Anurag Thakur: ಇಂಡಿಯಾ ಕೂಟದ ಕೊಳಕು ರಾಜಕಾರಣ ತೆರೆದಿಟ್ಟ ಅನುರಾಗ್ ಠಾಕೂರ್; ಈ ವಿಡಿಯೊ ತಪ್ಪದೇ ನೋಡಿ ಎಂದ ಮೋದಿ! - Vistara News

ದೇಶ

Anurag Thakur: ಇಂಡಿಯಾ ಕೂಟದ ಕೊಳಕು ರಾಜಕಾರಣ ತೆರೆದಿಟ್ಟ ಅನುರಾಗ್ ಠಾಕೂರ್; ಈ ವಿಡಿಯೊ ತಪ್ಪದೇ ನೋಡಿ ಎಂದ ಮೋದಿ!

Anurag Thakur:ಸಂಸತ್‌ನಲಿ ಮಾತನಾಡಿದ ಅನುರಾಗ್‌ ಠಾಕೂರ್‌, “ದೇಶದಲ್ಲಿ ಜಾತಿಗಣತಿ ಬಗ್ಗೆ ತುಂಬ ಮಾತನಾಡುತ್ತಾರೆ. ಜಾತಿಗಣತಿಯನ್ನು ಲೋಕಸಭೆಯಲ್ಲಿ ಮಂಡಿಸುತ್ತೇವೆ ಎನ್ನುತ್ತಾರೆ. ಆದರೆ, ಜಾತಿಗಣತಿ ಬಗ್ಗೆ ಮಾತನಾಡುವವರಿಗೇ ತಮ್ಮ ಜಾತಿ ಯಾವುದು ಎಂದು ಗೊತ್ತಿಲ್ಲ” ಎಂಬುದಾಗಿ ಅನುರಾಗ್‌ ಠಾಕೂರ್‌ ಟೀಕಿಸಿದ್ದರು.

VISTARANEWS.COM


on

anurag thakur
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಜಾತಿಗಣತಿ ವಿಚಾರವಾಗಿ ನಿನ್ನೆ ಸಂಸತ್‌ನಲ್ಲಿ ವಿಪಕ್ಷ ನಾಯಕ ರಾಹುಲ್‌ ಗಾಂಧಿ(Rahul Gandhi) ಮತ್ತು ಸಮಾವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌(Akhilesh Yadav)ಗೆ ಸಖತ್‌ ಟಾಂಗ್‌ ಕೊಟ್ಟ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌(Anurag Thakur)ಗೆ ಪ್ರಧಾನಿ ನರೇಂದ್ರ ಮೋದಿ(PM Narendra Modi) ಮೆಚ್ಚು ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಿನ್ನೆ ನಡೆದ ವಾಕ್ಸಮರದ ವಿಡಿಯೋವನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಎಲ್ಲರೂ ಕೇಳಿ ಎಂದು ಮನವಿ ಮಾಡಿದ್ದಾರೆ.

ಸಂಸತ್‌ನಲಿ ಮಾತನಾಡಿದ ಅನುರಾಗ್‌ ಠಾಕೂರ್‌, “ದೇಶದಲ್ಲಿ ಜಾತಿಗಣತಿ ಬಗ್ಗೆ ತುಂಬ ಮಾತನಾಡುತ್ತಾರೆ. ಜಾತಿಗಣತಿಯನ್ನು ಲೋಕಸಭೆಯಲ್ಲಿ ಮಂಡಿಸುತ್ತೇವೆ ಎನ್ನುತ್ತಾರೆ. ಆದರೆ, ಜಾತಿಗಣತಿ ಬಗ್ಗೆ ಮಾತನಾಡುವವರಿಗೇ ತಮ್ಮ ಜಾತಿ ಯಾವುದು ಎಂದು ಗೊತ್ತಿಲ್ಲ” ಎಂಬುದಾಗಿ ಅನುರಾಗ್‌ ಠಾಕೂರ್‌ ಟೀಕಿಸಿದರು. ಇದೀಗ ಈ ವಿಡಿಯೋವನ್ನು ಪ್ರಧಾನಿ ಮೋದಿ ಹಂಚಿಕೊಂಡಿದ್ದು, ನನ್ನ ಸಂಪುಟ ಸಹೋದ್ಯೋಗಿಯ ಭಾಷಣವನ್ನು ಕೇಳಲೇಬೇಕು. ನೈಜಾಂಶ ಮತ್ತು ಹಾಸ್ಯಭರಿತವಾದ ಅವರ ಮಾತುಗಳು ಇಂಡಿ ಒಕ್ಕೂಟದ ಕೊಳಕು ರಾಜಕೀಯವನ್ನು ಬಯಲಿಗೆಳೆದಿದೆ ಎಂದಿದ್ದಾರೆ.

“ದೇಶದಲ್ಲಿ ಜಾತಿಗಣತಿ ಬಗ್ಗೆ ತುಂಬ ಮಾತನಾಡುತ್ತಾರೆ. ಜಾತಿಗಣತಿಯನ್ನು ಲೋಕಸಭೆಯಲ್ಲಿ ಮಂಡಿಸುತ್ತೇವೆ ಎನ್ನುತ್ತಾರೆ. ಆದರೆ, ಜಾತಿಗಣತಿ ಬಗ್ಗೆ ಮಾತನಾಡುವವರಿಗೇ ತಮ್ಮ ಜಾತಿ ಯಾವುದು ಎಂದು ಗೊತ್ತಿಲ್ಲ” ಎಂಬುದಾಗಿ ಅನುರಾಗ್‌ ಠಾಕೂರ್‌ ಟೀಕಿಸಿದರು. ಇದಕ್ಕೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಅವರು ತಿರುಗೇಟು ನೀಡಿದರು. “ಬೇರೆಯವರ ಜಾತಿಯನ್ನು ಕೇಳುವುದು ಎಷ್ಟು ಸರಿ” ಎಂದು ತಿರುಗೇಟು ನೀಡಿದರು.

ಅನುರಾಗ್‌ ಠಾಕೂರ್‌ ಹೇಳಿಕೆಗೆ ರಾಹುಲ್‌ ಗಾಂಧಿ ಪ್ರತ್ಯುತ್ತರ ನೀಡಿದರು. “ನೀವು ನನ್ನನ್ನು ಎಷ್ಟು ಅವಮಾನಿಸುತ್ತೀರೋ ಅವಮಾನಿಸಿ. ಆದರೆ, ನಾವು ಸಂಸತ್‌ನಲ್ಲಿ ಜಾತಿಗಣತಿ ವಿಧೇಯಕ ಮಂಡಿಸುತ್ತೇವೆ ಎಂಬುದನ್ನು ನೀವು ಮರೆಯದಿರಿ” ಎಂದರು. “ಅನುರಾಗ್‌ ಠಾಕೂರ್‌ ಅವರು ನನ್ನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ನನ್ನನ್ನು ಅವಮಾನಿಸಿದ್ದಾರೆ. ಆದರೆ, ನಾನು ಅವರು ಕ್ಷಮೆ ಕೇಳಿ ಎಂಬುದಾಗಿ ಆಗ್ರಹಿಸುವುದಿಲ್ಲ. ಎಷ್ಟು ಬೇಕಾದರೂ ಅವಮಾನ ಮಾಡಲಿ” ಎಂದರು.

