Viral News: ಮಕ್ಕಳ ಹಸಿವು ನೀಗಿಸಲು ಸೈನಿಕರೆದುರು ಬೆತ್ತಲಾಗುತ್ತಿರುವ ಮಹಿಳೆಯರು! - Vistara News

ವೈರಲ್ ನ್ಯೂಸ್

Viral News: ಮಕ್ಕಳ ಹಸಿವು ನೀಗಿಸಲು ಸೈನಿಕರೆದುರು ಬೆತ್ತಲಾಗುತ್ತಿರುವ ಮಹಿಳೆಯರು!

Viral News: ಯುದ್ಧ ಪೀಡಿತ ಸುಡಾನ್‌ನಲ್ಲಿ ಮಹಿಳೆಯರು ತಮ್ಮ ಕುಟುಂಬದವರಿಗಾಗಿ ಆಹಾರವನ್ನು ಪಡೆಯಲು ಸೈನಿಕರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಲಾಗುತ್ತಿದೆ ಎಂಬ ಸುದ್ದಿ ಈಗ ಸಂಚಲನ ಮೂಡಿಸಿದೆ. ಸುಡಾನ್ ನಗರದ ಒಮ್ದುರ್ಮನ್‌ನಿಂದ ಪಲಾಯನ ಮಾಡಿದ ಅನೇಕ ಮಹಿಳೆಯರು ತಮ್ಮ ಕುಟುಂಬದವರ ಊಟಕ್ಕಾಗಿ ಆಹಾರವನ್ನು ಪಡೆಯಲು ಮತ್ತು ಹಣವನ್ನು ಸಂಗ್ರಹಿಸಲು ಸೈನಿಕರೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದು ಬಿಟ್ಟರೆ ಬೇರೆ ದಾರಿಯಿಲ್ಲ ಎಂದು ದುಃಖ ತೋಡಿಕೊಂಡಿದ್ದಾರೆ.

VISTARANEWS.COM


on

Viral News
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸುಡಾನ್: ಸೈನಿಕರನ್ನು ಜನರು ತಮ್ಮ ರಕ್ಷಕರೆಂದು (Viral News) ಭಾವಿಸುತ್ತಾರೆ. ಯಾಕೆಂದರೆ ಅವರು ಹಗಲಿರುಳೆನ್ನದೇ ದೇಶದ ಗಡಿಯಲ್ಲಿ ಕಾವಲು ಕಾಯುತ್ತಾ ಶತ್ರು ದೇಶದವರಿಂದ ಜನರ ಪ್ರಾಣವನ್ನು ಕಾಪಾಡುತ್ತಾರೆ. ಹಾಗಾಗಿ ಜನರು ಅವರಿಗೆ ಗೌರವವನ್ನು ನೀಡುತ್ತಾರೆ. ಆದರೆ ಅಂತಹ ಗೌರವದ ಸ್ಥಾನದಲ್ಲಿರುವ ಸೈನಿಕರು ತಮ್ಮ ಲೈಂಗಿಕ ದಾಹವನ್ನು ತೀರಿಸಿಕೊಳ್ಳಲು ದೇಶದ ಮಹಿಳೆಯರನ್ನು ಬಳಸಿಕೊಂಡರೆ? ಈ ಸುದ್ದಿ ಎಲ್ಲೆಡೆ ವೈರಲ್‌ ಆಗಿದೆ.

ಯುದ್ಧ ಪೀಡಿತ ಸುಡಾನ್‍ನಲ್ಲಿ ಜನ ಆಹಾರ ಇಲ್ಲದೆ ಬಳಲುತ್ತಿದ್ದಾರೆ. ಮಹಿಳೆಯರು ತಮ್ಮ ಕುಟುಂಬದವರಿಗಾಗಿ ಆಹಾರವನ್ನು ಪಡೆಯಲು ಸೈನಿಕರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಲಾಗುತ್ತಿದೆ ಎಂಬ ಆಘಾತಕರ ಸುದ್ದಿ ಬೆಳಕಿಗೆ ಬಂದಿದೆ. ಸುಡಾನ್ ನಗರದ ಒಮ್ದುರ್ಮನ್‍ನಿಂದ ಪಲಾಯನ ಮಾಡಿದ ಅನೇಕ ಮಹಿಳೆಯರು ತಮ್ಮ ಕುಟುಂಬದವರ ಊಟಕ್ಕಾಗಿ ಆಹಾರವನ್ನು ಪಡೆಯಲು ಮತ್ತು ಹಣವನ್ನು ಸಂಗ್ರಹಿಸಲು ಸೈನಿಕರೊಂದಿಗೆ ಲೈಂಗಿಕ ಕ್ರಿಯೆಗೆ ಒಳಗಾಗುವುದೊಂದೇ ಮಾರ್ಗವಾಗಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಮಹಿಳೆಯೊಬ್ಬರು, ತನ್ನ ಹೆತ್ತವರು ತುಂಬಾ ವಯಸ್ಸಾದವರು ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ತನಗೆ ಹೊರಗೆ ಹೋಗಿ ದುಡಿಯಲು ಆಗುತ್ತಿಲ್ಲ. ಹಾಗಾಗಿ ತಾನು ಸೈನಿಕರ ಬಳಿಗೆ ಹೋದಾಗ ಅವರ ಬಳಿ ಆಹಾರವನ್ನು ಪಡೆಯಲು ಅವರ ಜೊತೆ ಲೈಂಗಿಕ ಕ್ರಿಯೆ ನಡೆಸುವುದೊಂದೇ ಮಾರ್ಗವಾಗಿತ್ತು. ಅವರು ಕಾರ್ಖಾನೆಗಳ ಪ್ರದೇಶದಲ್ಲಿ ಎಲ್ಲೆಡೆ ಇದ್ದರು. ಹಾಗಾಗಿ ಕಳೆದ ವರ್ಷ ಮೇ ತಿಂಗಳಲ್ಲಿ ಮಾಂಸ ನೀಡುವ ಕಾರ್ಖಾನೆಯಲ್ಲಿ ಸೈನಿಕರೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯಿಸಿದರು ಎಂಬುದಾಗಿ ತಿಳಿಸಿದ್ದಾಳೆ.

