Train Tragedy: ರೈಲಿನ ಮೇಲಿನ ಬರ್ತ್‌ನಲ್ಲಿದ್ದ ವ್ಯಕ್ತಿ ಉರುಳಿ ಬಿದ್ದು ಕೆಳ ಬರ್ತ್‌ನ ಪ್ರಯಾಣಿಕ ಸಾವು - Vistara News

Latest

Train Tragedy: ರೈಲಿನ ಮೇಲಿನ ಬರ್ತ್‌ನಲ್ಲಿದ್ದ ವ್ಯಕ್ತಿ ಉರುಳಿ ಬಿದ್ದು ಕೆಳ ಬರ್ತ್‌ನ ಪ್ರಯಾಣಿಕ ಸಾವು

Train Tragedy: ಸಾವು ಯಾವಾಗ ಯಾರಿಗೆ ಬರುತ್ತದೆ ಎಂದು ಹೇಳಲಾಗುವುದಿಲ್ಲ. ಈಗ ಇದ್ದ ಮನುಷ್ಯ ಇನ್ನೊಂದು ಕ್ಷಣ ಇರುವುದಿಲ್ಲ. ಜೀವನ ನೀರ ಮೇಲಿನ ಗುಳ್ಳೆಯಂತೆ! ಆಯಸ್ಸು ಮುಗಿತು ಎಂದರೆ ಸಾವು ಯಾವ ದಿಕ್ಕಿನಲ್ಲಿ ಯಾವ ರೂಪದಲ್ಲಿ ಬರುತ್ತದೆ ಎಂದು ಹೇಳಲಾಗುವುದಿಲ್ಲ. ರೈಲಿನಲ್ಲಿ ಪ್ರಯಾಣ ಮಾಡಿದರೆ ಯಾವುದೇ ತೊಂದರೆ ಇರಲ್ಲ ಎಂದು ಕೆಲವರು ರೈಲಿನ ಪ್ರಯಾಣ ಇಷ್ಟಪಡುತ್ತಾರೆ. ಆದರೆ ಇಲ್ಲೊಬ್ಬರಿಗೆ ಸಾವು ರೈಲಿನಲ್ಲಿಯೇ ಕಾದಿತ್ತು. ವರದಿ ಇಲ್ಲಿದೆ.

VISTARANEWS.COM


on

Train Tragedy
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಸಾವು ಯಾವಾಗ ಯಾರಿಗೆ ಹೇಗೆ ಬರುತ್ತದೆ ಎಂದು ಹೇಳಲಾಗುವುದಿಲ್ಲ. ಈಗ ಇದ್ದ ಮನುಷ್ಯ ಇನ್ನೊಂದು ಕ್ಷಣ ಇರುವುದಿಲ್ಲ. ಜೀವನ ನೀರ ಮೇಲಿನ ಗುಳ್ಳೆಯಂತೆ! ಆಯಸ್ಸು ಮುಗಿತು ಎಂದರೆ ಸಾವು ಯಾವ ದಿಕ್ಕಿನಲ್ಲಿ ಯಾವ ರೂಪದಲ್ಲಿ ಬರುತ್ತದೆ ಎಂದು ಹೇಳಲಾಗುವುದಿಲ್ಲ. ಅದಕ್ಕೆ ನಿದರ್ಶನ ಎಂಬಂತೆ ಇದೆ ಈ ದುರ್ಘಟನೆ. ನವದೆಹಲಿಗೆ ತೆರಳುತ್ತಿದ್ದ ರೈಲಿನಲ್ಲಿ (Train Tragedy) ಆಕಸ್ಮಿಕವಾಗಿ ಅವಘಡವೊಂದು ಸಂಭವಿಸಿದ್ದು, ಇದರಿಂದ 62 ವರ್ಷದ ವ್ಯಕ್ತಿಯೊಬ್ಬರು ಸಾವನಪ್ಪಿದ್ದಾರೆ.

ಎಂ ಅಲಿಖಾನ್ (62) ಸಾವನಪ್ಪಿದ ವ್ಯಕ್ತಿ. ಇವರು ಜೂನ್ 18ರಂದು ನವದೆಹಲಿಗೆ ತೆರಳುತ್ತಿದ್ದ ರೈಲಿನಲ್ಲಿ ಕೆಳ ಬರ್ತ್ ನಲ್ಲಿ ಮಲಗಿದ್ದರು. ರೈಲು ತೆಲಂಗಾಣದ ವಾರಂಗಲ್ ಗೆ ತಲುಪಿದಾಗ ಅವರ ಮೇಲಿನ ಬರ್ತ್ ನಲ್ಲಿ ಪ್ರಯಾಣಿಕರೊಬ್ಬರು ಮಲಗಿದ್ದು, ಸಡನ್ ಆಗಿ ಮೇಲಿನ ಬರ್ತ್ ಕುಸಿದು ಇವರ ಮೈಮೇಲೆ ಬಿದ್ದಿದೆ. ಇದರಿಂದ ಅಲಿಖಾನ್ ಅವರ ಕುತ್ತಿಗೆಯ ಮೂರು ಮೂಳೆಗಳು ಮುರಿದಿವೆ. ತಕ್ಷಣ ರೈಲ್ವೆ ಅಧಿಕಾರಿಗಳು ಅವರನ್ನು ವಾರಂಗಲ್ ನ ಆಸ್ಪತ್ರೆಗೆ ದಾಖಲಿಸಿದ್ದರು.

ಆದರೆ ಅಲಿಖಾನ್ ಅವರು ಗಂಭೀರವಾಗಿ ಗಾಯಗೊಂಡ ಹಿನ್ನಲೆಯಲ್ಲಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ ನ ಕಿಂಗ್ಸ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರಗೆ ಸ್ಥಳಾಂತರಿಸಲಾಗಿತ್ತು. ಆದರೆ ಜೂನ್ 21ರಂದು ಮೂರು ಶಸ್ತ್ರಚಿಕಿತ್ಸೆಗಳ ಬಳಿಕ ಅವರು ಸಾವನಪ್ಪಿದ್ದಾರೆ. ಜೂನ್ 19ರಂದು ಅವರ ಪಾರ್ಥಿವ ಶರೀರವನ್ನು ಕೇರಳದ ಮರಂಚೇರಿಯಲ್ಲಿರುವ ಅವರ ನಿವಾಸಕ್ಕೆ ತರಲಾಗಿದೆ. ಮಧ್ಯಾಹ್ನ ವಡನುಕ್ಕುದಲ್ಲಿರುವ ಕುನ್ನತ್ ಜುಮಾ ಮಸೀದಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.

