Girl Kidnapped: ರಿಮಾಂಡ್‌ ಹೋಮ್‌ನಿಂದಲೇ ಮಧ್ಯರಾತ್ರಿ 17 ವರ್ಷದ ಬಾಲಕಿಯ ಅಪಹರಣ! ವಿಡಿಯೊದಲ್ಲಿ ಕೃತ್ಯ ಸೆರೆ - Vistara News

Latest

Girl Kidnapped: ರಿಮಾಂಡ್‌ ಹೋಮ್‌ನಿಂದಲೇ ಮಧ್ಯರಾತ್ರಿ 17 ವರ್ಷದ ಬಾಲಕಿಯ ಅಪಹರಣ! ವಿಡಿಯೊದಲ್ಲಿ ಕೃತ್ಯ ಸೆರೆ

Girl Kidnapped: ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ 6 ಮುಸುಕುಧಾರಿಗಳು 17 ವರ್ಷದ ಬಾಲಕಿಯನ್ನು ಆಕೆ ವಾಸವಿದ್ದ ಆಶ್ರಯ ಗೃಹದಿಂದ ಮಧ್ಯರಾತ್ರಿಯ ವೇಳೆ ಅಪಹರಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ಸಿಸಿಟಿವಿ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಸೆರೆಯಾಗಿದೆ. ಮುಸುಕುಧಾರಿಗಳು ಕ್ಯಾಂಪಸ್‌ನ ಹಿಂಭಾಗದಲ್ಲಿರುವ 4 ಅಡಿ ಎತ್ತರದ ಗೋಡೆಯನ್ನು ಜಿಗಿದು, ಕೋಲನ್ನು ಬಳಸಿ ಕಿಟಕಿಯ ಮೂಲಕ ಗಾರ್ಡ್ ರೂಂನಿಂದ ಕೀಗಳನ್ನು ತೆಗೆದುಕೊಂಡು ಬಾಗಿಲು ತೆರೆದಿದ್ದಾರೆ. ಅಲ್ಲದೆ, ಅವರು ಹುಡುಗಿಯನ್ನು ಕರೆದು, ಅವಳನ್ನು ಎಬ್ಬಿಸಿ ನಂತರ ತಮ್ಮೊಂದಿಗೆ ಕರೆದೊಯ್ದಿದ್ದಾರೆ.

VISTARANEWS.COM


on

Girl Kidnapped
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo


ಬಾಲಕಿಯರ ಅಪಹರಣ, ಅತ್ಯಾಚಾರ ಪ್ರಕರಣಗಳು ದೇಶದಲ್ಲಿ ದಿನೇದಿನೇ ಹೆಚ್ಚಾಗುತ್ತಿದೆ. ಪ್ರತಿದಿನ ಒಂದಲ್ಲ ಒಂದು ಯುವತಿ ಅಥವಾ ಬಾಲಕಿ ಇಂತಹ ಪ್ರಕರಣಗಳಿಗೆ ಒಳಗಾಗುತ್ತಿದ್ದಾರೆ. ಇದೀಗ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಆಘಾತಕಾರಿ ಅಪಹರಣ ಘಟನೆಯೊಂದು ನಡೆದಿದ್ದು, 6 ಮುಸುಕುಧಾರಿಗಳು 17 ವರ್ಷದ ಬಾಲಕಿಯನ್ನು ಆಕೆಯನ್ನು ಇರಿಸಿದ್ದ ರಿಮಾಂಡ್‌ ಹೋಮ್‌ನಿಂದ ಮಧ್ಯರಾತ್ರಿಯ ವೇಳೆ ಅಪಹರಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ಸಿಸಿಟಿವಿ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ (Girl Kidnapped) ಸೆರೆಯಾಗಿದೆ.

ಈ ಘಟನೆಯಲ್ಲಿ ಆಘಾತಕಾರಿ ವಿಚಾರವೇನೆಂದರೆ ಮಹಿಳಾ ಗಾರ್ಡ್, ಇತರ ಮೂವರು ಭದ್ರತಾ ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿ ಇರುವಾಗಲೇ ಇಡೀ ಅಪಹರಣವನ್ನು ಕೇವಲ 20 ನಿಮಿಷಗಳಲ್ಲಿ ನಡೆಸಲಾಗಿದೆ. ಈ ವೇಳೆ ಸಿಬ್ಬಂದಿ ಮಲಗಿದ್ದರು ಎನ್ನಲಾಗಿದೆ. ಮಾಹಿತಿಯ ಪ್ರಕಾರ, ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮುಸುಕುಧಾರಿಗಳು ಕ್ಯಾಂಪಸ್‍ನ ಹಿಂಭಾಗದಲ್ಲಿರುವ 4 ಅಡಿ ಎತ್ತರದ ಗೋಡೆಯನ್ನು ಜಿಗಿದು, ಕೋಲನ್ನು ಬಳಸಿ ಕಿಟಕಿಯ ಮೂಲಕ ಗಾರ್ಡ್ ರೂಮ್‌ನಿಂದ ಕೀಗಳನ್ನು ತೆಗೆದುಕೊಂಡು ಬಾಗಿಲು ತೆರೆದಿದ್ದಾರೆ. ಅಲ್ಲದೆ, ಅವರು ಹುಡುಗಿಯನ್ನು ಕರೆದು, ಅವಳನ್ನು ಎಬ್ಬಿಸಿ ನಂತರ ತಮ್ಮೊಂದಿಗೆ ಕರೆದೊಯ್ದರು. ಇಡೀ ಭದ್ರತಾ ವ್ಯವಸ್ಥೆಗೆ ತಿಳಿಯದಂತೆ ಈ ಕೃತ್ಯ ಎಸಗಲಾಗಿದೆ.

ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೊದಲ್ಲಿ, ಹುಡುಗಿ ಹೊರಗೆ ಹೋಗುವಾಗ ಮುಖವಾಡ ಧರಿಸಿದ ಪುರುಷರಲ್ಲಿ ಒಬ್ಬರೊಂದಿಗೆ ಕೈ ಹಿಡಿದಿರುವುದನ್ನು ಕಾಣಬಹುದು. ಈ ಸಮಯದಲ್ಲಿ, ಕರ್ತವ್ಯದಲ್ಲಿದ್ದ ಮಹಿಳಾ ಗಾರ್ಡ್ ನಿದ್ರೆಯಲ್ಲಿದ್ದರು. ಮುಖ್ಯ ದ್ವಾರದಲ್ಲಿ ಇಬ್ಬರು ಮಹಿಳೆಯರು ಮತ್ತು ಒಬ್ಬ ಪೊಲೀಸ್ ಅಧಿಕಾರಿ ಸೇರಿದಂತೆ ಒಟ್ಟು ಮೂವರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು, ಆದರೆ ಒಳಗೆ ನಡೆಯುತ್ತಿರುವ ಘಟನೆಯ ಬಗ್ಗೆ ಇವರಿಗೆ ಗೊತ್ತೇ ಆಗಲಿಲ್ಲ.

ಹಾಗೇ ಈ ಘಟನೆಯಲ್ಲಿ ಹುಡುಗಿಯ ಗೆಳೆಯ ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅಪಹರಣಕಾರರಿಗೆ ಸ್ಥಳದ ಬಗ್ಗೆ ಪ್ರತಿಯೊಂದು ವಿವರವೂ ತಿಳಿದಿರುವಂತೆ ತೋರಿದ್ದರಿಂದ ಇಡೀ ಘಟನೆಯನ್ನು ಪ್ಲ್ಯಾನ್ ಮಾಡಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿ ಈ ಹಿಂದೆ ಎರಡು ಬಾರಿ ಓಡಿಹೋಗಲು ಪ್ರಯತ್ನಿಸಿದ್ದಳು. ಆಕೆ ಈ ಹಿಂದೆ, ತಾಟಿಪುರ ಪ್ರದೇಶದಿಂದ ಕಾಣೆಯಾಗಿದ್ದಳು ಮತ್ತು ಈ ಬಗ್ಗೆ ಅವಳ ಗೆಳೆಯನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ:ಹೆಂಡತಿಗೆ ಹೆದರಿಸಲು ಹೋಗಿ ಜೀವ ಕಳೆದುಕೊಂಡ ಲೋಕೋ ಪೈಲಟ್‍!

ನಂತರ ಬಾಲಕಿಯನ್ನು ಪೊಲೀಸರು ಹುಡುಕಿ ಜೂನ್ 7 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಅವಳು ತನ್ನ ಹೆತ್ತವರೊಂದಿಗೆ ಹೋಗಲು ನಿರಾಕರಿಸಿದಕ್ಕೆ, ನಂತರ ನ್ಯಾಯಾಲಯವು ಅವಳನ್ನು ಬಾಲಕಿಯರ ಆಶ್ರಮಕ್ಕೆ ಕಳುಹಿಸಿತ್ತು. ಅವಳು ಈ ಹಿಂದೆ ಮನೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಳು. ಆದ್ದರಿಂದ ಅವಳನ್ನು ಮನೆಯವರು ಕೋಣೆಯಲ್ಲಿ ಕೂಡಿಹಾಕಿದ್ದರು ಎಂಬುದಾಗಿ ತಿಳಿದುಬಂದಿದೆ. ಈಗ, ಬಾಲಕಿಯ ಆಶ್ರಮದಲ್ಲಿ ಯಾರಾದರೂ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral Video: ಸ್ಕೂಟರ್‌ಗೆ ಅಪ್ಪಳಿಸಿದ ಕಾರು; 10 ಅಡಿ ಮೇಲಕ್ಕೆ ಹಾರಿ ಬಿದ್ದ ತಾಯಿ, ಮಗ

ಉತ್ತರ ಪ್ರದೇಶದ ಗಾಜಿಯಾಬಾದ್‌ನ ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇಯ ಮೆಹ್ರಾಲಿ ಅಂಡರ್‌ಪಾಸ್ ಬಳಿ ಶನಿವಾರ ರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, ತಾಯಿ ಮಗ ಸಾವನ್ನಪ್ಪಿದ್ದಾರೆ. ಇದರ ವಿಡಿಯೋ (Viral Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಕ್ಸ್ ಪ್ರೆಸ್ ವೇಯಲ್ಲಿ ನಡೆದ ಭಯಾನಕ ಅಪಘಾತದ ದೃಶ್ಯಗಳು ಇದರಲ್ಲಿ ಸೆರೆಯಾಗಿದೆ.

VISTARANEWS.COM


on

By

Viral Video
Koo

ಕಾರು ಮತ್ತು ಸ್ಕೂಟರ್ ಡಿಕ್ಕಿಯಾದ (car and Scooter accident) ಪರಿಣಾಮ ತಾಯಿ ಮಗ ಸಾವನ್ನಪ್ಪಿರುವ ದುರಂತ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನ ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇಯಲ್ಲಿ (Delhi-Meerut Expressway) ನಡೆದಿದೆ. ಇದರ ಭೀಕರ ವಿಡಿಯೋ (Viral Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಹರಿದ್ವಾರದ ಗಂಗಾ ನದಿಯಲ್ಲಿ ಸ್ನಾನ ಮುಗಿಸಿ ದೆಹಲಿಗೆ ಸ್ಕೂಟರ್ ನಲ್ಲಿ ತಾಯಿ ಮಗ ಹಿಂದಿರುಗುತ್ತಿದ್ದರು. ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇಯಲ್ಲಿ ನಡೆದಿರುವ ಭೀಕರ ಅಪಘಾತವನ್ನು ತೋರಿಸುವ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾದ ಇದರ ವಿಡಿಯೋದಲ್ಲಿ ವಿರುದ್ಧ ದಿಕ್ಕಿನಿಂದ ಬಂದ ಕಾರು ಸ್ಕೂಟರ್‌ಗೆ ಡಿಕ್ಕಿಯಾದ ನಿಖರವಾದ ಕ್ಷಣವನ್ನು ತೋರಿಸಿದೆ. ಡಿಕ್ಕಿಯ ಪರಿಣಾಮ ಎಷ್ಟು ತೀವ್ರವಾಗಿತ್ತೆಂದರೆ ಸ್ಕೂಟರ್‌ ನಲ್ಲಿ ಕುಳಿತಿದ್ದ ಮಹಿಳೆ ಗಾಳಿಯಲ್ಲಿ 10 ಅಡಿ ಎತ್ತರಕ್ಕೆ ಹಾರಿ, ರಸ್ತೆಯ ಮೇಲೆ ಬಿದ್ದಿದ್ದಾರೆ.


