Sexual Abuse : ಸಾಲ ತೀರಿಸಲಾಗದೆ ಅಪ್ರಾಪ್ತ ವಯಸ್ಸಿನ ಮಗಳನ್ನು ವೇಶ್ಯಾವಾಟಿಕೆಗೆ ತಳ್ಳಲು ಯತ್ನಿಸಿದ ತಾಯಿ! - Vistara News

Latest

Sexual Abuse : ಸಾಲ ತೀರಿಸಲಾಗದೆ ಅಪ್ರಾಪ್ತ ವಯಸ್ಸಿನ ಮಗಳನ್ನು ವೇಶ್ಯಾವಾಟಿಕೆಗೆ ತಳ್ಳಲು ಯತ್ನಿಸಿದ ತಾಯಿ!

Sexual Abuse: ಹೆಣ್ಣುಮಗುವನ್ನು ತಾಯಿಯಾದವಳು ಸಾಕಿ ಬೆಳೆಸುವಾಗ ಹೆಚ್ಚಿನ ಕಾಳಜಿ ವಹಿಸುತ್ತಾಳೆ. ಆದರೆ ಇಲ್ಲೊಬ್ಬಳು ತಾಯಿ ಮಾತ್ರ ಇದಕ್ಕೆ ತದ್ವಿರುದ್ಧರಾಗಿದ್ದಾಳೆ.ನೆರೆಮನೆಯವರಿಂದ ಪಡೆದ 40,000 ರೂಪಾಯಿ ಸಾಲವನ್ನು ಮರುಪಾವತಿಸಲು ಸಾಧ್ಯವಾಗದಿದ್ದಾಗ ಮಗಳನ್ನು ಅವರ ಮನೆಯಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗುವಂತೆ ಬಲವಂತಪಡಿಸಿದ್ದಾಳೆ. ತಾಯಿಯ ಈ ಕೃತ್ಯವನ್ನು ಆರೋಪಿಸಿ 16 ವರ್ಷದ ಬಾಲಕಿಯೊಬ್ಬಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

VISTARANEWS.COM


on

Sexual Abuse
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo


ಚೆನ್ನೈ: ತಾಯಿ ಎಂದರೆ ದೇವರಿಗೆ ಸಮಾನದವಳು ಎಂದು ಎಲ್ಲಾ ಮಕ್ಕಳು ಭಾವಿಸುತ್ತಾರೆ. ತಾಯಿ ತನಗೆ ಎಷ್ಟೇ ಕಷ್ಟ ಬಂದರೂ ಅದನ್ನು ಸಹಿಸಿಕೊಂಡ ಮಕ್ಕಳ ಒಳಿತಿಗಾಗಿ ಶ್ರಮಿಸುತ್ತಾಳೆ. ಅದರಲ್ಲೂ ಕಾಮುಕರು ತನ್ನ ಹೆಣ್ಣುಮಕ್ಕಳ ಮೇಲೆ ಕಣ್ಣು ಹಾಕಿದರೆ ಅವರನ್ನು ಕೊಲೆ ಮಾಡಿಯಾದರೂ ತನ್ನ ಮಗಳ ಮಾನ ಕಾಪಾಡುತ್ತಾಳೆ. ಅಂತಹದರಲ್ಲಿ ಇಲ್ಲೊಬ್ಬ ತಾಯಿ ತನ್ನ ಸಾಲವನ್ನು ತೀರಿಸಲು ತಾನು ಹೆತ್ತ ಮಗಳನ್ನೇ ಕಾಮುಕರ ಬಾಯಿಗೆ ತಳ್ಳಲು ಮುಂದಾಗಿದ್ದಾಳೆ. ಆಕೆಗೆ ಲೈಂಗಿಕ ಕ್ರಿಯೆಯಲ್ಲಿ(Sexual Abuse) ತೊಡಗುವಂತೆ ಒತ್ತಾಯಿಸಿದ್ದಾಳೆ.

ನೆರೆಮನೆಯವರಿಂದ ಪಡೆದ 40,000 ರೂಪಾಯಿ ಸಾಲವನ್ನು ಮರುಪಾವತಿಸಲು ಸಾಧ್ಯವಾಗದಿದ್ದಾಗ ತಾಯಿ ತನ್ನನ್ನು ವೇಶ್ಯಾವಾಟಿಕೆಯಲ್ಲಿ ತೊಡಗುವಂತೆ ಬಲವಂತಪಡಿಸಿದ್ದಾಳೆ ಎಂದು ಆರೋಪಿಸಿ 16 ವರ್ಷದ ಬಾಲಕಿಯೊಬ್ಬಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ತಾಯಿ ತಾನು ಮಾಡಿದ ಸಾಲವನ್ನು ತೀರಿಸಲು ತನ್ನ ಮಗಳನ್ನು ಶಾಲೆಗೂ ಕಳುಹಿಸಿದೆ ಸಾಲ ನೀಡಿದವರ ಮನೆಯಲ್ಲಿ ಮನೆಗೆಲಸ ಮಾಡಲು ನೇಮಿಸಿದ್ದಾಳೆ. ಆದರೆ ಸಾಲ ನೀಡಿದವರು ಅವಳನ್ನು ಲೈಂಗಿಕ ಕೆಲಸದಲ್ಲಿ ತೊಡಗುವಂತೆ ಒತ್ತಾಯಿಸಿದ್ದಾರೆ. ಆಗ ಬಾಲಕಿ ತನ್ನ ತಾಯಿಗೆ ಪರಿಸ್ಥಿತಿಯನ್ನು ತಿಳಿಸಿದರೆ ಆಕೆ ಅವರ ಮನೆಗೆ ಮರಳಿ ಹೋಗಿ ಅವರು ಹೇಳಿದಂತೆ ಕೇಳು ಎಂದು ತಿಳಿಸಿದ್ದಾಳೆ ಎಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ.

ವರದಿ ಪ್ರಕಾರ ಬಾಲಕಿಯ ತಾಯಿ ಹಲವು ವರ್ಷಗಳ ಹಿಂದೆ ಲೇವಾದೇವಿ ವ್ಯವಹಾರ ಮಾಡುತ್ತಿದ್ದ ಮುತ್ತುಲಕ್ಷ್ಮಿಯಿಂದ ಸಾಲ ಪಡೆದಿದ್ದರು. ಸಾಲವನ್ನು ಮರುಪಾವತಿಸಲು ಸಾಧ್ಯವಾಗದಿದ್ದಾಗ, ಅವರು ತಮ್ಮ ಮಗಳನ್ನು ಮುತ್ತುಲಕ್ಷ್ಮಿಯ ಮನೆಯಲ್ಲಿ ಮನೆಗೆಲಸ ಮಾಡಲು ಕಳುಹಿಸಿದರು. ಕಾಲಾನಂತರದಲ್ಲಿ, ಮುತ್ತುಲಕ್ಷ್ಮಿ ಅಪ್ರಾಪ್ತ ಬಾಲಕಿಯನ್ನು ಲೈಂಗಿಕ ವೃತ್ತಿಯಲ್ಲಿ ತೊಡಗುವಂತೆ ಒತ್ತಾಯಿಸಿದಳು ಎಂದು ವರದಿಯಾಗಿದೆ. ಆದರೆ ಬಾಲಕಿ ಅದನ್ನು ವಿರೋಧಿಸಿದಳು ಮತ್ತು ಮುತ್ತುಲಕ್ಷ್ಮಿಯೊಂದಿಗೆ ಜಗಳವಾಡಿ ಅಲ್ಲಿಂದ ಓಡಿಹೋದಳು. ಕೊನೆಗೆ ಆಕೆ ತನ್ನ ತಾಯಿಯ ಬಳಿಗೆ ಬಂದಿದ್ದಾಳೆ. ಆದರೆ ಆಕೆಯ ಅಲ್ಲಿನ ಪರಿಸ್ಥಿತಿಯ ಬಗ್ಗೆ ತಾಯಿಗೆ ಹೇಳಿದರೂ ಆಕೆಯ ತಾಯಿ ಮುತ್ತುಲಕ್ಷ್ಮಿಯ ಮನೆಗೆ ಹಿಂತಿರುಗುವಂತೆ ಒತ್ತಾಯಿಸಿದಳು. ಆಗ ಬಾಲಕಿ ಬೇರೆ ದಾರಿ ಕಾಣದೆ ಮತ್ತೆ ಮನೆ ಬಿಟ್ಟು ತನ್ನ ಗೆಳೆಯನೊಂದಿಗೆ ಹೋಗಿದ್ದಾಳೆ.

