Health Tips: ತಂಪು ತಂಪು ಕೂಲ್‌ ಕೂಲ್‌ ಈ ಲಾವಂಚ ಎಂಬ ಬೇಸಿಗೆಯ ಬಂಧು! Vistara News
Connect with us

ಆರೋಗ್ಯ

Health Tips: ತಂಪು ತಂಪು ಕೂಲ್‌ ಕೂಲ್‌ ಈ ಲಾವಂಚ ಎಂಬ ಬೇಸಿಗೆಯ ಬಂಧು!

ಖಸ್‌ಖಸ್‌ ಅಥವಾ ಲಾವಂಚ ನಮಗೆ ಪ್ರಿಯವಾಗುವುದು ಅದರ ವಿಶೇಷವಾದ ಘಮದಿಂದ. ಲಾವಂಚದ ಟೊಪ್ಪಿ ಬಿಸಿಲಿನಿಂದ ನಮಗೆ ರಕ್ಷಣೆ ನೀಡಿದರೆ, ಶರಬತ್ತು ಹಾಗೂ ಲಾವಂಚದ ನೀರು ನಮ್ಮ ದೇಹವನ್ನು ಒಳಗಿನಿಂದ ತಣ್ಣಗಿರಿಸುತ್ತದೆ.

VISTARANEWS.COM


on

lavancha
Koo

ಬೇಸಿಗೆ ಬಂತೆಂದರೆ ನಾವು ಮೊರೆ ಹೋಗುವ ಅನೇಕ ನೈಸರ್ಗಿಕ ತಂಪು ಪಾನೀಯಗಳ ಪೈಕಿ ಖಸ್‌ ಖಸ್‌ ಅಥವಾ ಲಾವಂಚದ ಶರಬತ್ತು ಕೂಡಾ ಒಂದು. ಹಿಂದಿನಿಂದ ನಮ್ಮ ಹಿರಿಯರು ಕಂಡುಕೊಂಡ ನೈಸರ್ಗಿಕ ಪರಿಹಾರಗಳಲ್ಲಿ ಇದೂ ಒಂದು. ಆದರೆ ಇತ್ತೀಚೆಗಿನ ದಿನಗಳಲ್ಲಿ ಇವುಗಳ ಬಳಕೆ ಕಡಿಮೆಯಾಗುತ್ತಿದೆ. ಆದರೆ, ಬೇಸಿಗೆಯ ಧಗೆಗೆ ನೈಸರ್ಗಿಕ ಪರಿಹಾರಗಳಷ್ಟು ಒಳ್ಳೆಯ ಆಯ್ಕೆ ಇನ್ನೊಂದಿಲ್ಲ. ಲಾವಂಚ ಕೇವಲ ನಮ್ಮ ಬಾಯಾರಿಕೆ ನೀಗಿಸುವುದಷ್ಟೇ ಅಲ್ಲ, ದೇಹವನ್ನು ತಂಪಾಗಿಡುವುದಕ್ಕೆ ಕೂಡಾ ನೆರವಾಗುತ್ತದೆ. ಲಾವಂಚದ ಟೊಪ್ಪಿ ಬಿಸಿಲಿನಿಂದ ನಮಗೆ ರಕ್ಷಣೆ ನೀಡಿದರೆ, ಶರಬತ್ತು ಹಾಗೂ ಲಾವಂಚದ ನೀರು ನಮ್ಮ ದೇಹವನ್ನು ಒಳಗಿನಿಂದ ತಣ್ಣಗಿರಿಸುತ್ತದೆ. ಬೇಸಿಗೆ ಬಂತೆಂದರೆ ಇವೆಲ್ಲವುಗಳ ಅಗತ್ಯ ನಮಗೆ ನಿಜವಾಗಿ ಮನವರಿಕೆಯಾಗುತ್ತದೆ.

ಖಸ್‌ಖಸ್‌ ಅಥವಾ ಲಾವಂಚ ನಮಗೆ ಪ್ರಿಯವಾಗುವುದು ಅದರ ವಿಶೇಷವಾದ ಘಮದಿಂದ. ಲಾವಂಚದ ಬೇರು ಕೇವಲ ಶರಬತ್ತಷ್ಟೇ ಅಲ್ಲ, ಸಾಬೂನು, ಸುಗಂಧ ದ್ರವ್ಯಗಳು, ಪಾನ್‌ ಮಸಾಲಾ ಸೇರಿದಂತೆ ಅನೇಕ ಬಗೆಯ ಆಹಾರವಸ್ತುಗಳು ಹಾಗೂ ಕಾಸ್ಮಿಟಿಕ್‌ಗಳ ತಯಾರಿಕೆಯಲ್ಲೂ ಬಳಕೆಯಾಗುತ್ತದೆ. ಲಾವಂಚವೆಂಬ ಹುಲ್ಲಿನ ಬೇರಿನಲ್ಲಿ ವಿಟಮಿನ್‌ ಎ, ಬಿ, ಸಿ ಸೇರಿದಂತೆ ಹಲವು ಪೋಷಕಾಂಶಗಳೂ, ಖನಿಜಾಂಶಗಳೂ ಹೇರಳವಾಗಿರುವುದರಿಂದ ಇದು ಪುರಾತನ ಕಾಲದಿಂದಲೂ ಜನರು ತಮ್ಮ ಮನೆಗಳಲ್ಲಿ ಬೇಸಿಗೆಯ ಉರಿಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು, ದೇಹ ತಂಪಾಗಿಸಲು ಬಳಸುತ್ತಿದ್ದ ವಸ್ತುವಾಗಿದೆ.

ಖಸ್‌ ಖಸ್‌ ಅಥವಾ ಲಾವಂಚವನ್ನು ನಿತ್ಯ ಬಳಕೆಯಲ್ಲಿ ಬೇಸಿಗೆಯಲ್ಲಿ ಉಪಯೋಗಿಸಬೇಕೆಂದರೆ ಒಂದೋ ಯಾವ ಶ್ರಮವೂ ಇಲ್ಲದೆ ಮಾರುಕಟ್ಟೆಯಲ್ಲಿ ಸಿಗುವ ಹಸಿರು ಬಣ್ಣದ ಖಸ್‌ಖಸ್‌ ಸಿರಪ್‌ ಖರೀದಿಸಬಹುದು. ಇಲ್ಲವೇ, ಮನೆಯಲ್ಲೇ ಲಾವಂಚದ ಬೇರುಗಳನ್ನು ನೀರಿನಲ್ಲಿ ಮೂರು ದಿನಗಳ ಕಾಲ ನೆನೆ ಹಾಕಿ ಅದನ್ನು ಶರಬತ್ತಿಗೆ ಬಳಸಬಹುದು, ಅಥವಾ ಆ ನೀರನ್ನು ಹಾಗೆಯೇ ಕುಡಿಯಬಹುದು.