ಇನ್ನು ರೈಲ್ವೆ ಅಧಿಕಾರಿಗಳು ಹೇಳುವುದೇನೆಂದರೆ, ಸ್ಲಿಪರ್‌ ಕೋಚ್‌ನ ಬರ್ತ್‌ನಲ್ಲಿ ಯಾವುದೇ ತೊಂದರೆ ಇಲ್ಲ. ಮೇಲಿನ ಬರ್ತ್‌ನಲ್ಲಿರುವವರು ಸರಿಯಾಗಿ ಸರಪಳಿಯನ್ನು ಹಾಕದೇ ಇದ್ದ ಕಾರಣ ಮೇಲಿನ ಸೀಟು ಕೆಳಗೆ ಬಿದ್ದಿದೆ. ಇದರಿಂದ ಈ ಅವಘಡ ಉಂಟಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬಾಗಿಲ ಬಳಿ ಇದ್ದ ಆಹಾರ ಪ್ಯಾಕೆಟ್‌ ಕದ್ದೊಯ್ದ ಜೊಮ್ಯಾಟೊ ಡೆಲಿವರಿ ಬಾಯ್‌!

ರೈಲಿನಲ್ಲಿ ಈ ರೀತಿಯ ಆಕಸ್ಮಿಕ ಘಟನೆಗಳು ನಡೆಯುತ್ತಿದ್ದು, ಜನರು ಅಚಾನಕ್ ಆಗಿ ಸಾವನಪ್ಪುತ್ತಿರುವುದು ನೋಡಿದರೂ ಕೂಡ ನಮ್ಮ ಯುವಜನತೆ ಮಾತ್ರ ಚಲಿಸುತ್ತಿರುವ ರೈಲಿನಲ್ಲಿ ರೀಲ್ಸ್, ಮೋಜು ಮಸ್ತಿ ಮಾಡಿ ತಮ್ಮ ಪ್ರಾಣಕ್ಕೆ ತಾವೇ ಕುತ್ತು ತಂದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಮುಂಬೈ ಯುವತಿಯೊಬ್ಬಳು ಚಲಿಸುತ್ತಿದ್ದ ರೈಲಿನ ಬಾಗಿಲಿನಲ್ಲಿ ನಿಂತು ರೀಲ್ ಗಾಗಿ ಡ್ಯಾನ್ಸ್ ಮಾಡಿ ಸುದ್ದಿಯಾಗಿದ್ದಾಳೆ. ಜನರು ಆಕೆಯ ಮೇಲೆ ಆಕ್ರೋಶ ವ್ಯಕ್ತಪಡಿಸಿದ ವಿಚಾರ ಈಗಾಗಲೇ ತಿಳಿದಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral Video: ಮೊಬೈಲ್ ಕದ್ದ ಕಳ್ಳನಿಗೆ ದೇವರು ಕೊಟ್ಟ ಶಿಕ್ಷೆ ಮಾತ್ರ ಘೋರ! ವಿಡಿಯೊ ನೋಡಿ

Viral Video: ಕಳ್ಳನೊಬ್ಬ ಮಹಿಳೆಯೊಬ್ಬರ ಮೊಬೈಲ್ ಕದ್ದು ಓಡುತ್ತಿದ್ದಾಗ ಕಾರಿಗೆ ಡಿಕ್ಕಿ ಹೊಡೆದು ಸಾವನಪ್ಪಿದ್ದಾನೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೊದಲ್ಲಿ ಕಳ್ಳ ಮಹಿಳೆಯಿಂದ ಕದ್ದ ಮೊಬೈಲ್ ಪೋನ್ ಅನ್ನು ತೆಗೆದುಕೊಂಡು ತಪ್ಪಿಸಿಕೊಳ್ಳಲು ಜೋರಾಗಿ ಓಡುತ್ತಾ ರಸ್ತೆ ದಾಟುತ್ತಿದ್ದಾಗ ಎದುರಿಗೆ ವೇಗವಾಗಿ ಬಂದ ಕಾರೊಂದು ಆತನಿಗೆ ಡಿಕ್ಕಿ ಹೊಡೆದಿದೆ ಆತ ದೂರ ಹೋಗಿ ಬಿದ್ದಿದ್ದರೂ, ಕಾರು ತನ್ನ ವೇಗವನ್ನು ನಿಯಂತ್ರಿಸಲಾಗದೆ ಕೆಳಗೆ ಬಿದ್ದ ಆತನ ಮೆಲೆ ಹರಿದು ನಂತರ ನಿಂತಿದೆ. ಇದರಿಂದ ಆತ ಸ್ಥಳದಲ್ಲೇ ಸಾವನಪ್ಪಿದ್ದಾನೆ.

VISTARANEWS.COM


on

Viral Video
Koo

ಬೆಂಗಳೂರು: ಇಂದು ಮಾಡಿದ ತಪ್ಪಿನ ಶಿಕ್ಷೆ ಮುಂದಿನ ಜನ್ಮದಲ್ಲಿ ಸಿಗುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಆದರೆ ಅದು ಸುಳ್ಳು, ಇಂದು ಮಾಡಿದ ತಪ್ಪಿಗೆ ಶಿಕ್ಷೆ ಇದೇ ಕಾಲದಲ್ಲಿ ಸಿಗುತ್ತದೆ. ಆದರೆ ಕೆಲವರಿಗೆ ತಡವಾಗಿ ಸಿಕ್ಕರೆ, ಕೆಲವರಿಗೆ ಅಂದೇ ಸಿಗುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಕಳ್ಳನೊಬ್ಬ ಮಹಿಳೆಯೊಬ್ಬರ ಮೊಬೈಲ್ ಕದ್ದು ಓಡುತ್ತಿದ್ದಾಗ ಕಾರಿಗೆ ಡಿಕ್ಕಿ ಹೊಡೆದು ಸಾವನಪ್ಪಿದ್ದಾನೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Viral Video )ಆಗಿದೆ.