ಇದನ್ನೂ ಓದಿ: ತನ್ನ ಸ್ನೇಹಿತನ ಜತೆ ಲೈಂಗಿಕ ಕ್ರಿಯೆ ನಡೆಸುವಂತೆ ಪತ್ನಿಗೆ ಒತ್ತಡ; ಇವನೆಂಥ ಗಂಡ!

ಆದರೆ ಇಷ್ಟಕ್ಕೆ ಸುಮ್ಮನಾಗದ ಬಾಲಕಿಯ ತಾಯಿ ಫೋನ್ ಮಾಡಿ ಬಾಲಕಿಗೆ ಕಿರುಕುಳ ನೀಡಲು ಶುರುಮಾಡಿದ್ದಾಳೆ. ಇದರಿಂದ ಬೇಸತ್ತ ಬಾಲಕಿ ಎಂಕೆಬಿ ನಗರ ಆಲ್ ವುಮೆನ್ ಪೊಲೀಸ್ ಠಾಣೆಯಲ್ಲಿ (ಎಡಬ್ಲ್ಯೂಪಿಎಸ್) ದೂರು ದಾಖಲಿಸಿದ್ದಾಳೆ. ಆಕೆಯ ದೂರಿನ ನಂತರ, ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಮುತ್ತುಲಕ್ಷ್ಮಿ, ಆಕೆಯ ಪತಿ ನಿಶಾಂತ್, ಅವರ ಸಂಬಂಧಿಕರಾದ ಅಜಿತ್ (22), ಸಂಜಯ್ (22) ಮತ್ತು ಮಗೇಶ್ವರನ್ ಸೇರಿದಂತೆ ಆರು ಜನರನ್ನು ಬಂಧಿಸಿದ್ದಾರೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಅವರ ವಿರುದ್ಧ ಆರೋಪ ಹೊರಿಸಲಾಗಿದೆ. ಎಲ್ಲಾ ಆರೋಪಿಗಳನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Self Harming: ಪತಿ ಬೈದಿದ್ದಕ್ಕೆ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಮಹಿಳೆ; ಬೆಚ್ಚಿ ಬೀಳಿಸುವ ವಿಡಿಯೊ

Self Harming: ಗಂಡ-ಹೆಂಡತಿಯ ಜಗಳ ಉಂಡು ಮಲಗುವ ತನಕ ಎಂದು ಹೇಳುತ್ತಾರೆ. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಗಂಡ ಬೈದಿದ್ದಕ್ಕೆ ಇಲ್ಲೊಬ್ಬಳು ಮಹಿಳೆ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಹಡಿಯ ಮೇಲೆ ನಿಂತಿದ್ದ ಮಹಿಳೆಯನ್ನು ಹಿಂದಿನಿಂದ ಬಂದು ಗಂಡ ತಡೆಯಲು ಪ್ರಯತ್ನಿಸಿದ್ದಾನೆ. ಆದರೆ ಮಹಿಳೆ, ಅವನ ಮಾತನ್ನು ಕೇಳದೆ, ಮೂರನೇ ಮಹಡಿಯಿಂದ ಜಿಗಿದಿದ್ದಾಳೆ.ಪತಿಯೊಂದಿಗೆ ಜಗಳವಾಡಿದ ನಂತರ ಅವಳು ಈ ಕಠಿಣ ನಿರ್ಧಾರವನ್ನು ತೆಗೆದುಕೊಂಡಳು ಎನ್ನಲಾಗಿದೆ.

VISTARANEWS.COM


on

Self Harming
Koo


ಇಂದೋರ್: ಪತಿ ಪತ್ನಿಯರ ನಡುವೆ ಜಗಳ, ಗಲಾಟೆ ನಡೆಯುವುದು ಸಹಜ. ಈ ವಿಚಾರ ತಿಳಿದು ಅನುಸರಿಸಿಕೊಂಡು ಬಾಳಿದರೆ ದಂಪತಿ ನಡುವೆ ಸಾಮರಸ್ಯ ಹೆಚ್ಚಾಗುತ್ತದೆ. ಆದರೆ ಕೆಲವರು ಸಣ್ಣ ವಿಚಾರಕ್ಕೆ ದುಡುಕಿನ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇದರಿಂದ ಇಬ್ಬರ ಜೀವನ ಹಾಳಾಗುತ್ತದೆ. ಎಷ್ಟೋ ಮಹಿಳೆಯರು ಪತಿ ಬೈದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಇದೀಗ ಮಧ್ಯಪ್ರದೇಶದ ಇಂದೋರ್‌ನಲ್ಲಿ ಪತಿಯೊಂದಿಗೆ ಜಗಳವಾಡಿದ ಮಹಿಳೆ ಮಹಡಿಯಿಂದ ಜಿಗಿದು ಆತ್ಮಹತ್ಯೆ (Self Harming) ಮಾಡಿಕೊಂಡ ಘಟನೆ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪತಿಯ ಜೊತೆ ಜಗಳವಾಡಿ ನೊಂದ 27 ವರ್ಷದ ಮಹಿಳೆ ತಾನು ವಾಸವಿದ್ದ ಕಟ್ಟಡದ ಮೂರನೇ ಮಹಡಿಯಿಂದ ಜಿಗಿದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆಯಲ್ಲಿ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂಬುದಾಗಿ ತಿಳಿದುಬಂದಿದೆ. ಇಂದೋರ್‌ನ ಲಸುಡಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂಗಾಪುರ್ ಟೌನ್‍ಶಿಪ್‌ನಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದೆ. ಮಹಿಳೆ ಯಾವುದೇ ಭಯವಿಲ್ಲದೆ ಮಹಡಿಯಿಂದ ಜಿಗಿಯುತ್ತಿರುವುದು ವಿಡಿಯೊದಲ್ಲಿ ಕಂಡುಬಂದಿದೆ. ಈ ವಿಡಿಯೊ ವೈರಲ್ ಆಗಿದೆ. ಈ ವೈರಲ್ ಕ್ಲಿಪ್‍ನಲ್ಲಿ ಸೀರೆ ಉಟ್ಟ ಮಹಿಳೆ ಟೆರೇಸ್‍ನ ಅಂಚಿನಲ್ಲಿ ನಿಂತಿದ್ದಾಳೆ. ಆದರೆ ಒಬ್ಬ ವ್ಯಕ್ತಿ ಹಿಂದಿನಿಂದ ಬಂದು ಅವಳನ್ನು ತಡೆಯಲು ಪ್ರಯತ್ನಿಸುತ್ತಾನೆ. ಮಹಿಳೆ, ಅವನ ಮಾತನ್ನು ಕೇಳದೆ, ಮೂರನೇ ಮಹಡಿಯಿಂದ ಜಿಗಿದಳು. ಪತಿಯೊಂದಿಗೆ ಜಗಳವಾಡಿದ ನಂತರ ಅವಳು ಈ ಕಠಿಣ ನಿರ್ಧಾರವನ್ನು ತೆಗೆದುಕೊಂಡಳು ಎನ್ನಲಾಗಿದೆ.

