Pets in Designer Outfits : ಅನಂತ್-ರಾಧಿಕಾ ಮದುವೆಯಲ್ಲಿ ಅಂಬಾನಿ ಕುಟುಂಬದ ನಾಯಿಗಳ ಸಂಭ್ರಮ ನೋಡಿ! - Vistara News

Latest

Pets in Designer Outfits : ಅನಂತ್-ರಾಧಿಕಾ ಮದುವೆಯಲ್ಲಿ ಅಂಬಾನಿ ಕುಟುಂಬದ ನಾಯಿಗಳ ಸಂಭ್ರಮ ನೋಡಿ!

Pets in Designer Outfits: ಅಹ್ಮದಾಬಾದ್‍ನ ಡಿಸೈನರ್ ಪೆಟ್‌ವೇರ್ ಬ್ರಾಂಡ್ ಅಂಬಾನಿ ಕುಟುಂಬದ ಸಾಕುಪ್ರಾಣಿಗಳಿಗಾಗಿ 29ಕ್ಕೂ ಹೆಚ್ಚು ಉಡುಪುಗಳನ್ನು ವಿನ್ಯಾಸಗೊಳಿಸಿದೆ. “ನಾವು ನಾಯಿಗಳಿಗಾಗಿ 29 ಉಡುಗೆಗಳನ್ನು ತಯಾರಿಸಿದ್ದೇವೆ, ಅವುಗಳಲ್ಲಿ 14 #HappyAmbani ಮತ್ತು 14#PopcornMerchant ಗಾಗಿ ಟ್ವಿನ್ನಿಂಗ್ ಮತ್ತು 1#ChasePiramalಗಾಗಿ. ನೀವೆಲ್ಲರೂ ನಮ್ಮ ಕೆಲಸವನ್ನು ಇಷ್ಟಪಟ್ಟಿದ್ದೀರಿ ಎಂದು ನಮಗೆ ತುಂಬಾ ಸಂತೋಷವಾಗಿದೆ. ನಮ್ಮ ಬ್ರಾಂಡ್‍ನಲ್ಲಿ ನಂಬಿಕೆ ಇಟ್ಟಿದ್ದಕ್ಕಾಗಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರಿಗೆ ನಾವು ಧನ್ಯವಾದ ಅರ್ಪಿಸುತ್ತೇವೆ” ಎಂದು ಬ್ರಾಂಡ್ ತನ್ನ ಇನ್ಸ್ಟಾಗ್ರಾಮ್‍ನಲ್ಲಿ ಬರೆದಿದೆ.

VISTARANEWS.COM


on

Pets in Designer Outfits
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ : ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಅವರ ವಿವಾಹದ ಸಂಭ್ರಮಾಚರಣೆಯಲ್ಲಿ ಅಂಬಾನಿ ಕುಟುಂಬದವರು ಬಣ್ಣ ಬಣ್ಣದ ಹಾಗೂ ಚಿನ್ನದಿಂದ ತಯಾರಿಸಿದ ಬಟ್ಟೆಗಳನ್ನು ಧರಿಸಿ ಮಿಂಚಿದ್ದಾರೆ. ಮಾತ್ರವಲ್ಲ ಈ ಮದುವೆಯಲ್ಲಿ ಅವರ ಮನೆಯಲ್ಲಿ ಸಾಕಿದ ನಾಯಿಗಳಿಗೂ (Pets in Designer Outfits) ಕೂಡ ವಿಶೇಷವಾಗಿ ವಿನ್ಯಾಸ ಮಾಡಿದ ಬಟ್ಟೆಗಳನ್ನು ತೊಡಿಸಿದ್ದಾರೆ. ಹಾಗಾಗಿ ಅವುಗಳು ಅನಂತ್ ಮದುವೆಯಲ್ಲಿ ಬಹಳ ಅದ್ಭುತವಾಗಿ ಕಾಣುತ್ತಿದ್ದವು. ಮದುವೆಯಲ್ಲಿ ಅವುಗಳು ಸುಂದರವಾದ ಬಟ್ಟೆಯಲ್ಲಿ ಮಿಂಚಿದ ವಿಡಿಯೊ ವೈರಲ್ ಆಗಿದೆ.

ಅಹ್ಮದಾಬಾದ್‍ನ ಡಿಸೈನರ್ ಪೆಟ್‌ವೇರ್ ವಿನ್ಯಾಸಗೊಳಿಸಿದ ಸೂಪರ್ ಸ್ಟೈಲಿಶ್ ಗುಲಾಬಿ ಬನಾರಸಿ ಸಿಲ್ಕ್ ಬ್ರೊಕೇಡ್ ಜಾಕೆಟ್ ಧರಿಸಿ ಗೋಲ್ಡನ್ ರಿಟ್ರೀವರ್ ಹ್ಯಾಪಿ (ನಾಯಿ) ಅಂಬಾನಿ ಮದುವೆ ಮಂಟಪದಲ್ಲಿ ಕಂಡುಬಂದಿದೆ.

ಹ್ಯಾಪಿಗಾಗಿ ತಯಾರಿಸಿದ ಕಸ್ಟಮ್-ಮೇಡ್ ಉಡುಪುಗಳನ್ನು ಬಹಿರಂಗಪಡಿಸುವ ವಿಡಿಯೊವನ್ನು ಬ್ರಾಂಡ್ ಹಂಚಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಹ್ಯಾಪಿಗೆ ಮಾತ್ರ ಫ್ಯಾಶನ್ ಡ್ರೆಸ್ ತೊಡಿಸಿರಲಿಲ್ಲ, ಅದರ ಜೊತೆ ರಾಧಿಕಾ ಕುಟುಂಬದ ಬುಲ್ಡಾಗ್ ಪಾಪ್ಕಾರ್ನ್ ಮರ್ಚೆಂಟ್ ಕೂಡ ಕೆಲವು ಡಿಸೈನರ್ ಉಡುಪುಗಳನ್ನು ಧರಿಸಿ ಮಿಂಚಿತು.

ಅಲ್ಲದೇ ಮುಕೇಶ್-ನೀತಾ ಅಂಬಾನಿಯವರ ಪುತ್ರಿ ಇಶಾ ಅಂಬಾನಿ ಅವರ ಪತಿ ಆನಂದ್ ಪಿರಮಾಲ್ ಅವರ ಕುಟುಂಬದ ನಾಯಿ ಚೇಸ್ ಪಿರಮಾಲ್ ಕೂಡ ಮದುವೆಗೆ ಡಿಸೈನ್‌ನಿಂದ ಕೂಡಿದ ಬಟ್ಟೆಯನ್ನು ಧರಿಸಿ ತಾನೇನು ಕಡಿಮೆ ಇಲ್ಲ ನೋಡಿ ಎಂದು ಬೀಗಿತು.

