Poisonous Mushroom : ಕಾಡು ಅಣಬೆ ತಿಂದು ಮೂವರ ಸಾವು; ಅಡುಗೆ ಮಾಡಿದ್ದ ಸೊಸೆ ಮಾತ್ರ ಬಚಾವ್‌! - Vistara News

ಆಹಾರ/ಅಡುಗೆ

Poisonous Mushroom : ಕಾಡು ಅಣಬೆ ತಿಂದು ಮೂವರ ಸಾವು; ಅಡುಗೆ ಮಾಡಿದ್ದ ಸೊಸೆ ಮಾತ್ರ ಬಚಾವ್‌!

ಕಾಡು ಅಣಬೆಯಿಂದ (Poisonous Mushroom) ಮಾಡಲಾಗಿದ್ದ ಅಡುಗೆ ಸೇವಿಸಿ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಇನ್ನೊಬ್ಬರು ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾರೆ.

VISTARANEWS.COM


on

3 Dead After Eating Wild Mushrooms
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಆಸ್ಟ್ರೇಲಿಯಾ: ಸಾಮಾನ್ಯವಾಗಿ ಮಳೆಗಾಲದ ವೇಳೆ ಕಾಡಿನಲ್ಲಿ ಬೆಳೆಯುವ ಅಣಬೆಯನ್ನು (Poisonous Mushroom) ಸಾರು ಮಾಡಿ ತಿನ್ನುವುದು ಸಾಮಾನ್ಯ. ಹಳ್ಳಿ ಕಡೆಗಳಲ್ಲಿ ಕಾಡುಗಳಲ್ಲಿ ಸಿಗುವ ಅಣಬೆಯ ಸಾಂಬಾರು ರುಚಿಯಾಗಿರುತ್ತದೆ. ಆದರೆ ಅದರಲ್ಲಿ ಕೆಲವು ವಿಷಕಾರಿ ಅಣಬೆಯೂ ಇರುವುದರಿಂದ ಜನರು ಅದರ ಬಗ್ಗೆ ಹೆಚ್ಚಿನ ಎಚ್ಚರಿಕೆಯಿಂದಿರುತ್ತಾರೆ. ಇದೀಗ ಆಸ್ಟ್ರೇಲಿಯಾದ ಹಳ್ಳಿಯೊಂದರಲ್ಲಿ ಕಾಡು ಅಣಬೆಯಿಂದ ಮಾಡಲಾದ ಅಡುಗೆಯನ್ನು ತಿಂದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದು, ಮತ್ತೊಬ್ಬರು ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಈ ಸಾವಿನ ಪ್ರಕರಣದ ಕುರಿತು ಆಸ್ಟ್ರೇಲಿಯಾದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.

ಮೆಲ್ಬೋರ್ನ್‌ನಿಂದ ಸುಮಾರು ಎರಡು ಗಂಟೆ ಪ್ರಯಾಣದಷ್ಟು ದೂರದಲ್ಲಿರುವ ಲಿಯೊಂಗಾಥಾದಲ್ಲಿ ಎರಿನ್‌ ಪ್ಯಾಟರ್ಸನ್‌ ಹೆಸರಿನ ಮಹಿಳೆ ವಾಸವಿದ್ದಾಳೆ. ಜುಲೈ 29ರಂದು ಆಕೆ ಮಾವಂದಿರಾದ ಗೇಲ್‌ ಮತ್ತು ಡ್ಯಾನ್‌ ಪ್ಯಾಟರ್ಸನ್‌ ಅವರನ್ನು ಊಟಕ್ಕೆ ಕರೆದಿದ್ದಳು. ಅವರಿಬ್ಬರೊಂದಿಗೆ ಗೇಲ್‌ನ ಸಹೋದರಿಯರಾದ ವಿಲ್ಕಿನ್ಸನ್‌ ಮತ್ತು ಹೀದರ್‌ ಕೂಡ ಊಟಕ್ಕೆ ಹೋಗಿದ್ದರು. ಕಾಡು ಅಣಬೆಯನ್ನು ಬಳಸಿ ಮಾಡಿದ್ದ ಅಡುಗೆಯನ್ನು ಈ ನಾಲ್ವರೂ ತಿಂದಿದ್ದಾರೆ. ಅವರು ಊಟ ಮಾಡಿ ಸ್ವಲ್ಪ ಸಮಯದಲ್ಲೇ ಅನಾರೋಗ್ಯ ಕಾಡಲಾರಂಭಿಸಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆಂದು ಮೆಲ್ಬೋರ್ನ್‌ಗೆ ಅವರನ್ನು ಕರೆದೊಯ್ಯಲಾಗಿತ್ತು.

ಇದನ್ನೂ ಓದಿ: Viral News : ಒಂದು ಕನ್ನಡಕದ ಬಾಕ್ಸ್‌ನಿಂದ ಬಯಲಾಯ್ತು ಎರಡೆರೆಡು ಕೊಲೆ ಪ್ರಕರಣ!
ಆದರೆ ಚಿಕಿತ್ಸೆ ಫಲಿಸದೆ ಹೀದರ್‌(66) ಮತ್ತು ಗೇಲ್‌ (70) ಕಳೆದ ಶುಕ್ರವಾರ ನಿಧನರಾಗಿದ್ದಾರೆ. 70 ವರ್ಷದ ಡಾನ್‌ ಶನಿವಾರದಂದು ನಿಧನರಾಗಿದ್ದಾರೆ. ಹಾಗೆಯೇ 68 ವರ್ಷದ ಇಯಾನ್‌ ಸ್ಥಿತಿ ಕೂಡ ಗಂಭೀರವಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಯಕೃತ್ತಿನ ಕಸಿ ಮಾಡಬೇಕು ಎಂದು ವೈದ್ಯರು ತಿಳಿಸಿದ್ದಾರೆ.
ಈ ನಾಲ್ವರು ಅನಾರೋಗ್ಯಕ್ಕೆ ತುತ್ತಾದರೂ ಅಡುಗೆ ಮಾಡಿ ಅವರೆಲ್ಲರಿಗೆ ಬಡಿಸಿದ್ದ ಸೊಸೆ ಎರಿನ್‌ಗೆ ಏನೂ ಆಗಿಲ್ಲ. ಹಾಗಾಗಿ ಆಕೆಯ ಬಗ್ಗೆ ಅನುಮಾನ ಬಂದ ಹಿನ್ನೆಲೆಯಲ್ಲಿ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೆ ಆಕೆ ತನಗೆ ತನ್ನ ಕುಟುಂಬಕ್ಕೆ ನೋವುಂಟು ಮಾಡುವ ಯಾವುದೇ ಉದ್ದೇಶವಿಲ್ಲ. ಇದು ಹೇಗಾಯಿತು ಎನ್ನುವುದು ತನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾಳೆ. ಸದ್ಯ ಆಕೆಯನ್ನು ಪೊಲೀಸರ ವಶದಿಂದ ಬಿಡಲಾಗಿದೆ. ಆದರೆ ಆಕೆ ಇನ್ನೂ ಆರೋಪಿ ಸ್ಥಾನದಲ್ಲಿದ್ದು, ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜನರು ಈ ಸಾವುಗಳ ಹಿಂದೆ ಸೊಸೆ ಎರಿನ್‌ ಕೈವಾಡವಿರಬಹುದು ಎನ್ನುವ ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಹಾಗೆಯೇ ಕೆಲವರು ಇದು ಆಕೆಯ ಗಮನಕ್ಕೆ ಬಾರದೆ ಆಗಿರುವ ತಪ್ಪಾಗಿದ್ದಿರಬಹುದು ಎಂದು ಆಕೆಯ ಪರವಾಗಿಯೂ ಮಾತನ್ನಾಡುತ್ತಿದ್ದಾರೆ. ಆದರೆ ಈ ಪ್ರಕರಣದಲ್ಲಿ ಅಪರಾಧಿ ಯಾರು ಎನ್ನುವುದು ಪೊಲೀಸರಿಂದ ಪೂರ್ಣ ಪ್ರಮಾಣದ ತನಿಖೆ ನಡೆದ ನಂತರವೇ ತಿಳಿದು ಬರಬೇಕಿದೆ.

ಕಾಡ ಅಣಬೆ ತಿಂದು ಕರ್ನಾಟಕದಲ್ಲೂ ಇಂಥ ಹಲವು ದುರ್ಘಟನೆಗಳು ನಡೆದು ಕೆಲವು ಮೃತಪಟ್ಟಿದ್ದಾರೆ.

