Indian Parenting: ಭಾರತೀಯ ಹೆತ್ತವರ ಮಕ್ಕಳ ಪಾಲನೆಯ ಒಳಿತುಗಳಿವು! - Vistara News

Relationship

Indian Parenting: ಭಾರತೀಯ ಹೆತ್ತವರ ಮಕ್ಕಳ ಪಾಲನೆಯ ಒಳಿತುಗಳಿವು!

ಮಕ್ಕಳನ್ನು ಬೆಳೆಸುವ ವಿಚಾರದಲ್ಲಿ ಯಾವ ಹಾದಿಯಲ್ಲಿದ್ದೇವೆ ಎಂಬ ಅವಲೋಕನ ಮಾಡಿದಾಗ ನಮ್ಮ ಪಾಲನೆಯ (indian parenting) ಶೈಲಿಯಲ್ಲಿರುವ ಬೆಸ್ಟ್‌ ಸಂಗತಿಗಳಿವು ಎಂದು ಪ್ರತಿಯೊಬ್ಬ ಭಾರತೀಯನಿಗೂ ಅನಿಸದೆ ಇರಲಾರದು.

VISTARANEWS.COM


on

indian parenting
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಕ್ಕಳನ್ನು ಸರಿಯಾಗಿ ಬೆಳೆಸುವುದು (parenting guide) ಪ್ರತಿ ಹೆತ್ತವರ ಜೀವನದ ಗುರುತರ ಜವಾಬ್ದಾರಿ. ತಮ್ಮ ಕೆಲಸಗಳ ಜೊತೆಗೆ ಮಕ್ಕಳನ್ನು ಸರಿಯಾದ ಹಾದಿಯಲ್ಲಿ ನಡೆಯುವಂತೆ ಮಾಡಿ, ಚೆನ್ನಾಗಿ ಓದಿಸಿ ತಮ್ಮ ಕಾಲ ಮೇಲೆ ನಿಲ್ಲುವಂತೆ ಮಾಡಿ ಮಕ್ಕಳನ್ನು ಒಂದು ಹಂತಕ್ಕೆ ತಲುಪಿಸಿದ ಮೇಲಷ್ಟೇ ಪೋಷಕರು ಸಮಾಧಾನದ ನಿಟ್ಟುಸಿರು ಬಿಡುತ್ತಾರೆ. ಅಲ್ಲಿಯವರೆಗೆ ಅವರಿಗೆ ತಮ್ಮ ಜವಾಬ್ದಾರಿ ಮುಗಿದಂತೆ ಅನಿಸುವುದಿಲ್ಲ. ನೂರಕ್ಕೆ ನೂರರಷ್ಟು ಮಂದಿಯೂ ಸರಿಯಾದ ರೀತಿಯಲ್ಲೇ ತಮ್ಮ ಮಕ್ಕಳನ್ನು ಬೆಳೆಸುತ್ತಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಈ ಹಾದಿಯಲ್ಲಿ ಪ್ರತಿಯೊಬ್ಬ ಪೋಷಕನೂ ತಪ್ಪು ಸರಿಯ ಹಾದಿಯಲ್ಲಿ ಒಮ್ಮೆಯಾದರೂ ಕಾಲಿಟ್ಟೇ ಇಟ್ಟಿರುತ್ತಾರೆ. ಆದರೂ, ಭಾರತೀಯರಾದ ನಾವು ಕೆಲವೊಂದು ವಿಚಾರಗಳನ್ನು ಪಾಶ್ಚಾತ್ಯರಿಗೆ ಹೋಲಿಸಿಕೊಂಡು, ಮಕ್ಕಳನ್ನು ಬೆಳೆಸುವ ವಿಚಾರದಲ್ಲಿ ಯಾವ ಹಾದಿಯಲ್ಲಿದ್ದೇವೆ ಎಂಬ ಅವಲೋಕನ ಮಾಡಿದಾಗ ನಮ್ಮ ಪಾಲನೆಯ (indian parenting) ಶೈಲಿಯಲ್ಲಿರುವ ಬೆಸ್ಟ್‌ ಸಂಗತಿಗಳಿವು (indian parenting style) ಎಂದು ಪ್ರತಿಯೊಬ್ಬ ಭಾರತೀಯನಿಗೂ ಅನಿಸದೆ ಇರಲಾರದು.

1. ಭಾರತೀಯರು ಇನ್ನೊಬ್ಬರಿಗೆ ಗೌರವ ಕೊಡುವ ವಿಚಾರದಲ್ಲಿ ಎತ್ತಿದ ಕೈ. ಹಾಗಾಗಿ ತಮ್ಮ ಮಕ್ಕಳಿಂದ ಸಾಮಾನ್ಯವಾಗಿ ಭಾರತೀಯ ಪೋಷಕರು ಒರಟು ನಡತೆಯನ್ನು ಇಷ್ಟಪಡುವುದಿಲ್ಲ. ಮಕ್ಕಳು ಹಿರಿಯರಲ್ಲಿ, ಸುತ್ತಮುತ್ತಲ ಮಂದಿಯ ಜೊತೆ, ಅಥವಾ ಗೆಳೆಯರ ಜೊತೆ ಒರಟಾಗಿ ನಡೆದುಕೊಂಡಲ್ಲಿ ಅದನ್ನು ಒಡನೆಯೇ ತಿದ್ದುತ್ತಾರೆ. ಅಥವಾ, ಮನೆಗೆ ಬಂದವರ ಜೊತೆಗೆ, ಹೋದೆಡೆಯಲ್ಲಿ ಹಾಗೆ ಮಾಡಿದರೆ, ನಂತರ ತಮ್ಮ ಮಕ್ಕಳಿಗೆ ಅವರೆಲ್ಲ ಹೋದ ಮೇಲೆ ನೀನು ಮಾಡಿದ್ದು ತಪ್ಪು ಎಂಬ ತಿಳಿವಳಿಕೆಯ ಮಾತು ಹೇಳುತ್ತಾರೆ. ತಮ್ಮ ಮನೆಯಲ್ಲೇ ಈ ಮಾದರಿನ ನಡತೆ ಕಂಡ ಕೂಡಲೇ ಪರಸ್ಪರರಿಗೆ ಗೌರವ ಕೊಟ್ಟು ಮಾತನಾಡಬೇಕು ಎಂಬ ನಡತೆಯ ಪಾಠ ಮನೆಯಲ್ಲಿಯೇ ದೊರೆಯುತ್ತದೆ.

2. ಭಾರತೀಯ ಪೋಷಕರ ಮತ್ತೊಂದು ವಿಶೇಷ ನಡವಳಿಕೆ ಎಂದರೆ, ಅವರು ಮಕ್ಕಳಿಗೆ ಮಾಹಿತಿಯ ವಿಚಾರದಲ್ಲಿ ಯಾವಾಗಲೂ ಶಿಸ್ತು ಹಾಗೂ ಹಿಡಿತ ಇಟ್ಟುಕೊಂಡಿರುತ್ತಾರೆ. ಇಂದಿನ ಡಿಜಿಟಲ್‌ ಯುಗದಲ್ಲಿ, ಮಕ್ಕಳು ಹುಟ್ಟುತ್ತಲೇ ಎಲ್ಲ ಮಾಹಿತಿಗಳೂ ಸುಲಭವಾಗಿ ಅವರ ಬೆರಳ ತುದಿಗೂ ಸಿಗುವ ಅವಕಾಶವಿದ್ದರೂ, ಪೋಷಕರು, ಯಾವ ವಯಸ್ಸಿನವರೆಗೆ ಮಕ್ಕಳಿಂದ ಯಾವ ವಿಚಾರಗಳನ್ನು ತಿಳಿಯದಂತೆ ಇಡಬೇಕು ಎಂಬುದು ಗೊತ್ತಿರುತ್ತದೆ. ಹೀಗಾಗಿ, ಮಕ್ಕಳು ಎಳವೆಯಲ್ಲಿಯೇ ಟಿವಿ, ಇಂಟರ್ನೆಟ್‌ ಅಥವಾ ಯಾವುದನ್ನೇ ಬಳಸುತ್ತಿದ್ದರೂ ಪೋಷಕರು ತಮ್ಮ ಮಕ್ಕಳು, ಅಸಹ್ಯ, ಅಸಭ್ಯ ಹಾಗೂ ಅಶ್ಲೀಲ ವಿಚಾರಗಳನ್ನು ನೋಡದೇ ಇರಲಿ ಎಂಬ ಜಾಗ್ರತೆಯನ್ನು ಆದಷ್ಟೂ ವಹಿಸುತ್ತಾರೆ.

