Surgical Strike | ಸೇನೆ ಸಾಕ್ಷ್ಯ ಕೊಡಬೇಕಿಲ್ಲ, ಸ್ವಪಕ್ಷದ ದಿಗ್ವಿಜಯ್‌ ಸಿಂಗ್‌ಗೆ ರಾಹುಲ್‌ ಗಾಂಧಿ ತಿರುಗೇಟು - Vistara News

ದೇಶ

Surgical Strike | ಸೇನೆ ಸಾಕ್ಷ್ಯ ಕೊಡಬೇಕಿಲ್ಲ, ಸ್ವಪಕ್ಷದ ದಿಗ್ವಿಜಯ್‌ ಸಿಂಗ್‌ಗೆ ರಾಹುಲ್‌ ಗಾಂಧಿ ತಿರುಗೇಟು

Surgical Strike: ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ ಅವರು ಸರ್ಜಿಕಲ್‌ ಸ್ಟ್ರೈಕ್‌ ಬಗ್ಗೆ ನೀಡಿದ ಹೇಳಿಕೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಇದರ ಬೆನ್ನಲ್ಲೇ ರಾಹುಲ್‌ ಗಾಂಧಿ ಕೂಡ ದಿಗ್ವಿಜಯ್‌ ಸಿಂಗ್‌ ಅವರ ಹೇಳಿಕೆಯನ್ನು ಒಪ್ಪಲ್ಲ ಎಂದಿದ್ದಾರೆ.

VISTARANEWS.COM


on

Congress Leader Rahul Gandhi to address British Parliament
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶ್ರೀನಗರ: 2016ರಲ್ಲಿ ಪಾಕಿಸ್ತಾನ ಉಗ್ರರ ಮೇಲೆ ಭಾರತೀಯ ಸೈನಿಕರು ನಡೆಸಿದ ಸರ್ಜಿಕಲ್‌ ಸ್ಟ್ರೈಕ್‌ (Surgical Strike) ಬಗ್ಗೆ ಸಾಕ್ಷ್ಯ ಕೇಳಿದ ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ ವಿರುದ್ಧ ಸ್ವಪಕ್ಷದಲ್ಲೇ ಆಕ್ರೋಶ ವ್ಯಕ್ತವಾಗಿದೆ. “ದಿಗ್ವಿಜಯ್‌ ಹೇಳಿಕೆಗೂ, ಕಾಂಗ್ರೆಸ್‌ಗೂ ಸಂಬಂಧವಿಲ್ಲ” ಎಂದು ಎಐಸಿಸಿ ಸಂವಹನ ವಿಭಾಗದ ಉಸ್ತುವಾರಿ ಜೈರಾಮ್‌ ರಮೇಶ್‌ ಹೇಳಿದ ಬೆನ್ನಲ್ಲೇ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರೂ ಸ್ವಪಕ್ಷದ ನಾಯಕನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ದಿಗ್ವಿಜಯ್‌ ಸಿಂಗ್‌ ಅವರ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ನಾನು ಇದನ್ನು ಖಡಾಖಂಡಿತವಾಗಿ ತಿರಸ್ಕರಿಸುತ್ತೇನೆ. ಭಾರತದ ಸೇನೆಯು ಯಾವುದೇ ಸಾಕ್ಷ್ಯ ನೀಡಬೇಕಿಲ್ಲ. ಇದು ಕಾಂಗ್ರೆಸ್‌ ಪಕ್ಷದ ಸದೃಢ ನಿಲುವು” ಎಂದು ರಾಹುಲ್‌ ಗಾಂಧಿ ಅವರು ಭಾರತ್‌ ಜೋಡೋ ಯಾತ್ರೆ ಮಧ್ಯೆಯೇ ಸ್ಪಷ್ಟಪಡಿಸಿದ್ದಾರೆ.

ಕಾಶ್ಮೀರದಲ್ಲಿ ಭಾರತ್‌ ಜೋಡೋ ಯಾತ್ರೆ ಮಧ್ಯೆಯೇ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ದಿಗ್ವಿಜಯ್‌ ಸಿಂಗ್‌, “ಕೇಂದ್ರ ಸರ್ಕಾರವು ಸರ್ಜಿಕಲ್‌ ಸ್ಟ್ರೈಕ್‌ ಬಗ್ಗೆ ಮಾತನಾಡುತ್ತದೆ. ದಾಳಿಯಲ್ಲಿ ಹೆಚ್ಚಿನ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳುತ್ತದೆ. ಆದರೆ, ಇದುವರೆಗೆ ಸಾಕ್ಷ್ಯ ನೀಡಿಲ್ಲ. ಕೇಂದ್ರ ಸರ್ಕಾರವು ಸುಳ್ಳುಗಳ ಸರಮಾಲೆಯನ್ನೇ ಹೆಣೆದು ಆಡಳಿತ ನಡೆಸುತ್ತಿದೆ” ಎಂದು ಹೇಳಿದ್ದರು. ಇದಕ್ಕೆ ಬಿಜೆಪಿ ಕೂಡ ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ: Surgical Strike: ನಿರ್ದಿಷ್ಟ ದಾಳಿ ಸಾಕ್ಷ್ಯ ಕೇಳಿದ ದಿಗ್ವಿಜಯ್‌ ಸಿಂಗ್‌, ಬಿಜೆಪಿ ಆಕ್ರೋಶ, ಅಂತರ ಕಾಯ್ದುಕೊಂಡ ಕಾಂಗ್ರೆಸ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

BrahMos Missiles: ಫಿಲಿಪ್ಪೀನ್ಸ್‌ಗೆ ನಾಲ್ಕನೇ ಬ್ರಹ್ಮೋಸ್‌ ಕ್ಷಿಪಣಿ ಬ್ಯಾಟರಿ ಕಳುಹಿಸಲು ಭಾರತ ಸಜ್ಜು

BrahMos Missiles: ಬ್ರಹ್ಮೋಸ್ ಕ್ಷಿಪಣಿಗಳ ಮೂರು ‘ಬ್ಯಾಟರಿ’ಗಳನ್ನು ಈಗಾಗಲೇ ದ್ವೀಪ ರಾಷ್ಟ್ರಕ್ಕೆ ಹಸ್ತಾಂತರಿಸಲಾಗಿದೆ. 2022ರಲ್ಲಿ ಎರಡು ಮಿತ್ರರಾಷ್ಟ್ರಗಳು ಸಹಿ ಮಾಡಿದ USD 375 ಮಿಲಿಯನ್ ಒಪ್ಪಂದದ ಭಾಗವಾಗಿದೆ ಇದು. ಪ್ರತಿ ಬ್ಯಾಟರಿಯೂ ನಾಲ್ಕು ಲಾಂಚರ್‌ಗಳನ್ನು ಒಳಗೊಂಡಿದೆ. ಪ್ರತಿ ಲಾಂಚರ್‌ನಲ್ಲೂ 290 ಕಿಮೀ ವ್ಯಾಪ್ತಿಯ ಮೂರು ಕ್ಷಿಪಣಿಗಳಿರುತ್ತವೆ.

