Latest
Health guide: ಇದ್ದಕ್ಕಿದ್ದಂತೆ ಸ್ತನದ ಗಾತ್ರ ಹೆಚ್ಚಾಗಲು ಇವೂ ಕಾರಣವಿರಬಹುದು!
ನಮ್ಮ ದಿನನಿತ್ಯದ ಚಟುವಟಿಕೆಗೂ, ಬದಲಾವಣೆಗಳಿಗೂ ಸ್ತನಗಳ ಗಾತ್ರವೃದ್ಧಿಗೂ ಸಂಬಂಧವಿದೆ. ಕೆಲವು ನಮ್ಮ ಬದುಕಿನ ಭಾಗವೇ ಆಗಿದ್ದು, ಸಹಜವೇ ಆಗಿದ್ದರೆ, ಇನ್ನೂ ಕೆಲವೊಮ್ಮೆ ಹೀಗಾಗಲು ಬೇರೆ ಆರೋಗ್ಯದ ಕಾರಣಗಳೂ ಇರಬಹುದು. ಅವು ಏನಿರಬಹುದು ಎಂಬುದು ತಿಳಿದಿದ್ದರೆ ಒಳ್ಳೆಯದು.
ಬಹಳಷ್ಟು ಮಂದಿ ಮಹಿಳೆಯರು ದಿಢೀರನೆ ಗಾತ್ರ ಹೆಚ್ಚಿಸಿಕೊಂಡ ಸ್ತನಗಳ ಬಗ್ಗೆ ಚಿಂತಿತರಾಗುತ್ತಾರೆ. ಅರೆ, ನಿನ್ನೆ ಮೊನೆಯವರೆಗೆ ಸರಿಯಾಗೇ ಇದ್ದೆನಲ್ಲ, ಇದು ಹೇಗಾಯಿತು ಅಂದುಕೊಳ್ಳುತ್ತೇವೆ. ಬಹಳಷ್ಟು ಸಾರಿ ಗೊತ್ತೇ ಆಗಿರುವುದಿಲ್ಲ ಕೂಡಾ. ಹೊಸ ಒಳ ಉಡುಪನ್ನು ಖರೀದಿಸ ಹೊರಟಾಗಲಷ್ಟೇ, ಇನ್ನೂ ತನ್ನದು ಹಳೆಯ ಸೈಜಿನಲ್ಲಿ ಇಲ್ಲ ಎಂಬ ಜ್ಞಾನೋದಯವಾಗುತ್ತದೆ. ಹಾಗಾದರೆ, ಇದು ಹೇಗಾಯ್ತು ಎಂದು ಇದಕ್ಕೆ ಕಾರಣಗಳನ್ನು ಹುಡುಕಹೋದರೆ ಉತ್ತರ ಅನೇಕ. ನಮ್ಮ ದಿನನಿತ್ಯದ ಚಟುವಟಿಕೆಗೂ, ಬದಲಾವಣೆಗಳಿಗೂ ಈ ಸ್ತನಗಳ ಗಾತ್ರವೃದ್ಧಿಗೂ ಸಂಬಂಧವಿದೆ. ಕೆಲವು ನಮ್ಮ ಬದುಕಿನ ಭಾಗವೇ ಆಗಿದ್ದು, ಸಹಜವೇ ಆಗಿದ್ದರೆ, ಇನ್ನೂ ಕೆಲವೊಮ್ಮೆ ಹೀಗಾಗಲು ಬೇರೆ ಕಾರಣವೂ ಆಗಿರಬಹುದು. ಹಾಗಾಗಿ, ಸ್ತನ ಇದ್ದಕ್ಕಿದ್ದಂತೆ ಗಾತ್ರ ಬದಲಾಯಿಸಿಕೊಳ್ಳಲು ಇವೆಲ್ಲ ಕಾರಣಗಳಿರಬಹುದು ಎಂದು ಸಾಧ್ಯಾಸಾಧ್ಯತೆಗಳ ಪಟ್ಟಿ ಇಲ್ಲಿ ಕೊಡಲಾಗಿದೆ. ಯಾಕೆಂದರೆ, ಇವುಗಳಲ್ಲಿ ಯಾವೊಂದು ಕಾರಣವೂ ಆಗಿರುವ ಸಂಭವವಿದೆ.
