Pee-Gate Row: ಏರ್​ ಇಂಡಿಯಾಕ್ಕೆ 30 ಲಕ್ಷ ರೂಪಾಯಿ ದಂಡ ವಿಧಿಸಿದ ಡಿಜಿಸಿಎ; ಪ್ಲೈಟ್​ ಕಮಾಂಡರ್​ ಲೈಸೆನ್ಸ್​ 3 ತಿಂಗಳು ರದ್ದು - Vistara News

ದೇಶ

Pee-Gate Row: ಏರ್​ ಇಂಡಿಯಾಕ್ಕೆ 30 ಲಕ್ಷ ರೂಪಾಯಿ ದಂಡ ವಿಧಿಸಿದ ಡಿಜಿಸಿಎ; ಪ್ಲೈಟ್​ ಕಮಾಂಡರ್​ ಲೈಸೆನ್ಸ್​ 3 ತಿಂಗಳು ರದ್ದು

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ DGCA ಕಳೆದ ವಾರ ಏರ್​ ಇಂಡಿಯಾದ ಅಕೌಂಟೆಬಲ್ ಮ್ಯಾನೇಜರ್, ಅಂದು ಇದ್ದ ಪೈಲೆಟ್​​ಗಳು, ಕ್ಯಾಬಿನ್​ ಸಿಬ್ಬಂದಿ ಮತ್ತು ಇನ್​ ಪ್ಲೈಟ್​​ ಸರ್ವೀಸ್​ ಡೈರೆಕ್ಟರ್​​​ಗಳಿಗೆ ಶೋಕಾಸ್​ ನೋಟಿಸ್​ ನೀಡಿತ್ತು.

VISTARANEWS.COM


on

Air India has been fined 30 l
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಏರ್​ ಇಂಡಿಯಾ ವಿಮಾನದಲ್ಲಿ ಕಳೆದ ವರ್ಷ ನವೆಂಬರ್​ 26ರಂದು ಶಂಕರ್​ ಮಿಶ್ರಾ ಎಂಬಾತ ಮಹಿಳೆ ಮೇಲೆ ಮೂತ್ರ ಮಾಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA), ಏರ್​ ಇಂಡಿಯಾ ವಿಮಾನ ಯಾನ ಸಂಸ್ಥೆಗೆ 30 ಲಕ್ಷ ರೂಪಾಯಿ ದಂಡ ವಿಧಿಸಿದೆ. ಯುಎಸ್​ನಿಂದ ದೆಹಲಿಗೆ ಬರುತ್ತಿದ್ದ ವಿಮಾನದಲ್ಲಿ ಈ ಹೊಲಸು ಘಟನೆ ನಡೆದಿತ್ತು. ಕುಡಿದು, ಸಂಪೂರ್ಣ ಅಮಲೇರಿದ ಸ್ಥಿತಿಯಲ್ಲಿ ಇದ್ದ ಶಂಕರ್​ ಮಿಶ್ರಾ ತನ್ನ ಪಕ್ಕದ ಸಾಲಿನಲ್ಲಿ ಕುಳಿತಿದ್ದ 70 ವರ್ಷದ ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜಸಿದ್ದ. ಆದರೆ ಘಟನೆ ನಡೆದ ದಿನವೇ ಅದು ಬೆಳಕಿಗೆ ಬಂದಿರಲಿಲ್ಲ. ಬಳಿಕ ಮಹಿಳೆ, ಏರ್​ ಇಂಡಿಯಾ ಅಧ್ಯಕ್ಷ ಎನ್​.ಚಂದ್ರಶೇಖರನ್​ ಅವರಿಗೆ ಪತ್ರ ಬರೆದು ವಿಷಯ ತಿಳಿಸಿದಾಗಲೇ ವಿಷಯ ಬಹಿರಂಗಗೊಂಡಿತ್ತು.

ತನ್ನ ಮೇಲೆ ಶಂಕರ್​ ಮಿಶ್ರಾ ಮೂತ್ರ ಮಾಡಿದಾಗಿನ ಸಂದರ್ಭವನ್ನು ಏರ್​ ಇಂಡಿಯಾ ಸಿಬ್ಬಂದಿ ಸರಿಯಾಗಿ ನಿಭಾಯಿಸಲಿಲ್ಲ. ಇದೊಂದು ಅತ್ಯಂತ ಸೂಕ್ಷ್ಮವಾದ ಸನ್ನಿವೇಶ. ಬೇರೆ ಸೀಟ್​ ಕೇಳಿದರೂ ಕೊಡಲು ಹಿಂದೇಟು ಹಾಕಿದರು. ಆತನ ಮುಖ ನೋಡಲು ಇಷ್ಟವಿಲ್ಲ ಎಂದರೂ ಬಲವಂತವಾಗಿ ನನ್ನೆದುರು ಕರೆದುಕೊಂಡು ಬಂದು ನಿಲ್ಲಿಸಿ ಕ್ಷಮೆ ಕೇಳಿಸಿದರು ಎಂಬಿತ್ಯಾದಿ ಆರೋಪಗಳನ್ನು ಮಹಿಳೆ ಮಾಡಿದ್ದರು. ‘ಹೌದು ನಮ್ಮಿಂದ ತಪ್ಪಾಗಿದೆ. ವಿಮಾನದಲ್ಲಿ ಶಂಕರ್​ ಮಿಶ್ರಾ ತನ್ನ ಸಹಪ್ರಯಾಣಿಕಳ ಮೇಲೆ ಮೂತ್ರ ಮಾಡಿದಾಗಿನ ಸಂದರ್ಭವನ್ನು ಏರ್​ ಇಂಡಿಯಾ ಸಿಬ್ಬಂದಿ ಇನ್ನಷ್ಟು ಸಮರ್ಪಕವಾಗಿ ನಿಭಾಯಿಸಬಹುದಿತ್ತು ಎಂದು ಎನ್​. ಚಂದ್ರಶೇಖರನ್​ ಕೂಡ ಒಪ್ಪಿಕೊಂಡಿದ್ದರು.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ DGCA ಕಳೆದ ವಾರ ಏರ್​ ಇಂಡಿಯಾದ ಅಕೌಂಟೆಬಲ್ ಮ್ಯಾನೇಜರ್, ಅಂದು ಇದ್ದ ಪೈಲೆಟ್​​ಗಳು, ಕ್ಯಾಬಿನ್​ ಸಿಬ್ಬಂದಿ ಮತ್ತು ಇನ್​ ಪ್ಲೈಟ್​​ ಸರ್ವೀಸ್​ ಡೈರೆಕ್ಟರ್​​​ಗಳಿಗೆ ಶೋಕಾಸ್​ ನೋಟಿಸ್​ ನೀಡಿತ್ತು. ಶಂಕರ್ ಮಿಶ್ರಾ ಅಷ್ಟು ದೊಡ್ಡ ಅಪರಾಧ ಮಾಡಿದ್ದರೂ, ಆತನ ವಿರುದ್ಧ ತತ್​​​ಕ್ಷಣದ ಕ್ರಮ ಯಾಕೆ ತೆಗೆದುಕೊಂಡಿಲ್ಲ’ ಎಂದು ಪ್ರಶ್ನಿಸಿತ್ತು. ಈಗ ಏರ್​ ಇಂಡಿಯಾಕ್ಕೆ ಭರ್ಜರಿ ದಂಡವನ್ನು ವಿಧಿಸುವ ಜತೆ, ಪ್ಲೈಟ್​ ಕಮಾಂಡರ್ (ಕ್ಯಾಪ್ಟನ್​ ಪೈಲೆಟ್​)​​ ಲೈಸೆನ್ಸ್​​ನ್ನು ಮೂರು ತಿಂಗಳ ಅವಧಿಗೆ ರದ್ದುಗೊಳಿಸಿದೆ. ಅಷ್ಟೇ ಅಲ್ಲ, ಏರ್​ ಇಂಡಿಯಾ ಪ್ಲೈಟ್​ ಇನ್​ ಸರ್ವೀಸ್​ ಡೈರೆಕ್ಟರ್​​ಗೂ 3 ಲಕ್ಷ ರೂ. ದಂಡ ವಿಧಿಸಿದೆ. ಸದ್ಯ ಶಂಕರ್ ಮಿಶ್ರಾ ನ್ಯಾಯಾಂಗ ಬಂಧನದಲ್ಲಿಯೇ ಇದ್ದಾನೆ.

