ಸೇತುವೆಯಿಂದ ಕೆಳಗೆ ಉರುಳಿಬಿದ್ದ ಬಸ್​; 14 ಪ್ರಯಾಣಿಕರ ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ​ - Vistara News

ದೇಶ

ಸೇತುವೆಯಿಂದ ಕೆಳಗೆ ಉರುಳಿಬಿದ್ದ ಬಸ್​; 14 ಪ್ರಯಾಣಿಕರ ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ​

ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿ, ಬಸ್​ ಆಯತಪ್ಪಿ ಉರುಳಿ ಬೀಳುತ್ತಿದ್ದಂತೆ ಸ್ಥಳೀಯರು ಅಲ್ಲಿಗೆ ದೌಡಾಯಿಸಿದ್ದಾರೆ. ಅನೇಕರನ್ನು ರಕ್ಷಿಸಿದ್ದಾರೆ.

VISTARANEWS.COM


on

14 Killed in Bus Accident In Madhya Pradesh
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಭೋಪಾಲ್​: ಮಧ್ಯಪ್ರದೇಶದ (Madhya Pradesh)ಖಾರ್ಗೋನ್​​ನಲ್ಲಿ ಬಸ್​ವೊಂದು 50 ಅಡಿ ಎತ್ತರದ ಸೇತುವೆ ಕೆಳಗೆ ಉರುಳಿ (Bus Accident), ಅದರಲ್ಲಿದ್ದ 14 ಪ್ರಯಾಣಿಕರು ಮೃತಪಟ್ಟಿದ್ದರೆ. 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಬಸ್​ ಇಂದೋರ್​ಗೆ ತೆರಳುತ್ತಿತ್ತು. ಸುಮಾರು 70-80 ಪ್ರಯಾಣಿಕರು ಅದರಲ್ಲಿ ಇದ್ದರು ಎನ್ನಲಾಗಿದೆ. ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿ, ಬಸ್​ ಆಯತಪ್ಪಿ ಉರುಳಿ ಬೀಳುತ್ತಿದ್ದಂತೆ ಸ್ಥಳೀಯರು ಅಲ್ಲಿಗೆ ದೌಡಾಯಿಸಿದ್ದಾರೆ. ಅನೇಕರನ್ನು ರಕ್ಷಿಸಿದ್ದಾರೆ. ಅಷ್ಟರಲ್ಲಿ ಪೊಲೀಸರು ಕೂಡ ಅಲ್ಲಿಗೆ ಧಾವಿಸಿದ್ದರು. ಗಾಯಾಳುಗಳನ್ನೆಲ್ಲ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾಧಿಕಾರಿ ಶಿವರಾಜ್ ಸಿಂಗ್ ವರ್ಮಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಉತ್ತರ ಪ್ರದೇಶದಲ್ಲಿ 10 ಮಂದಿ ಸಾವು
ಉತ್ತರ ಪ್ರದೇಶದ ಮೊರಾದಾಬಾದ್​ ಜಿಲ್ಲೆಯ ದಳಪುತ್​ಪುರ-ಕಾಶಿಪುರ ಹೈವೇನಲ್ಲಿ ಪಿಕಪ್​ ವಾಹನಕ್ಕೆ ಟ್ರಕ್​​ವೊಂದು ಡಿಕ್ಕಿ ಹೊಡೆದು 10 ಮಂದಿ ಮೃತಪಟ್ಟಿದ್ದಾರೆ. ಈ ಘಟನೆ ಸೋಮವಾರ ನಡೆದಿದೆ. 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರೆಲ್ಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪಿಕ್​ಅಪ್​ ವಾಹನದಲ್ಲಿ ಒಂದೇ ಕುಟುಂಬದವರು, ಬಂಧು-ಬಳಗದವರೇ ಇದ್ದರು. ಇವರೆಲ್ಲ ಒಂದು ಮದುವೆ ಸಮಾರಂಭಕ್ಕೆ ಹೋಗುತ್ತಿದ್ದರು. ಟ್ರಕ್​ ಡಿಕ್ಕಿಯಾಗಿದ್ದಷ್ಟೇ ಅಲ್ಲದೆ, ಆ ಪಿಕ್​ಅಪ್​ ವಾಹನದ ಮೇಲೆ ಉರುಳಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಇದನ್ನೂ ಓದಿ: Road Accident : ತುಮಕೂರು ಬಳಿ ರಸ್ತೆ ಅಪಘಾತ; ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ದುರ್ಮರಣ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Election Results 2024: ರಾಮನೂರಿನಲ್ಲೇ ಬಿಜೆಪಿ ಹಿನ್ನಡೆ; ಹೀನಾಯ ಸೋಲಿಗೆ ಕಾರಣ ಏನು?

Election Results 2024:ಅಯೋಧ್ಯೆಯನ್ನು ಒಳಗೊಂಡಿರುವ ಫೈಜಾಬಾದ್ ಲೋಕಸಭಾ ಕ್ಷೇತ್ರದಲ್ಲಿ (Faizabad Election Result) ಎಸ್‌ಪಿ (SP) ಅಭ್ಯರ್ಥಿಯ ಮುಂದೆ ಬಿಜೆಪಿ (BJP) ಅಭ್ಯರ್ಥಿ ಸೋತಿದ್ದಾರೆ. ಅಯೋಧ್ಯೆಯನ್ನು ಒಳಗೊಂಡ ಫೈಜಾಬಾದ್‌ ಕ್ಷೇತ್ರದಲ್ಲಿ ಸಮಾಜವಾದಿ ಪಾರ್ಟಿ ಅಭ್ಯರ್ಥಿ ಅವಧೇಶ್ ಪ್ರಸಾದ್ ಮುಂದೆ ಬಿಜೆಪಿ ಅಭ್ಯರ್ಥಿ ಲಲ್ಲು ಸಿಂಗ್ ಸೋತಿದ್ದಾರೆ. ಫೈಜಾಬಾದ್‌ನಿಂದ ಮೂರು ಬಾರಿ ಸಂಸದರಾಗಿರುವ ಸಿಂಗ್ ಅವರ ಈ ಸಲದ ಸೋಲು ಅಚ್ಚರಿದಾಯಕವಾಗಿದೆ.

