Shraddha Murder Case| ಶ್ರದ್ಧಾಳ ದೇಹ ತುಂಡು ಮಾಡಲು ಅಫ್ತಾಬ್ ಪೂನಾವಾಲ​ ಚೀನಿ ಕ್ಲೀವರ್​ ಬಳಸಿದ್ದ! - Vistara News

ದಿಲ್ಲಿ ಮರ್ಡರ್

Shraddha Murder Case| ಶ್ರದ್ಧಾಳ ದೇಹ ತುಂಡು ಮಾಡಲು ಅಫ್ತಾಬ್ ಪೂನಾವಾಲ​ ಚೀನಿ ಕ್ಲೀವರ್​ ಬಳಸಿದ್ದ!

ಅಫ್ತಾಬ್​ ಅಮೀನ್​ ಪೂನಾವಾಲಾನ ದೆಹಲಿ ಅಪಾರ್ಟ್​​ಮೆಂಟ್​​ನಲ್ಲಿದ್ದ ಹಲವು ಮಾರಕ ಅಸ್ತ್ರಗಳನ್ನು ಪೊಲೀಸರು ಈಗಾಗಲೇ ವಶಪಡಿಸಿಕೊಂಡಿದ್ದಾರೆ. ಇನ್ನೂ ಕೆಲವು ಆಯುಧಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

VISTARANEWS.COM


on

Aaftab used Chinese knife To Cut Shraddha Body
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದೆಹಲಿಯ ಶ್ರದ್ಧಾ ವಾಳ್ಕರ್​ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲವು ವಿಷಯಗಳು ಹೊರಬೀಳುತ್ತಿವೆ. ಡಿ.1ರಂದು ಆರೋಪಿ ಅಫ್ತಾಬ್​ ಪೂನಾವಾಲಾ ಮಂಪರು ಪರೀಕ್ಷೆ ನಡೆದಿದೆ. ತಾನೇ ಶ್ರದ್ಧಾಳನ್ನು ಹತ್ಯೆ ಮಾಡಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ಅಷ್ಟೇ ಅಲ್ಲ, ಹೇಗೆ ಕೊಂದೆ? ಯಾಕೆ ಕೊಂದೆ? ಆ ಸಮಯದಲ್ಲಿ ಅವಳೇನು ಉಡುಪು ಧರಿಸಿದ್ದಳು? ಶ್ರದ್ಧಾ ಮೊಬೈಲ್ ಏನು ಮಾಡಿದೆ? ಎಂಬಿತ್ಯಾದಿ ವಿಷಯಗಳನ್ನೂ ಅಫ್ತಾಬ್​ ಮಂಪರು ಪರೀಕ್ಷೆಯಲ್ಲಿ ಹೇಳಿದ್ದಾನೆ ಎಂದು ಹೇಳಲಾಗಿದೆ.

ಅಫ್ತಾಬ್​ ಅಮೀನ್​ ಪೂನಾವಾಲಾನ ದೆಹಲಿ ಅಪಾರ್ಟ್​​ಮೆಂಟ್​​ನಲ್ಲಿದ್ದ ಹಲವು ಮಾರಕ ಅಸ್ತ್ರಗಳನ್ನು ಪೊಲೀಸರು ಈಗಾಗಲೇ ವಶಪಡಿಸಿಕೊಂಡಿದ್ದಾರೆ. ಅದರಲ್ಲಿ ಆತ ಶ್ರದ್ಧಾ ಹತ್ಯೆ, ಆಕೆಯ ದೇಹವನ್ನು ಕತ್ತರಿಸಲು ಯಾವ ಆಯುಧ ಬಳಸಿದ್ದ ಎಂಬುದನ್ನು ಅಫ್ತಾಬ್​ ವಿಚಾರಣೆ ವೇಳೆ ಸರಿಯಾಗಿ ಹೇಳಿರಲಿಲ್ಲ. ಆದರೆ ಮಂಪರು ಪರೀಕ್ಷೆ ವೇಳೆ ಅದನ್ನವನು ಹೇಳಿದ್ದಾನೆ ಎಂದು ವರದಿಯಾಗಿದೆ.

ಅಫ್ತಾಬ್​ ಶ್ರದ್ಧಾಳನ್ನು ಮೊದಲು ಉಸಿರುಗಟ್ಟಿಸಿ ಕೊಂದು, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಲು ಚೈನೀಸ್​ ಚಾಕು (ಚೀನಿ ಕ್ಲೀವರ್​-ಮಾಂಸವನ್ನು ಕತ್ತರಿಸಲು ಬಳಸುವ ಚಾಕು)ವನ್ನು ಬಳಸಿದ್ದ ಎನ್ನಲಾಗಿದೆ. ಅವನು ಶ್ರದ್ಧಾಳ ದೇಹದಲ್ಲಿ ಮೊದಲು ಕತ್ತರಿಸಿದ್ದು ಆಕೆಯ ಕೈಯಗಳನ್ನು. ಬಳಿಕ ಒಂದೊಂದೇ ದೇಹವನ್ನು ಕತ್ತರಿಸಿ, ಚೀಲದಲ್ಲಿ ತುಂಬಿದ್ದ. ಶ್ರದ್ಧಾ ಹತ್ಯೆಗೆ ಬಳಸಿದ್ದ ಆಯುಧ ಸೇರಿ, ಇನ್ನುಳಿದ ಮಾರಕಾಸ್ತ್ರಗಳನ್ನು ತಾನು ಎಲ್ಲಿಟ್ಟಿದ್ದೇನೆ ಎಂಬುದನ್ನು ನ್ಯಾಕ್ರೋ ಟೆಸ್ಟ್​ ವೇಳೆ ಅಫ್ತಾಬ್​ ತಿಳಿಸಿದ್ದಾನೆ. ಅಲ್ಲೆಲ್ಲ ಈಗ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಅಷ್ಟೇ ಅಲ್ಲ, ಆಯುಧಗಳನ್ನು ಅಫ್ತಾಬ್​ ಖರೀದಿಸಿದ್ದು ಯಾವಾಗ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.