3. ಶಿಕ್ಷಣದ ವಿಚಾರದಲ್ಲೂ ಭಾರತೀಯ ಪೋಷಕರು ಕಟ್ಟುನಿಟ್ಟು. ಸುಮ್ಮನೆ ಕ್ಲಾಸ್‌ ಬಂಕ್‌ ಮಾಡಿ ಸುತ್ತುವುದು ಇತ್ಯಾದಿಗಳನ್ನು ಅವರು ಸಹಿಸಲಾರರು. ದೊಡ್ಡ ಮೊತ್ತದ ಶುಲ್ಕ ಪಾವತಿಸಿ ಕಷ್ಟ ಪಟ್ಟು ತಮ್ಮ ಮಕ್ಕಳನ್ನು ಓದಿಸುವ ಜವಾಬ್ದಾರಿಯನ್ನು ಹೊತ್ತ ಪೋಷಕರು, ನಮಗೆ ಸಾಧ್ಯವಾಗದಿದ್ದ, ಅಥವಾ ನಮ್ಮ ಕಷ್ಟಗಳು ತಮ್ಮ ಮಕ್ಕಳಿಗೆ ಬಾರದಿರಲಿ, ಅವರು ಸರಿಯಾಗಿ ಓದಲಿ ಎಂದೇ ಬಯಸುತ್ತಾರೆ. ಮಕ್ಕಳಿಗಾಗಿ ಪ್ರಾಮಾಣಿಕವಾಗಿ ಕಷ್ಟಪಟ್ಟು ದುಡಿಯುತ್ತಾರೆ.

indian parenting style

4. ಭಾರತೀಯರು ಯಾವುದೇ ಧರ್ಮಕ್ಕೆ, ಜಾತಿಗೆ ಸೇರಿರಲಿ, ತಮ್ಮ ಮಕ್ಕಳಿಗೆ ಎಳವೆಯಲ್ಲಿಯೇ ಭಾರತದ ಸಂಸ್ಕೃತಿ, ಸಂಸ್ಕಾರಗಳನ್ನು ಕಲಿಸುತ್ತಾರೆ. ದೇವಸ್ಥಾನಕ್ಕೆ ಹೋಗುವುದಿರಬಹುದು, ಹಬ್ಬ ಹರಿದಿನಗಳನ್ನು ಆಚರಿಸುವುದಿರಬಹುದು, ಮಕ್ಕಳಿಗೆ ಎಳವೆಯಲ್ಲಿಯೇ ಭಾರತೀಯ ಪುರಾಣಗಳ ಕಥೆಗಳನ್ನು ಹೇಳುವುದಿರಬಹುದು ಅಥವಾ ನೆಲದ ಗಂಧದ ವಿಚಾರಗಳನ್ನು ತಿಳಿಸುವುದಿರಬಹುದು ಎಲ್ಲವೂ ಪೋಷಕರು ತಮ್ಮ ಮಕ್ಕಳಿಗೆ ಮಾಡುತ್ತಾರೆ. ಮುಖ್ಯವಾಗಿ, ಪೋಷಕರಿಗಿಂತಲೂ, ಮನೆಯಲ್ಲಿರುವ ಹಿರಿಯರಾದ ಅಜ್ಜ ಅಜ್ಜಿಯರು ಇಂತಹ ವಿಚಾರಗಳನ್ನು ತಮ್ಮ ಮೊಮ್ಮಕ್ಕಳಿಗೆ ದಾಟಿಸುತ್ತಾರೆ. ಭಾರತದಲ್ಲಿರುವ ಕುಟುಂಬ ವ್ಯವಸ್ಥೆಯೇ ಇದಕ್ಕೆ ಕಾರಣ.

ಇದನ್ನೂ ಓದಿ: Parenting Tips: ಮಿತಿ ಮೀರುವ ಮಕ್ಕಳ ಕೋಪ ನಿಯಂತ್ರಣಕ್ಕೆ ಐದು ಐಡಿಯಾಗಳು!

5. ಭಾರತೀಯ ಪೋಷಕರು ತಮ್ಮ ಮಕ್ಕಳ ವಿಚಾರದಲ್ಲಿ ಕೆಲವೊಮ್ಮೆ ಹೆಚ್ಚು ಮೂಗು ತೂರಿಸುವವರಾಗಿಯೂ ಕಾಣುತ್ತಾರೆ. ತಮ್ಮ ಮಕ್ಕಳು ಯಾರ ಜೊತೆ ಬೆರೆಯುತ್ತಾರೆ, ಅವರ ಗೆಳೆಯರು ಒಳ್ಳೆಯವರೇ, ಅವರ ಜೊತೆ ಸುತ್ತಾಡುವ ಮಂದಿಗೆ ದುರಭ್ಯಾಸಗಳಿವೆಯೇ, ಹೊರಗೆ ಹೋದರೂ ರಾತ್ರಿ ತಡವಾಗಿ ಬರದಿರಲಿ, ಯಾಕೆ ಲೇಟು ಇತ್ಯಾದಿ ಪ್ರಶ್ನೆಗಳಿಂದ ಮಕ್ಕಳ ಖಾಸಗಿ ಜೀವನದಲ್ಲಿ ಅನಗತ್ಯವಾಗಿ ಮೂಗು ತೂರಿಸುತ್ತಾರೆ ಎಂದು ಮೇಲ್ನೋಟಕ್ಕೆ ಅನಿಸಿದರೂ, ಮಕ್ಕಳ ಬೆಳವಣಿಕೆ ಆ ಘಟ್ಟದಲ್ಲಿ, ಮಕ್ಕಳು ಸರಿಯಾದ ಹಾದಿಯಲ್ಲಿ ನಡೆಯುತ್ತಿದ್ದಾರೆಯೇ ಎಂಬ ಕಾಳಜಿ ಅದಾಗಿರುತ್ತದೆ. ಮಕ್ಕಳಲ್ಲಿ ಸರಿಯಾಗಿ ಅರಿಯವ ವಯಸ್ಸಿನಲ್ಲಿ ಸ್ವೇಚ್ಛಾಚಾರವನ್ನು ಇದು ನಿಗ್ರಹಿಸುತ್ತದೆ. ಮಕ್ಕಳಿಗೆ ಆ ಸಮಯದಲ್ಲಿ ಅದು ತಮ್ಮ ಪೋಷಕರು ಅತಿಯಾಗಿ ಶಿಸ್ತು ಹೇರುತ್ತಿದ್ದಾರೆ ಅನಿಸಿದರೂ, ಮುಂದೆ ಬೆಳೆದು ದೊಡ್ಡ್ವರಾದ ಮೇಲೆ, ಪೋಷಕರು ಹಾಗಿದ್ದುದರಿಂದಲೇ ತಾನು ಹಾದಿ ತಪ್ಪಲಿಲ್ಲ ಎಂಬುದು ತಿಳಿಯುತ್ತದೆ. ಪೋಷಕರ ಕಾಳಜಿ, ಪ್ರೀತಿ ಅರಿವಾಗುತ್ತದೆ.

ಇದನ್ನೂ ಓದಿ: Parenting Tips: ಟೀನೇಜ್‌ ಮಕ್ಕಳ ಹೆತ್ತವರಾಗಿ ನೀವು ನೆನಪಿಟ್ಟುಕೊಳ್ಳಬೇಕಾದ 12 ಸೂತ್ರಗಳು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Relationship

Parenting Tips: ಮಕ್ಕಳನ್ನು ಬೆಳಗ್ಗೆ ಬೇಗ ಏಳಿಸಿ ಶಾಲೆಗೆ ಹೊರಡಿಸುವುದೇ ಹೋರಾಟವೇ? ಇಲ್ಲಿವೆ ಟಿಪ್ಸ್!

ಹೆತ್ತ ಜೀವಗಳ ಬೆಳಗಿನ ಹೋರಾಟದ ದೃಶ್ಯ ಯಾವ ಯುದ್ಧಭೂಮಿಗೂ ಕಡಿಮೆ ಇರುವುದಿಲ್ಲ. ಮಕ್ಕಳನ್ನು ಬೆಳಗ್ಗೆ ಏಳಿಸುವ ಕಲೆ ನಿಮಗೆ ಕರತಲಾಮಲಕವಾಗಲು ಇಲ್ಲಿವೆ ಕೆಲವು (parenting tips) ಕಿವಿಮಾತುಗಳು.