VISTARANEWS.COM


on

Election Results 2024
Koo

ನವದೆಹಲಿ: ಉತ್ತರಪ್ರದೇಶ(Uttar Pradesh)ದಲ್ಲಿ ಈ ಬಾರಿ ಡಬಲ್‌ ಎಂಜಿನ್‌ ಸರ್ಕಾರವಾಗಲೀ, ಅಯೋಧ್ಯೆ(Ayodhya) ರಾಮ ಮಂದಿರವಾಗಲಿ ಬಿಜೆಪಿ(BJP)ಗೆ ವರವಾಗಿಲ್ಲ. ಇಡೀ ಸುಮಾರು 60ಕ್ಕಿಂತ ಹೆಚ್ಚಿನ ಸ್ಥಾನದ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ಕನಸಿಗೆ ಈ ಬಾರಿ ತನ್ನೀರೆರಚಿದಂತಾಗಿದ್ದು, ಕೇವಲ 33 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು(Election Results 2024). ಇದರಿಂದ ಬಿಜೆಪಿಗೆ ಬಹಳ ಮುಖಭಂಗ ಎದುರಿಸುವಂತಾಗಿದೆ. ಅದರಲ್ಲೂ ಈ ಬಾರಿ ಶ್ರೀರಾಮನ ಮಂದಿರ ನಿರ್ಮಾಣಗೊಂಡು ಇಡೀ ಜಗತ್ತನ್ನೇ ಸೆಳೆದಿದ್ದ ಅಯೋಧ್ಯೆಯಲ್ಲೇ ಬಿಜೆಪಿ ಹಿನ್ನಡೆ ಅನುಭವಿಸಿರುವುದು ಪಕ್ಷಕ್ಕೆ ದೇಶ-ವಿದೇಶದಲ್ಲೂ ಮುಖಭಂಗ ಎದುರಿಸುವಂತಾಗಿದೆ. ಹಾಗಿದ್ದರೆ ಅಯೋಧ್ಯೆಯಲ್ಲೇ ಬಿಜೆಪಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ಹಿನ್ನಡೆ ಅನುಭವಿಸಲು ಕಾರಣ ಏನು?

ಅಯೋಧ್ಯೆಯನ್ನು ಒಳಗೊಂಡಿರುವ ಫೈಜಾಬಾದ್ ಲೋಕಸಭಾ ಕ್ಷೇತ್ರದಲ್ಲಿ (Faizabad Election Result) ಎಸ್‌ಪಿ (SP) ಅಭ್ಯರ್ಥಿಯ ಮುಂದೆ ಬಿಜೆಪಿ (BJP) ಅಭ್ಯರ್ಥಿ ಸೋತಿದ್ದಾರೆ. ಅಯೋಧ್ಯೆಯನ್ನು ಒಳಗೊಂಡ ಫೈಜಾಬಾದ್‌ ಕ್ಷೇತ್ರದಲ್ಲಿ ಸಮಾಜವಾದಿ ಪಾರ್ಟಿ ಅಭ್ಯರ್ಥಿ ಅವಧೇಶ್ ಪ್ರಸಾದ್ ಮುಂದೆ ಬಿಜೆಪಿ ಅಭ್ಯರ್ಥಿ ಲಲ್ಲು ಸಿಂಗ್ ಸೋತಿದ್ದಾರೆ. ಫೈಜಾಬಾದ್‌ನಿಂದ ಮೂರು ಬಾರಿ ಸಂಸದರಾಗಿರುವ ಸಿಂಗ್ ಅವರ ಈ ಸಲದ ಸೋಲು ಅಚ್ಚರಿದಾಯಕವಾಗಿದೆ. ಸಮಾಜವಾದಿ ಪಕ್ಷದ ಅಭ್ಯರ್ಥಿಗಿಂತ 10,000ಕ್ಕೂ ಅಧಿಕ ಮತಗಳ ಅಂತರದಿಂದ ಸಿಂಗ್‌ ಹಿಂದುಳಿದರು. ಫೈಜಾಬಾದ್ ಜಿಲ್ಲೆಯನ್ನು 2018ರಲ್ಲಿ ಅಧಿಕೃತವಾಗಿ ಅಯೋಧ್ಯೆ ಎಂದು ಮರುನಾಮಕರಣ ಮಾಡಲಾಯಿತು. ಆದಾಗ್ಯೂ, ಲೋಕಸಭಾ ಸ್ಥಾನವನ್ನು ಇನ್ನೂ ಫೈಜಾಬಾದ್ ಎಂದು ಕರೆಯಲಾಗುತ್ತದೆ.

ಅಯೋಧ್ಯೆಯಲ್ಲಿ ಬಿಜೆಪಿ ಸೋಲಿಗೆ ಕಾರಣವಾದ ಅಂಶಗಳಾವುದು?

ಬಿಜೆಪಿ ಈ ಬಾರಿ ಹಿಂದುಳಿದ ವರ್ಗ ಮತ್ತು ದಲಿತ ವರ್ಗದಿಂದ ಅಂತರ ಕಾಯ್ದುಕೊಂಡು ಬಂದಿರುವುದು ಕೂಡ ಎಸ್‌ಪಿಗೆ ಲಾಭದಾಯಕವಾಗಿತ್ತು. ಅದೂ ಅಲ್ಲದೇ ಮಂದಿರ ನಿರ್ಮಾಣಕ್ಕೆಂದು ಜನರ ಭೂಮಿಯನ್ನು ಪಡೆದಿದ್ದು, ಅದರ ಪರಿಹಾರ ಹಣ ಇನ್ನೂ ಒದಗಿಸಿಲ್ಲ ಎಂಬುದನ್ನು ಸರಿಯಾದ ರೀರಿಯಲ್ಲಿ ಜನರಿಗೆ ಮನದಟ್ಟು ಮಾಡುವಲ್ಲಿ ಅಖಿಲೇಶ್‌ ಯಾದವ್‌ ಬಣ ಯಶಸ್ವಿ ಆಗಿತ್ತು. ಅದೂ ಅಲ್ಲದೇ ರಾಜ್ಯ ಮತ್ತು ಕೇಂದ್ರ ಬಿಜೆಪಿ ನಡುವಿನ ಬಿಕ್ಕಟ್ಟನ್ನು ಜನರಿಗೆ ಎತ್ತಿ ತೋರಿಸಲಾಯಿತು. ಇವೆಲ್ಲಾ ಕಾರಣಗಳಿಂದಾಗಿ ಬಿಜೆಪಿ ಮೇಲಿನ ಒಲುವು ಜನರಿಗೆ ಕಡಿಮೆ ಆಯಿತು.

ಬಿಜೆಪಿಯ ‘400 ಪಾರ್’ ಘೋಷಣೆ ಹೇಗೆ ಹಿನ್ನಡೆಯಾಯಿತು?

