Murder case: 3 ವರ್ಷಗಳ ಹಿಂದಿನ ಉದ್ಯಮಿ ಕೊಲೆಗೆ ಟ್ವಿಸ್ಟ್‌; ಕೊಲೆ ಮಾಡಿಸಿದವಳೇ ಹೆಂಡತಿ! - Vistara News

Latest

Murder case: 3 ವರ್ಷಗಳ ಹಿಂದಿನ ಉದ್ಯಮಿ ಕೊಲೆಗೆ ಟ್ವಿಸ್ಟ್‌; ಕೊಲೆ ಮಾಡಿಸಿದವಳೇ ಹೆಂಡತಿ!

Murder case: ಅನೈತಿಕ ಸಂಬಂಧ ತಪ್ಪು ಎನ್ನುವುದು ಗೊತ್ತಿದ್ದೂ ಮತ್ತೆ ಮತ್ತೆ ಅದೇ ಕೆಲಸಕ್ಕೆ ಮುಂದಾಗುತ್ತಾರೆ. ಇನ್ನು ತಾವು ಮಾಡುತ್ತಿರುವ ತಪ್ಪು ಇತರರಿಗೆ ಗೊತ್ತಾದ ತಕ್ಷಣ ತಮ್ಮ ಜೊತೆ ಜೀವನ ಹಂಚಿಕೊಂಡವರ ಪ್ರಾಣವನ್ನು ತೆಗೆಯುವುದಕ್ಕೂ ಹಿಂದು ಮುಂದು ನೋಡಲ್ಲ. ಇಂತಹ ಘಟನೆ ಸಮಾಜದಲ್ಲಿ ದಿನ ನಿತ್ಯ ನಡೆಯುತ್ತಲೇ ಇರುತ್ತದೆ. ಹೆಂಡತಿಯೊಬ್ಬಳು ಜಿಮ್ ಟ್ರೈನರ್ ಬಲೆಗೆ ಬಿದ್ದು ಗಂಡನ ಜೀವಕ್ಕೆ ಕುತ್ತು ತಂದ ಘಟನೆ ನಡೆದಿದೆ. ಮೂರು ವರ್ಷದ ಬಳಿಕ ಈ ಕೊಲೆಯ ಸಂಚು ಬಯಲಾಗಿದೆ.

VISTARANEWS.COM


on

Murder case
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಜಿಮ್ ಟ್ರೈನರ್ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಸಂಚು ರೂಪಿಸಿ ತನ್ನ ಪತಿಯನ್ನೇ ಕೊಲೆ(Murder case) ಮಾಡಿದ ಘಟನೆಯ ಹಿಂದಿನ ಕತೆ ಕುತೂಹಲಕರವಾಗಿದೆ. ಮೂರು ವರ್ಷಗಳ ಹಿಂದೆ ಹರಿಯಾಣದ ಪಾಣಿಪತ್‌ನಲ್ಲಿ ಕೊಲೆ ನಡೆದಿತ್ತು. ಇದೀಗ ಈ ಘಟನೆಯ ಸತ್ಯಾಂಶ ಬೆಳಕಿಗೆ ಬಂದಿದೆ.

ಹರಿಯಾಣದಲ್ಲಿ ಪಾಣಿಪತ್‌ನಲ್ಲಿ ಡಿಸೆಂಬರ್ 15, 2021ರಂದು ಉದ್ಯಮಿಯೊಬ್ಬರನ್ನು ಅವರ ಮನೆಯಲ್ಲಿಯೇ ಗುಂಡಿಕ್ಕಿ ಕೊಲ್ಲಲಾಗಿತ್ತು. ವಿನೋದ್ ಭರಾರ ಕೊಲೆಯಾದ ವ್ಯಕ್ತಿ, ಶೂಟ್ ಮಾಡಿದ ಟ್ರಕ್ ಚಾಲಕ ದೇವ್ ಸುನರ್ ಎನ್ನಲಾಗಿತ್ತು. ಆರೋಪಿಯನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದರು. ಆರೋಪಿ ಕೂಡ ಜೈಲಿನಲ್ಲಿದ್ದ. ಆದರೆ ಇದೀಗ ಪೊಲೀಸ್ ಅಧಿಕಾರಿಗಳ ಮೊಬೈಲ್‌ಗೆ ವಾಟ್ಸಾಪ್ ಸಂದೇಶವೊಂದು ಬಂದಿದ್ದು, ವಿನೋದ್ ಅವರಿಗೆ ಬಹಳ ಹತ್ತಿರದಲ್ಲಿ ಸಂಬಂಧವಿರುವ ವ್ಯಕ್ತಿ ಅವರ ಕೊಲೆಗೆ ಸಂಚು ರೂಪಿಸಿದ್ದಾರೆ. ಹಾಗಾಗಿ ಈ ಪ್ರಕರಣವನ್ನು ಕೂಲಂಕುಶವಾಗಿ ತನಿಖೆ ಮಾಡುವಂತೆ ಮನವಿ ಮಾಡಲಾಗಿತ್ತು. ಪೊಲೀಸರು ಈ ಸಂದೇಶದ ಬಗ್ಗೆ ಮಾಹಿತಿ ಕಲೆಹಾಕಿದಾಗ ಈ ಸಂದೇಶ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ವಿನೋದ್ ಅವರ ಸಹೋದರ ಪ್ರಮೋದ್ ಎಂಬಾತ ಕಳುಹಿಸಿರುವುದಾಗಿ ತಿಳಿದು ಬಂತು.

ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಈ ಪ್ರಕರಣದ ಬಗ್ಗೆ ಸಂಶಯ ವ್ಯಕ್ತವಾದ ಹಿನ್ನೆಲೆಯಲ್ಲಿ ಇನ್ವೆಸ್ಟಿಗೇಶನ್ ಏಜೆನ್ಸಿಗೆ ಈ ಪ್ರಕರಣದ ತನಿಖೆಯನ್ನು ವಹಿಸಲಾಯಿತು. ಆಗ ತನಿಖೆಯ ವೇಳೆ, ಕೊಲೆ ಮಾಡಿದ ಆರೋಪಿ ದೇವ್ ಸುನರ್‌ಗೂ ಕೊಲೆಯಾದ ವಿನೋದ್ ಅವರಿಗೂ ಯಾವುದೇ ಸಂಬಂಧವಿರಲಿಲ್ಲ. ಆದರೆ ಆರೋಪಿ ದೇವ್, ಜಿಮ್ ಟ್ರೈನರ್ ಸುಮಿತ್ ಎಂಬಾತನಿಗೆ ಹತ್ತಿರದವನಾಗಿದ್ದ. ವಿನೋದ್ ಭರಾರ ಅವರ ಪತ್ನಿ ನಿಧಿ, ಜಿಮ್ ಟ್ರೈನರ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಎಂಬುದು ತನಿಖೆಯ ವೇಳೆ ತಿಳಿದುಬಂತು.

ಈ ಬಗ್ಗೆ ವಿಚಾರಣೆ ನಡೆಸಿದಾಗ ನಿಧಿ ಅವರು ತಮ್ಮ ಮಗಳ ಜೊತೆ ಆಗಾಗ ಜಿಮ್‌ಗೆ ಭೇಟಿ ನೀಡುತ್ತಿದ್ದರು. ಅಲ್ಲಿ ಜಿಮ್ ಟ್ರೈನರ್ ಸುಮಿತ್‌ನನ್ನು ಭೇಟಿಯಾದ ನಿಧಿ ಆತನೊಂದಿಗೆ ಸಲುಗೆ ಬೆಳೆದು ಸಂಬಂಧದಲ್ಲಿದ್ದರು. ಈ ವಿಚಾರ ತಿಳಿದ ವಿನೋದ್ ಅವರು ಆತನಿಂದ ದೂರವಿರುವಂತೆ ಆಗಾಗ ಮನೆಯಲ್ಲಿ ಜಗಳ ಮಾಡುತ್ತಿದ್ದರು. ಹೀಗಾಗಿ ನಿಧಿ ಮತ್ತು ಸುಮಿತ್ ಸೇರಿ ವಿನೋದ್ ಅವರ ಕೊಲೆಗೆ ಸಂಚು ರೂಪಿಸಿದರು.

ಅದಕ್ಕಾಗಿ ಸುಮಿತ್ ಪಂಜಾಬ್‌ನ ಟ್ರಕ್ ಚಾಲಕ ದೇವ್ ಸುನಾರ್‌ನನ್ನು ಈ ಕೆಲಸಕ್ಕೆ ಸಂಪರ್ಕಿಸಿ ಆತನಿಗೆ 10 ಲಕ್ಷ ರೂ. ನೀಡಿ ಜನವರಿ 2, 2021ರಂದು ದೇವ್ ವಿನೋದ್ ಅವರ ಕಾರಿಗೆ ಡಿಕ್ಕಿ ಹೊಡೆಸಿದ್ದಾನೆ. ಆದರೆ ಈ ಅಪಘಾತದಲ್ಲಿ ವಿನೋದ್ ಗಂಭೀರವಾಗಿ ಗಾಯಗೊಂಡರೂ ಬದುಕುಳಿದಿದ್ದರು. ದೇವ್ ಈ ಪ್ರಕರಣವನ್ನು ಇತ್ಯರ್ಥಗೊಳಿಸುವಂತೆ ವಿನೋದ್ ಮನೆಗೆ ಭೇಟಿ ನೀಡಿದ್ದಾನೆ. ಆಗ ವಿನೋದ್ ಇದಕ್ಕೆ ಒಪ್ಪದಿದ್ದಾಗ ಅವರನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಮೊದಲು ಕತೆ ಕಟ್ಟಲಾಗಿತ್ತು. ಆದರೆ ಆಳವಾದ ತನಿಖೆ ನಡೆಸಿದಾಗ ಇದು ಕಟ್ಟು ಕತೆ. ದೇವ್‌ ಅಪಘಾತ ಮಾಡಿ ಉದ್ಯಮಿಯನ್ನು ಆಕ್ಸಿಡೆಂಟ್‌ ಮಾಡಿ ಕೊಲ್ಲಲು ಯತ್ನಿಸಿದ್ದ. ಅದು ವಿಫಲವಾದಾಗ ಗುಂಡಿಕ್ಕಿ ಕೊಂದ ಎನ್ನುವುದು ಖಚಿತವಾಯಿತು.

ಇದನ್ನೂ ಓದಿ:Pakistan Begger: ಪಾಕಿಸ್ತಾನವೇ ಒಂದು ಭಿಕ್ಷುಕ ದೇಶ! ಆದರೆ ಅಲ್ಲಿಯ ಈ ಭಿಕ್ಷುಕ ಎಷ್ಟು ಶ್ರೀಮಂತ ನೋಡಿ!

ಪತಿ ಕೊಲೆಯಾದ ಬಳಿಕ ನಿಧಿ ಮಕ್ಕಳನ್ನು ಆಸ್ಟ್ರೇಲಿಯಾದಲ್ಲಿರುವ ವಿನೋದ್ ಸಹೋದರ ಪ್ರಮೋದ್ ಬಳಿಗೆ ಕಳುಹಿಸಿ ಸುಮಿತ್ ಜೊತೆ ಸುತ್ತಾಡಲು ಶುರು ಮಾಡಿದ್ದಳು. ಇದೀಗ ಇವರಿಬ್ಬರು ತಮ್ಮ ತಪ್ಪನ್ನು ಒಪ್ಪಿಕೊಂಡು ಜೈಲು ಪಾಲಾಗಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಗ್ಯಾಜೆಟ್ಸ್

BSNL New Plan: 395 ದಿನಗಳ ವ್ಯಾಲಿಡಿಟಿಯ ಬಿಎಸ್‌ಎನ್‌ಎಲ್ ಹೊಸ ಪ್ಲ್ಯಾನ್‌; ಜಿಯೊ, ಏರ್‌ಟೆಲ್‌ಗೆ ಸೆಡ್ಡು

