Viral Video: ಕಂಠ ಪೂರ್ತಿ ಕುಡಿದ ಪಿಯು ಹುಡುಗನ ಕಾರು ಚಾಲನೆ; ಜೀವ ಕಳೆದುಕೊಂಡ ಅಮಾಯಕ - Vistara News

Latest

Viral Video: ಕಂಠ ಪೂರ್ತಿ ಕುಡಿದ ಪಿಯು ಹುಡುಗನ ಕಾರು ಚಾಲನೆ; ಜೀವ ಕಳೆದುಕೊಂಡ ಅಮಾಯಕ

Viral Video: ಹೈದರಾಬಾದ್‌ನ ಜೀಡಿಮೆಟ್ಲಾ ಪ್ರದೇಶದಲ್ಲಿ ವೇಗವಾಗಿ ಬಂದ ಕಾರು ವಾಚ್‌ಮ್ಯಾನ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆತ ಸಾವನಪ್ಪಿದ ಘಟನೆ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಗೋಪಿ ಎನ್ನುವವರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅತಿವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಅವರು ಗಾಳಿಯಲ್ಲಿ ಹಾರಿ ಹೋಗಿ ಕೆಳಗೆ ಬಿದ್ದಿದ್ದಾರೆ. ಇದರ ಪರಿಣಾಮವಾಗಿ ಅವರು ಸ್ಥಳದಲ್ಲೇ ಸಾವನಪ್ಪಿದ್ದಾರೆ. ಇದರ ವಿಡಿಯೊ ಇಲ್ಲಿದೆ.

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo


ಹೈದರಾಬಾದ್ : ಅತಿ ವೇಗ ಅಪಘಾತಕ್ಕೆ ಕಾರಣ ಎಂದು ತಿಳಿದರೂ ವಾಹನ ಚಲಾಯಿಸುವವರು ಅತಿವೇಗದಲ್ಲಿ ವಾಹನಗಳನ್ನು ಚಲಾಯಿಸಿ ತಮ್ಮ ಪ್ರಾಣಕ್ಕೆ ಅಪಾಯ ತಂದುಕೊಳ್ಳುವ ಜೊತೆಗೆ ಇತರರ ಪ್ರಾಣಕ್ಕೂ ಆಪತ್ತು ತರುತ್ತಾರೆ. ಇದೀಗ ಅಂತಹದೊಂದು ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ. ಹೈದರಾಬಾದ್‍ನ ಜೀಡಿಮೆಟ್ಲಾ ಪ್ರದೇಶದಲ್ಲಿ ವೇಗವಾಗಿ ಬಂದ ಕಾರು ವ್ಯಕ್ತಿಯೊಬ್ಬನಿಗೆ ಡಿಕ್ಕಿ ಹೊಡೆದ ಪರಿಣಾಮ ಆತ ಸಾವನಪ್ಪಿದ ಘಟನೆ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಗೋಪಿ (38) ಎಂಬುವವರು ಈ ಅಪಘಾತದಲ್ಲಿ ಸಾವನಪ್ಪಿದ ವ್ಯಕ್ತಿ. ಇವರು ವಾಚ್‍ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಜೀಡಿಮೆಟ್ಲಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಗಜುಲಾ ರಾಮರಾಮ್‍ನಲ್ಲಿ ಈ ಘಟನೆ ನಡೆದಿದ್ದು, ಅಪಘಾತದ ಘೋರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗೋಪಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅತಿವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಅವರು ಗಾಳಿಯಲ್ಲಿ ಹಾರಿ ಹೋಗಿ ಕೆಳಗೆ ಬಿದ್ದಿದ್ದಾರೆ. ಇದರ ಪರಿಣಾಮವಾಗಿ ಅವರು ಸ್ಥಳದಲ್ಲೇ ಸಾವನಪ್ಪಿದ್ದಾರೆ.

ಮದ್ಯದ ಅಮಲಿನಲ್ಲಿ ಮತ್ತು ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಮನೀಶ್ ಗೌಡ ಎಂಬ 20 ವರ್ಷದ ದ್ವಿತೀಯ ಪಿಯುಸಿ ವಿದ್ಯಾರ್ಥಿ ತನ್ನ ಇತರ ಐವರು ಗೆಳೆಯರೊಂದಿಗೆ ಕಾರಿನಲ್ಲಿ ಹೋಗುತ್ತಿದ್ದಾಗ ಇಂತಹ ಭೀಕರ ಕೃತ್ಯ ಎಸಗಿದ್ದಾನೆ ಎಂಬುದಾಗಿ ತಿಳಿದುಬಂದಿದೆ. ಅಪಘಾತದ ನಂತರ ಆರೋಪಿ ಮತ್ತು ಇತರ ಐವರು ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದರು. ಆದರೆ ಅಲ್ಲಿದ್ದವರು ಆರೋಪಿ ಮನೀಶ್ ಗೌಡ್‌ನನ್ನು ಹಿಡಿದು ಜೀಡಿಮೆಟ್ಲಾ ಪೊಲೀಸರ ವಶಕ್ಕೆ ನೀಡಿದ್ದಾರೆ. ಆದರೆ ಆತನ ಐವರು ಸ್ನೇಹಿತರು ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಟಿಕೆಟ್ ಇಲ್ಲದೆ ಎಸಿ ಬೋಗಿಯಲ್ಲಿ ಪ್ರಯಾಣಿಸಿದ ಪೊಲೀಸರು; ಟಿಕೆಟ್‌ ಪರಿಶೀಲಕರಿಗೇ ಧಮಕಿ!

ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ ಕಾರನ್ನು ಚಾಲಕ ನಿರ್ಲಕ್ಷ್ಯದ ರೀತಿಯಲ್ಲಿ ಓಡಿಸಿ ವಾಚ್‍ಮ್ಯಾನ್‌ಗೆ ಡಿಕ್ಕಿ ಹೊಡೆದಿದ್ದಾನೆ. ಹಾಗೆಯೇ ವಿಡಿಯೊದಲ್ಲಿ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿ ಅಪಘಾತವನ್ನು ತಪ್ಪಿಸಲು ಪ್ರಯತ್ನಿಸುತ್ತಿರುವುದನ್ನು ಸಹ ಕಾಣಬಹುದು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಮತ್ತು ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Varamahalakshmi Festival 2024 : ವರಮಹಾಲಕ್ಷ್ಮಿ ಹಬ್ಬದ ದಿನ ಸುಲಭವಾಗಿ ಮಾಡಬಹುದಾದ ರುಚಿಕರ ಖಾದ್ಯಗಳಿವು; ವಿಡಿಯೊಗಳಿವೆ

Varamahalakshmi Festival 2024: ವರಮಹಾಲಕ್ಷ್ಮಿ ಹಬ್ಬದಂದು ಲಕ್ಷ್ಮಿಯನ್ನು ಭಕ್ತಿಯಿಂದ ಪೂಜಿಸಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಈ ವರ್ಷ ವರಮಹಾಲಕ್ಷ್ಮಿ ಹಬ್ಬ ಆಗಸ್ಟ್ 16ರ ಶುಕ್ರವಾರ ಬಂದಿದೆ. ದಕ್ಷಿಣ ಭಾರತದ ವಿವಾಹಿತ ಮಹಿಳೆಯರು ಸಮೃದ್ಧಿಗಾಗಿ ಮತ್ತು ತಮ್ಮ ಕುಟುಂಬಗಳ ಯೋಗಕ್ಷೇಮಕ್ಕಾಗಿ ಈ ಪೂಜೆಯನ್ನು ವಿಶೇಷವಾಗಿ ಮಾಡುತ್ತಾರೆ. ಈ ದಿನ ವಿಶೇಷ ಭಕ್ಷ್ಯಗಳನ್ನು ತಯಾರಿಸಿ ದೇವಿಗೆ ನೈವೇದ್ಯ ಇಡುತ್ತಾರೆ. ಈ ಹಬ್ಬದಂದು ತಯಾರಿಸಬಹುದಾದ ಸುಲಭ ಹಾಗೂ ವಿಶೇಷ ಪಾಕವಿಧಾನಗಳ ವಿವರ ಇಲ್ಲಿದೆ.