VISTARANEWS.COM


on

BrahMos Missiles
Koo

ಹೊಸದಿಲ್ಲಿ: ದಕ್ಷಿಣ ಚೀನಾ ಸಮುದ್ರದಲ್ಲಿ (South China Sea) ಚೀನಾದ ಒತ್ತಡದಿಂದಾಗಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯೇ ರಕ್ಷಣಾ ರಫ್ತಿಗೆ (defence exports) ಭಾರಿ ಉತ್ತೇಜನ ನೀಡುತ್ತಿರುವ ಭಾರತ (India), ಇಂದು ಫಿಲಿಪ್ಪೀನ್ಸ್‌ಗೆ (Philippines) ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳ (BrahMos missiles, BrahMos supersonic cruise missiles) ಭೂ ಆವೃತ್ತಿಯ ನಾಲ್ಕನೇ ʼಬ್ಯಾಟರಿ’ಯನ್ನು (Battery) ಕಳುಹಿಸಲು ಮುಂದಾಗಿದೆ.

ಬ್ರಹ್ಮೋಸ್ ಕ್ಷಿಪಣಿಗಳ ಮೂರು ‘ಬ್ಯಾಟರಿ’ಗಳನ್ನು ಈಗಾಗಲೇ ದ್ವೀಪ ರಾಷ್ಟ್ರಕ್ಕೆ ಹಸ್ತಾಂತರಿಸಲಾಗಿದೆ. 2022ರಲ್ಲಿ ಎರಡು ಮಿತ್ರರಾಷ್ಟ್ರಗಳು ಸಹಿ ಮಾಡಿದ USD 375 ಮಿಲಿಯನ್ ಒಪ್ಪಂದದ ಭಾಗವಾಗಿದೆ ಇದು. ಪ್ರತಿ ಬ್ಯಾಟರಿಯೂ ನಾಲ್ಕು ಲಾಂಚರ್‌ಗಳನ್ನು ಒಳಗೊಂಡಿದೆ. ಪ್ರತಿ ಲಾಂಚರ್‌ನಲ್ಲೂ 290 ಕಿಮೀ ವ್ಯಾಪ್ತಿಯ ಮೂರು ಕ್ಷಿಪಣಿಗಳಿರುತ್ತವೆ. ಈ ಕ್ಷಿಪಣಿ ಸೂಪರ್‌ಸಾನಿಕ್ ವೇಗವನ್ನು ಹೊಂದಿದ್ದು, ಇದನ್ನು ಭೂಮಿ ಅಥವಾ ಹಡಗು ಆಧಾರಿತ ಬ್ಯಾಲಿಸ್ಟಿಕ್ ಮಿಸೈಲ್ ಡಿಫೆನ್ಸ್ (BMDs) ವ್ಯವಸ್ಥೆಗಳಿಂದ ಪ್ರತಿಬಂಧಿಸುವುದು ತುಂಬಾ ಕಷ್ಟ.

ಬ್ರಹ್ಮೋಸ್‌ನ ಫಿಲಿಪೈನ್ಸ್ ಒಪ್ಪಂದದ ಮೂಲಕ, 2023-2024ರಲ್ಲಿ ಭಾರತದ ರಕ್ಷಣಾ ರಫ್ತು ₹21083 ಕೋಟಿಗಳನ್ನು ಮುಟ್ಟಿದೆ. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇ.32.5ರಷ್ಟು ಬೃಹತ್ ಬೆಳವಣಿಗೆಯಾಗಿದೆ. ಬ್ರಹ್ಮೋಸ್ ದಾಖಲೆ ಮಾರಾಟ ಕಂಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಭಾರತವು ಈ ಸೂಪರ್‌ಸಾನಿಕ್ ಕ್ಷಿಪಣಿಗಳ ಹೆಚ್ಚಿನ ಆರ್ಡರ್‌ಗಳನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ.

ಕ್ಷಿಪಣಿ ರಫ್ತಿನಲ್ಲಿ ಭಾರತವು ಸಂತುಷ್ಟಿಯ ಮಟ್ಟವನ್ನು ಮುಟ್ಟಿದೆ. ನರೇಂದ್ರ ಮೋದಿ ಸರ್ಕಾರ ಇದೀಗ ಮುಂಬೈನಲ್ಲಿ ಸ್ಕಾರ್ಪೀನ್-ಕ್ಲಾಸ್ ಡೀಸೆಲ್-ಎಲೆಕ್ಟ್ರಿಕ್ ಜಲಾಂತರ್ಗಾಮಿ ನೌಕೆಗಳನ್ನು ತಯಾರಿಸಲು ಮತ್ತು ಇಂಡೋನೇಷ್ಯಾ, ಮಲೇಷ್ಯಾ ಮುಂತಾದ ಮೂರನೇ ದೇಶಗಳಿಗೆ ಸರಬರಾಜು ಮಾಡಲು ಮಜಗಾಂವ್ ಡಾಕ್‌ಯಾರ್ಡ್ಸ್ ಲಿಮಿಟೆಡ್ ಮತ್ತು ಫ್ರೆಂಚ್ ನೇವಲ್ ಗ್ರೂಪ್ ನಡುವೆ ಜಂಟಿ ಉದ್ಯಮವನ್ನು ಸ್ಥಾಪಿಸಲು ಮುಂದಾಗಿದೆ.