ಅಹ್ಮದಾಬಾದ್‍ನ ಡಿಸೈನರ್ ಪೆಟ್‌ವೇರ್ ಬ್ರಾಂಡ್ ಈ ಕುಟುಂಬದ ಸಾಕುಪ್ರಾಣಿಗಳಿಗಾಗಿ 29 ಕ್ಕೂ ಹೆಚ್ಚು ಉಡುಪುಗಳನ್ನು ವಿನ್ಯಾಸಗೊಳಿಸಿದೆ. “ನಾವು ನಾಯಿಗಳಿಗಾಗಿ 29 ಉಡುಗೆಗಳನ್ನು ತಯಾರಿಸಿದ್ದೇವೆ, ಅವುಗಳಲ್ಲಿ 14 #HappyAmbani ಮತ್ತು 14#PopcornMerchant ಗಾಗಿ ಟ್ವಿನ್ನಿಂಗ್ ಮತ್ತು 1#ChasePiramal ನೀವೆಲ್ಲರೂ ನಮ್ಮ ಕೆಲಸವನ್ನು ಇಷ್ಟಪಟ್ಟಿದ್ದೀರಿ ಎಂದು ನಮಗೆ ತುಂಬಾ ಸಂತೋಷವಾಗಿದೆ. ನಮ್ಮ ಬ್ರಾಂಡ್‍ನಲ್ಲಿ ನಂಬಿಕೆ ಇಟ್ಟಿದ್ದಕ್ಕಾಗಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರಿಗೆ ನಾವು ಧನ್ಯವಾದ ಅರ್ಪಿಸುತ್ತೇವೆ” ಎಂದು ಬ್ರಾಂಡ್ ತನ್ನ ಇನ್ಸ್ಟಾಗ್ರಾಮ್‍ನಲ್ಲಿ ಬರೆದಿದೆ.

ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಜನರು ಆಶ್ವರ್ಯ ವ್ಯಕ್ತಪಡಿಸಿದ್ದಾರೆ ಮತ್ತು ಹಲವರು ಕಾಮೆಂಟ್ ಕೂಡ ಮಾಡಿದ್ದಾರೆ. ಒಬ್ಬ ಬಳಕೆದಾರರು ನಾಯಿಗಳು ನಮಗಿಂತ ಒಳ್ಳೆಯ ಬಟ್ಟೆಗಳನ್ನು ಧರಿಸಿವೆ ಎಂದು ಹೇಳಿದ್ದಾರೆ. ಮತ್ತೊಬ್ಬರು ನಾಯಿಗಳೆಲ್ಲವೂ ಬಟ್ಟೆ ಧರಿಸಿ ತುಂಬಾ ಸುಂದರವಾಗಿ ಕಾಣುತ್ತಿವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:  ಬಿಸ್ಕೆಟ್‌ಗೆ ಆಸೆ ಪಟ್ಟು ಹೋಗಿದ್ದ ಪುಟ್ಟ ಬಾಲಕಿ ಕಾಮುಕನ ಕೈಗೆ ಸಿಕ್ಕಿ ಕೊಲೆಯಾದಳು

ಜನವರಿ 2023 ರಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ನಿಶ್ಚಿತಾರ್ಥದ ಪಾರ್ಟಿಯಲ್ಲಿ ಹ್ಯಾಪಿ ಕುಟುಂಬದ ಭಾವಚಿತ್ರಕ್ಕೆ ಪೋಸ್ ನೀಡುವ ಮೂಲಕ ಜನರ ಮನಗೆದ್ದಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಬೆಂಗಳೂರು

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯ

Bengaluru Power Cut: ಬೆಂಗಳೂರು ನಗರದ 66/11 KV ಗೋಕುಲ ಎಂ.ಯು.ಎಸ್.ಎಸ್. ಉಪಕರಣಗಳಾದ CTs, CBs,Tine GOSBs, Line GOSBs, Line ಉಪಕರಣಗಳ ವಾರ್ಷಿಕ ನಿರ್ವಹಣೆ ಮತ್ತು ನಿರ್ವಹಣೆ ಕೆಲಸ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಜು.20 ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಬೆಂಗಳೂರು ಉತ್ತರ ವೃತ್ತದ ಅಧೀಕ್ಷಕ ಎಂಜಿನಿಯರ್‌ ತಿಳಿಸಿದ್ದಾರೆ.

VISTARANEWS.COM


on

Bengaluru power cut July 20th power outage in many parts of Bengaluru
Koo

ಬೆಂಗಳೂರು: ನಗರದ 66/11 KV ಗೋಕುಲ ಎಂ.ಯು.ಎಸ್.ಎಸ್. ಉಪಕರಣಗಳಾದ CTs, CBs,Tine GOSBs, Line GOSBs, Line ಉಪಕರಣಗಳ ವಾರ್ಷಿಕ ನಿರ್ವಹಣೆ ಮತ್ತು ನಿರ್ವಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು (Bengaluru Power Cut) ನಗರದ ಹಲವೆಡೆ ಜು.20 ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಬೆಂಗಳೂರು ಉತ್ತರ ವೃತ್ತದ ಅಧೀಕ್ಷಕ ಎಂಜಿನಿಯರ್‌ ತಿಳಿಸಿದ್ದಾರೆ.

ಇದನ್ನೂ ಓದಿ: Indian Olympics History: ಭಾರತಕ್ಕೆ ಒಲಿಂಪಿಕ್ಸ್​ನಲ್ಲಿ ವೈಯಕ್ತಿಕ ಚಿನ್ನ ಗೆದ್ದ ಮೊದಲ ಸಾಧಕ ಅಭಿನವ್‌ ಬಿಂದ್ರಾ

ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು

ನಗರದ ಗೋಕುಲ ಎಂ.ಯು.ಎಸ್.ಎಸ್., ಡಿ.ಬಿ. ಸಂದ್ರಾ 4ನೇ ಬ್ಲಾಕ್, ಜೆ.ಬಿ. ಕಾವಲ್ ಅರಣ್ಯ, ಗಂಗಮ್ಮ ವೃತ್ತ, ಡಿ.ಬಿ.ಸಂದ್ರ 2ನೇ ಬ್ಲಾಕ್, ಕಮ್ಮಗೊಂಡನಹಳ್ಳಿ, ಬಿಇಎಲ್ ಉತ್ತರ ಕಾಲೋನಿ ಮತ್ತು ಬಿಇಎಲ್ ಸೌತ್ ಕಾಲೋನಿ, ಬಾಹುಬಲಿ ನಗರ, ಡಿ.ಬಿ.ಸಂದ್ರ 4ನೇ ಬ್ಲಾಕ್, ಪಟೇಲ್ ಪಿಳ್ಳೇಗೌಡ ಲೇಔಟ್, ಬ್ಲೂಮ್ ಫೀಲ್ಡ್ ಗಾರ್ಡನ್, ರಾಮಚಂದ್ರಾಪುರ, ಜಾಲಹಳ್ಳಿ ಗ್ರಾಮ, ಶಾರದಾಂಬನಗರ, ಬಾಹುಬಲಿನಗರ, ಎಚ್‌ಎಂಟಿ (HMT) ಇಂಡಸ್ಟ್ರಿಯಲ್ ಎಸ್ಟೇಟ್, ಪ್ರೆಸ್ಟೀಜ್ ವೆಲ್ಲಿಂಗ್ಟನ್ ಮತ್ತು ಪ್ರೆಸ್ಟೀಜ್ ಕೆನ್ಸಿಂಗ್ಟನ್ ಅಪಾರ್ಟ್‌ಮೆಂಟ್, ಮುತ್ಯಾಲನಗರ, ಚಾಮುಂಡೇಶ್ವರಿ ಲೇಔಟ್, ನಂಜಪ್ಪ ಲೇಔಟ್, ಸಿ. ರಾಮಯ್ಯ ಲೇಔಟ್, ಗೋಕುಲ ಎಕ್ಸ್‌ಟಿಎನ್, ಎಚ್‌ಎಂಆರ್‌ ಲೇಔಟ್ ಎಂಆರ್‌ಟಿಡಿಸಿ. ಪ್ರೆಸ್ಟೀಜ್ ಅಪಾರ್ಟ್ಮೆಂಟ್ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.

ವಿದ್ಯುತ್ ಸಂಬಂಧಿತ ದೂರುಗಳಿಗಾಗಿ ಬೆ.ವಿ.ಕಂ ಸಹಾಯವಾಣಿ ಸಂಖ್ಯೆ ‘1912’ ಸಂಪರ್ಕಿಸಬಹುದಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ʼಸರ್ ಎಂ.ವಿ. 220/66/11ಕೆ.ವಿ ಜಿ.ಐ.ಎಸ್ ಇಡಿಸಿʼ ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ಕಾರ್ಯ, ವಿದ್ಯುತ್‌ ವ್ಯತ್ಯಯ

ಬೆಂಗಳೂರು ನಗರದ ʼಸರ್ ಎಂ.ವಿ. 220/66/11ಕೆ.ವಿ ಜಿ.ಐ.ಎಸ್ ಇಡಿಸಿʼ ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ಕೆಲಸ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು (Bengaluru Power Cut) ನಗರದ ಹಲವೆಡೆ ಜು.20 ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಬೆಂಗಳೂರು ಪೂರ್ವ ವೃತ್ತದ ಅಧೀಕ್ಷಕ ಎಂಜಿನಿಯರ್‌ ತಿಳಿಸಿದ್ದಾರೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ನಗರದ ರೆಸಿಡೆನ್ಸಿ ರಸ್ತೆ, ಹೊಂಡೈ ಆರ್.ಎಂ.ಯು, ಲ್ಯಾವೆಲ್ಲೆ ರಸ್ತೆ, ವಾಲ್ಟನ್ ರಸ್ತೆ, ವಿಟ್ಟಲ್ ಮಲ್ಯ ರಸ್ತೆ, ಚರ್ಚ್‌ ಸ್ಟ್ರೀಟ್, ಕಸ್ತೂರ್ಬಾ ರಸ್ತೆ, ಸೇಂಟ್ ಮಾರ್ಕ್ಸ್‌ ರಸ್ತೆ, ಕ್ವೀನ್ಸ್ ವೃತ್ತ, ರೆಸಿಡೆನ್ಸಿ ರಸ್ತೆ ಕ್ರಾಸ್, ಐ.ಟಿ.ಸಿ ಹೋಟೆಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.

66/11ಕೆ.ವಿ ಬಾಗಮನೆ ಟೆಕ್‌ಪಾರ್ಕ್ ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ನಿರ್ವಹಣಾ ಕಾರ್ಯ, ವಿದ್ಯುತ್‌ ವ್ಯತ್ಯಯ

ಬೆಂಗಳೂರು ನಗರದ 66/11ಕೆ.ವಿ ಬಾಗಮನೆ ಟೆಕ್‌ಪಾರ್ಕ್ ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ನಿರ್ವಹಣಾ ಕೆಲಸ ಕೈಗೊಳ್ಳುವ ಹಿನ್ನೆಲೆಯಲ್ಲಿ ನಗರದ ಹಲವೆಡೆ ಜು.20 ರಂದು ಶನಿವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಬೆಂಗಳೂರು ಪೂರ್ವ ವೃತ್ತದ ಅಧೀಕ್ಷಕ ಎಂಜಿನಿಯರ್‌ ತಿಳಿಸಿದ್ದಾರೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ನಗರದ ಟಿ.ಟಿ.ಕೆ. ಪ್ರೆಸ್ಟೀಜ್ ಅಪಾರ್ಟ್‌ಮೆಂ, ಬೈರಸಂದ್ರ, ಗುಂಡಪ್ಪ ಲೇಔಟ್, ಓಂ ಶಕ್ತಿ ದೇವಸ್ಥಾನ, ಕಗ್ಗದಾಸಪುರ 1ನೇ ಅಡ್ಡ ರಸ್ತೆಯಿಂದ 19ನೇ ಅಡ್ಡರಸ್ತೆ, ಭೂವನೇಶ್ವರಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.

66/11 ಕೆ.ವಿ. ಶೋಭಾ ಸಿಟಿ ಉಪ-ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯ; ವಿದ್ಯುತ್‌ ವ್ಯತ್ಯಯ

ಬೆಂಗಳೂರು ನಗರದ 66/11 ಕೆ.ವಿ. ಶೋಭಾ ಸಿಟಿ ಉಪ-ಕೇಂದ್ರದಲ್ಲಿ ತುರ್ತು ನಿರ್ವಹಣಾ ಕೆಲಸ ಕೈಗೊಳ್ಳುವ ಹಿನ್ನೆಲೆಯಲ್ಲಿ ನಗರದ ಹಲವೆಡೆ ಜು.20 ರಂದು ಶನಿವಾರ ಬೆಳಗ್ಗೆ 11ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಬೆಂಗಳೂರು ಪೂರ್ವ ವೃತ್ತದ ಅಧೀಕ್ಷಕ ಎಂಜಿನಿಯರ್‌ ತಿಳಿಸಿದ್ದಾರೆ.