ಇದನ್ನೂ ಓದಿ: Shankar Mishra Case | ಮಹಿಳೆ ಮೇಲೆ ಮೂತ್ರ ವಿಸರ್ಜನೆ, ಶಂಕರ್‌ ಮಿಶ್ರಾ 4 ತಿಂಗಳು ವಿಮಾನ ಸಂಚಾರ ನಿಷೇಧ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

ಮಾದಕ ವಸ್ತು ನೀಡಿ ಕುಟುಂಬಸ್ಥರೊಂದಿಗೆ ಮಲಗಲು ಹಿಂಸೆ ನೀಡುವ ಪತಿ; ಮಹಿಳೆಯೊಬ್ಬರ ಕಣ್ಣೀರಿನ ಕಥೆ ಇದು

Crime News: ಪತಿಯೇ ತನ್ನ ಕುಟುಂಬಸ್ಥರೊಂದಿಗೆ ದೈಹಿಕ ಸಂಬಂಧ ಹೊಂದಲು ಪತ್ನಿಗೆ ನಿರಂತರ ಹಿಂದೆ ನೀಡುತ್ತಿದ್ದ ಆಘಾತಕಾರಿ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಚುರು ಚಿಲ್ಲೆಯ ಮಹಿಳೆಯೊಬ್ಬರು ಈ ಬಗ್ಗೆ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಮಾವ ಮತ್ತು ಪತಿಯ ಸಹೋದರ ಅತ್ಯಾಚಾರ ಎಸಗಿದ್ದಾರೆ ಎಂದು ದೂರು ನೀಡಿದ್ದಾರೆ. 15-20 ವರ್ಷಗಳಿಂದ ಪತಿ ನಿರಂತರವಾಗಿ ತನಗೆ ಮಾದಕ ವಸ್ತುಗಳನ್ನು ಬಲವಂತವಾಗಿ ತಿನ್ನಿಸುತ್ತಿದ್ದು, ಬಳಿಕ ಇತರರೊಂದಿಗೆ ದೈಹಿಕ ಸಂಬಂಧ ಬೆಳೆಸುವಂತೆ ಪೀಡಿಸುತ್ತಿದ್ದಾನೆ. ಒಂದುವೇಳೆ ಇದನ್ನು ವಿರೋಧಿಸಿದರೆ ಕ್ರೂರವಾಗಿ ಹಲ್ಲೆ ನಡೆಸುತ್ತಾನೆ ಎಂದು ಸಂತ್ರಸ್ತೆ ಹೇಳಿದ್ದಾರೆ.

VISTARANEWS.COM


on

Crime News
Koo

ಜೈಪುರ: ಪತಿಯೇ ತನ್ನ ಕುಟುಂಬಸ್ಥರೊಂದಿಗೆ ದೈಹಿಕ ಸಂಬಂಧ ಹೊಂದಲು ಪತ್ನಿಗೆ ನಿರಂತರ ಹಿಂದೆ ನೀಡುತ್ತಿದ್ದ ಆಘಾತಕಾರಿ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಚುರು ಚಿಲ್ಲೆಯ ಮಹಿಳೆಯೊಬ್ಬರು ಈ ಬಗ್ಗೆ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಮಾವ ಮತ್ತು ಪತಿಯ ಸಹೋದರ ಅತ್ಯಾಚಾರ ಎಸಗಿದ್ದಾರೆ ಎಂದು ದೂರು ನೀಡಿದ್ದು, ಪೊಲೀಸರು ಎಂಟು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ (Crime News).

ಸಾಂದ್ವ ಪೊಲೀಸ್‌ ಠಾಣೆಯ ವ್ಯಾಪ್ತಿಗೆ ಸೇರಿದ ಗ್ರಾಮದ ಈ ಮಹಿಳೆ ತನ್ನ ದೂರಿನಲ್ಲಿ, 15-20 ವರ್ಷಗಳಿಂದ ಪತಿ ನಿರಂತರವಾಗಿ ತನಗೆ ಮಾದಕ ವಸ್ತುಗಳನ್ನು ಬಲವಂತವಾಗಿ ತಿನ್ನಿಸುತ್ತಿದ್ದು, ಬಳಿಕ ಇತರರೊಂದಿಗೆ ದೈಹಿಕ ಸಂಬಂಧ ಬೆಳೆಸುವಂತೆ ಪೀಡಿಸುತ್ತಿದ್ದಾನೆ. ಒಂದುವೇಳೆ ಇದನ್ನು ವಿರೋಧಿಸಿದರೆ ಕ್ರೂರವಾಗಿ ಹಲ್ಲೆ ನಡೆಸುತ್ತಾನೆ ಎಂದು ಹೇಳಿದ್ದಾರೆ.

