Ram Mandir Watch: 34 ಲಕ್ಷ ರೂ.ಗೆ ಮಾರಾಟವಾಯಿತು ʼರಾಮ ಜನ್ಮಭೂಮಿʼ ಸ್ಪೆಷಲ್‌ ವಾಚ್! - Vistara News

Latest

Ram Mandir Watch: 34 ಲಕ್ಷ ರೂ.ಗೆ ಮಾರಾಟವಾಯಿತು ʼರಾಮ ಜನ್ಮಭೂಮಿʼ ಸ್ಪೆಷಲ್‌ ವಾಚ್!

Ram Mandir Watch: ಸ್ವಿಸ್ ವಾಚ್ ತಯಾರಕ ಕಂಪನಿಯೊಂದು ರಾಮ ಜನ್ಮಭೂಮಿ ಲಿಮಿಟೆಡ್ ಎಡಿಷನ್ ವಾಚ್ ಅನ್ನು ಬಿಡುಗಡೆ ಮಾಡಿದೆ. ಈ ವಾಚ್ ಎರಡು ಆವೃತ್ತಿಗಳಲ್ಲಿ ಬರುತ್ತದೆ. ಇದೀಗ ಈ ವಾಚ್ 34 ಲಕ್ಷ ರೂ.ಗೆ ಮಾರಾಟವಾಗಿದ್ದು, ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಾಚ್‌ನಲ್ಲಿ ಮುಳ್ಳು 9 ಗಂಟೆಗೆ ಬಂದಾಗ ರಾಮ ಮಂದಿರವನ್ನು ತೋರಿಸಿದರೆ, 6 ಗಂಟೆಗೆ “ಜೈ ಶ್ರೀ ರಾಮ್” ಎಂದು ಹೇಳುತ್ತದೆ. ಕೇಸರಿ ಬಣ್ಣದ ಬೆಲ್ಟ್ ಹೊಂದಿರುವ ಈ ವಾಚ್‌ನಲ್ಲಿ ಭಗವಾನ್ ರಾಮ ಮತ್ತು ಭಗವಾನ್ ಹನುಮಂತನ ಚಿತ್ರ ಸಹ ಕಾಣಿಸುತ್ತದೆ. ಈ ಕುರಿತ ವಿವರ ಇಲ್ಲಿದೆ.

VISTARANEWS.COM


on

Ram Mandir Watch
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo


ನವದೆಹಲಿ: ಅಯೋಧ್ಯೆಯಲ್ಲಿ ಈ ವರ್ಷದ ಆರಂಭದಲ್ಲಿ ಹಿಂದೂಗಳ ಆರಾಧ್ಯ ದೇವರಾದ ಶ್ರೀರಾಮ ಮಂದಿರದ ಉದ್ಘಾಟನೆಯನ್ನು ಬಹಳ ವಿಜೃಂಭಣೆಯಿಂದ ನಡೆಸಲಾಗಿತ್ತು. ಲಕ್ಷಾಂತರ ಹಿಂದೂಗಳು ದೂರದೂರಿನಿಂದ ಶ್ರೀರಾಮನ ದರ್ಶನಕ್ಕೆ ಬಂದಿದ್ದರು. ಶ್ರೀರಾಮ ಮಂದಿರದ ಪ್ರತಿಷ್ಠಾಪನೆಯ ಬಳಿಕ ಇದೀಗ ರಾಮ ಮಂದಿರ ಪ್ರತಿಷ್ಠಾಪನಾ ಸಮಾರಂಭವನ್ನು ನೆನಪಿಸುವಂತಹ ವಾಚ್ (Ram Mandir Watch) ಒಂದನ್ನು ಬಿಡುಗಡೆ ಮಾಡಲಾಗಿದೆ.

ಸ್ವಿಸ್ ವಾಚ್ ತಯಾರಕ ಕಂಪನಿಯೊಂದು ಭಾರತೀಯ ರಿಟೇಲ್‌ ಉದ್ದಿಮೆಯ ಸಹಯೋಗದೊಂದಿಗೆ ರಾಮ ಜನ್ಮಭೂಮಿ ಲಿಮಿಟೆಡ್ ಎಡಿಷನ್ ವಾಚ್ ಅನ್ನು ಬಿಡುಗಡೆ ಮಾಡಿದೆ. ಈ ವಾಚ್ ಎರಡು ಆವೃತ್ತಿಗಳಲ್ಲಿ ಬರುತ್ತದೆ. ಇದೀಗ ಈ ವಾಚ್ 34 ಲಕ್ಷ ರೂ.ಗೆ ಮಾರಾಟವಾಗಿದ್ದು, ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಿಗ್ನೇಚರ್ ಎಪಿಕ್ ಎಸ್ಕ್‌ಸ್ಕೆಲೆಟನ್ ಸೀರಿಸ್ ಅನ್ನು ಆಧರಿಸಿ ಎಥೋಸ್ ಮತ್ತು ಜಾಕೋಬ್ ಅಂಡ್ ಕೋ ಸಹಯೋಗದೊಂದಿಗೆ ಈ ಐಷಾರಾಮಿ ವಾಚ್ ಅನ್ನು ಬಿಡುಗಡೆ ಮಾಡಲಾಗಿದೆ. “ಈ ವಾಚ್ ಅನ್ನು ಭಾರತದ ಆಳವಾದ ಸಾಂಸ್ಕೃತಿಕ ಪರಂಪರೆಗೆ ಗೌರವ ಸಲ್ಲಿಸಲು ವಿನ್ಯಾಸಗೊಳಿಸಲಾಗಿದೆ ಮತ್ತು ಇದು ಇದುವರೆಗೆ ಮಾಡಿದ ಅತ್ಯಂತ ವಿಶಿಷ್ಟವಾದ ಸಹಯೋಗದ ವಾಚ್‍ಗಳಲ್ಲಿ ಒಂದಾಗಿದೆ” ಎಂದು ಕಂಪನಿ ಹೇಳಿಕೊಂಡಿದೆ.

ಈ ವಾಚ್‍ನಲ್ಲಿ ಮುಳ್ಳು 9 ಗಂಟೆಗೆ ಬಂದಾಗ ರಾಮ ಮಂದಿರವನ್ನು ತೋರಿಸಿದರೆ, 6 ಗಂಟೆಗೆ “ಜೈ ಶ್ರೀ ರಾಮ್” ಎಂದು ಹೇಳುತ್ತದೆ! ಕೇಸರಿ ಬಣ್ಣದ ಬೆಲ್ಟ್ ಹೊಂದಿರುವ ಈ ವಾಚ್‍ನಲ್ಲಿ ಭಗವಾನ್ ರಾಮ ಮತ್ತು ಭಗವಾನ್ ಹನುಮಂತನ ಚಿತ್ರ ಸಹ ಕಾಣಿಸುತ್ತದೆ. ಈ ವಾಚ್‍ಗಾಗಿ ಆಯ್ಕೆ ಮಾಡಿದ ಬಣ್ಣವು ಆಧ್ಯಾತ್ಮಿಕತೆ, ಶುದ್ಧತೆ ಮತ್ತು ಭಕ್ತಿಯ ಸಾರವನ್ನು ಪ್ರತಿನಿಧಿಸುತ್ತದೆ. ಇದು ಹಿಂದೂ ಧರ್ಮದ ಮೌಲ್ಯಗಳನ್ನು ಬಿಂಬಿಸುತ್ತದೆ. ಈ ವಾಚ್‍ನ ಪ್ರತಿಯೊಂದು ವಿವರವನ್ನು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಕಂಪನಿಯ ಪ್ರಕಾರ, ಕೇವಲ 49 ಸೀಮಿತ ಆವೃತ್ತಿಯ ವಾಚ್‍ಗಳನ್ನು ತಯಾರಿಸಲಾಗಿದ್ದು, ಅದರಲ್ಲಿ 35 ವಾಚುಗಳು ಈಗಾಗಲೇ ಮಾರಾಟಕ್ಕೆ ಸಿದ್ಧವಾಗಿವೆ ಎನ್ನಲಾಗಿದೆ.

