Ikigai Rules: ಬಹುಕಾಲ ಆನಂದದಿಂದ ಬದುಕುವುದು ಹೇಗೆ? ಜಪಾನಿನ ದೀರ್ಘಾಯುಷಿಗಳ ಬದುಕಿನಿಂದ 10 ರೂಲ್‌ಗಳು - Vistara News

Relationship

Ikigai Rules: ಬಹುಕಾಲ ಆನಂದದಿಂದ ಬದುಕುವುದು ಹೇಗೆ? ಜಪಾನಿನ ದೀರ್ಘಾಯುಷಿಗಳ ಬದುಕಿನಿಂದ 10 ರೂಲ್‌ಗಳು

ಜಪಾನೀಯರು ಸುದೀರ್ಘ ಮತ್ತು ಆನಂದದ ಬದುಕಿನ ರಹಸ್ಯಗಳು ಈ ಹತ್ತು ಸೂತ್ರಗಳಲ್ಲಿ ಇವೆ. ಇವುಗಳನ್ನು ಪಾಲಿಸಿದರೆ ನೀವೂ ದೀರ್ಘಕಾಲ ಆನಂದದಿಂದ ಬದುಕಬಹುದು. ಆ ಹತ್ತು ರೂಲ್‌ಗಳು (Ikigai Rules) ಇಲ್ಲಿವೆ.

VISTARANEWS.COM


on

ikigai rules
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಕಿಗಾಯ್‌ (Ikigai) ಎಂಬುದು ಒಂದು ಜೀವನ ಪದ್ಧತಿ. ಮೊದಲು ಈ ವಿಚಾರ ಎಲ್ಲರ ಕಿವಿಗೆ ಬಿದ್ದುದು ಹೆಕ್ಟರ್ ಗಾರ್ಸಿಯಾ ಮತ್ತು ಫ್ರಾನ್ಸೆಸ್ಕ್ ಮಿರಾಲ್ಲೆಸ್ ಅವರ ʼಇಕಿಗಾಯ್‌: ದಿ ಜಪಾನೀಸ್ ಸೀಕ್ರೆಟ್ ಟು ಎ ಲಾಂಗ್ ಅಂಡ್ ಹ್ಯಾಪಿ ಲೈಫ್ʼ ಎಂಬ ಪುಸ್ತಕದಿಂದ. ಇದು ಜಪಾನಿನ ಒಕಿನಾವಾ ಪ್ರಾಂತ್ಯದ ಒಂದು ಸಣ್ಣ ಹಳ್ಳಿಯಾದ ಓಗಿಮಿ ಎಂಬಲ್ಲಿನ ಶತಾಯುಷಿಗಳ (centenarians) ಮೇಲೆ ನಡೆಸಿದ ಅಧ್ಯಯನದಿಂದ ಕಂಡುಕೊಂಡ ವಿಚಾರಗಳ ಬಗ್ಗೆ ಬರೆದ ಪುಸ್ತಕ. ಇವರ ಜೀವನದಿಂದ ಕಂಡುಕೊಂಡ ಹತ್ತು ಸೂತ್ರಗಳನ್ನು ಕೊನೆಯಲ್ಲಿ ಪುಸ್ತಕ ಪಟ್ಟಿ ಮಾಡುತ್ತದೆ. ಒಗಾಮಿಯ ಹಿರಿಯ ನಿವಾಸಿಗಳು ದೀರ್ಘಕಾಲ ಬದುಕಲು (long life) ಮತ್ತು ಆನಂದಿಸಲು ಮಾಡಿಕೊಂಡಿರುವ ಜೀವನಶೈಲಿ (happy life) ಪದ್ಧತಿಗಳು ಇವು. ಈ ಹತ್ತು ಸೂತ್ರಗಳನ್ನು ಪಾಲಿಸಿದರೆ ನೀವೂ ದೀರ್ಘಕಾಲ ಆನಂದದಿಂದ ಬದುಕಬಹುದು. ಆ ಹತ್ತು ರೂಲ್‌ಗಳು (Ikigai Rules) ಇಲ್ಲಿವೆ.

1. ಸಕ್ರಿಯವಾಗಿರಿ, ನಿವೃತ್ತರಾಗಬೇಡಿ

ನಿಮಗೆ ಇಷ್ಟವಾದ ಕೆಲಸಗಳನ್ನು ತ್ಯಜಿಸಬೇಡಿ. ನಿಮ್ಮ ದೇಹ ಹಾಗೂ ಮನಸ್ಸು ಚುರುಕಾಗಿಡುವಂಥದನ್ನು ಯಾವಾಗಲೂ ಮಾಡುತ್ತಲೇ ಇರಿ. ನಿಮ್ಮ ಕೆರಿಯರ್‌ನಿಂದ ನಿವೃತ್ತರಾದರೂ, ಬಳಿಕವೂ ಕ್ರಿಯಾಶೀಲರಾಗಿರಿ. ಮೌಲ್ಯಯುತವಾದ ಕೆಲಸ ಮುಂದುವರಿಸಿ, ಇತರರಿಗೆ ಉಪಯುಕ್ತರಾಗಿರಿ.

2. ನಿಧಾನವಾಗಿ ಮುಂದುವರಿಯಿರಿ

ಯಾವ ಅವಸರವೂ ಇಲ್ಲ. ಆತುರವಾಗಿರುವುದರಿಂದ ಜೀವನದ ಗುಣಮಟ್ಟ ಕೆಡುತ್ತದೆ. ʼಸ್ಲೋ ಆಂಡ್‌ ಸೆಡಿ ವಿನ್ಸ್‌ ದಿ ರೇಸ್‌ʼ ಎಂಬ ಮಾತು ಹಳೆಯದೇ ಆದರೂ ನೂರಕ್ಕೆ ನೂರು ಸತ್ಯ. ಗಡಿಬಿಡಿ ತೊರೆದಾಗ ಜೀವನ ಮತ್ತು ಸಮಯ ಹೊಸ ಅರ್ಥವನ್ನು ಪಡೆಯುತ್ತದೆ. ನೀವು ಆತುರದಲ್ಲಿದ್ದರೆ ನಿಯಂತ್ರಣದಲ್ಲಿಲ್ಲ ಎಂದರ್ಥ. ನಿಧಾನವಾಗಿ ನಡೆಯುವಾಗ ನಿಮ್ಮ ನಿರ್ಧಾರಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತೀರಿ.

3. ಹೊಟ್ಟೆಯನ್ನು ಪೂರ್ತಿ ತುಂಬಬೇಡಿ

ಕಡಿಮೆ ತಿನ್ನುವುದೇ ದೀರ್ಘ ಜೀವನದ ರಹಸ್ಯ. ಹೊಟ್ಟೆಯ ಪ್ರತಿಶತ 80ರಷ್ಟು ಮಾತ್ರ ತುಂಬಿಸಿ. ಹೆಚ್ಚು ಕಾಲ ಆರೋಗ್ಯವಾಗಿರಬೇಕಿದ್ದರೆ ಹೊಟ್ಟೆಯನ್ನು ಪೂರ್ತಿ ತುಂಬುವ ಬದಲು ಸ್ವಲ್ಪ ಕಡಿಮೆ ತಿನ್ನಬೇಕು. ಹೊಟ್ಟೆಯಲ್ಲಿ ಸ್ವಲ್ಪ ಖಾಲಿ ಜಾಗ ಇದ್ದರೆ ಪಚನಕ್ರಿಯೆ ಸರಾಗ. ʼಹರಾ ಹಚಿ ಬುʼ ಎಂಬುದು ಒಂದು ಜಪಾನೀ ಗಾದೆ. ಅಂದರೆ ʼಕೇವಲ 80% ತಿನ್ನುವುದು ವೈದ್ಯರನ್ನು ದೂರವಿಡುತ್ತದೆ’ ಎಂದು. ಇದು 2500 ವರ್ಷಗಳಷ್ಟು ಹಿಂದಿನ ಸಂತ ಕನ್‌ಫ್ಯೂಷಿಯಸ್‌ನ ಮಾತು.

4. ಸುತ್ತ ಒಳ್ಳೆಯ ಸ್ನೇಹಿತರಿರಲಿ

ಸೋಶಿಯಲ್‌ ಮೀಡಿಯಾದ ಸ್ನೇಹಿತರನ್ನು ನಂಬುವ ಬದಲು, ನಿಜಜೀವನದ ಒಳ್ಳೆಯ ಸ್ನೇಹಿತರನ್ನು ಕಾಪಾಡಿಕೊಂಡರೆ ಬದುಕು ಚಂದ. ಸ್ನೇಹಿತರೇ ಅತ್ಯುತ್ತಮ ಔಷಧಿ. ನಿಮ್ಮ ಕಥೆಗಳನ್ನು, ಚಿಂತನೆಗಳನ್ನು, ಚಿಂತೆಗಳನ್ನು ಹಂಚಿಕೊಳ್ಳಲು ಅವರಿಗಿಂತ ಉತ್ತಮ ಇನ್ಯಾರೂ ಇಲ್ಲ.

happiness and other self love methods to positive development
boating hapily

5. ಮುಂದಿನ ಜನ್ಮದಿನಕ್ಕೆ ಫಿಟ್‌ ಆಗಿರಿ

“ನೀರು ಚಲಿಸುವಾಗ ತಾಜಾ ಆಗಿರುತ್ತದೆ; ನಿಂತರೆ ಕೊಳೆಯುತ್ತದೆ. ನೀವು ಜೀವನದಲ್ಲಿ ಚಲಿಸುತ್ತಿದ್ದಷ್ಟು ಕಾಲ ದೀರ್ಘಕಾಲದವರೆಗೆ ಕಾರ್ಯನಿರ್ವಹಿಸಲು ಅಗತ್ಯವಾದ ಶಕ್ತಿ ಪಡೆಯುತ್ತೀರಿ. ವ್ಯಾಯಾಮವು ನಿಮಗೆ ಸಂತೋಷವನ್ನುಂಟುಮಾಡುವ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಮುಂದಿನ ಜನ್ಮಮದಿನದ ಹೊತ್ತಿಗೆ ನೀವು ಮತ್ತಷ್ಟು ಯಂಗ್‌ ಆಗಬೇಕು; ಮುದುಕರಾಗಬಾರದು.