ಶ್ರದ್ಧಾಳನ್ನು ಅಫ್ತಾಬ್​ ಹತ್ಯೆ ಮಾಡಿದ್ದು ಇದೇ ವರ್ಷ ಮೇ 18ರಲ್ಲಿ. ಆದರೆ ಪ್ರಕರಣ ಬೆಳಕಿಗೆ ಬಂದಿದ್ದು ನವೆಂಬರ್​ನಲ್ಲಿ. ಶ್ರದ್ಧಾ ಪಾಲಕರು ಕೊಟ್ಟ ದೂರಿನ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರಿಗೇ ಶಾಕ್​ ಕಾದಿತ್ತು. ಹಂತಕ ಅಫ್ತಾಬ್​ ಶ್ರದ್ಧಾಳ ದೇಹವನ್ನು 35 ಪೀಸ್​ಗಳಾಗಿ ಕತ್ತರಿಸಿ, ಮೆಹ್ರೌಲಿ ಬಳಿಯ ಅರಣ್ಯದಲ್ಲಿ ಬಿಸಾಕಿದ್ದ. ಹೀಗೆ ಬಿಸಾಕುವ ಮುನ್ನ ಅದನ್ನು 300 ಲೀಟರ್​ ಸಾಮರ್ಥ್ಯದ ಫ್ರಿಜ್​​ನಲ್ಲಿ ಇಟ್ಟಿದ್ದ. ಸದ್ಯ ಆ ಕೇಸ್​ ತನಿಖೆ ಆಳವಾಗಿ ನಡೆಯುತ್ತಿದೆ.

ಇದನ್ನೂ ಓದಿ: Shraddha Murder Case | ಶ್ರದ್ಧಾ ವಾಳ್ಕರ್​ ಹತ್ಯೆ ಕೇಸ್​​ ಸಿಬಿಐಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದ ದೆಹಲಿ ಹೈಕೋರ್ಟ್​

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದಿಲ್ಲಿ ಮರ್ಡರ್

Murder: ಕಪಾಟಿನಲ್ಲಿತ್ತು ಯುವತಿಯ ಶವ; ಲಿವ್ ಇನ್‌ ಸಂಬಂಧದಲ್ಲಿದ್ದ ಗೆಳೆಯ ನಾಪತ್ತೆ!

Murder: ಮಗಳ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಆತಂಕಗೊಂಡ ತಂದೆ ಆಕೆಯನ್ನು ಹುಡುಕಿಕೊಂಡು ಆಕೆ ವಾಸವಿದ್ದ ದೆಹಲಿಯ ದ್ವಾರಕಾ ಪ್ರದೇಶದಲ್ಲಿದ್ದ ಅಪಾರ್ಟ್ ಮೆಂಟ್ ಗೆ ಬಂದಾಗ ಮನೆಯ ಕಪಾಟಿನಲ್ಲಿ ಮಗಳ ಶವ ಪತ್ತೆಯಾಗಿದೆ. ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಆಕೆಯ ಸಂಗಾತಿ ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.

VISTARANEWS.COM


on

By

Murder
Koo

ಹೊಸದಿಲ್ಲಿ: ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ (Leave in relationship) ಯುವತಿಯೊಬ್ಬಳು ಶವವಾಗಿ (Murder) ಮನೆಯ ಕಪಾಟಿನಲ್ಲಿ ಪತ್ತೆಯಾಗಿರುವ ಘಟನೆ ಹೊಸದಿಲ್ಲಿಯ (delhi) ದ್ವಾರಕಾದಲ್ಲಿ (dwaraka) ನಡೆದಿದೆ.

ದ್ವಾರಕಾದ ದಾಬ್ರಿಯ ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸವಾಗಿದ್ದ ರುಖ್ಸರ್ ರಜಪೂತ್ (26) ಕೊಲೆಯಾದ ಯುವತಿ. ಗೆಳೆಯ ವಿಪಾಲ್ ಟೈಲರ್ ಆಕೆಯನ್ನು ಕೊಂದಿರಬಹುದು ಎಂದು ಶಂಕಿಸಲಾಗಿದೆ.

ಮೀರತ್‌ನಲ್ಲಿ ವಾಸವಾಗಿರುವ ರುಖ್ಸರ್ ರಜಪೂತ್ ಳ ತಂದೆ ಮಗಳನ್ನು ಹುಡುಕಿಕೊಂಡು ಬುಧವಾರ ರಾತ್ರಿ ಬಂದಾಗ ಆಕೆ ಕೊಲೆಯಾಗಿರುವ ವಿಷಯ ಬೆಳಕಿಗೆ ಬಂದಿದೆ.

