Dengue fever: ಶಂಕಿತ ಡೆಂಗ್ಯು ಜ್ವರಕ್ಕೆ ಯುವತಿ ಸಾವು, ರಾಜ್ಯದಲ್ಲಿ ಡೆಂಗ್ಯು ಸಾವು 9ಕ್ಕೆ ಏರಿಕೆ - Vistara News

ಪ್ರಮುಖ ಸುದ್ದಿ

Dengue fever: ಶಂಕಿತ ಡೆಂಗ್ಯು ಜ್ವರಕ್ಕೆ ಯುವತಿ ಸಾವು, ರಾಜ್ಯದಲ್ಲಿ ಡೆಂಗ್ಯು ಸಾವು 9ಕ್ಕೆ ಏರಿಕೆ

Dengue Fever: ರೇಖಾ ಎನ್ (19) ಸಾವನ್ನಪ್ಪಿದ ಯುವತಿ. ದಾವಣಗೆರೆ ಜಿಲ್ಲೆಯ‌ ಜಗಳೂರ ಪಟ್ಟಣದ ರಾಮಾಲಯ ರಸ್ತೆ ನಿವಾಸಿ ರೇಖಾ ಕಳೆದ ಕೆಲ ದಿನಗಳ ಹಿಂದೆ ನಾಮಕರಣ ಶಾಸ್ತ್ರ ಕಾರ್ಯಕ್ರಮಕ್ಕೆ ಬಳ್ಳಾರಿಗೆ ತೆರಳಿದ್ದರು. ಅಲ್ಲಿ ತೀವ್ರ ಜ್ವರದಿಂದ ಬಳಲಿದ್ದ ರೇಖಾಗೆ ಬಳ್ಳಾರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು.

VISTARANEWS.COM


on

dengue fever death davanagere
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದಾವಣಗೆರೆ: ಜ್ವರದಿಂದ ಬಳಲುತ್ತಿದ್ದ ದಾವಣಗೆರೆಯ (Davanagere news) ಯುವತಿಯೊಬ್ಬರು ಸಾವಿಗೀಡಾಗಿದ್ದಾರೆ. ಡೆಂಗ್ಯು ಜ್ವರದಿಂದ (Dengue Fever) ಸಾವನ್ನಪ್ಪಿರುವ ಶಂಕೆ ಇದ್ದು, ಪರೀಕ್ಷಾ ವರದಿ ಬರಬೇಕಿದೆ.

ರೇಖಾ ಎನ್ (19) ಸಾವನ್ನಪ್ಪಿದ ಯುವತಿ. ದಾವಣಗೆರೆ ಜಿಲ್ಲೆಯ‌ ಜಗಳೂರ ಪಟ್ಟಣದ ರಾಮಾಲಯ ರಸ್ತೆ ನಿವಾಸಿ ರೇಖಾ ಕಳೆದ ಕೆಲ ದಿನಗಳ ಹಿಂದೆ ನಾಮಕರಣ ಶಾಸ್ತ್ರ ಕಾರ್ಯಕ್ರಮಕ್ಕೆ ಬಳ್ಳಾರಿಗೆ ತೆರಳಿದ್ದರು. ಅಲ್ಲಿ ತೀವ್ರ ಜ್ವರದಿಂದ ಬಳಲಿದ್ದ ರೇಖಾಗೆ ಬಳ್ಳಾರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ. ಬಳ್ಳಾರಿಯಲ್ಲಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅಧಿಕೃತ ವರದಿ‌ ನಿರೀಕ್ಷಿಸಲಾಗಿದೆ. ಈ ಬಗ್ಗೆ ಜಗಳೂರು ತಾಲೂಕು ವೈದ್ಯಾಧಿಕಾರಿ ಡಾ. ವಿಶ್ವನಾಥ ಮಾಹಿತಿ ನೀಡಿದ್ದಾರೆ.

ಹಾಸನದಲ್ಲಿ ಡೆಂಗ್ಯೂಗೆ ಎಂಬಿಬಿಎಸ್‌ ವಿದ್ಯಾರ್ಥಿ ಬಲಿ

ಹಾಸನ: ಹಾಸನದಲ್ಲಿ‌ ಡೆಂಗ್ಯೂಗೆ (Dengue Feverಮತ್ತೊಬ್ಬ ಯುವಕ ಬಲಿಯಾಗಿದ್ದಾನೆ. ಎಂಬಿಬಿಎಸ್ ವಿದ್ಯಾರ್ಥಿ ಕುಶಾಲ್ (22) ಡೆಂಗ್ಯು ಜ್ವರದಿಂದ ಮೃತಪಟ್ಟವರು. ಹಾಸನದ ಹೊಳೆನರಸೀಪುರ ‌ತಾಲೂಕಿನ ಹಳ್ಳೀ ಮೈಸೂರು ಸಮೀಪದ ಗೋಹಳ್ಳಿ ಗ್ರಾಮದ ಕುಶಾಲ್‌, ಒಂದು ವಾರದಿಂದ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ.

ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಗುರುವಾರ ರಾತ್ರಿ ಕುಶಾಲ್‌ ಮೃತಪಟ್ಟಿದ್ದಾರೆ. ಪ್ರತಿಭಾನ್ವಿತ ಹಾಗೂ ಬಡ ವಿದ್ಯಾರ್ಥಿಯಾಗಿದ್ದ ಕುಶಾಲ್, ಹಾಸನದ ಹಿಮ್ಸ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದ. ಕುಶಾಲ್ ಸಾವನ್ನಪ್ಪಿದ ಆಸ್ಪತ್ರೆಯಲ್ಲೇ ತಾಯಿ ರೇಖಾ ಅವರು ಡೆಂಗ್ಯೂಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಯಿ ರೇಖಾ ಮತ್ತು ತಂದೆ ಮಂಜುನಾಥ್ ಮಗನ ಎಂಬಿಬಿಎಸ್ ಕನಸು ಹೊತ್ತಿದ್ದರು. ರೇಖಾ ಟೈಲರ್ ವೃತ್ತಿ ಮಾಡುತ್ತಿದ್ದರೆ, ಮಂಜುನಾಥ್‌ ಅವರು ಶಿಕ್ಷಕ ವೃತ್ತಿಯಲ್ಲಿದ್ದರು. ಆದರೆ ಇದೀಗ ಡೆಂಗ್ಯೂಗೆ ಮಗ ಕುಶಾಲ್‌ ಬಲಿಯಾಗಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಧಾರವಾಡದಲ್ಲೂ ಡೆಂಗ್ಯೂಗೆ ಮಗು ಬಲಿ

ಧಾರವಾಡದಲ್ಲಿ ಡೆಂಗ್ಯೂ ಜ್ವರಕ್ಕೆ ಮತ್ತೊಂದು ಮಗು ಬಲಿಯಾಗಿದೆ. ಧಾರವಾಡ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ 5 ತಿಂಗಳ ಆರಾಧ್ಯ ಲಮಾಣಿ ಡೆಂಗ್ಯೂಯಿಂದ ಮೃತಪಟ್ಟಿದೆ. ಧಾರವಾಡ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಆಗಿರುವ ಗೋಪಾಲ್ ಲಮಾಣಿ ಮಗು ಆರಾಧ್ಯ ಮೃತ ದುರ್ದೈವಿ. ಕಳೆದ ಜುಲೈ 15ರಂದು ಜ್ವರದಿಂದ ಬಳಲುತಿದ್ದ ಆರಾಧ್ಯಳನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಡೆಂಗ್ಯೂ ಜ್ವರ ನಿಯಂತ್ರಣಕ್ಕೆ ಬರದೇ ಮಗು ಮೃತಪಟ್ಟಿದೆ.

