Hit and Run Case: ವೇಗವಾಗಿ ಬಂದ ಟ್ರಕ್‌ ಬೈಕ್‌ಗಳ ಮೇಲೆ ಪಲ್ಟಿ; ಪವಾಡಸದೃಶ ಪಾರು! ವಿಡಿಯೊ ನೋಡಿ - Vistara News

Latest

Hit and Run Case: ವೇಗವಾಗಿ ಬಂದ ಟ್ರಕ್‌ ಬೈಕ್‌ಗಳ ಮೇಲೆ ಪಲ್ಟಿ; ಪವಾಡಸದೃಶ ಪಾರು! ವಿಡಿಯೊ ನೋಡಿ

Hit and Run Case: ಗುಜರಾತ್‌ನ ವಡೋದರ ನಗರದಲ್ಲಿ ವೇಗವಾಗಿ ಬರುತ್ತಿದ್ದ ಅಗ್ನಿಶಾಮಕ ದಳದ ಟ್ರಕ್ ಪಲ್ಟಿಯಾಗಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಅದೃಷ್ಟವಶಾತ್ ಎಲ್ಲರೂ ಪ್ರಾಣಪಾಯದಿಂದ ಪಾರಾಗಿದ್ದಾರೆ. ಟ್ರಕ್ ಚಾಲಕ ಅತೀಯಾದ ವೇಗದಲ್ಲಿ ಇದ್ದ ಕಾರಣ ಈ ಅಪಘಾತ ನಡೆಯಿತು. ವೇಗವನ್ನು ನಿಯಂತ್ರಿಸಲು ಸಾಧ್ಯವಾಗದಿದ್ದಾಗ ಟ್ರಕ್ ಪಲ್ಟಿಯಾಗಿ ಅಲ್ಲಿ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ.

VISTARANEWS.COM


on

Hit and Run Case
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo


ಗುಜರಾತ್‌ನ ವಡೋದರ ನಗರದಲ್ಲಿ ವೇಗವಾಗಿ ಬರುತ್ತಿದ್ದ ಅಗ್ನಿಶಾಮಕ ದಳದ ಟ್ರಕ್ ಪಲ್ಟಿಯಾಗಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಟ್ರಕ್‌ನ ಚಾಲಕ ಪರಾರಿ (Hit and Run Case)ಯಾಗಿದ್ದಾನೆ. ವಡೋದರಾದ ದಭೋಯ್ ರಸ್ತೆಯಲ್ಲಿ ಜುಲೈ 19ರಂದು ಈ ಅಪಘಾತ ಸಂಭವಿಸಿದೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಗ್ನಿಶಾಮಕ ದಳದ ಚಾಲಕ ಮತ್ತು ಸಬ್ ಆಫೀಸರ್ ಬೆಂಕಿಯ ಅಪಘಾತದ ಬಗ್ಗೆ ಮಾಹಿತಿ ಪಡೆದು ನಂತರ ಗಜ್ರವಾಡಿಯಿಂದ ಹೊರಟಿದ್ದರು. ದಭೋಯ್ ರಸ್ತೆಯ ಗಣೇಶನಗರದ ಬಳಿ ಚಾಲಕ ತಿರುವು ತೆಗೆದುಕೊಂಡಾಗ ಈ ಅಪಘಾತ ಸಂಭವಿಸಿದೆ. ಅತಿಯಾದ ವೇಗದಲ್ಲಿದ್ದ ಕಾರಣ ಟ್ರಕ್‌ನ ವೇಗವನ್ನು ನಿಯಂತ್ರಿಸಲು ಸಾಧ್ಯವಾಗದಿದ್ದಾಗ ಟ್ರಕ್ ಪಲ್ಟಿಯಾಗಿ ಅಲ್ಲಿ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಘಟನೆ ನಡೆದ ಕೂಡಲೇ ಟ್ರಕ್‌ನ ಚಾಲಕ ಕೃಷ್ಣ ಪಟೇಲ್ ಅಪಘಾತದ ಸ್ಥಳದಿಂದ ಪರಾರಿಯಾಗಿದ್ದಾನೆ. ಆದರೆ ಬೈಕ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂಬುದಾಗಿ ತಿಳಿದುಬಂದಿದೆ. ಘಟನೆ ನಡೆದ ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

ಇದೇರೀತಿಯ ಅಪಘಾತದ ಘಟನೆ ಮೇ 29ರಂದು ನಡೆದಿತ್ತು. ವಡೋದರಾ-ಹಲೋಲ್ ಹೆದ್ದಾರಿಯಲ್ಲಿ ಬೊಲೆರೊ ಪಿಕಪ್ ವ್ಯಾನ್ ಪಲ್ಟಿಯಾಗಿ ಕೊತಂಬಿ ಗ್ರಾಮದ ಬಳಿ ಕಾಲುವೆಗೆ ಬಿದ್ದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದು, 15 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದರು. ಬೊಲೆರೊ ಚಾಲಕ ಸ್ಟೀರಿಂಗ್ ಮೇಲೆ ನಿಯಂತ್ರಣ ಕಳೆದುಕೊಂಡ ಪರಿಣಾಮ ಕಾರು ಕ್ರಿಕೆಟ್ ಕ್ರೀಡಾಂಗಣದ ಬಳಿ ಪಲ್ಟಿಯಾಗಿದೆ.

