Grapes Benefits: ದ್ರಾಕ್ಷಿ ಸೇವಿಸಿದ್ರೆ ಸನಿಹಕ್ಕೂ ಬರಲ್ಲ ಕ್ಯಾನ್ಸರ್! ಅಬ್ಬಾ ಎಷ್ಟೊಂದು ಲಾಭಗಳು? - Vistara News

ಆರೋಗ್ಯ

Grapes Benefits: ದ್ರಾಕ್ಷಿ ಸೇವಿಸಿದ್ರೆ ಸನಿಹಕ್ಕೂ ಬರಲ್ಲ ಕ್ಯಾನ್ಸರ್! ಅಬ್ಬಾ ಎಷ್ಟೊಂದು ಲಾಭಗಳು?

ದ್ರಾಕ್ಷಿ (Grapes benefits) ತಿನ್ನುವುದರಿಂದ ಆಗುವ ಲಾಭಗಳೇನು? ಇಲ್ಲಿದೆ ಉಪಯುಕ್ತ ಮಾಹಿತಿ.

VISTARANEWS.COM


on

Grapes Benefits
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನರಿಯೊಂದು ದ್ರಾಕ್ಷಿ (Grapes benefits) ಹಣ್ಣಿಗೆ ಆಸೆಪಟ್ಟು, ಎಷ್ಟು ಪ್ರಯತ್ನಿಸಿದರೂ ದೊರೆಯದೆ, ʻಸಾಯಲತ್ಲಾಗೆ, ಹುಳಿ ದ್ರಾಕ್ಷಿಯಿದುʼ ಎಂದು ಹೊರಟುಹೋದ ಕಥೆಯನ್ನು ಸಾಮಾನ್ಯವಾಗಿ ಎಲ್ಲರೂ ಬಾಲ್ಯದಲ್ಲಿ ಕೇಳಿಯೇ ಇರುತ್ತೇವೆ. ಅದು ನರಿಯ ಕಥೆಯಾಯಿತು, ಈಗ ನಮಗೆ ದ್ರಾಕ್ಷಿ ಹಣ್ಣು ಬೇಕೆಂದರೆ ದ್ರಾಕ್ಷಿಯ ತೋಟಕ್ಕೆ ಹೋಗಿ ಹಾರಾಡಬೇಕೆಂದಿಲ್ಲ, ಅಂಗಡಿಗೆ ಹೋಗಿ ಬೇಕಾದಷ್ಟನ್ನು ಖರೀದಿಸಿ ತಂದರಾಯಿತು. ಗೊಂಚಲಲ್ಲಿ ತೂಗುವ ಈ ರಸಭರಿತ ಹಣ್ಣುಗಳು ಕಣ್ಣಿಗೆ ಮಾತ್ರ ತಂಪಲ್ಲ, ಬಾಯಿ, ಹೊಟ್ಟೆಗೂ ಹಿತ. ಒಂದಿಷ್ಟು ಹುಳಿ, ಕೆಲವೊಮ್ಮೆ ಚಿಟಿಕೆಯಷ್ಟು ಒಗರು, ಬಹಳಷ್ಟು ಸಿಹಿ ರುಚಿಯ ಮಿಶ್ರಣದ ಹಣ್ಣುಗಳಿವು.

Grapes Benefits

ಇದರ ಬಣ್ಣಗಳೇ ಕೆಲವೊಮ್ಮೆ ಬಾಯಲ್ಲಿ ನೀರೂರಿಸಿಬಿಡುತ್ತವೆ. ತಿಳಿ ಹಸಿರು, ಅಚ್ಚ ಹಸಿರು, ನಸುಗೆಂಪು, ತುಸು ಹೆಚ್ಚೇ ಕೆಂಪು, ಕಪ್ಪು, ನಸು ನೀಲಿ, ನೇರಳೆ- ಹೀಗೆ ಹಲವಾರು ಬಣ್ಣಗಳಲ್ಲಿ ದ್ರಾಕ್ಷಿಯನ್ನು ಕಾಣಬಹುದು. ಹೊರಮೈ ಮಾಟಗಳೂ ಅಷ್ಟೇ, ಸಣ್ಣದು, ದೊಡ್ಡದು, ಉರುಟಾದ್ದು, ಮೊಟ್ಟೆಯಾಕಾರದ್ದು, ಉದ್ದ ಮಾಟದ್ದು- ಎಷ್ಟೊಂದು ಬಗೆಗಳಿವೆ. ಹಾಗೆಂದು ಈ ಯಾವ ಬಣ್ಣ, ಮಾಟಗಳ ದ್ರಾಕ್ಷಿ ತಿಂದರೂ, ರುಚಿ ಮತ್ತು ಪೋಷಕತತ್ವಗಳಿಗೆ ಏನೂ ಮೋಸವಿಲ್ಲ. ಹಾಗಾದರೆ ಏನೆಲ್ಲ ಲಾಭಗಳಿವೆ ದ್ರಾಕ್ಷಿ ತಿನ್ನುವುದರಲ್ಲಿ?

Grapes Benefits

ಕ್ಯಾನ್ಸರ್‌ ದೂರ

ಪಾಲಿಫೆನಾಲ್ ಮತ್ತು ರೆಸ್ವೆರಾಟ್ರೋಲ್‌ನಂಥ ಪ್ರಮುಖ ಆಂಟಿ ಆಕ್ಸಿಡೆಂಟ್‌ಗಳು ದ್ರಾಕ್ಷಿಯಲ್ಲಿವೆ. ಕ್ಯಾನ್ಸರ್‌ ಅಥವಾ ಯಾವುದೇ ರೀತಿಯ ಗಡ್ಡೆಗಳು ಬೆಳೆಯದಂತೆ ತಡೆಯುವ ಸಾಮರ್ಥ್ಯ ಇವುಗಳಿಗಿರುವುದಾಗಿ ಅಧ್ಯಯನಗಳು ಹೇಳುತ್ತವೆ. ಯಕೃತ್‌, ಕರುಳು, ಸ್ತನ, ಜಠರ, ಚರ್ಮ ಮುಂತಾದ ಕಡೆಗಳಲ್ಲಿ ಕ್ಯಾನ್ಸರ್‌ ಗಡ್ಡೆಗಳು ಬಾರದಂತೆ ಕಾಪಾಡುತ್ತದೆ, ಇದರಲ್ಲಿನ ಕ್ವಾರ್ಸೆಂಟೀನ್‌ ಎಂಬ ಫ್ಲವನಾಯ್ಡ್‌ನಿಂದ ಕ್ಯಾನ್ಸರ್‌ ಕೋಶಗಳ ಬೆಳವಣಿಗೆ ಕುಂಠಿತಗೊಳ್ಳುವುದು ಪತ್ತೆಯಾಗಿದೆ.

Grapes Benefits

ಹೃದಯಾರೋಗ್ಯ ವೃದ್ಧಿ

ಇದರ ಪಾಲಿಫೆನಾಲ್‌ಗಳು ದೇಹದಲ್ಲಿನ ಉರಿಯೂತ ತಗ್ಗಿಸಿ, ಹೃದಯದ ಆಯಸ್ಸು ಹೆಚ್ಚಿಸುತ್ತವೆ. ರಕ್ತದ ಪರಿಚಲನೆಯನ್ನು ವೃದ್ಧಿಸಿ, ಹೃದಯಕ್ಕೆ ಬಾಧೆಯಾಗದಂತೆ ನೋಡಿಕೊಳ್ಳುತ್ತವೆ. ಕೊಲೆಸ್ಟ್ರಾಲ್‌ ಮಟ್ಟ ಕಡಿಮೆಯಾಗುವಂತೆ ಮಾಡುವ ಬಗ್ಗೆಯೂ ಅಧ್ಯಯನಗಳು ಹೇಳುತ್ತವೆ.