ಇದನ್ನೂ ಓದಿ: ಮಗನನ್ನೇ ಹೊಡೆದು ಕೊಂದು, ಸುಟ್ಟು ಹಾಕಿ ಕೊಳಕ್ಕೆ ಎಸೆದ ತಂದೆ-ತಾಯಿ; ಹೃದಯ ತಲ್ಲಣಿಸುವ ವಿಡಿಯೊ

ಮೃತರನ್ನು ಇಡಬ್ಲ್ಯೂಎಸ್ ಕ್ವಾರ್ಟರ್ಸ್ ನಿವಾಸಿ ಅಂಗೂರಿ ಬಾಯಿ ಎಂದು ಗುರುತಿಸಲಾಗಿದೆ. ಪತಿ ಆಕೆಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡಿದ್ದಾನೆ. ಹಾಗಾಗಿ ಅವಳು ಕಟ್ಟಡದ ಮೂರನೇ ಮಹಡಿಗೆ ಹೋಗಿ ಅಲ್ಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತ ಮಹಿಳೆ ಸಾಗರ ಮೂಲದವಳು. ಆಕೆಯ ಪತಿ ರಾಹುಲ್ ಲೋಧಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮೃತರು ಪತಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೃತನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎನ್ನಲಾಗಿದೆ.

Continue Reading

Latest

Nagara Panchami : ಶ್ರಾವಣದ ಮೊದಲ ಹಬ್ಬ ನಾಗರ ಪಂಚಮಿ; ಏನಿದರ ಹಿನ್ನೆಲೆ, ವಿಶೇಷ?

Nagara Panchami: ಅಷಾಢ ಕಳೆದು ಶ್ರಾವಣ ಮಾಸ ಶುರುವಾಗುತ್ತಿದ್ದಂತೆ ಹಬ್ಬಗಳು ಸಾಲು ಸಾಲಾಗಿ ಬರುತ್ತವೆ. ಅದರಲ್ಲಿ ಮೊದಲ ಹಬ್ಬವೆಂದರೆ ನಾಗಪಂಚಮಿ. ಈ ಹಬ್ಬವನ್ನು ಒಂದೊಂದು ಕಡೆ ಒಂದೊಂದು ರೀತಿಯಾಗಿ ಆಚರಿಸುತ್ತಾರೆ. ಕೆಲವರು ನಾಗನಕಲ್ಲನ್ನು ಮುಟ್ಟಿ ಪೂಜಿಸಿದರೆ ಇನ್ನೊಂದು ಕಡೆ ಪುರೋಹಿತರ ಮೂಲಕ ಪೂಜೆ ಮಾಡಿಸುತ್ತಾರೆ. ನಾಗನಕಲ್ಲು ಹಾಗೂ ಹುತ್ತಕ್ಕೆ ಕೆಲವರು ತನಿ ಎರೆಯುವುದರ (ಹಾಲು, ಎಳನೀರು)ಮೂಲಕ ನಾಗಪಂಚಮಿಯನ್ನು ಆಚರಿಸುತ್ತಾರೆ. ಈ ಹಬ್ಬದ ಹಿನ್ನೆಲೆಯ ಮಾಹಿತಿ ಇಲ್ಲಿದೆ.

VISTARANEWS.COM


on

Nag Panchami
Koo

ಬೆಂಗಳೂರು: ಶ್ರಾವಣ ಮಾಸ ಶುರುವಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಪ್ರತಿವರ್ಷ ಶ್ರಾವಣ ಮಾಸದ ಪ್ರಾರಂಭವಾದ ಐದನೇ ದಿನದಂದು ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ನಾಗರಪಂಚಮಿ(Nagara Panchami )ಯಂದು ನಾಗದೇವರನ್ನು(ಹಾವು)ಗಳನ್ನು ಪೂಜಿಸಲಾಗುತ್ತದೆ. ಅಂದು ನಾಗರ ದೇವರ ವಿಗ್ರಹಗಳಿಗೆ ಹಾಲೆರೆದು ಹೂಗಳಿಂದ ಅಲಂಕಾರ ಮಾಡಿ ಧೂಪ, ದೀಪ, ನೈವೇದ್ಯಗಳನ್ನು ಅರ್ಪಿಸಿ ಪೂಜೆ ಮಾಡುತ್ತಾರೆ. ಈ ಹಬ್ಬವನ್ನು ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಜೈನ ಧರ್ಮದ ಅನುಯಾಯಿಗಳು ಆಚರಿಸುತ್ತಾರೆ.

Nagara Panchami
Nag Panchami

ಅಷಾಢ ಕಳೆದು ಶ್ರಾವಣ ಮಾಸ ಶುರುವಾಗುತ್ತಿದ್ದಂತೆ ಹಬ್ಬಗಳು ಸಾಲು ಸಾಲಾಗಿ ಬರುತ್ತವೆ. ಅದರಲ್ಲಿ ಮೊದಲ ಹಬ್ಬವೆಂದರೆ ನಾಗಪಂಚಮಿ. ಈ ಹಬ್ಬವನ್ನು ಒಂದೊಂದು ಕಡೆ ಒಂದೊಂದು ರೀತಿಯಾಗಿ ಆಚರಿಸುತ್ತಾರೆ. ಕೆಲವರು ನಾಗನಕಲ್ಲನ್ನು ಮುಟ್ಟಿ ಪೂಜಿಸಿದರೆ ಇನ್ನೊಂದು ಕಡೆ ಪುರೋಹಿತರ ಮೂಲಕ ಪೂಜೆ ಮಾಡಿಸುತ್ತಾರೆ. ನಾಗನಕಲ್ಲು ಹಾಗೂ ಹುತ್ತಕ್ಕೆ ಕೆಲವರು ತನಿ ಎರೆಯುವುದರ (ಹಾಲು, ಎಳನೀರು)ಮೂಲಕ ನಾಗಪಂಚಮಿಯನ್ನು ಆಚರಿಸುತ್ತಾರೆ. ಉತ್ತರ ಕರ್ನಾಟಕದಲ್ಲಿ ಈ ನಾಗಪಂಚಮಿ ಬಹುದೊಡ್ಡ ಹಬ್ಬವಾಗಿದೆ. ಈ ಹಬ್ಬಕ್ಕೆ ಮದುವೆಯಾದ ಹೆಣ್ಣುಮಕ್ಕಳು ತವರಿಗೆ ಬರುವ ವಾಡಿಕೆ ಇನ್ನೂ ರೂಢಿಯಲ್ಲಿದೆ.

