Parenting Tips: ಟೀನೇಜ್‌ ಮಕ್ಕಳ ಹೆತ್ತವರಾಗಿ ನೀವು ನೆನಪಿಟ್ಟುಕೊಳ್ಳಬೇಕಾದ 12 ಸೂತ್ರಗಳು! - Vistara News

Relationship

Parenting Tips: ಟೀನೇಜ್‌ ಮಕ್ಕಳ ಹೆತ್ತವರಾಗಿ ನೀವು ನೆನಪಿಟ್ಟುಕೊಳ್ಳಬೇಕಾದ 12 ಸೂತ್ರಗಳು!

ಮಕ್ಕಳು ಟೀನೇಜ್‌ಗೆ (teenage) ಕಾಲಿಡುತ್ತಿದ್ದಂತೆ ಎಲ್ಲ ಹೆತ್ತವರಿಗೂ ಹಗ್ಗದ ಮೇಲಿನ ನಡಿಗೆಯ ಕಷ್ಟ (Parenting guide) ಅರಿವಾಗತೊಡಗುತ್ತದೆ. ಆ ವಯಸ್ಸಿನ ಮಕ್ಕಳ ಜತೆ ನೀವು ಹೇಗಿರಬೇಕು?

VISTARANEWS.COM


on

teenage parenting
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಮಕ್ಕಳು ಸಣ್ಣವರಿದ್ದಾಗ ಪೋಷಕರಿಗೆ ಮಕ್ಕಳೊಮ್ಮೆ ಬೆಳೆದು ದೊಡ್ಡವರಾಗಬಾರದೇ ಎನಿಸುತ್ತದೆ. ದೊಡ್ಡವರಾಗುತ್ತಿದ್ದಂತೆ, ಸಣ್ಣವರೇ ಇದ್ದಾಗ ನೆಮ್ಮದಿಯಾಗಿದ್ದೆವು ಅನಿಸುತ್ತದೆ. ಯಾಕೆಂದರೆ ಮಕ್ಕಳನ್ನು ಬೆಳೆಸುವುದೆಂದರೆ (parenting) ಅದು ಸಣ್ಣ ವಿಷಯವಲ್ಲ. ಅದು ಜೀವನದ ಮಹತ್ತರ ಜವಾಬ್ದಾರಿ. ಸಣ್ಣದೊಂದು ತಪ್ಪು ಹೆಜ್ಜೆ ಹೆತ್ತವರಾಗಿ ನೀವು ಇಟ್ಟರೂ ಅದರ ಪರಿಣಾಮವನ್ನು ನೀವೇ ನಿಮ್ಮ ಮಕ್ಕಳ ಜೀವನದಲ್ಲಿ ಎದುರಿಸಬೇಕಾಗುತ್ತದೆ. ಜೀವನಪರ್ಯಂತ ಕೊರಗಬೇಕಾಗುತ್ತದೆ. ಅದರಲ್ಲೂ ಮಕ್ಕಳು ಕಿಶೋರಾವಸ್ಥೆ ಅಂದರೆ ಟೀನೇಜ್‌ಗೆ (teenage) ಕಾಲಿಡುತ್ತಿದ್ದಂತೆ ಎಲ್ಲ ಹೆತ್ತವರಿಗೂ ಹಗ್ಗದ ಮೇಲಿನ ನಡಿಗೆಯ ಕಷ್ಟ (Parenting guide) ಅರಿವಾಗತೊಡಗುತ್ತದೆ. ಹಾಗಾದರೆ ಬನ್ನಿ, ಕಿಶೋರಾವಸ್ಥೆಗೆ (teenage behavior) ಕಾಲಿಟ್ಟ ನಿಮ್ಮ ಮಕ್ಕಳ ಜೊತೆಗೆ ನೀವು ಹೇಗಿರಬೇಕು (Parenting Tips) ಎಂಬುದನ್ನು ನೋಡೋಣ.

1. ಕಿಶೋರಾವಸ್ಥೆ ಅಥವಾ ಟೀನೇಜ್‌ ಎಂಬುದು ಮಕ್ಕಳಿಗೆ ಅತ್ಯಂತ ಕಷ್ಟಕರವಾದ ಘಟ್ಟ. ಹಾಗಾಗಿ ಅಂತಹ ಸಂದರ್ಭದಲ್ಲಿ ಮಕ್ಕಳ ಮಾನಸಿಕ ಆರೋಗ್ಯದತ್ತ ಗಮನ ಹರಿಸಬೇಕಾದ್ದು ಪೋಷಕರ ಕರ್ತವ್ಯ. ಈ ಸಂದರ್ಭ ಮನೆಯಲ್ಲಿ ಪೂರಕ, ಸ್ನೇಹಮಯ ಪ್ರೀತಿಯ ವಾತಾವರಣ ಮಕ್ಕಳಿಗೆ ಇರುವಂತೆ ನೋಡಿಕೊಳ್ಳುವುದು ಮುಖ್ಯ.

2. ಮಕ್ಕಳು ತಮ್ಮದೇ ಆಲೋಚನೆಗಳನ್ನು ನಿಧಾನವಾಗಿ ಬೆಳೆಸಿಕೊಳ್ಳುವ ವಯಸ್ಸಿದು. ತಮ್ಮದೇ ಆಸಕ್ತಿಗಳು, ತಾವು ಬಯಸುವ ಕ್ಷೇತ್ರ, ಕನಸುಗಳು, ಯೋಜನೆಗಳು ಇತ್ಯಾದಿಗಳು ಅವರ ಪುಟ್ಟ ತಲೆಯಲ್ಲಿ ಬೆಳೆಯುವ ಹೊತ್ತು. ಮಕ್ಕಳ ಜೊತೆಗೆ ಈ ವಯಸ್ಸಿನಲ್ಲಿ ಅಗತ್ಯವಾಗಿ ನಿಮ್ಮ ಸಾಥ್‌ ಬೇಕು. ಹಾಗಾಗಿ, ಅವರಿಗಾಗಿ ಸ್ವಲ್ಪ ಸಮಯ ಮೀಸಲಿಡಿ. ಅವರ ಆಲೋಚನೆಗಳು, ಕನಸುಗಳು ಇತ್ಯಾದಿಗಳನ್ನು ಅವರ ಜೊತೆ ಚರ್ಚೆ ಮಾಡಲು ಸಮಯ ಕೊಡಿ.

3. ಸಾಮಾಜಿಕ ಜಾಲತಾಣಗಳ (Social media) ಬಳಕೆ ಬಗೆಗೆ ಕಾಳಜಿ ಅತ್ಯಂತ ಅಗತ್ಯ. ನಿಮ್ಮ ಮಕ್ಕಳು ಸಾಮಾಜಿಕ ಜಾಲತಾಣವನ್ನು ಎಷ್ಟು ಹೊತ್ತು ಬಳಸುತ್ತಿದ್ದಾರೆ? ಯಾಕೆ ಬಳಸುತ್ತಿದ್ದಾರೆ ಹಾಗೂ ಹೇಗೆ ಬಳಸುತ್ತಿದ್ದಾರೆ ಎಂಬುದರ ಅರಿವು ಪೋಷಕರಿಗಿರಬೇಕು. ಅಷ್ಟೇ ಅಲ್ಲ, ನಿಮ್ಮ ಮಕ್ಕಳಿಗೆ ಆನ್‌ಲೈನ್‌ ಸೇಫ್ಟಿ (online safety) ಹಾಗೂ ಸೈಬರ್‌ ಕ್ರೈಮ್‌ (cyber crime) ಬಗೆಗೆ ತಿಳಿದಿರುವುದು ಅತ್ಯಂತ ಅವಶ್ಯಕ.

4. ಮಕ್ಕಳಿಗೆ ಸೂಕ್ತ ಲೈಂಗಿಕ ತಿಳುವಳಿಕೆ (Sexual education) , ಸಮಾಜದಲ್ಲಿರುವ ಕೆಟ್ಟ ಪಿಡುಗುಗಳು ಇತ್ಯಾದಿಗಳ ಬಗ್ಗೆ ಅರಿವು ಮೂಡಿಸುವುದು ಈ ವಯಸ್ಸಿನಲ್ಲಿ ಅತ್ಯಗತ್ಯ. ನಾಚಿಕೆ, ಮುಜುಗರ ಪಡದೆ, ಮಕ್ಕಳು ತಮ್ಮ ಎಲ್ಲವನ್ನೂ ನಿಮ್ಮ ಜೊತೆ ಹಂಚಿಕೊಳ್ಳಬಹುದಾದ, ತಮ್ಮ ಅರಬರೆ ವಿಷಯ ಜ್ಞಾನದಿಂದಾಗಿ ಭಯ ಬೀಳುವ ಪರಿಸ್ಥಿತಿ ಉಂಟಾಗದಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿ ಪೋಷಕರಾಗಿ ನಿಮ್ಮ ಮೇಲಿದೆ ಎಂದು ಮರೆಯಬೇಡಿ.

5. ಕೆಟ್ಟ ಚಟಗಳು, ಕೆಟ್ಟ ಗೆಳೆತನಗಳು, ಕೆಟ್ಟ್ವರ ಸಹವಾಸವೂ ಆಗುವುದು ಇಂಥ ವಯಸ್ಸಿನಲ್ಲಿಯೇ. ಆದ್ದರಿಂದ ಮಕ್ಕಳ ಜೊತೆಗಿನ ಬಾಂಧವ್ಯ, ಅವರ ಗೆಳೆಯರ ಬಗೆಗೆ, ಅವರ ದಿನಚರಿ ಬಗೆಗೆ ನಿಮಗೆ ಗೊತ್ತಿರಲಿ. ನಿಮ್ಮ ಅವರ ಚಟುವಟಿಕೆಗಳ ನಡುವೆ ಒಂದು ಪಾರದರ್ಶಕ ವಾತಾವರಣ ಇರುವಂತೆ ನೋಡಿಕೊಳ್ಳಿ. ಹಾಗಂತ ಇದು ಬಂಧನದ ಹಾಗೆ ಇರದಿರಲಿ. ಒಂದು ಆರೋಗ್ಯಕರ ಅನ್ಯೋನ್ಯ ವಾಥಾವರಣ ಮನೆಯಲ್ಲಿದ್ದಾಗ ಮಕ್ಕಳು ಹಾದಿ ತಪ್ಪುವುದಿಲ್ಲ ಎಂಬುದು ನೆನಪಿಡಿ. ಮಕ್ಕಳಿಗೆ ಮನೆಯ ವಾತಾವರಣ ಉಸಿರುಗಟ್ಟದಂತೆ ಇಡುವುದು ನಿಮ್ಮ ಕರ್ತವ್ಯ.