ಹಲವು ವರ್ಷಗಳ ನ್ಯಾಯಾಂಗ ಹೋರಾಟ ಮತ್ತು ಹಲವಾರು ವಿವಾದಗಳು, ಸಂಘರ್ಷದ ನಂತರ ಸುಪ್ರೀಂ ಕೋರ್ಟ್ 2019ರಲ್ಲಿ ದೇವಾಲಯವನ್ನು ನಿರ್ಮಿಸಲು ಹಿಂದೂಗಳಿಗೆ ವಿವಾದಿತ ಭೂಮಿಯನ್ನು ಹಸ್ತಾಂತರಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 2020ರಲ್ಲಿ ರಾಮಮಂದಿರಕ್ಕೆ (ಭೂಮಿ ಪೂಜೆ) ಅಡಿಪಾಯ ಹಾಕಿದ್ದರು. ನಾಲ್ಕು ವರ್ಷಗಳ ನಂತರ ಭವ್ಯ ದೇವಾಲಯವನ್ನು ನಿರ್ಮಿಸಿ ಗರ್ಭಗುಡಿಯಲ್ಲಿ ರಾಮ್ ಲಲ್ಲಾರನ್ನು ಸ್ಥಾಪಿಸಿ ಭರ್ಜರಿಯಾಗಿ ಪ್ರತಿಷ್ಠಾಪನಾ ಸಮಾರಂಭ ನಡೆಸಿದ್ದರು.

ಇದನ್ನೂ ಓದಿ: ‘ಮಿಸ್ಟರ್ ಬೀನ್’ ಖ್ಯಾತಿಯ ರೋವನ್ ಅಟ್ಕಿನ್ಸನ್ ಹಾಸಿಗೆ ಹಿಡಿದಿದ್ದಾರೆಯೇ? ಭಾರೀ ವೈರಲಾಗ್ತಿದೆ ಈ ಫೋಟೊ

ಈ ದೇವಾಲಯವು ಹಿಂದೂಗಳ ನಂಬಿಕೆಯ ಕೇಂದ್ರ ಬಿಂದುವಾಗಿದೆ. ಇಡೀ ಸಂಕೀರ್ಣವನ್ನು ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲಾಗಿದೆ. ಅಯೋಧ್ಯೆಯ ರಾಮ ಮಂದಿರಕ್ಕೆ ನಿತ್ಯ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral Video: ಸಿಂಧೂರ ಹಚ್ಚುವಾಗ ಕುಸಿದುಬಿದ್ದ ವಧು; ಎದ್ದೂಬಿದ್ದು ಓಡಿದ ವರ!

Viral Video ಮದುವೆ ಮಂಟಪದಲ್ಲಿ ವಧು ಕುಳಿತಿದ್ದಾಗ ವರ ವಧುವಿನ ಹಣೆಗೆ ಸಿಂಧೂರ ಹಚ್ಚಲು ಹೋಗಿದ್ದಾನೆ. ಆ ವೇಳೆಗೆ ವಧು ಕಿರುಚುತ್ತಾ ನೆಲದ ಮೇಲೆ ಬಿದ್ದಿದ್ದಾಳೆ. ಇದನ್ನು ನೋಡಿದ ವರ ತಲೆಯ ಮೇಲಿದ್ದ ಪೇಟವನ್ನು ಎಸೆದು ಓಡಲು ಪ್ರಾರಂಭಿಸಿದ್ದಾನೆ. ಆಗ ಅಲ್ಲಿದ್ದ ಮಹಿಳೆಯರಿಬ್ಬರು ಆತನನ್ನು ತಡೆಯಲು ಪ್ರಯತ್ನಿಸುತ್ತಾ ಜೊತೆಗೆ ವಧುವನ್ನು ಮೇಲೆತ್ತಲು ಪ್ರಯತ್ನಿಸುತ್ತಿದ್ದಾರೆ. ಆದರೂ ವರ ಅಲ್ಲಿಂದ ಹೋಗಿದ್ದಾನೆ. ಈ ಘಟನೆ ವಿಡಿಯೊದಲ್ಲಿ ಸೆರೆಯಾಗಿದೆ. ಈ ಘಟನೆಯಿಂದ ಗಂಭೀರವಾಗಿ ನಡೆಯಬೇಕಿದ್ದ ವಿವಾಹ ಸಮಾರಂಭ ಹಾಸ್ಯಾಸ್ಪದವಾಗಿದೆ.

VISTARANEWS.COM


on

Viral Video
Koo


ಮದುವೆ ಎನ್ನುವುದು ಎಲ್ಲರ ಜೀವನದಲ್ಲೂ ಬಹಳ ವಿಶೇಷವಾದುದು. ಹಾಗಾಗಿ ಮದುವೆಯ ಸಮಾರಂಭವನ್ನು ಬಹಳ ವಿಶೇಷವಾಗಿ ಮಾಡಲು ಹಲವು ದಿನಗಳಿಂದ ಯೋಜನೆ ಮಾಡುತ್ತಾರೆ. ಈ ದಿನ ವಧುವರರು ತುಂಬಾ ಖುಷಿಯಲ್ಲಿರುತ್ತಾರೆ. ಆದರೆ ಇಲ್ಲೊಂದು ಮದುವೆಯಲ್ಲಿ ವರ ಸಿಂಧೂರ ಹಚ್ಚಲು ಬಂದಾಗ ವಧು ಕುಸಿದು ಬಿದ್ದ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ವಿಡಿಯೊದಲ್ಲಿ ಮದುವೆ ಮಂಟಪದಲ್ಲಿ ವಧು ಕುಳಿತಿದ್ದಾಗ ವರ ವಧುವಿನ ಹಣೆಗೆ ಸಿಂಧೂರ ಹಚ್ಚಲು ಹೋಗಿದ್ದಾನೆ. ಆ ವೇಳೆಗೆ ವಧು ಕಿರುಚುತ್ತಾ ನೆಲದ ಮೇಲೆ ಬಿದ್ದಿದ್ದಾಳೆ. ಇದನ್ನು ನೋಡಿದ ವರ ತಲೆಯ ಮೇಲಿದ್ದ ಪೇಟವನ್ನು ಎಸೆದು ಓಡಲು ಪ್ರಾರಂಭಿಸಿದ್ದಾನೆ. ಆಗ ಅಲ್ಲಿದ್ದ ಮಹಿಳೆಯರಿಬ್ಬರು ಆತನನ್ನು ತಡೆಯಲು ಪ್ರಯತ್ನಿಸುತ್ತಾ ಜೊತೆಗೆ ವಧುವನ್ನು ಮೇಲೆತ್ತಲು ಪ್ರಯತ್ನಿಸುತ್ತಿದ್ದಾರೆ. ಆದರೂ ವರ ಅಲ್ಲಿಂದ ಹೋಗಿದ್ದಾನೆ. ಈ ಘಟನೆ ವಿಡಿಯೊದಲ್ಲಿ ಸೆರೆಯಾಗಿದೆ. ಈ ಘಟನೆಯಿಂದ ಗಂಭೀರವಾಗಿ ನಡೆಯಬೇಕಿದ್ದ ವಿವಾಹ ಸಮಾರಂಭ ಹಾಸ್ಯಾಸ್ಪದವಾಗಿದೆ. ಮತ್ತು ಈ ಘಟನೆ ನೋಡಿದವರಿಗೆ ದಿಗ್ಭ್ರಮೆಯಾಗುವುದಂತು ಖಂಡಿತ.