VISTARANEWS.COM


on

Varamahalakshmi Festival 2024
Koo


ವರಮಹಾಲಕ್ಷ್ಮಿ ಹಬ್ಬ ಶ್ರಾವಣ ಮಾಸದ 2ನೇ ಶುಕ್ರವಾದಂದು ಆಚರಿಸಲು ಸಿದ್ಧತೆಗಳು ನಡೆಯುತ್ತಿವೆ. ಇದು ಮಹಿಳೆಯರಿಗೆ ಅತ್ಯಂತ ಪ್ರಿಯವಾದ ಹಬ್ಬವಾಗಿದೆ. ವರಮಹಾಲಕ್ಷ್ಮಿ ಎಂದರೆ ನೀವು ಈ ದಿನ ಲಕ್ಷ್ಮಿಯನ್ನು ಭಕ್ತಿಯಿಂದ ಪೂಜಿಸಿದರೆ ಆಕೆ ನಿಮಗೆ ವರಗಳನ್ನು ಕರುಣಿಸುತ್ತಾಳೆ ಎಂಬ ನಂಬಿಕೆ ಇದೆ. ಈ ವರ್ಷ ಈ ವರಮಹಾಲಕ್ಷ್ಮಿ ಹಬ್ಬ (Varamahalakshmi Festival 2024 )ಆಗಸ್ಟ್ 16ರ ಶುಕ್ರವಾರದಂದು ಬಂದಿದೆ. ದಕ್ಷಿಣ ಭಾರತದ ಹೆಚ್ಚಿನ ವಿವಾಹಿತ ಮಹಿಳೆಯರು ಸಮೃದ್ಧಿಗಾಗಿ ಮತ್ತು ತಮ್ಮ ಕುಟುಂಬಗಳ ಯೋಗಕ್ಷೇಮಕ್ಕಾಗಿ ಈ ಪೂಜೆಯನ್ನು ಶ್ರದ್ಧೆ ಭಕ್ತೆಯಿಂದ ಮಾಡುತ್ತಾರೆ. ಈ ದಿನ ವಿಶೇಷ ಭಕ್ಷ್ಯಗಳನ್ನು ತಯಾರಿಸಿ ದೇವಿಗೆ ನೈವೇದ್ಯ ಇಡುತ್ತಾರೆ. ಹಾಗಾಗಿ ಆ ದಿನ ತಯಾರಿಸಬಹುದಾದ ಸುಲಭ ಹಾಗೂ ವಿಶೇಷ ಪಾಕವಿಧಾನಗಳ ವಿವರ ಇಲ್ಲಿದೆ.

Varamahalakshmi Festival 2024
Varamahalakshmi Festival 2024

ಒಬ್ಬಟ್ಟು

ಒಬ್ಬಟ್ಟು ಒಂದು ಪ್ರಸಿದ್ಧ ಸಿಹಿತಿಂಡಿ. ಒಬ್ಬಟ್ಟು ಬೆಲ್ಲದಿಂದ ತಯಾರಿಸುವ ಸಿಹಿತಿಂಡಿಯಾಗಿದೆ. ಇದು ಲಕ್ಷ್ಮಿ ದೇವಿಗೆ ಪ್ರಿಯವಾದ ನೈವೇದ್ಯವಾಗಿದೆ ಮತ್ತು ಈ ಹಬ್ಬವನ್ನು ಆಚರಿಸುವ ಎಲ್ಲಾ ಮನೆಗಳಲ್ಲಿ ಇದನ್ನು ಸಾಮಾನ್ಯವಾಗಿ ತಯಾರಿಸುತ್ತಾರೆ.

Varamahalakshmi Festival 2024
Varamahalakshmi Festival 2024

ರವಾ ಉಂಡೆ

ವರ ಮಹಾಲಕ್ಷ್ಮಿ ಹಬ್ಬಕ್ಕೆ ತಯಾರಿಸಲಾಗುವ ಅತ್ಯಂತ ರುಚಿಕರವಾದ ಪಾಕವಿಧಾನವೆಂದರೆ ಅದು ರವಾ ಉಂಡೆ. ಇದನ್ನು ತಯಾರಿಸುವುದು ಬಹಳ ಸುಲಭ ಮತ್ತು ಇದನ್ನು ಹೆಚ್ಚಿನವರು ದೇವಿಯ ನೈವೇದ್ಯಕ್ಕೆ ಇಡುತ್ತಾರೆ.

Varamahalakshmi Festival 2024
Varamahalakshmi Festival 2024

ಶಾವಿಗೆ ಪಾಯಸ

ಪಾಯಸವು ದಕ್ಷಿಣ ಭಾರತದ ಸಾಂಪ್ರದಾಯಿಕ ಸಿಹಿ ತಿಂಡಿಯಾಗಿದೆ. ಇದನ್ನು ಹಾಲಿನಿಂದ ತಯಾರಿಸಲಾಗುತ್ತದೆ. ವರಮಹಾಲಕ್ಷ್ಮಿಗೆ ಪಾಯಸ ಬಹಳ ಇಷ್ಟವಾದ ಸಿಹಿಯಾಗಿದೆ. ಶಾವಿಗೆ ಪಾಯಸವನ್ನು ಬಹಳ ಸುಲಭವಾಗಿ ಕೇವಲ 20 ನಿಮಿಷಗಳಲ್ಲಿ ತಯಾರಿಸಬಹುದು.

Varamahalakshmi Festival 2024
Varamahalakshmi Festival 2024

ತಂಬಿಟ್ಟು

ನೈವೇದ್ಯಕ್ಕಾಗಿ ಲಕ್ಷ್ಮಿ ದೇವಿಗೆ ಬಡಿಸಲಾಗುವ ಮತ್ತೊಂದು ಸಿಹಿತಿಂಡಿ ತಂಬಿಟ್ಟು. ಇದನ್ನು ಸಾಮಾನ್ಯವಾಗಿ ಅಕ್ಕಿ ಹಿಟ್ಟು ಮತ್ತು ತುಪ್ಪವನ್ನು ಬಳಸಿ ತಯಾರಿಸಲಾಗುತ್ತದೆ. ಎಲ್ಲಾ ದೇವರ ಪೂಜೆಯಲ್ಲಿ ಇದನ್ನು ಬಳಸುತ್ತಾರೆ.

Varamahalakshmi Festival 2024
Varamahalakshmi Festival 2024

ಲೆಮನ್ ರೈಸ್

ನಿಂಬೆ, ತೆಂಗಿನಕಾಯಿ, ಕಡಲೆಕಾಯಿ ಮತ್ತು ಅಕ್ಕಿಯನ್ನು ಬಳಸಿಕೊಂಡು ಲೆಮನ್ ರೈಸ್ ಅನ್ನು ತಯಾರಿಸಲಾಗುತ್ತದೆ. ಇದನ್ನು ತಯಾರಿಸುವುದು ತುಂಬಾ ಸುಲಭ ಮತ್ತು ವರಮಹಾಲಕ್ಷ್ಮಿಹಬ್ಬವನ್ನು ಆಚರಿಸುವವವರು ಇದನ್ನು ಯಾವಾಗಲೂ ತಯಾರಿಸುತ್ತಾರೆ.