6. ನಗುನಗುತ್ತಾ ಇರಿ

ಹರ್ಷಚಿತ್ತದ ಮನೋಭಾವವು ವಿಶ್ರಾಂತಿ ನೀಡುವುದು ಮಾತ್ರವಲ್ಲ, ಸ್ನೇಹಿತರನ್ನು ಮಾಡಿಕೊಳ್ಳಲೂ ಸಹಾಯ ಮಾಡುತ್ತದೆ. ನಾವು ಇಲ್ಲಿ ಈ ಜಗತ್ತಿನಲ್ಲಿ ಬದುಕಿರುವುದೇ ಆನಂದಪಡಲು ಸಾಕಾದ ಸಂಗತಿ. ನಮ್ಮ ಸುತ್ತಲೂ ನಗಲು ಬೇಕಾದ ವಿಷಯಗಳಿವೆ. ನಕ್ಕರೆ ಆನಂದದ ಹಾರ್ಮೋನುಗಳು ನಿಮ್ಮ ದೇಹವನ್ನು ಸೆಡೆತದಿಂದ ಕಾಪಾಡುತ್ತವೆ.

7. ಪ್ರಕೃತಿಯೊಂದಿಗೆ ಸಂಪರ್ಕವಿಟ್ಟುಕೊಳ್ಳಿ

ಮಾನವರು ನಿಸರ್ಗದ ಭಾಗ. ನಮ್ಮ ದೇಹದ ಬ್ಯಾಟರಿಗಳು ರೀಚಾರ್ಜ್ ಆಗುವುದೇ ಪ್ರಕೃತಿಯ ಮಡಿಲಿನಲ್ಲಿ. ಕಲ್ಲಿನ ಕಟ್ಟಡಗಳ ನಡುವೆ ಇದ್ದರೂ ಕನಿಷ್ಠ ಮುಂಜಾನೆ ಅಥವಾ ಸಂಜೆ ಪಾರ್ಕ್‌ನಲ್ಲಿ ವಾಕಿಂಗ್‌ ಮಾಡುವುದು ಒಳ್ಳೆಯದು. ಅರಣ್ಯವಾಸದಿಂದ ಆನಂದ. ʼಶಿನ್ರಿನ್‌ ಯೊಕುʼ ಎಂಬುದು ಜಪಾನಿ ವಾಕ್ಕು. ಅಂದರೆ ʼಅರಣ್ಯ ಸ್ನಾನʼ ಎಂದರ್ಥ. ಸುಮ್ಮನೆ ಕಾಡಿನಲ್ಲಿ ನಡೆಯುವುದೂ ದೇಹವನ್ನು ಪುನರುಜ್ಜೀವನಗೊಳಿಸುತ್ತದೆ.

ಇದನ್ನೂ ಓದಿ: Happy married life | ಸುಖೀ ಸಂಸಾರದ ಸೀಕ್ರೆಟ್‌ ಅಂದ್ರೆ ಪ್ರತ್ಯೇಕ ಬೆಡ್‌ರೂಂ!

8. ಕೃತಜ್ಞತೆ ಸಲ್ಲಿಸಿ

ನಿಮ್ಮನ್ನು ಸೃಷ್ಟಿಸಿದ್ದಕ್ಕಾಗಿ ನಿಮ್ಮ ಪೂರ್ವಜರಿಗೆ, ನೀವು ಉಸಿರಾಡುವ ಗಾಳಿಗೆ, ನೀವು ಸೇವಿಸುವ ಆಹಾರಕ್ಕೆ, ಅದನ್ನು ಒದಗಿಸುವ ಪ್ರಕೃತಿಗೆ, ನಿಮ್ಮ ಸ್ನೇಹಿತರು ಮತ್ತು ಕುಟುಂಬಕ್ಕೆ, ನಿಮ್ಮ ದಿನಗಳನ್ನು ಬೆಳಗಿಸುವ ಮತ್ತು ನಿಮ್ಮನ್ನು ಜೀವಂತವಾಗಿರಿಸುವ ಎಲ್ಲದಕ್ಕೂ ಪ್ರತಿದಿನ ಕೃತಜ್ಞತೆ ಸಲ್ಲಿಸಲು ಒಂದು ಕ್ಷಣವನ್ನು ಕಳೆಯಿರಿ. ನಿಮ್ಮ ಸಂತೋಷದ ಸಂಗ್ರಹ ಬೆಳೆಯುವುದನ್ನು ನೀವೇ ನೋಡುತ್ತೀರಿ.

boating hapily
boating hapily

9. ಈ ಕ್ಷಣದಲ್ಲಿ ಬದುಕಿ

ಹಿಂದಿನದರ ಬಗ್ಗೆ ವಿಷಾದಿಸುವುದನ್ನು ನಿಲ್ಲಿಸಿ, ಭವಿಷ್ಯದ ಬಗ್ಗೆ ಭಯಪಡುವುದನ್ನು ನಿಲ್ಲಿಸಿ. ಇಂದು ನಿಮ್ಮ ಬಳಿ ಇರುವುದು ಈ ಕ್ಷಣ ಅಷ್ಟೆ. ಅದರ ಸದುಪಯೋಗ ಮಾಡಿಕೊಳ್ಳಿ. ಅದನ್ನು ನೆನಪಿನಲ್ಲಿಟ್ಟುಕೊಳ್ಳಲು ಯೋಗ್ಯವಾಗಿಸಿ. ನಮ್ಮ ಮನಸ್ಸು ಒಂದು ಚಿಂತೆಯಿಂದ ಇನ್ನೊಂದಕ್ಕೆ ಜಿಗಿಯುತ್ತದೆ. ಪ್ರತಿ ಕ್ಷಣದಲ್ಲಿ ಜಾಗೃತರಾಗಿ, ಪ್ರಸ್ತುತವಾಗಿ ಜೀವಂತವಾಗಿರುವುದನ್ನು ಮರೆತುಬಿಡುತ್ತೇವೆ. ಈ ಕ್ಷಣದ ಬದುಕೇ ಬದುಕು.

10. ನಿಮ್ಮೊಳಗೊಂದು ಇಕಿಗಾಯ್‌

ನಿಮ್ಮೊಳಗೆ ಒಂದು ಉತ್ಸಾಹವಿದೆ. ನಿಮ್ಮ ದಿನಗಳಿಗೆ ಅರ್ಥವನ್ನು ನೀಡುವ ಅನನ್ಯ ಪ್ರತಿಭೆ ನಿಮ್ಮಲ್ಲಿದೆ. ನಿಮ್ಮ ಬದುಕಿಗೆ ಒಂದು ಉದ್ದೇಶವಿದೆ. ಜೀವನದ ಕೊನೆಯವರೆಗೂ ಇನ್ನೊಬ್ಬರ ಜತೆ ಹಂಚಿಕೊಳ್ಳಲು ನಿಮ್ಮಲ್ಲಿ ಏನೋ ಇದೆ- ಹೀಗೆ ಭಾವಿಸುವುದರಿಂದ ನೀವು ಸಂಪನ್ನರಾಗುತ್ತೀರಿ. ನಿಮ್ಮಲ್ಲಿ ಶ್ರೀಮಂತಿಕೆ ಇರಬೇಕಿಲ್ಲ. ಏನಿದೆಯೋ ಅದನ್ನು ಹಂಚಿಕೊಳ್ಳುವುದರಿಂದ ಬದುಕು ಸುಂದರ.

ಇದನ್ನೂ ಓದಿ: Happy life: ಸಾಯೋ ಮೊದಲು ಇವರು ಹೇಳಿದ ಮಾತುಗಳು ನಾವು ನೆನಪಿಡಲೇಬೇಕು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಲೈಫ್‌ಸ್ಟೈಲ್

Relationship Tips: ದಾಂಪತ್ಯದಲ್ಲಿ ಬಿರುಕು ಮೂಡಿಸುತ್ತವೆ ಈ 10 ಕಾರಣಗಳು!

ಕಾಲಾನಂತರದಲ್ಲಿ ಪತಿ ಪತ್ನಿಯರ ನಡುವೆ (Relationship Tips) ಉಂಟಾಗುವ ಭಿನ್ನಾಭಿಪ್ರಾಯಕ್ಕೆ ಕಾರಣಗಳನ್ನು ತಿಳಿದುಕೊಳ್ಳುವುದು ಮತ್ತು ಪರಿಹಾರಗಳನ್ನು ಕಂಡುಹಿಡಿಯುವುದು ಸಂಬಂಧವನ್ನು ಪುನರುಜ್ಜೀವನಗೊಳಿಸಲು ಮತ್ತು ವೈವಾಹಿಕ ಬಂಧವನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಗಂಡ ಹೆಂಡತಿಯಲ್ಲಿ ಅಥವಾ ಹೆಂಡತಿ ಗಂಡನಲ್ಲಿ ಆಸಕ್ತಿ ಕಳೆದುಕೊಳ್ಳಲು 10 ಸಾಮಾನ್ಯ ಕಾರಣಗಳಿವೆ. ಅವು ಯಾವುದು ಎನ್ನುವ ಮಾಹಿತಿ ಇಲ್ಲಿದೆ.

VISTARANEWS.COM


on

By

Relationship Tips
Koo

ಮದುವೆಯಾದ (Relationship) ಕೆಲವು ಸಮಯದವರೆಗೆ ಜೀವನ ಸುಂದರವಾಗಿ (life) ಇರುತ್ತದೆ. ಆದರೆ ಬಳಿಕ ಹೆಚ್ಚುವ ಜವಾಬ್ದಾರಿಗಳ ನಡುವೆ ಸಂಗಾತಿಗಳು (husband and wife) ದೈಹಿಕ, ಮಾನಸಿಕವಾಗಿ ದೂರವಾಗುತ್ತಾರೆ. ಇದನ್ನು ನಿರ್ವಹಿಸುವುದು ಕೆಲವೊಮ್ಮೆ ಸವಾಲಾಗಿ ಪರಿಣಮಿಸುತ್ತದೆ. ಇದು ಎಲ್ಲ ಮನೆಯಲ್ಲೂ ಸರ್ವೇ ಸಾಮಾನ್ಯ ವಿಚಾರವಾದರೂ ಸಮಯಕ್ಕೆ ಸರಿಯಾಗಿ ಸಂಬಂಧವನ್ನು (Relationship Tips) ಸರಿಪಡಿಸಿಕೊಳ್ಳದೇ ಇದ್ದರೆ ಪತಿ ಪತ್ನಿಯರ ನಡುವಿನ ಪ್ರೀತಿ, ಸ್ನೇಹ, ಬಾಂಧವ್ಯ ಮುರಿದು ಬೀಳುವ ಹಂತಕ್ಕೂ ಹೋದರೆ ಅಚ್ಚರಿಯಿಲ್ಲ.