ಇದನ್ನೂ ಓದಿ: ಬಸ್‌ ಡ್ರೈವರ್‌ನ ರೀಲ್ಸ್‌ ಕ್ರೇಜ್‌ಗೆ 2 ಎತ್ತುಗಳು ಬಲಿ; ರೈತನ ಸ್ಥಿತಿ ಗಂಭೀರ

ಜರೋಡ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಕೃಪಾಲ್ಸಿನ್ಹ್ ಝಾಲಾ, ಈ ದುರಂತದಲ್ಲಿ ಇಬ್ಬರು ಮಕ್ಕಳು ಮತ್ತು ಇಬ್ಬರು ಪುರುಷರು ಸಾವನ್ನಪ್ಪಿದ್ದಾರೆ. ನಾವು ಸ್ಥಳಕ್ಕೆ ತಲುಪಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವೆ. ಸಮಸ್ಯೆಯ ಬಗ್ಗೆ ತನಿಖೆಯನ್ನು ಪ್ರಾರಂಭಿಸಿರುವುದಾಗಿ ತಿಳಿಸಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Tollywood Films: ಹಾಲಿವುಡ್‌ಗೆ ಸೆಡ್ಡು ಹೊಡೆದ ಟಾಲಿವುಡ್‌ನ 4 ಪೌರಾಣಿಕ ಕಥೆಯ ಸಿನೆಮಾಗಳಿವು

ಭಾರತೀಯರು ಹೆಚ್ಚಾಗಿ ಪೌರಾಣಿಕ ಪರಿಕಲ್ಪನೆಗಳನ್ನು ಹೊಂದಿರುವ ಸಿನಿಮಾಗಳನ್ನು ಇಷ್ಟಪಡುತ್ತಾರೆ. ಯಾಕೆಂದರೆ ಅದು ಅವರಿಗೆ ತಮ್ಮ ಹಿರಿಯರ, ತಾವು ಬೆಳೆದು ಬಂದ ದಾರಿಯ ನೆನಪು ಮಾಡಿಕೊಡುತ್ತದೆ. ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾದ ಕೆಲವು ಟಾಲಿವುಡ್ ಪೌರಾಣಿಕ ಕಥಾ ಹಂದರವನ್ನು ಒಳಗೊಂಡ ಚಿತ್ರಗಳ (Tollywood Films) ಕುರಿತು ಮಾಹಿತಿ ಇಲ್ಲಿದೆ. ನಿಮಗೆ ಅವಕಾಶ ಸಿಕ್ಕಾಗ ನೋಡುವುದನ್ನು ಮಿಸ್ ಮಾಡಿಕೊಳ್ಳಬೇಡಿ.

VISTARANEWS.COM


on

By

Tollywood Films
Koo

ತೆಲುಗು ಚಿತ್ರರಂಗದಲ್ಲಿ (Tollywood Films) ಪೌರಾಣಿಕ ಕಥೆಗಳು (mythological concepts) ತನ್ನದೇ ಆದ ಪ್ರೇಕ್ಷಕ ಬಳಗವನ್ನು ಹೊಂದಿವೆ. ಕೆಲವರಿಗೆ ಥ್ರಿಲರ್, ಇನ್ನು ಕೆಲವರಿಗೆ ಆಕ್ಷ್ಯನ್ ಮತ್ತೆ ಕೆಲವರಿಗೆ ರೋಮ್ಯಾಂಟಿಕ್, ಹಾಸ್ಯ ಚಿತ್ರಗಳು ಇಷ್ಟವಾಗುತ್ತವೆ. ಇವೆಲ್ಲದರ ಸಮ್ಮಿಶ್ರಣದೊಂದಿಗೆ ಮೂಡಿ ಬರುವ ಪೌರಾಣಿಕ ಕಥೆಗಳನ್ನು ಬಹುತೇಕ ಪ್ರೇಕ್ಷಕ ವರ್ಗ ಇಷ್ಟ ಪಡುತ್ತದೆ ಎಂಬುದನ್ನು ಇತ್ತೀಚೆಗೆ ತೆರೆ ಕಂಡಿರುವ ಹಲವು ಚಿತ್ರಗಳು ಸಾಬೀತುಪಡಿಸಿದೆ.

ಭಾರತೀಯರು ಹೆಚ್ಚಾಗಿ ಪೌರಾಣಿಕ ಪರಿಕಲ್ಪನೆಗಳನ್ನು ಹೊಂದಿರುವ ಸಿನಿಮಾಗಳನ್ನು ಇಷ್ಟಪಡುತ್ತಾರೆ. ಯಾಕೆಂದರೆ ಅದು ಅವರಿಗೆ ತಮ್ಮ ಹಿರಿಯರ, ತಾವು ಬೆಳೆದು ಬಂದ ದಾರಿಯ ನೆನಪು ಮಾಡಿಕೊಡುತ್ತದೆ. ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾದ ಕೆಲವು ಟಾಲಿವುಡ್ ಪೌರಾಣಿಕ ಕಥಾ ಹಂದರವನ್ನು ಒಳಗೊಂಡ ಚಿತ್ರಗಳ ಕುರಿತು ಮಾಹಿತಿ ಇಲ್ಲಿದೆ. ನಿಮಗೆ ಅವಕಾಶ ಸಿಕ್ಕಾಗ ನೋಡುವುದನ್ನು ಮಿಸ್ ಮಾಡಿಕೊಳ್ಳಬೇಡಿ.


ಕಲ್ಕಿ 2898ಎಡಿ

ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದ ಪ್ರಭಾಸ್ ಅಭಿನಯದ ಚಿತ್ರ ಕಳೆದ ತಿಂಗಳು ಬಿಡುಗಡೆಯಾಗಿತ್ತು. ಗಲ್ಲಾಪೆಟ್ಟಿಗೆಯ ಕಲೆಕ್ಷನ್‌ಗಳನ್ನು ಗಮನಿಸಿದರೆ ಚಿತ್ರವು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಯಿತು. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಮತ್ತು ದಿಶಾ ಪಟಾನಿ ಗಮನಾರ್ಹ ಪಾತ್ರಗಳ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.


ಹನುಮಾನ್

ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಹನುಮಾನ್ ಈ ವರ್ಷದ ಅತಿದೊಡ್ಡ ಭಾರತೀಯ ಚಲನಚಿತ್ರಗಳಲ್ಲಿ ಒಂದಾಗಿದೆ. ಚಿತ್ರದಲ್ಲಿ ತೇಜ ಸಜ್ಜ, ಅಮೃತಾ ಅಯ್ಯರ್, ವರಲಕ್ಷ್ಮಿ ಶರತ್‌ಕುಮಾರ್, ಸಮುದ್ರಕಣಿ, ವಿನಯ್ ರೈ ಮತ್ತು ವೆನ್ನೆಲ ಕಿಶೋರ್ ನಟಿಸಿದ್ದಾರೆ. ಪ್ರಶಾಂತ್ ವರ್ಮಾ ಅವರ ನಿರ್ದೇಶನದಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಭಗವಾನ್ ಹನುಮಾನ್ ಕಥೆಯಿಂದ ಪ್ರೇರಿತವಾಗಿದೆ.