ಸಂಸತ್‌ನಲ್ಲಿ ಸೋಮವಾರ (ಜುಲೈ 29) ರಾಹುಲ್‌ ಗಾಂಧಿ ಅವರು ಕೇಂದ್ರದ ವಿರುದ್ಧ ಹರಿಹಾಯ್ದಿದ್ದರು. ದೇಶದ ಜನರ ಸುತ್ತ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹೆಣೆದ ಚಕ್ರವ್ಯೂಹವನ್ನು ನಾವು ಭೇದಿಸುತ್ತೇವೆ. ಚಕ್ರವ್ಯೂಹವನ್ನು ನಮಗೆ ಭೇದಿಸುವುದು ಗೊತ್ತಿದೆ. ಯಾವ ಜಾತಿಗಣತಿ ಎಂದರೆ ನೀವು (ಬಿಜೆಪಿ) ಹೆದರುತ್ತೀರೋ, ಅದೇ ಜಾತಿಗಣತಿಯನ್ನು ಇದೇ ಸದನದಲ್ಲಿ ನಾವು ಮಂಡಿಸುತ್ತೇವೆ. ನಿಮಗೆ ಇಷ್ಟ ಇದೆಯೋ ಇಲ್ಲವೋ, ನಾವು ಇದೇ ಸದನದಲ್ಲಿ ಜಾತಿಗಣತಿಯನ್ನು ಮಂಡಿಸುತ್ತೇವೆ. ದೇಶದ ಜನ ಅರ್ಜುನನ ರೀತಿ ಚಕ್ರವ್ಯೂಹವನ್ನು ಭೇದಿಸಲಿದ್ದಾರೆ ಎಂದು ರಾಹುಲ್‌ ಗಾಂಧಿ ಹೇಳಿದರು.

ಇದನ್ನೂ ಓದಿ:Rahul Gandhi: ರಾಹುಲ್‌ ಮಾತಿಗೆ ಹಣೆ ಚಚ್ಚಿಕೊಂಡು, ಮುಖ ಮುಚ್ಚಿಕೊಂಡ ಸಚಿವೆ ನಿರ್ಮಲಾ: ಭಾರೀ ವೈರಲಾಗ್ತಿದೆ ಈ ವಿಡಿಯೋ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Wayanad Landslide: ಮಣ್ಣಿನ ರಾಶಿಯಂತಾದ ಮುಂಡಕೈ; 400 ಮನೆಗಳ ಪೈಕಿ ಉಳಿದಿದ್ದು 30 ಮಾತ್ರ!

Wayanad Landslide: ವಯನಾಡಿನಲ್ಲಿ ಮಂಗಳವಾರ ಸಂಭವಿಸಿದ ಭೀಕರ ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 168ಕ್ಕೆ ಏರಿಕೆಯಾಗಿದ್ದು, ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ಮುಂಡಕೈ ಗ್ರಾಮವೇ ನಾಮಾವಶೇಷವಾಗಿದೆ! ಇಲ್ಲಿದ್ದ 400 ಮನೆಗಳ ಪೈಕಿ ಉಳಿದಿರುವುದು 30 ಮಾತ್ರ!

VISTARANEWS.COM


on

Wayanad Landslide
Koo

ತಿರುವನಂತಪುರಂ: ಭಾರಿ ಮಳೆಯ ಹೊಡೆತಕ್ಕೆ ಸಿಲುಕಿ ದೇವರನಾಡು ಕೇರಳ ಅಕ್ಷರಶಃ ಕಂಗಾಲಾಗಿದೆ. ವಯನಾಡಿನಲ್ಲಿ ಮಂಗಳವಾರ ಸಂಭವಿಸಿದ ಭೀಕರ ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 168ಕ್ಕೆ ಏರಿಕೆಯಾಗಿದ್ದು, ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ಮನೆ, ಶಾಲೆ, ವಾಹನ ಎಲ್ಲವೂ ಕೊಚ್ಚಿಕೊಂಡು ಹೋಗಿದೆ. ಸೇನಾ ಸಿಬ್ಬಂದಿ ಸೇರಿದಂತೆ ಹಲವರು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ ಬೆಚ್ಚಿ ಬೀಳಿಸುವ ಮಾಹಿತಿಯೊಂದು ಹೊರ ಬಿದ್ದಿದ್ದು, ಮುಂಡಕೈ ಗ್ರಾಮವೇ ನಾಮಾವಶೇಷವಾಗಿದೆ! ಇಲ್ಲಿದ್ದ 400 ಮನೆಗಳ ಪೈಕಿ ಉಳಿದಿರುವುದು 30 ಮಾತ್ರ! (Wayanad Landslide).

ಭೂಕುಸಿತದಿಂದ ಅತೀ ಹೆಚ್ಚು ತೊಂದರೆಗೊಳಗಾದ ಮುಂಡಕೈಯಲ್ಲಿನ ಪರಿಸ್ಥಿತಿ ಶೋಚನೀಯವಾಗಿ ಮುಂದುವರಿದಿದೆ. ʼʼಈ ಗ್ರಾಮದಲ್ಲಿದ್ದ ಸುಮಾರು 400 ಮನೆಗಳ ಪೈಕಿ ಬಾಕಿ ಉಳಿದಿರುವುದು 30 ಮನೆ ಮಾತ್ರʼʼ ಎಂದು ಪಂಚಾಯತ್‌ ಮೂಲಗಳು ತಿಳಿಸಿವೆ.

ಇಲ್ಲಿನ ರಕ್ಷಣಾ ಕಾರ್ಯಾಚರಣೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಬೈಲಿ ಸೇತುವೆ ನಿರ್ಮಿಸಲು ಸೇನೆ ಯೋಜನೆ ರೂಪಿಸಿದ್ದು, ಅದಕ್ಕಾಗಿ ಸಾಮಗ್ರಿಗಳನ್ನು ಹೊತ್ತ ವಿಶೇಷ ವಿಮಾನ ಕಣ್ಣೂರು ವಿಮಾನ ನಿಲ್ದಾಣಕ್ಕೆ ತಲುಪಿದೆ. 18 ಲಾರಿಗಳ ಮೂಲಕ ಇದನ್ನು ಮುಂಡಕೈಗೆ ತಲುಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ʼʼಬೈಲಿ ಸೇತುವೆ ನಿರ್ಮಾಣದಿಂದ ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆಗೆ ಇನ್ನಷ್ಟು ವೇಗ ಸಿಗಲಿದೆʼʼ ಎಂದು ಸಚಿವ ಕೆ.ರಾಜನ್‌ ತಿಳಿಸಿದ್ದಾರೆ. ಜತೆಗೆ ಸೇನೆಯ 3 ಯೂನಿಟ್‌ ಮತ್ತು ಡಾಗ್‌ ಸ್ಕ್ವಾಡ್‌ ಕೂಡ ಸ್ಥಳಕ್ಕೆ ಆಗಮಿಸಲಿದೆ ಎಂದು ಅವರ ಹೇಳಿದ್ದಾರೆ.