6. ಬಹಳಷ್ಟು ಸಾರಿ ನಮಗೆ ಮಕ್ಕಳ ವಿಚಾರದಲ್ಲಿ ಎಲ್ಲಿ ಲಕ್ಷ್ಮಣರೇಖೆ ಹಾಕಬೇಕೆಂದು ತಿಳಿಯುವುದಿಲ್ಲ. ಕೆಲವೊಮ್ಮೆ ಲಕ್ಷ್ಮಣ ರೇಖೆ ಹಾಕಿದ್ದರಿಂದಲೇ ಸಮಸ್ಯೆ ಉದ್ಭವಿಸಿರುತ್ತದೆ. ಅಥವಾ ಲಕ್ಷ್ಮಣರೇಖೆ ಹಾಕದ ಕಾರಣದಿಂದಲೇ ತೊಂದರೆ ಎದುರಾಗುತ್ತದೆ. ಹಾಗಾಗಿ, ಎಲ್ಲಿ, ಯಾವಾಗ, ಎಷ್ಟು ಹಿಡಿತ ಇಟ್ಟುಕೊಳ್ಳಬೇಕೆಂಬುದನ್ನು ಅರಿತು ಮುಂದುವರಿಯಿರಿ. ಮಕ್ಕಳ ಜೊತೆಗೆ ಮಾತುಕತೆಯ ಚಂದದ ಬಾಂಧವ್ಯ ಬೆಳೆಸಿಕೊಳ್ಳಬೇಕಾದ್ದು ಬಹಳ ಮುಖ್ಯ.

7. ಮಕ್ಕಳಿಗೆ ಆರ್ಥಿಕ ವ್ಯವಹಾರಗಳ ಬಗೆಗೆ ಸಾಮಾನ್ಯ ಜ್ಞಾನ ಇರಬೇಕು. ಅವರಿಗಾಗಿ ಕೊಟ್ಟ ಪಾಕೆಟ್‌ ಮನಿಯ ಸದುಪಯೋಗ ಹೇಗೆ ಮಾಡಿಕೊಳ್ಳಬಹುದು ಎಂಬಿತ್ಯಾದಿ ಸಾಮಾನ್ಯ ತಿಳಿವಳಿಕೆ ಅವರಿಗೆ ಮೂಡಿಸಬೇಕು. ಮನೆಯಲ್ಲಿ ಎಷ್ಟೇ ಶ್ರೀಮಂತ ಪರಿಸ್ಥಿತಿ ಇದ್ದರೂ, ಹಣಕ್ಕೆ ಕೊರತೆ ಇಲ್ಲದಿದ್ದರೂ, ಮಕ್ಕಳಿಗೆ ಇದರ ಹಣದ ಮಹತ್ವ ಅರಿಯುವಂತೆ ಮಾಡುವುದು ಪೋಷಕರ ಆದ್ಯ ಕರ್ತವ್ಯ.

Social Media

8. ಮಕ್ಕಳನ್ನು ಬೆಳೆಸುವಾಗ ಅವರಿಗೆ ಉತ್ತಮ ಗುಣನಡತೆಗಳನ್ನೂ ಕಲಿಸುವುದು ಬಹಳ ಮುಖ್ಯ. ದೊಡ್ಡವರ ಜೊತೆ ಹೇಗಿರಬೇಕು, ಸತ್ಯ, ನ್ಯಾಯ, ಹಾಗೂ ಸಕಾರಾತ್ಮಕತೆ ಬಗೆಗೆ ಮಕ್ಕಳು ಬೆಳೆಯುತ್ತಲೇ ಅರಿಯುತ್ತ ಹೋಗಬೇಕು.

ಇದನ್ನೂ ಓದಿ: Parenting Tips: ಗಂಡುಮಕ್ಕಳು ಟಫ್‌ ಆಗಿರಬೇಕಾ? ಈ ಪೇರೆಂಟಿಂಗ್ ಮಿಥ್‌ಗಳಿಂದ ಹೊರಬನ್ನಿ!

9. ಮನೆಯ ಜವಾಬ್ದಾರಿಗಳನ್ನು ಅರಿತುಕೊಳ್ಳಬಹುದಾದ ವಯಸ್ಸಿದು. ಹಾಗಾಗಿ, ಮಕ್ಕಳನ್ನು ಈ ಸಂದರ್ಭ ಮನೆಯ ಕೆಲವು ಜವಾಬ್ದಾರಿಗಳಿಗೆ ಸಹಾಯಕ್ಕಾಗಿ ಬಳಸಿಕೊಳ್ಳಬಹುದು. ಅವರಿಗೂ ಬದುಕು ಸ್ವಲ್ಪ ಸ್ವಲ್ಪವೇ ಅರಿವು ಮೂಡಿಸಲು ಇದು ಸಕಾಲ. ಹಾಗಾಗಿ ಮನೆಯ ಕೆಲಸಗಳಲ್ಲಿ ಅವರನ್ನೂ ಭಾಗಿಯಾಗಿಸಬಹುದು.

10. ಮಕ್ಕಳು ತಮ್ಮದೇ ವ್ಯಕ್ತಿತ್ವ ಹೊಂದುವುದು ಅದರ ಬಗ್ಗೆ ಅವರಿಗೆ ಅರಿವು ಮೂಡುವುದನ್ನು ಅವರಿಗೆ ಪ್ರೇರಣೆ ನೀಡಬಹುದು.

11. ಜೀವನದಲ್ಲಿ ಪ್ರೀತಿಯ ಮಹತ್ವವನ್ನೂ ತಿಳಿಸಿಕೊಡಲು ಇದು ಸಕಾಲ. ಪ್ರೀತಿ, ದಯೆ, ಕರುಣೆ, ಇತರರಿಗೆ ಸಹಾಯ ಮಾಡುವುದು ಇತ್ಯಾದಿಗಳ ಬೆಲೆಯನ್ನು ಅರಿಯುವಂತೆ ಮಾಡಬಹುದಾದ ವಯಸ್ಸಿದು.

12. ಮಕ್ಕಳ ಮನಸ್ಸು ಬಹಳ ಸೂಕ್ಷ್ಮವಾದದ್ದು. ಮುಖ್ಯವಾಗಿ ಕಿಶೋರಾವಸ್ಥೆ ಬಹಳ ಸೂಕ್ಷ್ಮವಾದ ಘಟ್ಟ. ಅವರ ತಪ್ಪಿಲ್ಲದಿದ್ದಾಗಲೂ ಅವರು ತಪ್ಪಿತಸ್ಥನಾಗುವುದನ್ನು ನೀವು ತಪ್ಪಿಸಿ. ಮಕ್ಕಳಿಗೆ ಅವರ ಹಕ್ಕುಗಳಿವೆ, ಅದನ್ನು ಹೊಂದುವ ಸಂಪೂರ್ಣ ಅಧಿಕಾರ ಅವರಿಗಿದೆ ಎಂಬುದನ್ನು ಮರೆಯಬೇಡಿ.

ಇದನ್ನೂ ಓದಿ: Parenting Tips: ಮಿತಿ ಮೀರುವ ಮಕ್ಕಳ ಕೋಪ ನಿಯಂತ್ರಣಕ್ಕೆ ಐದು ಐಡಿಯಾಗಳು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ಲೈಫ್‌ಸ್ಟೈಲ್

Relationship Tips: ದಾಂಪತ್ಯದಲ್ಲಿ ಬಿರುಕು ಮೂಡಿಸುತ್ತವೆ ಈ 10 ಕಾರಣಗಳು!

ಕಾಲಾನಂತರದಲ್ಲಿ ಪತಿ ಪತ್ನಿಯರ ನಡುವೆ (Relationship Tips) ಉಂಟಾಗುವ ಭಿನ್ನಾಭಿಪ್ರಾಯಕ್ಕೆ ಕಾರಣಗಳನ್ನು ತಿಳಿದುಕೊಳ್ಳುವುದು ಮತ್ತು ಪರಿಹಾರಗಳನ್ನು ಕಂಡುಹಿಡಿಯುವುದು ಸಂಬಂಧವನ್ನು ಪುನರುಜ್ಜೀವನಗೊಳಿಸಲು ಮತ್ತು ವೈವಾಹಿಕ ಬಂಧವನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಗಂಡ ಹೆಂಡತಿಯಲ್ಲಿ ಅಥವಾ ಹೆಂಡತಿ ಗಂಡನಲ್ಲಿ ಆಸಕ್ತಿ ಕಳೆದುಕೊಳ್ಳಲು 10 ಸಾಮಾನ್ಯ ಕಾರಣಗಳಿವೆ. ಅವು ಯಾವುದು ಎನ್ನುವ ಮಾಹಿತಿ ಇಲ್ಲಿದೆ.

VISTARANEWS.COM


on

By

Relationship Tips

ಮದುವೆಯಾದ (Relationship) ಕೆಲವು ಸಮಯದವರೆಗೆ ಜೀವನ ಸುಂದರವಾಗಿ (life) ಇರುತ್ತದೆ. ಆದರೆ ಬಳಿಕ ಹೆಚ್ಚುವ ಜವಾಬ್ದಾರಿಗಳ ನಡುವೆ ಸಂಗಾತಿಗಳು (husband and wife) ದೈಹಿಕ, ಮಾನಸಿಕವಾಗಿ ದೂರವಾಗುತ್ತಾರೆ. ಇದನ್ನು ನಿರ್ವಹಿಸುವುದು ಕೆಲವೊಮ್ಮೆ ಸವಾಲಾಗಿ ಪರಿಣಮಿಸುತ್ತದೆ. ಇದು ಎಲ್ಲ ಮನೆಯಲ್ಲೂ ಸರ್ವೇ ಸಾಮಾನ್ಯ ವಿಚಾರವಾದರೂ ಸಮಯಕ್ಕೆ ಸರಿಯಾಗಿ ಸಂಬಂಧವನ್ನು (Relationship Tips) ಸರಿಪಡಿಸಿಕೊಳ್ಳದೇ ಇದ್ದರೆ ಪತಿ ಪತ್ನಿಯರ ನಡುವಿನ ಪ್ರೀತಿ, ಸ್ನೇಹ, ಬಾಂಧವ್ಯ ಮುರಿದು ಬೀಳುವ ಹಂತಕ್ಕೂ ಹೋದರೆ ಅಚ್ಚರಿಯಿಲ್ಲ.