ಪತಿ ಆಕೆ ಕುಡಿಯುವ ಚಹಾದಲ್ಲಿ ಮಾದಕ ವಸ್ತುಗಳನ್ನು ಬೆರೆಸುತ್ತಿದ್ದ. ಬಳಿಕ ಆಕೆಯ ಮೇಲೆ ಆತನ ಕುಟುಂಬಸ್ಥರು ಅತ್ಯಾಚಾರ ನಡೆಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಒಮ್ಮೆ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಮಹಿಳೆ ಗಂಡನ ಕ್ರೂರ ಕೃತ್ಯವನ್ನು ವಿರೋಧಿಸಿದ್ದರು. ಆ ವೇಳೆ ಆತ ಹರಿತವಾದ ಕತ್ತಿ ಹಿಡಿದು ಆಕೆಯ ಕೊಲೆ ಮಾಡಲು ಹೊರಟಿದ್ದ. ಆ ವೇಳೆ ಮಹಿಳೆ ಓಡಿ ತನ್ನ ಜೀವ ಉಳಿಸಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ. ಈ ಮಹಿಳೆಗೆ ಮೂವರು ಪುತ್ರರು ಮತ್ತು ಓರ್ವ ಪುತ್ರಿ ಇದ್ದಾಳೆ.

ಸಹೋದರನನ್ನು ಕೊಲ್ಲುವ ಬೆದರಿಕೆ

ಸದ್ಯ ಮಕ್ಕಳು ಮಹಿಳೆಯ ಸಹೋದರನೊಂದಿಗೆ ವಾಸಿಸುತ್ತಿದ್ದಾರೆ. ʼʼಆರೋಪಿಗಳು ನನ್ನ ಮಕ್ಕಳನ್ನು ನೋಡಿಕೊಳ್ಳುತ್ತಿರುವ ಸಹೋದರನಿಗೂ ಜೀವ ಬೆದರಿಕೆ ಹಾಕಿದ್ದಾರೆ. ಸಹೋದರನನ್ನು ಕೊಲ್ಲುವುದಾಗಿ ಹೇಳಿದ್ದಾರೆʼʼ ಎಂದು ಮುಹಿಳೆ ತನ್ನ ದೂರಿನಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ಪೋಲೀಸರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: Police Officer: ಮರಳು ಮಾಫಿಯಾ ತಡೆಯಲು ಹೋದ ಎಎಸ್‌ಐ ಮೇಲೆ ಟ್ರ್ಯಾಕ್ಟರ್‌ ಹರಿಸಿ ಕೊಲೆ!

ಸಿಗರೇಟ್‌ನಿಂದ ಗಂಡನ ಗುಪ್ತಾಂಗ ಸುಟ್ಟ ಹೆಂಡತಿ!

ಇನ್ನೊಂದು ಆಘಾತಕಾರಿ ಘಟನೆಯಲ್ಲಿ ಉತ್ತರ ಪ್ರದೇಶದ ಮಹಿಳೆಯೊಬ್ಬಳು ತಾನೇ ಮದ್ಯಪಾನ ಮಾಡಿ, ಪತಿಯ ಗುಪ್ತಾಂಗವನ್ನೇ ಸುಟ್ಟು, ಅದನ್ನು ಕತ್ತರಿಸಲು ಯತ್ನಿಸಿದ್ದಾಳೆ. ಅಮ್ರೋಹ ಜಿಲ್ಲೆಯ ಚಾಕ್‌ ಮೆಹೂದ್‌ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೆಹರ್‌ ಜಹಾನ್‌ ಎಂಬ 30 ವರ್ಷದ ಮಹಿಳೆಯು ಪತಿ ಮನ್ನಾನ್‌ ಜೈದಿಯ ಗುಪ್ತಾಂಗ ಸುಟ್ಟು, ಕತ್ತರಿಸಲು ಯತ್ನಿಸಿದ್ದಾಳೆ. ದಿನವಿಡೀ ದುಡಿದು ಮನೆಗೆ ಬಂದ ಗಂಡನಿಗೆ ಮಹಿಳೆಯು ಹಾಲಿನಲ್ಲಿ ಮತ್ತು ಬರುವ ಅಂಶವನ್ನು ಸೇರಿಸಿ, ಆತ ನಶೆಗೆ ಜಾರುತ್ತಲೇ ಕೈ ಕಾಲು ಕಟ್ಟಿಹಾಕಿದ್ದಾಳೆ. ಬಳಿಕ ಆತನ ಗುಪ್ತಾಂಗವನ್ನು ಸಿಗರೇಟಿನಿಂದ ಸುಟ್ಟಿದ್ದಾಳೆ. ಈ ವೇಳೆ ಮನ್ನಾನ್‌ ಜೈದಿಗೆ ಎಚ್ಚರವಾಗಿದೆ. ಇನ್ನೇನು ಗುಪ್ತಾಂಗ ಕತ್ತರಿಸಬೇಕು ಎನ್ನುವಷ್ಟರಲ್ಲೇ ಆತ ಕೂಗಾಡಿದ್ದಾನೆ. ಬಳಿಕ ಪತಿ ನೀಡಿದ ದೂರಿನ ಮೇರೆಗೆ ಪೊಲೀಸರು ಮೆಹರ್‌ ಜಹಾನ್‌ನನ್ನು ಬಂಧಿಸಿದ್ದಾರೆ.