Grapes Benefits

ದೃಷ್ಟಿ ಚುರುಕು

ನಿಯಮಿತವಾಗಿ ದ್ರಾಕ್ಷಿ ಹಣ್ಣು ತಿನ್ನುವುದರಿಂದ ಕಣ್ಣಿನ ದೃಷ್ಟಿ ಮಂದವಾಗುವ ಸಾಧ್ಯತೆಯನ್ನು ಶೇ. ೩೬ರಷ್ಟು ತಗ್ಗಿಸಬಹುದು ಎನ್ನುತ್ತವೆ ಅಧ್ಯಯನಗಳು. ಅದರಲ್ಲೂ ಕೆಂಪು ದ್ರಾಕ್ಷಿಯನ್ನು ಪ್ರತಿದಿನ ಸೇವಿಸುವುದರಿಂದ ವೃದ್ಧಾಪ್ಯದಲ್ಲಿ ಕಾಡುವ ದೃಷ್ಟಿದೋಷದ ಸಾಧ್ಯತೆ ಕ್ಷೀಣವಾಗುತ್ತದೆ.

ಪ್ರತಿರೋಧಕ ಶಕ್ತಿ ವೃದ್ಧಿ

ಹಲವು ಫ್ಲವನಾಯ್ಡ್‌ಗಳು, ವಿಟಮಿನ್‌ ಎ, ಸಿ ಮತ್ತು ಕೆ ಜೀವಸತ್ವಗಳು, ಕಬ್ಬಿಣ ಮತ್ತು ಮೆಗ್ನೀಶಿಯಂನಂಥ ಖನಿಜಗಳಿಂದ ಸಮೃದ್ಧವಾಗಿರುವ ದ್ರಾಕ್ಷಿ ಹಣ್ಣುಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲವು. ಅದರಲ್ಲೂ ದೈನಂದಿನ ಆಹಾರದಲ್ಲಿ ಬೊಗಸೆ ದ್ರಾಕ್ಷಿಗೆ ಸ್ಥಾನ ನೀಡಿದರೆ ಋತು ಬದಲಾವಣೆಯ ಹೊತ್ತಿಗೆ ಬರುವಂಥ ನೆಗಡಿ, ಜ್ವರದಂಥ ಕಿರಕಿರಿಗಳನ್ನು ತಡೆಯಬಹುದು

Grapes Benefits

ಮೂಳೆಗಳ ಬಲವರ್ಧನೆ

ತಾಮ್ರ, ಕಬ್ಬಿಣ, ಮ್ಯಾಂಗನೀಸ್‌ನಂಥ ಅಗತ್ಯ ಖನಿಜಗಳನ್ನು ಹೊಂದಿರುವ ದ್ರಾಕ್ಷಿಯ ಸೇವನೆಯಿಂದ ಮೂಳೆಗಳ ಶಕ್ತಿಯನ್ನು ಹೆಚ್ಚಿಸಬಹುದು. ಆಸ್ಟಿಯೊ ಆರ್ಥರೈಟಿಸ್‌ನಿಂದ ಉಂಟಾಗುವ ಮಂಡಿ ನೋವಿನ ಉಪಟಳವನ್ನು ದ್ರಾಕ್ಷಿಗಳು ಶಮನ ಮಾಡಬಲ್ಲವು. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಕೀಲುಗಳಲ್ಲಿ ಶಕ್ತಿ ಸಂಚಯಿಸಿ, ಅವುಗಳ ಕ್ಷಮತೆಯನ್ನು ಹೆಚ್ಚಿಸುತ್ತವೆ.

Grapes Benefits

ಮಧುಮೇಹಿಗಳಿಗೂ ಕ್ಷೇಮ

ಹೌದು, ಸಿಹಿ ರುಚಿಯ ಹಣ್ಣುಗಳನ್ನು ತಿನ್ನುವಾಗ ಇದು ಮಧುಮೇಹಿಗಳಿಗೆ ಸುರಕ್ಷಿತವೇ ಎಂಬ ಸಂಶಯ ಕಾಡುವುದು ಸಹಜ. ಇದರ ಗ್ಲೈಸೆಮಿಕ್‌ ಇಂಡೆಕ್ಸ್‌ ಮಧ್ಯಮ ಪ್ರಮಾಣದಲ್ಲಿದ್ದು, ಮಿತ ಪ್ರಮಾಣದಲ್ಲಿ ಸೇವಿಸುವುದರಿಂದ ಮಧುಮೇಹಿಗಳಿಗೂ ಅಪಥ್ಯವಾಗುವುದಿಲ್ಲ.

ಇದನ್ನೂ ಓದಿ: Bone Health: ಮೂಳೆಗಳ ಬಲವರ್ಧನೆಗೆ ಏನು ಮಾಡಬೇಕು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಉತ್ತರ ಕನ್ನಡ

Uttara Kannada News: ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರ ವಹಿಸಿ: ಡಿಸಿ ಮಾನಕರ್‌

Uttara Kannada News: ಪ್ರಸಕ್ತ ಮಳೆಗಾಲದ ಅವಧಿಯಲ್ಲಿ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಎಲ್ಲಾ ರೀತಿಯ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್‌, ಮಳೆಗಾಲದಲ್ಲಿ ಕಂಡುಬರಬಹುದಾದ ಡೆಂಗ್ಯು, ಚಿಕುನ್ ಗುನ್ಯಾ, ಮಲೇರಿಯಾ, ಮಿದುಳು ಜ್ವರ ಮತ್ತಿತರ ರೋಗಗಳ ಲಕ್ಷಣಗಳು, ಅವುಗಳ ಹರಡುವಿಕೆ ಹಾಗೂ ನಿಯಂತ್ರಣ ಕುರಿತಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಸಾರ್ವಜನಿಕರಿಗೆ ಹೆಚ್ಚಿನ ಜಾಗೃತಿ ಮೂಡಿಸಿ, ಜಿಲ್ಲೆಯಾದ್ಯಂತ ವ್ಯಾಪಕ ಅರಿವು ಕಾರ್ಯಕ್ರಗಳನ್ನು ಆಯೋಜಿಸುವಂತೆ ಅವರು ಸೂಚಿಸಿದ್ದಾರೆ.

VISTARANEWS.COM


on

Uttara Kannada News Take precautionary measures to prevent the spread of infectious diseases in the district says DC Gangubai manakar
Koo

ಕಾರವಾರ: ಪ್ರಸಕ್ತ ಮಳೆಗಾಲದ (Rain) ಅವಧಿಯಲ್ಲಿ ಜಿಲ್ಲೆಯಲ್ಲಿ (Uttara Kannada News) ಸಾಂಕ್ರಾಮಿಕ ರೋಗಗಳು ಹರಡದಂತೆ ಎಲ್ಲಾ ರೀತಿಯ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್‌ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಸಮಿತಿಯ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇದನ್ನೂ ಓದಿ: RCB vs CSK: ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡ ಚೆನ್ನೈ ಸೂಪರ್​ ಕಿಂಗ್ಸ್​

ಮಳೆಗಾಲದಲ್ಲಿ ಕಂಡುಬರಬಹುದಾದ ಡೆಂಗ್ಯು, ಚಿಕುನ್ ಗುನ್ಯಾ, ಮಲೇರಿಯಾ, ಮಿದುಳು ಜ್ವರ ಮತ್ತಿತರ ರೋಗಗಳ ಲಕ್ಷಣಗಳು, ಅವುಗಳ ಹರಡುವಿಕೆ ಹಾಗೂ ನಿಯಂತ್ರಣ ಕುರಿತಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಸಾರ್ವಜನಿಕರಿಗೆ ಹೆಚ್ಚಿನ ಜಾಗೃತಿ ಮೂಡಿಸಿ, ಜಿಲ್ಲೆಯಾದ್ಯಂತ ವ್ಯಾಪಕ ಅರಿವು ಕಾರ್ಯಕ್ರಗಳನ್ನು ಆಯೋಜಿಸಿ ಎಂದ ಅವರು, ಎಲ್ಲಾ ಸಾಂಕ್ರಾಮಿಕ ರೋಗಗಳಿಗೆ ಅಗತ್ಯವಿರುವ ಚುಚ್ಚುಮದ್ದು ಮತ್ತು ಔಷಧಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇಟ್ಟುಕೊಳ್ಳುವಂತೆ ನಿರ್ದೇಶನ ನೀಡಿದರು.

ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಇದುವರೆಗೆ 1 ಮಲೇರಿಯಾ, 1 ಚಿಕನ್ ಗುನ್ಯಾ, 46 ಡೆಂಗಿ ಪ್ರಕರಣಗಳು ವರದಿಯಾಗಿರುವ ಬಗ್ಗೆ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಡೆಂಗ್ಯು ಪ್ರಕರಣಗಳು ಹೆಚ್ಚಾಗದಂತೆ ಸೂಕ್ತ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಸೋಂಕಿತರನ್ನು ಶೀಘ್ರದಲ್ಲಿ ಪತ್ತೆ ಹಚ್ಚಿ, ತಕ್ಷಣ ಚಿಕಿತ್ಸೆ ನೀಡುವುದರ ಮೂಲಕ ರೋಗ ಹರಡದಂತೆ ನೋಡಿಕೊಳ್ಳಿ. ಸೊಳ್ಳೆಗಳ ಉತ್ಪತ್ತಿ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ ಎಂದರು.

ಇದನ್ನೂ ಓದಿ: Ration Card: ಹೊಸ ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇಕೆ? ಇಲ್ಲಿದೆ ಸಂಪೂರ್ಣ ವಿವರ

ಜಿಲ್ಲೆಯಲ್ಲಿ ಈ ಬಾರಿ ಮಂಗನ ಕಾಯಿಲೆಯ 106 ಪ್ರಕರಣಗಳು ಕಂಡು ಬಂದಿದ್ದು, 9 ಸಾವುಗಳು ಸಂಭವಿಸಿದ್ದು, ಮಂಗನ ಕಾಯಿಲೆಯ ಬಗ್ಗೆ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಿ ಎಂದರು.

ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಚರಂಡಿಗಳಲ್ಲಿ ಮಳೆ ನೀರು ನಿಲ್ಲದೇ ಸರಾಗವಾಗಿ ಹರಿದು ಹೋಗುವಂತೆ ಮಾಡಲು ತಕ್ಷಣದಿಂದಲೇ ಸ್ವಚ್ಚತಾ ಕ್ರಮಗಳನ್ನು ಕೈಗೊಂಡು, ಚರಂಡಿಯಲ್ಲಿ ತುಂಬಿರುವ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಎಲ್ಲಾ ತಾಲೂಕುಗಳಲ್ಲಿ 108 ಸೇರಿದಂತೆ ಎಲ್ಲಾ ಆಂಬ್ಯುಲೆನ್ಸ್ ಗಳು ಸುಸ್ಥಿತಿಯಲ್ಲಿರಬೇಕು. ತುರ್ತು ಸಂದರ್ಭದಲ್ಲಿ ತಕ್ಷಣವೇ ಸಾರ್ವಜನಿಕರ ಸೇವೆಗೆ ಲಭ್ಯವಿರಬೇಕು. ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಕುದಿಸಿ, ಆರಿಸಿದ ಕುಡಿಯುವ ನೀರು ಬಳಕೆ, ಮನೆ ಸುತ್ತಮುತ್ತ ಸ್ವಚ್ಛತೆ ಕಾಪಾಡುವುದು ಸೇರಿದಂತೆ‌, ತೆಗೆದುಕೊಳ್ಳಬೇಕಾದ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಕುರಿತ ಮಾಹಿತಿಯನ್ನು ಜಿಲ್ಲೆಯ ಎಲ್ಲಾ ಮನೆ ಮನೆಗಳಿಗೆ ತಲುಪಿಸಬೇಕು ಹಾಗೂ ಸೋಷಿಯಲ್ ಮೀಡಿಯಾಗಳ ಮೂಲಕ ಕೂಡಾ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದರು.

ಇದನ್ನೂ ಓದಿ: Koppal Tragedy : ಶೌಚಾಲಯದ ಗೋಡೆ ಕುಸಿದು ಮಹಿಳೆಯರಿಬ್ಬರು ಸಾವು; ಈಜಲು ಹೋದ ಯುವಕ ನೀರುಪಾಲು

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನೀರಜ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಅರ್ಚನಾ ನಾಯಕ್, ಆರ್.ಸಿ.ಎಚ್ ಅಧಿಕಾರಿ ಡಾ. ನಟರಾಜ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ರಮೇಶ್ ರಾವ್, ನಗರಸಭೆ ಪೌರಾಯುಕ್ತ ರವಿಕುಮಾರ್ ಹಾಗೂ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

Continue Reading

ಆರೋಗ್ಯ

Health Tips in Kannada: ಟೊಮ್ಯಾಟೊ ಜ್ಯೂಸ್‌ ಆರೋಗ್ಯಕ್ಕೇಕೆ ಒಳ್ಳೆಯದು ಗೊತ್ತೆ?

ಋತುಮಾನದಲ್ಲಿ ಕಾಡುವ (Health Tips in Kannada) ಸೋಂಕು ರೋಗಗಳನ್ನು ದೂರ ಮಾಡುವುದರಿಂದ ಹಿಡಿದು, ದೇಹದ ಪ್ರತಿರೋಧಕ ಶಕ್ತಿ ಹೆಚ್ಚಿಸುವವರೆಗೆ ಹಲವು ರೀತಿಯ ಉಪಕಾರವನ್ನು ಟೊಮ್ಯಾಟೊ ನಮಗೆ ಮಾಡುತ್ತದೆ. ಲೈಕೋಪೇನ್‌ನಂಥ ಪ್ರಬಲ ಉತ್ಕರ್ಷಣ ನಿರೋಧಕವು ಹೃದಯದ ಆರೋಗ್ಯ ರಕ್ಷಣೆಯಲ್ಲಿ ಸಹಾಯ ಮಾಡುತ್ತದೆ. ಟೊಮೊಟೊ ಜ್ಯೂಸ್‌ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Health Tips in Kannada tomato juice is good for health
Koo

ಬೆಂಗಳೂರು: ಬೇಸಿಗೆಯಲ್ಲಿ ನಾವು ತಂಪಾಗಿ (Health Tips in Kannada) ಕುಡಿಯಬಹುದಾದ ಹಲವು ಹಣ್ಣಿನ ರಸಗಳ ಪೈಕಿ ಟೊಮ್ಯಾಟೊ ಜ್ಯೂಸ್‌ ಸಹ ಒಂದು. ಟೊಮ್ಯಾಟೊ ಹಣ್ಣೊ, ತರಕಾರಿಯೊ ಎಂಬ ಅನಾದಿ ಕಾಲದ ಗೊಂದಲ ಇನ್ನೂ ಇದ್ದರೆ, ಅದು ತರಕಾರಿಯಂತೆ ಉಪಯೋಗಿಸಲಾಗುವ ಹಣ್ಣು. ಹೌದು, ನಿಜಕ್ಕೂ ಅದು ಹಣ್ಣೇ. ಹಾಗಾಗಿ ಬೇಸಿಗೆಯಲ್ಲಿ ಉಳಿದೆಲ್ಲ ಹಣ್ಣಿನ ರಸಗಳ ಜೊತೆಗೆ ಟೊಮ್ಯಾಟೊ ರಸವನ್ನೂ ಖುಷಿಯಾಗಿ ಗುಟುಕರಿಸಬಹುದು. ಇದು ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕಾಗುವ ಲಾಭಗಳ ವಿಷಯದಲ್ಲೂ ಎತ್ತಿದ ಕೈ. ಏನು ಪ್ರಯೋಜನಗಳಿವೆ ಟೊಮೇಟೊ ಜ್ಯೂಸ್‌ ಕುಡಿಯುವುದರಿಂದ?