ಇದನ್ನೂ ಓದಿ: Assault Case : ಆಫೀಸ್‌ನಲ್ಲಿ ಟಾರ್ಚರ್‌ ಕೊಟ್ಟ ಮೇಲಾಧಿಕಾರಿಗೆ ಸುಪಾರಿ ಕೊಟ್ಟು ಹೊಡೆಸಿದ್ರು ಸಿಬ್ಬಂದಿ!

ಒಂದೂವರೆ ವರ್ಷಗಳ ಹಿಂದೆ ಭೇಟಿ

ರಜಪೂತ್ ಗುಜರಾತ್‌ನಲ್ಲಿ ಕರಕುಶಲ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಳು. ಒಂದೂವರೆ ವರ್ಷಗಳ ಹಿಂದೆ ಅಲ್ಲಿ ಆಕೆ ವಿಪಾಲ್‌ನನ್ನು ಭೇಟಿಯಾಗಿದ್ದಳು. ದೆಹಲಿಗೆ ಬಂದ ಬಳಿಕ ಅವರಿಬ್ಬರೂ ಒಟ್ಟಿಗೆ ವಾಸಿಸುತ್ತಿರುವ ವಿಷಯ ಆಕೆಯ ತಂದೆ ಮುಸ್ತಾಕಿನ್ ಮತ್ತು ಅವರ ಕುಟುಂಬಕ್ಕೆ ತಿಳಿದಿತ್ತು.

ತಂದೆಗೆ ಕೊನೆಯ ಕರೆ

ರುಖ್ಸರ್ ರಜಪೂತ್ ಬುಧವಾರ ಮಧ್ಯಾಹ್ನ ತಂದೆ ಮೊಹಮ್ಮದ್ ಮುಸ್ತಾಕಿನ್ ಅವರಿಗೆ ಕರೆ ಮಾಡಿದ್ದರು. ಆಗ ಆಕೆ ತುಂಬಾ ಅಸಮಾಧಾನದಿಂದ ಇದ್ದಿದ್ದು ಕಂಡು ಬಂದಿತ್ತು. ಸಂಜೆ ವೇಳೆಗೆ ಆಕೆಯ ಫೋನ್ ಸ್ವಿಚ್ ಆಫ್ ಆಗಿತ್ತು. ಹೀಗಾಗಿ ಆತಂಕದಿಂದ ಮುಸ್ತಾಕಿನ್ ಅವರು ರಾತ್ರಿಯೇ ರುಖ್ಸಾರ್‌ನನ್ನು ಹುಡುಕಿಕೊಂಡು ತಮ್ಮ ಸಂಬಂಧಿಕರೊಂದಿಗೆ ದೆಹಲಿಗೆ ಬಂದಿದ್ದರು.

ಅವರು ರಜಪೂತ್ ವಾಸವಿದ್ದ ಅಪಾರ್ಟ್ ಮೆಂಟ್ ಗೆ ಬಂದಾಗ ಮನೆಗೆ ಹೊರಗಿನಿಂದ ಬೀಗ ಹಾಕಲಾಗಿತ್ತು. ಅವರು ಬೀಗ ಎಲ್ಲಿ ಇಡುತ್ತಾರೆ ಎಂಬುದು ತಿಳಿದಿದ್ದ ಮುಸ್ತಾಕಿನ್ ಮನೆಯ ಬೀಗ ತೆರೆದು ಒಳಗೆ ಬಂದು ಹುಡುಕಿದಾಗ ಕಪಾಟಿನಲ್ಲಿ ರಜಪೂತ್ ಅವರ ಶವ ಪತ್ತೆಯಾಗಿದೆ. ಕೂಡಲೇ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ದೇಹದ 15ಕ್ಕೂ ಹೆಚ್ಚು ಕಡೆ ಗಾಯ

ರುಖ್ಸರ್ ರಜಪೂತ್ ನ ಮುಖದ ಮೇಲೆ ಆಳವಾದ ಗಾಯಗಳು ಸೇರಿ ದೇಹದಾದ್ಯಂತ 15ಕ್ಕೂ ಹೆಚ್ಚು ಗಾಯಗಳಿದ್ದವು. ಮೇಲ್ನೋಟಕ್ಕೆ, ಮಹಿಳೆಯನ್ನು ಕತ್ತು ಹಿಸುಕಿ ಕೊಂದು ಹಾಕಲಾಗಿದೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗೆಳೆಯ ನಾಪತ್ತೆ

