Shravan 2024: ಶ್ರಾವಣ ಶನಿವಾರದ ವಿಶೇಷ ಏನು? ಇದನ್ನು ಹೇಗೆ ಆಚರಿಸಿದರೆ ದೋಷ ನಿವಾರಣೆಯಾಗುತ್ತದೆ? - Vistara News

Latest

Shravan 2024: ಶ್ರಾವಣ ಶನಿವಾರದ ವಿಶೇಷ ಏನು? ಇದನ್ನು ಹೇಗೆ ಆಚರಿಸಿದರೆ ದೋಷ ನಿವಾರಣೆಯಾಗುತ್ತದೆ?

Shravan 2024: ಶ್ರಾವಣ ಮಾಸದಲ್ಲಿ ಬರುವ ಪ್ರತಿವಾರಗಳಿಗೆ ವಿಶೇಷ ಮಹತ್ವವಿದೆ. ಹಾಗಾಗಿ ಶ್ರಾವಣ ಮಾಸದಲ್ಲಿ ಬರುವ ಪ್ರತಿ ಶನಿವಾರವನ್ನು ಶ್ರಾವಣ ಶನಿವಾರ ಅಥವಾ ಸಂಪತ್ ಶನಿವಾರ ಎಂದು ಕರೆಯುತ್ತಾರೆ. ಈ ದಿನ ಲಕ್ಷ್ಮಿ-ವೆಂಕಟೇಶ್ವರ, ಹನುಮಂತ ಹಾಗೂ ಶನಿದೇವನನ್ನು ಪೂಜಿಸಲಾಗುತ್ತದೆ.ಶ್ರಾವಣ ಶನಿವಾರದ ಪೂಜಾ ವಿಧಾನಗಳು ಏನು? ಹೇಗೆ ಇದನ್ನು ಮಾಡಬಹುದು ಎಂಬುದಕ್ಕೆ ಇಲ್ಲಿದೆ ಮಾಹಿತಿ.

VISTARANEWS.COM


on

Shravan 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
  • ಪವಿತ್ರಾ ಶೆಟ್ಟಿ

ಶ್ರಾವಣ ಮಾಸ ಆಗಸ್ಟ್ 5ರಿಂದ ಪ್ರಾರಂಭವಾಗಿದೆ. ಸೆಪ್ಟೆಂಬರ್ 3, 2024 ಮಂಗಳವಾರದ ಅಮಾವಾಸ್ಯೆಯ ತಿಥಿಯಂದು ಶ್ರಾವಣ ಮಾಸ ಕೊನೆಗೊಳ್ಳುತ್ತದೆ. ಈ ಮಾಸ ಹಿಂದೂಗಳಿಗೆ ಬಹಳ ಪವಿತ್ರವಾದ ಮಾಸ. ಈ ಮಾಸದಲ್ಲಿ ಹಬ್ಬಗಳು ಸಾಲು ಸಾಲಾಗಿ ಬರುತ್ತವೆ. ಹಾಗಾಗಿ ಈ ಮಾಸದಲ್ಲಿ ಶಿವನ ಆರಾಧನೆಯ ಜೊತೆಗೆ ವಿಷ್ಣು, ಲಕ್ಷ್ಮಿ, ಪಾರ್ವತಿ ಮುಂತಾದ ದೇವರುಗಳ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಶ್ರಾವಣ ಮಾಸದಲ್ಲಿ ಬರುವ ಪ್ರತಿವಾರಗಳಿಗೆ ವಿಶೇಷ ಮಹತ್ವವಿದೆ. ಹಾಗಾಗಿ ಶ್ರಾವಣ ಮಾಸ (Shravan 2024)ದಲ್ಲಿ ಬರುವ ಪ್ರತಿ ಶನಿವಾರವನ್ನು ಶ್ರಾವಣ ಶನಿವಾರ ಅಥವಾ ಸಂಪತ್ ಶನಿವಾರ ಎಂದು ಕರೆಯುತ್ತಾರೆ. ಈ ದಿನ ಲಕ್ಷ್ಮಿ ವೆಂಕಟೇಶ್ವರ, ಹನುಮಂತ ಹಾಗೂ ಶನಿದೇವನನ್ನು ಪೂಜಿಸಲಾಗುತ್ತದೆ. ಆ ವರ್ಷ ಶ್ರಾವಣ ಶನಿವಾರ ಆಗಸ್ಟ್ 10, 17, 24 ಹಾಗೂ 31ರಂದು ಬಂದಿದೆ. ಹಾಗಾಗಿ ಈ ಶ್ರಾವಣ ಶನಿವಾರದ ಪೂಜಾ ವಿಧಾನಗಳನ್ನು ತಿಳಿದುಕೊಳ್ಳಿ.

Shravan 2024
Shravan 2024

ಲಕ್ಷ್ಮಿ-ವೆಂಕಟೇಶ್ವರ ಪೂಜೆ:

ಶ್ರಾವಣ ಶನಿವಾರದಂದು ವಿಶೇಷವಾಗಿ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯನ್ನು ಪೂಜಿಸಲಾಗುತ್ತದೆ. ಈ ದಿನ ವೆಂಕಟೇಶ್ವರ ಸ್ವಾಮಿಯನ್ನು ಪೂಜಿಸುವುದರಿಂದ ವಿಶೇಷ ಫಲಗಳು ದೊರೆಯುತ್ತದೆ ಎಂಬ ನಂಬಿಕೆ ಇದೆ. ಶ್ರಾವಣ ಶನಿವಾರದ ದಿನ ಮನೆಯನ್ನು ಸ್ವಚ್ಛಗೊಳಿಸಿ ಮನೆಯ ತುಳಸಿಯ ಕಟ್ಟೆಯ ಮುಂದೆ ಶಂಖ, ಚಕ್ರದ ರಂಗೋಲಿಯನ್ನು ಹಾಕಿ. ಹಾಗೇ ಮನೆಯೊಳಗೆ ವೆಂಕಟೇಶ್ವರ ಸ್ಮಾವಿಯ ಪೋಟೊ ಇಟ್ಟು ಅದಕ್ಕೆ ತುಳಸಿ ಹಾರವನ್ನು ಹಾಕಿ ಹಾಗೂ ಹಳದಿ ಬಣ್ಣದ ಹೂ ಸ್ವಾಮಿಗೆ ಪ್ರಿಯವಾದ್ದರಿಂದ ಹಳದಿ ಬಣ್ಣದ ಹೂಗಳಿಂದ ಅಲಂಕಾರ ಮಾಡಿ. ಹಾಗೇ ಸ್ವಾಮಿಯ ಮುಂದೆ ಅಕ್ಕಿಹಿಟ್ಟಿನಿಂದ ತಯಾರಿಸಿದ ದೀಪವನ್ನು ಬೆಳಗಿಸಿ. ಈ ದೀಪವನ್ನು ಅಕ್ಕಿಹಿಟ್ಟು, ಬೆಲ್ಲ ಮತ್ತು ತುಪ್ಪವನ್ನು ಬೆರೆಸಿ ತಯಾರಿಸುತ್ತಾರೆ. ಹಾಗೇ ಪೂಜೆಯ ವೇಳೆ ವೆಂಕಟೇಶ್ವರ ಸ್ವಾಮಿ ನಾಮಗಳನ್ನು ಪಠಿಸುತ್ತಾ ದೀಪಾರಾಧನೆ ಮಾಡಿದರೆ ಒಳ್ಳೆಯದು. ದೇವರಿಗೆ ಸಿಹಿ ನೈವೇದ್ಯವನ್ನು ಅರ್ಪಿಸಿ.

ಅಲ್ಲದೇ ಶ್ರಾವಣ ಶನಿವಾರದಂದು ವೆಂಕಟೇಶ್ವರ ಸ್ವಾಮಿಯನ್ನು ಆರಾಧಿಸುವವರು ಪಡಿ ಕೇಳುವ ಶಾಸ್ತ್ರವನ್ನು ಮಾಡಬೇಕು. ಅಂದರೆ ಶುಭ್ರವಾದ ಬಟ್ಟೆ ತೊಟ್ಟು ಹಣೆಗೆ ಗೋವಿಂದನ ನಾಮವನ್ನು ಹಚ್ಚಿ ತಾಮ್ರದ ಚೊಂಬನ್ನು ಹಿಡಿದುಕೊಂಡು ಕನಿಷ್ಠ ಐದು ಮನೆಗೆ ಹೋಗಿ ಭಿಕ್ಷೆ ಅಥವಾ ಪಡಿ ಕೇಳಬೇಕು. ಅದರಿಂದ ಬಂದ ಧಾನ್ಯದಿಂದ ಸ್ವಾಮಿಗೆ ನೈವೇದ್ಯ ಅರ್ಪಿಸಬೇಕು.