ಹೀಗಾಗಿ ಕಾಲಾನಂತರದಲ್ಲಿ ಪತಿ ಪತ್ನಿಯರ ನಡುವೆ ಉಂಟಾಗುವ ಭಿನ್ನಾಭಿಪ್ರಾಯಕ್ಕೆ ಕಾರಣಗಳನ್ನು ತಿಳಿದುಕೊಳ್ಳುವುದು ಮತ್ತು ಪರಿಹಾರಗಳನ್ನು ಕಂಡುಹಿಡಿಯುವುದು ಸಂಬಂಧವನ್ನು ಪುನರುಜ್ಜೀವನಗೊಳಿಸಲು ಮತ್ತು ವೈವಾಹಿಕ ಬಂಧವನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಗಂಡ ಹೆಂಡತಿಯಲ್ಲಿ ಅಥವಾ ಹೆಂಡತಿ ಗಂಡನಲ್ಲಿ ಆಸಕ್ತಿ ಕಳೆದುಕೊಳ್ಳಲು 10 ಸಾಮಾನ್ಯ ಕಾರಣಗಳಿವೆ. ಇದನ್ನು ಪತ್ತೆ ಹಚ್ಚಿ ಪರಿಹರಿಸಲು ಪ್ರಯತ್ನಿಸಿದರೆ ಸಂಬಂಧದಲ್ಲಿ ಪ್ರೀತಿಯನ್ನು ಮತ್ತೆ ಹೊಸದಾಗಿ ಚಿಗುರಿಸಬಹುದು.

Relationship Tips


ಸಂವಹನದ ಕೊರತೆ

ಪರಿಣಾಮಕಾರಿ ಸಂವಹನವು ಪ್ರತಿಯೊಂದು ಸಂಬಂಧದ ಅಡಿಪಾಯವಾಗಿದೆ. ಸಂವಹನವು ಮುರಿದುಹೋದಾಗ ತಪ್ಪು ತಿಳುವಳಿಕೆ ಮತ್ತು ಅಸಮಾಧಾನಗಳು ಕಾಣಿಸಿಕೊಳ್ಳುತ್ತದೆ. ಇದು ಒಬ್ಬರ ಮೇಲೆ ಇನ್ನೊಬ್ಬರು ಆಸಕ್ತಿ ಕಳೆದುಕೊಳ್ಳಲು ಕಾರಣವಾಗುತ್ತದೆ. ಇದನ್ನು ಪರಿಹರಿಸಲು, ದಂಪತಿ ತಮ್ಮ ಭಾವನೆ, ಆಲೋಚನೆ ಮತ್ತು ಕಾಳಜಿಗಳ ಬಗ್ಗೆ ಮುಕ್ತವಾಗಿ ಮಾತನಾಡಲು ಸಮಯವನ್ನು ನೀಡಬೇಕು. ಇದಕ್ಕಾಗಿ ನಿಯಮಿತ ಸಮಯವನ್ನು ನಿಗದಿಪಡಿಸುವುದು ಒಳ್ಳೆಯದು.

ದಿನಚರಿ

ಪ್ರತಿಯೊಬ್ಬರ ದಿನಚರಿಯು ಏಕತಾನತೆಯಿಂದ ಕೂಡಿರುತ್ತದೆ. ಇದು ಸಂಬಂಧವು ಹಳಸಿದ ಭಾವನೆಯನ್ನು ಉಂಟು ಮಾಡುತ್ತದೆ. ಇದನ್ನು ನಿರ್ವಹಿಸಲು ದಂಪತಿ ಹೊಸ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಒಟ್ಟಿಗೆ ಸಮಯ ಕಳೆಯಲು ವಿಶೇಷ ಯೋಜನೆ ಹಾಕಿಕೊಳ್ಳುವುದು, ಹೊಸ ಹವ್ಯಾಸಗಳನ್ನು ಒಟ್ಟಿಗೆ ಪ್ರಯತ್ನಿಸುವುದು ಅಥವಾ ಪ್ರಯಾಣ ಮಾಡುವುದು ಸಹ ಸಂಬಂಧದಲ್ಲಿ ಉತ್ಸಾಹ ಮತ್ತು ನವೀನತೆಯನ್ನು ತುಂಬುತ್ತದೆ.

ನಿರ್ಲಕ್ಷ್ಯ

ಪತಿ ಪತ್ನಿಯರಲ್ಲಿ ದೈಹಿಕ ಅನ್ಯೋನ್ಯತೆ ವೈವಾಹಿಕ ಸಂಬಂಧದ ನಿರ್ಣಾಯಕ ಅಂಶವಾಗಿದೆ. ಅದು ಕಡಿಮೆಯಾದಾಗ ನಿರ್ಲಿಪ್ತತೆಯ ಭಾವನೆಗೆ ಕಾರಣವಾಗಬಹುದು. ದಂಪತಿ ದೈಹಿಕ ನಿಕಟತೆಗೆ ಆದ್ಯತೆ ನೀಡಬೇಕು. ಈ ಮೂಲಕ ನಿಯಮಿತವಾಗಿ ಪ್ರೀತಿಯನ್ನು ವ್ಯಕ್ತಪಡಿಸಬೇಕು. ಇದು ಅವರ ಸಂಬಂಧದ ಪ್ರಮುಖ ಭಾಗವಾಗಿದೆ. ಇದಕ್ಕಾಗಿ ಕೈಗಳನ್ನು ಹಿಡಿಯುವುದು, ತಬ್ಬಿಕೊಳ್ಳುವುದು ಇತ್ಯಾದಿ.

Relationship Tips


ಭಾವನಾತ್ಮಕ ಸಂಪರ್ಕ

ಆರೋಗ್ಯಕರ ದಾಂಪತ್ಯಕ್ಕೆ ಭಾವನಾತ್ಮಕ ಸಂಪರ್ಕ ಅತ್ಯಗತ್ಯ. ಭಾವನಾತ್ಮಕ ಅಂತರವನ್ನು ಕಡಿಮೆ ಮಾಡಲು ದಂಪತಿ ಭಾವನಾತ್ಮಕವಾಗಿ ಬೆಂಬಲ ನೀಡುವಲ್ಲಿ ಕೆಲಸ ಮಾಡಬೇಕು. ವೈಯಕ್ತಿಕ ಅನುಭವಗಳನ್ನು ಹಂಚಿಕೊಳ್ಳುವುದು, ಸಹಾನುಭೂತಿ ಮತ್ತು ಮೆಚ್ಚುಗೆಯನ್ನು ತೋರಿಸುವುದು ಭಾವನಾತ್ಮಕ ಅನ್ಯೋನ್ಯತೆ ಮತ್ತು ನಿಕಟತೆಯನ್ನು ಪುನರ್ ನಿರ್ಮಿಸಲು ಸಹಾಯ ಮಾಡುತ್ತದೆ.

ಒತ್ತಡಗಳು

ಕೆಲಸ ಅಥವಾ ಆರ್ಥಿಕ ಒತ್ತಡಗಳಂತಹ ಬಾಹ್ಯ ಒತ್ತಡಗಳು ದಾಂಪತ್ಯದ ಜೀವನದ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ಈ ಒತ್ತಡಗಳು ಕಿರಿಕಿರಿ ಮತ್ತು ಬೇರ್ಪಡುವಿಕೆಗೆ ಕಾರಣವಾಗಬಹುದು. ಇದನ್ನು ನಿರ್ವಹಿಸಲು ದಂಪತಿ ಒತ್ತಡ ನಿವಾರಣೆ ತಂತ್ರಗಳನ್ನು ಒಟ್ಟಿಗೆ ಅಭ್ಯಾಸ ಮಾಡಬೇಕು. ಉದಾಹರಣೆಗೆ ವ್ಯಾಯಾಮ ಮಾಡುವುದು, ಧ್ಯಾನ ಮಾಡುವುದು ಅಥವಾ ಅಗತ್ಯವಿದ್ದರೆ ವೃತ್ತಿಪರ ಸಲಹೆಯನ್ನು ಪಡೆಯುವುದು, ಕಷ್ಟದ ಸಮಯದಲ್ಲಿ ಒಬ್ಬರನ್ನೊಬ್ಬರು ಬೆಂಬಲಿಸುವುದು ವೈವಾಹಿಕ ಬಂಧವನ್ನು ಬಲಪಡಿಸುತ್ತದೆ.

ಮೆಚ್ಚುಗೆಯ ಕೊರತೆ

ಮೆಚ್ಚುಗೆಯಿಲ್ಲದ ಭಾವನೆಯು ಅತೃಪ್ತಿ ಮತ್ತು ನಿರಾಸಕ್ತಿಗಳಿಗೆ ಕಾರಣವಾಗಬಹುದು. ಗಂಡ ಹೆಂಡತಿಯ, ಹೆಂಡತಿ ಗಂಡನ ಪ್ರಯತ್ನಗಳು ಮತ್ತು ಕೊಡುಗೆಗಳಿಗೆ ಮೆಚ್ಚುಗೆಯನ್ನು ತೋರಿಸಲು ಪ್ರಜ್ಞಾಪೂರ್ವಕ ಪ್ರಯತ್ನವನ್ನು ಮಾಡಬೇಕು. ಮೌಲ್ಯಯುತವಾದ ವಿಚಾರಗಳನ್ನು ಹಂಚಿಕೊಳ್ಳುವ ಮೂಲಕ ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲುವುದು ಸಂಬಂಧವನ್ನು ಗಟ್ಟಿಗೊಳಿಸುತ್ತದೆ

ಸಂಘರ್ಷಗಳು

ದೀರ್ಘಕಾಲದ ಸಮಸ್ಯೆಗಳು ದಂಪತಿಯ ನಡುವೆ ಪರಸ್ಪರ ಆಸಕ್ತಿಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಹೀಗಾಗಿ ಯಾವುದೇ ಸಮಸ್ಯೆಗಳನ್ನು ಕೂಡಲೇ ಬಗೆ ಹರಿಸುವುದು ಒಳ್ಳೆಯದು. ದಂಪತಿಯ ನಡುವೆ ಆರೋಗ್ಯಕರ ಸಂಘರ್ಷವಿರಬೇಕು. ಇದಕ್ಕಾಗಿ ಪರಿಹಾರ ತಂತ್ರಗಳನ್ನು ದಂಪತಿ ಅಭ್ಯಾಸ ಮಾಡಬೇಕು. ಅಗತ್ಯವಿದ್ದರೆ, ವೃತ್ತಿಪರ ಮಧ್ಯಸ್ಥಿಕೆ ಅಥವಾ ಸಮಾಲೋಚನೆಯನ್ನು ಪಡೆಯಬಹುದು.