ಈ ವಿಡಿಯೊವನ್ನು @Desam_officialz ತಮ್ಮ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದು ‘ಇದು ಭೂಮಿಯ ಮೇಲೆ ದೇವರ ತಕ್ಷಣದ ತೀರ್ಪು. ದೇವರು ಕರುಣೆ ತೋರಲಿ’ ಎಂದು ಬರೆದಿದ್ದಾರೆ. ಈ ವಿಡಿಯೊದಲ್ಲಿ ಕಳ್ಳ ಮಹಿಳೆಯಿಂದ ಕದ್ದ ಮೊಬೈಲ್ ಪೋನ್ ಅನ್ನು ತೆಗೆದುಕೊಂಡು ತಪ್ಪಿಸಿಕೊಳ್ಳಲು ಜೋರಾಗಿ ಓಡುತ್ತಾ ರಸ್ತೆ ದಾಟುತ್ತಿದ್ದಾಗ ಎದುರಿಗೆ ವೇಗವಾಗಿ ಬಂದ ಕಾರೊಂದು ಆತನಿಗೆ ಡಿಕ್ಕಿ ಹೊಡೆದಿದೆ.

ಇದರ ಪರಿಣಾಮ ಆತ ಹಾರಿ ಹೋಗಿ ತುಂಬಾ ದೂರ ರಸ್ತೆಯ ಮೇಲೆ ಬಿದ್ದಿದ್ದಾನೆ. ಆದರೆ ಕಾರು ತನ್ನ ವೇಗವನ್ನು ನಿಯಂತ್ರಿಸಲಾಗದೆ ಕೆಳಗೆ ಬಿದ್ದ ಆತನ ಮೆಲೆ ಹರಿದು ನಂತರ ನಿಂತಿದೆ. ಇದರಿಂದ ಆತ ಸ್ಥಳದಲ್ಲೇ ಸಾವನಪ್ಪಿದ್ದಾನೆ.
ಈ ಘಟನೆ ನಡೆದ ಸ್ಥಳ ಮತ್ತು ದಿನಾಂಕ ತಿಳಿದುಬಂದಿಲ್ಲ. ಆದರೆ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಇದು ದೇವರ ತೀರ್ಪು ಎಂದು ಹೇಳಿದರೆ. ಕೆಲವರು ‘ಬಡವರ ವಿಷಯದಲ್ಲಿ ದೇವರು ತಕ್ಷಣ ತೀರ್ಪುಗಳನ್ನು ನೀಡುತ್ತಾನೆ? ಆದರೆ ಶ್ರೀಮಂತರು ಮತ್ತು ಶಕ್ತಿವಂತರಿಗೆ ಏಕೆ ದೇವರು ತಕ್ಷಣದ ತೀರ್ಪುಗಳನ್ನು ನೀಡುತ್ತಿಲ್ಲ? ಪ್ರತಿದಿನ ಇಂತಹ ಲಕ್ಷಾಂತರ ದರೋಡೆಗಳು, ರಸ್ತೆಗಳಲ್ಲಿ ಕೊಲೆಗಳು ನಡೆಯುತ್ತಿವೆ, ಯಾವುದೇ ತಕ್ಷಣದ ತೀರ್ಪುಗಳನ್ನು ನೋಡಿಲ್ಲ, ಏಕೆ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ನಡುರಸ್ತೆಯಲ್ಲಿ ಬಟ್ಟೆ ಕಳಚಿ ಬೆತ್ತಲೆಯಾಗಿ ನಡೆದ ಮಹಿಳೆ; ಪುರುಷರು ಕಕ್ಕಾಬಿಕ್ಕಿ!

ಸೆಪ್ಟೆಂಬರ್ 2023 ರಲ್ಲಿ ಗುಜರಾತ್‌ ನಲ್ಲಿಯೂ ಇಂತಹದ್ದೇ ಒಂದು ಘಟನೆ ನಡೆದಿತ್ತು. ಗುಜರಾತ್‌ನ ಮೊದಸಾದಲ್ಲಿ ಶೋರೂಂನಿಂದ ಕದಿಯಲು ಪ್ರಯತ್ನಿಸುತ್ತಿದ್ದ ಕಳ್ಳನಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ. ಈ ಘಟನೆಯು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

Continue Reading

Latest

OTT Release : ಒಟಿಟಿಯಲ್ಲಿ ಈ ವಾರ ಬಿಡುಗಡೆಯಾಗಲಿರುವ ಹೊಸ ಚಲನಚಿತ್ರಗಳು, ವೆಬ್ ಸರಣಿಗಳ ಪಟ್ಟಿ ಹೀಗಿವೆ

OTT Release ನೀವು ಸಿನಿಮಾ ಪ್ರಿಯರಾಗಿದ್ದರೆ ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಈ ಸಿನಿಮಾಗಳು ನಿಮಗೆ ಭರಪೂರ ಮನರಂಜನೆಯನ್ನು ನೀಡುವುದಂತೂ ಗ್ಯಾರಂಟಿ. ಎ ಫ್ಯಾಮಿಲಿ ಅಫೇರ್, ಆವೇಶಮ್, ಸಿವಿಲ್ ವಾರ್, ಸಾವೇಜ್ ಬ್ಯೂಟಿ ಸೀಸನ್ 2, ಶರ್ಮಾಜೀ ಕಿ ಬೇಟಿ, ದಿ ವೈರ್ಲ್ವಿಂಡ್ ಮುಂತಾದ ಸಿನಿಮಾಗಳು ನಿಮ್ಮನ್ನು ಹೊಸಲೋಕಕ್ಕೆ ಕರೆದುಕೊಂಡು ಹೋಗಲಿದೆ. ತಪ್ಪದೇ ಒಟಿಟಿಯಲ್ಲಿ ಈ ಸಿನಿಮಾವನ್ನು ನೋಡಿ.