ಭಾರತದ ಅತೀ ದೊಡ್ಡ ದೂರಸಂಪರ್ಕ ಸಂಸ್ಥೆಯಾದ ಬಿಎಸ್ ಎನ್ ಎಲ್ ಹೊಸ ಮತ್ತು ಆಕರ್ಷಕ ಯೋಜನೆಗಳನ್ನು (BSNL New Plan) ಪರಿಚಯಿಸುವ ಮೂಲಕ ಭಾರತದಾದ್ಯಂತ ತನ್ನ 4ಜಿ ಸೇವೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲು ಸಜ್ಜಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

By

BSNL New Plan
Koo

ಖಾಸಗಿ ಟೆಲಿಕಾಂ ಕಂಪನಿಗಳು (private telecom company) ಜುಲೈ 2024ರ ಆರಂಭದಲ್ಲಿ ತಮ್ಮ ಶುಲ್ಕಗಳನ್ನು ನವೀಕರಿಸಿದಾಗಿನಿಂದ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪೆನಿಯು ಸಾಮಾಜಿಕ ಮಾಧ್ಯಮದಲ್ಲಿ (social media) ಗಮನ ಸೆಳೆಯುತ್ತಿದೆ. ಭಾರತದ (india) ಅತೀ ದೊಡ್ಡ ದೂರಸಂಪರ್ಕ ಸಂಸ್ಥೆಯಾದ ಬಿಎಸ್‌ಎನ್‌ಎಲ್ (bsnl) ಹೊಸ ಮತ್ತು ಆಕರ್ಷಕ ಯೋಜನೆಗಳನ್ನು (BSNL New Plan) ಪರಿಚಯಿಸುವ ಮೂಲಕ ಭಾರತದಾದ್ಯಂತ ತನ್ನ 4ಜಿ ಸೇವೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲು ಸಜ್ಜಾಗಿದೆ.

ಬಿಎ ಸ್ ಎನ್ ಎಲ್ ಹೊಸ ಯೋಜನೆ

ಬಿ ಎಸ್ ಎನ್ ಎಲ್ ಅತ್ಯುತ್ತಮ ಯೋಜನೆಗಳಲ್ಲಿ ಒಂದು 395 ದಿನಗಳ ಮಾನ್ಯತೆಯನ್ನು ನೀಡುತ್ತದೆ. 13 ತಿಂಗಳ ಯೋಜನೆ ಇದಾಗಿದ್ದು, 2,399 ರೂ.ಗಳಾಗಿದ್ದು, ಇದು ತಿಂಗಳಿಗೆ ಸುಮಾರು 200 ರೂ. ಯ ಶುಲ್ಕವನ್ನು ವಿಧಿಸಿದಂತಾಗುತ್ತದೆ.

4ಜಿ ಯೋಜನೆಯ ಪ್ರಯೋಜನಗಳು

ಬಿಎಸ್ ಎನ್ ಎಲ್ 4ಜಿ ಯೋಜನೆಯ ವೈಶಿಷ್ಟ್ಯಗಳೆಂದರೆ ಇದರ ಮಾನ್ಯತೆ 395 ದಿನಗಳು. ಡೇಟಾ ಪ್ರತಿದಿನ 2GB ಹೈಸ್ಪೀಡ್ ಅನ್ನು ಒಳಗೊಂಡಿದ್ದು, ಎಸ್ ಎಮ್ ಎಸ್ ದಿನಕ್ಕೆ 100 ಉಚಿತ, ದೇಶದಾದ್ಯಂತ ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಧ್ವನಿ ಕರೆಗಳು, ರಾಷ್ಟ್ರವ್ಯಾಪಿ ರೋಮಿಂಗ್ ಉಚಿತವಾಗಿರುತ್ತದೆ. ಜಿಂಗ್ ಸಂಗೀತ, ಬಿಎಸ್ ಎನ್ ಎಲ್ ಟ್ಯೂನ್ಸ್, ಹಾರ್ಡಿ ಆಟಗಳು, ಚಾಲೆಂಜರ್ ಅರೆನಾ ಆಟಗಳು ಮತ್ತು ಗೇಮನ್ ಆಸ್ಟ್ರೋಟೆಲ್ ಸೌಲಭ್ಯಗಳು ದೊರೆಯಲಿದೆ.

BSNL New Plan

ಅನಿಯಮಿತ ಸೌಲಭ್ಯ

ಬಿಎಸ್ ಎನ್ ಎಲ್ ನಿಂದ ಮತ್ತೊಂದು ದೀರ್ಘಾವಧಿಯ ಆಯ್ಕೆಯು 365 ದಿನಗಳ ಯೋಜನೆಯಾಗಿದೆ. ಈ ಯೋಜನೆಯ ಮಾನ್ಯತೆಯು 365 ದಿನಗಳು. ದೈನಂದಿನ ಬಳಕೆಯ ಮಿತಿಯಿಲ್ಲದ 600 ಜಿಬಿ ಡೇಟಾ, ದಿನಕ್ಕೆ 100 ಉಚಿತ ಎಸ್ ಎಂಎಸ್, ದೇಶಾದ್ಯಂತ ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಧ್ವನಿ ಕರೆ ಸೌಲಭ್ಯಗಳು ಲಭ್ಯವಾಗಲಿದೆ.

ಇದನ್ನೂ ಓದಿ: EMI Loan: ಇಎಂಐನಲ್ಲಿ ಫೋನ್ ಖರೀದಿ ಮಾಡುವುದು ಲಾಭವೇ ಅಥವಾ ನಷ್ಟವೇ? ಇಲ್ಲಿದೆ ಲೆಕ್ಕಾಚಾರ

ಪಿ ಎಲ್ ಐ ಯೋಜನೆಯಡಿಯಲ್ಲಿ ಮಾರಾಟ

ಟೆಲಿಕಾಂ ಉಪಕರಣಗಳ ತಯಾರಿಕಾ ವಲಯವು ಉತ್ಪಾದನೆ- ಸಂಯೋಜಿತ ಪ್ರೋತ್ಸಾಹ (ಪಿಎಲ್‌ಐ) ಯೋಜನೆಯಡಿಯಲ್ಲಿ 50,000 ಕೋಟಿ ರೂಪಾಯಿಗಳನ್ನು ಮೀರಿ ಮಾರಾಟ ಮಾಡಿದೆ. 17,800 ಕ್ಕೂ ಹೆಚ್ಚು ನೇರ ಉದ್ಯೋಗಗಳು ಮತ್ತು ಇನ್ನೂ ಹೆಚ್ಚಿನ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ.