Shravan 2024
Shravan 2024

ಶನಿದೇವನ ಪೂಜೆ :

ನಿಮ್ಮ ಜಾತಕದಲ್ಲಿ ಶನಿ ಸಾಡೇಸಾತಿ, ಅಷ್ಟಮ ಶನಿ, ಪಂಚಮ ಶನಿ ಮುಂತಾದ ಶನಿ ದೋಷವಿದ್ದರೆ ಶ್ರಾವಣ ಶನಿವಾರ ಪೂಜೆ ಮಾಡುವುದು ಅವಶ್ಯಕ. ಶ್ರಾವಣ ಶನಿವಾರದಂದು ಶನಿ ಪೂಜೆ ಮಾಡಿದರೆ ಶನಿ ದೋಷ ನಿವಾರಣೆಯಾಗುತ್ತದೆ. ಈ ದಿನ ಶನಿಯ ಜೊತೆಗೆ ಶಿವ ಪೂಜೆ ಮಾಡುತ್ತಾ ಮೃತ್ಯುಂಜಯ ಮಂತ್ರವನ್ನು ಪಠಿಸಬೇಕು. ಹಾಗೇ ಶನಿ ಬೀಜಮಂತ್ರವನ್ನು ಪಠಿಸಿ. ಹಾಗೇ ಈ ದಿನ ಶನಿದೇವಾಲಯಕ್ಕೆ ಹೋಗಿ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿದರೆ ಒಳ್ಳೆಯದು.

Shravan 2024
Shravan 2024

ಹನುಮಂತನ ಪೂಜೆ:

ಶ್ರಾವಣ ಶನಿವಾರದಂದು ಹನುಮಂತ ಸ್ವಾಮಿಯನ್ನು ಪೂಜಿಸಲಾಗುತ್ತದೆ. ಇದರಿಂದ ನಿಮ್ಮ ಜೀವನದಲ್ಲಿ ಎದುರಾದ ಸಂಕಷ್ಟಗಳು ನಿವಾರಣೆಯಾಗುತ್ತವೆ. ಮತ್ತು ಶನಿದೋಷದಿಂದ ಮುಕ್ತಿ ಪಡೆಯಬಹುದು. ಹಾಗಾಗಿ ಹೆಚ್ಚಿನ ಜನರು ಶ್ರಾವಣ ಶನಿವಾರದಂದು ಉಪವಾಸ ವ್ರತಗಳನ್ನು ಆಚರಣೆ ಮಾಡುತ್ತಾರೆ. ಮತ್ತು ಈ ದಿನ ಹನುಮಂತನ ದೇವಸ್ಥಾನಕ್ಕೆ ತೆರಳಿ ಹನುಮಂತನ ಪೂಜೆ ಮಾಡುತ್ತಾರೆ.

ಶ್ರಾವಣ ಶನಿವಾರದಂದು ಈ ಕೆಲಸ ಮಾಡಿ:
ಶ್ರಾವಣ ಶನಿವಾರದಂದು ಶನಿ ದೇವರಿಗೆ ಸಂಬಂಧಿಸಿದ ಕಪ್ಪು ಬಟ್ಟೆ, ಕಪ್ಪು ಎಳ್ಳು, ಬೀಗಗಳು, ಛತ್ರಿಗಳು, ಬಟ್ಟೆಗಳು ಮುಂತಾದ ವಸ್ತುಗಳನ್ನು ನಿರ್ಗತಿಕರಿಗೆ ಮತ್ತು ಬಡವರಿಗೆ ದಾನ ಮಾಡಿ. ಈ ದಿನ ಶಿವ ದೇವಾಲಯದಲ್ಲಿ ಮರೆಯದೆ ಬಾರ್ಲಿಯನ್ನು ದಾನ ಮಾಡಿ. ಹಾಗೇ ಶ್ರಾವಣ ಶನಿವಾರದಂದು ಶಿವನಿಗೆ ಶನಿಗೆ ಪ್ರಿಯವಾದ ಶಮಿ ಹೂವುಗಳನ್ನು ಅರ್ಪಿಸಿ. ಇದರಿಂದ ಶನಿಗ್ರಹದ ಸಾಡೇಸಾತಿ, ಶನಿ ದೋಷ, ಶನಿ ಮಹಾದಶ, ಶನಿ ಧೈಯ್ಯಾ ಸೇರಿದಂತೆ ಇನ್ನಿತರ ಶನಿಗೆ ಸಂಬಂಧಿಸಿದ ದೋಷಗಳ ನಿವಾರಣೆಯಾಗುತ್ತದೆ.

ಇದನ್ನೂ ಓದಿ: ಶ್ರಾವಣ ಶುಕ್ರವಾರದ ವಿಶೇಷವೇನು? ಅಂದು ಏನು ಮಾಡಬೇಕು? ಏನು ಮಾಡಬಾರದು?

ಒಟ್ಟಾರೆ ಶ್ರಾವಣ ಶನಿವಾರದಂದು ದೇವರ ಪೂಜೆಯಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡು ಜೀವನದಲ್ಲಿ ಎದುರಾದ ಸಂಕಷ್ಟಗಳನ್ನು ನಿವಾರಿಸಿಕೊಳ್ಳಿ. ಪ್ರತಿ ಶ್ರಾವಣ ಶನಿವಾರದಂದು ನಿಯಮಗಳ ಪ್ರಕಾರ ಪೂಜೆ ಮಾಡಿ ನಿಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ-ಗೈಡ್

LIC New Plan For Youths: ಎಲ್‌ಐಸಿಯಿಂದ ಯುವ ಜನರಿಗಾಗಿ ಹೊಸ ವಿಮಾ ಯೋಜನೆ; ಏನಿದರ ವಿಶೇಷತೆ?

ಭಾರತೀಯ ಜೀವ ವಿಮಾ ನಿಗಮವು ಯುವಕರಿಗಾಗಿ ಎರಡು ಹೊಸ ಅವಧಿಯ ವಿಮಾ (LIC New Plan For Youths) ಉತ್ಪನ್ನಗಳನ್ನು ಪರಿಚಯಿಸಿದೆ. ಇದನ್ನು ಸಾಲ ಮರುಪಾವತಿಯ ಅಪಾಯಗಳ ವಿರುದ್ಧ ರಕ್ಷಣೆ ನೀಡಲು ವಿನ್ಯಾಸಗೊಳಿಸಲಾಗಿದೆ. ಸಾಕಷ್ಟು ಪ್ರಯೋಜನವನ್ನು ನೀಡುವ ಈ ಎರಡು ಯೋಜನೆಗಳ ವಿಶೇಷಗಳು ಏನೇನು? ಇದರ ಪ್ರಯೋಜನಗಳೇನು? ಈ ಕುರಿತ ವಿವರ ಇಲ್ಲಿದೆ.

VISTARANEWS.COM


on

By

LIC New Plan For Youths
Koo

ಭಾರತೀಯ ಜೀವ ವಿಮಾ ನಿಗಮವು (Life Insurance Corporation of India) ಯುವಕರಿಗಾಗಿ (LIC New Plan For Youths) ಎರಡು ಹೊಸ ಅವಧಿಯ ವಿಮಾ ಉತ್ಪನ್ನಗಳನ್ನು (Insurance product) ಪರಿಚಯಿಸಿದೆ. ಇದರಲ್ಲಿ ಯುವ ಟರ್ಮ್‌ ಅಥವಾ ಡಿಜಿ ಟರ್ಮ್‌ ( LIC’s Yuva Term/Digi Term) ಮತ್ತು ಯುವ ಕ್ರೆಡಿಟ್ ಲೈಫ್ ಅಥವಾ ಡಿಜಿ ಕ್ರೆಡಿಟ್ ಲೈಫ್ (LIC’s Yuva Credit Life/Digi Credit Life) ಸೇರಿದೆ. ಇದು ಸಾಲ ಮರುಪಾವತಿಯ ಅಪಾಯಗಳ ವಿರುದ್ಧ ರಕ್ಷಣೆ ನೀಡಲು ಪರಿಚಯಿಸಲಾದ ವಿಮಾ ಯೋಜನೆಯಾಗಿದೆ.

