Best Time to Eat Fruit: ಹಣ್ಣು ತಿನ್ನಲೊಂದು ಸಮಯ: ಯಾವಾಗ ಹಣ್ಣುಗಳನ್ನು ಸೇವಿಸಿದರೆ ಉತ್ತಮ? - Vistara News

ಆಹಾರ/ಅಡುಗೆ

Best Time to Eat Fruit: ಹಣ್ಣು ತಿನ್ನಲೊಂದು ಸಮಯ: ಯಾವಾಗ ಹಣ್ಣುಗಳನ್ನು ಸೇವಿಸಿದರೆ ಉತ್ತಮ?

ಹಣ್ಣುಗಳು ಒಳ್ಳೆಯದೆಂದು ಯಥೇಚ್ಛ ಹಣ್ಣು ತಿಂದರೆ ಲಾಭವಾಗುವುದಿಲ್ಲ, ನಷ್ಟವೇ ಹೆಚ್ಚು. ಪ್ರತಿಯೊಂದಕ್ಕೂ ಅದರದ್ದೇ ಆದ ಪ್ರಕೃತಿ ನಿಯಮಗಳಿವೆ. ಜೊತೆಗೆ ಎಷ್ಟು ಹಣ್ಣು ಯಾವಾಗ ದೇಹಕ್ಕೆ ಸೇರಿದರೆ ಒಳ್ಳೆಯದು ಎಂಬುದೂ ನಮಗೆ ತಿಳಿದಿರಬೇಕು.

VISTARANEWS.COM


on

winter fruits
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪ್ರತಿಯೊಬ್ಬರಿಗೂ ಹಣ್ಣು ನಮ್ಮ ಆರೋಗ್ಯಕ್ಕೆ ಒಳ್ಳೆಯದೆಂದು ಗೊತ್ತು. ದೇಹದ ಆರೋಗ್ಯವನ್ನು ಹೆಚ್ಚಿಸಿ, ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಒದಗಿಸಿ, ನಮ್ಮ ಸಣ್ಣಪುಟ್ಟ ಕಾಯಿಲೆಗಳಿಗೆ ಪರಿಹಾರ ಒದಗಿಸಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಹಣ್ಣುಗಳ ಪಾತ್ರ ದೊಡ್ಡದು (Fruit diet). ಆದರೆ, ಬಹಳಷ್ಟು ಸಾರಿ ನಮಗೆ ಈ ಹಣ್ಣುಗಳನ್ನು ಯಾವ ಹೊತ್ತಿನಲ್ಲಿ ತಿಂದರೆ ಇದರ ಸಂಪೂರ್ಣ ಲಾಭ ಪಡೆಯಬಹುದು (Best Time to Eat Fruit) ಎಂಬ ಬಗ್ಗೆ ಮಾತ್ರ ಗೊಂದಲಗಳಾಗುತ್ತವೆ. ಹಣ್ಣುಗಳು ಒಳ್ಳೆಯದೆಂದು ಯಥೇಚ್ಛ ಹಣ್ಣು ತಿಂದರೆ ಲಾಭವಾಗುವುದಿಲ್ಲ, ನಷ್ಟವೇ ಹೆಚ್ಚು. ಪ್ರತಿಯೊಂದಕ್ಕೂ ಅದರದ್ದೇ ಆದ ಪ್ರಕೃತಿ ನಿಯಮಗಳಿವೆ. ಜೊತೆಗೆ ಎಷ್ಟು ಹಣ್ಣು ಯಾವಾಗ ದೇಹಕ್ಕೆ ಸೇರಿದರೆ ಒಳ್ಳೆಯದು ಎಂಬುದೂ ನಮಗೆ ತಿಳಿದಿರಬೇಕು.

೧. ಯಾವಾಗ ತಿನ್ನಬೇಕು?: ಕೆಲವರ ಪ್ರಕಾರ ಖಾಲಿ ಹೊಟ್ಟೆಯಲ್ಲಿ ಬೆಳಗ್ಗೆ ಎದ್ದ ಕೂಡಲೇ ಹಣ್ಣು ತಿನ್ನುವುದು ಒಳ್ಳೆಯದು ಎಂಬ ನಂಬಿಕೆಯಿದೆ. ಇದು, ದೇಹದಲ್ಲಿ ಪಚನಕ್ರಿಯೆಗೆ ವೇಗವನ್ನು ಒದಗಿಸಿ, ತೂಕವನ್ನು ಸರಿಯಾಗಿಟ್ಟು, ದೇಹದ ಕಶ್ಮಲಗಳನ್ನು ಹೊರಗೆ ಕಳಿಸಿ ಅರೋಗ್ಯದ ಕಡೆಗೆ ಹೆಜ್ಜೆಯಿಡುವಂತೆ ಮಾಡುತ್ತದೆ ಎಂಬುದು ಆ ವಾದ. ಇನ್ನೂ ಕೆಲವರು ಹಣ್ಣುಗಳನ್ನು ಮಧ್ಯಾಹ್ನದ ಮೇಲೆ ತಿನ್ನುವುದು ಒಳ್ಳೆಯದು ಎಂದೂ ವಾದ ಮಾಡುತ್ತಾರೆ. ಆದರೆ ಇದಕ್ಕೆ ವೈಜ್ಞಾನಿಕ ಹುರುಳಿಲ್ಲ. ಆದರೆ, ಮಧ್ಯಾಹ್ನವಿರಲಿ ಬೆಳಗ್ಗೇ ಇರಲಿ, ಹಣ್ಣು ತಿನ್ನುವುದರಿಂದ ಪಚನಕ್ರಿಯೆ ವೇಗವನ್ನು ಪಡೆಯುತ್ತದೆ ಎಂಬುದಂತೂ ನಿಜ. ಯಾವುದೇ ಹೊತ್ತಿನಲ್ಲಿ ಖಾಲಿ ಹೊಟ್ಟೆಯಲ್ಲಿ ಹಣ್ಣು ತಿನ್ನುವುದರಿಂದ ಸುಲಭವಾಗಿ ಜೀರ್ಣವಾಗಿ, ದೇಹಕ್ಕೆ ಬೇಕಾದ ಶಕ್ತಿಯನ್ನು ಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಬೆಳಗ್ಗೆ ಹಣ್ಣು ತಿಂದರೆ, ದಿನವಿಡೀ ಉಲ್ಲಾಸದಾಯಕವಾಗಿ ಕಳೆಯುವುದೂ ಹೌದು.

Diabetics Fruits

೨. ಊಟದ ಜೊತೆಗೆ ಹಣ್ಣು ಒಳ್ಳೆದೋ ಕೆಟ್ಟದ್ದೋ?: ಊಟದ ಜೊತೆಗೆ ಹಣ್ಣು ತಿನ್ನುವುದರಿಂದ ಜೀರ್ಣಕ್ರಿಯೆ ನಿಧಾನವಾಗುತ್ತದೆ ಹಾಗೂ ತಿಂದ ಆಹಾರ ಹುಳಿ ಬಂದು ಹೊಟ್ಟೆಯಲ್ಲಿ ಕೊಳೆತಂತಾಗುತ್ತದೆ ಎಂಬ ನಂಬಿಕೆಯಿದೆ. ಅಸಿಡಿಟಿ, ಹೊಟ್ಟೆನೋವು, ಹಾಗೂ ಜೀರ್ಣಕ್ರಿಯೆ ಸಂಬಂಧಿಸಿದ ತೊಂದರೆಗಳು ಇದರಿಂದ ಉಂಟಾಗಬಹುದು. ಹಣ್ಣಿನಲ್ಲಿರುವ ಅಧಿಕ ನಾರಿನಂಶದಿಂದಾಗಿ ಊಟದ ಜೊತೆ ತಿನ್ನುವುದರಿಂದಾಗಿ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಆದರೆ ಹಣ್ಣು ಊಟದ ಜೊತೆ ತಿನ್ನುವುದರಿಂದ ಹೊಟ್ಟೆಯಲ್ಲಿ ಹೆಚ್ಚು ಹೊತ್ತು ಕರಗದೆ ಇರುತ್ತದೆ ಎಂಬುದಕ್ಕೆ ಆಧಾರಗಳಿಲ್ಲ. ಬದಲಾಗಿ, ಹಣ್ಣು ಹೊಟ್ಟೆ ಬೇಗ ತುಂಬಲು ಸಹಾಯ ಮಾಡುತ್ತದೆ ಹಾಗೂ ಹೆಚ್ಚು ಹೊತ್ತು ಕೆಲಸ ಮಾಡಲು ಶಕ್ತಿ ನೀಡುತ್ತದೆ.