VISTARANEWS.COM


on

kids morning
Koo

ಮಕ್ಕಳನ್ನು ಬೆಳೆಸುವುದು (good parenting) ಎಂದರೆ ಅದು ಸುಲಭದ ಕೆಲಸವಲ್ಲ. ಬಹಳ ಜವಾಬ್ದಾರಿಗಳನ್ನು ಬೇಡುವ ಕೆಲಸ. ಸಣ್ಣ ಮಗುವಿನ ತಾಯಿಗೆ, ನಿದ್ರೆಗೆಟ್ಟೂ ಕೆಟ್ಟೂ, ಎಷ್ಟೋ ಸಾರಿ ಮಕ್ಕಳು ಬೇಗನೆ ಶಾಲೆಗೆ ಹೋಗುವಷ್ಟು ದೊಡ್ಡದಾಗಿ ಬಿಟ್ಟರೆ ಸಾಕಪ್ಪಾ ಅನಿಸುತ್ತದೆ. ಆದರೆ ಶಾಲೆಗೆ ಹೋಗುವಷ್ಟು ಮಗು ದೊಡ್ಡದಾದ ಮೇಲೆಯೇ ಅದರ ಕಷ್ಟ ಅರಿವಾಗುವುದು. ಹೀಗೆ ಮಗುವೊಂದನ್ನು ಸಂಪೂರ್ಣ ದೊಡ್ಡವರನ್ನಾಗಿ ಮಾಡುವವರೆಗೆ ಹೆತ್ತವರು ಹಲವು ಹಾದಿಗಳನ್ನು ಸವೆಸಿರುತ್ತಾರೆ. ಪ್ರತಿಯೊಬ್ಬ ಹೆತ್ತವರಿಗೂ ಸವಾಲೆನಿಸುವುದು ಮಕ್ಕಳನ್ನು ಬೆಳಗ್ಗಿನ ಹೊತ್ತು ಶಾಲೆಗೆ ಹೊರಡಿಸುವ ಸಮಯ. ಬೆಳಗ್ಗೆ ಬೇಗ ಏಳಿಸಬೇಕು, ಸ್ನಾನ ಮಾಡಿಸಬೇಕು ಅಥವಾ ತಾನೇ ಸ್ನಾನ ಮಾಡುವಷ್ಟು ಮಗು ಬೆಳೆದಿದ್ದರೆ ಮಕ್ಕಳಿಗೆ ಬೇಗ ಬೇಗ ಸ್ನಾನ ಮುಗಿಸುವಂತೆ ಒತ್ತಡ ಹೇರಬೇಕು. ತಿಂಡಿ ರೆಡಿ ಮಾಡಬೇಕು, ಊಟದ ಡಬ್ಬಿಗೆ ನಿತ್ಯವೂ ಆಕರ್ಷಕ ತಿನಿಸುಗಳನ್ನು ರೆಡಿ ಮಾಡಬೇಕು, ಈ ನಡುವೆ ತಮಗೂ ತಿಂಡಿ ಮಾಡಬೇಕು, ಆಫೀಸಿಗೆ ಬುತ್ತಿ ಕಟ್ಟಿಕೊಳ್ಳಬೇಕು, ಅಬ್ಬಬ್ಬಾ, ಹೆತ್ತ ಜೀವಗಳ ಬೆಳಗಿನ ಹೋರಾಟದ ದೃಶ್ಯ ಯಾವ ಯುದ್ಧಭೂಮಿಗೂ ಕಡಿಮೆ ಇರುವುದಿಲ್ಲ. ಇಂಥ ಸಂದರ್ಭ ಈ ಎಲ್ಲ ತಯಾರಿಗಳ ನಡುವೆ ಮಕ್ಕಳನ್ನು ಹಾಸಿಗೆಯಿಂದ ಏಳಿಸುವುದೇ ದೊಡ್ಡ ಸವಾಲು. ಈ ಸವಾಲನ್ನು ಗೆದ್ದರೆ, ಯುದ್ಧದಲ್ಲಿ ಅರ್ಧ ಗೆದ್ದಂತೆ. ಹಾಗಾದರೆ ಬನ್ನಿ, ಮಕ್ಕಳನ್ನು ಬೆಳಗ್ಗೆ ಏಳಿಸುವ ಕಲೆ ನಿಮಗೆ ಕರತಲಾಮಲಕವಾಗಲು ಇಲ್ಲಿವೆ ಕೆಲವು (parenting tips) ಕಿವಿಮಾತುಗಳು.

1. ಮಕ್ಕಳಿಗೊಂದು ವೇಳಾಪಟ್ಟಿ ಇರಲಿ. ಮಕ್ಕಳು ಇಂಥ ಹೊತ್ತಿಗೆ ಏಳುವುದರಿಂದ ಹಿಡಿದು, ಹಲ್ಲುಜ್ಜುವುದು, ಸ್ನಾನ ಮಾಡುವುದು ಇತ್ಯಾದಿ ಪ್ರತಿಯೊಂದಕ್ಕೂ ನಿಗದಿತ ಸಮಯಾವಕಾಶವಿರಲಿ. ಆಗ ಮಕ್ಕಳು ತಮ್ಮ ಕೆಲಸಗಳನ್ನು ಒಂದೊಂದಾಗಿ ತಾವೇ ಮಾಡಿದ ಖುಷಿಯನ್ನು ಪಡೆಯುತ್ತಾರೆ. ಅಷ್ಟೇ ಅಲ್ಲ, ಇದನ್ನು ಮುಂದುವರಿಸಲು ಅವರಿಗೆ ಪ್ರೇರಣೆ ದೊರೆಯುತ್ತದೆ. ಒಂದನೇ ದಿನ ಮಕ್ಕಳು ಮಾಡಲಿಕ್ಕಿಲ್ಲ, ಎರಡನೇ ದಿನವೂ. ಆದರೆ, ನೀವು ಈ ಯೋಜನೆಯಿಂದ ಹಿಂಜರಿಯಬೇಡಿ. ಆಗ ಮಕ್ಕಳು ನಿಧಾನವಾಗಿ ತಮ್ಮ ಕೆಲಸವನ್ನು, ಪುಟ್ಟಪುಟ್ಟ ಜವಾಬ್ದಾರಿಗಳನ್ನು ನಿಭಾಯಿಸುವುದನ್ನು ಕಲಿಯುತ್ತಾರೆ.

2. ಸೂರ್ಯನ ಬೆಳಕು ಕೋಣೆಗೆ ಬರುವಂತಿರಲಿ. ಮುಖದ ಮೇಲೆ ಮುಂಜಾವಿನ ಬೆಳಕು ಬೀಳುವಾಗ ಅನುಭವವಾಗುವ ಆನಂದ ಮಕ್ಕಳು ಅನುಭವಿಸಲಿ.

3. ಬೆಳಗ್ಗೆ ಎದ್ದ ಕೂಡಲೇ ಮಕ್ಕಳ ಮನಸ್ಸನ್ನು ಖಷಿಯಾಗಿಸುವ ಒಂದು ಪುಟ್ಟ ಕೆಲಸಕ್ಕೆ ಜಾಗವಿರಲಿ. ಏನಾದರೊಂದು ಪುಟ ಓದುವುದಿರಬಹುದು, ಅಥವಾ ಒಂದು ಫ್ಯಾಮಿಲಿ ಹಗ್‌ ಕ್ಷಣವಿರಬಹುದು, ಅಥವಾ ಮಕ್ಕಳ ಇಷ್ಟದ ಹಾಡು ಪ್ಲೇ ಮಾಡುವುದಿರಬಹುದು ಹೀಗೆ ಏನಾದರೊಂದು ಪುಟ್ಟ ಖಷಿ ಪ್ರತಿ ದಿನ ಅವರಿಗಾಗಿ ಕಾದಿರಲಿ. ಎದ್ದ ಕೂಡಲೇ ಗಡಿಬಿಡಿ ಮಾಡುವುದು, ಲೇಟಾಗುತ್ತಿದೆ ಎಂದು ಕಿರುಚಾಡುವುದು ಇತ್ಯಾದಿಗಳನ್ನು ಬಿಟ್ಟು ಒಂದೈದು ನಿಮಿಷ ಶಾಂತವಾಗಿ ಪ್ರೀತಿಯಿಂದ ಮಾತನಾಡಿಸುವುದನ್ನು ಅಭ್ಯಾಸ ಮಾಡಿ. ಆಗ ಮಕ್ಕಳು ಬೆಳಗ್ಗೆದ್ದ ಕೂಡಲೇ, ಕಿರಿಕಿರಿ ಮಾಡುವುದಿಲ್ಲ.

4. ಮಕ್ಕಳಿಗೆ ಏಳಲು ಒಂದು ಅಲರಾಂ ಇಡುವುದನ್ನು ಅಭ್ಯಾಸ ಮಾಡಿ. ಆ ಅಲರಾಂ ಶಬ್ದ ತಮಾಷೆಯದ್ದೋ, ಅಥವಾ ಅವರಿಷ್ಟದ ಹಾಡೋ, ಮ್ಯೂಸಿಕ್ಕೋ ಇರಲಿ.

5. ಎಲ್ಲಕ್ಕಿಂತ ಮುಖ್ಯವಾಗಿ, ನಿಮ್ಮ ಕೆಟ್ಟ ಅಭ್ಯಾಸಗಳಿಂದ ಮಕ್ಕಳ ನಿದ್ದೆಯನ್ನು ಹಾಳು ಮಾಡಬೇಡಿ. ನೀವು ಶಿಸ್ತುಬದ್ಧ ಜೀವನ ನಡೆಸುತ್ತಿದ್ದರೆ, ಮಕ್ಕಳ ಇಂತಹ ಸಮಸ್ಯೆ ಸಾಕಷ್ಟು ಕಡಿಮೆಯಾಗುತ್ತದೆ. ಅದಕ್ಕಾಗಿಯೇ ಮಕ್ಕಳನ್ನು ಬೇಗನೆ ಒಂದು ನಿಗದಿತ ಸಮಯಕ್ಕೆ ಮಲಗಿಸುವುದನ್ನು ಅಭ್ಯಾಸ ಮಾಡಿಸಿ. ಏನೇ ಕಾರಣಗಳಿದ್ದರೂ ಇದನ್ನು ಏರುಪೇರು ಮಾಡಬೇಡಿ.

Kids outfits faded in Monsoon

6. ಮಕ್ಕಳು ಅವರಷ್ಟಕ್ಕೆ ಬೇಗನೆ ಎದ್ದು ಹಲ್ಲುಜ್ಜಿ ಮುಖ ತೊಳೆದು ಶಾಲೆಗೆ ರೆಡಿಯಾಗುವ ಕೆಲಸವನ್ನು ಯಾವ ಕಿರಿಕಿರಿಯೂ ಇಲ್ಲದೆ ಮಾಡಿದರೆ ಅವರಿಗೆ ರಿವಾರ್ಡ್‌ಗಳನ್ನು ಕೊಡಿ. ಸ್ಟಿಕ್ಕರ್‌, ಸ್ಮೈಲಿ, ಅವರಿಷ್ಟದ ಬ್ರೇಕ್‌ಫಾಸ್ಟ್‌ ಹೀಗೆ.

ಇದನ್ನೂ ಓದಿ: Parenting Tips: ನಿಮ್ಮ ಮಕ್ಕಳು ಅಡ್ಡ ಬೆಳೆಯದೆ, ಉದ್ದ ಬೆಳೆಯಬೇಕೆಂದರೆ ಈ ಆಹಾರವನ್ನೇ ನೀಡಿ!