ಋತುಮಾನದಲ್ಲಿ ಕಾಡುವ ಸೋಂಕು ರೋಗಗಳನ್ನು ದೂರ ಮಾಡುವುದರಿಂದ ಹಿಡಿದು, ದೇಹದ ಪ್ರತಿರೋಧಕ ಶಕ್ತಿ ಹೆಚ್ಚಿಸುವವರೆಗೆ ಹಲವು ರೀತಿಯ ಉಪಕಾರವನ್ನು ಟೊಮ್ಯಾಟೊ ನಮಗೆ ಮಾಡುತ್ತದೆ. ಲೈಕೋಪೇನ್‌ನಂಥ ಪ್ರಬಲ ಉತ್ಕರ್ಷಣ ನಿರೋಧಕವು ಹೃದಯದ ಆರೋಗ್ಯ ರಕ್ಷಣೆಯಲ್ಲಿ ಸಹಾಯ ಮಾಡುತ್ತದೆ. ಜೊತೆಗೆ, ಹೇರಳವಾದ ವಿಟಮಿನ್‌ ಸಿ, ಎ, ಬಿ ಮತ್ತು ಖನಿಜಗಳು ಟೊಮ್ಯಾಟೊ ದಿಂದ ದೊರೆಯುತ್ತವೆ. ಇವೆಲ್ಲ ಟೊಮ್ಯಾಟೊ ಬೆರೆಸಿದ ರುಚಿಕರ ಖಾದ್ಯಗಳಿಂದಲೂ ನಮಗೆ ದೊರೆಯುವುದಕ್ಕೆ ಸಾಧ್ಯವಿದೆ.

ಇದನ್ನೂ ಓದಿ: Health Tips in Kannada: ಬೇಸಿಗೆಯಲ್ಲಿ ನಿಜಕ್ಕೂ ನಮ್ಮ ದೇಹಕ್ಕೆ ಬೇಕಾಗಿರುವುದು ಈ ಆಹಾರಗಳು

ಟೊಮ್ಯಾಟೊ ಜ್ಯೂಸ್‌

ಸಿದ್ಧ ಮಾಡುವುದು ಕಷ್ಟವಿಲ್ಲ. 2-3 ಜ್ಯಾಮ್‌ ಟೊಮ್ಯಾಟೊ ತೆಗೆದುಕೊಳ್ಳಿ. ಇದಕ್ಕೆ ಕೊಂಚ ಪುದೀನಾ ಎಲೆಗಳು, ಚಿಟಿಕೆ ಉಪ್ಪು, ಸ್ವಲ್ಪ ಕರಿಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಬ್ಲೆಂಡ್‌ ಮಾಡಿ. ನಾರಿನಂಶ ಬೇಡ ಎನಿಸಿದರೆ ಸೋಸಿಕೊಳ್ಳಿ. ದಾಹ ತಣಿಸಿಕೊಳ್ಳಲು ತಂಪಾದ ಐಸ್‌ ಬೇಕಿದ್ದರೆ ತೇಲಿಸಿ. ಇವಿಷ್ಟು ಮಾಡಿದರೆ ಟೊಮ್ಯಾಟೊ ಜ್ಯೂಸ್‌ ಸಿದ್ಧ.
ಇದರಲ್ಲಿರುವ ಸತ್ವಗಳನ್ನು ಗಮನಿಸುವುದಾದರೆ, ಸುಮಾರು 250 ಗ್ರಾಂ ಟೊಮ್ಯಾಟೊ ಜ್ಯೂಸ್‌ನಲ್ಲಿ, 45 ಕ್ಯಾಲರಿ ಶಕ್ತಿ ದೊರೆಯುತ್ತದೆ. 2 ಗ್ರಾಂ ಪ್ರೊಟೀನ್‌, 2 ಗ್ರಾಂ ನಾರು, ದಿನದ ಶೇ. 22ರಷ್ಟು ವಿಟಮಿನ್‌ ಎ, ಶೇ. 74ರಷ್ಟು ವಿಟಮಿನ್‌ ಸಿ, ಶೇ. 7ರಷ್ಟು ವಿಟಮಿನ್‌ ಕೆ, ಹಲವು ರೀತಿಯ ಬಿ ವಿಟಮಿನ್‌ಗಳು, ಫೋಲೇಟ್‌, ಮೆಗ್ನೀಶಿಯಂ, ಪೊಟಾಶಿಯಂ, ತಾಮ್ರ ಮತ್ತು ಮ್ಯಾಂಗನೀಸ್‌ನಂಥ ಖನಿಜಗಳು ದೇಹಕ್ಕೆ ದೊರೆಯುತ್ತವೆ.

ಕೆರೊಟಿನಾಯ್ಡ್‌ಗಳು

ಇದರಲ್ಲಿ ಹಲವು ರೀತಿಯ ಪಾಲಿಫೆನಾಲ್‌ಗಳು ಮತ್ತು ಕೆರೊಟಿನಾಯ್ಡ್‌ಗಳಿವೆ. ಇವೆಲ್ಲವೂ ವಿಟಮಿನ್‌ ಎ ರೂಪಕ್ಕೆ ದೇಹದೊಳಗೆ ಪರಿವರ್ತನೆಗೊಳ್ಳುವಂಥವು. ಕಣ್ಣಿನ ಆರೋಗ್ಯ ರಕ್ಷಣೆಗೆ ಅಗತ್ಯವಾಗಿ ಬೇಕಾದ ಸತ್ವಗಳಿವು. ಮಾತ್ರವಲ್ಲ, ದೇಹದೊಳಗೆ ಮುಕ್ತ ಕಣಗಳು ಸೃಷ್ಟಿಯಾಗದಂತೆ ಮಾಡುವ ಸಾಮರ್ಥ್ಯ ಇವುಗಳಿಗಿದೆ. ಇದರಿಂದ ಕ್ಯಾನ್ಸರ್‌ನಂಥ ಮಾರಕ ರೋಗಗಳ ಭೀತಿಯಿಂದ ಪಾರಾಗಬಹುದು.

ಉತ್ಕರ್ಷಣ ನಿರೋಧಕಗಳು

ಟೊಮ್ಯಾಟೊದಲ್ಲಿ ಲೈಕೋಪೇನ್‌ ಎಂಬ ಪ್ರಬಲ ಉತ್ಕರ್ಷಣ ನಿರೋಧಕವೊಂದಿದೆ. ಒಂದು ಗ್ಲಾಸ್‌ ಸಾಂದ್ರವಾದ ಟೊಮೇಟೊ ರಸದಲ್ಲಿ ಅಂದಾಜು 22 ಎಂ.ಜಿ. ಲೈಕೋಪೇನ್‌ ದೊರೆಯಬಹುದು. ಈ ಲೈಕೋಪೇನ್‌ಗಳ ಉರಿಯೂತ ನಿವಾರಣೆಯ ಸಾಮರ್ಥ್ಯದ ಬಗ್ಗೆ ಹಲವು ಅಧ್ಯಯನಗಳನ್ನು ವಿಜ್ಞಾನಿಗಳು ನಡೆಸಿದ್ದಾರೆ. ಅವೆಲ್ಲದರಲ್ಲೂ, ಇದೊಂದು ಸಮರ್ಥವಾದ ಉರಿಯೂತ ಶಾಮಕ ಎಂಬುದು ಸಾಬೀತಾಗಿದೆ. ಕೀಲುಗಳ ಆರೋಗ್ಯದಿಂದ ಹಿಡಿದು, ಹೃದಯದ ಯೋಗಕ್ಷೇಮ ನೋಡಿಕೊಳ್ಳುವವರೆಗೆ ಇದರ ಸಾಮರ್ಥ್ಯ ವಿಸ್ತರಿಸಿದೆ.