ಡೆಂಗ್ಯೂ ಭೀತಿ; ಶಾಲೆ ಸುತ್ತಲ ಕೊಳಚೆ ನೀರು

ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹೊತ್ತಿನಲ್ಲಿ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು. ಆದರೆ ಕೊಪ್ಪಳದ ಬೆಟಗೇರಿ ಗ್ರಾಮದಲ್ಲಿ ಶಾಲೆಯ ಸುತ್ತಲೂ ಕೊಳಚೆ ನೀರು ತುಂಬಿದ್ದು, ಮಕ್ಕಳಿಗೆ ಡೆಂಗ್ಯೂ ಜ್ವರ ಕಾಣಿಸಿಕೊಳ್ಳುತ್ತಿದೆ. ಶಾಲೆ ಸುತ್ತಲು ಸ್ವಚ್ಛತೆ ಕಾಪಾಡಲು ಆಗ್ರಹಿಸಿ, ಮಕ್ಕಳ ಪಾಲಕರು ಬೆಟೆಗೇರಿ ಗ್ರಾಮ ಪಂಚಾಯತ್ ಮುಂದೆ ಪ್ರತಿಭಟನೆ ನಡೆಸಿದರು. ಬೆಟಗೇರಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸುತ್ತಲು ಕೊಳಚೆ ನೀರು ಇದೆ. ಈಗಾಗಲೇ ಕೊಳಚೆಯಿಂದಾಗಿ ನಾಲ್ಕು ಜನರಿಗೆ ಡೆಂಗ್ಯೂ ಕಾಣಿಸಿಕೊಂಡಿದೆ ಎಂದು ಕಿಡಿಕಾರಿದರು.

ಸಾವಿನ ಸಂಖ್ಯೆ 8ಕ್ಕೆ ಏರಿಕೆ

ರಾಜ್ಯಾದ್ಯಂತ ಡೆಂಗ್ಯೂಗೆ 8 ಮಂದಿ ಮೃತಪಟ್ಟಿರುವುದು ದೃಢವಾಗಿದೆ. ಜನವರಿಯಿಂದ ಈವರೆಗೆ (ಜು.18) 85,270 ಮಂದಿ ರಕ್ತ ಮಾದರಿಯನ್ನು ಪರೀಕ್ಷಿಸಿದ್ದು, ಇದರಲ್ಲಿ 11,451 ಮಂದಿಗೆ ಡೆಂಗ್ಯೂ ದೃಢಪಟ್ಟಿದೆ. ಇದರಲ್ಲಿ 620 ಸಕ್ರಿಯ ಪ್ರಕರಣಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ: Road Accident : ಮೈಸೂರಿನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಛಿದ್ರಗೊಂಡ ದಂಪತಿ; ಎಎಸ್‌ಐಗೆ ಬಡಿದ ಅಪರಿಚಿತ ವಾಹನ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Bangladesh Protests: ಬಾಂಗ್ಲಾದಲ್ಲಿ ಹಿಂಸಾಚಾರ ಉಲ್ಬಣ, 105 ಸಾವು; 300 ಭಾರತೀಯ ವಿದ್ಯಾರ್ಥಿಗಳು ಸ್ವದೇಶಕ್ಕೆ

Bangladesh Protests: ದೇಶದ ವಿವಿಧ ಸ್ಥಳಗಳಲ್ಲಿ ಪ್ರತಿಭಟನೆಗಳು ಮತ್ತು ಗಲಭೆಗಳು ನಡೆಯುತ್ತಿದೆ. ಸುಮಾರು 15,000 ಭಾರತೀಯ ಪ್ರಜೆಗಳು ಬಾಂಗ್ಲಾದಲ್ಲಿದ್ದು, ಅವರೆಲ್ಲ ಕ್ಷೇಮವಾಗಿದ್ದಾರೆ ಎಂದು ಭಾರತೀಯ ವಿದೇಶಾಂಗ ಇಲಾಖೆ ಹೇಳಿದೆ. ಆದರೆ ಸುಮಾರು 300 ರಷ್ಟು ಆತಂಕಿತ ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ಮರಳಿದ್ದಾರೆ.

VISTARANEWS.COM


on

bangladesh protests dhaka
Koo

ಢಾಕಾ: ಕಳೆದ ಕೆಲದಿನಗಳಿಂದ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ (Bangladesh Protests) ಪ್ರತಿಭಟನೆ ಹಾಗೂ ಹಿಂಸಾಚಾರ (Bangladesh Violence) ಇದೀಗ ಉಲ್ಬಣಿಸಿದ್ದು, ಅಲ್ಲಿರುವ ಸುಮಾರು 300 ಭಾರತೀಯ ವಿದ್ಯಾರ್ಥಿಗಳು (Indian Students) ಸ್ವದೇಶಕ್ಕೆ ಮರಳಿದ್ದಾರೆ. ಹಿಂಸಾಚಾರದಲ್ಲಿ 105 ಮಂದಿ ಮೃತಪಟ್ಟಿದ್ದಾರೆ. ದೇಶವಿಡೀ ಕರ್ಫ್ಯೂ ಹಾಕಲಾಗಿದೆ.

ದೇಶದ ವಿವಿಧ ಸ್ಥಳಗಳಲ್ಲಿ ಪ್ರತಿಭಟನೆಗಳು ಮತ್ತು ಗಲಭೆಗಳು ನಡೆಯುತ್ತಿದೆ. ಸುಮಾರು 15,000 ಭಾರತೀಯ ಪ್ರಜೆಗಳು ಬಾಂಗ್ಲಾದಲ್ಲಿದ್ದು, ಅವರೆಲ್ಲ ಕ್ಷೇಮವಾಗಿದ್ದಾರೆ ಎಂದು ಭಾರತೀಯ ವಿದೇಶಾಂಗ ಇಲಾಖೆ ಹೇಳಿದೆ. ಆದರೆ ಸುಮಾರು 300 ರಷ್ಟು ಆತಂಕಿತ ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ಮರಳಿದ್ದಾರೆ.

ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ವ್ಯವಸ್ಥೆಯಲ್ಲಿ ಸುಧಾರಣೆಗೆ ಒತ್ತಾಯಿಸಿ ಹಲವಾರು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಹಿಂಸಾಸ್ವರೂಪ ಪಡೆದಿದ್ದು, ಸಾವುನೋವಿಗೆ ಕಾರಣವಾಗಿದೆ. ಶುಕ್ರವಾರ ಕೂಡ ಬಾಂಗ್ಲಾದೇಶದಲ್ಲಿ ಘರ್ಷಣೆಗಳು ಮತ್ತು ಹಿಂಸಾತ್ಮಕ ಪ್ರತಿಭಟನೆಗಳು ಮುಂದುವರೆದಿವೆ. ಪ್ರತಿಭಟನಾ ನಿರತರು ನರಸಿಂಗಡಿ ಕೇಂದ್ರ ಕಾರಾಗೃಹದ ಮೇಲೆ ದಾಳಿ ಮಾಡಿ ನೂರಾರು ಕೈದಿಗಳನ್ನು ಬಿಡುಗಡೆ ಮಾಡಿದ್ದಾರೆ. ನಂತರ ಜೈಲಿಗೆ ಬೆಂಕಿ ಹಚ್ಚಿದ್ದಾರೆ. ಗಲಭೆಯ ಬಿಸಿ ಸಾಮಾನ್ಯ ಜನರ ಬದುಕಿಗೂ ತಟ್ಟಿದೆ.