ಜತೆಗೆ ದುರಂತ ನಿವಾರಣೆಗಾಗಿ ಇರುವ ಸ್ಥಳೀಯ ಸಂಸ್ಥೆಗಳ ಫಂಡ್‌ ಉಪಯೋಗಿಸಲೂ ಅನುಮತಿ ನೀಡಲಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮತ್ತು ರಾಜ್ಯಪಾಲ ಆರಿಫ್‌ ಮುಹಮ್ಮದ್‌ ಖಾನ್‌ ಇಂದು ದುರಂತ ಪೀಡಿತ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಇವರಲ್ಲದೆ ಸುಮಾರು 6 ಸಚಿವರು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದು, ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಅಗತ್ಯವಿರುವ ಎಲ್ಲ ನೆರವು ನೀಡಿವುದಾಗಿ ರಾಜ್ಯಪಾಲರು ಘೋಷಿಸಿದ್ದಾರೆ. ಅದೇ ರೀತಿ ದೇಶದ ಎಲ್ಲ ಭಾಗಗಳಿಂದಲೂ ಸಹಾಯಹಸ್ತ ದೊರೆಯುವ ವಿಶ್ವಾಸವಿದೆ ಎಂದಿದ್ದಾರೆ. ಮುಖ್ಯಮಂತ್ರಿ ಹೇಳಿದಂತೆ 2018 ಮತ್ತು 2019ರ ದುರಂತದಿಂದ ಪಾರಾದಂತೆ ಈ ಅವಘಡದಿಂದಲೂ ಕೇರಳ ಚೇತರಿಸಿಕೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

123 ಮೃತದೇಹಗಳ ಪೋಸ್ಟ್‌ಮಾರ್ಟಂ ಪೂರ್ಣ

ಮೃತಪಟ್ಟವರ ಪೈಕಿ 75 ಮಂದಿಯ ಗುರುತು ಪತ್ತೆಯಾಗಿದೆ. ಸುಮಾರು 123 ಮೃತದೇಹಗಳ ಪೋಸ್ಟ್‌ಮಾರ್ಟಂ ಪೂರ್ತಿಯಾಗಿದ್ದು, ಸಾಮೂಹಿಕವಾಗಿ ಶವ ಶಂಸ್ಕಾರ ನಡೆಸಲಾಗಿದೆ. ನೀರಿನಲ್ಲಿ ಕೊಚ್ಚಿ ಹೋಗಿ ಮಲಪ್ಪುರಂನಲ್ಲಿ ಪತ್ತೆಯಾದ ಮೃತದೇಹವನ್ನು ವಯನಾಡಿಗೆ ಸಾಗಿಸಲಾಗವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಚಿವೆ ಸಂಚರಿಸುತ್ತಿದ್ದ ಕಾರು ಅಪಘಾತ

ವಯನಾಡಿಗೆ ತೆರಳುತ್ತಿದ್ದ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಅವರ ಕಾರು ಮಲಪ್ಪುರಂನಲ್ಲಿ ಇಂದು ಬೆಳಿಗ್ಗೆ ಅಪಘಾತಕ್ಕೀಡಾಗಿದೆ. ಮಂಜೇರಿ ಎಂಬಲ್ಲಿ ದ್ವಿಚಕ್ರ ವಾಹನಕ್ಕೆ ಸಚಿವೆ ಸಂಚರಿಸುತ್ತಿದ್ದ ಕಾರು ಡಿಕ್ಕಿ ಹೊಡೆದು ಅವಘಡ ನಡೆದಿದ್ದು, ಅವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಸದ್ಯ ಅವರನ್ನು ಮಂಜೇರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ದ್ವಿಚಕ್ರ ವಾಹನ ಸವಾರನಿಗೂ ಗಾಯಗಳಾಗಿವೆ.

ಇದನ್ನೂ ಓದಿ: Wayanad Landslide: ವಯನಾಡ್‌ ಅಕ್ಷರಶಃ ಸ್ಮಶಾನ; ಭೂಕುಸಿತ ಸ್ಥಳಕ್ಕೆ ರಾಹುಲ್‌, ಪ್ರಿಯಾಂಕಾ ಭೇಟಿ ಸ್ಥಗಿತ

Continue Reading

ಮಂಡ್ಯ

Wayanad Landslide: ಮಂಡ್ಯದ 9 ಜನರ ಕುಟುಂಬ ಭೂಕುಸಿತದಲ್ಲಿ ಸಂಪೂರ್ಣ ಕಣ್ಮರೆ

Wayanad Landslide: ಸೋಮವಾರ ನಡೆದ ಭಾರೀ ಭೂಕುಸಿತದಲ್ಲಿ ಮಂಡ್ಯ ಮೂಲದ ಕುಟುಂಬದ 9 ಜನ ಕಾಣೆಯಾಗಿದ್ದಾರೆ. ಈ ಪೈಕಿ ಮೂವರ ಶವಗಳನ್ನು ರಕ್ಷಣಾ ತಂಡಗಳು ಹೊರ ತೆಗೆದಿವೆ. ಮೂಲತಃ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಈ ಕುಟುಂಬ ಇಲ್ಲಿನ ಟೀ ಎಸ್ಟೇಟ್‌ನಲ್ಲಿ ಕೂಲಿ ಕಾರ್ಮಿಕರಾಗಿದ್ದರು.

VISTARANEWS.COM


on

wayanad landslide mandya family
Koo

ಚಾಮರಾಜನಗರ: ಭಯಾನಕ ವೈನಾಡ್‌ ಭೂಕುಸಿತ (Wayanad Landslide, Kerala Landslide) ದುರಂತದಲ್ಲಿ ಮಂಡ್ಯ ಮೂಲದ ಇಡೀ ಕುಟುಂಬವೇ (Mandya Family swept) ಕೊಚ್ಚಿಹೋಗಿದೆ. 9 ಜನರ ಕುಟುಂಬ ಸಂಪೂರ್ಣ ನಾಶವಾಗಿದ್ದು, ಮೂವರ ಶವ ಪತ್ತೆಯಾಗಿದೆ. ಇನ್ನೂ ಆರು ಮಂದಿಯ ದೇಹಗಳು ಪತ್ತೆಯಾಗಬೇಕಿವೆ.

ಸೋಮವಾರ ನಡೆದ ಭಾರೀ ಭೂಕುಸಿತದಲ್ಲಿ ಮಂಡ್ಯ ಮೂಲದ ಕುಟುಂಬದ 9 ಜನ ಕಾಣೆಯಾಗಿದ್ದಾರೆ. ಈ ಪೈಕಿ ಮೂವರ ಶವಗಳನ್ನು ರಕ್ಷಣಾ ತಂಡಗಳು ಹೊರ ತೆಗೆದಿವೆ. ಮೂಲತಃ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಈ ಕುಟುಂಬ ಇಲ್ಲಿನ ಟೀ ಎಸ್ಟೇಟ್‌ನಲ್ಲಿ ಕೂಲಿ ಕಾರ್ಮಿಕರಾಗಿದ್ದರು. ಸಾವಿತ್ರಿ, ಅವರ ಮೊಮ್ಮಗ ಅಚ್ಚು, ಸವಿತಾ ಎಂಬವರ ಪುತ್ರ ಶ್ರೀಕುಟ್ಟಿ ಸಾವಿಗೀಡಾಗಿರುವುದು ಖಚಿತವಾಗಿದೆ. ಇನ್ನುಳಿದ ಆರು ಜನರಿಗಾಗಿ ಹುಡುಕಾಟ ಮುಂದುವರಿದಿದೆ. ಇವರು ಕೇರಳಕ್ಕೆ ಬಂದು ನೆಲೆಸಿ 30 ವರ್ಷಗಳು ಆಗಿವೆ.

ಒಂದು ಮೆಸೇಜ್‌ನಿಂದ ಉಳಿಯಿತು ಜೀವ! ಪಾರಾದ ಕನ್ನಡಿಗ ಕಾರು ಚಾಲಕ

ಬೆಂಗಳೂರು: ಒಂದು ಅಲರ್ಟ್‌ ಮೆಸೇಜ್‌ ಪರಿಣಾಮ ಕನ್ನಡಿಗ ಕಾರು ಚಾಲಕನೊಬ್ಬ ವೈನಾಡಿನ ರುದ್ರಭಯಾನಕ ಭೂಕುಸಿತದ ನಡುವೆ ಜೀವ ಉಳಿಸಿಕೊಂಡಿದ್ದಾರೆ. ಸಾವಿನೂರಿಂದ ಈತ ಬಚಾವ್ ಆಗಿ ಬಂದದ್ದೇ ರೋಚಕ. ಮಿಡ್‌ನೈಟ್ ಬಂದ ಅದೊಂದು ಮೆಸೇಜ್ ಯುವಕನ ಪ್ರಾಣ ಉಳಿಸಿದ ಕತೆ ಇಲ್ಲಿದೆ.