ಶನಿವಾರ ರಾತ್ರಿ ಗಾಜಿಯಾಬಾದ್‌ನ ಮೆಹ್ರಾಲಿ ಅಂಡರ್‌ಪಾಸ್ ಬಳಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದು, ಗಾಯಗೊಂಡ ಸ್ಕೂಟರ್ ಸವಾರರನ್ನು ತಕ್ಷಣವೇ ಹತ್ತಿರದ ಮಣಿಪಾಲ್ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು.

ಇದನ್ನೂ ಓದಿ: Viral News: ಮಕ್ಕಳ ಹಸಿವು ನೀಗಿಸಲು ಸೈನಿಕರೆದುರು ಬೆತ್ತಲಾಗುತ್ತಿರುವ ಮಹಿಳೆಯರು!

ಮೃತರನ್ನು 20 ವರ್ಷದ ಯಶ್ ಗೌತಮ್ ಮತ್ತು ಆತನ 40 ವರ್ಷದ ತಾಯಿ ಮಂಜು ದೇವಿ ಎಂದು ಗುರುತಿಸಲಾಗಿದೆ. ಇಬ್ಬರೂ ದೆಹಲಿಯ ಪಶ್ಚಿಮ ವಿನೋದ್ ನಗರದ ನಿವಾಸಿಗಳಾಗಿದ್ದರು.

ಘಟನೆಯ ವೇಳೆ ಯಶ್ ಹೆಲ್ಮೆಟ್ ಧರಿಸಿದ್ದು, ಅವರ ತಾಯಿ ಹೆಲ್ಮೆಟ್ ಧರಿಸಿರಲಿಲ್ಲ. ಇದಲ್ಲದೆ ಎಕ್ಸ್‌ಪ್ರೆಸ್‌ವೇಯಲ್ಲಿ ದ್ವಿಚಕ್ರ ವಾಹನಗಳನ್ನು ಓಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

Continue Reading

ವೈರಲ್ ನ್ಯೂಸ್

Viral Video: ಹುಟ್ಟುವಾಗಲೇ 32 ಹಲ್ಲುಗಳೊಂದಿಗೆ ಜನಿಸಿದ ಮಗು! ಹೀಗೇಕಾಯಿತು?

ಮಹಿಳೆಯೊಬ್ಬರು ತನ್ನ ನವಜಾತ ಮಗಳು ಹಲ್ಲುಗಳನ್ನು ಹೊಂದಿರುವ ವಿಡಿಯೋವನ್ನು (Viral Video) ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಇದು ಭಾರಿ ವೈರಲ್ ಆಗಿದೆ. ಸಾಕಷ್ಟು ಮಂದಿಯ ಗಮನ ಸೆಳೆದಿದೆ. ಈ ಕುರಿತು ಬರೆದಿರುವ ಮಹಿಳೆ, ತನ್ನ ಮಗಳು ಅಪರೂಪದ ಕಾಯಿಲೆಯನ್ನು ಜನಿಸುವಾಗಲೇ ಹೊಂದಿದ್ದಳು. ಅವಳು 32 ಹಲ್ಲುಗಳೊಂದಿಗೆ ಜನಿಸಿದ್ದಾಳೆ ಎಂದು ಅಚ್ಚರಿಯ ಫೋಟೊ ಪೋಸ್ಟ್‌ ಮಾಡಿದ್ದಾಳೆ.

VISTARANEWS.COM


on

By

Viral Video
Koo

ಸಾಮಾನ್ಯವಾಗಿ ಮಗು ಹುಟ್ಟಿದ 7- 8 ತಿಂಗಳ ಬಳಿಕ ಹಲ್ಲು ಬರುತ್ತದೆ. ಆದರೆ ಇಲ್ಲೊಂದು ಮಗು ಹುಟ್ಟುತ್ತಲೇ ಬಾಯಿ ತುಂಬಾ ಹಲ್ಲನ್ನು (Baby Born With Teeth) ಹೊಂದಿದ್ದು, ಈ ಕುರಿತು ಅಚ್ಚರಿಯನ್ನು ವ್ಯಕ್ತಪಡಿಸಿ ತಾಯಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ (Viral Video) ಹಂಚಿಕೊಂಡಿದ್ದಾಳೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇನ್‌ಸ್ಟಾ ಗ್ರಾಮ್‌ನಲ್ಲಿ 29.7 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.

ಸಾಮಾನ್ಯವಾಗಿ ಮಕ್ಕಳು ಹಲ್ಲಿಲ್ಲದೆ ಹುಟ್ಟುತ್ತವೆ. ಮಗು ಬೆಳೆದಾಗ, ಅವರ ಹಾಲು ಹಲ್ಲುಗಳು ಬೆಳೆಯಲು ಪ್ರಾರಂಭಿಸುತ್ತವೆ. ಕ್ರಮೇಣ ಹಾಲು ಹಲ್ಲು ಕಳೆದುಕೊಂಡು ʼಬುದ್ಧಿವಂತಿಕೆಯ ಹಲ್ಲುʼಗಳನ್ನು ಒಳಗೊಂಡಂತೆ ಸರಾಸರಿ 32 ಶಾಶ್ವತ ಹಲ್ಲುಗಳು ಬರುತ್ತವೆ. 21ನೇ ವಯಸ್ಸಿನವರೆಗೂ ಹಲ್ಲಿನ ಬೆಳವಣಿಗೆಯಾಗುತ್ತದೆ.

ಹಲ್ಲುಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ವಿವಿಧ ಅಂಶಗಳಿವೆ. ಇವುಗಳು ಸರಿಯಾದ ಪೋಷಣೆಯನ್ನು ಒಳಗೊಂಡಿವೆ. ಆದರೆ ಇಲ್ಲೊಂದು ಹುಟ್ಟಿದ ಮಗುವಿಗೆ 32 ಹಲ್ಲುಗಳಿದ್ದ ಅಚ್ಚರಿಯ ಘಟನೆ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಮಹಿಳೆಯೊಬ್ಬರು ತನ್ನ ಮಗಳು 32 ಹಲ್ಲುಗಳನ್ನು ಹೊಂದಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಇದು ಸಾಕಷ್ಟು ಮಂದಿಯ ಗಮನ ಸೆಳೆದಿದೆ.

