ದೇಶ
Amritpal Singh : ಪೊಲೀಸರನ್ನೇ ಯಾಮಾರಿಸುತ್ತಿರುವ ಪ್ರತ್ಯೇಕವಾದಿ ಅಮೃತ್‌ಪಾಲ್ ಸಿಂಗ್; ಸೆರೆಗೆ ಕಾರ್ಯಾಚರಣೆ
ಖಲಿಸ್ತಾನಿ ಬೆಂಬಲಿಗರುವ ಬಂಧನಕ್ಕೆ ಒಳಗಾದ ಹಿನ್ನೆಲೆಯಲ್ಲಿ ಅಮೃತ್‌ಪಾಲ್ ಕೂಡ ಸೆರೆ ಸಿಕ್ಕಿದ್ದ ಎನ್ನಲಾಗಿತ್ತು. ಆದರೆ, ಆದರೆ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಚಂಡೀಗಢ: ಖಲಿಸ್ತಾನ ಪರ ನಿಲುವು ಹಾಗೂ ಹಿಂಸೆಗೆ ಪ್ರಚೋದನೆ ನೀಡುತ್ತಿದ್ದ ‘ವಾರಿಸ್ ಪಂಜಾಬ್ ದೆ’ ಮುಖ್ಯಸ್ಥ ಅಮೃತ್‌ಪಾಲ್ ಸಿಂಗ್‌ನನ್ನು (Amrit Pal Singh) ಪೊಲೀಸರು ಬಂಧಿಸಿದ್ದಾರೆ ಎಂದು ಪ್ರಾಥಮಿಕ ವರದಿಯಲ್ಲಿ ಹೇಳಲಾಗಿತ್ತು. ಆದರೆ, ಆತ ಪೊಲೀಸರನ್ನೇ ಯಾಮಾರಿಸಿ ಪರಾರಿಯಾಗಲು ಯತ್ನಿಸುತ್ತಿದ್ದಾನೆ ಎಂಬುದಾಗಿ ಹೇಳಲಾಗುತ್ತಿದೆ. ಆತನ ಬಂಧನಕ್ಕಾಗಿ ಪಂಜಾಬ್ ಪೊಲೀಸರು ಶನಿವಾರ ಬೃಹತ್ ಕಾರ್ಯಾಚರಣೆ ಕೈಗೊಂಡಿದ್ದಾರೆ. ಅದಕ್ಕಾಗಿ ಪಂಜಾಬ್‌ನಾದ್ಯಂತ ಇಂಟರ್‌ನೆಟ್ ಸೇವೆಗಳನ್ನು ಕಡಿತಗೊಳಿಸಲಾಗಿದೆ.
ಪಂಜಾಬ್‌ನ ನಕೋಡಾರ್‌ನಲ್ಲಿ ಅಮೃತ್‌ಪಾಲ್ ಸಿಂಗ್‌ನನ್ನು ಬಂಧಿಸಲಾಗಿದ್ದು, ಜಲಂಧರ್‌ಗೆ ಕರೆದೊಯ್ಯಲಾಗಿದೆ ಎಂದು ಈ ಹಿಂದೆ ಹೇಳಲಾಗಿತ್ತು. ಅಮೃತ್‌ಪಾಲ್ ಸಿಂಗ್‌ನ ಆರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿದ್ದವು.
ಅಮೃತ್‌ಪಾಲ್ ಸಿಂಗ್ ಬೆಂಬಲಿಗರು ಪೊಲೀಸ್ ಠಾಣೆಯೊಂದಕ್ಕೆ ಮಾರಕಾಸ್ತ್ರ ಹಿಡಿದು ನುಗ್ಗಿ ದಾಳಿ ನಡೆಸಿದ್ದರು. ಇದರೊಂದಿಗೆ ಪ್ರತ್ಯೇಕ ಖಲಿಸ್ತಾನ ಸ್ಥಾಪನೆಯ ಪರವಾದ ಮಾತುಗಳು ಕೇಳಿ ಬಂದಿದ್ದವು. ಜತೆಗೆ ಹಿಂಸಾಚಾರ ನಡೆಯವು ಸೂಚನೆಯೂ ಸಿಕ್ಕಿತ್ತು. ದೇಶ ದ್ರೋಹಿ ಕೃತ್ಯಗಳ ಹಿಂದಿರುವ ಅಮೃತ್‌ಪಾಲ್‌ನನ್ನು ಹಿಡಿಯಲು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. 78 ಜನರನ್ನು ಬಂಧಿಸಿರುವ ಪೊಲೀಸರು, ಏಳು ಜನರನ್ನು ವಶಕ್ಕೆ ಪಡೆದಿದ್ದಾರೆ. ಆದರೆ, ಅಮೃತ್‌ಪಾಲ್ ಮತ್ತು ಆತನ ಇತರೆ ಸಹಚರರು ತಪ್ಪಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಜಲಂಧರ್‌ನ ಮೆಹತ್‌ಪುರ್‌ನಲ್ಲಿ ಪೊಲೀಸರು ಕುದುರೆ ಮೆರವಣಿಗೆ ತಡೆದು ಅಮೃತ್‌ಪಾಲ್ ಸೆರೆಗೆ ಯತ್ನಿಸಿದ್ದರು. ಆದರೆ, ಅಮೃತ್‌ಪಾಲ್ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ. ಆತನ ಆರು ಮಂದಿ ಸಹಚರರನ್ನು ಪೊಲೀಸರು ವಶಕ್ಕೆ ಪಡೆದರು. ಆರೋಪಿಯು ತಪ್ಪಿಸಿಕೊಳ್ಳದಂತೆ ಪಂಜಾಬ್‌ನಲ್ಲಿ ಭಾನುವಾರದವರೆಗೂ ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಎಲ್ಲ ಮೊಬೈಲ್ ಇಂಟರ್‌ನೆಟ್ ಸೇವೆಗಳು, ಬ್ಯಾಂಕಿಂಗ್ ಸೇವೆಗಳು ಹಾಗೂ ಮೊಬೈಲ್ ರಿಚಾರ್ಜ್ ಹೊರತುಪಡಿಸಿ ಎಲ್ಲ ಎಸ್‌ಎಂಎಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಮೊಬೈಲ್ ನೆಟ್‌ವರ್ಕ್‌ಗಳ ಮೂಲಕ ಕಾರ್ಯಾಚರಿಸುವ ಡಾಂಗಲ್ ಸೇವೆಗಳನ್ನು ನಿರ್ಬಂಧಿಸಲಾಗಿದೆ. ಧ್ವನಿ ಕರೆಗಳಿಗೆ ನಿರ್ಬಂಧ ಇಲ್ಲ. ಮಾರ್ಚ್ 18ರ ಮಧ್ಯಾಹ್ನ 12ರಿಂದ ಮಾರ್ಚ್ 19ರಂದು 12 ಗಂಟೆ ವರೆಗೂ ಪಂಜಾಬ್‌ನಲ್ಲಿ ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ” ಎಂದು ಪಂಜಾಬ್‌ನ ಗೃಹ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.
ಖಲಿಸ್ತಾನಿ ನಾಯಕನಾಗಿರುವ, ಉಗ್ರರ ಜತೆ ಸಂಪರ್ಕ ಹೊಂದಿರುವ ಕುರಿತು ಶಂಕೆ ಇರುವ ಕಾರಣ ಅಮೃತ್‌ಪಾಲ್ ಸಿಂಗ್, ಕಳೆದ ಕೆಲವು ವರ್ಷಗಳಿಂದ ಪಂಜಾಬ್‌ನಲ್ಲಿ ಖಲಿಸ್ತಾನಿ ಚಟುವಟಿಕೆಗಳಿಗೆ ಪ್ರಚೋದನೆ ನೀಡುತ್ತಿದ್ದಾನೆ. ಅದರಲ್ಲೂ, ಇತ್ತೀಚೆಗೆ ಅಮೃತ್‌ಪಾಲ್‌ನ ಸಿಂಗ್‌ನ ಆಪ್ತರನ್ನು ಬಿಡಬೇಕು ಎಂಬುದಾಗಿ ಈತನ ಆಪ್ತರು ಅಂಜಾಲ ಪೊಲೀಸ್ ಠಾಣೆಯಲ್ಲಿ ಭಾರಿ ಗಲಾಟೆ ನಡೆಸಿದ್ದರು.
