ಇಡಿ ಶೇಮ್​ ಶೇಮ್​ ಎಂದು ಕೂಗಿದ ಕಾಂಗ್ರೆಸ್​ ಕಾರ್ಯಕರ್ತರು; ಮತ್ತೆ ಪ್ರತಿಭಟನೆ ಶುರು - Vistara News

ದೇಶ

ಇಡಿ ಶೇಮ್​ ಶೇಮ್​ ಎಂದು ಕೂಗಿದ ಕಾಂಗ್ರೆಸ್​ ಕಾರ್ಯಕರ್ತರು; ಮತ್ತೆ ಪ್ರತಿಭಟನೆ ಶುರು

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿಯವರನ್ನು ಮೂರು ಸುತ್ತಿನ ವಿಚಾರಣೆ ನಡೆಸಿದ ಬೆನ್ನಲ್ಲೇ ಇ ಡಿ ಅಧಿಕಾರಿಗಳು ಇಂದು ಒಟ್ಟು 12 ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ.

VISTARANEWS.COM


on

Congress Protest
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ನ್ಯಾಷನಲ್​ ಹೆರಾಲ್ಡ್​ ಕೇಸ್ (National Herald Case)​ ಗೆ ಸಂಬಂಧಪಟ್ಟು ಇಂದು ಸುಮಾರು 12 ಕಡೆಗಳಲ್ಲಿ ಇ ಡಿ ಅಧಿಕಾರಿಗಳು ರೇಡ್ ಮಾಡಿದ್ದಾರೆ. ನ್ಯಾಷನಲ್​ ಹೆರಾಲ್ಡ್ ಕಚೇರಿ ಮೇಲೆ ಕೂಡ ದಾಳಿಯಾಗಿದೆ. ಹಾಗೇ ಮತ್ತೆ ಕಾಂಗ್ರೆಸ್ ನಾಯಕರ ಪ್ರತಿಭಟನೆಯೂ ಪ್ರಾರಂಭವಾಗಿದೆ. ದೆಹಲಿಯಲ್ಲಿರುವ ನ್ಯಾಷನಲ್​ ಹೆರಾಲ್ಡ್​ ಆಫೀಸ್​ ಎದುರು ನೂರಾರು ಕಾಂಗ್ರೆಸ್​ ಕಾರ್ಯಕರ್ತರು ಗುಂಪುಗೂಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಮತ್ತು ತನಿಖಾ ಏಜೆನ್ಸಿ ವಿರುದ್ಧ ಘೋಷಣೆಗಳನ್ನು ಕೂಗಿ, ಫಲಕಗಳನ್ನು ಪ್ರದರ್ಶನ ಮಾಡಿದ್ದಾರೆ. ‘ಇಡಿ ಶೇಮ್ ಶೇಮ್​ ಎಂದು ದೊಡ್ಡದಾಗಿ ಕೂಗಿದ್ದಾರೆ.

ನ್ಯಾಷನಲ್​ ಹೆರಾಲ್ಡ್ ಕೇಸ್​​ನಡಿ ಕಳೆದ ತಿಂಗಳು ರಾಹುಲ್​ ಗಾಂಧಿಯನ್ನು ವಿಚಾರಣೆಗೆ ಒಳಪಡಿಸಿದ್ದ ಇಡಿ ಅಧಿಕಾರಿಗಳು ಜುಲೈನಲ್ಲಿ ಕಾಂಗ್ರೆಸ್​ ಮುಖ್ಯಸ್ಥೆ ಸೋನಿಯಾ ಗಾಂಧಿಯನ್ನು ಮೂರು ಸುತ್ತುಗಳ ವಿಚಾರಣೆಗೆ ಒಳಪಡಿಸಿದ್ದಾರೆ. ಇವರಿಬ್ಬರ ವಿಚಾರಣೆ ವೇಳೆಗೂ ಕೂಡ ಕಾಂಗ್ರೆಸ್ ಕಾರ್ಯಕರ್ತರು, ಪ್ರಮುಖರು ತೀವ್ರ ಪ್ರತಿಭಟನೆ ನಡೆಸಿದ್ದರು. ಇಂದು 12 ಸ್ಥಳಗಳಲ್ಲಿ ರೇಡ್​ ಆದ ಬಳಿಕವೂ ಅದನ್ನೇ ಮುಂದುವರಿಸಿದ್ದಾರೆ.

ಹೀಗೆ ಪ್ರತಿಪಕ್ಷಗಳ ಹಲವು ನಾಯಕರ ವಿರುದ್ಧ ಇ ಡಿ ತನಿಖೆ ಆಗುತ್ತಿರುವುದನ್ನು ಅನೇಕರು ಖಂಡಿಸಿದ್ದಾರೆ. ಹಣದುಬ್ಬರ, ನಿರುದ್ಯೋಗ ಸೇರಿ ಅನೇಕ ವಿಚಾರಗಳ ಬಗ್ಗೆ ನಾವೆಲ್ಲ ಧ್ವನಿ ಎತ್ತುತ್ತಿದ್ದೇವೆ. ನಾವು ಕೇಳುವ ಪ್ರಶ್ನೆಗಳಿಗಾಗಲಿ, ಜನಸಾಮಾನ್ಯರಿಗಾಗಲೀ ಉತ್ತರ ಕೊಡಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ತನಿಖಾ ಏಜೆನ್ಸಿಗಳ ಮೂಲಕ ಬಾಯಿ ಮುಚ್ಚಿಸುತ್ತಿದೆ. ಬರೀ ಕಾಂಗ್ರೆಸ್​ ನಾಯಕರನ್ನಷ್ಟೇ ಅಲ್ಲ, ಎಲ್ಲ ವಿಪಕ್ಷಗಳ ನಾಯಕರ ಮೇಲೆಯೂ ದೌರ್ಜನ್ಯ ನಡೆಯುತ್ತಿದೆ. ಆದರೆ ನಾವ್ಯಾರೂ ತಲೆಬಾಗುವುದಿಲ್ಲ ಎಂದು ಕಾಂಗ್ರೆಸ್ ವಕ್ತಾರ ಸೈಯದ್​ ನಸೀರ್​ ಹುಸ್ಸೇನ್​ ತಿಳಿಸಿದ್ದಾರೆ.