ಚುನಾವಣೆ ಆರಂಭಕ್ಕೂ ಮುನ್ನ ಬಿಜೆಪಿ ಈ ಬಾರಿ ʼ400 ಪಾರ್ʼ ಘೋಷಣೆ ಕೂಗುತ್ತಲೇ ಬಂದಿದೆ. ಇದೆ ವಿಚಾರವನ್ನು ಎತ್ತಿಕೊಂಡ ಸಮಾಜವಾದಿ ಪಕ್ಷ ಬಿಜೆಪಿ ಒಂದು ವೇಳೆ 400ಕ್ಕೂ ಅಧಿಕ ಸ್ಥಾನಗಳನ್ನು ಗಳಿಸಿದರೆ ಸಂವಿಧಾನವನ್ನೇ ಬದಲಿಸಿ ಬಿಡುತ್ತದೆ. ಆ ಮೂಲಕ ದಲಿತರು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಮೀಸಲಾತಿಯನ್ನು ಸಂಪೂರ್ಣವಾಗಿ ತೆಗೆದು ಹಾಕುತ್ತದೆ ಎಂದು ಪ್ರಚಾರ ಕಾರ್ಯಕ್ರಮದಲ್ಲಿ ಒತ್ತಿ ಒತ್ತಿ ಹೇಳಿತ್ತು.

ದಲ್ಲದೆ, ಸಮಾಜವಾದಿ ಪಕ್ಷದ ಮತಬ್ಯಾಂಕ್ ಪರವಾಗಿ ಪ್ರಬಲವಾದ ಜಾತಿ ಸಮೀಕರಣವನ್ನು ಹೊಂದಿರುವ ಸ್ಥಾನಗಳಲ್ಲಿ ಫೈಜಾಬಾದ್ ಕೂಡ ಒಂದಾಗಿದೆ. ಅಲ್ಲದೆ, ಸಮಾಜವಾದಿ ಪಕ್ಷಕ್ಕೆ ಕೆಲಸ ಮಾಡಿದಂತೆ ತೋರುತ್ತಿರುವುದು ಬಿಜೆಪಿಯು ಬ್ರೂಟ್ ಬಹುಮತವನ್ನು ಪಡೆದರೆ ಸಂವಿಧಾನವನ್ನು ಬದಲಾಯಿಸುವ ನಿರೂಪಣೆಯಾಗಿದೆ. ಸಮಾಜವಾದಿ ಪಕ್ಷದ ಆರೋಪಕ್ಕೆ ಸರಿಯಾದ ಸಷ್ಟನೆ ಕೊಡುವಲ್ಲಿ ಸೋತ ಬಿಜೆಪಿ ಜನರ ವಿಶ್ವಾಸವನ್ನೇ ಕಳೆದುಕೊಂಡಿತು.

ಫೈಜಾಬಾದ್‌ನಲ್ಲಿನ ಜಾತಿ ಸಮೀಕರಣವೇ ಬಿಜೆಪಿ ಸೋಲಿಗೆ ಪ್ರಮುಖ ಕಾರಣ ಎಂದು ಪರಿಗಣಿಸಲಾಗಿದೆ. ಅಯೋಧ್ಯೆಯು ಅತಿ ಹೆಚ್ಚು OBC ಮತದಾರರನ್ನು ಹೊಂದಿದೆ, ಕುರ್ಮಿಗಳು ಮತ್ತು ಯಾದವ ಸಮುದಾಯವೇ ಬಲಿಷ್ಟವಾಗಿದೆ. ಒಬಿಸಿಗಳು 22% ಮತದಾರರು ಮತ್ತು ದಲಿತರು 21% ರಷ್ಟಿದ್ದಾರೆ. ದಲಿತರ ಪೈಕಿ ಪಾಸಿ ಸಮುದಾಯದವರು ಗರಿಷ್ಠ ಮತದಾರರನ್ನು ಹೊಂದಿದ್ದಾರೆ. ವಿಜೇತ ಅಭ್ಯರ್ಥಿ ಅವಧೇಶ್ ಪ್ರಸಾದ್ ಪಾಸಿ ಸಮುದಾಯಕ್ಕೆ ಸೇರಿದವರು.

ಇದನ್ನೂ ಓದಿ: Valmiki Corporation Scam: ಸಚಿವ ನಾಗೇಂದ್ರ ಇಂದೇ ರಾಜೀನಾಮೆ: ಖಚಿತಪಡಿಸಿದ ಡಿಸಿಎಂ ಡಿಕೆಶಿ

Continue Reading

ವೈರಲ್ ನ್ಯೂಸ್

K Annamalai: ಮೇಕೆಯ ತಲೆಗೆ ಅಣ್ಣಾಮಲೈ ಫೋಟೊ ಅಂಟಿಸಿ ಕಡಿದ ಡಿಎಂಕೆ ಕಾರ್ಯಕರ್ತರು!

K Annamalai: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನ ಕೊಯಮತ್ತೂರು (Coimbatore) ಕ್ಷೇತ್ರದಿಂದ ತಮಿಳುನಾಡು ಬಿಜೆಪಿ ಅಧ್ಯಕ್ಷ, ಮಾಜಿ ಐಪಿಎಸ್‌ ಅಧಿಕಾರಿ ಕೆ. ಅಣ್ಣಾಮಲೈ (K Annamalai) ಕಣಕ್ಕೆ ಇಳಿದು ಕಾರ್ಯಕರ್ತರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದರು. ಪ್ರಬಲ ಪೈಪೋಟಿ ಒಡ್ಡಿದ್ದ ಅವರು ಕೊನೆಗೆ ಡಿಎಂಕೆಯ ಗಣಪತಿ ಪಿ. ರಾಜ್‌ಕುಮಾರ್ ವಿರುದ್ಧ ಸೋಲು ಕಂಡಿದ್ದರು. ಇದೀಗ ಡಿಎಂಕೆ ಕಾರ್ಯಕರ್ತರು ವಿಜಯೋತ್ಸವ ಆಚರಿಸುವ ವೇಳೆ ಅಣ್ಣಾಮಲೈ ವಿರುದ್ಧ ಅತಿರೇಕದ ವರ್ತನೆ ತೋರಿದ್ದು, ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

VISTARANEWS.COM


on

K Annamalai
Koo

ಚೆನ್ನೈ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನ ಕೊಯಮತ್ತೂರು (Coimbatore) ಕ್ಷೇತ್ರದಿಂದ ತಮಿಳುನಾಡು ಬಿಜೆಪಿ ಅಧ್ಯಕ್ಷ, ಮಾಜಿ ಐಪಿಎಸ್‌ ಅಧಿಕಾರಿ ಕೆ. ಅಣ್ಣಾಮಲೈ (K Annamalai) ಕಣಕ್ಕೆ ಇಳಿದು ಕಾರ್ಯಕರ್ತರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದರು. ಪ್ರಬಲ ಪೈಪೋಟಿ ಒಡ್ಡಿದ್ದ ಅವರು ಕೊನೆಗೆ ಡಿಎಂಕೆಯ ಗಣಪತಿ ಪಿ. ರಾಜ್‌ಕುಮಾರ್ ವಿರುದ್ಧ ಸೋಲು ಕಂಡಿದ್ದರು. ಇದೀಗ ಡಿಎಂಕೆ ಕಾರ್ಯಕರ್ತರು ವಿಜಯೋತ್ಸವ ಆಚರಿಸುವ ವೇಳೆ ಅಣ್ಣಾಮಲೈ ವಿರುದ್ಧ ಅತಿರೇಕದ ವರ್ತನೆ ತೋರಿದ್ದು, ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ (Viral Video). ಜತೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ.