ಪ್ರಸ್ತುತ ನಮ್ಮ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಅನಿಲ್ ಚೌಹಾನ್ ಅವರು ಫ್ರಾನ್ಸ್‌ ಸರ್ಕಾರದೊಂದಿಗೆ ಸಂವಹನ ನಡೆಸಲು ಫ್ರಾನ್ಸ್‌ಗೆ ಭೇಟಿ ನೀಡಿದ್ದು, ಭಾರತೀಯ ಮತ್ತು ಫ್ರೆಂಚ್ ರಕ್ಷಣಾ ವ್ಯವಹಾರ ಸರಪಳಿಯನ್ನು ಇನ್ನಷ್ಟು ಗಟ್ಟಿಗೊಳಿಸಲಿದ್ದಾರೆ. ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ಗಾಢಗೊಳಿಸುವ ಪ್ರಯತ್ನದಲ್ಲಿ ಭಾರತೀಯ ಸೇನಾ ಮುಖ್ಯಸ್ಥರು ಟೌಲೌಸ್‌ನಲ್ಲಿರುವ ಫ್ರೆಂಚ್ ಜಲಾಂತರ್ಗಾಮಿ ನೆಲೆಗೆ ಭೇಟಿ ನೀಡಲಿದ್ದಾರೆ. ಭಾರತಕ್ಕೆ ಇನ್ನೂ ಮೂರು ಹೆಚ್ಚುವರಿ ಕಲ್ವೇರಿ (Kalveri- ಮಾರ್ಪಡಿಸಿದ ಸ್ಕಾರ್ಪೀನ್) ದರ್ಜೆಯ ಜಲಾಂತರ್ಗಾಮಿ ನೌಕೆಗಳ ನಿರ್ಮಾಣಕ್ಕಾಗಿ ಫ್ರೆಂಚ್ ನೇವಲ್ ಗ್ರೂಪ್ ಈಗಾಗಲೇ MDLನೊಂದಿಗೆ ಮಾತುಕತೆ ನಡೆಸುತ್ತಿದೆ.

P-5 ಶಕ್ತಿಗಳು ಪರಮಾಣು-ಚಾಲಿತ ಸಾಂಪ್ರದಾಯಿಕ ಸಶಸ್ತ್ರ ದಾಳಿ ಜಲಾಂತರ್ಗಾಮಿ ನೌಕೆಗಳನ್ನು (SSN) ವೈರಿ ಸೈನ್ಯದ ತಡೆಗಟ್ಟುವಿಕೆಗೆ ಬಳಸುತ್ತಿರುವಾಗ, ಭಾರತವು ಇನ್ನೂ ತನ್ನ ಆಯ್ಕೆಗಳನ್ನು ಮೌಲ್ಯಮಾಪನ ಮಾಡುತ್ತಿದೆ. ದೀರ್ಘಾವಧಿಯ ಕಡಲ ಭದ್ರತೆಗಾಗಿ ಎಸ್‌ಎಸ್‌ಎನ್‌ಗಳನ್ನು ತಯಾರಿಸುವುದು ಅಥವಾ ಸಾಂಪ್ರದಾಯಿಕ ಡೀಸೆಲ್-ಎಲೆಕ್ಟ್ರಿಕ್ ಜಲಾಂತರ್ಗಾಮಿ ನೌಕೆಗಳನ್ನು ಹೊಂದುವುದು ಆಯ್ಕೆಗಳಾಗಿವೆ.

ಇದನ್ನೂ ಓದಿ: BrahMos Missiles: ನೌಕಾಪಡೆಗೆ ಭೀಮಬಲ; 200 ಬ್ರಹ್ಮೋಸ್‌ ಕ್ಷಿಪಣಿ ಖರೀದಿಗೆ ಕೇಂದ್ರ ಅಸ್ತು

Continue Reading

ವಾಣಿಜ್ಯ

Reliance Jio: ಡಾಟಾ ಟ್ರಾಫಿಕ್‌; ವಿಶ್ವದ ಅತಿದೊಡ್ಡ ಮೊಬೈಲ್ ಆಪರೇಟರ್ ಆಗಿ ಹೊರ ಹೊಮ್ಮಿದ ರಿಲಯನ್ಸ್ ಜಿಯೊ

Reliance Jio: ಭಾರತದ ಟೆಲಿಕಾಂ ದೈತ್ಯ ರಿಲಯನ್ಸ್ ಜಿಯೊ ಡಾಟಾ ಟ್ರಾಫಿಕ್‌ ವಿಚಾರದಲ್ಲಿ ಚೀನಾ ಮೊಬೈಲ್ ಅನ್ನು ಹಿಂದಿಕ್ಕಿ ವಿಶ್ವದ ಅತಿದೊಡ್ಡ ಮೊಬೈಲ್ ಆಪರೇಟರ್ ಆಗಿ ಹೊರಹೊಮ್ಮಿದೆ. 2024ರ ಮಾರ್ಚ್ ವೇಳೆಗೆ ಜಿಯೊ 481.8 ಮಿಲಿಯನ್ (48,18,00000) ಚಂದಾದಾರರನ್ನು ಹೊಂದಿದೆ. ಜಿಯೊ ನೆಟ್‌ವರ್ಕ್‌ನಲ್ಲಿ ಟ್ರಾಫಿಕ್‌ 40.9 ಎಕ್ಸಾಬೈಟ್‌ (Exabytes)ಗೆ ತಲುಪಿದೆ. ಇದು ವರ್ಷದಿಂದ ವರ್ಷಕ್ಕೆ ಶೇ. 35.2ರಷ್ಟು ಹೆಚ್ಚಳವನ್ನು ಸೂಚಿಸುತ್ತದೆ ಎಂದು ಮೂಲಗಳು ತಿಳಿಸಿವೆ.

VISTARANEWS.COM


on

Reliance Jio
Koo

ಮುಂಬೈ: ಭಾರತದ ಟೆಲಿಕಾಂ ದೈತ್ಯ ರಿಲಯನ್ಸ್ ಜಿಯೊ (Reliance Jio) ಡಾಟಾ ಟ್ರಾಫಿಕ್‌ (Data traffic)ಯ ವಿಚಾರದಲ್ಲಿ ಚೀನಾ ಮೊಬೈಲ್ ಅನ್ನು ಹಿಂದಿಕ್ಕಿ ವಿಶ್ವದ ಅತಿದೊಡ್ಡ ಮೊಬೈಲ್ ಆಪರೇಟರ್ ಆಗಿ ಹೊರಹೊಮ್ಮಿದೆ. ಜಿಯೋ ತನ್ನ ತ್ರೈಮಾಸಿಕ ಫಲಿತಾಂಶಗಳನ್ನು ಬಹಿರಂಗಪಡಿಸುತ್ತಿದ್ದಂತೆ ಈ ವಿಚಾರ ಬಹಿರಂಗಗೊಂಡಿದೆ.