1. ಲಾವಂಚದ ಬೇರಿನ ನೀರನ್ನು ಹೀಗೆ ನಿತ್ಯವೂ ಸೇವಿಸುವುದರಿಂದ ಇತರ ಅನೇಕ ಪ್ರಯೋಜನಗಳೂ ಇವೆ. ಈ ಬೇರಿನಲ್ಲಿ ಸಾಕಷ್ಟು ಕಬ್ಬಿಣಾಂಶ, ಮ್ಯಾಂಗನೀಸ್‌ ಹಾಗೂ ಹಲವು ಬಗೆಯ ವಿಟಮಿನ್‌ಗಳೂ ಇರುವುದರಿಂದ ಇದು ನೈಸರ್ಗಿಕವಾಗಿ ಅಧಿಕ ರಕ್ತದೊತ್ತಡವನ್ನು ಸಮತೋಲನಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಇದು ರಕ್ತ ಪರಿಚಲನೆಯನ್ನು ತೀವ್ರಗೊಳಿಸಿ, ಅಧಿಕ ಒತ್ತಡವಿದ್ದಲ್ಲಿ ಅದನ್ನೊಂದು ಹದಕ್ಕೆ ತರುತ್ತದೆ.

ಇದನ್ನೂ ಓದಿ: Health Tips: ನಾರು ಒಳ್ಳೆಯದು; ಆದರೂ ಅತಿಯಾಗಿ ತಿನ್ನಬೇಡಿ!

2. ಅಧಿಕ ಬಾಯಾರಿಕೆಗೆ ಇದು ಸೂಕ್ತ ಮನೆಮದ್ದು. ಬೇಸಿಗೆಯ ಧಗೆಗೆ ಎಷ್ಟು ನೀರು ಕುಡಿದರೂ ನೀರು ಕುಡಿದಂತೆ ಅನಿಸದಿದ್ದಾಗ ಲಾವಂಚದ ನೀರು ಸಹಾಯಕ್ಕೆ ಬರುತ್ತದೆ. ಇದು ಬಾಯಾರಿಕೆಯನ್ನು ತಣಿಸುತ್ತದೆ. ಹೆಚ್ಚು ಬಾಯಾರದಂತೆಯೂ ನೋಡಿಕೊಳ್ಳುವ ಗುಣ ಇದರಲ್ಲಿದೆ. ಒಂದು ಸಮತೋಲನ ಬಾಯಾರಿಕೆಯನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ.

3. ಲಾವಂಚದಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿರುವುದರಿಂದ ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವಲ್ಲಿಯೂ ಸಹಾಯ ಮಾಡುತ್ತದೆ.

4. ಇದರಲ್ಲಿ ಝಿಂಕ್‌ ಹೇರಳವಾಗಿ ಇರುವುದರಿಂದ ಕಣ್ಣಿನ ಸಂಬಂಧೀ ತೊಂದರೆಗೂ ಇದು ಉತ್ತಮ ಪರಿಹಾರ ನೀಡುತ್ತದೆ. ಕಣ್ಣಿನ ಅಲರ್ಜಿಗಳು ಹಾಗೂ ಈ ಸಂಬಂಧಿಸಿದ ಸಮಸ್ಯೆಗಳಿಗೆ ಇದು ಉತ್ತಮ ಔಷಧಿ.

5. ಲಾವಂಚದಿಂದ ಕೇವಲ ಇಷ್ಟೇ ಅಲ್ಲ. ಇನ್ನೂ ಅನೇಕ ಲಾಭಗಳಿವೆ. ಇದು ದೇಹದ ಉರಿಯೂತ, ಅಲ್ಲಲ್ಲಿ ನೋವು ಇತ್ಯಾದಿಗಳಿಗೂ ಒಳ್ಳೆಯ ಔಷಧಿ. ಕಿಡ್ನಿ ಕಲ್ಲಿನ ಸಮಸ್ಯೆಗೂ ಇದು ಒಳ್ಳೆಯದು. ಪಚನಕ್ರಿಯೆಯನ್ನು ಉತ್ತೇಜಿಸುವ ಇದು ನರಮಂಡಲದ ಸಮಸ್ಯೆಗಳಿಗೂ ಒಳ್ಳೆಯದು. ನಿದ್ದೆಯ ಸಮಸ್ಯೆ ಇರುವ ಮಂದಿಗೆ ಲಾವಂಚದ ಶರಬತ್ತು ಒಳ್ಳೆಯದು. ಲಾವಂಚದ ಬೇರಿನ ದಿಂಬಿನಲ್ಲಿ ಮಲಗುವುದು ಕೂಡಾ ಪರಿಹಾರ ಕೊಡಬಹುದು.

ಇದನ್ನೂ ಓದಿ: Health Tips: ನಾನ್‌ಸ್ಟಿಕ್‌ ಪಾತ್ರೆಗಳು ಆರೋಗ್ಯಕ್ಕೆ ಮಾರಕವಾಗದಂತೆ ಬಳಸುವುದು ಹೇಗೆ?

ಕ್ಷಣ ಕ್ಷಣದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಫೇಸ್ ಬುಕ್ ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ವೈವಿಧ್ಯಮಯ ಸುದ್ದಿಗಳಿಗಾಗಿ ವಿಸ್ತಾರ ನ್ಯೂಸ್ ಟ್ವಿಟರ್ ಪೇಜ್ ಫಾಲೋ ಮಾಡಿ

ಆರೋಗ್ಯ

New Virus: ಕೊರೊನಾ ಬೆನ್ನಲ್ಲೇ ಪತ್ತೆಯಾಯ್ತು ಮತ್ತೊಂಡು ಡೆಡ್ಲಿ ವೈರಸ್!‌ ಭಾರತದಲ್ಲೇ ಮೊದಲ ಕೇಸ್‌!

ಕೊರೊನಾ ಸೋಂಕಿನ ಬೆನ್ನಲ್ಲೇ ಮತ್ತೊಂದು ಸೋಂಕಿನ (New Virus) ಸುದ್ದಿ ಎಲ್ಲೆಡೆ ಹರಿದಾಡಿದೆ. ಸಿಲ್ವರ್‌ ಲೀಫ್‌ ಡಿಸೀಸ್‌ ಹೆಸರಿನ ಕಾಯಿಲೆ ಭಾರತದಲ್ಲಿ ಮೊದಲನೆಯದಾಗಿ ಪತ್ತೆಯಾಗಿರುವುದಾಗಿ ವರದಿಯಾಗಿದೆ.