ಟ್ವೀಟ್ ಮಾಡಿದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್​, ‘ಪ್ರಮುಖ ಸೈದ್ಧಾಂತಿಕ ಪ್ರತಿಪಕ್ಷವಾದ ಕಾಂಗ್ರೆಸ್​ ಮೇಲಿನ ದಾಳಿಯನ್ನು ಕೇಂದ್ರ ಸರ್ಕಾರ ಮುಂದುವರಿಸಿದೆ. ಈಗ ಬಹದ್ದೂರ್ ಶಾ ಜಾಫರ್​ ಮಾರ್ಗ್​​​ನಲ್ಲಿರುವ ಹೆರಾಲ್ಡ್ ಹೌಸ್​ ಮೇಲೆ ಕೂಡ ಇಡಿ ದಾಳಿಯಾಗಿದೆ. ಇಷ್ಟರ ಮಟ್ಟಿಗಿನ ದ್ವೇಷದ ರಾಜಕಾರಣವನ್ನು ನಾವು ಖಂಡಿಸುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಮಾತನಾಡಿದರೆ ಇದು ಸಾಮಾನ್ಯ ಎಂಬಂತಾಗಿದೆ. ಆದರೆ ನಮ್ಮ ಬಾಯಿಮುಚ್ಚಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: National Herald Case | ನ್ಯಾಷನಲ್ ಹೆರಾಲ್ಡ್​ ಕಚೇರಿ ಸೇರಿ 10 ಪ್ರದೇಶಗಳಲ್ಲಿ ಇಡಿ ದಾಳಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Paris Olympics 2024: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ದೇಶದ ಕ್ರೀಡಾಪಟುಗಳ ಶ್ರೇಷ್ಠ ಪ್ರದರ್ಶನ; ಮೋದಿ ವಿಶ್ವಾಸ

Paris Olympics 2024: ಟೋಕಿಯೊ ಒಲಿಂಪಿಕ್​ ಚಿನ್ನದ ಪದಕ ವಿಜೇತ, ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ಅಥ್ಲೀಟಿಕ್​ ತಂಡಕ್ಕೆ ನಾಯಕನಾಗಿದ್ದಾರೆ. 28 ಸದಸ್ಯರನ್ನು ಒಳಗೊಂಡ ಟ್ರ್ಯಾಕ್ ಆ್ಯಂಡ್ ಫೀಲ್ಡ್ ತಂಡದ ಕಿರುಪಟ್ಟಿ ಈಗಾಗಲೇ ಪ್ರಕಟಗೊಂಡಿದೆ. ಟ್ರ್ಯಾಕ್ ಆ್ಯಂಡ್ ಫೀಲ್ಡ್ ಸ್ಪರ್ಧಾವಳಿಯು ಆಗಸ್ಟ್ 1ರಿಂದ 11ರ ತನಕ ಪ್ಯಾರಿಸ್ ನಲ್ಲಿ ನಡೆಯಲಿದೆ

VISTARANEWS.COM


on

Paris Olympics 2024
Koo

ನವದೆಹಲಿ: ಜುಲೈ 26ರಂದು ಆರಂಭಗೊಳ್ಳಲಿರುವ ಬಹುದೊಡ್ಡ ಕ್ರೀಡಾಕೂಟವಾದ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ(Paris Olympics 2024) ಪಾಲ್ಗೊಳ್ಳುವ ಭಾರತೀಯ ತಂಡವು ದೇಶವನ್ನು ಹೆಮ್ಮೆಪಡುವಂತೆ ಮಾಡುತ್ತದೆ ಮತ್ತು 140 ಕೋಟಿ ಜನರ ಆಕಾಂಕ್ಷೆಗಳನ್ನು ಈಡೇರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

“ಒಲಿಂಪಿಕ್ಸ್‌ಗಾಗಿ ಪ್ಯಾರಿಸ್‌ಗೆ ತೆರಳುತ್ತಿರುವ ಭಾರತೀಯ ತಂಡದೊಂದಿಗೆ ಪ್ರಧಾನಿ ಮೋದಿ ಅವರು ಸಂವಾದ ನಡೆಸಿದರು. ಈ ಸಂವಾದದ ಬಳಿಕ ಟ್ವೀಟ್​ ಮಾಡಿದ ಮೋದಿ, “ನಮ್ಮ ಅಥ್ಲೀಟ್​ಗಳು ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿ ದೇಶವನ್ನು ಹೆಮ್ಮೆಪಡಿಸುವ ವಿಶ್ವಾಸ ನನಗಿದೆ. ಅವರ ಜೀವನ ಪಯಣ ಮತ್ತು ಯಶಸ್ಸು 140 ಕೋಟಿ ಭಾರತೀಯರಿಗೆ ಭರವಸೆಯನ್ನು ನೀಡುತ್ತದೆ” ಎಂದು ಬರೆದುಕೊಂಡಿದ್ದಾರೆ. ಈ ಬಾರಿ ಪ್ಯಾರಿಸ್‌ ಗೇಮ್ಸ್‌ಗೆ ಭಾರತೀಯ ತಂಡವು ಸರಿಸುಮಾರು 120 ಅಥ್ಲೀಟ್​ಗಳನ್ನು ಕಳುಹಿಸಲಿದ್ದು ಕಳೆದ ಟೋಕಿಯೊ ಗೇಮ್ಸ್‌ಗಿಂತ ಉತ್ತಮ ಮಟ್ಟದ ನಿರ್ವಹಣೆಯನ್ನು ನೀಡುವ ಭರವಸೆ ಇಡಲಾಗಿದೆ.