Varamahalakshmi Festival 2024
Varamahalakshmi Festival 2024

ಕೋಸಂಬರಿ

ವರಮಹಾಲಕ್ಷ್ಮಿ ಹಬ್ಬದ ಪ್ರಮುಖ ಪಾಕವಿಧಾನವೆಂದರೆ ಕೋಸಂಬರಿ. ಇದನ್ನು ಹೆಸರು ಬೇಳೆ ಮತ್ತು ಸೌತೆಕಾಯಿ ಬಳಸಿ ತಯಾರಿಸಲಾಗುತ್ತದೆ. ಇದು ಸೈಡ್ ಡಿಶ್ ಆಗಿದ್ದರೂ, ಕೋಸಂಬರಿ ಇಲ್ಲದೆ ಹಬ್ಬದ ಊಟವು ಪೂರ್ಣಗೊಳ್ಳುವುದಿಲ್ಲ.

Varamahalakshmi Festival 2024
Varamahalakshmi Festival 2024

ಅಂಬೋಡೆ

ಹಬ್ಬದಲ್ಲಿ ಮಸಾಲೆಯುಕ್ತ ರುಚಿಯನ್ನು ಸೇರಿಸಲು ಅಂಬೋಡೆಯನ್ನು ತಯಾರಿಸಬಹುದು. ಇದನ್ನು ಬೇಳೆಕಾಳುಗಳು, ಹಸಿರು ಮೆಣಸಿನಕಾಯಿ, ಪುದಿನಾ ಬಳಸಿ ತಯಾರಿಸಲಾಗುತ್ತದೆ. ಇದು ನಿಮಗೆ ರುಚಿಕರವಾದ ಮಸಾಲೆ ರುಚಿಯನ್ನು ನೀಡುತ್ತದೆ.

Varamahalakshmi Festival 2024
Varamahalakshmi Festival 2024

ತರಕಾರಿ ಸಾಂಬಾರ್

ಇದು ದಕ್ಷಿಣ ಭಾರತದಲ್ಲಿ ಬೇಳೆ ಬಳಸಿ ತಯಾರಿಸುವ ಪ್ರಸಿದ್ಧವಾದ ಖಾದ್ಯವಾಗಿದೆ. ನೀವು ಈ ಹಬ್ಬಕ್ಕೆ ಭೋಜನಕ್ಕೆ ವಿವಿಧ ತರಕಾರಿಗಳು ಮತ್ತು ಮಸಾಲೆಗಳೊಂದಿಗೆ ಸಾಂಬಾರ್ ತಯಾರಿಸಬಹುದು. ಇದನ್ನು ಬಿಸಿ ಅನ್ನ ಮತ್ತು ತುಪ್ಪದೊಂದಿಗೆ ಬಡಿಸಿದರೆ ಊಟದ ರುಚಿ ಹೆಚ್ಚಾಗುತ್ತದೆ.

Varamahalakshmi Festival 2024
Varamahalakshmi Festival 2024

ರಸಂ

ವರಮಹಾಲಕ್ಷ್ಮಿ ಹಬ್ಬದ ಊಟಕ್ಕೆ ರಸಂ ಅನ್ನು ತಯಾರಿಸುತ್ತಾರೆ. ರಸಂ ಅನ್ನು ಟೊಮೆಟೊ, ಹುಣಸೆ ಮತ್ತು ತೆಂಗಿನಕಾಯಿಯಿಂದ ತಯಾರಿಸಲಾಗುತ್ತದೆ. ಈ ರಸಂ ಅನ್ನು ಬಿಸಿ ಅನ್ನ ಮತ್ತು ಪಲ್ಯದ ಜೊತೆಗೆ ತಿಂದರೆ ಹಬ್ಬದ ಸಡಗರ ಹೆಚ್ಚಾಗುತ್ತದೆ.

Varamahalakshmi Festival 2024
Varamahalakshmi Festival 2024

ಮಜ್ಜಿಗೆ ಹುಳಿ

ವರಮಹಾಲಕ್ಷ್ಮಿ ಹಬ್ಬದಂದು ವಿಶೇಷ ಮಜ್ಜಿಗೆ ಹುಳಿ (ಮೊಸರು ಸಾಂಬಾರ್) ತಯಾರಿಸಲಾಗುತ್ತದೆ. ಈ ಸಾಂಬಾರ್ ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಉತ್ತಮ ರುಚಿಯನ್ನು ನೀಡುತ್ತದೆ. ಇದನ್ನು ಹಸಿ ಮೆಣಸಿನಕಾಯಿ, ತೆಂಗಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಕಡಲೆ ಬಳಸಿ ತಯಾರಿಸಲಾಗುತ್ತದೆ.

ಇದನ್ನೂ ಓದಿ:Shravan 2024: ಶ್ರಾವಣ ಶುಕ್ರವಾರದ ವಿಶೇಷವೇನು? ಅಂದು ಏನು ಮಾಡಬೇಕು? ಏನು ಮಾಡಬಾರದು?

ಈ ರೀತಿಯ ಪಾಕವಿಧಾನಗಳನ್ನು ವರಮಹಾಲಕ್ಷ್ಮಿ ಹಬ್ಬಕ್ಕೆ ತಯಾರಿಸಿ ಅತಿಥಿಗಳಿಗೆ ಬಡಿಸಿದರೆ ಹಬ್ಬದ ಸಂಭ್ರಮ ಹೆಚ್ಚುವುದರಲ್ಲಿ ಸಂದೇಹವೇ ಇಲ್ಲ.

Continue Reading

ದೇಶ

Independence Day 2024: ಮನೆಮನೆಯಲ್ಲೂ ಉಲ್ಲಾಸ, ಉತ್ಸಾಹ ತುಂಬುವ ಸ್ವಾತಂತ್ರ್ಯೋತ್ಸವದ ಹಿನ್ನೋಟ

ಸ್ವಾತಂತ್ರ್ಯ ದಿನಾಚರಣೆಯು ಭಾರತವನ್ನು ಬ್ರಿಟಿಷ್ ಆಳ್ವಿಕೆಯಿಂದ ಮುಕ್ತಗೊಳಿಸಲು ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ತ್ಯಾಗ ಮತ್ತು ಬಲಿದಾನವನ್ನು ನೆನಪಿಸುತ್ತದೆ. 1947ರ ಆಗಸ್ಟ್ 15ರಂದು ಭಾರತವನ್ನು ಬ್ರಿಟಿಷ್ ಸಾಮ್ರಾಜ್ಯಶಾಹಿಯಿಂದ ಮುಕ್ತಗೊಳಿಸಲಾಯಿತು. 78ನೇ ಸ್ವಾತಂತ್ರ್ಯ ದಿನಾಚರಣೆಯ (Independence day 2024) ಈ ಸಂದರ್ಭದಲ್ಲಿ ದೇಶಾದ್ಯಂತ ಸ್ವಾತಂತ್ರ್ಯ ದಿನವನ್ನು ಹೇಗೆ ಆಚರಿಸಲಾಗುತ್ತದೆ ಮತ್ತು ಇದರ ಇತಿಹಾಸದ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

By

Independence day 2024
Koo

ಭಾರತದಾದ್ಯಂತ 78ನೇ ಸ್ವಾತಂತ್ರ್ಯ ದಿನಕ್ಕೆ (Independence day 2024) ಕ್ಷಣಗಣನೆ ಆರಂಭವಾಗಿದೆ. “ವಿಕಸಿತ ಭಾರತ” (Viksit Bharat) ಸಂದೇಶದೊಂದಿಗೆ ಈ ಬಾರಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತಿದೆ. ಭಾರತದ 100ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಅಂದರೆ 2047ರ ವೇಳೆಗೆ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಪರಿವರ್ತಿಸುವ ಕೇಂದ್ರ ಸರ್ಕಾರದ ಗುರಿಯನ್ನು ಇದು ಪ್ರತಿಬಿಂಬಿಸುತ್ತದೆ.