ಆದ್ಯತೆಗಳ ಬಗ್ಗೆ ಕಾಳಜಿ ಇರಲಿ

ದಂಪತಿಯ ನಡುವೆ ಆದ್ಯತೆಗಳ ಬಗ್ಗೆ ಕಾಳಜಿ, ಗೌರವ ಇರಲಿ. ವೈಯಕ್ತಿಕ ಆದ್ಯತೆ, ಗುರಿಗಳು ಬದಲಾದಂತೆ ದಂಪತಿಯ ನಡುವೆ ಬಿರುಕು ಕಾಣಿಸಿಕೊಳ್ಳಬಹುದು. ಹೀಗಾಗಿ ಪರಸ್ಪರರ ವೈಯಕ್ತಿಕ ಆಕಾಂಕ್ಷೆಗಳನ್ನು ಗೌರವಿಸುವುದು ಸಂಬಂಧದಲ್ಲಿ ಬಹುಮುಖ್ಯವಾಗಿದೆ.

Relationship Tips


ಸ್ವಯಂ ಕಾಳಜಿ

ಸ್ವಯಂ ಆರೈಕೆಯನ್ನು ನಿರ್ಲಕ್ಷಿಸಿದಾಗ ಅದು ಸಂಬಂಧದಲ್ಲಿ ಅತೃಪ್ತಿ ಮತ್ತು ನಿರಾಸಕ್ತಿಯ ಭಾವನೆಗಳಿಗೆ ಕಾರಣವಾಗಬಹುದು. ಇದಕ್ಕಾಗಿ ಸಂಗಾತಿಗಳು ತಮ್ಮ ದೈಹಿಕ, ಭಾವನಾತ್ಮಕ ಮತ್ತು ಮಾನಸಿಕ ಯೋಗಕ್ಷೇಮವನ್ನು ನೋಡಿಕೊಳ್ಳಬೇಕು. ಹವ್ಯಾಸಗಳನ್ನು ಮುಂದುವರಿಸಲು, ಆರೋಗ್ಯಕರ ಜೀವನಶೈಲಿಯನ್ನು ರೂಪಿಸಿಕೊಳ್ಳಬೇಕು.

ಇದನ್ನೂ ಓದಿ: Relationship Tips: ಇರಬೇಕಾದರೆ ಸಂಸಾರ ಸುಸೂತ್ರ, ಪಾಲಿಸಿ ಸುಗಮ ದಾಂಪತ್ಯದ 5 ಸೂತ್ರ!

ನಗುವಿನ ಕೊರತೆ

ಹಾಸ್ಯವಿಲ್ಲದ ಬದುಕು ದಾಂಪತ್ಯದಲ್ಲಿ ಬೇಸರ ಮೂಡಿಸಬಹುದು. ಹೀಗಾಗಿ ದಂಪತಿ ತಮ್ಮ ದೈನಂದಿನ ಜೀವನದಲ್ಲಿ ವಿನೋದ ಮತ್ತು ನಗುವನ್ನು ಅಳವಡಿಸಿಕೊಳ್ಳಲು ಪ್ರಯತ್ನ ಮಾಡಬೇಕು. ದಂಪತಿ ತಮ್ಮಲ್ಲಿ ಹಾಸ್ಯದ ಪ್ರಜ್ಞೆಯನ್ನು ಕಾಪಾಡಿಕೊಳ್ಳುವುದು ಮತ್ತು ಒಟ್ಟಿಗೆ ಮೋಜು ಮಾಡುವುದು ಸಂಬಂಧದಲ್ಲಿ ಉತ್ಸಾಹವನ್ನು ತುಂಬುತ್ತದೆ.

Continue Reading

ಮಹಿಳೆ

Mother’s Day: ಆಕೆಗಾಗಿ ಕೊಂಚ ಸಮಯ ನೀಡೋಣ; ತಾಯಂದಿರ ದಿನ ಅರ್ಥಪೂರ್ಣವಾಗಿ ಆಚರಿಸೋಣ

ಎಲ್ಲರ ಬದುಕಿನಲ್ಲಿ ತಾಯಿಯಾಗಿ ಒಬ್ಬಳು ಇದ್ದೇ ಇರುತ್ತಾಳೆ. ಅದು ಹೆಂಡತಿಯಾಗಿರಬಹುದು, ಸಹೋದರಿಯಾಗಿರಬಹುದು ಅಥವಾ ಜನ್ಮವಿತ್ತ, ಸಾಕಿ ಸಲಹಿದ ತಾಯಿಯಾಗಿರಬಹುದು. ಇಲ್ಲಿ ಅವರ ಸ್ಥಾನಕ್ಕಿಂತ ಅವರು ಮಾಡುವ ಕರ್ತವ್ಯಕ್ಕೆ ಗೌರವ ಕೊಡಲೇಬೇಕು. ಇದಕ್ಕಾಗಿ ವರ್ಷದಲ್ಲೊಮ್ಮೆ ತಾಯಂದಿರ ದಿನವನ್ನು (Mother’s Day) ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ಬಾರಿ ಇಂದು ಈ ದಿನ ವಿಶೇಷವಾಗಿದೆ.

VISTARANEWS.COM


on

By

Mother's Day

ತಾಳ್ಮೆ, ಸಹನೆ, ಶಾಂತಿ, ಪರಸ್ಪರ ಹೊಂದಾಣಿಕೆ ಇವನ್ನೆಲ್ಲ ಹೆಣ್ಣು (girl) ಮಕ್ಕಳಿಗೆ (child) ಯಾರೂ ಕಲಿಸಬೇಕಾಗಿಲ್ಲ. ಅದು ಅವರಿಗೆ ಹುಟ್ಟಿನಿಂದಲೇ ಬಂದಿರುತ್ತದೆ. ಎಂತಹ ಕಠಿಣ ಪರಿಸ್ಥಿತಿಯಾಗಿರಲಿ ತಾಯಿ (Mother’s Day) ಅದನ್ನು ಎದುರಿಸಲು ಕ್ಷಣ ಮಾತ್ರದಲ್ಲಿ ಸಜ್ಜಾಗುತ್ತಾಳೆ. ತಮ್ಮ ಮಕ್ಕಳ ವಿಚಾರಕ್ಕೆ ಬಂದರೆ ಆಕೆ ಯಾವುದೇ ತ್ಯಾಗಕ್ಕೂ ಸಜ್ಜಾಗುತ್ತಾಳೆ, ತನ್ನ ಪ್ರಾಣವನ್ನು ಒತ್ತೆ ಇಟ್ಟಾದರೂ ಸರಿ ಮಕ್ಕಳನ್ನು ಎಲ್ಲ ರೀತಿಯ ಸಂಕಷ್ಟದಿಂದ ಪಾರು ಮಾಡುತ್ತಾಳೆ.

ಎಲ್ಲರಿಗೂ ತಮ್ಮ ತಾಯಿಯ ಬಗ್ಗೆ ಹೇಳಬೇಕಾದ ಸಾವಿರಾರು ವಿಷಯಗಳಿರುತ್ತವೆ. ಇದಕ್ಕೆ ತಾಯಂದಿರ ದಿನಕ್ಕಿಂತ ಉತ್ತಮ ದಿನ ಬೇರೆ ಯಾವುದಿದೆ. ಹೆಣ್ಣು ತಾಯಿಯಾಗಿ, ಅಕ್ಕನಾಗಿ, ಅಜ್ಜಿಯಾಗಿ, ಮಗಳಾಗಿ, ಸ್ನೇಹಿತೆಯಾಗಿ ತನ್ನ ಕರ್ತವ್ಯವನ್ನು ಚೆನ್ನಾಗಿ ನಿಭಾಯಿಸುತ್ತಾಳೆ. ಹೀಗಾಗಿಯೇ ತಾಯಂದಿರ ದಿನದ ಈ ಶುಭ ಸಂದರ್ಭದಲ್ಲಿ ಆಕೆಗೊಂದು ಶುಭ ಸಂದೇಶ ಕಳುಹಿಸಲು ಮರೆಯದಿರಿ.

ಸಿಹಿ ಶುಭಾಶಯಗಳೊಂದಿಗೆ ಆಕೆಯನ್ನು ಗೌರವಿಸುವ ಜೊತೆಗೆ ಸುಂದರವಾದ ಹೂಗೊಂಚಲು, ಅರ್ಥಪೂರ್ಣವಾದ ಉಡುಗೊರೆ ಅಥವಾ ಅವಳೊಂದಿಗೆ ಸಮಯ ಕಳೆಯುವ ಮೂಲಕ ಮೆಚ್ಚುಗೆಯನ್ನು ತೋರಿಸಿ. ಇದು ಯಾವಾಗಲೂ ಆಕೆಯನ್ನು ಸಂತೋಷದಲ್ಲಿ ಇರುವಂತೆ ಮಾಡುತ್ತದೆ ಮತ್ತು ಸದಾ ಆಕೆಯ ನೆನಪಿನಲ್ಲಿ ಇರುವಂತೆ ಮಾಡುತ್ತದೆ.

ತಾಯಂದಿರ ದಿನದ ವಿಶೇಷವಾಗಿ ತಾಯಿಗೆ ವಿಶೇಷ ಅಡುಗೆ ಮಾಡಿ ಬಡಿಸಿ, ಇಲ್ಲವಾದರೆ ಅವರ ನೆಚ್ಚಿನ ರೆಸ್ಟೋರೆಂಟ್ ಗೆ ಹೋಗಿ ಊಟ ಮಾಡಿಸಿ. ಇದರಿಂದ ಸಾಕಷ್ಟು ಸಮಯವನ್ನು ಆಕೆಗೆ ನೀವು ಕೊಟ್ಟಂತಾಗುತ್ತದೆ.


ತಾಯಂದಿರ ದಿನ ಯಾವಾಗ?

ತಾಯಂದಿರ ದಿನವನ್ನು ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರ ಆಚರಿಸಲಾಗುತ್ತದೆ. ರಜಾ ದಿನದಲ್ಲಿ ಇದು ಬರುವುದರಿಂದ ಈ ದಿನವನ್ನು ಹೆಚ್ಚು ವಿಶೇಷವಾಗಿ ಆಚರಿಸಬಹುದಾಗಿದೆ.