ನಾಗಪಂಚಮಿಗೆ ಕುರಿತಂತೆ ಸಾಕಷ್ಟು ಕತೆಗಳಿವೆ. ಜೋರಾಗಿ ಮಳೆ ಬರುವ ಕಾರಣ ಬೇಳೆಗಳಿಗೆ ಕೀಟ ಬಾಧೆ ಸಮಸ್ಯೆ ಕಾಡುತ್ತಿರುತ್ತದೆ. ಹಾಗೇ ರೈತ ಬೆಳೆದ ಫಸಲನ್ನು ಇಲಿಗಳು ಕೂಡ ಹಾಳು ಮಾಡುತ್ತವೆ. ಇವುಗಳನ್ನು ಹಾವುಗಳು ತಿಂದು ರೈತನ ಫಸಲನ್ನು ಕಾಪಾಡಿ ಅವನ ಬದುಕನ್ನು ಹಸನು ಮಾಡುತ್ತದೆ. ಹಾವಿನ ಈ ಸಹಾಯಕ್ಕೆ ಧನ್ಯವಾದ ಹೇಳಲು ರೈತನು ನಾಗನಕಲ್ಲಿಗೆ ಪೂಜೆ ಮಾಡುತ್ತಾನಂತೆ. ಇದನ್ನೇ ನಾಗಪಂಚಮಿ ಎಂದು ಕರೆಯಲಾಗುತ್ತದೆ ಎಂಬ ಕತೆಯಿದೆ. ಪುರಾಣದ ಪುಟಗಳನ್ನು ತಿರುಗಿಸಿದರೆ ನಾಗಪಂಚಮಿಗೆ ಸಂಬಂಧಿಸಿದಂತೆ ಸಾಕಷ್ಟು ಕತೆಗಳನ್ನು ನೋಡಬಹುದು.

Nag Panchami
Nag Panchami

ನಾಗರ ಪಂಚಮಿಯ ಶುಭ ಮಹೂರ್ತ:

ಈ ವರ್ಷ ನಾಗರ ಪಂಚಮಿ ಆಗಸ್ಟ್ 9ರಂದು ಬಂದಿದೆ. ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿ ಆಗಸ್ಟ್ 9 ರಂದು ಬೆಳಿಗ್ಗೆ 12:36 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಆಗಸ್ಟ್ 10 ರಂದು ಬೆಳಿಗ್ಗೆ 03:14 ಕ್ಕೆ ಕೊನೆಗೊಳ್ಳುತ್ತದೆ. ಈ ಸಮಯದಲ್ಲಿ ನಾಗ ದೇವರ ಪೂಜೆ ಮಾಡಿದರೆ ನಿಮಗೆ ಶುಭ ಫಲ ಪ್ರಾಪ್ತಿಯಾಗುತ್ತದೆ.

ನಾಗರ ಪಂಚಮಿಯ ಮಹತ್ವ ಏನು?
ಈ ಹಬ್ಬವು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಈ ದಿನ ನಾಗಾದೇವರನ್ನು ಪೂಜಿಸುವವರನ್ನು ಮತ್ತು ಅವರ ಕುಟುಂಬಗಳನ್ನು ನಾಗದೇವರು ದುಷ್ಟರಿಂದ ರಕ್ಷಿಸುತ್ತದೆ. ಮತ್ತು ಆ ಕುಟುಂಬಕ್ಕೆ ಸಮೃದ್ಧಿಯನ್ನು ತರುತ್ತದೆ ಮತ್ತು ನಾಗನ ಪೂಜೆ ಮಾಡಿದ ಕುಟುಂಬದವರು ಒಗ್ಗಟ್ಟಿನಿಂದ ಇರುತ್ತಾರೆ ಎಂದು ನಂಬಲಾಗಿದೆ. ಈ ದಿನ ನಾಗದೇವರ ವಿಗ್ರಹಗಳಿಗೆ ಪೂಜೆ ಮಾಡುವುದರಿಂದ ನಾಗ ದೇವತೆಗಳನ್ನು ಸಮಾಧಾನಪಡಿಸಬಹುದು ಮತ್ತು ಅವರ ಶಾಪದಿಂದ ಮುಕ್ತರಾಗಿಸಿ ಆಶೀರ್ವಾದವನ್ನು ನೀಡುತ್ತಾರೆ ಎಂಬ ನಂಬಿಕೆ ಇದೆ. ಅಲ್ಲದೇ ಕಾಳಸರ್ಪ ದೋಷಗಳು ಹಾಗೂ ಇತರ ಸರ್ಪ ದೋಷಗಳು ನಿವಾರಣೆಯಾಗುತ್ತದೆ ಎನ್ನಲಾಗಿದೆ.

Nag Panchami
Nag Panchami

ನಾಗರ ಪಂಚಮಿಯ ಆಚರಣೆ
ಸಾಂಪ್ರದಾಯಿಕವಾಗಿ, ಭಕ್ತರು ನಾಗನನ್ನು ಪೂಜಿಸುವ ಆಲಯಗಳಿಗೆ ಹೋಗಿ ಅಲ್ಲಿ ನಾಗದೇವರ ವಿಗ್ರಹಗಳನ್ನು ಹಾಲು ಮತ್ತು ಎಳನೀರಿನಿಂದ ಅಭಿಷೇಕ ಮಾಡಿ ಅರಿಶಿನ, ಅಕ್ಕಿ ಮತ್ತು ಹೂವುಗಳನ್ನು ವಿಗ್ರಹಕ್ಕೆ ಅರ್ಪಿಸಿ. ನಾಗದೇವರ ಆಶೀರ್ವಾದ ಪಡೆಯಲು ಮಹಾನಾಗ ದೇವರು ಮತ್ತು ಮಹಾವಿಷ್ಣು ಮಂತ್ರಗಳನ್ನು ಪಠಿಸಿ ಪೂಜೆ, ಪ್ರಾರ್ಥನೆ ಸಲ್ಲಿಸುವ ಮೂಲಕ ಆಚರಣೆಗಳನ್ನು ಮಾಡುತ್ತಾರೆ. ಕೆಲವೊಂದು ಕಡೆ ಜೀವಂತ ಹಾವುಗಳಿಗೆ ಹಾಲನ್ನು ಅರ್ಪಿಸುವ ವಾಡಿಕೆ ಇದೆ. ಆದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಬೆಳ್ಳಿ, ಮರ ಅಥವಾ ಹಸುವಿನ ಸಗಣಿಯಂತಹ ವಸ್ತುಗಳಿಂದ ನಾಗನ ವಿಗ್ರಹವನ್ನು ತಯಾರಿಸಿ ನಂತರ ಈ ವಿಗ್ರಹವನ್ನು ಅರಿಶಿನ, ಅಕ್ಕಿ, ಹಾಲು ಮತ್ತು ಹೂವುಗಳಿಂದ ಪೂಜಿಸಲಾಗುತ್ತದೆ. ಇದರಿಂದ ನಕಾರಾತ್ಮಕ ದೋಷಗಳು ಕಡಿಮೆಯಾಗಿ ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ ಎನ್ನಲಾಗಿದೆ.

