smart kitchen: ಜಾಣ ಅಡುಗೆಗೆ ಒಂದಿಷ್ಟು ಕಿವಿಮಾತುಗಳು - Vistara News

ಆಹಾರ/ಅಡುಗೆ

smart kitchen: ಜಾಣ ಅಡುಗೆಗೆ ಒಂದಿಷ್ಟು ಕಿವಿಮಾತುಗಳು

ಅಡುಗೆ ಕಿರಿಕಿರಿ ಅಂದುಕೊಂಡರೆ ಅದರ ಸೂಕ್ಷ್ಮಗಳು ನಿಮಗೆ ಗೊತ್ತಾಗಿಲ್ಲ ಎಂದರ್ಥ. ಸ್ಮಾರ್ಟ್‌ ಆಗಿ ಅಡುಗೆ ಮಾಡಲು ಕಲಿತರೆ ಅಡುಗೆಯೂ ಆನಂದದ ಸಂಗತಿಯಾಗುತ್ತದೆ.

VISTARANEWS.COM


on

kitchen
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಡುಗೆ ಗೊತ್ತಿದ್ದರಷ್ಟೆ ಸಾಲದು. ಬಹಳ ಸಾರಿ ಸಣ್ಣಪುಟ್ಟ ಉಪಾಯಗಳು ಅಡುಗೆಯನ್ನು ಸುಲಭವಾಗಿಯೂ ಸರಳವಾಗಿಯೂ ಬದಲಾಯಿಸಿಬಿಡುತ್ತದೆ. ಅಷ್ಟೇ ಅಲ್ಲ, ಅಡುಗೆಯೊಂದು ಬಹಳ ಮಜಾ ಕೊಡುವ ಕೆಲಸ ಅನಿಸಿಕೊಳ್ಳಲು, ಆಗಾಗ ಮಾಡಿಕೊಳ್ಳುವ ಮಾರ್ಪಾಡುಗಳು, ಕಿರಿಕಿರಿಯೆನ್ನುವ ವಿಚಾರಗಳಿಗೆ ಸರಳೋಪಾಯಗಳು, ರುಚಿ ಹೆಚ್ಚು ಮಾಡಲು ಅನುಸರಿಸಬೇಕಾದ ಸಣ್ಣ ಟ್ವಿಸ್ಟ್‌ ಎಲ್ಲವೂ ಬಹುಮುಖ್ಯವಾಗುತ್ತದೆ. ಹಾಗಾಗಿಯೇ ಇಂದಿನ ಕಾಲದಲ್ಲಿ, ಕೇವಲ ಅಡುಗೆ ಗೊತ್ತಿದ್ದರಷ್ಟೆ ಸಾಲದು, ಜಾಣತನದಿಂದ ಚುಟುಕಾಗಿ ನಿರ್ವಹಿಸುವ ಕಲೆಯೂ ಗೊತ್ತಿರಬೇಕು!

ಹೊಸತೊಂದು ಅಡುಗೆ ಟ್ರೈ ಮಾಡುತ್ತಿದ್ದೀರೆಂದಿಟ್ಟುಕೊಳ್ಳಿ. ಕೇವಲ ಆ ತಿಂಡಿಯ ಹೆಸರು ಕೇಳಿಯೇ ಬಾಯಲ್ಲಿ ನೀರೂರಿ ಸೀದಾ ಅಡುಗೆಗೆ ರೆಡಿಯಾಗಬೇಡಿ. ಮೊದಲು ರೆಸಿಪಿಯನ್ನೊಮ್ಮೆ ಓದಿ ಅರ್ಥೈಸಿಕೊಳ್ಳಿ. ಅವರು ಹೇಳಿದವುಗಳೆಲ್ಲ ಮನೆಯಲ್ಲಿ ಇದೆಯೇ ಪರೀಕ್ಷಿಸಿಕೊಳ್ಳಿ. ಇದಕ್ಕೆ ತಗಲುವ ಸಮಯದ ಲೆಕ್ಕಾಚಾರವಿರಲಿ. ಹೆಚ್ಚಿಡಬೇಕಾದ ತರಕಾರಿಗಳನ್ನು ಮೊದಲೇ ಹೆಚ್ಚಿಡಿ. ಅವರು ಹೇಳಿದ ಪ್ರಮಾಣವನ್ನಷ್ಟೆ ಬಳಸಿ. ಆಗಷ್ಟೇ ಅಂದುಕೊಂಡದ್ದು ಹಾಗೆಯೇ ನಡೆಯುತ್ತದೆ. ಗಡಿಬಿಡಿಯಿಂದ ಅಡುಗೆ ಕೆಟ್ಟರೆ ಮೂಡೂ ಕೆಡುತ್ತದೆ.

ಈರುಳ್ಳಿ ಹೆಚ್ಚೋದು ಯಾರು ಎಂದು ತಲೆ ನೋವಾದರೆ, ಮೊದಲು ಈರುಳ್ಳಿಯನ್ನು ಎರಡು ಹೋಳು ಮಾಡಿ ನೀರಿನಲ್ಲಿ ನೆನೆಸಿಡಿ. ೧೦ ನಿಮಿಷ ಬಿಟ್ಟು ಹೆಚ್ಚಿ. ಕಣ್ಣು ಮೂಗಲ್ಲಿ ನೀರು ಸುರಿಸುತ್ತಾ ನೀವು ಕಷ್ಟ ಪಡುವುದು ಇದರಿಂದ ತಪ್ಪುತ್ತದೆ.

ಶುಂಠಿ ಬೆಳ್ಳುಳ್ಳಿ ಪೇಸ್ಟನ್ನು ಮೊದಲೇ ಮಾಡಿಟ್ಟು ಫ್ರಿಜ್‌ನಲ್ಲಿ ಶೇಖರಿಸಿಡುವ ಅಭ್ಯಾಸವಿದ್ದರೆ, ಇದು ಹೆಚ್ಚು ಕಾಲ ಫ್ರೆಶ್‌ ಆಗಿ ಕೆಡದಂತೆ ಉಳಿಯಲು ಸ್ವಲ್ಪ ಎಣ್ಣೆ ಹಾಗೂ ಉಪ್ಪನ್ನು ಸೇರಿಸಿ ಗಾಳಿಯಾಡದ ಡಬ್ಬದಲ್ಲಿ ಶೇಖರಿಸಿಡಿ.

ಅನ್ನ ಬೆಂದ ಮೇಲೂ ಉದುರುದಾರಿ ಬಿಳಿಯಾಗಿಯೇ ಉಳಿಯಬೇಕು ಅಂತ ನಿಮಗನಿಸಿದರೆ, ಅಕ್ಕಿಯನ್ನು ನಾಲ್ಕೈದು ಬಾರಿ ತೊಳೆಯಿರಿ. ಜೊತೆಗೆ ಅನ್ನ ಬೇಯುವ ಸಂದರ್ಭ ೨-೩ ಹನಿ ನಿಂಬೆರಸ ಹಾಕಿ.

ಸೊಪ್ಪುಗಳನ್ನು ಒಂದು ವಾರ ಕಾಲ ಕೆಡದಂತೆ ಫ್ರೆಷ್‌ ಆಗಿರಿಸಲು, ಅವುಗಳನ್ನು ಸಣ್ಣದಾಗಿ ಹೆಚ್ಚಿ ದಪ್ಪ ಡಬ್ಬದಲ್ಲಿ ಹಾಕಿ ಫ್ರಿಡ್ಜ್ನಲ್ಲಿಡಬಹುದು.

ಯಾವುದೋ ತರಕಾರಿಯನ್ನು ಬೇಯಿಸಿದ ಪೋಷಕಾಂಶಯುಕ್ತ ನೀರನ್ನು ಹಾಗೆಯೇ ಚೆಲ್ಲಬೇಡಿ. ಚಪಾತಿ ಹಿಟ್ಟು ಕಲಸಲು ಬಳಸಿ. ಅಥವಾ ಯಾವುದಾದರೂ ಗ್ರೇವಿಗೆ ಬಳಸಿ.

ಇದನ್ನೂ ಓದಿ: ಬ್ಯಾಚುಲರ್‌ ಕಿಚನ್‌: ಫಿಟ್ನೆಸ್‌ ಪ್ರಿಯ ಬ್ಯಾಚುಲರ್‌ಗಳಿಗೆ ದಿಢೀರ್‌ ಪನೀರ್‌ ಫ್ರೈ!

ಬೆಳ್ಳುಳ್ಳಿ ಎಸಳನ್ನು ಸುಲಭವಾಗಿ ಬಿಡಿಸಲು ಸುಲಿಯುವ ಮುನ್ನ ಅದಕ್ಕೆ ಎಣ್ಣೆ ಸವರಿ ಒಂದರ್ಧ ಗಂಟೆ ಬಿಸಿಲಲ್ಲಿಡಬೇಕು.

ಸಕ್ಕರೆ ಡಬ್ಬಿಗೆ ಇರುವೆಗಳು ಮುತ್ತದಂತೆ ಅದರೊಳಗೆ ಮೂರ್ನಾಲ್ಕು ಲವಂಗವನ್ನು ಹಾಕಬಹುದು. ಹಸಿಮೆಣಸು ಫ್ರೆಷ್‌ ಆಗಿರಲು ಅದರ ತೊಟ್ಟು ತೆಗೆದು ಡಬ್ಬಿಯಲ್ಲಿ ಹಾಕಿ ಫ್ರಿಡ್ಜ್‌ನಲ್ಲಿಡಬೇಕು.