ಹೀಗಾಗಿ ಕಾಲಾನಂತರದಲ್ಲಿ ಪತಿ ಪತ್ನಿಯರ ನಡುವೆ ಉಂಟಾಗುವ ಭಿನ್ನಾಭಿಪ್ರಾಯಕ್ಕೆ ಕಾರಣಗಳನ್ನು ತಿಳಿದುಕೊಳ್ಳುವುದು ಮತ್ತು ಪರಿಹಾರಗಳನ್ನು ಕಂಡುಹಿಡಿಯುವುದು ಸಂಬಂಧವನ್ನು ಪುನರುಜ್ಜೀವನಗೊಳಿಸಲು ಮತ್ತು ವೈವಾಹಿಕ ಬಂಧವನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಗಂಡ ಹೆಂಡತಿಯಲ್ಲಿ ಅಥವಾ ಹೆಂಡತಿ ಗಂಡನಲ್ಲಿ ಆಸಕ್ತಿ ಕಳೆದುಕೊಳ್ಳಲು 10 ಸಾಮಾನ್ಯ ಕಾರಣಗಳಿವೆ. ಇದನ್ನು ಪತ್ತೆ ಹಚ್ಚಿ ಪರಿಹರಿಸಲು ಪ್ರಯತ್ನಿಸಿದರೆ ಸಂಬಂಧದಲ್ಲಿ ಪ್ರೀತಿಯನ್ನು ಮತ್ತೆ ಹೊಸದಾಗಿ ಚಿಗುರಿಸಬಹುದು.

Relationship Tips
Relationship Tips


ಸಂವಹನದ ಕೊರತೆ

ಪರಿಣಾಮಕಾರಿ ಸಂವಹನವು ಪ್ರತಿಯೊಂದು ಸಂಬಂಧದ ಅಡಿಪಾಯವಾಗಿದೆ. ಸಂವಹನವು ಮುರಿದುಹೋದಾಗ ತಪ್ಪು ತಿಳುವಳಿಕೆ ಮತ್ತು ಅಸಮಾಧಾನಗಳು ಕಾಣಿಸಿಕೊಳ್ಳುತ್ತದೆ. ಇದು ಒಬ್ಬರ ಮೇಲೆ ಇನ್ನೊಬ್ಬರು ಆಸಕ್ತಿ ಕಳೆದುಕೊಳ್ಳಲು ಕಾರಣವಾಗುತ್ತದೆ. ಇದನ್ನು ಪರಿಹರಿಸಲು, ದಂಪತಿ ತಮ್ಮ ಭಾವನೆ, ಆಲೋಚನೆ ಮತ್ತು ಕಾಳಜಿಗಳ ಬಗ್ಗೆ ಮುಕ್ತವಾಗಿ ಮಾತನಾಡಲು ಸಮಯವನ್ನು ನೀಡಬೇಕು. ಇದಕ್ಕಾಗಿ ನಿಯಮಿತ ಸಮಯವನ್ನು ನಿಗದಿಪಡಿಸುವುದು ಒಳ್ಳೆಯದು.

ದಿನಚರಿ

ಪ್ರತಿಯೊಬ್ಬರ ದಿನಚರಿಯು ಏಕತಾನತೆಯಿಂದ ಕೂಡಿರುತ್ತದೆ. ಇದು ಸಂಬಂಧವು ಹಳಸಿದ ಭಾವನೆಯನ್ನು ಉಂಟು ಮಾಡುತ್ತದೆ. ಇದನ್ನು ನಿರ್ವಹಿಸಲು ದಂಪತಿ ಹೊಸ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಒಟ್ಟಿಗೆ ಸಮಯ ಕಳೆಯಲು ವಿಶೇಷ ಯೋಜನೆ ಹಾಕಿಕೊಳ್ಳುವುದು, ಹೊಸ ಹವ್ಯಾಸಗಳನ್ನು ಒಟ್ಟಿಗೆ ಪ್ರಯತ್ನಿಸುವುದು ಅಥವಾ ಪ್ರಯಾಣ ಮಾಡುವುದು ಸಹ ಸಂಬಂಧದಲ್ಲಿ ಉತ್ಸಾಹ ಮತ್ತು ನವೀನತೆಯನ್ನು ತುಂಬುತ್ತದೆ.

ನಿರ್ಲಕ್ಷ್ಯ

ಪತಿ ಪತ್ನಿಯರಲ್ಲಿ ದೈಹಿಕ ಅನ್ಯೋನ್ಯತೆ ವೈವಾಹಿಕ ಸಂಬಂಧದ ನಿರ್ಣಾಯಕ ಅಂಶವಾಗಿದೆ. ಅದು ಕಡಿಮೆಯಾದಾಗ ನಿರ್ಲಿಪ್ತತೆಯ ಭಾವನೆಗೆ ಕಾರಣವಾಗಬಹುದು. ದಂಪತಿ ದೈಹಿಕ ನಿಕಟತೆಗೆ ಆದ್ಯತೆ ನೀಡಬೇಕು. ಈ ಮೂಲಕ ನಿಯಮಿತವಾಗಿ ಪ್ರೀತಿಯನ್ನು ವ್ಯಕ್ತಪಡಿಸಬೇಕು. ಇದು ಅವರ ಸಂಬಂಧದ ಪ್ರಮುಖ ಭಾಗವಾಗಿದೆ. ಇದಕ್ಕಾಗಿ ಕೈಗಳನ್ನು ಹಿಡಿಯುವುದು, ತಬ್ಬಿಕೊಳ್ಳುವುದು ಇತ್ಯಾದಿ.

Relationship Tips
Relationship Tips


ಭಾವನಾತ್ಮಕ ಸಂಪರ್ಕ

ಆರೋಗ್ಯಕರ ದಾಂಪತ್ಯಕ್ಕೆ ಭಾವನಾತ್ಮಕ ಸಂಪರ್ಕ ಅತ್ಯಗತ್ಯ. ಭಾವನಾತ್ಮಕ ಅಂತರವನ್ನು ಕಡಿಮೆ ಮಾಡಲು ದಂಪತಿ ಭಾವನಾತ್ಮಕವಾಗಿ ಬೆಂಬಲ ನೀಡುವಲ್ಲಿ ಕೆಲಸ ಮಾಡಬೇಕು. ವೈಯಕ್ತಿಕ ಅನುಭವಗಳನ್ನು ಹಂಚಿಕೊಳ್ಳುವುದು, ಸಹಾನುಭೂತಿ ಮತ್ತು ಮೆಚ್ಚುಗೆಯನ್ನು ತೋರಿಸುವುದು ಭಾವನಾತ್ಮಕ ಅನ್ಯೋನ್ಯತೆ ಮತ್ತು ನಿಕಟತೆಯನ್ನು ಪುನರ್ ನಿರ್ಮಿಸಲು ಸಹಾಯ ಮಾಡುತ್ತದೆ.

ಒತ್ತಡಗಳು

ಕೆಲಸ ಅಥವಾ ಆರ್ಥಿಕ ಒತ್ತಡಗಳಂತಹ ಬಾಹ್ಯ ಒತ್ತಡಗಳು ದಾಂಪತ್ಯದ ಜೀವನದ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ಈ ಒತ್ತಡಗಳು ಕಿರಿಕಿರಿ ಮತ್ತು ಬೇರ್ಪಡುವಿಕೆಗೆ ಕಾರಣವಾಗಬಹುದು. ಇದನ್ನು ನಿರ್ವಹಿಸಲು ದಂಪತಿ ಒತ್ತಡ ನಿವಾರಣೆ ತಂತ್ರಗಳನ್ನು ಒಟ್ಟಿಗೆ ಅಭ್ಯಾಸ ಮಾಡಬೇಕು. ಉದಾಹರಣೆಗೆ ವ್ಯಾಯಾಮ ಮಾಡುವುದು, ಧ್ಯಾನ ಮಾಡುವುದು ಅಥವಾ ಅಗತ್ಯವಿದ್ದರೆ ವೃತ್ತಿಪರ ಸಲಹೆಯನ್ನು ಪಡೆಯುವುದು, ಕಷ್ಟದ ಸಮಯದಲ್ಲಿ ಒಬ್ಬರನ್ನೊಬ್ಬರು ಬೆಂಬಲಿಸುವುದು ವೈವಾಹಿಕ ಬಂಧವನ್ನು ಬಲಪಡಿಸುತ್ತದೆ.

ಮೆಚ್ಚುಗೆಯ ಕೊರತೆ

ಮೆಚ್ಚುಗೆಯಿಲ್ಲದ ಭಾವನೆಯು ಅತೃಪ್ತಿ ಮತ್ತು ನಿರಾಸಕ್ತಿಗಳಿಗೆ ಕಾರಣವಾಗಬಹುದು. ಗಂಡ ಹೆಂಡತಿಯ, ಹೆಂಡತಿ ಗಂಡನ ಪ್ರಯತ್ನಗಳು ಮತ್ತು ಕೊಡುಗೆಗಳಿಗೆ ಮೆಚ್ಚುಗೆಯನ್ನು ತೋರಿಸಲು ಪ್ರಜ್ಞಾಪೂರ್ವಕ ಪ್ರಯತ್ನವನ್ನು ಮಾಡಬೇಕು. ಮೌಲ್ಯಯುತವಾದ ವಿಚಾರಗಳನ್ನು ಹಂಚಿಕೊಳ್ಳುವ ಮೂಲಕ ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲುವುದು ಸಂಬಂಧವನ್ನು ಗಟ್ಟಿಗೊಳಿಸುತ್ತದೆ

ಸಂಘರ್ಷಗಳು

ದೀರ್ಘಕಾಲದ ಸಮಸ್ಯೆಗಳು ದಂಪತಿಯ ನಡುವೆ ಪರಸ್ಪರ ಆಸಕ್ತಿಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಹೀಗಾಗಿ ಯಾವುದೇ ಸಮಸ್ಯೆಗಳನ್ನು ಕೂಡಲೇ ಬಗೆ ಹರಿಸುವುದು ಒಳ್ಳೆಯದು. ದಂಪತಿಯ ನಡುವೆ ಆರೋಗ್ಯಕರ ಸಂಘರ್ಷವಿರಬೇಕು. ಇದಕ್ಕಾಗಿ ಪರಿಹಾರ ತಂತ್ರಗಳನ್ನು ದಂಪತಿ ಅಭ್ಯಾಸ ಮಾಡಬೇಕು. ಅಗತ್ಯವಿದ್ದರೆ, ವೃತ್ತಿಪರ ಮಧ್ಯಸ್ಥಿಕೆ ಅಥವಾ ಸಮಾಲೋಚನೆಯನ್ನು ಪಡೆಯಬಹುದು.