ಅಲ್ಲದೇ ಕೆಲವರು ನಾಗರಪಂಚಮಿಯಂದು ನಾಗದೇವರ ಆಶೀರ್ವಾದ ಪಡೆಯಲು ನಾಗನಿಗೆ ಪ್ರಿಯವಾದ ಗಿಡಗಳನ್ನು ನೆಡುತ್ತಾರೆ. ಆದರೆ ಕೆಲವೊಂದು ಕಡೆ ಹಾವಿನ ವಾಸಸ್ಥಾನವನ್ನು ರಕ್ಷಿಸಲು ಮಣ್ಣನ್ನು ಅಗೆಯಬಾರದೆಂದು ಹೇಳುತ್ತಾರೆ. ಅಲ್ಲದೇ ಈ ದಿನ ಕಬ್ಬಿಣದ ಪಾತ್ರೆಗಳಲ್ಲಿ ಆಹಾರ ತಯಾರಿಸಬಾರದಂತೆ. ಹಾಗೇ ಈ ದಿನ ವಾಸುಕಿಯ ಆರಾಧ್ಯ ದೇವರಾದ ಶಿವನಿಗೆ ಕೆಂಪು ಗುಲಾಬಿಯನ್ನು ಅರ್ಪಿಸಿದರೆ ಬಹಳ ಶುಭವಂತೆ. ಹಾಗೇ ಬಹಳ ಹಿಂದಿನ ಕಾಲದಲ್ಲಿ ಈ ಶುಭ ದಿನ ಅಕ್ಕಿಯನ್ನು ದಾನ ಮಾಡುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಹಾವು ಹಿಡಿಯುವವನನ್ನು ಕಚ್ಚಿ ತಾನೇ ಜೀವ ಬಿಟ್ಟ ಕಾಳಿಂಗ ಸರ್ಪ! ಸಾವಿಗೆ ಕಾರಣ ಏನು?

ಅದೇನೆಯಾದರೂ ನಿಮ್ಮ ಶಾಸ್ತ್ರ, ಸಂಪ್ರದಾಯದಂತೆ ನಿಮ್ಮ ಹಿರಿಯರು ಬಹಳ ಹಿಂದಿನಿಂದ ಮಾಡಿಕೊಂಡು ಬಂದ ವಾಡಿಕೆಯಂತೆ ನೀವು ನಾಗದೇವರ ಪೂಜೆ ಮಾಡಿ, ನಾಗದೇವರ ಕೃಪೆಗೆ ಪಾತ್ರರಾಗಿ. ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ವಿದ್ಯೆ-ಬುದ್ಧಿ, ಧನ-ಧಾನ್ಯ, ಆರೋಗ್ಯ-ಆಯಸ್ಸು ನೀಡಿ ಹರಸುವಂತೆ ನಾಗದೇವರಲ್ಲಿ ಪ್ರಾರ್ಥಿಸಿಕೊಳ್ಳಿ.

Continue Reading

ಲೈಫ್‌ಸ್ಟೈಲ್

Sudha Murthy Thoughts: ಜಗಳವಾಡಿಲ್ಲ ಎಂದರೆ ನೀವು ಗಂಡ-ಹೆಂಡತಿಯೇ ಅಲ್ಲ!; ಸುಖ ದಾಂಪತ್ಯಕ್ಕೆ ಇಲ್ಲಿದೆ ಸುಧಾಮೂರ್ತಿ ಪಂಚ ಸೂತ್ರ!

Sudha Murthy Thoughts: ಸುಧಾಮೂರ್ತಿ ಮಾತುಗಳು ಸದಾ ಅನುಭವದ ಮೂಸೆಯಿಂದ ಹೊಳೆದು ಬರುವಂಥವುಗಳು. ತಮ್ಮ ಅನುಭವವನ್ನು ಸಾಮಾನ್ಯರ ಜೀವನಕ್ಕೆ ಅನ್ವಯಿಸಿ, ಸದಾ ಸ್ಫೂರ್ತಿಯಿಂದ ಮಾತನ್ನಾಡುವವರು. ಮದುವೆ, ಕಲಹ, ಕುಟುಂಬ ನಿರ್ವಹಣೆ, ಮಕ್ಕಳ ಪೋಷಣೆ, ಹೆಣ್ಣುಮಕ್ಕಳ ಶಿಕ್ಷಣ, ಜೀವನ ಚಿಂತನೆ, ಸಂಸ್ಕೃತಿ ಹೀಗೆ ಜನಸಾಮಾನ್ಯರಿಗೆ ಅಗತ್ಯವಾದ ವಿಚಾರಗಳನ್ನೇ ಇವರು ಸರಳವಾಗಿ ಪ್ರಾಯೋಗಿಕ ನೆಲೆಗಟ್ಟಿನಲ್ಲಿ ನಿಂತು ಮಾತನಾಡುತ್ತಾರೆ. ಇಲ್ಲಿ ನೀಡಲಾಗಿರುವ ಅವರ ಮಾತುಗಳು ಸ್ಫೂರ್ತಿದಾಯಕ.

VISTARANEWS.COM


on

Sudha Murthy Thoughts
Koo

ಸುಧಾಮೂರ್ತಿ ಅವರ ಬಗ್ಗೆ ಪ್ರತ್ಯೇಕ (Sudha Murthy Thoughts) ಪರಿಚಯದ ಅಗತ್ಯವಿಲ್ಲ. ಮನುಷ್ಯ ಎಷ್ಟೇ ಎತ್ತರಕ್ಕೇರಿದರೂ, ಯಶಸ್ಸು ಸಾಧಿಸಿದರೂ ಸರಳವಾಗಿರುವುದು ಹೇಗೆ ಎನ್ನುವುದಕ್ಕೆ ಅವರೇ ಸಾಕ್ಷಿ. ತಮ್ಮ ಜೀವನವನ್ನು ತೆರೆದಿಟ್ಟ ಪುಸ್ತಕದ ಹಾಗೆ, ಇತರರಿಗೂ ಮಾದರಿಯಾಗಿ, ಸ್ಫೂರ್ತಿಯಾಗಿ ಬದುಕುತ್ತಿರುವವರು. ಮಕ್ಕಳ ಸಾಹಿತ್ಯದಲ್ಲೂ ಸಾಕಷ್ಟು ಕೃಷಿಯನ್ನು ಮಾಡಿ ಮುಂದಿನ ತಲೆಮಾರಿಗೆ ಓದುವ ರುಚಿಯನ್ನು ಹಚ್ಚಿ, ನಮ್ಮ ಭಾರತೀಯ ಸಂಸ್ಕೃತಿಯ ಪರಿಚಯವನ್ನೂ ಮಾಡುತ್ತಿರುವವರು. ಇಂತಹ ಸುಧಾಮೂರ್ತಿಗೆ ಅವರದ್ದೇ ಆದ ಅಭಿಮಾನಿ ಬಳಗವಿದೆ.