ಅಖಂಡ 2

2021ರ ಸೂಪರ್‌ಹಿಟ್ ಅಖಂಡದ ಮುಂದುವರಿದ ಭಾಗ ಅಖಂಡ 2ನಲ್ಲಿ ನಂದಮೂರಿ ಬಾಲಕೃಷ್ಣ ನಾಯಕನಾಗಿ ನಟಿಸಿದ್ದಾರೆ. ಇನ್ನೂ ಬಿಡುಗಡೆಯಾಗಬೇಕಿರುವ ಈ ಚಿತ್ರವನ್ನು ಅನಿಲ್ ರವಿಪುಡಿ ಅವರು ನಿರ್ದೇಶಿಸುತ್ತಿದ್ದು, ಹರೀಶ್ ಪೆದ್ದಿ ನಿರ್ಮಾಪಕರಾಗಿದ್ದಾರೆ. ಇದು ಎಸ್ ಜೆ ಸೂರ್ಯ, ಜಗಪತಿ ಬಾಬು, ಕಾವ್ಯ ಥಾಪರ್, ಪ್ರಜ್ಞಾ ಜೈಸ್ವಾಲ್ ಮತ್ತು ಇತರರ ಹಲವು ಪ್ರಮುಖ ನಟನಟಿಯರನ್ನು ಒಳಗೊಂಡಿದೆ. ವರದಿಗಳ ಪ್ರಕಾರ ಈ ಚಿತ್ರವು ವರ್ಷಾಂತ್ಯಕ್ಕೆ ಥಿಯೇಟರ್‌ಗಳಿಗೆ ಬರಬಹುದು ಎನ್ನಲಾಗಿದೆ.


ವಿಶ್ವಂಭರ

ಫ್ಯಾಂಟಸಿ ಎಂದು ಡಬ್ ಮಾಡಲಾಗಿರುವ ವಿಶ್ವಂಭರ ಚಿತ್ರ ಕೂಡ ಶೀಘ್ರದಲ್ಲಿ ಬಿಡುಗಡೆಯಾಗಲಿದೆ. ಮೆಗಾಸ್ಟಾರ್ ಚಿರಂಜೀವಿ ಅವರು ದೊರಬಾಬು ಪಾತ್ರದಲ್ಲಿ ಕಾಣಿಕೊಂಡಿದ್ದಾರೆ. ಈ ಚಿತ್ರವನ್ನು ಮಲ್ಲಿಡಿ ವಸಿಷ್ಟ ಅವರು ನಿರ್ದೇಶಿಸುತ್ತಿದ್ದು, ಇವರೇ ಇ6ದರ ಬರಹಗಾರರಾಗಿಯೂ ಗುರುತಿಸಿಕೊಂಡಿದ್ದಾರೆ. ತಾರಾಗಣದಲ್ಲಿ ತ್ರಿಶಾ ಕೃಷ್ಣನ್, ಮೀನಾಕ್ಷಿ ಚೌಧರಿ, ಸುರಭಿ ಪುರಾಣಿಕ್, ಹರ್ಷ ವರ್ಧನ್ ಸೇರಿದಂತೆ ಹಲವರು ಇದ್ದಾರೆ.

ಇದನ್ನೂ ಓದಿ: Bhama Kurup: ಡಿವೋರ್ಸ್‌ ಆದ ಬೆನ್ನಲ್ಲೇ ಹೆಣ್ಣು ಮಕ್ಕಳಿಗೆ ಮದುವೆ ಬೇಕಾ? ಎಂದು ಪೋಸ್ಟ್‌ ಮಾಡಿದ ʻಶೈಲೂʼ ನಟಿ!

ಯುವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ವಿ. ವಂಶಿ ಕೃಷ್ಣಾ ರೆಡ್ಡಿ, ಪ್ರಮೋದ್ ಉಪ್ಪಲಪತಿ ಮತ್ತು ವಿಕ್ರಮ್ ರೆಡ್ಡಿ ನಿರ್ಮಿಸಿದ್ದಾರೆ. ಮುಂದಿನ ವರ್ಷ ಜನವರಿಯಲ್ಲಿ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ.

Continue Reading

ಉದ್ಯೋಗ

IAS Trainees: ತರಬೇತಿ ಸಮಯದಲ್ಲಿ ಐಎಎಸ್ ಅಧಿಕಾರಿಗಳಿಗೆ ಏನೇನು ಸವಲತ್ತುಗಳಿರುತ್ತವೆ?

ನಾಗರಿಕ ಸೇವೆಗಳಿಗೆ ಸೇರಲು ದೇಶದ ಅತ್ಯಂತ ಕಠಿಣ ಪರೀಕ್ಷೆಯಾದ ಯುಪಿಎಸ್ ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಅವಶ್ಯಕ. ಎರಡು ವರ್ಷಗಳ ಐಎಎಸ್ ತರಬೇತಿಯ ಅನಂತರ ಅಧಿಕಾರಿಗಳು (IAS Trainees) ನಿಗದಿತ ಕ್ಷೇತ್ರಗಳಿಗೆ ಪೋಸ್ಟಿಂಗ್ ಪಡೆಯುತ್ತಾರೆ. ತರಬೇತಿ ಅವಧಿಯಲ್ಲಿರುವ ಅಧಿಕಾರಿಗಳಿಗೆ ಕೆಲವು ನಿಯಮಗಳಿವೆ. ಅದರಲ್ಲಿ ಅವರ ಸಂಬಳ, ಅವರು ಪಡೆಯುವ ಸೌಲಭ್ಯಗಳು ಯಾವುದು ಎನ್ನುವ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