ಮನೆಯಲ್ಲೇ ಫ್ರೆಂಚ್‌ ಫ್ರೈಸ್‌ ಮಾಡಲು ಪ್ರಯತ್ನಿಸಿ, ಛೇ ಇದ್ಯಾಕೆ ಮೆತ್ತಗಾಗುತ್ತಿದೆ ಎಂದು ಬೇಸರಿಸಿದ್ದೀರಾ? ಹಾಗಿದ್ದಲ್ಲಿ ನಿಮ್ಮ ಫ್ರೈಂಚ್‌ ಫ್ರೈಸ್‌ ಮಾಡುವ ವಿಧಾನ ಬದಲಾಯಿಸಿಕೊಳ್ಳಿ. ಒಮ್ಮೆ ಎಣ್ಣೆಯಲ್ಲಿ ಅರ್ಧ ಹುರಿದ ಫ್ರೆಂಚ್‌ ಫ್ರೈಸನ್ನು ಡಬ್ಬಿಯೊಳಗೆ ಹಾಗಿ ಫ್ರೀಜರ್‌ನಲ್ಲಿ ನಾಲ್ಕೈದು ಗಂಟೆಗಳ ಕಾಲ ಇಟ್ಟು ಮತ್ತೆ ತೆಗೆದು ಮತ್ತೊಮ್ಮೆ ಕರಿಯಿರಿ. ಈಗ ಗರಿಗರಿಯಾದ ಫ್ರೆಂಚ್‌ ಫ್ರೈಸ್ ರೆಡಿ.

ಚಪಾತಿ ಹಾಗೂ ರೋಟಿ ಮೆದುವಾಗಿರಬೇಕಾದರೆ, ಲಟ್ಟಿಸುವುದಕ್ಕಿಂತ ಅರ್ಧ ಗಂಟೆ ಮೊದಲೇ ಹಿಟ್ಟು ಕಲಸಿಡಿ.

ಬಾದಾಮಿಯ ಸಿಪ್ಪೆ ಸುಲಿಯಲು ಕಷ್ಟವಾದರೆ ೧೦-೧೫ ನಿಮಿಷ ನೆನೆಹಾಕಿ ಸುಲಿಯಿರಿ. ಸುಲಭವಾಗುತ್ತದೆ.

ಬೆಳಗಿನ ಉಪಹಾರಕ್ಕೆ ಚಪಾತಿ, ಪರಾಠ ಮಾಡುತ್ತಿದ್ದರೆ, ಹೆಚ್ಚು ಪೋಷಕಾಂಶಯುಕ್ತದ್ದನ್ನಾಗಿ ಬದಲಾಯಿಸಲು ಇವಕ್ಕೆ ಪಾಲಕ್‌ ಸೊಪ್ಪಿನ ಪೇಸ್ಟನ್ನೋ, ತುರಿದ ಕ್ಯಾರೆಟನ್ನೋ, ತುರಿದ ಕ್ಯಾಬೇಜನ್ನೋ, ಹೆಚ್ಚಿದ ಮೆಂತೆ ಸೊಪ್ಪನ್ನೋ, ಬೇಯಿಸಿ ಪೇಸ್ಟ್‌ ಮಾಡಿದ ತರಕಾರಿಗಳನ್ನೋ ಹಿಟ್ಟಿಗೆ ಸೇರಿಸಿಕೊಳ್ಳಬಹುದು. ತರಕಾರಿ ತಿನ್ನಲು ತಪ್ಪಿಸಿಕೊಳ್ಳುವ ಮಕ್ಕಳ ಹೊಟ್ಟೆಗೆ ಪೋಷಕಾಂಶಗಳು ಹೋಗುವಂತೆ ಮಾಡಲೂ ಇವು ಸುಲಭೋಪಾಯ.

ಇದನ್ನೂ ಓದಿ: ಮನೆಯಲ್ಲೇ ಮಾಡಬಹುದಾದ ಈ 5 ಪಾನೀಯಗಳಿಂದ ಬೊಜ್ಜು ಕರಗಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆಹಾರ/ಅಡುಗೆ

Midnight Hunger: ಮಧ್ಯರಾತ್ರಿಯ ಹಸಿವು ನಿಮ್ಮನ್ನು ಕಾಡುತ್ತಿದೆಯೆ? ಈ ಸಂಗತಿಗಳನ್ನು ಗಮನಿಸಿ

ರಾತ್ರಿಯ ವೇಳೆಗೆ, ಕೆಲಸದ ನಿಮಿತ್ತವೋ ಅಥವಾ ಇನ್ನೇನಾದರೂ ಸಿನಿಮಾ ನೋಡುತ್ತಲೋ ತಡರಾತ್ರಿಯವರೆಗೆ ಕುಳಿತಿದ್ದರೆ ಕತೆ ಮುಗಿದಂತೆಯೇ. ಬೇಗ ಉಂಡ ಪರಿಣಾಮವೋ, ಕಡಿಮೆ ಉಂಡ ಪರಿಣಾಮವೋ, ಮಧ್ಯರಾತ್ರಿಯ ವೇಳೆಗೆ (Midnight hunger) ಹೊಟ್ಟೆ ತಾಳ ಹಾಕಲಾರಂಭಿಸುತ್ತದೆ. ಏನಾದರು ತಿನ್ನಬೇಕೆಂಬ ತುಡಿತ ಹೆಚ್ಚಾಗುತ್ತದೆ. ಆದರೆ ಇದರ ಪರಿಣಾಮ?

VISTARANEWS.COM


on

Midnight Hunger
Koo

ಬಹಳಷ್ಟು ಮಂದಿಯ ಸಮಸ್ಯೆ ಎಂದರೆ ಮಧ್ಯರಾತ್ರಿಯ ಹಸಿವು (Midnight hunger). ಹೌದು. ಇಡೀ ದಿನ ಒಂದು ಶಿಸ್ತುಬದ್ಧ ಆಹಾರ ಕ್ರಮದಲ್ಲಿ ದಿನ ಕಳೆದ ಮೇಲೆ, ಅದ್ಯಾಕೋ ಮಧ್ಯರಾತ್ರಿಯ ಹೊತ್ತು ಏನಾದರೂ ತಿನ್ನಬೇಕೆಂಬ ಚಪಲ ಹೆಚ್ಚುತ್ತದೆ. ಇಡೀ ದಿನದ ತಪಸ್ಸು ನೀರಿನಲ್ಲಿ ಮಾಡಿದ ಹೋಮದಂತಾಗಿಬಿಡುತ್ತದೆ. ರಾತ್ರಿಯ ವೇಳೆಗೆ, ಕೆಲಸದ ನಿಮಿತ್ತವೋ ಅಥವಾ ಇನ್ನೇನಾದರೂ ಸಿನಿಮಾ ನೋಡುತ್ತಲೋ ತಡರಾತ್ರಿಯವರೆಗೆ ಕುಳಿತಿದ್ದರೆ ಕತೆ ಮುಗಿದಂತೆಯೇ. ಬೇಗ ಉಂಡ ಪರಿಣಾಮವೋ, ಕಡಿಮೆ ಉಂಡ ಪರಿಣಾಮವೋ, ಮಧ್ಯರಾತ್ರಿಯ ವೇಳೆಗೆ ಹೊಟ್ಟೆ ತಾಳ ಹಾಕಲಾರಂಭಿಸುತ್ತದೆ. ಏನಾದರೊಂದು ತಿನ್ನಬೇಕೆಂಬ ತುಡಿತ ಹೆಚ್ಚಾಗುತ್ತದೆ. ಇದರ ಪರಿಣಾಮ ಅನಾರೋಗ್ಯಕರ ಕುರುಕಲು ತಿನಿಸುಗಳೇ ಹೊಟ್ಟೆ ಸೇರುತ್ತದೆ. ಹಾಗಾದರೆ, ಈ ಮಧ್ಯರಾತ್ರಿಯ ತಿನ್ನುವ ಚಪಲವನ್ನು (Midnight hunger) ಮೀರುವುದು ಹೇಗೆ? ಇದರಿಂದ ಹೊರಬರುವುದು ಹೇಗೆ ಎಂಬ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬಯಸುವವರಿಗೆ ಇಲ್ಲಿ ಕೆಲವು ಸಲಹೆಗಳಿವೆ.

indian dinner

ರಾತ್ರಿಯೂಟ ಪ್ರೊಟೀನ್‌ನಿಂದ ಶ್ರೀಮಂತವಾಗಿರಲಿ

ಹೌದು. ರಾತ್ರಿಯ ಊಟವನ್ನು ಬೇಗ ಮುಗಿಸುವವರೂ ಸೇರಿದಂತೆ ಒಂದು ಬಹುಮುಖ್ಯ ಉಪಾಯವೆಂದರೆ, ರಾತ್ರಿಯ ಊಟದ ಆಯ್ಕೆ. ನಿಮ್ಮ ರಾತ್ರಿಯ ಊಟದಲ್ಲಿ ಪ್ರೊಟೀನ್‌ ಹೆಚ್ಚಿರಲಿ. ಪ್ರೊಟೀನ್‌ನಿಂದ ಕೂಡಿದ ಆಹಾರ ಹೊಟ್ಟೆ ತುಂಬಿಸಿದ ಅನುಭವ ಕೊಡುತ್ತದೆ. ಪರಿಣಾಮವಾಗಿ ಹಸಿವಾಗುವುದಿಲ್ಲವಾದ್ದರಿಂದ ತಡರಾತ್ರಿ ತಿನ್ನಬೇಕೆಂಬ ತುಡಿತ ಕಾಡುವುದಿಲ್ಲ. ಹಾಗಾಗಿ ರಾತ್ರಿಯ ಊಟವನ್ನೇ ಯೋಚಿಸಿ ಮಾಡಿ. ಆಗ ಏನೇನೋ ಹಾಳುಮೂಳು ತಡರಾತ್ರಿ ತಿನ್ನುವುದು ತಪ್ಪುತ್ತದೆ.