ಅಥ್ಲೀಟಿಕ್​ ತಂಡಕ್ಕೆ ನೀರಜ್​ ನಾಯಕ


ಟೋಕಿಯೊ ಒಲಿಂಪಿಕ್​ ಚಿನ್ನದ ಪದಕ ವಿಜೇತ, ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ಅಥ್ಲೀಟಿಕ್​ ತಂಡಕ್ಕೆ ನಾಯಕನಾಗಿದ್ದಾರೆ. 28 ಸದಸ್ಯರನ್ನು ಒಳಗೊಂಡ ಟ್ರ್ಯಾಕ್ ಆ್ಯಂಡ್ ಫೀಲ್ಡ್ ತಂಡದ ಕಿರುಪಟ್ಟಿ ಈಗಾಗಲೇ ಪ್ರಕಟಗೊಂಡಿದೆ. ಟ್ರ್ಯಾಕ್ ಆ್ಯಂಡ್ ಫೀಲ್ಡ್ ಸ್ಪರ್ಧಾವಳಿಯು ಆಗಸ್ಟ್ 1ರಿಂದ 11ರ ತನಕ ಪ್ಯಾರಿಸ್​ನಲ್ಲಿ ನಡೆಯಲಿದೆ.

ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಪದಕ ಗೆಲ್ಲುವುದು ಭಾರತದ ಪ್ರಮುಖ ಗುರಿಯಾಗಿದೆ. ಟೋಕಿಯೊದಲ್ಲಿ ಭಾರತ ಒಟ್ಟು 7 ಪದಕ ಜಯಿಸಿತ್ತು. ಇದರಲ್ಲಿ ಒಂದು ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕ ಒಳಗೊಂಡಿತ್ತು. ಒಟ್ಟಾರೆಯಾಗಿ ಭಾರತ ಪದಕ ಪಟ್ಟಿಯಲ್ಲಿ 48ನೇ ಸ್ಥಾನ ಪಡೆದಿತ್ತು. ಕ್ರೀಡಾಕೂಟ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ. ಪ್ಯಾರಿಸ್ ಆತಿಥ್ಯದಲ್ಲಿ ನಡೆಯುತ್ತಿರುವ ಮೂರನೇ (1900 ಮತ್ತು 1924ರ ನಂತರ) ಟೂರ್ನಿ ಇದಾಗಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ.

ಇದನ್ನೂ ಓದಿ Paris Olympics 2024: ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ಭಾರತದ 9 ಅಥ್ಲೀಟ್​ಗಳು

ಈ ಬಾರಿಯ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ(Paris Olympics) ಭಾಗಿಯಾಗುವ ಭಾರತದ ಆ್ಯತ್ಲೀಟ್‌ಗಳಿಗೆ ಮನೆಯ ವಾತಾವರಣವನ್ನು ಕಲ್ಪಿಸುವ ಉದ್ದೇಶದಿಂದ ರಿಲಯನ್ಸ್‌ ಸಂಸ್ಥೆ “ಇಂಡಿಯಾ ಹೌಸ್​”(India House)​ ಎಂಬ ವಿಶೇಷ ವ್ಯವಸ್ಥೆಯೊಂದನ್ನು ಮಾಡಿದೆ. ಭಾರತೀಯ ಕ್ರೀಡಾಪಟುಗಳು ಇದರಲ್ಲೇ ಉಳಿದುಕೊಳ್ಳಲಿದ್ದಾರೆ.

ಇಂಡಿಯಾ ಹೌಸ್​ಗೆ ಎಲ್ಲ ದೇಶಗಳ ಪತ್ರಕರ್ತರಿಗೆ ಮುಕ್ತ ಪ್ರವೇಶವಿದೆ ಎಂದು ನೀತಾ ಅಂಬಾನಿ(Nita Ambani) ಹೇಳಿದ್ದಾರೆ. ನೀತಾ ಅಂಬಾನಿ ಅವರು ಅಂತಾರಾಷ್ಟ್ರೀಯ ಒಲಿಂಪಿಕ್ ಸಂಸ್ಥೆ (ಐಒಸಿ.) ಸದಸ್ಯೆಯಾಗಿದ್ದಾರೆ. ಅಮೆರಿಕಾದ ಲಾಸ್ ಏಂಜಲಿಸ್​ನಲ್ಲಿ 2028ರಲ್ಲಿ ನಡೆಯುವ ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್​ ಸೇರ್ಪಡೆಗೊಳ್ಳುವಲ್ಲಿ ನೀತಾ ಅಂಬಾನಿ ಅವರ ಪಾತ್ರವೂ ಪ್ರಮುಖವಾಗಿತ್ತು. ಕಳೆದ ವರ್ಷ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧಿವೇಶನ(International Olympic Committee Session) ಮುಂಬೈಯಲ್ಲಿ ನಡೆದ ವೇಳೆಯೂ ನೀತಾ ಅಂಬಾನಿ ಈ ಸಭೆಯ ವಕಾಲತ್ತು ವಹಿಸಿದ್ದರು.

Continue Reading

ದೇಶ

Hathras Stampede: ಇಂದು ಹತ್ರಾಸಕ್ಕೆ ರಾಹುಲ್‌ ಗಾಂಧಿ; ಕಾಲ್ತುಳಿತ ಸಂತ್ರಸ್ತರ ಭೇಟಿ

Hathras Stampede: ಉತ್ತರಪ್ರದೇಶದ ಹತ್ರಾಸಕ್ಕೆ ಇಂದು (ಜುಲೈ 5) ಲೋಕಸಭೆಯ ಪ್ರತಿಪಕ್ಷದ ನಾಯಕ, ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಭೇಟಿ ನೀಡಲಿದ್ದು, ಜುಲೈ 2ರಂದು ನಡೆದ ಕಾಲ್ತುಳಿತದಲ್ಲಿ ಮೃತಪಟ್ಟ ಮತ್ತು ಗಾಯಗೊಂಡವರ ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ.