ಯುವ ಟರ್ಮ್‌ ಅಥವಾ ಡಿಜಿ ಟರ್ಮ್‌

ಇದರಲ್ಲಿ ಪಾಲಿಸಿ ಅವಧಿಯಲ್ಲಿ ಪಾಲಿಸಿದಾರನ ಮರಣ ಸಂಭವಿಸಿದರೆ ಪಾಲಿಸಿದಾರನ ಕುಟುಂಬಕ್ಕೆ ಆರ್ಥಿಕ ಭದ್ರತೆಯನ್ನು ನೀಡಲಾಗುತ್ತದೆ. ಸಾವಿನ ಬಳಿಕ ನೀಡುವ ಪ್ರಯೋಜನಗಳನ್ನು ಖಾತರಿಪಡಿಸುತ್ತದೆ. ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಇದನ್ನು ಪಡೆಯಬಹುದಾಗಿದೆ.

ಎಲ್‌ಐಸಿಯ ಯುವ ಟರ್ಮ್‌ ಏಜೆಂಟರ ಮೂಲಕ ಲಭ್ಯವಿದ್ದು, ಎಲ್ಐಸಿ ಡಿಜಿ ಟರ್ಮ್‌ ಎಲ್ಐಸಿಯ ವೆಬ್‌ಸೈಟ್‌ನಲ್ಲಿ ಪ್ರತ್ಯೇಕವಾಗಿ ಲಭ್ಯವಿದೆ.


ಇದು ನಿರ್ದಿಷ್ಟವಾಗಿ ಯುವ ವ್ಯಕ್ತಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಆಫ್‌ಲೈನ್ ಮತ್ತು ಆನ್‌ಲೈನ್ ಖರೀದಿ ಆಯ್ಕೆ ಮಾಡುವ ವೈಶಿಷ್ಟ್ಯವನ್ನು ಇದು ಒದಗಿಸುತ್ತದೆ.

18ರಿಂದ 45 ವರ್ಷಗಳ ಒಳಗಿನವರು ಇದನ್ನು ಪಡೆಯಬಹುದು. ಯೋಜನೆಯ ಮೆಚುರಿಟಿ ಅವಧಿ 33ರಿಂದ 75 ವರ್ಷಗಳು. ವಿಮಾ ಮೊತ್ತ 50 ಲಕ್ಷ ರೂ.ನಿಂದ 5 ಕೋಟಿ ರೂ.ವರೆಗಿದೆ.

ಆಕರ್ಷಕವಾದ ಹೆಚ್ಚಿನ ಮೊತ್ತದ ವಿಮಾ ರಿಯಾಯಿತಿ, ಮಹಿಳೆಯರಿಗೆ ಕಡಿಮೆ ಪ್ರೀಮಿಯಂ ದರಗಳು ಇದರಲ್ಲಿ ಲಭ್ಯವಿದೆ.

ಪ್ರಯೋಜನ ಏನು?

ವಾರ್ಷಿಕ ಪ್ರೀಮಿಯಂನ ಏಳು ಪಟ್ಟು ಅಥವಾ ಸಾವಿನ ದಿನಾಂಕದವರೆಗೆ ಪಾವತಿಸಿದ ಒಟ್ಟು ಪ್ರೀಮಿಯಂಗಳ ಶೇ. 1೦5ರಷ್ಟು ಸಂಪೂರ್ಣ ಮೊತ್ತದ ಭರವಸೆ ನೀಡುತ್ತದೆ. ಏಕ ಪ್ರೀಮಿಯಂನ ಶೇ. 125ರಷ್ಟು ಖಚಿತವಾದ ಸಂಪೂರ್ಣ ಮೊತ್ತದ ಭರವಸೆಯನ್ನು ನೀಡುತ್ತದೆ.

ಯುವ ಕ್ರೆಡಿಟ್ ಲೈಫ್ ಅಥವಾ ಡಿಜಿ ಕ್ರೆಡಿಟ್

ಯುವ ಕ್ರೆಡಿಟ್ ಲೈಫ್ ಅಥವಾ ಡಿಜಿ ಕ್ರೆಡಿಟ್ ಲೈಫ್ ಯೋಜನೆಗಳು ಸಾಲದ ಹೊಣೆಗಾರಿಕೆಗಳಿಗೆ ಕವರೇಜ್ ನೀಡುತ್ತವೆ. ವಸತಿ, ಶಿಕ್ಷಣ ಅಥವಾ ವಾಹನಗಳಂತಹ ಅಗತ್ಯಗಳಿಗಾಗಿ ಮರುಪಾವತಿಯ ವಿರುದ್ಧ ಸುರಕ್ಷತೆ ಒದಗಿಸುತ್ತವೆ.

ಯುವ ಅವಧಿಯ ಯೋಜನೆಗಳಂತೆಯೇ ಇವುಗಳು ಆಫ್‌ಲೈನ್ ಮತ್ತು ಆನ್‌ಲೈನ್ ಸ್ವರೂಪಗಳಲ್ಲಿ ಲಭ್ಯ ಇವೆ. 18ರಿಂದ 45 ವರ್ಷಗಳ ಒಳಗಿನವರು ಇದರ ಪ್ರಯೋಜನ ಪಡೆಯಬಹುದು. ಇದರ ಮೆಚ್ಯುರಿಟಿ ವಯಸ್ಸು 23ರಿಂದ 75 ವರ್ಷ.


ಪ್ರಯೋಜನ ಏನು?

ವಿಮಾ ಮೊತ್ತವು 50 ಲಕ್ಷ ರೂ.ನಿಂದ 5 ಕೋಟಿ ರೂ.ಗಳವರೆಗೆ ಇರುತ್ತದೆ. ಬಾಕಿ ಇರುವ ಸಾಲದ ಮೊತ್ತಕ್ಕೆ ಅನುಗುಣವಾಗಿ ಪಾಲಿಸಿ ಅವಧಿಯಲ್ಲಿ ಮರಣದ ಪ್ರಯೋಜನವು ಕಡಿಮೆಯಾಗುತ್ತದೆ.

ಎರಡೂ ಯೋಜನೆಯಲ್ಲಿ ಕನಿಷ್ಠ 18 ರಿಂದ ಗರಿಷ್ಠ 45 ವರ್ಷಗಳ ಒಳಗಿನವರು ಇದನ್ನು ಪಡೆಯಬಹುದು. ಮೆಚುರಿಟಿ ಅವಧಿ 33 ರಿಂದ 75 ವರ್ಷ ಮತ್ತು 33 ರಿಂದ 75 ವರ್ಷಗಳು.

ಇದನ್ನೂ ಓದಿ: Money Guide: ಆನ್‌ಲೈನ್‌ ಶಾಪಿಂಗ್‌ ವೇಳೆ ಮೋಸ ಹೋಗದಿರಲು ಈ ಟಿಪ್ಸ್‌ ಪಾಲೋ ಮಾಡಿ

ಕನಿಷ್ಠ ವಿಮಾ ಮೊತ್ತ 50 ಲಕ್ಷ ರೂ. ಮತ್ತು ಗರಿಷ್ಠ ವಿಮಾ ಮೊತ್ತ 5 ಕೋಟಿ ರೂ. ವರೆಗೆ ಆಯ್ಕೆ ಮಾಡಬಹುದು. ಮಹಿಳೆಯರಿಗೆ ವಿಶೇಷ ಕಡಿಮೆ ಪ್ರೀಮಿಯಂ ದರಗಳು ಲಭ್ಯವಿದೆ.

ಪಾಲಿಸಿಯ ಪ್ರಾರಂಭದಲ್ಲಿ ಪಾಲಿಸಿದಾರರಿಗೆ ಸೂಕ್ತ ಸಾಲದ ಬಡ್ಡಿ ದರದ ಆಯ್ಕೆ, ಪಾಲಿಸಿ ಅವಧಿಯಲ್ಲಿ ಪಾಲಿಸಿದಾರನ ಮರಣದ ಸಂದರ್ಭದಲ್ಲಿ ಪಾಲಿಸಿ ಜಾರಿಯಲ್ಲಿದ್ದರೆ ಮತ್ತು ಕ್ಲೈಮ್ ಸ್ವೀಕಾರಾರ್ಹವಾಗಿದ್ದರೆ ಸಾವಿನ ಮೇಲೆ ವಿಮಾ ಮೊತ್ತವನ್ನು ಪಾವತಿಸಲಾಗುತ್ತದೆ.

Continue Reading

ಭವಿಷ್ಯ

Bhavishya: ಅಂಗೈಯಲ್ಲಿರುವ ʼಹೃದಯ ರೇಖೆಗಳುʼ ನಿಮ್ಮ ವ್ಯಕ್ತಿತ್ವ ಏನೆಂದು ಹೇಳುತ್ತವೆ; ಚೆಕ್‌ ಮಾಡಿ ನೋಡಿ!