IAS Trainees
Koo

ದೇಶಾದ್ಯಂತ ಸುದ್ದಿಯಲ್ಲಿರುವ ಮಹಾರಾಷ್ಟ್ರ (maharastra) ಕೇಡರ್‌ನ ಐಎಎಸ್ ಪ್ರೊಬೇಷನರ್ (IAS Trainees) ಅಧಿಕಾರಿ ಪೂಜಾ ಖೇಡ್ಕರ್‌ (Pooja Khedkar) ವಿರುದ್ಧ ದರ್ಪ, ನಕಲಿ ದಾಖಲೆ ಸೃಷ್ಟಿ, ಪರೀಕ್ಷೆಯಲ್ಲಿರುವಾಗ ಸರ್ಕಾರಿ ವಸತಿ, ಕಾರು ಮತ್ತು ಸಿಬ್ಬಂದಿ ಬೇಕೆಂಬ ಬೇಡಿಕೆಗಳನ್ನು ಸಲ್ಲಿಸಿದ ಆರೋಪವಿದೆ. ಕೆಲವರು ಅವರ ಬೇಡಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ ಯುಪಿಎಸ್‌ಸಿ (UPSC) ತರಬೇತಿ ಅಧಿಕಾರಿಗಳಿಗೆ ಕೆಲವು ನಿಯಮಗಳಿವೆ. ಆದರೆ ಪೂಜಾ ಖೇಡ್ಕರ್ ಅವರ ಬೇಡಿಕೆಯು ಆ ನಿಯಮಗಳಿಗೆ ವಿರುದ್ಧವಾಗಿದೆ.

ಯುಪಿಎಸ್‌ಸಿ ತರಬೇತಿ ಅಧಿಕಾರಿಗಳಿಗೆ ಅನ್ವಯವಾಗುವ ನಿಯಮವೇನು? ಅವರ ಸಂಬಳ, ಅವರು ಪಡೆಯುವ ಸೌಲಭ್ಯಗಳು ಯಾವುದು ಎನ್ನುವ ಕುರಿತು ಮಾಹಿತಿ ಇಲ್ಲಿದೆ.

ನಾಗರಿಕ ಸೇವೆಗಳಿಗೆ ಸೇರಲು ದೇಶದ ಅತ್ಯಂತ ಕಠಿಣ ಪರೀಕ್ಷೆಯಾದ ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಅವಶ್ಯಕ. ಎರಡು ವರ್ಷಗಳ ಐಎಎಸ್ ತರಬೇತಿಯ ಅನಂತರ ಅಧಿಕಾರಿಗಳು ತಮ್ಮ ಕ್ಷೇತ್ರಗಳಿಗೆ ಪೋಸ್ಟಿಂಗ್ ಪಡೆಯುತ್ತಾರೆ. ಈ ಎರಡು ವರ್ಷಗಳಲ್ಲಿ ಅವರಿಗೆ ಶಿಸ್ತು, ಕಷ್ಟಕರ ಸಂದರ್ಭಗಳಲ್ಲಿ ಹೋರಾಡುವ ವಿಧಾನಗಳು, ಆಡಳಿತ ಇತ್ಯಾದಿಗಳನ್ನು ಕಲಿಸಲಾಗುತ್ತದೆ.

ತರಬೇತಿಯ ಕೊನೆಯ ಹಂತದಲ್ಲಿ ಎಲ್ಲಾ ತರಬೇತಿ ಅಧಿಕಾರಿಗಳನ್ನು ವಿಶ್ಲೇಷಿಸಲಾಗುತ್ತದೆ. ಈ ಸಮಯದಲ್ಲಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಅವರ ವಸತಿ ಮತ್ತು ಆಹಾರದ ಜವಾಬ್ದಾರಿಯನ್ನು ನಿರ್ವಹಿಸುತ್ತದೆ.

IAS Trainees


ಟ್ರೈನಿಗಳಿಗೆ ವೇತನ

ನಾಗರಿಕ ಸೇವಾ ತರಬೇತಿಯ ಸಮಯದಲ್ಲಿ ಎಲ್ಲಾ ಐಎಎಸ್, ಐಪಿಎಸ್, ಐಆರ್‌ಎಸ್ ಮತ್ತು ಇಎಫ್‌ಎಸ್ ಅಧಿಕಾರಿಗಳು ಒಂದೇ ಸಂಬಳವನ್ನು ಪಡೆಯುತ್ತಾರೆ. ತರಬೇತಿಯ ವಿವಿಧ ಹಂತಗಳಲ್ಲಿ ಸಂಬಳವು ಹೆಚ್ಚುತ್ತದೆ ಮತ್ತು ವ್ಯತ್ಯಾಸ ಆಗುತ್ತದೆ. ತರಬೇತಿ ಪಡೆಯುವ ಐಎಎಸ್‌ ಟ್ರೇನಿಗಳಿಗೆ ತಿಂಗಳಿಗೆ 50- 60 ಸಾವಿರ ರೂ.ವರೆಗೆ ವೇತನವಿದೆ. ಕೆಲವೊಮ್ಮೆ 70,000 ರೂ.ವರೆಗೂ ಸಂಬಳ ಬರುತ್ತದೆ.

ಸೌಲಭ್ಯಗಳು

ತರಬೇತಿ ಸಮಯದಲ್ಲಿ ಯಾವುದೇ ಐಎಎಸ್ ಅಧಿಕಾರಿಗೆ ಸರ್ಕಾರಿ ವಸತಿ, ಕಾರು, ಚಾಲಕ, ಸಿಬ್ಬಂದಿ ಇತ್ಯಾದಿ ಸೌಲಭ್ಯಗಳನ್ನು ಒದಗಿಸಲಾಗುವುದಿಲ್ಲ. ಅವರು ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್‌ನಿಂದ ವಸತಿ ಮತ್ತು ಆಹಾರ ಸೌಲಭ್ಯಗಳನ್ನು ಪಡೆಯುತ್ತಾರೆ.