ಸ್ವಾತಂತ್ರ್ಯ ದಿನಾಚರಣೆಯು ಭಾರತವನ್ನು ಬ್ರಿಟಿಷ್ ಆಳ್ವಿಕೆಯಿಂದ ಮುಕ್ತಗೊಳಿಸಲು ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ಎಲ್ಲಾ ತ್ಯಾಗಗಳನ್ನು ನೆನಪಿಸುತ್ತದೆ. 1947ರ ಆಗಸ್ಟ್ 15ರಂದು ಭಾರತವನ್ನು ಬ್ರಿಟಿಷ್ ಸಾಮ್ರಾಜ್ಯಶಾಹಿಯಿಂದ ಮುಕ್ತಗೊಳಿಸಲಾಯಿತು ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾದ ಮತ ಆಧಾರಿತ ವ್ಯವಸ್ಥೆಯಾಗಿ ಪರಿವರ್ತಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ ದೇಶಾದ್ಯಂತ ಸ್ವಾತಂತ್ರ್ಯ ದಿನವನ್ನು ಹೇಗೆ ಆಚರಿಸಲಾಗುತ್ತದೆ, ಇದರ ಇತಿಹಾಸದ ಕುರಿತ ಹಿನ್ನೋಟ ಇಲ್ಲಿದೆ.

ಇತಿಹಾಸ ಅವಲೋಕನ


ಕಠಿಣ ಹೋರಾಟದ ಬಳಿಕ 1947ರ ಆಗಸ್ಟ್ 15ರಂದು ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಮೊದಲ ಬಾರಿಗೆ ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದರು. ಇದು ಭಾರತದಲ್ಲಿ 200 ವರ್ಷಗಳಷ್ಟು ಹಳೆಯದಾದ ಬ್ರಿಟಿಷರ ಆಳ್ವಿಕೆಯನ್ನು ಅಧಿಕೃತವಾಗಿ ಕೊನೆಗೊಳಿಸಿತು.

ಬ್ರಿಟಿಷ್ ಆಳ್ವಿಕೆಯಲ್ಲಿ ಪ್ರತಿಯೊಬ್ಬ ಭಾರತೀಯನನ್ನು ಗುಲಾಮರಂತೆ ಪರಿಗಣಿಸಲಾಗುತ್ತಿತ್ತು. ವಾಕ್ ಸ್ವಾತಂತ್ರ್ಯ ಇರಲಿಲ್ಲ. ಬ್ರಿಟಿಷ್ ಶಿಬಿರಗಳಲ್ಲಿ ಭಾರತೀಯ ಹೋರಾಟಗಾರರನ್ನು ಕ್ರೌರ್ಯದಿಂದ ನಡೆಸಿಕೊಳ್ಳಲಾಗುತ್ತಿತ್ತು. ರೈತರು ಬೆಳೆಗಳನ್ನು ಬೆಳೆಯಲು ಸಾಧ್ಯವಾಗದೆ ಹಸಿವಿನಿಂದ ಬಳಲುತ್ತಿದ್ದರು ಮತ್ತು ಗಣನೀಯ ಭೂ ತೆರಿಗೆಯನ್ನು ಪಾವತಿಸಬೇಕಾಗಿತ್ತು.


ಇಂತಹ ಪರಿಸ್ಥಿತಿಯಲ್ಲಿ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ಪ್ರಯತ್ನವಿಲ್ಲದೆ ಭಾರತವು ಸ್ವಾತಂತ್ರ್ಯವನ್ನು ಗಳಿಸಲು ಸಾಧ್ಯವಾಗುತ್ತಿರಲಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡಲು ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಸುಭಾಷ್ ಚಂದ್ರ ಬೋಸ್, ಮೌಲಾನಾ ಅಬುಲ್ ಕಲಾಂ ಆಜಾದ್, ಸರ್ದಾರ್ ಪಟೇಲ್ ಮತ್ತು ಗೋಪಾಲಬಂಧು ದಾಸ್, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಶ್ಫಾಕುಲ್ಲಾ ಖಾನ್ ಅವರಂತಹ ಅನೇಕ ನಾಯಕರು ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಪುರುಷರು ಮಾತ್ರವಲ್ಲ ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಹಲವಾರು ಮಹಿಳೆಯರೂ ಮಹತ್ವದ ಪಾತ್ರ ವಹಿಸಿದ್ದಾರೆ. ಸಾವಿತ್ರಿಬಾಯಿ ಫುಲೆ, ಮಹಾದೇವಿ ವರ್ಮಾ, ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್, ರಾಣಿ ಲಕ್ಷ್ಮೀಬಾಯಿ ಮತ್ತು ಬಸಂತಿ ದೇವಿ ಸೇರಿದಂತೆ ಇನ್ನು ಅನೇಕರು ದೇಶಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟಿದ್ದರು.

‘ಒಳ್ಳೆಯ’ ಬ್ರಿಟಿಷ್ ಆಡಳಿತಗಾರರೂ ಇದ್ದರು!

ಎಲ್ಲಾ ಬ್ರಿಟಿಷರು ಕೆಟ್ಟವರಾಗಿರಲಿಲ್ಲ. ಕೆಲವರು ಅನೇಕ ಸುಧಾರಣೆಗಳನ್ನು ತಂದಿದ್ದಾರೆ. ಇವರಲ್ಲಿ ವಾರೆನ್ ಹೇಸ್ಟಿಂಗ್ಸ್ ಅವರು ನ್ಯಾಯಾಲಯದ ಸುಧಾರಣೆಗಳನ್ನು ಅಭಿವೃದ್ಧಿಪಡಿಸಿದರು. ಭಾರತೀಯ ರಾಷ್ಟ್ರೀಯತೆಯನ್ನು ಬೆಂಬಲಿಸಿದ ಫ್ರೆಡಾ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಾರಂಭಿಸಿದ ಅಲನ್ ಆಕ್ಟೇವಿಯನ್ ಹ್ಯೂಮ್ ಇವರಲ್ಲಿ ಪ್ರಮುಖರು.

ಯಾಕೆ ಸ್ವಾತಂತ್ರ್ಯ ದಿನಾಚರಣೆ?