2024ರ ಮಾರ್ಚ್ ವೇಳೆಗೆ ಜಿಯೊ 481.8 ಮಿಲಿಯನ್ (48,18,00000) ಚಂದಾದಾರರನ್ನು ಹೊಂದಿದೆ. ಅದರಲ್ಲಿ 108 ಮಿಲಿಯನ್ (10,80,00000) ಚಂದಾದಾರರು ಜಿಯೋದ ಟ್ರೂ 5 ಜಿ ಸ್ವತಂತ್ರ ನೆಟ್‌ವರ್ಕ್‌ ಬಳಸುತ್ತಿದ್ದಾರೆ. ಈ ಸಂಖ್ಯೆಯು ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋ ಯಾವ ರೀತಿಯ ಪ್ರಭಾವ ಬೀರಿದೆ ಎನ್ನುವುದನ್ನು ಸಾಬೀತುಪಡಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಜಿಯೊ ನೆಟ್‌ವರ್ಕ್‌ನಲ್ಲಿ ಟ್ರಾಫಿಕ್‌ 40.9 ಎಕ್ಸಾಬೈಟ್‌ (Exabytes)ಗೆ ತಲುಪಿದೆ. ಇದು ವರ್ಷದಿಂದ ವರ್ಷಕ್ಕೆ ಶೇ. 35.2ರಷ್ಟು ಹೆಚ್ಚಳವನ್ನು ಸೂಚಿಸುತ್ತದೆ.

ಶೇ. 28ರಷ್ಟು ಟ್ರಾಫಿಕ್ 5 ಜಿ ಚಂದಾದಾರರಿಂದ ಕಂಡು ಬಂದಿದೆ. ಹೆಚ್ಚುವರಿಯಾಗಿ ಜಿಯೊ ಫಿಕ್ಸೆಡ್ ವೈರ್‌ಲೆಸ್‌ ಆಕ್ಸೆಸ್ (Fixed Wireless Access) ಸೇವೆಗಳು ಡಾಟಾ ಟ್ರಾಫಿಕ್‌ಗೆ ಗಮನಾರ್ಹ ಕೊಡುಗೆ ನೀಡಿವೆ ಎನ್ನುವುದನ್ನು ಅಂಕಿ-ಅಂಶಗಳು ತಿಳಿಸಿವೆ. ಕೋವಿಡ್ -19 ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ಬಳಿಕ ವಾರ್ಷಿಕ ಡಾಟಾ ಟ್ರಾಫಿಕ್‌ನಲ್ಲಿ 2.4 ಪಟ್ಟು ಹೆಚ್ಚಳ ಕಂಡು ಬಂದಿದೆ. ಮಾಸಿಕ ಡಾಟಾ ಬಳಕೆಯು ಮೂರು ವರ್ಷಗಳ ಹಿಂದೆ ಕೇವಲ 13.3 ಜಿಬಿ ಇತ್ತು. ಇದು 28.7 ಜಿಬಿಗೆ ಏರಿಕೆಯಾಗಿದೆ. ಈ ಅಂಕಿ-ಅಂಶ ಭಾರತದಲ್ಲಿ ಡಿಜಿಟಲ್ ಸಂಪರ್ಕದ ಮೇಲೆ ಹೆಚ್ಚುತ್ತಿರುವ ಅವಲಂಬನೆಯನ್ನು ಸೂಚಿಸುತ್ತದೆ ಎಂದು ವರದಿಗಳು ತಿಳಿಸಿವೆ.

ಫಲಿತಾಂಶಗಳ ಬಗ್ಗೆ ಪ್ರತಿಕ್ರಿಯಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ, ʼʼಕಂಪೆನಿಯ ಕಾರ್ಯಕ್ಷಮತೆ ಮತ್ತು ಭಾರತೀಯ ಆರ್ಥಿಕತೆಗೆ ಅದರ ಕೊಡುಗೆಯ ಬಗ್ಗೆ ತೃಪ್ತಿ ಇದೆʼʼ ಎಂದು ಹೇಳಿದ್ದಾರೆ.

“ರಿಲಯನ್ಸ್‌ ಇಂಡಸ್ಟ್ರೀಸ್‌ನ ಉಪಕ್ರಮಗಳು ಭಾರತೀಯ ಆರ್ಥಿಕತೆಯ ವಿವಿಧ ಕ್ಷೇತ್ರಗಳ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಗಮನಾರ್ಹ ಕೊಡುಗೆ ನೀಡಿವೆ. ರಾಷ್ಟ್ರೀಯ ಆರ್ಥಿಕತೆಯನ್ನು ಬಲಪಡಿಸುವುದರ ಜತೆಗೆ ಕಂಪೆನಿಯ ಎಲ್ಲ ವಿಭಾಗಗಳು ದೃಢವಾದ ಹಣಕಾಸು ಮತ್ತು ಕಾರ್ಯಾಚರಣೆಯ ಕಾರ್ಯಕ್ಷಮತೆಯನ್ನು ದಾಖಲಿಸಿವೆ. ಇದು ಕಂಪೆನಿಯು ಅನೇಕ ಮೈಲಿಗಲ್ಲುಗಳನ್ನು ಸಾಧಿಸಲು ಸಹಾಯ ಮಾಡಿದೆ. ಈ ವರ್ಷ ತೆರಿಗೆ ಪೂರ್ವ ಲಾಭದಲ್ಲಿ 100,000 ಕೋಟಿ ರೂ.ಗಳ ಮಿತಿಯನ್ನು ದಾಟಿದ ಮೊದಲ ಭಾರತೀಯ ಕಂಪೆನಿ ರಿಲಯನ್ಸ್ ಎನ್ನುವುದು ಹೆಮ್ಮೆಯ ಸಂಗತಿʼʼ ಎಂದು ಅವರು ಸಂತಸ ವ್ಯಕಪಡಿಸಿದ್ದಾರೆ.