ದೇಶಾದ್ಯಂತ ಹರಡಿರುವ ಅಶಾಂತಿಯನ್ನು ತಡೆಯಲು ಪೊಲೀಸರು ಕೂಡ ವಿಫಲವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಶುಕ್ರವಾರ ಕರ್ಫ್ಯೂ ಮತ್ತು ಮಿಲಿಟರಿ ಪಡೆಗಳ ನಿಯೋಜನೆಯನ್ನು ಘೋಷಿಸಿದೆ. ಆಸ್ಪತ್ರೆಗಳು ನೀಡಿದ ವರದಿಗಳನ್ನು ಉಲ್ಲೇಖಿಸಿ ವಿದ್ಯಾರ್ಥಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವಿನ ಈ ವಾರದ ಘರ್ಷಣೆಯಲ್ಲಿ ಕನಿಷ್ಠ 105 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. 15 ವರ್ಷಗಳ ಅಧಿಕಾರದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿ ಶೇಖ್ ಹಸೀನಾ ಸರ್ಕಾರ ದೊಡ್ಡ ಸವಾಲನ್ನು ಎದುರಿಸಿದೆ.

ಪ್ರತಿಭಟನೆಗಳು ಪ್ರಾರಂಭವಾದ ನಂತರ ಮೊದಲ ಬಾರಿಗೆ ಹೆಚ್ಚಿನ ಹಿಂಸಾಚಾರವನ್ನು ತಡೆಯುವ ಪ್ರಯತ್ನದಲ್ಲಿ ರಾಜಧಾನಿ ಢಾಕಾದಲ್ಲಿ ಪೊಲೀಸರು ಮೊದಲ ದಿನ ಎಲ್ಲಾ ಸಾರ್ವಜನಿಕ ಸಭೆಗಳನ್ನು ನಿಷೇಧಿಸಿದ್ದಾರೆ. ‘ನಾವು ಇಂದು ಢಾಕಾದಲ್ಲಿ ಎಲ್ಲಾ ರ್ಯಾಲಿಗಳು, ಮೆರವಣಿಗೆಗಳು ಮತ್ತು ಸಾರ್ವಜನಿಕ ಸಭೆಗಳನ್ನು ನಿಷೇಧಿಸಿದ್ದೇವೆ’ ಎಂದು ಪೊಲೀಸ್ ಮುಖ್ಯಸ್ಥ ಹಬೀಬುರ್ ರೆಹಮಾನ್ ತಿಳಿಸಿದ್ದಾರೆ.

ರ್ಯಾಲಿಗಳನ್ನು ವಿಫಲಗೊಳಿಸಲು ಇಂಟರ್ನೆಟ್ ಸ್ಥಗಿತ ಮಾಡಲಾಗಿದೆ. ಆದರೆ ನಗರದಲ್ಲಿ ಜನರ ಬೃಹತ್ ಗುಂಪುಗಳು ಜಮಾಯಿಸಿವೆ. ಇದು ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾರಣಾಂತಿಕ ಘರ್ಷಣೆಗೆ ಕಾರಣವಾಯಿತು. ‘ನಮ್ಮ ಪ್ರತಿಭಟನೆ ಮುಂದುವರಿಯುತ್ತದೆ’ ಎಂದು ರಾಜಧಾನಿಯಲ್ಲಿ ನಡೆದ ಮೆರವಣಿಗೆಯಲ್ಲಿ ಭಾಗವಹಿಸಿದವರು ಘೋಷಿಸಿದ್ದಾರೆ. ‘ಈ ಹತ್ಯೆಗಳಿಗೆ ಸರ್ಕಾರವೇ ಹೊಣೆಯಾಗಿರುವುದರಿಂದ ಶೇಖ್ ಹಸೀನಾ ಅವರು ತಕ್ಷಣ ರಾಜೀನಾಮೆ ನೀಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

1971ರಲ್ಲಿ ಪಾಕಿಸ್ತಾನದಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಯೋಧರ ಸಂಬಂಧಿಕರಿಗೆ ಕೆಲವು ಸಾರ್ವಜನಿಕ ವಲಯದ ಉದ್ಯೋಗಗಳನ್ನು ಮೀಸಲಿಡುವ ವ್ಯವಸ್ಥೆಯ ವಿರುದ್ಧ ಢಾಕಾ ಮತ್ತು ಇತರ ನಗರಗಳಲ್ಲಿ ಹಲವಾರು ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ.

ಇದನ್ನೂ ಓದಿ: Bangladesh Violence: ಬಾಂಗ್ಲಾ ಧಗ ಧಗ; ಭುಗಿಲೆದ್ದ ಹಿಂಸಾಚಾರಕ್ಕೆ 35 ಮಂದಿ ಬಲಿ

Continue Reading

Latest

Pets in Designer Outfits : ಅನಂತ್-ರಾಧಿಕಾ ಮದುವೆಯಲ್ಲಿ ಅಂಬಾನಿ ಕುಟುಂಬದ ನಾಯಿಗಳ ಸಂಭ್ರಮ ನೋಡಿ!

Pets in Designer Outfits: ಅಹ್ಮದಾಬಾದ್‍ನ ಡಿಸೈನರ್ ಪೆಟ್‌ವೇರ್ ಬ್ರಾಂಡ್ ಅಂಬಾನಿ ಕುಟುಂಬದ ಸಾಕುಪ್ರಾಣಿಗಳಿಗಾಗಿ 29ಕ್ಕೂ ಹೆಚ್ಚು ಉಡುಪುಗಳನ್ನು ವಿನ್ಯಾಸಗೊಳಿಸಿದೆ. “ನಾವು ನಾಯಿಗಳಿಗಾಗಿ 29 ಉಡುಗೆಗಳನ್ನು ತಯಾರಿಸಿದ್ದೇವೆ, ಅವುಗಳಲ್ಲಿ 14 #HappyAmbani ಮತ್ತು 14#PopcornMerchant ಗಾಗಿ ಟ್ವಿನ್ನಿಂಗ್ ಮತ್ತು 1#ChasePiramalಗಾಗಿ. ನೀವೆಲ್ಲರೂ ನಮ್ಮ ಕೆಲಸವನ್ನು ಇಷ್ಟಪಟ್ಟಿದ್ದೀರಿ ಎಂದು ನಮಗೆ ತುಂಬಾ ಸಂತೋಷವಾಗಿದೆ. ನಮ್ಮ ಬ್ರಾಂಡ್‍ನಲ್ಲಿ ನಂಬಿಕೆ ಇಟ್ಟಿದ್ದಕ್ಕಾಗಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರಿಗೆ ನಾವು ಧನ್ಯವಾದ ಅರ್ಪಿಸುತ್ತೇವೆ” ಎಂದು ಬ್ರಾಂಡ್ ತನ್ನ ಇನ್ಸ್ಟಾಗ್ರಾಮ್‍ನಲ್ಲಿ ಬರೆದಿದೆ.

