ಹೊಸ ಮಾದರಿಯ ಯುದ್ಧ ಎದುರಿಸಲು ಅಗ್ನಿಪಥ್‌ ಅಸ್ತ್ರ; ಎನ್‌ಎಸ್‌ಎ ಅಜಿತ್‌ ದೋವಲ್‌ ಪ್ರತಿಪಾದನೆ - Vistara News

ದೇಶ

ಹೊಸ ಮಾದರಿಯ ಯುದ್ಧ ಎದುರಿಸಲು ಅಗ್ನಿಪಥ್‌ ಅಸ್ತ್ರ; ಎನ್‌ಎಸ್‌ಎ ಅಜಿತ್‌ ದೋವಲ್‌ ಪ್ರತಿಪಾದನೆ

Ajit Doval | ಅಗ್ನಿಪಥ್‌ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ನಡೆದವು. ಈ ಮಧ್ಯೆ ಈ ಯೋಜನೆಯನ್ನು ಯುವ ಜನರಿಗೆ ಅರ್ಥ ಮಾಡಿಸಲು ಅಜಿತ್‌ ದೋವಲ್‌ ಪ್ರಯತ್ನಿಸಿದ್ದಾರೆ. ಜತೆಗೆ, ಅಗ್ನಿಪಥ್‌ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

VISTARANEWS.COM


on

Ajit Doval
ಅಜಿತ್‌ ದೋವಲ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಅಗ್ನಿಪಥ್‌ ಸ್ವತಂತ್ರ ಯೋಜನೆಯಲ್ಲ. ಇದನ್ನು ಏಕಾಏಕಿ ಜಾರಿಗೊಳಿಸಿದ್ದೂ ಅಲ್ಲ. ಹಲವು ವರ್ಷಗಳಿಂದ ಈ ಬಗ್ಗೆ ಅಧ್ಯಯನ ನಡೆಸಿ, ಸಮಗ್ರವಾಗಿ ಪರಿಶೀಲಿಸಿ ಘೋಷಣೆ ಮಾಡಲಾಗಿದೆ. ಯೋಜನೆ ವಾಪಸ್‌ ಪಡೆಯುವ ಪ್ರಶ್ನೆಯೇ ಇಲ್ಲ. ಹಿಂಸಾತ್ಮಕ ಪ್ರತಿಭಟನೆಯನ್ನು ಸಹಿಸಿಕೊಳ್ಳುವುದೂ ಇಲ್ಲ ಎಂದು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಹೇಳಿದ್ದಾರೆ.

ಸೇನಾ ನೇಮಕಾತಿ ಯೋಜನೆ ಅಗ್ನಿಪಥ್‌ ಜಾರಿಯಾದ ಬೆನ್ನಲ್ಲೇ ಅದರ ವಿರುದ್ಧ ತೀವ್ರ ಪ್ರತಿಭಟನೆ ನಡೆಯುತ್ತಿದೆ. ಈ ಯೋಜನೆ ಬಗ್ಗೆ ಅನೇಕ ತಪ್ಪುಕಲ್ಪನೆಗಳು ಎದ್ದಿವೆ. ಅದಕ್ಕೆಲ್ಲ ಕೇಂದ್ರ ಸರ್ಕಾರ ಸ್ಪಷ್ಟನೆಗಳನ್ನು ಕೊಟ್ಟಿದೆ. ಹಾಗೆಯೇ, ಅಗ್ನಿಪಥ್‌ ಯೋಜನೆ ಹಿಂಪಡೆಯಲು ಸಾಧ್ಯವೇ ಇಲ್ಲ ಎಂದು ಘೋಷಿಸಲಾಗಿದೆ. ಅಗ್ನಿವೀರರ ನೇಮಕಾತಿ ಸಂಬಂಧ ಅಧಿಸೂಚನೆಯನ್ನೂ ಹೊರಡಿಸಲಾಗಿದೆ. ಇದೇ ಹೊತ್ತಲ್ಲಿ ಅಜಿತ್‌ ದೋವಲ್‌ ಎಎನ್‌ಐ ಸುದ್ದಿ ಮಾಧ್ಯಮಕ್ಕೆ ಸಂದರ್ಶನ ಕೊಟ್ಟು, ಅಗ್ನಿಪಥ್‌ ಯೋಜನೆ ಮತ್ತು ಸೇನೆಯ ಇನ್ನಿತರ ವಿಚಾರಗಳ ಬಗ್ಗೆ ಸಮಗ್ರವಾಗಿ ಮಾತನಾಡಿದ್ದಾರೆ.

ʼಪ್ರಧಾನಿ ನರೇಂದ್ರ ಮೋದಿಯವರ ಪ್ರಥಮ ಆದ್ಯತೆ ಭಾರತವನ್ನು ಬಲಿಷ್ಠಗೊಳಿಸುವುದು ಮತ್ತು ಭದ್ರಪಡಿಸುವುದು. 2014ರಲ್ಲಿ ಅವರು ಮೊದಲ ಬಾರಿಗೆ ಪ್ರಧಾನಿ ಹುದ್ದೆಗೆ ಏರಿದಾಗಿನಿಂದಲೂ ಇದೇ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಪೂರಕವಾದ ಯೋಜನೆ ಈ ಅಗ್ನಿಪಥ್‌. ಇಡೀ ಜಗತ್ತಿನಲ್ಲಿ ಯುದ್ಧದ ಮಾದರಿ ಬದಲಾಗುತ್ತಿದೆ. ಕಣ್ಣಿಗೆ ಕಾಣದ ಶತ್ರುಗಳ ವಿರುದ್ಧ ಹೋರಾಡಬೇಕಾದ ಪರಿಸ್ಥಿತಿ ಬರುತ್ತಿದೆ. ಅದಕ್ಕೆ ನಮ್ಮ ಸೇನೆಯೂ ಸಜ್ಜಾಗಬೇಕು. ನಾವು ನಾಳೆಯ ಬಗ್ಗೆ ಯೋಚಿಸಿ, ಸಿದ್ಧರಾಗಬೇಕು. ಹೆಚ್ಚೆಚ್ಚು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಹೊಸ ಮಾದರಿ ಸೇನಾ ಉಪಕರಣಗಳನ್ನು ಬಳಕೆ ಮಾಡಲು ಸೇನೆಯಲ್ಲಿ ಯುವಜನರು, ಚಾಣಾಕ್ಷರ ಅಗತ್ಯ ತುಂಬ ಇರುತ್ತದೆ. ಈ ನಿಟ್ಟಿನಲ್ಲಿ ಅಗ್ನಿಪಥ್‌ ಅತ್ಯಂತ ಸೂಕ್ತʼ ಎಂದು ದೋವಲ್‌ ಹೇಳಿದರು.

ಸೇನಾ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವುದಕ್ಕೆ ಮತ್ತು ನವೀಕರಣ ಮಾಡಲು ಕೇಂದ್ರ ಸರ್ಕಾರ ನೀಡುತ್ತಿರುವ ಆದ್ಯತೆ ಬಗ್ಗೆ ಮಾತನಾಡಿದ ಅಜಿತ್‌ ದೋವಲ್‌ “ಇಡೀ ಸೈನ್ಯಕ್ಕೆ ನಾಲ್ವರು ಮುಖ್ಯಸ್ಥರು ಇರುತ್ತಾರೆ. ಭವಿಷ್ಯದ ದೃಷ್ಟಿಯಿಂದ ಸೇನೆಗೆ ಖಂಡಿತ ಹೊಸ ತಂತ್ರಜ್ಞಾನವುಳ್ಳ ಉಪಕರಣಗಳ ಅಗತ್ಯವಿದೆ. ಆರ್ಮಿ ವ್ಯವಸ್ಥೆ ಮತ್ತು ಸ್ವರೂಪದಲ್ಲಿ ಬದಲಾವಣೆಯಾಗಬೇಕು. ಅಷ್ಟೇ ಅಲ್ಲ, ಮಾನವ ಶಕ್ತಿ, ನೀತಿ ರಚನೆಯಲ್ಲೂ ಬದಲಾವಣೆ ಬೇಕುʼ ಎಂದು ಹೇಳಿದರು.