ಸಿಂಗ್ ಬಂಧನಕ್ಕೆ ಪೊಲೀಸರ ಕಾರ್ಯಾಚರಣೆ
ಅಮೃತ್‌ಪಾಲ್ ಸಿಂಗ್‌ನ ಬಂಧನಕ್ಕೆ ಶನಿವಾರ ಬೆಳಗ್ಗೆ ಪಂಜಾಬ್ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು. ಈತನ ಬಂಧನಕ್ಕಾಗಿ ಪಂಜಾಬ್ ಪೊಲೀಸರು ಹಲವು ಜಿಲ್ಲೆಗಳಲ್ಲಿ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಿದ್ದರು.
ಪಂಜಾಬ್ ಪೊಲೀಸರ ಪ್ರಕಟಣೆ
“ಕೆಲವು ಆಯ್ದ ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್‌ನೆಟ್, ಎಸ್‌ಎಂಎಸ್‌ಗಳನ್ನು ಪೊಲೀಸರು ನಿರ್ಬಂಧಿಸಿದ್ದಾರೆ. ಈಗಲೂ ನಿರ್ಬಂಧ ಮುಂದುವರಿದಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದಿಸೆಯಲ್ಲಿ ಇಂತಹ ಕ್ರಮ ತೆಗೆದುಕೊಳ್ಳಲಾಗಿದೆ. ಖಲಿಸ್ತಾನದ ಬೆಂಬಲಿಗರು ಗಲಾಟೆ ಮಾಡುವ ಸಾಧ್ಯತೆ ಇರುವ ಕಾರಣ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗಿದೆ” ಎಂದು ಪೊಲೀಸ್ ಮೂಲಗಳು ತಿಳಿಸಿವೆ.
2012ರಿಂದ 10 ವರ್ಷಗಳವರೆಗೆ ದುಬೈನಲ್ಲಿ ಟ್ರಾನ್ಸ್‌ಪೋರ್ಟ್ ಉದ್ಯಮದಲ್ಲಿ ತೊಡಗಿದ್ದ ಈತ, ಕಳೆದ ವರ್ಷ ಪಂಜಾಬ್‌ಗೆ ಆಗಮಿಸಿದ್ದಾನೆ ಎಂದು ತಿಳಿದುಬಂದಿದೆ. ಪಂಜಾಬ್‌ಗೆ ಆಗಮಿಸುತ್ತಲೇ ಖಲಿಸ್ತಾನ ಪರ ಚಟುವಟಿಕೆಗಳನ್ನು ತೀವ್ರಗೊಳಿಸಿದ್ದ. ಈತನನ್ನು ಪಂಜಾಬ್‌ನ ಎರಡನೇ ಬಿಂದ್ರಾನ್‌ವಾಲೆ ಎಂದೇ ಹೇಳಲಾಗುತ್ತದೆ
ದೇಶ
ಕರ್ನಾಟಕ ಚುನಾವಣೆ ಮೇಲೆ ಕಣ್ಣಿಟ್ಟು ಹುತಾತ್ಮನಂತೆ ನಟಿಸ್ತಾ ಇರೋ ರಾಹುಲ್ ಗಾಂಧಿ: ಬಿಜೆಪಿ
ಕರ್ನಾಟಕದಲ್ಲಿ ಜನರ ಅನುಭೂತಿ ಗಿಟ್ಟಿಸುವುದಕ್ಕಾಗಿ ರಾಹುಲ್ ಗಾಂಧಿ (Rahul Gandhi) ಅನರ್ಹತೆ ವಿಚಾರವನ್ನು ಮುಂದಿಟ್ಟುಕೊಂಡು ರಂಪ ಮಾಡುತ್ತಿದ್ದಾರೆ ಎಂದು ರವಿಶಂಕರ್ ಪ್ರಸಾದ್ ಆರೋಪಿಸಿದ್ದಾರೆ.
ಪಟಾನಾ : ಸಂಸತ್ನಿಂದ ಅನರ್ಹಗೊಂಡಿರುವ ರಾಹುಲ್ ಗಾಂಧಿ (Rahul Gandhi) ತಮ್ಮ ತಪ್ಪನ್ನು ಮುಚ್ಚಿಡುವ ಜತೆಗೆ ಕರ್ನಾಟಕದ ಚುನಾವಣೆ ಮೇಲೆ ಕಣ್ಣಿಟ್ಟು ಹುತಾತ್ಮನಂತೆ ನಟಿಸುತ್ತಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ಮುಖಂಡ ರವಿಶಂಕರ್ ಪ್ರಸಾದ್ ಲೇವಡಿ ಮಾಡಿದ್ದಾರೆ. ಪಟನಾದ ಬಿಜೆಪಿ ಕಚೇರಿಯಲ್ಲಿ ಶನಿವಾರ (ಮಾರ್ಚ್ 25ರಂದು) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಂಡನ್ನಲ್ಲಿ ದೇಶದ ಸಮಗ್ರತೆಗೆ ಧಕ್ಕೆ ತರುವಂಥ ಮಾತನ್ನಾಡಿರುವ ಅವರು, ವಿಷಯದಿಂದ ತಪ್ಪಿಸಿಕೊಳ್ಳಲು ಸಂಸತ್ ಸದಸ್ಯತ್ವ ಅನರ್ಹತೆಯ ವಿಚಾರವನ್ನೇ ರಂಪ ಮಾಡಿ ಅನುಕಂಪ ಗಿಟ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಅನರ್ಹತೆಗೂ ಉದ್ಯಮಿ ಗೌತಮ್ ಅದಾನಿ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಇನ್ನೊಬ್ಬರ ಬಗ್ಗೆ ಹೀನ ಮಾತುಗಳನ್ನಾಡುವ ಚಾಳಿ ಹೊಂದಿರುವ ರಾಹುಲ್ ಗಾಂಧಿ, ಈ ಬಾರಿ ಹಿಂದುಳಿದ ಜಾತಿಯೊಂದರ ಬಗ್ಗೆ ತುಚ್ಛವಾಗಿ ಮಾತನಾಡಿದ್ದಾರೆ. ಆ ಆರೋಪಗಳಿಂದ ತಪ್ಪಿಸಿಕೊಳ್ಳುವುದಕ್ಕೆ ಅಮಾಯಕರಂತೆ ವರ್ತಿಸುತ್ತಿದ್ದಾರೆ. ತಮ್ಮ ತಪ್ಪಿಗೆ ಕ್ಷಮೆ ಕೇಳದ ಕಾರಣ ಸೂರತ್ ಕೋರ್ಟ್ ಅವರಿಗೆ ಜೈಲು ಶಿಕ್ಷೆ ವಿಧಿಸಿದೆ ಎಂದು ರವಿಶಂಕರ್ ಪ್ರಸಾದ್ ಕಿಡಿ ಕಾರಿದರು.
ಕಾಂಗ್ರೆಸ್‌ನ ಹಿರಿಯ ನ್ಯಾಯವಾದಿಗಳು ಈ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಿಲ್ಲ ಎಂಬುದೇ ಅಚ್ಚರಿಯ ವಿಷಯ. ಅದೂ ಅಲ್ಲದೆ ಸಂಸತ್ನಿಂದ ಅನರ್ಹಗೊಳ್ಳುವುದು ಇದೇ ಮೊದಲ ಪ್ರಕರಣವಲ್ಲ. ಆರು ಮಂದಿ ಬಿಜೆಪಿ ಸದಸ್ಯರು ಸೇರಿದಂತೆ ಇದುವರೆಗೆ ಒಟ್ಟು 32 ನಾಯಕರು ಲೋಕಸಭೆಯಿಂದ ಅನರ್ಹರಾಗಿದ್ದಾರೆ. ಆರ್ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಕೂಡ ಈ ಪಟ್ಟಿಯಲ್ಲಿದ್ದಾರೆ. ಅಂತೆಯೇ ಪಟನಾ ಕೋರ್ಟ್ ಸೇರಿದಂತೆ ಏಳು ಕೋರ್ಟ್ಗಳಲ್ಲಿ ರಾಹುಲ್ ಗಾಂಧಿಯ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸ್ಗಳಿವೆ ಎಂದು ರವಿಶಂಕರ್ ಪ್ರಸಾದ್ ಹೇಳಿದರು.