ಪಿಎಲ್ ಐ ಯೋಜನೆಯಲ್ಲಿ ಹೂಡಿಕೆಗಳು

ಟೆಲಿಕಾಂ ಪಿಎಲ್‌ಐ ಯೋಜನೆಯ ಮೂರು ವರ್ಷಗಳಲ್ಲಿ 3,400 ಕೋಟಿ ರೂಪಾಯಿಗಳ ಹೂಡಿಕೆಯನ್ನು ಆಕರ್ಷಿಸಿದೆ ಎಂದು ಸರ್ಕಾರ ತಿಳಿಸಿದೆ.

Continue Reading

Latest

Viral Video: ರಸ್ತೆಯಲ್ಲಿ ಬಾಲಕನನ್ನು ಅಟ್ಟಾಟಿಸಿ ದಾಳಿ ಮಾಡಿದ ಕೋತಿಗಳು; ಆತಂಕ ಮೂಡಿಸುವ ವಿಡಿಯೊ

Viral Video: ಐದು ವರ್ಷದ ಬಾಲಕನ ಮೇಲೆ ಮಂಗಗಳು ಸೇರಿಸಿ ದಾಳಿ ಮಾಡಿದ ಭೀಕರವಾದ ಘಟನೆಯೊಂದು ಮಥುರಾದ ವೃಂದಾವನದಲ್ಲಿ ನಡೆದಿದೆ. ಗೋಪಾಲ್ ಅವರ ಪುತ್ರನಾದ ಕಿಶನ್ ಮನೆಯಿಂದ ಹೊರಗೆ ಬಂದಾಗ ಬೀದಿಯಲ್ಲಿದ್ದ ಕೋತಿಗಳು ಅವನನ್ನು ಓಡಿಸಿಕೊಂಡು ಬಂದು ಅವನ ಮೇಲೆ ದಾಳಿ ನಡೆಸಿವೆ. ಮಹಿಳೆಯರು ಕೋತಿಗಳಿಗೆ ಹೆದರಿ ಬಾಲಕನ ಸಹಾಯಕ್ಕೆ ಬರಲಿಲ್ಲ. ಕೋತಿಗಳು ಸ್ವಲ್ಪ ಸಮಯದವರೆಗೆ ಮಗುವನ್ನು ಹಿಡಿದು ಹೊಡೆಯುತ್ತಲೇ ಇದ್ದವು. ಕೊನೆಯಲ್ಲಿ ಕೆಲವು ಗಂಡಸರು ಬಾಲಕನನ್ನು ರಕ್ಷಿಸಲು ಓಡಿ ಬಂದು ಕೋತಿಗಳನ್ನು ಓಡಿಸಿದರು

VISTARANEWS.COM


on

Viral Video
Koo

ಮಥುರಾ: ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳು ಮನುಷ್ಯರ ಮೇಲೆ ದಾಳಿ ಮಾಡುವಂತಹ ಘಟನೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಮೊದಲು ಕಾಡು ಪ್ರಾಣಿಗಳು ಮನುಷ್ಯರ ಮೇಲೆ ದಾಳಿ ಮಾಡುತ್ತಿದ್ದವು. ಆದರೆ ಈಗ ಊರಲ್ಲಿರುವ ಸಾಕು ಪ್ರಾಣಿಗಳು ಮನುಷ್ಯರ ಮೇಲೆ ದಾಳಿ ಮಾಡಿ ಗಾಯಗೊಳಿಸುತ್ತಿವೆ. ಈ ಹಿಂದೆ ದನ, ಎಮ್ಮೆ, ಗೂಳಿಗಳು ಜನರ ಮೇಲೆ ದಾಳಿ ನಡೆಸಿದ ಸುದ್ದಿ ವರದಿಯಾಗಿತ್ತು. ಇದೀಗ ಕೋತಿಗಳ ಗುಂಪೊಂದು 5 ವರ್ಷದ ಬಾಲಕನ ಮೇಲೆ ದಾಳಿ ನಡೆಸಿವೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ವರದಿಗಳ ಪ್ರಕಾರ, ಮಥುರಾದ ವೃಂದಾವನದಲ್ಲಿ ಶುಕ್ರವಾರ ಜುಲೈ 12ರಂದು ಈ ಘಟನೆ ನಡೆದಿದೆ. ಕಿಶನ್ ಎಂಬ 5 ವರ್ಷದ ಬಾಲಕ ಕೋತಿಗಳ ದಾಳಿಗೆ ಒಳಗಾದವ. ವೃಂದಾವನದ ಮದನ್ ಮೋಹನ್ ಘೇರಾ ಪ್ರದೇಶದ ನಿವಾಸಿಯಾದ ಗೋಪಾಲ್ ಅವರ ಪುತ್ರನಾದ ಕಿಶನ್ ತನ್ನ ತಂದೆಯ ಆದೇಶದ ಮೇರೆಗೆ ಯಾವುದೋ ಕೆಲಸದ ಉದ್ದೇಶಕ್ಕಾಗಿ ಮನೆಯಿಂದ ಹೊರಗೆ ಬಂದಿದ್ದಾನೆ.