VISTARANEWS.COM


on

OTT Release
Koo

ಬೆಂಗಳೂರು : ಒಟಿಟಿ ಪ್ರತಿವಾರ ತನ್ನ ವೀಕ್ಷಕರಿಗೆ ಹೊಸ ಹೊಸ ಚಲನಚಿತ್ರಗಳು ಮತ್ತು ವೆಬ್ ಸರಣಿಗಳನ್ನು ಬಿಡುಗಡೆ ಮಾಡುತ್ತದೆ. ಆ ಮೂಲಕ ಒಟಿಟಿ ತನ್ನ ವೀಕ್ಷಕರನ್ನು ಸೆಳೆಯುವ ಯೋಜನೆ ಮಾಡುತ್ತಿದೆ. ಪ್ರತಿಬಾರಿ ಒಟಿಟಿಯಲ್ಲಿ ಉತ್ತಮವಾದ ಚಿತ್ರಗಳನ್ನು ಬಿಡುಗಡೆ ಮಾಡಿ ವೀಕ್ಷಕರಿಗೆ ಮನೋರಂಜನೆಯನ್ನು ನೀಡುತ್ತಿದೆ. ಹಾಗಾದ್ರೆ ಒಟಿಟಿ(OTT Release )ಯಲ್ಲಿ ಈ ವಾರ ಬಿಡುಗಡೆಯಾಗಲಿರುವ ಹೊಸ ಚಲನಚಿತ್ರಗಳು, ವೆಬ್ ಸರಣಿಗಳ ಬಗ್ಗೆ ತಿಳಿದುಕೊಳ್ಳೋಣ.

OTT Release

ಎ ಫ್ಯಾಮಿಲಿ ಅಫೇರ್(A Family Affair):

ಒಬ್ಬ ಯುವತಿ, ಆಕೆಯ ತಾಯಿ ಮತ್ತು ಆಕೆಯ ನೆಚ್ಚಿನ ಸಿನಿಮಾ ತಾರೆ ಬಾಸ್ ಅವರ ಪ್ರೀತಿ, ಸೆಕ್ಸ್ ಅನ್ನು ನ್ಯಾವಿಗೇಟ್ ಮಾಡುವುದರಿಂದ ಅವರ ಪ್ರಣಯ ಹಾಸ್ಯ ಸನ್ನಿವೇಶಗಳಿಗೆ ಕಾರಣವಾಗುತ್ತದೆ.

ಇದರಲ್ಲಿ ನಿಕೋಲ್ ಕಿಡ್ಮನ್, ಜಾಕ್ ಎಫ್ರಾನ್, ಜೋಯಿ ಕಿಂಗ್ ನಟಿಸಿದ್ದಾರೆ. ಇದು ಜೂನ್ 28ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ.

OTT Release

ಆವೇಶಮ್ (ಹಿಂದಿ) (Aavesham (Hindi):

ಮೂವರು ಹದಿಹರೆಯದ ಬಾಲಕರು ಎಂಜಿನಿಯರಿಂಗ್ ಅಧ್ಯಯನಕ್ಕಾಗಿ ಬೆಂಗಳೂರಿಗೆ ಬಂದು ಅಲ್ಲಿ ಜಗಳವಾಡುತ್ತಾರೆ. ನಂತರ ಅವರು ಹೊಡೆದಾಡಲು ಸ್ಥಳೀಯ ದರೋಡೆಕೋರನ ಸಹಾಯವನ್ನು ಪಡೆಯುತ್ತಾರೆ.

ಇದರಲ್ಲಿ ಫಹಾದ್ ಫಾಸಿಲ್, ಹಿಪ್‌ಸ್ಟರ್‌, ಸಜಿನ್ ಗೋಪು, ಮಿಥುನ್ ಜೈ ಶಂಕರ್ ನಟಿಸಿದ್ದಾರೆ. ಇದು ಹಾಸ್ಯ ಹಾಗೂ ಆ್ಯಕ್ಷನ್ ಚಿತ್ರವಾಗಿದ್ದು, ಜೂನ್ 28ರಂದು ಡಿಸ್ನಿ ಪ್ಲಸ್ ಹಾಟ್ಸ್ಸ್ಟಾರ್ನಲ್ಲಿ ಪ್ರಸಾರವಾಗಿದೆ.

OTT Release

ಸಿವಿಲ್ ವಾರ್ (Civil War):

ಯುಎಸ್ ಅಂತರ್ಯುದ್ಧದ ಸಮಯದಲ್ಲಿ ವಾರ್ ಜರ್ನಲಿಸ್ಟ್ ತಂಡವು ನ್ಯೂಯಾರ್ಕ್ ನಗರದಿಂದ ವಾಷಿಂಗ್ಟನ್ ಡಿಸಿಗೆ ಪ್ರಯಾಣಿಸುತ್ತದೆ. ಬಂಡುಕೋರರು ರಾಜಧಾನಿಯನ್ನು ವಶಪಡಿಸಿಕೊಳ್ಳುವ ಮೊದಲು ಯುಎಸ್ ಅಧ್ಯಕ್ಷರನ್ನು ಸಂದರ್ಶಿಸುವ ಗುರಿಯನ್ನು ಅವರು ಹೊಂದಿರುತ್ತಾರೆ.

ಇದರಲ್ಲಿ ಕ್ರಿಸ್ಟನ್ ಡನ್ಸ್ಟ್, ವ್ಯಾಗ್ನರ್ ಮೌರಾ, ಕೈಲೀ ಸ್ಪೇನಿ, ಸ್ಟೀಫನ್ ಮೆಕಿನ್ಲೆ ಹೆಂಡರ್ಸನ್ ನಟಿಸಿದ್ದಾರೆ. ಇದು ಆ್ಯಕ್ಷನ್, ಥ್ರಿಲ್ಲರ್ ಚಿತ್ರವಾಗಿದ್ದು, ಜೂನ್ 28ರಂದು ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಪ್ರಸಾರವಾಗಿದೆ.

OTT Release

ರೌತು ಕಾ ರಾಜ್(Rautu Ka Raaz):

ಉತ್ತರಾಖಂಡದ ತೆಹ್ರಿಯ ರೌತು ಕಿ ಬೇಲಿ ಗ್ರಾಮದ ಅಂಧರ ಶಾಲೆಯ ವಾರ್ಡನ್ ತನ್ನ ಕೋಣೆಯಲ್ಲಿ ಶವವಾಗಿ ಪತ್ತೆಯಾಗುತ್ತಾನೆ. ಈ ಪ್ರಕರಣದ ತನಿಖೆ ಮಾಡಲು ಇನ್ಸ್ಪೆಕ್ಟರ್ ದೀಪಕ್ ನೇಗಿ ಅವರನ್ನು ಕರೆಸಲಾಗುತ್ತದೆ.