7. ರಜೆಯ ದಿನಗಳಲ್ಲಿ ಮಕ್ಕಳನ್ನು ಬೆಳಗ್ಗೆ ಎದ್ದ ಮೇಲೆ ಪಾರ್ಕಿಗೆ ಕರೆದೊಯ್ಯುವುದು, ವಾಕಿಂಗ್‌ ಇತ್ಯಾದಿ ಕೆಲಸಗಳನ್ನು ಜೊತೆಯಾಗಿ ಮಾಡಬಹುದು. ಆಗ ಮಕ್ಕಳೊಡನೆ ಸಾಕಷ್ಟು ಸಮಯವೂ ದೊರೆಯುತ್ತದೆ. ಆಗ ರಜೆಯಲ್ಲೂ ಮಕ್ಕಳು ಇದೇ ಸಮಯಪಾಲನೆ ಮಾಡುತ್ತಾರೆ.

8. ಮಕ್ಕಳಿಗೆ ಬೆಳಗಿನ ಹೊತ್ತು ಅವರೇ ಮಾಡುವಂಥ, ಮಾಡಬಲ್ಲ ಏನಾದರೊಂದು ಸಣ್ಣ ಜವಾಬ್ದಾರಿ ಕೊಡಿ.

9. ಎಲ್ಲಕ್ಕಿಂತ ಮುಖ್ಯವಾಗಿ ಮಕ್ಕಳಿಗೆ ಏನೇ ಮಾಡಿದರೂ, ಏನೇ ಹೇಳಿದಿರೂ, ಅವರು ಕಲಿಯುವುದು ನೋಡಿದ್ದನ್ನು! ಹೀಗಾಗಿ ಮಕ್ಕಳಿಗೆ ನೀವೇ ರೋಲ್‌ ಮಾಡೆಲ್‌ ಆಗಿ. ಮಕ್ಕಳು ನಿಮ್ಮನ್ನು ನೋಡಿ ಕಲಿಯಲಿ. ಅವರು ನಿಮ್ಮನ್ನು ನೋಡಿ ಕಲಿಯುವಂಥದ್ದು ನಿಮ್ಮಲ್ಲೂ ಇರಲಿ. ಅವರಿಗೆ ನೀವೇ ಮೊದಲ ಪ್ರೇರಣೆ ಎಂಬುದು ಪ್ರತಿಯೊಂದು ಕೆಲಸದ ಸಂದರ್ಭವೂ ನಿಮಗೆ ನೆನಪಿರಲಿ.

ಇದನ್ನೂ ಓದಿ: Parenting Tips: ಹತ್ತು ವಯಸ್ಸಿನೊಳಗೆ ನಿಮ್ಮ ಮಕ್ಕಳಿಗೆ ಈ ಎಲ್ಲ ಜೀವನ ಕೌಶಲ್ಯಗಳು ತಿಳಿದಿರಲಿ!

Continue Reading

Relationship

Parenting Tips: ಹತ್ತು ವಯಸ್ಸಿನೊಳಗೆ ನಿಮ್ಮ ಮಕ್ಕಳಿಗೆ ಈ ಎಲ್ಲ ಜೀವನ ಕೌಶಲ್ಯಗಳು ತಿಳಿದಿರಲಿ!

ಮಕ್ಕಳು ಈ ವಯಸ್ಸಿನೊಳಗೆ ತಿಳಿಯಲೇಬೇಕಾದ ಕೌಶಲ್ಯಗಳಾವುವು, ಅವುಗಳನ್ನು ಹೆತ್ತವರು ಸೂಕ್ತ ಪೋಷಣೆಯಿಂದ ಹೇಗೆ ತಿಳಿಸಿಕೊಡಬಹುದು (parenting tips, parenting guide) ಎಂಬುದನ್ನು ನೋಡೋಣ.

VISTARANEWS.COM


on

parenting skills
Koo

ಇಂದು ಸಣ್ಣ ಕುಟುಂಬ ಪದ್ಧತಿಯಿಂದಾಗಿ (nuclear family) ಮಕ್ಕಳ ಮೇಲೆ ಹೆತ್ತವರಿಗೆ ಮುದ್ದು ಜಾಸ್ತಿ. ಹೀಗಾಗಿ ಮಕ್ಕಳು ತಮ್ಮ ವಯಸ್ಸಿಗೆ ಸರಿಯಾಗಿ ಕಲಿತುಕೊಳ್ಳಬೇಕಾದ ಎಷ್ಟೋ ವಿಚಾರಗಳಿಂದ, ಜೀವನ ಕೌಶಲ್ಯಗಳಿಂದ (Life skills) ವಂಚಿತರಾಗುತ್ತಾರೆ. ಹೆತ್ತವರಿಗೂ ಈ ಸಮಸ್ಯೆ ಅರ್ಥವಾಗುವುದಿಲ್ಲ. ಜೀವನದಲ್ಲಿ ಏರಬೇಕಾದ ಒಂದೊಂದೇ ಮೆಟ್ಟಿಲನ್ನು ಏರಲು ಕೆಲವು ಸಾಮಾನ್ಯ ಕೌಶಲ್ಯಗಳನ್ನು ಮಕ್ಕಳು 10 ವಯಸ್ಸಿನೊಳಗೇ ಕಲಿಯಬೇಕು. ಬನ್ನಿ, ಮಕ್ಕಳು ಈ ವಯಸ್ಸಿನೊಳಗೆ ತಿಳಿಯಲೇಬೇಕಾದ ಕೌಶಲ್ಯಗಳಾವುವು, ಅವುಗಳನ್ನು ಹೆತ್ತವರು ಸೂಕ್ತ ಪೋಷಣೆಯಿಂದ ಹೇಗೆ ತಿಳಿಸಿಕೊಡಬಹುದು (parenting tips, parenting guide) ಎಂಬುದನ್ನು ನೋಡೋಣ.

1. ಮಕ್ಕಳಿಗೆ ಸರಿಯಾಗಿ ಸಂವಹನ (clear communication) ಮಾಡುವ ಕಲೆ ಸಾಮಾನ್ಯವಾಗಿ ಈ ವಯಸ್ಸಿನೊಳಗೆ ಬರಬೇಕು. ಅಂದರೆ, ಯಾರ ಜೊತೆ ಹೇಗೆ ಮಾತನಾಡಬೇಕು ಎಂಬಿತ್ಯಾದಿ ವಿಚಾರಗಳ ಜೊತೆಗೆ ಭಾವನೆಗಳನ್ನು ಸ್ಪಷ್ಠವಾಗಿ, ಸರಳವಾಗಿ ಮತ್ತೊಬ್ಬರಿಗೆ ದಾಟಿಸುವುದು ಹೇಗೆ ಎಂಬುದು ಹತ್ತು ವಯಸ್ಸಿನೊಳಗೆ ಸಾಮಾನ್ಯವಾಗಿ ಮಕ್ಕಳಿಗೆ ಅರ್ಥವಾಗಬೇಕು. ಹೆತ್ತವರು ಇದನ್ನು ಮಕ್ಕಳಿಗೆ ತಿಳಿಸಿಕೊಡಬೇಕು.

2. ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸುವ (problem solving) ಕಲೆ, ಅವರ ಸಮಸ್ಯೆಗಳನ್ನು ಆದಷ್ಟೂ ಅವರೇ ಪರಿಹಾರ ಮಾಡಿಕೊಳ್ಳುವ ಚಾಕಚಕ್ಯತೆ ಇತ್ಯಾದಿಗಳು ಮಕ್ಕಳಿಗೆ ಈ ವಯಸ್ಸಿನೊಳಗೆ ಬಂದುಬಿಡುತ್ತದೆ. ಅವುಗಳು ಸಾಧ್ಯವಾಗುತ್ತಿಲ್ಲ ಎಂದಾದರೆ ಅವರನ್ನು ಸರಿಯಾದ ರೀತಿಯಲ್ಲಿ ಗೈಡ್‌ ಮಾಡುವುದು ಹೆತ್ತವರ ಕರ್ತವ್ಯ.

3. ಮಕ್ಕಳು ಸೋಲನ್ನು ಸಹಜವಾಗಿ ತೆಗೆದುಕೊಳ್ಳುವುದನ್ನು, ಹಾಗೂ ಸೋಲು ಬದುಕಿನಲ್ಲಿ ಸಾಮಾನ್ಯ ಎಂಬುದನ್ನು ಈ ವಯಸ್ಸಿನೊಳಗೆ ಅರ್ಥ ಮಾಡಿಕೊಳ್ಳಬೇಕು. ಅಂದರೆ, ಎಲ್ಲದರಲ್ಲೂ ತಾನೇ ಗೆಲ್ಲಬೇಕು ಎಂಬಿತ್ಯಾದಿ ಭಾವನೆಗಳಿದ್ದರೆ, ನಿಧಾನವಾಗಿ ಅದರಿಂದ ಹೊರಗೆ ಬಂದು ಸೋಲಿನ ಸಂದರ್ಭ ಅದನ್ನು ನಿಭಾಯಿಸುವುದು ಹೇಗೆ ಹಾಗೂ ಸೋಲನ್ನೇ ಗೆಲುವಿನ ಮೆಟ್ಟಿಲಾಗಿ ಹೇಗೆ ಸ್ವೀಕರಿಸುವುದು ಎಂಬಿತ್ಯಾದಿ ಜೀವನ ಪಾಠಗಳನ್ನು ಕಲಿಯುವ ಕಾಲ.