ತಾಯಿಯಂದಿರ ದಿನವು ಈ ಬಾರಿ ಮೇ 12ರಂದು ಭಾನುವಾರ ಆಚರಿಸಲಾಗುತ್ತಿದೆ. ಪ್ರಪಂಚದಾದ್ಯಂತ ಈ ದಿನವನ್ನು ಬೇರೆಬೇರೆ ದಿನಗಳಂದು ಆಚರಿಸಲಾಗುತ್ತಿದೆ.

ಆಸ್ಟ್ರೇಲಿಯಾ, ಕೆನಡಾ, ಡೆನ್ಮಾರ್ಕ್, ಇಟಲಿ, ಫಿನ್‌ಲ್ಯಾಂಡ್, ಸ್ವಿಟ್ಜರ್ಲೆಂಡ್ ಮತ್ತು ಟರ್ಕಿ ಯಲ್ಲಿ ಈ ಬಾರಿ ಮೇ 12ರಂದು ಅಮ್ಮಂದಿರನ್ನು ಗೌರವಿಸಲಾಗುತ್ತಿದೆ. ಯುಕೆಯಲ್ಲಿ ಮಾರ್ಚ್‌ನಲ್ಲಿ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಮೆಕ್ಸಿಕೋ ಈ ವರ್ಷ ಮೇ 10 ರಂದು ತಾಯಂದಿರ ದಿನವನ್ನು ಆಚರಿಸಲಾಗಿದೆ. ಥೈಲ್ಯಾಂಡ್ ಆಗಸ್ಟ್ 12 ರಂದು ಈ ದಿನವನ್ನು ಆಚರಿಸಲಾಗುತ್ತದೆ. ಯಾಕೆಂದರೆ ಈ ದಿನ ಇಲ್ಲಿ ರಾಣಿ ಸಿರಿಕಿಟ್ ಅವರ ಜನ್ಮದಿನವಾಗಿದೆ.

ಯಾಕೆ ಆಚರಣೆ ?

ತಾಯಂದಿರ ದಿನದ ಆಚರಣೆಯು 1800 ರ ದಶಕದ ಅಂತ್ಯದಲ್ಲಿ ಪ್ರಾರಂಭಿಸಲಾಯಿತು. ಹಲವಾರು ವಿಭಿನ್ನ ಘಟನೆಗಳ ಸಂಯೋಜನೆಯಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಸಾಮಾಜಿಕ ಕಾರ್ಯಕರ್ತೆ ಮತ್ತು ಸಮುದಾಯ ಸಂಘಟಕಿ ಅನ್ನಾ ಮಾರಿಯಾ ರೀವ್ಸ್ ಜಾರ್ವಿಸ್ ಅವರು ಮೊದಲ ಬಾರಿಗೆ ತಾಯಂದಿರ ದಿನದ ಪ್ರಸ್ತಾಪವನ್ನು ಮುಂದಿಟ್ಟರು.

ತಾಯಂದಿರು ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಸಹಾಯ ಮಾಡುವ ಮಹಿಳಾ ಕ್ಲಬ್‌ಗಳ ಸ್ಥಾಪಕರಾದ ಜಾರ್ವಿಸ್ ಅವರು 1868 ರಲ್ಲಿ ತಾಯಂದಿರ ಸ್ನೇಹ ದಿನವನ್ನು ಆಯೋಜಿಸಿದರು, ಇದು ಅಂತರ್ಯುದ್ಧದ ಅನಂತರ ಒಕ್ಕೂಟ ಮತ್ತು ಒಕ್ಕೂಟದ ಸೈನಿಕರ ತಾಯಂದಿರನ್ನು ಸಾಮರಸ್ಯದಿಂದ ಒಟ್ಟುಗೂಡಿಸುವ ಉದ್ದೇಶವನ್ನು ಹೊಂದಿತ್ತು.

ಬಳಿಕ ಎರಡು ವರ್ಷಗಳ ಅನಂತರ 1870 ರಲ್ಲಿ ಜೂಲಿಯಾ ವಾರ್ಡ್ ಹೋವ್ ಅವರು ವಿಶ್ವ ಶಾಂತಿಯನ್ನು ಉತ್ತೇಜಿಸುವ ಪ್ರಯತ್ನದಲ್ಲಿ ತಾಯಿಯ ದಿನದ ಘೋಷಣೆಯನ್ನು ಮಾಡಿ ಜೂನ್‌ನಲ್ಲಿ ತಾಯಿಯ ದಿನವನ್ನು ಆಚರಿಸಲು ಒತ್ತಾಯಿಸಿದರು. ಆ ಸಮಯದಲ್ಲಿಯೇ ತಾಯಂದಿರನ್ನು ಗೌರವಿಸಲು ಕೆಲವು ರೀತಿಯ ಕಲ್ಪನೆಯನ್ನು ಅವರು ಮಂಡಿಸಿದ್ದರು. ಆದರೆ ಅದು ಸುಮಾರು 35 ವರ್ಷಗಳವರೆಗೆ ಸಾಧ್ಯವಾಗಲಿಲ್ಲ.

1905 ರಲ್ಲಿ ಜಾರ್ವಿಸ್ ಅವರ ಮರಣದ ಅನಂತರ ಅವರ ಮಗಳು ಅನ್ನಾ ಪತ್ರ ಬರೆಯುವ ಅಭಿಯಾನವನ್ನು ಪ್ರಾರಂಭಿಸಿದರು. ತನ್ನ ತಾಯಿಯ ಕೆಲಸವನ್ನು ಮಾತ್ರವಲ್ಲದೆ ಎಲ್ಲಾ ತಾಯಂದಿರಿಗೆ ಮತ್ತು ಅವರ ಮಕ್ಕಳ ಪರವಾಗಿ ಅವರು ಮಾಡುವ ತ್ಯಾಗವನ್ನು ಗೌರವಿಸಲು ತಾಯಂದಿರ ದಿನಾಚರಣೆಗೆ ಕರೆ ನೀಡಿದರು.

ತಾಯಂದಿರ ದಣಿವರಿಯದ ಕೆಲಸವನ್ನು ಗೌರವಿಸುವ ಸಲುವಾಗಿ ಅಧ್ಯಕ್ಷ ವುಡ್ರೊ ವಿಲ್ಸನ್ ಅವರು 1914 ರಲ್ಲಿ ಘೋಷಣೆಗೆ ಸಹಿ ಹಾಕಿ ಅಧಿಕೃತವಾಗಿ ಮೇ ತಿಂಗಳ ಎರಡನೇ ಭಾನುವಾರವನ್ನು ತಾಯಂದಿರ ದಿನವೆಂದು ಘೋಷಿಸಿದರು.

ಇದನ್ನೂ ಓದಿ: Viral News: ಇಂತಹ ಅಮ್ಮಂದಿರೂ ಇರ್ತಾರಾ? ಈ ಶಾಕಿಂಗ್‌ ವಿಡಿಯೊ ನೋಡಿದರೆ ನಿಮ್ಮ ರಕ್ತ ಕುದಿಯುವುದು ಖಚಿತ

ಪ್ರಾರಂಭದಲ್ಲಿ ತಾಯಂದಿರ ದಿನಚರಣೆಯ ಉದ್ದೇಶವೇ ಬೇರೆಯಾಗಿತ್ತು. ಆದರೆ ಇವತ್ತು ವ್ಯಾಪಾರೀಕರಣವಾಗಿದೆ. ಹೀಗಾಗಿ ರಜಾ ದಿನದಂದೇ ಎಲ್ಲರೂ ತಮ್ಮ ತಾಯೊಂದಿಗೆ ಸ್ವಲ್ಪ ಸಮಯ ಕಳೆಯಲಿ ಎನ್ನುವ ಉದ್ದೇಶದಿಂದ ಎಲ್ಲರೂ ಮೇ ತಿಂಗಳ ಎರಡನೇ ಭಾನುವಾರ ಈ ದಿನಾಚರಣೆಗೆ ಇಷ್ಟಪಡುತ್ತಾರೆ. ಹೀಗಾಗಿ ಇಂದು ವಿಶ್ವದಾದ್ಯಂತ ತಾಯಂದಿರ ದಿನ ಆಚರಿಸಲಾಗುತ್ತಿದೆ.

ನಿತ್ಯದ ಕೆಲಸದ ಜಂಜಾಟದಲ್ಲಿರುವ ಎಲ್ಲರಿಗೂ ಇವತ್ತು ತಾಯಂದಿರ ದಿನ ಆಚರಿಸುವುದು ಅನಿವಾರ್ಯವಾಗಿರುವುದರಿಂದ ಈ ದಿನ ಅಮೂಲ್ಯವಾದ ದಿನವಾಗಿ ಉಳಿದಿದೆ. ಹೀಗಾಗಿ ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸೋಣ. ಎಲ್ಲ ತಾಯಂದಿರಿಗೂ ಶುಭ ಹಾರೈಸೋಣ.

Continue Reading

Relationship

Parenting Tips: ಮಕ್ಕಳನ್ನು ಬೆಳಗ್ಗೆ ಬೇಗ ಏಳಿಸಿ ಶಾಲೆಗೆ ಹೊರಡಿಸುವುದೇ ಹೋರಾಟವೇ? ಇಲ್ಲಿವೆ ಟಿಪ್ಸ್!

ಹೆತ್ತ ಜೀವಗಳ ಬೆಳಗಿನ ಹೋರಾಟದ ದೃಶ್ಯ ಯಾವ ಯುದ್ಧಭೂಮಿಗೂ ಕಡಿಮೆ ಇರುವುದಿಲ್ಲ. ಮಕ್ಕಳನ್ನು ಬೆಳಗ್ಗೆ ಏಳಿಸುವ ಕಲೆ ನಿಮಗೆ ಕರತಲಾಮಲಕವಾಗಲು ಇಲ್ಲಿವೆ ಕೆಲವು (parenting tips) ಕಿವಿಮಾತುಗಳು.