ಇದನ್ನೂ ಓದಿ: Food tips: ಅಣಬೆಗಳನ್ನು ಕೆಡದಂತೆ ಸಂರಕ್ಷಿಸಿಕೊಳ್ಳುವುದು ಹೇಗೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆಹಾರ/ಅಡುಗೆ

Milk Products: ಹಾಲು, ಹಾಲಿನ ಉತ್ಪನ್ನ ಸೇವಿಸಿದರೆ ಲಾಭವೋ ನಷ್ಟವೋ?

ನಿತ್ಯವೂ ಹಾಲು ಕುಡಿಯುವುದು, ಹಾಲು ಹಾಕಿದ ಚಹಾ ಕಾಫಿ ಸೇವನೆ, ಮೊಸರು, ಮಜ್ಜಿಗೆ, ತುಪ್ಪಗಳ ಸೇವನೆ, ಹಾಲಿನ ಉತ್ಪನ್ನಗಳಾದ (Milk products) ಪನೀರ್‌, ಖೋವಾ ಮತ್ತಿತರ ವಸ್ತುಗಳನ್ನು ಧಾರಳವಾಗಿ ಬಳಸುತ್ತೇವೆ. ಆದರೆ, ಇತ್ತೀಚೆಗಿನ ದಿನಗಳಲ್ಲಿ ವೀಗನ್‌ ಆಗಿ ಬದಲಾದ ಮಂದಿ ಸೇರಿದಂತೆ ಅನೇಕರು ಈ ಡೈರಿ ಉತ್ಪನ್ನಗಳನ್ನು (Dairy products) ಬಿಡುವ ಟ್ರೆಂಡ್‌ ಹೆಚ್ಚಾಗುತ್ತಿದೆ. ಹಾಲು ಸೇವನೆಯ ಲಾಭ ನಷ್ಟಗಳೇನು?

VISTARANEWS.COM


on

Milk Products
Koo

ನಿತ್ಯಾಹಾರದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ (Milk products) ಸೇವನೆ ನಮ್ಮ ಭಾರತೀಯ ಆಹಾರ ಪದ್ಧತಿಯಲ್ಲಂತೂ ಬಹಳ ಸಾಮಾನ್ಯ. ನಿತ್ಯವೂ ಹಾಲು ಕುಡಿಯುವುದು, ಹಾಲು ಹಾಕಿದ ಚಹಾ ಕಾಫಿ ಸೇವನೆ, ಮೊಸರು, ಮಜ್ಜಿಗೆ, ತುಪ್ಪಗಳ ಸೇವನೆ, ಹಾಲಿನ ಉತ್ಪನ್ನಗಳಾದ ಪನೀರ್‌, ಖೋವಾ ಮತ್ತಿತರ ವಸ್ತುಗಳನ್ನು ಧಾರಳವಾಗಿ ಬಳಸುತ್ತೇವೆ. ಆದರೆ, ಇತ್ತೀಚೆಗಿನ ದಿನಗಳಲ್ಲಿ ವೀಗನ್‌ ಆಗಿ ಬದಲಾದ ಮಂದಿ ಸೇರಿದಂತೆ ಅನೇಕರು ಈ ಡೈರಿ ಉತ್ಪನ್ನಗಳನ್ನು ಬಿಡುವ ಟ್ರೆಂಡ್‌ ಹೆಚ್ಚಾಗುತ್ತಿದೆ. ಇನ್ನೂ ಕೆಲವರಿಗೆ, ಹಾಲಿನಲ್ಲಿ ಇರುವ ಲ್ಯಾಕ್ಟೋಸ್‌ ಕಾರಣದಿಂದಲೂ ಕೆಲವರು ಹಾಲಿನ ಉತ್ಪನ್ನಗಳನ್ನು ಬಿಡುವುದುಂಟು. ಆದರೆ ಇದರಿಂದ ಲಾಭಗಳೂ ಇವೆ, ನಷ್ಟವೂ ಇವೆ. ಬನ್ನಿ, ಲ್ಯಾಕ್ಟೋಸ್‌ ರಹಿತ ಆಹಾರ ಸೇವನೆಯಿಂದ ಆಗುವ ಲಾಭ ನಷ್ಟಗಳನ್ನು ಗಮನಿಸೋಣ.

Health Tips Kannada Stay away from these foods to get rid of acne

ಮೊಡವೆ ನಿವಾರಣೆ

ಹಾಲಿನ ಉತ್ಪನ್ನಗಳನ್ನು ಬಿಡುವುದರಿಂದ ಮೊಡವೆಗಳ ಸಮಸ್ಯೆ ಕಡಿಮೆಯಾಗಬಹುದು. ಕೆಲವು ಮಂದಿಗೆ ಹಾಲಿನ ಉತ್ಪನ್ನ ಸೇವನೆಯಿಂದ ಚರ್ಮ ಎಣ್ಣೆಯುಕ್ತವಾಗುವುದರಿಂದ ಮೊಡವೆಗಳುಂಟಾಗುತ್ತವೆ. ಹೀಗಾಗಿ ಕೆಲವರಿಗೆ ಹಾಲು ಹಾಗೂ ಹಾಲಿನ ಉತ್ಪನ್ನ ಬಿಟ್ಟ ಕೂಡಲೇ, ಚರ್ಮದ ಆರೋಗ್ಯ ಗಣನೀಯವಾಗಿ ಸುಧಾರಿಸುತ್ತದೆ.

Weight Loss

ತೂಕ ಇಳಿಕೆ

ತೂಕ ಇಳಿಸಬೇಕು ಎಂದು ಬಯಸುವ ಮಂದಿಯೂ ಹಾಲಿನ ಉತ್ಪನ್ನಗಳಿಗೆ ಗುಡ್‌ಬೈ ಹೇಳುತ್ತಾರೆ. ಲ್ಯಾಕ್ಟೋಸ್‌ನಲ್ಲಿ ನೈಸರ್ಗಿಕ ಸಕ್ಕರೆ ಇರುವುದರಿಂದ ಇದನ್ನು ಬಿಟ್ಟ ಕೂಡಲೇ, ಸಹಜವಾಗಿಯೇ ತೂಕದಲ್ಲಿ ಇಳಿಕೆಯಾಗುತ್ತದೆ.

Pay attention to the causes of allergy flare-ups There can be many reasons like pollen dust food etc Monsoon Allergies

ಅಲರ್ಜಿ ನಿವಾರಣೆ

ಕೆಲವು ಮಂದಿಗೆ ಲ್ಯಾಕ್ಟೋಸ್‌ನಿಂದ ಅಲರ್ಜಿಗಳುಂಟಾಗುವ ಕಾರಣದಿಂದ ಇದನ್ನು ಬಿಟ್ಟ ಕೂಡಲೇ ಅಲರ್ಜಿ ಸಮಸ್ಯೆ ಪರಿಹಾರವಾಗುತ್ತದೆ.

Dairy products Protein Foods

ಡೇರಿ ಉತ್ಪನ್ನದ ಕತೆ ಏನು?

ಆದರೆ, ಡೇರಿ ಉತ್ಪನ್ನಗಳನ್ನು ಬಿಡುವುದು ಬಹಳ ಕಷ್ಟ. ಕೇವಲ ಹಾಲು ಬಿಡುವುದರಿಂದ ಡೈರಿ ಉತ್ಪನ್ನ ಬಿಟ್ಟಂತಾಗುವುದಿಲ್ಲ. ಬಹಳಷ್ಟು ಆಹಾರಗಳಲ್ಲಿ ಇಂದು ಡೇರಿ ಉತ್ಪನ್ನಗಳನ್ನು ಬಳಸುವುದರಿಂದ ಸಾಕಷ್ಟು ಆಹಾರ ಪದಾರ್ಥಗಳನ್ನು ನಾವು ಬಿಡಬೇಕಾಗುತ್ತದೆ. ಇದು ಬಹಳ ಕಷ್ಟ.

ಪೋಷಕಾಂಶ ಕೊರತೆ

ಹಾಲು ಹಾಗೂ ಹಾಲಿನ ಉತ್ಪನ್ನಗಳಲ್ಲಿ ನಮ್ಮ ದೇಹಕ್ಕೆ ನಿತ್ಯವೂ ಬೇಕಾದ ಸಾಕಷ್ಟು ಪೋಷಕಾಂಶಗಳು ಸಿಗುವುದರಿಂದ ಇದನ್ನು ಬಿಟ್ಟರೆ, ಇದಕ್ಕೆ ಪರ್ಯಾಯವಾಗಿ ಪೋಷಕಾಂಶಗಳನ್ನು ಹುಡುಕಬೇಕಾಗುತ್ತದೆ. ಇಲ್ಲವಾದರೆ ಈ ಪೋಷಕಾಂಶಗಳ ಕೊರತೆಯಾಗಬಹುದು.