4. ಮಕ್ಕಳಿಗೆ ಸಣ್ಣ ಸಣ್ಣ ತಮ್ಮ ಜವಾಬ್ದಾರಿಗಳನ್ನು ಹೊರುವ ಕಾಲಘಟ್ಟವಿದು. ಮಕ್ಕಳು ತಮ್ಮ ಶಾಲೆ ವಸ್ತುಗಳನ್ನು, ಆಟಿಕೆಗಳನ್ನು ಸರಿಯಾದ ಜಾಗದಲ್ಲಿಡುವುದು, ತನ್ನ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಟೀಚರು ಕೊಟ್ಟ ಕೆಲಸಗಳನ್ನು ತಾನೇ ತಾನಾಗಿ ಪೂರ್ತಿ ಮಾಡುವ, ಹಾಗೂ ತಾನು ಮಾಡಬೇಕಾದ ಕೆಲಸ ಹಾಗೂ ಜವಾಬುದಾರಿಗಳ್ನು ಪಟ್ಟಾಗಿ ಕೂತು ಸಮಯದೊಳಗೆ ಮಾಡಿ ಮುಗಿಸುವುದು ಇತ್ಯಾದಿಗಳನ್ನು ಕಲಿಯುವ ವಯಸ್ಸಿದು. ಹತ್ತರೊಳಗೆ ಮಕ್ಕಳು ಇಷ್ಟಾದರೂ ಕಲಿಯಬೇಕು.

5. ಸಮಯ ಪಾಲನೆ (time management) ಕೂಡಾ ಮಕ್ಕಳು ಕಲಿಯಬೇಕು. ಸಮಯಕ್ಕೆ ಸರಿಯಾಗಿ ಎದ್ದು, ತಮ್ಮ ಕೆಲಸಗಳನ್ನು ಮಾಡಿಕೊಳ್ಳುವುದು, ನಿಗದಿತ ಸಮಯದೊಳಗೆ ಕೆಲಸಗಳನ್ನು ಮುಗಿಸುವುದು, ಒಂದು ನಿರ್ದಿಷ್ಟ ಸಮಯದಲ್ಲಿ ಆಟವಾಡಲು ಹೋಗಿ ಬರುವುದು ಇತ್ಯಾದಿ ಮಕ್ಕಳು ಸಮಯ ಪಾಲನೆಯನ್ನು ಎಳವೆಯಲ್ಲಿಯೇ ರೂಢಿಸಿಕೊಳ್ಳಬಹುದು.

6. ತಮ್ಮ ಅಣ್ಣ ತಮ್ಮ ಅಕ್ಕ ತಂಗಿ ಜೊತೆ, ಬಂಧು ಬಳಗದ ಜೊತೆ ಪ್ರೀತಿಯಿಂದ ಇರುವುದು, ಕಾಳಜಿ ಮಾಡುವುದು (care taking) ಕೂಡಾ ಮಕ್ಕಳು ಈ ವಯಸ್ಸಿನಲ್ಲಿ ಕಲಿಯಬೇಕು.

7. ಅಡುಗೆ ಎಂಬುದು ಜೀವನಕ್ಕೆ ಅತ್ಯಂತ ಅಗತ್ಯವಾದ ಸ್ಕಿಲ್ (cooking skill).‌ ಮನೆಯಲ್ಲಿ ಅಮ್ಮನೋ, ಅಪ್ಪನೋ, ಅಡುಗೆಯವಳೋ ಮಾಡಿ ಕೊಡುವ ಊಟವನ್ನೇ ಜೀವನಪರ್ಯಂತ ತಿನ್ನುತ್ತಿದ್ದರೆ, ಅಡುಗೆ ಮಾಡಿ ಕೊಡುವವರಲ್ಲಿರುವ ಪ್ರೀತಿಯನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಬಹಳ ಸರಳವಾದ ಅಡುಗೆಗಳಾದ ಸ್ಯಾಂಡ್‌ವಿಚ್‌, ಮೊಟ್ಟೆ ಬೇಯಿಸುವುದು, ಜ್ಯೂಸ್‌, ಚೋಕೋಲೇಟ್‌ ಶೇಕ್‌ ಮಾಡಿಕೊಳ್ಳುವುದು ಇತ್ಯಾದಿ ಸರಳ ಪಟಾಪಟ್‌ ಅಡುಗೆಗಳನ್ನಾದರೂ ಮಕ್ಕಳು ಈ ವಯಸ್ಸಿನಲ್ಲಿ ಸ್ವಲ್ಪ ಕಲಿಯಬಹುದು.

8. ಮಕ್ಕಳಿಗೆ ಹಣದ ಮಹತ್ವವನ್ನು ತಿಳಿಸಿಕೊಡುವುದು (money management) ಬಹಳ ಅಗತ್ಯ. ಈ ವಯಸ್ಸಿನಲ್ಲಿ ಮಕ್ಕಳಿಗೆ ಹಣದ ಮೌಲ್ಯದ ಬಗೆಗೆ ತಿಳುವಳಿಕೆ ಮೂಡಬೇಕು. ತಮ್ಮದೇ ಪಿಗ್ಗಿ ಬ್ಯಾಕಿನಲ್ಲಿ ಹಣ ಶೇಖರಣೆ ಮಾಡುವುದು, ಹಣ ಉಳಿಕೆ ಮಾಡುವುದು ಇತ್ಯಾದಿ ಮಕ್ಕಳು ಈ ವಯಸ್ಸಿನಲ್ಲಿ ಕಲಿಯಬಹುದು.

9. ಆರೋಗ್ಯದ ಕಾಳಜಿಯನ್ನೂ ಮಕ್ಕಳು ತಮ್ಮ ಹತ್ತು ವಯಸ್ಸಿನೊಳಗೆ ಕಲಿತುಕೊಳ್ಳಬೇಕು. ಗಾಯವಾದರೆ ಏನು ಮಾಡಬೇಕು, ಫಸ್ಟ್‌ ಏಯ್ಡ್‌ ಬಳಸುವುದು ಹೇಗೆ, ತುರ್ತು ಘಟಕವನ್ನು ಸಂಪರ್ಕಿಸುವುದು ಹೇಗೆ ಇತ್ಯಾದಿ ಸಾಮಾನ್ಯ ಜ್ಞಾನ ಮಕ್ಕಳಿಗೆ ಈ ವಯಸ್ಸಿನೊಳಗೆ ಹೇಳಿ ಕೊಡಬೇಕು.

ಇದನ್ನೂ ಓದಿ: Parenting Guide: ಮಕ್ಕಳ ಮೇಲೆ ಎಲ್ಲದಕ್ಕೂ ಹರಿಹಾಯುವ ಮುನ್ನ ಈ ಸೂತ್ರಗಳತ್ತ ಒಮ್ಮೆ ಕಣ್ಣಾಡಿಸಿ!

Continue Reading

Relationship

Parenting Guide: ಮಕ್ಕಳ ಮೇಲೆ ಎಲ್ಲದಕ್ಕೂ ಹರಿಹಾಯುವ ಮುನ್ನ ಈ ಸೂತ್ರಗಳತ್ತ ಒಮ್ಮೆ ಕಣ್ಣಾಡಿಸಿ!

ಮಕ್ಕಳ ಮೇಲೆ (relationship tips) ಮಾತು ಮಾತಿಗೂ ಅವರು ತಪ್ಪಿದಲ್ಲಿ ಹರಿಹಾಯುವುದರಿಂದ ಆಗುವ ತೊಂದರೆಗಳೇನು ಹಾಗೂ ಇಂತಹ ಸಂದರ್ಭಗಳಲ್ಲಿ ಮಕ್ಕಳನ್ನು ಹೇಗೆ ನಿಭಾಯಿಸಬಹುದು (parenting guide) ಎಂಬುದನ್ನು ನೋಡೋಣ ಬನ್ನಿ.

VISTARANEWS.COM


on

positive parenting
Koo

ಪಾಸಿಟಿವ್‌ ಪೇರೆಂಟಿಂಗ್‌ (positive parenting) ಎಂದರೆ ಮಕ್ಕಳನ್ನು ಎಲ್ಲಿಯೂ ಬೈಯದೆ, ಸದಾ ಅವರನ್ನು ರಮಿಸುತ್ತಾ ದಯೆಯಿಂದ ನೋಡಿಕೊಳ್ಳುವುದು ಎಂಬರ್ಥವಂತೂ ಖಂಡಿತಾ ಅಲ್ಲ. ಪಾಸಿಟಿವ್‌ ಪೇರೆಂಟಿಂಗ್‌ನಲ್ಲಿ ಮಕ್ಕಳನ್ನು ಶಿಸ್ತಿನಿಂದ (parenting discipline) ನೋಡಿಕೊಳ್ಳುವುದಷ್ಟೇ ಅಲ್ಲ, ಮಕ್ಕಳು ತಮ್ಮ ಕಾಲ ಮೇಲೆ ತಾವು ಆತ್ಮವಿಶ್ವಾಸದಿಂದ ನಿಂತುಕೊಳ್ಳುವುದು, ಇತರರ ಜೊತೆಗೆ ಚಂದಕ್ಕೆ ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದೂ (Parenting tips) ಕೂಡಾ ಇದೆ. ಆದರೆ, ಮಕ್ಕಳ ಮೇಲೆ (relationship tips) ಮಾತು ಮಾತಿಗೂ ಅವರು ತಪ್ಪಿದಲ್ಲಿ ಹರಿಹಾಯುವುದರಿಂದ ಆಗುವ ತೊಂದರೆಗಳೇನು ಹಾಗೂ ಇಂತಹ ಸಂದರ್ಭಗಳಲ್ಲಿ ಮಕ್ಕಳನ್ನು ಹೇಗೆ ನಿಭಾಯಿಸಬಹುದು (parenting guide) ಎಂಬುದನ್ನು ನೋಡೋಣ ಬನ್ನಿ.