ಇದನ್ನೂ ಓದಿ: Indian Navy Recruitment: ಭಾರತೀಯ ನೌಕಾ ಪಡೆಯಲ್ಲಿದೆ 741 ಹುದ್ದೆ; 10ನೇ ತರಗತಿ ಪಾಸಾದವರಿಗೂ ಇದೆ ಅವಕಾಶ

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ಶೋಭಾ ಸಿಟಿ, ಚೊಕ್ಕನಹಳ್ಳಿ, ಡೋಮಿನೊ ಪಿಜ್ಜಾ ಇನ್ ಪ್ಯಾರಡೈಸ್ ನೂರ್ ನಗರ, ಎಕ್ಸ್ ಸರ್ವಿಸ್‌ಮೆನ್ ಲೇಔಟ್, ಪೊಲೀಸ್ ಕ್ವಾಟ್‌ರ್ಸ್, ಆರ್.ಕೆ. ಹೆಗ್ಡೆ ನಗರ, ಶಬರಿ ನಗರ, ಹೊಸ ಶಾಂತಿ ನಗರ, ಕೆಂಪೇಗೌಡ ಲೇಯು, ನಾಗೇನಹಳ್ಳಿ ಗ್ರಾಮ, ರೀಜೆನ್ಸಿ ಪಾರ್ಕ್‌, ಎಸ್ತರ್ ಹರ‍್ಮೋನಿಕ್ ಲೇಔಟ್, ಬಾಲಾಜಿ ಲೇಔಟ್, ನಾಗೇನಹಳ್ಳಿ ಜಿಮ್, ಸ್ಲಂ ಬೋರ್ಡ್‌ ಮತ್ತು ಬೆಂಚ್ ರಾಯಲ್‌ವುಡ್, ರ‍್ಕಾವತಿ ಲೇಔಟ್, ಥಣಿಸಂದ್ರ, ಆರ್ ಕೆ ಹೆಗಡೆ ನಗರ, ಬೆಳ್ಳಹಳ್ಳಿ ಗ್ರಾಮ, ತಿರುಮೇನಹಳ್ಳಿ ಗ್ರಾಮ, ಮಿತ್ತಗಾನಹಳ್ಳಿ ಮತ್ತು ಕೋಗಿಲು ಗ್ರಾಮ, ಬೆಲಹಳ್ಳಿ, ವಿಧಾನಸೌಧ ಲೇಔಟ್, ಕರ್ನಾಟಕ ಕಾಲೇಜು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

Continue Reading

ಧಾರ್ಮಿಕ

Vastu Tips: ಮನೆಯಲ್ಲಿ ಸಂಪತ್ತು ಸದಾ ತುಂಬಿರಬೇಕೆ? ಈ ನಿಯಮ ಪಾಲಿಸಿ

ಬಹಳಷ್ಟು ವ್ಯಕ್ತಿಗಳು ಹಣ ಮಾಡುವ ವಿಶ್ವಾಸದಿಂದ ತಮ್ಮ ಪರ್ಸ್‌ನಲ್ಲಿ ಸಣ್ಣ ಕೆಂಪು ಬಟ್ಟೆ ಅಥವಾ ಅಕ್ಷತೆಯನ್ನು ಇಟ್ಟಿರುತ್ತಾರೆ. ಆದರೆ ಇದು ಎಷ್ಟರ ಮಟ್ಟಿಗೆ ಅವರಿಗೆ ಯಶಸ್ಸು ತರುತ್ತೆ ಎಂಬುದನ್ನು ಅವರೇ ಹೇಳಬೇಕು. ಅತೀ ಬೇಗ ಶ್ರೀಮಂತರಾಗಬೇಕು, ಹಣದ ಕೊರತೆ ಎದುರಾಗಬಾರದು ಎಂದು ಬಯಸುವವರು ವಾಸ್ತುಶಾಸ್ತ್ರ (Vastu Tips) ಹೇಳಿರುವ ಈ ನಿಯಮಗಳನ್ನು ಪಾಲಿಸಬಹುದು.

VISTARANEWS.COM


on

By

Vastu Tips
Koo

ಜೀವನದಲ್ಲಿ ಒಂದಲ್ಲ ಒಂದು ಬಾರಿ ಪ್ರತಿಯೊಬ್ಬರಿಗೂ ಹಣದ (money) ಕೊರತೆ ಖಂಡಿತ ಕಾಡುತ್ತದೆ. ಕಷ್ಟಕರವಾದ ಆರ್ಥಿಕ ಪರಿಸ್ಥಿತಿಯಿಂದ (financial situation) ಮೇಲೇಳುವುದು ಸುಲಭದ ಮಾತಲ್ಲ. ಅದಕ್ಕಾಗಿ ತೀವ್ರ ಹೋರಾಟ, ಪರಿಶ್ರಮ ಬೇಕಾಗುತ್ತದೆ. ವಾಸ್ತುಶಾಸ್ತ್ರವು (Vastu Tips) ಹಣದ ಕೊರತೆಯನ್ನು ನಿರ್ವಹಿಸಲು ಕೆಲವೊಂದು ಸರಳ ಉಪಾಯಗಳನ್ನು ಹೇಳಿದೆ. ಮನೆಯಲ್ಲಿ ಆರ್ಥಿಕ ಸಂಕಷ್ಟ ಎದುರಾದಾಗ ಕೆಲವು ವಾಸ್ತು ನಿಯಮಗಳನ್ನು ಪಾಲಿಸಿ ಅದರಿಂದ ಮುಕ್ತರಾಗಬಹುದು.

ಬಹಳಷ್ಟು ವ್ಯಕ್ತಿಗಳು ಹಣ ಮಾಡುವ ವಿಶ್ವಾಸದಿಂದ ತಮ್ಮ ಪರ್ಸ್‌ನಲ್ಲಿ ಸಣ್ಣ ಕೆಂಪು ಬಟ್ಟೆ ಅಥವಾ ಅಕ್ಷತೆಯನ್ನು ಇಟ್ಟಿರುತ್ತಾರೆ. ಆದರೆ ಇದು ಎಷ್ಟರ ಮಟ್ಟಿಗೆ ಅವರಿಗೆ ಯಶಸ್ಸು ತರುತ್ತೆ ಎಂಬುದನ್ನು ಅವರೇ ಹೇಳಬೇಕು. ಅತೀ ಬೇಗ ಶ್ರೀಮಂತರಾಗಬೇಕು, ಹಣದ ಕೊರತೆ ಎದುರಾಗಬಾರದು ಎಂದು ಬಯಸುವವರು ವಸ್ತು ಶಾಸ್ತ್ರ ಹೇಳಿರುವ ಈ ನಿಯಮಗಳನ್ನು ಪಾಲಿಸಿರಿ.