ರಾಹುಲ್ ಗಾಂಧಿಯ ಅನರ್ಹತೆಯ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್, ಕರ್ನಾಟಕದ ಚುನಾವಣೆಯಲ್ಲಿ ಜನರ ಅನುಭೂತಿಯನ್ನು ಪಡೆಯಲು ಯತ್ನಿಸುತ್ತಿದೆ. ಇದು ತಟಸ್ಥ ನಿರ್ಧಾರವಾಗಿದ್ದು ನ್ಯಾಯಾಲಯದ ಆದೇಶದ ಮೇರೆಗೆ ಜನಪ್ರತಿನಿಧಿಗಳ ಕಾಯ್ದೆಯಡಿ ಅವರನ್ನು ಅನರ್ಹಗೊಳಿಸಲಾಗಿದೆ. ಆದಾಗ್ಯೂ, ರಾಹುಲ್ ಗಾಂಧಿ ಹಿಂದುಳಿದ ಜಾತಿಗಳ ವಿರುದ್ಧ ನೀಡುತ್ತಿರುವ ಹೇಳಿಕೆಗಳನ್ನು ಜನರ ಮುಂದೆ ಇಡುವುದಕ್ಕಾಗಿ ಬಿಜೆಪಿ ರಾಷ್ಟ್ರವ್ಯಾಪಿ ಅಭಿಯಾನ ಕೈಗೊಳ್ಳಲಿದೆ ಎಂದು ಹೇಳಿದರು.
ಇದನ್ನೂ ಓದಿ : 2013ರಲ್ಲಿ ರಾಹುಲ್ ಗಾಂಧಿ ಸುಗ್ರೀವಾಜ್ಞೆ ಹರಿಯದಿದ್ದರೆ ಈಗ ಅನರ್ಹರಾಗುತ್ತಿರಲಿಲ್ಲ, ಏನದು ಸುಗ್ರೀವಾಜ್ಞೆ?
ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿ ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಮೊಸಳೆ ಕಣ್ಣೀರು ಇಡುತ್ತಿದ್ದಾರೆ. ಅವರ ಪಕ್ಷ ಸೋತಾಗ ಆ ರೀತಿ ಮಾಡುವುದು ಅವರ ಹವ್ಯಾಸ. ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಪ್ರಜಾಪ್ರಭುತ್ವಕ್ಕೆ ಅಪಾಯ ಎಂದು ಹೇಳುತ್ತಾರೆ. ಚುನಾವಣಾ ಆಯೋಗ ಪಕ್ಷಪಾತಿ ಎಂದು ದೂರುತ್ತಾರೆ. ನ್ಯಾಯಾಂಗ ವ್ಯವಸ್ಥೆ ಬಲ ಕಳೆದುಕೊಂಡಿದೆ ಎಂದು ನುಡಿಯುತ್ತಾರೆ ಎಂಬುದಾಗಿ ಪ್ರಸಾದ್ ಕಟಕಿಯಾಡಿದರು.
ಬಲಿಷ್ಠ ನಾಯಕರಾಗಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆರೋಪಗಳನ್ನು ಮಾಡುವುದಕ್ಕೆ ಕಾಂಗ್ರೆಸ್ಗೆ ನಾಚಿಕೆಯಾಗಬೇಕು. ಮೋದಿಯವರ ಆಡಳಿತದಲ್ಲಿ ಭಾರತ ಹೊಸ ಯುಗದತ್ತ ಸಾಗುತ್ತಿದೆ. ಅವರ ಶ್ರಮದಿಂದಾಗಿ ಭಾರತ ವಿಶ್ವದ ಐದನೇ ಶ್ರೀಮಂತ ದೇಶ ಎನಿಸಿಕೊಂಡಿದೆ. ತಮ್ಮ ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ ಎಂಬುದು ಕೂಡ ರಾಹುಲ್ ಗಾಂಧಿಯ ಹಸಿ ಸುಳ್ಳಿನ ಹೇಳಿಕೆ ಎಂದು ಅವರು ಹೇಳಿದ್ದಾರೆ.
ದೇಶ
Rahul Gandhi Disqualified : ನಿಮ್ಮ ರೂಲ್ಸ್ ಗಾಂಧಿ ಫ್ಯಾಮಿಲಿಗೆ ಅನ್ವಯವಾಗಲ್ಲ; ಕಾಂಗ್ರೆಸ್ ಸಂಸದನ ಕಿಡಿ!
ರಾಹುಲ್ ಗಾಂಧಿಯ ತಂದೆ ಹಾಗೂ ಅಜ್ಜಿ ದೇಶಕ್ಕಾಗಿ ಪ್ರಾಣ ಸಮರ್ಪಿಸಿದ್ದಾರೆ . ಅವರನ್ನು ವಿಶೇಷ ಎಂದು ಪರಿಗಣಿಸುವಂತೆ ರಾಜ್ಯಸಭಾ ಸದಸ್ಯ ಪ್ರಮೋದ್ ತಿವಾರಿ ಹೇಳಿದ್ದಾರೆ.
ನವ ದೆಹಲಿ : ದೇಶದ ಸಾಮಾನ್ಯ ನಾಗರಿಕರಿಗಾಗಿ ಮಾಡಿರುವ ಕಾನೂನು ಗಾಂಧಿ ಕುಟುಂಬದವರಿಗೆ ಅನ್ವಯಿಸುವುದಿಲ್ಲ. ಹೀಗಾಗಿ ಸೂರತ್ ಕೋರ್ಟ್ ರಾಹುಲ್ ಗಾಂಧಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ್ದು ಹಾಗೂ ಸಂಸತ್ನಿಂದ ರಾಹುಲ್ ಗಾಂಧಿಯನ್ನು ಅನರ್ಹಗೊಳಿಸಿದ್ದು ಸರಿಯಲ್ಲ ಎಂಬುದಾಗಿ ಕಾಂಗ್ರೆಸ್ ರಾಜ್ಯ ಸಭಾ ಸದಸ್ಯ ಪ್ರಮೋದ್ ತಿವಾರಿ ಅಭಿಪ್ರಾಯಪಟ್ಟಿದ್ದಾರೆ.
ನ್ಯೂಸ್ ಏಜೆನ್ಸಿ ಎಎನ್ಐ ಜತೆ ಮಾತನಾಡಿದ ಅವರು, ರಾಹುಲ್ ಗಾಂಧಿಯವರು ಗಾಂಧಿ ಕುಟುಂಬಕ್ಕೆ ಸೇರಿದವರಾಗಿರುವ ಕಾರಣ ಅವರನ್ನು ವಿಶೇಷ ನಾಗರಿಕರೆಂದು ಪರಿಗಣಿಸಬೇಕು. ಅವರ ಅಜ್ಜಿ ಹಾಗೂ ತಂದೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಹೀಗಾಗಿ ಕಾನೂನಿನಲ್ಲಿ ಅವರಿಗೆ ಕನಿಷ್ಠ ಶಿಕ್ಷೆ ವಿಧಿಸಬೇಕು. ಬಿಜೆಪಿ ರಾಹುಲ್ ಮೇಲಿನ ಭಯದಿಂದಲೇ ಅವರನ್ನು ಜೈಲಿಗೆ ಕಳುಹಿಸುವ ಪ್ರಯತ್ನ ಮಾಡಿದೆ ಎಂಬುದಾಗಿ ಇದೇ ವೇಳೆ ಆರೋಪಿಸಿದರು.
ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಿರುವುದನ್ನು ವಿರೋಧಿಸಿ ಅವರು ಈ ಹೇಳಿಕೆ ನೀಡಿದ್ದಾರೆ. ಇದೇ ವೇಳೆ ಅವರು ಬಿಜೆಪಿ ಸರಕಾರ ಅದಾನಿ ಹಗರದಲ್ಲಿ ಭಾಗಿಯಾಗಿದೆ. ರಾಹುಲ್ ಗಾಂಧಿ ಅದನ್ನು ಬಯಲುಗೊಳಿಸುತ್ತಾರೆ ಎಂಬ ಭಯದಲ್ಲಿ ಜೈಲಿಗೆ ಕಳುಹಿಸಲು ಯತ್ನಿಸಿದ್ದಾರೆ ಎಂದು ಹೇಳಿದ್ದಾರೆ.