“ಭದ್ರತೆ ಎಂಬುದು ಒಂದು ಕ್ರಿಯಾತ್ಮಕ ಪರಿಕಲ್ಪನೆ. ಹೀಗಾಗಿ ಯಾವಾಗಲೂ ಒಂದೇ ಸ್ವರೂಪದಲ್ಲಿ, ಸ್ಥಿರವಾಗಿ ಇರಬೇಕು ಎಂದುಕೊಳ್ಳುವುದು ತಪ್ಪಾಗುತ್ತದೆ. ಸಂದರ್ಭ, ಸನ್ನಿವೇಶ ಮತ್ತು ಹೋರಾಟ-ಯುದ್ಧದ ಮಾದರಿಗೆ ಅನುಗುಣವಾಗಿ, ರಾಷ್ಟ್ರದ ಹಿತಾಸಕ್ತಿ ಮತ್ತು ಆಸ್ತಿಯನ್ನು ರಕ್ಷಿಸಲು ಭದ್ರತಾ ವ್ಯವಸ್ಥೆಯಲ್ಲೂ ಅಗತ್ಯ ಬದಲಾವಣೆ ಮಾಡಲೇಬೇಕುʼ ಎಂದೂ ದೋವಲ್ ತಿಳಿಸಿದರು.

ಇದನ್ನೂ ಓದಿ: ಮೂರೂ ಸೇನಾ ಮುಖ್ಯಸ್ಥರಿಂದ ನಾಳೆ ಪ್ರಧಾನಿ ಮೋದಿ ಭೇಟಿ, ಅಗ್ನಿಪಥ್‌ ಚರ್ಚೆ

ರೆಜಿಮೆಂಟಲ್‌ ವ್ಯವಸ್ಥೆ ಹಾಳಾಗದು
ಇಡೀ ಸೇನೆಯಲ್ಲಿ ಅಗ್ನಿವೀರರೇ ತುಂಬಿಬಿಡುವುದಿಲ್ಲ. ಹಿರಿಯ ಅಧಿಕಾರಿಗಳು, ವಿವಿಧ ಶ್ರೇಣಿಯ ಸೇನಾ ಪ್ರಮುಖರು ಇದ್ದೇ ಇರುತ್ತಾರೆ. ಅಗ್ನಿವೀರರಾಗಿ ಸೇನೆಗೆ ಸೇರ್ಪಡೆಯಾದ ಬಳಿಕ ಅವರು ಕಠಿಣ ತರಬೇತಿ ಪಡೆಯುತ್ತಾರೆ. ಸಮಯ ಕಳೆದಂತೆ ಅನುಭವ ಪಡೆಯುತ್ತಾರೆ. ಅವರೂ ಅನುಭವಿಗಳಾಗುತ್ತ ಹೋಗುತ್ತಾರೆ. ಮತ್ತೆ ನಾಲ್ಕು ವರ್ಷಗಳ ನಂತರ ಅತ್ಯಂತ ದಕ್ಷರು ಎನ್ನಿಸಿಕೊಂಡವರು ಮಾತ್ರ ಸೇನೆಯಲ್ಲಿ ಶಾಶ್ವತ ಸ್ಥಾನ ಪಡೆಯುತ್ತಾರೆ. ಅವರು ನಾಲ್ಕು ವರ್ಷಗಳ ಅನುಭವಗಳ ಜತೆ ಮತ್ತಷ್ಟು ತರಬೇತಿಯನ್ನು ಪಡೆಯುತ್ತಾರೆ ಎಂದು ಹೇಳಿದ ಅಜಿತ್‌ ದೋವಲ್‌, ʼಇದೀಗ ಸೇನೆಯಲ್ಲಿ ಇರುವ ರೆಜಿಮೆಂಟಲ್‌ ವ್ಯವಸ್ಥೆಗೆ ಅಗ್ನಿವೀರರಿಂದ ಯಾವುದೇ ತೊಡಕಾಗುವುದಿಲ್ಲ. ಇಷ್ಟು ದಿನಗಳಂತೆ ಅದು ಮುಂದುವರಿಯಲಿದೆʼ ಎಂದೂ ತಿಳಿಸಿದರು.

ಸಕಾರಾತ್ಮಕವಾಗಿ ಆಲೋಚಿಸಿ
ಅಗ್ನಿಪಥ್‌ ಯೋಜನೆ ಬಗ್ಗೆ ಸಕಾರಾತ್ಮಕವಾಗಿ ಆಲೋಚನೆ ಮಾಡುವಂತೆ ಅಜಿತ್‌ ದೋವಲ್‌ ಯುವಜನರಿಗೆ ಕರೆ ಕೊಟ್ಟಿದ್ದಾರೆ. ʼಅಗ್ನಿಪಥ್‌ ಬಗ್ಗೆ ನೆಗೆಟಿವ್‌ ವಿಚಾರಗಳನ್ನು ನಂಬಬೇಡಿ. ಈ ದೇಶದ ನಾಯಕತ್ವದ ಮೇಲೆ ನಂಬಿಕೆಯಿಡಿ ಮತ್ತು ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ ಎಂದೂ ಹೇಳಿದ್ದಾರೆ. ʼಯುವಜನರು ಕೇವಲ ಹಣಕ್ಕಾಗಿ ಸೇನೆ ಸೇರುವುದಿಲ್ಲ. ಅವರಲ್ಲಿ ದೇಶಭಕ್ತಿ ಇರುತ್ತದೆ. ದೇಶಕ್ಕಾಗಿ ನಮ್ಮ ಕೈಲಾದ ಸೇವೆ ಸಲ್ಲಿಸಬೇಕು ಎಂಬ ಆಸೆ ಇರುತ್ತದೆ. ಅಂಥವರು ಖಂಡಿತ ಅಗ್ನಿಪಥ್‌ನ್ನು ವಿರೋಧಿಸುವುದಿಲ್ಲ. ಆದರೆ ಯಾರಲ್ಲಿ ದೇಶ ಸೇವೆಯ ತುಡಿತವಿಲ್ಲದೆ ಕೇವಲ ಹಣಕ್ಕಾಗಿ ಸೇನೆ ಸೇರಲು ಬಯಸುತ್ತಾರೋ ಅವರಿಗೆ ಈ ಯೋಜನೆ ಇಷ್ಟವಾಗುವುದಿಲ್ಲ. ಅಗ್ನಿಪಥ್‌ ಸ್ಕೀಮ್‌ನಡಿ ಸೇನೆ ಸೇರಿ, ನಾಲ್ಕು ವರ್ಷ ಸೇವೆ ಸಲ್ಲಿಸಿ, ನಿವೃತ್ತರಾದ ಬಳಿಕವೂ ಅವರಿಗೆ ವಯಸ್ಸಿರುತ್ತದೆ. ದುಡಿಮೆಗೆ ಅನೇಕ ದಾರಿಗಳು ಇರುತ್ತವೆ. ಅಗ್ನಿವೀರರಿಗಾಗಿಯೇ ಕೇಂದ್ರ ಸರ್ಕಾರ ಹಲವು ವಿಶೇಷ ಯೋಜನೆಗಳನ್ನು ಘೋಷಿಸಿದೆ. ಮುಂದೇನು ಎಂಬ ಚಿಂತೆಯಿಲ್ಲದೆ, ಉತ್ತಮ ಬದುಕು ಸಾಗಿಸಬಹುದುʼ ಎಂದು ಅಜಿತ್‌ ದೋವಲ್‌ ಹೇಳಿದ್ದಾರೆ.

ಇದನ್ನೂ ಓದಿ: ಮೂರೂ ಸೇನಾ ಮುಖ್ಯಸ್ಥರಿಂದ ನಾಳೆ ಪ್ರಧಾನಿ ಮೋದಿ ಭೇಟಿ, ಅಗ್ನಿಪಥ್‌ ಚರ್ಚೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Lok Sabha Speaker Election: ಲೋಕಸಭೆ ಸ್ಪೀಕರ್ ಚುನಾವಣೆ ಇಂದು; ಆಡಳಿತ ಪಕ್ಷ-ಪ್ರತಿಪಕ್ಷ ಬಲಾಬಲ ಹೀಗಿದೆ

Lok Sabha Speaker Election: ಇಂದು ಲೋಕಸಭಾ ಸ್ಪೀಕರ್‌ ಆಯ್ಕೆಗೆ ಚುನಾವಣೆ ನಡೆಯಲಿದೆ. ಎನ್‌ಡಿಎಯ ಬಿಜೆಪಿ ಸಂಸದ ಓಂ ಬಿರ್ಲಾ ಮತ್ತು ಪ್ರತಿಪಕ್ಷಗಳ ಇಂಡಿ ಒಕ್ಕೂಟದಿಂದ ಕಾಂಗ್ರೆಸ್ ಸಂಸದ ಕೊಂಡಿಕುನಾಲ್ ಸುರೇಶ್ ಮಧ್ಯೆ ತೀವ್ರ ಪೈಪೋಟಿ ಕಂಡು ಬಂದಿದೆ. ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್‌ ತನ್ನ ಸಂಸದರಿಗೆ ವಿಪ್‌ ಜಾರಿ ಮಾಡಿ ಹಾಜರಿರುವಂತೆ ಸೂಚಿಸಿದೆ.