ಕೊಲೆಸ್ಟ್ರಾಲ್‌ ಕಡಿತ

ಈ ಹಣ್ಣಿನಲ್ಲಿರುವ ಬೀಟಾ ಕ್ಯಾರೊಟಿನ್‌ ಅಂಶವು ಲೈಕೋಪೇನ್‌ ಜೊತೆಗೆ ಸೇರಿ ಕೆಲವು ಉತ್ತಮ ಫಲಿತಾಂಶಗಳನ್ನು ನೀಡಬಲ್ಲದು. ಅಂದರೆ, ರಕ್ತದೊತ್ತಡ ಕಡಿಮೆ ಮಾಡುವುದರ ಜೊತೆಗೆ ಕೊಲೆಸ್ಟ್ರಾಲ್‌ ಜಮೆಯಾಗಿದ್ದನ್ನೂ ಕಡಿತಗೊಳಿಸುತ್ತದೆ. ಕೊಲೆಸ್ಟ್ರಾಲ್‌ ಕಡಿತಕ್ಕೆ ಟೊಮೇಟೊ ನೆರವಾಗುವುದನ್ನು ಹಲವು ಅಧ್ಯಯನಗಳು ದೃಢಪಡಿಸಿವೆ. ಜೊತೆಗೆ ರಕ್ತದೊತ್ತಡ ನಿಯಂತ್ರಣಕ್ಕೂ ನೆರವಾಗುವುದರಿಂದ ಹೃದಯ ಸ್ನೇಹಿತನಂತೆ ವರ್ತಿಸುತ್ತದೆ.

ಅತಿ ಬೇಡ

ಇಷ್ಟೆಲ್ಲ ಸದ್ಗುಣಗಳು ಟೊಮ್ಯಾಟೊದಲ್ಲಿದ್ದರೂ, ದಿನವೂ ಟೊಮೇಟೊ ರಸ ಕುಡಿಯುವ ಮುನ್ನ ಸ್ವಲ್ಪ ಜಾಗ್ರತೆ ಮಾಡುವುದು ಒಳ್ಳೆಯದು. ಮನೆಯಲ್ಲೇ ಮಾಡಿಕೊಂಡರೆ ಅಷ್ಟೇನೂ ಸಮಸ್ಯೆಯಾಗದು. ಆದರೆ ಅಂಗಡಿಯಿಂದ ತರುವ ಟೋಮೇಟೋ ಜ್ಯೂಸ್‌ಗಳಲ್ಲಿ ಸೋಡಿಯಂ ಅಂಶ ಹೆಚ್ಚಿರಬಹುದು. ಮನೆಯಲ್ಲಿ ಮಾಡಿದಾಗ ನಾರಿನಂಶ ತೆಗೆಯದೆ ಕುಡಿಯುವ ಆಯ್ಕೆ ಇರುತ್ತದೆ. ಆದರೆ ಅಂಗಡಿಯಿಂದ ತರುವ ಯಾವುದೇ ಬ್ರಾಂಡ್‌ಗಳಲ್ಲಿ ನಾರಿನಂಶವನ್ನು ಸಂಪೂರ್ಣ ತೆಗೆಯಲಾಗುತ್ತದೆ. ಇದು ಅಂಥಾ ಒಳ್ಳೆಯದೇನಲ್ಲ. ಐಬಿಎಸ್‌ ಅಥವಾ ಜಿಇಆರ್‌ಡಿ ಯಂಥ ಜೀರ್ಣಾಂಗಗಳ ಸಮಸ್ಯೆ ಇರುವವರು ಟೋಮೇಟೊ ರಸವನ್ನು ಅತಿಯಾಗಿ ಸೇವಿಸುವುದು ಸೂಕ್ತವಲ್ಲ. ಇದರಲ್ಲಿರುವ ಹುಳಿ ಅಂಶದಿಂದ ಜೀರ್ಣಾಂಗಗಳ ತೊಂದರೆ ಹೆಚ್ಚಬಹುದು.

Continue Reading

ಆರೋಗ್ಯ

Skin Care Tips: ಬಿಸಿಲಿನಿಂದ ಚರ್ಮ ಕಪ್ಪಾಗಿದೆಯಾ? ಇಲ್ಲಿದೆ ಸರಳ ಮನೆಮದ್ದು

ಬೇಸಿಗೆಯಲ್ಲಿ ಚರ್ಮ (Skin Care Tips) ಸುಟ್ಟಂತಾಗಿ ಕೆಂಪಾಗುವುದು, ಅನಂತರ ಕಪ್ಪಾಗುವುದು ಮಾಮೂಲಿ. ಹೀಗಾದರೆ ಚರ್ಮ ಕಳೆಗೆಟ್ಟಂತಾಗುತ್ತದೆ. ದಿನವಿಡೀ ಸನ್‌ಸ್ಕ್ರೀನ್‌ ಹಚ್ಚಿಕೊಂಡಿರುವುದು ಆಗದ ಮಾತು. ಅದಕ್ಕೇ, ಬಿಸಿಲಲ್ಲಿ ಅಡ್ಡಾಡಿದಾಗ ಕಪ್ಪಾಗುವ ಚರ್ಮದ ರಕ್ಷಣೆ ಹೇಗೆ ಮಾಡುವುದು ಎಂಬ ಚಿಂತೆ ಬೇಡ. ಇಲ್ಲಿದೆ ಸರಳ ಮನೆ ಮದ್ದು.

VISTARANEWS.COM


on

By

Skin Care Tips
Koo

ಬಿಸಿಲಲ್ಲಿ (sunny) ಅಡ್ಡಾಡುವುದು (Skin Care Tips) ಎಲ್ಲರಿಗೂ ಪ್ರಿಯವೇನಲ್ಲ. ಆದರೆ ಬೇಸಿಗೆಯಲ್ಲಿ (summer) ಮನೆಯಿಂದ ಹೊರಬೀಳುತ್ತಿದ್ದಂತೆ ಬಿಸಿಲಿಗೆ ಸೋಕುವುದು ಬಿಟ್ಟರೆ ಬೇರೆ ದಾರಿ ಇರುವುದಿಲ್ಲ. ಇದರ ಪರಿಣಾಮವಾಗಿ ಚರ್ಮವೆಲ್ಲ (skin) ಕೆಂಪಾಗಿ ಸುಟ್ಟಂತಾಗುವುದು, ಕಪ್ಪಾಗುವುದು ಸಾಮಾನ್ಯ. ಬಿಸಿಲಿಗೆ ಚರ್ಮ ಕೆಂಪಾಗಿ, ಕಪ್ಪಾಗುವುದರಿಂದ ತ್ವಚೆಯ ಹೊಳಪು ಮಾಯವಾಗುತ್ತದೆ, ಸುಕ್ಕಾಗುತ್ತದೆ. ಕ್ರಮೇಣ ಕುಂದಿದಂತೆ ಕಾಣಲಾರಂಭಿಸುತ್ತದೆ.

ಜಾಹೀರಾತುಗಳಲ್ಲಿ ತೋರಿಸಿದಂತೆ ಮೈ-ಮುಖಗಳನ್ನೆಲ್ಲ ಮುಚ್ಚಿಕೊಂಡು ಅಡ್ಡಾಡುವುದು ಸಾಧ್ಯವಿಲ್ಲದ್ದು. ಇದಕ್ಕಾಗಿ ದಿನಕ್ಕೆ ಹಲವು ಬಾರಿ ದೇಹಕ್ಕೆಲ್ಲ ಸನ್‌ಬ್ಲಾಕ್‌ ಬಳಿದುಕೊಳ್ಳುವುದು ಎಲ್ಲರಿಗೂ ಅಸಾಧ್ಯ. ಹಾಗಾದರೆ ಬೇಸಿಗೆಯಲ್ಲಿ ಕಪ್ಪಾಗುವ ಚರ್ಮದ ರಕ್ಷಣೆ ಹೇಗೆ?

ಮಾರುಕಟ್ಟೆಯಲ್ಲಿ ʻಟ್ಯಾನ್‌ ರಿಮೂವ್‌ʼ ಎಂಬ ಹಣೆಪಟ್ಟಿಯೊಂದಿಗೆ ಬಹಳಷ್ಟು ಕ್ರೀಮ್‌ಗಳು ದೊರೆಯುತ್ತವೆ. ಅವಲ್ಲವೂ ಕಿಸೆಯ ಭಾರ ಇಳಿಸಿದಷ್ಟೇ ಸರಾಗವಾಗಿ ಸುಟ್ಟ ಗುರುತು ತೆಗೆಯುತ್ತವೆ ಎಂಬ ಖಾತ್ರಿಯೇನಿಲ್ಲ. ಕೆಲವೊಂದು ಕ್ರೀಮುಗಳು ಎಲ್ಲರ ಚರ್ಮಕ್ಕೆ ಒಗ್ಗುವುದೂ ಇಲ್ಲ. ಹಾಗಾಗಿ ಮನೆಮದ್ದುಗಳ ಮೊರೆ ಹೋಗುವುದೇ ಉತ್ತಮ ಎನಿಸುತ್ತದೆ. ಇದಕ್ಕಾಗಿ ಕೆಲವು ಸರಳವಾದ ಫೇಸ್‌ಮಾಸ್ಕ್‌ಗಳ ಕ್ರಮವನ್ನು ಇಲ್ಲಿ ವಿವರಿಸಲಾಗಿದೆ.