ತಿವಾರಿ ಹೇಳಿಕೆಗೆ ಬಿಜೆಪಿ ಪ್ರತಿಕ್ರಿಯೆ ಕೊಟ್ಟಿದ್ದು, ಅವರೇನು ದೇಶದ ರಾಜನೇ ಎಂದು ಪ್ರಶ್ನಿಸಿದ್ದಾರೆ. ಪಕ್ಷದ ವಕ್ತಾರ ಶೆಹಜಾದ್ ಪೂನವಾಲಾ ಮಾತನಾಡಿ, ರಾಹುಲ್ ಗಾಂಧಿ ಕಾನೂನಿಗಿಂತ ದೊಡ್ಡವರೇ? ಸಂವಿಧಾನಕ್ಕೂ ಮೀರಿದವರೇ? ರಾಹುಲ್ ಗಾಂಧಿಗೆ ಹಿಂದುಳಿದ ಜನಾಂಗವನ್ನು ನಿಂದನೆ ಮಾಡುವ ಅವಕಾಶ ಕೊಟ್ಟವರು ಯಾರು ಎಂದು ಅವರು ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿ ಅನರ್ಹತೆಗೆ ಕಾರಣರಾದವರು ಯಾರು?
ರಾಹುಲ್ ಗಾಂಧಿ ಅವರು ಲೋಕಸಭೆಯಿಂದ ಅನರ್ಹವಾಗಲು(Rahul Gandhi Disqualified) ಕಾರಣವಾದ ಆ ‘ಮೋದಿ’ಯ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿಲ್ಲ. 2019ರಲ್ಲಿ ಕರ್ನಾಟಕದ ಕೋಲಾರದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರ ರ್ಯಾಲಿಯೊಂದರಲ್ಲಿ ರಾಹುಲ್ ಗಾಂಧಿ ಅವರು, ಕಳ್ಳರ ಹೆಸರೆಲ್ಲ ಮೋದಿ ಅಡ್ಡಹೆಸರನ್ನು ಏಕೆ ಹೊಂದಿರುತ್ತವೆ ಎಂದು ಪ್ರಶ್ನಿಸಿದ್ದರು. ರಾಹುಲ್ ಗಾಂಧಿ ಅವರು ಹಿಂದುಳಿದ ಸಮುದಾಯಕ್ಕೆ ಅವಮಾನ ಮಾಡಿದ್ದಾರೆಂದು ಆರೋಪಿಸಿ, ಗುಜರಾತ್‌ನ ವ್ಯಕ್ತಿಯೊಬ್ಬರು ರಾಹುಲ್ ಗಾಂಧಿ ಅವರ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದರು. ಆ ವ್ಯಕ್ತಿಯೇ ‘ಪೂರ್ಣೇಶ್ ಮೋದಿ'(Purnesh Modi). ರಾಹುಲ್ ಅವರು ಲೋಕಸಭೆಯಿಂದ ಅನರ್ಹರಾಗಲು ಇವರೇ ನೇರ ಕಾರಣ!
ಯಾರು ಈ ಪೂರ್ಣೇಶ್ ಮೋದಿ?
57 ವರ್ಷದ ಪೂರ್ಣೇಶ್ ಮೋದಿ ಅವರು ಹಾಲಿ ಶಾಸಕ ಹಾಗೂ ಮಾಜಿ ಸಚಿವರಾಗಿದ್ದಾರೆ. 1965ರ ಅಕ್ಟೋಬರ್ 22ರಂದು ಜನಿಸಿದ್ದಾರೆ. ತಂದೆ ಈಶ್ವರಲಾಲ್ ಛೋಟಾಲಾಲ್ ಮೋದಿ ಮತ್ತು ತಾಯಿ ಹಸುಮತಿಬೆನ್ ಈಶ್ವರಿಲಾಲ್ ಮೋದಿ. ಬಿಕಾಂ ಹಾಗೂ ಕಾನೂನು ಪದವೀಧರರೂ ಹೌದು. ಇವರ ಪತ್ನಿ ಹೆಸರು ಬಿನಾಬೆನ್ ಮೋದಿ.
ಪೂರ್ಣೇಶ್ ಅವರು ಸೂರತ್ ಮೋಧ್ವನಿಕ್ ಸಮಸ್ತ ಪಂಚ್ ಟ್ರಸ್ಟೀ ಕೂಡ ಆಗಿದ್ದಾರೆ. ಜತೆಗೆ ಸಾರ್ವಜನಿಕ ಎಜುಕೇಷನ್ ಸೊಸೈಟಿಯ ಸದಸ್ಯರೂ ಹೌದು. ಸಮಸ್ತ ಗುಜರಾತ್ ಮೋಧ ಮೋದಿ ಸಮಾಜ ಟ್ರಸ್ಟ್ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ವೃತ್ತಿಯಿಂದ ನ್ಯಾಯವಾದಿಯಾಗಿರುವ ಪೂರ್ಣೇಶ್ ಅವರು 1984ರಲ್ಲಿ ಬಿಜೆಪಿಯನ್ನು ಸೇರ್ಪಡೆಯಾದರು. ಬೂತ್ ಮಟ್ಟದಿಂದ ಕಾರ್ಯನಿರ್ವಹಿಸಿದ ಪೂರ್ಣೇಶ್ ಅವರು ಬಳಿಕ ವಾರ್ಡ್ ಯುವ ಘಟಕದ ಅಧ್ಯಕ್ಷರಾದರು. 1995ರಲ್ಲಿ ಸೂರತ್ ಸಿಟಿ ಬಿಜೆಪಿ ಕಾರ್ಯಕಾರಿ ಸಮಿತಿಯ ಸದಸ್ಯರಾದರು. 2000 ಮತ್ತು 2005ರ ನಡುವೆ ಪೂರ್ಣೇಶ್ ಅವರು ಮುನ್ಸಿಪಲ್ ಸದಸ್ಯರಾಗಿದ್ದರು.
ಗುಜರಾತ್ ವಿಧಾನಸಭೆಗೆ ಆಯ್ಕೆ
ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 2013ರಲ್ಲಿ ಸೂರತ್ ವೆಸ್ಟ್ ವಿಧಾನಸಭೆ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರು. 2017ರ ವಿಧಾನಸಭೆ ಚುನಾವಣೆ ವೇಳೆಯೂ ಅವರು ಸೂರತ್ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಮುಂದೆ 2022ರಲ್ಲಿ ಕಾಂಗ್ರೆಸ್‌ನ ಸಂಜಯ್ ಆರ್ ಶಾ ಅವರನ್ನು ಸೋಲಿಸಿ ಮತ್ತೆ ಸೂರತ್ ಈಸ್ಟ್ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದರು.
ಇದನ್ನೂ ಓದಿ: Rahul Gandhi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಬಿಗ್ ಶಾಕ್; ಸಂಸದ ಸ್ಥಾನದಿಂದ ಅನರ್ಹ
ರಾಹುಲ್ ಗಾಂಧಿ ಅವರು ಚುನಾವಣಾ ರ್ಯಾಲಿಯಲ್ಲಿ ಮೋದಿ ಸಮುದಾಯದ ವಿರುದ್ಧ ಅಪಮಾನಕಾರಿಯಾಗಿ ಮಾತನಾಡಿದ್ದಾರೆಂದು ಆರೋಪಿಸಿ, ಮಾನನಷ್ಟ ಪ್ರಕರಣ ದಾಖಲಿಸಿದ್ದರು. ಸುದೀರ್ಘ ವಿಚಾರಣೆ ನಡೆದು ಸೂರತ್ ಕೋರ್ಟ್ ಅಂತಿಮವಾಗಿ, ಈ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರನ್ನು 2 ವರ್ಷ ಶಿಕ್ಷೆಗೆ ಗುರಿಪಡಿಸಿದೆ.
ದೇಶ
ವಿಸ್ತಾರ ಸಂಪಾದಕೀಯ: ಅಮೆರಿಕದಲ್ಲಿ ಹಾರಾಡಿದ ತ್ರಿವರ್ಣ ಧ್ವಜ; ಖಲಿಸ್ತಾನಿಗಳಿಗೆ ದೇಶಪ್ರೇಮಿಗಳ ತಿರುಗೇಟು
ಸಿಖ್ ಧರ್ಮ ಎಂಬುದು ಶತಮಾನಗಳಿಂದ ಹಿಂದೂಗಳ ಜತೆಗೆ ಅನ್ಯೋನ್ಯತೆಯಿಂದ ಇರುವ ಧರ್ಮ. ಅವರು ಬೇರೆ ಎಂದು ಹಿಂದೂಗಳಿಗೆ ಎಂದೂ ಅನಿಸಿಯೇ ಇಲ್ಲ. ಇಂಥವರ ನಡುವೆ ಪ್ರತ್ಯೇಕತೆಯ ವಿಷಬೀಜ ಬಿತ್ತಲು ಯತ್ನಿಸುವ ದೇಶವಿರೋಧಿ ಸಂಚನ್ನು ಈಗಲೇ ಹೊಸಕಿ ಹಾಕಬೇಕಿದೆ.