ಮೆಹರ್‌ ಜಹಾನ್‌ಗೆ ಕುಡಿತದ ಚಟ ಇರುವ, ಆಗಾಗ ಸಿಗರೇಟು ಸೇದುವ ಚಟ ಇರುವುದು ಮನ್ನಾನ್‌ ಜೈದಿಗೆ ಗೊತ್ತಾಗಿದೆ. ಪತ್ನಿಯ ಚಟಗಳ ಕುರಿತು ಅರಿತುಕೊಂಡ ಮನ್ನಾನ್‌ ಜೈದಿಯು ನಾಲ್ಕು ಮಾತು ಬೈದಿದ್ದಾನೆ. ನಿನ್ನ ತಂದೆ-ತಾಯಿಗೆ ಹೇಳುತ್ತೇನೆ ಎಂದಿದ್ದಾನೆ. ಇದರಿಂದಾಗಿ ಕುಪಿತಗೊಂಡ ಮೆಹರ್‌ ಜಹಾನ್‌, ಗಂಡನನ್ನು ಕಟ್ಟಿ ಹಾಕಿ ಕೊಲೆ ಮಾಡಲು ಯತ್ನಿಸಿದ್ದಾಳೆ ಎನ್ನಲಾಗಿದೆ.

Continue Reading

ದೇಶ

Lok Sabha Election 2024: ನಟ ಶೇಖರ್‌ ಸುಮನ್‌, ಕಾಂಗ್ರೆಸ್‌ ನಾಯಕಿ ರಾಧಿಕಾ ಖೇರಾ ಬಿಜೆಪಿ ಸೇರ್ಪಡೆ

Lok Sabha Election 2024:ನಟ ಶೇಖರ್‌ ಸುಮನ್‌ ಮತ್ತು ಮಾಜಿ ಕಾಂಗ್ರೆಸ್‌ ನಾಯಕಿ ರಾಧಿಕಾ ಖೇರಾ ಇಂದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ಶೇಖರ್‌ ಸುಮನ್‌ ಮತ್ತು ರಾಧಿಕಾರನ್ನು ಬಿಜೆಪಿ ಪ್ರಧಾನ ಕಾರ್ಯಕದರ್ಶಿ ವಿನೋದ್‌ ತಾವ್ಡೆ ಸ್ವಾಗತಿಸಿದರು.

VISTARANEWS.COM


on

Lok Sabha election 2024
Koo

ನವದೆಹಲಿ: ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಲೋಕಸಭಾ ಚುನಾವಣೆ(Lok Sabha Election 2024)ಯ ಮೂರನೇ ಹಂತದ ಮತದಾನ ಬಿರುಸಿನಿಂದ ಸಾಗಿದೆ. ಇದರ ನಡುವೆಯೇ ನಟ ಶೇಖರ್‌ ಸುಮನ್‌(Shekhar Suman) ಮತ್ತು ಮಾಜಿ ಕಾಂಗ್ರೆಸ್‌ ನಾಯಕಿ ರಾಧಿಕಾ ಖೇರಾ(Radhika Khera) ಇಂದು ಬಿಜೆಪಿ(BJP). ಸೇರ್ಪಡೆಗೊಂಡಿದ್ದಾರೆ

ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ಶೇಖರ್‌ ಸುಮನ್‌ ಮತ್ತು ರಾಧಿಕಾರನ್ನು ಬಿಜೆಪಿ ಪ್ರಧಾನ ಕಾರ್ಯಕದರ್ಶಿ ವಿನೋದ್‌ ತಾವ್ಡೆ ಸ್ವಾಗತಿಸಿದರು. ಬಿಜೆಪಿ ಸೇರ್ಪಡೆಯಾದ ಬಳಿಕ ಮಾತನಾಡಿದ ರಾಧಿಕಾ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು. ಕೌಸಲ್ಯಾ ಮಾತೆಯ ಜನ್ಮಭೂಮಿ ಛತ್ತೀಸ್‌ಗಡದಲ್ಲಿ ನಾನೊಬ್ಬ ರಾಮ ಭಕ್ತೆ ಎಂಬ ಕಾರಣಕ್ಕಾಗಿ ನನ್ನ ಮೇಲೆ ಪಕ್ಷದ ಕಾರ್ಯಕರ್ತರೇ ಹಲ್ಲೆ ನಡೆಸಿದ್ದರು.ಅವತ್ತು ನನ್ನ ಸಹಾಯಕ್ಕೆ ಬಿಜೆಪಿ ಮತ್ತು ಮೋದಿ ಸರ್ಕಾರ ಬರದೇ ಇದ್ದಿದ್ದರೆ ನಾನು ಇಲ್ಲಿ ಇರಲು ಸಾಧ್ಯವೇ ಇರಲಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಮಹಾತ್ಮ ಗಾಂಧಿಯವರ ಕನಸಿನಂತೆ ಈಗಿಲ್ಲ. ಅದು ರಾಮ ವಿರೋಧಿ, ಹಿಂದೂ ವಿರೋಧಿ ಪಕ್ಷವಾಗಿ ಬೆಳೆದು ನಿಂತಿದೆ. ರಾಹುಲ್‌ ಗಾಂಧಿಯವರ ನ್ಯಾಯಯಾತ್ರೆಯ ಸಂದರ್ಭದಲ್ಲಿ ಛತ್ತೀಸ್‌ಗಡ ಕಾಂಗ್ರೆಸ್‌ ಮುಖಂಡ ಸುಶಿಲ್‌ ಆನಂದ್‌ ಶುಕ್ಲಾ ಮದ್ಯ ಸೇವಿಸುವಂತೆ ನನ್ನನ್ನು ಒತ್ತಾಯಿಸಿದ್ದರು. ಮದ್ಯದ ಅಮಲಿನಲ್ಲಿ ಅವರು ಮತ್ತು ಅವರ 5-6 ಜನ ಕಾರ್ಯಕರ್ತರು ನನ್ನ ಕೋಣೆಯ ಬಾಗಿಲು ಬಡಿಯುತಿದ್ದರು. ನಾನು ಈ ಬಗ್ಗೆ ಸಚಿನ್‌ ಪೈಲಟ್‌ ಮತ್ತು ಜೈರಾಮ್‌ ರಮೇಶ್‌ ಅವರಿಗೆ ದೂರು ನೀಡಿದ್ದೆ ಆದರೆ ಯಾವ ಪ್ರಯೋಜನವೂ ಆಗಿರಲಿಲ್ಲ ಎಂದು ದೂರಿದ್ದಾರೆ.