ಕ್ಷೇತ್ರ ಪೋಸ್ಟಿಂಗ್ ಸಮಯದಲ್ಲಿ ಅವರು ದಿನಕ್ಕೆ 3,000 ರೂಪಾಯಿಗಳ ಪ್ರಯಾಣ ಭತ್ಯೆ ಮತ್ತು ತುಟ್ಟಿ ಭತ್ಯೆ ಪಡೆಯುತ್ತಾರೆ. ತರಬೇತಿ ಸಮಯದಲ್ಲಿ ಫೀಲ್ಡ್ ಪೋಸ್ಟಿಂಗ್ ಸಿಕ್ಕರೆ ಸರ್ಕಾರಿ ಅತಿಥಿ ಗೃಹದಲ್ಲಿ ಉಳಿದುಕೊಳ್ಳಬಹುದು ಅಥವಾ ಹೊಟೇಲ್ ನಲ್ಲಿ ರೂಂ ಕೂಡ ತೆಗೆದುಕೊಳ್ಳಬಹುದು.

ಇದನ್ನೂ ಓದಿ: Pooja Khedkar: ಅಂಗವೈಕಲ್ಯ ಪ್ರಮಾಣಪತ್ರಕ್ಕಾಗಿ ನಕಲಿ ವಿಳಾಸ ನೀಡಿದ್ದ ಪೂಜಾ ಖೇಡ್ಕರ್‌; ಮತ್ತೊಂದು ಕಳ್ಳಾಟ ಬಯಲು

ತರಬೇತಿ ಸಮಯ ಹೇಗಿರುತ್ತದೆ?

ಐಎಎಸ್ ತರಬೇತಿಯ ಸಮಯದಲ್ಲಿ ಅಧಿಕಾರಿಗಳು ಬಹಳಷ್ಟು ಕಲಿಯುತ್ತಾರೆ. ಕ್ಷೇತ್ರ ಮಾನ್ಯತೆ ಮತ್ತು ಪ್ರಯಾಣವು ನಾಗರಿಕ ಸೇವೆಯ ನಿಜವಾದ ಅರ್ಥವನ್ನು ಅರ್ಥಮಾಡಿಕೊಳ್ಳಲು ಅವರಿಗೆ ಸಹಾಯ ಮಾಡುತ್ತದೆ. ಇದರೊಂದಿಗೆ ಅವರು ಅನೇಕ ರೀತಿಯ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶವನ್ನೂ ಪಡೆಯುತ್ತಾರೆ. ಇದು ನಾಯಕತ್ವ, ಜೀವನ ಕಲೆ ಮತ್ತು ಟ್ರೆಕ್ಕಿಂಗ್‌ನಂತಹ ಚಟುವಟಿಕೆಗಳನ್ನು ಒಳಗೊಂಡಿದೆ. ಇದಲ್ಲದೆ ಐಎಎಸ್ ತರಬೇತಿ ಪಡೆದವರು ರಕ್ಷಣಾ ಸಚಿವರು, ರಾಷ್ಟ್ರಪತಿಗಳು ಮತ್ತು ಉಪರಾಷ್ಟ್ರಪತಿಗಳಂತಹ ಗಣ್ಯರಿಗೆ ಕರೆ ಮಾಡಲು ವಿಶೇಷ ಅವಕಾಶವನ್ನು ಪಡೆಯುತ್ತಾರೆ.

Continue Reading

ಆಟೋಮೊಬೈಲ್

Royal Enfield Guerrilla 450 : ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ಖರೀದಿ ಮಾಡಲು ಐದು ಕಾರಣ ಇಲ್ಲಿದೆ

ಯುವಪೀಳಿಗೆಯನ್ನು ಆಕರ್ಷಿಸಲು ಹೊಸ ಮಾದರಿ, ಕ್ಲಾಸಿಕ್ ಮೋಡಿಯೊಂದಿಗೆ ಬಂದಿರುವ ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 (Royal Enfield Guerrilla 450) ಖರೀದಿ ಮಾಡಲೇಬೇಕು ಎಂದೆನಿಸಲು ಐದು ಪ್ರಮುಖ ಕಾರಣಗಳಿವೆ. ಎನ್‌ಫೀಲ್ಡ್ ನ ಈ ಹೊಸ ಮಾದರಿಯು ರೋಮಾಂಚಕವಾದ ಪ್ರಯಾಣದ ಭರವಸೆಯನ್ನು ಕೊಡುತ್ತದೆ.

VISTARANEWS.COM


on

By

Royal Enfield Guerrilla 450
Koo

ಬೆಂಗಳೂರು: ಹಲವಾರು ದಿನಗಳ ಊಹಾಪೋಹಗಳು, ಸೋಶಿಯಲ್​ ಮೀಡಿಯಾಗಳಲ್ಲಿ ಹರಿ ಬಿಡಲಾಗಿದ್ದ ರೀಲ್ಸ್​ಗಳ ಬಳಿಕ ಅಂತಿಮವಾಗಿ ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 (Royal Enfield Guerrilla 450) ಬೈಕ್​ ಮಾರುಕಟ್ಟೆಗೆ ಬಿಡುಗಡೆಗೊಂಡಿದೆ. ಈ ಬೈಕ್​ ಸಾಕಷ್ಟು ಕುತೂಹಲ ಮೂಡಿಸಿತ್ತು. ಈ ಹೊಸ ಮಾದರಿಯು (new model Royal Enfield) ರೋಮಾಂಚಕ ಪ್ರಯಾಣದ ಭರವಸೆಯನ್ನು ನೀಡುವ ಜತೆಗೆ ಹಲವಾರು ವಿಶೇಷ ಫೀಚರ್​ಗಳನ್ನು ನೀಡಿದೆ. ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ವಿನ್ಯಾಸ ಮತ್ತು ನೋಟದಲ್ಲಿ ಸಂಪೂರ್ಣ ಹೊಸತನವನ್ನು ಅಳವಡಿಸಿಕೊಂಡಿದೆ. ಇತ್ತೀಚಿನ ಸಬ್-500ಸಿಸಿ ರೋಡ್‌ಸ್ಟರ್ ಆಗಿ ರಾಯಲ್ ಎನ್‌ಫೀಲ್ಡ್ ಮಾರುಕಟ್ಟೆಯಲ್ಲಿ ಸೂಕ್ತವಾದ ಆಯ್ಕೆ ಎಂಬಂತೆ ರಸ್ತೆಗೆ ಇಳಿದಿದೆ.