VISTARANEWS.COM


on

Lok Sabha Speaker Election
Koo

ನವದೆಹಲಿ: ನರೇಂದ್ರ ಮೋದಿ (Narendra Modi) ನೇತೃತ್ವದ ಎನ್‌ಡಿಎ 3.0 ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕದ ಮೊದಲ ಅಧಿವೇಶನ (Parliament Session 2024) ಆರಂಭವಾಗಲಿದೆ. ಈಗಾಗಲೇ ಸಂಸದರು ಪ್ರಮಾಣ ವಚನ ಸ್ವೀಕರಿಸಿದ್ದು, ಇಂದು ಲೋಕಸಭಾ ಸ್ಪೀಕರ್‌ ಆಯ್ಕೆಗೆ ಚುನಾವಣೆ ನಡೆಯಲಿದೆ (Lok Sabha Speaker Election). ಎನ್‌ಡಿಎಯಿಂದ ಬಿಜೆಪಿ ಸಂಸದ ಓಂ ಬಿರ್ಲಾ (Om Birla) ಮತ್ತು ಪ್ರತಿಪಕ್ಷಗಳ ಇಂಡಿ ಒಕ್ಕೂಟದಿಂದ ಕಾಂಗ್ರೆಸ್ ಸಂಸದ ಕೊಂಡಿಕುನಾಲ್ ಸುರೇಶ್ (Kondikunal Suresh) ಮಂಗಳವಾರ ಲೋಕಸಭಾ ಸ್ಪೀಕರ್ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದಾರೆ.

ಬಲಾಬಲ ಹೀಗಿದೆ

ಲೋಕಸಭೆಯಲ್ಲಿ ಬಿಜೆಪಿ ಈಗಾಗಲೇ ತನ್ನದೇ ಸಂಸದರಿಂದ 240 ಮತಗಳನ್ನು ಮತ್ತು ಎನ್‌ಡಿಎ ಪಾಲುದಾರ ಪಕ್ಷಗಳಿಂದ 63 ಮತಗಳನ್ನು ಹೊಂದಿದೆ. ಇದರಲ್ಲಿ ಚಂದ್ರಬಾಬು ನಾಯ್ಡು ಅವರ ಟಿಡಿಪಿಯ 16 ಸಂಸದರು ಮತ್ತು ಪವನ್ ಕಲ್ಯಾಣ್‌ ಅವರ ಜನಸೇನಾ ಪಕ್ಷದ 2 ಸಂಸದರು ಸೇರಿಕೊಂಡಿದ್ದಾರೆ. ಒಟ್ಟು 293 ಸಂಖ್ಯಾಬಲವಿದೆ. ಹೆಚ್ಚುವರಿಯಾಗಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ವೈಎಸ್‌ಆರ್ ಕಾಂಗ್ರೆಸ್ ಪಕ್ಷವು ಬಿಜೆಪಿ ಅಭ್ಯರ್ಥಿ ಓಂ ಬಿರ್ಲಾ ಅವರನ್ನು ಬೆಂಬಲಿಸಲಿದೆ ಎನ್ನಲಾಗಿದ್ದು, ಅವರ 4 ಸಂಸದರ ಬಲ ಸೇರಿಸಿದರೆ ಎನ್‌ಡಿಎಗೆ ಒಟ್ಟು 297 ಮತ ದೊರೆಯಲಿದೆ. ಸ್ಥಳೀಯವಾಗಿ ವಿರೋಧ ಇರುವ ಹೊರತಾಗಿಯೂ ಬಿರ್ಲಾ ಅವರನ್ನು ಬೆಂಬಲಿಸಲು ವೈಎಸ್​ಆರ್​ ನಿರ್ಧರಿಸಿದೆ.

ಇನ್ನು ಪ್ರತಿಪಕ್ಷಗಳ ಇಂಡಿ ಬಣ ಲೋಕಸಭೆಯಲ್ಲಿ 232 ಸಂಸದರನ್ನು ಹೊಂದಿದೆ. ಈ ಪೈಕಿ 7 ಸಂಸದರು ಇನ್ನೂ ಪ್ರಮಾಣ ವಚನ ಸ್ವೀಕರಿಸಿಲ್ಲ. ಹೀಗಾಗಿ ಅವರಿಗೆ ವೋಟಿಂಗ್‌ ಮಾಡುವ ಅಧಿಕಾರವಿಲ್ಲ. ಇದರಲ್ಲಿ ಕಾಂಗ್ರೆಸ್‌ ಐವರು ಮತ್ತು ತೃಣಮೂಲ ಕಾಂಗ್ರೆಸ್‌ ಇಬ್ಬರು ಸೇರಿದ್ದಾರೆ. ಜತೆಗೆ ಕೆಲವು ಸ್ವತಂತ್ರ ಅಭ್ಯರ್ಥಿಗಳೂ ಪ್ರಮಾಣ ವಚನ ಸ್ವೀಕರಿಸಿಲ್ಲ. ಈ ಕೆಲವು ನಾಯಕರ ಪ್ರಮಾಣ ವಚನ ಸ್ವೀಕಾರ ಏಕೆ ಬಾಕಿ ಉಳಿದಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಅರ್ಹತೆ ಹೊಂದಿರುವ ಸಂಸದರ ಸಂಖ್ಯೆಯನ್ನು ಆಧರಿಸಿ ವೋಟಿಂಗ್‌ ನಡೆಯಲಿದೆ. ಹೀಗಾಗಿ ಬಹುಮತಕ್ಕೆ 269 ಮತಗಳ ಅಗತ್ಯವಿದೆ.

ಶಾಕ್‌ ಕೊಟ್ಟ ಟಿಎಂಸಿ

ಈ ನಡುವೆ ಇಂಡಿ ಬಣ ಅಭ್ಯರ್ಥಿಯಾಗಿ ಕೆ.ಸುರೇಶ್ ಅವರನ್ನು ಆಯ್ಕೆ ಮಾಡುವ ಮುನ್ನ ತಮ್ಮ ಬಳಿ ಸಮಾಲೋಚನೆಯನ್ನೇ ನಡೆಸಿಲ್ಲ ಎಂದು ಟಿಎಂಸಿ ಆರೋಪಿಸಿದೆ. ಕೆ. ಸುರೇಶ್ ಅವರನ್ನು ಇಂಡಿ ಬಣ ಜಂಟಿ ನಾಮನಿರ್ದೇಶಿತ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಪ್ರತಿಪಕ್ಷಗಳ ನಿರ್ಧಾರದ ಬಗ್ಗೆ ನಮ್ಮ ಪಕ್ಷದ ನಾಯಕರ ಬಳಿ ಸಮಾಲೋಚನೆ ನಡೆಸಿಲ್ಲ. ದುರದೃಷ್ಟವಶಾತ್ ಇದು ಏಕಪಕ್ಷೀಯ ನಿರ್ಧಾರ ಎಂದು ಟಿಎಂಸಿ ಹೇಳಿದೆ. ಹೀಗಾಗಿ ಟಿಎಂಸಿ ನಡೆ ಕುತೂಹಲ ಮೂಡಿಸಿದೆ.

ಇಂದು ಬೆಳಿಗ್ಗೆ 11 ಗಂಟೆಗೆ ಚುನಾವಣೆ ಪ್ರಕ್ರಿಯೆ ನಡೆಯಲಿದ್ದು, ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್‌ ತನ್ನ ಸಂಸದರಿಗೆ ವಿಪ್‌ ಜಾರಿ ಮಾಡಿ ಹಾಜರಿರುವಂತೆ ಸೂಚಿಸಿದೆ.