ಕಿಶನ್ ಮದನ್ ಮೋಹನ್ ದೇವಾಲಯದ ಮೆಟ್ಟಿಲುಗಳನ್ನು ತಲುಪಿದ ಕೂಡಲೇ, ಕೋತಿಗಳು ಅವನ ಮೇಲೆ ದಾಳಿ ಮಾಡಿದವು. ವಿಡಿಯೊದಲ್ಲಿ ಬಾಲಕನ ಮೇಲೆ ಕೋತಿಗಳು ಅಟ್ಟಿಸಿಕೊಂಡು ಬಂದು ದಾಳಿ ಮಾಡುತ್ತಿದ್ದವು. ಅವನು ಎದ್ದು ತನ್ನ ಮನೆಯ ಕಡೆಗೆ ಓಡಲು ಪ್ರಾರಂಭಿಸಿದನು, ಆದರೆ ಬೀದಿಗಳಲ್ಲಿದ್ದ ಇತರ ಕೋತಿಗಳು ಅವನ ಮೇಲೆ ದಾಳಿ ಮಾಡಿ ಅವನನ್ನು ಕೆಳಕ್ಕೆ ತಳ್ಳಿದವು ಮತ್ತು ಆತನನ್ನು ಎಳೆದಾಡುತ್ತಿದ್ದವು.

ಆದರೆ ಅಲ್ಲಿದ್ದ ಕೆಲವು ಮಹಿಳೆಯರು ಕೋತಿಗಳಿಗೆ ಹೆದರಿ ಬಾಲಕನ ಸಹಾಯಕ್ಕೆ ಬರಲಿಲ್ಲ. ಕೋತಿಗಳು ಸ್ವಲ್ಪ ಸಮಯದವರೆಗೆ ಮಗುವನ್ನು ಹಿಡಿದು ಹೊಡೆಯುತ್ತಲೇ ಇದ್ದವು. ಕೊನೆಯಲ್ಲಿ ಕೆಲವು ಗಂಡಸರು ಬಾಲಕನನ್ನು ರಕ್ಷಿಸಲು ಓಡಿ ಬಂದು ಕೋತಿಗಳನ್ನು ಓಡಿಸಿದರು, ನಂತರ ಅವು ಬಾಲಕನನ್ನು ಬಿಟ್ಟು ಓಡಿಹೋದವು. ನಂತರ ಬಾಲಕ ಬೇಗನೆ ಎದ್ದು ತನ್ನ ಮನೆಯ ಕಡೆಗೆ ಓಡುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ: ಲಾಹೋರ್ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಏರಿದ ಮೊದಲ ಮಹಿಳೆ ಆಲಿಯಾ ನೀಲಂ

ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಅಧಿಕಾರಿಗಳು ನಿವಾಸಿಗಳಿಗೆ ಜಾಗರೂಕರಾಗಿರಲು ಮತ್ತು ಇದೇ ರೀತಿಯ ಘಟನೆಗಳನ್ನು ತಪ್ಪಿಸಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಅನೇಕ ಮಕ್ಕಳು ಆಗಾಗ್ಗೆ ಕೋತಿಗಳು ಮತ್ತು ನಾಯಿಗಳಂತಹ ಪ್ರಾಣಿಗಳಿಂದ ದಾಳಿಗೊಳಗಾಗುತ್ತಾರೆ. ಇದಕ್ಕೂ ಮುನ್ನ ಉತ್ತರಾಖಂಡದ ಹೃಷಿಕೇಶದಲ್ಲಿ ಎರಡು ಎತ್ತುಗಳು ಅಂಗಡಿಯೊಂದಕ್ಕೆ ನುಗ್ಗಿ ಇಬ್ಬರು ಮಹಿಳೆಯರ ಮೇಲೆ ದಾಳಿ ಮಾಡಿದೆ. ಆದರೆ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು. ಆ ಘಟನೆಯ ವೀಡಿಯೊ ಹೊರಬಂದಿದ್ದು, ಅಂಗಡಿಯೊಳಗೆ ಮಹಿಳೆಯರನ್ನು ಪ್ರಾಣಿಗಳು ತುಳಿಯುತ್ತಿರುವುದನ್ನು ತೋರಿಸುತ್ತದೆ.

Continue Reading

Latest

Anant Ambani Marriage: ಅಂಬಾನಿ ಮದುವೆ ಸಮಾರಂಭದೊಳಗೆ ನುಸುಳಿದ್ದ ಇಬ್ಬರು ʼನಕಲಿ ಅತಿಥಿʼಗಳ ಬಂಧನ!

Anant Ambani Marriage: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಆರತಕ್ಷತೆ ಜುಲೈ 14ರಂದು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದಿತ್ತು. ಈ ವೇಳೆ ಕಾರ್ಯಕ್ರಮಕ್ಕೆ ಯೂಟ್ಯೂಬರ್ ವೆಂಕಟೇಶ್ ನರಸಯ್ಯ (26) ಮತ್ತು ಇನ್ನೊಬ್ಬ ವ್ಯಕ್ತಿ ಉದ್ಯಮಿ ಎಂದು ಹೇಳಿಕೊಂಡ ಲುಕಾಮ್ ಮೊಹಮ್ಮದ್ ಶಫಿ ಶೇಖ್ (28) ಆಂಧ್ರಪ್ರದೇಶದಿಂದ ಮುಂಬೈಗೆ ಬಂದಿದ್ದರು. ಇವರಿಗೆ ವಿವಾಹಕ್ಕೆ ಆಹ್ವಾನ ನೀಡದಿದ್ದರೂ ಕೂಡ ಗೇಟ್ ಕ್ರಾಸಿಂಗ್ ಮಾಡಿದ್ದಕ್ಕಾಗಿ ಪೊಲೀಸರು ಇಬ್ಬರ ವಿರುದ್ಧ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ಬಂಧಿಸಿದ್ದಾರೆ.