ಭಾರತವು 200 ವರ್ಷಗಳ ಸುದೀರ್ಘ ಹೋರಾಟದ ಬಳಿಕ ಸ್ವಾತಂತ್ರ್ಯವನ್ನು ಸಾಧಿಸಿತು. 1947ರ ಆಗಸ್ಟ್ 15ರಂದು ಬ್ರಿಟಿಷರಿಂದ ಸಂಪೂರ್ಣ ಸ್ವಾತಂತ್ರ್ಯವನ್ನು ಗಳಿಸಿತು. ಅದಕ್ಕಾಗಿಯೇ ಭಾರತ ಅಥವಾ ವಿದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ಭಾರತೀಯ ಪ್ರಜೆಯ ಹೃದಯದಲ್ಲಿ ಈ ದಿನವು ಪ್ರಾಮುಖ್ಯತೆಯನ್ನು ಪಡೆದಿದೆ. ಈ ದಿನ ಪ್ರತಿಯೊಬ್ಬ ಭಾರತೀಯನೊಳಗೆ ದೇಶಭಕ್ತಿಯನ್ನು ಉದ್ದೀಪಿಸುತ್ತದೆ. ಪ್ರಸ್ತುತ ಪೀಳಿಗೆಗೆ ತಮ್ಮ ಸ್ವಾತಂತ್ರ್ಯದ ಹಿಂದಿರುವ ವ್ಯಕ್ತಿಗಳ ಹೋರಾಟಗಳನ್ನು ಅರ್ಥಮಾಡಿಕೊಳ್ಳುವಂತೆ ಮಾಡುತ್ತದೆ. ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನು ಪರಿಚಯಿಸಿಕೊಳ್ಳುವಂತೆ ಮಾಡುತ್ತದೆ.


ಸ್ವಾತಂತ್ರ್ಯ ದಿನಾಚರಣೆಯ ಮಹತ್ವ ಏನು?

ಬ್ರಿಟಿಷರ ಆಳ್ವಿಕೆಯಿಂದ ನಾವು ಮುಕ್ತವಾದ ಬಳಿಕ ಸ್ವಾತಂತ್ರ್ಯ ದಿನವು ದೇಶಕ್ಕೆ ಸಕಾರಾತ್ಮಕ ಐತಿಹಾಸಿಕ ಘಟನೆಯ ಸಾಕ್ಷಿಯಾಗಿದೆ. ಇದು ದೇಶದಾದ್ಯಂತ ವಿವಿಧ ಜಾತಿ. ಧರ್ಮ, ಜನಾಂಗದ ವ್ಯಕ್ತಿಗಳನ್ನು ಒಂದುಗೂಡಿಸುತ್ತದೆ. ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತದೆ. ಭಾರತದ ಮೂಲಭೂತ ತತ್ವ ಮತ್ತು ಶಕ್ತಿಯನ್ನು ಅರ್ಥಮಾಡಿಸುತ್ತದೆ. ಭಾರತವು ಈ ಭೂಮಿಯ ಮೇಲಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ. ಸ್ವಾತಂತ್ರ್ಯ ದಿನಾಚರಣೆಯು ಪ್ರತಿಯೊಬ್ಬ ಭಾರತೀಯ ಪ್ರಜೆಯ ಜೀವನದಲ್ಲಿ ಒಂದು ಪ್ರಮುಖ ದಿನವಾಗಿದೆ. ಇದು ನಮ್ಮ ಮಾತೃಭೂಮಿಯನ್ನು ಬ್ರಿಟಿಷ್ ಆಳ್ವಿಕೆಯಿಂದ ಮುಕ್ತಗೊಳಿಸಲು ತಮ್ಮ ಜೀವನವನ್ನು ತ್ಯಾಗ ಮಾಡಿದ ಮತ್ತು ಹೋರಾಡಿದ ನಮ್ಮ ಮಹಾನ್ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುತ್ತದೆ.


ಸ್ವಾತಂತ್ರ್ಯ ದಿನದ ಚಟುವಟಿಕೆಗಳು ಏನೇನು?

ತ್ರಿವರ್ಣ ಧ್ವಜಾರೋಹಣ ಸ್ವಾತಂತ್ರ್ಯ ದಿನಾಚರಣೆಯ ಕೇಂದ್ರ ಬಿಂದು. ದೆಹಲಿಯ ಕೆಂಪು ಕೋಟೆಯ ಮೇಲೆ ದೇಶದ ಪ್ರಧಾನಮಂತ್ರಿಯವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಕಳೆದ ವರ್ಷದ ಸರ್ಕಾರದ ಸಾಧನೆಗಳನ್ನು ಕೇಂದ್ರೀಕರಿಸುವ ಭಾಷಣ ಮಾಡುತ್ತಾರೆ.

ಇದನ್ನೂ ಓದಿ: Hindus in Bangla: ಬಾಂಗ್ಲಾದಲ್ಲಿ ಹಿಂದೂ ಆಗಿರುವುದೇ ಅಪರಾಧ; ಕರಾಳ ದಿನ ನೆನಪಿಸಿಕೊಳ್ಳುವ ವಲಸಿಗರು; ವಿಡಿಯೊಗಳಿವೆ

ಇನ್ನೂ ಗಮನಹರಿಸಬೇಕಾದ ವಿಷಯಗಳನ್ನು ಪ್ರಸ್ತಾಪಿಸುತ್ತಾರೆ. ಮತ್ತಷ್ಟು ಅಭಿವೃದ್ಧಿ ಪ್ರಯತ್ನಗಳಿಗೆ ಕರೆ ನೀಡುತ್ತಾರೆ. ಈ ಸಂದರ್ಭದಲ್ಲಿ ವಿದೇಶಿ ಗಣ್ಯರನ್ನು ಸಹ ಆಹ್ವಾನಿಸಲಾಗುತ್ತದೆ.
ಇದೇ ಸಂದರ್ಭದಲ್ಲಿ ಪ್ರಾಣ ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ. ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲೂ ಆಯಾ ರಾಜ್ಯಗಳ ಮುಖ್ಯಮಂತ್ರಿಗಳು ರಾಷ್ಟ್ರಧ್ವಜ ಹಾರಿಸುತ್ತಾರೆ. ಶಾಲೆ, ಕಾಲೇಜು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲೂ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಾಗುತ್ತದೆ.

Continue Reading

ವಿದೇಶ

Foreign Conspiracy: ಬಾಂಗ್ಲಾ ನೆಪದಲ್ಲಿ ದೇಶ ಅಸ್ಥಿರಗೊಳಿಸುವ ಹುನ್ನಾರ; ವಿದೇಶಿ ಸಂಚನ್ನು ಭಾರತ ತಡೆದಿದ್ದು ಹೇಗೆ?

Foreign Conspiracy: ಭಾರತ-ಬಾಂಗ್ಲಾದೇಶ ಗಡಿಯಲ್ಲಿನ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ಭಾರತೀಯ ಸೇನೆಯ ಪೂರ್ವ ಕಮಾಂಡ್‌ನ ಎಡಿಜಿ ನೇತೃತ್ವದ ಸಮಿತಿಯನ್ನು ರಚಿಸಿರುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಘೋಷಿಸಿದ್ದರು. ಈ ಸಮಿತಿಯು ಬಾಂಗ್ಲಾದೇಶದಲ್ಲಿ ಭಾರತೀಯ ಪ್ರಜೆಗಳು, ಹಿಂದೂಗಳು ಮತ್ತು ತೊಂದರೆಗೊಳಗಾದ ದೇಶದಲ್ಲಿ ವಾಸಿಸುವ ಇತರ ಅಲ್ಪಸಂಖ್ಯಾತ ಸಮುದಾಯಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಕೆಲಸವನ್ನು ಮಾಡುತ್ತಿದೆ.