Sweet Couple During Sunset

ಅನುಭವದ ಮಾತು

ಸುಧಾಮೂರ್ತಿ ಅವರ ಮಾತುಗಳು ಸದಾ ಅನುಭವದ ಮೂಸೆಯಿಂದ ಹೊಳೆದು ಬರುವಂಥವುಗಳು. ತಮ್ಮ ಅನುಭವವನ್ನು ಸಾಮಾನ್ಯರ ಜೀವನಕ್ಕೆ ಅನ್ವಯಿಸಿ, ಸದಾ ಸ್ಫೂರ್ತಿಯ ತಿಳಿವಳಿಕೆ ಮಾತನ್ನಾಡುವವರು. ಮದುವೆ, ಕಲಹ, ಕುಟುಂಬ ನಿರ್ವಹಣೆ, ಮಕ್ಕಳ ಪೋಷಣೆ, ಹೆಣ್ಣುಮಕ್ಕಳ ಶಿಕ್ಷಣ, ಜೀವನ ಚಿಂತನೆ, ಸಂಸ್ಕೃತಿ ಹೀಗೆ ಜನಸಾಮಾನ್ಯರಿಗೆ ಅಗತ್ಯವಾದ ವಿಚಾರಗಳನ್ನೇ ಇವರು ಸರಳವಾಗಿ ಪ್ರಾಯೋಗಿಕ ನೆಲೆಗಟ್ಟಿನಲ್ಲಿ ನಿಂತು ಮಾತನಾಡುತ್ತಾರೆ. ಬನ್ನಿ, ಈ ಬಾರಿ ಅವರು ದಾಂಪತ್ಯದ ಕಲಹಗಳ ಬಗೆಗೆ ಹೇಳಿದ ಕಿವಿಮಾತಿಗಳಿಗೆ ಕಿವಿಯಾಗೋಣ.

ಜಗಳವಾಡಿಲ್ಲ ಎಂದರೆ ನೀವು ಗಂಡ ಹೆಂಡತಿಯೇ ಅಲ್ಲ!

ನೀವು ಮದುವೆಯಾದಿರಿ ಎಂದರೆ, ನೀವು ಜಗಳ ಮಾಡಲೇಬೇಕು. ಅದರಲ್ಲಿ ಯಾವ ಸಂದೇಹವೂ ಇಲ್ಲ. ಅದನ್ನು ಅರ್ಥ ಮಾಡಿಕೊಳ್ಳಿ. ಒಪ್ಪಿಕೊಳ್ಳಿ. ಪರಿಸ್ಥಿತಿಯೇ ಹಾಗೆ. ನಾನು ಯಾವತ್ತೂ ಜಗಳವಾಡಲಾರೆ ಎಂದು ಮೊದಲೇ ನಿಶ್ಚಯಿಸಿಕೊಂಡು ಹಾಗೆಯೇ ಇರಲು ಶತಾಯಗತಾಯ ಪ್ರಯತ್ನಿಸಬೇಡಿ. ಯಾಕೆಂದರೆ ನೀವು ಜಗಳವಾಡಿಲ್ಲ ಎಂದರೆ ನೀವು ಗಂಡ ಹೆಂಡತಿಯೇ ಅಲ್ಲ!

ಬದುಕು ಎಂದರೆ ಹೊಂದಾಣಿಕೆ

ಬದುಕು ಎಂದರೆ ಹೊಂದಾಣಿಕೆ. ಅಲ್ಲಿ ಕೊಡುಕೊಳ್ಳುವಿಕೆಗಳು ಸಾಕಷ್ಟು ನಡೆಯುತ್ತವೆ. ಪರ್ಫೆಕ್ಟ್‌ ಜೀವನ ಎಂಬುದೇ ಈ ಜಗತ್ತಿನಲ್ಲಿ ಇಲ್ಲ. ಪರ್ಫೆಕ್ಟ್‌ ಕಪಲ್‌ಗಳೂ ಜಗತ್ತಿನಲ್ಲಿಲ್ಲ. ನಿಮ್ಮ ಆತ ಆತನದೇ ಆದ ಪಾಸಿಟಿವ್‌ ಹಾಗೂ ನೆಗೆಟುವ್‌ಗಳೊಂದಿಗೆ ನಿಮ್ಮ ಜೀವನಕ್ಕೆ ಬಂದಿರುತ್ತಾನೆ. ಅಥವಾ ನಿಮ್ಮಾಕೆಗೂ ಒಳ್ಳೆಯ ಹಾಗೂ ಕೆಟ್ಟ ಗುಣಗಳು ಇರುತ್ತವೆ. ಇದನ್ನು ಮೊದಲು ಒಪ್ಪಿಕೊಳ್ಳಿ. ನನಗೆ ನನ್ನದೇ ಆದ ಪ್ಲಸ್‌ ಹಾಗೂ ಮೈನಸ್‌ಗಳಿದ್ದಂತೆಯೇ ಆತ/ಆಕೆಯೂ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಿ.

couple
couple

ಒಬ್ಬರು ಸಮಾಧಾನದಿಂದಿರುವುದನ್ನು ಕಲಿಯಿರಿ

ಮದುವೆಯಾದ ಮೇಲೆ ನಿಮ್ಮ ನಡುವೆ ಯಾವುದೇ ಸಮಸ್ಯೆಗಳು ಬಂದರೆ ಏನು ಮಾಡಬೇಕು ಎಂದೂ ಸುಧಾಮೂರ್ತಿ ಹೇಳುತ್ತಾರೆ. ಅವರ ಪ್ರಕಾರ, ಮದುವೆಯಾದ ಮೇಲೆ ನಿಮ್ಮಿಬ್ಬರ ನಡುವೆ ಜಗಳವಾಯಿತು ಎಂದರೆ, ಒಬ್ಬರು ಸಮಾಧಾನದಿಂದಿರುವುದನ್ನು ಕಲಿಯಿರಿ. ಒಬ್ಬರಿಗೆ ಅಪ್‌ಸೆಟ್‌ ಆದರೆ, ಇನ್ನೊಬ್ಬರು ಶಾಂತವಾಗಬೇಕು. ಜೊತೆಗೆ ಬಾಯಿ ಮುಚ್ಚಿ ಕುಳಿತುಕೊಳ್ಳಬೇಕು. ಇದಷ್ಟೇ ಜಗಳಕ್ಕೆ ಮದ್ದು ಎನ್ನುತ್ತಾರೆ ಅವರು.

ಒಬ್ಬರಿಗೊಬ್ಬರು ಸಹಾಯ ಮಾಡುವುದನ್ನು ಕಲಿಯಿರಿ

ಇಬ್ಬರೂ ಮೊದಲು ಒಬ್ಬರಿಗೊಬ್ಬರು ಸಹಾಯ ಮಾಡುವುದನ್ನು ಕಲಿತುಕೊಳ್ಳಿ. ಈಗ ಇಬ್ಬರೂ ಹೊರಗೆ ದುಡಿಯುವವರೇ. ಹೀಗಾಗಿ ಮಹಿಳೆಯೂ ತನ್ನ ಗಂಡನ ಸಹಾಯವನ್ನು ಪಡೆಯಬೇಕು. ಎಲ್ಲ ಕೆಲಸವನ್ನೂ ಆಕೆಯೇ ಮಾಡಬೇಕು ಎಂಬ ಮನಸ್ಥಿತಿ ಗಂಡಸರಲ್ಲಿದ್ದರೆ ಅದನ್ನು ಮೊದಲು ಬಿಡಿ ಎನ್ನುತ್ತಾರೆ ಅವರು.

ಇದನ್ನೂ ಓದಿ: Choosing The Right Pillow: ಸರಿಯಾದ ದಿಂಬನ್ನು ಆಯ್ಕೆ ಮಾಡುವುದು ಹೇಗೆ?