ಇದನ್ನೂ ಓದಿ: Health Tips | ತೂಕ ಇಳಿಸಿ, ಹಸಿವು ನಿಯಂತ್ರಿಸಲು ಬೇಕು ಮಸಾಲೆ ಚಹಾ!

೩. ಮಧುಮೇಹಿಗಳೂ, ಹಣ್ಣುಗಳೂ: ಮಧುಮೇಹಿಗಳಿಗೆ ಅನ್ವಯಿಸಿ ಹೇಳುವುದಾದರೆ, ಹಣ್ಣು ತಿನ್ನುವ ಸಮಯ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ. ಖಾಲಿ ಹೊಟ್ಟೆಯಲ್ಲಿ ಅಥವಾ ಹಣ್ಣುಗಳನ್ನು ಮಾತ್ರ ತಿನ್ನುವುದರಿಂದ ಮಧುಮೇಹದ ತೊಂದರೆ ಇರುವ ಮಂದಿಯಲ್ಲಿ ಬಹಳ ವೇಗವಾಗಿ ಹಣ್ಣಿನಲ್ಲಿರುವ ಕಾರ್ಬೋಹೈಡ್ರೇಟ್‌ ಹಾಗೂ ಸಕ್ಕರೆ ದೇಃಕ್ಕೆ ಸೇರುವುದರಿಂದ ಸಕ್ಕರೆಯ ಪ್ರಮಾಣ ದಿಢೀರ್‌ ಏರುವ ಸಾಧ್ಯತೆಗಳೇ ಹೆಚ್ಚು. ಅದಕ್ಕಾಗಿ ಮಧುಮೇಹಿಗಳು ಹಣ್ಣುಗಳನ್ನು ತಿನ್ನುವಾಗ ಊಟದ ಜೊತೆಗೆ, ಅಥವಾ ಪ್ರೊಟೀನ್‌, ಕೊಬ್ಬು ಹಾಗೂ ನಾರಿನಂಶ ಅಧಿಕವಾಗಿರುವ ಇತರ ಯಾವುದೇ ಆಹಾರದ ಜೊತೆಗೆ ತಿನ್ನಬಹುದು.

water melon

೪. ಎರಡು ಊಟದ ಮಧ್ಯೆ ಹಣ್ಣು: ಎರಡು ಊಟಗಳ ಮಧ್ಯದ ಖಾಲಿ ಸಮಯದಲ್ಲಿ ಹಣ್ಣು ತಿನ್ನುವುದು ಒಳ್ಳೆಯ ಅಭ್ಯಾಸ. ಯಾಕೆಂದರೆ, ಈ ಸಮಯದಲ್ಲಿ ದೇಹ ಈಗಾಗಲೇ ಆಹಾರವನ್ನು ಕರಗಿಸಿ ಒಂದಿಷ್ಟು ಗ್ರಂಥಿಗಳು ಒಂದಿಷ್ಟು ರಸಗಳನ್ನು ದೇಹದಲ್ಲಿ ಬಿಡುಗಡೆ ಮಾಡಿರುತ್ತವೆ. ಇವು ಹಣ್ಣುಗಳನ್ನು ಕರಗಿಸುವಲ್ಲಿ ಸಹಾಯ ಮಾಡುತ್ತವೆ. ಜೊತೆಗೆ ಹೀಗೆ ಹಣ್ಣು ತಿನ್ನುವುದರಿಂದ ಹೊಟ್ಟೆ ಹೆಚ್ಚು ಹಸಿಯದೆ, ಮುಂದಿನ ಊಟದ ಸಮಯಕ್ಕೆ ಅತಿಯಾಗಿ ಉಣ್ಣುವುದು ತಪ್ಪುತ್ತದೆ. ಈ ಹಣ್ಣುಗಳ ಜೊತೆಗೆ ಒಣಬೀಜಗಳನ್ನೂ ಸೇರಿಸಿ ತಿನ್ನುವುದು ಕೂಡಾ ಒಳ್ಳೆಯ ಅಭ್ಯಾಸ.

ಹಣ್ಣುಗಳನ್ನು ಸೇವಿಸುವುದು ಬಹಳ ಒಳ್ಳೆಯ ಅಭ್ಯಾಸ. ಎಷ್ಟೇ ಹೊತ್ತಿಗೆ ಹಣ್ಣು ಸೇವಿಸಿದರೂ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಇವು ನೀಡುತ್ತದೆ. ಇಂಥದ್ದೇ ಸಮಯದಲ್ಲಿ ಹಣ್ಣು ತಿಂದರೆ ಒಳ್ಳೆಯದು ಎಂಬ ನಿಯಮಗಳೇನಿಲ್ಲ. ಸಮತೋಲನದ ಜೀವನಶೈಲಿಯನ್ನು ರೂಪಿಸಿಕೊಂಡು ಹಣ್ಣುಗಳ ಸೇವನೆಯನ್ನು ನಿತ್ಯದ ಜೀವನದಲ್ಲಿ ರೂಢಿಸಿಕೊಂಡರೆ ಆರೋಗ್ಯವಾಗಿರಲು ಸಾಧ್ಯ.

ಇದನ್ನೂ ಓದಿ: Health Tips | ಈ ಕಾಂಬಿನೇಷನ್‌ ಆಹಾರಗಳು ತೊಂದರೆ ತರಬಹುದು, ಜಾಗ್ರತೆ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿಜಯನಗರ

Food Department : ಜೀವಂತ ಇದ್ದವಳನ್ನು ಸತ್ತಿದ್ದಾಗಿ ಘೋಷಿಸಿದ ಆಹಾರ ಇಲಾಖೆ; ರೇಷನ್‌ ಕಾರ್ಡ್‌ನಿಂದಲೇ ಹೆಸರು ಡಿಲೀಟ್‌

Food Department : ತಾಯಿ-ಮಗ ಜೀವಂತವಾಗಿದ್ದರೂ, ಬದುಕಿಲ್ಲ ಎಂದು ಪಡಿತರ ಚೀಟಿಯಿಂದ (BPL Card) ಹೆಸರನ್ನೇ ಡಿಲೀಟ್‌ ಮಾಡಿದ್ದಾರೆ. ಸ್ಥಳ ಪರಿಶೀಲನೆ ಮಾಡದೆ ಮಾಹಿತಿಯನ್ನು ಖಚಿತ ಪಡಿಸಿಕೊಳ್ಳದೇ ಆಹಾರ ಇಲಾಖೆಯ (ration card) ಅಧಿಕಾರಿಗಳ ಯಡವಟ್ಟಿಗೆ ಕಡು ಬಡತನದ ಕುಟುಂಬವೊಂದು ಪರದಾಡುತ್ತಿದೆ.