೧. ಋತುಚಕ್ರ: ಬಹಳಷ್ಟು ಮಂದಿ ಮಹಿಳೆಯರು ಇದನ್ನು ಗಮನಿಸಿದ್ದೀರಾ? ಋತುಚಕ್ರದ ಸಂದರ್ಭ ನಮ್ಮ ದೇಹದಲ್ಲಿ ಸಾಕಷ್ಟು ಬದಲಾವಣೆಗಗಳಾಗುತ್ತವೆ. ಮುಖ್ಯವಾಗಿ ಪ್ರೊಜೆಸ್ಟೆರಾನ್ ಹಾಗೂ ಇಸ್ಟ್ರೋಜನ್ ಹಾರ್ಮೋನಿನ ಮಟ್ಟ ಹಿಗ್ಗುತ್ತದೆ. ಈ ಸಂದರ್ಭ ಸ್ತನದ ಗಾತ್ರವೇನೂ ದೊಡ್ಡದಾಗುವುದಿಲ್ಲ. ಬದಲಾಗಿ ಈ ಸಂದರ್ಭ ಬಹಳ ಸೆನ್ಸಿಟಿವ್ ಆಗಿರುತ್ತದೆ. ಇನ್ನೇನು ಋತುಚಕ್ರ ಸಂಭವಿಸುವ ಒಂದೆರಡು ದಿನಗಳು ಮೊದಲು ಸ್ತನ ಗಾತ್ರದಲ್ಲಿ ಹಿರಿದಾದಂತೆ ಅನಿಸುತ್ತದೆ.
೨. ತಾಯ್ತನ: ಗರ್ಭಿಣಿಯಾದಾಗ ಮಹಿಳೆಯ ದೇಹದ ಹಾರ್ಮೋನಿನಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತದೆ. ಮುಖ್ಯವಾಗಿ ಸ್ತನಗಳು ದೊಡ್ಡದಾಗುತ್ತವೆ. ಇದು ಪ್ರಕೃತಿ ಸಹಜ. ಸ್ತನದ ಒಳಗೆ ಹರಿಯುವ ರಕ್ತನಾಳಗಳ ಗಾತ್ರವೂ ಹಿಗ್ಗಿಕೊಂಡು ಸ್ತನ ದೊಡ್ಡದಾದಂತೆ ಅನಿಸುತ್ತದೆ. ಎಲ್ಲ ಮಹಿಳೆಯರೂ ತಾಯ್ತನಕ್ಕೆ ಪ್ರವೇಶ ಮಾಡುವಾಗ ಇಂತಹ ಬದಲಾವಣೆ ಸಹಜ.
೩. ತೂಕ ಹೆಚ್ಚಾಗುವುದು: ಸ್ತನದ ಗಾತ್ರ ಹಿಗ್ಗಲು ಮತ್ತೊಂದು ಪ್ರಮುಖ ಕಾರಣ ಎಂದರೆ ತೂಕ ಹೆಚ್ಚುವುದು. ಬಹಳಷ್ಟು ಹೆಣ್ಣುಮಕ್ಕಳ ತೂಕ ೩೦ ವರ್ಷ ವಯಸ್ಸಿನ ನಂತರ ಹೆಚ್ಚಾಗುತ್ತದೆ. ಪರಿಣಾಮವಾಗಿ ಸ್ತನದ ಗಾತ್ರವೂ ಹೆಚ್ಚಾಗುತ್ತದೆ.
೪. ಲೈಂಗಿಕತೆ: ಲೈಂಗಿಕ ಸಂಪರ್ಕದ ಸಂದರ್ಭದಲ್ಲಿ ಸ್ತನ ಗಾತ್ರದಲ್ಲಿ ಹಿಗ್ಗುತ್ತದೆ. ಸೆಕ್ಸ್ ಸಂದರ್ಭ ಏರಿಯೋಲಾಗಳು ಹಿಗ್ಗುವ ಕಾರಣ ಏರಿಯೋಲಾದ ಸುತ್ತಮುತ್ತಲ ಅಂಗಗಳು ಸಹಜವಾಗಿಯೇ ಹಿಗ್ಗುತ್ತವೆ.
ಇದನ್ನೂ ಓದಿ: Breast cancer | ಡಿಯೋಡರೆಂಟ್ ಬಳಕೆಯಿಂದ ಸ್ತನದ ಕ್ಯಾನ್ಸರ್ ಬರುತ್ತಾ?
೫. ಮಾತ್ರೆಗಳು: ಕೆಲವು ಮಾತ್ರೆಗಳು ಮುಖ್ಯವಾಗಿ ಕಾಂಟ್ರಾಸೆಪ್ಟಿವ್ ಮಾತ್ರೆಗಳಿಂದ ಸ್ತನವು ದೊಡ್ಡದಾಗುತ್ತವೆ.