ಈ ಕುರಿತು ಬರೆದಿರುವ ಮಹಿಳೆ, ತನ್ನ ಮಗಳು ಅಪರೂಪದ ಕಾಯಿಲೆಯಿಂದ ಜನಿಸಿದಳು. ಅವಳು 32 ಹಲ್ಲುಗಳೊಂದಿಗೆ ಜನಿಸಿದ್ದಾಳೆ ಎಂದು ಹೇಳಿಕೊಂಡಿದ್ದಾರೆ. ಈ ಕುರಿತು ಜಾಗೃತಿ ಮೂಡಿಸಲು ಸಾರ್ವಜನಿಕರೊಂದಿಗೆ ಇದನ್ನು ಹಂಚಿಕೊಳ್ಳುತ್ತಿರುವುದಾಗಿ ಮಹಿಳೆ ತಿಳಿಸಿದ್ದಾಳೆ. ವಿಡಿಯೋದಲ್ಲಿ ಮಹಿಳೆ ಸಂಪೂರ್ಣ ಹಲ್ಲುಗಳೊಂದಿಗೆ ಜನಿಸಿದ ತಮ್ಮ ಮಗಳನ್ನು ತೋರಿಸಿದ್ದಾರೆ. ಮಗಳು ಹುಟ್ಟುವಾಗಲೇ ಸಂಪೂರ್ಣ ಹಲ್ಲುಗಳನ್ನು ಹೊಂದಿದ್ದಳು ಎಂಬುದನ್ನು ಅವರು ಹೇಳಿದ್ದಾರೆ.


ಈ ಸ್ಥಿತಿಯನ್ನು ಸಾಮಾನ್ಯವಾಗಿ ಹಲ್ಲುಗಳನ್ನು ಹಾಲು ಹಲ್ಲು ಎಂದು ಕರೆಯಲಾಗುತ್ತದೆ. ಇದು ಮಗುವಿಗೆ ಹೆಚ್ಚು ಹಾನಿಕಾರಕವಲ್ಲದಿದ್ದರೂ ಇದು ತಾಯಿಗೆ ತೊಂದರೆ ಉಂಟುಮಾಡಬಹುದು. ಯಾಕೆಂದರೆ ಅವಳು ತನ್ನ ಮಗುವಿಗೆ ಆಹಾರವನ್ನು ನೀಡಲು ಕಷ್ಟವಾಗಬಹುದು. ಇದಲ್ಲದೆ ಹಲ್ಲುಗಳು ಮುರಿದರೆ ಮಗು ನುಂಗುವ ಅಪಾಯವಿದೆ.

ಇದನ್ನೂ ಓದಿ: Viral Video: ವೃದ್ಧನ ಮೊಬೈಲ್‌ ಕಸಿದು ಓಡಿದ ಯುವಕನಿಗೆ ಯಾವ ಗತಿಯಾಯಿತು ನೋಡಿ!

ಈ ವಿಡಿಯೋ ಕ್ಲಿಪ್ ಅನ್ನು ಅಪ್‌ಲೋಡ್ ಮಾಡಿದ ಅನಂತರ ಅನೇಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಮಗುವನ್ನು ನೋಡಿ ಹೆದರಿದ್ದರು.

ಬಳಕೆದಾರರಲ್ಲಿ ಒಬ್ಬರು ಹೀಗೆ ಬರೆದಿದ್ದಾರೆ, ಮಗು ಚೆನ್ನಾಗಿದೆ ಎಂದು ನಾನು ಭಾವಿಸುತ್ತೇನೆ. ಮಗು ಬೆಳೆಯುವಾಗ ನೀವು ಯಾವುದೇ ಸಮಸ್ಯೆಗಳನ್ನು ಎದುರಿಸಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬ ಬಳಕೆದಾರರು, ಕ್ಷಮಿಸಿ, ಆದರೆ ಮಗುವು ಭಯಾನಕವಾಗಿ ಕಾಣುತ್ತಿದೆ ಎಂದಿದ್ದಾರೆ.

Continue Reading

ವೈರಲ್ ನ್ಯೂಸ್

Viral News: ಮಕ್ಕಳ ಹಸಿವು ನೀಗಿಸಲು ಸೈನಿಕರೆದುರು ಬೆತ್ತಲಾಗುತ್ತಿರುವ ಮಹಿಳೆಯರು!

Viral News: ಯುದ್ಧ ಪೀಡಿತ ಸುಡಾನ್‌ನಲ್ಲಿ ಮಹಿಳೆಯರು ತಮ್ಮ ಕುಟುಂಬದವರಿಗಾಗಿ ಆಹಾರವನ್ನು ಪಡೆಯಲು ಸೈನಿಕರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಲಾಗುತ್ತಿದೆ ಎಂಬ ಸುದ್ದಿ ಈಗ ಸಂಚಲನ ಮೂಡಿಸಿದೆ. ಸುಡಾನ್ ನಗರದ ಒಮ್ದುರ್ಮನ್‌ನಿಂದ ಪಲಾಯನ ಮಾಡಿದ ಅನೇಕ ಮಹಿಳೆಯರು ತಮ್ಮ ಕುಟುಂಬದವರ ಊಟಕ್ಕಾಗಿ ಆಹಾರವನ್ನು ಪಡೆಯಲು ಮತ್ತು ಹಣವನ್ನು ಸಂಗ್ರಹಿಸಲು ಸೈನಿಕರೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದು ಬಿಟ್ಟರೆ ಬೇರೆ ದಾರಿಯಿಲ್ಲ ಎಂದು ದುಃಖ ತೋಡಿಕೊಂಡಿದ್ದಾರೆ.