ಕಡಿಮೆ ತಿನ್ನಿ

ರಾತ್ರಿ ಹೀಗೆ ಪ್ರೊಟೀನ್‌ಭರಿತ ಊಟ ಮಾಡಿದರೂ ಮಧ್ಯರಾತ್ರಿ ಹಸಿವಾಯಿತು ಎಂದೇ ಇಟ್ಟುಕೊಳ್ಳೋಣ. ಆಗ ಏನು ಮಾಡುವುದು, ಏನಾದರೂ ತಿನ್ನದೆ ಇದ್ದರೆ ಅಸಿಡಿಟಿಯ ಸಮಸ್ಯೆ ಕೆಲವರದ್ದು. ಹೀಗಾಗಿ ಏನು ತಿನ್ನಬಹುದು, ಏನು ಮಾಡಬೇಕು ಎಂಬ ಪ್ರಶ್ನೆ ಕೆಲವರದ್ದು. ಇಂಥ ಸಂದರ್ಭ ಖಂಡಿತವಾಗಿಯೂ ತಿನ್ನಿ. ಆದರೆ ಏನು ತಿನ್ನುತ್ತಿದ್ದೀರಿ ಎಂಬ ಬಗ್ಗೆ ಗಮನ ಇರಲಿ. ಜೊತೆಗೆ ಎಷ್ಟು ತಿನ್ನುತ್ತಿದ್ದೀರಿ ಎಂಬ ಗಮನವೂ ಇರಲಿ. ಹಾಗಾಗಿ ಇಂಥ ಸಂದರ್ಭ ತಿನ್ನಲಿಕ್ಕಾಗಿಯೇ ಕೆಲವು ಆರೋಗ್ಯಕರ ಆಹಾರಗಳನ್ನು ಸ್ನ್ಯಾಕ್‌ಗಳನ್ನು ಜೊತೆಗೆ ಇಟ್ಟುಕೊಂಡಿರಿ. ಅಷ್ಟೇ ಅಲ್ಲ, ಹೆಚ್ಚು ತಿನ್ನಬೇಡಿ. ಕಡಿಮೆ ಪ್ರಮಾಣದಲ್ಲಿ ತಿಂದು ಹೊಟ್ಟೆಯನ್ನು ಸಮಾಧಾನಪಡಿಸಿ.

Dry seeds

ಒಣಬೀಜಗಳು

ಹೊಟ್ಟೆಯನ್ನು ಸಮಾಧಾನಪಡಿಸುವ ಇಂತಹ ಆರೋಗ್ಯಕರ ಸ್ನ್ಯಾಕ್‌ಗಳು ಏನಿವೆ ಎಂದು ನೀವು ಕೇಳಿದರೆ, ಖಂಡಿತ ಇವೆ. ಒಣಬೀಜಗಳು ಇಂಥ ಸಮಯಕ್ಕೆ ಹೇಳಿ ಮಾಡಿಸಿದ ಸ್ನ್ಯಾಕ್‌ಗಳು. ಕೆಲವು ಹುರಿದ ಧಾನ್ಯಗಳು, ಒಣಬೀಜಗಳು, ಮಖಾನಾದಂತಹ ಕಡಿಮೆ ಕ್ಯಾಲರಿಯ ಸ್ನ್ಯಾಕ್‌ಗಳನ್ನು ಇಟ್ಟುಕೊಳ್ಳಬಹುದು. ಇವು ಕೇವಲ ಆರೋಗ್ಯಕರವಷ್ಟೇ ಅಲ್ಲ, ಇದರಲ್ಲಿರುವ ಕೊಬ್ಬೂ ಕೂಡಾ ದೇಹಕ್ಕೆ ಅಗತ್ಯವಾದ ಆರೋಗ್ಯಕರ ಒಳ್ಳೆಯ ಕೊಬ್ಬೇ ಆಗಿದೆ. ಹೀಗಾಗಿ. ಚಿಪ್ಸ್‌, ಕುರುಕಲು, ಎಣ್ಣೆ ಪದಾರ್ಥಗಳು, ಜ್ಯೂಸ್‌ಗಳು, ಟೆಟ್ರಾ ಪ್ಯಾಕೆಟ್‌ಗಳು, ಕೆಫಿನ್‌ಯುಕ್ತ ಪೇಯಗಳು ಇತ್ಯಾದಿಗಳನ್ನು ಹೀರುವ ಅಭ್ಯಾಸವಿದ್ದರೆ ಖಂಡಿತಾ ಬಿಡಿ. ಬಹುಮುಖ್ಯವಾಗಿ ಇಂಥವನ್ನು ಖರೀದಿಸುವ ಅಭ್ಯಾಸವನ್ನೇ ಮೊದಲು ಬಿಡಿ. ಉತ್ತಮ ಆರೋಗ್ಯಕರ ಒಣಬೀಜಗಳು, ಹುರುದ ಧಾನ್ಯಗಳು ಇತ್ಯಾದಿಗಳನ್ನು ಪಕ್ಕದಲ್ಲಿಡಿ. ಕೆಲ ದಿನಗಳ ಕಾಲ ಈ ಅಭ್ಯಾಸ ಕಷ್ಟವಾಗಬಹುದು. ಆದರೆ, ಕಷ್ಟವೇನಲ್ಲ. ಪ್ರಯತ್ನ ಪಟ್ಟರೆ ಖಂಡಿತ ಸಾಧ್ಯವಾಗುತ್ತದೆ.

ಇದನ್ನೂ ಓದಿ: Home Remedies For Sunburn: ಬಿಸಿಲಿಗೆ ಚರ್ಮದ ಅಂದಗೆಟ್ಟಿದೆಯೆ? ಇಲ್ಲಿದೆ ಮನೆಮದ್ದು!

Continue Reading

ಆಹಾರ/ಅಡುಗೆ

Summer Storage Tips: ಬೇಸಿಗೆಯಲ್ಲಿ ಸೊಪ್ಪು- ತರಕಾರಿಗಳು ತಾಜಾ ಇರುವಂತೆ ಮಾಡಲು ಹೀಗೆ ಮಾಡಿ

ಸೊಪ್ಪು-ತರಕಾರಿಗಳನ್ನು ಬಳಸುವಾಗ ಫ್ರಿಜ್‌ನಿಂದ ತೆರೆದು ನೋಡಿದರೆ ಅರ್ಧ ಕೊಳೆತು ಇಲ್ಲವೇ ಒಣಗಿ ಅಥವಾ ಬಾಡಿರುತ್ತದೆ. ತರಕಾರಿಗಳಂತೂ ಕೆಲವೊಮ್ಮೆ ರಬ್ಬರಿನಂಥ ಸ್ಥಿತಿಸ್ಥಾಪಕ ಗುಣವನ್ನು ಗಳಿಸಿಕೊಂಡಿದ್ದರೆ, ಸೊಪ್ಪುಗಳು ಹಸಿರಿನಿಂದ ಕಡು ಹಳದಿ ಬಣ್ಣಕ್ಕೆ ತಿರುಗಿರುತ್ತವೆ. ಅದಿಲ್ಲದಿದ್ದರೆ ಕೊಳೆತು ಮುದ್ದೆಯಾಗಿರುತ್ತವೆ. ಗುಣಮಟ್ಟದ ತರಕಾರಿಯನ್ನು ತಂದರೂ ಅವು ಬಳಸುವಾಗ ತಾಜಾ ಮತ್ತು ಪೌಷ್ಟಿಕವಾಗಿ (Summer Storage Tips) ಇಲ್ಲದಿದ್ದರೆ ಹೇಗೆ?