ದೇಶದಲ್ಲಿ ಅಂತರ್ಯುದ್ಧ ಪ್ರಾರಂಭವಾದ ಕೂಡಲೇ ಈ ದೌರ್ಜನ್ಯ ಪ್ರಾರಂಭವಾದವು ಎಂದು ವರದಿಯಾಗಿದೆ. ಕಳೆದ ವರ್ಷ ಏಪ್ರಿಲ್ 15ರಂದು ಸಂಘರ್ಷ ಪ್ರಾರಂಭವಾದ ಕೆಲವೇ ದಿನಗಳಲ್ಲಿ ಸಶಸ್ತ್ರ ಪುರುಷರಿಂದ ಅತ್ಯಾಚಾರದ ವರದಿಗಳು ಹೊರಬಂದವು. ಸುಡಾನ್‍ನಲ್ಲಿನ ಯುದ್ಧದಲ್ಲಿ ಹತ್ತಾರು ಜನರು ಸಾವನಪ್ಪಿದ್ದರು. ಕೆಲವು ಅಂದಾಜಿನ ಪ್ರಕಾರ ಸಾವಿನ ಸಂಖ್ಯೆ 150,000ದಷ್ಟಿದೆ ಎನ್ನಲಾಗಿತ್ತು. ಈ ಯುದ್ಧದಿಂದ ಇಲ್ಲಿನ ಜನರು ಸ್ಥಳಾಂತರಗೊಳ್ಳಬೇಕಾಯಿತು. ಇದು ದೇಶವನ್ನು ಕ್ಷಾಮದ ಅಂಚಿಗೆ ತಂದಿತ್ತು.

ಇದೀಗ ತಮ್ಮ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ ಆರ್‌ಎಸ್‌ಎಫ್ ಹೋರಾಟಗಾರರು ವ್ಯವಸ್ಥಿತ ರೀತಿಯಲ್ಲಿ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ಭಯಾನಕ ಕಥೆಗಳನ್ನು ಹಂಚಿಕೊಳ್ಳಲು ಹಲವಾರು ಮಹಿಳೆಯರು ಮುಂದೆ ಬಂದಿದ್ದಾರೆ. ಸೈನಿಕರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ನಂತರ ಅವರಿಗೆ ಆಹಾರ, ಅಡುಗೆ ಉಪಕರಣಗಳು ಮತ್ತು ಸುಗಂಧ ದ್ರವ್ಯಗಳನ್ನು ನೀಡಲಾಗಿದೆ ಎಂದು ಮಹಿಳೆಯೊಬ್ಬರು ಹೇಳಿದ್ದಾರೆ. ಅಲ್ಲದೇ ಸೈನಿಕರು ಮಹಿಳೆಯರನ್ನು ಪಾಳುಬಿದ್ದ ಮನೆಗಳಿಗೆ ಕರೆತಂದು ಅಲ್ಲಿ ಅವರನ್ನು ಸರತಿ ಸಾಲಿನಲ್ಲಿ ನಿಲ್ಲುವಂತೆ ತಿಳಿಸುತ್ತಾರೆ. ಬಳಿಕ ತಮಗೆ ಇಷ್ಟ ಆದವರನ್ನು ಆಯ್ಕೆ ಮಾಡುತ್ತಾರೆ. ಲೈಂಗಿಕ ಕ್ರಿಯೆ ನಡೆಸಿ ಕಳುಹಿಸುತ್ತಾರೆ.

ಇದನ್ನೂ ಓದಿ: ವೃದ್ಧನ ಮೊಬೈಲ್‌ ಕಸಿದು ಓಡಿದ ಯುವಕನಿಗೆ ಯಾವ ಗತಿಯಾಯಿತು ನೋಡಿ!

ಇನ್ನೊಬ್ಬ ಮಹಿಳೆ ತಾನು ಸೈನಿಕನೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ ನಂತರ ಅವರು ತನಗೆ ಚಿತ್ರಹಿಂಸೆ ನೀಡಿದರು ಮತ್ತು ತನ್ನ ಕಾಲುಗಳನ್ನು ಸುಟ್ಟು ಹಾಕಿದರು ಎಂದು ಹೇಳಿದ್ದಾಳೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Bike Stunt: ಬೆಂಗಳೂರಲ್ಲಿ ಪ್ರೇಮಿಗಳ ಜಾಲಿ ರೈಡ್; ಬೈಕ್ ಟ್ಯಾಂಕ್‌ ಮೇಲೆ ಯುವತಿ ಕೂರಿಸಿಕೊಂಡು ರೊಮ್ಯಾನ್ಸ್!

Bike Stunt: ಯಲಹಂಕ ಸಂಚಾರಿ ಠಾಣಾ ವ್ಯಾಪ್ತಿಯ ರೇವಾ ಕಾಲೇಜು ಕ್ಯಾಂಪಸ್ ರಸ್ತೆಯಲ್ಲಿ ಘಟನೆ ನಡೆದಿದೆ. ಪ್ರೇಮಿಗಳಿಬ್ಬರ ಜಾಲಿರೈಡ್‌ ಅನ್ನು ಹಿಂದೆ ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