VISTARANEWS.COM


on

Viral News
Koo

ಸುಡಾನ್: ಸೈನಿಕರನ್ನು ಜನರು ತಮ್ಮ ರಕ್ಷಕರೆಂದು (Viral News) ಭಾವಿಸುತ್ತಾರೆ. ಯಾಕೆಂದರೆ ಅವರು ಹಗಲಿರುಳೆನ್ನದೇ ದೇಶದ ಗಡಿಯಲ್ಲಿ ಕಾವಲು ಕಾಯುತ್ತಾ ಶತ್ರು ದೇಶದವರಿಂದ ಜನರ ಪ್ರಾಣವನ್ನು ಕಾಪಾಡುತ್ತಾರೆ. ಹಾಗಾಗಿ ಜನರು ಅವರಿಗೆ ಗೌರವವನ್ನು ನೀಡುತ್ತಾರೆ. ಆದರೆ ಅಂತಹ ಗೌರವದ ಸ್ಥಾನದಲ್ಲಿರುವ ಸೈನಿಕರು ತಮ್ಮ ಲೈಂಗಿಕ ದಾಹವನ್ನು ತೀರಿಸಿಕೊಳ್ಳಲು ದೇಶದ ಮಹಿಳೆಯರನ್ನು ಬಳಸಿಕೊಂಡರೆ? ಈ ಸುದ್ದಿ ಎಲ್ಲೆಡೆ ವೈರಲ್‌ ಆಗಿದೆ.

ಯುದ್ಧ ಪೀಡಿತ ಸುಡಾನ್‍ನಲ್ಲಿ ಜನ ಆಹಾರ ಇಲ್ಲದೆ ಬಳಲುತ್ತಿದ್ದಾರೆ. ಮಹಿಳೆಯರು ತಮ್ಮ ಕುಟುಂಬದವರಿಗಾಗಿ ಆಹಾರವನ್ನು ಪಡೆಯಲು ಸೈನಿಕರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಲಾಗುತ್ತಿದೆ ಎಂಬ ಆಘಾತಕರ ಸುದ್ದಿ ಬೆಳಕಿಗೆ ಬಂದಿದೆ. ಸುಡಾನ್ ನಗರದ ಒಮ್ದುರ್ಮನ್‍ನಿಂದ ಪಲಾಯನ ಮಾಡಿದ ಅನೇಕ ಮಹಿಳೆಯರು ತಮ್ಮ ಕುಟುಂಬದವರ ಊಟಕ್ಕಾಗಿ ಆಹಾರವನ್ನು ಪಡೆಯಲು ಮತ್ತು ಹಣವನ್ನು ಸಂಗ್ರಹಿಸಲು ಸೈನಿಕರೊಂದಿಗೆ ಲೈಂಗಿಕ ಕ್ರಿಯೆಗೆ ಒಳಗಾಗುವುದೊಂದೇ ಮಾರ್ಗವಾಗಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಮಹಿಳೆಯೊಬ್ಬರು, ತನ್ನ ಹೆತ್ತವರು ತುಂಬಾ ವಯಸ್ಸಾದವರು ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ತನಗೆ ಹೊರಗೆ ಹೋಗಿ ದುಡಿಯಲು ಆಗುತ್ತಿಲ್ಲ. ಹಾಗಾಗಿ ತಾನು ಸೈನಿಕರ ಬಳಿಗೆ ಹೋದಾಗ ಅವರ ಬಳಿ ಆಹಾರವನ್ನು ಪಡೆಯಲು ಅವರ ಜೊತೆ ಲೈಂಗಿಕ ಕ್ರಿಯೆ ನಡೆಸುವುದೊಂದೇ ಮಾರ್ಗವಾಗಿತ್ತು. ಅವರು ಕಾರ್ಖಾನೆಗಳ ಪ್ರದೇಶದಲ್ಲಿ ಎಲ್ಲೆಡೆ ಇದ್ದರು. ಹಾಗಾಗಿ ಕಳೆದ ವರ್ಷ ಮೇ ತಿಂಗಳಲ್ಲಿ ಮಾಂಸ ನೀಡುವ ಕಾರ್ಖಾನೆಯಲ್ಲಿ ಸೈನಿಕರೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯಿಸಿದರು ಎಂಬುದಾಗಿ ತಿಳಿಸಿದ್ದಾಳೆ.

ದೇಶದಲ್ಲಿ ಅಂತರ್ಯುದ್ಧ ಪ್ರಾರಂಭವಾದ ಕೂಡಲೇ ಈ ದೌರ್ಜನ್ಯ ಪ್ರಾರಂಭವಾದವು ಎಂದು ವರದಿಯಾಗಿದೆ. ಕಳೆದ ವರ್ಷ ಏಪ್ರಿಲ್ 15ರಂದು ಸಂಘರ್ಷ ಪ್ರಾರಂಭವಾದ ಕೆಲವೇ ದಿನಗಳಲ್ಲಿ ಸಶಸ್ತ್ರ ಪುರುಷರಿಂದ ಅತ್ಯಾಚಾರದ ವರದಿಗಳು ಹೊರಬಂದವು. ಸುಡಾನ್‍ನಲ್ಲಿನ ಯುದ್ಧದಲ್ಲಿ ಹತ್ತಾರು ಜನರು ಸಾವನಪ್ಪಿದ್ದರು. ಕೆಲವು ಅಂದಾಜಿನ ಪ್ರಕಾರ ಸಾವಿನ ಸಂಖ್ಯೆ 150,000ದಷ್ಟಿದೆ ಎನ್ನಲಾಗಿತ್ತು. ಈ ಯುದ್ಧದಿಂದ ಇಲ್ಲಿನ ಜನರು ಸ್ಥಳಾಂತರಗೊಳ್ಳಬೇಕಾಯಿತು. ಇದು ದೇಶವನ್ನು ಕ್ಷಾಮದ ಅಂಚಿಗೆ ತಂದಿತ್ತು.