ಜೇನು-ಪಪ್ಪಾಯ ಮಾಸ್ಕ್‌

ಪಪ್ಪಾಯದ ಹೋಳುಗಳನ್ನು ಜೇನು ತುಪ್ಪದೊಂದಿಗೆ ಸೇರಿಸಿ ಬ್ಲೆಂಡ್‌ ಮಾಡಿ. ಈ ಮಿಶ್ರಣವನ್ನು ಉದಾರವಾಗಿ ಮುಖಕ್ಕೆಲ್ಲ ಲೇಪಿಸಿ. 30 ನಿಮಿಷಗಳ ಅನಂತರ ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಇದನ್ನು ವಾರದಲ್ಲಿ ಮೂರು ಬಾರಿ ಮಾಡಬಹುದು.

ಓಟ್‌ಮೀಲ್‌-ಮೊಸರು

ಮುಖದ ಮೇಲಿನ ಜಡ ಕೋಶಗಳನ್ನು ತೆಗೆಯುವ ಸಾಮರ್ಥ್ಯ ಓಟ್‌ಮೀಲ್‌ಗಿದ್ದರೆ, ಮೊಸರಿನಲ್ಲಿರುವ ಲ್ಯಾಕ್ಟಿಕ್‌ ಆಮ್ಲವು ಚರ್ಮದ ತೇವವನ್ನು ಕಾಪಾಡಿ ಮೃದುವಾಗಿಸಬಲ್ಲದು. ಟ್ಯಾನ್‌ ತೆಗೆಯುವುದಕ್ಕೆ ಇದು ಒಳ್ಳೆಯ ಉಪಾಯ. ಓಟ್‌ಮೀಲ್‌ ಪುಡಿಯನ್ನು ಮಂದವಾದ ಮೊಸರಿನಲ್ಲಿ ಕಲೆಸಿ, ಮುಖಕ್ಕೆಲ್ಲ ಲೇಪಿಸಿ. 20 ನಿಮಿಷಗಳ ನಂತರ ಉಗುರು ಬಿಸಿ ನೀರಿನಲ್ಲಿ ತೊಳೆಯಿರಿ. ವಾರಕ್ಕೆರಡು ಬಾರಿ ಮಾಡಬಹುದು ಇದನ್ನು.

ಶ್ರೀಗಂಧ-ತೆಂಗಿನೆಣ್ಣೆ

ಸುಟ್ಟು ಕೆಂಪಾದಂಥ ಚರ್ಮಕ್ಕೆ ಇದು ಒಳ್ಳೆಯ ಉಪಶಮನ ನೀಡುತ್ತದೆ. ಶ್ರೀಗಂಧ ಸುಟ್ಟ ಚರ್ಮವನ್ನು ತಂಪಾಗಿಸಿದರೆ, ಕೊಬ್ಬರಿ ಎಣ್ಣೆ ದುರಸ್ತಿ ಮಾಡಿ, ತೇವವನ್ನು ಹೆಚ್ಚಿಸುತ್ತದೆ. ಸುಟ್ಟು ಕೆಂಪಾದ ಚರ್ಮವನ್ನು ಶೀಘ್ರವೇ ಗುಣ ಪಡಿಸುತ್ತದೆ. 30 ನಿಮಿಷಗಳ ನಂತರ ಉಗುರು ಬಿಸಿ ನೀರಿನಲ್ಲಿ ತೊಳೆಯಬಹುದು. ಆದರೆ ಒಂದು ಎಚ್ಚರಿಕೆ ತೆಗೆದುಕೊಳ್ಳಬೇಕು. ಮುಖದಲ್ಲಿ ಮೊಡವೆಗಳಿದ್ದರೆ, ಇಂಥ ಎಣ್ಣೆಯುಕ್ತ ಪೇಸ್ಟ್‌ಗಳು ಮೊಡವೆಯ ಸಮಸ್ಯೆಯನ್ನು ಹೆಚ್ಚಿಸಬಹುದು.

ಇದನ್ನೂ ಓದಿ: Health Tips in Kannada: ಬೇಸಿಗೆಯಲ್ಲಿ ನಿಜಕ್ಕೂ ನಮ್ಮ ದೇಹಕ್ಕೆ ಬೇಕಾಗಿರುವುದು ಈ ಆಹಾರಗಳು

ಮೊಸರು-ಕಾಫಿ

ಕಾಫಿಗೆ ಚರ್ಮವನ್ನು ಎಕ್ಸ್‌ಫಾಲಿಯೇಟ್‌ ಮಾಡುವ ಸಾಮರ್ಥ್ಯವಿದೆ. ಮೊಸರು ತ್ವಚೆಯನ್ನು ಮೃದುವಾಗಿಸುತ್ತದೆ. ಇದರ ಜೊತೆಗೆ ಕೊಂಚ ಟೊಮೇಟೊ ರಸವನ್ನೂ ಬೆರೆಸಿದರೆ, ಸುಟ್ಟಂತಾದ ಚರ್ಮಕ್ಕೆ ಉತ್ಕರ್ಷಣ ನಿರೋಧಕಗಳ ಆರೈಕೆಯೂ ದೊರೆತಂತಾಗುತ್ತದೆ. ಈ ಮೂರು ವಸ್ತುಗಳನ್ನು ಬ್ಲೆಂಡ್‌ ಮಾಡಿ, ಬಿಸಿಲಿಗೆ ಕೆಂಪಾದ ಭಾಗಕ್ಕೆಲ್ಲ ಹಚ್ಚಿ. 20 ನಿಮಿಷಗಳ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದನ್ನು ವಾರಕ್ಕೊಮ್ಮೆ ಮಾಡಿದರೆ ಸಾಕಾಗುತ್ತದೆ.

Continue Reading

ಆರೋಗ್ಯ

Food Tips Kannada: ಶಕ್ತಿವರ್ಧಕಗಳಲ್ಲ, ನಿಮ್ಮ ಶಕ್ತಿಯನ್ನೇ ಬಸಿದು ತೆಗೆಯುವ ಆಹಾರಗಳಿವು!

EXCREPT
ಇತ್ತೀಚಿನ ದಿನಗಳಲ್ಲಿ ನಾವು (Food Tips Kannada) ಸೇವಿಸುವ ಆಹಾರ, ಜೀವನಶೈಲಿ ನಮ್ಮ ಶಕ್ತಿಯನ್ನು ಹೆಚ್ಚಿಸುತ್ತಿಲ್ಲ ಬದಲಾಗಿ ದಿಢೀರ್‌ ಕಡಿಮೆಗೊಳಿಸುವಲ್ಲಿಯೂ ಮುಖ್ಯ ಪಾತ್ರ ವಹಿಸುತ್ತಿದೆ. ಶಕ್ತಿ ಬೇಕೆಂದು ನಾವು ಮೊರೆ ಹೋಗುವ ದಿಢೀರ್‌ ಆಹಾರಗಳಿಂದ ಮೇಲ್ನೋಟಕ್ಕೆ ಶಕ್ತಿ, ಉಲ್ಲಾಸ ಹೆಚ್ಚಿದಂತೆ ಅನಿಸಿದರೂ ಇವು ನಮ್ಮ ಶಕ್ತಿಸಾಮರ್ಥ್ಯವೆಲ್ಲವನ್ನೂ ಬಸಿದು ತೆಗೆಯುವ, ನಮ್ಮನ್ನು ಸೋಮಾರಿಗಳನ್ನಾಗಿ ಮಾಡುವ, ತೂಕ ಹೆಚ್ಚಿಸುವ, ಚುರುಕುತನವನ್ನು ಕಸಿದುಕೊಳ್ಳುವ ಆಹಾರಗಳಾಗಿವೆ.