ಈ ವೈರಲ್ ವಿಡಿಯೊ ನೋಡಿ ಅನೇಕರು ತಮಾಷೆಯಿಂದ ನಕ್ಕಿದ್ದಾರೆ. ಈ ಮದುವೆ ದಿನ ನಡೆದ ಘಟನೆಯನ್ನು ನೋಡಿದವರಿಗೆ ಇದು ನಿಜವಾಗಿಯೂ ಸ್ಮರಣೀಯವಾಗಿರುತ್ತದೆ. ಯಾಕೆಂದರೆ ವಧು ಕುಸಿದು ಬಿದ್ದಿದ್ದನ್ನು ಕಂಡು ವರನ ಪ್ರತಿಕ್ರಿಯೆ ಬಹಳ ತಮಾಷೆಯಾಗಿದೆ. ಅದನ್ನು ನೋಡಿದ ಎಲ್ಲರಿಗೂ ಪದೇ ಪದೇ ಈ ಘಟನೆ ನೆನಪಾಗುವುದು ಖಂಡಿತ. ಇದು ತಮಾಷೆಗಾಗಿಯೇ ಮಾಡಿದ ವಿಡಿಯೊದಂತಿದೆ.

ನಾವು ಆಗಾಗ್ಗೆ ಅಂತರ್ಜಾಲದಲ್ಲಿ ಹಲವಾರು ಮದುವೆಗೆ ಸಂಬಂಧಪಟ್ಟ ವಿಡಿಯೊಗಳನ್ನು ನೋಡುತ್ತಿರುತ್ತೇವೆ, ಇದು ಕೆಲವೊಮ್ಮೆ ಮನರಂಜನೆಯನ್ನು ನೀಡುತ್ತದೆ. ಇತ್ತೀಚೆಗೆ, ಇದೇ ರೀತಿಯ ವಿವಾಹದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೊದಲ್ಲಿ, ವಧು ಮತ್ತು ವರ ಕುರ್ಚಿಯ ಮೇಲೆ ಒಟ್ಟಿಗೆ ಕುಳಿತಿದ್ದರು. ವಧು ಇದ್ದಕ್ಕಿದ್ದಂತೆ ತಲೆ ತಗ್ಗಿಸಿ ಅಳಲು ಪ್ರಾರಂಭಿಸುತ್ತಾಳೆ.

ಇದನ್ನೂ ಓದಿ: ವಿಮಾನದಲ್ಲಿ ಸಾರಾ ಅಲಿ ಖಾನ್‌ ಮೇಲೆ ಜ್ಯೂಸ್‌ ಚೆಲ್ಲಿದ ಗಗನಸಖಿ! ಮುಂದೇನಾಯ್ತು? ವಿಡಿಯೊ ನೋಡಿ

ವಧು ಸಂತೋಷವಾಗಿರದ ಕಾರಣ ಆಕೆಗೆ ಏನೋ ತೊಂದರೆಯಾಗಿದೆ ಎಂಬುದನ್ನು ಇದರಿಂದ ತಿಳಿಯಬಹುದು. ಅವಳು ಸ್ವಲ್ಪ ಹೊತ್ತು ಮೌನವಾಗಿ ಕುಳಿತು ನಂತರ ಕಣ್ಣೀರು ಹಾಕಿದಳು. ವಧುವಿನ ಹಠಾತ್ ನಡವಳಿಕೆ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿತು. ಪತಿ ನೋಡಲು ಸುಂದರವಾಗಿಲ್ಲ ಎಂದು ಆಕೆ ಕಣ್ಣೀರು ಹಾಕುತ್ತಿದ್ದಾಳೆ ಎಂದು ಹಲವಾರು ನೆಟ್ಟಿಗರು ಕಾಮೆಂಟ್ ಮಾಡಿದ್ದರು.

Continue Reading

Latest

Ragging Case: ಜೂನಿಯರ್ ವಿದ್ಯಾರ್ಥಿಗಳನ್ನು ಕ್ರೂರವಾಗಿ ಥಳಿಸಿದ ಸೀನಿಯರ್‌ಗಳು! ತಲ್ಲಣ ಮೂಡಿಸುವ ವಿಡಿಯೊ

Ragging Case: ಎನ್‍ಸಿಸಿ ತರಬೇತಿಯ ನೆಪದಲ್ಲಿ ಸೀನಿಯರ್ ವಿದ್ಯಾರ್ಥಿಗಳ ಗುಂಪು ಮಧ್ಯರಾತ್ರಿಯಲ್ಲಿ ಜೂನಿಯರ್ ವಿದ್ಯಾರ್ಥಿಗಳನ್ನು ತಮ್ಮ ಕೋಣೆಗೆ ಕರೆದು ಕೋಲುಗಳಿಂದ ಹೊಡೆದಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ, ಜೂನಿಯರ್ ವಿದ್ಯಾರ್ಥಿಗಳನ್ನು ಹೊಡೆಯುವ ಮುನ್ನ ಅವರನ್ನು ಮಲಗಿಸಿ ನಂತರ ಕೋಲುಗಳಿಂದ ಎಲ್ಲರೂ ಹೊಡೆಯುತ್ತಾರೆ. ಸೀನಿಯರ್ ವಿದ್ಯಾರ್ಥಿಗಳು ತಾವು ಮಾಡಿದ ಕಾರ್ಯಕ್ಕೆ ನಗುತ್ತಾ ತಮಾಷೆ ಮಾಡಿಕೊಳ್ಳುತ್ತಿದ್ದರೆ ಪೆಟ್ಟು ತಿಂದ ಜೂನಿಯರ್ ವಿದ್ಯಾರ್ಥಿಗಳು ಅಳುತ್ತಿದ್ದಾರೆ. ಬೇಸರ ಮೂಡಿಸುವ ವಿಡಿಯೊ ಇದು.

VISTARANEWS.COM


on

Ragging Case
Koo

ಕಠಿಣ ಕಾನೂನು ಜಾರಿಯಾದ ಬಳಿಕವೂ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಆಗಾಗ ರ‍್ಯಾಗಿಂಗ್ ಮಾಡುತ್ತಲೇ ಇರುತ್ತಾರೆ. ಆಂಧ್ರಪ್ರದೇಶದ ಪಲ್ನಾಡಿನ ಎಸ್ಎಸ್ಎನ್ ಕಾಲೇಜಿನಲ್ಲಿ ನಡೆದ ರ‍್ಯಾಗಿಂಗ್ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಅದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ (Ragging Case) ಸಂಚಲನ ಮೂಡಿಸಿದೆ.

