಮಾನದ ಹೈದರಾಬಾದ್‌ನ ಚೌ ಮೊಹಲ್ಲಾ ಅರಮನೆಯಿಂದ ಇದು ಸ್ಫೂರ್ತಿ ಪಡೆದಿದೆ.

Continue Reading

Latest

Viral Video: ಸ್ವಾಗತಿಸಲು ಖುಷಿಯಿಂದ ಕಾಯುತ್ತಿದ್ದ ಕಪ್ಪು ವರ್ಣದ ಮಹಿಳೆಗೆ ಜೋ ಬೈಡನ್ ಅವಮಾನ; ನಾಚಿಕೆಯಾಗಬೇಕು ಅಮೆರಿಕಕ್ಕೆ!

Viral Video: ವಿಸ್ಕಾನ್ಸಿನ್‍ನ ಮ್ಯಾಡಿಸನ್‍ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಯುಎಸ್ ಅಧ್ಯಕ್ಷ ಜೋ ಬೈಡನ್ ಜನರನ್ನು ಭೇಟಿ ಮಾಡಲು ಮುಂದಾಗಿದ್ದಾರೆ. ಆ ವೇಳೆ ಅಲ್ಲಿ ಇವರಿಗಾಗಿ ಕಾತುರದಿಂದ ಕಾಯುತ್ತಿದ್ದ ಕಪ್ಪು ವರ್ಣದ ಅಮೆರಿಕನ್ ಮಹಿಳೆಯನ್ನು ಅವರು ನಿರ್ಲಕ್ಷ್ಯ ಮಾಡಿದ್ದಾರೆ. ಡೊನಾಲ್ಡ್ ಟ್ರಂಪ್ ವಿರುದ್ಧದ ಚರ್ಚೆಯ ನಂತರ ರಿಪಬ್ಲಿಕನ್ನರು ಈ ವಿಡಿಯೊವನ್ನು ಬಳಸಿಕೊಂಡು ಇದೀಗ ಜೋ ಬೈಡನ್ ವಿರುದ್ಧ ವಾಗ್ದಾಳಿ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ವಿಡಿಯೊ ನೋಡಿದರೆ ಆ ಯುವತಿಯ ಕುರಿತು ಕನಿಕರ ಬರುತ್ತದೆ.

VISTARANEWS.COM


on

Viral Video
Koo

ಕೆಲವೊಂದು ದೇಶಗಳಲ್ಲಿ ಕಪ್ಪು ವರ್ಣದ ಜನರನ್ನು ಕಡೆಗಣಿಸುತ್ತಾರೆ. ಈ ಬಗ್ಗೆ ಅನೇಕರು ಹೋರಾಟ ನಡೆಸಿದರೂ ಕೂಡ ಕಪ್ಪು ಮತ್ತು ಬಿಳಿ ಮನುಷ್ಯರ ನಡುವಿನ ತಾರತಮ್ಯ ನಿಂತಿಲ್ಲ. ಅದರಲ್ಲೂ ಎಲ್ಲರಿಗೂ ಮಾದರಿಯಾಗಬೇಕಾಗಿದ್ದ ದೇಶದ ದೊಡ್ಡ ದೊಡ್ಡ ವ್ಯಕ್ತಿಗಳೇ ಇಂತಹ ತಾರತಮ್ಯ ಮಾಡುತ್ತಿರುವುದು ನಿಜವಾಗಲೂ ಬೇಸರದ ವಿಚಾರವೇ ಸರಿ. ಅಮೆರಿಕದಲ್ಲಂತೂ ಇಂತಹ ಘಟನೆಗಳು ಹೆಚ್ಚು ನಡೆಯುತ್ತಿರುತ್ತದೆ. ಇದೀಗ ಯುಎಸ್ ಅಧ್ಯಕ್ಷ ಜೋ ಬೈಡನ್ ಕಪ್ಪು ವರ್ಣದ ಅಮೆರಿಕನ್ ಮಹಿಳೆಯನ್ನು ನಿರ್ಲಕ್ಷಿಸಿದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್(Viral Video) ಆಗಿದೆ. ಇದು ಚರ್ಚೆಗೆ ಕಾರಣವಾಗಿದೆ.