ಡಿಎಂಕೆ ಕಾರ್ಯಕರ್ತರು ಮೇಕೆಯ ತಲೆಗೆ ಅಣ್ಣಾಮಲೆ ಅವರ ಫೋಟೊ ತೂಗು ಹಾಕಿ ಬಳಿಕ ಅದರ ತಲೆ ಕಡಿಯುವ ವಿಡಿಯೊ ಇದಾಗಿದ್ದು, ನೆಟ್ಟಿಗರು ಶಾಕ್‌ಗೆ ಒಳಗಾಗಿದ್ದಾರೆ. ರಸ್ತೆಯಲ್ಲಿ ನೆತ್ತರು ಚೆಲ್ಲಿದ್ದು, ವಿಕೃತಿ ಮೆರೆದ ಡಿಎಂಕೆ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ವಿಡಿಯೊದಲ್ಲಿ ಏನಿದೆ?

ಅದೊಂದು ಜನನಿಬಿಡ ರಸ್ತೆ. ಅಲ್ಲಿ ಡಿಎಂಕೆ ಕಾರ್ಯಕರ್ತರೆಲ್ಲ ಗುಂಪುಗೂಡಿದ್ದಾರೆ. ಇವರ ಮಧ್ಯೆ ಮೇಕೆಯೊಂದಿದೆ. ಮೇಕೆಯ ಕುತ್ತಿಗೆಗೆ ಅಣ್ಣಾಮಲೈ ಅವರ ಫೋಟೊವನ್ನು ತೂಗು ಹಾಕಲಾಗಿದೆ. ಬಳಿಕ ಓರ್ವ ಮೇಕೆಯ ಹಿಂದಿನ ಕಾಲನ್ನು ಹಿಡಿದುಕೊಳ್ಳುತ್ತಾನೆ. ಲುಂಗಿ ಸುತ್ತಿಕೊಂಡಿದ್ದ ಓರ್ವ ಕತ್ತಿ ಹಿಡಿದು ಬಳಿಗೆ ಬಂದು ಮೇಕೆಯ ಕತ್ತು ಕಡಿಯುತ್ತಾನೆ. ರಕ್ತ ರಸ್ತೆಯ ಮೇಲೆ ಚೆಲ್ಲುತ್ತದೆ. ಇಷ್ಟಕ್ಕೇ ಸುಮ್ಮನಾಗದ ಡಿಎಂಕೆ ಕಾರ್ಯಕರ್ತರು ಅಣ್ಣಾಮಲೈ ಅವರ ಫೋಟೊವನ್ನು ರಕ್ತದಲ್ಲಿ ಅದ್ದುತ್ತಾರೆ. ಜತೆಗೆ ʼʼಅಣ್ಣಾಮಲೈ ಮೇಕೆ ಬಲಿ” ಎಂದು ಘೋಷಣೆ ಕೂಗುತ್ತಾರೆ.

ಐಎಸ್‌ಐಎಸ್‌ ರೀತಿಯ ಶೈಲಿ

ಸದ್ಯ ಈ ವಿಡಿಯೊ ದೇಶಾದ್ಯಂತ ತೀವ್ರ ಚರ್ಚೆಯನ್ನು ಹುಟ್ಟು ಹಾಕಿದೆ. ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಈ ವಿಡಿಯೊ ಹಂಚಿಕೊಂಡು ʼಐಸಿಸ್ ಶೈಲಿಯ ದ್ವೇಷʼ ಎಂದು ಕರೆದಿದ್ದಾರೆ. ʼʼಇದು ಐಸಿಸ್ ಮಾದರಿಯ ದ್ವೇಷ ಸಾಧನೆ. ಕೊಯಮತ್ತೂರಿನಲ್ಲಿ ತಮ್ಮ ವಿಜಯವನ್ನು ಆಚರಿಸಲು ಡಿಎಂಕೆ ಕಾರ್ಯಕರ್ತರು ಅತ್ಯಂತ ಕೀಳು ಮಟ್ಟಕ್ಕೆ ಇಳಿದಿದ್ದಾರೆ. ಅಣ್ಣಾಮಲೈ ಅವರ ಫೋಟೊ ಇರುವ ಮೇಕೆಯನ್ನು ಕೊಂದು ವಿಕೃತಿ ಮೆರೆದಿದ್ದಾರೆ. ಅಣ್ಣಾಮಲೈ ಒಬ್ಬ ರೈತನ ಮಗ ಮತ್ತು ಅವರ ಕುಟುಂಬವು ಮೇಕೆಗಳನ್ನು ಸಾಕುತ್ತದೆ. ಈ ಹಿಂದೆ ಮೇಕೆ ಸಾಕಣೆಯ ಬಗ್ಗೆ ಅಣ್ಣಾಮಲೈ ಅವರನ್ನು ಡಿಎಂಕೆ ಅಪಹಾಸ್ಯ ಮಾಡಿತ್ತು. ಇದೀಗ ಸಂವಿಧಾನ ಉಳಿಸಿ ಎಂದು ಕೂಗುವ ಗುಂಪು ನಿಶ್ಯಬ್ದವಾಗಿದೆʼʼ ಎಂದು ಅವರು ಬರೆದುಕೊಂಡಿದ್ದಾರೆ.

ಈ ವಿಡಿಯೊಕ್ಕೆ ಪ್ರತಿಕ್ರಿಯಿಸಿದ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, “ಸನಾತನ ಧರ್ಮ ವಿರೋಧಿ ಇಂಡಿ ಮೈತ್ರಿಕೂಟವು ಎಂದಾದರೂ ಅಧಿಕಾರಕ್ಕೆ ಬಂದರೆ ಹಿಂದೂಗಳನ್ನು ಈ ರೀತಿ ಹತ್ಯೆ ಮಾಡುತ್ತದೆ” ಎಂದು ಹೇಳಿದ್ದಾರೆ.