ಹೆಂಡತಿಗೆ ಅಡುಗೆ ಕೆಲಸದಲ್ಲಿ ಸಹಾಯ ಮಾಡಬೇಕು

ಪೀಳಿಗೆಯ ಎಲ್ಲ ಗಂಡಸರೂ, ತಮ್ಮ ಹೆಂಡತಿಗೆ ಅಡುಗೆ ಕೆಲಸದಲ್ಲಿ ಸಹಾಯ ಮಾಡಬೇಕು. ಇದು ಬಹಳ ಮುಖ್ಯ. ಇದು ಕೇವಲ ಸಹಾಯವಷ್ಟೇ ಅಲ್ಲ, ಇಬ್ಬರ ನಡುವಿನ ಸಂಬಂಧಕ್ಕೂ ಬಹಳ ಮುಖ್ಯ. ಪುರುಷರು ಹೆಂಗಸರ ಹೆಗಲ ಮೇಲೆ ಬೀಳುವ ಜವಾಬ್ದಾರಿಗಳನ್ನು ಹಂಚಿಕೊಳ್ಳುವುದನ್ನು ಕಲಿತರೆ ಎಷ್ಟೋ ಸಮಸ್ಯೆಗಳು ತಾನೇ ತಾನಾಗಿ ಪರಿಹಾರವಾಗುತ್ತದೆ.

Continue Reading

ಧಾರ್ಮಿಕ

Vastu Tips: ಅಪ್ಪಿತಪ್ಪಿಯೂ ಮನೆಯಲ್ಲಿ ಈ ವಸ್ತುಗಳನ್ನು ಖಾಲಿ ಇಡಬೇಡಿ!

ವಾಸ್ತು ಶಾಸ್ತ್ರದ (Vastu Tips) ಪ್ರಕಾರ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರವೇಶಕ್ಕೆ ಹೆಚ್ಚು ಸಮಯ ಬೇಕಿಲ್ಲ. ನಾವು ಮಾಡುವ ಸಣ್ಣ ತಪ್ಪುಗಳು ಸಾಕು. ಇದರಲ್ಲಿ ಮುಖ್ಯವಾಗಿ ಕೆಲವು ವಸ್ತುಗಳನ್ನು ಮನೆಯಲ್ಲಿ ಖಾಲಿ ಇಡಬಾರದು ಎಂಬ ನಿಯಮವಿದೆ. ಅಂತಹ ವಸ್ತುಗಳು ಯಾವುದು, ಅವುಗಳನ್ನು ಒಂದು ವೇಳೆ ಖಾಲಿ ಇರಿಸಿದರೆ ಏನಾಗುತ್ತದೆ ಎನ್ನುವ ಮಾಹಿತಿ ಇಲ್ಲಿದೆ.

VISTARANEWS.COM


on

By

Vastu Tips
Koo

ವಾಸ್ತು ನಿಯಮಗಳು (Vastu Tips) ಮನೆಯಲ್ಲಿ ಧನಾತ್ಮಕತೆಯನ್ನು (positivity) ಆಕರ್ಷಿಸುವ ಹಲವಾರು ಮಾರ್ಗಸೂಚಿಗಳನ್ನು ತಿಳಿಸುತ್ತದೆ. ಇವುಗಳನ್ನು ಪಾಲಿಸದೇ ಇದ್ದರೆ ಮನೆಯಲ್ಲಿ ಸಂಕಷ್ಟ, ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಮನೆಯಲ್ಲಿ ಕೆಲವೊಮ್ಮೆ ತಿಳಿದೋ, ತಿಳಿಯದೆಯೋ ಮಾಡುವ ತಪ್ಪುಗಳು ಇಡೀ ಕುಟುಂಬದ ಮೇಲೆ ನಕಾರಾತ್ಮಕ (negative) ಪರಿಣಾಮ ಬೀರಲು ಕಾರಣವಾಗುತ್ತದೆ. ಅಂತಹ ತಪ್ಪುಗಳು ಯಾವುದು ಎನ್ನುವ ಮಾಹಿತಿ ಇಲ್ಲಿದೆ.

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರವೇಶಕ್ಕೆ ಹೆಚ್ಚು ಸಮಯ ಬೇಕಿಲ್ಲ. ನಾವು ಮಾಡುವ ಸಣ್ಣ ತಪ್ಪುಗಳು ಸಾಕು. ಇದರಲ್ಲಿ ಮುಖ್ಯವಾಗಿ ಕೆಲವು ವಸ್ತುಗಳನ್ನು ಮನೆಯಲ್ಲಿ ಖಾಲಿ ಇಡಬಾರದು ಎಂಬ ನಿಯಮವಿದೆ. ಇದರಿಂದ ನೆರವಾಗಿ ಮನೆಯ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುತ್ತವೆ. ಕೆಲವು ವಸ್ತುಗಳನ್ನು ಖಾಲಿಯಾಗಿ ಇರಿಸಿದರೆ ಮನೆಯ ನಿವಾಸಿಗಳು ಆರ್ಥಿಕ ನಷ್ಟ ಮತ್ತು ದುರದೃಷ್ಟವನ್ನು ಅನುಭವಿಸಬೇಕಾಗುತ್ತದೆ.


ಪರ್ಸ್, ಬ್ಯಾಗ್, ತಿಜೋರಿ

ಪರ್ಸ್, ಬ್ಯಾಗ್ ಮತ್ತು ತಿಜೋರಿಗಳನ್ನು ಯಾವತ್ತಿಗೂ ಖಾಲಿಯಾಗಿಸಿ ಇಡಬಾರದು. ಈ ಕುರಿತು ವಾಸ್ತು ನಿಯಮಗಳನ್ನು ಅನುಸರಿಸುವುದು ಬಹುಮುಖ್ಯ. ಯಾವತ್ತೂ ಇವುಗಳಲ್ಲಿ ಒಂದಿಷ್ಟು ನಗದು ಇರುವುದನ್ನು ಖಚಿತಪಡಿಸಿಕೊಳ್ಳಿ.

ಪರ್ಸ್, ಬ್ಯಾಗ್, ತಿಜೋರಿ ಖಾಲಿ ಆದರೆ ನಷ್ಟಕ್ಕೆ ಕಾರಣವಾಗುತ್ತದೆ ಎಂಬ ನಂಬಿಕೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಸ್ವಲ್ಪ ಹಣವನ್ನು ಯಾವತ್ತೂ ಇಟ್ಟುಕೊಂಡಿರಬೇಕು. ಜೊತೆಗೆ ಕೆಂಪು ಬಟ್ಟೆಯಲ್ಲಿ ಗೋಮತಿ ಚಕ್ರ ಮತ್ತು ಅರಿಶಿನವನ್ನು ಕಟ್ಟಿ ಇಡಬೇಕು. ಇದರಿಂದ ಪರ್ಸ್, ಬ್ಯಾಗ್, ತಿಜೋರಿ ಯಾವತ್ತೂ ಖಾಲಿಯಾಗುವುದಿಲ್ಲ. ಇದರಿಂದ ಲಕ್ಷ್ಮಿ ದೇವಿಯೂ ಪ್ರಸನ್ನಳಾಗಿರುತ್ತಾಳೆ ಎಂಬ ನಂಬಿಕೆ ಇದೆ.