ಬೆಂಗಳೂರಿನಲ್ಲಿ ಟ್ಯಾಕ್ಸಿ ಡ್ರೈವರ್ ಆಗಿರುವ ಹಾವೇರಿ ಮೂಲದ ಮಂಜುನಾಥ್‌, ಇಬ್ಬರು ಯುವಕರು ಹಾಗೂ ಯುವತಿಯರನ್ನು ಬಾಡಿಗೆ ಕರೆದುಕೊಂಡು ವೈನಾಡ್‌ಗೆ ಹೋಗಿದ್ದರು. ದಂಪತಿಗಳು ಉತ್ತರ ಭಾರತ ಮೂಲದವರು. ಎರಡೂ ಜೋಡಿ ವಯನಾಡ್‌ನ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದರು.

ಮಂಜುನಾಥ್ ರೆಸಾರ್ಟ್‌ನಿಂದ ಸ್ವಲ್ಪ ದೂರದಲ್ಲಿ ಕಾರು ನಿಲ್ಲಿಸಿ, ಅದೇ ಕಾರಿನಲ್ಲಿ ರಾತ್ರಿ ನಿದ್ದೆಗೆ ಜಾರಿದ್ದರು. ಮಧ್ಯರಾತ್ರಿ ಒಂದು ಗಂಟೆ 15 ನಿಮಿಷಕ್ಕೆ ಭೂ ಕುಸಿತವಾಗಿದೆ. ಇದರಿಂದ ರೆಸಾರ್ಟ್‌ನಲ್ಲಿದ್ದ ಹಲವರು ಮಣ್ಣುಪಾಲಾಗಿದ್ದಾರೆ. ಆದರೆ ಚಾಲಕ ಇದ್ಯಾವುದರ ಪರಿವೆಯೇ ಇಲ್ಲದೆ ನಿದ್ದೆಗೆ ಜಾರಿದ್ದರು. ಭೂಕುಸಿತದ ಬಳಿಕ ನದಿ ಪಾತ್ರ ವಿಶಾಲವಾಗಿದ್ದು, 15 ಅಡಿ ಅಗಲದ ನದಿ 150 ಅಡಿಗಳಷ್ಟು ಅಗಲವಾಗಿ ಮಣ್ಣು ಕಲ್ಲು ಮರಗಳನ್ನು ತುಂಬಿಕೊಂಡು ಅಬ್ಬರಿಸಿ ಹರಿದಿದೆ. ಮಂಜುನಾಥ್‌ ಕಾರಿಗೂ ಜಲದಿಗ್ಬಂಧನವಾಗಿದೆ.

ನೀರಿನ ಹೊಡೆತಕ್ಕೆ ಕಾರು ಉಲ್ಟಾ ಮುಖ ಮಾಡಿದೆ. ಈ ವೇಳೆ ಚಾಲಕ ತರಾತುರಿಯಲ್ಲಿ ಕಾರ್ ಚಲಾಯಿಸಲು ಮುಂದಾಗಿದ್ದ. ಕಾರು ಆನ್ ಆಗುತ್ತಿದ್ದಂತೆ ಬೆಂಗಳೂರಿನಲ್ಲಿದ್ದ ಕಾರಿನ‌‌ ಮಾಲಕ ಸಚಿನ್‌ಗೆ ಅಲರ್ಟ್‌ ಮೆಸೇಜ್ ಹೋಗಿದೆ. ಸಚಿನ್‌ ಮೊಬೈಲ್‌ನಲ್ಲಿ ಕಾರಿನ ಆಕ್ಸೆಸ್ ಹೊಂದಿದ್ದರು. ಜಿಪಿಎಸ್ ಆನ್ ಆಗುತ್ತಿದ್ದಂತೆ ಆಟೋಮ್ಯಾಟಿಕ್ ಮೆಸೇಜ್ ಬಂದಿತ್ತು. ಹೊತ್ತಲ್ಲದ ಹೊತ್ತಿನಲ್ಲಿ ಗಾಡಿ ಆನ್ ಆದ ಮೆಸೇಜ್ ನೋಡಿ ಮಾಲೀಕ ಚಕಿತರಾಗಿ, ಕೂಡಲೇ ಈ ವಿಚಾರವಾಗಿ ಚಾಲಕನಿಗೆ ಕಾಲ್ ಮಾಡಿದ್ದಾರೆ.

ಈ ವೇಳೆ ಪ್ರವಾಹದ ಬಗ್ಗೆ ಚಾಲಕ ಮಂಜುನಾಥ್‌ ವಿವರಿಸಿದ್ದರು. ಮಂಜುನಾಥ್‌ಗೆ ಧೈರ್ಯ ತುಂಬಿದ್ದ ಮಾಲೀಕ ಸಚಿನ್, ಅದೇ ಜಾಗದಲ್ಲಿದ್ದ ತನ್ನ ಪರಿಚಯಸ್ಥರಿಗೆ ಮಾಹಿತಿ ನೀಡಿದ್ದರು. ಇದರಿಂದ ಚಾಲಕನ ಸಹಾಯಕ್ಕೆ ಜನ ಬಂದಿದ್ದಾರೆ. ನಂತರ ಜಿಪಿಎಸ್ ಟ್ರ್ಯಾಕ್ ಮಾಡಿ ಚಾಲಕನನ್ನು ಕೆಸರು ನೀರಿನ ಮಧ್ಯದಿಂದ ರಕ್ಷಣೆ ಮಾಡಲಾಗಿದೆ. ಬದುಕುಳಿದು ಬಂದಿರುವ ಮಂಜುನಾಥ್‌, ತಮ್ಮನ್ನು ಕಾಪಾಡಿದವರಿಗೆ ಧನ್ಯವಾದ ಹೇಳಿದ್ದಾರೆ.

ಇದನ್ನೂ ಓದಿ: Wayanad Landslide: ಭಯಾನಕ ಸಾವಿನಿಂದ ರಕ್ಷಿಸಿತು ಸಾಕಿದ ಹಸು! ಕನ್ನಡಿಗ ಕುಟುಂಬದ ಅನುಭವ

Continue Reading

ದೇಶ

Wayanad Landslide: ಎಲ್ಲೆಂದರಲ್ಲಿ ಹೆಣಗಳ ರಾಶಿ; ಕೊಚ್ಚಿ ಹೋದ ಬದುಕು: ಸ್ಮಶಾನದಂತಾದ ಭೂಲೋಕದ ಸ್ವರ್ಗ ವಯನಾಡು

Wayanad Landslide: ಕೇರಳದ ವಯನಾಡಿನಲ್ಲಿ ಮಂಗಳನ ಸಂಭವಿಸಿದ ಭೀಕರ ಭೂಕುಸಿತ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಭೂಕುಸಿತ ಬಾಧಿತ ಚುರಲ್‌ಮಲ ಗ್ರಾಮದಲ್ಲಿ ಅಂಗಡಿ, ಮನೆಗಳು ಮಣ್ಣಿನಡಿಯಲ್ಲಿ ಹುದುಗಿದ್ದರೆ ವಾಹನಗಳು ನೆರೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಸದ್ಯ ಈ ಗ್ರಾಮದ ಚಿತ್ರಣ ಗುರುತೇ ಸಿಗದಂತೆ ಬದಲಾಗಿದೆ. ಕೆಲವು ಕಿಲೋಮೀಟರ್ ದೂರದಲ್ಲಿರುವ ಮುಂಡಕೈನಲ್ಲಿ ಉಂಟಾದ ಭೂಕುಸಿತದ ಪರಿಣಾಮವನ್ನು ಚುರಲ್‌ಮಲ ಗ್ರಾಮ ಎದುರಿಸುತ್ತಿದ್ದು, ಮಣ್ಣು ಮತ್ತು ಅವಶೇಷಗಳ ರಾಶಿಯೇ ಇಲ್ಲಿ ಕಂಡು ಬಂದಿದೆ.