ವಿಡಿಯೊ ನೋಡಿದ ಆಘಾತದಿಂದ ಇನ್ನೂ ಹಲವರು ಹೊರ ಬಂದಿಲ್ಲ. ʼʼಈ ರೀತಿಯ ವರ್ತನೆಯನ್ನು ನೀವು ಸಮರ್ಥಿಸುತ್ತೀರಾ?ʼʼ ಎಂದು ಒಬ್ಬರು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಮತ್ತು ತಮಿಳುನಾಡು ಪೊಲೀಸರನ್ನು ಟ್ಯಾಗ್‌ ಮಾಡಿ ಪ್ರಶ್ನಿಸಿದ್ದಾರೆ. ʼʼರೋಗಗ್ರಸ್ಥ ರಾಜ್ಯʼʼ ಎಂದು ಇನ್ನೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: Viral Video: ಮಕ್ಕಳ ಎದುರೇ ತಂದೆಯನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

Continue Reading

ಪ್ರಮುಖ ಸುದ್ದಿ

HD Kumaraswamy: ಎಚ್‌ಡಿ ಕುಮಾರಸ್ವಾಮಿ ಕೇಳಿದ ಕೃಷಿ ಖಾತೆ ಮೇಲೇ ನಿತೀಶ್‌ ಕಣ್ಣು; ಯಾರಿಗೆ ಒಲಿಯತ್ತೆ ಇಲಾಖೆ?

HD Kumaraswamy: ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಜಲಶಕ್ತಿಯಂತಹ, ಬಿಹಾರದ ಹಿತಾಸಕ್ತಿಗಳಿಗೆ ಹತ್ತಿರವಿರುವ ಸಚಿವಾಲಯಗಳು ತನಗೆ ಬೇಕು ಎಂದು ಜೆಡಿಯು ಕೇಳಿದೆ. ಜೆಡಿಎಸ್‌ ಮುಖಂಡ ಎಚ್‌ಡಿ ಕುಮಾರಸ್ವಾಮಿ, ಕೃಷಿ ಖಾತೆ ಕೊಟ್ಟರೆ ನಿಭಾಯಿಸುವುದಾಗಿ ಮೊದಲೇ ಹೇಳಿದ್ದಾರೆ.

VISTARANEWS.COM


on

hd kumaraswamy nitish kumar
Koo

ಹೊಸದಿಲ್ಲಿ: ಈ ಬಾರಿ ಕೇಂದ್ರ ಸಂಪುಟ (Central Cabinet) ರಚನೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಕಗ್ಗಂಟಾಗಲಿದೆ ಎಂಬ ಸೂಚನೆಗಳು ಮೊದಲ ದಿನವೇ ದೊರೆತಿವೆ. ಮುಖ್ಯ ಇಲಾಖೆಗಳಿಗೆ ಎನ್‌ಡಿಎಯ (NDA) ಬಲಿಷ್ಠ ಮಿತ್ರ ಪಕ್ಷಗಳಾದ ಟಿಡಿಪಿ (TDP) ಹಾಗೂ ಜೆಡಿಯು (JDU) ಡಿಮ್ಯಾಂಡ್‌ ಮಾಡಿವೆ. ಕೃಷಿ ಖಾತೆಯನ್ನು (agriculture ministry) ನಿತೀಶ್‌ ಕುಮಾರ್‌ (Nitish Kumar) ಕೇಳಿದ್ದು, ಇತ್ತ ಕರ್ನಾಟಕದಿಂದ ಎಚ್‌.ಡಿ ಕುಮಾರಸ್ವಾಮಿ (HD Kumaraswamy) ಕೂಡ ಕೃಷಿ ಇಲಾಖೆ ಅಪೇಕ್ಷಿಸಿದ್ದಾರೆ.

ಬಿಹಾರದ ಜೆಡಿಯು ಈ ಬಾರಿ ಮೂರು ಕ್ಯಾಬಿನೆಟ್ ಸ್ಥಾನಗಳ ಜೊತೆಗೆ ಕೆಲವು ಸಹಾಯಕ ಸಚಿವ ಸ್ಥಾನಗಳ ಮೇಲೂ ಕಣ್ಣಿಟ್ಟಿದೆ ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಜಲಶಕ್ತಿಯಂತಹ, ಬಿಹಾರದ ಹಿತಾಸಕ್ತಿಗಳಿಗೆ ಹತ್ತಿರವಿರುವ ಸಚಿವಾಲಯಗಳು ತನಗೆ ಬೇಕು ಎಂದು ಜೆಡಿಯು ಕೇಳಿದೆ. ಪಾರ್ಟಿಯ ಹಿರಿಯ ಸಂಸದ ಲಲ್ಲನ್ ಸಿಂಗ್ ಸಚಿವರಾಗುವ ಸಾಧ್ಯತೆಗಳು ಇವೆ ಎಂಬ ಊಹಾಪೋಹವೂ ಇದೆ. ರಾಜ್ಯದ ಸಂಸದೆ ಶೋಭಾ ಕರಂದ್ಲಾಜೆ ಕಳೆದ ಅವಧಿಯಲ್ಲಿ ಕೃಷಿ ಮತ್ತು ಕೃಷಿಕರ ಕಲ್ಯಾಣ ಖಾತೆಯ ಸಹಾಯಕ ಸಚಿವರಾಗಿದ್ದರು.