Bhavishya: ಅಂಗೈಯಲ್ಲಿ ಮೂರು ವಿಧದ ಹೃದಯ ರೇಖೆಗಳಿರುತ್ತವೆ. ಎರಡೂ ಕೈಗಳನ್ನು ಒಟ್ಟಿಗೆ ತಂದಾಗ ಕೆಲವರಲ್ಲಿ ಹೃದಯ ರೇಖೆಗಳು ಜೋಡಿಸುತ್ತವೆ. ಇನ್ನು ಕೆಲವರ ಎಡಗೈಯ ಹೃದಯ ರೇಖೆಯು ಬಲಗೈಗಿಂತ ಹೆಚ್ಚಾಗಿರುತ್ತದೆ. ಮತ್ತೆ ಕೆಲವರ ಬಲಗೈಯ ಹೃದಯ ರೇಖೆಯು ಎಡಗೈಗಿಂತ ಹೆಚ್ಚಾಗಿರುತ್ತದೆ. ಈ ಹೃದಯ ರೇಖೆಯು ಏನು ಹೇಳುತ್ತದೆ? ಇದರಿಂದ ಗೊತ್ತಾಗುವುದೇನು? ನಮ್ಮ ವ್ಯಕ್ತಿತ್ವವನ್ನು ಇವು ಹೇಗೆ ಸೂಚಿಸುತ್ತವೆ ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

By

Bhavishya
Koo

ಹಸ್ತ ನೋಡಿ ಭವಿಷ್ಯ (Bhavishya) ಹೇಳುವವರೂ ಇದ್ದಾರೆ, ಇದನ್ನು ಕುತೂಹಲದಿಂದ ಕೇಳುವವರೂ ಇದ್ದಾರೆ. ಅಂಗೈಲಿರುವ ರೇಖೆಗಳು (Palm line) ನಮ್ಮ ವ್ಯಕ್ತಿತ್ವವನ್ನು ದರ್ಶಿಸುತ್ತದೆ. ಅದೇ ರೀತಿ ನಮ್ಮ ಭವಿಷ್ಯ ಯಾವ ರೀತಿ ಇರಲಿದೆ ಎಂಬುದನ್ನು ಹೇಳುತ್ತದೆ. ಅದರಲ್ಲೂ ಮುಖ್ಯವಾಗಿ ಹಸ್ತದಲ್ಲಿರುವ ಹೃದಯ ರೇಖೆಯು (Heart line) ಗುಪ್ತ ವ್ಯಕ್ತಿತ್ವದ ಲಕ್ಷಣಗಳನ್ನು (Hidden Personality) ಬಹಿರಂಗಪಡಿಸುತ್ತದೆ. ಹಸ್ತದ ಮೇಲಿನ ಶಿರೋನಾಮೆಯ ಮೇಲಿರುವ ಹೃದಯ ರೇಖೆಯು ಭಾವನಾತ್ಮಕ ಸ್ವಭಾವ, ಮನೋಧರ್ಮ, ಜೀವನದ ಕಡೆಗೆ ದೃಷ್ಟಿಕೋನ ಮತ್ತು ವೃತ್ತಿಯ ಒಲವುಗಳ ಬಗ್ಗೆ ಬಹಿರಂಗಪಡಿಸುತ್ತದೆ.

ಅಂಗೈಯಲ್ಲಿ ಮೂರು ವಿಧದ ಹೃದಯ ರೇಖೆಗಳಿರುತ್ತವೆ. ಎರಡೂ ಕೈಗಳನ್ನು ಒಟ್ಟಿಗೆ ತಂದಾಗ ಹೃದಯ ರೇಖೆಯು ಜೋಡಿಸುತ್ತದೆ. ಕೆಲವರ ಎಡಗೈಯ ಹೃದಯ ರೇಖೆಯು ಬಲಗೈಗಿಂತ ಹೆಚ್ಚಾಗಿರುತ್ತದೆ ಮತ್ತು ಇನ್ನು ಕೆಲವರ ಬಲಗೈಯ ಹೃದಯ ರೇಖೆಯು ಎಡಗೈಗಿಂತ ಹೆಚ್ಚಾಗಿರುತ್ತದೆ. ಈ ಹೃದಯ ರೇಖೆಯು ಏನು ಹೇಳುತ್ತದೆ ಎಂಬ ಮಾಹಿತಿ ಇಲ್ಲಿದೆ.


ಎರಡೂ ಕೈಗಳ ಹೃದಯ ರೇಖೆ ಒಂದೇ ರೀತಿ ಇದ್ದರೆ ಏನು?

ಎರಡೂ ಕೈಗಳ ಹೃದಯ ರೇಖೆಗಳು ಸಂಪೂರ್ಣವಾಗಿ ಜೋಡಿಸಿದರೆ ನೀವು ಸಾಮರಸ್ಯ ಮತ್ತು ಸಮತೋಲಿತ ಸ್ವಭಾವವನ್ನು ಹೊಂದಿರುವಿರಿ ಎಂದು ತಿಳಿಸುತ್ತದೆ. ಶಾಂತ ಮತ್ತು ಭಾವನಾತ್ಮಕವಾಗಿ ಸ್ಥಿರವಾಗಿರುತ್ತೀರಿ. ದಯೆ, ಸಹಾನುಭೂತಿ ಮತ್ತು ವಿಶ್ವಾಸಾರ್ಹರು. ಅಚಲ ಬೆಂಬಲಕ್ಕೆ ಹೆಸರುವಾಸಿಯಾಗಿರುವ ನೀವು ಉತ್ತಮ ಸ್ನೇಹಿತನಾಗಿರುತ್ತೀರಿ.

ಜೀವನ ಮತ್ತು ವೃತ್ತಿಜೀವನದಲ್ಲಿ ಸ್ಥಿರ ಮತ್ತು ಪ್ರಾಯೋಗಿಕ ವಿಧಾನವನ್ನು ಹೊಂದುವ ಸಾಧ್ಯತೆಯಿದೆ. ಸಮಾಲೋಚನೆ, ಬೋಧನೆ, ಮಾನವ ಸಂಪನ್ಮೂಲ, ಸಾಮಾಜಿಕ ಕೆಲಸ, ವ್ಯಾಪಾರ, ಹಣಕಾಸು ಅಥವಾ ಕಾನೂನಿನಂತಹ ವೃತ್ತಿಗಳಲ್ಲಿ ತೊಡಗಿಕೊಳ್ಳುತ್ತೀರಿ.

ನೀವು ಅತ್ಯುತ್ತಮ ಕೇಳುಗನಾಗಿರುತ್ತೀರಿ. ಅರ್ಥಪೂರ್ಣ ಸಂಬಂಧಗಳನ್ನು ಹುಡುಕುತ್ತೀರಿ ಮತ್ತು ಸಾಮಾನ್ಯವಾಗಿ ನಿಷ್ಠಾವಂತ ಮತ್ತು ವಿಶ್ವಾಸಾರ್ಹ ಪಾಲುದಾರರಾಗಿ ಕಾಣುತ್ತೀರಿ.

ವೃತ್ತಿ ಆಯ್ಕೆಗಳಲ್ಲಿ ಶಿಕ್ಷಣ, ಆರೋಗ್ಯ, ಆಡಳಿತ, ಹಣಕಾಸು, ಗ್ರಾಹಕ ಸೇವೆ, ಸಮಾಜ ಕಾರ್ಯ, ಯೋಜನಾ ಸಮನ್ವಯ, ಪರಿಸರ ಸೇವೆಗಳು, ಕಾರ್ಪೊರೇಟ್ ತರಬೇತಿ ಮತ್ತು ಸಮುದಾಯ ನಿರ್ವಹಣೆ ಸೇರಿವೆ.


ಎಡಗೈಯ ಹೃದಯ ರೇಖೆಯು ಬಲಗೈಗಿಂತ ಹೆಚ್ಚಾಗಿದ್ದರೆ?

ಎಡಗೈಯ ಹೃದಯ ರೇಖೆಯು ಬಲಗೈಗಿಂತ ಹೆಚ್ಚಿದ್ದರೆ ನೀವು ಅರ್ಥಗರ್ಭಿತ, ಸೃಜನಶೀಲ, ಸಾಹಸಮಯ ಮತ್ತು ಹೊಂದಿಕೊಳ್ಳುವ ವ್ಯಕ್ತಿತ್ವವನ್ನು ಹೊಂದಿರುವಿರಿ ಎಂಬುದನ್ನು ತೋರಿಸುತ್ತದೆ. ಸ್ವಾವಲಂಬಿ ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಇಷ್ಟಪಡುತ್ತೀರಿ. ಸ್ವಂತ ಮಾರ್ಗವನ್ನು ರೂಪಿಸುವ ಬಲವಾದ ಬಯಕೆ ನಿಮ್ಮಲ್ಲಿ ಇರುತ್ತದೆ.