ಇದನ್ನೂ ಓದಿ: Parliament Session 2024: ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ

Continue Reading

ದೇಶ

Parliament Session 2024: ಇಂದು ಐತಿಹಾಸಿಕ ಲೋಕಸಭಾ ಸ್ಪೀಕರ್‌ ಚುನಾವಣೆ; ಕ್ಷಣ ಕ್ಷಣದ ಮಾಹಿತಿಗಾಗಿ Live ನೋಡಿ

Parliament Session 2024: ಲೋಕಸಭಾ ಸ್ಪೀಕರ್‌ ಹುದ್ದೆಗೆ ಎನ್‌ಡಿಎಯಿಂದ ಬಿಜೆಪಿ ಸಂಸದ ಓಂ ಬಿರ್ಲಾ ಮತ್ತು ಪ್ರತಿಪಕ್ಷಗಳ ಇಂಡಿ ಒಕ್ಕೂಟದಿಂದ ಕಾಂಗ್ರೆಸ್ ಸಂಸದ ಕೊಂಡಿಕುನಾಲ್ ಸುರೇಶ್ ಸ್ಪರ್ಧಿಸುತ್ತಿದ್ದಾರೆ. ಸಾಮಾನ್ಯವಾಗಿ ಸ್ಪೀಕರ್ ಹಾಗೂ ಡೆಪ್ಯುಟಿ ಸ್ಪೀಕರ್ ಆಯ್ಕೆಯು ಸಹಮತದೊಂದಿಗೆ ನಡೆಯುತ್ತದೆ. ಆದರೆ ಈ ಬಾರಿ ಚುನಾವಣೆ ನಡೆಯಲಿದೆ. ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ Live ವೀಕ್ಷಿಸಿ.

VISTARANEWS.COM


on

Parliament Session 2024
Koo

ನವದೆಹಲಿ: ಜಿದ್ದಾಜಿದ್ದಿನ ಲೋಕಸಭಾ ಚುನಾವಣೆಯ ಬಳಿಕ ಇದೀಗ ದೇಶ ಲೋಕಸಭಾ ಸ್ಪೀಕರ್‌ ಆಯ್ಕೆಯ ಚುನಾವಣೆಗೆ ಸಾಕ್ಷಿಯಾಗಲಿದೆ (Lok Sabha Speaker Election). ಲೋಕಸಭಾ ಸ್ಪೀಕರ್‌ ಹುದ್ದೆಗೆ ಎನ್‌ಡಿಎಯಿಂದ ಬಿಜೆಪಿ ಸಂಸದ ಓಂ ಬಿರ್ಲಾ (Om Birla) ಮತ್ತು ಪ್ರತಿಪಕ್ಷಗಳ ಇಂಡಿ ಒಕ್ಕೂಟದಿಂದ ಕಾಂಗ್ರೆಸ್ ಸಂಸದ ಕೊಂಡಿಕುನಾಲ್ ಸುರೇಶ್ (Kondikunal Suresh) ಸ್ಪರ್ಧಿಸುತ್ತಿದ್ದಾರೆ. ಅವಿರೋಧ ಆಯ್ಕೆಗೆ ಒಮ್ಮತ ಮೂಡದ ಹಿನ್ನಲೆಯಲ್ಲಿ ಈ ಇಬ್ಬರು ನಾಯಕರು ಮಂಗಳವಾರ ನಾಮಪತ್ರ ಸಲ್ಲಿಸಿದರು (Parliament Session 2024).

ಸಾಮಾನ್ಯವಾಗಿ ಸ್ಪೀಕರ್ ಹಾಗೂ ಡೆಪ್ಯುಟಿ ಸ್ಪೀಕರ್ ಆಯ್ಕೆಯು ಸಹಮತದೊಂದಿಗೆ ನಡೆಯುತ್ತದೆ. ಹಲವು ವರ್ಷಗಳಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಆದರೆ ಈ ಬಾರಿ ಈ ಸಂಪ್ರದಾಯ ಕೊನೆಯಾಗಿದ್ದು, ಹಲವು ದಶಕಗಳ ಬಳಿಕ ಇದೇ ಮೊದಲ ಸಲ ಸ್ಪೀಕರ್ ಸ್ಥಾನಕ್ಕೆ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಜಿದ್ದಾಜಿದ್ದಿನ ಹೋರಾಟಕ್ಕೆ ಅಣಿಯಾಗಿವೆ.

ಆರಂಭದಲ್ಲಿ ಎನ್‌ಡಿಎ ಪ್ರತಿಪಕ್ಷಗಳ ಮನವೊಲಿಸಲು ಯತ್ನಿಸಿತ್ತು. ಓಂ ಬಿರ್ಲಾ ಅವರನ್ನು ಬೆಂಬಲಿಸಲು ಒಪ್ಪಿಗೆ ಸೂಚಿಸಿದ್ದ ಇಂಡಿ ಬಣ ಡೆಪ್ಯುಟಿ ಸ್ಪೀಕರ್ ತಮಗೆ ಸಿಗಬೇಕೆಂಬ ಷರತ್ತು ವಿಧಿಸಿತ್ತು. ಆದರೆ ಇದಕ್ಕೆ ಎನ್‌ಡಿಎ ಒಪ್ಪಿಗೆ ಸೂಚಿಸದ ಹಿನ್ನೆಲೆಯಲ್ಲಿ ಮಾತುಕತೆ ಮುರಿದು ಬಿದ್ದು ಕೊನೆಯ ಕ್ಷಣದಲ್ಲಿ ಕೊಂಡಿಕುನಾಲ್ ಸುರೇಶ್ ನಾಮಪತ್ರ ಸಲ್ಲಿಸಿದರು.

ಓಂ ಬಿರ್ಲಾ, ಕೆ.ಸುರೇಶ್‌ ಹಿನ್ನೆಲೆ

ರಾಜಸ್ಥಾನದ ಕೋಟಾ ಕ್ಷೇತ್ರವನ್ನು ಪ್ರತಿನಿಧಿಸುವ ಓಂ ಬಿರ್ಲಾ ಅವರು 7 ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಕಳೆದ ಬಾರಿಯೂ ಅವರೇ ಸ್ಪೀಕರ್‌ ಆಗಿದ್ದರು. ಹೀಗಾಗಿ ಅವರನ್ನೇ ಸ್ಪೀಕರ್ ಆಗಿ ಮುಂದುವರಿಸಲು ಬಿಜೆಪಿ ಮುಂದಾಗಿದೆ. ಇನ್ನು ಕೆ.ಸುರೇಶ್‌ ಕೇರಳದ ಮಾವೆಲಿಕರಾ ಕ್ಷೇತ್ರದ ಕಾಂಗ್ರೆಸ್ ಸಂಸದ. ಎಂಟು ಬಾರಿ ಗೆದ್ದಿರುವ ಸುರೇಶ್ ಅವರು, 18ನೇ ಲೋಕಸಭೆಯಲ್ಲಿ ಅತ್ಯಂತ ಸುದೀರ್ಘಾವಧಿ ಸೇವೆ ಸಲ್ಲಿಸಿರುವ ಸಂಸದರೆನಿಸಿದ್ದಾರೆ. ಕಳೆದ 2 ಲೋಕಸಭಾ ಅಧಿವೇಶನಗಳಲ್ಲಿ ಬಿಜೆಪಿಯ ಸುಮಿತ್ರಾ ಮಹಾಜನ್ (2014) ಮತ್ತು ಓಂ ಬಿರ್ಲಾ (2019) ಸ್ಪೀಕರ್‌ಗಳಾಗಿದ್ದರು.

ಚುನಾವಣೆ ಎಷ್ಟು ಗಂಟೆಗೆ?

ಇಂದು ಬೆಳಿಗ್ಗೆ 11 ಗಂಟೆಗೆ ಸ್ಪೀಕರ್ ಆಯ್ಕೆಗೆ ಚುನಾವಣೆ ನಡೆಯಲಿದೆ. 293 ಸಂಸದರ ಬಲ ಹೊಂದಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಸರಳ ಬಹುಮತದೊಂದಿಗೆ ಓಂ ಬಿರ್ಲಾ ಅವರು ಪುನರಾಯ್ಕೆ ಆಗುವ ನಿರೀಕ್ಷೆಯಲ್ಲಿದೆ. ಇಂಡಿ ಮೈತ್ರಿಕೂಟಕ್ಕೆ 232 ಸದಸ್ಯರ ಬಲವಿದೆ. ಈ ಪೈಕಿ 7 ಸಂಸದರು ಇನ್ನೂ ಪ್ರಮಾಣ ವಚನ ಸ್ವೀಕರಿಸಿಲ್ಲ. ಹೀಗಾಗಿ ಅವರಿಗೆ ವೋಟು ಮಾಡುವ ಅಧಿಕಾರವಿಲ್ಲ. ಜತೆಗೆ ವೈ.ಎಸ್‌.ಜಗಮೋಹನ್‌ ರೆಡ್ಡಿ ಅವರ ವೈಎಸ್‌ಆರ್‌ ಕಾಂಗ್ರೆಸ್‌ನ ನಾಲ್ವರು ಸಂಸದರು ಎನ್‌ಡಿಎಗೆ ಬೆಂಬಲ ಸೂಚಿಸುವ ಸಾಧ್ಯತೆ ಇದೆ.