VISTARANEWS.COM


on

Bike Stunt
Koo

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್‌ ಹಾಕುವ ಸಲುವಾಗಿ ಯುವಕರು ಬೈಕ್‌ ವ್ಹೀಲಿಂಗ್‌, ಸ್ಟಂಟ್‌ ಮಾಡುವ ಪ್ರಕರಣಗಳು (Bike Stunt) ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿವೆ. ಇದರಿಂದ ರಸ್ತೆಯಲ್ಲಿ ಹೋಗುವ ಇತರ ಸವಾರರಿಗೂ ಕಿರಿಕಿರಿ ಉಂಟಾಗುವುದನ್ನು ಕಾಣುತ್ತಿರುತ್ತೇವೆ. ಈ ನಡುವೆ ಪ್ರೇಮಿಗಳಿಬ್ಬರು ಜಾಲಿ ರೈಡ್ ಮಾಡಿರುವ ಘಟನೆಯೊಂದು ರಾಜಧಾನಿಯಲ್ಲಿ ನಡೆದಿದ್ದು, ಬೈಕ್ ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿಯನ್ನು ಕೂರಿಸಿಕೊಂಡು ಯುವಕ ಬೈಕ್‌ ಚಲಾಯಿಸಿದ್ದಾನೆ. ಸದ್ಯ ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಯಲಹಂಕ ಸಂಚಾರಿ ಠಾಣಾ ವ್ಯಾಪ್ತಿಯ ರೇವಾ ಕಾಲೇಜು ಕ್ಯಾಂಪಸ್ ರಸ್ತೆಯಲ್ಲಿ ಘಟನೆ ನಡೆದಿದೆ. ಪ್ರೇಮಿಗಳಿಬ್ಬರ ಜಾಲಿರೈಡ್‌ ಅನ್ನು ಹಿಂದೆ ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಹೆಬ್ಬಾಳ ಫ್ಲೈ ಓವರ್‌ ಮೇಲೆ ಯುವಕನೊಬ್ಬ ಬೈಕ್ ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿ ಕೂರಿಸಿ ಜಾಲಿ ರೈಡ್ ಮಾಡಿದ್ದ. ನಂತರ ಯುವಕನನ್ನು ಹೆಬ್ಬಾಳ ಸಂಚಾರಿ ಪೊಲೀಸರು ಬಂಧಿಸಿದ್ದರು. ಈ ಘಟನೆ ನಂತರವು ಎಚ್ಚೆತ್ತುಕೊಳ್ಳದೇ ಯುವ ಜೋಡಿಯೊಂದು ಇದೀಗ ಜಾಲಿ ರೈಡ್ ಮಾಡಿರುವುದು ಕಂಡುಬಂದಿದೆ. ಹೀಗಾಗಿ ಇಂತಹವರ ವಿರುದ್ಧ ಸಂಚಾರ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ | Face Serum: ಚರ್ಮಕ್ಕೆ ಹೊಂದುವಂಥ ʻಫೇಸ್‌ ಸೀರಂʼ ಆಯ್ಕೆ ಮಾಡುವುದು ಹೇಗೆ?

ಹೆಂಡ್ತಿ ತವರಿಗೆ ಹೋಗ್ತಿದ್ದಂತೆ ಪ್ರೇಯಸಿ ಜೊತೆ ಲವ್ವಿಡವ್ವಿ- ಸ್ಕೂಲ್‌ ಮೇಸ್ಟ್ರನ್ನು ರೆಡ್‌ಹ್ಯಾಂಡಾಗಿ ಹಿಡಿದು ಅಲ್ಲೇ ಮದ್ವೆ

Viral News
Viral News

ಪಾಟ್ನಾ: ಶಾಲೆ ಶುರುವಾಗಿ ಗಂಟೆಗಳು ಕಳೆದರೂ ತರಗತಿ ನಡೆಸಬೇಕಾಗಿದ್ದ ಶಿಕ್ಷಕ ಬಂದೇ ಇರಲಿಲ್ಲ. ಇತರ ಶಿಕ್ಷಕರು ಮಕ್ಕಳನ್ನು ವಿಚಾರಿಸಿದಾಗ ಶಿಕ್ಷಕನನ್ನು ಊರಿನ ಜನರೆಲ್ಲಾ ಸೇರಿಕೊಂಡು ಮರಕ್ಕೆ ಕಟ್ಟಿ ಹಾಕಿರುವ ಬಗ್ಗೆ ವಿದ್ಯಾರ್ಥಿಯೊಬ್ಬ ಬಾಯ್ಬಿಟ್ಟಿದ್ದಾನೆ. ಏನಾಯ್ತಪ್ಪಾ ಅಂತಾ ಸ್ಥಳಕ್ಕೆ ಓಡೋಡಿ ಬಂದವರಿಗೆ ಶಾಕ್‌ ಕಾದಿತ್ತು. ಹೆಂಡ್ತಿ ತವರಿಗೆ ಹೋದ ಕೂಡಲೇ ಇತ್ತ ಪ್ರೇಯಸಿ ಜೊತೆ ಮಜಾ ಮಾಡಿ ಸಿಕ್ಕಿಬಿದ್ದಿದ್ದ ಶಿಕ್ಷಕನನ್ನು ಗ್ರಾಮಸ್ಥರು ರೆಡ್‌ ಹ್ಯಾಂಡಾಗಿ ಹಿಡಿದು ಮರಕ್ಕೆ ಕಟ್ಟಿ ಹಾಕಿದ್ದಾರೆ. ಅಷ್ಟೇ ಅಲ್ಲದೇ ಆ ಯುವತಿ ಜೊತೆಗೆ ಮದ್ವೆ ಮಾಡಿಸಿದ್ದಾರೆ. ಈ ವಿಚಿತ್ರ ಘಟನೆ(Viral News) ನಡೆದಿರುವುದು ಬಿಹಾರ(Bihar)ದ ಪುರ್ನಿಯಾದಲ್ಲಿ.

ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪರೋರ ಪಂಚಾಯತ್‌ನ ಬೆಲ್‌ಘಟ್ಟಿ ಬುಡಕಟ್ಟು ಕುಗ್ರಾಮದಲ್ಲಿ ಈ ಘಟನೆ ನಡೆದಿದೆ. ಸ್ಥಳೀಯರ ಪ್ರಕಾರ, ಜುನ್ನಿ ಇಸ್ತಂಬ್ರಾರ್ ಪಂಚಾಯತ್‌ನ ಬೇಗಂಪುರದ ಸರ್ಕಾರಿ ಶಾಲೆಯ ಶಿಕ್ಷಕ ಶೇಖರ್ ಪಾಸ್ವಾನ್ ಅಲಿಯಾಸ್ ರಾಜೇಶ್ ಕುಮಾರ್ ಗ್ರಾಮದ ಬುಡಕಟ್ಟು ಹುಡುಗಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಎರಡು ದಿನಗಳ ಹಿಂದೆ ಶಿಕ್ಷಕ ರಾಜೇಶ್ ಕುಮಾರ್ ಈ ಹುಡುಗಿಯ ಜೊತೆ ಮೋಜಿನಲ್ಲಿ ತೊಡಗಿದ್ದ ವೇಳೆ ಗ್ರಾಮಸ್ಥರ ಕೈಗೆ ರೆಡ್‌ ಹ್ಯಾಂಡಾಗಿ ಸಿಕ್ಕಿಬಿದಿದ್ದ.