೬. ಸ್ತನಗಡ್ಡೆಗಳು: ಸ್ತನದಲ್ಲಿ ಗಡ್ಡೆಗಳಾದಾಗ ಸ್ತನ ದೊಡ್ಡದಾಗುತ್ತದೆ. ಈ ಬಗ್ಗೆ ಆಗಾಗ ಗಮನ ಹರಿಸುವುದು ಒಳ್ಳೆಯದು. ಹಾಗಾಗಿ ಇಂತಹವುಗಳು ಗಮನಕ್ಕೆ ಬಂದರೆ ಹಾಗೂ ಅಸಹಜ ಬೆಳವಣಿಗೆಗಳು ಕಂಡುಬಂದಲ್ಲಿ ವೈದ್ಯರ ಪರೀಕ್ಷೆ, ಹಾಗೂ ಸಲಹೆ ಪಡೆಯುವುದು ಅತ್ಯಂತ ಅಗತ್ಯ.
೭. ವ್ಯಾಯಾಮದ ಕೊರತೆ: ಸರಿಯಾಗಿ ವ್ಯಾಯಾಮ ಮಾಡದೇ ಇದ್ದಾಗ ದೇಹದ ಅಂಗಗಳಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಮುಖ್ಯವಾಗಿ ನಾವು ತಿನ್ನುವ ಆಹಾರ ಕೊಬ್ಬಿನಿಂದ ಕೂಡಿದ್ದು, ಬಹಳ ಸಾರಿ ದೇಹದ ಕೆಲವು ಅಂಗಗಳ ಮೇಲೆ ಮಾತ್ರ ಹೆಚ್ಚು ಪರಿಣಾಮ ಬೀರುತ್ತದೆ. ಒಬ್ಬೊಬ್ಬರ ದೇಹ ಪ್ರಕೃತಿಯನ್ನು ಇದು ಅವಲಂಬಿಸಿರುತ್ತದೆ. ಅವುಗಳ ಪ್ರಕಾರ ಸ್ತನಗಳೂ ಮುಖ್ಯವಾದವು. ನಮ್ಮ ದೇಹದಲ್ಲಿ ಅತ್ಯಂತ ಸುಲಭವಾಗಿ ತೂಕ ಹೆಚ್ಚಿಸಿಕೊಳ್ಳುವ ಕೆಲವು ಸೂಕ್ಷ್ಮ ಭಾಗಗಳಿವೆ. ಅವುಗಳ ಬಗ್ಗೆ ನಾವು ಜಾಗರೂಕರಾಗಿರಬೇಕು. ಯಾಕೆಂದರೆ, ವ್ಯಾಯಾಮ ಕೊಂಚ ಏರಿಳಿತವಾದರೂ ಸಾಕು ಅವು ತೂಕ ಹೆಚ್ಚಿಸಿಕೊಳ್ಳುತ್ತವೆ. ಅದಕ್ಕಾಗಿ ದೇಹವನ್ನು ಸರಿಯಾದ ಆಕಾರದಲ್ಲಿ ಇಟ್ಟುಕೊಳ್ಳಲು ನಿಯಮಿತ ವ್ಯಾಯಾಮ ಅಗತ್ಯ ಎಂಬುದನ್ನು ಮನಗಾಣಬೇಕು.
ಇದನ್ನೂ ಓದಿ: Breastfeeding | ಚಳಿಗಾಲದಲ್ಲಿ ಹಾಲುಣಿಸುವುದೇ ತಾಯಂದಿರಿಗೆ ಸವಾಲು! ಪರಿಹಾರ ಏನು?
Latest
Viral Video : ತಪ್ಪು ಟರ್ಮಿನಲ್ ತಲುಪಿ, ಇದಕ್ಕೂ ಮೋದಿ ಕಾರಣ ಎಂದ ನೆಟ್ಟಿಗ! ವೈರಲ್ ಆಯ್ತು ವಿಡಿಯೊ
ತಮ್ಮ ವಿಮಾನ ಪ್ರಯಾಣದ ಇ-ಟಿಕೆಟ್ ನೋಡದ ವ್ಯಕ್ತಿಯೊಬ್ಬರು ತಪ್ಪಾದ ಟರ್ಮಿನಲ್ ತಲುಪಿ ಈ ವಿಚಾರದಲ್ಲಿಯೂ ಪ್ರಧಾನಿ ಅವರು ಗಮನಹರಿಸಬೇಕು ಎಂದು ವಿಡಿಯೊ ಹರಿಬಿಟ್ಟಿದ್ದಾರೆ. ಆ ವಿಡಿಯೊ ವೈರಲ್ (Viral Video) ಆಗಿದೆ.