ರೋಮಾಂಚಕ ಸ್ವಭಾವವು ನಿಮ್ಮನ್ನು ವರ್ಚಸ್ವಿ ಮತ್ತು ಕಾಂತೀಯವಾಗಿಸುತ್ತದೆ. ಇದು ಆಗಾಗ ಜನರನ್ನು ನಿಮ್ಮ ಕಡೆಗೆ ಸೆಳೆಯುತ್ತದೆ. ಆದರೂ ನೀವು ಆಯ್ದ ಕೆಲವರೊಂದಿಗೆ ಮಾತ್ರ ಬಲವಾದ ಸಂಬಂಧಗಳನ್ನು ಬೆಳೆಸುತ್ತೀರಿ.

ವೃತ್ತಿಜೀವನದಲ್ಲಿ ನೀವು ಮಹತ್ವಾಕಾಂಕ್ಷೆಯನ್ನು ಹೊಂದಿರುತ್ತೀರಿ. ಅಪಾಯಗಳನ್ನು ತೆಗೆದುಕೊಳ್ಳಲು ಹೆದರುವುದಿಲ್ಲ. ಯಾವಾಗಲೂ ಹೊಸ ಅನುಭವಗಳನ್ನು ಬಯಸುತ್ತೀರಿ. ಈ ಹೃದಯ ರೇಖೆಯನ್ನು ಹೊಂದಿರುವ ಬರಹಗಾರರು ತಮ್ಮ ಆಕರ್ಷಕ ಕಥೆ ಹೇಳುವಿಕೆಗೆ ಹೆಸರುವಾಸಿಯಾಗಬಹುದು. ಸ್ವತಂತ್ರ ಮತ್ತು ಸೃಜನಶೀಲ ಸ್ವಭಾವವು ನಿಮ್ಮನ್ನು ಕಲೆಗಳು, ಮನರಂಜನೆ ಅಥವಾ ವೈಯಕ್ತಿಕ ಅಭಿವ್ಯಕ್ತಿಗೆ ಅನುಮತಿಸುವ ಕ್ಷೇತ್ರಗಳಲ್ಲಿ ವೃತ್ತಿಜೀವನದ ಕಡೆಗೆ ಕರೆದೊಯ್ಯುತ್ತದೆ.

ಭಾವನಾತ್ಮಕವಾಗಿ ನೀವು ಅಭಿವ್ಯಕ್ತಿಶೀಲರಾಗಿರುತ್ತೀರಿ. ಕಾಳಜಿ ವಹಿಸುವವರಿಗೆ ನೀವು ತೀವ್ರವಾಗಿ ನಿಷ್ಠರಾಗಿರುತ್ತೀರಿ. ಆದರೆ ಅವರ ಏಕಾಂತತೆಯನ್ನು ಗೌರವಿಸುತ್ತೀರಿ. ಸ್ವಾತಂತ್ರ್ಯವು ಶ್ಲಾಘನೀಯವಾಗಿದ್ದರೂ ಇದು ಕೆಲವೊಮ್ಮೆ ಸಂಬಂಧಗಳಲ್ಲಿ ಸವಾಲುಗಳಿಗೆ ಕಾರಣವಾಗಬಹುದು.

ಸೃಜನಾತ್ಮಕ ಕಲೆಗಳು, ಮನರಂಜನೆ, ಮಾರ್ಕೆಟಿಂಗ್, ಸಾಮಾಜಿಕ ಮಾಧ್ಯಮ, ಪ್ರಯಾಣ ಮತ್ತು ಪ್ರವಾಸೋದ್ಯಮ, ಫ್ಯಾಷನ್, ಮಾರಾಟ, ಈವೆಂಟ್ ಯೋಜನೆ, ಬರವಣಿಗೆ, ಪತ್ರಿಕೋದ್ಯಮ ಮತ್ತು ಸಾರ್ವಜನಿಕ ಸಂಬಂಧಗಳ ವೃತ್ತಿ ಕ್ಷೇತ್ರದಲ್ಲಿ ನೀವು ಹೆಚ್ಚಿನ ಸಾಧನೆ ಮಾಡಬಲ್ಲವರಾಗಿರುತ್ತೀರಿ.


ಬಲಗೈಯ ಹೃದಯ ರೇಖೆಯು ಎಡಗೈಗಿಂತ ಹೆಚ್ಚಾಗಿದ್ದರೆ?

ಬಲಗೈಯ ಹೃದಯ ರೇಖೆಯು ಎಡಗೈಗಿಂತ ಹೆಚ್ಚಿದ್ದರೆ ನೀವು ಪ್ರಾಯೋಗಿಕ, ಭಾವನಾತ್ಮಕವಾಗಿ ಬುದ್ಧಿವಂತ, ವಿಶ್ಲೇಷಣಾತ್ಮಕ, ತಾರ್ಕಿಕ ಮತ್ತು ವಾಸ್ತವಿಕ ವ್ಯಕ್ತಿತ್ವವನ್ನು ಹೊಂದಿರುವಿರಿ ಎಂಬುದನ್ನು ಸೂಚಿಸುತ್ತದೆ. ನಿಮ್ಮ ಸ್ವಭಾವವು ನಿಮ್ಮನ್ನು ವಿಶ್ವಾಸಾರ್ಹರನ್ನಾಗಿ ಮಾಡುತ್ತದೆ. ಬಲವಾದ ಜವಾಬ್ದಾರಿಯ ಪ್ರಜ್ಞೆಯೊಂದಿಗೆ. ನೀವು ಬಲವಾದ ಆದರ್ಶವಾದಿ ಮತ್ತು ಮಾನವೀಯ ಗುಣಗಳನ್ನು ಹೊಂದಿರಬಹುದು.

ವೃತ್ತಿಜೀವನದಲ್ಲಿ ಶಿಸ್ತುಬದ್ಧತೆಗೆ ಗಮನಹರಿಸುತ್ತೀರಿ. ಆಗಾಗ್ಗೆ ಸ್ಪಷ್ಟ ಗುರಿಗಳನ್ನು ಹೊಂದಿಸಿ ಅವುಗಳನ್ನು ಸಾಧಿಸಲು ಶ್ರದ್ಧೆಯಿಂದ ಕೆಲಸ ಮಾಡುತ್ತೀರಿ.

ಇದನ್ನೂ ಓದಿ: Shravan 2024: ಇಂದಿನಿಂದ ಶ್ರಾವಣ ಶುಭಾರಂಭ; ಈ ತಿಂಗಳ ವಿಶೇಷ ಏನು?

ಭಾವನೆಗಳನ್ನು ಖಾಸಗಿಯಾಗಿ ಇರಿಸಿಕೊಳ್ಳಲು ಬಯಸುತ್ತೀರಿ. ಭಾವನೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುವುದು ನಿಮಗೆ ಸವಾಲಾಗಬಹುದು. ಪ್ರೀತಿಸುವವರಿಗೆ ನಿಷ್ಠರಾಗಿರುವಿರಿ. ಸಂಬಂಧಗಳು ನಂಬಿಕೆ ಮತ್ತು ಪರಸ್ಪರ ಗೌರವದ ಮೇಲೆ ನಿರ್ಮಾಣವಾಗುತ್ತದೆ.

ವೃತ್ತಿ ಕ್ಷೇತ್ರಗಳಲ್ಲಿ ತಂತ್ರಜ್ಞಾನ, ಕಾನೂನು, ಹಣಕಾಸು, ಎಂಜಿನಿಯರಿಂಗ್, ಸಂಶೋಧನೆ, ಐಟಿ, ಡೇಟಾ ವಿಶ್ಲೇಷಣೆ, ನವೀಕರಿಸಬಹುದಾದ ಶಕ್ತಿ, ಕೃಷಿ ಮತ್ತು ಆರೋಗ್ಯ ವಿಜ್ಞಾನ ನಿಮಗೆ ಹೊಂದಿಕೆಯಾಗುತ್ತದೆ.

Continue Reading

ಆಟೋಮೊಬೈಲ್

Best Selling Cars: ಜುಲೈನಲ್ಲಿ ಅತೀ ಹೆಚ್ಚು ಮಾರಾಟವಾದ ಕಾರುಗಳು ಯಾವವು?