VISTARANEWS.COM


on

By

Food department deletes name from ration card list even though it is alive
Koo

ವಿಜಯನಗರ: ಜೀವಂತವಾಗಿರುವ ತಾಯಿ-ಮಗನನ್ನು ಸತ್ತಿದ್ದಾಗಿ ಘೋಷಿಸಿ, ಇಬ್ಬರನ್ನೂ ಪಡಿತರ ಚೀಟಿ (BPL Card) ಹೆಸರಿನಿಂದ ಆಹಾರ ಇಲಾಖೆಯು (Food Department) ಡಿಲೀಟ್ ಮಾಡಿದೆ. ವಿಜಯನಗರ ಜಿಲ್ಲೆಯ ಆಹಾರ ಇಲಾಖೆಯ ಅಧಿಕಾರಿಗಳ (ration card) ಯಡವಟ್ಟಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಅಂಜೀನಮ್ಮ ಮತ್ತು ಅವರ ಪುತ್ರ ಅಜಯ್ ಬದುಕಿದ್ದರೂ 2019ರಲ್ಲೇ ಸತ್ತಿದ್ದಾರೆ ಎಂದು ಬಿಪಿಎಲ್‌ ಕಾರ್ಡ್‌ನಿಂದ ಹೆಸರು ಡಿಲೀಟ್‌ ಮಾಡಲಾಗಿದೆ. ಕಳೆದ ಐದು ವರ್ಷದಿಂದ ಪಡಿತರದಿಂದ ಬಡ ಕುಟುಂಬವೊಂದು ವಂಚಿತವಾಗಿದೆ. ಆಹಾರ ಇಲಾಖೆ ಯಡವಟ್ಟಿನಿಂದ ಪಡಬಾರದ ಕಷ್ಟ ಪಡುತ್ತಿರುವ ಕುಟಂಬ ತಿಂಗಳ ಪಡಿತರಕ್ಕೂ ಅಲೆಯುತ್ತಿದೆ.

ಇದನ್ನೂ ಓದಿ: Road Accident : ಬಸ್‌ ಗುದ್ದಿದ ರಭಸಕ್ಕೆ ಕಾರು ಛಿದ್ರ ಛಿದ್ರ; ಚಾಲಕ ಸ್ಪಾಟ್‌ ಡೆತ್‌, ನಾಲ್ವರಿಗೆ ಗಾಯ

ಆಹಾರ ಇಲಾಖೆ ಯಾರದ್ದೋ ಮಾತು ಕೇಳಿ ಪಡಿತರ ಚೀಟಿಯಿಂದ ಹೆಸರು ಡಿಲೀಟ್ ಮಾಡಿದೆ. ಕೂಡ್ಲಿಗಿ ತಾಲೂಕಿನ ಅಂಜಿನಮ್ಮ ತೀರಾ ಕಡು ಬಡವರಾಗಿದ್ದು, ಆಹಾರ ಇಲಾಖೆಯ ಕೆಲಸಕ್ಕೆ ಇತರೇ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ರೇಷನ್ ಕಾರ್ಡ್ ಇಲ್ಲದೇ ಇರುವುದರಿಂದ ಗೃಹ ಲಕ್ಷ್ಮೀ ಯೋಜನೆಯ ಲಾಭವೂ ಅಂಜಿನಮ್ಮಗೆ ಸಿಕ್ಕಿಲ್ಲ.

ಇತ್ತ ನ್ಯಾಯಕ್ಕಾಗಿ ಅಂಜಿನಮ್ಮ ಕುಟುಂಬ ನಿತ್ಯ ಆಹಾರ ಇಲಾಖೆ, ನ್ಯಾಯಬೆಲೆ ಅಂಗಡಿಗೆ ಅಲೆದು ಸುಸ್ತಾಗಿದ್ದಾರೆ. ಆಹಾರ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಪಡಿತರ ಚೀಟಿಯಿಂದ ಹೆಸರು ತೆಗೆಯಬೇಕಾದರೆ ಅಧಿಕಾರಿಗಳು ಸ್ಪಾಟ್‌ ವಿಸಿಟ್‌ ಮಾಡಬೇಕು. ಪಡಿತರ ಚೀಟಿಯಲ್ಲಿ ಇರುವವರು ಬದುಕಿದ್ದಾರಾ ಇಲ್ವಾ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು. ಅಧಿಕಾರಿಗಳು ಪರಿಶೀಲಿಸದೇ ಹೀಗೆ ಅಂಜೀನಮ್ಮ ಹೆಸರು ತೆಗೆದಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಆಹಾರ/ಅಡುಗೆ

History Of Ice Cream: ಎಲ್ಲರ ನೆಚ್ಚಿನ ಐಸ್‌ಕ್ರೀಮ್‌ ಹುಟ್ಟಿದ್ದು ಹೇಗೆ?

ಐಸ್‌ಕ್ರೀಮ್‌ ಪ್ರಿಯರಿಗೆ (History Of Ice Cream) ಕಾಲ-ದೇಶ-ಪಾತ್ರಗಳ ಹಂಗಿಲ್ಲ. ಚಳಿ-ಮಳೆ-ಬಿಸಿಲು ಎಂಬ ಭೇದವಿಲ್ಲದೆ, ಹಗಲು-ರಾತ್ರಿಗಳ ಲಕ್ಷ್ಯವಿಲ್ಲದಂತೆ ಐಸ್‌ಕ್ರೀಮ್‌ ತಿನ್ನಬಲ್ಲರು. ವಯಸ್ಸಿನ ಭೇದವನ್ನೂ ಮೀರಿ ಇಷ್ಟೊಂದು ಮೆಚ್ಚಾಗಿರುವ ಐಸ್‌ಕ್ರೀಮ್‌ (Ice Cream) ಹುಟ್ಟಿದ್ದು ಯಾವಾಗ? ಕುತೂಹಲಕರ ಹಿನ್ನೋಟ ಇಲ್ಲಿದೆ.

VISTARANEWS.COM


on

History Of Ice Cream
Koo

ಬೇಸಿಗೆಯನ್ನು ದೂರುವವರು (History Of Ice Cream) ಇರುವಂತೆಯೇ ಅದನ್ನು ಇಷ್ಟ ಪಡುವವರೂ ಇದ್ದಾರೆ. ಯಾಕೆ ಇಷ್ಟ ಬೇಸಿಗೆ ಎಂದು ಕೇಳಿದರೆ ಜ್ಯೂಸ್‌, ಎಳನೀರು ಮುಂತಾದ ತಂಪು ಪೇಯಗಳನ್ನು ಕುಡಿಯುವುದಕ್ಕೆ ಎನ್ನುವವರಿರಬಹುದು; ಆದರೆ ಐಸ್‌ಕ್ರೀಮ್‌ (Ice Cream) ಮೆಲ್ಲುವುದಕ್ಕೆ ಎನ್ನುವವರದ್ದೇ ಬಹುಮತ. ತರಹೇವಾರಿ ಬಣ್ಣ, ಆಕಾರ, ರುಚಿಗಳಲ್ಲಿ ದೊರೆಯುವ ಇವುಗಳನ್ನೇ ನಂಬಿ-ನೆಚ್ಚಿ ಬದುಕಿದವರಿದ್ದಾರೆ. ಹಾಗಾಗಿ ಉಳಿದೆಲ್ಲ ತಿನಿಸುಗಳನ್ನೂ ಮೀರಿಸಿದ್ದು ಇವುಗಳ ಜನಪ್ರಿಯತೆ. ಹಾಗೆಂದೇ ಐಸ್‌ಕ್ರೀಮ್‌ ಪ್ರಿಯರಿಗೆ ಕಾಲ-ದೇಶ-ಪಾತ್ರಗಳ ಹಂಗಿಲ್ಲ. ಚಳಿ-ಮಳೆ-ಬಿಸಿಲು ಎಂಬ ಭೇದವಿಲ್ಲದೆ, ಹಗಲು-ರಾತ್ರಿಗಳ ಲಕ್ಷ್ಯವಿಲ್ಲದಂತೆ ಐಸ್‌ಕ್ರೀಮ್‌ ತಿನ್ನಬಲ್ಲರು. ವಯಸ್ಸಿನ ಭೇದವನ್ನೂ ಮೀರಿ ಇಷ್ಟೊಂದು ಮೆಚ್ಚಾಗಿರುವ ಐಸ್‌ಕ್ರೀಮ್‌ ಹುಟ್ಟಿದ್ದು (Ice Cream) ಯಾವಾಗ? ಶತಮಾನಗಳಿಂದ ವಿಕಾಸಕೊಳ್ಳುತ್ತಲೇ ಬಂದಿರುವ ಇದು ನಡೆದಿರುವ ಹಾದಿ ಹೇಗಿದೆ ಎಂಬ ಕುತೂಹಲದ ನೋಟವಿದು.