VISTARANEWS.COM


on

Anant Ambani Marriage
Koo

ಮುಂಬೈ : ಅಂಬಾನಿ ಮನೆತನದಲ್ಲಿ ಮದುವೆಯ ಸಡಗರ ಸಂಭ್ರಮ ಮನೆ ಮಾಡಿದೆ. ಅಂಬಾನಿ ಕುಟುಂಬದ ಪುತ್ರ ಅನಂತ್ ಅಂಬಾನಿಯವರ (Anant Ambani Marriage)ವಿವಾಹ ಸಮಾರಂಭದ ಪ್ರಯುಕ್ತ ಇಡೀ ಕುಟುಂಬ ವಿವಾಹ ಆಚರಣೆಯಲ್ಲಿ ಮುಳುಗಿದೆ. ಈ ನಡುವೆ ಈ ಸಮಾರಂಭದ ವೇಳೆ ಅನಂತ್ –ರಾಧಿಕಾ ಆರತಕ್ಷತೆಗೆ ಇಬ್ಬರು ವ್ಯಕ್ತಿಗಳು ಅಕ್ರಮವಾಗಿ ಪ್ರವೇಶಿಸಿ ಅಡ್ಡಿಯನ್ನುಂಟುಮಾಡಿದ್ದಾರೆ. ಜುಲೈ 14ರಂದು ನಡೆದ ಅಂಬಾನಿ ಕುಟುಂಬದ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಅವರ ವಿವಾಹ ಆರತಕ್ಷತೆ ಕಾರ್ಯಕ್ರಮಕ್ಕೆ ಆಹ್ವಾನವಿಲ್ಲದೆ ಪ್ರವೇಶಿಸಲು ಯತ್ನಸಿದ ಯೂಟ್ಯೂಬರ್ ಹಾಗೂ ಇನ್ನೊಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಆರತಕ್ಷತೆ ಜುಲೈ 14ರಂದು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದಿತ್ತು. ಈ ವೇಳೆ ಕಾರ್ಯಕ್ರಮಕ್ಕೆ ಯೂಟ್ಯೂಬರ್ ವೆಂಕಟೇಶ್ ನರಸಯ್ಯ (26) ಮತ್ತು ಇನ್ನೊಬ್ಬ ವ್ಯಕ್ತಿ ಉದ್ಯಮಿ ಎಂದು ಹೇಳಿಕೊಂಡ ಲುಕಾಮ್ ಮೊಹಮ್ಮದ್ ಶಫಿ ಶೇಖ್ (28) ಆಂಧ್ರಪ್ರದೇಶದಿಂದ ಮುಂಬೈಗೆ ಬಂದಿದ್ದರು. ಇವರಿಗೆ ವಿವಾಹಕ್ಕೆ ಆಹ್ವಾನ ನೀಡದಿದ್ದರೂ ಕೂಡ ಗೇಟ್ ಕ್ರಾಸಿಂಗ್ ಮಾಡಿದ್ದಕ್ಕಾಗಿ ಪೊಲೀಸರು ಇಬ್ಬರ ವಿರುದ್ಧ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ಇಬ್ಬರನ್ನು ಬಂಧಿಸಿದ್ದಾರೆ.

Anant Ambani Marriage

ಪೊಲೀಸರ ಪ್ರಕಾರ, ವೆಂಕಟೇಶ್ ಮತ್ತು ಲುಕಮ್ ಇಬ್ಬರೂ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ಗೆ ಆಗಮಿಸಿದ್ದರು. ಅನುಮಾನಗೊಂಡ ಭದ್ರತಾ ಅಧಿಕಾರಿಗಳು ಅವರನ್ನು ತಡೆದು ವಿಚಾರಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಇವರಿಬ್ಬರನ್ನು ಬಿಕೆಸಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರ ವಿರುದ್ಧ ಅತಿಕ್ರಮಣ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: Viral News: ಯಾರೋ ಬಿಸಾಡಿದ ಕಸದಿಂದ 56 ಲಕ್ಷ ರೂ. ಸಂಪಾದಿಸಿದ ಯುವಕ!

Anant Ambani Marriage

ನೋಟಿಸ್ ನೀಡಿದ ನಂತರ ಕಾನೂನು ಕ್ರಮ ಕೈಗೊಂಡ ಪೊಲೀಸರು ಇಬ್ಬರನ್ನು ಬಿಡುಗಡೆ ಮಾಡಿದರು ಎನ್ನಲಾಗಿದೆ. ಅನಂತ್ ಮತ್ತು ರಾಧಿಕಾ ಅವರ ವಿವಾಹ ಆರತಕ್ಷತೆಯಲ್ಲಿ ಗೋವಿಂದಾ, ಕತ್ರಿನಾ ಕೈಫ್, ವಿಕ್ಕಿ ಕೌಶಲ್, ತಮನ್ನಾ ಭಾಟಿಯಾ, ಬಿಪಾಶಾ ಬಸು, ಕರಣ್ ಸಿಂಗ್ ಗ್ರೋವರ್, ಭಾಗ್ಯಶ್ರೀ, ರಾಜ್ ಕುಮಾರ್ ರಾವ್, ಜಾಕಿ ಶ್ರಾಫ್, ಟೈಗರ್ ಶ್ರಾಫ್, ರಾಕುಲ್ ಪ್ರೀತ್ ಸಿಂಗ್ ಸೇರಿದಂತೆ ಅನೇಕ ಸಿನಿಮಾ ನಟ ನಟಿಯರು ಭಾಗವಹಿಸಿದ್ದರು. ಅದ್ಧೂರಿ ವಿವಾಹ ಆರತಕ್ಷತೆಯ ನಂತರ, ಅಂಬಾನಿ ಕುಟುಂಬವು ಮದುವೆಯ ನಂತರ ದ ಆಚರಣೆಗಳನ್ನು ಮುಂದುವರಿಸಲು ಲಂಡನ್‌ಗೆ ತೆರಳಲಿದೆ ಎಂದು ವರದಿಯಾಗಿದೆ.