ಇದೀಗ ತಮ್ಮ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ ಆರ್‌ಎಸ್‌ಎಫ್ ಹೋರಾಟಗಾರರು ವ್ಯವಸ್ಥಿತ ರೀತಿಯಲ್ಲಿ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ಭಯಾನಕ ಕಥೆಗಳನ್ನು ಹಂಚಿಕೊಳ್ಳಲು ಹಲವಾರು ಮಹಿಳೆಯರು ಮುಂದೆ ಬಂದಿದ್ದಾರೆ. ಸೈನಿಕರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ನಂತರ ಅವರಿಗೆ ಆಹಾರ, ಅಡುಗೆ ಉಪಕರಣಗಳು ಮತ್ತು ಸುಗಂಧ ದ್ರವ್ಯಗಳನ್ನು ನೀಡಲಾಗಿದೆ ಎಂದು ಮಹಿಳೆಯೊಬ್ಬರು ಹೇಳಿದ್ದಾರೆ. ಅಲ್ಲದೇ ಸೈನಿಕರು ಮಹಿಳೆಯರನ್ನು ಪಾಳುಬಿದ್ದ ಮನೆಗಳಿಗೆ ಕರೆತಂದು ಅಲ್ಲಿ ಅವರನ್ನು ಸರತಿ ಸಾಲಿನಲ್ಲಿ ನಿಲ್ಲುವಂತೆ ತಿಳಿಸುತ್ತಾರೆ. ಬಳಿಕ ತಮಗೆ ಇಷ್ಟ ಆದವರನ್ನು ಆಯ್ಕೆ ಮಾಡುತ್ತಾರೆ. ಲೈಂಗಿಕ ಕ್ರಿಯೆ ನಡೆಸಿ ಕಳುಹಿಸುತ್ತಾರೆ.

ಇದನ್ನೂ ಓದಿ: ವೃದ್ಧನ ಮೊಬೈಲ್‌ ಕಸಿದು ಓಡಿದ ಯುವಕನಿಗೆ ಯಾವ ಗತಿಯಾಯಿತು ನೋಡಿ!

ಇನ್ನೊಬ್ಬ ಮಹಿಳೆ ತಾನು ಸೈನಿಕನೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ ನಂತರ ಅವರು ತನಗೆ ಚಿತ್ರಹಿಂಸೆ ನೀಡಿದರು ಮತ್ತು ತನ್ನ ಕಾಲುಗಳನ್ನು ಸುಟ್ಟು ಹಾಕಿದರು ಎಂದು ಹೇಳಿದ್ದಾಳೆ.

Continue Reading

ವೈರಲ್ ನ್ಯೂಸ್

Viral News: 10 ವರ್ಷ ಪ್ರಯತ್ನಿಸಿ ಸಿಎ ಪಾಸಾದ ಚಹಾ ಮಾರುವವನ ಮಗಳು! ಭಾವುಕ ವಿಡಿಯೊ ನೋಡಿ

ದೆಹಲಿಯ ಬೀದಿಯಲ್ಲಿ ಚಹಾ ಮಾರಾಟ ಮಾಡುವವನ ಮಗಳು ಸಿಎ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಇದನ್ನು ಸಾಮಾಜಿಕ ಜಾಲತಾಣದಲ್ಲಿ ಆಕೆ ಹಂಚಿಕೊಂಡಿದ್ದಾಳೆ. ಕಷ್ಟದ ಬದುಕಿನ ಮಧ್ಯೆಯೂ ತಾನು ಸಿಎ ಪರೀಕ್ಷೆ ಬರೆಯಲು ಏನು ಕಾರಣ, ಹೇಗೆ ಪರೀಕ್ಷೆಯನ್ನು ಎದುರಿಸಬೇಕಾಯಿತು ಎಂಬುದನ್ನು ಹೇಳಿಕೊಂಡಿದ್ದಾಳೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral News) ಆಗಿದೆ.

VISTARANEWS.COM


on

By

Viral News
Koo

ನವದೆಹಲಿ: ಹತ್ತು ವರ್ಷಗಳ ಹಿಂದೆ ಮಾಡಿದ ದೃಢ ನಿರ್ಧಾರದ ಬಳಿಕ ಕಠಿಣ ಪರಿಶ್ರಮಪಟ್ಟು ಓದಿದ ಮಗಳು ಸಿಎ ಪರೀಕ್ಷೆಯಲ್ಲಿ (CA exam) ತೇರ್ಗಡೆಯಾಗಿರುವುದನ್ನು ಕೇಳಿ ದೆಹಲಿಯ ಬೀದಿಯಲ್ಲಿ ಚಹಾ ಮಾರಾಟ ಮಾಡುವ ತಂದೆಯ (Chai seller’s daughter) ಸಂತೋಷ ಕಣ್ಣೀರಾಗಿ ಹರಿದುದನ್ನು ಮಗಳು ಲಿಂಕ್ಡ್ ಇನ್ ನಲ್ಲಿ (LinkedIn) ಹಚ್ಚಿಕೊಂಡಿದ್ದಾಳೆ. ಇದು ಸಾಮಾಜಿಕ ಜಾಲತಾಣದಲ್ಲಿ (Viral News) ವೈರಲ್ ಆಗಿದೆ.

ದೆಹಲಿಯ ಅಮಿತಾ ಪ್ರಜಾಪತಿ ಸಿಎ ಪರೀಕ್ಷೆ ಪಾಸಾಗಿರುವ ವಿದ್ಯಾರ್ಥಿನಿ. ತನ್ನ ಶೈಕ್ಷಣಿಕ ಪಯಣದುದ್ದಕ್ಕೂ ತಂದೆ ಹೇಗೆ ತನಗೆ ಬೆಂಬಲವಾಗಿ ನಿಂತರು ಎಂಬುದನ್ನು ಆಕೆ ಹೇಳಿಕೊಂಡಿದ್ದಾಳೆ. ಅಮಿತಾ ಪ್ರಜಾಪತಿ ಅವರು ಪರೀಕ್ಷೆಯನ್ನು ಹೇಗೆ ಎದುರಿಸಿದರು ಎಂಬುದನ್ನು ವಿವರಿಸಿದ್ದಾರೆ. ತಂದೆಯನ್ನು ತಬ್ಬಿಕೊಂಡು ಕಣ್ಣೀರು ಈಡುತ್ತಿರುವ ಭಾವನಾತ್ಮಕ ವಿಡಿಯೋವನ್ನು ಆಕೆ ಪೋಸ್ಟ್ ಮಾಡಿದ್ದಾಳೆ.