ಎನ್‍ಸಿಸಿ ತರಬೇತಿ ನೆಪದಲ್ಲಿ ಸೀನಿಯರ್ ವಿದ್ಯಾರ್ಥಿಗಳ ಗುಂಪು ಮಧ್ಯರಾತ್ರಿಯಲ್ಲಿ ಜೂನಿಯರ್ ವಿದ್ಯಾರ್ಥಿಗಳನ್ನು ತಮ್ಮ ಕೋಣೆಗೆ ಕರೆದು ಕೋಲುಗಳಿಂದ ಹೊಡೆದಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಗುರುವಾರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ, ಜೂನಿಯರ್ ವಿದ್ಯಾರ್ಥಿಗಳನ್ನು ಹೊಡೆಯುವ ಮುನ್ನ ಅವರನ್ನು ಮಲಗಿಸಿ ನಂತರ ಕೋಲುಗಳಿಂದ ಎಲ್ಲರೂ ಹೊಡೆಯುತ್ತಾರೆ. ಸೀನಿಯರ್ ವಿದ್ಯಾರ್ಥಿಗಳು ತಾವು ಮಾಡಿದ ಕಾರ್ಯಕ್ಕೆ ನಗುತ್ತಾ ತಮಾಷೆ ಮಾಡಿಕೊಳ್ಳುತ್ತಿದ್ದರೆ ಪೆಟ್ಟು ತಿಂದ ಜೂನಿಯರ್ ವಿದ್ಯಾರ್ಥಿಗಳು ಅಳುತ್ತಿದ್ದಾರೆ. ಆ ಕೋಣೆಯೊಳಗೆ ಯಾರೋ ಈ ಕೃತ್ಯವನ್ನು ವಿಡಿಯೊ ಮಾಡಿದ್ದಾರೆ.

ಈ ವಿಡಿಯೊವನ್ನು ವೈಎಸ್ಆರ್ ಸಿಪಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ಕುರಿತಾದ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಗೆ ಪ್ರಸ್ತುತ ಸರ್ಕಾರವನ್ನು ಟೀಕಿಸಿದ್ದಾರೆ. “ಪಲ್ನಾಡು ಜಿಲ್ಲೆಯ ನರಸರಾವ್ಪೇಟೆಯ ಎಸ್ಎಸ್ಎನ್ ಕಾಲೇಜಿನಲ್ಲಿ ಎನ್‍ಸಿಸಿ ತರಬೇತಿಯ ನೆಪದಲ್ಲಿ ವಿದ್ಯಾರ್ಥಿಗಳನ್ನು ತೀವ್ರ ರ‍್ಯಾಗಿಂಗ್‌ ಮಾಡಲಾಗಿದೆ. ಜೂನಿಯರ್ ವಿದ್ಯಾರ್ಥಿಗಳನ್ನು ಮಧ್ಯರಾತ್ರಿ ಕಾಲೇಜಿಗೆ ಕರೆಸಿಕೊಂಡು ಸೀನಿಯರ್ ವಿದ್ಯಾರ್ಥಿಗಳು ಕೋಲುಗಳಿಂದ ಥಳಿಸಿದ್ದಾರೆ. ಮುಖ್ಯ ರಸ್ತೆಗಳಲ್ಲಿ ಕೊಲೆ ನಡೆದಾಗಲೇ ಪೊಲೀಸರಿಗೆ ಏನೂ ಮಾಡಲು ಆಗಲಿಲ್ಲ, ಅಂತಹದರಲ್ಲಿ ಕೋಲುಗಳನ್ನು ಬಳಸಿ ಹಲ್ಲೆ ಮಾಡಿದ್ದಕ್ಕೆ ಅವರು ಏನು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಗೃಹ ಸಚಿವ @Anitha_TDP ಪ್ರತಿಕ್ರಿಯಿಸಿದ್ದಾರೆ. ಇದು ನಮ್ಮ ರಾಜ್ಯದ ಪ್ರಸ್ತುತ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ” ಎಂದು ಪಕ್ಷವು ತಿಳಿಸಿದೆ.

ಇದನ್ನೂ ಓದಿ:ಜಾರಿ ಬಿದ್ದ ವಧುವನ್ನು ಎತ್ತದ ವರ; ಸಹೋದರನಿಂದ ಮದುವೆ ಮಂಟಪದಲ್ಲೇ ಬಿತ್ತು ಗೂಸಾ!

ಈ ಘಟನೆಗೆ ಸಂಬಂಧಿಸಿದಂತೆ ಬುಧವಾರ ವಿದ್ಯಾರ್ಥಿಯೊಬ್ಬನನ್ನು ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಪೊಲೀಸರ ಪ್ರಕಾರ, ಫೆಬ್ರವರಿ 2ರಂದು ಆರು ಅಂತಿಮ ವರ್ಷದ ವಿದ್ಯಾರ್ಥಿಗಳು ಎನ್‍ಸಿಸಿ ತರಬೇತಿಯ ಸೋಗಿನಲ್ಲಿ ಹತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳನ್ನು ರ‍್ಯಾಗಿಂಗ್‌ಗೆ ಒಳಪಡಿಸಿದರು. ಅಂತಿಮ ವರ್ಷದ ವಿದ್ಯಾರ್ಥಿಗಳು ತಮ್ಮ ಜೂನಿಯರ್‌ ಅನ್ನು ಕೋಲುಗಳಿಂದ ಹೊಡೆದಿದ್ದಾರೆ ಎಂದು ವರದಿಯಾಗಿದೆ. ವಿಡಿಯೊ ಕ್ಲಿಪ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರ ಮಾಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಪೊಲೀಸ್ ತಂಡವು ಕಾಲೇಜಿಗೆ ಭೇಟಿ ನೀಡಿ ವಿಚಾರಣೆ ನಡೆಸಿತು. ವಿದ್ಯಾರ್ಥಿಗಳ ಹೇಳಿಕೆಗಳು ಮತ್ತು ವಿಡಿಯೊ ಪುರಾವೆಗಳ ಆಧಾರದ ಮೇಲೆ, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಮತ್ತು ಒಬ್ಬನನ್ನು ಬಂಧಿಸಿದ್ದಾರೆ, ಉಳಿದವರನ್ನು ಬಂಧಿಸುವ ನಿರೀಕ್ಷೆ ಇದೆ ಎನ್ನಲಾಗಿದೆ.

Continue Reading

Latest

Viral News: ಸಾಯುವ ಮುನ್ನ ವಿದ್ಯಾರ್ಥಿಗಳ ಜೀವ ಕಾಪಾಡಿದ ಶಾಲಾ ಬಸ್ ಚಾಲಕ!

Viral News: ತಮಿಳುನಾಡಿನಲ್ಲಿ ಮಲಯಪ್ಪನ್ ಎಂಬುವರು ಖಾಸಗಿ ಶಾಲಾ ಬಸ್ ಚಾಲನೆ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿತು. ಅವರ ಸಾಯುವ ಸ್ಥಿತಿಯಲ್ಲಿದ್ದರೂ ಕೂಡ ಮಕ್ಕಳಿಗೆ ಯಾವುದೇ ಹಾನಿಯಾಗಬಾರದೆಂದು ವಾಹನವನ್ನು ರಸ್ತೆಯ ಬದಿಗೆ ತಂದು ನಿಲ್ಲಿಸಿ ಪ್ರಾಣ ಬಿಟ್ಟಿದ್ದಾರೆ. ಶಾಲಾ ಬಸ್ ಚಾಲಕನ ಈ ನಿಸ್ವಾರ್ಥ ಕಾರ್ಯವು ಅನೇಕ ವಿದ್ಯಾರ್ಥಿಗಳ ಜೀವವನ್ನು ಉಳಿಸಿದೆ.