VISTARANEWS.COM


on

Pets in Designer Outfits
Koo

ಮುಂಬೈ : ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಅವರ ವಿವಾಹದ ಸಂಭ್ರಮಾಚರಣೆಯಲ್ಲಿ ಅಂಬಾನಿ ಕುಟುಂಬದವರು ಬಣ್ಣ ಬಣ್ಣದ ಹಾಗೂ ಚಿನ್ನದಿಂದ ತಯಾರಿಸಿದ ಬಟ್ಟೆಗಳನ್ನು ಧರಿಸಿ ಮಿಂಚಿದ್ದಾರೆ. ಮಾತ್ರವಲ್ಲ ಈ ಮದುವೆಯಲ್ಲಿ ಅವರ ಮನೆಯಲ್ಲಿ ಸಾಕಿದ ನಾಯಿಗಳಿಗೂ (Pets in Designer Outfits) ಕೂಡ ವಿಶೇಷವಾಗಿ ವಿನ್ಯಾಸ ಮಾಡಿದ ಬಟ್ಟೆಗಳನ್ನು ತೊಡಿಸಿದ್ದಾರೆ. ಹಾಗಾಗಿ ಅವುಗಳು ಅನಂತ್ ಮದುವೆಯಲ್ಲಿ ಬಹಳ ಅದ್ಭುತವಾಗಿ ಕಾಣುತ್ತಿದ್ದವು. ಮದುವೆಯಲ್ಲಿ ಅವುಗಳು ಸುಂದರವಾದ ಬಟ್ಟೆಯಲ್ಲಿ ಮಿಂಚಿದ ವಿಡಿಯೊ ವೈರಲ್ ಆಗಿದೆ.

ಅಹ್ಮದಾಬಾದ್‍ನ ಡಿಸೈನರ್ ಪೆಟ್‌ವೇರ್ ವಿನ್ಯಾಸಗೊಳಿಸಿದ ಸೂಪರ್ ಸ್ಟೈಲಿಶ್ ಗುಲಾಬಿ ಬನಾರಸಿ ಸಿಲ್ಕ್ ಬ್ರೊಕೇಡ್ ಜಾಕೆಟ್ ಧರಿಸಿ ಗೋಲ್ಡನ್ ರಿಟ್ರೀವರ್ ಹ್ಯಾಪಿ (ನಾಯಿ) ಅಂಬಾನಿ ಮದುವೆ ಮಂಟಪದಲ್ಲಿ ಕಂಡುಬಂದಿದೆ.

ಹ್ಯಾಪಿಗಾಗಿ ತಯಾರಿಸಿದ ಕಸ್ಟಮ್-ಮೇಡ್ ಉಡುಪುಗಳನ್ನು ಬಹಿರಂಗಪಡಿಸುವ ವಿಡಿಯೊವನ್ನು ಬ್ರಾಂಡ್ ಹಂಚಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಹ್ಯಾಪಿಗೆ ಮಾತ್ರ ಫ್ಯಾಶನ್ ಡ್ರೆಸ್ ತೊಡಿಸಿರಲಿಲ್ಲ, ಅದರ ಜೊತೆ ರಾಧಿಕಾ ಕುಟುಂಬದ ಬುಲ್ಡಾಗ್ ಪಾಪ್ಕಾರ್ನ್ ಮರ್ಚೆಂಟ್ ಕೂಡ ಕೆಲವು ಡಿಸೈನರ್ ಉಡುಪುಗಳನ್ನು ಧರಿಸಿ ಮಿಂಚಿತು.

ಅಲ್ಲದೇ ಮುಕೇಶ್-ನೀತಾ ಅಂಬಾನಿಯವರ ಪುತ್ರಿ ಇಶಾ ಅಂಬಾನಿ ಅವರ ಪತಿ ಆನಂದ್ ಪಿರಮಾಲ್ ಅವರ ಕುಟುಂಬದ ನಾಯಿ ಚೇಸ್ ಪಿರಮಾಲ್ ಕೂಡ ಮದುವೆಗೆ ಡಿಸೈನ್‌ನಿಂದ ಕೂಡಿದ ಬಟ್ಟೆಯನ್ನು ಧರಿಸಿ ತಾನೇನು ಕಡಿಮೆ ಇಲ್ಲ ನೋಡಿ ಎಂದು ಬೀಗಿತು.

ಅಹ್ಮದಾಬಾದ್‍ನ ಡಿಸೈನರ್ ಪೆಟ್‌ವೇರ್ ಬ್ರಾಂಡ್ ಈ ಕುಟುಂಬದ ಸಾಕುಪ್ರಾಣಿಗಳಿಗಾಗಿ 29 ಕ್ಕೂ ಹೆಚ್ಚು ಉಡುಪುಗಳನ್ನು ವಿನ್ಯಾಸಗೊಳಿಸಿದೆ. “ನಾವು ನಾಯಿಗಳಿಗಾಗಿ 29 ಉಡುಗೆಗಳನ್ನು ತಯಾರಿಸಿದ್ದೇವೆ, ಅವುಗಳಲ್ಲಿ 14 #HappyAmbani ಮತ್ತು 14#PopcornMerchant ಗಾಗಿ ಟ್ವಿನ್ನಿಂಗ್ ಮತ್ತು 1#ChasePiramal ನೀವೆಲ್ಲರೂ ನಮ್ಮ ಕೆಲಸವನ್ನು ಇಷ್ಟಪಟ್ಟಿದ್ದೀರಿ ಎಂದು ನಮಗೆ ತುಂಬಾ ಸಂತೋಷವಾಗಿದೆ. ನಮ್ಮ ಬ್ರಾಂಡ್‍ನಲ್ಲಿ ನಂಬಿಕೆ ಇಟ್ಟಿದ್ದಕ್ಕಾಗಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರಿಗೆ ನಾವು ಧನ್ಯವಾದ ಅರ್ಪಿಸುತ್ತೇವೆ” ಎಂದು ಬ್ರಾಂಡ್ ತನ್ನ ಇನ್ಸ್ಟಾಗ್ರಾಮ್‍ನಲ್ಲಿ ಬರೆದಿದೆ.

ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಜನರು ಆಶ್ವರ್ಯ ವ್ಯಕ್ತಪಡಿಸಿದ್ದಾರೆ ಮತ್ತು ಹಲವರು ಕಾಮೆಂಟ್ ಕೂಡ ಮಾಡಿದ್ದಾರೆ. ಒಬ್ಬ ಬಳಕೆದಾರರು ನಾಯಿಗಳು ನಮಗಿಂತ ಒಳ್ಳೆಯ ಬಟ್ಟೆಗಳನ್ನು ಧರಿಸಿವೆ ಎಂದು ಹೇಳಿದ್ದಾರೆ. ಮತ್ತೊಬ್ಬರು ನಾಯಿಗಳೆಲ್ಲವೂ ಬಟ್ಟೆ ಧರಿಸಿ ತುಂಬಾ ಸುಂದರವಾಗಿ ಕಾಣುತ್ತಿವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:  ಬಿಸ್ಕೆಟ್‌ಗೆ ಆಸೆ ಪಟ್ಟು ಹೋಗಿದ್ದ ಪುಟ್ಟ ಬಾಲಕಿ ಕಾಮುಕನ ಕೈಗೆ ಸಿಕ್ಕಿ ಕೊಲೆಯಾದಳು

ಜನವರಿ 2023 ರಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ನಿಶ್ಚಿತಾರ್ಥದ ಪಾರ್ಟಿಯಲ್ಲಿ ಹ್ಯಾಪಿ ಕುಟುಂಬದ ಭಾವಚಿತ್ರಕ್ಕೆ ಪೋಸ್ ನೀಡುವ ಮೂಲಕ ಜನರ ಮನಗೆದ್ದಿತ್ತು.