VISTARANEWS.COM


on

Edited by

Koo

ನವದೆಹಲಿ: ಕೊರೊನಾ ಸೋಂಕು ವಿಶ್ವಾದ್ಯಂತ ಭಾರೀ ತಲ್ಲಣವನ್ನೇ ಉಂಟುಮಾಡಿತ್ತು. ಲಕ್ಷಾಂತರ ಜೀವಗಳು ಈ ಸೋಂಕಿನಿಂದಾಗಿ ಸಾವನ್ನಪ್ಪಿವೆ. ಅದರ ಬೆನ್ನಲ್ಲೇ ಇದೀಗ ಮತ್ತೊಂದು ವೈರಸ್‌ (New Virus) ಬಂದಿರುವ ಬಗ್ಗೆ ಸುದ್ದಿ ಹರಿದಾಡಲಾರಂಭಿಸಿದೆ. ಅದರಲ್ಲೂ ಭಾರತದಲ್ಲಿಯೇ ಮೊದಲನೆಯದಾಗಿ ಸೋಂಕು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Covid-19 Cases: ಕೊರೊನಾ ಸೋಂಕಿನ ಕೇಸ್​​ನಲ್ಲಿ 24ಗಂಟೆಯಲ್ಲಿ ಶೇ.40 ಏರಿಕೆ; ಇಂದು 3ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲು
ಹೌದು. ಭಾರತದಲ್ಲಿ ಸಸ್ಯಗಳಿಗೆ ಹೆಚ್ಚಾಗಿ ಕಾಡುವ ರೋಗವೆಂದರೆ ಅದು ಸಿಲ್ವರ್‌ ಲೀಫ್‌ ರೋಗ. ಈ ರೋಗದ ವೈರಸ್‌ ಇದೀಗ ಮಾನವನ ದೇಹಕ್ಕೂ ಹೊಗ್ಗಿರುವುದಾಗಿ ವರದಿಯಾಗಿದೆ. ಭಾರತದ ರೈತನೊಬ್ಬನಿಗೆ ಈ ಸೋಂಕು ತಗುಲಿದ್ದು, ಆತನಲ್ಲಿ ಜ್ವರ, ಕೆಮ್ಮುವಿನಂತಹ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ವರದಿಯಾಗಿದೆ. ಇದುವರೆಗೆ ಈ ಸೋಂಕು ಯಾವುದೇ ದೇಶದಲ್ಲಿಯೂ ಮನುಷ್ಯರಿಗೆ ಹಬ್ಬಿರಲಿಲ್ಲ. ಇದೇ ಮೊದಲನೇ ಬಾರಿಗೆ ಇಂತದ್ದೊಂದು ಪ್ರಕರಣ ವರದಿಯಾಗಿದೆ.

ಅಂದ ಹಾಗೆ ಈ ಸೋಂಕು ಯಾವಾಗ ರೈತನಿಗೆ ತಗುಲಿದ್ದು ಎನ್ನುವ ವಿಚಾರದಲ್ಲಿ ಸ್ಪಷ್ಟ ಮಾಹಿತಿಯಿಲ್ಲ. ಆದರೆ ಈ ಕುರಿತಾದ ವರದಿಯೊಂದು ʼಮೆಡಿಕಲ್‌ ಮೈಕೋಲಜಿ ಕೇಸ್‌ ರಿಪೋರ್ಟ್ಸ್‌ʼ ಜರ್ನಲ್‌ನಲ್ಲಿ ದಾಖಲಾಗಿದೆ.

ಇದನ್ನೂ ಓದಿ: Coronavirus: ಇಂದು 1800ಕ್ಕೂ ಅಧಿಕ ಕೊರೊನಾ ಕೇಸ್​ಗಳು ಪತ್ತೆ; ಏಪ್ರಿಲ್​​ನಲ್ಲಿ 2 ದಿನ ಆಸ್ಪತ್ರೆಗಳಲ್ಲಿ ಅಣುಕು ಕಾರ್ಯಾಚರಣೆ

ಇತ್ತೀಚೆಗೆ ಅಮೆರಿಕದ ಆರೋಗ್ಯ ಅಧಿಕಾರಿಗಳು ವೈರಸ್‌ ಒಂದರ ಬಗ್ಗೆ ಎಚ್ಚರಿಕೆ ಕೊಟ್ಟಿದ್ದರು. ಕ್ಯಾಂಡಿಡಾ ಔರಿಸ್‌ ಫಂಗಸ್‌ ಹೆಸರಿನ ಸೋಂಕು ಇತ್ತೀಚಿನ ದಿನಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದ್ದರು. ಹಾಗೆಯೇ ಈ ಸೋಂಕಿಗೆ ತುತ್ತಾಗುವವರಲ್ಲಿ ಶೇ.60 ಮಂದಿ ಸಾವನ್ನಪ್ಪುವ ಸಾಧ್ಯತೆಯಿದೆ ಎಂದೂ ಅವರು ತಿಳಿಸಿದ್ದರು. ಅದರ ಬೆನ್ನಲ್ಲೇ ಇದೀಗ ಭಾರತದಲ್ಲಿ ಮತ್ತೊಂದು ಸೋಂಕಿನ ವಿಚಾರ ಸುದ್ದಿಯಾಗಿದೆ. ಇದರ ಬಗ್ಗೆ ಭಾರತೀಯ ಆರೋಗ್ಯ ಇಲಾಖೆಯಿಂದ ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ.

Continue Reading

ಆರೋಗ್ಯ

Shivamogga News: ವಿನ್‌ಲೈಫ್ ಟ್ರಸ್ಟ್ ವತಿಯಿಂದ ಏ. 2ರಂದು ಆರೋಗ್ಯ ಉತ್ಸವ ಜನ ಜಾಗೃತಿ ಸಮಾವೇಶ

Shivamogga News: ಆರೋಗ್ಯ ಉತ್ಸವ ಜನಜಾಗೃತಿ ಸಮಾವೇಶದಲ್ಲಿ ಜೀವ ರಕ್ಷಕ ತರಬೇತಿ, ಕಿರು ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ವಿನ್‌ಲೈಫ್ ಟ್ರಸ್ಟಿ ಡಾ.ಪೃಥ್ವಿ ಮಾಹಿತಿ ನೀಡಿದ್ದಾರೆ.