VISTARANEWS.COM


on

kids morning

ಮಕ್ಕಳನ್ನು ಬೆಳೆಸುವುದು (good parenting) ಎಂದರೆ ಅದು ಸುಲಭದ ಕೆಲಸವಲ್ಲ. ಬಹಳ ಜವಾಬ್ದಾರಿಗಳನ್ನು ಬೇಡುವ ಕೆಲಸ. ಸಣ್ಣ ಮಗುವಿನ ತಾಯಿಗೆ, ನಿದ್ರೆಗೆಟ್ಟೂ ಕೆಟ್ಟೂ, ಎಷ್ಟೋ ಸಾರಿ ಮಕ್ಕಳು ಬೇಗನೆ ಶಾಲೆಗೆ ಹೋಗುವಷ್ಟು ದೊಡ್ಡದಾಗಿ ಬಿಟ್ಟರೆ ಸಾಕಪ್ಪಾ ಅನಿಸುತ್ತದೆ. ಆದರೆ ಶಾಲೆಗೆ ಹೋಗುವಷ್ಟು ಮಗು ದೊಡ್ಡದಾದ ಮೇಲೆಯೇ ಅದರ ಕಷ್ಟ ಅರಿವಾಗುವುದು. ಹೀಗೆ ಮಗುವೊಂದನ್ನು ಸಂಪೂರ್ಣ ದೊಡ್ಡವರನ್ನಾಗಿ ಮಾಡುವವರೆಗೆ ಹೆತ್ತವರು ಹಲವು ಹಾದಿಗಳನ್ನು ಸವೆಸಿರುತ್ತಾರೆ. ಪ್ರತಿಯೊಬ್ಬ ಹೆತ್ತವರಿಗೂ ಸವಾಲೆನಿಸುವುದು ಮಕ್ಕಳನ್ನು ಬೆಳಗ್ಗಿನ ಹೊತ್ತು ಶಾಲೆಗೆ ಹೊರಡಿಸುವ ಸಮಯ. ಬೆಳಗ್ಗೆ ಬೇಗ ಏಳಿಸಬೇಕು, ಸ್ನಾನ ಮಾಡಿಸಬೇಕು ಅಥವಾ ತಾನೇ ಸ್ನಾನ ಮಾಡುವಷ್ಟು ಮಗು ಬೆಳೆದಿದ್ದರೆ ಮಕ್ಕಳಿಗೆ ಬೇಗ ಬೇಗ ಸ್ನಾನ ಮುಗಿಸುವಂತೆ ಒತ್ತಡ ಹೇರಬೇಕು. ತಿಂಡಿ ರೆಡಿ ಮಾಡಬೇಕು, ಊಟದ ಡಬ್ಬಿಗೆ ನಿತ್ಯವೂ ಆಕರ್ಷಕ ತಿನಿಸುಗಳನ್ನು ರೆಡಿ ಮಾಡಬೇಕು, ಈ ನಡುವೆ ತಮಗೂ ತಿಂಡಿ ಮಾಡಬೇಕು, ಆಫೀಸಿಗೆ ಬುತ್ತಿ ಕಟ್ಟಿಕೊಳ್ಳಬೇಕು, ಅಬ್ಬಬ್ಬಾ, ಹೆತ್ತ ಜೀವಗಳ ಬೆಳಗಿನ ಹೋರಾಟದ ದೃಶ್ಯ ಯಾವ ಯುದ್ಧಭೂಮಿಗೂ ಕಡಿಮೆ ಇರುವುದಿಲ್ಲ. ಇಂಥ ಸಂದರ್ಭ ಈ ಎಲ್ಲ ತಯಾರಿಗಳ ನಡುವೆ ಮಕ್ಕಳನ್ನು ಹಾಸಿಗೆಯಿಂದ ಏಳಿಸುವುದೇ ದೊಡ್ಡ ಸವಾಲು. ಈ ಸವಾಲನ್ನು ಗೆದ್ದರೆ, ಯುದ್ಧದಲ್ಲಿ ಅರ್ಧ ಗೆದ್ದಂತೆ. ಹಾಗಾದರೆ ಬನ್ನಿ, ಮಕ್ಕಳನ್ನು ಬೆಳಗ್ಗೆ ಏಳಿಸುವ ಕಲೆ ನಿಮಗೆ ಕರತಲಾಮಲಕವಾಗಲು ಇಲ್ಲಿವೆ ಕೆಲವು (parenting tips) ಕಿವಿಮಾತುಗಳು.

1. ಮಕ್ಕಳಿಗೊಂದು ವೇಳಾಪಟ್ಟಿ ಇರಲಿ. ಮಕ್ಕಳು ಇಂಥ ಹೊತ್ತಿಗೆ ಏಳುವುದರಿಂದ ಹಿಡಿದು, ಹಲ್ಲುಜ್ಜುವುದು, ಸ್ನಾನ ಮಾಡುವುದು ಇತ್ಯಾದಿ ಪ್ರತಿಯೊಂದಕ್ಕೂ ನಿಗದಿತ ಸಮಯಾವಕಾಶವಿರಲಿ. ಆಗ ಮಕ್ಕಳು ತಮ್ಮ ಕೆಲಸಗಳನ್ನು ಒಂದೊಂದಾಗಿ ತಾವೇ ಮಾಡಿದ ಖುಷಿಯನ್ನು ಪಡೆಯುತ್ತಾರೆ. ಅಷ್ಟೇ ಅಲ್ಲ, ಇದನ್ನು ಮುಂದುವರಿಸಲು ಅವರಿಗೆ ಪ್ರೇರಣೆ ದೊರೆಯುತ್ತದೆ. ಒಂದನೇ ದಿನ ಮಕ್ಕಳು ಮಾಡಲಿಕ್ಕಿಲ್ಲ, ಎರಡನೇ ದಿನವೂ. ಆದರೆ, ನೀವು ಈ ಯೋಜನೆಯಿಂದ ಹಿಂಜರಿಯಬೇಡಿ. ಆಗ ಮಕ್ಕಳು ನಿಧಾನವಾಗಿ ತಮ್ಮ ಕೆಲಸವನ್ನು, ಪುಟ್ಟಪುಟ್ಟ ಜವಾಬ್ದಾರಿಗಳನ್ನು ನಿಭಾಯಿಸುವುದನ್ನು ಕಲಿಯುತ್ತಾರೆ.

2. ಸೂರ್ಯನ ಬೆಳಕು ಕೋಣೆಗೆ ಬರುವಂತಿರಲಿ. ಮುಖದ ಮೇಲೆ ಮುಂಜಾವಿನ ಬೆಳಕು ಬೀಳುವಾಗ ಅನುಭವವಾಗುವ ಆನಂದ ಮಕ್ಕಳು ಅನುಭವಿಸಲಿ.

3. ಬೆಳಗ್ಗೆ ಎದ್ದ ಕೂಡಲೇ ಮಕ್ಕಳ ಮನಸ್ಸನ್ನು ಖಷಿಯಾಗಿಸುವ ಒಂದು ಪುಟ್ಟ ಕೆಲಸಕ್ಕೆ ಜಾಗವಿರಲಿ. ಏನಾದರೊಂದು ಪುಟ ಓದುವುದಿರಬಹುದು, ಅಥವಾ ಒಂದು ಫ್ಯಾಮಿಲಿ ಹಗ್‌ ಕ್ಷಣವಿರಬಹುದು, ಅಥವಾ ಮಕ್ಕಳ ಇಷ್ಟದ ಹಾಡು ಪ್ಲೇ ಮಾಡುವುದಿರಬಹುದು ಹೀಗೆ ಏನಾದರೊಂದು ಪುಟ್ಟ ಖಷಿ ಪ್ರತಿ ದಿನ ಅವರಿಗಾಗಿ ಕಾದಿರಲಿ. ಎದ್ದ ಕೂಡಲೇ ಗಡಿಬಿಡಿ ಮಾಡುವುದು, ಲೇಟಾಗುತ್ತಿದೆ ಎಂದು ಕಿರುಚಾಡುವುದು ಇತ್ಯಾದಿಗಳನ್ನು ಬಿಟ್ಟು ಒಂದೈದು ನಿಮಿಷ ಶಾಂತವಾಗಿ ಪ್ರೀತಿಯಿಂದ ಮಾತನಾಡಿಸುವುದನ್ನು ಅಭ್ಯಾಸ ಮಾಡಿ. ಆಗ ಮಕ್ಕಳು ಬೆಳಗ್ಗೆದ್ದ ಕೂಡಲೇ, ಕಿರಿಕಿರಿ ಮಾಡುವುದಿಲ್ಲ.

4. ಮಕ್ಕಳಿಗೆ ಏಳಲು ಒಂದು ಅಲರಾಂ ಇಡುವುದನ್ನು ಅಭ್ಯಾಸ ಮಾಡಿ. ಆ ಅಲರಾಂ ಶಬ್ದ ತಮಾಷೆಯದ್ದೋ, ಅಥವಾ ಅವರಿಷ್ಟದ ಹಾಡೋ, ಮ್ಯೂಸಿಕ್ಕೋ ಇರಲಿ.

5. ಎಲ್ಲಕ್ಕಿಂತ ಮುಖ್ಯವಾಗಿ, ನಿಮ್ಮ ಕೆಟ್ಟ ಅಭ್ಯಾಸಗಳಿಂದ ಮಕ್ಕಳ ನಿದ್ದೆಯನ್ನು ಹಾಳು ಮಾಡಬೇಡಿ. ನೀವು ಶಿಸ್ತುಬದ್ಧ ಜೀವನ ನಡೆಸುತ್ತಿದ್ದರೆ, ಮಕ್ಕಳ ಇಂತಹ ಸಮಸ್ಯೆ ಸಾಕಷ್ಟು ಕಡಿಮೆಯಾಗುತ್ತದೆ. ಅದಕ್ಕಾಗಿಯೇ ಮಕ್ಕಳನ್ನು ಬೇಗನೆ ಒಂದು ನಿಗದಿತ ಸಮಯಕ್ಕೆ ಮಲಗಿಸುವುದನ್ನು ಅಭ್ಯಾಸ ಮಾಡಿಸಿ. ಏನೇ ಕಾರಣಗಳಿದ್ದರೂ ಇದನ್ನು ಏರುಪೇರು ಮಾಡಬೇಡಿ.

Kids outfits faded in Monsoon

6. ಮಕ್ಕಳು ಅವರಷ್ಟಕ್ಕೆ ಬೇಗನೆ ಎದ್ದು ಹಲ್ಲುಜ್ಜಿ ಮುಖ ತೊಳೆದು ಶಾಲೆಗೆ ರೆಡಿಯಾಗುವ ಕೆಲಸವನ್ನು ಯಾವ ಕಿರಿಕಿರಿಯೂ ಇಲ್ಲದೆ ಮಾಡಿದರೆ ಅವರಿಗೆ ರಿವಾರ್ಡ್‌ಗಳನ್ನು ಕೊಡಿ. ಸ್ಟಿಕ್ಕರ್‌, ಸ್ಮೈಲಿ, ಅವರಿಷ್ಟದ ಬ್ರೇಕ್‌ಫಾಸ್ಟ್‌ ಹೀಗೆ.