VISTARANEWS.COM


on

Viral News
Koo

ಚೆನ್ನೈ: ನಾವು ಪ್ರತಿದಿನ ನೋಡುವ ಹಾಗೆ ಕೆಲವೊಂದು ಶಾಲಾ ಬಸ್‍ಗಳು ಬಹಳ ವೇಗವಾಗಿ ಚಲಿಸುತ್ತಿರುತ್ತವೆ. ಆ ಬಸ್ಸಿನ ಚಾಲಕರಿಗೆ ತಮ್ಮ ವಾಹನದಲ್ಲಿ ಚಿಕ್ಕ ಮಕ್ಕಳು ಇರುತ್ತಾರೆ ಎಂಬ ಪ್ರಜ್ಞೆ ಕೂಡ ಇರುವುದಿಲ್ಲ. ಅಷ್ಟು ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ. ಆದರೆ ತಮಿಳುನಾಡಿನ ತಿರುಪ್ಪೂರಿನಲ್ಲಿ ಶಾಲಾ ಬಸ್ ಚಾಲಕನೊಬ್ಬ ಶಾಲಾ ವಿದ್ಯಾರ್ಥಿಗಳನ್ನು ರಕ್ಷಿಸಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ಹೃದಯ ವಿದ್ರಾವಕ ಘಟನೆ ನಡೆದಿದೆ. ಅದಕ್ಕೆ ಸಂಬಂಧಪಟ್ಟ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral news) ಆಗಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ತಿರುಪುರ್ ಜಿಲ್ಲೆಯ ಗಂಗೇಯಂ ನಿವಾಸಿ ಮಲಯಪ್ಪನ್ ಖಾಸಗಿ ಶಾಲಾ ಬಸ್ ಚಾಲನೆ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿತು. ಅವರ ಸಾಯುವ ಸ್ಥಿತಿಯಲ್ಲಿದ್ದರೂ ಕೂಡ ಮಕ್ಕಳಿಗೆ ಯಾವುದೇ ಹಾನಿಯಾಗಬಾರದೆಂದು ಅವರು ವಾಹನವನ್ನು ರಸ್ತೆಯ ಬದಿಗೆ ತಂದು ನಿಲ್ಲಿಸಿ ತಮ್ಮ ಪ್ರಾಣಬಿಟ್ಟಿದ್ದಾರೆ. ಶಾಲಾ ಬಸ್ ಚಾಲಕನ ಈ ನಿಸ್ವಾರ್ಥ ಕಾರ್ಯವು ಅನೇಕ ವಿದ್ಯಾರ್ಥಿಗಳ ಜೀವವನ್ನು ಉಳಿಸಿತು.

ಮಲಯಪ್ಪನ್ ಅವರನ್ನು ಆಸ್ಪತ್ರೆ ಕರೆದುಕೊಂಡು ಹೋದರೂ ಅವರು ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು ಎಂಬುದಾಗಿ ತಿಳಿದುಬಂದಿದೆ. ಅವರ ನಿಸ್ವಾರ್ಥ ಕಾರ್ಯವನ್ನು ವೀರೋಚಿತ ಎಂದು ಶ್ಲಾಘಿಸಲಾಗಿದ್ದು, ಶಾಲಾ ಮಕ್ಕಳ ಸುರಕ್ಷತೆಗಾಗಿ ಅವರ ಸಮರ್ಪಣೆಯನ್ನು ಅನೇಕರು ಹೊಗಳಿದ್ದಾರೆ.

ಇದನ್ನೂ ಓದಿ: ʼಸಾಫ್ಟ್ ಟಚ್ʼ ಸ್ಪಾಗೆ ಹೋಗಿದ್ದ ಕ್ರಿಮಿನಲ್‌ನನ್ನು ಪ್ರೇಯಸಿ ಎದುರೇ ತುಂಡು ತುಂಡಾಗಿ ಕತ್ತರಿಸಿದರು!

ಮೃತ ವ್ಯಕ್ತಿ ವೆಲ್ಲಕೋಯಿಲ್‌ನ ಎಎನ್‍ವಿ ಮೆಟ್ರಿಕ್ ಶಾಲೆಯಲ್ಲಿ ಶಾಲಾ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು . ಗುರುವಾರ ಸಂಜೆ ಶಾಲಾ ಮಕ್ಕಳನ್ನು ಮನೆಗೆ ಕರೆದೊಯ್ಯುತ್ತಿದ್ದಾಗ ವೆಲ್ಲಕೋಯಿಲ್-ಕರೂರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದೆ. ಅವರು ತಕ್ಷಣ ವಾಹನವನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಮಕ್ಕಳ ಜೀವವನ್ನು ಉಳಿಸಿದರು, ಮತ್ತು ತಮ್ಮ ಪ್ರಾಣಬಿಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಸ್ ಚಾಲಕನ ಸಾವಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸಂತಾಪ ವ್ಯಕ್ತಪಡಿಸಿದ್ದು, ‘ಸಾವಿನ ಅಂಚಿನಲ್ಲಿದ್ದರೂ ಅವರು ಮಕ್ಕಳ ಜೀವವನ್ನು ಉಳಿಸಿದ್ದಾರೆ ಎಂದು ಹೊಗಳಿದ್ದಾರೆ. ಈ ಘಟನೆಯು ಅವರ ಕುಟುಂಬಕ್ಕೆ ಆಘಾತವನ್ನುಂಟು ಮಾಡಿದೆ, ಅನೇಕರು ಮಲಯಪ್ಪನ್ ಅವರ ಧೈರ್ಯಕ್ಕೆ ಗೌರವ ಸಲ್ಲಿಸಿದ್ದಾರೆ. ಈ ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ.

Continue Reading

ದೇಶ

Kargil Vijay Diwas 2024: ಗುಂಡುಗಳು ದೇಹ ತೂರಿದ್ದರೂ ಹಿಂದೆ ಸರಿಯದೆ ಶತ್ರುಗಳನ್ನು ಹಿಮ್ಮೆಟ್ಟಿಸಿದರು!

ಸುಮಾರು ಎರಡು ತಿಂಗಳ ಕಾಲ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೇನೆಯು ಅನೇಕ ವೀರ ಯೋಧರನ್ನು ಕಳೆದುಕೊಂಡಿತ್ತು. ಅವರಲ್ಲಿ ಕೆಲವರ ಹೋರಾಟದ ಕಥೆಗಳು ನಮಗೆ ಸ್ಫೂರ್ತಿ ನೀಡುವಂತಿದೆ ಮಾತ್ರವಲ್ಲ ಕಣ್ಣಂಚು ಒದ್ದೆಯಾಗುವಂತೆ ಮಾಡುತ್ತದೆ. ಅವರಲ್ಲಿ ಈ ಯೋಧರೂ ಸೇರಿದ್ದಾರೆ. ಇವರನ್ನೆಲ್ಲ ಗೌರವಿಸುವ ಸಲುವಾಗಿ ಪ್ರತಿ ವರ್ಷ ಕಾರ್ಗಿಲ್ ವಿಜಯ್ ದಿವಸ್ (Kargil Vijay Diwas 2024) ಅನ್ನು ಆಚರಿಸಲಾಗುತ್ತದೆ. ಕೆಲವು ವೀರ ಯೋಧರ ಕತೆ ಇಲ್ಲಿದೆ.