VISTARANEWS.COM


on

Hathras Stampede
Koo

ಲಖನೌ: ಉತ್ತರಪ್ರದೇಶದ ಹತ್ರಾಸಕ್ಕೆ ಇಂದು (ಜುಲೈ 5) ಲೋಕಸಭೆಯ ಪ್ರತಿಪಕ್ಷದ ನಾಯಕ, ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ (Rahul Gandhi) ಭೇಟಿ ನೀಡಲಿದ್ದು, ಜುಲೈ 2ರಂದು ನಡೆದ ಕಾಲ್ತುಳಿತ (Hathras Stampede)ದಲ್ಲಿ ಮೃತಪಟ್ಟ ಮತ್ತು ಗಾಯಗೊಂಡವರ ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ. ಕಾಲ್ತುಳಿತಕ್ಕಿ ಸಿಲುಕಿ ಮೃತಪಟ್ಟಪಟ್ಟವರ ಸಂಖ್ಯೆ 123ಕ್ಕೆ ಏರಿದ್ದು, ಹಲವರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ದುರಂತದ ಹಿನ್ನೆಲೆ

ಉತ್ತರ ಪ್ರದೇಶದ ಹತ್ರಾಸ್‌ ಜಿಲ್ಲೆ ಮೊಘಲ್‌ಘರಾಹಿ ಗ್ರಾಮದಲ್ಲಿ ಜುಲೈ 2ರಂದು ಸ್ವಯಂ ಘೋಷಿತ ʼದೇವ ಮಾನವʼ ಭೋಲೆ ಬಾಬಾ (Bhole Baba) ಅವರ ಸತ್ಸಂಗ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಕ್ಕಟ್ಟಾದ ಸ್ಥಳದಲ್ಲಿ ಲಕ್ಷಾಂತರ ಮಂದಿ ಸೇರಿದ್ದರಿಂದ ಕಾಲ್ತುಳಿತ ಸಂಭವಿಸಿತ್ತು.

ಪೊಲೀಸ್‌ ತನಿಖೆಯ ಪ್ರಾಥಮಿಕ ವರದಿಯು, ʼʼ80 ಸಾವಿರ ಜನರಿಗಾಗಿ ಅನುಮತಿ ಪಡೆದ ಸತ್ಸಂಗ ಕಾರ್ಯಕ್ರಮದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ಭೋಲೆ ಬಾಬಾ ಮಧ್ಯಾಹ್ನ 12.30ರ ಸುಮಾರಿಗೆ ಸತ್ಸಂಗ ಪೆಂಡಾಲ್‌ಗೆ ಆಗಮಿಸಿದ್ದರು. ಕಾರ್ಯಕ್ರಮವು 1 ಗಂಟೆ ನಡೆಯಿತು. ನಂತರ ಮಧ್ಯಾಹ್ನ 1.40ರ ಸುಮಾರಿಗೆ ಭೋಲೆ ಬಾಬಾ ಪೆಂಡಾಲ್‌ನಿಂದ ಹೊರಬಂದರು. ಭೋಲೆ ಬಾಬಾ ಹೊರಡುವ ವೇಳೆ ವೇಳೆ ಲಕ್ಷಾಂತರ ಮಂದಿ ಅವರ ಪಾದ ಮುಟ್ಟಿ, ಅವರು ಮೆಟ್ಟಿದ ನೆಲದ ಮಣ್ಣನ್ನು ತೆಗೆದುಕೊಳ್ಳಲು ಓಡಿ ಹೋಗಿದ್ದಾರೆ. ಹಾಗೆ ಓಡಿ ಹೋಗುವ ಭರದಲ್ಲಿ ಕಾಲ್ತುಳಿತ ಉಂಟಾಗಿದೆ. ಒಬ್ಬರನ್ನೊಬ್ಬರು ತುಳಿದುಕೊಂಡು ಮುಂದೆ ಸಾಗಿದ್ದು ಹಾಗೂ ಚರಂಡಿಯಲ್ಲಿ ಬಿದ್ದಿದ್ದು ಸಾವಿನ ಸಂಖ್ಯೆ ಜಾಸ್ತಿಯಾಗಲು ಕಾರಣ” ಎಂದು ವಿವರಿಸಿದೆ.

ತಲೆ ಮರೆಸಿಕೊಂಡಿರುವ ಭೋಲೆ ಬಾಬಾ

ಘಟನೆ ನಡೆದ ಬಳಿಕ ಭೋಲೆ ಬಾಬಾ ತಲೆ ಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಭೋಲೆ ಬಾಬಾ ಅವರು ತಮ್ಮ ಮೈನ್ಪುರಿಯ ಆಶ್ರಮದಲ್ಲಿಯೂ ಕಂಡು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ ಭೋಲೆ ಬಾಬಾ ಅವರ ವಕೀಲರು ಮಾತನಾಡಿ, ʼʼಅವರು (ಭೋಲೆ ಬಾಬಾ) ಎಲ್ಲಿದ್ದಾರೆಂದು ತಿಳಿದಿಲ್ಲ. ಈ ದುರಂತಕ್ಕೆ ಅವರು ಕಾರಣರಲ್ಲ. ಅವರು ಕಾನೂನಿನ ಕಣ್ಣು ತಪ್ಪಿಸಿ ಓಡಾಡುವುದಿಲ್ಲ. ಅವು ಸಂವಿಧಾನವದಲ್ಲಿ ನಂಬಿಕೆ ಇರಿಸಿದ್ದಾರೆ. ನಾನು ನನ್ನ ಕೆಲಸ ಮಾಡುತ್ತಿದ್ದೇನೆ. ಅವರು ಪತ್ತೆಯಾದರೆ ಖಂಡಿತವಾಗಿತಯೂ ನಿಮಗೆ ತಿಳಿಸುತ್ತೇನೆʼʼ ಎಂದು ಭೋಲೆ ಬಾಬಾ ಅವರ ವಕೀಲ ಎ.ಪಿ.ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: Hathras Stampede: ಕಾಲ್ತುಳಿತದ ಬಳಿಕ ಕಾಲ್ಕಿತ್ತಿದ್ದ ಡೋಂಗಿ ಬಾಬಾ- ವೈರಲ್‌ ಆಯ್ತು ವಿಡಿಯೋ

ಭೋಲೆ ಬಾಬಾ ಅಜ್ಞಾತ ಸ್ಥಳದಿಂದ ಹೇಳಿಕೆ ಬಿಡುಗಡೆ ಮಾಡಿ, ಕಾಲ್ತುಳಿತಕ್ಕೆ ಸಮಾಜಘಾತಕ ಶಕ್ತಿಯೇ ಕಾರಣ ಎಂದು ಆರೋಪಿಸಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿ ತನಿಖೆ ಆರಂಭಿಸಿರುವ ಉತ್ತರ ಪ್ರದೇಶ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. “ಹತ್ರಾಸ್‌ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಹಾಗೂ ನಾಲ್ವರು ಪುರುಷರು ಸೇರಿ ಒಟ್ಟು ಆರು ಮಂದಿಯನ್ನು ಇದುವರೆಗೆ ಬಂಧಿಸಲಾಗಿದೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆ ಮಾಡಲಾಗುತ್ತಿದೆ” ಎಂದು ಅಲಿಗಢ ಐಜಿ ಶಾಲಾಭ್‌ ಮಾಥುರ್‌ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Continue Reading