ಈ ವೇಳೆ ಶೇಖರ್‌ ಸುಮನ್‌ ಮಾತನಾಡಿದ್ದು, ನಿನ್ನೆಯವರೆಗೆ ನಾನು ಇಲ್ಲಿ ಬಂದು ಕೂರುತ್ತೇನೆ ಎಂದು ಭಾವಿಸಿಯೇ ಇರಲಿಲ್ಲ. ಜೀವನದಲ್ಲಿ ನಡೆದ ಅನೇಕ ಘಟನೆಗಳಿಂದಾಗಿ ನಾನು ಇಂದು ಇಲ್ಲಿ ಬಂದಿದ್ದೇನೆ. ಬಹಳ ಧನಾತ್ಮಕ ಚಿಂತನೆಯೊಂದಿಗೆ ನಾನು ಇಲ್ಲಿ ಬಂದಿದ್ದೇನೆ. ಇಲ್ಲಿ ಬರಲು ಪ್ರೇರೇಪಿಸಿದ ದೇವರಿಗೆ ನಾನು ಆಭಾರಿ ಎಂದು ಹೇಳಿದ್ದಾರೆ.

ಇದನ್ನೂ ಓದಿ:Rahul Gandhi: ಮೇಲ್ವರ್ಗದವರಿಂದಾಗಿ ಪರೀಕ್ಷೆಗಳಲ್ಲಿ ದಲಿತರು ಫೇಲ್‌; ರಾಹುಲ್‌ ಗಾಂಧಿ ಹೊಸ ವಿವಾದ

ತಮ್ಮ ಜೊತೆ ಪಕ್ಷದ ನಾಯಕರು ಅನುಚಿತವಾಗಿ ನಡೆದುಕೊಳ್ಳುತ್ತಿದ್ದಾರೆ ಮತ್ತು ರಾಮಭಕ್ತೆ ಎಂಬ ಕಾರಣಕ್ಕಾಗಿ ರೂಂನಲ್ಲಿ ಕೂಡಿ ಹಾಕಿದ್ದಾರೆ ಎಂದು ರಾಧಿಕಾ ಇತ್ತೀಚೆಗೆ ದೂರಿದ್ದರು. ಎಐಸಿಸಿಯ ವಕ್ತಾರೆಯೂ ಆಗಿದ್ದ ಆಕೆ ಇತ್ತೀಚೆಗೆ ಪಕ್ಷ ತೊರೆದಿದ್ದರು.

Continue Reading

ದೇಶ

Rahul Gandhi: ಮೇಲ್ವರ್ಗದವರಿಂದಾಗಿ ಪರೀಕ್ಷೆಗಳಲ್ಲಿ ದಲಿತರು ಫೇಲ್‌; ರಾಹುಲ್‌ ಗಾಂಧಿ ಹೊಸ ವಿವಾದ

Rahul Gandhi: ರಾಹುಲ್‌ ಗಾಂಧಿಯವರು ಕೆಲವು ಜನರ ಜೊತೆ ಕುಳಿತು ಚರ್ಚೆ ನಡೆಸುತ್ತಿರುವುದನ್ನು ಕಾಣಬಹುದಾಗಿದೆ. ಈ ವೇಳೆ ಅವರು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ದಲಿತರಿಗೆ ಅನ್ಯಾಯ ಆಗುತ್ತಿದೆ ಎಂಬ ವಿಚಾರವನ್ನು ಪ್ರಸ್ತಾಪಿಸಿದರು. ನಮ್ಮ ದೇಶದಲ್ಲಿ ಮೇಲ್ವರ್ಗದ ಜನ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ತಯಾರಿಸುವುದರಿಂದ ದಲಿತರು ಅನುತ್ತೀರ್ಣರಾಗುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

VISTARANEWS.COM


on

Rahul Gandhi
Koo

ನವದೆಹಲಿ: ಮುಸ್ಲಿಮರಿಗೆ ಸಂಪತ್ತಿನ ಹಂಚಿಕೆ, ಪ್ರಧಾನಿ ನರೇಂದ್ರ ಮೋದಿ(Narendra Modi) ದ್ವಾರಕಾ ಪೂಜೆ ಸೇರಿದಂತೆ ದಿನಕ್ಕೊಂದು ಹೇಳಿಕೆ ಮೂಲಕ ವಿವಾದಕ್ಕೀಡಾಗುತ್ತಿರುವ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ(Rahul Gandhi) ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ. ಮೇಲ್ವರ್ಗದವರು ಪರೀಕ್ಷೆ ನಡೆಸುವುದರಿಂದಾಗಿಯೇ ದಲಿತರು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುತ್ತಿದ್ದಾರೆ ಎಂದು ಹೊಸ ವಿವಾದ ಕಿಡಿ ಹಚ್ಚಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗುತ್ತಿದ್ದು, ಬಿಜೆಪಿ ನಾಯಕರಿಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ.

ವಿಡಿಯೋದಲ್ಲಿ ಏನಿದೆ?