ಸುರಕ್ಷಿತ ದ್ವಾರವು ಉತ್ತರದ ಕಡೆಗೆ ತೆರೆಯಬೇಕು

ಉತ್ತರ ದಿಕ್ಕು ಸಂಪತ್ತಿನ ಒಡೆಯ ಕುಬೇರನದ್ದು ಎಂದು ಹೇಳಲಾಗುತ್ತದೆ. ಹೀಗಾಗಿ ನಾವು ನಮ್ಮ ಸಂಪತ್ತು ಇಡಲು ಬಳಸುವ ಕೋಣೆಯಲ್ಲಿ ವಾಸ್ತು ನಿಯಮದ ಪ್ರಕಾರ ಕೆಲವೊಂದು ಮಾರ್ಗಸೂಚಿಗಳನ್ನು ಅನುಸರಿಸಬೇಕು.

ಇದಕ್ಕಾಗಿ ಗೊತ್ತುಪಡಿಸಿದ ಕೊಠಡಿಯಲ್ಲಿ ಸಂಪತ್ತನ್ನು ಸುರಕ್ಷಿತವಾಗಿರಿಸಲು ಸುರಕ್ಷಿತ ಮತ್ತು ದಕ್ಷಿಣ ಗೋಡೆಯ ನಡುವೆ ಯಾವಾಗಲೂ ಕನಿಷ್ಠ ಒಂದು ಇಂಚು ಇರಬೇಕು. ಇದರ ಜೊತೆಗೆ, ಆಗ್ನೇಯ ಮತ್ತು ನೈಋತ್ಯ ಮೂಲೆಗಳು ಸಂಪತ್ತನ್ನು ಸುರಕ್ಷಿತವಾಗಿರಿಸಲು ಉತ್ತಮ ಸ್ಥಳಗಳಲ್ಲ.ಸಂಪತ್ತನ್ನು ಸುರಕ್ಷಿತವಾಗಿರಿಸುವ ಕಪಾಟಿನ ಹಿಂಭಾಗವು ದಕ್ಷಿಣಾಭಿಮುಖವಾಗಿ ತೆರೆಯಬೇಕು. ಅಂದರೆ ಅದರ ಬಾಗಿಲು ಉತ್ತರಕ್ಕೆ ಎದುರಾಗಿರಬೇಕು.

ಕೋಣೆಯಲ್ಲಿ ಬೆಳಕು

ಕೋಣೆಯ ಬಾಗಿಲನ್ನು ಉತ್ತರ ಅಥವಾ ಪೂರ್ವಕ್ಕೆ ತೆರೆಯುವುದು ಅತ್ಯಂತ ಮಂಗಳಕರ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಇದು ಸಮೃದ್ಧಿ ಮತ್ತು ಸಂಪತ್ತನ್ನು ತರುತ್ತದೆ ಎಂದು ಭಾವಿಸಲಾಗಿದೆ. ಉತ್ತರಕ್ಕೆ ಎದುರಾಗಿರುವ ಬಾಗಿಲಿನ ಮುಂದೆ ಯಾವುದೇ ರೀತಿಯ ಅಡ್ಡವಾಗಿ ವಸ್ತು, ಗೋಡೆಗಳನ್ನು ಇಡಬಾರದು. ಗುಪ್ತ ಕೋಣೆಯಲ್ಲಿ ಗಾಳಿ ಮತ್ತು ಬೆಳಕಿಗೂ ಹೆಚ್ಚು ಆದ್ಯತೆ ಕೊಡಬೇಕು. ಗುಪ್ತ ಕೋಣೆಯ ಮೇಲ್ಭಾಗದಲ್ಲಿ ಉತ್ತರ ಅಥವಾ ಪೂರ್ವಕ್ಕೆ ಎದುರಾಗಿರುವ ಸಣ್ಣ ಕಿಟಕಿಯನ್ನು ಹೊಂದುವುದು ಅದೃಷ್ಟ ತರುತ್ತದೆ ಎಂದೇ ಭಾವಿಸಲಾಗುತ್ತದೆ.

ಇದನ್ನೂ ಓದಿ: Vastu Tips: ನಿಮಗೆ ರಾತ್ರಿ ಸರಿಯಾಗಿ ನಿದ್ದೆ ಬರುತ್ತಿಲ್ಲವೇ? ಹಾಗಿದ್ದರೆ ಹೀಗೆ ಮಾಡಿ ನೋಡಿ!


ಹಣದ ವಹಿವಾಟುಗಳು

ಬ್ರಾಹ್ಮಿ ಮುಹೂರ್ತ ಅಥವಾ ಸಂಜೆಯ ಸಮಯದಲ್ಲಿ ಹಣದ ವ್ಯವಹಾರವನ್ನು ಎಂದಿಗೂ ಮಾಡಬೇಡಿ. ಇದನ್ನು ಪಾಲಿಸಿದರೆ ಎಂದಿಗೂ ಹಣದ ಕೊರತೆಯಾಗುವುದಿಲ್ಲ. ಬ್ರಾಹ್ಮಿ ಮುಹೂರ್ತ ಮತ್ತು ಸಂಜೆಯ ಸಮಯದಲ್ಲಿ ಲಕ್ಷ್ಮಿ ದೇವಿಯು ತನ್ನ ಅನುಯಾಯಿಗಳಿಗೆ ತನ್ನ ಅನುಗ್ರಹವನ್ನು ನೀಡುತ್ತಾಳೆ ಎಂದು ಭಾವಿಸಲಾಗಿರುವುದರಿಂದ ಈ ಎರಡು ಅವಧಿಯಲ್ಲಿ ಯಾರಿಗಾದರೂ ಹಣವನ್ನು ನೀಡುವುದರಿಂದ ನಿಮಗೆ ಹಣದ ಕೊರತೆ ಉಂಟಾಗಬಹುದು. ಆದರೆ ಅಗತ್ಯವಿರುವ ವ್ಯಕ್ತಿಗೆ ಸಹಾಯ ಮಾಡಬೇಕಾಗಿ ಬಂದಾಗ ಈ ನಿಯಮ ಮುರಿದರೆ ಏನೂ ಆಗುವುದಿಲ್ಲ.

Continue Reading

Latest

Viral Video: ಮಗಳೊಂದಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಗುಪ್ತಾಂಗ ತೋರಿಸಿದ ವಿಕೃತ ಕಾಮಿ!