ಆದ್ಯತೆಗಳ ಬಗ್ಗೆ ಕಾಳಜಿ ಇರಲಿ

ದಂಪತಿಯ ನಡುವೆ ಆದ್ಯತೆಗಳ ಬಗ್ಗೆ ಕಾಳಜಿ, ಗೌರವ ಇರಲಿ. ವೈಯಕ್ತಿಕ ಆದ್ಯತೆ, ಗುರಿಗಳು ಬದಲಾದಂತೆ ದಂಪತಿಯ ನಡುವೆ ಬಿರುಕು ಕಾಣಿಸಿಕೊಳ್ಳಬಹುದು. ಹೀಗಾಗಿ ಪರಸ್ಪರರ ವೈಯಕ್ತಿಕ ಆಕಾಂಕ್ಷೆಗಳನ್ನು ಗೌರವಿಸುವುದು ಸಂಬಂಧದಲ್ಲಿ ಬಹುಮುಖ್ಯವಾಗಿದೆ.

Relationship Tips
Relationship Tips


ಸ್ವಯಂ ಕಾಳಜಿ

ಸ್ವಯಂ ಆರೈಕೆಯನ್ನು ನಿರ್ಲಕ್ಷಿಸಿದಾಗ ಅದು ಸಂಬಂಧದಲ್ಲಿ ಅತೃಪ್ತಿ ಮತ್ತು ನಿರಾಸಕ್ತಿಯ ಭಾವನೆಗಳಿಗೆ ಕಾರಣವಾಗಬಹುದು. ಇದಕ್ಕಾಗಿ ಸಂಗಾತಿಗಳು ತಮ್ಮ ದೈಹಿಕ, ಭಾವನಾತ್ಮಕ ಮತ್ತು ಮಾನಸಿಕ ಯೋಗಕ್ಷೇಮವನ್ನು ನೋಡಿಕೊಳ್ಳಬೇಕು. ಹವ್ಯಾಸಗಳನ್ನು ಮುಂದುವರಿಸಲು, ಆರೋಗ್ಯಕರ ಜೀವನಶೈಲಿಯನ್ನು ರೂಪಿಸಿಕೊಳ್ಳಬೇಕು.

ಇದನ್ನೂ ಓದಿ: Relationship Tips: ಇರಬೇಕಾದರೆ ಸಂಸಾರ ಸುಸೂತ್ರ, ಪಾಲಿಸಿ ಸುಗಮ ದಾಂಪತ್ಯದ 5 ಸೂತ್ರ!

ನಗುವಿನ ಕೊರತೆ

ಹಾಸ್ಯವಿಲ್ಲದ ಬದುಕು ದಾಂಪತ್ಯದಲ್ಲಿ ಬೇಸರ ಮೂಡಿಸಬಹುದು. ಹೀಗಾಗಿ ದಂಪತಿ ತಮ್ಮ ದೈನಂದಿನ ಜೀವನದಲ್ಲಿ ವಿನೋದ ಮತ್ತು ನಗುವನ್ನು ಅಳವಡಿಸಿಕೊಳ್ಳಲು ಪ್ರಯತ್ನ ಮಾಡಬೇಕು. ದಂಪತಿ ತಮ್ಮಲ್ಲಿ ಹಾಸ್ಯದ ಪ್ರಜ್ಞೆಯನ್ನು ಕಾಪಾಡಿಕೊಳ್ಳುವುದು ಮತ್ತು ಒಟ್ಟಿಗೆ ಮೋಜು ಮಾಡುವುದು ಸಂಬಂಧದಲ್ಲಿ ಉತ್ಸಾಹವನ್ನು ತುಂಬುತ್ತದೆ.

Continue Reading

ಮಹಿಳೆ

Mother’s Day: ಆಕೆಗಾಗಿ ಕೊಂಚ ಸಮಯ ನೀಡೋಣ; ತಾಯಂದಿರ ದಿನ ಅರ್ಥಪೂರ್ಣವಾಗಿ ಆಚರಿಸೋಣ

ಎಲ್ಲರ ಬದುಕಿನಲ್ಲಿ ತಾಯಿಯಾಗಿ ಒಬ್ಬಳು ಇದ್ದೇ ಇರುತ್ತಾಳೆ. ಅದು ಹೆಂಡತಿಯಾಗಿರಬಹುದು, ಸಹೋದರಿಯಾಗಿರಬಹುದು ಅಥವಾ ಜನ್ಮವಿತ್ತ, ಸಾಕಿ ಸಲಹಿದ ತಾಯಿಯಾಗಿರಬಹುದು. ಇಲ್ಲಿ ಅವರ ಸ್ಥಾನಕ್ಕಿಂತ ಅವರು ಮಾಡುವ ಕರ್ತವ್ಯಕ್ಕೆ ಗೌರವ ಕೊಡಲೇಬೇಕು. ಇದಕ್ಕಾಗಿ ವರ್ಷದಲ್ಲೊಮ್ಮೆ ತಾಯಂದಿರ ದಿನವನ್ನು (Mother’s Day) ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ಬಾರಿ ಇಂದು ಈ ದಿನ ವಿಶೇಷವಾಗಿದೆ.

VISTARANEWS.COM


on

By

Mother's Day
Koo

ತಾಳ್ಮೆ, ಸಹನೆ, ಶಾಂತಿ, ಪರಸ್ಪರ ಹೊಂದಾಣಿಕೆ ಇವನ್ನೆಲ್ಲ ಹೆಣ್ಣು (girl) ಮಕ್ಕಳಿಗೆ (child) ಯಾರೂ ಕಲಿಸಬೇಕಾಗಿಲ್ಲ. ಅದು ಅವರಿಗೆ ಹುಟ್ಟಿನಿಂದಲೇ ಬಂದಿರುತ್ತದೆ. ಎಂತಹ ಕಠಿಣ ಪರಿಸ್ಥಿತಿಯಾಗಿರಲಿ ತಾಯಿ (Mother’s Day) ಅದನ್ನು ಎದುರಿಸಲು ಕ್ಷಣ ಮಾತ್ರದಲ್ಲಿ ಸಜ್ಜಾಗುತ್ತಾಳೆ. ತಮ್ಮ ಮಕ್ಕಳ ವಿಚಾರಕ್ಕೆ ಬಂದರೆ ಆಕೆ ಯಾವುದೇ ತ್ಯಾಗಕ್ಕೂ ಸಜ್ಜಾಗುತ್ತಾಳೆ, ತನ್ನ ಪ್ರಾಣವನ್ನು ಒತ್ತೆ ಇಟ್ಟಾದರೂ ಸರಿ ಮಕ್ಕಳನ್ನು ಎಲ್ಲ ರೀತಿಯ ಸಂಕಷ್ಟದಿಂದ ಪಾರು ಮಾಡುತ್ತಾಳೆ.

ಎಲ್ಲರಿಗೂ ತಮ್ಮ ತಾಯಿಯ ಬಗ್ಗೆ ಹೇಳಬೇಕಾದ ಸಾವಿರಾರು ವಿಷಯಗಳಿರುತ್ತವೆ. ಇದಕ್ಕೆ ತಾಯಂದಿರ ದಿನಕ್ಕಿಂತ ಉತ್ತಮ ದಿನ ಬೇರೆ ಯಾವುದಿದೆ. ಹೆಣ್ಣು ತಾಯಿಯಾಗಿ, ಅಕ್ಕನಾಗಿ, ಅಜ್ಜಿಯಾಗಿ, ಮಗಳಾಗಿ, ಸ್ನೇಹಿತೆಯಾಗಿ ತನ್ನ ಕರ್ತವ್ಯವನ್ನು ಚೆನ್ನಾಗಿ ನಿಭಾಯಿಸುತ್ತಾಳೆ. ಹೀಗಾಗಿಯೇ ತಾಯಂದಿರ ದಿನದ ಈ ಶುಭ ಸಂದರ್ಭದಲ್ಲಿ ಆಕೆಗೊಂದು ಶುಭ ಸಂದೇಶ ಕಳುಹಿಸಲು ಮರೆಯದಿರಿ.

ಸಿಹಿ ಶುಭಾಶಯಗಳೊಂದಿಗೆ ಆಕೆಯನ್ನು ಗೌರವಿಸುವ ಜೊತೆಗೆ ಸುಂದರವಾದ ಹೂಗೊಂಚಲು, ಅರ್ಥಪೂರ್ಣವಾದ ಉಡುಗೊರೆ ಅಥವಾ ಅವಳೊಂದಿಗೆ ಸಮಯ ಕಳೆಯುವ ಮೂಲಕ ಮೆಚ್ಚುಗೆಯನ್ನು ತೋರಿಸಿ. ಇದು ಯಾವಾಗಲೂ ಆಕೆಯನ್ನು ಸಂತೋಷದಲ್ಲಿ ಇರುವಂತೆ ಮಾಡುತ್ತದೆ ಮತ್ತು ಸದಾ ಆಕೆಯ ನೆನಪಿನಲ್ಲಿ ಇರುವಂತೆ ಮಾಡುತ್ತದೆ.

ತಾಯಂದಿರ ದಿನದ ವಿಶೇಷವಾಗಿ ತಾಯಿಗೆ ವಿಶೇಷ ಅಡುಗೆ ಮಾಡಿ ಬಡಿಸಿ, ಇಲ್ಲವಾದರೆ ಅವರ ನೆಚ್ಚಿನ ರೆಸ್ಟೋರೆಂಟ್ ಗೆ ಹೋಗಿ ಊಟ ಮಾಡಿಸಿ. ಇದರಿಂದ ಸಾಕಷ್ಟು ಸಮಯವನ್ನು ಆಕೆಗೆ ನೀವು ಕೊಟ್ಟಂತಾಗುತ್ತದೆ.


ತಾಯಂದಿರ ದಿನ ಯಾವಾಗ?