ಇದನ್ನೂ ಓದಿ: Moringa Leaves Health Benefits: ನುಗ್ಗೆ ಸೊಪ್ಪು ಏಕೆ ತಿನ್ನಬೇಕು? ಏನಿದೆ ಇದರಲ್ಲಿ ವಿಶೇಷ ಗುಣ?

ಪೋಷಕಾಂಶ ಪೂರೈಕೆ

ಹಾಲಿನ ಉತ್ಪನ್ನಗಳಿಂದ ನಮ್ಮ ದೇಹಕ್ಕೆ ನಿತ್ಯವೂ ಸಿಗುವ ಪ್ರೊಟೀನ್‌, ಕ್ಯಾಲ್ಸಿಯಂ ಸೇರಿದಂತೆ ಪ್ರಮುಖ ಪೋಷಕಾಂಶಗಳನ್ನು ಬೇರೆ ಆಹಾರಗಳಿಂದ ಭರಿಸುವುದು ಬಹಳ ಕಷ್ಟ. ಇದಕ್ಕಾಗಿ ಸಪ್ಲಿಮೆಂಟ್‌ಗಳ ಸೇವನೆಯನ್ನೂ ಮಾಡಬೇಕಾಗಬಹುದು. ಸಪ್ಲಿಇಮೆಂಟ್‌ ಸೇವನೆ ಮಾಡದೇ ಇದ್ದರೆ, ಹಾಳಿಗೆ ಪರ್ಯಾಯ ಮೂಲಗಳನ್ನು ಹುಡುಕಿ ನಿತ್ಯವೂ ಆ ಪೋಷಕಾಂಶಗಳು ಸರಿಯಾದ ಪ್ರಮಾಣದಲ್ಲಿ ಸೇರುವಂತೆ ಮಾಡಬೇಕು. ಈ ಕಾರಣಗಳಿಂದಾಗಿ, ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಬಿಡುವುದರಿಂದ ಕೆಲವು ಲಾಭಗಳಿದ್ದರೂ, ನಷ್ಟದ ಪ್ರಮಾಣ ಅಧಿಕವಾಗಿರುವುದರಿಂದ ಅದನ್ನು ಬಿಡುವುದು ಆರೋಗ್ಯಕರ ಲಕ್ಷಣವಲ್ಲ ಎನ್ನಲಾಗುತ್ತದೆ. ಇವು ನಮ್ಮ ನಿತ್ಯ ಆಹಾರದ ಪ್ರಮುಖ ಭಾಗವಾಗಿರುವುದರಿಂದ ಇದನ್ನು ಬಿಡುವುದು ಯೋಗ್ಯ ಆಯ್ಕೆಯಲ್ಲ ಎಂದು ತಜ್ಞರು ಹೇಳುತ್ತಾರೆ.

Continue Reading

ಆಹಾರ/ಅಡುಗೆ

Food Tips Kannada: ಸಸ್ಯಾಹಾರಿಗಳಿಗೆ ಒಮೇಗಾ 3 ಕೊಬ್ಬಿನಾಮ್ಲ ಯಾವುದರಲ್ಲಿ ದೊರೆಯುತ್ತದೆ?

ಒಮೇಗಾ 3 ಕೊಬ್ಬಿನಾಮ್ಲ ಎನ್ನುತ್ತಿದ್ದಂತೆ ಕೊಬ್ಬಿನ ಮೀನುಗಳು ನೆನಪಾಗುತ್ತವೆ. ಸಾಗರೋತ್ಪನ್ನಗಳಿಂದ ಹೆಚ್ಚಿನ ಪ್ರಮಾಣದ ಒಮೇಗಾ 3 ದೊರೆಯುವುದು ಹೌದು. ಅದರರ್ಥ ಸಸ್ಯಾಹಾರಿಗಳಿಗೆ ಈ ಸತ್ವ ಇಲ್ಲವೆಂದಲ್ಲ. ಹಾಗಾದರೆ ಯಾವೆಲ್ಲ ಸಸ್ಯಜನ್ಯ ವಸ್ತುಗಳಿಂದ ಒಮೇಗಾ 3 ಕೊಬ್ಬಿನಾಮ್ಲವನ್ನು (Food Tips Kannada) ಪಡೆಯಬಹುದು?

VISTARANEWS.COM


on

Food Tips Kannada
Koo

ದೇಹವು ಪೂರ್ಣಾರೋಗ್ಯದಲ್ಲಿ ಇರಬೇಕೆಂದಾದರೆ ಆವಶ್ಯಕ ಪೌಷ್ಟಿಕಾಂಶಗಳೆಲ್ಲ ಪೂರ್ಣ ಪ್ರಮಾಣದಲ್ಲಿ ದೊರೆಯಬೇಕು. ಉದಾ, ಒಮೇಗಾ ೩ ಕೊಬ್ಬಿನಾಮ್ಲ ಹಲವು ಕಾರಣಗಳಿಂದಾಗಿ ದೇಹಕ್ಕೆ ಬೇಕೆಬೇಕು. ಮುಖ್ಯವಾಗಿ ಹೃದಯದ ಆರೋಗ್ಯ ರಕ್ಷಣೆಗೆ ಮತ್ತು ಮೆದುಳಿನ ಸಂರಕ್ಷಣೆಗೆ ಒಮೇಗಾ ೩ ಕೊಬ್ಬಿನಾಮ್ಲ ಅಗತ್ಯವಾಗಿ ಬೇಕು. ಮೀನಿನಲ್ಲಿ ಈ ಅಂಶ ಯಥೇಚ್ಛವಾಗಿ ದೊರೆಯುತ್ತದೆ. ಆದರೆ ಸಸ್ಯಾಹಾರಿಗಳಿಗೆ? ಅವರೇನು ತಿಂದರೆ ಒಮೇಗಾ ೩ ಕೊಬ್ಬಿನಾಮ್ಲವನ್ನು ಸಾಕಷ್ಟು ಪ್ರಮಾಣದಲ್ಲಿ (Food Tips Kannada) ಪಡೆಯುವುದಕ್ಕ್ ಸಾಧ್ಯ?

Flax Seeds with Pottery

ಅಗಸೆ ಬೀಜ

ಸಸ್ಯಾದಿಗಳಲ್ಲಿ ದೊರೆಯುವ ಒಮೇಗಾ 3 ಕೊಬ್ಬಿನಾಮ್ಲದ ಮೂಲಗಳ ಪೈಕಿ ಅಗಸೆ ಬೀಜ ಅತ್ಯಂತ ಹೆಚ್ಚಿನದ್ದು. ಆಲ್ಫಲಿನೊಲೆನಿಕ್‌ ಆಮ್ಲವು ಈ ಸಣ್ಣ ಬೀಜಗಳಲ್ಲಿ ಸಾಂದ್ರವಾಗಿದೆ. ಇದಲ್ಲದೆ, ನಾರು, ಪ್ರೊಟೀನ್‌, ಹಲವು ರೀತಿಯ ವಿಟಮಿನ್‌ಗಳು, ಖನಿಜಗಳು ಇದರಲ್ಲಿ ಹೇರಳವಾಗಿವೆ. ಹಾಗಾಗಿ ಈ ಬೀಜದ ಚಟ್ಣಿಪುಡಿಯಿಂದ ತೊಡಗಿ, ಎಣ್ಣೆಯವರೆಗೆ ಹಲವು ರೀತಿಯಲ್ಲಿ ಇದನ್ನು ನಿತ್ಯವೂ ಆಹಾರದಲ್ಲಿ ಉಪಯೋಗಿಸುವುದು ಶ್ರೇಷ್ಠ.