VISTARANEWS.COM


on

By

Kargil Vijay Diwas 2024
Koo

ಭಾರತೀಯ ಸೈನಿಕರ (Indian army) ಶೌರ್ಯವನ್ನು ಗೌರವಿಸುವ ದಿನವಾದ ಕಾರ್ಗಿಲ್ ವಿಜಯ್ ದಿವಸ್ (Kargil Vijay Diwas 2024) ಅನ್ನು ಪಾಕಿಸ್ತಾನದೊಂದಿಗಿನ (india- pakistan war) 1999ರ ಸಂಘರ್ಷದಲ್ಲಿ ಭಾರತದ ವಿಜಯದ ಸ್ಮರಣಾರ್ಥವಾಗಿ ಜುಲೈ 26ರಂದು ಆಚರಿಸಲಾಗುತ್ತದೆ. ಈ ಯುದ್ಧದಲ್ಲಿ ಭಾರತೀಯ ಸೇನೆಯ 527 ಸೈನಿಕರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟರು.

ಸುಮಾರು ಮೂರು ತಿಂಗಳ ಕಾಲ ನಡೆದ ಯುದ್ಧದಲ್ಲಿ 1999ರ ಜುಲೈ 26ರಂದು ಭಾರತೀಯ ಸೇನೆಯು ಭಾರತದ ಗಡಿ ಭಾಗದಲ್ಲಿ ಪಾಕಿಸ್ತಾನ ಸೇನೆಯು ಆಕ್ರಮಿಸಿಕೊಂಡಿದ್ದ ನೆಲೆಗಳಿಂದ ಹಿಮ್ಮೆಟ್ಟುವಂತೆ ಮಾಡುವಲ್ಲಿ ಯಶಸ್ವಿಯಾಗಿತ್ತು. ಇದು ಭಾರತದ ವಿಜಯವನ್ನು ಸೂಚಿಸುತ್ತದೆ. ಅಂದಿನಿಂದ ಪ್ರತಿ ವರ್ಷ ಕಾರ್ಗಿಲ್ ಯುದ್ಧ ದಿವಸ್ ಅನ್ನು ಆಚರಿಸಲಾಗುತ್ತದೆ. ಯುದ್ಧದ ಸಮಯದಲ್ಲಿ ಸೈನಿಕರು ಮಾಡಿದ ಅತ್ಯುನ್ನತ ತ್ಯಾಗವನ್ನು ಈ ದಿನ ಸ್ಮರಿಸಲಾಗುತ್ತದೆ.

ಭಾರತೀಯ ಸೇನೆಯು ಈ ಯುದ್ಧದಲ್ಲಿ ಅನೇಕ ವೀರ ಯೋಧರನ್ನು ಕಳೆದುಕೊಂಡಿತ್ತು. ಅವರಲ್ಲಿ ಕೆಲವರ ಹೋರಾಟದ ಕಥೆಗಳು ನಮಗೆ ಸ್ಫೂರ್ತಿ ನೀಡುವಂತಿದೆ ಮಾತ್ರವಲ್ಲ ಕಣ್ಣಂಚು ಒದ್ದೆಯಾಗುವಂತೆ ಮಾಡುತ್ತದೆ. ಅವರಲ್ಲಿ ಈ ಯೋಧರೂ ಸೇರಿದ್ದಾರೆ.

Kargil Vijay Diwas 2024
Kargil Vijay Diwas 2024


ಮೇಜರ್ ರಾಜೇಶ್ ಸಿಂಗ್ ಅಧಿಕಾರಿ

1970ರ ಡಿಸೆಂಬರ್ ನಲ್ಲಿ ಉತ್ತರಾಖಂಡದ ನೈನಿತಾಲ್ ನಲ್ಲಿ ಕೆ ಎಸ್ ಅಧಿಕಾರಿ ಮತ್ತು ಮಾಲ್ತಿ ಅಧಿಕಾರಿ ದಂಪತಿಯ ಮಗನಾಗಿ ಜನಿಸಿದ ರಾಜೇಶ್ ಸಿಂಗ್ ಭಾರತದ ಮಿಲಿಟರಿ ಅಕಾಡೆಮಿಯಾದ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ವ್ಯಾಸಂಗ ಮಾಡಿದರು. 1993ರ ಡಿಸೆಂಬರ್ 11ರಂದು ಇಂಡಿಯನ್ ಮಿಲಿಟರಿ ಅಕಾಡೆಮಿಯಿಂದ ಭಾರತೀಯ ಸೇನೆಗೆ ಅವರನ್ನು ನಿಯೋಜಿಸಲಾಯಿತು. ಭಾರತೀಯ ಸೇನೆಯ ಪದಾತಿ ದಳದಲ್ಲಿ ಇದ್ದ ಅವರನ್ನು ಕಾರ್ಗಿಲ್ ಯುದ್ಧದ ಸಮಯದಲ್ಲಿ 18 ಗ್ರೆನೇಡಿಯರ್ಸ್‌ನಲ್ಲಿ ನಿಯೋಜಿಸಲಾಗಿತ್ತು.


1999ರ ಮೇ 30ರಂದು ಟೊಲೊಲಿಂಗ್ ಅನ್ನು ವಶಪಡಿಸಿಕೊಳ್ಳಲು ತೆರಳಿದರು. ಶತ್ರುಗಳು ಬಲವಾದ ನೆಲೆ ಹೊಂದಿದ್ದ ಫಾರ್ವರ್ಡ್ ಸ್ಪರ್ ಅನ್ನು ವಶಪಡಿಸಿಕೊಳ್ಳುವ ಮೂಲಕ ಆರಂಭಿಕ ನೆಲೆಯನ್ನು ಭದ್ರಪಡಿಸುವ ಕಾರ್ಯವನ್ನು ವಹಿಸಿಕೊಂಡ ಅವರ ಸೈನ್ಯವು ಸುಮಾರು 15,000 ಅಡಿ ಎತ್ತರದಲ್ಲಿದ್ದ ಶತ್ರುಗಳನ್ನು ತಮ್ಮ ಸ್ಥಾನದಿಂದ ಹಿಮ್ಮೆಟ್ಟುವಂತೆ ಮಾಡುವಲ್ಲಿ ಯಶಸ್ವಿಯಾಯಿತು. ಹಿಮದಿಂದ ಆವೃತವಾದ ಕಠಿಣ ಪರ್ವತ ಭೂಪ್ರದೇಶದಲ್ಲಿ ನಡೆದ ಯುದ್ಧದಲ್ಲಿ ಇಬ್ಬರು ಶತ್ರು ಸಿಬ್ಬಂದಿಯನ್ನು ಕೊಂದರು.