ಮನೆಗೊಂದು ಕಾರು ಬೇಕು ಎನ್ನುವ ಆಸೆ ಜೊತೆಗೆ ಇದಕ್ಕೆ ಪೂರಕವಾಗಿ ವಿವಿಧ ಆಕರ್ಷಕ ಕೊಡುಗೆಗಳಿಂದ ಕಾರುಗಳ ಬೇಡಿಕೆ ಇತ್ತೀಚೆಗೆ ಹೆಚ್ಚಾಗುತ್ತಲೇ ಇದೆ. ಜುಲೈ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳು (Best Selling Cars) ಮತ್ತು ಮಾರುಕಟ್ಟೆಯಲ್ಲಿ ಬೇಡಿಕೆ ಕಳೆದುಕೊಂಡ ಕಾರುಗಳು ಯಾವುದು ಗೊತ್ತೇ? ಇಲ್ಲಿದೆ ಇದರ ಸಂಪೂರ್ಣ ಡಿಟೇಲ್ಸ್.

VISTARANEWS.COM


on

By

Best Selling Cars
Koo

ಜುಲೈ ತಿಂಗಳು ಕೆಲವು ಕಾರು ಕಂಪನಿಗಳಿಗೆ (car) ಹಬ್ಬವನ್ನು ಉಂಟು (Best Selling Cars) ಮಾಡಿದರೆ, ಇನ್ನು ಕೆಲವು ಕಾರು ತಯಾರಕರಿಗೆ ಸಣ್ಣ ಹೊಡೆತವನ್ನೂ ನೀಡಿದೆ. ಇದರಲ್ಲಿ ಮುಖ್ಯವಾಗಿ ಮಾರುತಿ ಸುಜುಕಿ (Maruti Suzuki), ಹುಂಡೈ (Hyundai) ಮತ್ತು ಟಾಟಾ ಮೋಟಾರ್ಸ್‌ನ (Tata Motors) ಕಾರುಗಳು ಮಾರಾಟದಲ್ಲಿ ಕುಸಿತವನ್ನು ದಾಖಲಿಸಿತ್ತು. ಹಿನ್ನಡೆಯ ಹೊರತಾಗಿಯೂ ಹುಂಡೈ ಜುಲೈ ತಿಂಗಳಲ್ಲಿ ಕಾರು ಮಾರಾಟದಲ್ಲಿ ಕ್ರೆಟಾ (Hyundai Creta) ಟಾಟಾ ಪಂಚ್ (Tata Punch) ಸೇರಿದಂತೆ ಕೆಲವು ಜನಪ್ರಿಯ ಮಾದರಿಗಳಿಗೆ ಸಡ್ಡು ಹೊಡೆದಿದೆ.

ಜುಲೈ 2024ರಲ್ಲಿ ಹೆಚ್ಚು ಮಾರಾಟವಾದ ಹತ್ತು ಪ್ರಮುಖ ಕಾರುಗಳ ವಿವರ ಇಲ್ಲಿದೆ:

ಜುಲೈ ತಿಂಗಳಲ್ಲಿ 17,350 ಯುನಿಟ್‌ಗಳನ್ನು ಮಾರಾಟ ಮಾಡುವುದರೊಂದಿಗೆ ಹ್ಯುಂಡೈ ಕ್ರೆಟಾ ಮುನ್ನಡೆಯನ್ನು ಕಂಡಿದೆ. 2023ರ ಜುಲೈಗೆ ಹೋಲಿಸಿದರೆ ಶೇ. 23ರಷ್ಟು ಬೇಡಿಕೆ ಹೆಚ್ಚಾಗಿರುವುದಾಗಿ ಕಂಪನಿ ಪ್ರಕಟಿಸಿದೆ. ಅಲ್ಲದೇ ಹೊಸ ಹುಂಡೈ ಕ್ರೆಟಾ ಜನವರಿಯಿಂದ ಈವರೆಗೆ 1 ಲಕ್ಷ ಮಾರಾಟದ ಮೈಲುಗಲ್ಲನ್ನು ತಲುಪಿದೆ. ಈ ವರ್ಷ. ಕ್ರೆಟಾ ಎನ್ ಲೈನ್ ಆವೃತ್ತಿಯಲ್ಲಿಯೂ ಲಭ್ಯವಿದ್ದು, ಸ್ಪೋರ್ಟಿಯರ್ ಆವೃತ್ತಿಯನ್ನು ಬಯಸುವ ಗ್ರಾಹಕರನ್ನು ಆಕರ್ಷಿಸುತ್ತಿದೆ.


ಮಾರುತಿ ಸುಜುಕಿ ಸ್ವಿಫ್ಟ್ ನಂ.2

ಕ್ರೆಟಾದ ಬಳಿಕ ಮಾರುತಿ ಸುಜುಕಿ ಸ್ವಿಫ್ಟ್ 16,854 ಯುನಿಟ್‌ಗಳ ಮಾರಾಟವನ್ನು ದಾಖಲಿಸಿದೆ. ಶೇ. 6ರಷ್ಟು ಮಾರಾಟ ಕುಸಿತವನ್ನು ಕಂಡಿದೆ. ಸ್ವಿಫ್ಟ್ ಅನಂತರ ವ್ಯಾಗನರ್ ಕಳೆದ ತಿಂಗಳು ಮಾರಾಟ ಕುಸಿತವನ್ನು ದಾಖಲಿಸಿದ ಅನಂತರ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 25ರಷ್ಟು ಧನಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ.

ಕಳೆದ ತಿಂಗಳ ಬೆಸ್ಟ್-ಸೆಲ್ಲರ್, ಟಾಟಾ ಪಂಚ್ 16,121 ಯುನಿಟ್‌ಗಳ ಮಾರಾಟ ಮತ್ತು ಶೇ. 34ರಷ್ಟು ಬೆಳವಣಿಗೆಯೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಪಂಚ್ ಸೇರಿದಂತೆ ಇನ್ನೂ ಎರಡು ಮಾರುತಿ ಸುಜುಕಿ ವಾಹನಗಳಾದ ಎರ್ಟಿಗಾ ಮತ್ತು ಬ್ರೆಝಾ, ಕ್ರಮವಾಗಿ 15,701 ಯುನಿಟ್ ಮತ್ತು 14,676 ಯುನಿಟ್‌ಗಳನ್ನು ಮಾರಾಟವಾಗಿದೆ. ಎರ್ಟಿಗಾ ಶೇ. 9, ಬ್ರೆಝಾ ಶೇ. 11 ರಷ್ಟು ಮಾರಾಟ ಕುಸಿತವನ್ನು ಅನುಭವಿಸಿದೆ.


ಟಾಟಾ ನೆಕ್ಸಾನ್ ಸ್ಥಾನ ಏನು?:

ಏಳನೇ ಸ್ಥಾನದಲ್ಲಿ ಟಾಟಾ ನೆಕ್ಸಾನ್ ಇದ್ದು, ಇದು ಮೊದಲ ಬಾರಿಗೆ ಧನಾತ್ಮಕ ಬೆಳವಣಿಗೆಯನ್ನು ಕಂಡಿದೆ. ಟಾಟಾ ಜುಲೈ 2024 ರಲ್ಲಿ 13,902 ಯುನಿಟ್‌ಗಳ ಮಾರಾಟವನ್ನು ನೋಂದಾಯಿಸಿದ್ದು, ಶೇ. 13ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

ಜುಲೈ 2024ರಲ್ಲಿ ಧನಾತ್ಮಕ ಬೆಳವಣಿಗೆಯನ್ನು ದಾಖಲಿಸಿದ ಕೆಲವೇ ಕಾರು ತಯಾರಕರಲ್ಲಿ ಮಹೀಂದ್ರಾ ಕೂಡ ಒಂದಾಗಿದೆ. 12,237 ಯುನಿಟ್‌ಗಳ ಮಾರಾಟವನ್ನು ನೋಂದಾಯಿಸಿದ ಸ್ಕಾರ್ಪಿಯೊ ಟಾಪ್ 10 ರಲ್ಲಿ ಸ್ಥಾನ ಪಡೆದಿದೆ. ಮಾರುತಿ ಸುಜುಕಿ ಉತ್ಪನ್ನಗಳಾದ ಇಕೋ, ಡಿಜೈರ್ ಎರಡೂ ಮಾರಾಟದಲ್ಲಿ ಕುಸಿತವನ್ನು ಅನುಭವಿಸಿದೆ.

ಇದನ್ನೂ ಓದಿ: Bike Mileage Tips: ಬೈಕ್‌‌ಗೆ ಟ್ಯೂಬ್, ಟ್ಯೂಬ್ ಲೆಸ್ ಟಯರ್; ಇವೆರಡರಲ್ಲಿ ಯಾವುದು ಬೆಸ್ಟ್?