Chia Different Types of Seeds with Health Benefits

ಚಿಯಾ ಬೀಜ

ಈ ಬೀಜಗಳಂತೂ ಅಗಸೆ ಬೀಜಕ್ಕಿಂತಲೂ ಸಣ್ಣವು. ಆದರೆ ಒಮೇಗಾ 3 ಕೊಬ್ಬಿನಾಮ್ಲದ ವಿಷಯಕ್ಕೆ ಬಂದರೆ ಮಾತ್ರ ಸಣ್ಣವಲ್ಲ. ಇದರಲ್ಲೂ ಆಲ್ಫ ಲಿನೋಲೆನಿಕ್‌ ಆಮ್ಲ ಧಾರಾಳವಾಗಿದೆ. ಇದನ್ನು ಆಹಾರದಲ್ಲಿ ಬಳಸುವುದೂ ಸಹ ಕಷ್ಟವಲ್ಲ. ನಿತ್ಯವೂ ನೀರಿಗೆ ಹಾಕಿ ಕುಡಿದರೂ ಸಾಕಾಗುತ್ತದೆ. ಇದರಿಂದ ಜೀರ್ಣಾಂಗಗಳ ಆರೋಗ್ಯ ವೃದ್ಧಿಸುತ್ತದೆ, ತೂಕ ನಿರ್ವಹಣೆಗೆ ಸಹಾಯವಾಗುತ್ತದೆ, ಹೃದಯದ ಆರೋಗ್ಯ ರಕ್ಷಣೆಗೂ ನೆರವಾಗುತ್ತದೆ.

Hemp seed Different Types of Seeds with Health Benefits

ಹೆಂಪ್‌ ಬೀಜಗಳು

ಭಾರತದಲ್ಲಿ ಅಷ್ಟಾಗಿ ಪ್ರಚಲಿತವಿಲ್ಲದ ಬೀಜಗಳಿವು. ಆದರೆ ಸತ್ವಗಳ ವಿಷಯದಲ್ಲಿ ಕಡಿಮೆಯಿಲ್ಲ. ಇದರಲ್ಲಿಯೂ ಒಮೇಗಾ 3 ಕೊಬ್ಬಿನಾಮ್ಲ ಸಾಂದ್ರವಾಗಿದೆ. ಜೊತೆಗೆ ಹಲವು ರೀತಿಯ ಅಮೈನೊ ಆಮ್ಲಗಳು, ಖನಿಜಗಳು ದೇಹಕ್ಕೆ ದೊರೆಯುತ್ತವೆ. ಇದರ ತೈಲವೂ ಲಭ್ಯವಿದ್ದು, ಅಡುಗೆಗೆ ಬಳಸಲು ಸಾಧ್ಯವಿದೆ. ಗೋಡಂಬಿಯಂತೆಯೇ ಹೆಂಪ್‌ ಬೀಜಗಳನ್ನು ಸಹ ನಾನಾ ಖಾದ್ಯಗಳಿಗೆ ಉಪಯೋಗಿಸಬಹುದು.

Walnuts Dry Fruits For Hair Fall

ವಾಲ್‌ನಟ್‌

ಒಮೇಗಾ 3 ಕೊಬ್ಬಿನಾಮ್ಲವನ್ನು ನೈಸರ್ಗಿಕವಾಗಿಯೇ ಯಥೇಚ್ಛವಾಗಿ ಹೊಂದಿರುವ ಇನ್ನೊಂದು ವಸ್ತುವಿದು. ನೋಡಿದಾಗ ಮೆದುಳನ್ನು ನೆನಪಿಸುವ ವಾಲ್‌ನಟ್‌ನಲ್ಲಿ ಪ್ರೊಟೀನ್‌, ನಾರು ಮತ್ತು ಹಲವು ರೀತಿಯ ಉತ್ಕರ್ಷಣ ನಿರೋಧಕಗಳಿವೆ. ಇವುಗಳನ್ನು ಹಾಗೆಯೇ ಬಾಯಾಡಬಹುದು ಅಥವಾ ಸಲಾಡ್‌ಗಳಿಗೆ, ಬ್ರೆಡ್‌, ಓಟ್‌ಮೀಲ್‌ ಮುಂತಾದ ಹಲವು ತಿನಿಸುಗಳೊಂದಿಗೆ ಇದನ್ನು ಸೇರಿಸಲೂಬಹುದು.

ಕ್ಯಾನೊಲ ಎಣ್ಣೆ

ಅಡುಗೆಗೆ ಬಳಸುವ ಎಣ್ಣೆಯನ್ನು ಉಳಿದೆಲ್ಲದರ ಬದಲಿಗೆ ಕ್ಯಾನೊಲ ಎಣ್ಣೆಯನ್ನು ಬಳಸಬಹುದು. ಇದರಲ್ಲೂ ಒಮೇಗಾ 3 ಕೊಬ್ಬಿನಾಮ್ಲ ಧಾರಾಳವಾಗಿದೆ. ಗಾಣದಲ್ಲಿ ತೆಗೆದ ಅಥವಾ ಕೋಲ್ಡ್‌ ಪ್ರೆಸ್ಡ್‌ ರೀತಿಯಿಂದ ತೆಗೆದ ಕ್ಯಾನೊಲ ಎಣ್ಣೆಯನ್ನು ಬಳಸುವುದು ಸೂಕ್ತ. ಇದನ್ನು ಒಗ್ಗರಣೆಗೆ, ಹುರಿಯಲು, ಕರಿಯಲು ಹಾಗೂ ಉಳಿದ ಎಲ್ಲ ರೀತಿಯಲ್ಲೂ ಬಳಸಬಹುದು.

It provides good protein for vegetarians Soybeans Benefits

ಸೋಯಾ ಉತ್ಪನ್ನಗಳು

ತೋಫು, ಎಡಮೇಮ್‌ ಮುಂತಾದ ಎಲ್ಲ ರೀತಿಯ ಸೋಯಾ ಉತ್ಪನ್ನಗಳಲ್ಲಿ ಒಮೇಗಾ 3 ಕೊಬ್ಬಿನಾಮ್ಲ ದೊರೆಯುತ್ತದೆ. ಸೋಯಾ ಹಾಲನ್ನು ಕೂಡ ಈ ಪಟ್ಟಿಗೆ ಸೇರಿಸಬಹುದು. ಪನೀರ್‌ನಂತೆಯೇ ತೋಫು ಬಳಕೆಗೆ ಬರುತ್ತದೆ. ಉಳಿದೆಲ್ಲ ಕಾಳುಗಳಂತೆ ಎಡಮೇಮ್‌ ಬಳಸಬಹುದು. ಸೋಯಾ ಚಂಕ್‌ಗಳನ್ನು ತರಕಾರಿಗಳ ಜೊತೆಗೆ ಬೇಯಿಸಲು ಸಾಧ್ಯವಿದೆ.

ಇದನ್ನೂ ಓದಿ: Digestion Tips: ಜೀರ್ಣಾಂಗಗಳ ಕ್ಷಮತೆ ಹೆಚ್ಚಿಸುವುದು ಹೇಗೆ?

ಇತರ ಮೂಲಗಳು

ಲಘುವಾದ ಅಡಿಕೆಯಂಥ ಘಮವನ್ನು ಹೊಂದಿರುವ ಸೆಣಬಿನ ಬೀಜಗಳು, ಪಾಚಿಯೊಂದರಿಂದ ಸಿದ್ಧಪಡಿಸುವ ಆಲ್ಗಲ್‌ ಎಣ್ಣೆ, ಬ್ರಸೆಲ್‌ ಸ್ಪ್ರೌಟ್‌ ಮುಂತಾದ ಆಹಾರಗಳಲ್ಲೂ ಒಮೇಗಾ 3 ಕೊಬ್ಬಿನಾಮ್ಲ ಸಾಕಷ್ಟು ಪ್ರಮಾಣದಲ್ಲಿ ಇರುತ್ತದೆ. ಹೀಗೆ ಸಸ್ಯಾಹಾರಿಗಳಿಗೂ ಒಮೇಗಾ ೩ ಕೊಬ್ಬಿನಾಮ್ಲ ದೇಹಕ್ಕೆ ಅಗತ್ಯವಾದಷ್ಟು ದೊರೆಯುವುದಕ್ಕೆ ಸಾಧ್ಯವಿದೆ. ಇದಕ್ಕಾಗಿ ಇದಿಷ್ಟೂ ರೀತಿಯ ಆಹಾರಗಳನ್ನು ನಿಯಮಿತವಾಗಿ ಬಳಕೆ ಮಾಡುವುದು ಆವಶ್ಯಕ.

Continue Reading

ಆಹಾರ/ಅಡುಗೆ

Health Tips Kannada: ಈ ಆಹಾರಗಳಿಂದ ದೂರವಿದ್ದರೆ ಮೊಡವೆ ಸಮಸ್ಯೆಯಿಂದ ಪಾರಾಗಬಹುದು!