Continue Reading

ಅಂಕಣ

ರಾಜಮಾರ್ಗ ಅಂಕಣ: ಆಲ್ಫೀ ಹೆವೆಟ್ಟ್- ವೀಲ್ ಚೇರ್ ಮೇಲಿನ ಟೆನ್ನಿಸ್ ಬೆರಗು

ರಾಜಮಾರ್ಗ ಅಂಕಣ: ಜಗತ್ತು ಅವನನ್ನು ‘ವೀಲ್ ಚೇರ್ ಮೇಲಿನ ಕೋಲ್ಮಿಂಚು’ ಎಂದೇ ಕರೆಯುತ್ತದೆ. ಆತನು ಇಂಗ್ಲೆಂಡ್ ದೇಶದವನು. 2015ರಿಂದ ವೀಲ್ ಚೇರ್ ಮೇಲೆ ಕುಳಿತು ಟೆನ್ನಿಸ್ ಆಡುವ ಆತನ ಆಟಕ್ಕೆ ಆತನೇ ಸಾಟಿ. ಕೋರ್ಟ್ ಇಡೀ ಜಿಂಕೆಯಂತೆ ಓಡಾಡುವ, ಅಷ್ಟೇ ವೇಗವಾಗಿ ರಾಕೆಟ್ ಬೀಸುವ ಆಲ್ಫಿ ಸೋತ ಉದಾಹರಣೆಯೇ ನಮಗೆ ಸಿಗುವುದಿಲ್ಲ.

VISTARANEWS.COM


on

ರಾಜಮಾರ್ಗ ಅಂಕಣ alphe hevett
Koo

ಆತ ಗೆದ್ದಿರುವುದು ಬರೋಬ್ಬರಿ 30 ಗ್ರಾನ್‌ಸ್ಲಾಮ್ ಪ್ರಶಸ್ತಿಗಳನ್ನು!

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಗ್ರಾನ್‌ಸ್ಲಾಂ ಟೆನ್ನಿಸ್ ಕೂಟಗಳಲ್ಲಿ ವಿಂಬಲ್ಡನ್ನಿಗೆ ಅದರದ್ದೇ ಆದ ಘನತೆಯು ಇದೆ. ಜಗತ್ತಿನ ಮಹಾ ಟೆನ್ನಿಸ್ ದೈತ್ಯರು ಸೆಣಸುವ ಮಹತ್ವದ ಕೂಟ ಅದು. ಆ ಟೆನಿಸ್ ಕೂಟದ ಸೆಂಟರ್ ಕೋರ್ಟಿನಲ್ಲಿ ನಡೆಯುವ ಪ್ರತೀ ಪಂದ್ಯವೂ ರೋಚಕವೇ ಹೌದು. ಅದೇ ಹೊತ್ತಿಗೆ ಬೇರೆ ಬೇರೆ ಸಮಾನಾಂತರ ಕೋರ್ಟುಗಳಲ್ಲಿ, ಬೇರೆ ಬೇರೆ ಹೊತ್ತಲ್ಲಿ ನಡೆಯುವ ಇನ್ನೂ ಹಲವು ಸ್ಪರ್ಧೆಗಳು ಅಷ್ಟಾಗಿ ಪ್ರಚಾರ ಪಡೆಯುವುದಿಲ್ಲ. ಮಾಧ್ಯಮಗಳೂ ಆ ಕಡೆಗೆ ಹೆಚ್ಚು ಗಮನ ಹರಿಸುವುದಿಲ್ಲ. ಆದರೆ ಅಲ್ಲಿನ ಸ್ಪರ್ಧೆಯು ಜೋರಾಗಿಯೇ ಇರುತ್ತದೆ. ಅವುಗಳಲ್ಲಿ ಒಂದು ವಿಭಾಗವೆಂದರೆ ವೀಲ್ ಚೇರ್ ಟೆನ್ನಿಸ್ ಕೂಟ! ಜಗತ್ತಿನ ಮೂಲೆ ಮೂಲೆಯಿಂದ ಬರುವ ನೂರಾರು ವೀಲ್ ಚೇರ್ ಟೆನ್ನಿಸ್ ಆಟಗಾರರು ಅಲ್ಲಿ ಪ್ರಶಸ್ತಿಗಾಗಿ ಗುದ್ದಾಡುತ್ತಾರೆ!

ಈ ಬಾರಿ ವಿಂಬಲ್ಡನ್ ಕೂಟದ ವೀಲ್ ಚೇರ್ ವಿಭಾಗದ ಸಿಂಗಲ್ಸ್ ಮತ್ತು ಡಬಲ್ಸ್ ಎರಡೂ ಟ್ರೋಫಿಗಳನ್ನು ಗೆದ್ದಿರುವುದು ಇದೇ ಆಲ್ಫಿ ಹೆವೆಟ್ಟ್ (ALFI HEVETT).

ಆಲ್ಫಿ ಹೆವೆಟ್ಟ್ – ಈಗ ವಿಶ್ವದ ನಂಬರ್ 1 ಆಟಗಾರ!

ಜಗತ್ತು ಅವನನ್ನು ‘ವೀಲ್ ಚೇರ್ ಮೇಲಿನ ಕೋಲ್ಮಿಂಚು’ ಎಂದೇ ಕರೆಯುತ್ತದೆ. ಆತನು ಇಂಗ್ಲೆಂಡ್ ದೇಶದವನು. 2015ರಿಂದ ವೀಲ್ ಚೇರ್ ಮೇಲೆ ಕುಳಿತು ಟೆನ್ನಿಸ್ ಆಡುವ ಆತನ ಆಟಕ್ಕೆ ಆತನೇ ಸಾಟಿ. ಕೋರ್ಟ್ ಇಡೀ ಜಿಂಕೆಯಂತೆ ಓಡಾಡುವ, ಅಷ್ಟೇ ವೇಗವಾಗಿ ರಾಕೆಟ್ ಬೀಸುವ ಆಲ್ಫಿ ಸೋತ ಉದಾಹರಣೆಯೇ ನಮಗೆ ಸಿಗುವುದಿಲ್ಲ. ಇಂದು ಅವನು ಸಿಂಗಲ್ಸ್ ಮತ್ತು ಡಬಲ್ಸ್ ಎರಡೂ ವಿಭಾಗಗಳಲ್ಲಿ ವಿಶ್ವದ ನಂಬರ್ 1 ಆಟಗಾರ ಎಂದರೆ ನಾವು, ನೀವು ನಂಬಲೇ ಬೇಕು. ಕಾಲುಗಳಲ್ಲಿ ಇಲ್ಲದ ತ್ರಾಣವನ್ನು ಆತನು ತನ್ನ ಅಗಲವಾದ ಭುಜಗಳಲ್ಲಿ ಬಸಿದು ರಾಕೆಟ್ ಬೀಸುವ ಆತನ ದೈತ್ಯ ಶಕ್ತಿಗೆ ನೀವು ಖಂಡಿತವಾಗಿ ಬೆರಗಾಗುತ್ತೀರಿ!