ವಿಪ್‌ ಜಾರಿ

ಲೋಕಸಭಾ ಸ್ಪೀಕರ್ ಹುದ್ದೆಯ ಚುನಾವಣೆಯ ಹಿನ್ನೆಲೆಯಲ್ಲಿ ಬುಧವಾರ ಸದನಕ್ಕೆ ಹಾಜರಾಗುವಂತೆ ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್‌ ತಮ್ಮ ಸಂಸದರಿಗೆ ವಿಪ್‌ (Whip) ಜಾರಿ ಮಾಡಿವೆ. ಎರಡೂ ಪಕ್ಷಗಳು ಬುಧವಾರ ಬೆಳಿಗ್ಗೆ 11 ಗಂಟೆಗೆ ಲೋಕಸಭೆಗೆ ಹಾಜರಾಗುವಂತೆ ಮೂರು ಸಾಲಿನ ವಿಪ್ ಜಾರಿ ಮಾಡಿವೆ.

ಇದನ್ನೂ ಓದಿ: Lok Sabha Speaker Election: ಲೋಕಸಭೆ ಇತಿಹಾಸದಲ್ಲೇ ಮೊದಲ ಬಾರಿ ಸ್ಪೀಕರ್‌ ಹುದ್ದೆಗೆ ನಡೆಯಲಿದೆ ಚುನಾವಣೆ

Continue Reading

ಉದ್ಯೋಗ

Foxconn’s Hiring: ವಿವಾಹಿತ ಮಹಿಳೆಯರಿಗೆ ಫಾಕ್ಸ್‌ಕಾನ್‌ ಕಂಪನಿಯಲ್ಲಿ ಕೆಲಸ ಕೊಡುವುದಿಲ್ಲ! ಭುಗಿಲೆದ್ದ ವಿವಾದ

ಆಪಲ್ ಸಾಧನಗಳ ಪ್ರಮುಖ ತಯಾರಕರಾದ ಫಾಕ್ಸ್‌ಕಾನ್ ನ ಭಾರತದಲ್ಲಿರುವ ಕಂಪನಿಗೆ ಇತ್ತೀಚೆಗೆ ನೇಮಕಾತಿ (Foxconn’s Hiring) ಪ್ರಕ್ರಿಯೆಗಳು ನಡೆದಿದ್ದು, ವಿವಾಹಿತ ಮಹಿಳೆಯರನ್ನು ಸಂದರ್ಶನ ಮತ್ತು ಆಯ್ಕೆ ವಿಚಾರದಲ್ಲಿ ದೂರ ಇಡಲಾಗಿದೆ. ಇದಕ್ಕೆ ಅವರ ಕೌಟುಂಬಿಕ ಕಾರಣಗಳನ್ನು ನೀಡಿರುವುದಾಗಿ ತಿಳಿದುಬಂದಿದೆ. ಇದು ವಿವಾದ ಮತ್ತು ಚರ್ಚೆಗೆ ಕಾರಣವಾಗಿದೆ.

VISTARANEWS.COM


on

By

Foxconn's Hiring
Koo

ಆಪಲ್ (apple) ಸಾಧನಗಳ ಪ್ರಮುಖ ತಯಾರಕರಾದ ಫಾಕ್ಸ್‌ಕಾನ್ (Foxconn’s Hiring) ಭಾರತದಲ್ಲಿನ (india) ತನ್ನ ಪ್ರಮುಖ ಸ್ಮಾರ್ಟ್‌ಫೋನ್ ಸ್ಥಾವರದಲ್ಲಿ (smartphone plant) ವಿವಾಹಿತ ಮಹಿಳೆಯರನ್ನು ಹೊರಗಿಡುತ್ತಿದೆ! ಇದು ಎರಡೂ ಕಂಪನಿಗಳ ನೀತಿ ಸಂಹಿತೆಗಳಿಗೆ ವಿರುದ್ಧವಾಗಿದ್ದು, ವೈವಾಹಿಕ ಸ್ಥಿತಿಯನ್ನು (marital status) ಆಧರಿಸಿ ತಾರತಮ್ಯವನ್ನು ತೋರುತ್ತಿರುವುದು ಸ್ಪಷ್ಟವಾಗಿದೆ.

ಜೂನ್ 25ರಂದು ಮಾಧ್ಯಮವೊಂದರಲ್ಲಿ ಪ್ರಕಟವಾದ ತನಿಖಾ ವರದಿಯು ಫಾಕ್ಸ್‌ಕಾನ್ ವಿವಾಹಿತ ಮಹಿಳೆಯರಿಗೆ ಅವರ ಉದ್ಯೋಗ ಅರ್ಜಿಗಳನ್ನು ತಿರಸ್ಕರಿಸುವ ಮೂಲಕ ತಾರತಮ್ಯವನ್ನು ತೋರಿಸಿದೆ ಎಂದು ಬಹಿರಂಗಪಡಿಸಿತು. ಅವಿವಾಹಿತರಿಗೆ ಹೋಲಿಸಿದರೆ ವಿವಾಹಿತ ಮಹಿಳೆಯರಿಗೆ ಹೆಚ್ಚಿನ ಕುಟುಂಬ ಜವಾಬ್ದಾರಿಗಳು ಕಾರಣ ಎಂಬ ಕಾರಣಕ್ಕಾಗಿ ಅವರಿಗೆ ಕೆಲಸ ನಿರಾಕರಿಸಲಾಗುತ್ತಿದೆ.

ಮದುವೆಯ ನಂತರದ ಸಮಸ್ಯೆಗಳು

ತಮಿಳುನಾಡಿನ ಚೆನ್ನೈ ಸಮೀಪದ ಶ್ರೀಪೆರಂಬದೂರಿನಲ್ಲಿರುವ ಪ್ರಮುಖ ಐಫೋನ್ ಅಸೆಂಬ್ಲಿ ಘಟಕದಲ್ಲಿ ಸ್ಮಾರ್ಟ್‌ಫೋನ್ ತಯಾರಕರು ವಿವಾಹಿತ ಮಹಿಳೆಯರನ್ನು ಉದ್ಯೋಗಾವಕಾಶಗಳಿಂದ ವ್ಯವಸ್ಥಿತವಾಗಿ ಹೊರಗಿಟ್ಟಿದ್ದಾರೆ. ಪ್ರಪಂಚದ ಅತಿ ದೊಡ್ಡ ಕಾಂಟ್ರ್ಯಾಕ್ಟ್ ಎಲೆಕ್ಟ್ರಾನಿಕ್ಸ್ ತಯಾರಕರು ವಿವಾಹಿತ ಮಹಿಳೆಯರಿಗೆ “ಮದುವೆ ನಂತರದ ಹೆಚ್ಚಿನ ಸಮಸ್ಯೆಗಳಿರುತ್ತವೆ” ಎಂದು ಪ್ರತಿಪಾದಿಸುವ ಮೂಲಕ ಇದನ್ನು ಸಮರ್ಥಿಸಿದ್ದಾರೆ.
ಭಾರತದಾದ್ಯಂತ ಸುಮಾರು 12 ಫಾಕ್ಸ್‌ಕಾನ್ ನೇಮಕಾತಿ ಏಜೆನ್ಸಿಗಳ ಹಲವಾರು ಮಾಜಿ ಮತ್ತು ಪ್ರಸ್ತುತ ಉದ್ಯೋಗಿಗಳು ಇದನ್ನು ದೃಢಪಡಿಸಿದ್ದಾರೆ.

ತಾರತಮ್ಯಕ್ಕೆ ಕಾರಣಗಳೇನು?

ಏಜೆಂಟ್‌ಗಳು ಮತ್ತು ಫಾಕ್ಸ್‌ಕಾನ್ ಹೆಚ್ ಆರ್ ಅಧಿಕಾರಿಗಳು ಈ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎನ್ನಲಾಗಿದೆ. ವಿವಾಹಿತ ಮಹಿಳೆಯರಿಗೆ ಗರ್ಭಾವಸ್ಥೆ ಮತ್ತು ಕುಟುಂಬದ ಜವಾಬ್ದಾರಿ ಹೆಚ್ಚಿರುವುದರಿಂದ ಅವರು ಹೆಚ್ಚಿನ ಕಾರ್ಯಕ್ಷಮತೆಯಿಂದ ಕೆಲಸ ಮಾಡುವುದಿಲ್ಲ. ಅದೂ ಅಲ್ಲದೆ ವಿವಾಹಿತ ಹಿಂದೂ ಮಹಿಳೆಯರು ಮೈತುಂಬ ಆಭರಣ ಧರಿಸಿ ಬರುತ್ತಿರುವ ಕಾರಣ ನಮ್ಮ ಉತ್ಪಾದನೆಗೆ ಅಡ್ಡಿಯಾಗುತ್ತದೆ ಎಂಬ ವಿಚಿತ್ರ ಪ್ರತಿಪಾದನೆ ಕೇಳಿ ಬರುತ್ತಿದೆ.