ಇದಾದ ಬಳಿಕ ಗ್ರಾಮಸ್ಥರು ಅದೇ ಸ್ಥಿತಿಯಲ್ಲಿ ಆತನನ್ನು ಮರಕ್ಕೆ ಕಟ್ಟಿ ಹಾಕಿ ಹುಡುಗಿಯ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಶಿಕ್ಷಕನ ಮನೆಯವರು ಸ್ಥಳಕ್ಕಾಗಮಿಸಿದಾಗ ಗ್ರಾಮಸ್ಥರು ಆತನಿಗೆ ಬಾಲಕಿಯೊಂದಿಗೆ ಮದುವೆ ಮಾಡಿಸಿದ್ದರು. ಮಾಹಿತಿ ಪಡೆದ ಪೊಲೀಸರು ಕೂಡ ಸ್ಥಳಕ್ಕಾಗಮಿಸಿ ಬಾಲಕಿಯನ್ನು ಶಿಕ್ಷಕ ಹಾಗೂ ಸಂಬಂಧಪಟ್ಟವರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಆದರೆ, ಈ ಅವಧಿಯಲ್ಲಿ ಯಾರ ವಿರುದ್ಧವೂ ದೂರು ನೀಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪೊಲೀಸರು ಆತನನ್ನು ಆತನ ಮನೆಗೆ ಕಳುಹಿಸಿದ್ದಾರೆ. ಗ್ರಾಮಸ್ಥರು ಹೇಳುವ ಪ್ರಕಾರ ಶಿಕ್ಷಕ ರಾಜೇಶ್ ಕುಡಿತದ ಚಟ ಹೊಂದಿದ್ದ ಎನ್ನಲಾಗಿದೆ.

ಇದನ್ನೂ ಓದಿ: Viral Video: ಬೇಟೆಯಾಡಲು ಗೋಡೆ ಹತ್ತಿದ ದೈತ್ಯ ಹೆಬ್ಬಾವು; ಗಾಬರಿಗೊಳಿಸುವ ವಿಡಿಯೊ

ಶಿಕ್ಷಕ ತನ್ನ ಸಹೋದರಿಯೊಂದಿಗೆ ಸುಮಾರು 7 ವರ್ಷಗಳಿಂದ ಸಂಪರ್ಕದಲ್ಲಿದ್ದಾರೆ ಎಂದು ಯುವತಿಯ ಸಹೋದರಿ ಹೇಳಿದ್ದಾರೆ. ಇತ್ತ, ತಂದೆ-ತಾಯಿಯ ಮನೆಯಿಂದ ಪತ್ನಿ ವಾಪಸಾದ ಬಳಿಕ ಶಿಕ್ಷಕನ ಮದುವೆ ಸುದ್ದಿ ಸಂಚಲನ ಮೂಡಿಸಿದೆ. ಅಣ್ಣನಿಗೆ ರಾಖಿ ಕಟ್ಟಲು ಹೋಗಿದ್ದೆ. ಅಷ್ಟರಲ್ಲಿ ವಂಚಕ ಪತಿ ಈ ಕೃತ್ಯ ಎಸಗಿದ್ದಾನೆ. ಶಿಕ್ಷಕನ ತಂದೆ ವೈದ್ಯನಾಥ ಪಾಸ್ವಾನ್, ಮಗನಿಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಆತನ ಎರಡನೇ ಮದುವೆಯನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದಿದ್ದಾರೆ. ಅಲ್ಲದೇ ಬುಡಕಟ್ಟು ಜನರಿಗೆ ವಾಮಾಚಾರದ ಬಗ್ಗೆ ಗೊತ್ತಿದ್ದು, ವಾಮಾಚಾರದ ಮೂಲಕ ಮಗನನ್ನು ಬಲೆಗೆ ಬೀಳಿಸಿರುವುದು ಖಚಿತ ಎಂದು ಹೇಳಿದ್ದಾರೆ.

Continue Reading

ಕ್ರೀಡೆ

MS Dhoni: 43ನೇ ವಯಸ್ಸಿನಲ್ಲಿಯೂ ಜಂಪಿಂಗ್ ಸ್ಮ್ಯಾಶ್ ಹೊಡೆದ ಧೋನಿ; ವೈರಲ್​ ವಿಡಿಯೊ ಇಲ್ಲಿದೆ

MS Dhoni: ಧೋನಿ ತಮ್ಮ ಸ್ನೇಹಿತರ ಜತೆ ಬ್ಯಾಡ್ಮಿಂಟನ್​ ಆಡುತ್ತಿರುವ ವಿಡಿಯೊವನ್ನು ಜಾನ್ಸ್ ಎನ್ನುವ ನೆಟ್ಟಿಗರೊಬ್ಬರು ತಮ್ಮ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ

VISTARANEWS.COM


on

MS Dhoni
Koo

ರಾಂಚಿ: ಭಾರತೀಯ ಕ್ರಿಕೆಟ್‌ ತಂಡದ ಮಾಜಿ ನಾಯಕ ಹಾಗೂ ಆಟಗಾರ ಎಂಎಸ್‌ ಧೋನಿ(MS Dhoni) ಫುಟ್​ಬಾಲ್‌(ms dhoni football) ಅಭಿಮಾನಿ. ಭಾರತ ತಂಡದ ಪರ ಆಡುತ್ತಿದ್ದ ವೇಳೆ ಧೋನಿ ಬಿಡುವು ಸಿಕ್ಕಾಗಲೆಲ್ಲಾ ಹೆಚ್ಚಾಗಿ ಸ್ನೇಹಿತರ ಜತೆ ಫುಟ್​ಬಾಲ್‌ ಆಡುತ್ತಿದ್ದರು. ನಿವೃತ್ತಿಯಾದ ಬಳಿಕ ಅವರು ಫುಟ್​ಬಾಲ್‌ ಆಡುವುದನ್ನು ನಿಲ್ಲಿಸಿದ್ದರು. ಇದೀಗ ಧೋನಿಗೆ ಬ್ಯಾಡ್ಮಿಂಟನ್​ ಕ್ರೀಡೆಯ ಮೇಲೆ ಒಲವು ಹುಟ್ಟಿಕೊಂಡಂತಿದೆ. ಹೌದು, ಧೋನಿ ಬ್ಯಾಡ್ಮಿಂಟನ್​ ಆಡುತ್ತಿರುವ ವಿಡಿಯೊವೊಂದು ವೈರಲ್​ ಆಗಿದೆ.