ಅಮೆರಿಕದ ಕಾನ್ಸುಲೇಟ್ ಕಚೇರಿ ಎದುರು ಸಾವಿರಾರು ಭಾರತೀಯರು ತ್ರಿವರ್ಣ ಧ್ವಜ ಹಾರಿಸಿ ಭಾರತದ ಪರ ಘೋಷಣೆ ಮೊಳಗಿಸಿದ್ದಾರೆ. ಹಿಂದೂ, ಮುಸ್ಲಿಂ, ಸಿಖ್ ಸೇರಿದಂತೆ ಎಲ್ಲ ಧರ್ಮೀಯರೂ ಇದರಲ್ಲಿ ಭಾಗವಹಿಸಿದ್ದು ಗಮನಾರ್ಹ. ಪಾಕ್ ಪ್ರೇರಿತ ಸಿಖ್ ಪ್ರತ್ಯೇಕತಾವಾದಿಗಳಿಗೆ ಇದು ತಕ್ಕ ತಿರುಗೇಟಾಗಿದೆ. ಕಳೆದ ಭಾನುವಾರ ಖಲಿಸ್ತಾನಿಗಳ ಗುಂಪು ಇಂಡಿಯನ್ ಕಾನ್ಸುಲೇಟ್ ಕಚೇರಿ ಮೇಲೆ ದಾಳಿ ಮಾಡಿ ತ್ರಿವರ್ಣ ಧ್ವಜವನ್ನು ಕೆಳಗಿಸಿ ಅವಮಾನ ಮಾಡಿತ್ತು. ಇವರನ್ನು ಪತ್ತೆಹಚ್ಚಿ ಸೂಕ್ತ ಶಿಕ್ಷೆಯನ್ನು ಅಲ್ಲಿನ ಸರ್ಕಾರಗಳು ವಿಧಿಸಬೇಕು ಅಥವಾ ಭಾರತಕ್ಕೆ ಹಸ್ತಾಂತರಿಸಬೇಕು. ಇದು ರಾಜನೀತಿಯ ಮಟ್ಟದಲ್ಲಿ ಆಗಬೇಕಾದ ಉಪಕ್ರಮ. ಈ ಬಗ್ಗೆ ಉಭಯ ದೇಶಗಳ ಸರ್ಕಾರಗಳು ಕ್ರಮ ತೆಗೆದುಕೊಳ್ಳಬೇಕಿದೆ. ಆದರೆ ನೈಜ ಭಾರತೀಯರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬೇಕೋ ಆ ರೀತಿಯಲ್ಲಿ ಸ್ಪಂದಿಸಿದ್ದಾರೆ ಎಂಬುದು ನಮ್ಮ ಹೆಮ್ಮೆಗೆ ಕಾರಣವಾಗಿದೆ.
ಪಂಜಾಬ್‌ನಲ್ಲಿ ಖಲಿಸ್ತಾನಿಗಳು ಈಗಾಗಲೇ ತಮ್ಮ ನೆಲೆಯನ್ನು ಭದ್ರಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಪಾಕ್ ಪ್ರೇರಿತ ಡ್ರೋನ್‌ಗಳ ಮೂಲಕ ಪೂರೈಕೆಯಾಗುವ ಶಸ್ತ್ರಾಸ್ತ್ರಗಳು ಹಾಗೂ ಮಾದಕ ದ್ರವ್ಯಗಳ ಮೂಲಕ ಪಂಜಾಬ್‌ನ ಯುವಜನತೆಯನ್ನು ಹಾದಿ ತಪ್ಪಿಸಲು ಯತ್ನಿಸುತ್ತಿದ್ದಾರೆ. ಇವರು ಎಷ್ಟು ಬೆಳೆದಿದ್ದಾರೆ ಎಂದರೆ, ಇತ್ತೀಚೆಗೆ ಅಲ್ಲಿನ ತರಣ್ ತಾರಣ್ ಜಿಲ್ಲೆಯ ಪೊಲೀಸ್ ಠಾಣೆ ಮೇಲೆ ರಾಕೆಟ್ ಲಾಂಚರ್‌ನಿಂದ ದಾಳಿ ನಡೆಸಲಾಗಿತ್ತು. ಪಂಜಾಬ್ ಗುಪ್ತಚರ ಇಲಾಖೆ ಪ್ರಧಾನ ಕಚೇರಿ ಮೇಲೆಯೂ ಇದೇ ರೀತಿಯ ದಾಳಿ ನಡೆಸಲಾಗಿತ್ತು. ಇವರಿಗೆ ಬೆಂಬಲವಾಗಿ ದೇಶದಾಚೆಯ ಕೆಲವು ಪ್ರತ್ಯೇಕತಾವಾದಿ ಸಿಖ್ಖರ ಗುಂಪುಗಳು, ಖಲಿಸ್ತಾನ್ ಪರ ಸಂಘಟನೆಗಳೂ ವರ್ತಿಸುತ್ತಿವೆ. ಕೆನಡಾ, ಆಸ್ಟ್ರೇಲಿಯಾ, ಬ್ರಿಟನ್ ಮತ್ತು ಅಮೆರಿಕದಲ್ಲಿ ಇವು ಹೆಚ್ಚಾಗಿವೆ. ಇವರ ಟಾರ್ಗೆಟ್ ಎಂದರೆ ಅಲ್ಲಿನ ಭಾರತೀಯರು, ಅವರ ಶ್ರದ್ಧಾಕೇಂದ್ರಗಳಾದ ದೇವಾಲಯಗಳು ಹಾಗೂ ಕಾನ್ಸುಲೇಟ್‌ಗಳು. ಇತ್ತೀಚಿನ ದಿನಗಳಲ್ಲಿ ಅನೇಕ ದೇವಾಲಯಗಳನ್ನು ಹಾನಿಗೊಳಪಡಿಸಲಾಗಿದೆ. ಈ ಸಂಘಟನೆಗಳು ವಿನಾಕಾರಣ ಭಾರತೀಯರನ್ನು ಕೆಣಕುತ್ತಿವೆ.