Royal Enfield Guerrilla 450


ವಿನ್ಯಾಸ ಹೇಗಿದೆ?

ಸಾಂಪ್ರದಾಯಿಕ ರಾಯಲ್ ಎನ್‌ಫೀಲ್ಡ್ ಮಾದರಿಯ ಬದಲಿಗೆ ಗೆರಿಲ್ಲಾ 450 ಸಂಪೂರ್ಣವಾಗಿ ಹೊಸ ವಿನ್ಯಾಸದೊದಿಗೆ ಬಂದಿದೆ. ಆಕ್ರಮಣಕಾರಿ ಸ್ಟೈಲಿಂಗ್​ನೊಂದಿಗೆ ನಯವಾದ, ಆಧುನಿಕ ನೋಟವನ್ನು ಹೊಂದಿತ್ತು. ವಿಶಿಷ್ಟವಾದ ರೌಂಡ್ ಹೆಡ್‌ಲ್ಯಾಂಪ್, ಅತ್ಯಾಕರ್ಷಕ ಪೆಟ್ರೋಲ್​ ಟ್ಯಾಂಕ್ ಮತ್ತು ಮಿನಿಮಮ್​ ಬಾಡಿವರ್ಕ್ ಒಳಗೊಂಡಿದೆ. ಈ ವಿನ್ಯಾಸವು ಯುವ ಪೀಳಿಗೆಯನ್ನು ಆಕರ್ಷಿಸುವ ಗುರಿ ಹೊಂದಿದೆ.

ಬೆಲೆ ಮತ್ತು ಬಣ್ಣ

ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ಮೂರು ವಿಭಿನ್ನ ರೂಪಾಂತರಗಳಲ್ಲಿ ಲಭ್ಯವಿದೆ. ಅನಲಾಗ್ 2.39 ಲಕ್ಷ ರೂ., ಡ್ಯಾಶ್ 2.49 ಲಕ್ಷ ರೂ. ಮತ್ತು ಫ್ಲ್ಯಾಶ್ 2.54 ಲಕ್ಷ ರೂ. ಎಕ್ಸ್ ಶೋ ರೂಮ್ ಬೆಲೆಯಲ್ಲಿ ಲಭ್ಯವಿದೆ. ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ಅದರ ಮೂರು ರೂಪಾಂತರಗಳಲ್ಲಿ ಐದು ವಿಭಿನ್ನ ಬಣ್ಣಗಳಲ್ಲಿ ಲಭ್ಯವಿದೆ. ಅನಲಾಗ್​ ವೇರಿಯೆಂಟ್​ ಸ್ಮೋಕ್ ಮತ್ತು ಪ್ಲಾಯಾ ಬ್ಲ್ಯಾಕ್‌ನಲ್ಲಿ, ಡ್ಯಾಶ್ ರೂಪಾಂತರವು ಪ್ಲಾಯಾ ಬ್ಲಾಕ್ ಮತ್ತು ಗೋಲ್ಡ್ ಡಿಪ್ ಅನ್ನು ನೀಡುತ್ತದೆ ಮತ್ತು ಫ್ಲ್ಯಾಶ್ ರೂಪಾಂತರವು ಹಳದಿ ರಿಬ್ಬನ್ ಮತ್ತು ಬ್ರಾವಾ ಬ್ಲೂನಲ್ಲಿ ಲಭ್ಯವಿದೆ.

Royal Enfield Guerrilla 450


ಎಂಜಿನ್ ಮತ್ತು ಯಂತ್ರ

ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ಹಿಮಾಲಯದಲ್ಲಿ ಇರುವ 452ಸಿಸಿ, ಲಿಕ್ವಿಡ್-ಕೂಲ್ಡ್, ಸಿಂಗಲ್-ಸಿಲಿಂಡರ್ ಶೆರ್ಪಾ ಎಂಜಿನ್‌ ಹೊಂದಿದೆ. ಈ ಎಂಜಿನ್ 39.5 ಬಿಹೆಚ್ ಪಿ ಮತ್ತು 40ಎನ್ ಪಿ ಟಾರ್ಕ್ ಬಿಡುಗಡೆ ಮಾಡುತ್ತದೆ. ಜೊತೆಗೆ 6-ಸ್ಪೀಡ್ ಗೇರ್‌ಬಾಕ್ಸ್, ನಗರ ಪ್ರಯಾಣ ಮತ್ತು ದೂರದ ಸವಾರಿಗಳಿಗೆ ಸೂಕ್ತವಾಗಿದೆ.

ಬೈಕು ಮುಂಭಾಗದಲ್ಲಿ ಯುಎಸ್ಡಿ ಫೋರ್ಕ್ ಮತ್ತು ಟೆಲಿಸ್ಕೋಪಿಕ್ ಫೋರ್ಕ್ ಅನ್ನು ಹೊಂದಿದೆ. ಹಿಂಭಾಗದಲ್ಲಿ ಹೊಂದಾಣಿಕೆ ಮಾಡಬಹುದಾದ ಮೊನೊ-ಶಾಕ್ ನೀಡಲಾಗಿದೆ. 2,090 ಮಿಮೀ ಉದ್ದ, 833 ಎಂಎಂ ಅಗಲ ಮತ್ತು 1,125 ಎಂಎಂ ಎತ್ತರದ ಬೈಕ್ ಇದು. 1,440 ಎಂಎಂ ವ್ಹೀಲ್‌ಬೇಸ್, 780 ಎಂಎಂ ಸೀಟ್ ಎತ್ತರ, ಹಿಮಾಲಯಕ್ಕಿಂತ 45 ಎಂಎಂ ಕಡಿಮೆ ಮತ್ತು ಗ್ರೌಂಡ್ ಕ್ಲಿಯರೆನ್ಸ್ 169 ಎಂಎಂ ಇದೆ.

ಇದನ್ನೂ ಓದಿ: Bajaj Freedom 125 CNG Bike: ಬಜಾಜ್ ಸಿಎನ್‌ಜಿ ಬೈಕ್ ಬುಕ್‌ ಮಾಡಿದರೆ 3 ತಿಂಗಳು ಕಾಯಬೇಕು!