VISTARANEWS.COM


on

Wayanad Landslide
Koo

ತಿರುವನಂತಪುರಂ: ಕೇರಳ-ಹೆಸರು ಕೇಳುತ್ತಿದ್ದರೆ ಸಾಕು ಹಚ್ಚ ಹಸಿರಿನ ಗುಡ್ಡ-ಬೆಟ್ಟ, ನದಿಯ ನಿನಾದ, ಪ್ರಕೃತಿ ಸೌಂದರ್ಯದಿಂದ ಕೂಡಿದ ಬಯಲು ಈ ಚಿತ್ರವೇ ಕಣ್ಣ ಮುಂದೆ ಬರುತ್ತದೆ. ಅದರಲ್ಲಿಯೂ ವಯನಾಡು ಎಂದರೆ ಪ್ರವಾಸಿಗರ ಪಾಲಿಗೆ ಸ್ವರ್ಗ ಎನಿಸಿಕೊಂಡಿದೆ. ಆದರೆ ಇದೀಗ ಇಲ್ಲಿನ ಚಿತ್ರಣವೇ ಬದಲಾಗಿದೆ. ಮಂಗಳವಾರ ಬೆಳಗ್ಗೆ ವಯನಾಡು ಜಿಲ್ಲೆಯ ಮೆಪ್ಪಾಡಿ ಗ್ರಾಮ ಪಂಚಾಯತ್‌ ಬಳಿಯ ಗುಡ್ಡಗಾಡು ಪ್ರದೇಶಗಳಲ್ಲಿ ಭಾರಿ ಭೂಕುಸಿತ ಸಂಭವಿಸಿ ಊರನ್ನೇ ಅಪೋಶನ ತೆಗೆದುಕೊಂಡಿದ್ದು, ಇದೀಗ ಎಲ್ಲಡೆ ಆಕ್ರಂದನದ ಕೂಗು ಕೇಳಿ ಬರುತ್ತಿದೆ. ಸ್ವರ್ಗದಂತಿದ್ದ ಭೂಮಿ ಸ್ಮಶಾನದಂತಾಗಿದೆ (Wayanad Landslide).

ಭೂಕುಸಿತ ಬಾಧಿತ ಚುರಲ್‌ಮಲ ಗ್ರಾಮದಲ್ಲಿ ಅಂಗಡಿ, ಮನೆಗಳು ಮಣ್ಣಿನಡಿಯಲ್ಲಿ ಹುದುಗಿದ್ದರೆ ವಾಹನಗಳು ನೆರೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಸದ್ಯ ಈ ಗ್ರಾಮದ ಚಿತ್ರಣ ಗುರುತೇ ಸಿಗದಂತೆ ಬದಲಾಗಿದೆ. ಕೆಲವು ಕಿಲೋಮೀಟರ್ ದೂರದಲ್ಲಿರುವ ಮುಂಡಕೈನಲ್ಲಿ ಉಂಟಾದ ಭೂಕುಸಿತದ ಪರಿಣಾಮವನ್ನು ಚುರಲ್‌ಮಲ ಗ್ರಾಮ ಎದುರಿಸುತ್ತಿದ್ದು, ಮಣ್ಣು ಮತ್ತು ಅವಶೇಷಗಳ ರಾಶಿಯೇ ಇಲ್ಲಿ ಕಂಡು ಬಂದಿದೆ. ಅಲ್ಲದೆ ಎರುವಾಝಂಜಿ ನದಿಯು ತನ್ನ ಪಥವನ್ನು ಬದಲಾಯಿಸಿ ಗ್ರಾಮದ ಮಧ್ಯದ ಮೂಲಕ ಹರಿಯುತ್ತಿದೆ. ಇದರಿಂದ ರಸ್ತೆಗಳೂ ಕೊಚ್ಚಿಕೊಂಡು ಹೋಗಿ ಕಾರ್ಯಾಚರಣೆಗೆ ಇನ್ನಷ್ಟು ತೊಡುಕುಂಟು ಮಾಡಿದೆ.

ಪಥ ಬದಲಿಸಿ ಹರಿದ ನದಿ ಕಾರ್ಮಿಕರ ವಸತಿಗೃಹ ಸೇರಿದಂತೆ ತನ್ನ ಹೊಸ ಹಾದಿಯಲ್ಲಿ ಸಿಕ್ಕ ಎಲ್ಲವನ್ನೂ ಸೆಳೆದುಕೊಂಡು ಹೋಗಿದೆ. ಇದು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಗೂ ಹಾನಿಯುಂಟು ಮಾಡಿದ್ದು, 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

“ವಿದ್ಯಾರ್ಥಿಗಳ ಬಗ್ಗೆ ವಿಚಾರಿಸಲು ನಾನು ಪೋಷಕರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ” ಎಂದು ಪ್ರಾಂಶುಪಾಲರು ಹೇಳಿದ್ದಾರೆ. ಭೂಕುಸಿತದಲ್ಲಿ ಮುಂಡಕೈಗೆ ಸಂಪರ್ಕ ಕಲ್ಪಿಸುವ ಸೇತುವೆ ನಾಶವಾಗಿದ್ದರಿಂದ ಹಲವರು ಚುರಲ್‌ಮಲದಲ್ಲಿ ಗಂಟೆಗಳ ಕಾಲ ಸಿಲುಕಿಕೊಂಡಿದ್ದರು. ಬಳಿಕ ಸೇನಾ ಸಿಬ್ಬಂದಿ ತಾತ್ಕಾಲಿಕ ಸೇತುವೆ ನಿರ್ಮಿಸಿ ಅವರನ್ನು ರಕ್ಷಿಸಿದ್ದಾರೆ.

ಸ್ಥಳೀಯರು ಹೇಳೋದೇನು?

ಈ ಭೂಕುಸಿತದ ಶಾಕ್‌ನಿಂದ ಇನ್ನೂ ಹಲವರು ಹೊರ ಬಂದಿಲ್ಲ. ಸ್ಥಳೀಯರೊಬ್ಬರು ಈ ಬಗ್ಗೆ ಮಾತನಾಡಿ, ʼʼನಾನು ಈ ರೀತಿಯ ದುರಂತವನ್ನು ನಿರೀಕ್ಷಿಸಿರಲೇ ಇಲ್ಲ. ಇದು ಭೂಕುಸಿತ ಪೀಡಿತ ಪ್ರದೇಶವಲ್ಲವಾಗಿದ್ದರಿಂದ ಯಾರಿಗೂ ದುರಂತದ ಬಗ್ಗೆ ಮುನ್ಸೂಚನೆಯೇ ಇರಲಿಲ್ಲ. ಗ್ರಾಮದ ಹಲವು ಮಂದಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಕೆಲವರ ಮೃತದೇಹ ಹಲವು ಕಿ.ಮೀ. ದೂರದ ಮಲಪ್ಪುರಂ ಜಿಲ್ಲೆಯ ನಿಲಂಬೂರ್‌ನಲ್ಲಿ ಪತ್ತೆಯಾಗಿದೆʼʼ ಎಂದು ಭೀಕರತೆಯನ್ನು ಬಿಚ್ಚಿಟ್ಟಿದ್ದಾರೆ.