Viral Video: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ವ್ಯಕ್ತಿಯೊಬ್ಬ ತನ್ನ ಜನನಾಂಗವನ್ನು ತೋರಿಸಿದ್ದಾನೆ. ವರದಿಗಳ ಪ್ರಕಾರ, ವ್ಯಕ್ತಿಯು ತನ್ನ ಜನನಾಂಗಗಳನ್ನು ಹಿಡಿದುಕೊಂಡು ತನ್ನ ಎದುರು ಕುಳಿತಿರುವ ಮಹಿಳೆಯನ್ನು ನೋಡುತ್ತಿದ್ದು, ಮಹಿಳೆ ಅದನ್ನು ತನ್ನ ಪೋನಿನಲ್ಲಿ ವಿಡಿಯೊ ಮಾಡಿದ್ದಾಳೆ. ಘಟನೆಯ ಸಮಯದಲ್ಲಿ, ಮಹಿಳೆ ತನ್ನ ಆರು ವರ್ಷದ ಮಗಳೊಂದಿಗೆ ಕಾಞಂಗಾಡ್‍ಗೆ ಪ್ರಯಾಣಿಸುತ್ತಿದ್ದಳು ಮತ್ತು ಬಸ್ಸಿನಲ್ಲಿ ಹೆಚ್ಚಿನ ಜನರು ಇರಲಿಲ್ಲ. ಮಹಿಳೆ ಮತ್ತು ಆಕೆಯ ಮಗಳ ಎದುರಿನ ಸೀಟಿನಲ್ಲಿ ಕುಳಿತಿದ್ದ ಯುವಕ ಕಂಡಕ್ಟರ್‌ಗೆ ಆ ವ್ಯಕ್ತಿಯ ಬಗ್ಗೆ ತಿಳಿಸಲು ಪ್ರಯತ್ನಿಸಿದಾಗ ಅವನು ಬಸ್‌ನಿಂದ ಇಳಿದು ತಪ್ಪಿಸಿಕೊಂಡಿದ್ದಾನೆ.

VISTARANEWS.COM


on

Viral Video
Koo


ಜಗತ್ತಿನಲ್ಲಿ ಕಾಮುಕರ ಅಟ್ಟಹಾಸ ಎಷ್ಟರಮಟ್ಟಿಗೆ ಇದೆ ಎಂದರೆ ಸಾರ್ವಜನಿಕ ಸ್ಥಳಗಳಲ್ಲಿಯೂ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಲು ಶುರು ಮಾಡಿದ್ದಾರೆ. ಬಸ್ಸಿನಲ್ಲಿ, ಪಾರ್ಕ್‍ನಲ್ಲಿ, ಹೋಟೆಲ್-ರೆಸ್ಟೋರೆಂಟ್‍ಗಳಲ್ಲಿ ಮಾತ್ರವಲ್ಲದೇ ರಸ್ತೆಯಲ್ಲಿಯೂ ಕೂಡ ಅವರು ಮಹಿಳೆಯರನ್ನು ಲೈಂಗಿಕತೆಗೆ ಪ್ರಚೋದಿಸುತ್ತಿದ್ದಾರೆ. ಇದೀಗ ಕೇರಳದಲ್ಲಿ ಇಂತಹದೊಂದು ಘಟನೆ ನಡೆದಿದ್ದು, ಮಹಿಳೆ ಅದನ್ನು ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಳು. ಅದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಕೇರಳದ ಬೇಕಲ್‍ನಲ್ಲಿ ಸೋಮವಾರ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ವ್ಯಕ್ತಿಯೊಬ್ಬ ತನ್ನ ಜನನಾಂಗವನ್ನು ತೋರಿಸಿದ್ದಾನೆ. ವರದಿಗಳ ಪ್ರಕಾರ, ವ್ಯಕ್ತಿಯು ತನ್ನ ಜನನಾಂಗಗಳನ್ನು ಹಿಡಿದುಕೊಂಡು ತನ್ನ ಎದುರು ಕುಳಿತಿರುವ ಮಹಿಳೆಯನ್ನು ನೋಡುತ್ತಿದ್ದು, ಮಹಿಳೆ ಅದನ್ನು ತನ್ನ ಫೋನಿನಲ್ಲಿ ವಿಡಿಯೊ ಮಾಡಿದ್ದಾಳೆ. ಘಟನೆಯ ಸಮಯದಲ್ಲಿ, ಮಹಿಳೆ ತನ್ನ ಆರು ವರ್ಷದ ಮಗಳೊಂದಿಗೆ ಕಾಞಂಗಾಡ್‍ಗೆ ಪ್ರಯಾಣಿಸುತ್ತಿದ್ದಳು ಮತ್ತು ಬಸ್ಸಿನಲ್ಲಿ ಹೆಚ್ಚಿನ ಜನರು ಇರಲಿಲ್ಲ. ಮಹಿಳೆ ಮತ್ತು ಆಕೆಯ ಮಗಳ ಎದುರಿನ ಸೀಟಿನಲ್ಲಿ ಕುಳಿತಿದ್ದ ಯುವಕ ಕಂಡಕ್ಟರ್‌ಗೆ ಆ ವ್ಯಕ್ತಿಯ ಬಗ್ಗೆ ತಿಳಿಸಲು ಪ್ರಯತ್ನಿಸಿದಾಗ ಅವನು ಬಸ್‌ನಿಂದ ಇಳಿದು ತಪ್ಪಿಸಿಕೊಂಡಿದ್ದಾನೆ ಎಂದು ವರದಿಯಾಗಿದೆ.

ಘಟನೆಯ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಡಿಯೊದಲ್ಲಿ ಕಂಡುಬರುವ ವ್ಯಕ್ತಿಯನ್ನು ಬಂಧಿಸಲು ಹುಡುಕಾಟ ನಡೆಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಈ ತರಹದ ಘಟನೆಗಳು ನಡೆದಿರುವುದು ಇದೇ ಮೊದಲಲ್ಲ. ಪ್ರತಿ ಊರಿನಲ್ಲಿ, ಪ್ರತಿ ಬೀದಿಯಲ್ಲಿಯೂ ಇಂತಹ ನೀಚರು ಇರುತ್ತಾರೆ. ಇದೇ ತಿಂಗಳಿನಲ್ಲಿ ಬೆಂಗಳೂರಿನ ವಿವಿ ಪುರಂ ಕಾಲೇಜು ಬಳಿ ವಿದ್ಯಾರ್ಥಿನಿಯರಿಗೆ ತನ್ನ ಖಾಸಗಿ ಭಾಗಗಳನ್ನು ತೋರಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ:ಸ್ಕೂಟರ್‌ಗೆ ಅಪ್ಪಳಿಸಿದ ಕಾರು; 30 ಅಡಿ ದೂರ ಎಗರಿ ಬಿದ್ದ ಮಹಿಳಾ ಕಾನ್‌ಸ್ಟೇಬಲ್‌

ವ್ಯಕ್ತಿ ಮುಖ ಮುಚ್ಚಿಕೊಂಡು ಸ್ಕೂಟರ್‌ನಲ್ಲಿ ಹೋಗುವಾಗ ವಿದ್ಯಾರ್ಥಿನಿಯರಿಗೆ ತನ್ನ ಖಾಸಗಿ ಭಾಗಗಳನ್ನು ತೋರಿಸಿದ್ದಾನೆ. ವಿದ್ಯಾರ್ಥಿನಿಯೊಬ್ಬಳು ಘಟನೆಯನ್ನು ತನ್ನ ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದು , ಮಾಹಿತಿ ಪಡೆದ ವಿವಿ ಪುರಂ ಪೊಲೀಸರು ಆ ಪ್ರದೇಶದ ಹಲವಾರು ಸಿಸಿಟಿವಿ ದೃಶ್ಯಾವಳಿಗಳು ಸೇರಿದಂತೆ ಹಲವು ಸಾಕ್ಷಿಗಳನ್ನು ಸಂಗ್ರಹಿಸಿ ಆತನನ್ನು ಬಂಧಿಸಿದ್ದರು.