VISTARANEWS.COM


on

Edited by

WinLife Trust shivamogga
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿನ್ ಲೈಫ್ ಟ್ರಸ್ಟಿ ಡಾ.ಪೃಥ್ವಿ .
Koo

ಶಿವಮೊಗ್ಗ: ವಿನ್‌ಲೈಫ್ ಟ್ರಸ್ಟ್ (WinLife Trust) ವತಿಯಿಂದ ಕುವೆಂಪು ರಂಗ ಮಂದಿರದಲ್ಲಿ ಏ.2 ರಂದು ಆರೋಗ್ಯ ಉತ್ಸವ ಜನ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿನ್‌ಲೈಫ್ ಟ್ರಸ್ಟಿ ಡಾ.ಪೃಥ್ವಿ, “ಈ ಸಮಾವೇಶದಲ್ಲಿ ತುರ್ತು ಜೀವ ರಕ್ಷಕ ತರಬೇತಿ ಮತ್ತು ಕಾರ್ಯಾಗಾರ ನಡೆಯಲಿದ್ದು, ದೈನಂದಿನ ಬದುಕಿನಲ್ಲಿ ಒತ್ತಡ ನಿರ್ವಹಣೆ, ಮಧುಮೇಹ @360 ಈ ವಿಷಯ ಕುರಿತು ಅರಿವು ಮೂಡಿಸಲಾಗುವುದು. ಆರೋಗ್ಯ ಕುರಿತು ಪ್ರಾಯೋಗಿಕ ತರಬೇತಿ, ಕಾರ್ಯಾಗಾರ, ಯೋಗ, ವಸ್ತು ಪ್ರದರ್ಶನ, ಕಿರು ನಾಟಕ ಪ್ರದರ್ಶನ, ಸಮಾಲೋಚನೆ ಹಾಗೂ ಉಪನ್ಯಾಸವನ್ನು ಏರ್ಪಡಿಸಲಾಗಿದೆ” ಎಂದು ಹೇಳಿದರು.

ಇದನ್ನೂ ಓದಿ: Ananya Panday: ತನ್ನನ್ನು ಎಸಿಪಿ ಎಂದು ಕರೆಯದಂತೆ ಮಾಧ್ಯಮಗಳಿಗೆ ವಿನಂತಿಸಿದ ಅನನ್ಯಾ ಪಾಂಡೆ

ಸುದ್ದಿಗೋಷ್ಠಿಯಲ್ಲಿ ವಿನ್‌ಲೈಫ್ ನಿರ್ದೇಶಕರಾದ ಡಾ.ಶಂಕರ್, ಡಾ.ವಿಜಯ ಕುಮಾರ್, ರೆಹಮತ್ ಹಾಗೂ ಬದ್ರಿನಾಥ್ ಉಪಸ್ಥಿತರಿದ್ದರು.

Continue Reading

ಆರೋಗ್ಯ

Import duty exemption : ಅಪರೂಪದ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಎಲ್ಲ ಔಷಧಗಳ ದರ ಇಳಿಕೆ

ಅಪರೂಪದ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸುವ ಔಷಧ ಹಾಗೂ ಆಹಾರ ವಸ್ತುವಿನ ಮೇಲೆ ಆಮದು ಸುಂಕ ವಿನಾಯಿತಿಯನ್ನು ಕೇಂದ್ರ ಸರ್ಕಾರ ಏಪ್ರಿಲ್‌ 1ರಿಂದ ಅನ್ವಯಿಸುವಂತೆ ನೀಡಿದೆ. (Import duty exemption) ಹೀಗಾಗಿ ಅವುಗಳ ದರ ಇಳಿಕೆಯಾಗಲಿದೆ.

VISTARANEWS.COM


on

Edited by

Medicines
Koo

ನವ ದೆಹಲಿ: ಕೇಂದ್ರ ಸರ್ಕಾರವು ಅಪರೂಪದ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಎಲ್ಲ ಔಷಧ ಹಾಗೂ ಆಹಾರಗಳ ದರ ಇಳಿಕೆಗೆ ಪೂರಕವಾಗಿ, ಅವುಗಳಿಗೆ ಆಮದು ಸುಂಕದಿಂದ ವಿನಾಯಿತಿ (Import duty exemption) ನೀಡಿದೆ. ಏಪ್ರಿಲ್‌ 1ರಿಂದ ಈ ಆಮದು ಸುಂಕ ವಿನಾಯಿತಿ ಅನ್ವಯವಾಗಲಿದೆ.

ಅಪರೂಪದ ಕಾಯಿಲೆಗಳ ಕುರಿತ ರಾಷ್ಟ್ರೀಯ ನೀತಿಯ (National policy for rare diseases 2021) ಅಡಿಯಲ್ಲಿ ಎಲ್ಲ ಬಗೆಯ ಅಪರೂಪದ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಎಲ್ಲ ಔಷಧ, ಆಹಾರಗಳಿಗೆ ಆಮದು ಸುಂಕದಿಂದ ವಿನಾಯಿತಿ ನೀಡಲಾಗಿದೆ ಎಂದು ಹಣಕಾಸು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಯಾವ ಔಷಧಗಳಿಗೆ ಆಮದು ಸುಂಕ ವಿನಾಯಿತಿ:

ಕೇಂದ್ರ ಸರ್ಕಾರ ಹಲವಾರು ಬಗೆಯ ಕ್ಯಾನ್ಸರ್‌ಗಳ ಚಿಕಿತ್ಸೆಯಲ್ಲಿ ಬಳಸುವ ಔಷಧವಾಗಿರುವ ಕೀಟ್ರುಡಾ (Keytruda) ಮೇಲಿನ ಆಮದು ಸುಂಕವನ್ನು ವಿನಾಯಿತಿಯ ಪಟ್ಟಿಗೆ ಸೇರಿಸಿದೆ. ಬೇಸಿಕ್‌ ಕಸ್ಟಮ್ಸ್‌ ಸುಂಕ ಅಥವಾ ಆಮದು ಸುಂಕವು 10% ಇರುತ್ತದೆ. ಲೈಫ್‌ ಸೇವಿಂಗ್‌ ಔಷಧ, ಲಸಿಕೆಗಳಿಗೆ 5% ಇರುತ್ತದೆ. ಕೆಲ ಔಷಧಗಳಿಗೆ ವಿನಾಯಿತಿ ನೀಡುತ್ತದೆ.