ರುಖ್ಸರ್ ರಜಪೂತ್ ನ ಗೆಳೆಯ ವಿಪಾಲ್ ಟೈಲರ್ ನಾಪತ್ತೆಯಾಗಿರುವುದರಿಂದ ಆತನೇ ಪ್ರಮುಖ ಆರೋಪಿಯಾಗಿರಬಹುದು ಎಂದು ಶಂಕಿಸಲಾಗಿದೆ. ವಿಪಾಲ್ ಟೈಲರ್ ಎಂಬಾತನೊಂದಿಗೆ ಸುಮಾರು ಒಂದೂವರೆ ತಿಂಗಳಿನಿಂದ ಈ ಅಪಾರ್ಟ್ ಮೆಂಟ್ ನಲ್ಲಿ ರುಖ್ಸರ್ ರಜಪೂತ್ ವಾಸವಾಗಿದ್ದಳು. ರುಖ್ಸರ್ ರಜಪೂತ್ ಮದುವೆಯಾಗಿರುವುದಾಗಿ ಹೇಳಲಾಗಿದ್ದು, ಈ ಕುರಿತು ಯಾವುದೇ ದಾಖಲೆಗಳು ಪತ್ತೆಯಾಗಿಲ್ಲ ಎಂದು ಪೊಲೀಸ್ ಉಪ ಆಯುಕ್ತ (ದ್ವಾರಕಾ) ಅಂಕಿತ್ ಸಿಂಗ್ ತಿಳಿಸಿದ್ದಾರೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆಗೆ ಶಿಕ್ಷೆ) ಅಡಿಯಲ್ಲಿ ದಾಬ್ರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿದ್ದು, ತನಿಖೆಯನ್ನು ಕೈಗೆತ್ತಿಕೊಳ್ಳಲಾಗಿದ ಎಂದು ಸಿಂಗ್ ಹೇಳಿದರು.

ಮುಸ್ತಾಕಿಮ್ ಹೇಳಿಕೆಯನ್ನು ಆಧರಿಸಿ ಕೊಲೆ ಪ್ರಕರಣವನ್ನು ದಾಖಲಿಸಿರುವ ಪೊಲೀಸರು ಆರೋಪಿಗಾಗಿ ಪತ್ತೆ ಹಚ್ಚಲು ಸಿಸಿಟಿವಿಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ತನಿಖೆಗಾಗಿ ಹಲವಾರು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading

ದಿಲ್ಲಿ ಮರ್ಡರ್

ಶ್ರದ್ಧಾ ವಾಳ್ಕರ್​ ಹತ್ಯೆ ಪ್ರಕರಣದಲ್ಲಿ ಸಿದ್ಧವಾಯ್ತು 3000 ಪುಟಗಳ ಕರಡು ಆರೋಪ ಪಟ್ಟಿ; ಕಾನೂನು ತಜ್ಞರಿಂದ ಪರಿಶೀಲನೆ

ಅಫ್ತಾಬ್​ ಮೇ ತಿಂಗಳಲ್ಲಿಯೇ ಶ್ರದ್ಧಾಳನ್ನು ಕೊಂದಿದ್ದರೂ ಅದು ಗೊತ್ತಾಗದಂತೆ ಭಾರಿ ನಾಟಕವಾಡಿದ್ದ. ತಿಂಗಳುಗಳ ಕಾಲ ಆಕೆಯ ಸೋಷಿಯಲ್​ ಮೀಡಿಯಾವನ್ನು ಆತನೇ ಹ್ಯಾಂಡಲ್​ ಮಾಡುವ ಮೂಲಕ, ಆಕೆ ಬದುಕಿದ್ದಾಳೆ ಎಂದು ಬಿಂಬಿಸಿದ್ದ.

VISTARANEWS.COM


on

draft chargesheet of Shraddha Walkar murder case Ready By Delhi Police
ಅಫ್ತಾಬ್​ ಮತ್ತು ಶ್ರದ್ಧಾ ವಾಳ್ಕರ್​
Koo

ನವ ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆದ ಶ್ರದ್ಧಾ ವಾಳ್ಕರ್ (Shraddha Walkar)​ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೆಹಲಿ ಪೊಲೀಸರು ಸುಮಾರು 3000 ಪುಟಗಳ ಕರಡು ಚಾರ್ಜ್​ಶೀಟ್​ ಸಿದ್ಧಪಡಿಸಿ ಇಟ್ಟಿದ್ದಾರೆ. ವಿಧಿವಿಜ್ಞಾನ ವರದಿಗಳು ಮತ್ತು ಎಲೆಕ್ಟ್ರಾನಿಕ್ ಪುರಾವೆಗಳು ಅಂದರೆ ಇಮೇಲ್​, ಮೊಬೈಲ್ ಫೋಟೋಗ್ರಾಫ್​, ಹಣ ವರ್ಗಾವಣೆ ದಾಖಲೆಗಳನ್ನು ಒಳಗೊಂಡಂತೆ ಸುಮಾರು 100 ಸಾಕ್ಷಿಗಳನ್ನು ಈ ಚಾರ್ಜ್​​ಶೀಟ್​​ನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಈ ಕರಡು ದಾಖಲೆಯನ್ನು ಕಾನೂನು ತಜ್ಞರು ಪರಿಶೀಲನೆ ನಡೆಸುತ್ತಿದ್ದು, ಶೀಘ್ರದಲ್ಲೇ ಅಂತಿಮ ಆರೋಪ ಪಟ್ಟಿ ಸಿದ್ಧವಾಗಲಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.