ಇದನ್ನೂ ಓದಿ: Parenting Tips: ನಿಮ್ಮ ಮಕ್ಕಳು ಅಡ್ಡ ಬೆಳೆಯದೆ, ಉದ್ದ ಬೆಳೆಯಬೇಕೆಂದರೆ ಈ ಆಹಾರವನ್ನೇ ನೀಡಿ!

7. ರಜೆಯ ದಿನಗಳಲ್ಲಿ ಮಕ್ಕಳನ್ನು ಬೆಳಗ್ಗೆ ಎದ್ದ ಮೇಲೆ ಪಾರ್ಕಿಗೆ ಕರೆದೊಯ್ಯುವುದು, ವಾಕಿಂಗ್‌ ಇತ್ಯಾದಿ ಕೆಲಸಗಳನ್ನು ಜೊತೆಯಾಗಿ ಮಾಡಬಹುದು. ಆಗ ಮಕ್ಕಳೊಡನೆ ಸಾಕಷ್ಟು ಸಮಯವೂ ದೊರೆಯುತ್ತದೆ. ಆಗ ರಜೆಯಲ್ಲೂ ಮಕ್ಕಳು ಇದೇ ಸಮಯಪಾಲನೆ ಮಾಡುತ್ತಾರೆ.

8. ಮಕ್ಕಳಿಗೆ ಬೆಳಗಿನ ಹೊತ್ತು ಅವರೇ ಮಾಡುವಂಥ, ಮಾಡಬಲ್ಲ ಏನಾದರೊಂದು ಸಣ್ಣ ಜವಾಬ್ದಾರಿ ಕೊಡಿ.

9. ಎಲ್ಲಕ್ಕಿಂತ ಮುಖ್ಯವಾಗಿ ಮಕ್ಕಳಿಗೆ ಏನೇ ಮಾಡಿದರೂ, ಏನೇ ಹೇಳಿದಿರೂ, ಅವರು ಕಲಿಯುವುದು ನೋಡಿದ್ದನ್ನು! ಹೀಗಾಗಿ ಮಕ್ಕಳಿಗೆ ನೀವೇ ರೋಲ್‌ ಮಾಡೆಲ್‌ ಆಗಿ. ಮಕ್ಕಳು ನಿಮ್ಮನ್ನು ನೋಡಿ ಕಲಿಯಲಿ. ಅವರು ನಿಮ್ಮನ್ನು ನೋಡಿ ಕಲಿಯುವಂಥದ್ದು ನಿಮ್ಮಲ್ಲೂ ಇರಲಿ. ಅವರಿಗೆ ನೀವೇ ಮೊದಲ ಪ್ರೇರಣೆ ಎಂಬುದು ಪ್ರತಿಯೊಂದು ಕೆಲಸದ ಸಂದರ್ಭವೂ ನಿಮಗೆ ನೆನಪಿರಲಿ.

ಇದನ್ನೂ ಓದಿ: Parenting Tips: ಹತ್ತು ವಯಸ್ಸಿನೊಳಗೆ ನಿಮ್ಮ ಮಕ್ಕಳಿಗೆ ಈ ಎಲ್ಲ ಜೀವನ ಕೌಶಲ್ಯಗಳು ತಿಳಿದಿರಲಿ!

Continue Reading

Relationship

Parenting Tips: ಹತ್ತು ವಯಸ್ಸಿನೊಳಗೆ ನಿಮ್ಮ ಮಕ್ಕಳಿಗೆ ಈ ಎಲ್ಲ ಜೀವನ ಕೌಶಲ್ಯಗಳು ತಿಳಿದಿರಲಿ!

ಮಕ್ಕಳು ಈ ವಯಸ್ಸಿನೊಳಗೆ ತಿಳಿಯಲೇಬೇಕಾದ ಕೌಶಲ್ಯಗಳಾವುವು, ಅವುಗಳನ್ನು ಹೆತ್ತವರು ಸೂಕ್ತ ಪೋಷಣೆಯಿಂದ ಹೇಗೆ ತಿಳಿಸಿಕೊಡಬಹುದು (parenting tips, parenting guide) ಎಂಬುದನ್ನು ನೋಡೋಣ.

VISTARANEWS.COM


on

parenting skills

ಇಂದು ಸಣ್ಣ ಕುಟುಂಬ ಪದ್ಧತಿಯಿಂದಾಗಿ (nuclear family) ಮಕ್ಕಳ ಮೇಲೆ ಹೆತ್ತವರಿಗೆ ಮುದ್ದು ಜಾಸ್ತಿ. ಹೀಗಾಗಿ ಮಕ್ಕಳು ತಮ್ಮ ವಯಸ್ಸಿಗೆ ಸರಿಯಾಗಿ ಕಲಿತುಕೊಳ್ಳಬೇಕಾದ ಎಷ್ಟೋ ವಿಚಾರಗಳಿಂದ, ಜೀವನ ಕೌಶಲ್ಯಗಳಿಂದ (Life skills) ವಂಚಿತರಾಗುತ್ತಾರೆ. ಹೆತ್ತವರಿಗೂ ಈ ಸಮಸ್ಯೆ ಅರ್ಥವಾಗುವುದಿಲ್ಲ. ಜೀವನದಲ್ಲಿ ಏರಬೇಕಾದ ಒಂದೊಂದೇ ಮೆಟ್ಟಿಲನ್ನು ಏರಲು ಕೆಲವು ಸಾಮಾನ್ಯ ಕೌಶಲ್ಯಗಳನ್ನು ಮಕ್ಕಳು 10 ವಯಸ್ಸಿನೊಳಗೇ ಕಲಿಯಬೇಕು. ಬನ್ನಿ, ಮಕ್ಕಳು ಈ ವಯಸ್ಸಿನೊಳಗೆ ತಿಳಿಯಲೇಬೇಕಾದ ಕೌಶಲ್ಯಗಳಾವುವು, ಅವುಗಳನ್ನು ಹೆತ್ತವರು ಸೂಕ್ತ ಪೋಷಣೆಯಿಂದ ಹೇಗೆ ತಿಳಿಸಿಕೊಡಬಹುದು (parenting tips, parenting guide) ಎಂಬುದನ್ನು ನೋಡೋಣ.

1. ಮಕ್ಕಳಿಗೆ ಸರಿಯಾಗಿ ಸಂವಹನ (clear communication) ಮಾಡುವ ಕಲೆ ಸಾಮಾನ್ಯವಾಗಿ ಈ ವಯಸ್ಸಿನೊಳಗೆ ಬರಬೇಕು. ಅಂದರೆ, ಯಾರ ಜೊತೆ ಹೇಗೆ ಮಾತನಾಡಬೇಕು ಎಂಬಿತ್ಯಾದಿ ವಿಚಾರಗಳ ಜೊತೆಗೆ ಭಾವನೆಗಳನ್ನು ಸ್ಪಷ್ಠವಾಗಿ, ಸರಳವಾಗಿ ಮತ್ತೊಬ್ಬರಿಗೆ ದಾಟಿಸುವುದು ಹೇಗೆ ಎಂಬುದು ಹತ್ತು ವಯಸ್ಸಿನೊಳಗೆ ಸಾಮಾನ್ಯವಾಗಿ ಮಕ್ಕಳಿಗೆ ಅರ್ಥವಾಗಬೇಕು. ಹೆತ್ತವರು ಇದನ್ನು ಮಕ್ಕಳಿಗೆ ತಿಳಿಸಿಕೊಡಬೇಕು.

2. ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸುವ (problem solving) ಕಲೆ, ಅವರ ಸಮಸ್ಯೆಗಳನ್ನು ಆದಷ್ಟೂ ಅವರೇ ಪರಿಹಾರ ಮಾಡಿಕೊಳ್ಳುವ ಚಾಕಚಕ್ಯತೆ ಇತ್ಯಾದಿಗಳು ಮಕ್ಕಳಿಗೆ ಈ ವಯಸ್ಸಿನೊಳಗೆ ಬಂದುಬಿಡುತ್ತದೆ. ಅವುಗಳು ಸಾಧ್ಯವಾಗುತ್ತಿಲ್ಲ ಎಂದಾದರೆ ಅವರನ್ನು ಸರಿಯಾದ ರೀತಿಯಲ್ಲಿ ಗೈಡ್‌ ಮಾಡುವುದು ಹೆತ್ತವರ ಕರ್ತವ್ಯ.

3. ಮಕ್ಕಳು ಸೋಲನ್ನು ಸಹಜವಾಗಿ ತೆಗೆದುಕೊಳ್ಳುವುದನ್ನು, ಹಾಗೂ ಸೋಲು ಬದುಕಿನಲ್ಲಿ ಸಾಮಾನ್ಯ ಎಂಬುದನ್ನು ಈ ವಯಸ್ಸಿನೊಳಗೆ ಅರ್ಥ ಮಾಡಿಕೊಳ್ಳಬೇಕು. ಅಂದರೆ, ಎಲ್ಲದರಲ್ಲೂ ತಾನೇ ಗೆಲ್ಲಬೇಕು ಎಂಬಿತ್ಯಾದಿ ಭಾವನೆಗಳಿದ್ದರೆ, ನಿಧಾನವಾಗಿ ಅದರಿಂದ ಹೊರಗೆ ಬಂದು ಸೋಲಿನ ಸಂದರ್ಭ ಅದನ್ನು ನಿಭಾಯಿಸುವುದು ಹೇಗೆ ಹಾಗೂ ಸೋಲನ್ನೇ ಗೆಲುವಿನ ಮೆಟ್ಟಿಲಾಗಿ ಹೇಗೆ ಸ್ವೀಕರಿಸುವುದು ಎಂಬಿತ್ಯಾದಿ ಜೀವನ ಪಾಠಗಳನ್ನು ಕಲಿಯುವ ಕಾಲ.