ವಿಸ್ಕಾನ್ಸಿನ್‍ನ ಮ್ಯಾಡಿಸನ್‍ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಯುಎಸ್ ಅಧ್ಯಕ್ಷ ಜೋ ಬೈಡನ್ ಜನರನ್ನು ಭೇಟಿ ಮಾಡಲು ಮುಂದಾಗಿದ್ದಾರೆ. ಆ ವೇಳೆ ಅಲ್ಲಿ ಇವರಿಗಾಗಿ ಕಾತುರದಿಂದ ಕಾಯುತ್ತಿದ್ದ ಕಪ್ಪು ವರ್ಣದ ಅಮೆರಿಕನ್ ಮಹಿಳೆಯನ್ನು ಅವರು ನಿರ್ಲಕ್ಷ್ಯ ಮಾಡಿದ್ದಾರೆ. ಡೊನಾಲ್ಡ್ ಟ್ರಂಪ್ ವಿರುದ್ಧದ ಚರ್ಚೆಯ ನಂತರ ರಿಪಬ್ಲಿಕನ್ನರು ಈ ವಿಡಿಯೊವನ್ನು ಬಳಸಿಕೊಂಡು ಇದೀಗ ಜೋ ಬೈಡನ್ ವಿರುದ್ಧ ವಾಗ್ದಾಳಿ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಈ ವಿಡಿಯೊದಲ್ಲಿ, ಕಪ್ಪು ಅಮೆರಿಕನ್ ಯುವತಿ ಕೈಯಲ್ಲಿ ಬೈಡನ್‌-ಹ್ಯಾರಿಸ್ ಬೋರ್ಡ್‌ ಹಿಡಿದು ಬೈಡನ್ ಅವರನ್ನು ಸ್ವಾಗತಿಸಲು ಆ ಮಹಿಳೆ ಕಾಯುತ್ತಿದ್ದಳು. ಆದರೆ ಯುಎಸ್ ಅಧ್ಯಕ್ಷ ಬೈಡನ್ ಮಹಿಳೆಯನ್ನು ಕಡೆಗಣಿಸಿದ್ದಾರೆ. ಆಕೆಯ ಮೊದಲು ನಿಂತಿದ್ದ ಬಿಳಿ ವರ್ಣದ ಮಹಿಳೆಯರನ್ನು ಹಗ್ ಮಾಡಿದ ಅವರು ಆಕೆಯನ್ನು ಬಿಟ್ಟು ಆಕೆಯ ನಂತರ ನಿಂತ ಬಿಳಿ ವರ್ಣದ ಮತ್ತೊಬ್ಬ ಮಹಿಳೆಯನ್ನು ಹಗ್ ಮಾಡಿದ್ದಾರೆ. ಆಕೆಯನ್ನು ಕಣ್ಣೆತ್ತಿ ನೋಡದ ಅಧ್ಯಕ್ಷರನ್ನು ಕಂಡು ಆಕೆ ಬೇಸರಗೊಂಡಿದ್ದು ಆಕೆಯ ಮುಖದಲ್ಲಿ ಎದ್ದು ಕಾಣುತ್ತಿತ್ತು. ಈ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಕೆ ಅಧ್ಯಕ್ಷರನ್ನು ನೋಡಿದಾಗ ತುಂಬಾ ಖುಷಿಯಾಗಿದ್ದರು ಆದರೆ ಅವಳನ್ನು ಗುರುತಿಸದಿದ್ದಾಗ ನಿರಾಶೆಗೊಂಡರು ಎಂದು ಅದರಲ್ಲಿ ಬರೆಯಲಾಗಿದೆ. ಅಲ್ಲದೇ “ತನ್ನ “ಹೀರೋ ತನ್ನ ಬಣ್ಣದ ಜನರನ್ನು ಇಷ್ಟಪಡುವುದಿಲ್ಲ ಎಂದು ಅವಳು ಅರಿತುಕೊಂಡ ಕ್ಷಣ” ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಎಕ್ಸ್ ನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.

ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಬೈಡನ್ ಪ್ರಚಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನಲಾಗಿದೆ. ಯಾಕೆಂದರೆ ಬೈಡನ್ ಅವರನ್ನು ಶ್ವೇತಭವನಕ್ಕೆ ಕರೆದೊಯ್ದ ಕಪ್ಪು ವರ್ಣದ ಮತದಾರ ಬೆಂಬಲ ಕಳೆದುಕೊಳ್ಳುತ್ತಿದ್ದಾರೆ ಎಂದು ಹಲವಾರು ಸಮೀಕ್ಷೆಗಳು ತೋರಿಸಿವೆ. ಅಲ್ಲದೇ ಕೆಲವು ಕಪ್ಪು ಮತದಾರರು, ವಿಶೇಷವಾಗಿ ಯುವಕರ ಆರ್ಥಿಕತೆ ಮತ್ತು ಮತದಾರರ ಹಕ್ಕುಗಳ ಆದ್ಯತೆಗಳನ್ನು ನಿಭಾಯಿಸುವಲ್ಲಿ ಬೈಡನ್ ವಿಫಲರಾಗಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಐಷಾರಾಮಿ ಹೋಟೆಲ್‌ನಲ್ಲಿ ವಾಸ, ಫ್ಲೈಟ್‌ನಲ್ಲಿ ಓಡಾಟ; ಶ್ರೀಮಂತ ಕಳ್ಳನೀಗ ಪೊಲೀಸರ ಬಲೆಗೆ!

“ಟ್ರಂಪ್ ಇದನ್ನು ಪ್ರಚಾರದ ಜಾಹೀರಾತಾಗಿ ನಡೆಸಬೇಕು” ಎಂದು ಕೆಲವರು ಹೇಳಿದ್ದಾರೆ. ಈಗಾಗಲೇ ಜೂನ್‌ನಲ್ಲಿ ಡೆಟ್ರಾಯಿಟ್‍ನ 180 ಚರ್ಚ್‍ನಲ್ಲಿ ಸುಮಾರು 200 ಜನರನ್ನುದ್ದೇಶಿಸಿ ಮಾತನಾಡಿದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಧ್ಯಕ್ಷ ಜೋ ಬೈಡನ್ ಅವರ ಪಾತ್ರವನ್ನು ಟೀಕಿಸುವ ಮೂಲಕ ಕಪ್ಪು ಮತದಾರರನ್ನು ಆಕರ್ಷಿಸಿದರು ಎನ್ನಲಾಗಿದೆ. ಹಾಗಾಗಿ ಅಮೆರಿಕದಲ್ಲಿ ಹೆಚ್ಚಿನ ಬೆಂಬಲ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಿದೆ ಎನ್ನಲಾಗಿದೆ.

Continue Reading
Advertisement
Home remedies for Dengue
ಆರೋಗ್ಯ2 mins ago

Home remedies for Dengue: ಸರಳ ಮನೆ ಮದ್ದು ಬಳಸಿ; ಡೆಂಗ್ಯೂ ಅಪಾಯದಿಂದ ಪಾರಾಗಿ!