ಇದರಲ್ಲಿ ನವಾಜುದ್ದೀನ್ ಸಿದ್ದಿಕಿ, ರಾಜೇಶ್ ಕುಮಾರ್, ಅತುಲ್ ತಿವಾರಿ, ನಾರಾಯಣಿ ಶಾಸ್ತ್ರಿ ನಟಿಸಿದ್ದಾರೆ. ಇದು ಮಿಸ್ಟರಿ/ಥ್ರಿಲ್ಲರ್ ಚಿತ್ರವಾಗಿದ್ದು, ಜೂನ್ 28ರಂದು ಜೀ5ನಲ್ಲಿ ಬಿಡುಗಡೆಯಾಗಿದೆ.

OTT Release

ಸಾವೇಜ್ ಬ್ಯೂಟಿ ಸೀಸನ್ 2 (Savage Beauty Season 2):

ನಿಗೂಢ ಮಹಿಳೆಯೊಬ್ಬಳು ತನ್ನ ಜೀವನದಲ್ಲಿ ಹಿಂದೆ ನಡೆದ ದುರಂತಕ್ಕೆ ಸೇಡು ತೀರಿಸಿಕೊಳ್ಳಲು ಜಾಗತಿಕ ಸೌಂದರ್ಯ ಸಾಮ್ರಾಜ್ಯ ಮತ್ತು ಕರಾಳ ರಹಸ್ಯಗಳನ್ನೊಳಗೊಂಡ ಪ್ರಬಲ ಕುಟುಂಬಕ್ಕೆ ಬರುತ್ತಾಳೆ.

ಈ ಚಿತ್ರದಲ್ಲಿ ನಂಬಿತಾ ಬೆನ್-ಮಜ್ವಿ, ರೋಸ್ಮರಿ ಜಿಮು, ಎನ್ಥಾಟಿ ಮೋಶೆಶ್, ದುಮಿಸಾನಿ ಎಂಬೆಬೆ ನಟಿಸಿದ್ದಾರೆ. ಇದು ಥ್ರಿಲ್ಲರ್/ಡ್ರಾಮಾ ಚಿತ್ರವಾಗಿದ್ದು, ಜೂನ್ 28ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ.

OTT Release

ಶರ್ಮಾಜೀ ಕಿ ಬೇಟಿ (Sharmajee Ki Beti):

ಶರ್ಮಾ ಎಂಬ ಉಪನಾಮ ಹೊಂದಿರುವ ಮೂವರು ಮಹಿಳೆಯರನ್ನು ಕಥೆ ಅನುಸರಿಸುತ್ತದೆ. ಅವರ ಜೀವನವು ಸರಿಯಾದ ದಾರಿಯಲ್ಲಿ ಚಲಿಸಿದರೂ ಕೂಡ ಅವರು ಸಂಕ್ಷಿಪ್ತವಾದ ಮಾರ್ಗಗಳನ್ನು ದಾಟುತ್ತಾರೆ, ಇದು ಅವರ ಜೀವನದ ಮೇಲೆ ಗಮನಾರ್ಹ ಪರಿಣಾಮವನ್ನು ಬೀರುತ್ತದೆ.

ಈ ಚಿತ್ರದಲ್ಲಿ ಸಾಕ್ಷಿ ತನ್ವರ್, ದಿವ್ಯಾ ದತ್ತಾ, ಸಯಾಮಿ ಖೇರ್ ನಟಿಸಿದ್ದಾರೆ. ಇದು ಒಂದು ಡ್ರಾಮಾವಾಗಿದ್ದು, ಜೂನ್ 28ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ.

ಇದನ್ನೂ ಓದಿ:  ನಟ ಶಾರುಖ್ ಖಾನ್ ಬಗ್ಗೆ ಶಾಕಿಂಗ್ ಸುದ್ದಿ ಕೊಟ್ಟ ನಟ ಗೋವಿಂದ್ ನಾಮದೇವ್

ದಿ ವೈರ್ಲ್ವಿಂಡ್(The Whirlwind):

ದಕ್ಷಿಣ ಕೊರಿಯಾದ ಸರ್ಕಾರದಲ್ಲಿ, ಭ್ರಷ್ಟಾಚಾರವನ್ನು ನಿಭಾಯಿಸುವ ಗುರಿಯನ್ನು ಹೊಂದಿರುವ ಪ್ರಧಾನಿ ಪಾರ್ಕ್ ಡಾಂಗ್ ಹೋ, ಎಂಬವವರು ಅಲ್ಲಿನ ಅಧ್ಯಕ್ಷರ ಹತ್ಯೆಯನ್ನು ಧೈರ್ಯದಿಂದ ಆಯೋಜಿಸುತ್ತಾರೆ.

ಇದರಲ್ಲಿ ಸೋಲ್ ಕ್ಯೂಂಗ್-ಗು, ಕಿಮ್ ಹೀ-ಎ, ಲೀ ಹೇ ಯಂಗ್ ನಟಿಸಿದ್ದಾರೆ. ಇದು ಒಂದು ಡ್ರಾಮಾವಾಗಿದ್ದು, ಜೂನ್ 28ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ.

Continue Reading

Latest

Viral Video: ನಡುರಸ್ತೆಯಲ್ಲಿ ಬಟ್ಟೆ ಕಳಚಿ ಬೆತ್ತಲೆಯಾಗಿ ನಡೆದ ಮಹಿಳೆ; ಪುರುಷರು ಕಕ್ಕಾಬಿಕ್ಕಿ!

Viral Video ಫ್ಯಾಷನ್ ಎನ್ನುವುದು ಎಷ್ಟರ ಮಟ್ಟಿಗೆ ನಮ್ಮನ್ನು ಆವರಿಸಿದೆ ಎಂದರೆ ಇಂದು ಏನೇ ಮಾಡಿದರೂ ಸರಿ ಎನ್ನುವ ಮಟ್ಟಿಗೆ ಆಗಿದೆ. ಮೈ ತುಂಬಾ ಬಟ್ಟೆ ಧರಿಸುವುದು ನಮ್ಮ ಸಂಪ್ರದಾಯ ಆದರೆ ಈಗ ತುಂಡುಡುಗೆ ಧರಿಸಿಕೊಂಡು ಹೋಗುವುದೇ ಫ್ಯಾಷನ್ ಆಗಿದೆ. ಆದರೆ ಇಲ್ಲೊಬ್ಬಳು ಮಹಿಳೆ ನಡುರಸ್ತೆಯಲ್ಲಿ ಮೈ ಮೇಲೆ ಬಟ್ಟೆ ಇಲ್ಲದೇ ನಡೆದುಕೊಂಡು ಹೋಗಿದ್ದಾಳೆ. ಇವಳು ಹೀಗ್ಯಾಕೆ ಮಾಡಿದ್ದಾಳೆ ಎಂಬುದಕ್ಕೆ ಕಾರಣ ಗೊತ್ತಿಲ್ಲ, ಇನ್ನು ಈ ಮಹಿಳೆ ಯಾರೂ ಎಂಬುದು ಕೂಡ ತಿಳಿದಿಲ್ಲ.