ವೈರಲ್‌ ಆಗಿರುವ ವಿಡಿಯೋದಲ್ಲಿ ರಾಹುಲ್‌ ಗಾಂಧಿಯವರು ಕೆಲವು ಜನರ ಜೊತೆ ಕುಳಿತು ಚರ್ಚೆ ನಡೆಸುತ್ತಿರುವುದನ್ನು ಕಾಣಬಹುದಾಗಿದೆ. ಈ ವೇಳೆ ಅವರು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ದಲಿತರಿಗೆ ಅನ್ಯಾಯ ಆಗುತ್ತಿದೆ ಎಂಬ ವಿಚಾರವನ್ನು ಪ್ರಸ್ತಾಪಿಸಿದರು. ಇಂತಹ ಜನಾಂಗೀಯ ತಾರತಮ್ಯ ಅಮೆರಿಕದಲ್ಲೂ ನಡೆದಿತ್ತು. ಪರೀಕ್ಷೆಗಳಲ್ಲಿ ಪಾರದರ್ಶಕತೆ ಇರಬೇಕೆಂದು ಅಂದೇ ಮಹಾತ್ಮ ಗಾಂಧಿ ಹೇಳಿದ್ದರು. ನಮ್ಮ ದೇಶದಲ್ಲಿ ಮೇಲ್ವರ್ಗದ ಜನ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ತಯಾರಿಸುವುದರಿಂದ ದಲಿತರು ಅನುತ್ತೀರ್ಣರಾಗುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಅಮೆರಿಕದಲ್ಲಿ SAT ಪರೀಕ್ಷೆಯಯ ಬಗ್ಗೆ ಪ್ರಸ್ತಾಪಿಸಿದ ಅವರು, ಈ ಪರೀಕ್ಷೆಗೆ ಸವರ್ಣೀಯರು, ಕಪ್ಪು ಜನಾಂಗದವರು ಮತ್ತು ಸ್ಪಾನಿಶ್‌ ಮಾತನಾಡುವವರು ಹಾಜರಾಗುತ್ತಾರೆ. ಈ ಪರೀಕ್ಷೆಯಲ್ಲಿ ಸವರ್ಣೀಯರು ಮಾತ್ರ ಉತ್ತಮ ಅಂಕ ಪಡೆಯುತ್ತಿದ್ದರು. ಆಫ್ರಿಕನ್‌ ಅಭ್ಯರ್ಥಿಗಳನ್ನು ಉದ್ದೇಶಪೂರ್ವಕವಾಗಿ ಅನುತ್ತೀರ್ಣಗೊಳಿಸಲಾಗುತ್ತಿತ್ತು. ಆ ಪರೀಕ್ಷೆಯಲ್ಲಿ ಬಿಳಿಯರನ್ನು ಹೊರತುಪಡಿಸಿ ಇತರರು ಯಾರೂ ಉತ್ತೀರ್ಣರಾಗುತ್ತಲೇ ಇರಲಿಲ್ಲ. ಇದು ಅನೇಕ ವರ್ಷಗಳವರೆಗೆ ನಡೆಯುತ್ತಿತ್ತು. ಬಳಿಕ ಒಂದು ಆಫ್ರಿಕನ್‌ ಜನರಿಗೆ ಪ್ರಶ್ನೆ ಪತ್ರಿಕೆ ತಯಾರಿಸುವ ಅವಕಾಶ ಕೊಡಲಾಯಿತು. ಆಗ ಬಿಳಿಯರೆಲ್ಲರೂ ಫೇಲ್‌ ಆಗಿದ್ದರು. ಅಂದರೆ ಮೆರಿಟ್‌ ಅನ್ನು ನಿರ್ಧರಿಸುವವರು ಯಾರು ಎಂಬ ಪ್ರಶ್ನೆ ಮೂಡುತ್ತದೆ. ಯಾರು ಪ್ರಶ್ನೆ ಪತ್ರಿಕೆ ತಯಾರಿಸುತ್ತಾರೋ, ಯಾರು ಪರೀಕ್ಷೆ ನಡೆಸುತ್ತಾರೋ ಅವರೇ ಮೆರಿಟ್‌ ನಿರ್ಧರಿಸುತ್ತಿದ್ದಾರೆ. ವ್ಯವಸ್ಥೆಯನ್ನು ಕಂಟ್ರೋಲ್‌ ಮಾಡುವವರೇ ಮೆರಿಟ್‌ ಅನ್ನು ನಿರ್ಧರಿಸುತ್ತಿದ್ದಾರೆ. ಐಐಟಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ದಲಿತರು ಫೇಲ್‌ ಆಗುತ್ತಿದ್ದಾರೆ ಅಂತಾದರೆ ದಲಿತರಿಗೆ ಪ್ರಶ್ನೆ ಪತ್ರಿಕೆ ತಯಾರಿಸಲು ಅವಕಾಶ ಮಾಡಿಕೊಡಿ ಎಂದು ಹೇಳಿದ್ದರು.

ಇದನ್ನೂ ಓದಿ:Narendra Modi: “ನಾನು ಇಸ್ಲಾಂ ವಿರೋಧಿ ಅಲ್ಲ, ಆದರೆ ಮುಸ್ಲಿಮರು…”; ಕಾಂಗ್ರೆಸ್‌ ಆರೋಪದ ಬಗ್ಗೆ ಮೋದಿ ಹೇಳಿದ್ದೇನು?

ರಾಹುಲ್‌ ಗಾಂಧಿಯವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಬಿಜೆಪಿ ನಾಯಕರು ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜಕೀಯ ಲಾಭಕ್ಕಾಗಿ ರಾಹುಲ್‌ ಗಾಂಧಿ ಎಲ್ಲಾ ವಿಚಾರಗಳಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

Continue Reading

ಸಿನಿಮಾ

Salman Khan: ಸಲ್ಮಾನ್‌ ಖಾನ್‌ ಮನೆ ಎದುರು ಫೈರಿಂಗ್‌ ಕೇಸ್‌; ಐದನೇ ಆರೋಪಿಯ ಬಂಧನ

Salman Khan: ಇತ್ತೀಚೆಗೆ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ನಿವಾಸದ ಎದುರು ಗುಂಡಿನ ದಾಳಿ ನಡೆಸಿದ್ದ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ಸಂಭವಿಸಿದ್ದು, ಕ್ರೈಂ ಬ್ರ್ಯಾಂಚ್‌ ಐದನೇ ಆರೋಪಿಯನ್ನು ಬಂಧಿಸಿದ್ದಾರೆ. ʼʼರಾಜಸ್ತಾನದ ಮೊಹಮ್ಮದ್‌ ಚೌಧರಿಯನ್ನು ಬಂಧಿಸಲಾಗಿದ್ದು, ಈತ ಇಬ್ಬರು ಶೂಟರ್‌ಗಳಾದ ಸಾಗರ್‌ ಪಾಲ್‌ ಮತ್ತು ವಿಕ್ಕಿ ಗುಪ್ತಾ ಅವರಿಗೆ ಹಣ ನೀಡಿದ್ದ ಮಾತ್ರವಲ್ಲ ಅವರು ಸ್ಥಳದಿಂದ ಪರಾರಿಯಾಗಲು ನರೆವಾಗಿದ್ದʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೊಹಮ್ಮದ್‌ ಚೌಧರಿಯನ್ನು ಇಂದು (ಮಂಗಳವಾರ) ಮುಂಬೈಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ವಿಚಾರಣೆಗಾಗಿ ಆತನನ್ನು ವಶಕ್ಕೆ ನೀಡುವಂತೆ ಮನವಿ ಸಲ್ಲಿಸಲಾಗುವುದು ಎಂದು ಮುಂಬೈ ಕ್ರೈಂ ಬ್ರ್ಯಾಂಚ್‌ ತಿಳಿಸಿದೆ.