ಇದಕ್ಕೆ ತಕ್ಕ ಉತ್ತರವನ್ನು ಭಾರತೀಯರು ನೀಡಿದ್ದಾರೆ. ಈವರೆಗೆ ಇದನ್ನೆಲ್ಲ ತಾಳ್ಮೆಯಿಂದ ಸಹಿಸಿಕೊಂಡಿದ್ದ ಅನಿವಾಸಿ ಭಾರತೀಯರು ಈಗ ತಿರುಗಿ ಬಿದ್ದಿದ್ದಾರೆ. ಅಮೆರಿಕ ಮಾತ್ರವಲ್ಲ, ವಿಶ್ವದ ಮೂಲೆ ಮೂಲೆಗಳಲ್ಲಿ ಅನಿವಾಸಿ ಭಾರತೀಯರು ಒಗ್ಗಟ್ಟಿನಿಂದ ಇದ್ದಾರೆ ಮತ್ತು ಸದಾ ಭಾರತದ ಪರ ದನಿ ಎತ್ತುತ್ತಿದ್ದಾರೆ. ವಿದೇಶಗಳಲ್ಲಿನ ಭಾರತ ವಿರೋಧಿ ಚಟುವಟಿಕೆ ವಿರುದ್ಧ ಭಾರತ ಸರ್ಕಾರ ಈಗಾಗಲೇ ತೀವ್ರ ಖಂಡನೆ ವ್ಯಕ್ತಪಡಿಸಿದೆ. ಪ್ರತೀಕಾರದ ಕ್ರಮವಾಗಿ ಭಾರತವು ದಿಲ್ಲಿಯಲ್ಲಿನ ಬ್ರಿಟನ್ ದೂತಾವಾಸ ಕಚೇರಿಯಲ್ಲಿನ ಹೆಚ್ಚುವರಿ ಭದ್ರತೆಯನ್ನು ಹಿಂತೆಗೆದುಕೊಂಡಿತ್ತು. ಖಲಿಸ್ತಾನಿಗಳಿಗೆ ಅನಿವಾಸಿ ಭಾರತೀಯರು ಇಷ್ಟೊಂದು ಸದರವಾಗಿರುವುದೇಕೆ? ಇವರಿಗೆ ಭದ್ರತೆಯಿಲ್ಲವೆಂದು ಖಲಿಸ್ತಾನಿಗಳು ಭಾವಿಸಿರಬಹುದು. ಆದರೆ ಅನಿವಾಸಿ ಭಾರತೀಯರ ನೆರವಿಗೆ ಭಾರತ ಸದಾ ಸನ್ನದ್ಧವಾಗಿದೆ. ಈ ಸಂದೇಶವನ್ನು ನಾವು ರವಾನಿಸಬೇಕು. ಅನಿವಾಸಿ ಭಾರತೀಯರೂ ತಾವು ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶವನ್ನು ನೀಡಬೇಕು.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಕೇಂದ್ರೀಯ ತನಿಖಾ ದಳಗಳ ದುರುಪಯೋಗ ಆರೋಪ; ಪಾರದರ್ಶಕತೆ ಅಗತ್ಯ
ಇದರ ಜತೆಗೆ ಭಾರತದಲ್ಲಿ ಕೂಡ ಕೇಂದ್ರ ಸರ್ಕಾರ ಸಿಖ್ ಫಾರ್ ಜಸ್ಟಿಸ್, ವಾರಿಸ್ ಪಂಜಾಜ್ ದೇ ಇತ್ಯಾದಿ ಖಲಿಸ್ತಾನ್ ಪರ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಆರಂಭಿಸಿದೆ. ಪಂಜಾಬಿನಲ್ಲಿ ಪ್ರತ್ಯೇಕತೆಯ ಬೀಜ ಬಿತ್ತುತ್ತಿರುವ ಅಮೃತ್ ಪಾಲ್ ಸಿಂಗ್‌ನನ್ನು ಬೇಟೆಯಾಡಲು ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆತನ ಹಲವಾರು ಬೆಂಬಲಿಗರನ್ನು ಬಂಧಿಸಿದ್ದಾರೆ. ಸಿಖ್ ಧರ್ಮ ಎಂಬುದು ಶತಮಾನಗಳಿಂದ ಹಿಂದೂಗಳ ಜತೆಗೆ ಎರಕವಾಗಿ ಅನ್ಯೋನ್ಯತೆಯಿಂದ ಇರುವ ಧರ್ಮ. ಅವರು ಬೇರೆ ಎಂದು ಹಿಂದೂಗಳಿಗೆ ಎಂದೂ ಅನಿಸಿಯೇ ಇಲ್ಲ. ಇಂಥವರ ನಡುವೆ ಪ್ರತ್ಯೇಕತೆಯ ವಿಷಬೀಜ ಬಿತ್ತಲು ಯತ್ನಿಸುವ ದೇಶವಿರೋಧಿ ಸಂಚನ್ನು ಈಗಲೇ ಹೊಸಕಿ ಹಾಕಬೇಕಿದೆ. ಇದನ್ನು ಪೋಷಿಸುತ್ತಿರುವ ಕೆನಡಾ ಹಾಗೂ ಬ್ರಿಟನ್‌ನ ಕೆಲವು ರಾಜಕಾರಣಿಗಳ ಬಣ್ಣವನ್ನೂ ಬಯಲು ಮಾಡಬೇಕಿದೆ.
ಟಾಪ್ 10 ನ್ಯೂಸ್
ವಿಸ್ತಾರ TOP 10 NEWS: ರಾಜ್ಯಾದ್ಯಂತ ಮೋದಿ ಸಂಚಾರದಿಂದ, ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆವರೆಗಿನ ಪ್ರಮುಖ ಸುದ್ದಿಗಳಿವು
ದೇಶ, ವಿದೇಶ, ರಾಜ್ಯದಲ್ಲಿ ದಿನಪೂರ್ತಿ ನಡೆದ ಘಟನಾವಳಿಗಳಲ್ಲಿ ಆಯ್ದ ಪ್ರಮುಖ ಸುದ್ದಿಗಳು ವಿಸ್ತಾರ TOP 10 NEWS ನಲ್ಲಿ.
1. Modi in Karnataka: ಕಾರ್ಯಕರ್ತನ ಕಪಾಳಕ್ಕೇ ಹೊಡೆದವರು ಜನರಿಗೆ ಗೌರವ ನೀಡುತ್ತಾರಾ?: ಸಿದ್ದು ವಿರುದ್ಧ ಮೋದಿ ವಾಗ್ದಾಳಿ
ಯಾವ ಪಕ್ಷದಲ್ಲಿ ತನ್ನ ಕಾರ್ಯಕರ್ತನಿಗೇ ಗೌರವ ನೀಡದೆ ಕಪಾಳಕ್ಕೆ ಹೊಡೆಯಲಾಗುತ್ತದೆಯೋ ಆ ಪಕ್ಷವು ಜನತಾ ಜನಾರ್ದನನಿಗೆ ಹೇಗೆ ಗೌರವ ನೀಡುತ್ತದೆ? ಎಂದು ಪ್ರಶ್ನಿಸುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಕುರಿತು ಪ್ರಧಾನಿ ನರೇಂದ್ರ ಮೋದಿ (Modi in Karnataka) ವಾಗ್ದಾಳಿ ನಡೆಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. Modi in Karnataka: ನಾನು ಅತಿಥಿ ಅಲ್ಲ; ಇದೇ ಮಣ್ಣಿನ ಮಗ: ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ ಪ್ರಧಾನಿ ಮೋದಿ
ಚುನಾವಣೆಗಳು ಹತ್ತಿರವಾಗುತ್ತಿರುವಂತೆ ಚಿಕ್ಕಬಳ್ಳಾಪುರದ ನೆಲದಲ್ಲಿ ನಿಂತು, ತಾವೂ ಇದೇ ಮಣ್ಣಿನ ಮಗ ಎಂದು ಪ್ರಧಾನಿ ನರೇಂದ್ರ ಮೋದಿ (Modi in Karnataka) ಹೇಳಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಶ್ರೀ ಸತ್ಯ ಸಾಯಿ ರಾಜೇಶ್ವರಿ ಮೆಮೋರಿಯಲ್ ಬ್ಲಾಕ್ ಉದ್ಘಾಟನೆ ನೆರವೇರಿಸಿದ ನಂತರ ಮೋದಿ ಈ ಮಾತನ್ನು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮೋದಿ ಪ್ರವಾಸದ ಕುರಿತು ಎಲ್ಲ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
3. Congress First List: ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ: ವರುಣಾದಿಂದ ಸಿದ್ದರಾಮಯ್ಯ, ದೇವನಹಳ್ಳಿಯಲ್ಲಿ ಮುನಿಯಪ್ಪ
ರಾಜ್ಯ ವಿಧಾನಸಭೆ ಚುನಾವಣೆಯ ಕಾಂಗ್ರೆಸ್ ಸ್ಪರ್ಧಿಗಳ ಮೊದಲ ಪಟ್ಟಿ ಪ್ರಕಟವಾಗಿದ್ದು, ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. 124 ಕ್ಷೇತ್ರಗಳಿಗೆ ಸ್ಪರ್ಧಿಗಳ ಹೆಸರು ಅಂತಿಮಗೊಳಿಸಲಾಗಿದೆ. ಈ ನಡುವೆ ಮುನಿಯಪ್ಪ ಅವರು ದೇವನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಅವರು ರಾಜ್ಯ ರಾಜಕಾರಣಕ್ಕೆ ಮರಳಿದ್ದಾರೆ. ಮುನಿಯಪ್ಪ ದೇವನಹಳ್ಳಿಯಿಂದ ನಿಲ್ಲಲಿದ್ದಾರೆ ಎಂದು ವಿಸ್ತಾರ ನ್ಯೂಸ್ ನಾಲ್ಕು ತಿಂಗಳ ಹಿಂದೆಯೇ ವರದಿ ಮಾಡಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಓದಿಗಾಗಿ: Congress ticket : ಆರು ಹಾಲಿ ಕಾಂಗ್ರೆಸ್ ಶಾಸಕರ ಟಿಕೆಟ್ ಹೋಲ್ಡ್, ಮೂರು ಕಡೆ ಪಕ್ಷ ಬಿಟ್ಟು ಹೋದವರಿಗಾಗಿ ವೇಟಿಂಗ್!