ಧೋನಿ ತಮ್ಮ ಸ್ನೇಹಿತರ ಜತೆ ಬ್ಯಾಡ್ಮಿಂಟನ್​ ಆಡುತ್ತಿರುವ ವಿಡಿಯೊವನ್ನು ಜಾನ್ಸ್ ಎನ್ನುವ ನೆಟ್ಟಿಗರೊಬ್ಬರು ತಮ್ಮ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ. ಎಲ್ಲೋ ಟಿ-ಶರ್ಟ್​ ಧರಿಸಿ ಧೋನಿ ಬ್ಯಾಡ್ಮಿಂಟನ್ ಆಡುತ್ತಿರುವುದನ್ನು ನೋಡಬಹುದಾಗಿದೆ. ಅದರಲ್ಲೂ ಧೋನಿಯ ರಾಕೆಟ್​ ವೇಗದ ಜಂಪಿಂಗ್ ಸ್ಮ್ಯಾಶ್​(jump smash) ಕಂಡು ಅಭಿಮಾನಿಗಳು ದಂಗಾಗಿದ್ದಾರೆ. ಸದ್ಯ ಈ ವಿಡಿಯೊ ವೈರಲ್​ ಆಗಿದೆ.

43 ವರ್ಷದಲ್ಲಿಯೂ ಧೋನಿಯ ಈ ಫಿಟ್​ನೆಸ್​ ನೋಡುವಾಗ ಅವರು ಮುಂದಿನ ಆವೃತ್ತಿಯ ಐಪಿಎಲ್​ನಲ್ಲಿ ಆಡುವುದು ಖಚಿತ ಎನ್ನುವಂತಿದೆ. ಇದೇ ವರ್ಷ ಐಪಿಎಲ್​ ಆರಂಭಕ್ಕೂ ಮುನ್ನ ಧೋನಿ ದುಬೈನಲ್ಲಿ ಟೆನಿಸ್​ ಆಡಿದ್ದ ವಿಡಿಯೊ ವೈರಲ್​ ಆಗಿತ್ತು. ಧೋನಿ ಜತೆ ಪಂತ್​ ಕೂಡ ಕಾಣಿಸಿಕೊಂಡಿದ್ದರು.

ವರದಿಯೊಂದರ ಪ್ರಕಾರ ಬಿಸಿಸಿಐ(BCCI) ಕನಿಷ್ಠ ಐದು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಆಟಗಾರರನ್ನು ಅನ್‌ಕ್ಯಾಪ್ಡ್ ವಿಭಾಗದಲ್ಲಿ ಇರಿಸುವ ನಿಯಮವನ್ನು ಮರಳಿ ತರಲು ಮುಂದಾಗಿದೆ ಎನ್ನಲಾಗಿದೆ. ಹೀಗಾಗಿ ಧೋನಿ ಅನ್​ಕ್ಯಾಪ್ಡ್​ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ MS Dhoni: ಅಭಿಮಾನಿಯ ಬೈಕ್​ ಮೇಲೆ ಆಟೋಗ್ರಾಫ್​ ಹಾಕಿದ ಧೋನಿ; ಫೋಟೊ ವೈರಲ್​

ಅನ್‌ಕ್ಯಾಪ್ಡ್ ಆಟಗಾರನಿಗೆ ಫ್ರಾಂಚೈಸಿ ಕೇವಲ 4 ಕೋಟಿ ರೂ. ನೀಡಲಿದೆ. ಈ ನಿಯಮ ಜಾರಿಗೆ ಬಂದರೆ ಧೋನಿ ಇದೇ ಮೊತ್ತದಲ್ಲಿ ಚೆನ್ನೈಗಾಗಿ ಆಡುವುದನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ. ಇದೇ ಮೊತ್ತಕ್ಕೆ ಚೆನ್ನೈ ತಂಡ ಧೋನಿಯನ್ನು ಮತ್ತೆ ರೀಟೈನ್​ ಮಾಡಿಕೊಳ್ಳಬಹುದು.  ಧೋನಿ(MS Dhoni) ಅವರು ಕಳೆದ ವರ್ಷವೇ ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಒಂದು ವರ್ಷದ ಮಟ್ಟಿಗೆ ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿ ಎಂದೇ ಹೇಳಲಾಗಿತ್ತು. ಆದ್ಯಾಗೂ ಧೋನಿ ತಮ್ಮ ನಿವೃತ್ತಿ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಪ್ರಕಟಿಸಿಲ್ಲ.

ಇಂಪ್ಯಾಕ್ಟ್​ ಆಟಗಾರನಾಗಿ ಕಣಕ್ಕೆ

ರಿಷಭ್​ ಪಂತ್​ ಡೆಲ್ಲಿ ತಂಡದ ಪರ ರಿಟೈನ್ ಆಸಕ್ತಿ ಹೊಂದಿಲ್ಲ ಅವರು ಚೆನ್ನೈ ತಂಡ ಸೇರಲಿದ್ದಾರೆ ಎಂದು ಈಗಾಗಲೇ ವರದಿಯಾಗಿದೆ. ಧೋನಿ ಮೊಣಕಾಲು ನೋವಿನಿಂದ ಬಳಲುತ್ತಿರುವ ಕಾರಣ ಪಂತ್​ ಅವರನ್ನು ಚೆನ್ನೈ ತಂಡಕ್ಕೆ ಸೇರಿಸಿಕೊಂಡು ಕೀಪಿಂಗ್​ ಹೊಣೆ ಅವರಿಗೆ ನೀಡುವ ಮೂಲಕ ಧೋನಿ ಇಂಪ್ಯಾಕ್ಟ್​ ಆಟಗಾರನಾಗಿ ಆಡುವುದು ಸದ್ಯ ಫ್ರಾಂಚೈಸಿ ಮತ್ತು ಧೋನಿಯ ಯೋಜನೆಯಾಗಿದೆ. ಕಳೆದ ಆವೃತ್ತಿಯಲ್ಲಿ ಧೋನಿ ತಂಡದಲ್ಲಿ ಸೂಕ್ತ ವಿಕೆಟ್​ ಕೀಪರ್​ ಇಲ್ಲದ ಕಾರಣ ತಮ್ಮ ಕಾಲು ನೋವಿನ ಮಧ್ಯೆಯೂ ಸಂಪೂರ್ಣವಾಗಿ ಕೀಪಿಂಗ್​ ನಡೆಸಿದ್ದರು. 