ದೆಹಲಿಯಲ್ಲಿ 2022ರ ಮೇ ತಿಂಗಳಲ್ಲಿ ನಡೆದಿದ್ದ ಶ್ರದ್ಧಾ ವಾಳ್ಕರ್​ ಭೀಕರ ಹತ್ಯೆ ಪ್ರಕರಣ ಇತ್ತೀಚೆಗಷ್ಟೇ ಬೆಳಕಿಗೆ ಬಂದಿದೆ. ಕೊಲೆ ಮಾಡಿದ ಆರೋಪಿ ಅಫ್ತಾಬ್​ ಪೂನಾವಾಲಾ ಸದ್ಯ ನ್ಯಾಯಾಂಗ ಬಂಧನದಲ್ಲಿಯೇ ಇದ್ದಾನೆ. ಈತ ತನ್ನ ಲಿವ್​ ಇನ್​ ಸಂಗಾತಿ ಶ್ರದ್ಧಾಳನ್ನು ಉಸಿರುಗಟ್ಟಿಸಿ ಕೊಂದು, ಆಕೆಯ ಶವವನ್ನು 35ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿದ್ದ. ಬಳಿಕ 300 ಲೀಟರ್​ ಸಾಮರ್ಥ್ಯದ ಫ್ರಿಜ್​ ಖರೀದಿಸಿ ಆ ಶವದ ತುಂಡುಗಳನ್ನು ಅದರಲ್ಲಿ ಇಟ್ಟಿದ್ದ. ನಂತರ ತಮ್ಮ ಅಪಾರ್ಟ್​ಮೆಂಟ್​ ಸಮೀಪವೇ ಇದ್ದಿದ್ದ ಮೆಹ್ರೌಲಿ ಅರಣ್ಯದ ಹಲವು ಭಾಗಗಳಲ್ಲಿ ಅವುಗಳನ್ನು ಎಸೆದಿದ್ದ. ಮೆಹ್ರೌಲಿ ಅರಣ್ಯವನ್ನು ಜಾಲಾಡಿದಾಗ ಹಲವು ಮೂಳೆಗಳು ಪತ್ತೆಯಾಗಿದ್ದು, ಅವೆಲ್ಲ ಶ್ರದ್ಧಾಳದ್ದೇ ಎಂದೂ ಡಿಎನ್​ಎ ಪರೀಕ್ಷೆಯಲ್ಲಿ.

ಇದನ್ನೂ ಓದಿ: Shraddha Murder Case | ಶ್ರದ್ಧಾ ವಾಳ್ಕರ್​ ಹತ್ಯೆ ಕೇಸ್​​ ಸಿಬಿಐಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದ ದೆಹಲಿ ಹೈಕೋರ್ಟ್​

ಅಫ್ತಾಬ್​ ಮೇ ತಿಂಗಳಲ್ಲಿಯೇ ಶ್ರದ್ಧಾಳನ್ನು ಕೊಂದಿದ್ದರೂ ಅದು ಗೊತ್ತಾಗದಂತೆ ಭಾರಿ ನಾಟಕವಾಡಿದ್ದ. ತಿಂಗಳುಗಳ ಕಾಲ ಆಕೆಯ ಸೋಷಿಯಲ್​ ಮೀಡಿಯಾವನ್ನು ಆತನೇ ಹ್ಯಾಂಡಲ್​ ಮಾಡುವ ಮೂಲಕ, ಆಕೆ ಬದುಕಿದ್ದಾಳೆ ಎಂಬುದನ್ನು ಬಿಂಬಿಸಲು ಹೋಗಿದ್ದ. ಶ್ರದ್ಧಾ ತಂದೆ-ತಾಯಿಯಿಂದ ದೂರವಾಗಿದ್ದರೂ, ಕೆಲವು ಸಂಬಂಧಿಕರೊಂದಿಗೆ ಸಂಪರ್ಕದಲ್ಲಿದ್ದಳು. ಆದರೆ ಬರುಬರುತ್ತ ಆಕೆ ಸಂಪರ್ಕಕ್ಕೆ ಸಿಗದಂತಾದಾಗ ಶ್ರದ್ಧಾಳ ತಂದೆಯ ಸ್ನೇಹಿತರೊಬ್ಬರು ಅನುಮಾನ ವ್ಯಕ್ತಪಡಿಸಿದ್ದರು. ಆಕೆಯ ತಂದೆಗೆ ಈ ವಿಚಾರವನ್ನು ಹೇಳಿದ್ದರು. ಅದರ ಬೆನ್ನಲ್ಲೇ ಶ್ರದ್ಧಾಳ ಅಪ್ಪ ದೂರು ದಾಖಲು ಮಾಡಿದ್ದರು. ತನಿಖೆ ನಡೆಸಿದಾಗ ಆಕೆ ಕೊಲೆಯಾಗಿದ್ದು ಗೊತ್ತಾಗಿದೆ. ನವೆಂಬರ್​ 12ರಂದು ಅಫ್ತಾಬ್​ ಅರೆಸ್ಟ್​ ಆಗಿದ್ದಾನೆ ಮತ್ತು ಕೊಲೆಯನ್ನು ತಾನೇ ಮಾಡಿದ್ದಾಗಿಯೂ ಒಪ್ಪಿಕೊಂಡಿದ್ದಾನೆ.

Continue Reading

ಕ್ರೈಂ

Shraddha Murder Case | ಶ್ರದ್ಧಾಳ ದೇಹ ಕತ್ತರಿಸಲು ಅಫ್ತಾಬ್​ ಬಳಸಿದ್ದು ಯಾವ ಆಯುಧ?-ಕೊನೆಗೂ ಬಯಲಾಯ್ತು ಸತ್ಯ!