Royal Enfield Guerrilla 450


ವೈಶಿಷ್ಟ್ಯಗಳು

ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ರೈಡ್-ಬೈ-ವೈರ್ ಥ್ರೊಟಲ್ ಮತ್ತು ಎರಡು ಆಯ್ಕೆ ಮಾಡಬಹುದಾದ ರೈಡ್ ಮೋಡ್‌ಗಳನ್ನು ಒಳಗೊಂಡಿದೆ. ಡ್ಯುಯಲ್-ಚಾನೆಲ್ ಎಬಿಎಸ್ ನೊಂದಿಗೆ ಬಂದಿರುವ ಇದು ಜಾರುವಿಕೆಯನ್ನು ತಡೆಯುತ್ತದೆ.

ಟಾಪ್​ ವೇರಿಯೆಂಟ್​ಗಳ ಗೂಗಲ್ ಮ್ಯಾಪ್​, ಮೀಡಿಯಾ ಕಂಟ್ರೋಲ್​, ಮತ್ತು ಬೈಕ್ ಸೆಟ್ಟಿಂಗ್ ವ್ಯವಸ್ಥೇ ಹೊಂದಿದೆ, ನ್ಯಾವಿಗೇಷನ್‌ಗಾಗಿ ಸ್ಮಾರ್ಟ್‌ಫೋನ್‌ಗಳೊಂದಿಗೆ ಕನೆಕ್ಟ್​ ಮಾಡಬಹುದಾದ ನಾಲ್ಕು-ಇಂಚಿನ ರೌಂಡ್ ಸ್ಕ್ರೀನ್​ ಇದರಲ್ಲದಿಎ. ಬೇಸ್​ ವೇರಿಯೆಂಟ್​ ಡಿಜಿಟಲ್-ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.

Continue Reading

ವೈರಲ್ ನ್ಯೂಸ್

Viral Video: ಏಳು ತಿಂಗಳ ಮಗುವಿನ ಮೇಲೆ ಗುಂಡು ಹಾರಿಸಿದ ಕ್ರೂರ ಮಹಿಳೆ!

ಅಮೆರಿಕದ ಫಿಲಡೆಲ್ಫಿಯಾ ನಗರದ ಈಶಾನ್ಯ ಭಾಗದಲ್ಲಿ ಏಳು ತಿಂಗಳ ಗಂಡು ಮಗುವನ್ನು ಸ್ಟ್ರೋಲರ್ ನಲ್ಲಿ ಮಲಗಿಸಿ ಸುತ್ತಾಡಿ ಬರಲು ಕರೆದುಕೊಂಡು ಹೋಗುತ್ತಿದ್ದ ಮಹಿಳೆ ಮೇಲೆ ದರೋಡೆಕೋರ ಮಹಿಳೆ ಗುಂಡಿನ ದಾಳಿ ನಡೆಸಿದ್ದಾಳೆ. ಗುಂಡು ಮಗುವಿನ ಕಾಲಿಗೆ ತಾಗಿದೆ. ಈ ಘಟನೆಯ ದೃಶ್ಯ ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.

VISTARANEWS.COM


on

By

Viral video
Koo

ಮಗುವಿನೊಂದಿಗೆ ಸುತ್ತಾಡಿ ಬರಲು ಹೋಗುತ್ತಿದ್ದ ತಾಯಿಯ ಮೇಲೆ ಮಹಿಳೆಯೊಬ್ಬಳು ಗುಂಡಿನ ದಾಳಿ ನಡೆಸಿದ್ದು, ಗುಂಡು ಮಗುವಿನ ಕಾಲಿಗೆ (Shoots Baby) ತಾಗಿದೆ. ಅಮೆರಿಕದ ಫಿಲಿಡೆಲ್ಫಿಯಾದಲ್ಲಿ (Philadelphia) ನಡೆದ ಈ ಘಟನೆಯ ದೃಶ್ಯ ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.

ಏಳು ತಿಂಗಳ ಗಂಡು ಮಗುವನ್ನು ಸ್ಟ್ರೋಲರ್ ನಲ್ಲಿ ಮಲಗಿಸಿ ಸುತ್ತಾಡಿ ಬರಲು ಕರೆದುಕೊಂಡು ಹೋಗುತ್ತಿದ್ದ ಮಹಿಳೆ ಮೇಲೆ ದರೋಡೆಕೋರ ಮಹಿಳೆ ಗುಂಡಿನ ದಾಳಿ ನಡೆಸಿದ್ದಾಳೆ. ಗುಂಡು ಮಗುವಿನ ಕಾಲಿಗೆ ತಾಗಿದೆ. ಇದೀಗ ಮಗುವಿನ ಅರೋಗ್ಯ ಸ್ಥಿತಿ ಸ್ಥಿರವಾಗಿದೆ ಎನ್ನಲಾಗಿದೆ.

ಫಿಲಡೆಲ್ಫಿಯಾ ನಗರದ ಈಶಾನ್ಯ ಭಾಗದಲ್ಲಿ ಈ ಘಟನೆ ನಡೆದಿದ್ದು, ಗುಂಡು ಹಾರಿಸಿದ ದರೋಡೆಕೋರ ಮಹಿಳೆಯನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. ಮಗುವಿನ ಮೇಲೆ ಗುಂಡು ಹಾರಿಸಿರುವ ಭಯಾನಕ ದೃಶ್ಯ ಸಿಸಿಟಿವಿ ವಿಡಿಯೋದಲ್ಲಿ ಸೆರೆಯಾಗಿದೆ. ಮಗು ಮತ್ತು ಪೋಷಕ ಮಹಿಳೆ ನಡೆದುಕೊಂಡು ಹೋಗುತ್ತಿದ್ದಾಗ ಮಹಿಳೆಯೊಬ್ಬಳು ಏಕಾಏಕಿ ಬಂದು ಅವರ ಮೇಲೆ ಗುಂಡಿನ ದಾಳಿ ನಡೆಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ದರೋಡೆಕೋರ ಮಹಿಳೆಯು ಹಲವು ಬಾರಿ ಗುಂಡು ಹಾರಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.