Ice Cream

ಹುಟ್ಟಿದ್ದು ಎಲ್ಲಿ?

ಹಳೆಯ ಮೆಸಪೊಟೇಮಿಯ ನಾಗರಿಕತೆಯಲ್ಲಿ ಯೂಫ್ರೆಟಿಸ್‌ ನದಿಯ ದಂಡೆಯಲ್ಲಿ ಐಸ್‌ ಮನೆಗಳಂತೆ ಮಾಡಿ, ಅಲ್ಲಿ ವಸ್ತುಗಳನ್ನು ತಣ್ಣಗೆ ಇರಿಸಿಕೊಳ್ಳುತ್ತಿದ್ದಂತೆ. ಇದೀಗ ಕ್ರಿ.ಪೂ. 4000 ವರ್ಷಗಳ ಹಿಂದಿನ ಕಥೆ! ಅಂದರೆ, ತಣ್ಣಗಿನ ವಸ್ತುಗಳನ್ನು ತಿನ್ನುವ ಖಯಾಲಿ ಅಷ್ಟೊಂದು ಸಾವಿರ ವರ್ಷಗಳ ಹಿಂದೆಯೇ ಮನುಷ್ಯರಿಗಿತ್ತು ಎಂದಾಯಿತು. ಹಳೆಯ ಅಥೆನ್ಸ್‌ನಲ್ಲಿ ವೈನ್‌ಗಳನ್ನು ತಣ್ಣಗಿರಿಸಲು ಐಸ್‌ ಬಳಸುತ್ತಿದ್ದ ಕಥೆಗಳಿವೆ. ಪ್ರಾಚೀನ ಚೀನಾದಲ್ಲಿ ಟಾಂಗ್‌ ರಾಜವಂಶದವರು ಹಾಲಿನಿಂದ ಮಾಡಿದ ಖಾದ್ಯಗಳನ್ನು ಹೀಗೆ ತಣ್ಣಗಾಗಿಸಿ ತಿನ್ನುತ್ತಿದ್ದ ಉಲ್ಲೇಖಗಳಿವೆ. ಭಾರತದಲ್ಲಿ ಮೊಘಲರೂ ಗಟ್ಟಿಯಾದ ಕೆನೆಭರಿತ ಹಾಲಿನಲ್ಲಿ ಕುಲ್ಫಿಯಂಥವನ್ನು ಮಾಡಿ ಸವಿಯುತ್ತಿದ್ದರಂತೆ. ಇವೆಲ್ಲವೂ ಒಂದಿಲ್ಲೊಂದು ರೀತಿಯಲ್ಲಿ ಇಂದಿನ ಐಸ್‌ಕ್ರೀಮಿನ ಪೂರ್ವಸ್ಥಿತಿಗಳು ಎಂದು ಹೇಳಲಾಗುತ್ತದೆ.

ಐಸ್‌ಕ್ರೀಮ್‌ನ ಆಧುನಿಕ ರೂಪ

ಈ ತಿನಿಸಿಗಿರುವ ಇಂದಿನ ರೂಪದ ಸಮೀಪಕ್ಕೆ ಮೊದಲು ಬಂದಿದ್ದು ಇಟಲಿಯಲ್ಲಿ, ಹದಿನೇಳನೇ ಶತಮಾನದ ನಡುವಿಗೆ. ನಂತರ, ಫ್ರಾನ್ಸ್‌, ಸ್ಪೇನ್‌ ಸೇರಿದಂತೆ ಯುರೋಪ್‌ನೆಲ್ಲೆಡೆ ಮೇಜವಾನಿಗಳ ಮೋಜು ಹೆಚ್ಚಿಸುವ ನೆಚ್ಚಿನ ವಸ್ತುವಾಯಿತು ಇದು. 1671ರಲ್ಲಿ ಬ್ರಿಟನ್‌ನ ರಾಜ ಎರಡನೇ ಚಾರ್ಲ್ಸ್‌ ಮೊದಲಿಗೆ ಐಸ್‌ಕ್ರೀಮ್‌ ಸವಿದ ದಾಖಲೆಗಳಿವೆ. ಆದರೆ ಇದರಿಂದಲೇ ಆರೋಗ್ಯದ ತುರ್ತು ಪರಿಸ್ಥಿತಿ ಇಂಗ್ಲೆಂಡ್‌ನಲ್ಲಿ ಉದ್ಭವವಾಗಿತ್ತು ಮಾತ್ರ ಕುತೂಹಲಕರ ಸಂಗತಿ.

Penny Lick

ʻಪೆನ್ನಿ ಲಿಕ್‌ʼ

19ನೇ ಶತಮಾನದ ಹೊತ್ತಿಗೆ ಇಂಗ್ಲೆಂಡ್‌ನಲ್ಲಿ ಇದೆಷ್ಟು ಜನಪ್ರಿಯವಾಯಿತೆಂದರೆ, ರಾಜರ, ಶ್ರೀಮಂತರ ಊಟದ ಟೇಬಲ್‌ನ ಸೀಮೆಯನ್ನು ಮೀರಿ, ಬೀದಿಬೀದಿಗಳಲ್ಲಿ ಮಾರಾಟವಾಗತೊಡಗಿತು. ಒಂದು ʻಪೆನ್ನಿʼಗೆ (ಅಲ್ಲಿನ ಪೈಸೆ) ಪುಟ್ಟ ಕಪ್‌ನಲ್ಲಿ ಐಸ್‌ಕ್ರೀಮ್‌ ತುಂಬಿಸಿ ಕೊಡಲಾಗುತ್ತಿತ್ತು. ಇದನ್ನು ನೆಕ್ಕಿ ಸ್ವಚ್ಛ ಮಾಡಿ ಗ್ರಾಹಕರು ಮರಳಿ ನೀಡುತ್ತಿದ್ದರು. ಇದು ʻಪೆನ್ನಿ ಲಿಕ್‌ʼ ಎಂದೇ ಪ್ರಸಿದ್ಧವಾಯಿತು. ಇದೆಷ್ಟು ಜನಪ್ರಿಯವಾಯಿತೆಂದರೆ ಬರುವ ಗ್ರಾಹಕರಿಗೆ ಐಸ್‌ಕ್ರೀಮ್‌ ಕಪ್‌ಗಳನ್ನು ತೊಳೆದು ತುಂಬಿಸಿಕೊಡುವಷ್ಟು ವ್ಯವಧಾನವಿಲ್ಲದ ವ್ಯಾಪಾರಿಗಳು, ಸ್ವಚ್ಛತೆಯನ್ನು ಕಡೆಗಣಿಸಿದರು. ಇದರಿಂದ ಕಾಲರಾ, ಕ್ಷಯದಂಥ ರೋಗಗಳು ತೀವ್ರವಾಗಿ ಹರಡಲಾರಂಭಿಸಿದವು. 1879ರಲ್ಲಿ ಕಾಲರಾ ಸಾಂಕ್ರಾಮಿಕ ಹರಡಿದ್ದು ʻಪೆನ್ನಿ ಲಿಕ್‌ʼನಿಂದಾಗಿಯೇ ಎಂದು ಅಲ್ಲಿನ ಆರೋಗ್ಯ ದಾಖಲೆಗಳು ಹೇಳುತ್ತವೆ.
ಅಂತಿಮವಾಗಿ ʻಪೆನ್ನಿ ಲಿಕ್‌ʼ ಮೇಲೆ ನಿಷೇಧ ಹೇರಲಾಯಿತು. ಇದರ ಪರಿಣಾಮವೆಂದರೆ ಹೊಸ ಆವಿಷ್ಕಾರಗಳನ್ನು ವರ್ತಕರು ಮಾಡಿದ್ದು. ಐಸ್‌ಕ್ರೀಮ್‌ ಕೋನ್‌ಗಳು ರೂಪುಗೊಂಡಿದ್ದು ಹೀಗೆ. ಸ್ವಚ್ಛತೆಯ ರಗಳೆಯಿಲ್ಲದೆ, ಕಪ್‌ ತೊಳೆದಿದ್ದಾರೋ ಇಲ್ಲವೋ ಎಂಬ ಹೆದರಿಕೆಗೆ ಅವಕಾಶವಿಲ್ಲದಂತೆ ಯಾರು, ಎಲ್ಲಿ ಬೇಕಾದರೂ ಸೇವಿಸಬೇಕಾದಂತೆ ಕೋನ್‌ಗಳನ್ನು ಸಿದ್ಧಪಡಿಸಲಾಯಿತು. ಹಾಗೆಯೇ ಕಡ್ಡಿ ಚುಚ್ಚಿ ಕೊಡುವ ಇನ್ನೂ ಅಗ್ಗದ ಕ್ಯಾಂಡಿಗಳು ಸಹ ಪ್ರಚಾರಕ್ಕೆ ಬಂದವು.