VISTARANEWS.COM


on

Summer Storage Tips
Koo

ಹಸಿರು ಸೊಪ್ಪು, ತರಕಾರಿಗಳು ನಮ್ಮ ಆರೋಗ್ಯ ರಕ್ಷಣೆಗೆ ಅಗತ್ಯವಾಗಿ ಬೇಕಾದವು ಎಂಬುದು ಸರಿಯಷ್ಟೆ. ಆದರೆ ಸೊಪ್ಪು-ತರಕಾರಿಗಳ ರಕ್ಷಣೆಯೇ ಕೆಲವೊಮ್ಮೆ ಸವಾಲಾಗಿ ಬಿಡುತ್ತದೆ. ಇವತ್ತಿಗೆ ಬೇಕಾದ್ದನ್ನು ಇವತ್ತು ತಂದುಕೊಳ್ಳುವುದು ಸಾಧ್ಯವಿಲ್ಲದ ಮಾತು. ಒಮ್ಮೆ ಮಾರುಕಟ್ಟೆಯಿಂದ ತರುವಾಗ ಒಂದು ವಾರಕ್ಕಾಗುವಷ್ಟಾದರೂ ತರಬೇಕು. ತಂದಿದ್ದನ್ನು ಫ್ರಿಜ್‌ನಲ್ಲಿ ಇರಿಸಿಕೊಳ್ಳಬೇಕು. ಅದನ್ನು ಬಳಸುವಾಗ ತೆರೆದು ನೋಡಿದರೆ ಅರ್ಧ ಕೊಳೆತು ಇಲ್ಲವೇ ಒಣಗಿ ಅಥವಾ ಬಾಡಿರುತ್ತದೆ. ತರಕಾರಿಗಳಂತೂ ಕೆಲವೊಮ್ಮೆ ರಬ್ಬರಿನಂಥ ಸ್ಥಿತಿಸ್ಥಾಪಕ ಗುಣವನ್ನು ಗಳಿಸಿಕೊಂಡಿದ್ದರೆ, ಸೊಪ್ಪುಗಳು ಹಸಿರಿನಿಂದ ಕಡು ಹಳದಿ ಬಣ್ಣಕ್ಕೆ ತಿರುಗಿರುತ್ತವೆ. ಅದಿಲ್ಲದಿದ್ದರೆ ಕೊಳೆತು ಮುದ್ದೆಯಾಗಿರುತ್ತವೆ. ಗುಣಮಟ್ಟದ ತರಕಾರಿಯನ್ನು ತಂದರೂ ಅವು ಬಳಸುವಾಗ ತಾಜಾ ಮತ್ತು ಪೌಷ್ಟಿಕವಾಗಿ ಇಲ್ಲದಿದ್ದರೆ ಹೇಗೆ? ಅವುಗಳನ್ನು ತಾಜಾ ಆಗಿ ಇರಿಸಿಕೊಳ್ಳುವುದು (Summer Storage Tips) ಕಷ್ಟವಾದರೂ ಅಸಾಧ್ಯವಂತೂ ಖಂಡಿತ ಅಲ್ಲ. ಕೆಲವು ಕ್ರಮಗಳನ್ನು ಪಾಲಿಸುವುದರಿಂದ ಈ ಋತುಮಾನದ ಹಸಿ ಕಾಳುಗಳು, ಸೊಪ್ಪು, ತರಕಾರಿಗಳನ್ನು ಫ್ರಿಜ್‌ನಲ್ಲಿ ವಾರಗಟ್ಟಲೆ ತಾಜಾ, ರುಚಿಕರ ಮತ್ತು ಪೌಷ್ಟಿಕವಾಗಿಯೇ ಇರಿಸಿಕೊಳ್ಳಬಹುದು. ಬೇಕಾದಾಗೆಲ್ಲ ತೆಗೆದು ಉಪಯೋಗಿಸಿಕೊಳ್ಳಬಹುದು. ಹಾಗಾದರೆ ಏನು (Summer Storage Tips) ಮಾಡಬೇಕು?

Fresh Vegetable Harvest

ಸ್ವಚ್ಛ ಮಾಡುವ ಕ್ರಮ

ಪೇಟೆಯಿಂದ ತರುವ ತರಕಾರಿಗಳನ್ನು ತೊಳೆದು ಸ್ವಚ್ಛ ಮಾಡಿ ಉಪಯೋಗಿಸುವುದನ್ನು ಎಲ್ಲರೂ ಮಾಡುತ್ತೇವೆ. ತೊಳೆಯದೇ ಫ್ರಿಜ್‌ನಲ್ಲಿಟ್ಟು ಬೇಕಾದಾಗ ತೊಳೆದು ಉಪಯೋಗಿಸುವುದೇ ಅಥವಾ ತೊಳೆದು ಫ್ರಿಜ್‌ನಲ್ಲಿ ಶೇಖರಿಸಿಡುವುದೇ ಎಂಬ ಗೊಂದಲ ಹಲವರದ್ದು. ಆದಷ್ಟೂ ಮಣ್ಣೆಲ್ಲ ತೊಳೆದು ಸ್ವಚ್ಛ ಮಾಡಿ ಶೇಖರಿಸುವುದು ಸೂಕ್ತ. ಆದರೆ ಇಲ್ಲೊಂದು ಸಮಸ್ಯೆಯಿದೆ. ತೊಳೆದರೆ ಬೇಗ ಕೊಳೆಯುತ್ತದೆ ಎಂಬುದು ಹಲವರ ಅನುಭವ. ಹಾಗಾಗಿ, ತೊಳೆದ ಮೇಲೆ ನೀರು ಆರಿಸುವುದು ಮುಖ್ಯ. ಪೇಪರ್‌ ಟವೆಲ್‌ನಿಂದ (ಅದನ್ನು ಬಳಸುವವರಾದರೆ) ಒತ್ತಿ ನೀರು ತೆಗೆದು ಮನೆಯೊಳಗೇ ನರಳಿನಲ್ಲಿ ಆರಹಾಕಿ. ಅದಿಲ್ಲದಿದ್ದರೆ ನೇರವಾಗಿ ಸ್ವಚ್ಛ ಹತ್ತಿಯ ಬಟ್ಟೆಯ ಮೇಲೆ ತಂಪಾದ ಜಾಗದಲ್ಲಿ ಸೊಪ್ಪು, ತರಕಾರಿಗಳನ್ನು ಹರವಿಡಿ. ಒಂದೆರಡು ತಾಸುಗಳಲ್ಲಿ ಅಥವಾ ಅವುಗಳಲ್ಲಿರುವ ನೀರು ಸಂಪೂರ್ಣ ಆರಿದ ಮೇಲೆ ಶೇಖರಿಸಿ ಇಟ್ಟುಕೊಳ್ಳಬಹುದು.

ಶೇಖರಿಸುವುದು ಹೇಗೆ?

ಶೇಖರಿಸಿದ ಚೀಲಗಳಲ್ಲಿ ತೇವಾಂಶ ಒಳಗೇ ಉಳಿದರೆ ಒಳಗಿರುವ ವಸ್ತುಗಳು ಹಾಳಾಗುತ್ತವೆ. ಹಾಗಾಗಿ ಯಾವುದೇ ಚೀಲಗಳಲ್ಲಿ ಅವುಗಳನ್ನು ಶೇಖರಿಸಿದರೂ, ತೇವ ಆವಿಯಾಗುವುದಕ್ಕೆ ರಂಧ್ರಗಳಿರುವುದನ್ನು ಖಾತ್ರಿ ಪಡಿಸಿಕೊಳ್ಳಿ. ಜಿಪ್‌ಲಾಕ್‌ ಉಪಯೋಗಿಸುತಿದ್ದರೆ, ಅವುಗಳ ಬಾಯನ್ನು ಸಂಪೂರ್ಣ ಸೀಲ್‌ ಮಾಡದೆ ಸ್ವಲ್ಪವೇ ತೆರೆದಿರಿಸಿ. ಅದಿಲ್ಲದಿದ್ದರೆ ಮಾಮೂಲಿ ಪ್ಲಾಸ್ಟಿಕ್‌ ಬ್ಯಾಗ್‌ಗಳಿಗೇ ಸಣ್ಣ ರಂಧ್ರಗಳನ್ನು ಮಾಡಿ ಶೇಖರಿಸಿಡಬಹುದು. ಅಂತೂ ಸೊಪ್ಪು-ತರಕಾರಿಗಳಲ್ಲಿ ನೀರು, ತೇವಾಂಶ ಸಿಲುಕದಂತೆ ಜಾಗ್ರತೆ ಮಾಡಿ.

Greens vegetables

ಸೊಪ್ಪುಗಳು

ಇಷ್ಟೆಲ್ಲಾ ಮಾಡಿದರೂ ಸೊಪ್ಪುಗಳು ಹಾಳಾಗುತ್ತಿವೆಯೇ? ಫ್ರಿಜ್‌ನ ಕ್ರಿಸ್ಪರ್‌ ಹೊರತಾಗಿ ಬೇರೆಲ್ಲೂ ಸೊಪ್ಪುಗಳನ್ನು ಇರಿಸಬೇಡಿ. ಹೆಚ್ಚಿನ ತೇವಾಂಶವನ್ನು ನಿಭಾಯಿಸುವಂತೆ ಫ್ರಿಜ್‌ನ ಈ ಭಾಗವನ್ನು ವಿನ್ಯಾಸಗೊಳಿಸಲಾಗಿದೆ. ಹಾಗಾಗಿ ಮೆಂತೆ, ಪಾಲಕ್‌, ಲೆಟೂಸ್‌, ಸಬ್ಬಸಿಗೆಯಂಥ ಸೊಪ್ಪುಗಳನ್ನು ಕಾಪಾಡಿಕೊಳ್ಳಲು ಸೂಕ್ತವಾದ ಸ್ಥಳವಿದು.