ತಾಯಂದಿರ ದಿನವನ್ನು ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರ ಆಚರಿಸಲಾಗುತ್ತದೆ. ರಜಾ ದಿನದಲ್ಲಿ ಇದು ಬರುವುದರಿಂದ ಈ ದಿನವನ್ನು ಹೆಚ್ಚು ವಿಶೇಷವಾಗಿ ಆಚರಿಸಬಹುದಾಗಿದೆ.

ತಾಯಿಯಂದಿರ ದಿನವು ಈ ಬಾರಿ ಮೇ 12ರಂದು ಭಾನುವಾರ ಆಚರಿಸಲಾಗುತ್ತಿದೆ. ಪ್ರಪಂಚದಾದ್ಯಂತ ಈ ದಿನವನ್ನು ಬೇರೆಬೇರೆ ದಿನಗಳಂದು ಆಚರಿಸಲಾಗುತ್ತಿದೆ.

ಆಸ್ಟ್ರೇಲಿಯಾ, ಕೆನಡಾ, ಡೆನ್ಮಾರ್ಕ್, ಇಟಲಿ, ಫಿನ್‌ಲ್ಯಾಂಡ್, ಸ್ವಿಟ್ಜರ್ಲೆಂಡ್ ಮತ್ತು ಟರ್ಕಿ ಯಲ್ಲಿ ಈ ಬಾರಿ ಮೇ 12ರಂದು ಅಮ್ಮಂದಿರನ್ನು ಗೌರವಿಸಲಾಗುತ್ತಿದೆ. ಯುಕೆಯಲ್ಲಿ ಮಾರ್ಚ್‌ನಲ್ಲಿ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಮೆಕ್ಸಿಕೋ ಈ ವರ್ಷ ಮೇ 10 ರಂದು ತಾಯಂದಿರ ದಿನವನ್ನು ಆಚರಿಸಲಾಗಿದೆ. ಥೈಲ್ಯಾಂಡ್ ಆಗಸ್ಟ್ 12 ರಂದು ಈ ದಿನವನ್ನು ಆಚರಿಸಲಾಗುತ್ತದೆ. ಯಾಕೆಂದರೆ ಈ ದಿನ ಇಲ್ಲಿ ರಾಣಿ ಸಿರಿಕಿಟ್ ಅವರ ಜನ್ಮದಿನವಾಗಿದೆ.

ಯಾಕೆ ಆಚರಣೆ ?

ತಾಯಂದಿರ ದಿನದ ಆಚರಣೆಯು 1800 ರ ದಶಕದ ಅಂತ್ಯದಲ್ಲಿ ಪ್ರಾರಂಭಿಸಲಾಯಿತು. ಹಲವಾರು ವಿಭಿನ್ನ ಘಟನೆಗಳ ಸಂಯೋಜನೆಯಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಸಾಮಾಜಿಕ ಕಾರ್ಯಕರ್ತೆ ಮತ್ತು ಸಮುದಾಯ ಸಂಘಟಕಿ ಅನ್ನಾ ಮಾರಿಯಾ ರೀವ್ಸ್ ಜಾರ್ವಿಸ್ ಅವರು ಮೊದಲ ಬಾರಿಗೆ ತಾಯಂದಿರ ದಿನದ ಪ್ರಸ್ತಾಪವನ್ನು ಮುಂದಿಟ್ಟರು.

ತಾಯಂದಿರು ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಸಹಾಯ ಮಾಡುವ ಮಹಿಳಾ ಕ್ಲಬ್‌ಗಳ ಸ್ಥಾಪಕರಾದ ಜಾರ್ವಿಸ್ ಅವರು 1868 ರಲ್ಲಿ ತಾಯಂದಿರ ಸ್ನೇಹ ದಿನವನ್ನು ಆಯೋಜಿಸಿದರು, ಇದು ಅಂತರ್ಯುದ್ಧದ ಅನಂತರ ಒಕ್ಕೂಟ ಮತ್ತು ಒಕ್ಕೂಟದ ಸೈನಿಕರ ತಾಯಂದಿರನ್ನು ಸಾಮರಸ್ಯದಿಂದ ಒಟ್ಟುಗೂಡಿಸುವ ಉದ್ದೇಶವನ್ನು ಹೊಂದಿತ್ತು.

ಬಳಿಕ ಎರಡು ವರ್ಷಗಳ ಅನಂತರ 1870 ರಲ್ಲಿ ಜೂಲಿಯಾ ವಾರ್ಡ್ ಹೋವ್ ಅವರು ವಿಶ್ವ ಶಾಂತಿಯನ್ನು ಉತ್ತೇಜಿಸುವ ಪ್ರಯತ್ನದಲ್ಲಿ ತಾಯಿಯ ದಿನದ ಘೋಷಣೆಯನ್ನು ಮಾಡಿ ಜೂನ್‌ನಲ್ಲಿ ತಾಯಿಯ ದಿನವನ್ನು ಆಚರಿಸಲು ಒತ್ತಾಯಿಸಿದರು. ಆ ಸಮಯದಲ್ಲಿಯೇ ತಾಯಂದಿರನ್ನು ಗೌರವಿಸಲು ಕೆಲವು ರೀತಿಯ ಕಲ್ಪನೆಯನ್ನು ಅವರು ಮಂಡಿಸಿದ್ದರು. ಆದರೆ ಅದು ಸುಮಾರು 35 ವರ್ಷಗಳವರೆಗೆ ಸಾಧ್ಯವಾಗಲಿಲ್ಲ.

1905 ರಲ್ಲಿ ಜಾರ್ವಿಸ್ ಅವರ ಮರಣದ ಅನಂತರ ಅವರ ಮಗಳು ಅನ್ನಾ ಪತ್ರ ಬರೆಯುವ ಅಭಿಯಾನವನ್ನು ಪ್ರಾರಂಭಿಸಿದರು. ತನ್ನ ತಾಯಿಯ ಕೆಲಸವನ್ನು ಮಾತ್ರವಲ್ಲದೆ ಎಲ್ಲಾ ತಾಯಂದಿರಿಗೆ ಮತ್ತು ಅವರ ಮಕ್ಕಳ ಪರವಾಗಿ ಅವರು ಮಾಡುವ ತ್ಯಾಗವನ್ನು ಗೌರವಿಸಲು ತಾಯಂದಿರ ದಿನಾಚರಣೆಗೆ ಕರೆ ನೀಡಿದರು.

ತಾಯಂದಿರ ದಣಿವರಿಯದ ಕೆಲಸವನ್ನು ಗೌರವಿಸುವ ಸಲುವಾಗಿ ಅಧ್ಯಕ್ಷ ವುಡ್ರೊ ವಿಲ್ಸನ್ ಅವರು 1914 ರಲ್ಲಿ ಘೋಷಣೆಗೆ ಸಹಿ ಹಾಕಿ ಅಧಿಕೃತವಾಗಿ ಮೇ ತಿಂಗಳ ಎರಡನೇ ಭಾನುವಾರವನ್ನು ತಾಯಂದಿರ ದಿನವೆಂದು ಘೋಷಿಸಿದರು.

ಇದನ್ನೂ ಓದಿ: Viral News: ಇಂತಹ ಅಮ್ಮಂದಿರೂ ಇರ್ತಾರಾ? ಈ ಶಾಕಿಂಗ್‌ ವಿಡಿಯೊ ನೋಡಿದರೆ ನಿಮ್ಮ ರಕ್ತ ಕುದಿಯುವುದು ಖಚಿತ

ಪ್ರಾರಂಭದಲ್ಲಿ ತಾಯಂದಿರ ದಿನಚರಣೆಯ ಉದ್ದೇಶವೇ ಬೇರೆಯಾಗಿತ್ತು. ಆದರೆ ಇವತ್ತು ವ್ಯಾಪಾರೀಕರಣವಾಗಿದೆ. ಹೀಗಾಗಿ ರಜಾ ದಿನದಂದೇ ಎಲ್ಲರೂ ತಮ್ಮ ತಾಯೊಂದಿಗೆ ಸ್ವಲ್ಪ ಸಮಯ ಕಳೆಯಲಿ ಎನ್ನುವ ಉದ್ದೇಶದಿಂದ ಎಲ್ಲರೂ ಮೇ ತಿಂಗಳ ಎರಡನೇ ಭಾನುವಾರ ಈ ದಿನಾಚರಣೆಗೆ ಇಷ್ಟಪಡುತ್ತಾರೆ. ಹೀಗಾಗಿ ಇಂದು ವಿಶ್ವದಾದ್ಯಂತ ತಾಯಂದಿರ ದಿನ ಆಚರಿಸಲಾಗುತ್ತಿದೆ.

ನಿತ್ಯದ ಕೆಲಸದ ಜಂಜಾಟದಲ್ಲಿರುವ ಎಲ್ಲರಿಗೂ ಇವತ್ತು ತಾಯಂದಿರ ದಿನ ಆಚರಿಸುವುದು ಅನಿವಾರ್ಯವಾಗಿರುವುದರಿಂದ ಈ ದಿನ ಅಮೂಲ್ಯವಾದ ದಿನವಾಗಿ ಉಳಿದಿದೆ. ಹೀಗಾಗಿ ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸೋಣ. ಎಲ್ಲ ತಾಯಂದಿರಿಗೂ ಶುಭ ಹಾರೈಸೋಣ.

Continue Reading

Relationship

Parenting Tips: ಮಕ್ಕಳನ್ನು ಬೆಳಗ್ಗೆ ಬೇಗ ಏಳಿಸಿ ಶಾಲೆಗೆ ಹೊರಡಿಸುವುದೇ ಹೋರಾಟವೇ? ಇಲ್ಲಿವೆ ಟಿಪ್ಸ್!

ಹೆತ್ತ ಜೀವಗಳ ಬೆಳಗಿನ ಹೋರಾಟದ ದೃಶ್ಯ ಯಾವ ಯುದ್ಧಭೂಮಿಗೂ ಕಡಿಮೆ ಇರುವುದಿಲ್ಲ. ಮಕ್ಕಳನ್ನು ಬೆಳಗ್ಗೆ ಏಳಿಸುವ ಕಲೆ ನಿಮಗೆ ಕರತಲಾಮಲಕವಾಗಲು ಇಲ್ಲಿವೆ ಕೆಲವು (parenting tips) ಕಿವಿಮಾತುಗಳು.