ಇತ್ತ ರಾಜ್ಯದಿಂದ ಇಬ್ಬರು ಸಂಸದರನ್ನು ಆರಿಸಿ ಕಳಿಸಿರುವ ಜೆಡಿಎಸ್‌ ಕೂಡ ಕೃಷಿ ಖಾತೆಯನ್ನು ಅಪೇಕ್ಷಿಸಿದೆ. ಸ್ವತಃ ಜೆಡಿಎಸ್‌ ಮುಖಂಡ ಎಚ್‌ಡಿ ಕುಮಾರಸ್ವಾಮಿ, ಕೃಷಿ ಖಾತೆ ಕೊಟ್ಟರೆ ನಿಭಾಯಿಸುವುದಾಗಿ ಮೊದಲೇ ಹೇಳಿದ್ದಾರೆ. ನಮಗೆ ಎರಡು ಸಚಿವ ಸ್ಥಾನ ಬೇಕು ಎಂದು ಎಚ್‌ಡಿಕೆ ಬೇಡಿಕೆ ಇಟ್ಟಿದ್ದಾರೆ. ನಿನ್ನೆ ಎನ್‌ಡಿಎ ಸಭೆಗಾಗಿ ದಿಲ್ಲಿ ತಲುಪಿದಾಗಲೇ ಈ ಬಗೆಗೆ ಎಚ್‌ಡಿಕೆ ಮಾತನಾಡಿದ್ದರು. ಆದರೆ ಸಭೆಯಲ್ಲಿ ಈ ಬಗ್ಗೆ ಏನೂ ಮಾತಾಡಿರಲಿಲ್ಲ. ಸಭೆಯಲ್ಲಿ ಖಾತೆಗಳ ಹಂಚಿಕೆ ಬಗ್ಗೆ ಯಾವುದೇ ಮಾತುಕತೆ ನಡೆಯಲಿಲ್ಲ. ಮೊದಲು ಸರ್ಕಾರ ರಚನೆಯಾಗಲಿ, ನಂತರ ಖಾತೆಗಳ ಹಂಚಿಕೆ ಬಗ್ಗೆ ಮಾತಾಡೋಣ ಎಂಬ ಒಪ್ಪಂದಕ್ಕೆ ಎಲ್ಲರೂ ಬಂದಿದ್ದಾರೆ.

“ಎನ್‌ಡಿಎ ಮೈತ್ರಿಕೂಟದ ಭಾಗವಾಗಿ ನಾವಿದ್ದೇವೆ. ನಮ್ಮನ್ನು ಪರಿಗಣಿಸಿ ಸೂಕ್ತ ಸ್ಥಾನ ಮಾನ ನೀಡಬೇಕು. ಜೆಡಿಎಸ್‌ಗೆ ಒಂದು ಸ್ಥಾನ ನೀಡಬೇಕು. ನನಗೆ ಕೃಷಿ ಖಾತೆಯಲ್ಲಿ ಬಹಳ ಆಸಕ್ತಿ ಇದೆ. ಹಾಗಾಗಿ ನನಗೆ ಕೃಷಿ ಖಾತೆ ನೀಡಿ” ಎಂದಿರುವ ಕುಮಾರಸ್ವಾಮಿ, ಆರೋಗ್ಯ ಖಾತೆಯನ್ನು ಡಾ.ಸಿಎನ್ ಮಂಜುನಾಥ್ ಅವರಿಗೆ ನೀಡುವಂತೆಯೂ ಅವರ ಪರ ಬ್ಯಾಟಿಂಗ್‌ ಮಾಡಿದ್ದಾರೆ. ಆರೋಗ್ಯ ಸೇವೆಯ ಬಗ್ಗೆ ಹೆಚ್ಚಿನ ತಿಳಿವಳಿಕೆ ಹೊಂದಿರುವ ಡಾ.ಮಂಜುನಾಥ್‌ ಅವರಿಗೆ ಅದೇ ಇಲಾಖೆಯಲ್ಲೇ ಒಂದು ಸ್ಥಾನ ಸಿಗಬಹುದು ಎಂದು ರಾಜ್ಯದ ಜನತೆಯೂ ನಿರೀಕ್ಷಿಸುತ್ತಿದೆ.

ಮೈತ್ರಿಧರ್ಮವನ್ನು ಪರಿಗಣಿಸಿ ಮೋದಿ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದು ರಹಸ್ಯವಾಗಿದೆ. ಯಾಕೆಂದರೆ 12 ಸಂಸದರನ್ನು ಆರಿಸಿ ಎನ್‌ಡಿಎಗೆ ಬಲ ತುಂಬಿರುವ ಜೆಡಿಯು ಬೇಡಿಕೆಯನ್ನು ಮೋದಿ ನಿರ್ಲಕ್ಷಿಸಲು ಸಾಧ್ಯವಿಲ್ಲ. ಆದರೆ ಜೆಡಿಎಸ್‌ಗೂ ಒಂದು ಇಲಾಖೆ ಕೊಡುವುದು ಅಗತ್ಯವಾಗಿದೆ. ಕೃಷಿ ಖಾತೆಗೆ ಜೆಡಿಯು ಪಟ್ಟುಹಿಡಿದರೆ ಎಚ್‌ಡಿಕೆ ಅದನ್ನು ಪಡೆಯುವುದು ಕಷ್ಟವಾಗಬಹುದು. ಹೀಗಾಗಿ ಕೃಷಿ ಖಾತೆ ಯಾರಿಗೆ ಸೇರಲಿದೆ, ಕುಮಾರಸ್ವಾಮಿ ಅವರಿಗೆ ಯಾವ ಖಾತೆ ದೊರೆಯಲಿದೆ ಎಂದು ಕುತೂಹಲ ಇದೀಗ ಗರಿಗೆದರಿದೆ.

ಶನಿವಾರ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವುದು ಖಚಿತವಾಗಿದೆ. ಅಂದು ಮೋದಿಯವರ ಜೊತೆಗೆ ಯಾರ್ಯಾರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂಬುದು ಗೊತ್ತಾಗಲಿದೆ. ಬಹುಶಃ ಖಾತೆ ಹಂಚಿಕೆಗಳು ಆ ಬಳಿಕ ನಡೆಯಲಿವೆ.

ಇದನ್ನೂ ಓದಿ: HD Kumaraswamy: ಕೃಷಿ ಖಾತೆ ಬಯಸಿದ್ದ ಎಚ್‌ಡಿಕೆ ಎನ್‌ಡಿಎ ಮೈತ್ರಿಕೂಟದ ಸಭೆಯಲ್ಲಿ ತುಟಿ ಬಿಚ್ಚಲೇ ಇಲ್ಲ!

Continue Reading

ದೇಶ

Modi 3.0 Government: ನರೇಂದ್ರ ಮೋದಿ ಮುಂದೆ ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಇಟ್ಟಿರುವ ಬೇಡಿಕೆಗಳು ಇಷ್ಟು!