1. ಮಕ್ಕಳಿಗೆ ಮೊದಲು ನೀವು ಪಾಸಿಟಿವ್‌ ಉದಾಹರಣೆಗಳನ್ನು ಸೆಟ್‌ ಮಾಡಬೇಕು. ಮಕ್ಕಳು ತಮ್ಮ ಹೆತ್ತವರು ಹೇಗೆ ವರ್ತಿಸುತ್ತಾರೆ ಎಂಬುದನ್ನು ನೋಡಿಕೊಂಡು ಬೆಳೆಯುತ್ತಾರೆ. ಹಾಗಾಗಿ ನೀವು ಹೇಗೆ ವರ್ತಿಸುತ್ತಿದ್ದೀರಿ ಎಂಬುದನ್ನು ನೀವೇ ಮೊದಲು ಗಮನಿಸಿ.

2. ಮಕ್ಕಳು ಯಾವಾಗಲೂ ತಾವು ಹೆತ್ತವರ ಮಡಿಲಲ್ಲಿ ಬೆಚ್ಚಗಿರುತ್ತೇವೆ ಎಂಬ ಸೇಫ್‌ ಭಾವವನ್ನು ಹೊಂದುವುದು ಹೆತ್ತವರು ಅವರನ್ನು ಆಗಾಗ ಅದನ್ನು ಅವರ ಮುಂದೆ ವ್ಯಕ್ತಪಡಿಸುವುದರ ಮೂಲಕ. ಅಂದರೆ, ಹೆತ್ತವರು ಆಗಾಗ ಮಕ್ಕಳನ್ನು ಅಪ್ಪಿಕೊಳ್ಳುವುದು, ಮುದ್ದು ಮಾಡುವುದರ ಮೂಲಕ ಮಕ್ಕಳಿಗೆ ಈ ಭಾವ ಮೊಳೆಯುತ್ತದೆ. ಹಾಗಾಗಿ ಹೆತ್ತವರ ದೈಹಿಕ ಸಾಂಗತ್ಯವೂ ಮಕ್ಕಳಿಗೆ ಅಗತ್ಯವೇ. ಇಲ್ಲದಿದ್ದರೆ ಮಕ್ಕಳು ಇದನ್ನು ಮನೆಯಿಂದ ಹೊರಗೆ ಪಡೆಯಲು ನೋಡುತ್ತಾರೆ.

3. ನಂಬಿಕೆ ಎಂಬುದು ಹೆತ್ತವರ ಮಕ್ಕಳ ನಡುವಿನ ಸಂದರ್ಭವೂ ಬಹಳ ಮುಖ್ಯ. ಮಕ್ಕಳ ಜೊತೆಗೆ ವಿಚಾರಗಳನ್ನು ಮುಚ್ಚಿಡುವುದು, ʻಏಯ್‌, ಬಾಯ್ಮಚ್ಚು. ಇದು ನಿನಗೆ ಸಂಬಂಧಿಸಿದ್ದಲ್ಲ, ದೊಡ್ಡವರ ವಿಷಯʼ ಇತ್ಯಾದಿ ಮಾತುಗಳು ಮಕ್ಕಳಲ್ಲಿ ಹೆತ್ತವರ ಬಳಿ ನಂಬಿಕೆಯನ್ನು ಬೆಳೆಸುವುದಿಲ್ಲ. ಹಾಗಾಗಿ ಮಕ್ಕಳ ಎದುರು, ಪ್ರಾಮಾಣಿಕವಾಗಿರಿ, ಪಾರದರ್ಶಕವಾಗಿರಿ. ನಂಬಿಕೆ ಬೆಳೆಸಿ.

4. ಹೆತ್ತವರ ಸತತ ಪ್ರೋತ್ಸಾಹದಿಂದ ಮಕ್ಕಳು ಆತ್ಮವಿಶ್ವಾಸ ಬೆಳೆಸಿಕೊಳ್ಳುತ್ತಾರೆ. ಮಕ್ಕಳು ಒಳ್ಳೆಯ ಕೆಲಸ ಮಾಡಿದಾಗ, ಆತ್ಮವಿಶ್ವಾಸ ಪ್ರದರ್ಶಿಸಿದಾಗ ಅವರ ಬೆನ್ನು ತಟ್ಟಿ. ಹಾಗಂತ ಅತಿಯಾದ ಹೊಗಳಿಕೆಯೂ ಒಳ್ಳೆಯದಲ್ಲ.

5. ಒತ್ತಡದಲ್ಲಿದ್ದಾಗ ಆದಷ್ಟೂ ನಿಮ್ಮನ್ನು ನೀವು ಕಂಟ್ರೋಲ್‌ ಮಾಡಿಕೊಳ್ಳುವುದನ್ನು ಕಲಿಯಿರಿ. ಮಕ್ಕಳು ನಿಮ್ಮನ್ನು ನೋಡಿ ಕಲಿಯುತ್ತಾರೆ ಎಂಬುದನ್ನು ನೆನಪಿಡಿ.

6. ಮಕ್ಕಳ ಜೊತೆ ಸಂಬಂಧವನ್ನು (parent children relation) ಗಟ್ಟಿಗೊಳಿಸಿ. ಇದಾಗಬೇಕೆಂದರೆ ಪಾಸಿಟಿವ್‌ ಪೇರೆಂಟಿಂಗ್‌ ನಿಮ್ಮ ಕೀಲಿಕೈಯಾಗಬೇಕು. ಅಂದರೆ ಮಕ್ಕಳ ಜೊತೆಗೆ ನೀವು ಬೆಚ್ಚಗಿನ ಭಾವ ಕಟ್ಟಿಕೊಳ್ಳಬೇಕು.

7. ಮನೆಯಲ್ಲಿ ಮಕ್ಕಳಿಗೆ ಸ್ವಾತಂತ್ರ್ಯವಿರಬೇಕು. ಅಂದರೆ, ಆ ಸ್ವಾತಂತ್ರ್ಯ ಅತಿಯಾಗಬಾರದು. ಮಕ್ಕಳಿಗೆ ಮನೆಯಲ್ಲಿ ಮನಬಿಚ್ಚಿ ತಮ್ಮ ಹೆತ್ತವರ ಜೊತೆಗೆ ಏನನ್ನು ಬೇಕಾದರೂ ಹೇಳುವ ವಾತಾವರಣ ಕಟ್ಟಿಕೊಡುವುದು ಹೆತ್ತವರಾಗಿ ನಿಮ್ಮ ಕರ್ತವ್ಯ. ಮಕ್ಕಳ ಮನಸ್ಸಿನಲ್ಲಿ ಇದು ಬೇರೂರುದರೆ, ಹೆತ್ತವರು ಗೆದ್ದಂತೆ.

ಇದನ್ನೂ ಓದಿ: Parenting Tips: ನಿಮ್ಮ ಮಕ್ಕಳು ಶಾಲೆಯಲ್ಲಿ ಯಶಸ್ಸಿನ ಹಾದಿಯಲ್ಲಿ ಸಾಗಬೇಕೇ? ಇಲ್ಲಿವೆ ನವಸೂತ್ರಗಳು!

8. ಸಂವಹನ ತುಂಬ ಮುಖ್ಯ. ಮಕ್ಕಳು ತಮ್ಮ ಭಾವನೆಗಳನ್ನು ನಿಮ್ಮ ಜೊತೆ ನೇರವಾಗಿ ಹಂಚಿಕೊಳ್ಳಬಹುದಾದ ವಾತಾವರಣ ಇರಬೇಕು. ನೀವು ಮಕ್ಕಳ ಮೇಲೆ ಹರಿಹಾಯುತ್ತಿದ್ದರೆ, ಸರಿಯಾಗಿ ಕೂತು ಮಕ್ಕಳ ಜೊತೆಗೆ ಭಾವನೆಗಳನ್ನು ಹಂಚಿಕೊಳ್ಳದಿದ್ದರೆ, ಮಕ್ಕಳನ್ನು ಮಕ್ಕಳಾಗಿ ಇರಲು ಬಿಡದಿದ್ದರೆ, ಮಕ್ಕಳ ಮಾತನ್ನು ಕೇಳಿಸಿಕೊಳ್ಳುವ ವ್ಯವಧಾನ ಇರದಿದ್ದರೆ ಮಕ್ಕಳ ಹಾಗೂ ಪೋಷಕರ ನಡುವೆ ಪಾರದರ್ಶಕ ಸಂವಹನ ಸಾಧ್ಯವಾಗದು.

9. ಮಕ್ಕಳ ಮೇಲೆ ರೇಗಲೇಬಾರದು ಎಂದೇನಿಲ್ಲ. ಎಲ್ಲಿ ಹೇಗೆ ರೇಗಬೇಕು ಎಂಬುದನ್ನು ಪೋಷಕರು ಅರ್ಥ ಮಾಡಿಕೊಳ್ಳಬೇಕು. ಆಗ ಮಕ್ಕಳು ತಮ್ಮ ತಪ್ಪನ್ನು ತಿದ್ದಿಕೊಂಡು ಮುನ್ನಡೆಯುವ ಗುಣ ಬೆಳೆಸಿಕೊಳ್ಳುತ್ತಾರೆ. ಆತ್ಮವಿಶ್ವಾಸದಿಂದ ಬೆಳೆಯುತ್ತಾರೆ. ಅತಿಯಾದ ಹೊಗಳಿಕೆ ಹಾಗೂ ಮುದ್ದು, ಜೊತೆಗೆ ಅತಿಯಾದ ಬೈಗುಳ, ಶಿಸ್ತು ಎರಡೂ ಒಳ್ಳೆಯದಲ್ಲ.