ಇದನ್ನೂ ಓದಿ: Food Tips Kannada: ಸಸ್ಯಾಹಾರಿಗಳಿಗೆ ಒಮೇಗಾ 3 ಕೊಬ್ಬಿನಾಮ್ಲ ಯಾವುದರಲ್ಲಿ ದೊರೆಯುತ್ತದೆ?

ಅಲ್ಲಿಂದ ಮುಂದುವರಿದು, ಹೊಸ ರುಚಿಗಳು, ಫ್ಲೇವರ್‌ಗಳು ರೂಪುಗೊಂಡವು. ಸರಳವಾದ ವೆನಿಲಾದಿಂದ ಹಿಡಿದು, ನಾನಾ ರೀತಿಯ ʻಸಂಡೇʼ ಫ್ಲೇವರ್‌ಗಳು, ಕಾಯಿ-ಬೀಜಗಳನ್ನು ಒಳಗೊಂಡ ದುಬಾರಿ ಬೆಲೆಯವು, ಎಲ್ಲೆಲ್ಲೋ ಬೆಳೆಯುವ ಹಣ್ಣುಗಳನ್ನು ಸೇರಿಸಿಕೊಂಡವು- ಹೀಗೆ ಲೆಕ್ಕವಿಲ್ಲದಷ್ಟು ನಮೂನೆಯ ಐಸ್‌ಕ್ರೀಮ್‌ಗಳು ಈಗ ಲಭ್ಯವಾಗುತ್ತವೆ. ಸುಡು ಬೇಸಿಗೆಯನ್ನು ಸಹನೀಯವಾಗಿಸಿ, ಮಕ್ಕಳಿಗೆ ಮೋಜು ನೀಡುತ್ತಿವೆ. ಆದರೆ ಅದು ಬೆಳೆದುಬಂದ ಚರಿತ್ರೆಯನ್ನು ನೋಡಿದಾಗ, ಎಷ್ಟೊಂದು ಶತಮಾನಗಳ ಹಿಂದೆ ಐಸ್‌ಕ್ರೀಮ್‌ನ ಈ ಪಯಣ ಆರಂಭವಾಯಿತು ಎಂಬುದು ತಿಳಿಯುತ್ತದೆ. ಜೊತೆಗೆ, ಸದಾಕಾಲ ವಿಕಾಸಗೊಳ್ಳುತ್ತಲೇ ಇರುವ ಮಾನವನ ಜಿಹ್ವಾ ಚಾಪಲ್ಯದ ಇತಿಹಾಸವೂ ಅನಾವರಣಗೊಳ್ಳುತ್ತದೆ.

Continue Reading

ಆರೋಗ್ಯ

Healthy Diet: ಬೆಣ್ಣೆ ಆರೋಗ್ಯಕ್ಕೆ ಒಳ್ಳೆಯದೇ ಕೆಟ್ಟದ್ದೇ? ಈ ಸಂಗತಿ ತಿಳಿದುಕೊಂಡಿರಿ

ಬೆಣ್ಣೆ ಆರೋಗ್ಯಕ್ಕೆ ಕೆಟ್ಟದು ಎಂದು ಕೆಲವರು ಭಾವಿಸುತ್ತಾರೆ. ಆದರೆ ನೀವು ಅದನ್ನು ಮಿತವಾಗಿ ಸೇವಿಸಿದರೆ ಅದು ಕೆಟ್ಟದ್ದಲ್ಲ ಎನ್ನುತ್ತಾರೆ ಇನ್ನು ಕೆಲವರು. ಹೌದು ಬೆಣ್ಣೆಯನ್ನು ಮಿತವಾಗಿ ಸೇವಿಸಿದರೆ ಮಾತ್ರ ಆರೋಗ್ಯಕರ ಆಹಾರದ (Healthy Diet) ಭಾಗವಾಗುವುದು ನಿಜ. ಈ ಕುರಿತು ಇಲ್ಲಿದೆ ಉಪಯುಕ್ತ ಮಾಹಿತಿ.

VISTARANEWS.COM


on

By

Healthy Diet
Koo

ಹಾಲು (milk), ಮೊಸರು (curd), ತುಪ್ಪ (ghee), ಬೆಣ್ಣೆ (butter) ಇಲ್ಲದೇ ಇದ್ದರೆ ಭಾರತೀಯರ ಮನೆಗಳಲ್ಲಿ ಅಡುಗೆ ಕೆಲಸ ಕಾರ್ಯಗಳು ಒಂದೂ ನಡೆಯುವುದಿಲ್ಲ. ಆರೋಗ್ಯದ ವಿಚಾರದಲ್ಲಿ (Healthy Diet) ಹಾಲು, ತುಪ್ಪ, ಮೊಸರಿನ ಬಗ್ಗೆ ಅಷ್ಟೇನು ಸಂದೇಹವಿಲ್ಲ. ಆದರೆ ಬೆಣ್ಣೆಯ ವಿಚಾರ ಬಂದಾಗ ಇದು ಆರೋಗ್ಯಕರ ಹೌದೋ ಅಲ್ಲವೋ ಎನ್ನುವ ಗೊಂದಲ ಕಾಡುತ್ತದೆ.

ಭಾರತೀಯ ಮನೆಗಳ ಪಾಕ ಶಾಲೆಯಲ್ಲಿ ಬಹುವಿಧವಾಗಿ ಬಳಸುವ ಬೆಣ್ಣೆಯು ಅದರ ಪೋಷಕಾಂಶದಿಂದಲೂ ಹೆಚ್ಚು ಮೌಲ್ಯಯುತ ಎಂದೆನಿಸಿದೆ. ಇದು ಹಲವಾರು ಪೋಷಕಾಂಶಗಳ ಕೇಂದ್ರೀಕೃತ ಮೂಲವಾಗಿದೆ. ಇದರಲ್ಲಿ ಕೊಬ್ಬು ಕರಗಬಲ್ಲ ವಿಟಮಿನ್‌ಗಳಾದ ಎ, ಇ ಮತ್ತು ಕೆ2 ವಿವಿಧ ದೈಹಿಕ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆರೋಗ್ಯಕರ ದೃಷ್ಟಿ, ಚರ್ಮವನ್ನು ಕಾಪಾಡಿಕೊಳ್ಳಲು ಮತ್ತು ಒಟ್ಟಾರೆ ದೇಹದ ಪ್ರತಿರಕ್ಷೆಯನ್ನು ಬೆಂಬಲಿಸಲು ಇವುಗಳು ಅತ್ಯಗತ್ಯ.