ತೈವಾನ್ ಪ್ರಧಾನ ಕಚೇರಿಯ ತಯಾರಕರು ಕಾರ್ಮಿಕ ಕೊರತೆಯನ್ನು ಎದುರಿಸುತ್ತಿರುವಾಗ ಹೆಚ್ಚಿನ ಉತ್ಪಾದನಾ ಅವಧಿಯಲ್ಲಿ ವಿವಾಹಿತ ಮಹಿಳೆಯರನ್ನು ನೇಮಿಸಿಕೊಳ್ಳದಿರುವ ತನ್ನ ನೀತಿಯನ್ನು ಸಡಿಲಿಸುತ್ತಿದ್ದಾರೆ ಎಂದು ಕಂಪೆನಿಯ ಹೆಚ್ ಆರ್ ಒಬ್ಬರು ಹೇಳಿದ್ದಾರೆ. ಕೆಲವು ಸಂದರ್ಭಗಳಲ್ಲಿ, ನೇಮಕಾತಿ ಏಜೆನ್ಸಿಗಳು ಮಹಿಳಾ ಅಭ್ಯರ್ಥಿಗಳಿಗೆ ತಮ್ಮ ವೈವಾಹಿಕ ಸ್ಥಿತಿಯನ್ನು ಮರೆಮಾಚಲು ಸಹಾಯ ಮಾಡುತ್ತವೆ ಎನ್ನಲಾಗಿದೆ.

ಸರಿಪಡಿಸಲು ಕ್ರಮ

ಆಪಲ್ ಮತ್ತು ಫಾಕ್ಸ್‌ಕಾನ್ 2022ರಲ್ಲಿ ತಮ್ಮ ನೇಮಕಾತಿ ಅಭ್ಯಾಸಗಳಲ್ಲಿನ ನ್ಯೂನತೆಗಳನ್ನು ಒಪ್ಪಿಕೊಂಡಿವೆ ಮತ್ತು ಪರಿಸ್ಥಿತಿಯನ್ನು ಸರಿಪಡಿಸಲು ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಕಂಪನಿ ಹೇಳಿದೆ. ಆದರೂ ಶ್ರೀಪೆರಂಬದೂರ್ ಸ್ಥಾವರದಲ್ಲಿ 2023 ಮತ್ತು 2024ರ ನೇಮಕಾತಿಯಲ್ಲಿ ಈ ಲೋಪ ಸಂಭವಿಸಿವೆ.

ಇದನ್ನೂ ಓದಿ: Frank Duckworth : ಮಳೆ ಪೀಡಿತ ಪಂದ್ಯಗಳಿಗೆ ಅನ್ವಯಿಸುವ ಡಕ್ವರ್ತ್​​ ಲೂಯಿಸ್ ನಿಯಮದ ರೂವಾರಿ ಫ್ರಾಂಕ್​ ಡಕ್ವರ್ತ್​​ ನಿಧನ

Continue Reading

Latest

Members of Parliament: ಸಂಸದರು ಪ್ರಮಾಣ ವಚನ ಸ್ವೀಕರಿಸದಿದ್ದರೆ ಏನಾಗುತ್ತದೆ? ಜೈಲಿನಲ್ಲಿದ್ದವರ ಕತೆಯೇನು?

ಲೋಕ ಸಭಾ ಚುನಾವಣೆ ಬಳಿಕ ಸಂಸದರಾಗಿ (Members of Parliament) ಆಯ್ಕೆಯಾಗುವವರು ಯಾವ ರೀತಿ ಪ್ರಮಾಣ ವಚನ ಸ್ವೀಕರಿಸಬೇಕು ಎಂಬುದನ್ನು ಸಂವಿಧಾನದಲ್ಲಿ ಸ್ಪಷ್ಟವಾಗಿ ನಿರ್ದಿಷ್ಟಪಡಿಸದಿದ್ದರೂ ಸಂಸದೀಯ ಪಾತ್ರವನ್ನು ಪೂರೈಸುವಲ್ಲಿ ಪ್ರಮಾಣ ವಚನ ಸ್ವೀಕಾರವು ಮೊದಲ ಮತ್ತು ಪ್ರಮುಖ ಹೆಜ್ಜೆಯಾಗಿದೆ. ಆದರೂ ಕೆಲವು ಸಂಸದರು ಪ್ರಮಾಣ ವಚನ ಸ್ವೀಕರಿಸಲು ಸಾಧ್ಯವಾಗದೇ ಇದ್ದರೆ ಮುಂದಿನ ನಡೆ ಹೇಗಿರುತ್ತದೆ ಎಂಬಿತ್ಯಾದಿ ಸಂಪೂರ್ಣ ವಿವರ ಇಲ್ಲಿದೆ.

VISTARANEWS.COM


on

By

Members of Parliament
Koo

18ನೇ ಲೋಕಸಭೆಯ (loksabha election) ಮೊದಲ ಅಧಿವೇಶನ ಪ್ರಾರಂಭವಾಗುತ್ತಿದ್ದಂತೆ ಹೊಸದಾಗಿ ಚುನಾಯಿತರಾದ ಸಂಸತ್ ಸದಸ್ಯರು (Members of Parliament) ಸೋಮವಾರದಿಂದ ಪ್ರಮಾಣ ವಚನ (taking oath) ಸ್ವೀಕರಿಸಲು ಆರಂಭಿಸಿದ್ದಾರೆ. ಎರಡು ದಿನಗಳಲ್ಲಿ ಕೆಳಮನೆಯ (lower house) 543 ಸಂಸದರು ಪ್ರಮಾಣ ವಚನ ಸ್ವೀಕರಿಸಿದರು. ಜೂನ್ 26ರಂದು ನೂತನ ಲೋಕಸಭಾ ಸ್ಪೀಕರ್ (Speaker) ಆಯ್ಕೆ ನಡೆಯಲಿದೆ.

ಪ್ರಮಾಣ ವಚನ ಬೋಧಿಸುವವರು ಯಾರು?

ಸಂಸದೀಯ ಪದ್ಧತಿಗಳ ಪ್ರಕಾರ ಪ್ರತಿ ಸಾರ್ವತ್ರಿಕ ಚುನಾವಣೆಯ ಅನಂತರ ಲೋಕಸಭೆಗೆ ಹೊಸದಾಗಿ ಚುನಾಯಿತರಾದ ಸದಸ್ಯರಿಗೆ ಹಂಗಾಮಿ ಸ್ಪೀಕರ್ ಪ್ರಮಾಣ ವಚನ ಸ್ವೀಕರಿಸುವ ಹೊಣೆ ನಿರ್ವಹಿಸುತ್ತಾರೆ. ಲೋಕಸಭೆಯ ನೂತನ ಸ್ಪೀಕರ್ ಆಯ್ಕೆಯನ್ನು ನಡೆಸುವ ಜವಾಬ್ದಾರಿ ಕೂಡ ಈ ಹಂಗಾಮಿ ಸ್ಪೀಕರ್‌ದೇ ಆಗಿರುತ್ತದೆ.

ಸಂವಿಧಾನದಲ್ಲಿ ಸ್ಪಷ್ಟವಾಗಿ ನಿರ್ದಿಷ್ಟಪಡಿಸದಿದ್ದರೂ ಸಂಸದೀಯ ಪಾತ್ರವನ್ನು ಪೂರೈಸುವಲ್ಲಿ ಪ್ರಮಾಣ ವಚನ ಸ್ವೀಕಾರವು ಮೊದಲ ಹೆಜ್ಜೆಯಾಗಿದೆ. ಆದರೂ ಕೆಲವು ಸಂಸದರು ಅನಾರೋಗ್ಯದ ಕಾರಣ ಅಥವಾ ಅವರ ಸ್ಥಳದಿಂದ ತೆರಳಲು ಸಾಧ್ಯವಾಗದ ಕಾರಣ ಪ್ರಮಾಣ ವಚನ ಸ್ವೀಕರಿಸದಿರುವ ಸಾಧ್ಯತೆಯಿದೆ.

ಸಂಸದರು ಪ್ರಮಾಣ ವಚನ ಸ್ವೀಕರಿಸದಿದ್ದರೆ ಏನಾಗುತ್ತದೆ?