ದೇಶ

10 ರೂ.ಗಾಗಿ ಎಲ್ಲರ ಮುಂದೆ ಪ್ಯಾಂಟ್‌ ಬಿಚ್ಚಿ, ಆಟೋ ಡ್ರೈವರ್‌ ಮೇಲೆ ಮಂಗಳಮುಖಿ ಹಲ್ಲೆ; Video ಇಲ್ಲಿದೆ

ಇ-ರಿಕ್ಷಾದಿಂದ ಚಾಲಕನನ್ನು ಇಳಿಸಿ, ಆತನ ಕೊರಳಪಟ್ಟಿ ಹಿಡಿದು, ಎಳೆದಾಡಿ ಹಲ್ಲೆ ನಡೆಸಿದ್ದಾರೆ. ಇದೇ ವೇಳೆ, ಆಟೋ ಚಾಲಕನು ಕೂಡ ಮಂಗಳಮುಖಿಗೆ ಹೊಡೆದಿದ್ದಾನೆ. ಇದೇ ವೇಳೆ, ಮಂಗಳಮುಖಿಗೆ ಏನು ಅನಿಸಿತೋ ಏನೋ, ಕೂಡಲೇ ತಮ್ಮ ಪ್ಯಾಂಟ್‌ ಬಿಚ್ಚಿ, ಬೆತ್ತಲೆಯಾಗಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

VISTARANEWS.COM


on

Viral Video
Koo

ನವದೆಹಲಿ: ರೈಲುಗಳಲ್ಲಿ, ಬಸ್‌ ಸ್ಟ್ಯಾಂಡ್‌ಗಳು, ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಮಂಗಳಮುಖಿಯರು (Transgenders) ಜನರಿಂದ 5-10 ರೂ. ಪಡೆಯುತ್ತಾರೆ. ಜನರೂ ಕರುಣೆ ತೋರಿಸಿ ಅವರಿಗೆ ಹಣ ನೀಡುತ್ತಾರೆ. ಕೆಲವೊಮ್ಮೆ ಕಾಡಿ-ಬೇಡಿ ಮಂಗಳಮುಖಿಯರು ಜನರಿಂದ ಹಣ ಪಡೆಯುತ್ತಾರೆ. ಇದರಿಂದ ಜಗಳಗಳೂ ನಡೆದಿರುವ ಉದಾಹರಣೆಗಳು ಇವೆ. ಇದಕ್ಕೆ ತಾಜಾ ನಿದರ್ಶನ ಎಂಬಂತೆ, ಮಂಗಳಮುಖಿಯೊಬ್ಬರು 10 ರೂ.ಗಾಗಿ ಎಲ್ಲರ ಮುಂದೆಯೇ ಪ್ಯಾಂಟ್‌ ಬಿಚ್ಚಿಕೊಂಡು, ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವಿಡಿಯೊ (Viral Video) ಈಗ ಭಾರಿ ವೈರಲ್‌ ಆಗಿದೆ.

ವ್ಯಕ್ತಿಯು ಇ-ರಿಕ್ಷಾವನ್ನು ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದು, ಈತನ ರಿಕ್ಷಾವನ್ನು ಮಂಗಳಮುಖಿ ಹತ್ತಿದ್ದಾರೆ. ಮಂಗಳಮುಖಿಯು ಇಳಿಯುವಾಗ ಎಂದಿನಂತೆ ಇ-ರಿಕ್ಷಾ ಚಾಲಕನು 10 ರೂ. ಬಾಡಿಗೆ ಕೊಡಿ ಎಂದಿದ್ದಾನೆ. ಇದರಿಂದ ಕುಪಿತಗೊಂಡ ಮಹಿಳೆಯು ಆತನ ಜತೆ ಜಗಳಕ್ಕೆ ನಿಂತಿದ್ದಾರೆ. ಯಾವುದೇ ಕಾರಣಕ್ಕೂ ಬಾಡಿಗೆ ಕೊಡುವುದಿಲ್ಲ ಎಂದು ಹೇಳುವ ಜತೆಗೆ ಬೈದಿದ್ದಾರೆ. ಇದಾದ ನಂತರ ಆಟೋ ಚಾಲಕನು ಕೂಡ ಗದರಿದ್ದಾನೆ. ಆಗ ಮಂಗಳಮುಖಿಯ ಕೋಪ ದ್ವಿಗುಣಗೊಂಡಿದೆ. ಕೂಡಲೇ ಆಟೋ ಚಾಲಕನ ಮೇಲೆ ದಾಳಿ ನಡೆಸಿದ್ದಾರೆ.‌ ಘಟನೆಯು ಎಲ್ಲಿ ನಡೆದಿದೆ ಎಂಬುದರ ಕುರಿತು ನಿಖರ ಮಾಹಿತಿ ಲಭ್ಯವಾಗಿಲ್ಲ.

ಇ-ರಿಕ್ಷಾದಿಂದ ಚಾಲಕನನ್ನು ಇಳಿಸಿ, ಆತನ ಕೊರಳಪಟ್ಟಿ ಹಿಡಿದು, ಎಳೆದಾಡಿ ಹಲ್ಲೆ ನಡೆಸಿದ್ದಾರೆ. ಇದೇ ವೇಳೆ, ಆಟೋ ಚಾಲಕನು ಕೂಡ ಮಂಗಳಮುಖಿಗೆ ಹೊಡೆದಿದ್ದಾನೆ. ಇದೇ ವೇಳೆ, ಮಂಗಳಮುಖಿಗೆ ಏನು ಅನಿಸಿತೋ ಏನೋ, ಕೂಡಲೇ ತಮ್ಮ ಪ್ಯಾಂಟ್‌ ಬಿಚ್ಚಿ, ಬೆತ್ತಲೆಯಾಗಿದ್ದಾರೆ. ಪ್ಯಾಂಟ್‌ ಬಿಚ್ಚಿ ಬೆತ್ತಲೆಯಾದ ಬಳಿಕವೂ ಅವರು ಮತ್ತೆ ಚಾಲಕನ ಮೇಳೆ ಹಲ್ಲೆ ನಡೆಸಿದ್ದಾರೆ. ಕೇವಲ 10 ರೂ.ಗಾಗಿ ಇಬ್ಬರೂ ರಸ್ತೆ ಮಧ್ಯೆ ಕಾದಾಡಿಕೊಂಡಿರುವ ವಿಡಿಯೊ ಭಾರಿ ಸದ್ದು ಮಾಡುತ್ತಿದೆ.