Continue Reading

ದೇಶ

Punjab Shoot out: ಪತ್ನಿ, ಮಗುವಿನ ಎದುರೇ NRI ಪ್ರಜೆಯ ಮೇಲೆ ಶೂಟೌಟ್‌-ಭೀಕರ ದೃಶ್ಯ ಭಾರೀ ವೈರಲ್‌

Panjab Shoot out: ಬೈಕ್‌ನಲ್ಲಿ ಬಂದಿದ್ದ ಇಬ್ಬರು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಸುಖಚೈನ್ ಸಿಂಗ್ ಅವರ ನಿವಾಸಕ್ಕೆ ನುಗ್ಗಿ ಅವರ ಪತ್ನಿ ಮತ್ತು ಮಗುವಿನ ಎದುರೇ ಗುಂಡು ಹಾರಿಸಿದ್ದಾರೆ. ಈ ವೇಳೆ ಸುಖಚೈನ್ ಸಿಂಗ್ ಅವರನ್ನು ಬಿಟ್ಟುಬಿಡುವಂತೆ ಅವರ ಪತ್ನಿ ಮತ್ತು ಮಗು ಎಷ್ಟೇ ಬೇಡಿಕೊಂಡರೂ ಕೇಳದೇ ಶೂಟ್‌ ಮಾಡುತ್ತಿರುವುದ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ.

VISTARANEWS.COM


on

Panjab Shootout
Koo

ಚಂಡೀಗಡ: ಕೆಲವೇ ದಿನಗಳ ಹಿಂದೆ ಅಮೆರಿಕಾದಿಂದ ಸ್ವದೇಶಕ್ಕೆ ಮರಳಿದ್ದ ಎನ್‌ಆರ್‌ಐ(NRI) ಪ್ರಜೆಯನ್ನು ಗುಂಡಿಕ್ಕಿರುವ ಭೀಕರ ಘಟನೆ ಪಂಜಾಬ್‌ನಲ್ಲಿ ನಡೆದಿದೆ. ಅಮೃತಸರದ ದಬುರ್ಜಿ ಪ್ರದೇಶದಲ್ಲಿ ಈ ಭೀಕರ ಘಟನೆ ನಡೆದಿದ್ದು, ಸುಖಚೈನ್ ಸಿಂಗ್ ಎಂಬ ಎನ್‌ಆರ್‌ಐ ಅವರನ್ನು ಅವರ ಪತ್ನಿ ಮತ್ತು ಮಗುವಿನ ಎದುರೇ ಶೂಟ್‌(Punjab Shoot out) ಮಾಡಿದ್ದಾರೆ. ಇನ್ನು ಈ ಭೀಕರ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್‌ ಆಗಿದ್ದು, ಎಲ್ಲೆಡೆ ಭಾರೀ ವೈರಲ್‌(Viral Video) ಆಗುತ್ತಿದೆ.

ಬೈಕ್‌ನಲ್ಲಿ ಬಂದಿದ್ದ ಇಬ್ಬರು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಸುಖಚೈನ್ ಸಿಂಗ್ ಅವರ ನಿವಾಸಕ್ಕೆ ನುಗ್ಗಿ ಅವರ ಪತ್ನಿ ಮತ್ತು ಮಗುವಿನ ಎದುರೇ ಗುಂಡು ಹಾರಿಸಿದ್ದಾರೆ. ಈ ವೇಳೆ ಸುಖಚೈನ್ ಸಿಂಗ್ ಅವರನ್ನು ಬಿಟ್ಟುಬಿಡುವಂತೆ ಅವರ ಪತ್ನಿ ಮತ್ತು ಮಗು ಎಷ್ಟೇ ಬೇಡಿಕೊಂಡರೂ ಕೇಳದೇ ಶೂಟ್‌ ಮಾಡುತ್ತಿರುವುದ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಇನ್ನು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರವ ಸಿಂಗ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿಯ ನಂತರ ದಾಳಿಕೋರರು ಸ್ಥಳದಿಂದ ಪರಾರಿಯಾಗುತ್ತಿರುವ ದೃಶ್ಯಾವಳಿಗಳು ತೋರಿಸಿವೆ. ಶಸ್ತ್ರಸಜ್ಜಿತ ದಾಳಿಕೋರರು ಸಿಂಗ್ ಅವರ ಕಾರಿನ ನೋಂದಣಿ ಪ್ರಮಾಣಪತ್ರದ ಬಗ್ಗೆ ವಿಚಾರಿಸುವ ನೆಪದಲ್ಲಿ ಬಂದು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.

ಸಿಂಗ್ ಅವರ ಕುಟುಂಬ ಸದಸ್ಯರು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ದಾಳಿಯ ಹಿಂದೆ ಸಿಂಗ್ ಅವರ ಮೊದಲ ಪತ್ನಿಯ ಕುಟುಂಬದ ಕೈವಾಡವಿದೆ ಎಂದು ಅವರ ತಾಯಿ ಹೇಳಿದ್ದಾರೆ. ಈ ವಿಚಾರದಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆ ಅಮೃತಸರ ಪೊಲೀಸ್ ಆಯುಕ್ತರಿಗೆ ಸರ್ಕಾರ ಸೂಚಿಸಿದೆ. ಸುಖಚೈನ್ ಸಿಂಗ್ ಅವರ ಕುಟುಂಬವು ಅವರ ಮಾಜಿ ಪತ್ನಿಯ ಐದು ಕುಟುಂಬದ ಸದಸ್ಯರ ವಿರುದ್ಧ ಎಫ್‌ಐಆರ್ ದಾಖಲಿಸಿದೆ ಎಂದು ಎಎನ್‌ಐ ವರದಿ ಮಾಡಿದೆ.

ಪೊಲೀಸರು ನಿವಾಸದ ಎಲ್ಲಾ ಸಿಸಿಟಿವಿಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಇನ್ನು ರಾಜ್ಯದಲ್ಲಿ ಆಪ್‌ ಆಡಳಿತಾವಧಿಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಬಿಜೆಪಿ ಆರೋಪಿಸಿದೆ.