ಬಾಲ್ಯದಲ್ಲಿ ಕಾಡಿದ ವಿಚಿತ್ರ ಹೆಸರಿನ ಕಾಯಿಲೆ

1997ರ ಡಿಸೆಂಬರ್ ತಿಂಗಳಲ್ಲಿ ಇಂಗ್ಲೆಂಡಿನಲ್ಲಿ ಹುಟ್ಟಿದ ಆಲ್ಫಿ ಆಗ ಆರೋಗ್ಯಪೂರ್ಣವಾಗಿ ಇದ್ದವನು. ಮುಂದೆ ಆರು ವರ್ಷ ಪ್ರಾಯದಲ್ಲಿ Congential Heart defect ಎಂಬ ವಿಚಿತ್ರ ಕಾಯಿಲೆಯು ಆತನ ಉತ್ಸಾಹವನ್ನು ಖಾಲಿ ಮಾಡಿತು. ಆರು ತಿಂಗಳ ನಂತರ ಸರ್ಜರಿ ಕೂಡ ನಡೆಯಿತು. ಪರಿಣಾಮವಾಗಿ ಆತನ ಎರಡೂ ಕಾಲುಗಳ ಶಕ್ತಿ ಉಡುಗಿ ಹೋಗಿ ಆತನು ವೀಲ್ ಚೇರ್ ಮೇಲೆ ಓಡಾಡಬೇಕಾಯಿತು. ಆರಂಭದಲ್ಲಿ ಆಲ್ಫಿ ಸ್ವಲ್ಪ ಮಟ್ಟದಲ್ಲಿ ವಿಚಲಿತರಾದನು. ಆದರೆ ಅದಮ್ಯವಾದ ಜೀವನೋತ್ಸಾಹ ಅವನನ್ನು ಟೆನ್ನಿಸ್ ಕೋರ್ಟಿಗೆ ಎಳೆದು ತಂದಿತು. ವೀಲ್ ಚೇರ್ ಮೇಲೆ ಇಡೀ ಕೋರ್ಟ್ ಓಡಾಡುತ್ತಾ ರಾಕೆಟ್ ಬೀಸುವುದು ಸುಲಭ ಅಲ್ಲ. ಅದಕ್ಕೆ ತುಂಬಾ ಏಕಾಗ್ರತೆ, ದೇಹದ ಬ್ಯಾಲೆನ್ಸ್, ರಟ್ಟೆಗಳ ತ್ರಾಣ, ಆತ್ಮವಿಶ್ವಾಸ ಎಲ್ಲವೂ ಬೇಕು. ಸತತವಾದ ಪರಿಶ್ರಮದಿಂದ ಆಲ್ಫಿ ಈ ಎಲ್ಲ ಸವಾಲುಗಳನ್ನು ಗೆಲ್ಲುತ್ತಾ ಹೋದರು.

ಗೆದ್ದದ್ದು 30 ಗ್ರಾನ್‌ಸ್ಲಾಮ್ ಟ್ರೋಫಿಗಳನ್ನು!

2015ರಿಂದ ಇಂದಿನವರೆಗೂ ತಾನು ಆಡಿದ ಪ್ರತೀಯೊಂದು ಗ್ರಾನಸ್ಲಾಮ್ ಕೂಟಗಳಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ವಿಭಾಗಗಳಲ್ಲಿ 30 ವಿಶ್ವಮಟ್ಟದ ಪ್ರಶಸ್ತಿಗಳನ್ನು ಆತ ಗೆದ್ದಿದ್ದಾನೆ ಎಂದರೆ ನೀವು ಮೂಗಿನ ಮೇಲೆ ಬೆರಳು ಇಡುತ್ತೀರಿ! ಅದರಲ್ಲಿ 9 ಸಿಂಗಲ್ಸ್ ಪ್ರಶಸ್ತಿಗಳು. 21 ಡಬಲ್ಸ್ ಪ್ರಶಸ್ತಿಗಳು!

ಮೂರು ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ, ಒಂದು ಬಾರಿ ಆಸ್ಟ್ರೇಲಿಯನ್ ಒಪನ್, ಒಂದು ಬಾರಿ ವಿಂಬಲ್ಡನ್, ನಾಲ್ಕು ಬಾರಿ ಯು ಎಸ್ ಓಪನ್, ಮೂರು ಬಾರಿ ಮಾಸ್ಟರ್ಸ್ ಓಪನ್ ಸಿಂಗಲ್ಸ್ ಪ್ರಶಸ್ತಿ ಆತನು ಗೆದ್ದಾಗಿದೆ.

ಡಬಲ್ಸ್ ಸ್ಪರ್ಧೆಯಲ್ಲಿ ಆತನಿಗೆ ಆತನೇ ಉಪಮೆ!

ಡಬಲ್ಸನಲ್ಲಿ ಐದು ಬಾರಿ ಆಸ್ಟ್ರೇಲಿಯನ್ ಓಪನ್, ಐದು ಬಾರಿ ಫ್ರೆಂಚ್ ಓಪನ್, ಆರು ಬಾರಿ ವಿಂಬಲ್ಡನ್, ಐದು ಬಾರಿ ಯು. ಎಸ್. ಓಪನ್ ಪ್ರಶಸ್ತಿಗಳನ್ನು ಆಲ್ಫಿ ಗೆದ್ದಿರುವುದು ಬಹಳ ದೊಡ್ಡ ಸಾಧನೆ. ಜಗತ್ತಿನ ಬೇರೆ ಯಾವ ಟೆನ್ನಿಸ್ ಆಟಗಾರ ಕೂಡ ಇಷ್ಟೊಂದು ಪ್ರಶಸ್ತಿಗಳ ಗೊಂಚಲು ಗೆದ್ದಿರುವ ನಿದರ್ಶನ ಇಲ್ಲ! ಪಾರಾ ಒಲಿಂಪಿಕ್ ಕೂಟದಲ್ಲಿ ಕೂಡ ಆತ ಬೆಳ್ಳಿಯ ಪದಕ ಗೆದ್ದಿದ್ದಾನೆ.

2024ರ ವಿಂಬಲ್ಡನ್ ಕೂಟದಲ್ಲಿ ಆತನು ಸಿಂಗಲ್ಸ್ ಮತ್ತು ಡಬಲ್ಸ್ ಎರಡೂ ಟ್ರೋಫಿಗಳನ್ನು ಗೆದ್ದಿರುವುದು ಕೂಡ ದಾಖಲೆಯೇ ಆಗಿದೆ. ಆತನ ಸರ್ವ್, ವಾಲಿ, ಏಸ್, ಮಿಂಚಿನ ಚಲನೆ ಮತ್ತು ಹಿಂಗೈ ಹೊಡೆತಗಳು ತುಂಬಾ ಬಲಿಷ್ಟವಾಗಿವೆ.

ಆರು ವರ್ಷದ ಪ್ರಾಯದಿಂದ ವೀಲ್ ಚೇರ್ ಮೇಲೆ ಅವಲಂಬಿತವಾಗಿರುವ ಆಲ್ಫಿ ಹೆವೆಟ್ಟ್ ನಾರ್ವಿಚ್ ನಗರದ ಸಿಟಿ ಕಾಲೇಜಿನಿಂದ ಪದವಿ ಕೂಡ ಪಡೆದಿದ್ದಾರೆ. 1.67 ಮೀಟರ್ ಎತ್ತರದ, ಇನ್ನೂ 27 ವರ್ಷ ಪ್ರಾಯದ ಆಲ್ಫಿ ರಟ್ಟೆಯಲ್ಲಿ ತ್ರಾಣ ಇರುವಷ್ಟು ವರ್ಷ ಟೆನ್ನಿಸ್ ಆಡುತ್ತೇನೆ ಎಂದು ಹೇಳಿದ್ದಾರೆ!

ಆತನ ದಾಖಲೆಗಳ ಎತ್ತರ ಎಲ್ಲಿಗೆ ತಲುಪುವುದೋ ಯಾರಿಗೆ ಗೊತ್ತು?