4. ಮಕ್ಕಳಿಗೆ ಸಣ್ಣ ಸಣ್ಣ ತಮ್ಮ ಜವಾಬ್ದಾರಿಗಳನ್ನು ಹೊರುವ ಕಾಲಘಟ್ಟವಿದು. ಮಕ್ಕಳು ತಮ್ಮ ಶಾಲೆ ವಸ್ತುಗಳನ್ನು, ಆಟಿಕೆಗಳನ್ನು ಸರಿಯಾದ ಜಾಗದಲ್ಲಿಡುವುದು, ತನ್ನ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಟೀಚರು ಕೊಟ್ಟ ಕೆಲಸಗಳನ್ನು ತಾನೇ ತಾನಾಗಿ ಪೂರ್ತಿ ಮಾಡುವ, ಹಾಗೂ ತಾನು ಮಾಡಬೇಕಾದ ಕೆಲಸ ಹಾಗೂ ಜವಾಬುದಾರಿಗಳ್ನು ಪಟ್ಟಾಗಿ ಕೂತು ಸಮಯದೊಳಗೆ ಮಾಡಿ ಮುಗಿಸುವುದು ಇತ್ಯಾದಿಗಳನ್ನು ಕಲಿಯುವ ವಯಸ್ಸಿದು. ಹತ್ತರೊಳಗೆ ಮಕ್ಕಳು ಇಷ್ಟಾದರೂ ಕಲಿಯಬೇಕು.

5. ಸಮಯ ಪಾಲನೆ (time management) ಕೂಡಾ ಮಕ್ಕಳು ಕಲಿಯಬೇಕು. ಸಮಯಕ್ಕೆ ಸರಿಯಾಗಿ ಎದ್ದು, ತಮ್ಮ ಕೆಲಸಗಳನ್ನು ಮಾಡಿಕೊಳ್ಳುವುದು, ನಿಗದಿತ ಸಮಯದೊಳಗೆ ಕೆಲಸಗಳನ್ನು ಮುಗಿಸುವುದು, ಒಂದು ನಿರ್ದಿಷ್ಟ ಸಮಯದಲ್ಲಿ ಆಟವಾಡಲು ಹೋಗಿ ಬರುವುದು ಇತ್ಯಾದಿ ಮಕ್ಕಳು ಸಮಯ ಪಾಲನೆಯನ್ನು ಎಳವೆಯಲ್ಲಿಯೇ ರೂಢಿಸಿಕೊಳ್ಳಬಹುದು.

6. ತಮ್ಮ ಅಣ್ಣ ತಮ್ಮ ಅಕ್ಕ ತಂಗಿ ಜೊತೆ, ಬಂಧು ಬಳಗದ ಜೊತೆ ಪ್ರೀತಿಯಿಂದ ಇರುವುದು, ಕಾಳಜಿ ಮಾಡುವುದು (care taking) ಕೂಡಾ ಮಕ್ಕಳು ಈ ವಯಸ್ಸಿನಲ್ಲಿ ಕಲಿಯಬೇಕು.

7. ಅಡುಗೆ ಎಂಬುದು ಜೀವನಕ್ಕೆ ಅತ್ಯಂತ ಅಗತ್ಯವಾದ ಸ್ಕಿಲ್ (cooking skill).‌ ಮನೆಯಲ್ಲಿ ಅಮ್ಮನೋ, ಅಪ್ಪನೋ, ಅಡುಗೆಯವಳೋ ಮಾಡಿ ಕೊಡುವ ಊಟವನ್ನೇ ಜೀವನಪರ್ಯಂತ ತಿನ್ನುತ್ತಿದ್ದರೆ, ಅಡುಗೆ ಮಾಡಿ ಕೊಡುವವರಲ್ಲಿರುವ ಪ್ರೀತಿಯನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಬಹಳ ಸರಳವಾದ ಅಡುಗೆಗಳಾದ ಸ್ಯಾಂಡ್‌ವಿಚ್‌, ಮೊಟ್ಟೆ ಬೇಯಿಸುವುದು, ಜ್ಯೂಸ್‌, ಚೋಕೋಲೇಟ್‌ ಶೇಕ್‌ ಮಾಡಿಕೊಳ್ಳುವುದು ಇತ್ಯಾದಿ ಸರಳ ಪಟಾಪಟ್‌ ಅಡುಗೆಗಳನ್ನಾದರೂ ಮಕ್ಕಳು ಈ ವಯಸ್ಸಿನಲ್ಲಿ ಸ್ವಲ್ಪ ಕಲಿಯಬಹುದು.

8. ಮಕ್ಕಳಿಗೆ ಹಣದ ಮಹತ್ವವನ್ನು ತಿಳಿಸಿಕೊಡುವುದು (money management) ಬಹಳ ಅಗತ್ಯ. ಈ ವಯಸ್ಸಿನಲ್ಲಿ ಮಕ್ಕಳಿಗೆ ಹಣದ ಮೌಲ್ಯದ ಬಗೆಗೆ ತಿಳುವಳಿಕೆ ಮೂಡಬೇಕು. ತಮ್ಮದೇ ಪಿಗ್ಗಿ ಬ್ಯಾಕಿನಲ್ಲಿ ಹಣ ಶೇಖರಣೆ ಮಾಡುವುದು, ಹಣ ಉಳಿಕೆ ಮಾಡುವುದು ಇತ್ಯಾದಿ ಮಕ್ಕಳು ಈ ವಯಸ್ಸಿನಲ್ಲಿ ಕಲಿಯಬಹುದು.

9. ಆರೋಗ್ಯದ ಕಾಳಜಿಯನ್ನೂ ಮಕ್ಕಳು ತಮ್ಮ ಹತ್ತು ವಯಸ್ಸಿನೊಳಗೆ ಕಲಿತುಕೊಳ್ಳಬೇಕು. ಗಾಯವಾದರೆ ಏನು ಮಾಡಬೇಕು, ಫಸ್ಟ್‌ ಏಯ್ಡ್‌ ಬಳಸುವುದು ಹೇಗೆ, ತುರ್ತು ಘಟಕವನ್ನು ಸಂಪರ್ಕಿಸುವುದು ಹೇಗೆ ಇತ್ಯಾದಿ ಸಾಮಾನ್ಯ ಜ್ಞಾನ ಮಕ್ಕಳಿಗೆ ಈ ವಯಸ್ಸಿನೊಳಗೆ ಹೇಳಿ ಕೊಡಬೇಕು.

ಇದನ್ನೂ ಓದಿ: Parenting Guide: ಮಕ್ಕಳ ಮೇಲೆ ಎಲ್ಲದಕ್ಕೂ ಹರಿಹಾಯುವ ಮುನ್ನ ಈ ಸೂತ್ರಗಳತ್ತ ಒಮ್ಮೆ ಕಣ್ಣಾಡಿಸಿ!

Continue Reading
Advertisement
HD Revanna
Latest15 hours ago

ಸಚಿವ ಜಮೀರ್‌ರಿಂದ ಸಾಕಷ್ಟು ಅನುಭವಿಸಿದ್ದೇನೆ, ಅವರನ್ನು ಮತ್ತೆ ಜೆಡಿಎಸ್‌ಗೆ ಸೇರಿಸಿಕೊಳ್ಳಲ್ಲ; ಕುಮಾರಸ್ವಾಮಿ ಸ್ಪಷ್ಟೋಕ್ತಿ

Latest15 hours ago

ಮತದಾನಕ್ಕೆ ಕ್ಯೂನಲ್ಲಿ ನಿಂತರೂ ಕಷ್ಟ; ನಿಲ್ಲದಿದ್ದರೂ ಕಷ್ಟ: ಹಾಗಾದ್ರೆ ನಟ ಕಮಲ್‌ ಹಾಸನ್‌ ಏನು ಮಾಡಬೇಕಿತ್ತು?

Latest16 hours ago

ವಿಜಯ್ ಪಕ್ಷಕ್ಕೆ ಮತ ಚಲಾಯಿಸಲು ಸಾಧ್ಯವಾಗದೆ ಬಿಕ್ಕಿ ಬಿಕ್ಕಿ ಅತ್ತ ಯುವತಿ! ವಿಡಿಯೋ ವೈರಲ್

Latest16 hours ago

ಸಮಂತಾ ಕೇಳಿದ ಪ್ರಶ್ನೆಗೆ ದಿಗಂತ್ ಶಾಕ್! ‘ದೂದ್ ಪೇಡ’ ಅಂದ್ರೆ ಯಾರು ಎಂದಿದ್ದಕ್ಕೆ ‘ಚಾಕೊಲೇಟ್ ಹೀರೊ’ ನೀಡಿದ ರಿಯಾಕ್ಷನ್ ಹೇಗಿತ್ತು?

Latest16 hours ago

ಮಹಿಳಾ ಮೀಸಲಾತಿ: ಡಿಎಂಕೆ ಹುನ್ನಾರಕ್ಕೆ ರಾಜ್ಯ ಬಲಿ ಕೊಡುತ್ತಿರುವ ಸಿಎಂ ಸಿದ್ದರಾಮಯ್ಯ: ಬಸವರಾಜ ಬೊಮ್ಮಾಯಿ ಆರೋಪ

Latest16 hours ago

ಬೆಸ್ಕಾಂ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಚಾಲನೆ; ಹೆಚ್‌ಟಿ ಗ್ರಾಹಕರಿಗೆ ಅನುಕೂಲ

Latest16 hours ago

ಟ್ರಂಪ್ ಸೋಷಿಯಲ್ ಮೀಡಿಯಾದಲ್ಲಿ ಭಾರತಕ್ಕೆ ಅವಮಾನ: ಭಾರತ-ಚೀನಾ ‘ನರಕ’ ಎಂದ ಮೈಕೆಲ್ ಸ್ಯಾವೇಜ್ ಪೋಸ್ಟ್ ಹಂಚಿಕೊಂಡ ಅಧ್ಯಕ್ಷ

HD DeveGowda Wont celebrate 92nd birthday
Latest17 hours ago

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಬಸವ ಶ್ರೀ, ಗುರುರಾಜ ಕರ್ಜಗಿ ಅವರಿಗೆ ವಚನ ಸಾಹಿತ್ಯಶ್ರೀ ಪ್ರಶಸ್ತಿ

Latest17 hours ago

ಪಶ್ಚಿಮ ಬಂಗಾಳ: ಬಿಜೆಪಿ ಅಭ್ಯರ್ಥಿ ಮೇಲೆ ಹಲ್ಲೆ; ಥಳಿಸಿದ ಗ್ರಾಮಸ್ಥರು

Latest17 hours ago

ಪಂಚರಾಜ್ಯ ಚುನಾವಣೆ ನಂತರ,ಪೆಟ್ರೋಲ್‌,ಡೀಸೆಲ್‌ ದರ ಏರಿಕೆ ಇಲ್ಲ : ಕೇಂದ್ರದ ಸ್ಪಷ್ಟನೆ

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ2 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