ಬೆಣ್ಣೆ ಆರೋಗ್ಯಕ್ಕೆ ಕೆಟ್ಟದು ಎಂದು ಕೆಲವರು ಭಾವಿಸುತ್ತಾರೆ. ಆದರೆ ನೀವು ಅದನ್ನು ಮಿತವಾಗಿ ಸೇವಿಸಿದರೆ ಅದು ಕೆಟ್ಟದ್ದಲ್ಲ ಎನ್ನುತ್ತಾರೆ ಇನ್ನು ಕೆಲವರು. ಹೌದು ಬೆಣ್ಣೆಯನ್ನು ಮಿತವಾಗಿ ಸೇವಿಸಿದರೆ ಮಾತ್ರ ಆರೋಗ್ಯಕರ ಆಹಾರದ ಭಾಗವಾಗುವುದು ನಿಜ. ಅಲ್ಲದೇ ಉತ್ತಮ ಗುಣಮಟ್ಟದ ಬೆಣ್ಣೆಯನ್ನು ಆಯ್ಕೆ ಮಾಡಲು ಸೂಚಿಸಲಾಗುತ್ತದೆ. ಏಕೆಂದರೆ ಇದು ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುತ್ತದೆ. ದೇಹಕ್ಕೆ ಅಗತ್ಯವಾದ ಉತ್ತಮ ಕೊಬ್ಬಿನಾಂಶಗಳು ಬೆಣ್ಣೆ, ಆಲಿವ್ ಎಣ್ಣೆ, ಆವಕಾಡೊಗಳಿಂದಲೂ ಸಿಗುತ್ತದೆ.


ಹೆಚ್ಚುವರಿ ಬೆಣ್ಣೆಯನ್ನು ಸೇವಿಸಿದರೆ ಏನಾಗುತ್ತದೆ?

ಬೆಣ್ಣೆಯಲ್ಲಿ ಸ್ಯಾಚುರೇಟೆಡ್ ಕೊಬ್ಬಿನಂಶ ಹೆಚ್ಚಿರುತ್ತದೆ. ಇದನ್ನು ಅಧಿಕವಾಗಿ ಸೇವಿಸಿದಾಗ ಎಲ್‌ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.

ಬೆಣ್ಣೆಯು ಕ್ಯಾಲೋರಿ ದಟ್ಟವಾಗಿರುತ್ತದೆ. ಆದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ತೂಕ ಹೆಚ್ಚಾಗಬಹುದು. ಬೆಣ್ಣೆಯನ್ನು ಮಿತವಾಗಿ ಸೇವಿಸಲು ಯಾವಾಗಲೂ ಸಲಹೆ ನೀಡಲಾಗುತ್ತದೆ.

ಹಲವಾರು ಅಧ್ಯಯನಗಳ ಪ್ರಕಾರ ಬೆಣ್ಣೆಯು ರಕ್ತದ ಲಿಪಿಡ್ ಮಟ್ಟವನ್ನು ಹಾನಿಗೊಳಿಸುತ್ತದೆ. ಹೃದಯದ ಪರಿಸ್ಥಿತಿಗಳು ಅಥವಾ ಕೊಲೆಸ್ಟ್ರಾಲ್ ನಿಂದ ಬಳಲುತ್ತಿರುವವರಿಗೆ, ಮಿತವಾಗಿರುವುದು ಮುಖ್ಯವಾಗಿದೆ.

ಇದನ್ನೂ ಓದಿ: Tips for Mothers: ಆಹಾರ- ಆರೋಗ್ಯ; ದುಡಿಯುವ ಬ್ಯುಸಿ ತಾಯಂದಿರಿಗೆ ಇಲ್ಲಿದೆ ಕಿವಿಮಾತು!

ಬೆಣ್ಣೆಯು ಲ್ಯಾಕ್ಟೋಸ್ ಮತ್ತು ಡೇರಿ ಪ್ರೋಟೀನ್‌ಗಳನ್ನು ಹೊಂದಿರುತ್ತದೆ. ಇದು ಡೇರಿ ಅಲರ್ಜಿಯಿಂದ ಬಳಲುತ್ತಿರುವವರಿಗೆ ಸಮಸ್ಯೆಯಾಗಬಹುದು. ಬೆಣ್ಣೆಯನ್ನು ಸೇವಿಸಿದ ಅನಂತರ ಉಬ್ಬುವುದು, ಗ್ಯಾಸ್ ಅಥವಾ ಅತಿಸಾರದಂತಹ ಜೀರ್ಣಕಾರಿ ತೊಂದರೆಗಳನ್ನು ಅವರು ಅನುಭವಿಸಬಹುದು.

ಬೆಣ್ಣೆಯನ್ನು ಮಿತವಾಗಿ ಸೇವಿಸಿದಾಗ ಆರೋಗ್ಯಕರ ಆಹಾರದ ಭಾಗವಾಗಬಹುದು. ಅದರ ಸ್ಯಾಚುರೇಟೆಡ್ ಕೊಬ್ಬಿನಂಶವನ್ನು ಗಮನದಲ್ಲಿಟ್ಟುಕೊಳ್ಳುವುದು ಮತ್ತು ಸಾಧ್ಯವಾದಾಗ ಉತ್ತಮ ಗುಣಮಟ್ಟದ ಆಯ್ಕೆಗಳನ್ನು ಆರಿಸುವುದು ಅತ್ಯಗತ್ಯ. ವೈವಿಧ್ಯಮಯ ಮತ್ತು ಸಮತೋಲಿತ ಆಹಾರದ ಭಾಗವಾಗಿ ಬೆಣ್ಣೆಯನ್ನು ಆನಂದಿಸುವುದು ಉತ್ತಮ.

Continue Reading

ಆರೋಗ್ಯ

FSSAI Warning: ನೀವು ತಿನ್ನುವ ಮಾವಿನ ಹಣ್ಣು ಸುರಕ್ಷಿತವಾಗಿದೆಯೇ?

ಮಾವಿನ ಹಣ್ಣನ್ನು ಕೃತಕವಾಗಿ ಮಾಗಿಸಲು ಕ್ಯಾಲ್ಸಿಯಂ ಕಾರ್ಬೈಡ್ ಅನ್ನು ಬಳಸಲಾಗುತ್ತದೆ. ಇದರ ವಿರುದ್ಧ ವರ್ತಕರಿಗೆ ಗಂಭೀರ ಆರೋಗ್ಯ ಅಪಾಯಗಳನ್ನು ಉಲ್ಲೇಖಿಸಿ ಎಚ್ಚರಿಕೆಯನ್ನು ( FSSAI Warning) ನೀಡಲಾಗಿದೆ.

VISTARANEWS.COM


on

By

FSSAI alert
Koo

ಮಾರುಕಟ್ಟೆಯಲ್ಲಿ (market) ಮಾವಿನ (mango) ಹಣ್ಣುಗಳ ರಾಶಿ ಕಂಡಾಗ ಎಂಥವರ ಬಾಯಲ್ಲೂ ನೀರೂರುವಂತೆ ಮಾಡುತ್ತದೆ. ಆದರೆ ನಾವು ಹಣ ಕೊಟ್ಟು ಖರೀದಿ ಮಾಡಿ ತಂದ ಮಾವಿನ ಹಣ್ಣುಗಳು ಸುರಕ್ಷಿತವಾಗಿ ಇದೆಯೇ? ಯಾಕೆಂದರೆ ಮಾವಿನ ಹಣ್ಣುಗಳಲ್ಲಿರುವ ಕ್ಯಾಲ್ಸಿಯಂ ಕಾರ್ಬೈಡ್ (calcium carbide) ಅಪಾಯಗಳ ವಿರುದ್ಧ ಕೇಂದ್ರ ಆಹಾರ ನಿಯಂತ್ರಣ ಸಂಸ್ಥೆಯಾದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI Warning) ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದೆ.