4. Rahul Gandhi: ಕ್ಷಮೆಯಾಚಿಸಲು ನಾನು ಸಾವರ್ಕರ್ ಅಲ್ಲ, ಗಾಂಧಿ; ಅನರ್ಹತೆ ಬಳಿಕ ಕೇಂದ್ರಕ್ಕೆ ರಾಹುಲ್ ಚಾಟಿ
ಮಾನಹಾನಿ ಪ್ರಕರಣದಲ್ಲಿ ಸಿಲುಕಿ, ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದ ಹಿನ್ನೆಲೆಯಲ್ಲಿ ಲೋಕಸಭೆಯಿಂದ ಅನರ್ಹಗೊಂಡ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಮೊದಲ ಸುದ್ದಿಗೋಷ್ಠಿ ನಡೆಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. “ನನ್ನನ್ನು ಬಂಧಿಸಿ, ಜೈಲಿಗೆ ಕಳುಹಿಸಿ. ಆದರೆ, ನಾನು ದೇಶದ ಜನರ ಪರವಾಗಿ ಮಾತನಾಡುವುದನ್ನು ನಿಲ್ಲಿಸುವುದಿಲ್ಲ. ಅದಾನಿ ಪ್ರಕರಣದ ಕುರಿತು ಮಾತನಾಡುವುದನ್ನು ಬಿಡುವುದಿಲ್ಲ” ಎಂದು ಹೇಳಿದ್ದಾರೆ. ಹಾಗೆಯೇ, ಬಿಜೆಪಿ ಆಗ್ರಹದಂತೆ ಕ್ಷಮೆಯಾಚಿಸಲು ನಾನು ಸಾವರ್ಕರ್ ಅಲ್ಲ, ಗಾಂಧಿ ಎಂದು ಹೇಳಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. Panchamasali Reservation : ಪಂಚಮಸಾಲಿ ಹೋರಾಟದಲ್ಲಿ ಒಡಕು, ಮುಸ್ಲಿಮರಿಂದ ಕಿತ್ತು ಕೊಟ್ಟ ಮೀಸಲಾತಿ ಬೇಡ ಎಂದ ಕಾಶಪ್ಪನವರ್
ರಾಜ್ಯ ಸರ್ಕಾರ ಪರಿಷ್ಕೃತ ಮೀಸಲಾತಿ ನೀತಿ ಮೂಲಕ ಲಿಂಗಾಯತ ಪಂಚಮಸಾಲಿ (Panchamasali Reservation) ಸಮುದಾಯಕ್ಕೆ 2ಡಿ ಪ್ರವರ್ಗದಡಿ ಶೇ. 7ರಷ್ಟು ಮೀಸಲಾತಿ (ಹಿಂದಿನ 3ಸಿಗಿಂತ ಎರಡು ಶೇಕಡಾ ಹೆಚ್ಚು) ನೀಡಿದ್ದನ್ನು ಹೋರಾಟ ಸಮಿತಿ ಒಪ್ಪಿಕೊಂಡು ಎರಡು ವರ್ಷಗಳ ಹೋರಾಟವನ್ನು ಹಿಂದೆ ಪಡೆದಿದೆ. ಆದರೆ, ಈ ವಿಚಾರ ಸಮಿತಿಯಲ್ಲಿ ಬಿರುಕು ಮೂಡಿಸಿದೆ. ಹೋರಾಟದ ಮುಂಚೂಣಿಯಲ್ಲಿದ್ದ ಕಾಂಗ್ರೆಸ್‌ನ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಅವರು ಈ ಮೀಸಲಾತಿಯನ್ನು ಧಿಕ್ಕರಿಸಿದ್ದಾರೆ. ಮುಸ್ಲಿಮರಿಂದ ಕಿತ್ತುಕೊಡುವ ಮೀಸಲಾತಿ ಬೇಡ ಎಂದು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. Covid-19 Cases: ದೇಶದಲ್ಲಿ ಮತ್ತೆ ಕೊವಿಡ್ ಆತಂಕ; 146 ದಿನಗಳಲ್ಲೇ ಗರಿಷ್ಠ ಮಟ್ಟದ ಕೊರೊನಾ ಕೇಸ್ ದಾಖಲು
ದೇಶದಲ್ಲಿ ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ, ಕೊರೊನಾ ಸಾಂಕ್ರಾಮಿಕವೂ ಮತ್ತೆ ಹೆಚ್ಚುತ್ತಿದೆ. ಈಗೊಂದು ವಾರದಿಂದ ಪ್ರತಿದಿನ ದಾಖಲಾಗುವ ಕೊರೊನಾ ಕೇಸ್ಗಳ ಸಂಖ್ಯೆ (Covid-19 Cases) ಏರಿಕೆಯಾಗುತ್ತಿದೆ. 24ಗಂಟೆಯಲ್ಲಿ 1590 ಕೊರೊನಾ ಕೇಸ್ಗಳು ದಾಖಲಾಗಿದ್ದು, ಇದು ಕಳೆದ 146 ದಿನಗಳಲ್ಲೇ ಗರಿಷ್ಠ ಮಟ್ಟದ ಹೆಚ್ಚಳ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಹಾಗೇ, 24ಗಂಟೆಯಲ್ಲಿ 910 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆಯೀಗ 8601ಕ್ಕೆ ತಲುಪಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. Amritpal Singh: ಜಾಕೆಟ್ ಧರಿಸಿ, ಬಿಂದಾಸ್ ಆಗಿ ಪಟಿಯಾಲದಲ್ಲೇ ಓಡಾಡಿಕೊಂಡಿದ್ದ ಅಮೃತ್ ಪಾಲ್, ಇಲ್ಲಿದೆ ವಿಡಿಯೊ
ಖಲಿಸ್ತಾನಿಗಳ ನಾಯಕ, ಪಂಜಾಬ್‌ನಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದ ಅಮೃತ್‌ಪಾಲ್ ಸಿಂಗ್ (Amritpal Singh) ಬಂಧನಕ್ಕೆ ಒಂದು ವಾರದಿಂದ ಪಂಜಾಬ್ ಪೊಲೀಸರು ಹರಸಾಹಸಪಡುತ್ತಿದ್ದಾರೆ. ಮಾರ್ಚ್ 18ರಿಂದಲೂ ಪೊಲೀಸರು ಅಮೃತ್‌ಪಾಲ್‌ಗಾಗಿ ಶೋಧ ನಡೆಸುತ್ತಿದ್ದರೂ ಇದುವರೆಗೂ ಆತನನ್ನು ಬಂಧಿಸಲು ಸಾಧ್ಯವಾಗಿಲ್ಲ. ಇದು ಗುಪ್ತಚರ ವೈಫಲ್ಯ ಎಂದು ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ಛೀಮಾರಿ ಹಾಕಿದರೂ ಇದುವರೆಗೆ ಬಂಧಿಸಲು ಆಗಿಲ್ಲ. ಇದರ ಬೆನ್ನಲ್ಲೇ, ಅಮೃತ್‌ಪಾಲ್ ಸಿಂಗ್ ಪಂಜಾಬ್‌ನ ಪಟಿಯಾಲದಲ್ಲಿಯೇ ಓಡಾಡಿಕೊಂಡಿದ್ದ ವಿಡಿಯೊ ಈಗ ಲಭ್ಯವಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. PAK VS AFG: ಪಾಕಿಸ್ತಾನ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದ ಅಫಘಾನಿಸ್ತಾನ
ಅನುಭವಿ ಮೊಹಮ್ಮದ್ ನಬಿ(Mohammad Nabi) ಅವರ ಆಲ್ರೌಂಡರ್ ಆಟದ ನೆರವಿನಿಂದ ಪಾಕಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅಫಘಾನಿಸ್ತಾನ ತಂಡ ಆರು ವಿಕೆಟ್‌ಗಳ ಅಮೋಘ ಗೆಲುವು ಸಾಧಿಸಿತು. ಆ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಪಾಕಿಸ್ತಾನ ವಿರುದ್ಧ ಮೊಟ್ಟ ಮೊದಲ ಗೆಲುವು ದಾಖಲಿಸಿ ಇತಿಹಾಸ ನಿರ್ಮಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. ಹೊಸ ಅಂಕಣ: ಸೈಬರ್ ಮಿತ್ರ: ಜಾಣರಾಗಿ, ಜಾಗರೂಕರಾಗಿರಿ!