ಮುಂಬೈ: ವಿಮಾನ ಪ್ರಯಾಣ ಮಾಡುವವರು ತಮ್ಮ ವಿಮಾನದ ಟರ್ಮಿನಲ್ ಸಂಖ್ಯೆ ತಿಳಿದುಕೊಳ್ಳುವುದು ಅತಿಮುಖ್ಯ. ಆದರೆ ಅದನ್ನೇ ತಿಳಿದುಕೊಳ್ಳದ ವ್ಯಕ್ತಿಯೊಬ್ಬರು ತಪ್ಪಾದ ಟರ್ಮಿನಲ್ ತಲುಪಿ, ಇದಕ್ಕೂ ಪ್ರಧಾನಿ ಮೋದಿ ಕಾರಣ ಎಂದು ದೂಷಿಸಿದ್ದಾರೆ! ಅವರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.
ಇದನ್ನೂ ಓದಿ: Viral Video: ನಡೆಯೋದನ್ನು ಕಲಿಯೋ ಎಂದರೆ ಡ್ಯಾನ್ಸ್ ಮಾಡಿ ತೋರಿಸಿದ ಪುಟಾಣಿ; ಈ ಮುದ್ದಾದ ವಿಡಿಯೋಗೆ ಮನಸೋಲದವರಿಲ್ಲ
ಉಜ್ವಲ್ ತ್ರಿವೇದಿ ಅವರು ಬುಧವಾರ ಮುಂಬೈನಿಂದ ಬೆಂಗಳೂರಿಗೆ ಆಕಾಶ ಏರ್‌ಲೈನ್ ವಿಮಾನದಲ್ಲಿ ಹೊರಟಿದ್ದರು. ತಾವು ವಿಮಾನದ ಟಿಕೆಟ್ ಬುಕ್ ಮಾಡಿದಾಗ ಟಿಕೆಟ್‌ನಲ್ಲಿ, ವಿಮಾನವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲಿದೆ ಎಂದು ತೋರಿಸಿತ್ತು. ಆದರೆ ಬುಧವಾರ ಅವರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದಾಗ ವಿಮಾನವು ಪ್ರಾದೇಶಿಕ ವಿಮಾನ ನಿಲ್ದಾಣಕ್ಕೆ ಬರುತ್ತದೆ ಎಂದು ತಿಳಿಸಲಾಯಿತು ಎನ್ನುವುದು ತ್ರಿವೇದಿ ಅವರ ದೂರು.
ಈ ವಿಚಾರದಲ್ಲಿ ಉಜ್ವಲ್ ಅವರು ವಿಡಿಯೊ ಮಾಡಿದ್ದು, “ಈ ಸಮಸ್ಯೆಗಳನ್ನು ಯಾರು ಪರಿಹರಿಸುತ್ತಾರೆ? ನಮ್ಮ ಪ್ರಧಾನಿ ಸಣ್ಣ ಸಣ್ಣ ವಿಷಯಗಳ ಕ್ರೆಡಿಟ್ ತೆಗೆದುಕೊಳ್ಳಲು ಬರುತ್ತಾರೆ. ಆದರೆ ಸಾಮಾನ್ಯ ಜನರಿಗೆ ಹೇಗೆ ಕಿರುಕುಳ ನೀಡಲಾಗುತ್ತಿದೆ ಎಂಬುದು ಅವರಿಗೆ ತಿಳಿದಿರಬೇಕು. ನಾನು ಆಕಾಶ ಏರ್ ಹೆಲ್ಪ್‌ಡೆಸ್ಕ್‌ಗೆ ಹೋದೆ. ಅಲ್ಲಿ ಟರ್ಮಿನಲ್ ಅನ್ನು ಏಕೆ ಬರೆಯಲಾಗಿಲ್ಲ ಎಂಬುದನ್ನು ವಿವರಿಸಲು ಅವರಿಗೆ ಸಾಧ್ಯವಾಗಲಿಲ್ಲ. ಟಿಕೆಟ್‌ನಲ್ಲಿ ಅಂತಾರಾಷ್ಟ್ರೀಯ ನಿಲ್ದಾಣ ಎಂದು ಹೇಳಿದ ಮೇಲೆ ಒಬ್ಬ ವ್ಯಕ್ತಿಯು ದೇಶೀಯ ವಿಮಾನ ನಿಲ್ದಾಣಕ್ಕೆ ಏಕಾಗಿ ಹೋಗುತ್ತಾನೆ? ಬೆಳಗ್ಗೆ ವಿಮಾನವನ್ನು ಹತ್ತಲೆಂದು ಧಾವಿಸಿ ತಪ್ಪು ಟರ್ಮಿನಲ್ ತಲುಪುತ್ತಾನೆ ಅಂತಾದರೆ ಪರಿಸ್ಥಿತಿ ಹೇಗಿರುತ್ತದೆ ಎಂದು ಊಹಿಸಿ.” ಎಂದು ಹೇಳಿದ್ದಾರೆ. ವಿಡಿಯೊದಲ್ಲಿ ಜಿ20 ಬಗ್ಗೆಯೂ ಅವರು ಮಾತನಾಡಿದ್ದಾರೆ.