ಸುತ್ತಿಡಿ

ಹೂಕೋಸು, ಎಲೆಕೋಸು, ಬ್ರೊಕೊಲಿಯಂಥ ತರಕಾರಿಗಳನ್ನು ಪೇಪರ್‌ ಟವೆಲ್‌ನಲ್ಲಿ ಸುತ್ತಿಡಿ. ಇದರಿಂದ ತೇವವನ್ನು ಇನ್ನಷ್ಟು ಹೀರಿ, ಹಸಿಹಸಿಯಾಗಿ ಇರದಂತೆ ನೋಡಿಕೊಳ್ಳಲು ಸಾಧ್ಯವಾಗುತ್ತದೆ. ಹೀಗೆ ಸುತ್ತಿದ ಸರಕಾರಿಗಳನ್ನು ರಂಧ್ರವುಳ್ಳು ಬ್ಯಾಗ್‌ಗಳಲ್ಲಿ ಇರಿಸಿ. ಇದರಿಂದ ವಾರಗಟ್ಟಲೆ ಇವುಗಳನ್ನು ತಾಜಾ ಆಗಿ ಕಾಪಿಟ್ಟುಕೊಳ್ಳಲು ಸಾಧ್ಯವಾಗುತ್ತದೆ.

ಇಷ್ಟೇ ಅಲ್ಲ

ಕೊತ್ತಂಬರಿ, ಪುದೀನಾ, ಬೆಸಿಲ್‌ನಂಥ ಪರಿಮಳದ ಸೊಪ್ಪುಗಳನ್ನು ಉಳಿದೆಲ್ಲ ಸೊಪ್ಪುಗಳಂತೆ ಕಾದುಕೊಳ್ಳುವುದು ಕಷ್ಟ. ಹಾಗಾಗಿ ಪುಟ್ಟ ಜಾರ್‌ನಲ್ಲಿ ನೀರಿರಿಸಿ, ಅದರಲ್ಲಿ ಈ ಸೊಪ್ಪಿನ ಕಂತೆಗಳನ್ನು ಬೇರು ಮುಳುಗುವಂತೆ ಇರಿಸಿ ತಂಪಾದ ಜಾಗದಲ್ಲಿಡಿ. ನಾಲ್ಕಾರು ದಿನಗಳವರೆಗೆ ಇವು ತಾಜಾ ಆಗಿಯೇ ಇರುತ್ತವೆ. ಇದಕ್ಕೆ ಅಳ್ಳಕವಾದ ಪ್ಲಾಸ್ಟಿಕ್‌ ಮುಚ್ಚಿ, ಹಾಗೆಯೇ ಫ್ರಿಜ್‌ನಲ್ಲಿ ಇರಿಸಲೂಬಹುದು.

Fresh Vegetables

ತರಕಾರಿಗಳು

ಹಣ್ಣು ಮತ್ತು ತರಕಾರಿಗಳನ್ನು ಎಂದಿಗೂ ಒಂದೇ ಬ್ಯಾಗ್‌ನಲ್ಲಿ ಇರಿಸಬೇಡಿ. ಹಣ್ಣುಗಳಿಂದ ಸಾಮಾನ್ಯವಾಗಿ ಇಥಿಲೀನ್‌ ಅನಿಲ ಬಿಡುಗಡೆಯಾಗುತ್ತದೆ. ಇದು ಪಕ್ವವಾಗುವುದನ್ನು ಹೆಚ್ಚಿಸುತ್ತದೆ. ಇದರಿಂದ ತರಕಾರಿಗಳು ಬೇಗ ಹಾಳಾಗುತ್ತವೆ. ಹಾಗಾಗಿ ಹಣ್ಣು ಮತ್ತು ತರಕಾರಿಗಳನ್ನು ಫ್ರಿಜ್‌ನಲ್ಲಿ ಪ್ರತ್ಯೇಕವಾಗಿಯೇ ಶೇಖರಿಸಿಡಿ.

Heat wave

ತಾಪಮಾನ

ಫ್ರಿಜ್‌ನ ತಾಪಮಾನ ೧ರಿಂದ ೪ ಡಿ. ಸೆ. ಒಳಗೇ ಇರುವಂತೆ ನೋಡಿಕೊಳ್ಳಿ. ಇದರಿಂದ ವಸ್ತುಗಳು ದೀರ್ಘಕಾಲ ಕೆಡದಂತೆ ಕಾಪಾಡಿಕೊಳ್ಳಬಹುದು. ಶೇಖರಿಸಿಟ್ಟು ಮರೆತುಬಿಟ್ಟರೆ ಅದೂ ಕಷ್ಟವೆ. ಇರುವ ವಸ್ತುಗಳ ಸ್ಥಿತಿಗತಿಯನ್ನು ಆಗಾಗ ವಿಚಾರಿಸಿಕೊಳ್ಳಿ. ಇದರಿಂದ ಒಂದೊಮ್ಮೆ ಯಾವುದಾದರೂ ಹಾಳಾಗಿದ್ದರೆ, ಅದನ್ನು ಬಿಸಾಡಿ ಉಳಿದವುಗಳೂ ಹಾಳಾಗದಂತೆ ಕಾಪಾಡಿಕೊಳ್ಳಬಹುದು.

ಇದನ್ನೂ ಓದಿ: Millets For Health: ಸಿರಿಧಾನ್ಯಗಳನ್ನು ನಾವು ಏಕೆ ತಿನ್ನಬೇಕೆಂದರೆ…

Continue Reading

ಆರೋಗ್ಯ

Blood Pressure: ಈ 10 ಸೂತ್ರ ಪಾಲಿಸಿ; ಬಿಪಿ ನಿಮ್ಮ ಹತ್ತಿರವೂ ಸುಳಿಯದು!

Blood Pressure: ಇತ್ತೀಚೀನ ದಿನಗಳಲ್ಲಿ ಮನೆಯಲ್ಲಿ ಒಬ್ಬರಾದರೂ ಬಿಪಿ, ಶುಗರ್ ನಿಂದ ಬಳಲುತ್ತಿರುವವರು ಇದ್ದೇ ಇರುತ್ತಾರೆ. ಸರಿಯಾದ ಆಹಾರ ಪದ್ಧತಿ, ಜೀವನ ಶೈಲಿಯನ್ನು ಅಳವಡಿಸಿಕೊಂಡರೆ ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಅಸಾಧ್ಯವೇನಲ್ಲ. ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಕೆಲವೊಂದು ಸಲಹೆಗಳನ್ನು ಸೇರಿಸುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದು. ಅದು ಹೇಗೆ ಎನ್ನುವುದಕ್ಕೆ ಇಲ್ಲಿದೆ ಕೆಲವೊಂದು ಸಲಹೆಗಳು.

VISTARANEWS.COM


on

By

Blood Pressure
Koo

ನಾವು ತಿನ್ನುವ ಆಹಾರಗಳೇ (food) ಕೆಲವೊಮ್ಮೆ ನಮ್ಮ ಆರೋಗ್ಯಕ್ಕೆ ವಿಷವಾಗುತ್ತವೆ. ಅದರಲ್ಲೂ ಮುಖ್ಯವಾಗಿ ಸಿಹಿ (suger) ಮತ್ತು ಉಪ್ಪು (salt/Sodium) ಮಿತವಾಗಿದ್ದಷ್ಟೂ ಆರೋಗ್ಯಕ್ಕೆ ಉತ್ತಮ. ಇವುಗಳ ಪ್ರಮಾಣ ಜಾಸ್ತಿಯಾದರೆ ಮಧುಮೇಹ (diabetes), ರಕ್ತದೊತ್ತಡವನ್ನು (Blood Pressure) ನಾವೇ ಆಹ್ವಾನಿಸದಂತಾಗುತ್ತದೆ. ಸಕ್ಕರೆ ಪ್ರಮಾಣವನ್ನಾದರೂ ನಿಯಂತ್ರಿಸಬಹುದು. ಆದರೆ ಉಪ್ಪು ನಮ್ಮ ಆಹಾರದಲ್ಲಿ ಎಷ್ಟಿದೆ, ನಮ್ಮ ಆರೋಗ್ಯಕ್ಕೆ ಅದು ಸರಿಯಾದ ಪ್ರಮಾಣವೇ ಎನ್ನುವುದನ್ನು ಹೇಳುವುದು ಕಷ್ಟ.

ಇತ್ತೀಚೀನ ದಿನಗಳಲ್ಲಿ ಮನೆಯಲ್ಲಿ ಒಬ್ಬರಾದರೂ ಬಿಪಿ, ಶುಗರ್ ನಿಂದ ಬಳಲುತ್ತಿರುವವರು ಇದ್ದೇ ಇರುತ್ತಾರೆ. ಸರಿಯಾದ ಆಹಾರ ಪದ್ಧತಿ, ಜೀವನ ಶೈಲಿಯನ್ನು ಅಳವಡಿಸಿಕೊಂಡರೆ ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಅಸಾಧ್ಯವೇನಲ್ಲ.
ಅಧಿಕ ಸೋಡಿಯಂ ಸೇವನೆಯು ಅಧಿಕ ರಕ್ತದೊತ್ತಡ ಮತ್ತು ಇತರ ಹೃದಯರಕ್ತನಾಳದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸೋಡಿಯಂ ಸೇವನೆಯನ್ನು ಕಡಿಮೆ ಮಾಡುವುದು ರಕ್ತದೊತ್ತಡವನ್ನು ನಿಯಂತ್ರಿಸಲು ಇರುವ ಸರಳ ದಾರಿ. ಇದಕ್ಕಾಗಿ ಪಾಲಿಸಬಹುದಾದ ಕೆಲವು ಸಲಹೆಗಳು ಇಲ್ಲಿವೆ.