ಪೊಲೀಸರು ಈಗಾಗಲೇ ಅರಣ್ಯ ಪ್ರದೇಶಗಳಲ್ಲಿ ಹುಡುಕಾಟ ನಡೆಸಿ, ಕೆಲವು ಎಲುಬುಗಳನ್ನು ವಶಪಡಿಸಿಕೊಂಡಿದ್ದರು. ಅದು ಶ್ರದ್ಧಾದೇ ಎಂಬುದು ಡಿಎನ್​​ಎ ಟೆಸ್ಟ್​​ನಲ್ಲಿ ಸಾಬೀತಾಗಿತ್ತು.

VISTARANEWS.COM


on

Shraddha Murder Case
Koo

ನವ ದೆಹಲಿ: ಲಿವ್​ ಇನ್​ ಸಂಗಾತಿಯಿಂದ ಬರ್ಬರವಾಗಿ ಹತ್ಯೆಗೀಡಾದ ಶ್ರದ್ಧಾ ವಾಳ್ಕರ್​​ ಕೇಸ್​ ತನಿಖೆ ಮುಂದುವರಿದೆ. ಆರೋಪಿ ಅಫ್ತಾಬ್​ ಪೂನಾವಾಲಾ ಸದ್ಯ ದೆಹಲಿಯ ತಿಹಾರ್​ ಜೈಲಿನಲ್ಲಿದ್ದು, ಮತ್ತೊಂದೆಡೆ ಅವನ ವಿಚಾರಣೆಯೂ ನಡೆಯುತ್ತಿದೆ. ಅಫ್ತಾಬ್ ಮತ್ತು ಶ್ರದ್ಧಾ ಬೇರೆ ಧರ್ಮದವರು. ಮನೆಯವರ ವಿರೋಧದ ನಡುವೆಯೂ ಶ್ರದ್ಧಾ ಅಫ್ತಾಬ್​ ಜತೆ ಬದುಕುತ್ತಿದ್ದಳು. ಕಳೆದ ಮೇ ತಿಂಗಳಲ್ಲಿ ಅಫ್ತಾಬ್​ ಆಕೆಯನ್ನು ಕೊಂದು, 35 ತುಂಡುಗಳಾಗಿ ಕತ್ತರಿಸಿ, ಅವುಗಳನ್ನೆಲ್ಲ ಫ್ರಿಜ್​​ನಲ್ಲಿಟ್ಟುಕೊಂಡಿದ್ದ. ಬಳಿಕ ತಮ್ಮ ಅಪಾರ್ಟ್​​ಮೆಂಟ್​​ಗೆ ಸಮೀಪದಲ್ಲೇ ಇರುವ ಮೆಹ್ರೌಲಿ ಅರಣ್ಯದಲ್ಲಿ ಎಸೆದಿದ್ದ. ಗುರುಗ್ರಾಮದ ಬಳಿಯ ಅರಣ್ಯದಲ್ಲೂ ಕೆಲವು ತುಂಡುಗಳನ್ನು ಎಸೆದಿದ್ದ.

ಪೊಲೀಸರು ಈಗಾಗಲೇ ಅರಣ್ಯ ಪ್ರದೇಶಗಳಲ್ಲಿ ಹುಡುಕಾಟ ನಡೆಸಿ, ಕೆಲವು ಎಲುಬುಗಳನ್ನು ವಶಪಡಿಸಿಕೊಂಡಿದ್ದರು. ಅದು ಶ್ರದ್ಧಾದೇ ಎಂಬುದು ಡಿಎನ್​​ಎ ಟೆಸ್ಟ್​​ನಲ್ಲಿ ಸಾಬೀತಾಗಿತ್ತು. ಅಫ್ತಾಬ್​ ಶ್ರದ್ಧಾಳ ದೇಹವನ್ನು ಯಾವ ಆಯುಧದಿಂದ ಕತ್ತರಿಸಿದ್ದಾನೆ ಎಂಬುದನ್ನು ಪತ್ತೆ ಹಚ್ಚುವ ಸಲುವಾಗಿ ಆ ಮೂಳೆಗಳನ್ನು ಇನ್ನಷ್ಟು ಹೆಚ್ಚಿನ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರ ವರದಿ ಈಗ ಹೊರಬಿದ್ದಿದೆ. ಅಫ್ತಾಬ್​ ಪೂನಾವಾಲಾ ತನ್ನ ಲಿವ್​ ಇನ್​ ಸಂಗಾತಿ ಶ್ರದ್ಧಾಳನ್ನು ಕೊಂದು, ಬಳಿಕ ಗರಗಸದಲ್ಲಿ ಆಕೆಯ ದೇಹವನ್ನು ತುಂಡರಿಸಿದ್ದಾನೆ ಎಂಬುದು ಗೊತ್ತಾಗಿದೆ.