ಹೋರಾಟದ ಸಮಯದಲ್ಲಿ ತೀವ್ರವಾಗಿ ಗಾಯಗೊಂಡರೂ ಅವರು ತಮ್ಮ ಉಪ ಘಟಕಗಳಿಗೆ ನಿರ್ದೇಶನ ನೀಡುವುದನ್ನು ಮುಂದುವರೆಸಿದರು. ಟೊಲೊಲಿಂಗ್‌ನಲ್ಲಿ ಎರಡನೇ ನೆಲೆಯನ್ನು ವಶಪಡಿಸಿಕೊಂಡ ಅನಂತರ ಪಾಯಿಂಟ್ 4590 ಅನ್ನು ವಶಪಡಿಸಿಕೊಂಡರು. ಆದರೆ ರಾಜೇಶ್ ಸಿಂಗ್ ಶತ್ರುಗಳ ದಾಳಿಯಿಂದ ಮೃತಪಟ್ಟರು. ಅವರಿಗೆ ಮರಣೋತ್ತರವಾಗಿ ಮಹಾವೀರ ಚಕ್ರವನ್ನು ನೀಡಲಾಯಿತು.

Kargil Vijay Diwas 2024
Kargil Vijay Diwas 2024


ರೈಫಲ್‌ಮ್ಯಾನ್ ಸಂಜಯ್ ಕುಮಾರ್

1976ರ ಮಾರ್ಚ್ ನಲ್ಲಿ ಹಿಮಾಚಲ ಪ್ರದೇಶದ ಬಿಲಾಸ್ಪುರ್ ಜಿಲ್ಲೆಯ ಕಲೋಲ್ ಬಕೈನ್ ನಲ್ಲಿ ದುರ್ಗಾ ರಾಮ್ ಮತ್ತು ಭಾಗ್ ದೇವಿ ದಂಪತಿಯ ಮಗನಾಗಿ ಜನಿಸಿದ ಸಂಜಯ್ ಕುಮಾರ್ ಅವರನ್ನು 1999ರ ಜುಲೈ 4ರಂದು ಮುಷ್ಕೊಹ್ ಕಣಿವೆಯಲ್ಲಿ ಪಾಯಿಂಟ್ 4875ರ ಫ್ಲಾಟ್ ಟಾಪ್ ಪ್ರದೇಶವನ್ನು ವಶಪಡಿಸಿಕೊಳ್ಳಲು ನಿಯೋಜಿಸಲಾಯಿತು.

ಈ ದಾಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಅವರು ಶತ್ರುಗಳ ದಾಳಿಗೆ ತೀವ್ರ ಪ್ರತಿರೋಧವನ್ನು ತೋರಿದರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡು ನಿಷ್ಕಪಟ ಧೈರ್ಯವನ್ನು ತೋರಿಸಿದ ಸಂಜಯ್ ಕುಮಾರ್ ತಮ್ಮ ಸುರಕ್ಷತೆಯನ್ನು ಸಂಪೂರ್ಣವಾಗಿ ಮರೆತು ಹೋರಾಡಿದರು. ಶತ್ರು ಪಡೆಯ ಮೂವರನ್ನು ಕೊಂದು ಹಾಕಿದರು.


ಗಂಭೀರವಾಗಿ ಗಾಯಗೊಂಡರೂ ಅವರು ಯುದ್ಧ ಭೂಮಿಯಿಂದ ಹಿಂದೆ ಸರಿಯಲಿಲ್ಲ. ಯುದ್ಧವನ್ನು ಮುನ್ನಡೆಸಿ ಶತ್ರುಗಳು ಆಶ್ಚರ್ಯಚಕಿತರಾಗುವಂತೆ ಮಾಡಿದರು. ತಮ್ಮ ಒಡನಾಡಿಗಳಿಗೆ ಯುದ್ಧದಲ್ಲಿ ಮುನ್ನಡೆಯಲು ಪ್ರೇರೇಪಿಸಿದರು. ಯುದ್ಧ ಮುಗಿದ ಬಳಿಕ ಅವರಿಗೆ ಭಾರತದ ಅತ್ಯುನ್ನತ ಮಿಲಿಟರಿ ಗೌರವವಾದ ಪರಮವೀರ ಚಕ್ರವನ್ನು ನೀಡಲಾಯಿತು.

Kargil Vijay Diwas 2024
Kargil Vijay Diwas 2024


ಮೇಜರ್ ವಿವೇಕ್ ಗುಪ್ತಾ

ಉತ್ತರಾಖಂಡ್‌ನ ಡೆಹರಾಡೂನ್‌ನಲ್ಲಿ 1970ರ ಜನವರಿ 2ರಂದು ಲೆಫ್ಟಿನೆಂಟ್ ಕರ್ನಲ್ ಬಿಆರ್ ಎಸ್ ಗುಪ್ತಾ ಅವರ ಮಗನಾಗಿ ಜನಿಸಿದ ವಿವೇಕ್ ಗುಪ್ತಾ ಪದವಿಯ ಅನಂತರ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ಇಂಡಿಯನ್ ಮಿಲಿಟರಿ ಅಕಾಡೆಮಿಗೆ ಸೇರಿದರು. 1992ರ ಜೂನ್ 13ರಂದು, ಕೆಚ್ಚೆದೆಯ ಯೋಧರಿಗೆ ಹೆಸರುವಾಸಿಯಾದ ಪದಾತಿದಳದ ರೆಜಿಮೆಂಟ್ ರಜಪೂತಾನ ರೈಫಲ್ಸ್ ರೆಜಿಮೆಂಟ್‌ಗೆ ಅವರನ್ನು ನಿಯೋಜಿಸಲಾಯಿತು.

1997ರಲ್ಲಿ ಮೇಜರ್ ವಿವೇಕ್ ಅವರು ಸೇನಾ ಅಧಿಕಾರಿ ಕ್ಯಾಪ್ಟನ್ ರಾಜಶ್ರೀ ಬಿಷ್ಟ್ ಅವರನ್ನು ವಿವಾಹವಾದರು. 1999ರಲ್ಲಿ ಅವರು ಕಾರ್ಗಿಲ್ ಯುದ್ಧದಲ್ಲಿ ಅವರು ಪ್ರಮುಖ ಚಾರ್ಲಿ ಕಂಪನಿಯ ಕಮಾಂಡ್ ಆಗಿದ್ದರು. 2 ರಜಪೂತಾನ ರೈಫಲ್ಸ್ ಡ್ರಾಸ್ ಸೆಕ್ಟರ್‌ನಲ್ಲಿ ಟೋಲೋಲಿಂಗ್ ಟಾಪ್ ಮೇಲೆ ಬೆಟಾಲಿಯನ್ ದಾಳಿಯನ್ನು ಇವರ ನೇತೃತ್ವದಲ್ಲಿ ಪ್ರಾರಂಭಿಸಿತು.