ಉಜ್ವಲ್ ಅವರು ಟಿಕೆಟ್ ಅನ್ನೂ ವಿಡಿಯೊದಲ್ಲಿ ತೋರಿಸಿದ್ದು, ನೆಟ್ಟಿಗರು ಆ ಟಿಕೆಟ್‌ನಲ್ಲಿದ್ದ ವಿಮಾನದ ನಂಬರ್ ಅನ್ನು ಗೂಗಲ್‌ನಲ್ಲಿ ಹುಡುಕಿ ಟರ್ಮಿನಲ್ ಮಾಹಿತಿ ತೆಗೆದಿದ್ದಾರೆ. ಉಜ್ವಲ್ ಅವರ ಇ-ಟಿಕೆಟ್ ಹಾಗೂ ಬೋರ್ಡಿಂಗ್ ಪಾಸ್‌ನಲ್ಲಿ ಟಿ1 ಟರ್ಮಿನಲ್ ಎಂದೇ ಬರೆದಿದೆ. ಅದನ್ನು ಸರಿಯಾಗಿ ನೋಡದೆಯೇ ವಿಮಾನ ನಿಲ್ದಾಣಕ್ಕೆ ಹೋಗಿದ್ದೀರಿ ಎಂದು ಜನರು ಉಜ್ವಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದಾದ ಕೆಲ ಸಮಯದ ನಂತರ ಉಜ್ವಲ್ ಅವರು ಮತ್ತೊಂದು ವಿಡಿಯೊ ಹಾಕಿದ್ದು, ಆಕಾಶ ಏರ್‌ಲೈನ್ ಹಾಗೂ ಅವರು ಟಿಕೆಟ್ ಬುಕ್ ಮಾಡಿದ್ದ GoIbibo ವೆಬ್ ಸೈಟ್ ತಮ್ಮ ಕ್ಷಮೆ ಯಾಚಿಸಿವೆ ಎಂದು ತಿಳಿಸಿದ್ದಾರೆ.
Latest
Sindhuri Vs Roopa: ರೋಹಿಣಿ ಸಿಂಧೂರಿ- ಸಾ.ರಾ. ಮಹೇಶ್ ಕದನದಲ್ಲಿ ಪೋಲಾಯಿತು ಕೋಟ್ಯಂತರ ರೂ.!
ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಹಾಗೂ ಶಾಸಕ ಸಾ.ರಾ ಮಹೇಶ್ ನಡುವಿನ ಕದನದಿಂದಾಗಿ ಉಂಟಾಗಿರುವ ʼಬಟ್ಟೆ ಬ್ಯಾಗ್ ಹಗರಣʼ ಕುರಿತು ವಿಸ್ತಾರ ನ್ಯೂಸ್ ರಿಯಾಲಿಟಿ ಚೆಕ್ ನಡೆಸಿದ್ದು, ಕೋಟ್ಯಂತರ ಹಣ ಪೋಲಾಗಿರುವುದು ಕಂಡುಬಂದಿದೆ.
ಮೈಸೂರು: ಇಬ್ಬರು ಪ್ರತಿಷ್ಠಿತರ ನಡುವಿನ ಕದನದಿಂದಾಗಿ ಬರೋಬ್ಬರಿ 6.18 ಕೋಟಿ ರೂ.ಗಳಷ್ಟು ಸಾರ್ವಜನಿಕ ಹಣ ಪೋಲಾಗಿದೆ. ರೋಹಿಣಿ ಸಿಂಧೂರಿ- ರೂಪಾ ಕದನದಲ್ಲಿ ಇದು ಕೂಡ ಪ್ರಸ್ತಾಪವಾಗಿತ್ತು.
ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಹಾಗೂ ಶಾಸಕ ಸಾ.ರಾ ಮಹೇಶ್ ನಡುವಿನ ಕದನದಿಂದಾಗಿ ಉಂಟಾಗಿರುವ ʼಬಟ್ಟೆ ಬ್ಯಾಗ್ ಹಗರಣʼ ಕುರಿತು ವಿಸ್ತಾರ ನ್ಯೂಸ್ ರಿಯಾಲಿಟಿ ಚೆಕ್ ನಡೆಸಿದೆ.
ರೋಹಿಣಿ ಸಿಂಧೂರಿ ಮೈಸೂರು ಡಿಸಿ ಆಗಿದ್ದಾಗ 14.71 ಲಕ್ಷ ಬಟ್ಟೆ ಬ್ಯಾಗ್ಗಳನ್ನು ಖರೀದಿಸಿದ್ದರು. ಇದಕ್ಕಾಗಿ 6.18 ಕೋಟಿ ರೂ. ಪಾವತಿಸಿದ್ದರು. ಖರೀದಿಯಲ್ಲಿ ಹಗರಣ ನಡೆದಿದೆ ಎಂದು ಶಾಸಕ ಸಾ.ರಾ.ಮಹೇಶ್ ಆರೋಪಿಸಿದ್ದರು. ಒಂದು ಬ್ಯಾಗ್ಗೆ 8-10 ರೂ. ಆಗುತ್ತದೆ. ಆದರೆ ರೋಹಿಣಿ ಸಿಂಧೂರಿ 52 ರೂ. ನೀಡಿದ್ದಾರೆ. ಇದಕ್ಕೆ 5 ಕೋಟಿ ರೂ. ಕಿಕ್ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಿದ್ದರು. ಈ ಬಗ್ಗೆ ಲೋಕಾಯುಕ್ತಕ್ಕೂ ದೂರು ನೀಡಿದ್ದರು.
ಇದರಿಂದಾಗಿ ಒಂದೂವರೆ ವರ್ಷದಿಂದಲೂ ಬಟ್ಟೆ ಬ್ಯಾಗ್ಗಳು ಇಟ್ಟಲ್ಲೇ ಕೊಳೆಯುತ್ತಿವೆ. ಚಿನ್ನಗಿರಿ ಕೊಪ್ಪಲು ಸಮುದಾಯ ಭವನದಲ್ಲಿ ಬ್ಯಾಗ್ಗಳ ರಾಶಿ ಬಿದ್ದಿದ್ದು, ಬಂಡಲ್ ಕೂಡ ಓಪನ್ ಮಾಡದೆ ಜಿಲ್ಲಾಡಳಿತ ಅದನ್ನು ಹಾಗೇ ಬಿಟ್ಟಿದೆ. ಅಮೂಲ್ಯವಾದ ಸಾರ್ವಜನಿಕರ ಹಣ ಕಣ್ಣೆದುರೇ ಕಸವಾಗುತ್ತಿದೆ. ಈ ಪ್ರಕರಣದ ತನಿಖೆಗೆ ಸರ್ಕಾರ ಅನುಮತಿ ತಿರಸ್ಕರಿಸಿದೆ ಎಂದು ಈಗ ಐಪಿಎಸ್ ಅಧಿಕಾರಿ ಡಿ. ರೂಪ ಆರೋಪಿಸುತ್ತಿದ್ದಾರೆ.
ಇದನ್ನೂ ಓದಿ: Sindhuri Vs Roopa : ರೂಪಾ ಹೇಳಿದ, ರೋಹಿಣಿ ಸಿಂಧೂರಿ ಕಟ್ಟಿಸುತ್ತಿರುವ ಮನೆ ಹೇಗಿದೆ? ನೀವೇ ನೋಡಿ
Latest
Shivaraj kumar: ಚಿತ್ರರಂಗಕ್ಕೆ ಬಂದು 37 ವರ್ಷ: ಅಭಿಮಾನಿಗಳಿಗೆ ಪತ್ರ ಬರೆದ ಶಿವಣ್ಣ
ಕನ್ನಡ ಚಿತ್ರೋದ್ಯಮಕ್ಕೆ ಬಂದು 37 ವರ್ಷಗಳು ಆಗಿರುವ ಹಿನ್ನೆಲೆಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಅಭಿಮಾನಿಗಳಿಗೆ ಧನ್ಯವಾದದ ಪತ್ರ ಬರೆದಿದ್ದಾರೆ.
ಬೆಂಗಳೂರು: ಕನ್ನಡ ಸಿನಿಮಾ ರಂಗದಲ್ಲಿ 37 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ನಟ ಶಿವರಾಜ್ ಕುಮಾರ್ ಅವರು ಅಭಿಮಾನಿಗಳಿಗೂ ಕನ್ನಡ ಚಿತ್ರರಸಿಕರಿಗೂ ಧನ್ಯವಾದ ತಿಳಿಸಿದ್ದಾರೆ.