ಮಂಗಳವಾರದ ಭೀಕರ ಭೂಕುಸಿತಕ್ಕೆ ಮೊದಲು ಭಾನುವಾರ ಮುಂಡಕೈ ಬೆಟ್ಟದ ಮೇಲೆ ಸಣ್ಣ ಭೂಕುಸಿತ ಉಂಟಾಗಿತ್ತು. ಹೀಗಾಗಿ ಸ್ಥಳಾಂತರಗೊಂಡ ಜನರಿಗಾಗಿ ಚುರಲ್‌ಮಲ ಶಾಲೆಯಲ್ಲಿ ಪರಿಹಾರ ಶಿಬಿರವನ್ನು ತೆರೆಯಲಾಗಿತ್ತು. ಸೋಮವಾರದವರೆಗೂ ಮಳೆ ಮುಂದುವರಿದಿದ್ದರಿಂದ ಬಳಿಕ ಅವರನ್ನು ಬೇರೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು. ಇದರಿಂದಾಗಿ ಅವರು ಮಂಗಳವಾರ ಮುಂಜಾನೆ ಸಂಭವಿಸಿದ ದುರಂತದಿಂದ ಪಾರಾಗಿದ್ದಾರೆ.

ಹೀಗೆ ಪಾರಾದವರ ಪೈಕಿ ಒಬ್ಬರಾದ ಡಾಲಿ ಎನ್ನುವ ಮಹಿಳೆ ಈ ಬಗ್ಗೆ ಮಾತನಾಡಿ ಮುಂಡಕೈಯಲ್ಲಿದ್ದ ತಮ್ಮ ಐವರು ಸಂಬಂಧಿಕರು ಜೀವ ಕಳೆದುಕೊಂಡಿದ್ದಾರೆ. ಅಧಿಕಾರಿಗಳು ಮೊದಲೇ ಮುಂಡಕೈಯಿಂದ ಹಲವರನ್ನು ಸ್ಥಳಾಂತರಿಸಿದ್ದರೆ ಸಾವಿನ ಪ್ರಮಾಣ ತಗ್ಗಿಸಬಹುದಿತ್ತು ಎಂದಿದ್ದಾರೆ. ಸದ್ಯ ವಿವಿಧೆಡೆ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಇನ್ನು ಮುಂಡಕೈ ಗ್ರಾಮದಲ್ಲಿ ಪರಿಸ್ಥಿತಿ ಇನ್ನೂ ಭೀಕರವಾಗಿದ್ದು ಇಲ್ಲಿದ್ದ ಬಹುತೇಕ ಮನೆಗಳು ನಾಶವಾಗಿವೆ. ಸುಮಾರು 400 ಮನೆಗಳ ಪೈಕಿ 30 ಮಾತ್ರ ಉಳಿದಿದೆ. ಉಳಿದವೆಲ್ಲ ಕುಸಿದಿವೆ ಎಂದು ಗ್ರಾಮ ಪಂಚಾಯತ್‌ ಅದಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Wayanad Landslide Explainer: ಪ್ರಕೃತಿ ಮೇಲೆ ಮಾನವನ ವಿಕೃತಿ; ವಯನಾಡು ಭೂಕುಸಿತಕ್ಕೆ ಇಲ್ಲಿದೆ ಕಾರಣಗಳ ಪಟ್ಟಿ

Continue Reading

ವೈರಲ್ ನ್ಯೂಸ್

Wayanad Landslide: ಒಂದು ಮೆಸೇಜ್‌ನಿಂದ ಉಳಿಯಿತು ಜೀವ! ವೈನಾಡಿನ ದುರಂತದ ನಡುವೆ ಪಾರಾದ ಕನ್ನಡಿಗ ಕಾರು ಚಾಲಕ

Wayanad Landslide: ಮಂಜುನಾಥ್ ರೆಸಾರ್ಟ್‌ನಿಂದ ಸ್ವಲ್ಪ ದೂರದಲ್ಲಿ ಕಾರು ನಿಲ್ಲಿಸಿ, ಅದೇ ಕಾರಿನಲ್ಲಿ ರಾತ್ರಿ ನಿದ್ದೆಗೆ ಜಾರಿದ್ದರು. ಮಧ್ಯರಾತ್ರಿ ಒಂದು ಗಂಟೆ 15 ನಿಮಿಷಕ್ಕೆ ಭೂ ಕುಸಿತವಾಗಿದೆ. ಇದರಿಂದ ರೆಸಾರ್ಟ್‌ನಲ್ಲಿದ್ದ ಹಲವರು ಮಣ್ಣುಪಾಲಾಗಿದ್ದಾರೆ.

VISTARANEWS.COM


on

wayanad landslide car driver
Koo

ಬೆಂಗಳೂರು: ಒಂದು ಅಲರ್ಟ್‌ ಮೆಸೇಜ್‌ ಪರಿಣಾಮ ಕನ್ನಡಿಗ ಕಾರು ಚಾಲಕನೊಬ್ಬ (Bangalore Car Driver) ವೈನಾಡಿನ ರುದ್ರಭಯಾನಕ ಭೂಕುಸಿತದ (Wayanad Landslide, Kerala Landslide) ನಡುವೆ ಜೀವ ಉಳಿಸಿಕೊಂಡಿದ್ದಾರೆ. ಸಾವಿನೂರಿಂದ ಈತ ಬಚಾವ್ ಆಗಿ ಬಂದದ್ದೇ ರೋಚಕ. ಮಿಡ್‌ನೈಟ್ ಬಂದ ಅದೊಂದು ಮೆಸೇಜ್ ಯುವಕನ ಪ್ರಾಣ ಉಳಿಸಿದ ಕತೆ (Viral news) ಇಲ್ಲಿದೆ.

ಬೆಂಗಳೂರಿನಲ್ಲಿ ಟ್ಯಾಕ್ಸಿ ಡ್ರೈವರ್ ಆಗಿರುವ ಹಾವೇರಿ ಮೂಲದ ಮಂಜುನಾಥ್‌, ಇಬ್ಬರು ಯುವಕರು ಹಾಗೂ ಯುವತಿಯರನ್ನು ಬಾಡಿಗೆ ಕರೆದುಕೊಂಡು ವೈನಾಡ್‌ಗೆ ಹೋಗಿದ್ದರು. ದಂಪತಿಗಳು ಉತ್ತರ ಭಾರತ ಮೂಲದವರು. ಎರಡೂ ಜೋಡಿ ವಯನಾಡ್‌ನ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದರು.

ಮಂಜುನಾಥ್ ರೆಸಾರ್ಟ್‌ನಿಂದ ಸ್ವಲ್ಪ ದೂರದಲ್ಲಿ ಕಾರು ನಿಲ್ಲಿಸಿ, ಅದೇ ಕಾರಿನಲ್ಲಿ ರಾತ್ರಿ ನಿದ್ದೆಗೆ ಜಾರಿದ್ದರು. ಮಧ್ಯರಾತ್ರಿ ಒಂದು ಗಂಟೆ 15 ನಿಮಿಷಕ್ಕೆ ಭೂ ಕುಸಿತವಾಗಿದೆ. ಇದರಿಂದ ರೆಸಾರ್ಟ್‌ನಲ್ಲಿದ್ದ ಹಲವರು ಮಣ್ಣುಪಾಲಾಗಿದ್ದಾರೆ. ಆದರೆ ಚಾಲಕ ಇದ್ಯಾವುದರ ಪರಿವೆಯೇ ಇಲ್ಲದೆ ನಿದ್ದೆಗೆ ಜಾರಿದ್ದರು. ಭೂಕುಸಿತದ ಬಳಿಕ ನದಿ ಪಾತ್ರ ವಿಶಾಲವಾಗಿದ್ದು, 15 ಅಡಿ ಅಗಲದ ನದಿ 150 ಅಡಿಗಳಷ್ಟು ಅಗಲವಾಗಿ ಮಣ್ಣು ಕಲ್ಲು ಮರಗಳನ್ನು ತುಂಬಿಕೊಂಡು ಅಬ್ಬರಿಸಿ ಹರಿದಿದೆ. ಮಂಜುನಾಥ್‌ ಕಾರಿಗೂ ಜಲದಿಗ್ಬಂಧನವಾಗಿದೆ.