ವಿಡಿಯೊ ವೈರಲ್‌ ಆಗುತ್ತಲೇ ಹತ್ತಾರು ಅಭಿಪ್ರಾಯಗಳು ವ್ಯಕ್ತವಾಗಿವೆ. “ಆಟೋ ಚಾಲಕರು 10 ರೂ.ಗಾಗಿ ದುಡಿಯುತ್ತಾರೆ. ಮಂಗಳಮುಖಿಯರು ಅವರಿಗೆ ಬಾಡಿಗೆ ಕೊಡಬೇಕು. ಅವರು ಬೇಕಾದರೆ ಶ್ರೀಮಂತರ ಬಳಿ ಹಣ ಪಡೆಯಲಿ” ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ, “ಮಂಗಳಮುಖಿಯರು ಕೆಲಸ ಮಾಡುತ್ತೇವೆ ಎಂದರೆ ಯಾರೂ ಕೆಲಸ ಕೊಡಲ್ಲ. ಅವರಿಗೆ ಮಾನವೀಯತೆ ಆಧಾರದ ಮೇಲೆ ಜನ ನೆರವು ನೀಡಬೇಕು” ಎಂಬುದಾಗಿ ಹೇಳಿದ್ದಾರೆ. ಹೀಗೆ ಪರ-ವಿರೋಧಗಳ ಚರ್ಚೆಯಾಗಿದೆ.

ಇದನ್ನೂ ಓದಿ: Assault Case: ಸಾಲ ವಾಪಸ್‌ ಕೇಳಿದ್ದಕ್ಕೆ ಮಾರಣಾಂತಿಕ ಹಲ್ಲೆ ಮಾಡಿದ ಬಿಜೆಪಿ ಕಾರ್ಯಕರ್ತ

Continue Reading

ಕರ್ನಾಟಕ

Kalki 2898 AD: “ಕಲ್ಕಿ 2898 ಎಡಿ” ಸಿನಿಮಾ ನೋಡಲು ಜಪಾನ್‌ನಿಂದ ಹೈದರಾಬಾದ್‌ಗೆ ಬಂದ ಫ್ಯಾನ್ಸ್‌!

Kalki 2898 AD:ಪ್ಯಾನ್‌ ಇಂಡಿಯಾ ಸ್ಟಾರ್‌ ಎಂಬ ಹಣೆಪಟ್ಟಿಯನ್ನು ಮತ್ತಷ್ಟು ಗಟ್ಟಿಯಾಗಿಯೇ ಅಚ್ಚೊತ್ತಿಕೊಂಡಿದ್ದಾರೆ ಪ್ರಭಾಸ್‌. ಪ್ರಭಾಸ್ ಅವರ ಕಟ್ಟಾ ಅಭಿಮಾನಿಗಳ ತಂಡವೊಂದು ಇತ್ತೀಚೆಗೆ ಅವರ ‘ಕಲ್ಕಿ 2898 AD’ ಸಿನಿಮಾ ವೀಕ್ಷಿಸಲು ಜಪಾನ್‌ನಿಂದ ಹೈದರಾಬಾದ್‌ಗೆ ಆಗಮಿಸಿತ್ತು.

VISTARANEWS.COM


on

Fans came from Japan to Hyderabad to watch Prabhas starrer Kalki 2898 AD
Koo

ಬೆಂಗಳೂರು: ವೈಜಯಂತಿ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಬಹುಕೋಟಿ ವೆಚ್ಚದ ಕಲ್ಕಿ 2898 ಎಡಿ (Kalki 2898 AD) ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ಗಳಿಕೆಯ ನಾಗಾಲೋಟ ಮುಂದುವರಿಸಿದೆ. ಸಾಹಸ ದೃಶ್ಯಗಳಿಗೆ ಪ್ರೇಕ್ಷಕ ವರ್ಗ ಮೂಕವಿಸ್ಮಿತನಾಗಿದ್ದ. ನಿರ್ದೇಶಕ ನಾಗ್‌ ಅಶ್ವಿನ್‌ ಅವರ ಕೈ ಚಳಕಕ್ಕೂ ಬಹುಪರಾಕ್‌ ಸಿಕ್ಕಿತ್ತು. ಅಭಿಮಾನಿಗಳಿಂದಲೂ ಪ್ರಭಾಸ್‌ ಹೊಸ ಅವತಾರಕ್ಕೆ ಮೆಚ್ಚುಗೆಯ ಮಹಾಪೂರವೇ ಸಿಕ್ಕಿತ್ತು. ಸಲಾರ್‌ಗೂ ಮುನ್ನ ಸರಣಿ ಸೋಲು ಅನುಭವಿಸಿದ್ದ ಪ್ರಭಾಸ್‌ಗೀಗ ಕಲ್ಕಿ ಸಿನಿಮಾ ಮೂಲಕ ಮತ್ತೆ ಮರು ಜೀವ ಸಿಕ್ಕಿದೆ.