ಒಬ್ಬೊಬ್ಬರ ದೇಹ ಪ್ರಕೃತಿ ಒಂದೊಂದು ಬಗೆ. ಮೊಡವೆಗಳ ಸಮಸ್ಯೆಗೆ ಎಲ್ಲರ ಕಾರಣಗಳೂ ಒಂದೇ ಆಗಿರಬೇಕಾಗಿಲ್ಲ. ಆದರೆ, ಬಹುತೇಕರ ಸಮಸ್ಯೆ ಎಂದರೆ ಎಣ್ಣೆ ಚರ್ಮ. ಚರ್ಮದಲ್ಲಿ ಅತಿಯಾದ ಎಣ್ಣೆ ಸ್ರವಿಸಲ್ಪಡುವುದು ಹಾಗೂ ಇದರಿಂದ ಉಂಟಾಗುವ ಮೊಡವೆಗಳು. ಇದಕ್ಕಾಗಿ ಅನೇಕರು ಬಳಸದ ಕ್ರೀಮ್‌ಗಳಿಲ್ಲ, ಮಾಡದ ಮನೆಮದ್ದುಗಳಿಲ್ಲ, ಹೋಗದ ಪಾರ್ಲರ್‌ಗಳಿಲ್ಲ. ಆದರೆ ಸಮಸ್ಯೆ ಮಾತ್ರ ಎಂದಿನದ್ದೇ. ಹಾಗಾದರೆ ಮೊಡವೆಗಳಿಗೆ ಪರಿಹಾರವೇ ಇಲ್ಲವೇ? ಈ ಲೇಖನ ಓದಿ.

VISTARANEWS.COM


on

Health Tips Kannada Stay away from these foods to get rid of acne
Koo

ಬೆಂಗಳೂರು: ಮೊಡವೆ ಮತ್ತು ಮೊಡವೆಗಳ ಕಲೆಗಳಿಂದ ಬೇಸತ್ತ (Health Tips Kannada) ಮಂದಿ ಏನೆಲ್ಲ ಸರ್ಕಸ್‌ ಮಾಡಿದರೂ ಮೊಡವೆಯಿಂದ ಮುಕ್ತಿ ಸಿಗುವುದಿಲ್ಲ ಎಂದು ಬೇಸರ ಪಡಬಹುದು. ನೂರೆಂಟು ಮಂದಿ ನೂರಾರು (foods to get rid of acne) ಸಲಹೆ ಕೊಡಬಹುದಾದರೂ, ಎಲ್ಲರಿಗೂ ಎಲ್ಲ ಸಲಹೆಗಳೂ ಹೊಂದಲಾರದು. ಕಾರಣ, ಒಬ್ಬೊಬ್ಬರ ದೇಹ ಪ್ರಕೃತಿ ಒಂದೊಂದು ಬಗೆ. ಮೊಡವೆಗಳ ಸಮಸ್ಯೆಗೆ ಎಲ್ಲರ ಕಾರಣಗಳೂ ಒಂದೇ ಆಗಿರಬೇಕಾಗಿಲ್ಲ. ಆದರೆ, ಬಹುತೇಕರ ಸಮಸ್ಯೆ ಎಂದರೆ ಎಣ್ಣೆ ಚರ್ಮ. ಚರ್ಮದಲ್ಲಿ ಅತಿಯಾದ ಎಣ್ಣೆ ಸ್ರವಿಸಲ್ಪಡುವುದು ಹಾಗೂ ಇದರಿಂದ ಉಂಟಾಗುವ ಮೊಡವೆಗಳು. ಇದಕ್ಕಾಗಿ ಅನೇಕರು ಬಳಸದ ಕ್ರೀಮ್‌ಗಳಿಲ್ಲ, ಮಾಡದ ಮನೆಮದ್ದುಗಳಿಲ್ಲ, ಹೋಗದ ಪಾರ್ಲರ್‌ಗಳಿಲ್ಲ. ಆದರೆ ಸಮಸ್ಯೆ ಮಾತ್ರ ಎಂದಿನದ್ದೇ. ಹಾಗಾದರೆ ಮೊಡವೆಗಳಿಗೆ ಪರಿಹಾರವೇ ಇಲ್ಲವೇ ಎಂದು ನೀವು ಕೇಳಬಹುದು. ಖಂಡಿತ ಇದ್ದೇ ಇದೆ. ಮುಖ್ಯವಾಗಿ, ಚರ್ಮದ ಹೊರಗಿನ ಆರೈಕೆಗಿಂತ ಒಳಗಿನ ಆರೈಕೆ ಮುಖ್ಯ. ಒಳಗೆ ತೆಗೆದುಕೊಳ್ಳುವ ಆಹಾರದ ಬಗ್ಗೆಯೂ ಕಾಳಜಿ ಮಾಡಬೇಕು. ಬನ್ನಿ, ಯಾವೆಲ್ಲ ಆಹಾರಗಳ ಬಗ್ಗೆ ಎಚ್ಚರ ಅಗತ್ಯ ಎಂಬುದನ್ನು ನೋಡೋಣ.

ಹಾಲು

ಹಾಲಿನಿಂದ ಮೊಡವೆಗಳುಂಟಾಗಬಹುದು. ಆಶ್ಚರ್ಯವಾದರೂ ಸತ್ಯವೇ. ಹಸುವಿನ ಹಾಲಿನಲ್ಲಿ ಬೆಳವಣಿಗೆಯ ಹಾರ್ಮೋನ್‌ ಐಜಿಎಫ್‌-1 ಹಾಗೂ ಬೊವಿನ್‌ ಇರುವುದರಿಂದ ಇವು ನಮ್ಮ ದೇಹಕ್ಕೆ ಸೇರುವುದರಿಂದ ಇವು ಚರ್ಮದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಇದರಿಂದ ಮುಖದಲ್ಲಿ ಕೂದಲ ಬೆಳವಣಿಗೆ ಹಾಗೂ ಮೊಡವೆಗಳೂ ಉಂಟಾಗುತ್ತದೆ.

ಇದನ್ನೂ ಓದಿ: Food Tips Kannada: ಕಲಬೆರಕೆ ಆಹಾರಗಳಿಂದ ನಮ್ಮ ಆರೋಗ್ಯದ ಮೇಲಾಗುವ ಪರಿಣಾಮಗಳೇನು?

ಅಯೋಡಿನ್

ಮೊಡವೆಗಳಿಗೂ ಅಯೋಡಿನ್‌ಗೂ ಅವಿನಾಭಾವ ಸಂಬಂಧವಿದೆ. ಅಂದರೆ, ಉಪ್ಪು ಹೆಚ್ಚಿರುವ ತಿನಿಸುಗಳನ್ನು, ಆಗಾಗ ತಿನ್ನುವ ಆಹಾರಗಳಲ್ಲಿರುವ ಉಪ್ಪಿನ ಪ್ರಮಾಣ ಎಲ್ಲವೂ ನಮ್ಮ ಚರ್ಮದ ಮೇಲೆ ಪ್ರಭಾವ ಬೀರುತ್ತದೆ. ಆದರೆ, ಪೂರ್ತಿಯಾಗಿ ಉಪ್ಪನ್ನು ಬಿಡಬೇಡಿ. ಅಯೋಡಿನ್‌ ಕೊರತೆ ದೇಹಕ್ಕೆ ಆಗಬಾರದು ಎಂಬುದನ್ನೂ ನೆನಪಿನಲ್ಲಿಟ್ಟುಕೊಂಡು ಕೊಂಚ ಕಡಿಮೆ ಪ್ರಮಾಣದಲ್ಲಿ ಉಪ್ಪನ್ನು ತಿನ್ನುವ ಅಭ್ಯಾಸ ರೂಢಿಸಿಕೊಳ್ಳಿ. ಇದು ನಿಮ್ಮ ಚರ್ಮದ ಮೇಲೆ ಮ್ಯಾಜಿಕ್‌ ಮಾಡಬಹುದು.