ನೀರಿನ ಹೊಡೆತಕ್ಕೆ ಕಾರು ಉಲ್ಟಾ ಮುಖ ಮಾಡಿದೆ. ಈ ವೇಳೆ ಚಾಲಕ ತರಾತುರಿಯಲ್ಲಿ ಕಾರ್ ಚಲಾಯಿಸಲು ಮುಂದಾಗಿದ್ದ. ಕಾರು ಆನ್ ಆಗುತ್ತಿದ್ದಂತೆ ಬೆಂಗಳೂರಿನಲ್ಲಿದ್ದ ಕಾರಿನ‌‌ ಮಾಲಕ ಸಚಿನ್‌ಗೆ ಅಲರ್ಟ್‌ ಮೆಸೇಜ್ ಹೋಗಿದೆ. ಸಚಿನ್‌ ಮೊಬೈಲ್‌ನಲ್ಲಿ ಕಾರಿನ ಆಕ್ಸೆಸ್ ಹೊಂದಿದ್ದರು. ಜಿಪಿಎಸ್ ಆನ್ ಆಗುತ್ತಿದ್ದಂತೆ ಆಟೋಮ್ಯಾಟಿಕ್ ಮೆಸೇಜ್ ಬಂದಿತ್ತು. ಹೊತ್ತಲ್ಲದ ಹೊತ್ತಿನಲ್ಲಿ ಗಾಡಿ ಆನ್ ಆದ ಮೆಸೇಜ್ ನೋಡಿ ಮಾಲೀಕ ಚಕಿತರಾಗಿ, ಕೂಡಲೇ ಈ ವಿಚಾರವಾಗಿ ಚಾಲಕನಿಗೆ ಕಾಲ್ ಮಾಡಿದ್ದಾರೆ.

ಈ ವೇಳೆ ಪ್ರವಾಹದ ಬಗ್ಗೆ ಚಾಲಕ ಮಂಜುನಾಥ್‌ ವಿವರಿಸಿದ್ದರು. ಮಂಜುನಾಥ್‌ಗೆ ಧೈರ್ಯ ತುಂಬಿದ್ದ ಮಾಲೀಕ ಸಚಿನ್, ಅದೇ ಜಾಗದಲ್ಲಿದ್ದ ತನ್ನ ಪರಿಚಯಸ್ಥರಿಗೆ ಮಾಹಿತಿ ನೀಡಿದ್ದರು. ಇದರಿಂದ ಚಾಲಕನ ಸಹಾಯಕ್ಕೆ ಜನ ಬಂದಿದ್ದಾರೆ. ನಂತರ ಜಿಪಿಎಸ್ ಟ್ರ್ಯಾಕ್ ಮಾಡಿ ಚಾಲಕನನ್ನು ಕೆಸರು ನೀರಿನ ಮಧ್ಯದಿಂದ ರಕ್ಷಣೆ ಮಾಡಲಾಗಿದೆ. ಬದುಕುಳಿದು ಬಂದಿರುವ ಮಂಜುನಾಥ್‌, ತಮ್ಮನ್ನು ಕಾಪಾಡಿದವರಿಗೆ ಧನ್ಯವಾದ ಹೇಳಿದ್ದಾರೆ.

ಭಯಾನಕ ಸಾವಿನಿಂದ ರಕ್ಷಿಸಿತು ಸಾಕಿದ ಹಸು! ಕನ್ನಡಿಗ ಕುಟುಂಬದ ಅನುಭವ

ಚಾಮರಾಜನಗರ: ಕೇರಳದ ವೈನಾಡಿನಲ್ಲಿ ಸಂಭವಿಸಿದ ರುದ್ರಭಯಾನಕ ಭೂಕುಸಿತದಲ್ಲಿ (Wayanad landslide, Kerala Landslide) ಚಾಮರಾಜನಗರ ಮೂಲದ ಕುಟುಂಬವೊಂದನ್ನು ಅವರು ಸಾಕಿದ ಹಸು ವಿಚಿತ್ರ ರೀತಿಯಲ್ಲಿ ಪಾರು ಮಾಡಿದ ಘಟನೆ ನಡೆದಿದೆ.

ವೈನಾಡಿನ ಚೂರಲ್‌ಮಲೆಯಲ್ಲಿ ನೆಲೆಸಿದ್ದ ಚಾಮರಾಜನಗರದ ವಿನೋದ್, ಜಯಶ್ರೀ, ಸಿದ್ದರಾಜು, ಮಹೇಶ್ ಹಾಗೂ ಗೌರಮ್ಮ ಎಂಬವರು ಪಾರಾದವರು. ಮೇಪ್ಪಾಡಿಯಲ್ಲಿದ್ದ ಪ್ರವಿದಾ, ಲಕ್ಷ್ಮಿ, ಪುಟ್ಟಸಿದ್ದಮ್ಮ ಮತ್ತು 2 ತಿಂಗಳ ಮಗು ಚಾಮರಾಜನಗರಕ್ಕೆ ಸುರಕ್ಷಿತವಾಗಿ ಬಂದಿದ್ದಾರೆ. ವಿನೋದ್ ಪತ್ನಿ ಬಾಣಂತಿಯಾದ ಕಾರಣ ಪ್ರವಿದಾ, ಅತ್ತೆ ಲಕ್ಷ್ಮೀ ಹಾಗೂ ಪುಟ್ಟಸಿದ್ದಮ್ಮ ಮೇಪ್ಪಾಡಿಯಲ್ಲಿದ್ದರು. ವಿನೋದ್ ಮತ್ತು ನಾಲ್ವರು ಚೂರಲ್‌ಮಲೆಯಲ್ಲಿದ್ದರು. ಚೂರಲ್‌ಮಲೆಗೂ ಮೇಪ್ಪಾಡಿಗೂ 6 ಕಿಮೀ ದೂರವಿದ್ದು, ಭೂಕುಸಿತ ಉಂಟಾಗುವ ಕೆಲವು ಸಮಯಕ್ಕೆ ಮುನ್ನ ಇವರು ಪಾರಾಗಿ ಸುರಕ್ಷಿತ ಸ್ಥಳಕ್ಕೆ ಸೇರಿಕೊಂಡಿದ್ದಾರೆ.