ಪ್ಯಾನ್‌ ಇಂಡಿಯಾ ಸ್ಟಾರ್‌ ಎಂಬ ಹಣೆಪಟ್ಟಿಯನ್ನು ಮತ್ತಷ್ಟು ಗಟ್ಟಿಯಾಗಿಯೇ ಅಚ್ಚೊತ್ತಿಕೊಂಡಿದ್ದಾರೆ ಪ್ರಭಾಸ್‌. ಕಲ್ಕಿ ಸಿನಿಮಾ ಅಂಥದ್ದೊಂದು ದೊಡ್ಡ ಗೆಲುವನ್ನು ಪ್ರಭಾಸ್‌ ಅವರಿಗೆ ನೀಡಿದೆ. ಫ್ಯಾಂಟಸಿ ಸಿನಿಮಾ ಮೂಲಕ, ಕಣ್ಣಿಗೆ ಅಚ್ಚರಿ ಎನಿಸುವ ದೃಶ್ಯಾವಳಿಗಳನ್ನೇ ನೋಡುಗರಿಗೆ ನೀಡಿ, ಮಾಸ್‌ ಆಕ್ಷನ್‌ ಸೀನ್‌ಗಳಿಂದ ಸಮೃದ್ಧವಾದ ಚಿತ್ರವನ್ನೇ ಪ್ರೇಕ್ಷಕನ ತಟ್ಟೆಗೆ ಬಡಿಸಿದ್ದಾರೆ ಪ್ರಭಾಸ್‌. ತಮ್ಮ ಗಮನಾರ್ಹವಾದ ಆನ್- ಸ್ಕ್ರೀನ್ ಪಾತ್ರದಿಂದಲೇ ಗಮನ ಸೆಳೆದ ಪ್ರಭಾಸ್‌, ಜಾಗತಿಕ ಅಭಿಮಾನಿಗಳಿಗೂ ಹಬ್ಬದೂಟ ಹಾಕಿಸಿದ್ದಾರೆ.

ಪ್ರಭಾಸ್ ಅವರ ಕಟ್ಟಾ ಅಭಿಮಾನಿಗಳ ತಂಡವೊಂದು ಇತ್ತೀಚೆಗೆ ಅವರ ‘ಕಲ್ಕಿ 2898 AD’ ಸಿನಿಮಾ ವೀಕ್ಷಿಸಲು ಜಪಾನ್‌ನಿಂದ ಹೈದರಾಬಾದ್‌ಗೆ ಆಗಮಿಸಿತ್ತು. ಈ ಅದ್ಭುತ ಗೆಸ್ಚರ್ ಸೂಪರ್‌ಸ್ಟಾರ್‌ನ ಜಾಗತಿಕ ಸ್ಟಾರ್‌ಡಮ್‌ಗೆ ಹಿಡಿದ ಸಾಕ್ಷಿ.

ಇದನ್ನೂ ಓದಿ: Lakshmi Hebbalkar: ಅಂಗನವಾಡಿ ಹೆಸರು ಶೀಘ್ರದಲ್ಲೇ ಬದಲಾವಣೆ! ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸುಳಿವು

ಚಿತ್ರದ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್, ಹೈದರಾಬಾದ್‌ನ ಪ್ರಸಾದ್ಸ್ ಮಲ್ಟಿಪ್ಲೆಕ್ಸ್‌ನಲ್ಲಿ ಐಕಾನಿಕ್ ‘ರೆಬೆಲ್’ ಟ್ರಕ್ ಪಕ್ಕದಲ್ಲಿ ನಿಂತಿರುವ ಮೂವರು ಜಪಾನೀ ಅಭಿಮಾನಿಗಳ ಫೋಟೋಗಳನ್ನು ಹಂಚಿಕೊಂಡಿದೆ. ಪ್ರಭಾಸ್ ಪಾತ್ರದ ಭೈರವ ಮತ್ತು ಬುಜ್ಜಿ ವಾಹನದ ಫೋಟೋ ಇರುವ ವಿಶೇಷ ಬಾವುಟ ಹಿಡಿದು “ಕಲ್ಕಿ 2898 AD. ಬಿಡುಗಡೆಗೆ ಅಭಿನಂದನೆಗಳು!! ಜಪಾನಿನ ಅಭಿಮಾನಿಗಳಿಂದ 2024.6.27.” ಎಂದು ಜಪಾನಿನ ಫ್ಯಾನ್ಸ್‌ ಖುಷಿ ವ್ಯಕ್ತಪಡಿಸಿದ್ದಾರೆ.

‘ಸಲಾರ್’ ನಂತರ ಬಿಡುಗಡೆಯಾದ ಕಲ್ಕಿ ಸಿನಿಮಾ ಮೂಲಕ, ಪ್ರಭಾಸ್ ಚಿತ್ರೋದ್ಯಮದಲ್ಲಿ ಮತ್ತೊಂದು ಹೊಸ ಮೈಲಿಗಲ್ಲು ತಲುಪಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಮಟ್ಟದ ಓಪನಿಂಗ್ ಪ್ರಭಾಸ್‌ ಸಿನಿಮಾಗಳಿಗೆ ಸಿಗುತ್ತಿವೆ. ಇದೀಗ ‘ಕಲ್ಕಿ 2898 AD’ ಸಿನಿಮಾ ಸಹ ಇದಕ್ಕೆ ಹೊರತಾಗಿಲ್ಲ, ಇದು ಭಾರತೀಯ ಚಿತ್ರರಂಗದಲ್ಲಿ ಅವರ ಮೂರನೇ ಅತಿದೊಡ್ಡ ಕಲೆಕ್ಷನ್‌ ಮಾಡಿದ ಸಿನಿಮಾವಾಗಿದೆ.

ಇದನ್ನೂ ಓದಿ: Uttara Kannada News: ಉ.ಕ ಜಿಲ್ಲೆಯಲ್ಲಿ ವ್ಯಾಪಕ ಮಳೆ, ರಕ್ಷಣೆಗೆ ಎನ್.ಡಿ.ಆರ್.ಎಫ್ ತಂಡ