VISTARANEWS.COM


on

Salman Khan
Koo

ಮುಂಬೈ: ಇತ್ತೀಚೆಗೆ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ (Salman Khan) ನಿವಾಸದ ಎದುರು ಗುಂಡಿನ ದಾಳಿ ನಡೆಸಿದ್ದ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ಸಂಭವಿಸಿದ್ದು, ಕ್ರೈಂ ಬ್ರ್ಯಾಂಚ್‌ ಐದನೇ ಆರೋಪಿಯನ್ನು ಬಂಧಿಸಿದ್ದಾರೆ. ʼʼರಾಜಸ್ತಾನದ ಮೊಹಮ್ಮದ್‌ ಚೌಧರಿಯನ್ನು ಬಂಧಿಸಲಾಗಿದ್ದು, ಈತ ಇಬ್ಬರು ಶೂಟರ್‌ಗಳಾದ ಸಾಗರ್‌ ಪಾಲ್‌ ಮತ್ತು ವಿಕ್ಕಿ ಗುಪ್ತಾ ಅವರಿಗೆ ಹಣ ನೀಡಿದ್ದ ಮಾತ್ರವಲ್ಲ ಅವರು ಸ್ಥಳದಿಂದ ಪರಾರಿಯಾಗಲು ನರೆವಾಗಿದ್ದʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊಹಮ್ಮದ್‌ ಚೌಧರಿಯನ್ನು ಇಂದು (ಮಂಗಳವಾರ) ಮುಂಬೈಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ವಿಚಾರಣೆಗಾಗಿ ಆತನನ್ನು ವಶಕ್ಕೆ ನೀಡುವಂತೆ ಮನವಿ ಸಲ್ಲಿಸಲಾಗುವುದು ಎಂದು ಮುಂಬೈ ಕ್ರೈಂ ಬ್ರ್ಯಾಂಚ್‌ ತಿಳಿಸಿದೆ.

ಎಪ್ರಿಲ್‌ 14ರಂದು ಮುಂಬೈಯ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಗುಂಡಿನ ದಾಳಿ ನಡೆದಿತ್ತು. ದಾಳಿ ನಡೆಸಿದ್ದ ಶೂಟರ್‌ಗಳಾದ ಸಾಗರ್‌ ಪಾಲ್‌ ಮತ್ತು ವಿಕ್ಕಿ ಗುಪ್ತಾ ಎಂಬ ಇಬ್ಬರು ದುಷ್ಕರ್ಮಿಗಳನ್ನು ಬಳಿಕ ಅರೆಸ್ಟ್‌ ಮಾಡಲಾಗಿತ್ತು. ಮುಂಬೈ ಪೊಲೀಸರು ಜೈಲಿನಲ್ಲಿರುವ ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಅವನ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯ್ ಅವರನ್ನು ಈ ಪ್ರಕರಣದ ಪ್ರಮುಖ ಆರೋಪಿಗಳು ಎಂದು ಘೋಷಿಸಿದ್ದರು.

ಈ ಮಧ್ಯೆ ಗುಂಡಿನ ದಾಳಿ ನಡೆಸಿದ್ದ ಶೂಟರ್‌ಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿದ್ದ ಆರೋಪ ಎದುರಿಸುತ್ತಿದ್ದ ಅನೂಜ್‌ ಥಾಪನ್‌ ಕೆಲವು ದಿನಗಳ ಹಿಂದೆ ಪೊಲೀಸ್‌ ಕಸ್ಟಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆತ ಕೊನೆಯುಸಿರೆಳೆದಿದ್ದ. ಅನುಜ್ ಥಾಪನ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಆತನ ಕುಟುಂಬ ಇದರ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿತ್ತು. ಲಾಕಪ್‌ನಲ್ಲಿ ಥಾಪನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದರೆ ಆತನ ತಾಯಿ ಇದು ಕೊಲೆ ಎಂದು ಆರೋಪಿಸಿದ್ದರು.

ಗುಂಡಿನ ದಾಳಿಗೆ ಕಾರಣವೇನು?

ಹಲವು ವರ್ಷಗಳ ಹಿಂದಿನ ಕೃಷ್ಣಮೃಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್‌ ಅವರನ್ನು ಕೊಲ್ಲುವುದಾಗಿ 2018 ರಲ್ಲಿ ಬೆದರಿಕೆ ಹಾಕಿದ ನಂತರ ಬಿಷ್ಣೋಯ್ ಅವರ ಸಹಾಯಕರಲ್ಲಿ ಒಬ್ಬನನ್ನು ಬಂಧಿಸಲಾಯಿತು. ಜೋಧಪುರ್​ನ ಬಿಷ್ಣೋಯ್​ಗಳು ಕೃಷ್ಣಮೃಗವನ್ನು ತಮ್ಮ ಧಾರ್ಮಿಕ ಗುರು ಭಗವಾನ್ ಜಂಬೇಶ್ವರ ಅವರ ಪುನರ್ಜನ್ಮ ಎಂದು ಪರಿಗಣಿಸುತ್ತಾರೆ. ಹೀಗಾಗಿ ಕೃಷ್ಣಮೃಗ ಕೊಲ್ಲುವುದನ್ನು ಬಿಷ್ಣೋಯ್​ಗಳು ಎಂದಿಗೂ ಸಹಿಸುವುದಿಲ್ಲ. ಈ ಕಾರಣಕ್ಕೆ ಸಲ್ಮಾನ್ ಖಾನ್ ಹತ್ಯೆ ಮಾಡಲು ಲಾರೆನ್ಸ್ ಬಿಷ್ಣೋಯ್ ನಿರ್ಧರಿಸಿದ್ದ. ಎಬಿಪಿ ನ್ಯೂಸ್‌ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ, ʻʻಸಲ್ಮಾನ್ ಖಾನ್ ಅವರನ್ನು ಕೊಲ್ಲುವುದು ನನ್ನ ಜೀವನದ ಗುರಿ. ಸಲ್ಮಾನ್‌ ಅವರು ಬಿಷ್ಣೋಯ್ ಸಮುದಾಯಕ್ಕೆ ಕ್ಷಮೆಯಾಚಿಸಿದ ನಂತರವೇ ಈ ವಿಷಯ ಕೊನೆಗೊಳ್ಳುತ್ತದೆʼʼ ಎಂದು ಹೇಳಿದ್ದ.