ಯಾವುದು ಎಷ್ಟು?

ಹುಂಡೈ ಕ್ರೆಟಾ ಈ ಬಾರಿ 17,350ರಷ್ಟು ಮಾರಾಟವಾಗಿದ್ದು, ಕಳೆದ ವರ್ಷ 14,062ರಷ್ಟಾಗಿತ್ತು.


ಮಾರುತಿ ಸುಜುಕಿ ಸ್ವಿಫ್ಟ್ ಈ ಬಾರಿ 16,854, ಕಳೆದ ಬಾರಿ 17,896, ಮಾರುತಿ ಸುಜುಕಿ ವ್ಯಾಗನ್ ಆರ್ ಈ ಬಾರಿ 16,191, ಕಳೆದ ವರ್ಷ 12,970, ಟಾಟಾ ಪಂಚ್ ಈ ಬಾರಿ 16,121, ಕಳೆದ ವರ್ಷ 12,019, ಮಾರುತಿ ಸುಜುಕಿ ಎರ್ಟಿಗಾ ಈ ಬಾರಿ 15,701, ಕಳೆದ ಬಾರಿ 14,352, ಮಾರುತಿ ಸುಜುಕಿ ಬ್ರೆಝಾ ಈ ಬಾರಿ 14,676, ಕಳೆದ ವರ್ಷ 16,543, ಟಾಟಾ ನೆಕ್ಸಾನ್ ಈ ಬಾರಿ 13,902, ಕಳೆದ ವರ್ಷ 12,349, ಮಹೀಂದ್ರ ಸ್ಕಾರ್ಪಿಯೋ ಈ ಬಾರಿ 12,237, ಕಳೆದ ಬಾರಿ 10,522, ಮಾರುತಿ ಸುಜುಕಿ ಇಕೋ ಈ ಬಾರಿ 11,916, ಕಳೆದ ವರ್ಷ 12,037, ಮಾರುತಿ ಸುಜುಕಿ ಡಿಜೈರ್ ಈ ಬಾರಿ 11,647 ಕಳೆದ ವರ್ಷ 13,395ರಷ್ಟು ಮಾರಾಟವನ್ನು ದಾಖಲಿಸಿದೆ.

Continue Reading

ಕರ್ನಾಟಕ

Channapatna News: ಚನ್ನಪಟ್ಟಣ ಕ್ಷೇತ್ರದ ಬಡವರ ನಿವೇಶನಕ್ಕಾಗಿ 120 ಎಕರೆ ಜಮೀನು ಗುರುತು: ಡಿ.ಕೆ. ಶಿವಕುಮಾರ್

Channapatna News: ಚನ್ನಪಟ್ಟಣ ಕ್ಷೇತ್ರದ ಬಡವರಿಗೆ ಮನೆ ಹಾಗೂ ನಿವೇಶನ ಹಂಚಿಕೆಗಾಗಿ ಸರ್ಕಾರದಿಂದ 120 ಎಕರೆಯಷ್ಟು ಜಮೀನು ಗುರುತಿಸಲಾಗಿದೆ ಎಂದು ತಿಳಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್, ಜನತೆಗೆ ಆದಷ್ಟು ಬೇಗ ಅನುಕೂಲ ಮಾಡಿಕೊಡುವ ಸಲುವಾಗಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಈಗ ಇರುವ ಜಮೀನುಗಳ ಅಕ್ಕಪಕ್ಕ ಖಾಸಗಿಯವರು ಜಮೀನು ನೀಡಿದರೆ ಸರ್ಕಾರದಿಂದ ಖರೀದಿಸಲಾಗುವುದು. ಈಗಾಗಲೇ ಚನ್ನಪಟ್ಟಣ ತಾಲೂಕು ಸೇರಿದಂತೆ ಒಟ್ಟು ಮೂರು ಕ್ಷೇತ್ರಗಳಿಗೆ ಮುಖ್ಯಮಂತ್ರಿಗಳು ಮೂಲ ಸೌಕರ್ಯ ಅಭಿವೃದ್ದಿಗೆ ತಲಾ 100 ಕೋಟಿ ವಿಶೇಷ ಅನುದಾನ ಮಂಜೂರು ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

VISTARANEWS.COM


on

Channapatna News
Koo

ಚನ್ನಪಟ್ಟಣ: ಚನ್ನಪಟ್ಟಣ ಕ್ಷೇತ್ರದ ಬಡವರಿಗೆ ಮನೆ ಹಾಗೂ ನಿವೇಶನ ಹಂಚಿಕೆಗಾಗಿ ಸರ್ಕಾರದಿಂದ 120 ಎಕರೆಯಷ್ಟು ಜಮೀನು ಗುರುತಿಸಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (Channapatna News) ತಿಳಿಸಿದರು.

ಚನ್ನಪಟ್ಟಣ ತಾಲೂಕಿನಲ್ಲಿ ನಡೆದಿದ್ದ ʼಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರʼ ಸರಣಿ ಕಾರ್ಯಕ್ರದಲ್ಲಿ ಮನೆ, ನಿವೇಶನ ಹಂಚಿಕೆ ಬಗ್ಗೆ ನಾಗರಿಕರಿಗೆ ಡಿಸಿಎಂ ಶಿವಕುಮಾರ್ ಅವರು ಈ ಹಿಂದೆ ಭರವಸೆ ನೀಡಿದ್ದರು. ಅದರಂತೆ ನಿವೇಶನಗಳಿಗಾಗಿ ಸ್ಥಳ ವೀಕ್ಷಣೆಗೆ ತಾಲೂಕಿನ ಹನುಮಂತನಗರ, ಪಟ್ಲು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಇದನ್ನೂ ಓದಿ: Lalbagh Flower Show: ಎಲ್ಲ ವರ್ಗದ ಜನರಿಗೂ ಸಮಾನ ಅವಕಾಶ ದೊರೆಯಬೇಕು; ಸಿದ್ದರಾಮಯ್ಯ

ಜನತೆಗೆ ಆದಷ್ಟು ಬೇಗ ಅನುಕೂಲ ಮಾಡಿಕೊಡುವ ಸಲುವಾಗಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಈಗ ಇರುವ ಜಮೀನುಗಳ ಅಕ್ಕಪಕ್ಕ ಖಾಸಗಿಯವರು ಜಮೀನು ನೀಡಿದರೆ ಸರ್ಕಾರದಿಂದ ಖರೀದಿಸಲಾಗುವುದು. ಈಗಾಗಲೇ ಚನ್ನಪಟ್ಟಣ ತಾಲೂಕು ಸೇರಿದಂತೆ ಒಟ್ಟು ಮೂರು ಕ್ಷೇತ್ರಗಳಿಗೆ ಮುಖ್ಯಮಂತ್ರಿಗಳು ಮೂಲ ಸೌಕರ್ಯ ಅಭಿವೃದ್ದಿಗೆ ತಲಾ 100 ಕೋಟಿ ವಿಶೇಷ ಅನುದಾನ ಮಂಜೂರು ಮಾಡಿದ್ದಾರೆ. ಬಡವರಿಗೆ ನಿವೇಶನ, ಮನೆ ಹಂಚಲಾಗುವುದು. ಅರ್ಜಿ ನೀಡಿರುವವರ ಮನೆಗೆ ತೆರಳಿ ಅಧಿಕಾರಿಗಳು ಸತ್ಯಾಸತ್ಯತೇ ಪರಿಶೀಲನೆ ಮಾಡುತ್ತಾರೆ. ಈಗಲೂ ಮನೆಗೆ ಅರ್ಜಿ ನೀಡಬಹುದು ಎಂದು ತಿಳಿಸಿದರು.

ಕನಕಪುರದಲ್ಲಿ ನೂರಾರು ಎಕರೆ ಹಂಚಿದ್ದೇನೆ. ನಾನೇ ಖುದ್ದಾಗಿ ವಾರ್ಡ್ ಮಟ್ಟದಲ್ಲಿ ನಿವೇಶನ ಹಂಚಿಕೆ ಮಾಡಿದ್ದೇನೆ. ಇಲ್ಲಿಯೂ ಇದೇ ರೀತಿ ಹಂಚಿಕೆ ಮಾಡಲಾಗುವುದು. ಉತ್ತಮ ದರ್ಜೆಯ ಲೇಔಟ್‌ಗಳನ್ನು ನಿರ್ಮಾಣ ಮಾಡಿ, ಒಳಚರಂಡಿ, ಕುಡಿಯುವ ನೀರು, ಶಾಲೆ, ಅಂಗನವಾಡಿ, ದೇವಸ್ಥಾನ, ರಸ್ತೆ ಸೇರಿದಂತೆ ಎಲ್ಲಾ ಸೌಕರ್ಯ ನೀಡಲಾಗುವುದು ಎಂದು ಹೇಳಿದರು.