‘ಬಾಹುಬಲಿ’ಯಿಂದ ‘ಸಲಾರ್’, ‘ಕಲ್ಕಿ 2898 AD’ ವರೆಗೆ ಪ್ರಭಾಸ್ ತಮ್ಮ ಸ್ಟಾರ್ ಪವರ್‌ಗೆ ಸಾಟಿಯಿಲ್ಲ ಎಂಬುದನ್ನು ಸಾಬೀತುಪಡಿಸುತ್ತಲೇ ಬಂದಿದ್ದಾರೆ. ಸಮಕಾಲೀನ ಸಿನಿಮಾರಂಗದಲ್ಲಿ ಅತ್ಯಂತ ಅಪ್ರತಿಮ ಮತ್ತು ಪ್ರಭಾವಶಾಲಿ ನಟರಲ್ಲಿ ಒಬ್ಬರಾಗಿ ಹೊರಹೊಮ್ಮುತ್ತಿದ್ದಾರೆ ಪ್ರಭಾಸ್.‌ ಅಂದಹಾಗೆ ನಾಗ್ ಅಶ್ವಿನ್ ನಿರ್ದೇಶಿಸಿದ, ‘ಕಲ್ಕಿ 2898 AD’ 2898 AD ವರ್ಷದಲ್ಲಿ ಹಿಂದೂಗಳ ಮಹಾಕಾವ್ಯ ಮಹಾಭಾರತದಿಂದ ಸ್ಫೂರ್ತಿ ಪಡೆದು ನಿರ್ಮಿಸಲಾಗಿದೆ. ಈ ವೈಜ್ಞಾನಿಕ ಆಕ್ಷನ್ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಮತ್ತು ಕಮಲ್ ಹಾಸನ್ ಅವರಂತಹ ಲೆಜಂಡರಿ ಕಲಾವಿದರಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಸೇರಿ ಸಾಕಷ್ಟು ಕಲಾವಿದರು ಬಣ್ಣ ಹಚ್ಚಿದ್ದಾರೆ.

Continue Reading
Advertisement
Paris Olympics 2024
ಕ್ರೀಡೆ3 mins ago

Paris Olympics 2024: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ದೇಶದ ಕ್ರೀಡಾಪಟುಗಳ ಶ್ರೇಷ್ಠ ಪ್ರದರ್ಶನ; ಮೋದಿ ವಿಶ್ವಾಸ

Prajwal Devaraj New Movie Rakshasa
ಸ್ಯಾಂಡಲ್ ವುಡ್10 mins ago

Prajwal Devaraj: ಮೊದಲ ಬಾರಿಗೆ ಹಾರರ್ ಸಿನಿಮಾದಲ್ಲಿ ಡೈನಾಮಿಕ್‌ ಪ್ರಿನ್ಸ್ `ಪ್ರಜ್ವಲ್ ದೇವರಾಜ್`

Hathras Stampede
ದೇಶ26 mins ago

Hathras Stampede: ಇಂದು ಹತ್ರಾಸಕ್ಕೆ ರಾಹುಲ್‌ ಗಾಂಧಿ; ಕಾಲ್ತುಳಿತ ಸಂತ್ರಸ್ತರ ಭೇಟಿ

Sleep Apnea
ಆರೋಗ್ಯ27 mins ago

Sleep Apnea: ಗೊರಕೆಯೆಂದು ನಿರ್ಲಕ್ಷಿಸಬೇಡಿ, ಇದು ಜೀವಕ್ಕೂ ಎರವಾದೀತು!

Job Interview
Latest27 mins ago

Job Interview: ಉದ್ಯೋಗ ಸಂದರ್ಶನವನ್ನು ಹೇಗೆ ಎದುರಿಸಬೇಕು? ಈ ಟಿಪ್ಸ್‌ ಫಾಲೋ ಮಾಡಿ

chemicals in food
ಕೋಲಾರ34 mins ago

Chemicals in Food: ಕ್ಯಾನ್ಸರ್​ ಕಾರಕ ಅಂಶವಿರುವ ರಾಸಾಯನಿಕ ಕಲರ್ ಬಳಸಿದ ಸ್ವೀಟ್​ ವಶಕ್ಕೆ

dengue fever hassan news
ಹಾಸನ55 mins ago

Dengue Fever: ಹಾಸನದಲ್ಲಿ ಶಂಕಿತ ಡೆಂಗ್ಯು ಜ್ವರದಿಂದ ನಾಲ್ಕನೇ ಬಾಲಕಿ ಬಲಿ

Hot Corn Recipe
ಆಹಾರ/ಅಡುಗೆ1 hour ago

Hot Corn Recipe: ಮಳೆಗಾಲದಲ್ಲಿ ಬಿಸಿಬಿಸಿಯಾದ ಜೋಳವನ್ನು ಮನೆಯಲ್ಲೇ ಮಾಡುವುದು ಹೇಗೆ?

karnataka Weather Forecast Rain
ಮಳೆ2 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

Vastu Tips
ಧಾರ್ಮಿಕ2 hours ago

Vastu Tips: ಉದ್ಯೋಗದಲ್ಲಿ ಪ್ರಗತಿ ಸಾಧಿಸಬೇಕೆ? ಹೀಗೆ ಮಾಡಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast Rain
ಮಳೆ2 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

karnataka Weather Forecast
ಮಳೆ14 hours ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

karnataka Rain
ಮಳೆ16 hours ago

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

wild animal attack
ಬೆಂಗಳೂರು ಗ್ರಾಮಾಂತರ17 hours ago

Wild Animal Attack : ಮಾಗಡಿಯಲ್ಲಿ ರೈತನ ತಲೆ ಬಗೆದ ಕರಡಿ; ಮಲೆನಾಡಿನಲ್ಲಿ ಆನೆಗಳ ಹಾವಳಿ

Chikkaballapura News
ಚಿಕ್ಕಬಳ್ಳಾಪುರ18 hours ago

Chikkaballapura News : ಒಂದು ವರ್ಷದ ಮಗು ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್!

karnataka Rain
ಮಳೆ19 hours ago

Karnataka Rain : ಧಾರಾಕಾರ ಮಳೆಗೆ ಗುಡ್ಡ ಕುಸಿತ; ಹೊನ್ನಾವರ-ಬೆಂಗಳೂರು ಹೆದ್ದಾರಿ ಬಂದ್

Karnataka Rain
ಮಳೆ20 hours ago

Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

Tornado Effect in Udupi
ಉಡುಪಿ21 hours ago

Tornado Effect : ಉಡುಪಿಯ ರಟ್ಟಾಡಿಯಲ್ಲಿ ಭಾರಿ ಶಬ್ದದೊಂದಿಗೆ ಅಪ್ಪಳಿಸಿದ ಸುಂಟರಗಾಳಿ

karnataka weather Forecast
ಮಳೆ3 days ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ4 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ಟ್ರೆಂಡಿಂಗ್‌