ಇದು 10 ವರ್ಷಗಳನ್ನು ತೆಗೆದುಕೊಂಡಿತು. ಪ್ರತಿದಿನ ನನ್ನ ಕಣ್ಣುಗಳಲ್ಲಿ ಸಿಎ ಆಗುವ ಕನಸು ಇತ್ತು. ಇದು ಕೇವಲ ಕನಸೇ ಅಥವಾ ಇದು ಎಂದಾದರೂ ನನಸಾಗಬಹುದೇ ಎಂದು ನಾನು ನನ್ನನ್ನು ಕೇಳಿಕೊಳ್ಳುತ್ತೇನೆ. 2024ರ ಜುಲೈ 11ರಂದು ಅದು ನಿಜವಾಯಿತು. ಹೌದು ಕನಸುಗಳು ನನಸಾಗುತ್ತವೆ. ಜನರು ಹೇಳುತ್ತಿದ್ದರು, ನೀವು ಅವಳನ್ನು ಏಕೆ ಇಷ್ಟು ದೊಡ್ಡ ಕೋರ್ಸ್‌ಗೆ ಸೇರಿಸುತ್ತಿದ್ದೀರಿ, ನಿಮ್ಮ ಮಗಳು ಇದನ್ನು ಮಾಡಲು ಸಾಧ್ಯವಾಗುವುದಿಲ್ಲ ಎಂದು ತಂದೆಗೆ ಹೇಳುತ್ತಿದ್ದರು ಎಂದು ಅಮಿತಾ ಪ್ರಜಾಪತಿ ಹೇಳಿದರು.

ಚಹಾ ಮಾರಾಟ ಮಾಡುವ ಮೂಲಕ ತಂದೆ ಹಣವನ್ನು ಉಳಿಸಿ ಮನೆಯನ್ನು ನಿರ್ಮಿಸುವ ಕನಸು ಕಾಣುತ್ತಿದ್ದರು. ಇದರಿಂದ ಮಗಳಿಗೆ ಶಿಕ್ಷಣ ನೀಡಲು ಸಾಧ್ಯವಿಲ್ಲ ಎಂದು ಅವರು ಹೇಳುತ್ತಿದ್ದರು. ಬೆಳೆದ ಹೆಣ್ಣು ಮಕ್ಕಳೊಂದಿಗೆ ನೀವು ಎಷ್ಟು ದಿನ ಬೀದಿಯಲ್ಲಿ ವಾಸಿಸುತ್ತೀರಿ ಎಂದು ಜನ ಪ್ರಶ್ನಿಸುತ್ತಿದ್ದರು. ಅವರು ಹೇಗಿದ್ದರೂ ಬೇರೆಯವರ ಸಂಪತ್ತು. ಒಂದು ದಿನ ಬಿಟ್ಟು ಹೋಗುತ್ತಾರೆ ಮತ್ತು ನಿಮಗೆ ಏನೂ ಉಳಿಯುವುದಿಲ್ಲ ಎನ್ನುತ್ತಿದ್ದರು ಎನ್ನುತ್ತಾರೆ ಅಮಿತಾ.

ತಂದೆಯೊಂದಿಗೆ ನಾನು ಕೊಳೆಗೇರಿಯಲ್ಲಿ ವಾಸಿಸುತ್ತಿದ್ದೇನೆ. ಇದು ಕೆಲವೇ ಜನರಿಗೆ ತಿಳಿದಿದೆ. ಆದರೆ ಈಗ ನಾನು ಇದಕ್ಕೆ ನಾಚಿಕೆಪಡುತ್ತಿಲ್ಲ. ಕೆಲವರು ಸ್ಲಂ ನಿವಾಸಿಗಳು, ಹುಚ್ಚು ಮನಸ್ಸಿನವರು ಎಂದು ಹೇಳುತ್ತಿದ್ದರು. ನಿಜ, ಅದು ಸಂಪೂರ್ಣವಾಗಿ ಸರಿ. ನನ್ನ ಮನಸ್ಸು ಹುಚ್ಚ ಆಗಿಲ್ಲದಿದ್ದರೆ ನಾನು ಇಂದು ಇಲ್ಲಿಗೆ ಬರುತ್ತಿರಲಿಲ್ಲ. ಈಗ, ನನ್ನ ತಂದೆಗೆ ಮನೆ ನಿರ್ಮಿಸಲು ನಾನು ಸಾಕಷ್ಟು ಸಮರ್ಥಳಾಗಿದ್ದೇನೆ. ನಾನು ಅವರ ಎಲ್ಲಾ ಆಸೆಗಳನ್ನು ಪೂರೈಸಬಲ್ಲೆ. ಮೊದಲ ಬಾರಿಗೆ, ನಾನು ನನ್ನ ತಂದೆಯನ್ನು ಅಪ್ಪಿಕೊಂಡು ಅಳುತ್ತಿದ್ದೆ. ಇದು ಶಾಂತಿ. ನಾನು ಈ ಕ್ಷಣಕ್ಕಾಗಿ ಬಹಳ ಸಮಯ ಕಾಯುತ್ತಿದ್ದೆ, ತೆರೆದ ಕಣ್ಣುಗಳಿಂದ ಈ ಕನಸನ್ನು ಕಲ್ಪಿಸಿಕೊಂಡಿದ್ದೇನೆ ಮತ್ತು ಇಂದು ಅದು ವಾಸ್ತವದಲ್ಲಿ ಸೆರೆಹಿಡಿಯಲ್ಪಟ್ಟಿದೆ ಎಂದು ಭಾವುಕರಾಗುತ್ತಾರೆ ಅಮಿತಾ.


ಇದು ಎಂದಿಗೂ ತಡವಾಗಿಲ್ಲ ಎಂದು ನಾನು ಎಲ್ಲರಿಗೂ ಹೇಳಲು ಬಯಸುತ್ತೇನೆ ಮತ್ತು ನಮ್ಮ ಕನಸುಗಳು ನಿಜವಾಗುತ್ತವೆ. ಇಂದು ನಾನು ಏನಾಗಿದ್ದರೂ ನನ್ನ ತಂದೆ ಮತ್ತು ತಾಯಿಯಿಂದ. ಅವರು ನನ್ನನ್ನು ತುಂಬಾ ನಂಬಿದ್ದರು. ಒಂದು ದಿನ ನಾನು ಮದುವೆಯಾಗಿ ಅವರನ್ನು ಬಿಟ್ಟು ಹೋಗುತ್ತೇನೆ ಎಂದು ಎಂದಿಗೂ ಯೋಚಿಸಲಿಲ್ಲ. ಆದರೆ ತಮ್ಮ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ದೃಢ ನಿರ್ಧಾರ ಮಾಡಿದ್ದರು ಎನ್ನುತ್ತಾರೆ ಅಮಿತಾ ಪ್ರಜಾಪತಿ.