Continue Reading

ಉತ್ತರ ಕನ್ನಡ

Talguppa Honnavar Railway Line: ಹೊನ್ನಾವರ-ತಾಳಗುಪ್ಪ ರೈಲ್ವೆ ಮಾರ್ಗ; ಮಂಕಿಯ ಬಿಜೆಪಿ ಮುಖಂಡರಿಂದ ಸಂಸದ ಕಾಗೇರಿಯವರಿಗೆ ಮನವಿ

Talguppa Honnavar Railway Line: ಬೆಂಗಳೂರಿನಿಂದ ಸಾಗರದ ತಾಳಗುಪ್ಪದವರೆಗೆ ರೈಲ್ವೆ ಮಾರ್ಗವಿದೆ. ಆದರೆ ಅಲ್ಲಿಂದ ಹೊನ್ನಾವರಕ್ಕೆ ಬೇರೆ ವಾಹನದಲ್ಲಿ ಬರಲು ಸಾಕಷ್ಟು ಸಮಯ ವ್ಯರ್ಥವಾಗುತ್ತದೆ. ಹಾಗಾಗಿ ತಾಳಗುಪ್ಪದಿಂದ ಹೊನ್ನಾವರದವರೆಗೆ ರೈಲ್ವೆ ಮಾರ್ಗ ನಿರ್ಮಿಸಿದರೆ ಹೊನ್ನಾವರ ಸುತ್ತಮುತ್ತಲಿನ ಜನರಿಗೆ ಬೆಂಗಳೂರಿನಿಂದ ಸುಗಮವಾಗಿ ಆಗಮಿಸಲು ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಮಂಕಿಯ ಬಿಜೆಪಿ ಮುಖಂಡರು ಮತ್ತು ನಾಗರಿಕರು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಪತ್ರ ಅರ್ಪಿಸಿದರು.

VISTARANEWS.COM


on

Talguppa Honnavar Railway Line
Koo

ಹೊನ್ನಾವರ: ಹೊನ್ನಾವರ – ತಾಳಗುಪ್ಪ ರೈಲ್ವೆ ಮಾರ್ಗ ನಿರ್ಮಿಸುವಂತೆ (Talguppa Honnavar Railway Line) ಕೇಂದ್ರ ರೈಲ್ವೆ ಇಲಾಖೆ ಮೇಲೆ ಒತ್ತಡ ಹೇರುವಂತೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಇತ್ತೀಚೆಗೆ ಮನವಿ ಪತ್ರ ನೀಡಲಾಯಿತು.

ಸಂಸದ ಕಾಗೇರಿ ಅವರಿಗೆ ನೀಡಿರುವ ಮನವಿ ಪತ್ರದ ಸಾರ ಹೀಗಿದೆ

ಹೊನ್ನಾವರ ತಾಲ್ಲೂಕಿನ ಮತದಾರರಾದ ನಾವು ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ನಮ್ಮ ತಾಲೂಕಿನ ಸಾವಿರಾರು ಯುವಕರು ಉದ್ಯೋಗದ ನಿಮಿತ್ತ ಮತ್ತು ಶಿಕ್ಷಣದ ನಿಮಿತ್ತ ಬೆಂಗಳೂರಿನಲ್ಲಿ ವಾಸವಾಗಿದ್ದು ಅವರು ರಜೆಯಲ್ಲಿ ಊರಿಗೆ ಬಂದು ಹೋಗಬೇಕಾದರೆ ಬಸ್ಸನ್ನೇ ಅವಲಂಬಿಸಬೇಕಾಗಿದೆ. ಹಬ್ಬದ ಸಂದರ್ಭದಲ್ಲಿ ಬಸ್ಸಿನ ಟಿಕೆಟ್‌ ದರ ಸಾವಿರಾರು ರೂಪಾಯಿ ಆಗುತ್ತದೆ. ನಮ್ಮೂರ ಯುವಕರು ಮತ್ತು ವಿದ್ಯಾರ್ಥಿಗಳು ಸಾಮಾನ್ಯವಾಗಿ ಆರ್ಥಿಕವಾಗಿ ಹಿಂದುಳಿದವರೇ ಆಗಿದ್ದು, ದುಬಾರಿ ಹಣ ಕೊಟ್ಟು ಊರಿಗೆ ಬರುವುದು ಕಷ್ಟಕರ.
ಇದರಿಂದಾಗಿ ಕೆಲವೊಮ್ಮೆ ಅನಿವಾರ್ಯ ಸಂದರ್ಭ ಇದ್ದರೂ ಊರಿಗೆ ಬರುವುದು ಮುಂದೂಡಬೇಕಾಗುತ್ತದೆ. ಅಲ್ಲದೇ ನಮ್ಮೂರಿನ ಕೆಲವೊಂದು ವ್ಯಾಪಾರಿಗಳು ಬೆಂಗಳೂರಿನಿಂದ ಸಾಮಾನು ಸರಂಜಾಮುಗಳನ್ನು ತರಬೇಕಾಗುತ್ತದೆ. ಅದೂ ಸಹ ಈಗಿನ ಸಾರಿಗೆ ಸ್ಥಿತಿಯಲ್ಲಿ ತರುವುದು ದುಬಾರಿಯಾಗುತ್ತಿದೆ. ಅಲ್ಲದೇ ನಮ್ಮ ಜಿಲ್ಲೆಯ ಕೆಲವು ಅನಾರೋಗ್ಯ ಪೀಡಿತ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಕರೆದೊಯ್ಯಬೇಕಾದರೂ ತುಂಬಾ ತೊಂದರೆ ಆಗುತ್ತಿದೆ.