ಇದನ್ನೂ ಓದಿ: Reliance Jio Q4 Results: ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

“108,000,000ಕ್ಕೂ ಹೆಚ್ಚು ಟ್ರೂ 5 ಜಿ ಗ್ರಾಹಕರೊಂದಿಗೆ ಜಿಯೊ ಭಾರತದಲ್ಲಿ 5 ಜಿ ನೆಟ್‌ವರ್ಕ್‌ ವಿಚಾರದಲ್ಲಿ ಮುಂಚೂಣಿಯಲ್ಲಿದೆ. ಜಿಯೋ ದೇಶದ ಡಿಜಿಟಲ್ ಮೂಲ ಸೌಕರ್ಯವನ್ನು ಬಲಪಡಿಸುವಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಕಂಪೆನಿಯ ಚಿಲ್ಲರೆ ವಿಭಾಗವಾದ ರಿಲಯನ್ಸ್ ರೀಟೇಲ್ ಕೂಡ ದೃಢವಾದ ಬೆಳವಣಿಗೆಯನ್ನು ದಾಖಲಿಸಿದೆ. ಗ್ರಾಹಕರ ಸಂಖ್ಯೆಯಲ್ಲಿ ಶೇ. 36ರಷ್ಟು ಹೆಚ್ಚಳವಾಗಿದೆʼʼ ಎಂದು ಅವರು ತಿಳಿಸಿದ್ದಾರೆ.

Continue Reading

ದೇಶ

Arvind Kejriwal: ಕೇಜ್ರಿವಾಲ್‌, ಕವಿತಾ ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

Arvind Kejriwal: ಅರವಿಂದ ಕೇಜ್ರಿವಾಲ್‌ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರ ಸಮ್ಮುಖದಲ್ಲಿ ತಮ್ಮ ವೈದ್ಯರೊಂದಿಗೆ ಪ್ರತಿದಿನ 15 ನಿಮಿಷಗಳ ವೈದ್ಯಕೀಯ ಸಮಾಲೋಚನೆಗೆ ಅವಕಾಶ ನೀಡುವಂತೆ ಕೋರಿ ಆಮ್ ಆದ್ಮಿ ಪಕ್ಷದ ಸಂಚಾಲಕರ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

VISTARANEWS.COM


on

arvind kejriwal in tihar jail
Koo

ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿಯ (Delhi Excise policy) ಹಿನ್ನೆಲೆಯಲ್ಲಿ ಅಕ್ರಮ ಹಣ (Illegal money transaction) ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal), ಭಾರತ್ ರಾಷ್ಟ್ರ ಸಮಿತಿ (BRS) ನಾಯಕಿ ಕೆ. ಕವಿತಾ (K Kavitha) ಮತ್ತು ಆಮ್ ಆದ್ಮಿ ಪಕ್ಷದ (Aam Admi Party) ಗೋವಾ ಚುನಾವಣೆ ನಿಧಿ ವ್ಯವಸ್ಥಾಪಕ ಚನ್‌ಪ್ರೀತ್ ಸಿಂಗ್ ಅವರ ನ್ಯಾಯಾಂಗ ಬಂಧನವನ್ನು (Judicial custody) ದೆಹಲಿ ನ್ಯಾಯಾಲಯ ಮೇ 7ರವರೆಗೆ ವಿಸ್ತರಿಸಿದೆ.

ಅಬಕಾರಿ ನೀತಿ ಹಗರಣದ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಮಾರ್ಚ್ 21ರಂದು ಬಂಧಿಸಲಾಗಿತ್ತು. ಇದೀಗ ರದ್ದಾಗಿರುವ ಈ ನೀತಿಗೆ ಸಂಬಂಧಿಸಿದ ಸಿಬಿಐ ಪ್ರಕರಣದಲ್ಲಿ ಕವಿತಾ ಅವರ ನ್ಯಾಯಾಂಗ ಬಂಧನವನ್ನು ಮೇ 7ರವರೆಗೆ ರೋಸ್ ಅವೆನ್ಯೂ ನ್ಯಾಯಾಲಯ ವಿಸ್ತರಿಸಿದೆ. ಮೂವರೂ ಆರೋಪಿಗಳನ್ನು ವರ್ಚುವಲ್ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಅರವಿಂದ ಕೇಜ್ರಿವಾಲ್‌ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರ ಸಮ್ಮುಖದಲ್ಲಿ ತಮ್ಮ ವೈದ್ಯರೊಂದಿಗೆ ಪ್ರತಿದಿನ 15 ನಿಮಿಷಗಳ ವೈದ್ಯಕೀಯ ಸಮಾಲೋಚನೆಗೆ ಅವಕಾಶ ನೀಡುವಂತೆ ಕೋರಿ ಆಮ್ ಆದ್ಮಿ ಪಕ್ಷದ ಸಂಚಾಲಕರ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಇದಾಗಿ ಒಂದು ದಿನದ ನಂತರ ನ್ಯಾಯಾಲಯದ ಈ ನಿರ್ಧಾರವು ಬಂದಿದೆ.

ದೆಹಲಿ ನ್ಯಾಯಾಲಯವು ಕೇಜ್ರಿವಾಲ್‌ ಅವರಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸುವಂತೆ ನಿರ್ದೇಶಿಸಿದೆ ಮತ್ತು ಯಾವುದೇ ವಿಶೇಷ ಸಮಾಲೋಚನೆಯ ಅಗತ್ಯವಿದ್ದಲ್ಲಿ, ತಿಹಾರ್ ಜೈಲು ಅಧಿಕಾರಿಗಳು ಅಂತಃಸ್ರಾವಶಾಸ್ತ್ರಜ್ಞರು ಮತ್ತು ಮಧುಮೇಹಶಾಸ್ತ್ರಜ್ಞರನ್ನು ಒಳಗೊಂಡ AIIMS ನಿರ್ದೇಶಕರು ರಚಿಸಿರುವ ವೈದ್ಯಕೀಯ ಮಂಡಳಿಗೆ ತಿಳಿಸಬೇಕಿದೆ.