ಅದು ಘಟಿಸಿದ್ದು ಹೀಗೆ. ಚೂರಲ್ ಮಲೆಯಲ್ಲಿ ವಿನೋದ್ ಕುಟುಂಬ ನಿದ್ರಿಸುತ್ತಿದ್ದಾಗ ಕೊಟ್ಟಿಗೆಯಲ್ಲಿದ್ದ ಹಸು ಚೀರಾಡಿ, ಅಳುವ ಸದ್ದು ಮಾಡಿದೆ. ಕೂಡಲೇ ಎಚ್ಚೆತ್ತ ವಿನೋದ್ ಕೊಟ್ಟಿಗೆಗೆ ತೆರಳಿ ನೋಡಿದಾಗ ನೀರು ತುಂಬಿಕೊಂಡಿದ್ದನ್ನು ಕಂಡಿದ್ದಾರೆ. ಕೂಡಲೇ ವಿನೋದ್ ಮನೆಯಲ್ಲಿದ್ದವರನ್ನು ಎಬ್ಬಿಸಿ ಗುಡ್ಡದ ಮೇಲಕ್ಕೆ ತೆರಳಿದ್ದಾರೆ. ನೋಡನೋಡುತ್ತಿದ್ದಂತೆ ಇವರು ಇದ್ದ ಮನೆ, ವಾಹನ ಎಲ್ಲವೂ ಮಾಯವಾದಂತೆ ಭೂಮಿಯಡಿ ಹುದುಗಿಹೋಗಿದೆ. ಮನೆಯ ಸಮೀಪವೇ ಇದ್ದ ಸೇತುವೆ ಕೂಡ ಎರಡು ಭಾಗವಾಗಿದೆ. ಕೂಡಲೇ ಮೇಪ್ಪಾಡಿಯಲ್ಲಿದ್ದ ಪತ್ನಿಗೂ ವಿಚಾರ ತಿಳಿಸಿದ್ದು, ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ವಿನೋದ್ ಸೂಚಿಸಿದ್ದಾರೆ. ಪ್ರವಿದಾ, ಲಕ್ಷ್ಮೀ ಹಾಗೂ ಪುಟ್ಟಸಿದ್ದಮ್ಮ ಸುರಕ್ಷಿತ ಸ್ಥಳಕ್ಕೆ ಬಂದು ಕಾರ್ ಮೂಲಕ ಚಾಮರಾಜನಗರಕ್ಕೆ ಮಂಗಳವಾರ ಸಂಜೆ ತಲುಪಿದ್ದಾರೆ.

ಗುಡ್ಡದ ಮೇಲೆ ಆಶ್ರಯ ಪಡೆದಿದ್ದ ವಿನೋದ್ ಹಾಗೂ ಮತ್ತಿತರರನ್ನು ರಕ್ಷಣಾ ಪಡೆ ಮಂಗಳವಾರ ಸಂಜೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ. ಸಾಕಿದ್ದ ಹಸು ದೇವರಂತೆ ಅಪಾಯದ ಬಗ್ಗೆ ಕುಟುಂಬಕ್ಕೆ ಎಚ್ಚರಿಸಿ ಇಡೀ ಕುಟುಂಬವನ್ನು ಪಾರುಮಾಡಿದೆ. ಆದರೆ ಇವರನ್ನು ಕಾಪಾಡಿದ ಹಸು ಉಳಿದಿದೆಯೋ ಇಲ್ಲವೋ ತಿಳಿದುಬಂದಿಲ್ಲ.

ಇದನ್ನೂ ಓದಿ: Wayanad Landslide: ವಯನಾಡು ದುರಂತದಲ್ಲಿ ಸಾವಿನ ಸಂಖ್ಯೆ 150ಕ್ಕೆ ಏರಿಕೆ; ಇಂದೂ ಭಾರಿ ಮಳೆಯ ಮುನ್ಸೂಚನೆ, ಮುಂದುವರಿದ ಕಾರ್ಯಾಚರಣೆ

Continue Reading
Advertisement
Wayanad Landslide
ದೇಶ12 mins ago

Wayanad Landslide: ಮಣ್ಣಿನ ರಾಶಿಯಂತಾದ ಮುಂಡಕೈ; 400 ಮನೆಗಳ ಪೈಕಿ ಉಳಿದಿದ್ದು 30 ಮಾತ್ರ!

Emmanuel Macron
ವಿದೇಶ14 mins ago

Emmanuel Macron: ಕ್ರೀಡಾ ಸಚಿವೆಗೆ ಎಲ್ಲರೆದುರೇ ಚುಂಬಿಸಿದ ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರಾನ್‌-ವಿಡಿಯೋ ಇದೆ

Asim Riaz Drops Cryptic Post After Fight With Rohit Shetty
ಬಾಲಿವುಡ್29 mins ago

Asim Riaz: ಸ್ಪರ್ಧಿಯನ್ನು ಹೊರಗೆ ಹಾಕಿದ ʻಖತ್ರೋನ್ ಕೆ ಖಿಲಾಡಿʼ ಶೋ; ಪೋಸ್ಟ್‌ ಮೂಲಕ ಪರೋಕ್ಷವಾಗಿ ತಿರುಗೇಟು ಕೊಟ್ಟ ಅಸಿಮ್ ರಿಯಾಜ್!

hd kumaraswamy in bjp jds meet
ಪ್ರಮುಖ ಸುದ್ದಿ48 mins ago

HD Kumaraswamy: ಬಿಜೆಪಿ ಪಾದಯಾತ್ರೆಗೆ ನಾವು ಬೆಂಬಲ ಕೊಡಲ್ಲ, ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ: ಎಚ್‌ಡಿಕೆ ಕಿಡಿ; ಮೈತ್ರಿಕೂಟದಲ್ಲಿ ಅಪಸ್ವರ

Sruthi Hariharan female friendship nangeallava shashwati chandrashekar
ಸ್ಯಾಂಡಲ್ ವುಡ್1 hour ago

Sruthi Hariharan: ʻನೀ ನಂಗೆ ಅಲ್ಲವಾʼ? ಎಂದು ಸ್ನೇಹಿತೆಯ ಜತೆ ಪೋಸ್‌ ಕೊಟ್ಟ ಮೂಗುತಿ ಸುಂದರಿ ಶ್ರುತಿ ಹರಿಹರನ್!

wayanad landslide mandya family
ಮಂಡ್ಯ1 hour ago

Wayanad Landslide: ಮಂಡ್ಯದ 9 ಜನರ ಕುಟುಂಬ ಭೂಕುಸಿತದಲ್ಲಿ ಸಂಪೂರ್ಣ ಕಣ್ಮರೆ

Wayanad Landslide
ದೇಶ1 hour ago

Wayanad Landslide: ಎಲ್ಲೆಂದರಲ್ಲಿ ಹೆಣಗಳ ರಾಶಿ; ಕೊಚ್ಚಿ ಹೋದ ಬದುಕು: ಸ್ಮಶಾನದಂತಾದ ಭೂಲೋಕದ ಸ್ವರ್ಗ ವಯನಾಡು

Vanitha Vijaykumar Set To Tie The Knot Again
ಟಾಲಿವುಡ್2 hours ago

Vanitha Vijaykumar: 43 ವರ್ಷದ ನಟಿ ವನಿತಾ ವಿಜಯಕುಮಾರ್ 4ನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜು?

Viral Video
Latest2 hours ago

Viral Video: 3 ತಿಂಗಳಿಂದ ಕಾಣೆಯಾಗಿದ್ದ ಬಾಲಕಿ ಗುಹೆಯಲ್ಲಿ ಡಿಢೀರ್‌ ಪ್ರತ್ಯಕ್ಷ; ಹಾವಿನಂತೆ ವರ್ತನೆ ಕಂಡು ಜನ ಶಾಕ್‌-ವಿಡಿಯೋ ಇದೆ

Charminar Clock
Latest2 hours ago

Charminar Clock: 135 ವರ್ಷ ಇತಿಹಾಸ ಇರೋ ಚಾರ್‌ಮಿನಾರ್ ಗಡಿಯಾರ ಸೌಂದರ್ಯಕ್ಕೆ ಪಾರಿವಾಳಗಳಿಂದ ಧಕ್ಕೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ19 hours ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ23 hours ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 day ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ2 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ2 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ2 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ3 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ3 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ3 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ3 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

ಟ್ರೆಂಡಿಂಗ್‌