ಮೇಜರ್ ವಿವೇಕ್ ಗುಪ್ತಾ ಅವರ ನಾಯಕತ್ವದಲ್ಲಿ ಶತ್ರು ಪಡೆಯ ಭಾರೀ ಫಿರಂಗಿ ಮತ್ತು ಸ್ವಯಂಚಾಲಿತ ಗುಂಡಿನ ದಾಳಿಯ ನಡುವೆಯೂ ಶತ್ರುಗಳನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ಸು ಸಾಧಿಸಲಾಯಿತು. ಚಾರ್ಲಿ ಕಂಪನಿಯ ಪ್ರಮುಖ ವಿಭಾಗದ ಮೂವರು ಸಿಬ್ಬಂದಿಗೆ ಬಲವಾದ ಗುಂಡೇಟು ಬಿದ್ದ ಪರಿಣಾಮ ದಾಳಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಬಯಲು ಪ್ರದೇಶದಲ್ಲಿ ಹೀಗೆಯೇ ಮುಂದುವರಿದರೆ ಹೆಚ್ಚು ನಷ್ಟವಾಗುತ್ತದೆ ಎಂದು ತಿಳಿದ ತಕ್ಷಣವೇ ವಿವೇಕ್ ಗುಪ್ತಾ ರಾಕೆಟ್ ಲಾಂಚರ್ ಅನ್ನು ಶತ್ರುಸ್ಥಾನದತ್ತ ಹಾರಿಸಿದರು. ಆಘಾತಕ್ಕೊಳಗಾದ ಶತ್ರುಗಳು ಚೇತರಿಸಿಕೊಳ್ಳುವ ಮೊದಲು ಅವರು ಶತ್ರು ನೆಲೆಯ ಮೇಲೆ ಪ್ರಭುತ್ವ ಸ್ಥಾಪಿಸಿದರು. ಈ ವೇಳೆ ಎರಡು ಗುಂಡು ದೇಹವನ್ನು ತೂರಿ ಗಾಯಗೊಂಡರೂ ಮೂವರು ಶತ್ರು ಸೈನಿಕರನ್ನು ಕೊಲ್ಲುವಲ್ಲಿ ಯಶಸ್ವಿಯಾದರು.


ಇದನ್ನೂ ಓದಿ: Kargil Vijay Diwas 2024: ಕಾರ್ಗಿಲ್ ಯುದ್ಧದಲ್ಲಿ ತತ್ತರಿಸಿದ ಪಾಕಿಗಳು; ಈ ನಾಲ್ವರು ಯೋಧರ ಸಾಹಸ ರೋಚಕ!

ಇವರಿಂದ ಸ್ಫೂರ್ತಿ ಪಡೆದ ಕಂಪೆನಿಯ ಉಳಿದವರು ಶತ್ರುಗಳ ನೆಲೆಯ ಮೇಲೆ ದಾಳಿ ನಿರಂತರ ನಡೆಸಿ ವಶಪಡಿಸಿಕೊಂಡರು. ಯುದ್ಧದ ಸಮಯದಲ್ಲಿ ಶೌರ್ಯದಿಂದ ಹೋರಾಡಿದ್ದ ಕ್ಯಾ. ವಿವೇಕ್ ಗುಪ್ತಾ ಬಲಿಯಾದರು. ಅವರ ಸ್ಫೂರ್ತಿದಾಯಕ ನಾಯಕತ್ವ ಮತ್ತು ಶೌರ್ಯವು ಅಂತಿಮವಾಗಿ ಟೋಲೋಲಿಂಗ್ ಟಾಪ್ ಅನ್ನು ವಶಪಡಿಸಿಕೊಳ್ಳಲು ಭಾರತೀಯ ಸೇನೆಗೆ ಸಾಧ್ಯವಾಯಿತು. ಅವರಿಗೆ ಮರಣೋತ್ತರವಾಗಿ ಭಾರತದ ಎರಡನೇ ಅತ್ಯುನ್ನತ ಮಿಲಿಟರಿ ಗೌರವವಾದ ಮಹಾವೀರ ಚಕ್ರವನ್ನು ನೀಡಲಾಯಿತು.

Continue Reading
Advertisement
shalini rajneesh
ಕರ್ನಾಟಕ10 mins ago

Shalini Rajneesh: ರಾಜ್ಯ ಮುಖ್ಯ ಕಾರ್ಯದರ್ಶಿಯಾಗಿ ಶಾಲಿನಿ ರಜನೀಶ್‌ ನೇಮಕ; ಪತಿ ಜಾಗಕ್ಕೆ ಪತ್ನಿಯ ಆಯ್ಕೆ

Rohit Sharma
ಕ್ರೀಡೆ11 mins ago

Rohit Sharma: ವಿಮಾನ ನಿಲ್ದಾಣದಿಂದ ಲ್ಯಾಂಬೋರ್ಗಿನಿ ಕಾರು ಚಲಾಯಿಸಿಕೊಂಡು ಹೋದ ರೋಹಿತ್​; ವಿಡಿಯೊ ವೈರಲ್​

Karnataka rain
ಮಳೆ14 mins ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

Hamsalekha NadaBrahma' has no meaning, Shankar Shanubhag sparks against Hansalekha
ಸ್ಯಾಂಡಲ್ ವುಡ್18 mins ago

Hamsalekha: ʻನಾದಬ್ರಹ್ಮʼ ಎಂಬ ಪದಕ್ಕೆ ಅರ್ಥವೇ ಇಲ್ಲ,ಹಸಿ ಸುಳ್ಳು ಹೇಳುವ ವ್ಯಕ್ತಿ ಎಂದು ಹಂಸಲೇಖ ವಿರುದ್ಧ ಶಂಕರ್ ಶಾನುಭಾಗ್ ಕಿಡಿ!

Kargil Vijay Diwas 2024
ದೇಶ25 mins ago

Kargil Vijay Diwas 2024: ಕಾರ್ಗಿಲ್‌ ಯುದ್ಧಭೂಮಿಗೆ ಅಂದೇ ಕಾಲಿಟ್ಟಿದ್ರು ಮೋದಿ- ಹಳೆಯ ಫೊಟೋ ವೈರಲ್‌

ಕರ್ನಾಟಕ36 mins ago

MUDA site scandal: ಕೈಗಾರಿಕೆಗಾಗಿ ಕುಮಾರಸ್ವಾಮಿ ಪಡೆದ ಸೈಟ್‌ ಏನಾಯ್ತು? ಮುಡಾ ನಿವೇಶನ ಪಡೆದ ವಿಪಕ್ಷದವರ ಪಟ್ಟಿ ಕೊಟ್ಟ ಸಿಎಂ

Jio announced 30 Percent discount on Freedom Offer for Air Fiber new customers
ವಾಣಿಜ್ಯ41 mins ago

Jio Air Fiber: ಗ್ರಾಹಕರಿಗೆ ಭರ್ಜರಿ ರಿಯಾಯಿತಿ ಘೋಷಿಸಿದ ಜಿಯೊ! ಎಲ್ಲಿಯವರೆಗೆ ಈ ಆಫರ್‌?

Viral Video
Latest47 mins ago

Viral Video: ಸಿಂಧೂರ ಹಚ್ಚುವಾಗ ಕುಸಿದುಬಿದ್ದ ವಧು; ಎದ್ದೂಬಿದ್ದು ಓಡಿದ ವರ!

Ragging Case
Latest57 mins ago

Ragging Case: ಜೂನಿಯರ್ ವಿದ್ಯಾರ್ಥಿಗಳನ್ನು ಕ್ರೂರವಾಗಿ ಥಳಿಸಿದ ಸೀನಿಯರ್‌ಗಳು! ತಲ್ಲಣ ಮೂಡಿಸುವ ವಿಡಿಯೊ

Namratha Gowda new look photos got viral
ಸ್ಯಾಂಡಲ್ ವುಡ್1 hour ago

Namratha Gowda: ಕಪ್ಪು ಬಣ್ಣದ ಲಾಂಗ್ ಗೌನ್‌ನಲ್ಲಿ ಹಾಟ್‌ ಆಗಿ ಕಂಡ ನಮ್ರತಾ ಗೌಡ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka rain
ಮಳೆ14 mins ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ23 hours ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್1 day ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ1 day ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ1 day ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ2 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ3 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

Udupi News
ಉಡುಪಿ3 days ago

Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

murder case
ರಾಮನಗರ3 days ago

Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ

karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

ಟ್ರೆಂಡಿಂಗ್‌