ಸೋಮವಾರ ಸಂಜೆ ಕೇಜ್ರಿವಾಲ್ ಅವರ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಿದ್ದು, ನಂತರ ಅವರಿಗೆ ಕಡಿಮೆ ಪ್ರಮಾಣದ ಇನ್ಸುಲಿನ್ ಅನ್ನು ನೀಡಲಾಯಿತು ಎಂದು ತಿಹಾರ್ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. ಹನುಮ ಜಯಂತಿಯ ಸಂದರ್ಭದಲ್ಲಿ ಬಂದಿರುವ ಈ ಸುದ್ದಿಯನ್ನು ಆಪ್ ಸ್ವಾಗತಿಸಿದ್ದು, ಈ ಬೆಳವಣಿಗೆಯು ದೇವರ ಆಶೀರ್ವಾದದ ಫಲವಾಗಿದೆ ಎಂದು ಹೇಳಿದೆ. ತಿಹಾರ್ ಅಧಿಕಾರಿಯೊಬ್ಬರ ಪ್ರಕಾರ, ಏಮ್ಸ್ ವೈದ್ಯರ ಸಲಹೆಯ ಮೇರೆಗೆ ಕೇಜ್ರಿವಾಲ್ ಅವರಿಗೆ ಸೋಮವಾರ ಸಂಜೆ ಕಡಿಮೆ ಪ್ರಮಾಣದ ಇನ್ಸುಲಿನ್ ಎರಡು ಘಟಕಗಳನ್ನು ನೀಡಲಾಯಿತು.

ಇಡಿಯ ಕಾನೂನು ಕ್ರಮದಿಂದ ರಕ್ಷಣೆ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದ ನಂತರ ಮಾರ್ಚ್ 21ರಂದು ಜಾರಿ ನಿರ್ದೇಶನಾಲಯ ಕೇಜ್ರಿವಾಲ್ ಅವರನ್ನು ಬಂಧಿಸಿತು. ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಪುತ್ರಿ ಕವಿತಾ ಅವರು ಇಡಿ ಮತ್ತು ಸಿಬಿಐ ದಾಖಲಿಸಿರುವ ಎರಡೂ ಪ್ರಕರಣಗಳಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ತೆಲಂಗಾಣ ಎಂಎಲ್‌ಸಿಯನ್ನು ಸಿಬಿಐ ಬಂಧಿಸಿತ್ತು.

ಮತ್ತೊಂದೆಡೆ, 2022ರ ಗೋವಾ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷದ ಹಣವನ್ನು ನಿರ್ವಹಿಸಿದ ವ್ಯಕ್ತಿ ಚನ್‌ಪ್ರೀತ್ ಸಿಂಗ್ ಅವರನ್ನು ಇಡಿ ಬಂಧಿಸಿದೆ. ದೆಹಲಿ ಅಬಕಾರಿ ನೀತಿಯಲ್ಲಿ ಲಂಚ ಸಂಗ್ರಹಿಸಿದ ಆರೋಪ ಇವರ ಮೇಲಿದೆ.

ಇದನ್ನೂ ಓದಿ: Arvind Kejriwal: ಕೇಜ್ರಿವಾಲ್‌ಗೆ ಮತ್ತೊಂದು ಹಿನ್ನಡೆ; ವಿಶೇಷ ವೈದ್ಯಕೀಯ ಸಮಾಲೋಚನೆಯ ಅರ್ಜಿ ವಜಾ

Continue Reading

Lok Sabha Election 2024

S Jaishankar: ವಿದೇಶಾಂಗ ನೀತಿಯಲ್ಲೂ ಕಾಂಗ್ರೆಸ್‌ನಿಂದ ಮುಸ್ಲಿಂ ವೋಟ್‌ಬ್ಯಾಂಕ್‌ ರಾಜಕಾರಣ: ಸಚಿವ ಜೈಶಂಕರ್‌ ಆರೋಪ

1948ರಲ್ಲಿ ಇಸ್ರೇಲ್‌ ಸ್ವತಂತ್ರ ದೇಶವಾಗಿ ಹೊರ ಹೊಮ್ಮಿತು. ಆದರೆ ಕೇಂದ್ರದಲ್ಲಿದ್ದ ಕಾಂಗ್ರೆಸ್‌ ಸರ್ಕಾರ 1992ರವರೆಗೂ ಅಲ್ಲಿ ಭಾರತದ ರಾಯಭಾರಿಯನ್ನು ನೇಮಿಸಲಿಲ್ಲ. ಆ ಬಳಿಕ 1992ರಲ್ಲಿ ಇಸ್ರೇಲ್‌ನಲ್ಲಿ ತೀರ ವಿಳಂಬವಾಗಿ ರಾಯಭಾರ ಕಚೇರಿಯನ್ನು ಸ್ಥಾಪಿಸಲಾಯಿತು. ಆದರೆ 2017ರವರೆಗೂ ಯಾವೊಬ್ಬ ಪ್ರಧಾನಿಯೂ ಇಸ್ರೇಲ್‌ಗೆ ಭೇಟಿ ನೀಡಲಿಲ್ಲ. ಕಾಂಗ್ರೆಸ್‌ನ ಮುಸ್ಲಿಂ ಓಲೈಕೆ ನೀತಿಯೇ ಇದಕ್ಕೆ ಕಾರಣ ಎಂದು ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ (S Jaishankar) ಟೀಕಿಸಿದ್ದಾರೆ.

VISTARANEWS.COM


on

jaishankar
Koo

ಹೊಸದಿಲ್ಲಿ: ಈ ಹಿಂದೆ ಕೇಂದ್ರದಲ್ಲಿ ಸುದೀರ್ಘ ಕಾಲ ಆಡಳಿತ ನಡೆಸಿದ್ದ ಕಾಂಗ್ರೆಸ್‌ ಪಕ್ಷ ವಿದೇಶಾಂಗ ನೀತಿಯಲ್ಲೂ ಮುಸ್ಲಿಂ ಮತ ಬ್ಯಾಂಕ್‌ ರಾಜಕಾರಣ ನಡೆಸುವ ಮೂಲಕ ದೇಶದ ಹಿತಾಸಕ್ತಿ ಕಡೆಗಣಿಸಿತ್ತು ಎಂದು ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ (S Jaishankar) ಆಪಾದಿಸಿದ್ದಾರೆ.

ವಿಡಿಯೊ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ಮುಸ್ಲಿಂ ಮತ ಬ್ಯಾಂಕ್‌ ಭದ್ರಪಡಿಸಿಕೊಳ್ಳಲು ಮತ್ತು ಮುಸ್ಲಿಮರನ್ನು ಓಲೈಸಲು ಯಾವ ರೀತಿ ಕಾಂಗ್ರೆಸ್‌ ದೇಶದ ಹಿತಾಸಕ್ತಿಯನ್ನು ಕಡೆಗಣಿಸಿತ್ತು ಎನ್ನುವುದನ್ನು ವಿವರಿಸಿದ್ದಾರೆ.