ಇದನ್ನೂ ಓದಿ: Viral Video: ಭವ್ಯ ರಥೋತ್ಸವ; ಪ್ಯಾರಿಸ್‌ ಬೀದಿಯಲ್ಲಿ ಸಾವಿರಾರು ತೆಂಗಿನ ಕಾಯಿ ಒಡೆದ ಹಿಂದೂಗಳು!

ಅವರು ಮಾಡಿರುವ ಈ ಪೋಸ್ಟ್‌ಗೆ ಹಲವಾರು ಕಮೆಂಟ್‌ಗಳು ಬಂದಿವೆ. ಇದು ಸ್ಫೂರ್ತಿದಾಯಕ! ಆಕೆಯಂತಹ ಕಥೆಗಳನ್ನು ಮೇಲಿಂದ ಕೂಗಿ ಹೇಳಬೇಕು ಮತ್ತು ಅದನ್ನು ಸಂಭ್ರಮಿಸಬೇಕು. ಭರವಸೆ ಮತ್ತು ಪರಿಶ್ರಮದ ಬೆಳಕಿನಂತೆ ಹಿಡಿದಿಟ್ಟುಕೊಳ್ಳಬೇಕು ಎಂದಿದೆ ಈ ಪೋಸ್ಟ್‌. ಮತ್ತೊಬ್ಬರು ಕಮೆಂಟ್ ಮಾಡಿ, ತಂದೆಯು ತನ್ನ ಮಗಳನ್ನು ಯಶಸ್ಸಿನ ಏಣಿಯನ್ನು ಏರುವಂತೆ ಮಾಡುವ ಅದ್ಭುತ ಭಾವುಕ ಕತೆ ಎಂದು ಪ್ರತಿಕ್ರಿಯಿಸಿದ್ದಾರೆ.

Continue Reading
Advertisement
Chaluvadi Narayanaswamy
ಕರ್ನಾಟಕ49 mins ago

Chaluvadi Narayanaswamy : ಛಲವಾದಿ ನಾರಾಯಣಸ್ವಾಮಿ ವಿಧಾನ ಪರಿಷತ್​​ನ ಪ್ರತಿಪಕ್ಷದ ನಾಯಕ

NEET
ಕರ್ನಾಟಕ1 hour ago

NEET: ನೀಟ್‌ ಪರೀಕ್ಷೆಗೆ ವಿರೋಧ, ಬೆಂಗಳೂರು ವಿಭಜನೆಗೆ ಅಸ್ತು; ರಾಜ್ಯ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

DK Shivakumar
ಕರ್ನಾಟಕ1 hour ago

DK Shivakumar: ರೈತನಿಗೆ ಪ್ರವೇಶ ನಿರ್ಬಂಧ ಖಂಡನೀಯ; ಮಾಲ್ ಸೇರಿ ಇತರೆಡೆ ಶೀಘ್ರ ವಸ್ತ್ರ ಸಂಹಿತೆ ಜಾರಿ ಎಂದ ಡಿಕೆಶಿ

Veerabaswanthreddy Mudnal
ಶ್ರದ್ಧಾಂಜಲಿ2 hours ago

Veerabaswanthreddy Mudnal: ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳ ಅನಾರೋಗ್ಯದಿಂದ ನಿಧನ

Rahat Fateh Ali Khan
ವಿದೇಶ2 hours ago

Rahat Fateh Ali Khan: ದುಬೈನಲ್ಲಿ ಪಾಕಿಸ್ತಾನದ ಗಾಯಕನ ಬಂಧನ; ಎಸಗಿದ ಕೃತ್ಯವೇನು?

Valmiki Corporation Scam
ಕರ್ನಾಟಕ2 hours ago

Valmiki Corporation Scam: ಬಿ. ನಾಗೇಂದ್ರ ಹೆಸರೇಳುವಂತೆ ಒತ್ತಡ; ಇಡಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

Tata Curvv
ಆಟೋಮೊಬೈಲ್2 hours ago

Tata Curvv : ಎಸ್​ಯುವಿ ವಿಭಾಗದಲ್ಲಿ ವಿಭಿನ್ನ ವಿನ್ಯಾಸದ ಕಾರನ್ನು ಪರಿಚಯಿಸಿದ ಮಾಡಿದ ಟಾಟಾ

Kempambudi lake encroachment cleared soon says DCM DK Shivakumar
ಕರ್ನಾಟಕ2 hours ago

Assembly Session 2024: ಕೆಂಪಾಂಬುದಿ ಕೆರೆ ಒತ್ತುವರಿ ಶೀಘ್ರ ತೆರವು; ಡಿ.ಕೆ.ಶಿವಕುಮಾರ್

Viral Video
ವೈರಲ್ ನ್ಯೂಸ್2 hours ago

Viral Video: ಸ್ಕೂಟರ್‌ಗೆ ಅಪ್ಪಳಿಸಿದ ಕಾರು; 10 ಅಡಿ ಮೇಲಕ್ಕೆ ಹಾರಿ ಬಿದ್ದ ತಾಯಿ, ಮಗ

TA Sharavana questioned about the continuous variation in the service of 108 Ambulance even after 7 years there is no new tender
ಬೆಂಗಳೂರು2 hours ago

TA Sharavana: 108 ಆಂಬ್ಯುಲೆನ್ಸ್‌ಗೆ 7 ವರ್ಷ ಕಳೆದರೂ ಹೊಸ ಟೆಂಡರ್‌ ಇಲ್ಲ ಯಾಕೆ? ಟಿ. ಎ. ಶರವಣ ಪ್ರಶ್ನೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ2 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ3 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ3 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ4 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ4 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ6 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ1 week ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ1 week ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

ಟ್ರೆಂಡಿಂಗ್‌