ಇದನ್ನೂ ಓದಿ: ರಾಜಮಾರ್ಗ ಅಂಕಣ: ನೇಪಥ್ಯಕ್ಕೆ ಸರಿದ ರಂಗ ನಿರ್ದೇಶಕ ಸದಾನಂದ ಸುವರ್ಣ

Continue Reading

ಭವಿಷ್ಯ

Dina Bhavishya : ನಂಬಿದ ವ್ಯಕ್ತಿಗಳಿಂದಲೇ ಈ ರಾಶಿಯವರಿಗೆ ಇಂದು ನಿರಾಸೆ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷದ ಚತುರ್ದಶಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina Bhavishya
Koo

ಚಂದ್ರನು ಶನಿವಾರವು ಮಕರ ರಾಶಿಯಲ್ಲೆ ನೆಲಸಲಿದ್ದಾನೆ. ಇದರಿಂದಾಗಿ ಮಿಥುನ, ಕಟಕ, ತುಲಾ, ಧನಸ್ಸು, ಕುಂಭ, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ಮೇಷ ರಾಶಿಯವರು ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಮಾನಸಿಕ ಒತ್ತಡದಿಂದ ಮುಕ್ತರಾಗಿ, ದೊಡ್ಡ ಯೋಜನೆಯತ್ತ ಗಮನ ಹರಿಸುವಿರಿ. ಬಹಳ ದಿನಗಳ ನಂತರ ಸ್ನೇಹಿತರೊಂದಿಗೆ ಕಾಲ ಕಳೆಯುವ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ವೃಷಭ ರಾಶಿಯವರು ಕುಟುಂಬ ಸದಸ್ಯರ ವರ್ತನೆ ನಿಮಗೆ ಹಿಡಿಸದಿರಬಹುದು, ಆದರೆ ವಿನಾ ಕಾರಣ ಮಾತಿಗಿಳಿದು ಮನಸ್ಸು ಕೆಡಿಸಿಕೊಳ್ಳುವುದು ಬೇಡ. ನಂಬಿದ ವ್ಯಕ್ತಿಗಳು ನಿಮ್ಮನ್ನು ನಿರಾಸೆ ಮಾಡಬಹುದು. ಉದ್ಯೋಗದ ಸ್ಥಳದಲ್ಲಿ ನಿಮ್ಮ ಕಾರ್ಯದ ಯಶಸ್ಸು ಬೇರೆಯವರ ಪಾಲಾಗದಂತೆ ಎಚ್ಚರಿಕೆವಹಿಸಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (20-07-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ.
ತಿಥಿ: ಚತುರ್ದಶಿ 17:59 ವಾರ: ಶನಿವಾರ
ನಕ್ಷತ್ರ: ಪೂರ್ವಾಷಾಢ 25:47 ಯೋಗ: ವೈಧೃತಿ 24:06
ಕರಣ: ಗರಜ 06:54 ಅಮೃತಕಾಲ: ರಾತ್ರಿ 09:14 ರಿಂದ 10:45
ದಿನದ ವಿಶೇಷ: ಚಾಮರಾಜನಗರದ ಚಾಮರಾಜೇಶ್ವರ ರಥೋತ್ಸವ, ಗುರುಚಾತುರ್ಮಾಸ್ಯ

ಸೂರ್ಯೋದಯ : 06:02   ಸೂರ್ಯಾಸ್ತ : 06:49

ರಾಹುಕಾಲ: ಬೆಳಗ್ಗೆ 9.00 ರಿಂದ 10.30
ಗುಳಿಕಕಾಲ: ಬೆಳಗ್ಗೆ 6.00 ರಿಂದ 7.30
ಯಮಗಂಡಕಾಲ: ಮಧ್ಯಾಹ್ನ 1.30 ರಿಂದ 3.00

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಮಾನಸಿಕ ಒತ್ತಡದಿಂದ ಮುಕ್ತರಾಗಿ, ದೊಡ್ಡ ಯೋಜನೆಯತ್ತ ಗಮನ ಹರಿಸುವಿರಿ. ಬಹಳ ದಿನಗಳ ನಂತರ ಸ್ನೇಹಿತರೊಂದಿಗೆ ಕಾಲ ಕಳೆಯುವ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಹಣಕಾಸು ಪ್ರಗತಿ ಸಾಮಾನ್ಯವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 1

Horoscope Today

ವೃಷಭ: ಕುಟುಂಬ ಸದಸ್ಯರ ವರ್ತನೆ ನಿಮಗೆ ಹಿಡಿಸದಿರಬಹುದು, ಆದರೆ ವಿನಾ ಕಾರಣ ಮಾತಿಗಿಳಿದು ಮನಸ್ಸು ಕೆಡಿಸಿಕೊಳ್ಳುವುದು ಬೇಡ. ನಂಬಿದ ವ್ಯಕ್ತಿಗಳು ನಿಮ್ಮನ್ನು ನಿರಾಸೆ ಮಾಡಬಹುದು. ಉದ್ಯೋಗದ ಸ್ಥಳದಲ್ಲಿ ನಿಮ್ಮ ಕಾರ್ಯದ ಯಶಸ್ಸು ಬೇರೆಯವರ ಪಾಲಾಗದಂತೆ ಎಚ್ಚರಿಕೆವಹಿಸಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ಹಣಕಾಸು ಪ್ರಗತಿ ಮಧ್ಯಮವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 1

Horoscope Today

ಮಿಥುನ: ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸುವುದು ಉತ್ತಮ. ಅದರಲ್ಲೂ ಗರ್ಭಿಣಿಯರು ಹೆಚ್ಚು ಕಾಳಜಿ ವಹಿಸಿ. ಹೊಸ ಒಪ್ಪಂದ ಮಾಡುವುದು ಇಂದಿನ ಮಟ್ಟಿಗೆ ಬೇಡ. ಆತುರದಲ್ಲಿ ಯಾವ ತೀರ್ಮಾನಗಳನ್ನು ಮಾಡಬೇಡಿ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 8

Horoscope Today

ಕಟಕ:ಬಿಡುವಿಲ್ಲದ ಕಾರ್ಯ ಯೋಜನೆ, ಅಪಾರ ಯಶಸ್ಸನ್ನು ಹಾಗೂ ಕೀರ್ತಿಯನ್ನು ತಂದು ಕೊಡುವುದು. ಪ್ರಯಾಣದ ಕುರಿತಾಗಿ ಯೋಜನೆ ಮಾಡುವಿರಿ. ಹೂಡಿಕೆ ವ್ಯವಹಾರ ಇಂದು ಹೆಚ್ಚು ಲಾಭ ತರುವುದು. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 2

Horoscope Today

ಸಿಂಹ: ದಿನದ ಮಟ್ಟಿಗೆ ಆರೋಗ್ಯದಲ್ಲಿ ವ್ಯತ್ಯಾಸ ಆಗುವ ಸಾಧ್ಯತೆ ಇದೆ, ಎಚ್ಚರಿಕೆ ಇರಲಿ. ವಿಶ್ವಾಸದಿಂದ ಕಾರ್ಯ ಸಿದ್ಧಿ. ಲಾಭದ ಹೂಡಿಕೆ ಕುರಿತಾಗಿ ಆಲೋಚನೆ ಮಾಡುವಿರಿ. ಕುಟುಂಬದ ಜತೆಗೆ ಕಾಲ ಕಳೆಯಲು ಹೆಚ್ಚು ಸಮಯ ವಿನಿಯೋಗಿಸುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 9

Horoscope Today

ಕನ್ಯಾ: ಪ್ರಯತ್ನದಲ್ಲಿ ಯಶಸ್ಸು ಸಿಗಲಿದೆ. ಹಣಕಾಸು ವ್ಯವಹಾರದಲ್ಲಿ ಲಾಭ ಇರಲಿದೆ. ಆತುರದಲ್ಲಿ ಮಾತನಾಡಿ ಅಪಾಯ ತಂದುಕೊಳ್ಳುವುದು ಬೇಡ. ಸಮಸ್ಯೆಗಳು ಪರಿಹಾರವಾಗುವ ಸಾಧ್ಯತೆ ಇದೆ. ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಪ್ರಗತಿ ಇರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 8