ವಿಶ್ವದಾದ್ಯಂತ ಸೈಬರ್ ವಂಚಕರು ನಮ್ಮ ಎರಡು ದುರ್ಬಲತೆಯನ್ನು ಬಳಸಿಕೊಳ್ಳಲು ನೋಡುತ್ತಿರುತ್ತಾರೆ. ಮೊದಲನೆಯದು ಭಯ, ಎರಡನೆಯದು ದುರಾಸೆ. ಹಾಗಾಗಿ, ಇಂದಿನ ಈ ಸೈಬರ್ ಬ್ರಹ್ಮಾಂಡದಲ್ಲಿ ವ್ಯವಹರಿಸುವಾಗ ಜಾಣರಾಗಿ, ಜಾಗರೂಕರಾಗಿರಿ. ಸುಖವಾದ ಸೈಬರ್ ಸರ್ಫ್‌ಗೆ ಹನ್ನೆರಡು ಸೂತ್ರಗಳು ಇಲ್ಲಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. Viral News: ತನ್ನ ಶಿಕ್ಷಣಕ್ಕೆ ಕೂಡಿಟ್ಟಿದ್ದ ಹಣ ಅಣ್ಣನ ಮದುವೆಗೆ ಬಳಕೆ; ಅಪ್ಪ-ಅಮ್ಮನ ವಿರುದ್ಧವೇ ಕೇಸ್ ದಾಖಲಿಸಿದ ಪುತ್ರಿ!
ಆಸ್ತಿ ವಿಚಾರದಲ್ಲಿ ಇಲ್ಲವೇ ಕೌಟುಂಬಿಕ ಜಗಳದ ವಿಚಾರದಲ್ಲಿ ಮಕ್ಕಳು ತಂದೆ-ತಾಯಿ ವಿರುದ್ಧ ಪ್ರಕರಣ ದಾಖಲಿಸುವುದು ಇತ್ತೀಚೆಗೆ ಸಾಮಾನ್ಯವಾಗಿಬಿಟ್ಟಿದೆ. ಆದರೆ ಇಲ್ಲೊಬ್ಬ ಹೆಣ್ಣು ಮಗಳು ತನ್ನ ಶಿಕ್ಷಣಕ್ಕೆಂದು ದೊಡ್ಡಮ್ಮ ಕೊಟ್ಟಿದ್ದ ಹಣವನ್ನು ತಂದೆ-ತಾಯಿಯು ತನ್ನ ಅಣ್ಣನ ಮದುವೆಗೆ ಬಳಸಿದರು ಎನ್ನುವ ಕಾರಣಕ್ಕೆ ಪೋಷಕರ ವಿರುದ್ಧವೇ ಪ್ರಕರಣ (Viral News) ದಾಖಲಿಸಿದ್ದಾಳೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಪ್ರಮುಖ ಸುದ್ದಿಗಳಿವು
- PUC Exam 2023 : ದ್ವಿತೀಯ ಪಿಯುಸಿ ಪರೀಕ್ಷೆ; ವಿಷಯವಾರು ಮಾದರಿ ಉತ್ತರ ಪ್ರಕಟ
- Veerappan Daughter: ವೀರಪ್ಪನ್ ಮಗಳು ವಿಜಯಲಕ್ಷ್ಮೀ ಸಿನಿರಂಗಕ್ಕೆ ಎಂಟ್ರಿ
- Wall collapse: ತಡೆಗೋಡೆ ನಿರ್ಮಾಣ ವೇಳೆ ಗುಡ್ಡ ಕುಸಿತ; ಮಣ್ಣಿನಡಿ ಸಿಲುಕಿ ಮೂವರು ಕಾರ್ಮಿಕರು ಮೃತ್ಯು
- ಮಕ್ಕಳ ಕಥೆ: ಮುಗ್ಧ ಶಿಷ್ಯರು ಮತ್ತು ಕುದುರೆ ಮೊಟ್ಟೆ
- Pakistan Economic Crisis: ಚುನಾವಣೆ ನಡೆಸಲೂ ಕಾಸಿಲ್ಲ ನಮ್ಮ ಬಳಿ ಎಂದ ಪಾಕಿಸ್ತಾನ ರಕ್ಷಣಾ ಸಚಿವ
- KPSC Recruitment 2023 : ಪಿಯುಸಿ ಓದಿದವರಿಗೆ ಕಿರಿಯ ಲೆಕ್ಕ ಸಹಾಯಕರಾಗುವ ಅವಕಾಶ; ಇಂದಿನಿಂದ ಅರ್ಜಿ ಸಲ್ಲಿಕೆ ಶುರು
- Yogi Adityanath: ನಿರಂತರ 6 ವರ್ಷ ಸಿಎಂ, ಯೋಗಿ ಹೊಸ ದಾಖಲೆ; ಬುಲ್ಡೋಜರ್ ಬಾಬಾನಿಂದ ವಿಕಾಸ ಪುರುಷನವರೆಗೆ…
-
ಅಂಕಣ19 hours ago
Ramzan Fasting : ರಂಜಾನ್ ವ್ರತಾಚರಣೆಗಿದೆ ವೈಜ್ಞಾನಿಕ ದೃಷ್ಟಿಕೋನ; ಆರೋಗ್ಯ ವರ್ಧನೆಗೆ ಇದು ಎಷ್ಟು ಸಹಕಾರಿ?
-
ಅಂಕಣ20 hours ago
ರಾಜ ಮಾರ್ಗ ಅಂಕಣ : ಎಸೆಸೆಲ್ಸಿ ವಿದ್ಯಾರ್ಥಿಗಳು ಇನ್ನು ಆರೇ ದಿನ ಓದಿದರೂ ಪಾಸ್ ಆಗಬಹುದು! ಹಾಗಿದ್ರೆ ಏನು ಮಾಡಬೇಕು?
-
ಕರ್ನಾಟಕ19 hours ago
Modi In Karnataka: ಕೆಆರ್ ಪುರ ಮೆಟ್ರೋ ಉದ್ಘಾಟನೆಗೆ ಮೋದಿ ಆಗಮನ; ಎಲ್ಲೆಲ್ಲಿ ವಾಹನ ನಿರ್ಬಂಧ, ಮಾರ್ಗ ಬದಲು?
-
ಅಂಕಣ21 hours ago
ವಿಸ್ತಾರ ಅಂಕಣ: ಭಾರತಕ್ಕೆ ಈಗ ಬೇಕಿರುವುದು ʼಈಸ್ ಆಫ್ ಡೂಯಿಂಗ್ ಪಾಲಿಟಿಕ್ಸ್ʼ ಸೂಚ್ಯಂಕ
-
ಕರ್ನಾಟಕ18 hours ago
Congress Ticket list : ಸಿದ್ದರಾಮಯ್ಯ ವರುಣ ಕೇಳಿದ್ರು ಕೊಟ್ವಿ, ಕೋಲಾರ ಕೇಳಿದ್ದರೆ ಅದನ್ನೇ ಕೊಡುತ್ತಿದ್ದೆವು; ಡಿ.ಕೆ. ಶಿವಕುಮಾರ್
-
ಕರ್ನಾಟಕ13 hours ago
Modi in Karnataka: ಮೆಟ್ರೊ ರೈಲು ಮಾರ್ಗ ಉದ್ಘಾಟಿಸಿ ಸಾಮಾನ್ಯರಂತೆ ಪ್ರಯಾಣಿಸಿದ ಪ್ರಧಾನಿ ಮೋದಿ
-
ಕರ್ನಾಟಕ17 hours ago
Modi In Karnataka: ಇಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ; ಪ್ರವಾಸದ ಇಂಚಿಂಚು ಮಾಹಿತಿ ಇಲ್ಲಿದೆ
-
ಕರ್ನಾಟಕ18 hours ago
Congress First List: ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ: ವರುಣಾದಿಂದ ಸಿದ್ದರಾಮಯ್ಯ, ದೇವನಹಳ್ಳಿಯಲ್ಲಿ ಮುನಿಯಪ್ಪ