ಹೆಚ್ಚು ಗ್ಲಿಸೆಮಿಕ್‌ ಇಂಡೆಕ್ಸ್‌ ಇರುವ ಆಹಾರಗಳು

ಕಡಿಮೆ ಗ್ಲಿಸೆಮಿಕ್‌ ಇಂಡೆಕ್ಸ್‌ ಇರುವ ಆಹಾರಗಳ ಸೇವನೆ ನಿಮ್ಮ ಮೊಡವೆಗಳ ಸಮಸ್ಯೆಯನ್ನೇ ಸಂಪೂರ್ಣವಾಗಿ ಇಲ್ಲವಾಗಿಸುತ್ತದೆ ಎನ್ನಲಾಗುತ್ತದೆ. ಕಾರ್ನ್‌ ಸಿರಪ್‌, ಮೈದಾ, ಸಕ್ಕರೆ, ರಿಫೈನ್ಡ್‌ ಧಾನ್ಯಗಳು, ಸಾಸ್‌ ಹಾಗೂ ಕೆಚಪ್‌ಗಳು, ಸ್ಪೋರ್ಟ್ಸ್‌ ಡ್ರಿಂಕ್‌ಗಳು ಸಂಸ್ಕರಿಸಿದ ಮಾಂಸ ಹಾಗೂ ಇತರ ಆಹಾರಗಳು, ಇತರ ಆಹಾರಗಳ ಮೂಲಕ ಗೊತ್ತೇ ಆಗದಂತೆ ದೇಹದೊಳಕ್ಕೆ ಸೇರುವ ಸಕ್ಕರೆ ಎಲ್ಲವೂ ಹೆಚ್ಚು ಗ್ಲಿಸೆಮಿಕ್‌ ಇಂಡೆಕ್ಸ್‌ ಹೊಂದಿವೆ. ಆದಷ್ಟೂ ನೈಸರ್ಗಿಕ ಆಹಾರಗಳು, ಒಣಬೀಜಗಳು, ಹಣ್ಣುಗಳು ಇತ್ಯಾದಿಗಳನ್ನೇ ತಿನ್ನಿ.

ಇದನ್ನೂ ಓದಿ: Prajwal Revanna Case: ದಿಕ್ಕು ತಪ್ಪಿದೆ ಪ್ರಜ್ವಲ್ ರೇವಣ್ಣ ಕೇಸ್‌; ಡಿಕೆಶಿ ವಿಚಾರಣೆಯೂ ಆಗಲಿ ಎಂದ ಬಸವರಾಜ ಬೊಮ್ಮಾಯಿ

ಹಾಗಾದರೆ ಏನು ತಿಂದರೆ ಮೊಡವೆಗಳು ಬರದಂತೆ ತಡೆಯಬಹುದು, ಚರ್ಮವನ್ನು ನುಣುಪಾಗಿ ಇರಿಸಬಹುದು ಎನ್ನುತ್ತೀರಾ? ಝಿಂಕ್‌ ಹೆಚ್ಚಿರುವ ಆಹಾರಗಳು ಮೊಡವೆ ಸಮಸ್ಯೆಗೆ ಬಹಳ ಒಳ್ಳೆಯದು. ಇದರಲ್ಲಿರುವ ಆಂಟಿ ಇನ್‌ಫ್ಲಮೇಟರಿ ಗುಣಗಳು ಮೊಡವೆ ಉಂಟು ಮಾಡುವ ಬ್ಯಾಕ್ಟೀರಿಯಾಗಳನ್ನು ಓಡಿಸುತ್ತವೆ. ಕಿಡ್ನಿ ಬೀನ್ಸ್‌, ಓಯ್ಸ್ಟರ್‌, ಕೆಂಪು ಮಾಂಸ ಹಾಗೂ ಸಿಹಿಕುಂಬಳದ ಬೀಜ ಇವುಗಳಲ್ಲಿ ಹೆಚ್ಚು ಝಿಂಕ್‌ ಇವೆ.

ಅಷ್ಟೇ ಅಲ್ಲ, ಒಮೆಗಾ 3 ಇರುವ ಆಹಾರಗಳನ್ನು ಹೆಚ್ಚಿಸಿ ಒಮೆಗಾ ಇರುವ ಆಹಾರಗಳಾದ ಸಂಸ್ಕರಿಸಿದ ಎಣ್ಣೆಗಳು, ಬೇಕ್ಡ್‌ ಆಹಾರಗಳು ಇತ್ಯಾದಿಗಳನ್ನು ಕಡಿಮೆ ಮಾಡಿ. ನದಿಯ ಮೀನನ್ನು ವಾರಕ್ಕೆರಡು ಬಾರಿ ತಿನ್ನಿ. ಚಿಯಾ ಬೀಜಗಳು, ಅಗಸೆ ಬೀಜಗಳನ್ನು ನಿತ್ಯವೂ ಸೇವಿಸಿ. ಆಹಾರ ಸೇವನೆಯ ಪ್ರಮಾಣದ ಮೇಲೆ ಹಿಡಿತವಿರಲಿ. ನೈಸರ್ಗಿಕ ಆಹಾರಗಳನ್ನೇ ಹೆಚ್ಚು ಸೇವಿಸಿ. ಎಲ್ಲ ಪೋಷಕಾಂಶಗಳನ್ನೊಳಗೊಂಡ ಸಂಪೂರ್ಣ ಆಹಾರದೆಡೆಗೆ ಗಮನ ಇರಲಿ. ಇಷ್ಟು ಮಾಡಿದರೆ ಖಂಡಿತವಾಗಿಯೂ ನಿಮ್ಮ ಚರ್ಮವೂ ಆರೋಗ್ಯಕರವಾಗಿ ಫಲಫಳಿಸುತ್ತದೆ ಎನ್ನುತ್ತಾರೆ ವೈದ್ಯರು.

Continue Reading

ಲೈಫ್‌ಸ್ಟೈಲ್

Food Tips Kannada: ಕಲಬೆರಕೆ ಆಹಾರಗಳಿಂದ ನಮ್ಮ ಆರೋಗ್ಯದ ಮೇಲಾಗುವ ಪರಿಣಾಮಗಳೇನು?

ಕಲಬೆರಕೆ ಅಂದರೆ ಮಲಿನ ವಸ್ತುಗಳನ್ನು ಅಥವಾ ಕಡಿಮೆ ಗುಣಮಟ್ಟದ ವಸ್ತುಗಳನ್ನು ಒಳ್ಳೆಯದಕ್ಕೆ ಬೆರೆಸುವುದು. ಮೂಲ ವಸ್ತುವಿನ ಬಣ್ಣ, ಘಮ ಇತ್ಯಾದಿಗಳನ್ನು ಹೆಚ್ಚಿಸಲು ಮಾಡುವ ಕಳ್ಳಾಟಗಳು. ಇದು ಗ್ರಾಹಕರಿಗೆ ಮಾಡುವ ವಿಶ್ವಾಸದ್ರೋಹ ಮಾತ್ರವಲ್ಲ, ಅವರ ಆರೋಗ್ಯದ ಮೇಲೂ ಗಂಭೀರ ಪರಿಣಾಮಗಳನ್ನು ಬೀರುತ್ತದೆ. ಕಲಬೆರಕೆಯ ಸುದ್ದಿಗಳು ಸುದ್ದಿಯೇ ಅಲ್ಲ ಎಂಬಂತಾಗಿದೆ. ನಮ್ಮ ಆಹಾರದ ಸುರಕ್ಷತೆಗೆ ನಾವೆಷ್ಟು ಗಮನ ನೀಡುತ್ತೇವೆ ಎಂಬುದಕ್ಕೆ ಇದು ಸಾಕ್ಷಿ. ಏನು ಕಲಬೆರಕೆ ಎಂದರೆ? ಇದರಿಂದ ಏನಾಗುತ್ತದೆ ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

Food Tips Kannada adulterated food effect health
Koo

ಕಲಬೆರಕೆಯ ಸಮಸ್ಯೆ ಇಂದು ನಿನ್ನೆಯದಲ್ಲ. ಇತ್ತೀಚೆಗೆ ದೇಶದ (Food Tips Kannada) ರಾಜಧಾನಿಯಲ್ಲಿ ವಶಕ್ಕೆ ತೆಗೆದುಕೊಳ್ಳಲಾದ ಸುಮಾರು 15 ಟನ್‌ಗಳಷ್ಟು ಪ್ರಮಾಣದ ನಕಲಿ ಮತ್ತು ಕಲಬೆರಕೆಯ ಮಸಾಲೆ ಅಥವಾ ಸಾಂಬಾರ ಪದಾರ್ಥಗಳ ಸುದ್ದಿ ಬಹಳಷ್ಟನ್ನು ತಿಳಿಸುತ್ತದೆ. ಕೊಳೆತ ಎಲೆಗಳು, ಹುಳು ಹಿಡಿದ ಧಾನ್ಯಗಳು, ಮರದ ಪುಡಿ ಮುಂತಾದ ವಸ್ತುಗಳನ್ನು ಕಲಬೆರೆಕೆಗೆಂದು ಇರಿಸಿದ್ದು, ಆಹಾರ ಸುರಕ್ಷತೆಯ ಬಗ್ಗೆ ನಾವೆಷ್ಟು ಅಜಾಗ್ರತೆ ಮಾಡುತ್ತೇವೆ ಎಂಬುದಕ್ಕೆ ಹಿಡಿದ ಕನ್ನಡಿ. ಏನು ಕಲಬೆರಕೆ ಎಂದರೆ? ಇದರಿಂದ ಏನಾಗುತ್ತದೆ?