ಇದನ್ನೂ ಓದಿ: Salman Khan: ಸಲ್ಮಾನ್‌ ಖಾನ್‌ ಮನೆ ಹೊರಗೆ ಗುಂಡಿನ ದಾಳಿ; ಶಂಕಿತರ ಫೋಟೊ ಬಿಡುಗಡೆ ಮಾಡಿದ ಪೊಲೀಸರು

ʼʼಸಲ್ಮಾನ್ ಖಾನ್ ಕ್ಷಮೆಯಾಚಿಸಿದರೆ, ಈ ವಿಷಯ ಕೊನೆಗೊಳ್ಳುತ್ತದೆ. ಸಲ್ಮಾನ್ ಅಹಂಕಾರಿ, ಗಾಯಕ ಮೂಸೆವಾಲಾ ಕೂಡ ಹಾಗೇ ಇದ್ದ. ಸಲ್ಮಾನ್ ಖಾನ್‌ನ ಅಹಂ ರಾವಣನಿಗಿಂತ ದೊಡ್ಡದಾಗಿದೆ. ಸಲ್ಮಾನ್ ಖಾನ್ ಬಗ್ಗೆ ನಮ್ಮ ಸಮಾಜದಲ್ಲಿ ಕೋಪವಿದೆ. ಅವರು ನನ್ನ ಸಮಾಜವನ್ನು ಅವಮಾನಿಸಿದರು. ಅವರ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಅವರು ಕ್ಷಮೆ ಕೇಳಲಿಲ್ಲʼʼ ಎಂದು ಲಾರೆನ್ಸ್ ಬಿಷ್ಣೋಯ್ ಹೇಳಿದ್ದ.

Continue Reading
Advertisement
Ballari Lok Sabha constituency Congress candidate e Tukaram voting in Sandur
ಬಳ್ಳಾರಿ11 mins ago

Lok Sabha Election 2024: ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಈ. ತುಕಾರಾಂ ಮತದಾನ

MS Dhoni
ಕ್ರೀಡೆ12 mins ago

MS Dhoni: ಧೋನಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ನಡೆಸಲು ಇದುವೇ ಪ್ರಮುಖ ಕಾರಣ

Crime News
ಕ್ರೈಂ13 mins ago

ಮಾದಕ ವಸ್ತು ನೀಡಿ ಕುಟುಂಬಸ್ಥರೊಂದಿಗೆ ಮಲಗಲು ಹಿಂಸೆ ನೀಡುವ ಪತಿ; ಮಹಿಳೆಯೊಬ್ಬರ ಕಣ್ಣೀರಿನ ಕಥೆ ಇದು

lok sabha election 2024 one family
Lok Sabha Election 202414 mins ago

Lok Sabha Election 2024: ಮತ ಹಾಕಲು ವಿದೇಶದಿಂದ ಬಂದರು! ಒಂದೇ ಕುಟುಂಬದ 69 ಮಂದಿಯ ವೋಟ್‌ ಸೆಲ್ಫಿ!

Prajwal Revanna Case Who is behind pen drive mastermind Karthik HD Kumaraswamy Question
ರಾಜಕೀಯ57 mins ago

Prajwal Revanna Case: ಪೆನ್‌ಡ್ರೈವ್‌ ಸೂತ್ರಧಾರಿ ಕಾರ್ತಿಕ್‌ ಹಿಂದೆ ಯಾರಿದ್ದಾರೆ? ಎಲ್ಲಿದ್ದಾನೆ? ಅವನನ್ನೇಕೆ ಹಿಡಿಯಲಿಲ್ಲ? ಎಚ್‌ಡಿಕೆ ಪ್ರಶ್ನೆ

Lok Sabha election 2024
ದೇಶ1 hour ago

Lok Sabha Election 2024: ನಟ ಶೇಖರ್‌ ಸುಮನ್‌, ಕಾಂಗ್ರೆಸ್‌ ನಾಯಕಿ ರಾಧಿಕಾ ಖೇರಾ ಬಿಜೆಪಿ ಸೇರ್ಪಡೆ

Prajwal Revanna Case Kumaraswamy demands DK Shivakumar dismissal behind pen drive conspiracy
ರಾಜಕೀಯ1 hour ago

Prajwal Revanna Case: ಪೆನ್‌ಡ್ರೈವ್‌ ಸಂಚಿನ ಹಿಂದಿರುವ ಡಿ.ಕೆ. ಶಿವಕುಮಾರ್‌ ವಜಾಗೆ ಕುಮಾರಸ್ವಾಮಿ ಆಗ್ರಹ

T20 World Cup 2024
ಕ್ರೀಡೆ2 hours ago

T20 World Cup 2024: ಟಿ20 ವಿಶ್ವಕಪ್​ಗೆ ಪ್ರಕಟಗೊಂಡ ಎಲ್ಲ ತಂಡಗಳ ಆಟಗಾರರ ಪಟ್ಟಿ

Theft Case In Bengaluru
ಬೆಂಗಳೂರು2 hours ago

Theft Case : ಹಬ್ಬಕ್ಕೆ ಊರಿಗೆ ಹೋದ ಅಕ್ಕನ ಮನೆಗೆ ಕನ್ನ; ಸಾಕ್ಷಿ ನಾಶಕ್ಕೆ ಖಾರದ ಪುಡಿ ಚೆಲ್ಲಿದ ತಂಗಿ!

Sunita Williams
ತಂತ್ರಜ್ಞಾನ2 hours ago

Sunita Williams: ಸುನೀತಾ ವಿಲಿಯಮ್ಸ್‌ ಮೂರನೇ ಬಾಹ್ಯಾಕಾಶ ಯಾತ್ರೆ ಮುಂದೂಡಿಕೆ; ಹೊಸ ದಿನಾಂಕ ಶೀಘ್ರ ಘೋಷಣೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ20 hours ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ20 hours ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ21 hours ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ2 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ2 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ2 days ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ3 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ4 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

ಟ್ರೆಂಡಿಂಗ್‌