ಉಪಚುನಾವಣೆ ಮುಂಚಿತವಾಗಿಯೇ ಹಂಚಿಕೆ ಮಾಡಲಾಗುವುದೇ ಎಂದಾಗ “ಈಗಾಗಲೇ ಸ್ಕೆಚ್ ಕೂಡ ಮಾಡಲಾಗಿದೆ. ಚನ್ನಪಟ್ಟಣ ನಗರ ಮಾತ್ರವಲ್ಲ, ಆಯಾಯ ಹಳ್ಳಿಗಳಲ್ಲಿ ಅಲ್ಲಲ್ಲಿಯೇ ನಿವೇಶನ ಹಂಚಿಕೆ ಮಾಡಲಾಗುವುದು. ಅವೇರಗಳ್ಳಿ, ಸುಳ್ಳೇರಿ, ಶಿಬನಹಳ್ಳಿ, ವಂದಾರಗುಪ್ಪೆ, ಅಲ್ಲಾಳುಸಂದ್ರ ಸೇರಿದಂತೆ ಬ್ರಹ್ಮಿಣೀಪುರದಲ್ಲಿ 9 ಎಕರೆ, ಪಟ್ಲು ಗ್ರಾಮದಲ್ಲಿ 22 ಎಕರೆ ಸೇರಿದಂತೆ ಆಯಾಯ ಗ್ರಾಮಮಟ್ಟದಲ್ಲಿ ಎಷ್ಟು ಭೂಮಿ ಲಭ್ಯತೆ ಇದೆಯೋ ಅವುಗಳನ್ನು ಗುರುತಿಸಲಾಗಿದೆ ಎಂದರು.

ಇದನ್ನೂ ಓದಿ: EPF New Rule: ವೈದ್ಯಕೀಯ ಚಿಕಿತ್ಸೆಗಾಗಿ 1 ಲಕ್ಷ ರೂ.ವರೆಗೆ ಇಪಿಎಫ್‌ನಿಂದ ಹಣ ಪಡೆಯಲು ಅವಕಾಶ

ಕುಮಾರಸ್ವಾಮಿ ಅವರ ಸ್ವಚ್ಚತೆ ಬಗ್ಗೆ ತಿಳಿಸಲಿ

ನಮ್ಮ ಸಮಾವೇಶಕ್ಕೆ ಬಿಜೆಪಿ, ಜೆಡಿಎಸ್ ಉತ್ತರ ನೀಡಲಿ. ನಾವು ಕೇವಲ ಉತ್ತರ ನೀಡಿ ಎಂದಷ್ಟೇ ಕೇಳುತ್ತಿದ್ದೇವೆ. ಮಾಧ್ಯಮವೊಂದರಲ್ಲಿ ಗಣಿ ವಿಚಾರವಾಗಿ ಸುದ್ದಿ ಬಿತ್ತರವಾಗುತ್ತಿತ್ತು. ಮೈನಿಂಗ್ ಮಿನಿಸ್ಟರ್ ಮೈನಿಂಗ್ ಹೇಗೆ ಕೊಟ್ಟರು ಎಂದು ಚರ್ಚೆಯಾಗುತ್ತಿತ್ತು. ಮೈನಿಂಗ್, ಸ್ಟೀಲ್, ಕಬ್ಬಿಣ ಸಚಿವರು ಅನುಮತಿ ಕೊಟ್ಟರು ಎನ್ನುವ ವಿಚಾರವಿದೆ. ಡೀನೋಟಿಫಿಕೇಶನ್ ಸೇರಿದಂತೆ ಇತರೇ ಆರೋಪಗಳಿಗೆ ಉತ್ತರ ನೀಡಲಿ. ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರಲ್ಲವೇ, ಅವರ ಸ್ವಚ್ಚತೆ ಬಗ್ಗೆ ತಿಳಿಸಲಿ ಎಂದು ಸವಾಲು ಹಾಕಿದರು.

Continue Reading
Advertisement
Theft Case
ಬೆಂಗಳೂರು3 mins ago

Theft Case : ಬೆಂಗಳೂರಿನಲ್ಲಿ ಪ್ರೇಯಸಿಗಾಗಿ ಕಳ್ಳತನಕ್ಕೆ ಇಳಿದ ಪ್ರಿಯತಮ! ಮದುವೆಯಾಗಲು ಹೊರಟವರು ಜೈಲುಪಾಲು

Actor Yash called the actor that if you grow beyond all of us dance karnataka dance
ಸ್ಯಾಂಡಲ್ ವುಡ್9 mins ago

Actor Yash: ನಮ್ಮನ್ನೆಲ್ಲ ಮೀರಿಸಿ ನೀವು ಬೆಳೆದರೆ ಅದೇ ನಮಗೆ ನೀವು ಕೊಡುವ ಗೌರವ ಎಂದು ನಟನಿಗೆ ಕರೆ ಮಾಡಿದ ‘ರಾಕಿಂಗ್ ಸ್ಟಾರ್’ ಯಶ್!

bangalore traffic signal
ಪ್ರಮುಖ ಸುದ್ದಿ11 mins ago

Bangalore Traffic: ಬೆಂಗಳೂರಿನ ಟ್ರಾಫಿಕ್‌ ಸಿಗ್ನಲ್‌ನಲ್ಲಿ 15 ನಿಮಿಷ ನಿಲ್ಲೋ ಪರಿಸ್ಥಿತಿ ಬರಲಿದೆ, ಎಚ್ಚರ!

Vinesh Phogat
ಕ್ರೀಡೆ29 mins ago

Vinesh Phogat: ಕೆಲವೇ ಗಂಟೆಗಳಲ್ಲಿ ವಿನೇಶ್ ಫೋಗಟ್​ ಬೆಳ್ಳಿ ಪದಕದ ತೀರ್ಪು ಪ್ರಕಟ

Manish Sisodia
ದೇಶ39 mins ago

Manish Sisodia: ದೆಹಲಿ ಅಬಕಾರಿ ನೀತಿ ಅಕ್ರಮ: ಮನೀಶ್‌ ಸಿಸೋಡಿಯಾಗೆ ಜಾಮೀನು

Antim Panghal
ಕ್ರೀಡೆ1 hour ago

Antim Panghal: 3 ವರ್ಷ ನಿಷೇಧ ಶಿಕ್ಷೆಯಿಂದ ಪಾರಾದ ಕುಸ್ತಿಪಟು ಅಂತಿಮ್‌ ಪಂಘಲ್‌

train service
ಹಾಸನ1 hour ago

Train services: ಎಡಕುಮೇರಿಯಲ್ಲಿ ದುರಸ್ಥಿ ಪೂರ್ಣ; ರೈಲುಗಳ ಪುನರ್‌ ಆರಂಭವಾದರೂ ವೇಗದ ಮಿತಿಗೆ ನಿರ್ಬಂಧ

ದೇಶ1 hour ago

Kangana v/s Rahul Gandhi: ರಾಹುಲ್‌ ಗಾಂಧಿಯ ತಿರುಚಿದ ಫೊಟೋ ಶೇರ್‌; ಕಂಗನಾ ವಿರುದ್ಧ ಮಾನನಷ್ಟ ಮೊಕದ್ದಮೆ

ಪ್ರಮುಖ ಸುದ್ದಿ2 hours ago

CM Siddaramaiah: ಮೈಸೂರು ಜನಾಂದೋಲನ ಸಮಾವೇಶ ಸ್ಥಳಕ್ಕೆ ಆಗಮಿಸುತ್ತಿರುವ ಕಾಂಗ್ರೆಸ್‌ ಪಡೆ; ಲೈವ್‌ ಇಲ್ಲಿದೆ ವೀಕ್ಷಿಸಿ

Laapataa Ladies to be screened in Supreme Court
ಬಾಲಿವುಡ್2 hours ago

Laapataa Ladies: ಇಂದು ಸುಪ್ರೀಂ ಕೋರ್ಟ್‌ನಲ್ಲಿ ಪ್ರದರ್ಶನಗೊಳ್ಳುತ್ತಿದೆ ‘ಲಾಪತಾ ಲೇಡೀಸ್’!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ19 hours ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ21 hours ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ22 hours ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು3 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ3 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ5 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ6 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