ಅಫ್ತಾಬ್​ ಪೂನಾವಾಲಾ ಅಪಾರ್ಟ್​ಮೆಂಟ್​​ನಿಂದ ಪೊಲೀಸರು ಹಲವು ಬಗೆಯ ಮಾರಕಾಸ್ತ್ರಗಳನ್ನು ಈಗಾಗಲೇ ವಶಪಡಿಸಿಕೊಂಡಿದ್ದಾರೆ. ಆದರೆ ಅದರಲ್ಲಿ ಶ್ರದ್ಧಾಳನ್ನು ತುಂಡರಿಸಲು ಆತ ಯಾವ ಆಯುಧ ಬಳಸಿದ್ದ ಗೊತ್ತಾಗಿರಲಿಲ್ಲ. ಅಫ್ತಾಬ್​ ಮಂಪರು ಪರೀಕ್ಷೆ ವೇಳೆ, ತಾನು ಚೀನಿ ಕ್ಲೀವರ್ (ಮಾಂಸವನ್ನು ಕತ್ತರಿಸಲು ಬಳಸುವ ದೊಡ್ಡ ಚಾಕು) ಬಳಸಿದ್ದಾಗಿ ಹೇಳಿಕೊಂಡಿದ್ದಾನೆ ಎಂಬ ವರದಿ ಬಂದಿದ್ದರೂ, ಅದು ಸ್ಪಷ್ಟವಾಗಿರಲಿಲ್ಲ.

ಇದನ್ನೂ ಓದಿ: Shraddha Murder Case| ಹೌದು ನಾನೇ ಶ್ರದ್ಧಾಳ ಕೊಲೆ ಮಾಡಿದೆ; ಮಂಪರು ಪರೀಕ್ಷೆಯಲ್ಲೂ ಅದೇ ಉತ್ತರ ಕೊಟ್ಟ ಅಫ್ತಾಬ್​

Continue Reading

ದಿಲ್ಲಿ ಮರ್ಡರ್

Shraddha Walkar | ತನ್ನ ಕುಟುಂಬದ ಸದಸ್ಯರ ಭೇಟಿಗೆ ನಿರಾಕರಿಸುತ್ತಿರುವ ಶ್ರದ್ಧಾ ಕೊಲೆ ಆರೋಪಿ ಅಫ್ತಾಬ್

ಶ್ರದ್ಧಾ ವಾಳ್ಕರ್ (Shraddha Walkar) ಕೊಲೆ ಆರೋಪಿ, 28 ವರ್ಷದ ಅಫ್ತಾಬ್ ಪೂನಾವಾಲ ನವೆಂಬರ್ 26ರಿಂದ ದಿಲ್ಲಿಯ ತಿಹಾರ್ ಜೈಲಿನಲ್ಲಿದ್ದಾನೆ.

VISTARANEWS.COM


on

Aaftab used Chinese knife To Cut Shraddha Body
Koo

ನವದೆಹಲಿ: ತನ್ನ ಲಿವ್-ಇನ್ ಸಂಗಾತಿ ಶ್ರದ್ಧಾ ವಾಳ್ಕರಳನ್ನು (Shraddha Walkar) ತುಂಡು ತುಂಡಾಗಿ ಕತ್ತರಿಸಿ ಭಯಾನಕವಾಗಿ ಕೊಲೆ ಮಾಡಿದ್ದ ಆರೋಪಿ ಅಫ್ತಾಬ್ ಪೂನಾವಾಲ (Aftab Poonawala) ಈಗ ದಿಲ್ಲಿಯ ತಿಹಾರ್ ಜೈಲಿನಲ್ಲಿದ್ದಾನೆ. ಆತನನ್ನು ಭೇಟಿಯಾಗಲು ಬಂದ ತನ್ನ ಕುಟುಂಬದ ಸದಸ್ಯರನ್ನು ಭೇಟಿಯಾಗಲು ನಿರಾಕರಿಸುತ್ತಿದ್ದಾನೆಂದು ತಿಳಿದು ಬಂದಿದೆ.

28 ವರ್ಷದ ಅಫ್ತಾಬ್‌ ನವೆಂಬರ್ 26ರಿಂದ ತಿಹಾರ್ ಜೈಲಿನಲ್ಲಿದ್ದಾನೆ. ಆತ ತನ್ನನ್ನು ಯಾರು ಭೇಟಿ ಮಾಡಬೇಕೆಂಬ ಕುರಿತು ಮಾಹಿತಿಯನ್ನು ಜೈಲು ಅಧಿಕಾರಿಗಳಿಗೆ ಇನ್ನಷ್ಟೇ ನೀಡಬೇಕಿದೆ. ನಿಯಮಗಳ ಪ್ರಕಾರ, ಜೈಲಿನಲ್ಲಿರುವ ವ್ಯಕ್ತಿ ವಾರಕ್ಕೆ ಎರಡು ಸಾರಿ, ತನ್ನ ಕುಟುಂಬದವರನ್ನು ಭೇಟಿ ಮಾಡಲು ಅವಕಾಶವಿದೆ.

ಸದ್ಯ ಜೈಲಿನಲ್ಲಿ ತನ್ನ ಪಾಡಿಗೆ ತಾನು ಇರುತ್ತಿರುವ ಆರೋಪಿ ಪೂನಾವಾಲ ಈ ವಾರದ ಬಳಿಕ, ಯಾರನ್ನೋ ಭೇಟಿಯಾಗುವ ಬಗ್ಗೆ ಸಹ ಕೈದಿಗಳ ಜತೆಗೆ ಮಾತನಾಡಿಕೊಂಡಿದ್ದಾನೆಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಆತ ಇದವರೆಗೂ ಯಾರನ್ನು ಭೇಟಿ ಮಾಡಬೇಕೆಂಬ ಮಾಹಿತಿಯನ್ನು ಹಂಚಿಕೊಂಡಿಲ್ಲ. ಜತೆಗೆ, ತನ್ನ ಕುಟುಂಬದ ಸದಸ್ಯರನ್ನು ಭೇಟಿಯಾಗಲೂ ಮುಂದಾಗುತ್ತಿಲ್ಲ.