ತಮ್ಮ ಮೊದಲ ಚಿತ್ರ “ಆನಂದ್ ನೆನಪಿಸಿಕೊಂಡು ಅಭಿಮಾನಿಗಳಿಗೆ ಶಿವಣ್ಣ ಪತ್ರ ಬರೆದಿದ್ದಾರೆ. ʼʼನಮ್ಮ ಕನ್ನಡ ಚಿತ್ರರಂಗಕ್ಕೆ ನಾನು ಪಾದಾರ್ಪಣೆ ಮಾಡಿ ಇಂದಿಗೆ (19-02-2023) 37 ವರ್ಷ ಆಗಿದೆ. ಆನಂದ್ ಚಿತ್ರದ ಮೊದಲ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ! ಆನಂದ್ ಇಂದ ವೇದವರೆಗೂ ನೀವು ಕೊಟ್ಟ ಪ್ರೀತಿ ಬೆಲೆ ಕಟ್ಟಲಾಗದ್ದು. ನನ್ನನ್ನು ನೀವು ಕೇವಲ ಒಬ್ಬ ನಟನಾಗಿ, ಸ್ಟಾರ್ ಆಗಿ ಮಾತ್ರವಲ್ಲದೆ ನಿಮ್ಮ ಮನೆಮಗನಾಗಿ ಬೆಳೆಸಿದ್ದೀರಿ. ದೇವರ ಸ್ವರೂಪವಾಗಿರುವ ಅಭಿಮಾನಿಗಳಿಗೆ, ಮಾಧ್ಯಮ ಮಿತ್ರರಿಗೆ, ಹಿರಿಯರಿಗೆ, ಕಿರಿಯರಿಗೆ, ಸಹೋದ್ಯೋಗಿಗಳಿಗೆ ಹಾಗೂ ನನ್ನ ಇಡೀ ಕುಟುಂಬಕ್ಕೆ ಅನಂತ ವಂದನೆಗಳುʼʼ ಎಂದು ಶಿವಣ್ಣ ಟ್ವೀಟ್ ಮಾಡಿದ್ದಾರೆ.
1962ರಲ್ಲಿ ಜನಿಸಿದ ಶಿವರಾಜ್ ಕುಮಾರ್ 1986ರಲ್ಲಿ ಅನಂದ್ ಚಿತ್ರದ ಮೂಲಕ ಸಿನಿಮಾ ನಟನೆಗೆ ಕಾಲಿಟ್ಟಿದ್ದರು. ಆನಂದ್ ಸೇರಿದಂತೆ ಅವರ ಮೂರೂ ಆರಂಭಿಕ ಚಿತ್ರಗಳು (ಆನಂದ್, ರಥಸಪ್ತಮಿ ಮತ್ತು ಮನಮೆಚ್ಚಿದ ಹುಡುಗಿ) ಶತದಿನ ಪ್ರದರ್ಶನ ಕಂಡಿದ್ದವು. ಹೀಗಾಗಿ ಅವರು ಹ್ಯಾಟ್ರಿಕ್ ಸ್ಟಾರ್ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿರುವ ʼವೇದʼ ಶಿವಣ್ಣನ 125ನೇ ಚಿತ್ರವಾಗಿದೆ.
ಇದನ್ನೂ ಓದಿ: Shivarajkumar: ಶಿವಣ್ಣ ಅಭಿನಯದ ‘ವೇದ’ ಒಟಿಟಿಗೆ ಎಂಟ್ರಿ ಕೊಡಲು ಡೇಟ್ ಫಿಕ್ಸ್
Latest
NIA Raid: 70 ಕಡೆಗಳಲ್ಲಿ ಎನ್‌ಐಎ ಏಕಕಾಲಕ್ಕೆ ದಾಳಿ
ಪಂಜಾಬ್, ಹರ್ಯಾಣ, ರಾಜಸ್ಥಾನ, ದೆಹಲಿ, ಚಂಡೀಗಢ, ಉತ್ತರಪ್ರದೇಶ, ಗುಜರಾತ್ ಜಾಗೂ ಮಧ್ಯಪ್ರದೇಶ ರಾಜ್ಯಗಳ ಸುಮಾರು 70 ಕಡೆಗಳಲ್ಲಿ ಎನ್‌ಐಎ ದಾಳಿ (NIA Raid) ನಡೆಸಿದೆ.