ಇದನ್ನೂ ಓದಿ: Ghee benefits: ನಿತ್ಯ ಒಂದು ಚಮಚ ತುಪ್ಪ ಸೇವಿಸಿ, ಆರೋಗ್ಯದಲ್ಲಿನ ಬದಲಾವಣೆ ಗಮನಿಸಿ!

1. ಆಹಾರದ ಲೇಬಲ್‌ಗಳನ್ನು ಪರಿಶೀಲಿಸಿ

ಸಂಸ್ಕರಿಸಿದ ಆಹಾರಗಳನ್ನು ಖರೀದಿ ಮಾಡುವಾಗ ಸೋಡಿಯಂ ಎಷ್ಟು ಪ್ರಮಾಣದಲ್ಲಿದೆ ಎಂಬುದನ್ನು ತಿಳಿಯಲು ಆಹಾರದ ಲೇಬಲ್ ಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳಿ. ಕಡಿಮೆ-ಸೋಡಿಯಂ, ಉಪ್ಪು ಸೇರಿಸಲಾಗಿಲ್ಲಅಥವಾ ಸೋಡಿಯಂ-ಮುಕ್ತ ಎಂದಿರುವ ಲೇಬಲ್ ಗಳನ್ನು ಹೊಂದಿರುವ ಸಂಸ್ಕರಿಸಿದ ಆಹಾರಗಳನ್ನೇ ಆಯ್ಕೆ ಮಾಡಿ.


2. ಮನೆಯಲ್ಲೇ ಅಡುಗೆ ಮಾಡಿ

ಮನೆಯಲ್ಲಿ ಅಡುಗೆ ಮಾಡುವುದರಿಂದ ಆಹಾರಕ್ಕೆ ಸೇರಿಸುವ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡಬಹುದು. ಅಲ್ಲದೇ ಉಪ್ಪಿನ ಬದಲಿಗೆ ಭಕ್ಷ್ಯಗಳ ಸುವಾಸನೆ ಹೆಚ್ಚಿಸಲು ಗಿಡಮೂಲಿಕೆಗಳು, ಮಸಾಲೆಗಳು, ಸಿಟ್ರಸ್ ರಸಗಳು ಮತ್ತು ವಿನೆಗರ್ ಬಳಸಬಹುದು. ಉಪ್ಪನ್ನು ಅವಲಂಬಿಸದೆ ಊಟದ ರುಚಿಯನ್ನು ಹೆಚ್ಚಿಸಲು ವಿಭಿನ್ನ ಸುವಾಸನೆ ಸಂಯೋಜನೆಗಳ ಪ್ರಯೋಗ ಮಾಡಬಹುದು.

Blood Pressure


3. ಸಂಸ್ಕರಿಸಿದ ಆಹಾರ ಬೇಡ

ಆದಷ್ಟು ರೆಡಿಮೇಡ್ ಅಥವಾ ಸುಲಭವಾಗಿ ಕುಕ್ ಮಾಡಬಹುದಾದ ಸಂಸ್ಕರಿಸಿದ ಆಹಾರಗಳಿಂದ ದೂರವಿರಿ. ಸಂಸ್ಕರಿಸಿದ ಮತ್ತು ಪ್ಯಾಕೇಜ್ ಮಾಡಿದ ಆಹಾರಗಳಲ್ಲಿ ಹೆಚ್ಚಿನ ಮಟ್ಟದ ಸೋಡಿಯಂ ಅನ್ನು ಬಳಸಲಾಗಿರುತ್ತದೆ. ಇದನ್ನು ಬಳಸದೇ ಇರುವುದು ಉತ್ತಮ. ಬಳಸುವುದಾದರೆ ಆದಷ್ಟು ಕಡಿಮೆಗಳಿಸಿ.

4. ತಾಜಾ ಆಹಾರವನ್ನು ಆಯ್ಕೆ ಮಾಡಿ

ತಾಜಾ ಹಣ್ಣು, ತರಕಾರಿ, ಮಾಂಸ ಮತ್ತು ಧಾನ್ಯಗಳನ್ನು ಆಹಾರದಲ್ಲಿ ಬಳಸಿಕೊಳ್ಳಿ. ಅವು ನೈಸರ್ಗಿಕವಾಗಿರುವುದರಿಂದ ಸೋಡಿಯಂ ಮಟ್ಟ ಕಡಿಮೆ ಇರುತ್ತದೆ. ಹೆಚ್ಚುವರಿ ಉಪ್ಪನ್ನು ಸೇರಿಸದೆಯೇ ಅಗತ್ಯವಾದ ಪೋಷಕಾಂಶಗಳನ್ನು ಇವು ಒದಗಿಸುತ್ತದೆ.

5. ಆಹಾರವನ್ನು ತೊಳೆಯಿರಿ

ಪ್ಯಾಕ್ ಮಾಡಿ ಬರುವ ಬೀನ್ಸ್, ತರಕಾರಿ, ಮೀನುಗಳನ್ನು ಬಳಸುವ ಮೊದಲು ಹರಿಯುವ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಇದು ಕ್ಯಾನಿಂಗ್ ಪ್ರಕ್ರಿಯೆಯಲ್ಲಿ ಬಳಸಲಾಗುವ ಹೆಚ್ಚುವರಿ ಉಪ್ಪನ್ನು ತೆಗೆದುಹಾಕುತ್ತದೆ. ಆಹಾರದಲ್ಲಿರುವ ಸೋಡಿಯಂ ಅಂಶವನ್ನು ಕಡಿಮೆ ಮಾಡುತ್ತದೆ.

6. ಉಪ್ಪು ಬಳಕೆ ಮಿತವಾಗಿರಲಿ

ಆಹಾರದಲ್ಲಿ ಉಪ್ಪನ್ನು ಮಿತವಾಗಿಸಿ ಅಥವಾ ಬಳಸದೇ ಇರಬಹುದು. ಉಪ್ಪಿನ ಬದಲಿಗೆ ಸುವಾಸನೆ ಮಾಡಲು ಪೊಟ್ಯಾಸಿಯಮ್ ಆಧಾರಿತ ಉಪ್ಪು ನ್ನು ಬಳಸಬಹುದು. ಗಿಡಮೂಲಿಕೆ, ಮಸಾಲೆಗಳನ್ನು ಹಾಕಿ ಉಪ್ಪನ್ನು ಬಳಸದೇ ಇರಬಹುದು. ಪೊಟ್ಯಾಸಿಯಮ್ ರಕ್ತನಾಳಗಳ ಹಿಗ್ಗುವಿಕೆಯನ್ನು ಉತ್ತೇಜಿಸಿ ಮೂತ್ರದ ಮೂಲಕ ಸೋಡಿಯಂ ಅನ್ನು ಹೊರಹಾಕುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

7. ರೆಡಿಮೇಡ್‌ಗಳಿಂದ ದೂರವಿರಿ

ಸಾಸ್, ಕೆಚಪ್, ಸಲಾಡ್ ಗೆ ಹಾಕುವ ರೆಡಿಮೇಡ್ ಸಾಮಗ್ರಿಗಳಲ್ಲಿ ಸೋಡಿಯಂ ಅಧಿಕವಾಗಿರುತ್ತದೆ. ಇವುಗಳನ್ನು ಮನೆಯಲ್ಲೇ ತಯಾರಿಸಿ ಅಥವಾ ಸೋಡಿಯಂ ಮುಕ್ತವಾಗಿರುವುದನ್ನು ಆಯ್ಕೆ ಮಾಡಿ.

8. ಬೀದಿ ಬದಿ ಆಹಾರ ಸೇವಿಸಬೇಡಿ

ಬೀದಿ ಬದಿ, ಹೊಟೇಲ್, ರೆಸ್ಟೋರೆಂಟ್‌ಗಳಲ್ಲಿ ಉಪ್ಪು ಮತ್ತು ಸುವಾಸನೆ ವರ್ಧಕಗಳನ್ನು ಸೇರಿಸುವುದರಿಂದ ಆಹಾರದಲ್ಲಿ ಸೋಡಿಯಂನಲ್ಲಿ ಅಧಿಕವಾಗಿರುತ್ತದೆ. ಆರೋಗ್ಯಕರ ಆಯ್ಕೆಗಳನ್ನು ಬಳಸುವಾಗ ಉಪ್ಪು ಸೇರಿಸದೆಯೇ ಆಹಾರ ತಯಾರಿಸಲು ಹೇಳಿ.

9. ನೀರು ಕುಡಿಯಿರಿ

ಸಾಕಷ್ಟು ನೀರು ಕುಡಿಯುವುದರಿಂದ ದೇಹದಿಂದ ಹೆಚ್ಚುವರಿ ಸೋಡಿಯಂ ಮೂತ್ರದ ಮೂಲಕ ಹೊರಹೋಗುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ದೈಹಿಕವಾಗಿ ಸಕ್ರಿಯರಾಗಿದ್ದರೆ ಅಥವಾ ಬಿಸಿ ವಾತಾವರಣದಲ್ಲಿ ಕೆಲಸ ಮಾಡುತ್ತಿದ್ದಾರೆ ದಿನಕ್ಕೆ ಕನಿಷ್ಠ ಎಂಟು ಗ್ಲಾಸ್ ಅಥವಾ ಅದಕ್ಕಿಂತ ಹೆಚ್ಚು ನೀರನ್ನು ಕುಡಿಯಿರಿ.