VISTARANEWS.COM


on

By

Foreign Conspiracy
Koo

ನೆರೆಹೊರೆಯ ರಾಷ್ಟ್ರಗಳಲ್ಲಿ ಮುಖ್ಯವಾಗಿ ಭಾರತದ ಗಡಿಯನ್ನು (Indian border) ಹಂಚಿಕೊಂಡಿರುವ ಬಾಂಗ್ಲಾದಲ್ಲಿ (Bangladesh Unrest) ಸಾಮಾಜಿಕ ಅಶಾಂತಿ, ರಾಜಕೀಯ ಅಸ್ಥಿರತೆ ಉಂಟಾಗಿದ್ದರೂ ಇದು ಭಾರತದ ಮೇಲೆ ಯಾವುದೇ ಪ್ರಭಾವವನ್ನು ಬೀರಿಲ್ಲ. ರಾಷ್ಟ್ರವನ್ನು ಅಸ್ಥಿರಗೊಳಿಸುವ ಗುರಿ ಹೊಂದಿರುವ ವಿದೇಶಿ ಹಸ್ತಕ್ಷೇಪಗಳನ್ನು (Foreign Conspiracy) ತಡೆಗಟ್ಟುವ ಮೂಲಕ ಭಾರತದೊಳಗೆ ಉದ್ಭವವಾಗಬಹುದಾಗಿದ್ದ ಬಾಂಗ್ಲಾದಂತಹ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ಯಶಸ್ವಿಯಾಗಿ ತಪ್ಪಿಸಿದೆ. ಭಾರತದೊಳಗೆ ಅಶಾಂತಿಯನ್ನು ಪ್ರಚೋದಿಸಲು ಬಾಹ್ಯ ಶಕ್ತಿಗಳ ಮೂಲಕ ಪ್ರಯತ್ನಗಳು ನಡೆದಿದ್ದರೂ ಭಾರತ ಸರ್ಕಾರದ ಪೂರ್ವಭಾವಿ ಕ್ರಮಗಳು ದೇಶವು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸುರಕ್ಷಿತವಾಗಿ ಉಳಿಯುವಂತೆ ಮಾಡಿದೆ.


ಭಾರತ- ಬಾಂಗ್ಲಾದೇಶ ಗಡಿಯಲ್ಲಿನ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ಭಾರತೀಯ ಸೇನೆಯ ಪೂರ್ವ ಕಮಾಂಡ್‌ನ ಎಡಿಜಿ ನೇತೃತ್ವದ ಸಮಿತಿಯನ್ನು ರಚಿಸಿರುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಘೋಷಿಸಿದ್ದರು. ಈ ಸಮಿತಿಯು ಬಾಂಗ್ಲಾದೇಶದಲ್ಲಿ ಭಾರತೀಯ ಪ್ರಜೆಗಳು, ಹಿಂದೂಗಳು ಮತ್ತು ತೊಂದರೆಗೊಳಗಾದ ದೇಶದಲ್ಲಿ ವಾಸಿಸುವ ಇತರ ಅಲ್ಪಸಂಖ್ಯಾತ ಸಮುದಾಯಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಕೆಲಸವನ್ನು ಮಾಡುತ್ತಿದೆ. ನೆರೆಹೊರೆಯ ರಾಷ್ಟ್ರದಲ್ಲಿ ಉಂಟಾಗಿರುವ ಪರಿಸ್ಥಿತಿಯು ದೇಶದೊಳಗೆ ಪ್ರಭಾವ ಬೀರದಂತೆ ಯಶಸ್ವಿಯಾಗಿ ತಡೆಗಟ್ಟಿದ ಭಾರತದ ಕ್ರಮಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.


ಇನ್‌ಸ್ಟಿಟ್ಯೂಟ್ ಆಫ್ ಪೀಸ್ ಆಂಡ್ ಕಾನ್‌ಫ್ಲಿಕ್ಟ್ ಸ್ಟಡೀಸ್‌ನಲ್ಲಿ (IPCS) ಹಿರಿಯ ಫೆಲೋ ಆಗಿರುವ ಅಭಿಜಿತ್ ಅಯ್ಯರ್ ಮಿತ್ರ ಅವರು ಮಾತನಾಡಿ, ಭಾರತದ ದೃಢವಾದ ವಿದೇಶಾಂಗ ನೀತಿ ಮತ್ತು ವಿದೇಶಿ ಎನ್‌ಜಿಒ ನಿಧಿಯ ಕಟ್ಟುನಿಟ್ಟಾದ ನಿಯಂತ್ರಣ ಭಾರತವನ್ನು ಸುರಕ್ಷಿತವಾಗಿ ಇರಿಸಿದೆ. ಒಮಿಡ್ಯಾರ್ ಮತ್ತು ಹಿಂಡೆನ್‌ಬರ್ಗ್‌ನಂತಹ ಗುಂಪುಗಳು ಭಾರತವನ್ನು ಅಸ್ಥಿರಗೊಳಿಸಲು ಉದ್ದೇಶಪೂರ್ವಕವಾಗಿ ಟೀಕಿಸುತ್ತಿವೆ. ಸರ್ಕಾರದ ಬಲವಾದ ನಿಲುವು ಗಮನಾರ್ಹ ಹಾನಿಯನ್ನುಂಟು ಮಾಡುವುದನ್ನು ತಪ್ಪಿಸಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Foreign Conspiracy
Foreign Conspiracy


ವಿದೇಶಾಂಗ ನೀತಿ ಮತ್ತು ರಾಜಕೀಯ ಆರ್ಥಿಕತೆಯಲ್ಲಿ ಪರಿಣಿತರಾದ ಪ್ರಮಿತ್ ಪಾಲ್ ಚೌಧುರಿ ಈ ಕುರಿತು ಮಾತನಾಡಿ, 1971ರಿಂದ ಬಾಂಗ್ಲಾದಲ್ಲಿ ಹಿಂದೂಗಳು ರಾಜಕೀಯ ಮತ್ತು ಧಾರ್ಮಿಕ ಮೂಲಭೂತವಾದಿಗಳ ದಾಳಿಗಳನ್ನು ಎದುರಿಸುತ್ತಿದ್ದಾರೆ. ಅಲ್ಲಿ ಬಂಗಾಳಿ ಬೌದ್ಧಿಕ ವರ್ಗವನ್ನು ಉದ್ದೇಶಪೂರ್ವಕವಾಗಿ ನಿರ್ಮೂಲನೆ ಮಾಡಲಾಗಿದೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: Hindus in Bangla: ಬಾಂಗ್ಲಾದಲ್ಲಿ ಹಿಂದೂ ಆಗಿರುವುದೇ ಅಪರಾಧ; ಕರಾಳ ದಿನ ನೆನಪಿಸಿಕೊಳ್ಳುವ ವಲಸಿಗರು; ವಿಡಿಯೊಗಳಿವೆ

ಈ ಸವಾಲುಗಳನ್ನು ಎದುರಿಸುವಲ್ಲಿ ಭಾರತವು ಯಶಸ್ವಿಯಾಗಿದೆ. ಇತ್ತೀಚೆಗೆ ಕೃಷಿ ಕಾನೂನುಗಳ ವಿರುದ್ಧ ನಡೆದ ಪ್ರತಿಭಟನೆಗಳ ಮೇಲೆ ಪ್ರಭಾವ ಬೀರಲು ಅಂತಾರಾಷ್ಟ್ರೀಯ ವ್ಯಕ್ತಿಗಳು ಪ್ರಯತ್ನಿಸಿದರೂ ಭಾರತ ಸರ್ಕಾರವು ದೃಢವಾಗಿ ಇದನ್ನು ಎದುರಿಸಿತು. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭಾರತವು ಜಾಗತಿಕ ಶಕ್ತಿಯಾಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿದೆ. ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿಯಲು ಮತ್ತು ರಾಷ್ಟ್ರೀಯ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ ಎಂಬುದನ್ನು ಹಲವಾರು ಮಂದಿ ಒಪ್ಪಿಕೊಂಡಿದ್ದಾರೆ ಎಂದು ಔಧರಿ ಹೇಳಿದ್ದಾರೆ.

ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಈ ಸುದ್ದಿ ಜತೆ ಕೊಟ್ಟಿರುವ ವಿಡಿಯೊ ನೋಡಿ.

Continue Reading

ವಾಣಿಜ್ಯ

Palika Bazar: ಬೆಂಗಳೂರಿನಲ್ಲೂ ದೆಹಲಿಯಂತಹ ʼಪಾಲಿಕಾ ಬಜಾರ್ʼ; ಎಲ್ಲಿ ನಿರ್ಮಾಣ? ಯಾವಾಗ ಆರಂಭ?

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಯೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇರುವಂತ ಅಗ್ಗದ ಬಟ್ಟೆ, ಎಲೆಕ್ಟ್ರಾನಿಕ್ ವಸ್ತುಗಳಿಗೆ ಹೆಸರುವಾಸಿಯಾಗಿರುವ ಪಾಲಿಕಾ ಬಜಾರ್ (Palika Bazar) ನಿರ್ಮಾಣವಾಗಲಿದೆ. ಆಗಸ್ಟ್ ತಿಂಗಳ ಅಂತ್ಯದ ವೇಳೆಗೆ ಇದು ಬೆಂಗಳೂರಿನ ವಿಜಯನಗರದಲ್ಲಿ ತೆರೆಯುವ ನಿರೀಕ್ಷೆ ಇದ್ದು, ಇದರ ಕಾರ್ಯಗಳು ಬಹುತೇಕ ಪೂರ್ಣಗೊಂಡಿದೆ.

VISTARANEWS.COM


on

By

Palika Bazar
Koo

ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಗೆ (Delhi) ಭೇಟಿ ಕೊಟ್ಟವರು ಅಲ್ಲಿರುವ ಅಗ್ಗದ ಬಟ್ಟೆ, ಎಲೆಕ್ಟ್ರಾನಿಕ್ ವಸ್ತುಗಳಿಗೆ ಹೆಸರುವಾಸಿಯಾಗಿರುವ ಪಾಲಿಕಾ ಬಜಾರ್ (Palika Bazar) ಸಿಲಿಕಾನ್ ಸಿಟಿ ಬೆಂಗಳೂರಲ್ಲೂ (Silicon City bengaluru) ಇದ್ದಿದ್ದರೆ ಎಷ್ಟು ಚೆನ್ನಾಗಿ ಇರುತ್ತಿತ್ತು ಎಂದು ಯೋಚಿಸದೆ ಇರಲಾರರು. ಇನ್ನು ಈ ಬಗ್ಗೆ ಕನಸು ಕಾಣಬೇಕಿಲ್ಲ. ಯಾಕೆಂದರೆ ದೆಹಲಿಯಲ್ಲಿರುವಂತೆಯೇ ಬೆಂಗಳೂರು ತನ್ನದೇ ಆದ ಪಾಲಿಕಾ ಬಜಾರ್ ಅನ್ನು ಶೀಘ್ರದಲ್ಲೇ ಹೊಂದಲಿದೆ. ದೆಹಲಿಯಲ್ಲಿ ಇರುವಂತ ಪಾಲಿಕಾ ಬಜಾರ್ ಆಗಸ್ಟ್ ತಿಂಗಳಾಂತ್ಯದ ವೇಳೆ ಬೆಂಗಳೂರಿನಲ್ಲಿ ಉದ್ಘಾಟನೆಯಾಗಲಿದೆ.

ಎಲ್ಲಿ ಹೇಗೆ?

ದೆಹಲಿಯ ಪಾಲಿಕಾ ಬಜಾರ್ ಅಂಡರ್‌ ಗ್ರೌಂಡ್‌ ಶಾಪಿಂಗ್ ಕೇಂದ್ರವಾಗಿದೆ. ಪಶ್ಚಿಮ ಬೆಂಗಳೂರಿನ ವಿಜಯನಗರದಲ್ಲಿ ಇದನ್ನು ನಿರ್ಮಿಸಲಾಗುತ್ತಿದೆ. ಸಂಪೂರ್ಣ ಹವಾನಿಯಂತ್ರಿತ ಮಾರುಕಟ್ಟೆಯು ವಿಜಯನಗರ ಮೆಟ್ರೋ ನಿಲ್ದಾಣದ ಸಮೀಪದಲ್ಲಿದೆ ಮತ್ತು ಸ್ಥಳೀಯರಿಗೆ ಸುಲಭವಾಗಿ ಇಲ್ಲಿಗೆ ತಲುಪುವ ವ್ಯವಸ್ಥೆ ಇದೆ.


ಒಂದು ಕಾಲದಲ್ಲಿ ಆ ಸ್ಥಳದಲ್ಲಿ 150ಕ್ಕೂ ಹೆಚ್ಚು ಮಾರಾಟಗಾರರು ತಾಜಾ ತರಕಾರಿ, ಹೂವುಗಳಿಂದ ಹಿಡಿದು ದೈನಂದಿನ ಅಗತ್ಯ ವಸ್ತುಗಳವರೆಗೆ ಇಲ್ಲಿ ಎಲ್ಲವನ್ನೂ ಮಾರಾಟ ಮಾಡುತ್ತಿದ್ದರು. ಹೊಸದಾಗಿ ನಿರ್ಮಿಸುವ ಸಲುವಾಗಿ ಈ ರಸ್ತೆಯನ್ನು ಅಧಿಕಾರಿಗಳು 2017ರಲ್ಲಿ ತೆರವುಗೊಳಿಸಿದ್ದರು. ಇದೀಗ ಆಧುನಿಕ ಅಂಡರ್‌ ಗ್ರೌಂಡ್‌ ಮಾರುಕಟ್ಟೆಯ ಸ್ಥಳ ಅಲ್ಲಿ ತಲೆ ಎತ್ತಲಿದೆ. ಈ ವಿಸ್ತಾರವಾದ ಮಾರುಕಟ್ಟೆಯು ನೂರು ಮೀಟರ್ ಉದ್ದ ಮತ್ತು ಹನ್ನೊಂದು ಮೀಟರ್ ಅಗಲವನ್ನು ಹೊಂದಿದೆ. 3 ಮೀಟರ್ ಅಗಲದ ಪಾದಚಾರಿ ಕಾಲುದಾರಿಯ ಎರಡೂ ಬದಿಯಲ್ಲಿ 75ಕ್ಕೂ ಹೆಚ್ಚು ಅಂಗಡಿಗಳನ್ನು ಅಚ್ಚುಕಟ್ಟಾಗಿ ಹೊಂದಿಸಲಾಗಿದೆ.


ಪಾಲಿಕಾ ಬಜಾರ್‌ನಲ್ಲಿರುವ ಸೌಲಭ್ಯಗಳು ಏನೇನು?