VISTARANEWS.COM


on

By

Food Tips Kannada
Koo

ಬೆಳಗಿನ ಹೊತ್ತು ನಮ್ಮ (Food Tips Kannada) ಶಕ್ತಿ ಕೊಂಚ ಹೆಚ್ಚಿರುವುದು, ಸಂಜೆಯಾಗುತ್ತಿದ್ದಂತೆ ಇದು ಕಡಿಮೆಯಾಗುತ್ತ ಬರುವುದು ಬಹಳ ಸಾಮಾನ್ಯ. ಮನುಷ್ಯನ ದೇಹ ಪ್ರಕೃತಿಯೇ ಹಾಗೆ. ಆದರೆ, ಇತ್ತೀಚಿನ ದಿನಗಳಲ್ಲಿ ನಾವು ಸೇವಿಸುವ ಆಹಾರ (food), ಜೀವನಶೈಲಿಯೂ (life style) ಕೂಡಾ ನಮ್ಮ ಶಕ್ತಿಯನ್ನು ಹೆಚ್ಚಿಸುವುದಕ್ಕಿಂತ ದಿಢೀರ್‌ ಕಡಿಮೆಗೊಳಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತಿದೆ.

ಶಕ್ತಿ ಬೇಕೆಂದು ನಾವು ಮೊರೆ ಹೋಗುವ ದಿಢೀರ್‌ ಆಹಾರಗಳಿಂದ ಮೇಲ್ನೋಟಕ್ಕೆ ಶಕ್ತಿ, ಉಲ್ಲಾಸ ಹೆಚ್ಚಿದಂತೆ ಅನಿಸಿದರೂ ಇವು ನಮ್ಮ ಶಕ್ತಿ ಸಾಮರ್ಥ್ಯವೆಲ್ಲವನ್ನೂ ಬಸಿದು ತೆಗೆಯುವ, ನಮ್ಮನ್ನು ಸೋಮಾರಿಗಳನ್ನಾಗಿ ಮಾಡುವ, ತೂಕ ಹೆಚ್ಚಿಸುವ, ಚುರುಕುತನವನ್ನು ಕಸಿದುಕೊಳ್ಳುವ ಆಹಾರಗಳಾಗಿ ಬದಲಾಗಬಹುದು. ಬನ್ನಿ, ನಿಜವಾಗಿಯೂ ಶಕ್ತಿವರ್ಧಕದಂತೆ ಅನಿಸಿದರೂ, ನಮ್ಮ ಶಕ್ತಿಯನ್ನೆಲ್ಲ ಹಿಂಡಿ ತೆಗೆಯುವ ಆಹಾರಗಳಾವುವು ಎಂಬುದನ್ನು ನೋಡೋಣ.

ಬ್ರೆಡ್‌, ಪಾಸ್ತಾ

ಬಿಳಿ ಬ್ರೆಡ್‌ ಹಾಗೂ ಮೈದಾವೇ ಹೆಚ್ಚಿರುವ ಪಾಸ್ತಾ ಮತ್ತಿತರ ಆಹಾರಗಳು ದೇಹಕ್ಕೆ ಶಕ್ತಿ ನೀಡಿದಂತೆ ಅನಿಸಿದರೂ ಇವೆಲ್ಲ ಖಾಲಿ ಕ್ಯಾಲರಿಗಳು. ಇವೆಲ್ಲವೂ ಸಂಸ್ಕರಿಸಿದ ಆಹಾರಗಳಾಗಿರುವುದರಿಂದ ನಿಜವಾದ ಧಾನ್ಯ, ಬೇಳೆ ಕಾಳುಗಳ ಮೂಲಕ ದೇಹಕ್ಕೆ ಸಿಗುವ ಶಕ್ತಿ ಇದರಿಂದ ದೊರೆಯಲಾರದು. ಆ ಕ್ಷಣಕ್ಕೆ ಇವು ಹೊಟ್ಟೆ ತುಂಬಿಸಿದರೂ, ದೇಹಕ್ಕೆ ಒಳ್ಳೆಯದನ್ನು ಮಾಡುವ ಉದ್ದೇಶ ಈ ಆಹಾರಗಳಲ್ಲಿಲ್ಲ ಎಂಬುದನ್ನು ನೆನಪಿಡಿ.


ಬ್ರೇಕ್‌ಫಾಸ್ಟ್‌ ಸಿರಿಯಲ್‌ಗಳು ಹಾಗೂ ಫ್ಲೇವರ್ಡ್‌ ಮೊಸರು

ರೆಡಿಮಾಡಿ ಫುಡ್ ಗಳು ಹೆಸರಿಗೆ ಮಾತ್ರ ಆರೋಗ್ಯಕರ ಆಹಾರ ಎಂದೆನಿಸಿದರೂ ಇವು ಆರೋಗ್ಯಕರವಲ್ಲ. ಇದರಲ್ಲಿ ಒಳ್ಳೆಯ ಅಂಶಗಳಿಗಿಂತಲೂ ದೇಹಕ್ಕೆ ಮಾರಕವಾದ ಅಂಶಗಳೇ ಹೆಚ್ಚಿವೆ. ಇವುಗಳು ಸಂಸ್ಕರಿಸಿದ ಆಹಾರಗಳಷ್ಟೇ ಅಲ್ಲ, ಇವುಗಳಲ್ಲಿ ಹೆಚ್ಚುವರಿ ಸಕ್ಕರೆಯೂ ಇರುವುದರಿಂದ ದೇಹಕ್ಕೆ ಒಳ್ಳೆಯದಕ್ಕಿಂತ ಕೆಟ್ಟ ಪರಿಣಾಮವೇ ಆಗುತ್ತದೆ.


ಆಲ್ಕೋಹಾಲ್‌

ಆಲ್ಕೋಹಾಲ್‌ ಸೇವನೆಯಿಂದ ದಿನದ ಇಡೀ ಸುಸ್ತು ಬಸಿದು ಹೋಗಿ ಜೀವ ಬಂದಂತಾಗಬಹುದು. ದೇಹವಿಡೀ ಉಲ್ಲಾಸದಿಂದ, ಕುಣಿಯಬಹುದು. ಚಿಂತೆಯೆಲ್ಲ ಮರೆತುಹೋಗಬಹುದು. ಆದರೆ, ಇದು ಕ್ಷಣಿಕ. ದೇಹಕ್ಕೆ ನಿಜವಾಗಿ ಬೇಕಾದ ಶಕ್ತಿ ಇದರಿಂದ ಎಳ್ಳಷ್ಟೂ ಸಿಗಲಾರದು.


ಕಾಫಿ, ಚಹಾ

ಕಾಫಿ ಹಾಗೂ ಚಹಾಗಳೆಂಬ ಎರಡು ಪೇಯಗಳು ಭಾರತೀಯರ ಪಾಲಿನ ಆರಾಧ್ಯ ದೈವ. ಬೆಳಗ್ಗೆದ್ದ ಕೂಡಲೇ ಬಹುಪಾಲು ಮಂದಿಗೆ ಚಹಾ ಕಾಫಿ ಬೇಕೇ ಬೇಕು. ಬೆಳಗಿನ ಕೆಲಸಗಳಲ್ಲಿ ಮತ್ತೆ ತೊಡಗಿಕೊಳ್ಳಲು ಚಹಾ ಕಾಫಿಗಳು ಚೈತನ್ಯದಂತೆ ಅನಿಸಬಹುದು. ಅಭ್ಯಾಸವೂ ಆಗಿರಬಹುದು.