ಇದನ್ನೂ ಓದಿ | Shraddha Murder Case | ಶ್ರದ್ಧಾ ವಾಳ್ಕರ್​ ಹತ್ಯೆ ಕೇಸ್​​ ಸಿಬಿಐಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದ ದೆಹಲಿ ಹೈಕೋರ್ಟ್​

Continue Reading
Advertisement
Pay attention to childrens safety during holidays Minister Lakshmi Hebbalkar appeals to parents
ಬೆಳಗಾವಿ2 mins ago

Lakshmi Hebbalkar: ರಜೆಯಲ್ಲಿ ಮಕ್ಕಳ ಸುರಕ್ಷತೆಗೆ ಗಮನ ನೀಡಿ; ಪಾಲಕರಿಗೆ ಹೆಬ್ಬಾಳ್ಕರ್ ಮನವಿ

Four Digit PIN
ತಂತ್ರಜ್ಞಾನ14 mins ago

Four Digit PIN: ಇಂಥ ಪಿನ್ ನಂಬರ್ ಕೊಡ್ತಾ ಇದ್ದೀರಾ? ನಿಮ್ಮ ದುಡ್ಡಿಗೆ ಕಾದಿದೆ ಅಪಾಯ!

Nitish Kumar Reddy
Latest17 mins ago

Nitish Reddy : ಐಪಿಎಲ್​ನಲ್ಲಿ ಮಿಂಚಿದ ಈ ಆಟಗಾರನಿಗೆ ಎಪಿಎಲ್​ನಲ್ಲಿ ಸಿಕ್ಕಿತು ಭರ್ಜರಿ ದುಡ್ಡು

Medicine Price
ದೇಶ25 mins ago

Medicine Price: ಗುಡ್‌ ನ್ಯೂಸ್;‌ ಶುಗರ್‌, ಹೃದ್ರೋಗ ಸೇರಿ 41 ಔಷಧಗಳ ಬೆಲೆ ಇಳಿಸಿದ ಮೋದಿ ಸರ್ಕಾರ

Belagavi News Masked man stabs TC and four others for asking them to show tickets on train
ಕ್ರೈಂ28 mins ago

Belagavi News: ರೈಲಲ್ಲಿ ಟಿಕೆಟ್‌ ತೋರಿಸು ಎಂದಿದ್ದಕ್ಕೆ ಟಿಸಿ ಸೇರಿ ನಾಲ್ವರಿಗೆ ಚಾಕು ಇರಿದ ಮುಸುಕುಧಾರಿ; ಒಬ್ಬ ಸಾವು, ನಾಲ್ವರು ಗಂಭೀರ

Skin Care Tips in Kannada
ಆರೋಗ್ಯ43 mins ago

Skin Care Tips in Kannada: ಈ ಕಾರಣಕ್ಕಾಗಿ ನೀವು ಸನ್‌ಸ್ಕ್ರೀನ್‌ ಹಚ್ಚಿಕೊಳ್ಳಲೇಬೇಕು!

Car Care tips
ಪ್ರಮುಖ ಸುದ್ದಿ1 hour ago

Car Care Tips : ನಿಮ್ಮ ಕಾರಿನ ಈ ಬಿಡಿಭಾಗಗಳಿಗೂ ಇವೆ ಎಕ್ಸ್​ಪೈರಿ ಡೇಟ್​​; ಅವುಗಳು ಯಾವವು ಎಂಬುದು ತಿಳಿದಿರಲಿ

ASOS brand products are available at Reliance Retail
ದೇಶ1 hour ago

Reliance Retail: ರಿಲಯನ್ಸ್‌ ರಿಟೇಲ್‌ನಲ್ಲಿ ಎಎಸ್‌ಒಎಸ್‌ ಬ್ರ್ಯಾಂಡ್‌ನ ಉತ್ಪನ್ನಗಳು ಈಗ ಲಭ್ಯ

OTT Release
ಒಟಿಟಿ1 hour ago

OTT Release: ಒಟಿಟಿಯಲ್ಲಿ ಈ ವಾರ ಬ್ರಿಡ್ಜರ್‌ಟನ್‌, ಬಾಹುಬಲಿ ಸರಣಿ; ಇನ್ನೂ ಏನೇನಿವೆ?

Yogendra Yadav
Lok Sabha Election 20241 hour ago

Yogendra Yadav: ಈ ಬಾರಿ ಬಿಜೆಪಿಗೆ ಬಹುಮತ ಬರಲ್ಲವೆಂದ ಯೋಗೇಂದ್ರ ಯಾದವ್; ಇವರ ಹಿಂದಿನ ಭವಿಷ್ಯ ನಿಜವಾಗಿತ್ತಾ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ4 hours ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ6 hours ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು9 hours ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ2 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ2 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20242 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20242 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ2 days ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು2 days ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

ಟ್ರೆಂಡಿಂಗ್‌