ಪ್ರಮುಖ ಸುದ್ದಿ3 mins ago

Menstrual Leave: ಋತುಸ್ರಾವದ ರಜೆ ಬಗ್ಗೆ ಮಾದರಿ ನೀತಿ ರೂಪಿಸಲು ಸರ್ಕಾರಕ್ಕೆ ಸುಪ್ರೀಂ ಕೋರ್ಟ್​​​ ನಿರ್ದೇಶನ

cm Siddaramaiah
ಪ್ರಮುಖ ಸುದ್ದಿ3 mins ago

CM Siddaramaiah: ರಾಜ್ಯದಲ್ಲಿ ಶೇ.80 ಬಿಪಿಎಲ್‌ ಕಾರ್ಡ್‌! ಕಡಿತ ಮಾಡಲು ಸಿಎಂ ಸೂಚನೆ

Narendra modi Russia visit
ದೇಶ5 mins ago

Narendra Modi Russia Visit: ಪ್ರಧಾನಿ ಮೋದಿ ಮೂರು ದಿನಗಳ ವಿದೇಶ ಪ್ರವಾಸ; ರಷ್ಯಾ, ಆಸ್ಟ್ರೀಯಾಕ್ಕೆ ಭೇಟಿ

ಕರ್ನಾಟಕ10 mins ago

Rain Affected areas: ಮಳೆ ಸಂತ್ರಸ್ತ ಪ್ರದೇಶಗಳಲ್ಲಿ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಿ: ಡಿಸಿಗಳಿಗೆ ಸಿಎಂ ಸೂಚನೆ

Murder Case
Latest33 mins ago

Murder Case: ಕದ್ದುಮುಚ್ಚಿ ಸರಸವಾಡುತ್ತಿದ್ದ ಮಹಿಳೆ ಸಿಕ್ಕಿಬಿದ್ದಾಗ ಗಂಡನನ್ನೇ ಕೊಂದಳು!

road Accident
ಕೊಪ್ಪಳ34 mins ago

Road Accident : ಕೊಪ್ಪಳದಲ್ಲಿ ಟಿಪ್ಪರ್‌ ಹರಿದು ಬೈಕ್‌ ಸವಾರ ಸಾವು

Abhishek Sharma
ಪ್ರಮುಖ ಸುದ್ದಿ35 mins ago

Abhishek Sharma : ಅಭಿಷೇಕ್​ ಶತಕಕ್ಕೆ ಸಹೋದರಿಯ ಚಪ್ಪಾಳೆ, ವಿಡಿಯೊ ಶೇರ್ ಮಾಡಿದ ಕೋಮಲ್​ ಶರ್ಮಾ

MUDA site scandal
ಕರ್ನಾಟಕ52 mins ago

MUDA site scandal: ಸಿಎಂ ಆಪ್ತ ರಾಕೇಶ್‌ ಪಾಪಣ್ಣಗೆ ಹಂಚಿಕೆಯಾಗಿದ್ದ ಮುಡಾ ಸೈಟ್‌ಗೂ ತಡೆ!

steel flyover bridge shivananda circle
ಪ್ರಮುಖ ಸುದ್ದಿ59 mins ago

Steel Flyover: ಬೆಂಗಳೂರಿನ ಮೊದಲ ಸ್ಟೀಲ್‌ ಫ್ಲೈಓವರ್‌ ಸೇತುವೆಯಲ್ಲಿ ಬಿರುಕು

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 hour ago

Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!

Karnataka weather Forecast
ಮಳೆ2 hours ago

Karnataka Rain : ರಕ್ಕಸ ಅಲೆಗಳ ಮಧ್ಯೆ ಈಜಲು ಹೋದ ಪ್ರವಾಸಿಗರಿಗೆ ಬಿತ್ತು ಬಿಸಿ ಬಿಸಿ ಕಜ್ಜಾಯ‌!

karnataka weather Forecast
ಮಳೆ18 hours ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

Davanagere news
ಮಳೆ21 hours ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Karnataka Rain
ಮಳೆ22 hours ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

karnataka weather Forecast
ಮಳೆ1 day ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ2 days ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ2 days ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

karnataka Rain
ಮಳೆ2 days ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

Food Poisoning
ರಾಯಚೂರು2 days ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

ಟ್ರೆಂಡಿಂಗ್‌