Continue Reading

Latest

Self Harming : ವಾಟರ್‌ ಟ್ಯಾಂಕ್‌ ಮೇಲಿನಿಂದ ಜಿಗಿದ ವಿದ್ಯಾರ್ಥಿ; ವಿಡಿಯೋ ಇದೆ

Self Harming ದುಡ್ಡಿದ್ದವರದ್ದು ಒಂದು ಸಮಸ್ಯೆಯಾದರೆ, ದುಡ್ಡಿಲ್ಲದವರದ್ದು ಇನ್ನು ರೀತಿಯ ಪರಿಸ್ಥಿತಿ. ಪಂಜಾಬ್‌ನ 19 ವರ್ಷದ ವಿದ್ಯಾರ್ಥಿಯೊಬ್ಬ ಆರ್ಥಿಕ ಸಮಸ್ಯೆಗಳಿಂದ ಬೇಸತ್ತು ಸಾವಿನ ಮೊರೆ ಹೋಗಿದ್ದಾನೆ. ನೀರಿನ ಟ್ಯಾಂಕ್ ಹತ್ತಿ ಅದರ ಮೇಲಿನಿಂದ ಕೆಳಕ್ಕೆ ಹಾರಿದ್ದಾನೆ.ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯುವಕನ ಎರಡೂ ಕಾಲುಗಳು ಮುರಿದು ಕಾಲುಗಳ ಮೂಳೆಗಳು ಹೊರಗೆ ಬಂದಿದ್ದು, ಗಂಭೀರವಾಗಿ ಗಾಯಗೊಂಡ ಯುವಕನನ್ನು ಇಲ್ಲಿನ ವೈದ್ಯರು ಪರೀಕ್ಷಿಸಿದಾಗ, ಅವನು ಮೃತಪಟ್ಟಿದ್ದಾನೆ ಎಂಬುದಾಗಿ ತಿಳಿದುಬಂದಿದೆ.

VISTARANEWS.COM


on

Self Harming
Koo


ಪಂಜಾಬ್: ಇತ್ತೀಚೆಗೆ ಸಣ್ಣ-ಪುಟ್ಟ ಕಾರಣಕ್ಕೆ ಪ್ರಾಣ ಕಳೆದುಕೊಳ್ಳುವ ಅನೇಕ ಘಟನೆಗಳು ಆಗಾಗ ವರದಿಯಾಗುತ್ತಿರುತ್ತದೆ. ಅದರಲ್ಲೂ ಯುವಕರೇ ಹೆಚ್ಚಾಗಿ ದುಡುಕಿ ಇಂತಹ ನಿರ್ಧಾರಕ್ಕೆ ಬರುತ್ತಾರೆ. ಅಂತಹದ್ದೇ ಒಂದು ಘಟನೆ ಹರ್ಯಾಣದಲ್ಲಿ ನಡೆದಿದೆ. ಈ ಹಣಕಾಸಿನ ಸಮಸ್ಯೆಯಿಂದ ನೊಂದು 19 ವರ್ಷದ ವಿದ್ಯಾರ್ಥಿಯೊಬ್ಬ ನೀರಿನ ಟ್ಯಾಂಕ್‍ ಮೇಲಿನಿಂದ ಹಾರಿ ಆತ್ಮಹತ್ಯೆ (Self Harming)ಮಾಡಿಕೊಂಡಿದ್ದಾನೆ. ಈ ಆಘಾತಕಾರಿ ಘಟನೆ ಹರ್ಯಾಣದ ಖರಾರ್ ನ ಖಾನ್ಪುರ್ ಗ್ರಾಮದಲ್ಲಿ ಗುರುವಾರ ನಡೆದಿದ್ದು, ಈ ಭಯಾನಕ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಸುಮಿತ್ ಚಿಕ್ರಾ(19)ಎಂದು ಗುರುತಿಸಲಾಗಿದೆ. ಈತ ಪಂಜಾಬ್‍ನ ಘರುವಾನ್ ಗ್ರಾಮದ ಚಂಡೀಗಢ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ. ಆತ ತನ್ನ ಹೆತ್ತವರಿಗೆ ಏಕೈಕ ಮಗ ಎನ್ನಲಾಗಿದೆ. ಆರ್ಥಿಕ ಸಮಸ್ಯೆಗಳಿಂದಾಗಿ ಒತ್ತಡವನ್ನು ಅನುಭವಿಸುತ್ತಿದ್ದ ವಿದ್ಯಾರ್ಥಿ ಈ ರೀತಿ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ. ನೀರಿನ ಟ್ಯಾಂಕ್‍ನಿಂದ ಜಿಗಿಯುವ ಮೊದಲು ವಿದ್ಯಾರ್ಥಿ ತನ್ನ ಕೈಯ ಮಣಿಕಟ್ಟನ್ನು ಕತ್ತರಿಸಲು ಪ್ರಯತ್ನಿಸಿದನು ಎಂಬುದಾಗಿ ತಿಳಿದುಬಂದಿದೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ವಿಡಿಯೊದಲ್ಲಿ ಯುವಕ ನೀರಿನ ಟ್ಯಾಂಕ್ ಹತ್ತಿ ಟ್ಯಾಂಕ್‍ನ ಅಂಚಿನಲ್ಲಿ ನಿಂತಿರುವುದನ್ನು ಕಾಣಬಹುದು. ಯುವಕ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯಲು ಇಬ್ಬರು ಪುರುಷರು ನೀರಿನ ಟ್ಯಾಂಕ್‍ನ ಮೆಟ್ಟಿಲುಗಳನ್ನು ಹತ್ತುತ್ತಿರುವುದನ್ನು ಸಹ ಕಾಣಬಹುದು. ಅವರು ನೀರಿನ ಟ್ಯಾಂಕ್‍ನ ನಾಲ್ಕನೇ ಮಹಡಿಯನ್ನು ತಲುಪಿದಾಗ, ಯುವಕ ಅವರನ್ನು ಮೇಲಿನಿಂದ ಗಮನಿಸಿದನು. ನಂತರ ಅವರು ತನನ್ನು ರಕ್ಷಿಸಲು ಬರುತ್ತಿರುವುದನ್ನು ನೋಡಿ ಅವನು ಮುಂದೆ ಓಡಿ ನೀರಿನ ಟ್ಯಾಂಕ್‍ನಿಂದ ಹಾರಿದನು. ಈ ಘಟನೆಯನ್ನು ತನ್ನ ಮೊಬೈಲ್ ಪೋನಿನಲ್ಲಿ ರೆಕಾರ್ಡ್ ಮಾಡುತ್ತಿದ್ದ ವ್ಯಕ್ತಿಯು ಯುವಕ ನೆಲಕ್ಕೆ ಬೀಳುತ್ತಿದ್ದಂತೆ ಆಘಾತದಿಂದ ಕಿರುಚುವುದನ್ನು ಕೇಳಬಹುದು. ಜಿಗಿತದ ಪರಿಣಾಮ ಎಷ್ಟಿತ್ತೆಂದರೆ ಯುವಕ ನೆಲದ ಮೇಲೆ ಬಿದ್ದ ನಂತರ ಮತ್ತೆ ಮೇಲೆ ಜಿಗಿದು ನಂತರ ಮತ್ತೆ ಬಿದ್ದಿದ್ದಾನೆ.