Modi 3.0 Government: ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿಯು ಕೇಂದ್ರ ಸಚಿವ ಸಂಪುಟದಲ್ಲಿ ಕನಿಷ್ಠ 3-4 ಸ್ಥಾನಗಳನ್ನು ಕೇಳುವ ಸಾಧ್ಯತೆ ಇದೆ ಎನ್ನಲಾಗಿದೆ. ಕಳೆದ ಸರ್ಕಾರಕ್ಕೆ ತಮ್ಮ 16 ಸ್ಥಾನಗಳೊಂದಿಗೆ ಬೆಂಬಲ ನೀಡಿದ್ದ ಟಿಡಿಪಿ ಒಂದು ಕೇಂದ್ರ ಸಚಿವ ಸ್ಥಾನ ಹಾಗೂ ಒಂದು ರಾಜ್ಯ ಖಾತೆ ಸಚಿವ ಸ್ಥಾನ ಗಿಟ್ಟಿಸಿಕೊಂಡಿತ್ತು. 2018 ರಲ್ಲಿ ಪಕ್ಷವು ಎನ್‌ಡಿಎ ಸರ್ಕಾರದಿಂದ ಹೊರಬರುವವರೆಗೂ ನಾಗರಿಕ ವಿಮಾನಯಾನ ಸಚಿವರು ಮತ್ತು ರಾಜ್ಯ ಐಟಿ ಸಚಿವರು ಟಿಡಿಪಿ ಪಕ್ಷದವರಾಗಿದ್ದರು. ಈ ಬಾರಿ ಹಣಕಾಸು ರಾಜ್ಯ ಖಾತೆಯನ್ನು ಕೇಳುವ ಸಾಧ್ಯತೆ ಇದೆ.

VISTARANEWS.COM


on

Modi 3.0 Government
Koo

ನವದೆಹಲಿ: ಈ ಬಾರಿ ಸಂಪೂರ್ಣ ಬಹುಮತದೊಂದಿಗೆ ಎನ್‌ಡಿಎ(NDA) ಸರ್ಕಾರ(Modi 3.0 Government) ಅಧಿಕಾರಕ್ಕೆ ಬಂದಿದೆಯಾದರೂ ಜೆಡಿಯುನ ನಿತೀಶ್‌ ಕುಮಾರ್‌(Nithish Kumar) ಮತ್ತು ಟಿಎಂಸಿಯ ಚಂದ್ರಬಾಬು ನಾಯ್ಡು(Chandrababu Naidu) ಅವರೇ ಕಿಂಗ್‌ಮೇಕರ್ಸ್.‌ ಈ ಸರ್ಕಾರದಲ್ಲಿ ತಾವೇ ಪ್ರಮುಖ ಪಾತ್ರವಹಿಸಲಿರುವ ಕಾರಣ ಈ ಇಬ್ಬರು ನಾಯಕರು ನರೇಂದ್ರ ಮೋದಿ ಎದುರು ಇಟ್ಟಿರುವ ಬೇಡಿಕೆಯಾದರೂ ಏನು? ಯಾವ್ಯಾವ ಬೇಡಿಕೆಗಳಿಗೆ ಬಿಜೆಪಿ ಅಸ್ತು ಅನ್ನಲಿದೆ?

ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿಯು ಕೇಂದ್ರ ಸಚಿವ ಸಂಪುಟದಲ್ಲಿ ಕನಿಷ್ಠ 3-4 ಸ್ಥಾನಗಳನ್ನು ಕೇಳುವ ಸಾಧ್ಯತೆ ಇದೆ ಎನ್ನಲಾಗಿದೆ. ಕಳೆದ ಸರ್ಕಾರಕ್ಕೆ ತಮ್ಮ 16 ಸ್ಥಾನಗಳೊಂದಿಗೆ ಬೆಂಬಲ ನೀಡಿದ್ದ ಟಿಡಿಪಿ ಒಂದು ಕೇಂದ್ರ ಸಚಿವ ಸ್ಥಾನ ಹಾಗೂ ಒಂದು ರಾಜ್ಯ ಖಾತೆ ಸಚಿವ ಸ್ಥಾನ ಗಿಟ್ಟಿಸಿಕೊಂಡಿತ್ತು. 2018 ರಲ್ಲಿ ಪಕ್ಷವು ಎನ್‌ಡಿಎ ಸರ್ಕಾರದಿಂದ ಹೊರಬರುವವರೆಗೂ ನಾಗರಿಕ ವಿಮಾನಯಾನ ಸಚಿವರು ಮತ್ತು ರಾಜ್ಯ ಐಟಿ ಸಚಿವರು ಟಿಡಿಪಿ ಪಕ್ಷದವರಾಗಿದ್ದರು. ಈ ಬಾರಿ ಹಣಕಾಸು ರಾಜ್ಯ ಖಾತೆಯನ್ನು ಕೇಳುವ ಸಾಧ್ಯತೆ ಇದೆ.

ಆಂಧ್ರಕ್ಕೆ ವಿಶೇಷ ಸ್ಥಾನಮಾನ

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂಬುದು ಟಿಡಿಪಿಯ ಮತ್ತೊಂದು ಬೇಡಿಕೆ ಇಡುವ ಸಾಧ್ಯತೆ ಇದೆ. ಆದರೆ ಈ ಹಿಂದಿನಿಂದಲೂ ಇದಕ್ಕೆ ಎನ್‌ಡಿಎ ಒಪ್ಪದ ಕಾರಣ ಅದರ ಬದಲಾಗಿ, ಆಂಧ್ರಪ್ರದೇಶಕ್ಕೆ ಸಾಕಷ್ಟು ಹಣವನ್ನು ಒದಗಿಸುವ ಭರವಸೆ ನೀಡಬಹುದು ಎಂದು ಮೂಲಗಳು ತಿಳಿಸಿವೆ. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕೆ ಬೇಡಿಕೆ ಇಟ್ಟು 2018 ರಲ್ಲಿ ನಾಯ್ಡು ಎನ್‌ಡಿಎಯಿಂದ ಹೊರಬಂದಿತ್ತು.

ಜೆಡಿಯು ಬೇಡಿಕೆ ಏನು?

ಅವರು 2019 ರಲ್ಲಿ ಜೆಡಿಯು 16 ಸಂಸದರೊಂದಿಗೆ ಜೆಡಿಯುಗೆ ಬೆಂಬಲ ನೀಡಿದ್ದ ನಿತೀಶ್‌ ಕುಮಾರ್‌, ನಾಲ್ಕು ಪ್ರಮುಖ ಕ್ಯಾಬಿನೆಟ್‌ ಹುದ್ದೆಗಳಿಗೆ ಬೇಡಿಕೆ ಇಟ್ಟಿತ್ತು. ಇದಕ್ಕೆ ಬಿಜೆಪಿ ಒಪ್ಪದ ಕಾರಣ ಅವರ ಮೈತ್ರಿಕೂಟದಿಂದ ಹೊರನಡೆದಿದ್ದರು. ಇದಾದ ಬಳಿಕ ಎನ್‌ಡಿಎಗೆ ಮರು ಸೇರ್ಪಡೆಯಾಗುವ ಸಂದರ್ಭದಲ್ಲಿ ಬಿಜೆಪಿ ಜೆಡಿಯುನ ಆರ್‌ಸಿಪಿ ಸಿಂಗ್‌ ಅವರಿಗೆ ಒಂದು ಸಚಿವ ಸ್ಥಾನ ನೀಡಿತ್ತು. ಬಳಿಕ ಅವರು ಬಿಜೆಪಿ ಪಕ್ಷಾಂತರಗೊಂಡಿದ್ದರು. ಈ ಬಾರಿ ಜೆಡಿಯು ಮೂರು ಕ್ಯಾಬಿನೆಟ್‌ ಸ್ಥಾನಗಳು ಮತ್ತು ರಾಜ್ಯ ಖಾತೆ ಸಚಿವಾಲಯಗಳ ಮೇಲೆ ಕಣ್ಣಿಟ್ಟಿದೆ. ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಜಲಶಕ್ತಿ ಖಾತೆಗಳನ್ನು ಕೇಳುವ ಸಾಧ್ಯತೆ ಇದೆ.