ಈ ಮಾರುಕಟ್ಟೆಯು ಆಧುನಿಕ ಮತ್ತು ಆರಾಮದಾಯಕವಾಗಿದ್ದು, ದೆಹಲಿಯ ಶಾಪಿಂಗ್ ಸೆಂಟರ್‌ಗಳ ಶೈಲಿಯಲ್ಲಿದೆ. ಹವಾನಿಯಂತ್ರಣ, ಸ್ವಯಂ ಚಾಲಿತ ಸ್ಲೈಡಿಂಗ್ ಬಾಗಿಲುಗಳು, ಎಸ್ಕಲೇಟರ್‌ಗಳು ಮತ್ತು ಎಲಿವೇಟರ್‌ಗಳನ್ನು ಹೊಂದಿದೆ. ವಿಶೇಷವಾಗಿ ವಿನ್ಯಾಸಗೊಳಿಸಿರುವ ಈ ಯೋಜನೆಯನ್ನು ನಗರೋತ್ಥಾನ ಯೋಜನೆಯಡಿ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸಂದರ್ಶಕರ ಅನುಕೂಲಕ್ಕಾಗಿ ಎರಡು ಪ್ರವೇಶ ದ್ವಾರಗಳನ್ನು ಮತ್ತು ಪ್ರವಾಹವನ್ನು ತಪ್ಪಿಸಲು ನೀರಿನ ಪೈಪ್‌ಲೈನ್ ವ್ಯವಸ್ಥೆಯನ್ನು ಇರಿಸಲಾಗಿದೆ. ಮಳೆ ನೀರನ್ನು ನೇರವಾಗಿ ಚರಂಡಿಗಳಿಗೆ ಹರಿಸುವ ವ್ಯವಸ್ಥೆ ಇದೆ.

ಇದನ್ನೂ ಓದಿ: Hindenburg Report : ಮೋದಿ ಹೆದರುತ್ತಿದ್ದಾರೆ; ಹಿಂಡೆನ್​ಬರ್ಗ್​ ವರದಿ ಉಲ್ಲೇಖಿಸಿ ಸೆಬಿ, ಪ್ರಧಾನಿಯನ್ನು ಟೀಕಿಸಿದ ರಾಹುಲ್ ಗಾಂಧಿ

ವರ್ತಕರ ಆತಂಕ

ಸ್ಥಳೀಯ ಮಾರುಕಟ್ಟೆಯ ಮಾರಾಟಗಾರರು ಈಗಾಗಲೇ ಕಷ್ಟದಲ್ಲಿದ್ದಾರೆ. ಮುಂಬರುವ ಬಜಾರ್‌ಗಾಗಿ ಮಾರಾಟಗಾರರ ಆಯ್ಕೆ ಪ್ರಕ್ರಿಯೆಯ ಬಗ್ಗೆ ಇನ್ನೂ ಖಚಿತವಾಗಿಲ್ಲ. ಹೀಗಾಗಿ ಇದು ಸ್ಥಳೀಯ ವರ್ತಕರಲ್ಲಿ ಆತಂಕ ಹೆಚ್ಚಿಸಿದೆ ಎನ್ನುವ ಅಭಿಪ್ರಾಯವೂ ಕೇಳಿ ಬರುತ್ತಿದೆ.

ದೆಹಲಿ ಪಾಲಿಕೆ ಬಜಾರ್‌ ಹೇಗಿದೆ ಎಂಬ ವಿಡಿಯೊ ಈ ಸುದ್ದಿಯ ಜತೆಗಿದೆ. ಗಮನಿಸಿ…

Continue Reading
Advertisement
DK Shivakumar
ಕರ್ನಾಟಕ2 mins ago

DK Shivakumar: ಡಿಕೆಶಿ ವಿರುದ್ಧದ ಸಿಬಿಐ ತನಿಖೆ ಹಿಂಪಡೆದ ಪ್ರಕರಣ; ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

Varamahalakshmi Festival 2024
Latest11 mins ago

Varamahalakshmi Festival 2024 : ವರಮಹಾಲಕ್ಷ್ಮಿ ಹಬ್ಬದ ದಿನ ಸುಲಭವಾಗಿ ಮಾಡಬಹುದಾದ ರುಚಿಕರ ಖಾದ್ಯಗಳಿವು; ವಿಡಿಯೊಗಳಿವೆ

Meghana Gaonkar workout get slim
ಸ್ಯಾಂಡಲ್ ವುಡ್14 mins ago

Meghana Gaonkar:  ಸಣ್ಣಗಾದ ಮೇಘನಾ ಗಾಂವ್ಕರ್; ನಟಿಯ ವರ್ಕೌಟ್ ಫೋಟೊ ವೈರಲ್‌!

Road Accident
ಬೆಂಗಳೂರು23 mins ago

Road Accident : ಟಿಪ್ಪರ್ ಲಾರಿಗೆ ಸಿಲುಕಿ ಸವಾರ ದುರ್ಮರಣ; ಬಸ್ ಪಲ್ಟಿಯಾಗಿ 13 ಪ್ರಯಾಣಿಕರು ಗಂಭೀರ

Kolkata Doctor Murder Case
ದೇಶ35 mins ago

Kolkata Doctor Murder Case: ʼಬೇಕಿದ್ದರೆ ಗಲ್ಲಿಗೇರಿಸಿʼ.. ವಿಚಾರಣೆ ವೇಳೆ ವೈದ್ಯೆಯ ಹಂತಕನ ಉಡಾಫೆ ಉತ್ತರ

Bangladesh Unrest
ವಿದೇಶ36 mins ago

Bangladesh Unrest: ಬಾಂಗ್ಲಾದಲ್ಲಿ 1971ರ ಪಾಕ್‌ ಸೇನೆ ಶರಣಾಗತಿ ಬಿಂಬಿಸುವ ಪ್ರತಿಮೆ ಧ್ವಂಸ; ಬೇಸರ ವ್ಯಕ್ತಪಡಿಸಿದ ಕಾಂಗ್ರೆಸ್‌ ಮುಖಂಡ

paris Olympics 2024
ಪ್ರಮುಖ ಸುದ್ದಿ41 mins ago

Paris Olympics 2024 : ಕಂಚಿನ ಪದಕ ಗೆದ್ದ ಭಾರತ ಪುರುಷರ ಹಾಕಿ ತಂಡಕ್ಕೆ ಎಫ್ಐಎಚ್ ರ್ಯಾಂಕಿಂಗ್​ನಲ್ಲಿ 2 ಸ್ಥಾನ ಏರಿಕೆ

techie missing in Bengaluru
ಬೆಂಗಳೂರು1 hour ago

Techie Missing: ಬೆಂಗಳೂರಿನಲ್ಲಿ ಮತ್ತೊಬ್ಬ ಟೆಕ್ಕಿ ಮಿಸ್ಸಿಂಗ್‌! ಪತಿಯನ್ನು ಹುಡುಕಿಕೊಡಿ ಎಂದು ಅಂಗಲಾಚಿದ ಪತ್ನಿ

Independence day 2024
ದೇಶ1 hour ago

Independence Day 2024: ಮನೆಮನೆಯಲ್ಲೂ ಉಲ್ಲಾಸ, ಉತ್ಸಾಹ ತುಂಬುವ ಸ್ವಾತಂತ್ರ್ಯೋತ್ಸವದ ಹಿನ್ನೋಟ

kolkata doctor murder case
ದೇಶ1 hour ago

Kolkata Doctor Murder Case: ಟ್ರೈನಿ ವೈದ್ಯೆಯ ಅತ್ಯಾಚಾರ, ಕೊಲೆ; ಏಮ್ಸ್‌ ವೈದ್ಯರ ಪ್ರೊಟೆಸ್ಟ್‌-ಪ್ರಾಂಶುಪಾಲರು ರಿಸೈನ್‌

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ4 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ4 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ4 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು6 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ6 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 week ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 week ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