ಇದನ್ನೂ ಓದಿ: ಹೋಮ್‌ವರ್ಕ್‌ ಮಾಡದ ಮಗಳನ್ನು ಬಿಸಿ ಟೆರೇಸ್‌ನಲ್ಲಿ ಕಟ್ಟಿಹಾಕಿದ ತಾಯಿ, ವೈರಲ್‌ ವಿಡಿಯೋದಿಂದ ಪತ್ತೆ

Continue Reading

ವೈರಲ್ ನ್ಯೂಸ್

Viral Video: ಮೈಮೇಲೆ ಒಂದಲ್ಲ..ಎರಡಲ್ಲ ಬರೋಬ್ಬರಿ 25ಕೆ.ಜಿ ಚಿನ್ನ; ತಿಮ್ಮಪ್ಪನ ಸನ್ನಿಧಿಗೆ ಬಂದ ವಿಶೇಷ ಭಕ್ತರು ಇವರೇ ನೋಡಿ

viral video: ಪುಣೆ ಮೂಲದ ಈ ಕುಟುಂಬವು ತಿರುಪತಿಗೆ ಭೇಟಿ ನೀಡಿದ್ದು, ಮೈ ಮೇಲೆ ಬರೋಬ್ಬರಿ 25 ಕೆಜಿ ಚಿನ್ನವನ್ನು ಧರಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇಂದು ಮುಂಜಾನೆ ತಿರುಮಲದ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ವೀಡಿಯೋದಲ್ಲಿ ನಾಲ್ವರ ಕುಟುಂಬವೊಂದು ಕೈಮುಗಿದು ನಿಂತಿರುವ ದೃಶ್ಯವಿದೆ.

VISTARANEWS.COM


on

viral video
Koo

ಹೈದರಾಬಾದ್‌: ಇಡೀ ಪ್ರಪಂಚದಲ್ಲಿಯೇ ಚಿನ್ನದ ಮೇಲಿನ ಮೋಹ ಭಾರತೀಯರಿಗಿರುವಷ್ಟು ಬೇರೆ ಯಾವ ದೇಶದಲ್ಲೂ ಕಾಣಲು ಸಾಧ್ಯವೇ ಇಲ್ಲ. ಇಲ್ಲಿ ಚಿನ್ನಕ್ಕೆ ತನ್ನದೇ ಆದ ಸ್ಪೆಶಲ್‌ ಸ್ಥಾನವಿದೆ. ದರ ಎಷ್ಟೇ ಏರಿಕೆಯಾದ್ರೂ ಚಿನ್ನ ಖರೀದಿಸುವವರ ಸಂಖ್ಯೆಯ ಮಾತ್ರ ಕಡಿಮೆ ಆಗಿಲ್ಲ. ಇದಕ್ಕೆ ಪೂರಕವೆಂಬಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಇದೀಗ ಭಾರೀ ವೈರಲ್‌(Viral Video) ಆಗುತ್ತಿದೆ.

ತಿರುಪತಿ ತಿರುಮಲದಲ್ಲಿರುವ ವೆಂಕಟೇಶ್ವರ ದೇವಸ್ಥಾನಕ್ಕೆ ಕುಟುಂಬವೊಂದು ಭೇಟಿ ಭೇಟಿ ನೀಡಿರುವ ವಿಡಿಯೋವೊಂದು ಅಸಾಮಾನ್ಯ ಕಾರಣಕ್ಕೆ ವೈರಲ್ ಆಗಿದೆ. ಕ್ಲಿಪ್‌ನಲ್ಲಿ, ಒಂದು ಕುಟುಂಬವು ಭಾರೀ ಚಿನ್ನಾಭರಣಗಳನ್ನು ಧರಿಸಿರುವುದನ್ನು ಕಾಣಬಹುದು. ಅವರು 25 ಕೆಜಿ ಚಿನ್ನದೊಂದಿಗೆ ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ.

ಪುಣೆ ಮೂಲದ ಈ ಕುಟುಂಬವು ತಿರುಪತಿಗೆ ಭೇಟಿ ನೀಡಿದ್ದು, ಮೈ ಮೇಲೆ ಬರೋಬ್ಬರಿ 25 ಕೆಜಿ ಚಿನ್ನವನ್ನು ಧರಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇಂದು ಮುಂಜಾನೆ ತಿರುಮಲದ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ವೀಡಿಯೋದಲ್ಲಿ ನಾಲ್ವರ ಕುಟುಂಬವೊಂದು ಕೈಮುಗಿದು ನಿಂತಿರುವ ದೃಶ್ಯವಿದೆ. ಬಿಳಿಯ ವಸ್ತ್ರಗಳು ಮತ್ತು ಧೋತಿಗಳನ್ನು ಧರಿಸಿರುವ ಇಬ್ಬರು ಪುರುಷರು ಕುತ್ತಿಗೆಯಲ್ಲಿ ದಪ್ಪ ಸರಪಳಿಯಂತಹ ಚಿನ್ನ ಧರಿಸಿದ್ದಾರೆ. ಚಿನ್ನದ ಬಣ್ಣದ ಸೀರೆಯುಟ್ಟ ಮಹಿಳೆಯು ಸಂಪೂರ್ಣವಾಗಿ ಚಿನ್ನದ ಆಭರಣದಿಂದ ಮುಚ್ಚಲ್ಪಟ್ಟಿದ್ದಾರೆ. ಇವರ ಜೊತೆ ಒಂದು ಮಗು ನಿಂತಿರುವುದು ಸಹ ಕಂಡುಬರುತ್ತದೆ.

ವೀಡಿಯೊ ಮುಂದುವರೆದಂತೆ, ಪುಣೆಯ ಕುಟುಂಬವು ಪೊಲೀಸ್ ಸಿಬ್ಬಂದಿಯೊಂದಿಗೆ ದೇವಾಲಯದ ಆವರಣದೊಳಗೆ ನಡೆಯುತ್ತಿರುವುದು ಕಂಡುಬರುತ್ತದೆ. ಇನ್ನು ಈ ವಿಡಿಯೋ 1.4 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ, ಶೇರ್ 400 ಕ್ಕೂ ಹೆಚ್ಚು ಲೈಕ್ಸ್‌ ಬಂದಿದೆ. ಅಲ್ಲದೇ ಅನೇಕರು ನಾನಾ ರೀತಿಯಲ್ಲಿ ಕಮೆಂಟ್‌ ಮಾಡಿದ್ದಾರೆ. ಆದಾಯ ತೆರಿಗೆ ಇಲಾಖೆ ಕಣ್ಣು ನಿಮ್ಮ ಮೇಲಿದೆ ಎಂದು ಹಲವರು ತಮಾಷೆ ಮಾಡಿದ್ದಾರೆ. ದೇವರ ಮುಂದೆ ಈ ಪ್ರದರ್ಶನ ಏಕೆ?” ನಾಲ್ಕನೆಯವರು ಬರೆದಿದ್ದಾರೆ, “ಇದು ತುಂಬಾ ಹುಚ್ಚುತನ ಎಂದು ಮತ್ತೆ ಕೆಲವರು ಕಮೆಂಟ್‌ ಮಾಡಿದ್ದಾರೆ.

ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯಲ್ಲಿರುವ ಈ ದೇವಾಲಯವು ದಟ್ಟವಾದ ಕಾಡಿನ ನಡುವೆ ನೆಲೆಸಿದೆ. ಹಿಂದೂ ಧರ್ಮದ ಅನುಯಾಯಿಗಳಿಂದ ಇದು ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ಹಿಂದೂ ಧರ್ಮದ ಪ್ರಕಾರ, ಈ ದೇವಾಲಯವು ಭಗವಾನ್ ವಿಷ್ಣುವಿನ ಅವತಾರವೆಂದು ನಂಬಲಾದ ವೆಂಕಟೇಶ್ವರನಿಗೆ ಸಮರ್ಪಿತವಾಗಿದೆ. ದೇವಾಲಯವು ಕೇವಲ ಧಾರ್ಮಿಕವಲ್ಲ, ವಾಸ್ತುಶಿಲ್ಪದ ಮಹತ್ವವನ್ನು ಹೊಂದಿದೆ. ಇಲ್ಲಿಗೆ ಗಣ್ಯಾತಿಗಣ್ಯರು ಭೇಟಿ ನೀಡುತ್ತಲೇ ಇರುತ್ತಾರೆ.

ಇದನ್ನೂ ಓದಿ: ಕೋತಿಗಳ ಮುಂದೆ ಮಂಗಾಟ ಮಾಡುವ ಮುನ್ನ ಈ ವೈರಲ್‌ ವಿಡಿಯೋ ನೋಡಿ

Continue Reading
Advertisement
unified pension scheme
ಪ್ರಮುಖ ಸುದ್ದಿ13 mins ago

Unified pension scheme: ಕೇಂದ್ರ ಸರ್ಕಾರದ ಯುಪಿಎಸ್ ಪಿಂಚಣಿ ಯೋಜನೆಗೆ ರಾಜ್ಯ ಸರ್ಕಾರಿ ನೌಕರರ ಸಂಘಗಳ ವಿರೋಧ

Sunita Williams
ದೇಶ43 mins ago

Sunita Williams: ಮುಂದಿನ ವರ್ಷ ಫೆಬ್ರುವರಿಯಲ್ಲಿ ಭೂಮಿಗೆ ಮರಳಲಿದ್ದಾರೆ ಸುನೀತಾ ವಿಲಿಯಮ್ಸ್;‌ ನಾಸಾ ಘೋಷಣೆ

karnataka weather forecast
ಮಳೆ43 mins ago

Karnataka Weather : ಬೆಂಗಳೂರು ಸೇರಿದಂತೆ ಉಡುಪಿ, ಉತ್ತರ ಕನ್ನಡದಲ್ಲಿಂದು ಭಾರಿ ಮಳೆ ಎಚ್ಚರ

Dina Bhavishya
ಭವಿಷ್ಯ1 hour ago

Dina Bhavishya : ಈ ರಾಶಿಯವರ ಬಹು ದಿನಗಳ ಕನಸು ನನಸು; ಕುಟುಂಬದ ಆಪ್ತರಿಂದ ಶುಭ ಸುದ್ದಿ

Rahul Gandhi
ದೇಶ7 hours ago

Rahul Gandhi: ಮಿಸ್‌ ಇಂಡಿಯಾ ಪಟ್ಟಿಯಲ್ಲಿ ದಲಿತ, ಬುಡಕಟ್ಟು, ಒಬಿಸಿ ಮಹಿಳೆಯರು ಇಲ್ಲವೇ ಇಲ್ಲ-ರಾಹುಲ್‌ ಗಾಂಧಿ ಹೊಸ ಆರೋಪ

Sudha Murthy
ಬೆಂಗಳೂರು7 hours ago

Sudha Murthy: ವೈದ್ಯಕೀಯ ಸೇವೆಯಲ್ಲಿ ಬದ್ಧತೆ, ನೈತಿಕತೆ ಇಂದಿನ ಅಗತ್ಯ: ಸುಧಾಮೂರ್ತಿ

Unified Pension scheme
ಪ್ರಮುಖ ಸುದ್ದಿ8 hours ago

Unified Pension scheme: ಏಕೀಕೃತ ಪಿಂಚಣಿ ಯೋಜನೆ ಸರ್ಕಾರಿ ನೌಕರರಿಗೆ ಕೇಂದ್ರ ನೀಡುತ್ತಿರುವ ಆರ್ಥಿಕ ಭದ್ರತೆ- ಪ್ರಧಾನಿ ನರೇಂದ್ರ ಮೋದಿ

Amit Shah
ದೇಶ8 hours ago

Amit Shah: 2026ರ ವೇಳೆಗೆ ನಕ್ಸಲಿಸಂ ಸಂಪೂರ್ಣ ನಿರ್ಣಾಮ; ಬಿಗ್‌ ಟಾರ್ಗೆಟ್‌ ಫಿಕ್ಸ್‌ ಮಾಡಿದ ಕೇಂದ್ರ

Vijayanagara News
ವಿಜಯನಗರ8 hours ago

Vijayanagara News: ಮೀನುಗಾರರಿಗೆ ರಾಜ್ಯ‌ ಸರ್ಕಾರದಿಂದ ನಾನಾ ಸೌಕರ್ಯ; ಸಚಿವ ಮಂಕಾಳ ವೈದ್ಯ

NPS v/s UPS
ದೇಶ9 hours ago

NPS v/s UPS: ಏಕೀಕೃತ ಪಿಂಚಣಿ ಯೋಜನೆ ಅಂದ್ರೆ ಏನು? ಇದು NPSಗಿಂತ ಹೇಗೆ ಭಿನ್ನ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

ಮಳೆ15 hours ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು3 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ3 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

ಟ್ರೆಂಡಿಂಗ್‌