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಭರವಸೆಯ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಸೌಂದರ್ಯದ ಕುರಿತು ಕಾಳಜಿ ವಹಿಸಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ಹಣಕಾಸು ವ್ಯವಹಾರದಲ್ಲಿ ಲಾಭ ಇರಲಿದೆ. ಕುಟುಂಬದ ಸದಸ್ಯರಿಂದ ಬೆಂಬಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 1

Horoscope Today

ವೃಶ್ಚಿಕ : ಮಾನಸಿಕ ಒತ್ತಡದಿಂದ ದೂರವಾಗಲು ಧ್ಯಾನ ಮಾಡಿ. ವೃತಾ ಚಿಂತೆ ನಿಮ್ಮನ್ನು ಮತ್ತಷ್ಟು ಖಿನ್ನತೆಗೆ ಒಳಪಡಿಸುವುದು. ಆದರಿಂದ ಸಕಾರಾತ್ಮಕ ಆಲೋಚನೆಗಳನ್ನು ಮಾಡಿ. ಕೌಟುಂಬಿಕ ಕಲಹದಲ್ಲಿ ಧ್ವನಿ ಸೇರಿಸುವುದು ಬೇಡ, ಮನೆಯ ವಾತಾವರಣ ಹದಗೆಡಬಹುದು. ಮೌನದಿಂದ ಕಾರ್ಯ ಸಿದ್ಧಿಸಿಕೊಳ್ಳಿ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 3

Horoscope Today

ಧನಸ್ಸು: ಪ್ರಭಾವಿ ವ್ಯಕ್ತಿಗಳ ವಿಶ್ವಾಸದಿಂದ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ಅನಿರೀಕ್ಷಿತ ಖರ್ಚು ಇರಲಿದೆ, ಇದರ ಹೊರಾತಾಗಿಯೂ ಲಾಭ ಪಡೆಯುವಿರಿ. ಮಾತಿನ ಮೇಲೆ ಹಿಡಿತವಿರಲಿ. ಸಮಯ ವ್ಯರ್ಥ ಮಾಡದೆ ಕಾರ್ಯದಲ್ಲಿ ಮುನ್ನುಗ್ಗಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9

Horoscope Today

ಮಕರ: ಘಟಿಸಿದ ಘಟನೆಗಳನ್ನು ಮೆಲುಕು ಹಾಕುತ್ತಾ ಕಾಲಹರಣ ಮಾಡುವ ಬದಲು ಕಾರ್ಯದಲ್ಲಿ ಮುನ್ನುಗ್ಗಿ. ಮಾನಸಿಕ ಒತ್ತಡ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಸಾಧ್ಯವಾದಷ್ಟು ವಿಶ್ರಾಂತಿ ಪಡೆಯಿರಿ. ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಉಂಟು ಆಗುವ ಸಾಧ್ಯತೆ ಇದೆ. ಅತಿರೇಕವಾಗಿ ಕೋಪದಿಂದ ಮಾತನಾಡುವುದು ಬೇಡ. ಆರ್ಥಿಕ ಪ್ರಗತಿ ಇರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 9

Horoscope Today

ಕುಂಭ: ನಿಮ್ಮ ಸಹಾಯ ಮಾಡುವ ಗುಣ, ಇತರರಿಂದ ಪ್ರಶಂಸೆ ಸಿಗಲಿದೆ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ.ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 7

Horoscope Today

ಮೀನ: ಉದ್ಯೋಗದಲ್ಲಿ ಹೊಸ ಭರವಸೆ ಮೂಡಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಹಣಕಾಸು ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಕುಟುಂಬದ ಸದಸ್ಯರ ವರ್ತನೆ ಮುಜುಗರ ಉಂಟು ಮಾಡುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 4

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading
Advertisement
Paris Olympics
ಕ್ರೀಡೆ11 mins ago

Paris Olympics: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಕನ್ನಡತಿ ಭಾವನಾ ಪ್ರದ್ಯುಮ್ನ

bangladesh protests dhaka
ಪ್ರಮುಖ ಸುದ್ದಿ18 mins ago

Bangladesh Protests: ಬಾಂಗ್ಲಾದಲ್ಲಿ ಹಿಂಸಾಚಾರ ಉಲ್ಬಣ, 105 ಸಾವು; 300 ಭಾರತೀಯ ವಿದ್ಯಾರ್ಥಿಗಳು ಸ್ವದೇಶಕ್ಕೆ

Music Composer Hamsalekha Ask Apology To Jain Community controversial
ಸಿನಿಮಾ22 mins ago

Music Composer Hamsalekha : ಜೈನ ಫಿಲಾಸಫಿ ಬುಲ್‌‌ಶಿಟ್ ಎಂದು ಅವಮಾನಿಸಿದ ಹಂಸಲೇಖ ಈಗ ಕ್ಷಮಿಸಿ ಅಂತಿದ್ದಾರೆ!

road accident savadatti belagavi news
ಬೆಳಗಾವಿ1 hour ago

Road Accident: ಬೈಕ್‌ಗಳು ಮುಖಾಮುಖಿ ಡಿಕ್ಕಿ, ಇಬ್ಬರು ಸಾವು, ಇಬ್ಬರು ಗಂಭೀರ

road rage bangalore
ಬೆಂಗಳೂರು1 hour ago

Road Rage: ರಸ್ತೆಯಲ್ಲಿ ಗೂಂಡಾಗಿರಿ, ಇನೋವಾ ಚಾಲಕನ ಮೇಲೆ ಫಾರ್ಚುನರ್‌ನಲ್ಲಿದ್ದ ತಂಡದಿಂದ ತೀವ್ರ ಹಲ್ಲೆ

Pets in Designer Outfits
Latest1 hour ago

Pets in Designer Outfits : ಅನಂತ್-ರಾಧಿಕಾ ಮದುವೆಯಲ್ಲಿ ಅಂಬಾನಿ ಕುಟುಂಬದ ನಾಯಿಗಳ ಸಂಭ್ರಮ ನೋಡಿ!

dengue fever death davanagere
ಪ್ರಮುಖ ಸುದ್ದಿ2 hours ago

Dengue fever: ಶಂಕಿತ ಡೆಂಗ್ಯು ಜ್ವರಕ್ಕೆ ಯುವತಿ ಸಾವು, ರಾಜ್ಯದಲ್ಲಿ ಡೆಂಗ್ಯು ಸಾವು 9ಕ್ಕೆ ಏರಿಕೆ

ರಾಜಮಾರ್ಗ ಅಂಕಣ alphe hevett
ಅಂಕಣ2 hours ago

ರಾಜಮಾರ್ಗ ಅಂಕಣ: ಆಲ್ಫೀ ಹೆವೆಟ್ಟ್- ವೀಲ್ ಚೇರ್ ಮೇಲಿನ ಟೆನ್ನಿಸ್ ಬೆರಗು

karnataka weather Forecast
ಮಳೆ2 hours ago

Karnataka Weather : ಗಾಳಿ ಸಹಿತ ಜೋರು ಮಳೆ; 11 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

ರಾಜಮಾರ್ಗ ಅಂಕಣ sadananda suvarna
ಅಂಕಣ2 hours ago

ರಾಜಮಾರ್ಗ ಅಂಕಣ: ನೇಪಥ್ಯಕ್ಕೆ ಸರಿದ ರಂಗ ನಿರ್ದೇಶಕ ಸದಾನಂದ ಸುವರ್ಣ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ20 hours ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ20 hours ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ2 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ4 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ5 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ5 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ5 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ6 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

ಟ್ರೆಂಡಿಂಗ್‌