ಕಲಬೆರಕೆ ಎಂದರೆ

ಮಲಿನ ವಸ್ತುಗಳನ್ನು ಅಥವಾ ಕಡಿಮೆ ಗುಣಮಟ್ಟದ ವಸ್ತುಗಳನ್ನು ಒಳ್ಳೆಯದಕ್ಕೆ ಬೆರೆಸುವುದು. ಆದರೆ ಇದನ್ನು ಮೂಲ ವಸ್ತುವಿನ ಬೆಲೆಗೆ ಮತ್ತು ಗುಣಮಟ್ಟದ ಖಾತ್ರಿಗೆ ಮಾರಲಾಗುತ್ತದೆ. ಇದಕ್ಕಾಗಿ ಮೂಲ ವಸ್ತುವಿನ ಬಣ್ಣ, ಘಮ ಇತ್ಯಾದಿಗಳನ್ನು ಹೆಚ್ಚಿಸಲು ಮಾಡುವ ಕಳ್ಳಾಟಗಳು. ಇದು ಗ್ರಾಹಕರಿಗೆ ಮಾಡುವ ವಿಶ್ವಾಸದ್ರೋಹ ಮಾತ್ರವಲ್ಲ, ಅವರ ಆರೋಗ್ಯದ ಮೇಲೂ ಗಂಭೀರ ಪರಿಣಾಮಗಳನ್ನು ಬೀರುತ್ತದೆ. ಈ ಬಗ್ಗೆ ವಿಸ್ತೃತವಾದ ಮಾಹಿತಿ ಇಲ್ಲಿದೆ.

ಅಗ್ಗದ ವಸ್ತುಗಳನ್ನು ಸೇರಿಸುವುದು

ಹಾಲಿಗೆ ನೀರು ಸೇರಿಸಿದಷ್ಟೇ ಲೀಲಾಜಾಲವಾಗಿ ಹಿಟ್ಟಿಗೆ ಸೀಮೆಸುಣ್ಣದ ಪುಡಿ ಬೆರೆಸುವುದು, ಅಚ್ಚ ಖಾರದ ಪುಡಿಗೆ ಅಥವಾ ಅರಿಶಿನ ಪುಡಿಗೆ ಬಣ್ಣ ಬರುವಂಥ ರಾಸಾಯನಿಕಗಳನ್ನು ಸೇರಿಸುವುದು, ದುಬಾರಿ ಬೆಲೆಯ ಆಲಿವ್‌ ಎಣ್ಣೆಗೆ ಅಗ್ಗದ ಯಾವುದೋ ಎಣ್ಣೆ ಬೆರೆಸುವುದು, ಅಂದರೆ ದುಬಾರಿ ಬೆಲೆಯ ವಸ್ತುವಿಗೆ ಅದರಂತೆಯೇ ಕಾಣುವ ಅಗ್ಗದ ಯಾವುದಾದರೂ ವಸ್ತುವನ್ನು ಸೇರಿಸಬಹುದು.

ಇದನ್ನೂ ಓದಿ: Job Alert: ಟೆಕ್ಸ್‌ಟೈಲ್ಸ್‌ ಕಮಿಟಿಯಿಂದ 40 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಬೆಂಗಳೂರಿನಲ್ಲೂ ಇದೆ ಪೋಸ್ಟಿಂಗ್‌

ಸತ್ವಹೀನ ಮಾಡುವುದು

ವಸ್ತುಗಳ ಸತ್ವಗಳನ್ನು ತೆಗೆದು ಅವುಗಳನ್ನು ಹೊಸ ಹೆಸರಿನಲ್ಲಿ ಮಾರಾಟ ಮಾಡುವುದು. ಅಂದರೆ ಹಾಲಿನ ಕೊಬ್ಬಿನಂಶವನ್ನೆಲ್ಲ ತೆಗೆದು, ಅದನ್ನು ಪ್ರತ್ಯೇಕ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತದೆ, ಜೊತೆಗೆ ʻಸ್ಕಿಮ್‌ ಮಿಲ್ಕ್‌ʼ ಹೆಸರಿನಲ್ಲಿ ಕೊಬ್ಬು ರಹಿತ ಹಾಲನ್ನೂ ಮಾರಾಟ ಮಾಡಲಾಗುತ್ತದೆ. ಇದು ಮಾತ್ರವಲ್ಲ, ಹಲವಾರು ಮಸಾಲೆಗಳ ತೈಲದಂಶವನ್ನು ತೆಗೆಯುವುದು ಸಹ ಇದೇ ಸಾಲಿಗೆ ಸೇರಿಸಲಾಗುತ್ತದೆ.

ರಾಸಾಯನಿಕಗಳ ಬೆರಕೆ

ದೀರ್ಘಕಾಲ ಬಾಳಿಕೆ ಬರುವಂತೆ ಮಾಡಲು ಹಲವು ರೀತಿಯ ಅನಾರೋಗ್ಯಕರ ರಾಸಾಯನಿಕಗಳನ್ನು ಬೆರೆಸಲಾಗುತ್ತದೆ. ಈ ಪೈಕಿ ರಸಗೊಬ್ಬರಗಳು, ಕೀಟನಾಶಗಳು ಮುಂತಾದ ರಾಸಾಯನಿಕಗಳನ್ನು ಕಲಬೆರಕೆಗೆ ಬಳಸಲಾಗುತ್ತದೆ. ಕೆಲವನ್ನು ʻಕಲರ್‌-ಬೆರಕೆʼಯ ಉದ್ದೇಶದಿಂದ ಮಾಡಲಾಗುತ್ತದೆ.

ಮಾಲಿನ್ಯದ ಸಮಸ್ಯೆ

ಆಹಾರಕ್ಕೆ ಕೀಟಗಳು, ಬ್ಯಾಕ್ಟೀರಿಯಗಳು, ಟಾಕ್ಸಿನ್‌ಗಳು, ಭಾರೀ ಖನಿಜಗಳು ಸಹ ಸೇರಬಹುದು. ಇವುಗಳಲ್ಲಿ ಎಲ್ಲವೂ ಉದ್ದೇಶಪೂರ್ವಕವಾಗಿ ಬೆರಕೆಯಾಗುತ್ತವೆ ಎಂದೇನಿಲ್ಲ. ಕೆಲವೊಂದು ಅರಿವಿಲ್ಲದೆಯೇ ಶುದ್ಧ ಆಹಾರಕ್ಕೆ ಸೇರಿರುವ ಸಾಧ್ಯತೆ ಇರುತ್ತದೆ.

ಕೃತಕ ಮಾಗಿಸುವಿಕೆ

ಬಾಳೆಗೊನೆ ತುರ್ತಾಗಿ ಹಣ್ಣಾಗಬೇಕೆ? ಎಥಿಲೀನ್‌ ಸೋಕಿದರಾಯ್ತು, ಬಲುಬೇಗ ಗೊನೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಮಾವು ಹಣ್ಣಾಗಬೇಕೆ? ಕ್ಯಾಲ್ಶಿಯಂ ಕಾರ್ಬೈಡ್‌ ಇದೆಯಲ್ಲ. ಹೀಗೆ ಹಲವು ರೀತಿಯ ರಾಸಾಯನಿಕಗಳನ್ನು ಬಳಸಿ, ಕಾಯಿಗಳನ್ನು ಮಾಗಿಸಿ ಹಣ್ಣಾಗಿಸಲಾಗುತ್ತದೆ. ಹಿಂದೆಯೂ ಇಂಥ ಕ್ರಮಗಳು ಬಳಕೆಯಲ್ಲಿದ್ದರೂ, ಅವುಗಳನ್ನು ರಾಸಾಯನಿಕಗಳನ್ನು ಬಳಸುತ್ತಿರಲಿಲ್ಲ. ಬದಲಿಗೆ ಹುಲ್ಲಿನಲ್ಲಿ ಹುದುಗಿಸುವುದು, ಪೆಟ್ಟಿಗೆಯನ್ನು ಉಬ್ಬೆ ಹಾಕುವಂಥ ಕ್ರಮಗಳು ಚಾಲ್ತಿಯಲ್ಲಿದ್ದವು.