ಬಾತ್ ರೂಮ್‌ನಲ್ಲಿನ ಬಕೆಟ್

ಬಾತ್ ರೂಮ್‌ನಲ್ಲಿ ಬಕೆಟ್‌ಗಳನ್ನು ಎಂದಿಗೂ ಖಾಲಿಯಾಗಿ ಇಡಬಾರದು. ಬಾತ್ ರೂಮ್ ಬಕೆಟ್‌ನಲ್ಲಿ ನೀರಿಲ್ಲದಿದ್ದಾಗ ನಕಾರಾತ್ಮಕ ಶಕ್ತಿಯು ತ್ವರಿತವಾಗಿ ಮನೆಗೆ ಪ್ರವೇಶಿಸುತ್ತದೆ. ಅಲ್ಲದೇ ಬಾತ್ ರೂಮ್ ನಲ್ಲಿ ಮುರಿದ ಅಥವಾ ಕಪ್ಪು ಬಕೆಟ್ ಅನ್ನು ಎಂದಿಗೂ ಬಳಸಬೇಡಿ. ಇದರಿಂದ ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು ಮತ್ತು ವಾಸ್ತು ದೋಷಗಳು ಉಂಟಾಗುತ್ತವೆ.


ಪೂಜಾ ಕೊಠಡಿಯಲ್ಲಿ ನೀರಿನ ಪಾತ್ರೆ

ಮನೆಯ ಅತ್ಯಂತ ಪವಿತ್ರವಾದ ಜಾಗ ಪೂಜಾ ಕೋಣೆ. ವಾಸ್ತು ಶಾಸ್ತ್ರವು ಭಕ್ತಿಯ ಸ್ಥಳದಲ್ಲಿ ನೀರಿನ ಪಾತ್ರೆಯನ್ನು ಎಂದಿಗೂ ಖಾಲಿ ಬಿಡಬಾರದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ನೀರಿಲ್ಲದ ಕಲಶವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಯಾವಾಗಲೂ ಕಲಶದ ಪಾತ್ರೆಯಲ್ಲಿ ನೀರು ತುಂಬಿಡಲೇಬೇಕು. ಸ್ವಲ್ಪ ನೀರು, ಗಂಗಾಜಲ ಮತ್ತು ತುಳಸಿ ಎಲೆಗಳನ್ನು ಹಾಕಿ ಇಡಬೇಕು. ಇದರಿಂದ ಕುಟುಂಬದ ಮೇಲೆ ದೇವರ ಅನುಗ್ರಹ ಸದಾ ಇರುತ್ತದೆ. ಇದರಿಂದ ಮನೆಯಲ್ಲಿ ಸುಖ-ಸಮೃದ್ಧಿಯೂ ನೆಲೆಸುತ್ತದೆ.

ಇದನ್ನೂ ಓದಿ: Vastu Tips: ಮನೆ ಸಂತೋಷದ ತಾಣವಾಗಬೇಕೆಂದರೆ ಮಲಗುವ ಕೋಣೆ ಹೀಗಿರಲಿ


ಧಾನ್ಯದ ಡಬ್ಬಿ

ಮನೆಯಲ್ಲಿ ಅನ್ನಪೂರ್ಣ ದೇವಿಯು ಅಡುಗೆಮನೆಯಲ್ಲಿ ವಾಸಿಸುತ್ತಾಳೆ ಎನ್ನಲಾಗುತ್ತದೆ. ದೇವಿಯ ಆಶೀರ್ವಾದ ಧಾನ್ಯದ ಮೇಲೆ ಇರುತ್ತದೆ. ಹೀಗಾಗಿ ಮನೆಯಲ್ಲಿ ಯಾವತ್ತೂ ಧಾನ್ಯಗಳ ಡಬ್ಬಿಯನ್ನು ಖಾಲಿ ಬಿಡಬಾರದು. ಖಾಲಿ ಬಿಟ್ಟರೆ ದುರದೃಷ್ಟ ಮನೆಗೆ ಬರುತ್ತದೆ ಎನ್ನುತ್ತದೆ ವಾಸ್ತು ನಿಯಮ.

Continue Reading
Advertisement
Sharan Prakash Patil
ಬೆಂಗಳೂರು9 mins ago

Sharan Prakash Patil: ಮೆಡಿಕಲ್‌ ಕಾಲೇಜುಗಳಲ್ಲಿ ವ್ಯಾಸ್ಕ್ಯುಲಾರ್‌ ವಿಭಾಗ ಪ್ರಾರಂಭ : ಸಚಿವ ಶರಣಪ್ರಕಾಶ್‌ ಪಾಟೀಲ್‌

actor darshan photo with god
ರಾಯಚೂರು15 mins ago

Actor Darshan: ಆಂಜನೇಯನ ಮೂರ್ತಿ ಜೊತೆಗೆ ದರ್ಶನ್‌ ಫೋಟೋ ಇಟ್ಟು ಪೂಜೆ! ಕಿಡಿ ಕಾರಿದ ಭಕ್ತರು

MUDA scam
ಕರ್ನಾಟಕ26 mins ago

MUDA scam: ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು

PRO KABADDI LEAGUE
ಕ್ರೀಡೆ26 mins ago

PRO KABADDI LEAGUE : ಪ್ರೊ ಕಬಡ್ಡಿ ಲೀಗ್ ಉಳಿಸಿಕೊಂಡ ಆಟಗಾರರ ಪಟ್ಟಿ ಪ್ರಕಟ! ಪವನ್ ಸೆಹ್ರಾವತ್, ಪ್ರದೀಪ್ ನರ್ವಾಲ್ ಹರಾಜಿಗೆ

Road Accident
ವಿಜಯಪುರ49 mins ago

Road Accident : ಅಂಗನವಾಡಿಗೆ ಹೊರಟಿದ್ದ ಬಾಲಕನ ಬಲಿ ಪಡೆದ ಖಾಸಗಿ ಶಾಲಾ ವಾಹನ

Stock Market
ವಾಣಿಜ್ಯ53 mins ago

Stock Market: ಮಹಾ ಕುಸಿತದಿಂದ ಚೇತರಿಕೆಯ ಹಾದಿಯಲ್ಲಿ ಷೇರುಪೇಟೆ; ಸೆನ್ಸೆಕ್ಸ್‌ 921, ನಿಫ್ಟಿ 285 ಪಾಯಿಂಟ್‌ ಜಿಗಿತ

spandana vijay raghavendra
ಸಿನಿಮಾ55 mins ago

Spandana Vijay Raghavendra: ಸ್ಪಂದನ ಅಗಲಿ ಒಂದು ವರ್ಷ, ಭಾವುಕ ಪೋಸ್ಟ್‌ ಮಾಡಿದ ವಿಜಯ್‌ ರಾಘವೇಂದ್ರ

Muhammad Yunus
ಪ್ರಮುಖ ಸುದ್ದಿ1 hour ago

Muhammad Yunus : ನೊಬೆಲ್ ಪುರಸ್ಕೃತ ಮುಹಮ್ಮದ್ ಯೂನುಸ್​ ಬಾಂಗ್ಲಾ ಮಧ್ಯಂತರ ಸರ್ಕಾರದ ಸಲಹೆಗಾರ

murder case
ರಾಮನಗರ1 hour ago

Murder case : ರಾಮನಗರದಲ್ಲಿ ಸಂಬಂಧಿಕರಿಂದಲೇ ಯುವಕನ ಬರ್ಬರ ಹತ್ಯೆ

Gold Rate Today
ಚಿನ್ನದ ದರ2 hours ago

Gold Rate Today: ಕೊನೆಗೂ ಇಳಿಯಿತು ಬಂಗಾರದ ದರ; ಇಂದು ಚಿನ್ನ ಇಷ್ಟು ಅಗ್ಗ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ2 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ5 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ5 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ5 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ7 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 week ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ1 week ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ1 week ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