ಎಲ್‌ಜೆಪಿಯ ಚಿರಾಗ್ ಪಾಸ್ವಾನ್ ಅವರು ತಮ್ಮ ತಂದೆ ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರಂತೆ ಪೂರ್ಣ ಸಮಯದ ಸಚಿವರಾಗುವ ನಿರೀಕ್ಷೆಯಿದೆ, ಏಕೆಂದರೆ ಅವರ ಪಕ್ಷವು ಸ್ಪರ್ಧಿಸಿದ ಎಲ್ಲಾ ಐದು ಸ್ಥಾನಗಳನ್ನು ಗೆದ್ದಿದೆ. ಏಳು ಸ್ಥಾನಗಳೊಂದಿಗೆ ಏಕನಾಥ್ ಶಿಂಧೆ ಅವರ ಶಿವಸೇನೆ ಕೂಡ ಸಚಿವ ಮತ್ತು MoS ಸ್ಥಾನದೊಂದಿಗೆ ಕೇಂದ್ರ ಸಂಪುಟಕ್ಕೆ ಸೇರಬಹುದು. ಶಿಂಧೆ ಅವರ ಪುತ್ರ ಶ್ರೀಕಾಂತ್ ಶಿಂಧೆ ಮತ್ತು ಶ್ರೀರಂಗ್ ಬಾರ್ನೆ ಹೆಸರುಗಳು ಸದ್ದು ಮಾಡುತ್ತಿವೆ.

ಇದನ್ನೂ ಓದಿ: Lok Sabha Election 2024: ಒಬ್ಬ ಅಭ್ಯರ್ಥಿ ಎರಡೂ ಕ್ಷೇತ್ರಗಳಲ್ಲೂ ಗೆದ್ದರೆ ಏನಾಗುತ್ತದೆ?

Continue Reading
Advertisement
Election Results 2024
ದೇಶ7 mins ago

Election Results 2024: ರಾಮನೂರಿನಲ್ಲೇ ಬಿಜೆಪಿ ಹಿನ್ನಡೆ; ಹೀನಾಯ ಸೋಲಿಗೆ ಕಾರಣ ಏನು?

Sonu Nigam Hit Backs To Ayodhya People For Not Vote For BJP
ಬಾಲಿವುಡ್12 mins ago

Sonu Nigam: ಅಯೋಧ್ಯೆ ಜನರಿಗೆ ಛೀಮಾರಿ ಹಾಕಿದ್ರಾ ಸೋನು ನಿಗಮ್?

K Annamalai
ವೈರಲ್ ನ್ಯೂಸ್15 mins ago

K Annamalai: ಮೇಕೆಯ ತಲೆಗೆ ಅಣ್ಣಾಮಲೈ ಫೋಟೊ ಅಂಟಿಸಿ ಕಡಿದ ಡಿಎಂಕೆ ಕಾರ್ಯಕರ್ತರು!

hd kumaraswamy nitish kumar
ಪ್ರಮುಖ ಸುದ್ದಿ18 mins ago

HD Kumaraswamy: ಎಚ್‌ಡಿ ಕುಮಾರಸ್ವಾಮಿ ಕೇಳಿದ ಕೃಷಿ ಖಾತೆ ಮೇಲೇ ನಿತೀಶ್‌ ಕಣ್ಣು; ಯಾರಿಗೆ ಒಲಿಯತ್ತೆ ಇಲಾಖೆ?

Virat Kohli
ಕ್ರೀಡೆ21 mins ago

Virat Kohli: ‘ಕೊಹ್ಲಿ ಕೊ ಬೌಲಿಂಗ್​ ದೋ’ ನ್ಯೂಯಾರ್ಕ್​ ಸ್ಟೇಡಿಯಂನಲ್ಲಿ ಮೊಳಗಿದ ಅಭಿಮಾನಿಗಳ ಕೂಗು

Kannada Serials TRP arce Ninagaagi shri gowri
ಕಿರುತೆರೆ34 mins ago

Kannada Serials TRP: ಟಿಆರ್‌ಪಿ ರೇಸ್‌ನಲ್ಲಿ ʻಶ್ರೀಗೌರಿ,ʼ ʻನಿನಗಾಗಿʼ; ʻಅಮೃತಧಾರೆʼ ಜಿಗಿತ!

A rider standing on a bike and Young man and woman fight in road
ಕ್ರೈಂ43 mins ago

ಯುವಕನ ಕಾಲರ್ ಪಟ್ಟಿ ಹಿಡಿದು ಜಾಡಿಸಿ ಒದ್ದ ಯುವತಿ; ಎರಡು ಕೈ ಮೇಲೆತ್ತಿ ಬೈಕ್‌ ಸವಾರಿ, ಸವಾರನ ಹುಚ್ಚಾಟಕ್ಕೆ ಕಿಡಿ

Valmiki Corporation Scam
ಪ್ರಮುಖ ಸುದ್ದಿ56 mins ago

Valmiki Corporation Scam: ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ; ಸಚಿವ ನಾಗೇಂದ್ರ ರಾಜೀನಾಮೆ

David Warner
ಕ್ರೀಡೆ1 hour ago

David Warner: ಕ್ರಿಸ್​ ಗೇಲ್​ ದಾಖಲೆ ಮುರಿದ ಡೇವಿಡ್​ ವಾರ್ನರ್​

Modi 3.0 Government
ದೇಶ1 hour ago

Modi 3.0 Government: ನರೇಂದ್ರ ಮೋದಿ ಮುಂದೆ ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಇಟ್ಟಿರುವ ಬೇಡಿಕೆಗಳು ಇಷ್ಟು!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ3 hours ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ2 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ3 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ3 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ4 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು5 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

ಟ್ರೆಂಡಿಂಗ್‌