VISTARANEWS.COM


on

kids morning
Koo

ಮಕ್ಕಳನ್ನು ಬೆಳೆಸುವುದು (good parenting) ಎಂದರೆ ಅದು ಸುಲಭದ ಕೆಲಸವಲ್ಲ. ಬಹಳ ಜವಾಬ್ದಾರಿಗಳನ್ನು ಬೇಡುವ ಕೆಲಸ. ಸಣ್ಣ ಮಗುವಿನ ತಾಯಿಗೆ, ನಿದ್ರೆಗೆಟ್ಟೂ ಕೆಟ್ಟೂ, ಎಷ್ಟೋ ಸಾರಿ ಮಕ್ಕಳು ಬೇಗನೆ ಶಾಲೆಗೆ ಹೋಗುವಷ್ಟು ದೊಡ್ಡದಾಗಿ ಬಿಟ್ಟರೆ ಸಾಕಪ್ಪಾ ಅನಿಸುತ್ತದೆ. ಆದರೆ ಶಾಲೆಗೆ ಹೋಗುವಷ್ಟು ಮಗು ದೊಡ್ಡದಾದ ಮೇಲೆಯೇ ಅದರ ಕಷ್ಟ ಅರಿವಾಗುವುದು. ಹೀಗೆ ಮಗುವೊಂದನ್ನು ಸಂಪೂರ್ಣ ದೊಡ್ಡವರನ್ನಾಗಿ ಮಾಡುವವರೆಗೆ ಹೆತ್ತವರು ಹಲವು ಹಾದಿಗಳನ್ನು ಸವೆಸಿರುತ್ತಾರೆ. ಪ್ರತಿಯೊಬ್ಬ ಹೆತ್ತವರಿಗೂ ಸವಾಲೆನಿಸುವುದು ಮಕ್ಕಳನ್ನು ಬೆಳಗ್ಗಿನ ಹೊತ್ತು ಶಾಲೆಗೆ ಹೊರಡಿಸುವ ಸಮಯ. ಬೆಳಗ್ಗೆ ಬೇಗ ಏಳಿಸಬೇಕು, ಸ್ನಾನ ಮಾಡಿಸಬೇಕು ಅಥವಾ ತಾನೇ ಸ್ನಾನ ಮಾಡುವಷ್ಟು ಮಗು ಬೆಳೆದಿದ್ದರೆ ಮಕ್ಕಳಿಗೆ ಬೇಗ ಬೇಗ ಸ್ನಾನ ಮುಗಿಸುವಂತೆ ಒತ್ತಡ ಹೇರಬೇಕು. ತಿಂಡಿ ರೆಡಿ ಮಾಡಬೇಕು, ಊಟದ ಡಬ್ಬಿಗೆ ನಿತ್ಯವೂ ಆಕರ್ಷಕ ತಿನಿಸುಗಳನ್ನು ರೆಡಿ ಮಾಡಬೇಕು, ಈ ನಡುವೆ ತಮಗೂ ತಿಂಡಿ ಮಾಡಬೇಕು, ಆಫೀಸಿಗೆ ಬುತ್ತಿ ಕಟ್ಟಿಕೊಳ್ಳಬೇಕು, ಅಬ್ಬಬ್ಬಾ, ಹೆತ್ತ ಜೀವಗಳ ಬೆಳಗಿನ ಹೋರಾಟದ ದೃಶ್ಯ ಯಾವ ಯುದ್ಧಭೂಮಿಗೂ ಕಡಿಮೆ ಇರುವುದಿಲ್ಲ. ಇಂಥ ಸಂದರ್ಭ ಈ ಎಲ್ಲ ತಯಾರಿಗಳ ನಡುವೆ ಮಕ್ಕಳನ್ನು ಹಾಸಿಗೆಯಿಂದ ಏಳಿಸುವುದೇ ದೊಡ್ಡ ಸವಾಲು. ಈ ಸವಾಲನ್ನು ಗೆದ್ದರೆ, ಯುದ್ಧದಲ್ಲಿ ಅರ್ಧ ಗೆದ್ದಂತೆ. ಹಾಗಾದರೆ ಬನ್ನಿ, ಮಕ್ಕಳನ್ನು ಬೆಳಗ್ಗೆ ಏಳಿಸುವ ಕಲೆ ನಿಮಗೆ ಕರತಲಾಮಲಕವಾಗಲು ಇಲ್ಲಿವೆ ಕೆಲವು (parenting tips) ಕಿವಿಮಾತುಗಳು.

1. ಮಕ್ಕಳಿಗೊಂದು ವೇಳಾಪಟ್ಟಿ ಇರಲಿ. ಮಕ್ಕಳು ಇಂಥ ಹೊತ್ತಿಗೆ ಏಳುವುದರಿಂದ ಹಿಡಿದು, ಹಲ್ಲುಜ್ಜುವುದು, ಸ್ನಾನ ಮಾಡುವುದು ಇತ್ಯಾದಿ ಪ್ರತಿಯೊಂದಕ್ಕೂ ನಿಗದಿತ ಸಮಯಾವಕಾಶವಿರಲಿ. ಆಗ ಮಕ್ಕಳು ತಮ್ಮ ಕೆಲಸಗಳನ್ನು ಒಂದೊಂದಾಗಿ ತಾವೇ ಮಾಡಿದ ಖುಷಿಯನ್ನು ಪಡೆಯುತ್ತಾರೆ. ಅಷ್ಟೇ ಅಲ್ಲ, ಇದನ್ನು ಮುಂದುವರಿಸಲು ಅವರಿಗೆ ಪ್ರೇರಣೆ ದೊರೆಯುತ್ತದೆ. ಒಂದನೇ ದಿನ ಮಕ್ಕಳು ಮಾಡಲಿಕ್ಕಿಲ್ಲ, ಎರಡನೇ ದಿನವೂ. ಆದರೆ, ನೀವು ಈ ಯೋಜನೆಯಿಂದ ಹಿಂಜರಿಯಬೇಡಿ. ಆಗ ಮಕ್ಕಳು ನಿಧಾನವಾಗಿ ತಮ್ಮ ಕೆಲಸವನ್ನು, ಪುಟ್ಟಪುಟ್ಟ ಜವಾಬ್ದಾರಿಗಳನ್ನು ನಿಭಾಯಿಸುವುದನ್ನು ಕಲಿಯುತ್ತಾರೆ.

2. ಸೂರ್ಯನ ಬೆಳಕು ಕೋಣೆಗೆ ಬರುವಂತಿರಲಿ. ಮುಖದ ಮೇಲೆ ಮುಂಜಾವಿನ ಬೆಳಕು ಬೀಳುವಾಗ ಅನುಭವವಾಗುವ ಆನಂದ ಮಕ್ಕಳು ಅನುಭವಿಸಲಿ.

3. ಬೆಳಗ್ಗೆ ಎದ್ದ ಕೂಡಲೇ ಮಕ್ಕಳ ಮನಸ್ಸನ್ನು ಖಷಿಯಾಗಿಸುವ ಒಂದು ಪುಟ್ಟ ಕೆಲಸಕ್ಕೆ ಜಾಗವಿರಲಿ. ಏನಾದರೊಂದು ಪುಟ ಓದುವುದಿರಬಹುದು, ಅಥವಾ ಒಂದು ಫ್ಯಾಮಿಲಿ ಹಗ್‌ ಕ್ಷಣವಿರಬಹುದು, ಅಥವಾ ಮಕ್ಕಳ ಇಷ್ಟದ ಹಾಡು ಪ್ಲೇ ಮಾಡುವುದಿರಬಹುದು ಹೀಗೆ ಏನಾದರೊಂದು ಪುಟ್ಟ ಖಷಿ ಪ್ರತಿ ದಿನ ಅವರಿಗಾಗಿ ಕಾದಿರಲಿ. ಎದ್ದ ಕೂಡಲೇ ಗಡಿಬಿಡಿ ಮಾಡುವುದು, ಲೇಟಾಗುತ್ತಿದೆ ಎಂದು ಕಿರುಚಾಡುವುದು ಇತ್ಯಾದಿಗಳನ್ನು ಬಿಟ್ಟು ಒಂದೈದು ನಿಮಿಷ ಶಾಂತವಾಗಿ ಪ್ರೀತಿಯಿಂದ ಮಾತನಾಡಿಸುವುದನ್ನು ಅಭ್ಯಾಸ ಮಾಡಿ. ಆಗ ಮಕ್ಕಳು ಬೆಳಗ್ಗೆದ್ದ ಕೂಡಲೇ, ಕಿರಿಕಿರಿ ಮಾಡುವುದಿಲ್ಲ.

4. ಮಕ್ಕಳಿಗೆ ಏಳಲು ಒಂದು ಅಲರಾಂ ಇಡುವುದನ್ನು ಅಭ್ಯಾಸ ಮಾಡಿ. ಆ ಅಲರಾಂ ಶಬ್ದ ತಮಾಷೆಯದ್ದೋ, ಅಥವಾ ಅವರಿಷ್ಟದ ಹಾಡೋ, ಮ್ಯೂಸಿಕ್ಕೋ ಇರಲಿ.

5. ಎಲ್ಲಕ್ಕಿಂತ ಮುಖ್ಯವಾಗಿ, ನಿಮ್ಮ ಕೆಟ್ಟ ಅಭ್ಯಾಸಗಳಿಂದ ಮಕ್ಕಳ ನಿದ್ದೆಯನ್ನು ಹಾಳು ಮಾಡಬೇಡಿ. ನೀವು ಶಿಸ್ತುಬದ್ಧ ಜೀವನ ನಡೆಸುತ್ತಿದ್ದರೆ, ಮಕ್ಕಳ ಇಂತಹ ಸಮಸ್ಯೆ ಸಾಕಷ್ಟು ಕಡಿಮೆಯಾಗುತ್ತದೆ. ಅದಕ್ಕಾಗಿಯೇ ಮಕ್ಕಳನ್ನು ಬೇಗನೆ ಒಂದು ನಿಗದಿತ ಸಮಯಕ್ಕೆ ಮಲಗಿಸುವುದನ್ನು ಅಭ್ಯಾಸ ಮಾಡಿಸಿ. ಏನೇ ಕಾರಣಗಳಿದ್ದರೂ ಇದನ್ನು ಏರುಪೇರು ಮಾಡಬೇಡಿ.