ವಿಶೇಷ ವೈದ್ಯಕೀಯ ಉದ್ದೇಶಕ್ಕಾಗಿ ನೀಡುವ ಆಹಾರಗಳು ಅಪರೂಪದ ಕಾಯಿಲೆಯಿಂದ ಬಳಲುತ್ತಿರುವವರಿಗೆ ನೀಡಬೇಕಾಗುತ್ತದೆ. ಇದು ಅವರ ಆಹಾರ ಪಥ್ಯದ ಭಾಗವಾಗಿರುತ್ತದೆ. ಇಂಥ ಆಹಾರಗಳಿಗೆ ಆಮದು ಸುಂಕ ವಿನಾಯಿತಿ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ಈ ಸುಂಕ ವಿನಾಯಿತಿಯನ್ನು ಪಡೆಯಲು ಆಮದುದಾರರು ಕೇಂದ್ರ ಅಥವಾ ರಾಜ್ಯದ ಆಹಾರ ಇಲಾಖೆಯ ಸರ್ಟಿಫಿಕೇಟ್‌ ಪಡೆಯಬೇಕಾಗುತ್ತದೆ. ಜಿಲ್ಲಾ ವೈದ್ಯಾಧಿಕಾರಿಯ ಸರ್ಟಿಫಿಕೇಟ್‌ ಕೂಡ ಆಗುತ್ತದೆ. ಆರೋಗ್ಯ ಸಚಿವಾಲಯದ ಪ್ರಕಾರ, 10 ಕೆ.ಜಿ ತೂಕವಿರುವ ಮಗುವಿಗೆ ಅಪರೂಪದ ಕಾಯಿಲೆ ಇದ್ದರೆ, ಚಿಕಿತ್ಸೆಗೆ ವಾರ್ಷಿಕ 10 ಲಕ್ಷ ರೂ.ಗಳಿಂದ 1 ಕೋಟಿ ರೂ. ತನಕ ಖರ್ಚಾಗುತ್ತದೆ. ಹೀಗಾಗಿ ಈ ಆಮದು ಸುಂಕ ಇಳಿಕೆಯ ನಿರ್ಧಾರವು ರೋಗಿಗಳಿಗೆ ರಿಲೀಫ್‌ ನೀಡಲಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಇತ್ತೀಚೆಗೆ ಕೆಲ ಔಷಧಗಳಿಗೆ ದರ ಮಿತಿಯನ್ನು ವಿಧಿಸಲಾಗಿದೆ. ವಿವರ ಇಲ್ಲಿದೆ. ರಾಷ್ಟ್ರೀಯ ಔಷಧ ದರ ಪ್ರಾಧಿಕಾರ (National pharmaceutical pricing authority-NPPA) ಸೋಮವಾರ 74 ಔಷಧಗಳ ದರಗಳಿಗೆ ಮಿತಿ ವಿಧಿಸಿದೆ. ಇದರಲ್ಲಿ ಡಯಾಬಿಟಿಸ್‌, ರಕ್ತದೊತ್ತಡ (ಬಿಪಿ) ಸೇರಿದಂತೆ ನಾನಾ ಕಾಯಿಲೆಗಳಿಗೆ ಬಳಸುವ ಔಷಧಗಳು ಸೇರಿವೆ. 2023ರ ಫೆಬ್ರವರಿ 21ರಂದು ನಡೆದ ಪ್ರಾಧಿಕಾರದ 109ನೇ ಸಭೆಯ ನಿರ್ಣಯದ ಪ್ರಕಾರ ಈ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ಯಾವ ಔಷಧಗಳು ಅಗ್ಗ?

ಡಪಾಗ್ಲಿಪ್ಲೊಜಿನ್‌ ಸಿಟಾಗ್ಲಿಪ್ಟಿನ್‌ (Dapagliflozin Sitagliption) : 27.75 ರೂ.

ಮೆಟ್‌ಫಾರ್ಮಿನ್‌ ಹೈಡ್ರೊಕ್ಲೋರೈಡ್‌ : 27.75 ರೂ.

ಡಪಾಗ್ಲಿಪ್ಲೊಜಿನ್ ಟೆಲ್‌ಮಿಸರ್ಟಾನ್‌ ( Dapagliflozin sitagliptin)‌ : 10.92 ರೂ.

ಬಿಸೊಪ್ರೊಲೋಲ್‌ ಫ್ಯುಮರಾರಾಟ್‌ (Bisoprolol fumarate) 10.92 ರೂ.

ಸೋಡಿಯಂ ವಾಲ್ಪ್ರೊರೇಟ್‌: 3.20 ರೂ.

Continue Reading

ಆರೋಗ್ಯ

Health Tips: ಬಾರ್ಲಿ ನೀರು: ಬೇಸಿಗೆಗೆ ಬೇಕೇ ಬೇಕು ಈ ಪುರಾತನ ಪೇಯ!

ಬಾರ್ಲಿಯ ಮಹತ್ವ ತಿಳಿದರೂ, ಬೇಸಗೆಯಲ್ಲಿ ಬಾರ್ಲಿ ದೇಹಕ್ಕೆ ತಂಪು ಎಂಬುದು ಗೊತ್ತಿದ್ದರೂ ಇದನ್ನು ಬಳಸುವುದು ಹೇಗೆ ಎಂಬ ಸಂಶಯ ಹಲವರದ್ದು. ಇದಕ್ಕೆ ಉತ್ತರ ಬಾರ್ಲಿ ನೀರು. ಬಾರ್ಲಿ ನೀರನ್ನು ಕುಡಿಯುವುದರಿಂದ ದೇಹ ತಂಪಾಗುವುದಲ್ಲದೆ, ಹಲವು ಆರೋಗ್ಯಕರ ಲಾಭಗಳನ್ನೂ ನಾವು ಪಡೆಯಬಹುದು.

VISTARANEWS.COM


on

Edited by

barley water
Koo

ಫ್ಯಾಷನ್‌ ಇರಬಹುದು, ಆಹಾರ ಇರಬಹುದು ಹಳೆಯದೆಲ್ಲ ಮತ್ತೆ ಹೊಸ ಟ್ರೆಂಡ್‌ ಆಗಿ ಮರಳಿ ಬರುವುದುಂಟು. ಹಲೆಯ ಕಾಲದ ಪುರಾತನ ಪದ್ಧತಿಗಳು, ಆಹಾರ ಕ್ರಮ ಮತ್ತೆ ಒಳ್ಳೆಯದು ಎಂಬ ಹೆಸರಿನಲ್ಲಿ ಹೊಸ ರೂಪದಿಂದ ಆವರಿಸಿಕೊಳ್ಳುವುದುಂಟು. ಕೆಲವೊಮ್ಮೆ, ಹಳೆಯ ಆಹಾರ ಪದ್ಧತಿಗಳ ನಿಜವಾದ ಮಹತ್ವ ಈಗ ಅರಿವಾಗಿ ನಾವು ಹಿಂದಿನ ಆಹಾರಕ್ರಮಗಳ, ಆರೋಗ್ಯಕರ ಜೀವನ ಪದ್ಧತಿಗಳತ್ತ ಮತ್ತೆ ನಿಧಾನವಾಗಿ ಆಕರ್ಷಿತರಾಗುತ್ತಿದ್ದೇವೆ. ಇಂತಹುಗಳ ಪೈಕಿ ಬಾರ್ಲಿ ಎಂಬ ಧಾನ್ಯವೂ ಮತ್ತೆ ಪ್ರವರ್ಧಮಾನಕ್ಕೆ ಬರುತ್ತಿದೆ.