1948ರಲ್ಲಿ ಇಸ್ರೇಲ್‌ ಸ್ವತಂತ್ರ ದೇಶವಾಗಿ ಹೊರ ಹೊಮ್ಮಿತು. ಆದರೆ ಕೇಂದ್ರದಲ್ಲಿದ್ದ ಕಾಂಗ್ರೆಸ್‌ ಸರ್ಕಾರ 1992ರವರೆಗೂ ಅಲ್ಲಿ ಭಾರತದ ರಾಯಭಾರಿಯನ್ನು ನೇಮಿಸಲಿಲ್ಲ. ಆ ಬಳಿಕ 1992ರಲ್ಲಿ ಇಸ್ರೇಲ್‌ನಲ್ಲಿ ತೀರ ವಿಳಂಬವಾಗಿ ರಾಯಭಾರ ಕಚೇರಿಯನ್ನು ಸ್ಥಾಪಿಸಲಾಯಿತು. ಆದರೆ 2017ರವರೆಗೂ ಯಾವೊಬ್ಬ ಪ್ರಧಾನಿಯೂ ಇಸ್ರೇಲ್‌ಗೆ ಭೇಟಿ ನೀಡಲಿಲ್ಲ. ಇಸ್ರೇಲ್‌ ಜತೆ ಬಾಂಧವ್ಯ ಹೊಂದಿದರೆ, ಆ ದೇಶದ ಜತೆ ವ್ಯವಹಾರ ನಡೆಸಿದರೆ, ಆ ದೇಶಕ್ಕೆ ಭೇಟಿ ನೀಡಿದರೆ ಭಾರತದ ಮುಸಲ್ಮಾನರು ತಮ್ಮ ಪಕ್ಷದ ವಿರುದ್ಧ ಸಿಟ್ಟಾಗುತ್ತಾರೆ ಎಂಬ ಒಂದೇ ಕಾರಣಕ್ಕೆ ಕಾಂಗ್ರೆಸ್‌ ಆಡಳಿತ ಇಸ್ರೇಲ್‌ನಂಥ ಬಲಿಷ್ಠ ದೇಶವನ್ನು ಕಡೆಗಣಿಸಿತು ಎಂದು ಜೈಶಂಕರ್‌ ಹೇಳಿದ್ದಾರೆ.

ಕೃಷಿ, ತಂತ್ರಜ್ಞಾನ, ರಕ್ಷಣೆಯಂಥ ಹಲವು ವಿಷಯಗಳಲ್ಲಿ ಇಸ್ರೇಲ್‌ ಅತ್ಯಂತ ಬಲಿಷ್ಠ ಮತ್ತು ಪ್ರಮುಖ ದೇಶ. ಇಸ್ರೇಲ್‌ ಭಾರತದ ಮಿತ್ರ ದೇಶ. ಇಸ್ರೇಲ್‌ನಿಂದ ಭಾರತದ ರಕ್ಷಣಾ ವಲಯಕ್ಕೆ ಹಲವು ಪ್ರಯೋಜನಗಳು ಇದ್ದವು. ಇಷ್ಟಾಗಿಯೂ ಕಾಂಗ್ರೆಸ್‌, ಮುಸ್ಲಿಮರನ್ನು ಓಲೈಸಲು ಇಸ್ರೇಲ್‌ ಸಂಬಂಧದಿಂದ ದೂರ ಉಳಿಯಿತು. ಇದರಿಂದ ನಮ್ಮ ದೇಶಕ್ಕೆ ತುಂಬಾ ನಷ್ಟವಾಯಿತು ಎಂದು ಜೈಶಂಕರ್‌ ವಿವರಿಸಿದ್ದಾರೆ. 2017ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್‌ಗೆ ಭೇಟಿ ನೀಡಿದ್ದರು. ಈ ಮೂಲಕ, ಇಸ್ರೇಲ್‌ಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಎಂಬ ಕೀರ್ತಿಗೆ ಪಾತ್ರರಾಗಿದ್ದರು.

ಭಾರತದ ಶತ್ರು ದೇಶ ಪಾಕಿಸ್ತಾನದ ವಿಚಾರದಲ್ಲೂ ಕಾಂಗ್ರೆಸ್‌ ಆಡಳಿತ ಮುಸ್ಲಿಂ ಓಲೈಕೆಯ ನೀತಿ ಅನುಸರಿಸಿತು. ದೇಶದ ಒಳಗಷ್ಟೇ ಅಲ್ಲ, ಹೊರಗೂ ಓಟ್‌ ಬ್ಯಾಂಕ್‌ ರಾಜಕಾರಣ ನಡೆಸಿತು ಎಂದು ಜೈಶಂಕರ್‌ ಆಪಾದಿಸಿದ್ದಾರೆ.

ಮೋದಿಯಿಂದಲೂ ಕಾಂಗ್ರೆಸ್‌ ವಿರುದ್ಧ ಮತ ಬ್ಯಾಂಕ್‌ ರಾಜಕಾರಣ ಆರೋಪ

ಕಾಂಗ್ರೆಸ್‌ ಆಡಳಿತ ಇರುವ ರಾಜ್ಯಗಳಲ್ಲಿ ಹನುಮಾನ್‌ ಚಾಲೀಸಾ ಹೇಳುವುದೂ ಮಹಾ ಅಪರಾಧ. ಶೋಭಾ ಯಾತ್ರೆ ನಡೆಸಲೂ ಅಲ್ಲಿ ಅವಕಾಶ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಜಸ್ಥಾನದಲ್ಲಿ ತಮ್ಮ ಚುನಾವಣಾ ಪ್ರಚಾರದ (Lok Sabha Election 2024) ವೇಳೆ ಕರ್ನಾಟಕದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವನ್ನು ಮಂಗಳವಾರ ಬೆಳಗ್ಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು.