ಪೊಲೀಸರು ಈ ಕುರಿತು ವಿಡಿಯೋ ಬಿಡುಗಡೆ ಮಾಡಿದ್ದು, ಅದರಲ್ಲಿ ಹೀಗೆ ಬರೆದಿದ್ದರೆ. 2024ರ ಜುಲೈ 18ರಂದು ಮೆರಿಡಿಯನ್ ಸ್ಟ್ರೀಟ್‌ನ 4000 ಬ್ಲಾಕ್‌ನಲ್ಲಿ ಏಳು ತಿಂಗಳ ಮಗುವಿನ ಕಾಲಿನ ಮೇಲೆ ಮಹಿಳೆಯೊಬ್ಬಳು ಗುಂಡು ಹರಿಸಿದ್ದಾಳೆ. ಗುಂಡಿನ ದಾಳಿಯಲ್ಲಿ ಬೇರೆ ಯಾರಿಗೂ ಗಾಯವಾಗಿಲ್ಲ. ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಬಳಿಕ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪ್ರಸ್ತುತ ಮಗುವಿನ ಆರೋಗ್ಯ ಸ್ಥಿರವಾಗಿದೆ.

ಇದನ್ನೂ ಓದಿ: Udupi News : ಸತ್ತ ನಾಯಿಯನ್ನು ಸ್ಕೂಟರ್‌ಗೆ ಕಟ್ಟಿ ರಸ್ತೆಯುದ್ದಕ್ಕೂ ಎಳೆದೊಯ್ದ ಅಸಾಮಿ!

ಪೊಲೀಸರು ಆಗಮಿಸಿದಾಗ ಮಗುವಿನ ಪೋಷಕರು ಘಟನಾ ಸ್ಥಳದಲ್ಲಿ ಇರಲಿಲ್ಲ.ಗುಂಡಿನ ದಾಳಿ ನಡೆಸಿದ ಮಹಿಳೆ ತಾನು ಮಾಡಿದ್ದಕ್ಕೆ ಪಶ್ಚಾತ್ತಾಪ ಪಡದೆ ಸುಮ್ಮನೆ ಅಲ್ಲಿಂದ ಹೊರನಡೆದಳು. ಇದು ತುಂಬಾ ಭಯಾನಕವಾಗಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

Continue Reading
Advertisement
Kalki 2898 AD makers served legal notice Kalki Dham Peethadheeshwar Acharya Pramod Krishnam
ಟಾಲಿವುಡ್5 mins ago

Kalki 2898 AD: ಅಮಿತಾಭ್‌, ಪ್ರಭಾಸ್‌ಗೆ ಲೀಗಲ್ ನೋಟಿಸ್ ಕಳುಹಿಸಿದ ಕಾಂಗ್ರೆಸ್ ಮಾಜಿ ನಾಯಕ!

ದೇಶ9 mins ago

Central Budget 2024: ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಟೀಂನಲ್ಲಿ ಯಾರೆಲ್ಲಾ ಇದ್ದಾರೆ ಗೊತ್ತಾ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

ರಾಜಮಾರ್ಗ ಅಂಕಣ
ಕ್ರೀಡೆ45 mins ago

ರಾಜಮಾರ್ಗ ಅಂಕಣ: ರಾಹುಲ್ ದ್ರಾವಿಡ್ ಎಂಬ ಮಹಾಗುರುವಿಗೆ ಸಲಾಂ; ಭಾರತರತ್ನ ನೀಡಲು ಇದು ಸಕಾಲ

Road Accident
ಕ್ರೈಂ45 mins ago

Road Accident: ಕಾರು-ಬಸ್‌ ನಡುವೆ ಮುಖಾಮುಖಿ ಡಿಕ್ಕಿ; ಇಬ್ಬರ ಸಾವು

Road Rage Case
ದೇಶ53 mins ago

Road Rage Case: ನಡು ರಸ್ತೆಯಲ್ಲೇ ಮಹಿಳೆಯ ಕೂದಲು ಎಳೆದು ಮೂಗಿಗೆ ಪಂಚ್‌; ವೈರಲಾಗ್ತಿದೆ ಈ ವಿಡಿಯೋ

Pawan Kalyan Go To Singapore Anna Lezhneva graduation ceremony
ಕಾಲಿವುಡ್55 mins ago

Pawan Kalyan: ಸಿಂಗಾಪುರದಲ್ಲಿ ಪವನ್ ಕಲ್ಯಾಣ್ ಮೂರನೇ ಪತ್ನಿ ಪಡೆದ ಪದವಿ ಯಾವುದು?

Women's Asia Cup
ಕ್ರೀಡೆ1 hour ago

Women’s Asia Cup: ಏಷ್ಯಾಕಪ್​ನಿಂದ ಹೊರಬಿದ್ದ ಕನ್ನಡತಿ ಶ್ರೇಯಾಂಕಾ ಪಾಟೀಲ್

Road Accident
ಕ್ರೈಂ1 hour ago

Road Accident: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಜೀಪು; ಬಸ್‌ ನಿಲ್ಲಿಸದ ಕೋಪಕ್ಕೆ ಕಲ್ಲು ತೂರಿದವ ಪೊಲೀಸ್‌ ಅತಿಥಿ

Nipah Virus
ದೇಶ2 hours ago

Nipah Virus: ಕೇರಳದಲ್ಲಿ ನಿಫಾ ಕೇಸ್ ಪತ್ತೆ; ಡೆಂಗ್ಯೂ ಬೆನ್ನಲ್ಲೇ ಕರ್ನಾಟಕಕ್ಕೆ ಮತ್ತೊಂದು ಭೀತಿ

Payal Malik declares she’s ready to divorce Armaan Malik
ಬಿಗ್ ಬಾಸ್2 hours ago

Payal Malik: ಇನ್ನೊಬ್ಬಳ ಜತೆ ಹಾಯಾಗಿರಲಿ ಎಂದು ಪತಿಗೆ ವಿಚ್ಛೇದನ ಕೊಡೋಕೆ ಮುಂದಾದ ಪಾಯಲ್!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ21 hours ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ23 hours ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ2 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ2 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ3 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ3 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ5 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ6 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ6 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

ಟ್ರೆಂಡಿಂಗ್‌