ಮಾವಿನ ಹಣ್ಣಿನ ಋತುವಿನಲ್ಲಿ ಕ್ಯಾಲ್ಸಿಯಂ ಕಾರ್ಬೈಡ್ ಬಳಸುವುದರ ಬಗ್ಗೆ ನಿಷೇಧವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ರೈಪನಿಂಗ್ ಚೇಂಬರ್‌ಗಳನ್ನು ನಿರ್ವಹಿಸುವ ವ್ಯಾಪಾರಿಗಳಿಗೆ ಎಫ್‌ಎಸ್‌ಎಸ್‌ಎಐ ಎಚ್ಚರಿಕೆ ನೀಡಿದೆ.
ಮಾವಿನ ಹಣ್ಣನ್ನು ಕೃತಕವಾಗಿ ಮಾಗಿಸಲು ಕ್ಯಾಲ್ಸಿಯಂ ಕಾರ್ಬೈಡ್ ಅನ್ನು ಬಳಸಲಾಗುತ್ತದೆ. ಇದರ ವಿರುದ್ಧ ವರ್ತಕರಿಗೆ ಗಂಭೀರ ಆರೋಗ್ಯ ಅಪಾಯಗಳನ್ನು ಉಲ್ಲೇಖಿಸಿ ಎಚ್ಚರಿಕೆಯನ್ನು ನೀಡಲಾಗಿದೆ.

ಮಾವಿನ ಹಣ್ಣಿನ ಋತುವಿನಲ್ಲಿ ಕ್ಯಾಲ್ಸಿಯಂ ಕಾರ್ಬೈಡ್ ಅನ್ನು ಬಳಸುವುದರ ಮೇಲಿನ ನಿಷೇಧವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಫ್‌ಎಸ್‌ಎಸ್‌ಎಐ ಹಣ್ಣಿನ ವ್ಯಾಪಾರಿಗಳು, ಹ್ಯಾಂಡ್ಲರ್‌ಗಳು ಮತ್ತು ಫುಡ್ ಬ್ಯುಸಿನೆಸ್ ಆಪರೇಟರ್‌ಗಳು (ಎಫ್‌ಬಿಒಗಳು) ಪಕ್ವಗೊಳಿಸುವ ಕೋಣೆಗಳನ್ನು ನಿರ್ವಹಿಸುವ ಎಚ್ಚರಿಕೆ ನೀಡಿದೆ.

ಕ್ಯಾಲ್ಸಿಯಂ ಕಾರ್ಬೈಡ್‌ನ ಪರಿಣಾಮ?

ಮಾವಿನಹಣ್ಣಿನಂತಹ ಹಣ್ಣುಗಳನ್ನು ಹಣ್ಣಾಗಲು ಬಳಸುವ ಕ್ಯಾಲ್ಸಿಯಂ ಕಾರ್ಬೈಡ್, ಆರ್ಸೆನಿಕ್ ಮತ್ತು ಫಾಸ್ಪರಸ್‌ನ ಹಾನಿಕಾರಕ ಕುರುಹುಗಳನ್ನು ಹೊಂದಿರುವ ಅಸಿಟಿಲೀನ್ ಅನಿಲವನ್ನು ಬಿಡುಗಡೆ ಮಾಡುತ್ತದೆ. ‘ಮಸಾಲಾ’ ಎಂದು ಕರೆಯಲ್ಪಡುವ ಈ ಪದಾರ್ಥಗಳು ತಲೆತಿರುಗುವಿಕೆ, ಆಗಾಗ್ಗೆ ಬಾಯಾರಿಕೆ, ಕಿರಿಕಿರಿ, ದೌರ್ಬಲ್ಯ, ನುಂಗಲು ತೊಂದರೆ, ವಾಂತಿ ಮತ್ತು ಚರ್ಮದ ಹುಣ್ಣುಗಳನ್ನು ಉಂಟುಮಾಡಬಹುದು. ಅಸಿಟಿಲೀನ್ ಅನಿಲವು ಹ್ಯಾಂಡ್ಲರ್‌ಗಳಿಗೆ ಅಪಾಯಕಾರಿಯಾಗಿದೆ ಮತ್ತು ಆರ್ಸೆನಿಕ್ ಮತ್ತು ರಂಜಕದ ಅವಶೇಷಗಳು ಹಣ್ಣುಗಳ ಮೇಲೆ ಉಳಿಯಬಹುದು.

ಸಾಮಾನ್ಯವಾಗಿ ಕಾರ್ಬೈಡ್ ಗ್ಯಾಸ್ ಎಂದು ಕರೆಯಲ್ಪಡುವ ಅಸಿಟಿಲೀನ್ ಅನಿಲದ ಬಳಕೆಯಿಂದ ಕೃತಕವಾಗಿ ಮಾಗಿದ ಹಣ್ಣುಗಳನ್ನು ಯಾವುದೇ ವ್ಯಕ್ತಿಯು ಮಾರಾಟ ಮಾಡಬಾರದು ಎಂದು ಆಹಾರ ಸುರಕ್ಷತೆ ಮತ್ತು ಮಾನದಂಡಗಳು ನಿಷೇಧ ಮತ್ತು ಮಾರಾಟದ ಮೇಲಿನ ನಿರ್ಬಂಧಗಳ ನಿಯಮಗಳು-2011 ಹೇಳುತ್ತವೆ.


ಯಾವುದಕ್ಕೆ ಅನುಮತಿ ಇದೆ?

ಎಫ್‌ಎಸ್‌ಎಸ್‌ಎಐ ಪ್ರಕಾರ ಹಣ್ಣು ಹಣ್ಣಾಗಿಸಲು ಸುರಕ್ಷಿತ ಪರ್ಯಾಯವಾಗಿ ಎಥಿಲೀನ್ ಅನಿಲವನ್ನು ಬಳಸಲು ಅನುಮತಿ ನೀಡುತ್ತದೆ. ಎಥಿಲೀನ್ ಅನಿಲ, 100ಪಿಪಿಎಂವರೆಗಿನ ಸಾಂದ್ರತೆಗಳಲ್ಲಿ ಹಣ್ಣಾಗುವುದನ್ನು ನಿಯಂತ್ರಿಸುವ ನೈಸರ್ಗಿಕ ಹಾರ್ಮೋನ್ ಆಗಿದೆ. ಹಣ್ಣು ಎಥಿಲೀನ್ ಅನ್ನು ಗಣನೀಯ ಪ್ರಮಾಣದಲ್ಲಿ ಉತ್ಪಾದಿಸುವವರೆಗೆ ಇದು ನೈಸರ್ಗಿಕ ಮಾಗಿದ ಪ್ರಕ್ರಿಯೆಯನ್ನು ಪ್ರಚೋದಿಸುತ್ತದೆ. ಹೆಚ್ಚುವರಿಯಾಗಿ ಕೇಂದ್ರೀಯ ಕೀಟನಾಶಕ ಮಂಡಳಿ ಮತ್ತು ನೋಂದಣಿ ಸಮಿತಿ (CIB & RC) ಮಾವು ಮತ್ತು ಇತರ ಹಣ್ಣುಗಳ ಏಕರೂಪದ ಪಕ್ವತೆಗಾಗಿ ಎಥೆಫೋನ್ 39 ಪ್ರತಿಶತ ಎಸ್ ಎಲ್ ಅನ್ನು ಅನುಮೋದಿಸಿದೆ.

ಗುರುತಿಸುವುದು ಹೇಗೆ?

ಕ್ಯಾಲ್ಸಿಯಂ ಕಾರ್ಬೈಡ್‌ನಿಂದ ಹಣ್ಣಾದ ಮಾವಿನ ಹಣ್ಣನ್ನು ಗುರುತಿಸುವುದು ಸುಲಭ.