ಬಾರ್ಲಿಯ ಮಹತ್ವ ತಿಳಿದರೂ, ಬೇಸಗೆಯಲ್ಲಿ ಬಾರ್ಲಿ ದೇಹಕ್ಕೆ ತಂಪು (Summer drink) ಎಂಬುದು ಗೊತ್ತಿದ್ದರೂ ಇದನ್ನು ಬಳಸುವುದು ಹೇಗೆ ಎಂಬ ಸಂಶಯ ಹಲವರದ್ದು. ಇದಕ್ಕೆ ಉತ್ತರ ಬಾರ್ಲಿ ನೀರು (Barley water benefits). ಬಾರ್ಲಿ ನೀರನ್ನು ಕುಡಿಯುವುದರಿಂದ ದೇಹ ತಂಪಾಗುವುದಲ್ಲದೆ, ಹಲವು ಆರೋಗ್ಯಕರ ಲಾಭಗಳನ್ನೂ ನಾವು ಪಡೆಯಬಹುದು.

ಬಾರ್ಲಿ ನೀರು ಮಾಡುವುದು ಹೇಗೆ?: ಎರಡು ಲೋಟ ನೀರಿಗೆ ಒಂದು ಚಮಚ ಬಾರ್ಲಿಯನ್ನು ಹಾಕಿ ಚೆನ್ನಾಗಿ ಕುದಿಸಿ. ಬಾರ್ಲಿ ಕಾಳುಗಳು ಅನ್ನ ಬೆಂದಾಗ ಉಬ್ಬಿಕೊಳ್ಳುವ ಹಾಗೆ ಚೆನ್ನಾಗಿ ಉಬ್ಬಿಕೊಂಡ ಮೇಲೆ ಅಂದರೆ ಸಣ್ಣ ಉರಿಯಲ್ಲಿ ಸುಮಾರು ಅರ್ಧಗಂಟೆ ಕಾಲ ಕುದಿಸಿ ನಂತರ ಸೋಸಿಕೊಳ್ಳಿ. ಈ ನೀರಿಗೆ ಚಿಟಿಕೆ ಉಪ್ಪು ಸೇರಿಸಿ ಕುಡಿಯಬಹುದು. ಉಪ್ಪು ಬೇಡವಾಗಿದ್ದರೆ, ನಿಂಬೆಹಣ್ಣು, ಜೇನುತುಪ್ಪವನ್ನೂ ಸೇರಿಸಿ ಕುಡಿಯಬಹುದು. ಸೋಂಪು ಹಾಗೂ ಚಿಟಿಕೆ ದಾಲ್ಚಿನಿ ಪುಡಿ ಸೇರಿಸಿಯೂ ಕುಡಿಯಬಹುದು.

ಹಾಗಾದರೆ, ಇನ್ನು ಉದ್ಭವಿಸುವ ಪ್ರಶ್ನೆ ಎಂದರೆ ದಿನವೂ ಬಾರ್ಲಿ ನೀರು ಕುಡಿಯಬಹುದೇ ಎಂಬುದು. ಅತಿಯಾದರೆ ಅಮೃತವೂ ವಿಷ ಎಂಬ ಮಾತಿದೆ. ಬಾರ್ಲಿ ಒಳ್ಳೆಯದು, ತಂಪು ಎಂದುಕೊಂಡು ನಿತ್ಯವೂ ಬಾರ್ಲಿ ನೀರು ಕುಡಿಯುವುದು ಖಂಡಿತವಾಗಿಯೂ ಒಳ್ಳೆಯದಲ್ಲ. ವಾರಕ್ಕೆ ಹೆಚ್ಚೆಂದರೆ ಎರಡು ಬಾರಿ ಬಾರ್ಲಿ ನೀರು ಕುಡಿಯಬಹುದು. ಮೂತ್ರನಾಳದ ಇನ್‌ಫೆಕ್ಷನ್‌ ಸಮಸ್ಯೆ ಆಗಾಗ ಎದುರಿಸುವ ಮಂದಿಗೆ ಬಾರ್ಲಿ ನೀರು ಅತ್ಯುತ್ತಮ. ಹೆಚ್ಚಿನ ಮಾಹಿತಿಗೆ ನಿಮ್ಮ ವೈದ್ಯರನ್ನೊಮ್ಮೆ ಭೇಟಿ ಮಾಡಿ ಅವರ ಸಲಹೆ ಪಡೆಯುವುದು ಒಳ್ಳೆಯದು.

ಬಾರ್ಲಿಯ ಪ್ರಯೋಜನಗಳು:

1. ಬಾರ್ಲಿಯಲ್ಲಿ ನಾರಿನಂಶ ಹೆಚ್ಚಿದೆ. ಹಾಗಾಗಿ ಇದು ಜೀರ್ಣಕ್ರಿಯೆಯ ಸಮಸ್ಯೆ ಇದರುವ ಮಂದಿಗೆ ಜೀರ್ಣವಾಗಲು ಸಹಾಯ ಮಾಡುತ್ತದೆ. ಬಾರ್ಲಿ ನೀರನ್ನು ಕುಡಿಯುವುದರಿಂದ ಈಂಥ ಸಮಸ್ಯೆಗಳನ್ನು ಸರಳವಾಗಿಸಬಹುದು. ತಲೆತಲಾಂತರಗಳಿಂದ ಬಾರ್ಲಿನೀರನ್ನು ಮನೆಗಳಲ್ಲಿ ಹೊಟ್ಟೆ ಸಂಬಂಧೀ ಸಮಸ್ಯೆಗಳ ಪರಿಹಾರಕ್ಕೆ ಮನೆಮದ್ದಾಗಿ ಬಳಸುತ್ತಿದ್ದರು.

ಇದನ್ನೂ ಓದಿ: Health tips: ಋತುಚಕ್ರದ ಹೊಟ್ಟೆಯುಬ್ಬರಕ್ಕೆ ಮಾಡಿ ಕುಡಿಯಿರಿ ಈ ಮ್ಯಾಜಿಕ್‌ ಡ್ರಿಂಕ್‌!