VISTARANEWS.COM


on

Viral Video
Koo

ಗಾಜಿಯಾಬಾದ್ : ಹೆಣ್ಣಾಗಲಿ, ಗಂಡಾಗಲಿ ಅಗತ್ಯ ಇರುವಷ್ಟಾದರೂ ಬಟ್ಟೆ ತೊಟ್ಟುಕೊಂಡರೆ ಚೆನ್ನ. ಆದರೆ ಈಗ ಬಟ್ಟೆ ಬಗ್ಗೆ ಮಾತನಾಡುವ ಹಾಗೇ ಇಲ್ಲ. ಫ್ಯಾಷನ್‌ ನೆಪವೊಡ್ಡಿ ತಮ್ಮಿಷ್ಟದ ಬಟ್ಟೆ ಧರಿಸಿಕೊಂಡು ಓಡಾಡುವುದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಇಲ್ಲೊಬ್ಬ ಮಹಿಳೆ ನಡುರಸ್ತೆಯಲ್ಲಿ ನಗ್ನವಾಗಿ ಓಡಾಡಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ವೈರಲ್ (Viral Video )ಆಗಿದೆ.

ವಿಡಿಯೊದಲ್ಲಿ ಗಾಜಿಯಾಬಾದ್‌ನ ಮೋಹನ್ ನಗರದ ಚೌರಾಹಾದ ಜನನಿಬಿಡ ರಸ್ತೆಯಲ್ಲಿ ಮಹಿಳೆ ನಗ್ನವಾಗಿ ನಡೆದುಕೊಂಡು ಹೋಗುವುದು ಕಂಡುಬಂದಿದೆ. ಆದರೆ ಮಹಿಳೆಯನ್ನು ಈ ಸ್ಥಿತಿಯಲ್ಲಿ ಕಂಡು ಪುರುಷರು ಬಿಡಿ ಮಹಿಳೆಯರು ಕೂಡ ಸುಮ್ಮನೆ ನೋಡಿ ಹೋದರೇ ವಿನಃ ಆಕೆಯನ್ನು ತಡೆಯಲು ಅಥವಾ ಅವಳಿಗೆ ಬಟ್ಟೆಗಳನ್ನು ನೀಡಲು ಯಾರೂ ಪ್ರಯತ್ನಿಸುತ್ತಿಲ್ಲ ಎಂಬುವುದನ್ನು ಕಾಣಬಹುದು. ಆದರೆ ಮಹಿಳೆಯ ಗುರುತು ತಿಳಿದುಬಂದಿಲ್ಲ. ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಪೊಲೀಸ್ ಅಧಿಕಾರಿಗಳು ಘಟನೆಯ ಬಗ್ಗೆ ತಿಳಿದು ಮಹಿಳೆಯನ್ನು ಗುರುತಿಸಲು ಮತ್ತು ಅವಳು ಎಲ್ಲಿಗೆ ಹೋದಳು ಎಂಬುದನ್ನು ಪತ್ತೆ ಹಚ್ಚಲು ವಿಡಿಯೊ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ವರದಿಗಳ ಪ್ರಕಾರ, ಈ ವೀಡಿಯೊವನ್ನು ಜೂನ್ 25 ರಂದು ರೆಕಾರ್ಡ್ ಮಾಡಲಾಗಿದ್ದು, 10 ಸೆಕೆಂಡುಗಳ ಈ ವಿಡಿಯೊದಲ್ಲಿ ವಾಹನಗಳು ಮತ್ತು ಪಾದಚಾರಿಗಳು ಹಾದುಹೋಗುವ ಭಾರಿ ದಟ್ಟಣೆಯ ಸ್ಥಳದಲ್ಲಿ ಮಹಿಳೆಯನ್ನು ಸೆರೆಹಿಡಿಯಲಾಗಿದೆ. ಮಹಿಳೆಯ ಗುರುತನ್ನು ಬಹಿರಂಗಪಡಿಸಲಾಗಿಲ್ಲ. ಅವಳು ಈ ಸ್ಥಿತಿಯಲ್ಲಿ ಏಕೆ ಇದ್ದಳು ಅಥವಾ ಅವಳು ಹೇಗೆ ರಸ್ತೆಗೆ ಬಂದಳು ಎಂಬುದು ಸ್ಪಷ್ಟವಾಗಿಲ್ಲ. ಈ ಘಟನೆಯು ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಆಕ್ರೋಶ ಮತ್ತು ಟೀಕೆಗಳನ್ನು ಹುಟ್ಟುಹಾಕಿದೆ. ಪೊಲೀಸ್ ಬೂತ್ ಸಮೀಪದಲ್ಲಿದ್ದರೂ, ಕೂಡ ಬುಧವಾರ ರಾತ್ರಿ ವಿಡಿಯೊ ಆನ್ ಲೈನ್ ನಲ್ಲಿ ಕಾಣಿಸಿಕೊಳ್ಳುವವರೆಗೂ ಅಧಿಕಾರಿಗಳಿಗೆ ತಿಳಿದಿರಲಿಲ್ಲ ಎನ್ನಲಾಗಿದೆ.

ಈ ವರ್ಷದ ಆರಂಭದಲ್ಲಿ, ದೆಹಲಿಯಲ್ಲಿ ಪ್ರಯಾಣಿಕರಿಂದ ತುಂಬಿದ್ದ ಬಸ್‌ನಲ್ಲಿ ಬಿಕಿನಿ ಧರಿಸಿದ ಮಹಿಳೆಯೊಬ್ಬರು ಪ್ರಯಾಣ ಮಾಡುತ್ತಿರುವ ವಿಡಿಯೊ ಕೂಡ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ಮಹಿಳೆಯನ್ನು ನೋಡಿ ಪ್ರಯಾಣಿಕರಿಂದ ವಿಭಿನ್ನ ಪ್ರತಿಕ್ರಿಯೆ ಕಂಡುಬಂದಿತ್ತು, ಕೆಲವರು ಆಶ್ಚರ್ಯದಿಂದ ನೋಡಿದರು ಮತ್ತು ಕೆಲವರು ಅಸಡ್ಡೆ ತೋರಿದರು.

ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಉಡುಪನ್ನು ಸಾರ್ವಜನಿಕ ಬಸ್‌ಗಳಲ್ಲಿ ಪ್ರಯಾಣಿಸಲು ಸೂಕ್ತವಲ್ಲ ಎಂದು ಹಲವರು ಟೀಕೆ ಮಾಡಿದರೆ, ಕೆಲವರು ಇದರಲ್ಲಿ ತಪ್ಪೇನು ಎಂದು ಆಕೆಗೆ ಬೆಂಬಲ ನೀಡಿದ್ದಾರೆ.

Continue Reading

Latest

Baby Death : ಆಟವಾಡುತ್ತಿದ್ದ ಮಗುವಿನ ಪಾಲಿಗೆ ಯಮದೂತ ಆದ ಟಿವಿ ಸ್ಟ್ಯಾಂಡ್‌!

Baby Death: ಮನೆಯಲ್ಲಿ ಮಗುವೊಂದು ಇದ್ದರೆ ಎಷ್ಟು ಹುಷಾರಾಗಿ ನೋಡಿಕೊಂಡರೂ ಕಡಿಮೆ. ಮಕ್ಕಳು ಆಟವಾಡುತ್ತಿದ್ದಾರೆ ಎಂದು ಪೋಷಕರು ಸುಮ್ಮನೇ ಇರುತ್ತಾರೆ. ಆದರೆ ಈ ಕ್ಷಣ ಇಲ್ಲಿರುವ ಮಕ್ಕಳು ಇನ್ನೊಂದು ಕ್ಷಣ ಇನ್ನೆಲ್ಲೋ ಕಿತಾಪತಿ ಮಾಡುತ್ತಿರುತ್ತಾರೆ.ಮಕ್ಕಳನ್ನು ಸಾಕಿ ಬೆಳೆಸುವುದು ಎಂದರೆ ನಿಜಕ್ಕೂ ದೊಡ್ಡ ಸವಾಲೇ ಎನ್ನಬಹುದು. ಕೇರಳದ ಒಂದೂವರೆ ವರ್ಷದ ಮಗುವೊಂದು ಟಿವಿ ಸ್ಟ್ಯಾಂಡ್ ಮುಟ್ಟಲು ಹೋಗಿ ಸಾವಿಗೀಡಾಡ ಘಟನೆ ನಡೆದಿದೆ.

VISTARANEWS.COM


on

Baby Death
Koo

ಕೇರಳ : ಸಾವು ಯಾರಿಗೆ ಯಾವ ಕ್ಷಣದಲ್ಲಿ ಬರುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಆಟವಾಡುತ್ತಿದ್ದ ಮಗು (Baby Death) ವೊಂದು ಟಿವಿ ಸ್ಟ್ಯಾಂಡ್‌ ಮುಟ್ಟಲು ಹೋಗಿ ಜೀವ ಕಳೆದುಕೊಂಡ ಘಟನೆ ಕೇರಳದ ಕೊಚ್ಚಿ ಬಳಿಯ ಮುವಾಟ್ಟುಪುಜಾದಲ್ಲಿ ನಡೆದಿದೆ.

ಅಬ್ದುಲ್ ಸಮದ್ ಎಂಬ ಒಂದೂವರೆ ವರ್ಷದ ಕಂದಮ್ಮ ಇಂತಹ ಘೋರ ಸಾವಿಗೆ ತುತ್ತಾಗಿದ್ದಾನೆ. ಈತ ಪೈಪ್ರಾ ನಿವಾಸಿ ಅನಾಸ್ ಅವರ ಮಗ ಎಂಬುದಾಗಿ ತಿಳಿದುಬಂದಿದೆ. ಸೋಮವಾರ ರಾತ್ರಿ 9.30 ರ ಸುಮಾರಿಗೆ ಮಗು ನಡೆದುಕೊಂಡು ಹೋಗಿ ಟಿವಿ ಸೆಟ್ ಇರಿಸಲಾಗಿದ್ದ ಸ್ಟ್ಯಾಂಡ್ ಅನ್ನು ಮುಟ್ಟಿದೆ. ಆ ವೇಳೆ ಸ್ಟ್ಯಾಂಡ್ ಬ್ಯಾಲೆನ್ಸ್ ತಪ್ಪಿ ಟಿವಿ ಸಹಿತವಾಗಿ ಮಗುವಿನ ಮೈಮೇಲೆ ಬಿದ್ದಿದೆ. ಇದರಿಂದ ಮಗು ಗಂಭೀರವಾಗಿ ಗಾಯಗೊಂಡಿದೆ. ತಕ್ಷಣ ಮಗುವನ್ನು ಇಲ್ಲಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲಿ ಪ್ರಥಮ ಚಿಕಿತ್ಸೆ ನಡೆಸಿ ನಂತರ ಕೊಲಂಚೇರಿಯ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಆದರೆ ಅಲ್ಲಿ ವೈದ್ಯರಿಲ್ಲದ ಕಾರಣ ಕೊನೆಯಲ್ಲಿ ಮಗುವನ್ನು ಆಸ್ಟರ್ ಮೆಡ್ಸಿಟಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಂಗಳವಾರ ಮುಂಜಾನೆ ಗಂಭೀರ ಗಾಯಗಳಿಂದ ಮಗು ಮೃತಪಟ್ಟಿದ್ದಾನೆ.

Baby Death

ಮರಣೋತ್ತರ ಪರೀಕ್ಷೆಯ ನಂತರ, ಮಗುವಿನ ದೇಹವನ್ನು ಅವರ ಮನೆಗೆ ತೆಗೆದುಕೊಂಡು ಹೋಗಿ ಸಂಜೆ ಪೈಪ್ರಾ ಕೇಂದ್ರ ಜುಮಾ ಮಸೀದಿಯಲ್ಲಿ ಸಮಾಧಿ ಮಾಡಲಾಯಿತು.