ನೆಲಕ್ಕೆ ಬಿದ್ದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ನೀರಿನ ಟ್ಯಾಂಕ್‍ನ ಮೆಟ್ಟಿಲುಗಳನ್ನು ಏರುತ್ತಿದ್ದ ಇಬ್ಬರು ಪುರುಷರು, ಯುವಕ ಜೀವಂತವಾಗಿದ್ದಾನೆಯೇ ಎಂದು ಪರೀಕ್ಷಿಸಲು ಕೆಳಗೆ ಓಡಿ ಬರುತ್ತಿರುವುದು ಕಂಡುಬಂದಿದೆ.
ಯುವಕನನ್ನು ತಕ್ಷಣ ಖರಾರ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಯುವಕನ ಎರಡೂ ಕಾಲುಗಳು ಮುರಿದು ಕಾಲುಗಳ ಮೂಳೆಗಳು ಹೊರಗೆ ಬಂದಿದ್ದು, ಗಂಭೀರವಾಗಿ ಗಾಯಗೊಂಡ ಯುವಕನನ್ನು ಇಲ್ಲಿನ ವೈದ್ಯರು ಪರೀಕ್ಷಿಸಿದಾಗ, ಅವನು ಮೃತಪಟ್ಟಿದ್ದಾನೆ ಎಂಬುದಾಗಿ ತಿಳಿದುಬಂದಿದೆ.

ಇದನ್ನೂ ಓದಿ: ಬಿಸ್ಕೆಟ್‌ಗೆ ಆಸೆ ಪಟ್ಟು ಹೋಗಿದ್ದ ಪುಟ್ಟ ಬಾಲಕಿ ಕಾಮುಕನ ಕೈಗೆ ಸಿಕ್ಕಿ ಕೊಲೆಯಾದಳು

Continue Reading
Advertisement
Kiran Kumar
ಕರ್ನಾಟಕ9 mins ago

ವಿಸ್ತಾರ ನ್ಯೂಸ್‌ ಕಾರ್ಯನಿರ್ವಾಹಕ ನಿರ್ದೇಶಕ ಹುದ್ದೆಯಿಂದ ಕಿರಣ್‌ ಕುಮಾರ್‌ ಡಿ ಕೆ ಅಮಾನತು

Assembly monsoon session UT Khader karnataka assembly live
ಪ್ರಮುಖ ಸುದ್ದಿ14 mins ago

Assembly Monsoon Session: ಮುಂಗಾರು ಅಧಿವೇಶನಕ್ಕೆ ಮುನ್ನವೇ 2 ಕೋಟಿ ಖರ್ಚು ಮಾಡಿ ವಿಧಾನಸೌಧ ಸಿಂಗಾರ!

Virat Kohli
ಕ್ರೀಡೆ19 mins ago

Virat Kohli: ಲಂಕಾ ಸರಣಿಯಲ್ಲಿ ರನ್​ ದಾಖಲೆ ಬರೆಯಲು ಸಜ್ಜಾದ ವಿರಾಟ್​ ಕೊಹ್ಲಿ

Actor Darshan 4th accused mother dies
ಸ್ಯಾಂಡಲ್ ವುಡ್30 mins ago

Actor Darshan: ದರ್ಶನ್‌ ಗ್ಯಾಂಗ್‌ನ ನಾಲ್ಕನೇ ಆರೋಪಿ ತಾಯಿ ನಿಧನ

Microsoft Global Outage
ದೇಶ31 mins ago

Microsoft Global Outage: ಮೈಕ್ರೊಸಾಫ್ಟ್ ಟ್ರಬಲ್; ಯಾರ ಮೇಲೆ ಏನು ಪರಿಣಾಮ? ಮುಂದೇನು?

Mohammed Shami
ಕ್ರೀಡೆ48 mins ago

Mohammed Shami: ಕೊಹ್ಲಿ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ ಶಮಿ; ವಿಡಿಯೊ ವೈರಲ್​

Kannada New Movie Moorane Krishnappa in OTT
ಸಿನಿಮಾ49 mins ago

Kannada New Movie: ಸದ್ದಿಲ್ಲದೇ ಒಟಿಟಿಗೆ ಲಗ್ಗೆ ಇಟ್ಟ ರಂಗಾಯಣ ರಘು ಅಭಿನಯದ ‘ಮೂರನೇ ಕೃಷ್ಣಪ್ಪ’ ಸಿನಿಮಾ!

odscene act driver
ಕ್ರೈಂ59 mins ago

Obscene Act: ಡ್ರೈವಿಂಗ್‌ ಹೇಳಿಕೊಡುವ ನೆಪದಲ್ಲಿ ಖಾಸಗಿ ಅಂಗ ತೋರಿಸಿದ ಟ್ರೇನರ್‌, ಯುವತಿಯ ದೂರು

Vicky Kaushal box office collection Movie Collects Only 8 Crore
ಬಾಲಿವುಡ್1 hour ago

Vicky Kaushal: ವಿಕ್ಕಿ ಕೌಶಲ್ ಅಭಿನಯದ ‘ಬ್ಯಾಡ್ ನ್ಯೂಸ್’ ಚಿತ್ರಕ್ಕೆ ಕಳಪೆ ಕಲೆಕ್ಷನ್ ; ಮೊದಲ ದಿನದ ಗಳಿಕೆ ಎಷ್ಟು?

Paris Olympics
ಕ್ರೀಡೆ1 hour ago

Paris Olympics: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಕನ್ನಡತಿ ಭಾವನಾ ಪ್ರದ್ಯುಮ್ನ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ21 hours ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ22 hours ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ2 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ4 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ5 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ5 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ5 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ6 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

ಟ್ರೆಂಡಿಂಗ್‌