1. ಮೊದಲ ದಿನ ಪ್ರಮಾಣ ವಚನ ಅಥವಾ ದೃಢೀಕರಣವನ್ನು ಮಾಡದ ಚುನಾಯಿತ ಸಂಸದರು ಸದನದ ಅಧಿವೇಶನದ ಪ್ರಾರಂಭದಲ್ಲಿ ಅದೇ ಅಧಿವೇಶನದಲ್ಲಿ ಅಥವಾ ಅನಂತರದ ಅಧಿವೇಶನದಲ್ಲಿ ಯಾವುದೇ ನಂತರದ ದಿನದಲ್ಲಿ ಪ್ರಮಾಣ ವಚನ ಸ್ವೀಕರಿಸಬಹುದು.

2. ಸಂಸದರ ಕೋರಿಕೆಯ ಮೇರೆಗೆ ಸಭಾಧ್ಯಕ್ಷರ ಚೇಂಬರ್‌ನಲ್ಲಿ ಮಧ್ಯಂತರ ಅವಧಿಯಲ್ಲಿ ಪ್ರಮಾಣ ವಚನ ಸ್ವೀಕರಿಸಲು ಅವಕಾಶ ನೀಡಲಾಗುತ್ತದೆ.

3. ಅನಾರೋಗ್ಯದಿಂದ ಬಳಲುತ್ತಿರುವವರು, ಸದನಕ್ಕೆ ಬರಲು ಸಾಧ್ಯವಾಗದ ಸಂದರ್ಭದಲ್ಲಿ ಅವರು ಬಯಸಿದಲ್ಲಿ ಪ್ರಮಾಣ ಅಥವಾ ದೃಢೀಕರಣವನ್ನು ಮಾಡಬಹುದು. ಈ ಸಂದರ್ಭದಲ್ಲಿ ಸಂಬಂಧಿತ ಅಧಿಕಾರಿಯು ಸದಸ್ಯರಿಗೆ ಸಂಬಂಧಿತ ಪ್ರಮಾಣ ಅಥವಾ ದೃಢೀಕರಣ ಕಾರ್ಡ್ ಅನ್ನು ನೀಡುತ್ತಾರೆ.

4. ಸಂವಿಧಾನದ ಪ್ರಕಾರ ಚುನಾಯಿತ ಸಂಸದರು 60 ದಿನಗಳವರೆಗೆ ಸಂಸತ್ತಿಗೆ ಹಾಜರಾಗದಿದ್ದರೆ ಅವರ ಸ್ಥಾನವನ್ನು ಖಾಲಿ ಎಂದು ಘೋಷಿಸಬಹುದು. ಇದೇ ಆಧಾರದಲ್ಲಿ ನ್ಯಾಯಾಲಯಗಳು ಜೈಲಿನಲ್ಲಿರುವ ಸಂಸದರಿಗೆ ಪ್ರಮಾಣ ವಚನ ಸ್ವೀಕರಿಸುವುದಕ್ಕಾಗಿ ಸಂಸತ್‌ಗೆ ಬರಲು ಅವಕಾಶ ನೀಡಬಹುದು. ಆದರೆ ಪ್ರಮಾಣ ವಚನ ಸ್ವೀಕರಿಸಿದ ಅನಂತರ ಅವರು ಮತ್ತೆ ಜೈಲಿಗೆ ಮರಳಬೇಕಾಗುತ್ತದೆ.

5. ದೃಷ್ಟಿ ಸಮಸ್ಯೆಯಿಂದ ಸದಸ್ಯರಿಗೆ ಸಹಿ ಮಾಡಲು, ಪ್ರಮಾಣ ಪತ್ರ ಓದಲು ಸಾಧ್ಯವಾಗದೇ ಇದ್ದರೆ ಇನ್ನೊಬ್ಬ ಸದಸ್ಯರು ಇವರಿಗೆ ಓದಿ ಹೇಳಬಹುದಾಗಿದೆ.

6. ನ್ಯಾಯಾಲಯದ ಆದೇಶದ ಪರಿಣಾಮವಾಗಿ ಒಬ್ಬ ವ್ಯಕ್ತಿಯು ಸದಸ್ಯರಾಗುವುದನ್ನು ತಡೆದರೆ ಮತ್ತು ಅವರ ಸ್ಥಾನದಲ್ಲಿ ಇನ್ನೊಬ್ಬರು ಚುನಾಯಿತರೆಂದು ಘೋಷಿಸಲ್ಪಟ್ಟರೆ ಮತ್ತೆ ಹೊಸದಾಗಿ ಪ್ರಮಾಣವಚನ ಅಥವಾ ದೃಢೀಕರಣವನ್ನು ಮಾಡಬೇಕು.

7. ಮೊದಲ ಸುತ್ತಿನಲ್ಲಿ ಪ್ರಮಾಣವಚನಕ್ಕೆ ಹಾಜರಾಗದ ಸದಸ್ಯರ ಹೆಸರನ್ನು ಕೊನೆಯಲ್ಲಿ ಮತ್ತೆ ಕರೆಯಲಾಗುತ್ತದೆ.

ಯಾವ ಪ್ರಮಾಣ ವಚನ ಸ್ವೀಕರಿಸುತ್ತಾರೆ?

ಸಂವಿಧಾನದ ಮೂರನೇ ಶೆಡ್ಯೂಲ್ ಸಂಸತ್ತಿನ ಪ್ರಮಾಣ ವಚನದ ಪಠ್ಯವನ್ನು ಒಳಗೊಂಡಿದೆ. ಅದು ಹೀಗೆ ಹೇಳುತ್ತದೆ: ನಾನು…. ಚುನಾಯಿತನಾದ ಅಥವಾ ನಾಮನಿರ್ದೇಶನಗೊಂಡ ಸದಸ್ಯರ ಸಂಸತ್‌ ಸದಸ್ಯನಾಗಿ ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ. ನಾನು ಕಾನೂನಿನ ಮೂಲಕ ಸ್ಥಾಪಿಸಿದಂತೆ ಭಾರತದ ಸಂವಿಧಾನಕ್ಕೆ ನಿಜವಾದ ನಂಬಿಕೆ ಮತ್ತು ನಿಷ್ಠೆಯನ್ನು ಹೊಂದುತ್ತೇನೆ ಎಂದು ಸ್ಪಷ್ಟವಾಗಿ ದೃಢಪಡಿಸುತ್ತೇನೆ. ನಾನು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ಎತ್ತಿಹಿಡಿಯುತ್ತೇನೆ. ನನ್ನ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತೇನೆ.

ಪ್ರಮಾಣ ವಚನ ಏಕೆ ಮಹತ್ವದ್ದಾಗಿದೆ?

ಲೋಕಸಭೆಯಲ್ಲಿ ಚರ್ಚೆ ಮತ್ತು ಮತ ಚಲಾಯಿಸುವ ಅಧಿಕಾರವನ್ನು ಪಡೆಯಲು ಸಂವಿಧಾನದಲ್ಲಿ (ಆರ್ಟಿಕಲ್ 99) ಸೂಚಿಸಿದಂತೆ ಸಂಸದರು ಪ್ರಮಾಣ ವಚನ ಸ್ವೀಕರಿಸಬೇಕು.

ಕೇವಲ ಚುನಾವಣೆಯಲ್ಲಿ ಗೆದ್ದು ಅವಧಿಯನ್ನು ಪ್ರಾರಂಭಿಸುವುದರಿಂದ ಅವರು ಸದನದ ಕಲಾಪಗಳಲ್ಲಿ ಭಾಗವಹಿಸಲು ಸ್ವಯಂಚಾಲಿತವಾಗಿ ಸಾಧ್ಯವಾಗುವುದಿಲ್ಲ.

ಹೇಗೆ ಪ್ರಮಾಣ ವಚನ ಸ್ವೀಕರಿಸುತ್ತಾರೆ?

ಸಂಸದರು ಮೊದಲು ತಮ್ಮ ಚುನಾವಣಾ ಪ್ರಮಾಣಪತ್ರವನ್ನು ಲೋಕಸಭೆಯ ಸಿಬ್ಬಂದಿಗೆ ಸಲ್ಲಿಸಬೇಕಾಗುತ್ತದೆ. 1957ರಲ್ಲಿ ನಡೆದ ಘಟನೆಯ ಅನಂತರ ಸಂಸತ್ತು ಈ ಸುರಕ್ಷತೆಯನ್ನು ಸೇರಿಸಿತು. ಮಾನಸಿಕವಾಗಿ ಅಸ್ವಸ್ಥ ವ್ಯಕ್ತಿಯೊಬ್ಬರು ಸಂಸದರೆಂದು ಪೋಸ್ ನೀಡಿ ಸದನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು!