10. ಸೋಡಿಯಂ ಬಳಕೆಗೆ ಮಿತಿ ಹೇರಿ

ಆಹಾರದಲ್ಲಿ ಸೋಡಿಯಂ ಬಳಸಲೇಬೇಕು ಎಂದಿದ್ದರೆ ಕನಿಷ್ಠ ಪ್ರಮಾಣವನ್ನು ಬಳಸಿ. ಎಷ್ಟು ಬಳಸುತ್ತೇವೆ ಎನ್ನುವುದರ ಮೇಲೆ ಹೆಚ್ಚಿನ ಗಮನವಿರಲಿ. ಮಸಾಲೆಯುಕ್ತ ಉಪ್ಪು ತಿಂಡಿಗಳು ಮತ್ತು ಸಂಸ್ಕರಿಸಿದ ಆಹಾರಗಳನ್ನು ಅತಿಯಾಗಿ ತಿನ್ನಬೇಡಿ.

Continue Reading

ಆರೋಗ್ಯ

Ghee benefits: ನಿತ್ಯ ಒಂದು ಚಮಚ ತುಪ್ಪ ಸೇವಿಸಿ, ಆರೋಗ್ಯದಲ್ಲಿನ ಬದಲಾವಣೆ ಗಮನಿಸಿ!

Ghee benefits: ಮೊಸರಿನಿಂದ ಬೆಣ್ಣೆ ತೆಗೆದು ಮಾಡಲಾಗುವ ತುಪ್ಪ ಪೌಷ್ಟಿಕಾಂಶಗಳ ಕಣಜವೇ ಸರಿ. ಸಾಕಷ್ಟು ಪೋಷಕಾಂಶಗಳ ಜೊತೆಗೆ ಇದು ಔಷಧೀಯ ಗುಣಗಳನ್ನೂ ಹೊಂದಿದ್ದು, ಒಂದು ಚಮಚ ತುಪ್ಪ ದೇಹಕ್ಕೆ ಎಷ್ಟೆಲ್ಲ ಲಾಭ ಕೊಡುತ್ತೆ ಗೊತ್ತೇ? ಇಲ್ಲಿದೆ ಉಪಯುಕ್ತ ಆರೋಗ್ಯ ಮಾಹಿತಿ.

VISTARANEWS.COM


on

By

Ghee benefits
Koo

ನಿತ್ಯವೂ ನಾವು ಸೇವಿಸುವ ಆಹಾರದಲ್ಲಿ (food) ಪೌಷ್ಟಿಕಾಂಶ ( Nutrition) ಇದೆಯೋ, ಇಲ್ಲವೋ, ಎಷ್ಟಿದೆಯೋ ಎನ್ನುವ ಯೋಚನೆ ಖಂಡಿತಾ ಕಾಡುತ್ತದೆ. ಆದರೆ ಇದಕ್ಕೆಲ್ಲ ನಾವು ಹೆಚ್ಚು ಗಮನ ಹರಿಸೋದಿಲ್ಲ. ಆಹಾರ ರುಚಿಯಾಗಿದ್ದರೆ ಸಾಕು ಅದರಲ್ಲಿರುವ ಪೋಷ್ಟಿಕಾಂಶ ಏನು ಎಂಬುದನ್ನು ನಾವು ಮರೆತೇ ಬಿಡುತ್ತೇವೆ. ಯಾವುದಾದರೊಂದು ಅರೋಗ್ಯ (health) ಸಮಸ್ಯೆ ಕಾಣಿಸಿದಾಗಲೇ ಪೋಷ್ಟಿಕಾಂಶದ ಕೊರತೆ ಎಂದು ತಿಳಿದು ಅಯ್ಯೋ ನಾವು ಅಷ್ಟೆಲ್ಲ ಆಹಾರ ಸೇವಿಸಿದರೂ ಪೋಷ್ಟಿಕಾಂಶ ಕೊರತೆ ಯಾಕೆ ಉಂಟಾಯಿತು ಎಂದು ನಮ್ಮನ್ನು ನಾವೇ ಪ್ರಶ್ನಿಸುವಂತೆ ಮಾಡುತ್ತದೆ.

ಹಾಗಂತ ನಾವು ಪೌಷ್ಟಿಕಾಂಶದ ಬಗ್ಗೆ ಹೆಚ್ಚು ಯೋಚಿಸಬೇಕಿಲ್ಲ. ನಮ್ಮ ಆಹಾರದಲ್ಲಿ ಕೆಲವೊಂದು ವಸ್ತುಗಳನ್ನು ಸೇರಿಸಿದರೆ ಸಾಕು ನಮ್ಮ ದೇಹಕ್ಕೆ ಬೇಕಾದ ಪೌಷ್ಟಿಕಾಂಶ ಹೇರಳವಾಗಿ ಸಿಗುತ್ತದೆ. ಅವುಗಳು ಒಂದು ರೀತಿಯಲ್ಲಿ ನಮ್ಮ ದೇಹಕ್ಕೆ ಪೌಷ್ಟಿಕಾಂಶಗಳ ನಿಧಿಯಂತೆ ಕೆಲಸ ಮಾಡುತ್ತದೆ. ಇದರಿಂದ ಸಮಗ್ರ ಆರೋಗ್ಯ ಪ್ರಯೋಜನಗಳು (Ghee benefits) ನಮ್ಮ ದೇಹಕ್ಕೆ ಸಿಗುವುದು. ಇಂತಹ ಒಂದು ವಸ್ತು ನಮ್ಮ ಅಡುಗೆ ಮನೆಯಲ್ಲಿ ಸದಾ ಇರುತ್ತದೆ. ಅದು ಯಾವುದೆಂದರೆ ತುಪ್ಪ.

ಮೊಸರಿನಿಂದ ಬೆಣ್ಣೆ ತೆಗೆದು ಮಾಡಲಾಗುವ ತುಪ್ಪ ಪೌಷ್ಟಿಕಾಂಶಗಳ ಕಣಜವೆಂದೇ ಹೇಳಬೇಕು. ಸಾಕಷ್ಟು ಪೋಷಕಾಂಶಗಳ ಜೊತೆಗೆ ಇದು ಔಷಧೀಯ ಗುಣಗಳನ್ನೂ ಹೊಂದಿದೆ. ಇದನ್ನು ನಮ್ಮ ಆಹಾರದಲ್ಲಿ ಸೇರಿಸಿದರೆ ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.

ಇದನ್ನೂ ಓದಿ: Ugadi 2024: ಯುಗಾದಿ ಹಬ್ಬಕ್ಕೆ ಟ್ರೆಂಡಿಯಾದ ಟ್ರೆಡಿಷನಲ್‌ ಜಡೆ ಸಿಂಗಾರ-ಬಂಗಾರ

ಅತ್ಯಂತ ಸುವಾಸನೆ ಹೊಂದಿರುವ ಒಂದು ಚಮಚ ತುಪ್ಪವನ್ನು ನಮ್ಮ ಆಹಾರದಲ್ಲಿ ಸೇವಿಸುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು. ಹಾಗಾದರೆ ಈ ತುಪ್ಪದಲ್ಲಿ ಅಂತಹ ಯಾವ ಪೌಷ್ಟಿಕಾಂಶದ ನಿಧಿ ಇದೆ ಹಾಗು ಇದರಿಂದ ನಮ್ಮ ದೇಹಕ್ಕೆ ಏನು ಲಾಭ ಎಂಬುದನ್ನು ನೋಡೋಣ.

ಆರೋಗ್ಯಕರ ಕೊಬ್ಬು

ಎಲ್ಲ ಕೊಬ್ಬು ಒಂದೇ ರೀತಿ ಇರುವುದಿಲ್ಲ. ದೇಹಕ್ಕೆ ಅತ್ಯಗತ್ಯವಾಗಿ ಆರೋಗ್ಯಕರ ಕೊಬ್ಬು ಬೇಕೇಬೇಕು. ಇದು ತುಪ್ಪದಲ್ಲಿ ಹೇರಳವಾಗಿದೆ. ತುಪ್ಪದಲ್ಲಿರುವ ಸ್ಯಾಚುರೇಟೆಡ್ ಕೊಬ್ಬು ವಿವಿಧ ದೈಹಿಕ ಕಾರ್ಯಗಳಿಗೆ ಅವಶ್ಯಕವಾಗಿದೆ. ಅಲ್ಲದೇ ಇದರಲ್ಲಿ ಬ್ಯುಟರಿಕ್ ಆಮ್ಲ ಎಂಬ ಕೊಬ್ಬಿನಾಮ್ಲಗಳಿದ್ದು ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಚಯಾಪಚಯ ಕ್ರಿಯೆಯ ಶಕ್ತಿಯನ್ನು ಹೆಚ್ಚಿಸುತ್ತದೆ.