ಕಚೇರಿಯ ಒತ್ತಡದ ಕೆಲಸದ ನಡುವೆ ಆಹಾ ಎಂದು ಉಸಿರೆಳೆದುಕೊಂಡು ಕೊಂಚ ಬ್ರೇಕ್‌ ಬೇಕಾದರೆ ಚಹಾ ಕಾಫಿಗಳು ಮತ್ತೆ ಕೆಲಸಕ್ಕೆ ಪ್ರೇರಣೆ ನೀಡಬಹುದು. ಆದರೆ, ಇವೆಲ್ಲವೂ ನೀಡುವ ಉದ್ದೀಪನ ಕ್ಷಣಿಕ. ಇದರಿಂದ ದೇಹಕ್ಕೆ ಲಾಭಕ್ಕಿಂತಲೂ ನಷ್ಟ ಹೆಚ್ಚು. ಅತಿಯಾದ ಇವುಗಳ ಅಭ್ಯಾಸದಿಂದ ದೇಹದ ಶಕ್ತಿ ಹೆಚ್ಚದು. ಬದಲಾಗಿ ನಮ್ಮ ಶಕ್ತಿಯನ್ನೇ ಹಿಂಡಿಬಿಡುತ್ತವೆ. ಈ ಚಟದ ದಾಸನನ್ನಾಗಿಸುತ್ತವೆ.


ಶಕ್ತಿವರ್ಧಕ ಪೇಯಗಳು

ಮಾರುಕಟ್ಟೆಯಲ್ಲಿ ಜಾಹೀರಾತುಗಳ ಮೂಲಕ ಯುವಜನರನ್ನೂ ಸೇರಿದಂತೆ ಬಹುಜನರನ್ನು ಆಕರ್ಷಿಸುವ ಶಕ್ತಿವರ್ಧಕ ಪೇಯಗಳು ಹೆಸರಿಗೆ ಮಾತ್ರ ಶಕ್ತಿವರ್ಧಕ. ಆ ಕೆಲವು ಕ್ಷಣಕ್ಕೆ ಇದರಿಂದ ಶಕ್ತಿ ಹೆಚ್ಚಿದಂತಾಗಿ ಚೈತನ್ಯ ಸಿಗುವುದು ನಿಜವಾದರೂ ದೇಹಕ್ಕೆ ಒಳ್ಳೆಯದನ್ನು ಮಾಡಲಾರವು.

ಇದನ್ನೂ ಓದಿ: MDH, Everest Spices: ಸಿಂಗಾಪುರ, ಹಾಂಕಾಂಗ್‌ ಬಳಿಕ ಇದೀಗ ನೇಪಾಳದಲ್ಲಿಯೂ ಎವರೆಸ್ಟ್​, ಎಂಡಿಎಚ್​ ಮಸಾಲೆಗಳ ಮಾರಾಟ ನಿಷೇಧ

ಬದಲಾಗಿ ಇದರಲ್ಲಿ ಅತ್ಯಂತ ಹೆಚ್ಚು ಪ್ರಮಾಣದಲ್ಲಿರುವ ಸಕ್ಕರೆ ಹಾಗೂ ರಾಸಾಯನಿಕಗಳು ದೇಹಕ್ಕೆ ಮಾರಕ. ಇವುಗಳನ್ನು ಆಗಾಗ ಕುಡಿಯುವುದರಿಂದ ತೂಕದಲ್ಲಿ ಹೆಚ್ಚಳವೂ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು. ಹಾಗಾಗಿ ಇಂತಹ ಶಕ್ತಿವರ್ಧಕ ಪೇಯಗಳಿಂದ ನಾವು ದೂರವಿರುವುದು ಒಳ್ಳೆಯದು. ಕ್ಷಣಿಕ ಮಾತ್ರದ ಶಕ್ತಿವರ್ಧಕಗಳಿಗಿಂತ ಉತ್ತಮ ಪೋಷಕಾಂಶಯುಕ್ತ ಆರೋಗ್ಯಕರ ಆಹಾರಗಳ ಸೇವನೆಯಿಂದ ಆರೋಗ್ಯವನ್ನು ಹೆಚ್ಚಿಸಬಹುದು.

Continue Reading
Advertisement
Russia Tourism
ಪ್ರವಾಸ3 mins ago

Russia Tourism: ವೀಸಾ ಇಲ್ಲದೆ ಭಾರತೀಯರಿನ್ನು ರಷ್ಯಾಕ್ಕೆ ಭೇಟಿ ನೀಡಬಹುದು!

Constitution
ದೇಶ4 mins ago

ಪ್ರಚಾರದ ವೇಳೆ ರಾಹುಲ್‌ ಗಾಂಧಿಯಿಂದ ಚೀನಾ ಸಂವಿಧಾನ ಪ್ರತಿ ಪ್ರದರ್ಶನ; ಹಿಮಂತ ಬಿಸ್ವಾ ಗಂಭೀರ ಆರೋಪ

Rain News Boy dies after being struck by lightning in Banavasi Heavy rains lash Chikkamagaluru and Hassan
ಮಳೆ10 mins ago

Rain News: ಬನವಾಸಿಯಲ್ಲಿ ಆಟವಾಡುತ್ತಿದ್ದ ಬಾಲಕ ಸಿಡಿಲು ಬಡಿದು ಸಾವು; ಚಿಕ್ಕಮಗಳೂರು, ಹಾಸನದಲ್ಲಿ ಮಳೆ ಅವಾಂತರ

Election Icon
Lok Sabha Election 202411 mins ago

Election Icon: ಹಿಮಾಚಲ ಪ್ರದೇಶದ ಮಂಗಳಮುಖಿ ಈಗ ‘ಚುನಾವಣಾ ಐಕಾನ್’

Virat Kohli
ಕ್ರೀಡೆ32 mins ago

Virat Kohli: ರೋಹಿತ್​ ಶರ್ಮ ರನ್​ ದಾಖಲೆ ಮುರಿದ ಕಿಂಗ್​ ಕೊಹ್ಲಿ

Covid 19
ವಿದೇಶ32 mins ago

Covid 19: ಸಿಂಗಾಪುರದಲ್ಲಿ ಕೊರೊನಾ ಹೊಸ ಅಲೆ; ವಾರದಲ್ಲಿ 25 ಸಾವಿರ ಕೇಸ್‌, ಭಾರತಕ್ಕೆ ಇದೆಯೇ ಭೀತಿ?

Inspirational Story
ಶಿಕ್ಷಣ36 mins ago

Inspirational Story: 25 ವರ್ಷಗಳ ಹಿಂದೆ ಕಸದ ತೊಟ್ಟಿಯಲ್ಲಿ ಸಿಕ್ಕ ಅಂಧ ಹೆಣ್ಣುಮಗುವಿನ ಸಾಧನೆ ನೋಡಿ!

MLC Election Withdrawal of nomination paper says Suresh Sajjan
ಕರ್ನಾಟಕ37 mins ago

MLC Election: ನಾಮಪತ್ರ ವಾಪಸ್ ಪಡೆಯಲು ನಿರ್ಧರಿಸಿದ ಬಿಜೆಪಿ ಬಂಡಾಯ ಅಭ್ಯರ್ಥಿ

SSLC 2024 Exam 2
ಪ್ರಮುಖ ಸುದ್ದಿ47 mins ago

SSLC 2024 Exam 2: ಜೂ. 14ರಿಂದ ಎಸ್ಎಸ್ಎಲ್‌ಸಿ ಪರೀಕ್ಷೆ-2; ಪರಿಷ್ಕೃತ ವೇಳಾಪಟ್ಟಿ ಇಲ್ಲಿದೆ

Two killed after being hit by the wheel of a chariot while performing at Veerabhadreswara fair
ಕರ್ನಾಟಕ55 mins ago

Veerabhadreswara Fair: ವೀರಭದ್ರೇಶ್ವರ ಜಾತ್ರೆಯಲ್ಲಿ ಉತ್ತತ್ತಿ ಆಯುವಾಗ ರಥದ ಚಕ್ರದಡಿ‌ ಸಿಲುಕಿ ಇಬ್ಬರ ಸಾವು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ1 day ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ2 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ2 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು2 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ4 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ4 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ4 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20244 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