ಇದನ್ನೂ ಓದಿ: Parenting Tips: ನಿಮ್ಮ ಮಕ್ಕಳು ಅಡ್ಡ ಬೆಳೆಯದೆ, ಉದ್ದ ಬೆಳೆಯಬೇಕೆಂದರೆ ಈ ಆಹಾರವನ್ನೇ ನೀಡಿ!

Continue Reading

Relationship

Parenting Tips: ನಿಮ್ಮ ಮಕ್ಕಳು ಅಡ್ಡ ಬೆಳೆಯದೆ, ಉದ್ದ ಬೆಳೆಯಬೇಕೆಂದರೆ ಈ ಆಹಾರವನ್ನೇ ನೀಡಿ!

ಮಕ್ಕಳು ಉದ್ದ ಬೆಳೆಯುವಂತೆ ಮಾಡುವುದೇನೂ ಬ್ರಹ್ಮವಿದ್ಯೆ ಅಂದುಕೊಳ್ಳಬೇಡಿ. ಮಕ್ಕಳ ದೇಹಕ್ಕೆ ಈ ಕೆಳಗಿನ ಆಹಾರಗಳನ್ನು ನಿಯಮಿತವಾಗಿ ಕೊಡುತ್ತಿದ್ದೇವಾ ಎಂದು ಒಮ್ಮೆ ಯೋಚಿಸಿದರೆ (Parenting tips) ಸಾಕು, ನಿಮ್ಮ ಪ್ರಶ್ನೆಗಳಿಗೆ ಉತ್ತರ ಇಲ್ಲೇ ಸಿದ್ಧ!

VISTARANEWS.COM


on

healthy children food
Koo

ಮಕ್ಕಳು ಬೆಳೆಯುವ ವಯಸ್ಸಿನಲ್ಲಿ ಚೆನ್ನಾಗಿ ತಿನ್ನಬೇಕು ಎಂಬ ಹಿರಿಯರ ಮಾತನ್ನು ನೀವು ಕೇಳಿರಬಹುದು. ಹೆಚ್ಚಾಗಿ, ಮನೆಯಲ್ಲಿರುವ ಹಿರಿಯರು, ಮಕ್ಕಳಿಗೆ ಆರೋಗ್ಯಪೂರ್ಣವಾದ ಆಹಾರವನ್ನು (Healthy food) ನೀಡುವುದನ್ನು ಪ್ರೋತ್ಸಾಹಿಸುತ್ತಲೇ ಇರುತ್ತಾರೆ. ಕೆಲವು ಪರಂಪರಾಗತ ತಿಂಡಿಗಳು, ಹಳೆಯ ತಿನಿಸುಗಳು, ಧಾನ್ಯ ಬೇಳೆಕಾಳುಗಳು ಹಾಗೂ ತರಕಾರಿಗಳಿಂದ ಸಮೃದ್ಧವಾದ ಆಹಾರ ಇತ್ಯಾದಿಗಳು ಮಕ್ಕಳ ನಿತ್ಯಾಹಾರವಾಗಿರಲಿ (children food) ಎಂದು ಮನೆಯಲ್ಲಿರುವ ಹಿರಿಯರು ಹೆಚ್ಚು ದೇಸೀ ತಿನಿಸುಗಳು, ಪೋಷಕಾಂಶಯುಕ್ತ ಬೆಳಗಿನ ಉಪಹಾರಗಳು ಇತ್ಯಾದಿಗಳತ್ತ ಗಮನ ನೀಡುತ್ತಾರೆ. ಆದರೆ ಇತ್ತೀಚೆಗಿನ ಧಾವಂತದ ಬದುಕಿನಲ್ಲಿ ಮಕ್ಕಳ ಕಣ್ಣಿಗೆ ಮಾರುಕಟ್ಟೆಯಲ್ಲೂ ಥರಹೇವಾರಿ, ಬಣ್ಣಬಣ್ಣದ ಆಕರ್ಷಕ, ರುಚಿಕಟ್ಟಾದ ಆಹಾರಗಳು ಸಿಗುವುದರಿಂದ ಮಕ್ಕಳೂ ಕೂಡಾ ಅವುಗಳ ದಾಸರಾಗುತ್ತಿದ್ದಾರೆ. ಇದರಿಂದ ಮಕ್ಕಳು ಎಳವೆಯಲ್ಲಿಯೇ ಹಲವಾರು ಆರೋಗ್ಯ ಸಮಸ್ಯೆಗಳನ್ನೂ (Health problems) ಎದುರಿಸುತ್ತಿದ್ದಾರೆ. ಬೊಜ್ಜು (Cholesterol) ಹೆಚ್ಚಾಗುತ್ತಿದೆ. ಮಧುಮೇಹ (Diabetes) ಸಾಮಾನ್ಯವಾಗುತ್ತಿದೆ. ನಮ್ಮ ಮಕ್ಕಳು ಉದ್ದ ಬೆಳೆಯದೆ ಅಡ್ಡ ಬೆಳೆಯುತ್ತಿದ್ದಾರಲ್ಲಾ ಎಂಬ ಕೊರಗೂ ಕೂಡಾ ಪೋಷಕರದು. ಹಾಗಾದರೆ ಮಕ್ಕಳು ಉದ್ದ ಬೆಳೆಯುವಂತೆ ಮಾಡುವುದೇನೂ ಬ್ರಹ್ಮವಿದ್ಯೆ ಅಂದುಕೊಳ್ಳಬೇಡಿ. ಮಕ್ಕಳ ದೇಹಕ್ಕೆ ಈ ಕೆಳಗಿನ ಆಹಾರಗಳನ್ನು ನಿಯಮಿತವಾಗಿ ಕೊಡುತ್ತಿದ್ದೇವಾ ಎಂದು ಒಮ್ಮೆ ಯೋಚಿಸಿದರೆ (Parenting tips) ಸಾಕು, ನಿಮ್ಮ ಪ್ರಶ್ನೆಗಳಿಗೆ ಉತ್ತರ ಇಲ್ಲೇ ಸಿದ್ಧ!

1. ಡೈರಿ ಉತ್ಪನ್ನಗಳು: ಹಾಲು, ಮೊಸರು, ಚೀಸ್‌ ಮತ್ತಿತರ ಡೈರಿ ಉತ್ಪನ್ನಗಳಲ್ಲಿ ಕ್ಯಾಲ್ಶಿಯಂ ಹೇರಳವಾಗಿರುವುದರಿಂದ ಮಕ್ಕಳಿಗೆ ಅತ್ಯಂತ ಅಗತ್ಯ. ಬೆಳೆಯುವ ವಯಸ್ಸಿನಲ್ಲಿ ಮಕ್ಕಳಿಗೆ ಕ್ಯಾಲ್ಶಿಯಂನ ಅಗತ್ಯ ಅತ್ಯಂತ ಹೆಚ್ಚಿರುವುದರಿಂದ ಅವರ ಎಲುಬು ಗಟ್ಟಿಯಾಗಿ, ಶಕ್ತಿಶಾಲಿಯಾಗಿ ಬೆಳವಣಿಗೆ ಹೊಂದಲು ಪೋಷಕಾಂಶಗಳು ಬೇಕೇಬೇಕು. ಹುಟ್ಟಿದ ಮಕ್ಕಳಿಂದ ಹಿಡಿದು ಹದಿಹರೆಯ ಮುಗಿಯುವವರೆಗೂ ಮೂಳೆಗಳ ಬೆಳವಣಿಗೆ ಬಹಳ ಪ್ರಮುಖವಾಗಿ ಆಗುವುದರಿಂದ ಇಂತಹ ಸಂದರ್ಭ ಕ್ಯಾಲ್ಶಿಯಂ ಮಕ್ಕಳಿಗೆ ಸಿಗುವುದು ಅತ್ಯಂತ ಅಗತ್ಯ ಕೂಡಾ.

2. ಮೊಟ್ಟೆ: ಮೊಟ್ಟೆಯಲ್ಲಿ ಅತ್ಯಂತ ಸಮೃದ್ಧವಾಗಿ ಪ್ರೊಟೀನ್‌, ಅಮೈನೋ ಆಸಿಡ್‌ ಇರುವುದರಿಂದ ಇವು ಮಕ್ಕಳ ಪ್ರತಿಯೊಂದು ಅಂಗಾಂಶದ ಬೆಳವಣಿಗೆಯಲ್ಲೂ ಮಹತ್ವದ ಪಾತ್ರ ವಹಿಸುತ್ತವೆ. ಅಂಗಾಂಶದ ಬೆಳವಣಿಗೆ, ರಿಪೇರಿ ಇತ್ಯಾದಿಗಳ ಕೆಲಸವೂ ಪ್ರೊಟೀನ್‌ನಿಂದಲೇ ಆಗುತ್ತದೆ. ಮಕ್ಕಳಿಗೆ ಪ್ರೊಟೀನ್‌ ಮೊಟ್ಟೆಯಿಂದ ಅತ್ಯಂತ ಹೆಚ್ಚು ಸಿಗುತ್ತದೆ. ಮೊಟ್ಟೆ ತಿನ್ನದ ಮಂದಿ ಮೊಟ್ಟೆಗೆ ಪರ್ಯಾಯ ಮೂಲಗಳನ್ನು ಹುಡುಕಿಕೊಳ್ಳಬೇಕು.