Kids outfits faded in Monsoon
Kids outfits faded in Monsoon

6. ಮಕ್ಕಳು ಅವರಷ್ಟಕ್ಕೆ ಬೇಗನೆ ಎದ್ದು ಹಲ್ಲುಜ್ಜಿ ಮುಖ ತೊಳೆದು ಶಾಲೆಗೆ ರೆಡಿಯಾಗುವ ಕೆಲಸವನ್ನು ಯಾವ ಕಿರಿಕಿರಿಯೂ ಇಲ್ಲದೆ ಮಾಡಿದರೆ ಅವರಿಗೆ ರಿವಾರ್ಡ್‌ಗಳನ್ನು ಕೊಡಿ. ಸ್ಟಿಕ್ಕರ್‌, ಸ್ಮೈಲಿ, ಅವರಿಷ್ಟದ ಬ್ರೇಕ್‌ಫಾಸ್ಟ್‌ ಹೀಗೆ.

ಇದನ್ನೂ ಓದಿ: Parenting Tips: ನಿಮ್ಮ ಮಕ್ಕಳು ಅಡ್ಡ ಬೆಳೆಯದೆ, ಉದ್ದ ಬೆಳೆಯಬೇಕೆಂದರೆ ಈ ಆಹಾರವನ್ನೇ ನೀಡಿ!

7. ರಜೆಯ ದಿನಗಳಲ್ಲಿ ಮಕ್ಕಳನ್ನು ಬೆಳಗ್ಗೆ ಎದ್ದ ಮೇಲೆ ಪಾರ್ಕಿಗೆ ಕರೆದೊಯ್ಯುವುದು, ವಾಕಿಂಗ್‌ ಇತ್ಯಾದಿ ಕೆಲಸಗಳನ್ನು ಜೊತೆಯಾಗಿ ಮಾಡಬಹುದು. ಆಗ ಮಕ್ಕಳೊಡನೆ ಸಾಕಷ್ಟು ಸಮಯವೂ ದೊರೆಯುತ್ತದೆ. ಆಗ ರಜೆಯಲ್ಲೂ ಮಕ್ಕಳು ಇದೇ ಸಮಯಪಾಲನೆ ಮಾಡುತ್ತಾರೆ.

8. ಮಕ್ಕಳಿಗೆ ಬೆಳಗಿನ ಹೊತ್ತು ಅವರೇ ಮಾಡುವಂಥ, ಮಾಡಬಲ್ಲ ಏನಾದರೊಂದು ಸಣ್ಣ ಜವಾಬ್ದಾರಿ ಕೊಡಿ.

9. ಎಲ್ಲಕ್ಕಿಂತ ಮುಖ್ಯವಾಗಿ ಮಕ್ಕಳಿಗೆ ಏನೇ ಮಾಡಿದರೂ, ಏನೇ ಹೇಳಿದಿರೂ, ಅವರು ಕಲಿಯುವುದು ನೋಡಿದ್ದನ್ನು! ಹೀಗಾಗಿ ಮಕ್ಕಳಿಗೆ ನೀವೇ ರೋಲ್‌ ಮಾಡೆಲ್‌ ಆಗಿ. ಮಕ್ಕಳು ನಿಮ್ಮನ್ನು ನೋಡಿ ಕಲಿಯಲಿ. ಅವರು ನಿಮ್ಮನ್ನು ನೋಡಿ ಕಲಿಯುವಂಥದ್ದು ನಿಮ್ಮಲ್ಲೂ ಇರಲಿ. ಅವರಿಗೆ ನೀವೇ ಮೊದಲ ಪ್ರೇರಣೆ ಎಂಬುದು ಪ್ರತಿಯೊಂದು ಕೆಲಸದ ಸಂದರ್ಭವೂ ನಿಮಗೆ ನೆನಪಿರಲಿ.

ಇದನ್ನೂ ಓದಿ: Parenting Tips: ಹತ್ತು ವಯಸ್ಸಿನೊಳಗೆ ನಿಮ್ಮ ಮಕ್ಕಳಿಗೆ ಈ ಎಲ್ಲ ಜೀವನ ಕೌಶಲ್ಯಗಳು ತಿಳಿದಿರಲಿ!

Continue Reading

Relationship

Parenting Tips: ಹತ್ತು ವಯಸ್ಸಿನೊಳಗೆ ನಿಮ್ಮ ಮಕ್ಕಳಿಗೆ ಈ ಎಲ್ಲ ಜೀವನ ಕೌಶಲ್ಯಗಳು ತಿಳಿದಿರಲಿ!

ಮಕ್ಕಳು ಈ ವಯಸ್ಸಿನೊಳಗೆ ತಿಳಿಯಲೇಬೇಕಾದ ಕೌಶಲ್ಯಗಳಾವುವು, ಅವುಗಳನ್ನು ಹೆತ್ತವರು ಸೂಕ್ತ ಪೋಷಣೆಯಿಂದ ಹೇಗೆ ತಿಳಿಸಿಕೊಡಬಹುದು (parenting tips, parenting guide) ಎಂಬುದನ್ನು ನೋಡೋಣ.

VISTARANEWS.COM


on

parenting skills
Koo

ಇಂದು ಸಣ್ಣ ಕುಟುಂಬ ಪದ್ಧತಿಯಿಂದಾಗಿ (nuclear family) ಮಕ್ಕಳ ಮೇಲೆ ಹೆತ್ತವರಿಗೆ ಮುದ್ದು ಜಾಸ್ತಿ. ಹೀಗಾಗಿ ಮಕ್ಕಳು ತಮ್ಮ ವಯಸ್ಸಿಗೆ ಸರಿಯಾಗಿ ಕಲಿತುಕೊಳ್ಳಬೇಕಾದ ಎಷ್ಟೋ ವಿಚಾರಗಳಿಂದ, ಜೀವನ ಕೌಶಲ್ಯಗಳಿಂದ (Life skills) ವಂಚಿತರಾಗುತ್ತಾರೆ. ಹೆತ್ತವರಿಗೂ ಈ ಸಮಸ್ಯೆ ಅರ್ಥವಾಗುವುದಿಲ್ಲ. ಜೀವನದಲ್ಲಿ ಏರಬೇಕಾದ ಒಂದೊಂದೇ ಮೆಟ್ಟಿಲನ್ನು ಏರಲು ಕೆಲವು ಸಾಮಾನ್ಯ ಕೌಶಲ್ಯಗಳನ್ನು ಮಕ್ಕಳು 10 ವಯಸ್ಸಿನೊಳಗೇ ಕಲಿಯಬೇಕು. ಬನ್ನಿ, ಮಕ್ಕಳು ಈ ವಯಸ್ಸಿನೊಳಗೆ ತಿಳಿಯಲೇಬೇಕಾದ ಕೌಶಲ್ಯಗಳಾವುವು, ಅವುಗಳನ್ನು ಹೆತ್ತವರು ಸೂಕ್ತ ಪೋಷಣೆಯಿಂದ ಹೇಗೆ ತಿಳಿಸಿಕೊಡಬಹುದು (parenting tips, parenting guide) ಎಂಬುದನ್ನು ನೋಡೋಣ.

1. ಮಕ್ಕಳಿಗೆ ಸರಿಯಾಗಿ ಸಂವಹನ (clear communication) ಮಾಡುವ ಕಲೆ ಸಾಮಾನ್ಯವಾಗಿ ಈ ವಯಸ್ಸಿನೊಳಗೆ ಬರಬೇಕು. ಅಂದರೆ, ಯಾರ ಜೊತೆ ಹೇಗೆ ಮಾತನಾಡಬೇಕು ಎಂಬಿತ್ಯಾದಿ ವಿಚಾರಗಳ ಜೊತೆಗೆ ಭಾವನೆಗಳನ್ನು ಸ್ಪಷ್ಠವಾಗಿ, ಸರಳವಾಗಿ ಮತ್ತೊಬ್ಬರಿಗೆ ದಾಟಿಸುವುದು ಹೇಗೆ ಎಂಬುದು ಹತ್ತು ವಯಸ್ಸಿನೊಳಗೆ ಸಾಮಾನ್ಯವಾಗಿ ಮಕ್ಕಳಿಗೆ ಅರ್ಥವಾಗಬೇಕು. ಹೆತ್ತವರು ಇದನ್ನು ಮಕ್ಕಳಿಗೆ ತಿಳಿಸಿಕೊಡಬೇಕು.

2. ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸುವ (problem solving) ಕಲೆ, ಅವರ ಸಮಸ್ಯೆಗಳನ್ನು ಆದಷ್ಟೂ ಅವರೇ ಪರಿಹಾರ ಮಾಡಿಕೊಳ್ಳುವ ಚಾಕಚಕ್ಯತೆ ಇತ್ಯಾದಿಗಳು ಮಕ್ಕಳಿಗೆ ಈ ವಯಸ್ಸಿನೊಳಗೆ ಬಂದುಬಿಡುತ್ತದೆ. ಅವುಗಳು ಸಾಧ್ಯವಾಗುತ್ತಿಲ್ಲ ಎಂದಾದರೆ ಅವರನ್ನು ಸರಿಯಾದ ರೀತಿಯಲ್ಲಿ ಗೈಡ್‌ ಮಾಡುವುದು ಹೆತ್ತವರ ಕರ್ತವ್ಯ.

3. ಮಕ್ಕಳು ಸೋಲನ್ನು ಸಹಜವಾಗಿ ತೆಗೆದುಕೊಳ್ಳುವುದನ್ನು, ಹಾಗೂ ಸೋಲು ಬದುಕಿನಲ್ಲಿ ಸಾಮಾನ್ಯ ಎಂಬುದನ್ನು ಈ ವಯಸ್ಸಿನೊಳಗೆ ಅರ್ಥ ಮಾಡಿಕೊಳ್ಳಬೇಕು. ಅಂದರೆ, ಎಲ್ಲದರಲ್ಲೂ ತಾನೇ ಗೆಲ್ಲಬೇಕು ಎಂಬಿತ್ಯಾದಿ ಭಾವನೆಗಳಿದ್ದರೆ, ನಿಧಾನವಾಗಿ ಅದರಿಂದ ಹೊರಗೆ ಬಂದು ಸೋಲಿನ ಸಂದರ್ಭ ಅದನ್ನು ನಿಭಾಯಿಸುವುದು ಹೇಗೆ ಹಾಗೂ ಸೋಲನ್ನೇ ಗೆಲುವಿನ ಮೆಟ್ಟಿಲಾಗಿ ಹೇಗೆ ಸ್ವೀಕರಿಸುವುದು ಎಂಬಿತ್ಯಾದಿ ಜೀವನ ಪಾಠಗಳನ್ನು ಕಲಿಯುವ ಕಾಲ.