ವಿಶ್ವಾಸಾರ್ಹ ಮೂಲಗಳಿಂದ ಖರೀದಿಸಿ

ಹಣ್ಣುಗಳು ಮತ್ತು ತರಕಾರಿಗಳನ್ನು ತಿಳಿದಿರುವ ಮಾರಾಟಗಾರರು, ಪ್ರತಿಷ್ಠಿತ ಅಂಗಡಿಗಳು ಅಥವಾ ವಿತರಕರು ತಮ್ಮ ಉತ್ಪನ್ನಗಳನ್ನು ಹಾನಿಕಾರಕ ಅಥವಾ ನಿಷೇಧಿತ ರಾಸಾಯನಿಕಗಳಿಂದ ಹಣ್ಣಾಗಿಲ್ಲ ಎಂದು ಹೇಳಿಕೊಳ್ಳುತ್ತಾರೆ.

ಸಂಪೂರ್ಣವಾಗಿ ತೊಳೆಯುವುದು

ಯಾವುದೇ ಸಂಭಾವ್ಯ ಮೇಲ್ಮೈ ಮಾಲಿನ್ಯಕಾರಕಗಳನ್ನು ತೆಗೆದುಹಾಕಲು ತಿನ್ನುವ ಮೊದಲು ಕುಡಿಯುವ ನೀರಿನಲ್ಲಿ ಹಣ್ಣುಗಳನ್ನು ಚೆನ್ನಾಗಿ ತೊಳೆಯಿರಿ.

ಕಪ್ಪು ಕಲೆಗಳನ್ನು ತಪ್ಪಿಸಿ

ಮಾವಿನ ಹಣ್ಣುಗಳ ಚರ್ಮದ ಮೇಲೆ ಕಪ್ಪು ಮಚ್ಚೆಗಳಿರುವ ಹಣ್ಣುಗಳಿಂದ ದೂರವಿರಿ. ಏಕೆಂದರೆ ಇವುಗಳು ಕ್ಯಾಲ್ಸಿಯಂ ಕಾರ್ಬೈಡ್‌ನಿಂದ ಅಸಿಟಿಲೀನ್ ಅನಿಲದಿಂದ ಹಣ್ಣಾಗುತ್ತವೆ.

ಇದನ್ನೂ ಓದಿ: Tips for Mothers: ಆಹಾರ- ಆರೋಗ್ಯ; ದುಡಿಯುವ ಬ್ಯುಸಿ ತಾಯಂದಿರಿಗೆ ಇಲ್ಲಿದೆ ಕಿವಿಮಾತು!

ವಿನ್ಯಾಸವನ್ನು ಪರಿಶೀಲಿಸಿ

ಏಕರೂಪದ ಬಣ್ಣದ ವಿನ್ಯಾಸದೊಂದಿಗೆ ಮಾವಿನಹಣ್ಣು ಮತ್ತು ಇತರ ಹಣ್ಣುಗಳ ಬಗ್ಗೆ ಜಾಗರೂಕರಾಗಿರಿ. ಏಕೆಂದರೆ ಇದು ಸಂಭವನೀಯ ರಾಸಾಯನಿಕ ಪಕ್ವತೆಯ ಸಂಕೇತವಾಗಿದೆ.

ವಾಸನೆ ಮತ್ತು ಶೆಲ್ಫ್ ಲೈಫ್

ಕಲಬೆರಕೆ ಹಣ್ಣುಗಳು ಸ್ವಲ್ಪ ಕಟುವಾದ ವಾಸನೆ ಮತ್ತು ಕಡಿಮೆ ಶೆಲ್ಫ್ ಜೀವಿತಾವಧಿಯನ್ನು ಹೊಂದಿರುತ್ತದೆ ಎಂಬುದು ತಿಳಿದಿರಲಿ. ಸಾಮಾನ್ಯವಾಗಿ ಮಾಗಿದ ಕ್ಯಾಲ್ಸಿಯಂ ಕಾರ್ಬೈಡ್ ಬಳಕೆಯನ್ನು ಸೂಚಿಸುತ್ತದೆ.

Continue Reading
Advertisement
Postal Ballot
ದೇಶ10 mins ago

Postal Ballot: ಅನಾರೋಗ್ಯದ ಕಾರಣ ಅಂಚೆ ಮತದಾನ ಕೋರಿ 78ರ ಅಜ್ಜಿ ಅರ್ಜಿ; ಬೇಡವೆಂದ ಸುಪ್ರೀಂ!

Model PSI Varsha repaired the road at own expense
ಕರ್ನಾಟಕ12 mins ago

Mysore News: ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿಗೊಳಿಸಿ ಮಾದರಿಯಾದ ಪಿಎಸ್‌ಐ

Driving Licence New Rules
ದೇಶ17 mins ago

Driving Licence New Rules: ಡ್ರೈವಿಂಗ್‌ ಲೈಸೆನ್ಸ್‌; ಜೂನ್‌ 1ರಿಂದ ಹೊಸ ರೂಲ್ಸ್‌!

2nd PUC Exam 2 Result tomorrow
ಶಿಕ್ಷಣ20 mins ago

2nd PUC Exam 2 Result: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-2ರ ಫಲಿತಾಂಶ ನಾಳೆ; ಸಿಇಟಿ ಫಲಿತಾಂಶ ಯಾವಾಗ?

Compound Wall Collapse
ಕರ್ನಾಟಕ32 mins ago

Compound Wall Collapse: ಹಾಜಬ್ಬರ ಶಾಲೆ ಕಾಂಪೌಂಡ್ ಗೋಡೆ ಕುಸಿದು ವಿದ್ಯಾರ್ಥಿನಿ ದಾರುಣ ಸಾವು

T20 World Cup 2024
ಕ್ರೀಡೆ37 mins ago

T20 World Cup 2024: ಇಂಡೋ-ಪಾಕ್​ ಮಿನಿ ವಿಶ್ವಕಪ್​ ಸಮರ ನಡೆಯುವ ಸ್ಟೇಡಿಯಂನ ವಿಡಿಯೊ ವೈರಲ್​

Ebrahim Raisi
ದೇಶ1 hour ago

Ebrahim Raisi: ಇಬ್ರಾಹಿಂ ರೈಸಿ ನಿಧನದಿಂದ ಭಾರತದಲ್ಲಿ ಚಿನ್ನ, ಪೆಟ್ರೋಲ್‌ ಬೆಲೆ ಏರಿಕೆ? ಹೀಗಿದೆ ವಿಶ್ವ ಮಾರುಕಟ್ಟೆ ಸ್ಥಿತಿ-ಗತಿ

Hit And Run Case
ಕರ್ನಾಟಕ1 hour ago

Hit And Run Case: ಕೂಡ್ಲಿಗಿಯಲ್ಲಿ ಹಿಟ್ ಆ್ಯಂಡ್ ರನ್; ಬೈಕ್‌ಗೆ ಲಾರಿ ಡಿಕ್ಕಿಯಾಗಿ ಯುವತಿ ಸಾವು

IPL 2024
ಕ್ರೀಡೆ2 hours ago

IPL 2024: ಮೋದಿ ಸ್ಟೇಡಿಯಂನಲ್ಲಿ ಫುಟ್ಬಾಲ್​ ಆಡಿದ ಆರ್​ಸಿಬಿ ಆಟಗಾರರು

Cannes Star Fashion
ಫ್ಯಾಷನ್2 hours ago

Cannes Star Fashion: ಕ್ರಾಪ್‌ ಟುಕ್ಸೆಡೊ ಧರಿಸಿ ತಾಯಿಗೆ ಶ್ರದ್ಧಾಂಜಲಿ ಅರ್ಪಿಸಿದ ನಟ ಪ್ರತೀಕ್‌ ಬಬ್ಬರ್

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ7 hours ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ1 day ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ1 day ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ1 day ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ3 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ4 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ4 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು4 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಟ್ರೆಂಡಿಂಗ್‌