3. ಮಾಂಸ: ಚಿಕನ್‌, ಟರ್ಕಿ ಮತ್ತಿತರ ಮಾಂಸಗಳಿಂದಲೂ ಪ್ರೊಟೀನ್‌, ಝಿಂಕ್‌ ಮತ್ತಿತರ ಪೋಷಕಾಂಶಗಳು ಲಭ್ಯವಾಗುವುದರಿಂದ ಇದು ಎಲುಬಿನ ಬೆಳವಣಿಗೆಯಲ್ಲಿಯೂ ಸಹಾಯ ಮಾಡುತ್ತವೆ.

4. ಮೀನು: ಸಾಲ್ಮನ್‌, ಮಕೆರೆಲ್‌ ಮತ್ತಿತರ ಮೀನುಗಳಲ್ಲಿ ಒಮೆಗಾ ೩ ಫ್ಯಾಟಿ ಆಸಿಡ್‌ಗಳು ಹೇರಳವಾಗಿರುವುದರಿಂದ ಬೆಳವಣಿಗೆಗೆ ಪೂರಕವಾಗಿದೆ.

5. ದ್ವಿದಳ ಧಾನ್ಯಗಳು ಹಾಗೂ ಬೇಳೆಕಾಳುಗಳು: ದ್ವಿದಳ ಧಾನ್ಯಗಳಲ್ಲಿಯೂ, ಬೇಳೆ ಕಾಳುಗಳಲ್ಲಿಯೂ ಬೆಳವಣಿಗೆಗೆ ಅತ್ಯಂತ ಅಗತ್ಯವಾಗಿರುವ ಪ್ರೊಟೀನ್‌, ಕಬ್ಬಿಣಾಂಶ, ಝಿಂಕ್‌ ಕೂಡಾ ಇದೆ. ಇವು ಸಂಪೂರ್ಣ ಆರೋಗ್ಯಕ್ಕೆ ಅತ್ಯಂತ ಅವಶ್ಯಕ ಕೂಡಾ.

6. ಹಸಿರು ಸೊಪ್ಪು ತರಕಾರಿಗಳು: ಬಸಳೆ, ಪಾಲಕ್‌ ಸೇರಿದಂತೆ ಹಸಿರು ಸೊಪ್ಪು ತರಕಾರಿಗಳಲ್ಲಿ ಸಾಕಷ್ಟು ವಿಟಮಿನ್‌, ಖನಿಜಾಂಶ ಹಾಗೂ ಆಂಟಿ ಆಕ್ಸಿಡೆಂಟ್‌ಗಳೂ ಇರುವುದರಿಂದ ಮಕ್ಕಳ ಒಟ್ಟು ಆರೋಗ್ಯಕ್ಕೆ ಇದು ಪೂರಕವಾಗಿದೆ.

7. ಬೀಜಗಳು: ಬಾದಾಮಿ, ವಾಲ್‌ನಟ್‌, ಪಿಸ್ತಾ, ಕುಂಬಳಕಾಯಿ ಬೀಜ, ಸೌತೇಕಾಯಿ ಬೀಜ, ಚಿಯಾ ಬೀಜ, ಅಗಸೆ ಬೀಜ ಸೇರಿದಂತೆ ಎಲ್ಲ ಬಗೆಯ ಬೀಜಗಳಲ್ಲೂ ಮೆಗ್ನೀಶಿಯಂ ಸೇರಿದಂತೆ ಎಲ್ಲ ಬಗೆಯ ಪೋಷಕಾಂಶಗಳೂ ಇರುವುದರಿಂದ ಬೆಳವಣಿಗೆಗೆ ಇವು ಸಹಾಯ ಮಾಡುತ್ತವೆ.

8. ಹಣ್ಣುಗಳು: ಕಿತ್ತಳೆ, ಸ್ಟ್ರಾಬೆರ್ರಿ, ಕಿವಿ ಮತ್ತಿತರ ಹಣ್ಣುಗಳಲ್ಲಿ ವಿಟಮಿನ್‌ ಸಿ ಹೇರಳವಾಗಿದ್ದು, ಮಕ್ಕಳಲ್ಲಿ ರೋಗನಿರೋಧಕತೆ ಹೆಚ್ಚಿಸಿ, ಆರೋಗ್ಯವಂತರನ್ನಾಗಿ ಮಾಡುವ ಮೂಲಕ ಬೆಳವಣಿಗೆಯನ್ನು ಪ್ರೇರೇಪಿಸುತ್ತದೆ.

ಇದನ್ನೂ ಓದಿ: Parenting Tips: ನಿಮ್ಮ ಮಕ್ಕಳು ಶಾಲೆಯಲ್ಲಿ ಯಶಸ್ಸಿನ ಹಾದಿಯಲ್ಲಿ ಸಾಗಬೇಕೇ? ಇಲ್ಲಿವೆ ನವಸೂತ್ರಗಳು!

Continue Reading
Advertisement
Prajwal Revanna Case Who is behind pen drive mastermind Karthik HD Kumaraswamy Question
ರಾಜಕೀಯ34 mins ago

Prajwal Revanna Case: ಪೆನ್‌ಡ್ರೈವ್‌ ಸೂತ್ರಧಾರಿ ಕಾರ್ತಿಕ್‌ ಹಿಂದೆ ಯಾರಿದ್ದಾರೆ? ಎಲ್ಲಿದ್ದಾನೆ? ಅವನನ್ನೇಕೆ ಹಿಡಿಯಲಿಲ್ಲ? ಎಚ್‌ಡಿಕೆ ಪ್ರಶ್ನೆ

Lok Sabha election 2024
ದೇಶ43 mins ago

Lok Sabha Election 2024: ನಟ ಶೇಖರ್‌ ಸುಮನ್‌, ಕಾಂಗ್ರೆಸ್‌ ನಾಯಕಿ ರಾಧಿಕಾ ಖೇರಾ ಬಿಜೆಪಿ ಸೇರ್ಪಡೆ

Prajwal Revanna Case Kumaraswamy demands DK Shivakumar dismissal behind pen drive conspiracy
ರಾಜಕೀಯ58 mins ago

Prajwal Revanna Case: ಪೆನ್‌ಡ್ರೈವ್‌ ಸಂಚಿನ ಹಿಂದಿರುವ ಡಿ.ಕೆ. ಶಿವಕುಮಾರ್‌ ವಜಾಗೆ ಕುಮಾರಸ್ವಾಮಿ ಆಗ್ರಹ

T20 World Cup 2024
ಕ್ರೀಡೆ1 hour ago

T20 World Cup 2024: ಟಿ20 ವಿಶ್ವಕಪ್​ಗೆ ಪ್ರಕಟಗೊಂಡ ಎಲ್ಲ ತಂಡಗಳ ಆಟಗಾರರ ಪಟ್ಟಿ

Theft Case In Bengaluru
ಬೆಂಗಳೂರು1 hour ago

Theft Case : ಹಬ್ಬಕ್ಕೆ ಊರಿಗೆ ಹೋದ ಅಕ್ಕನ ಮನೆಗೆ ಕನ್ನ; ಸಾಕ್ಷಿ ನಾಶಕ್ಕೆ ಖಾರದ ಪುಡಿ ಚೆಲ್ಲಿದ ತಂಗಿ!

Sunita Williams
ತಂತ್ರಜ್ಞಾನ1 hour ago

Sunita Williams: ಸುನೀತಾ ವಿಲಿಯಮ್ಸ್‌ ಮೂರನೇ ಬಾಹ್ಯಾಕಾಶ ಯಾತ್ರೆ ಮುಂದೂಡಿಕೆ; ಹೊಸ ದಿನಾಂಕ ಶೀಘ್ರ ಘೋಷಣೆ

Money Guide
ಮನಿ ಗೈಡ್1 hour ago

Money Guide: ಮಹಿಳಾ ಸಮ್ಮಾನ್‌ ಸರ್ಟಿಫಿಕೆಟ್‌ ಮತ್ತು ಸುಕನ್ಯಾ ಸಮೃದ್ಧಿ; ಇವುಗಳ ಪ್ರಯೋಜನ ಏನೇನು?

Prajwal Revanna Case HD Revanna gets bail today court asked if there was a chance Hearing adjourned till tomorrow
ಕ್ರೈಂ2 hours ago

Prajwal Revanna Case: ಎಚ್‌.ಡಿ. ರೇವಣ್ಣಗೆ ಇಂದು ಸಿಗದ ಜಾಮೀನು; ಅವಕಾಶ ಇದೆಯೇ ಎಂದು ಕೋರ್ಟ್‌ ಪ್ರಶ್ನೆ; ನಾಳೆಗೆ ವಿಚಾರಣೆ ಮುಂದೂಡಿಕೆ

Rahul Gandhi
ದೇಶ2 hours ago

Rahul Gandhi: ಮೇಲ್ವರ್ಗದವರಿಂದಾಗಿ ಪರೀಕ್ಷೆಗಳಲ್ಲಿ ದಲಿತರು ಫೇಲ್‌; ರಾಹುಲ್‌ ಗಾಂಧಿ ಹೊಸ ವಿವಾದ

5 Day Work in Banks
ವಾಣಿಜ್ಯ2 hours ago

5 Days Work in Banks: ಬ್ಯಾಂಕ್‌ಗಳು ವಾರದಲ್ಲಿ ಐದೇ ದಿನ ಓಪನ್‌ ಇರಲಿವೆ; ಪರ್ಯಾಯ ವ್ಯವಸ್ಥೆಗೆ ಸಜ್ಜಾಗಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ19 hours ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ20 hours ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ20 hours ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ2 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ2 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ2 days ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ3 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ4 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

ಟ್ರೆಂಡಿಂಗ್‌