ಜೀರ್ಣಕ್ರಿಯೆಗೆ ಟಾನಿಕ್

ಜೀರ್ಣಕ್ರಿಯೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸುವ ಗುಣ ತುಪ್ಪಕ್ಕೆ ಇದೆ. ಹೀಗಾಗಿ ತುಪ್ಪವನ್ನು ಜೀರ್ಣಕಾರಿ ಟಾನಿಕ್ ಎಂದೇ ಕರೆಯಲಾಗುತ್ತದೆ. ತುಪ್ಪವು ದೇಹದಲ್ಲಿರುವ ಅನಗತ್ಯ ಕೊಬ್ಬನ್ನು ಕರಗಿಸುತ್ತದೆ. ಆಹಾರದಲ್ಲಿರುವ ಜೀವಸತ್ವ ಮತ್ತು ಖನಿಜಗಳ ಹೀರಿಕೊಳ್ಳುವಿಕೆಯನ್ನು ಸುಗಮಗೊಳಿಸುತ್ತದೆ. ಜೀರ್ಣಕ್ರಿಯೆಗೆ ಸಂಬಂಧಿಸಿದ ಅಸ್ವಸ್ಥತೆಯನ್ನು ಹೋಗಲಾಡಿಸಿ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ.

ರೋಗನಿರೋಧಕ ಶಕ್ತಿ ವೃದ್ಧಿ

ತುಪ್ಪವು ರೋಗಕಾರಕಗಳು ಮತ್ತು ಸೋಂಕುಗಳಿಂದ ದೇಹವನ್ನು ರಕ್ಷಿಸುತ್ತದೆ. ಇದು ವಿಟಮಿನ್ ಎ, ಡಿ, ಇ ಮತ್ತು ಕೆ ಜೊತೆಗೆ ಅಗತ್ಯವಾದ ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ ಇದು ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಒದಗಿಸಿ ಉರಿಯೂತದ ಸಮಸ್ಯೆಗಳನ್ನು ನಿವಾರಿಸುತ್ತದೆ.

ಮೆದುಳಿನ ಆರೋಗ್ಯಕ್ಕೆ ಉತ್ತಮ

ತುಪ್ಪದಲ್ಲಿರುಬುವ ಆರೋಗ್ಯಕರ ಕೊಬ್ಬು ಮೆದುಳಿನ ಕಾರ್ಯಕ್ಷಮತೆಯನ್ನು ವೃದ್ಧಿಸುತ್ತದೆ. ಮೆದುಳಿಗೆ ಬೇಕಾದ ಅಗತ್ಯ ಪೋಷಕಾಂಶಗಳ ಪ್ರಬಲ ಮೂಲವಾಗಿರುವ ತುಪ್ಪದಲ್ಲಿರುವ ಸ್ಯಾಚುರೇಟೆಡ್ ಕೊಬ್ಬುಗಳು ಮೆದುಳಿಗೆ ಸ್ಥಿರವಾದ ಶಕ್ತಿಯ ಮೂಲವಾಗಿದೆ. ಒಮೆಗಾ -3 ಮತ್ತು ಒಮೆಗಾ -6 ಕೊಬ್ಬಿನಾಮ್ಲಗಳು, ಫಾಸ್ಫಾಟಿಡಿಲ್ಕೋಲಿನ್ ನಂತಹ ಗುಣಗಳು ನರಕೋಶಗಳ ಆರೋಗ್ಯವನ್ನು ಕಾಪಾಡುತ್ತದೆ. ಬೇಗನೆ ಮುಪ್ಪಿನ ಲಕ್ಷಣಗಳನ್ನು ಇದು ತಡೆಯುತ್ತದೆ.

ತೂಕ ನಿಯಂತ್ರಣ

ತುಪ್ಪ ದೇಹದ ತೂಕ ಹೆಚ್ಚಿಸುತ್ತದೆ ಎನ್ನುವ ಕಲ್ಪನೆ ಎಲ್ಲರಲ್ಲೂ ಇದೆ. ಆದರೆ ಇದು ತಪ್ಪು. ತುಪ್ಪವನ್ನು ಆಹಾರದಲ್ಲಿ ಸೇರಿಸುವುದರಿಂದ ದೇಹದ ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ತುಪ್ಪದಲ್ಲಿರುವ ಕೊಬ್ಬಿನಾಮ್ಲಗಳು ಯಕೃತ್ತಿನಿಂದ ಸುಲಭವಾಗಿ ಚಯಾಪಚಯಗೊಳ್ಳುತ್ತವೆ. ಇದು ಕೊಬ್ಬಿನಂತೆ ಶೇಖರಿಸಲ್ಪಡುವ ಬದಲು ಶಕ್ತಿಯಾಗಿ ಪರಿವರ್ತನೆಗೊಳ್ಳುತ್ತವೆ. ಇದಲ್ಲದೆ, ತುಪ್ಪ ಸೇವನೆಯಿಂದ ಕಡುಬಯಕೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಿಂದ ದೇಹದ ತೂಕ ನಿಯಂತ್ರಣದಲ್ಲಿ ಇರಿಸಬಹುದು.

Continue Reading
Advertisement
UPSC Results 2023
ದೇಶ2 hours ago

ವಿಸ್ತಾರ ಸಂಪಾದಕೀಯ: ಯುಪಿಎಸ್‌ಸಿ ಸಾಧಕರ ಕತೆಗಳು ಇತರರಿಗೆ ಸ್ಫೂರ್ತಿಯಾಗಲಿ

Ram Navami
ಪ್ರಮುಖ ಸುದ್ದಿ2 hours ago

Ram Navami : ಇಂದು ದೇಶಾದ್ಯಂತ ರಾಮ ನವಮಿ ಸಂಭ್ರಮ; ಏನು ಈ ದಿನದ ಮಹತ್ವ?

State Administrative Reforms Commission Chairman R V Deshpande statement
ಉತ್ತರ ಕನ್ನಡ2 hours ago

Lok Sabha Election 2024: ಗ್ಯಾರಂಟಿ ಬಗ್ಗೆ ಟೀಕೆ ಮಾಡಿದ್ದ ಬಿಜೆಪಿಗರೇ ಈಗ ಗ್ಯಾರಂಟಿ ಪದ ಬಳಸುತ್ತಿದ್ದಾರೆ: ಆರ್.ವಿ.ದೇಶಪಾಂಡೆ

IPL 2024
ಪ್ರಮುಖ ಸುದ್ದಿ2 hours ago

IPL 2024 : ಬಟ್ಲರ್ ಮುಂದೆ ಮಂಕಾದ ನರೈನ್​; ಕೆಕೆಆರ್ ವಿರುದ್ಧ ಆರ್​​ಆರ್​ಗೆ 2 ವಿಕೆಟ್ ಜಯ

Murder Case
ಕರ್ನಾಟಕ3 hours ago

Chitradurga News: ಚಿತ್ರದುರ್ಗದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ತಾಯಿ-ಮಗಳ ಶವ ಪತ್ತೆ

amith shah
ದೇಶ3 hours ago

Amit Shah: ಶೀಘ್ರದಲ್ಲೇ ಭಾರತ ನಕ್ಸಲ್‌ ಮುಕ್ತವಾಗಲಿದೆ; ಅಮಿತ್ ಶಾ

Nitin Gadkari
ದೇಶ3 hours ago

Nitin Gadkari : ನಾಗ್ಪುರ ಕ್ಷೇತ್ರಕ್ಕೆ ಮತ್ತೊಂದು ಪ್ರಣಾಳಿಕೆ ಬಿಡುಗಡೆ ಮಾಡಿದ ನಿತಿನ್ ಗಡ್ಕರಿ

UPSC Results 2023
ಕರ್ನಾಟಕ3 hours ago

UPSC Results 2023: ಯುಪಿಎಸ್‌ಸಿಯಲ್ಲಿ 644 ರ‍್ಯಾಂಕ್‌ ಪಡೆದ ಶಾಂತಪ್ಪ ಕುರುಬರ; ಸೋಲನ್ನು ಗೆಲುವಿನ ಮೆಟ್ಟಿಲಾಗಿಸಿಕೊಂಡ ಸಾಧಕ!

Dalip Singh Majithia
ಪ್ರಮುಖ ಸುದ್ದಿ4 hours ago

Dalip Singh Majithia : 2ನೇ ಮಹಾಯುದ್ಧದಲ್ಲಿ ಸೇವೆ ಸಲ್ಲಿಸಿದ ಐಎಎಫ್ ಯೋಧ 103 ನೇ ವಯಸ್ಸಿನಲ್ಲಿ ನಿಧನ

Ayodhya Ram Mandir
ದೇಶ4 hours ago

Ayodhya Ram Mandir: ನಾಳೆ ಅಯೋಧ್ಯೆ ಶ್ರೀರಾಮನಿಗೆ ಸೂರ್ಯ ತಿಲಕ; ಮನೆಯಲ್ಲೇ ಕೂತು ಹೀಗೆ ಕಣ್ತುಂಬಿಕೊಳ್ಳಿ

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya
ಭವಿಷ್ಯ21 hours ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20242 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20242 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ3 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ4 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ5 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ5 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ5 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

Lok Sabha Election 2024 Rahul Gandhi should apologise for lying demand BS Yediyurappa
Lok Sabha Election 20246 days ago

Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

ಟ್ರೆಂಡಿಂಗ್‌