ಪೊಲೀಸ್ ವರದಿಯ ಪ್ರಕಾರ, ಮಗುವಿನ ನಿವಾಸದಲ್ಲಿ ಈ ದುರದೃಷ್ಟಕರ ಘಟನೆ ಸಂಭವಿಸಿದೆ. ಟಿವಿ ಸ್ಟ್ಯಾಂಡ್ ಅನ್ನು ಮಗುವು ಅಜಾಗರೂಕತೆಯಿಂದ ಮುಟ್ಟಿರಬಹುದು ಎಂದು ಊಹಿಸಲಾಗಿದೆ.

ಇದನ್ನೂ ಓದಿ: ಒಂದು ದಿನದ ಮಟ್ಟಿಗೆ ಈ ಬಾಲಕ ಐಪಿಎಸ್‌ ಅಧಿಕಾರಿ; ಇವನ ಕಥೆ ಕಣ್ಣೀರು ತರಿಸುವಂಥದ್ದು

ದುರಂತವೆಂದರೆ, ಸ್ಟ್ಯಾಂಡ್ ಮತ್ತು ಟೆಲಿವಿಷನ್ ಎರಡೂ ಚಿಕ್ಕ ಮಗುವಿನ ಮೇಲೆ ಬಿದ್ದು, ಮಾರಣಾಂತಿಕ ಗಾಯಗಳನ್ನು ಉಂಟುಮಾಡಿದವು. ವೈದ್ಯರ ಪ್ರಯತ್ನಗಳ ಹೊರತಾಗಿಯೂ, ಮಗು ಮಂಗಳವಾರ ಮುಂಜಾನೆ ಗಂಭೀರ ಗಾಯಗಳಿಂದ ಜೀವ ಕಳೆದುಕೊಂಡಿತು. ಮೃತ ಶಿಶುವು ಈ ಪ್ರದೇಶದ ಪೈಪ್ರಾ ನಿವಾಸಿ ಅನಾಸ್ ಅವರ ಮಗ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿದ್ದಾರೆ.

Continue Reading
Advertisement
Rohit Sharma
ಪ್ರಮುಖ ಸುದ್ದಿ1 hour ago

Rohit Sharma : ಕೊಹ್ಲಿ ಹಾದಿ ತುಳಿದ ರೋಹಿತ್​, ಟಿ20 ಐ ಕ್ರಿಕೆಟ್​​ಗೆ ವಿದಾಯ ಹೇಳಿದ ಟೀಮ್ ಇಂಡಿಯಾ ನಾಯಕ

Virat Kohli
ಪ್ರಮುಖ ಸುದ್ದಿ4 hours ago

Virat Kohli : ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ ವಿರಾಟ್​​ ಕೊಹ್ಲಿ

T20 World Cup
ಪ್ರಮುಖ ಸುದ್ದಿ4 hours ago

T20 World Cup 2024 : 13 ವರ್ಷಗಳ ಕಾಯುವಿಕೆ ಅಂತ್ಯ, ಕೊನೆಗೂ ವಿಶ್ವ ಕಪ್​ ಗೆದ್ದ ಭಾರತ

Progress review meeting at Karwar ZP office
ಉತ್ತರ ಕನ್ನಡ4 hours ago

Uttara Kannada News: ಕೂಸಿನ ಮನೆ ಯೋಜನೆ ಯಶಸ್ವಿಗೊಳಿಸಿ: ಉಮಾ ಮಹಾದೇವನ್

Tupolev fighter jet INS Chapel warship open for public viewing
ಉತ್ತರ ಕನ್ನಡ4 hours ago

Uttara Kannada News: ಟುಪಲೇವ್ ಯುದ್ಧ ವಿಮಾನ, ಐ.ಎನ್.ಎಸ್.ಚಾಪೆಲ್ ಯುದ್ಧನೌಕೆ ಸಾರ್ವಜನಿಕ ವೀಕ್ಷಣೆಗೆ ಮುಕ್ತ

narendra modi dk shivakumar siddaramaiah
ಪ್ರಮುಖ ಸುದ್ದಿ5 hours ago

DK Shivakumar: ರಾಜ್ಯಕ್ಕೊಂದು ಗಿಫ್ಟ್‌ ಸಿಟಿಗೆ ಪ್ರಧಾನಿ ಮುಂದೆ ಬೇಡಿಕೆ: ಡಿಸಿಎಂ ಡಿ‌.ಕೆ.ಶಿವಕುಮಾರ್

T20 World Cup
ಪ್ರಮುಖ ಸುದ್ದಿ5 hours ago

T20 World Cup : ಘರ್ಜಿಸಿದ ಕಿಂಗ್ ಕೊಹ್ಲಿ, 176 ರನ್ ಬಾರಿಸಿದ ಭಾರತ, ಇದು ವಿಶ್ವ ಕಪ್​ ಫೈನಲ್​ನಲ್ಲಿ ಗರಿಷ್ಠ ಸ್ಕೋರ್​

cm siddaramaiah T20 World Cup Final
ಪ್ರಮುಖ ಸುದ್ದಿ6 hours ago

T20 World Cup Final: ವಿಮಾನ ನಿಲ್ದಾಣದಲ್ಲೂ ಸಿದ್ದರಾಮಯ್ಯಗೆ ವಿಶ್ವಕಪ್‌ ಕ್ರಿಕೆಟ್‌ ಧ್ಯಾನ!

Hardik Pandya
ಪ್ರಮುಖ ಸುದ್ದಿ6 hours ago

Hardik Pandya : ಕಪಿಲ್​ ದೇವ್​ ರೀತಿ ಮೀಸೆ ಬಿಟ್ಟುಕೊಂಡು ಫೈನಲ್ ಪಂದ್ಯ ಆಡಲು ಬಂದ ಹಾರ್ದಿಕ್ ಪಾಂಡ್ಯ

CM Siddaramaiah pm narendra modi
ಪ್ರಮುಖ ಸುದ್ದಿ6 hours ago

Siddaramaiah: ಮೇಕೆದಾಟು ಕೂಡಲೇ ಕ್ಲಿಯರ್‌ ಮಾಡಿ: ಪ್ರಧಾನಿ ಮೋದಿ ಭೇಟಿಯಾಗಿ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ11 hours ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ17 hours ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ1 day ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು2 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ3 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ5 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

ಟ್ರೆಂಡಿಂಗ್‌