ಪ್ರಮಾಣಪತ್ರದ ಜೊತೆಗೆ ಸಂಸದರು ಪ್ರಮಾಣ ವಚನ ಅಥವಾ ದೃಢೀಕರಣವನ್ನು ಮಾಡಲು ಬಯಸಿದ ಭಾಷೆಯನ್ನು ಸಹ ನಮೂದಿಸಬೇಕು.

ಸದಸ್ಯರು ಪ್ರಮಾಣ ವಚನ ಮಾಡುವಾಗ ಹಂಗಾಮಿ ಸ್ಪೀಕರ್ ಜೊತೆ ಹಸ್ತಲಾಘವ ಮಾಡುತ್ತಾರೆ. ಅನಂತರ ಅವರು ಸದನದಲ್ಲಿ ತಮ್ಮ ಆಸನದಲ್ಲಿ ಕುಳಿತುಕೊಳ್ಳಲು ಸದಸ್ಯರಿಗೆ ಸ್ಪೀಕರ್‌ ಅನುಮತಿ ನೀಡುತ್ತಾರೆ. ಸದಸ್ಯರು ದಾಖಲಾತಿ ಪುಸ್ತಕದಲ್ಲಿ ಸಹಿ ಮಾಡುತ್ತಾರೆ.

ಯಾವ ಭಾಷೆಗಳಲ್ಲಿ ಪ್ರಮಾಣ ವಚನ ಸ್ವೀಕರಿಸಬಹುದು?

ಸಂಸದರು ಇಂಗ್ಲಿಷ್ ಅಥವಾ ಅಸ್ಸಾಮಿ, ಬೆಂಗಾಲಿ, ಬೋಡೋ, ಡೋಗ್ರಿ, ಗುಜರಾತಿ, ಹಿಂದಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮೈಥಿಲಿ, ಮಲಯಾಳಂ, ಮಣಿಪುರಿ, ಮರಾಠಿ, ನೇಪಾಳಿ, ಒಡಿಯಾ, ಪಂಜಾಬಿ, ಸಂಸ್ಕೃತ, ಸಂತಾಲಿ, ಸಿಂಧಿ, ತಮಿಳು, ತೆಲುಗು ಮತ್ತು ಉರ್ದು.. ಹೀಗೆ 22 ಭಾಷೆಗಳಲ್ಲಿ ಪ್ರಮಾಣವಚನವನ್ನು ಸ್ವೀಕರಿಸಬಹುದು.

ಅರ್ಧದಷ್ಟು ಸಂಸದರು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಹಿಂದಿನ ಎರಡು ಲೋಕಸಭೆಯಲ್ಲಿ ಸಂಸ್ಕೃತವು ಜನಪ್ರಿಯ ಭಾಷೆಯಾಗಿ ಮಾರ್ಪಟ್ಟಿದ್ದು, ಹಲವು ಸಂಸದರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಇದನ್ನೂ ಓದಿ: Bansuri Swaraj: ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿ ಸುಷ್ಮಾ ಸ್ವರಾಜ್‌ರನ್ನು ನೆನಪಿಸಿದ ಮಗಳು! ವಿಡಿಯೊ ನೋಡಿ

ಯಾವಾಗ ಸದನದ ಸದಸ್ಯರಾಗುತ್ತಾರೆ?

ಒಬ್ಬ ವ್ಯಕ್ತಿಯು ಚುನಾವಣಾ ಅಧಿಕಾರಿಯಿಂದ ಚುನಾಯಿತರೆಂದು ಘೋಷಿಸಲ್ಪಟ್ಟ ದಿನಾಂಕದಿಂದ ಸದನದ ಸದಸ್ಯರಾಗುತ್ತಾರೆ. ಸದನವನ್ನು ರಚಿಸುವ ಚುನಾವಣಾ ಆಯೋಗದ ಅಧಿಸೂಚನೆಯನ್ನು ಪ್ರಕಟಿಸಿದ ದಿನಾಂಕದಿಂದ ಅವರು ಸಂಸದರಾಗಿ ಸಂಬಳವನ್ನು ಸ್ವೀಕರಿಸಲು ಪ್ರಾರಂಭಿಸುತ್ತಾರೆ. ಸಂಸದರು ಸದನದ ಅಧಿವೇಶನಗಳಿಗೆ ಗೈರುಹಾಜರಿಯನ್ನು ಕೇಳಬಹುದಾಗಿದೆ.

Continue Reading
Advertisement
Vinay Gowda acted darshan devil Movie and says Futture cant be predict
ಸ್ಯಾಂಡಲ್ ವುಡ್10 mins ago

Vinay Gowda: ʻಡೆವಿಲ್ʼ ಸಿನಿಮಾದಲ್ಲಿ ನಾನೇ ವಿಲನ್, ಪ್ರಾಜೆಕ್ಟ್‌ ಏನಾಗುತ್ತೋ ಗೊತ್ತಿಲ್ಲ ಎಂದ ʻಬಿಗ್ ಬಾಸ್ʼ ಆನೆ ವಿನಯ್ ಗೌಡ!

Mass Shooting
ವಿದೇಶ28 mins ago

Mass Shooting: ಅಮೆರಿಕದಲ್ಲಿ ಮತ್ತೊಂದು ಸಾಮೂಹಿಕ ಗುಂಡಿನ ದಾಳಿ; ನಾಲ್ವರನ್ನು ಕೊಂದು ಆತ್ಮಹತ್ಯೆಗೆ ಶರಣಾದ ದುಷ್ಕರ್ಮಿ

Inzamam Ul Haq
ಕ್ರೀಡೆ36 mins ago

Inzamam Ul Haq: ಭಾರತ ತಂಡದ ವಿರುದ್ಧ ಬಾಲ್ ಟ್ಯಾಂಪರಿಂಗ್ ಆರೋಪ ಮಾಡಿದ ಪಾಕ್​ ಮಾಜಿ ನಾಯಕ

rain news wall collapse 4 death
ಕ್ರೈಂ37 mins ago

Rain News: ಭಾರಿ ಮಳೆಗೆ ಮನೆ ಗೋಡೆ ಕುಸಿದು ನಾಲ್ವರು ಸಾವು

Sanjith Hegde Nange Allava song Out
ಸ್ಯಾಂಡಲ್ ವುಡ್1 hour ago

Sanjith Hegde: ಸಂಜನಾ ದಾಸ್‌ಗೆ ʻನೀ ನಂಗೆ ಅಲ್ಲವಾʼ ಎಂದ ಸಂಜಿತ್ ಹೆಗಡೆ!

suraj revanna case 1
ಕ್ರೈಂ1 hour ago

Suraj Revanna Case: ಅಮಾವಾಸ್ಯೆ ದಿನ ಸೂರಜ್‌ ಬಳೆ ತೊಡ್ತಾನೆ, ಸೀರೆ ಉಡ್ತಾನೆ! ಬಯಲು ಮಾಡಿದ ಸಂತ್ರಸ್ತ

Lok Sabha Speaker Election
ದೇಶ1 hour ago

Lok Sabha Speaker Election: ಲೋಕಸಭೆ ಸ್ಪೀಕರ್ ಚುನಾವಣೆ ಇಂದು; ಆಡಳಿತ ಪಕ್ಷ-ಪ್ರತಿಪಕ್ಷ ಬಲಾಬಲ ಹೀಗಿದೆ

Albania vs Spain
ಕ್ರೀಡೆ1 hour ago

Albania vs Spain: ಯುರೋ ಕಪ್​ನಲ್ಲಿ ನಾಕೌಟ್‌ ಹಂತಕ್ಕೇರಿದ ಸ್ಪೇನ್‌

Parliament Session 2024
ದೇಶ1 hour ago

Parliament Session 2024: ಇಂದು ಐತಿಹಾಸಿಕ ಲೋಕಸಭಾ ಸ್ಪೀಕರ್‌ ಚುನಾವಣೆ; ಕ್ಷಣ ಕ್ಷಣದ ಮಾಹಿತಿಗಾಗಿ Live ನೋಡಿ

Pavithra Gowda Cried After In Jail darshan case
ಕ್ರೈಂ1 hour ago

Pavithra Gowda: ನನ್ನನ್ನು ನೋಡಲು ಯಾರೂ ಬರೋದಿಲ್ಲ ಎಂದು ಪವಿತ್ರಾ ಕಣ್ಣೀರು; ʻದಚ್ಚುʼ ನಿರಾಳ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ5 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ5 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ6 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