ಇದನ್ನೂ ಓದಿ: Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

ಇವೆಲ್ಲ ಸಮಸ್ಯೆ ಬಗೆಹರಿಯಬೇಕಾದರೆ ಹೊನ್ನಾವರ – ತಾಳಗುಪ್ಪ ರೈಲ್ವೆ ಮಾರ್ಗ ಮಂಜೂರಾತಿ ಆಗಿ ರೈಲ್ವೆ ಓಡಾಟ ಆರಂಭವಾಗಬೇಕು. ಹಾಗಾಗಿ ದಯಾಳುಗಳಾದ ತಾವು ಈ ರೈಲ್ವೆಯ ಕುರಿತು ವಿಶೇಷ ಕಾಳಜಿ ವಹಿಸಿ ಈ ರೈಲ್ವೇ ಮಂಜೂರಾತಿ ಬಗ್ಗೆ ರೈಲ್ವೆ ಸಚಿವರ ಹತ್ತಿರ ಈ ಬಗ್ಗೆ ಮಾತಾಡಿದರೆ ಈ ಕಾರ್ಯ ಆಗಬಹುದು. ದಯವಿಟ್ಟು ತಾವು ಈ ಬಗ್ಗೆ ಕಾಳಜಿ ವಹಿಸಿ ನಮ್ಮ ಊರಿನ ಸಮಸ್ಯೆಯನ್ನು ಬಗೆಹರಿಸಿಕೊಡಬೇಕು ಎಂದು ಮನವಿ ಮಾಡಲಾಗಿದೆ.
ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮಂಕಿಯ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಿಂದ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಂಕಿ ಬಿಜೆಪಿ ಓಬಿಸಿ ಕಾರ್ಯದರ್ಶಿ ಆನಂದ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಸುಬ್ರಾಯ ನಾಯ್ಕ, ಓಬಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ನಾಯ್ಕ, ಸತೀಶ್ ನಾಯ್ಕ, ಸುಬ್ರಾಯ ನಾಯ್ಕ ಬೊಳೆಬಸ್ತಿ, ಸುರೇಶ್ ನಾಯ್ಕ (ಬುಡ್ಡಾ) ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು. ಮನವಿ ಸ್ವೀಕರಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ತಾಳಗುಪ್ಪ-ಹೊನ್ನಾವರ ರೈಲ್ವೆ ಮಾರ್ಗದ ಬೇಡಿಕೆ ಈಡೇರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

Continue Reading
Advertisement
Pooja Khedkar
ದೇಶ1 min ago

Pooja Khedkar: ಎಂಬಿಬಿಎಸ್ ಪ್ರವೇಶಕ್ಕೆ ಒಬಿಸಿ ಕೆನೆಪದರ ರಹಿತ ಪ್ರಮಾಣಪತ್ರ ಸಲ್ಲಿಸಿದ್ದ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್

Omar Abdullah
ದೇಶ1 min ago

‘ಆಜಾದ್‌ ಕಾಶ್ಮೀರ’ ಎನ್ನುತ್ತಿದ್ದ ಒಮರ್‌ ಅಬ್ದುಲ್ಲಾ ಈಗ ಪತ್ನಿಯಿಂದ ಸ್ವಾತಂತ್ರ್ಯ ಕೊಡಿಸಿ ಎಂದು ಕೋರ್ಟ್‌ ಮೊರೆ!

Katrina Pregnancy Rumours Vicky Kaushal Silence
ಬಾಲಿವುಡ್3 mins ago

Katrina Kaif: ಕತ್ರಿನಾ ಕೈಫ್ ಪ್ರೆಗ್ನೆನ್ಸಿ ವದಂತಿಗಳ ಬಗ್ಗೆ ಮೌನ ಮುರಿದ ವಿಕ್ಕಿ ಕೌಶಲ್!

kalaburagi News
ಕಲಬುರಗಿ5 mins ago

Kalaburagi News : ಕಲಬುರಗಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ; ನದಿಗೆ ಹಾರಿ ಯುವಕ-ಯುವತಿ ಆತ್ಮಹತ್ಯೆ

Ban on PTI
ವಿದೇಶ22 mins ago

Ban on PTI: ಇಮ್ರಾನ್‌ ಖಾನ್‌ಗೆ ಬಿಗ್‌ ಶಾಕ್‌! ಪಿಟಿಐ ಪಕ್ಷದ ಮೇಲೆ ನಿಷೇಧ

dcm dk shivakumar
ಪ್ರಮುಖ ಸುದ್ದಿ53 mins ago

DK Shivakumar: `ಲೋಕಾಯುಕ್ತಕ್ಕೆ ಕೊಟ್ಟ ಮೇಲೆ ಸಿಬಿಐಗೇನು ಕೆಲಸ?’ ಅಕ್ರಮ ಆಸ್ತಿ ಕೇಸ್‌ ಬಗ್ಗೆ ಡಿಕೆ ಶಿವಕುಮಾರ್‌ ಪ್ರಶ್ನೆ

DK Shivakumar cbi supreme court
ಪ್ರಮುಖ ಸುದ್ದಿ2 hours ago

DK Shivakumar: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಡಿಕೆಶಿಗೆ ಶಾಕ್‌, ಸಿಬಿಐ ತನಿಖೆ ಕೈಬಿಡಲು ಸುಪ್ರೀಂ ಕೋರ್ಟ್‌ ನಕಾರ

Healthy Heart Tips
ಆರೋಗ್ಯ2 hours ago

Healthy Heart Tips: ನಿಮ್ಮ ಹೃದಯ ಆರೋಗ್ಯವಾಗಿರಬೇಕೆ? ಮಳೆಗಾಲದಲ್ಲಿ ಈ ಏಳು ಆಹಾರಗಳಿಂದ ದೂರವಿರಿ!

actor Chetan
ಸಿನಿಮಾ3 hours ago

Actor Chetan: ವಿಧಾನಸೌಧದ ಮುಂದೆ ಭುವನೇಶ್ವರಿ ಪ್ರತಿಮೆ ಬೇಡ: ನಟ ಚೇತನ್‌

Ragini Prajwal shanabhogara magalu will release
ಸ್ಯಾಂಡಲ್ ವುಡ್3 hours ago

Ragini Prajwal: ರಾಗಿಣಿ ಪ್ರಜ್ವಲ್ ಅಭಿನಯದ `ಶಾನುಭೋಗರ ಮಗಳು’ ಚಿತ್ರ ಸದ್ಯದಲ್ಲೇ ತೆರೆಗೆ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ6 hours ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ10 hours ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ23 hours ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ1 day ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ1 day ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ1 day ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ2 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ2 days ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

karnataka Rain Effect
ಮಳೆ4 days ago

Karnataka Rain : ಭಾರಿ ಮಳೆಗೆ ಕರೆಯಂತಾದ ರಸ್ತೆಯಲ್ಲಿ ಬೈಕ್‌ ಚಲಾಯಿಸಿ ಮುಗ್ಗರಿಸಿ ಬಿದ್ದ ಸವಾರರು; ನಾಳೆಗೂ ರೈನ್‌ ಅಲರ್ಟ್‌

ಟ್ರೆಂಡಿಂಗ್‌