4. ಮಕ್ಕಳಿಗೆ ಸಣ್ಣ ಸಣ್ಣ ತಮ್ಮ ಜವಾಬ್ದಾರಿಗಳನ್ನು ಹೊರುವ ಕಾಲಘಟ್ಟವಿದು. ಮಕ್ಕಳು ತಮ್ಮ ಶಾಲೆ ವಸ್ತುಗಳನ್ನು, ಆಟಿಕೆಗಳನ್ನು ಸರಿಯಾದ ಜಾಗದಲ್ಲಿಡುವುದು, ತನ್ನ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಟೀಚರು ಕೊಟ್ಟ ಕೆಲಸಗಳನ್ನು ತಾನೇ ತಾನಾಗಿ ಪೂರ್ತಿ ಮಾಡುವ, ಹಾಗೂ ತಾನು ಮಾಡಬೇಕಾದ ಕೆಲಸ ಹಾಗೂ ಜವಾಬುದಾರಿಗಳ್ನು ಪಟ್ಟಾಗಿ ಕೂತು ಸಮಯದೊಳಗೆ ಮಾಡಿ ಮುಗಿಸುವುದು ಇತ್ಯಾದಿಗಳನ್ನು ಕಲಿಯುವ ವಯಸ್ಸಿದು. ಹತ್ತರೊಳಗೆ ಮಕ್ಕಳು ಇಷ್ಟಾದರೂ ಕಲಿಯಬೇಕು.

5. ಸಮಯ ಪಾಲನೆ (time management) ಕೂಡಾ ಮಕ್ಕಳು ಕಲಿಯಬೇಕು. ಸಮಯಕ್ಕೆ ಸರಿಯಾಗಿ ಎದ್ದು, ತಮ್ಮ ಕೆಲಸಗಳನ್ನು ಮಾಡಿಕೊಳ್ಳುವುದು, ನಿಗದಿತ ಸಮಯದೊಳಗೆ ಕೆಲಸಗಳನ್ನು ಮುಗಿಸುವುದು, ಒಂದು ನಿರ್ದಿಷ್ಟ ಸಮಯದಲ್ಲಿ ಆಟವಾಡಲು ಹೋಗಿ ಬರುವುದು ಇತ್ಯಾದಿ ಮಕ್ಕಳು ಸಮಯ ಪಾಲನೆಯನ್ನು ಎಳವೆಯಲ್ಲಿಯೇ ರೂಢಿಸಿಕೊಳ್ಳಬಹುದು.

6. ತಮ್ಮ ಅಣ್ಣ ತಮ್ಮ ಅಕ್ಕ ತಂಗಿ ಜೊತೆ, ಬಂಧು ಬಳಗದ ಜೊತೆ ಪ್ರೀತಿಯಿಂದ ಇರುವುದು, ಕಾಳಜಿ ಮಾಡುವುದು (care taking) ಕೂಡಾ ಮಕ್ಕಳು ಈ ವಯಸ್ಸಿನಲ್ಲಿ ಕಲಿಯಬೇಕು.

7. ಅಡುಗೆ ಎಂಬುದು ಜೀವನಕ್ಕೆ ಅತ್ಯಂತ ಅಗತ್ಯವಾದ ಸ್ಕಿಲ್ (cooking skill).‌ ಮನೆಯಲ್ಲಿ ಅಮ್ಮನೋ, ಅಪ್ಪನೋ, ಅಡುಗೆಯವಳೋ ಮಾಡಿ ಕೊಡುವ ಊಟವನ್ನೇ ಜೀವನಪರ್ಯಂತ ತಿನ್ನುತ್ತಿದ್ದರೆ, ಅಡುಗೆ ಮಾಡಿ ಕೊಡುವವರಲ್ಲಿರುವ ಪ್ರೀತಿಯನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಬಹಳ ಸರಳವಾದ ಅಡುಗೆಗಳಾದ ಸ್ಯಾಂಡ್‌ವಿಚ್‌, ಮೊಟ್ಟೆ ಬೇಯಿಸುವುದು, ಜ್ಯೂಸ್‌, ಚೋಕೋಲೇಟ್‌ ಶೇಕ್‌ ಮಾಡಿಕೊಳ್ಳುವುದು ಇತ್ಯಾದಿ ಸರಳ ಪಟಾಪಟ್‌ ಅಡುಗೆಗಳನ್ನಾದರೂ ಮಕ್ಕಳು ಈ ವಯಸ್ಸಿನಲ್ಲಿ ಸ್ವಲ್ಪ ಕಲಿಯಬಹುದು.

8. ಮಕ್ಕಳಿಗೆ ಹಣದ ಮಹತ್ವವನ್ನು ತಿಳಿಸಿಕೊಡುವುದು (money management) ಬಹಳ ಅಗತ್ಯ. ಈ ವಯಸ್ಸಿನಲ್ಲಿ ಮಕ್ಕಳಿಗೆ ಹಣದ ಮೌಲ್ಯದ ಬಗೆಗೆ ತಿಳುವಳಿಕೆ ಮೂಡಬೇಕು. ತಮ್ಮದೇ ಪಿಗ್ಗಿ ಬ್ಯಾಕಿನಲ್ಲಿ ಹಣ ಶೇಖರಣೆ ಮಾಡುವುದು, ಹಣ ಉಳಿಕೆ ಮಾಡುವುದು ಇತ್ಯಾದಿ ಮಕ್ಕಳು ಈ ವಯಸ್ಸಿನಲ್ಲಿ ಕಲಿಯಬಹುದು.

9. ಆರೋಗ್ಯದ ಕಾಳಜಿಯನ್ನೂ ಮಕ್ಕಳು ತಮ್ಮ ಹತ್ತು ವಯಸ್ಸಿನೊಳಗೆ ಕಲಿತುಕೊಳ್ಳಬೇಕು. ಗಾಯವಾದರೆ ಏನು ಮಾಡಬೇಕು, ಫಸ್ಟ್‌ ಏಯ್ಡ್‌ ಬಳಸುವುದು ಹೇಗೆ, ತುರ್ತು ಘಟಕವನ್ನು ಸಂಪರ್ಕಿಸುವುದು ಹೇಗೆ ಇತ್ಯಾದಿ ಸಾಮಾನ್ಯ ಜ್ಞಾನ ಮಕ್ಕಳಿಗೆ ಈ ವಯಸ್ಸಿನೊಳಗೆ ಹೇಳಿ ಕೊಡಬೇಕು.

ಇದನ್ನೂ ಓದಿ: Parenting Guide: ಮಕ್ಕಳ ಮೇಲೆ ಎಲ್ಲದಕ್ಕೂ ಹರಿಹಾಯುವ ಮುನ್ನ ಈ ಸೂತ್ರಗಳತ್ತ ಒಮ್ಮೆ ಕಣ್ಣಾಡಿಸಿ!

Continue Reading
Advertisement
Kodava Family Hockey Tournament Website Launched
ಕೊಡಗು2 ವಾರಗಳು ago

Kodagu News : ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ವೈಬ್ ಸೈಟ್ ಲೋಕಾರ್ಪಣೆ

Bengaluru News
ಬೆಂಗಳೂರು2 ವಾರಗಳು ago

Bengaluru News : ಮಾಡಲಿಂಗ್‌ನಲ್ಲಿ ಗಿನ್ನಿಸ್‌ ರೆಕಾರ್ಡ್‌ ಮಾಡಲು ಹೊರಟ ಹಳ್ಳಿಹೈದ

Dina Bhavishya
ಭವಿಷ್ಯ2 ವಾರಗಳು ago

Dina Bhavishya : ಯಾವುದಾದರೂ ಪ್ರಸಂಗಗಳಿಂದ ನಿಮ್ಮ ಮೇಲೆ ಅಪವಾದ ಬರುವ ಸಾಧ್ಯತೆ ಎಚ್ಚರಿಕೆ ಇರಲಿ

Gadag News Father commits suicide by throwing three children into river
ಗದಗ2 ವಾರಗಳು ago

Gadag News : ಮೂವರು ಮಕ್ಕಳನ್ನು ನದಿಗೆ ಎಸೆದು, ಆತ್ಮಹತ್ಯೆ ಮಾಡಿಕೊಂಡ ತಂದೆ!

Dina Bhavishya
ಭವಿಷ್ಯ2 ವಾರಗಳು ago

Dina Bhavishya: ಪ್ರಯತ್ನದಲ್ಲಿ ನಂಬಿಕೆ ಇಟ್ಟು ಕಾರ್ಯದಲ್ಲಿ ಮುನ್ನುಗ್ಗಿ, ಯಶಸ್ಸು ಖಂಡಿತ

Dina Bhavishya
ಭವಿಷ್ಯ2 ವಾರಗಳು ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗಲಿದೆ

Bengaluru airport
ಬೆಂಗಳೂರು2 ವಾರಗಳು ago

Bengaluru Airport : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೈಗರ್‌ ವಿಂಗ್ಸ್‌; 2ನಲ್ಲಿ ಅತಿದೊಡ್ಡ ವರ್ಟಿಕಲ್‌ ಗಾರ್ಡನ್‌ ಅನಾವರಣ

Dina Bhavishya
ಭವಿಷ್ಯ2 ವಾರಗಳು ago

Dina Bhavishya : ಈ ರಾಶಿಯವರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಆಲೋಚಿಸಿ

Dina Bhavishya
ಭವಿಷ್ಯ2 ವಾರಗಳು ago

Dina Bhavishya : ಸದಾ ಕಲ್ಪನೆಯಲ್ಲಿ ಕನಸುಗಳನ್ನು ಕಾಣುತ್ತಾ ಕಾಲಹರಣ ಮಾಡ್ಬೇಡಿ

dina bhavishya read your daily horoscope predictions for november 4 2024
ಭವಿಷ್ಯ3 ವಾರಗಳು ago

Dina Bhavishya : ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಶುಭ ಸುದ್ದಿ

galipata neetu
ಕಿರುತೆರೆ12 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ1 ವರ್ಷ ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ11 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ1 ವರ್ಷ ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 ತಿಂಗಳುಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್3 ತಿಂಗಳುಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್3 ತಿಂಗಳುಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ3 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ4 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ4 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ4 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು4 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ4 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