ನವ ದೆಹಲಿ: ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಮಂಗಳವಾರ ಬೆಳ್ಳಂಬೆಳಗ್ಗೆ ಹಲವು ರಾಜ್ಯಗಳಲ್ಲಿ ಮಾಫಿಯಾ ತಂಡಗಳ ನೆಲೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ಪಂಜಾಬ್, ಹರ್ಯಾಣ, ರಾಜಸ್ಥಾನ, ದೆಹಲಿ, ಚಂಡೀಗಢ, ಉತ್ತರಪ್ರದೇಶ, ಗುಜರಾತ್ ಜಾಗೂ ಮಧ್ಯಪ್ರದೇಶ ರಾಜ್ಯಗಳ ಸುಮಾರು 70 ಕಡೆಗಳಲ್ಲಿ ಎನ್‌ಐಎ ದಾಳಿ ನಡೆಸಿದೆ. ಸಂಘಟಿತ ಅಪರಾಧಗಳಲ್ಲಿ ಭಾಗಿಯಾಗಿರುವ ಕ್ರಿಮಿನಲ್ ಸಂಘಸಂಸ್ಥೆಗಳ ಸದಸ್ಯರ ನೆಲೆಗಳ ಮೇಲೆ ಈ ದಾಳಿ ನಡೆದಿದೆ ಎಂದು ಗೊತ್ತಾಗಿದೆ. ಕೆಲವು ಕಡೆ ಪಿಎಫ್‌ಐ ಸದಸ್ಯರ ಮನೆಗಳ ಮೇಲೂ ದಾಳಿ ಮಾಡಲಾಗಿದೆ. ಇದು ಇಂಥ ನಾಲ್ಕನೇ ವ್ಯಾಪಕ ದಾಳಿಯಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ಇದನ್ನೂ ಓದಿ: NIA Raid: ಕೊಯಮತ್ತೂರ್ ಸ್ಫೋಟದ ತನಿಖೆ ಚುರುಕು; ಕರ್ನಾಟಕ ಸೇರಿ 3 ರಾಜ್ಯಗಳ 60 ಪ್ರದೇಶಗಳಲ್ಲಿ ಎನ್‌ಐಎ ದಾಳಿ
-
ಸುವಚನ16 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ21 hours ago
ವಿಸ್ತಾರ ಸಂಪಾದಕೀಯ: ಪಬ್ಲಿಕ್ ಪರೀಕ್ಷೆ ಗೊಂದಲ; ವಿದ್ಯಾರ್ಥಿಗಳು, ಪೋಷಕರ ಮೇಲೆ ಮಾನಸಿಕ ಒತ್ತಡ
-
ಆಟೋಮೊಬೈಲ್22 hours ago
Oscar 2023 : ನಾಟು ನಾಟು ಹಾಡಿಗೆ ಡಾನ್ಸ್ಮಾಡಿದ ಟೆಸ್ಲಾ ಕಾರುಗಳು! ಇಲ್ಲಿದೆ ನೋಡಿ ವಿಡಿಯೊ
-
ಕ್ರಿಕೆಟ್6 hours ago
IND VS AUS: ಭಾರತ-ಆಸ್ಟ್ರೇಲಿಯಾ ಅಂತಿಮ ಏಕದಿನ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ11 hours ago
Shivamogga politics : ಯುಗಾದಿ, ರಂಜಾನ್ಗೆ ಶುಭ ಕೋರಿ ಫ್ಲೆಕ್ಸ್ ಹಾಕಿಸಿದ ಆಯನೂರು, ಹರಕು ಬಾಯಿ ಮುಚ್ಚಲಿ ಅಂದಿದ್ದು ಯಾರಿಗೆ?
-
ಧಾರ್ಮಿಕ9 hours ago
Ugadi 2023 : ಜಗದ ಆದಿ ಈ ಯುಗಾದಿ!
-
ಅಂಕಣ10 hours ago
ನನ್ನ ದೇಶ ನನ್ನ ದನಿ ಅಂಕಣ: ಪಂಜಾಬ್ ನಾಶವಾಗುವುದು ಒಳ್ಳೆಯ ಲಕ್ಷಣವಲ್ಲ
-
ಕರ್ನಾಟಕ11 hours ago
Drugs Mafia : ಸಾಗರದಲ್ಲಿ ಡ್ರಗ್ಸ್ ಮಾರಾಟ ಯತ್ನ: ಲಾಂಗ್ ಸಹಿತ ಇಬ್ಬರ ಅರೆಸ್ಟ್, ಕೊಲೆ ಸಂಚೂ ಬಯಲು