2. ನೀವು ತೂಕ ಇಳಿಸಲು ಸನ್ನದ್ಧರಾಗಿದ್ದರೆ, ಬಾರ್ಲಿ ನೀರು ಆರಾಮವಾಗಿ ಕುಡಿಯಬಹುದು. ಬಾರ್ಲಿ ನೀರು ತೂಕ ಇಳಿಸುವ ಮಂದಿಯ ಆಹಾರಕ್ರಮಕ್ಕೆ ಪೂರಕವಾಗಿ ವರ್ತಿಸುತ್ತದೆ. ಇದರಲ್ಲಿ ಕಡಿಮೆ ಕ್ಯಾಲರಿ ಇರುವುದುರಿಂದ ತೂಕ ಹೆಚ್ಚಾಗದೆ, ಪೋಷಕಾಂಶಗಳನ್ನು ದೇಹಕ್ಕೆ ನೀಡುತ್ತದೆ.

3. ಮಧುಮೇಹಿಗಳಿಗೂ ಬಾರ್ಲಿ ನೀರು ಅತ್ಯುತ್ತಮ. ಬಾರ್ಲಿ ನೀರಿನಲ್ಲಿ ದೇಹದಲ್ಲಿರುವ ಸಕ್ಕರೆಯ ಪ್ರಮಾಣವನ್ನು ಸಮತೋಲನಗೊಳಿಸುವ ಶಕ್ತಿ ಇರುವುದರಿಂದ ಹಾಗೂ ಕಡಿಮೆ ಗ್ಲಿಸೆಮಿಕ್‌ ಇಂಡೆಕ್ಸ್‌ ಇರುವುದರಿಂದ ಮಧುಮೇಹಿಗಳು ಚಿಂತೆಯಿಲ್ಲದೆ ಇದನ್ನು ಸೇವಿಸಿ ಪ್ರಯೋಜನ ಪಡೆಯಬಹುದು.

4. ಬಾರ್ಲಿ ನೀರು ಅತ್ಯುತ್ತಮ ಡಿಟಾಕ್ಸ್‌ ಡ್ರಿಂಕ್‌ ಕೂಡಾ. ಇದು ದೇಹದಿಂದ ಕಶ್ಮಲಗಳನ್ನು ಹೊರಕ್ಕೆ ಕಳಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ.

5. ಬಾರ್ಲಿ ನೀರು ಕುಡಿಯುವುದರಿಂದ ಚರ್ಮ ಹಾಗೂ ಕೂದಲಿನ ಆರೋಗ್ಯವೂ ಚೆನ್ನಾಗಿರುತ್ತದೆ.

6. ಬಾರ್ಲಿ ನೀರು ಡೈ ಯುರೇಟಿಕ್‌ ಆಗಿರುವುದರಿಂದ ಇದು ಮೂತ್ರ ಸಂಬಂಧೀ ಸಮಸ್ಯೆಗಳಿಗೆ ಅತ್ಯುತ್ತಮ ಮನೆಮದ್ದು. ಮೂತ್ರನಾಳದ ಇನ್ಫೆಕ್ಷನ್‌ ಇರುವ ಮಂದಿ, ಉರಿಮೂತ್ರದ ಸಮಸ್ಯೆ ಇದ್ದವರು ಬಾರ್ಲಿ ನೀರನ್ನು ಕುಡಿಯುವ ಮೂಲಕ ಸಮಸ್ಯೆಯಿಂದ ಮುಕ್ತರಾಗಬಹುದು.

ಇದನ್ನೂ ಓದಿ: Health Tips: ನಿಮಗೆ ಈ ಸಮಸ್ಯೆಗಳಿದ್ದರೆ ಕ್ಯಾಲ್ಶಿಯಂ ಕೊರತೆಯಿದೆ ಎಂದರ್ಥ!

Continue Reading
Advertisement
IPL 2023: IPL fan park after three years; Opportunity in Karnataka too
ಕ್ರಿಕೆಟ್10 mins ago

IPL 2023: ಮೂರು ವರ್ಷಗಳ ಬಳಿಕ ಐಪಿಎಲ್​ ಫ್ಯಾನ್​ ಪಾರ್ಕ್​; ಕರ್ನಾಟಕದಲ್ಲಿಯೂ ಇರಲಿದೆ ಜೋಶ್​

Mallikarjun khuba joins JDS
ಕರ್ನಾಟಕ13 mins ago

JDS Karnataka: ಬಿಜೆಪಿಯಿಂದ ಜೆಡಿಎಸ್‌ಗೆ ಮರಳಿದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ

Navjot Sidhu to be released from Jail
ದೇಶ18 mins ago

ಏ.1ರಂದು ಜೈಲಿಂದ ಬಿಡುಗಡೆಯಾಗಲಿದ್ದಾರೆ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು; ಪತ್ನಿ ಟ್ವೀಟ್ ಬೆನ್ನಲ್ಲೇ ಸಿಧು ಟ್ವೀಟ್​

Release Rs 17.42 crore dues to MySugar factory says Dinesh Gooligowda
ಕರ್ನಾಟಕ19 mins ago

MySugar Factory: ಮೈಶುಗರ್ ಕಾರ್ಖಾನೆಗೆ ಬಾಕಿ ಇರುವ 17.42 ಕೋಟಿ ರೂ. ಬಿಡುಗಡೆ ಮಾಡಿ: ದಿನೇಶ್‌ ಗೂಳಿಗೌಡ

Modi With Kharge
ಅಂಕಣ24 mins ago

ಮೊಗಸಾಲೆ ಅಂಕಣ: ಮೋದಿ, ಖರ್ಗೆ ಹಣಾಹಣಿಗೆ ವೇದಿಕೆ ಸಜ್ಜು

ಆರೋಗ್ಯ25 mins ago

New Virus: ಕೊರೊನಾ ಬೆನ್ನಲ್ಲೇ ಪತ್ತೆಯಾಯ್ತು ಮತ್ತೊಂಡು ಡೆಡ್ಲಿ ವೈರಸ್!‌ ಭಾರತದಲ್ಲೇ ಮೊದಲ ಕೇಸ್‌!