ಆರೋಗ್ಯಕ್ಕೇನು ತೊಂದರೆ?

ಆಹಾರದ ಕಲಬೆರಕೆಯಿಂದ ಹೊಟ್ಟೆಯ ಆರೋಗ್ಯ ಬುಡಮೇಲಾಗಬಹುದು. ವಾಂತಿ, ಅತಿಸಾರ ಗಂಟಾಗಬಹುದು. ಹಣ್ಣುಗಳನ್ನು ಮಾಗಿಸಲು ಬಳಸುವ ರಾಸಾಯನಿಕಗಳು ಕ್ಯಾನ್ಸರ್‌ಕಾರಕ ಎಂಬ ಆರೋಪವಂತೂ ಇದ್ದೇಇದೆ. ಬೇಗ ಬೆಳೆಯಲೆಂದು ಕೃತಕ ಹಾರ್ಮೋನುಗಳನ್ನು ನೀಡುವುದರಿಂದ, ಅವು ಗರ್ಭಕೋಶದ ಕ್ಯಾನ್ಸರ್‌ಗೆ ಎಷ್ಟರಮಟ್ಟಿಗೆ ಕಾರಣವಾಗುತ್ತವೆ ಎಂಬ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ.

ಪೌಷ್ಟಿಕಾಂಶಗಳ ಕೊರತೆ

ಮೂಲ ಆಹಾರಕ್ಕೆ ಕಳಪೆ ವಸ್ತುಗಳನ್ನು ಸೇರಿಸುವುದರಿಂದ ಪೌಷ್ಟಿಕಾಂಶಗಳ ಕೊರತೆ ಎದುರಾಗುತ್ತದೆ. ಶುದ್ಧ ಅಡುಗೆ ಎಣ್ಣೆಗೆ ಕಲುಷಿತ ಎಣ್ಣೆಗಳನ್ನು ಸೇರಿಸುವುದರಿಂದ ಅಗತ್ಯ ಸತ್ವಗಳ ಕೊರತೆ ಕಾಡುವುದು ಸಾಮಾನ್ಯ. ಮಾತ್ರವಲ್ಲ, ಕೆಟ್ಟ ಕೊಬ್ಬಿನ ಅಂಶವೂ ದೇಹದಲ್ಲಿ ಹೆಚ್ಚಾಗಿ, ಜೀವನಶೈಲಿಯ ರೋಗಗಳೆಲ್ಲ ಬೆನ್ನು ಬೀಳುತ್ತವೆ.

ಅಲರ್ಜಿಗಳು

ಪ್ಯಾಕೇಜಿಂಗ್‌ ಮೇಲೆ ಆಯಾ ವಸ್ತುಗಳಲ್ಲಿ ಏನೇನನ್ನು ಸೇರಿಸಲಾಗಿದೆ ಎಂಬುದನ್ನು ನಮೂದಿಸುವುದು ಕಡ್ಡಾಯ. ಆದರೆ ಕಲಬೆರಕೆ ವಸ್ತುಗಳಲ್ಲಿಇಂಥ ಮಾಹಿತಿಗಳು ಇರುವುದಿಲ್ಲ, ಇದ್ದರೂ ಅದು ಸುಳ್ಳಾಗಿರುತ್ತದೆ. ಇದರಿಂದ ಅಲರ್ಜಿಗಳು ಕಾಣಬಹುದು. ಮುಖ, ಕಣ್ಣು ಅಥವಾ ತುಟಿಗಳು ಊದಿಕೊಳ್ಳಬಹುದು. ತುರಿಕೆ, ಮೈಮೇಲೆಲ್ಲ ಗುಳ್ಳೆಗಳು ಕಾಣಬಹುದು, ಉಸಿರಾಟದ ತೊಂದರೆಗಳು ಬರಬಹುದು.

Continue Reading
Advertisement
MS Dhoni
ಕ್ರೀಡೆ4 mins ago

MS Dhoni : ಆರ್​​ಸಿಬಿ ವಿರುದ್ಧ ಬೌಲಿಂಗ್ ಮಾಡಲು ಅಭ್ಯಾಸ ನಡೆಸಿದ ಎಂ ಎಸ್​ ಧೋನಿ

cauvery dispute
ಕರ್ನಾಟಕ16 mins ago

Cauvery Dispute: ಕರ್ನಾಟಕದಿಂದ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ; ತಮಿಳುನಾಡಿಗೆ CWRC ಚಾಟಿ

MS Dhoni
ಪ್ರಮುಖ ಸುದ್ದಿ20 mins ago

MS Dhoni : ಆರ್​ಸಿಬಿಯವರು ಕೊಟ್ಟ ಬೆಂಗಳೂರಿನ ಸ್ಪೆಷಲ್​ ಚಹಾ ಕುಡಿದ ಧೋನಿ; ಇಲ್ಲಿದೆ ವಿಡಿಯೊ

Sri Vedavyasa Jayanti programme at Bengaluru
ಬೆಂಗಳೂರು35 mins ago

Bengaluru News: ಹರಿದಾಸ ಸಾಹಿತ್ಯ ಚಿಂತನೆಯಿಂದ ಬದುಕು ಸುಗಮ: ವಿ. ಅಪ್ಪಣ್ಣ ಆಚಾರ್ಯ

Opposition party leader r ashok latest statement in Mysuru
ಪ್ರಮುಖ ಸುದ್ದಿ37 mins ago

R Ashok: ಪೊಲೀಸ್‌ ಇಲಾಖೆ ಸತ್ತಿದೆಯೋ ಬದುಕಿದೆಯೋ ತಿಳಿಯುತ್ತಿಲ್ಲ: ಆರ್.ಅಶೋಕ್ ಆಕ್ರೋಶ

BJP district president N S Hegde pressmeet in Yallapur
ಉತ್ತರ ಕನ್ನಡ39 mins ago

Lok Sabha Election 2024: 2.5 ಲಕ್ಷ ಮತಗಳ ಅಂತರದಿಂದ ಕಾಗೇರಿ ಗೆಲುವು: ಬಿಜೆಪಿ ಜಿಲ್ಲಾಧ್ಯಕ್ಷರ ವಿಶ್ವಾಸ

IPL 2024
ಪ್ರಮುಖ ಸುದ್ದಿ42 mins ago

IPL 2024 : ಮಳೆಯಿಂದ ಪಂದ್ಯ ರದ್ದು, ಕೆಕೆಆರ್​, ಆರ್​ಆರ್​ ಬಳಿಕ ಪ್ಲೇಆಫ್​ಗೇರಿದ ಎಸ್​ಆರ್​ಎಚ್​​

Lady Constable
ದೇಶ2 hours ago

ಗಾಯಕನ ಹಾಡಿಗೆ ಮನಸೋತು ವೇದಿಕೆ ಮೇಲೆಯೇ ಕಿಸ್‌ ಕೊಟ್ಟ ಲೇಡಿ ಕಾನ್‌ಸ್ಟೆಬಲ್;‌ ಈಗ ಮುತ್ತು ತಂದಿದೆ ಕುತ್ತು!

DK Shivakumar in Uttar Pradesh and Strategy in Amethi and Rae Bareli
Lok Sabha Election 20242 hours ago

DK Shivakumar: ಉತ್ತರ ಪ್ರದೇಶದಲ್ಲಿ ಡಿಕೆಶಿ; ಅಮೇಥಿ, ರಾಯ್‌ ಬರೇಲಿಯಲ್ಲಿ ಮಾಡ್ತಾರಾ ಕಮಾಲ್?

IPL 2024
ಪ್ರಮುಖ ಸುದ್ದಿ2 hours ago

IPL 2024 : ವಾಂಖೆಡೆ ಸ್ಟೇಡಿಯಮ್​ನಲ್ಲಿ ಗುದ್ದಾಡಿಕೊಂಡ ಮುಂಬೈ ಇಂಡಿಯನ್ಸ್ ಆಟಗಾರರು; ಇಲ್ಲಿದೆ ವಿಡಿಯೊ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ7 hours ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ10 hours ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು13 hours ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ2 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ2 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20242 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20242 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ2 days ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು3 days ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

ಟ್ರೆಂಡಿಂಗ್‌