ವೈರಲ್ ನ್ಯೂಸ್28 mins ago

Viral News : ನೂಡಲ್ಸ್‌ನಿಂದಲೇ ರಸ್ತೆ ಗುಂಡಿ ಮುಚ್ಚುವ ವ್ಯಕ್ತಿ! ವೈರಲ್‌ ಆಗ್ತಿದೆ ಈತನ ಕೆಲಸ

Boys death
ಕರ್ನಾಟಕ34 mins ago

Mysterious death : ನಿರ್ಜನ ಪ್ರದೇಶದಲ್ಲಿ 8 ವರ್ಷದ ಬಾಲಕನ ಶವ ಪತ್ತೆ; ದುಷ್ಕರ್ಮಿಗಳು ಕೊಲೆ ಮಾಡಿ ಎಸೆದ ಶಂಕೆ

6 die of suffocation in Delhi After Due to mosquito coil
ದೇಶ55 mins ago

ಒಂದೇ ಕುಟುಂಬದ 6 ಮಂದಿಯ ಪ್ರಾಣ ತೆಗೆದ ಸೊಳ್ಳೆ ಬತ್ತಿ; ಹಾಸಿಗೆ ಮೇಲೆ ಬಿದ್ದು ಭುಗಿಲೆದ್ದ ಹೊಗೆ, ಬೆಂಕಿ

Gas tragedy
ಕರ್ನಾಟಕ56 mins ago

Fire tragedy : ಹೊಸಕೋಟೆಯಲ್ಲಿ ಭೀಕರ ದುರಂತ; ಗ್ಯಾಸ್‌ ಸಿಲಿಂಡರ್‌ ಲೀಕ್‌ ಆಗಿ 7 ಕಾರ್ಮಿಕರ ದಾರುಣ ಸಾವು

7th Pay Commission
ನೌಕರರ ಕಾರ್ನರ್5 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ2 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Govt employees ssociation
ಕರ್ನಾಟಕ2 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Sphoorti Salu
ಸುವಚನ10 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Village Accountant Recruitment
ಉದ್ಯೋಗ2 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್4 weeks ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ3 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

Teacher Transfer
ನೌಕರರ ಕಾರ್ನರ್5 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

7th Pay Commission
ಕರ್ನಾಟಕ5 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Land Surveyor Recruitment
ಉದ್ಯೋಗ2 months ago

Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

ಕರ್ನಾಟಕ3 hours ago

SSLC Exam 2023: ಹಾಲ್ ಟಿಕೆಟ್ ಕೊಡದೆ ಕೈ ಎತ್ತಿದ ಶಾಲೆಗಳು; ವಿಸ್ತಾರ ಎಂಟ್ರಿಯಿಂದ ಪರೀಕ್ಷೆ ಬರೆದ ಮಕ್ಕಳು

ಕರ್ನಾಟಕ21 hours ago

Ram Navami 2023: ಕರುನಾಡಿನೆಲ್ಲೆಡೆ ಶ್ರೀರಾಮ ನಾಮಸ್ಮರಣೆ; ಕಲಬುರಗಿಯಲ್ಲಿ ಮಜ್ಜಿಗೆ, ಪಾನಕ ವಿತರಿಸಿದ ಮುಸ್ಲಿಮರು

Siddalinga Swamiji of Siddaganga Mutt saw a cow and came running away Video goes viral
ಕರ್ನಾಟಕ1 day ago

Sri Siddalinga Swamiji: ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಕಂಡು ಓಡೋಡಿ ಬಂದ ಹಸು; ವಿಡಿಯೊ ವೈರಲ್‌

amit shah convoy
ಕರ್ನಾಟಕ4 days ago

Amit Shah: ಬೆಂಗಳೂರಿನಲ್ಲಿ ಅಮಿತ್‌ ಶಾ ಕಾನ್‌ವೇಯಲ್ಲಿ ಭದ್ರತಾ ವೈಫಲ್ಯ; ಇಬ್ಬರು ವಿದ್ಯಾರ್ಥಿಗಳ ವಿಚಾರಣೆ

rapido bike vs auto-Bike taxi drivers go on strike against auto drivers harassment
ಕರ್ನಾಟಕ4 days ago

Rapido Bike Vs Auto: ಆಟೋ ಚಾಲಕರ ದೌರ್ಜನ್ಯದ ವಿರುದ್ಧ ಸಿಡಿದೆದ್ದ ಬೈಕ್‌ ಟ್ಯಾಕ್ಸಿ ಚಾಲಕರು; ರಕ್ಷಣೆಗಾಗಿ ಪ್ರತಿಭಟನೆ

ಕರ್ನಾಟಕ1 week ago

Halal Ban: ಯುಗಾದಿಗೆ ಹಲಾಲ್‌ ಕಟ್‌ ಬಹಿಷ್ಕರಿಸಿ, ಜಟ್ಕಾ ಮಾಂಸ ಖರೀದಿ; ಮತ್ತೆ ಬೀದಿಗಿಳಿದ ಹಿಂದು ಕಾರ್ಯಕರ್ತರು

Did Dinesh Gundu Rao distribute damaged sarees in Gandhinagar for Ugadi festival?
ಕರ್ನಾಟಕ1 week ago

Damaged Saree: ಯುಗಾದಿ ಹಬ್ಬಕ್ಕೆ ಗಾಂಧಿನಗರದಲ್ಲಿ ಹರಿದ ಸೀರೆ ಕೊಟ್ಟರಾ ದಿನೇಶ್‌ ಗುಂಡೂರಾವ್‌? ಸೀರೆ ನೀಡಿ ಮಹಿಳೆಯರ ಕಿಡಿ

ಕರ್ನಾಟಕ1 week ago

Chikkaballapura BMTC: ಬೆಂಗಳೂರಿಂದ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ವೋಲ್ವೋ ಬಸ್‌ ಸಂಚಾರ ಶುರು; ಟೈಮಿಂಗ್‌ ಏನು?

BMTC bus window shattered as police refused to allow auto drivers rally
ಕರ್ನಾಟಕ2 weeks ago

Auto Strike In Bengaluru: ಆಟೋ ಚಾಲಕರ ರ‍್ಯಾಲಿಗೆ ಅವಕಾಶ ನೀಡದ ಖಾಕಿ ಪಡೆ; ಬಿಎಂಟಿಸಿ ಬಸ್ ಗಾಜು ಒಡೆದು ಆಕ್ರೋಶ

Drivers oppose Rapido bike taxi in bengaluru Extra BMTC buses ply on road, auto stopped plying
ಕರ್ನಾಟಕ2 weeks ago

Auto Strike: ರ‍್ಯಾಪಿಡೋ ಬೈಕ್‌ ಟ್ಯಾಕ್ಸಿಗೆ ವಿರೋಧ; ಆಟೋ ಓಡಾಟಕ್ಕೆ ಬ್ರೇಕ್‌, ರೋಡಿಗಿಳಿದ ಹೆಚ್ಚುವರಿ ಬಿಎಂಟಿಸಿ ಬಸ್‌

ಟ್ರೆಂಡಿಂಗ್‌

error: Content is protected !!