ಕಾಂಗ್ರೆಸ್‌ ಎಂದೂ ಅಭಿವೃದ್ಧಿ ರಾಜಕಾರಣವನ್ನು ಮಾಡಿಯೇ ಇಲ್ಲ. ಅದು ಮಾಡುತ್ತಿರುವುದು ವೋಟ್‌ ಬ್ಯಾಂಕ್‌ ಪಾಲಿಟಿಕ್ಸ್‌, ಒಂದು ಸಮುದಾಯದ ಓಲೈಕೆ ರಾಜಕಾರಣ ಎಂದೂ ಮೋದಿ ಟೀಕಿಸಿದ್ದರು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು ಮುಸಲ್ಮಾನರಿಗೆ ಮೊದಲ ಆದ್ಯತೆಯಾಗಿ ಹಂಚುತ್ತದೆ ಎಂಬ ಆರೋಪವನ್ನು ಮತ್ತೊಮ್ಮೆ ಪ್ರಸ್ತಾಪ ಮಾಡಿದ ಮೋದಿ, ನಾನು ಸತ್ಯ ಹೇಳಿದರೆ ಕಾಂಗ್ರೆಸ್‌ಗೆ ಮೆಣಸಿನ ಉರಿ ಬಿದ್ದಂತಾಗುತ್ತದೆ. ಈ ದೇಶದ ಸಂಪತ್ತಿನಲ್ಲಿ ಮುಸಲ್ಮಾನರಿಗೆ ಮೊದಲ ಪಾಲು ಸಿಗಬೇಕು ಎಂದು ಮನಮೋಹನ್‌ ಸಿಂಗ್‌ ತಾವು ಪ್ರಧಾನಿಯಾಗಿದ್ದ ಹೇಳಿದ್ದನ್ನು ನೀವು ಮರೆಯಬೇಡಿ. ನಿಮ್ಮ ಕೊರಳಿನ ಮಂಗಳಸೂತ್ರವನ್ನೂ ಅವರು ಬಿಡುವುದಿಲ್ಲ ಎಂದು ಎಚ್ಚರಿಸಿದ್ದರು.

ದಲಿತರ ಮೀಸಲು ಮುಸಲ್ಮಾನರಿಗೆ

ದಲಿತರು ಮತ್ತು ಆದಿವಾಸಿಗಳ ಮೀಸಲ ಪಾಲನ್ನು ಕಿತ್ತು ಕಾಂಗ್ರೆಸ್‌ ಮುಸಲ್ಮಾನರಿಗೆ ನೀಡಲು ಸದಾ ಪ್ರಯತ್ನಿಸುತ್ತಿರುತ್ತದೆ. ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಪರಿಶಿಷ್ಟರ ಮೀಸಲಿನ ಪಾಲನ್ನು ಕಿತ್ತು ಮುಸಲ್ಮಾನರಿಗೆ ನೀಡಿತ್ತು. ಮುಂದೆ ಅಲ್ಲಿ ಬಿಜೆಪಿ ಸರ್ಕಾರ ಬಂದಾಗ ಅದನ್ನು ರದ್ದುಪಡಿಸಿ ಎಸ್‌ಸಿ, ಎಸ್‌ಟಿಯವರಿಗೆ ನ್ಯಾಯ ದೊರಕಿಸಲಾಯಿತು. ಆಂಧ್ರ ಪ್ರದೇಶದ ಕಾಂಗ್ರೆಸ್‌ ಸರ್ಕಾರ ಕೂಡ ಎಸ್‌ಸಿ, ಎಸ್‌ಟಿ ಮೀಸಲು ಕಡಿಮೆ ಮಾಡಿ ಮುಸಲ್ಮಾನರ ಮೀಸಲು ಹೆಚ್ಚಿಸಲು ನಾಲ್ಕು ಬಾರಿ ವಿಧೇಯಕ ಮಂಡಿಸಿ ಕಾಯಿದೆ ರೂಪಿಸಿತ್ತು. ಆದರೆ ಕೋರ್ಟ್‌ ಮಧ್ಯಪ್ರವೇಶದ ಕಾರಣ ಅದು ಸಾಧ್ಯವಾಗಲಿಲ್ಲ. 2012ರಲ್ಲಿ ಕೇಂದ್ರದ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಹೀಗೆಯೇ ಮಾಡಲು ಹೊರಟಿತ್ತು. ಎಸ್‌ಸಿ-ಎಸ್‌ಟಿ ಮತ್ತು ಆಸಿವಾಸಿಗಳಿಗೆ ನಾನು ಯಾವ ಕಾರಣಕ್ಕೂ ಮೀಸಲಿನಲ್ಲಿ ನಷ್ಟ ಮಾಡಲು ಬಿಡುವುದಿಲ್ಲ. ಇದು ಮೋದಿ ಗ್ಯಾರಂಟಿ ಎಂದು ಮೋದಿ ಘೋಷಿಸಿದ್ದರು.

ನುಸುಳುಕೋರರಿಗೆ ಸೌಲಭ್ಯ ಕೊಡಬೇಕೆ?

ನುಸುಳುಕೋರರಿಗೆ, ದೇಶದ್ರೋಹಿಗಳಿಗೆ ಕಾಂಗ್ರೆಸ್‌ ಈ ದೇಶದ ಸಂಪತ್ತು ಹಂಚಲು ಬಯಸುತ್ತದೆ ಎಂದು ತೀವ್ರ ವಾಗ್ದಾಳಿ ನಡೆಸಿದ ಮೋದಿ, ನೆರೆಯ ದೇಶದಿಂದ ಪದೇಪದೆ ದಾಳಿಗೆ ಒಳಗಾಗುವ ನಮ್ಮ ವೀರ ಸೈನಿಕರಿಗೆ ಯಾವುದೇ ನೆರವು ನೀಡುತ್ತಿರಲಿಲ್ಲ. ಆದರೆ ನಾವು ನಮ್ಮ ಯೋಧರಿಗೆ ಎಲ್ಲ ರೀತಿಯ ನೆರವು ನೀಡುತ್ತಿದ್ದೇವೆ. ಅವರ ಆತ್ಮಸ್ಥೈರ್ಯ ಹೆಚ್ಚಿಸುತ್ತಿದ್ದೇವೆ ಎಂದಿದ್ದರು.

ಇದನ್ನೂ ಓದಿ: S Jaishankar : ಪಾಠ ಹೇಳಲು ಬರಬೇಡಿ; ಭಾರತದ ಚುನಾವಣಾ ವಿಚಾರಕ್ಕೆ ಮೂಗು ತೂರಿಸಿದ ವಿಶ್ವ ಸಂಸ್ಥೆಗೆ ಜೈಶಂಕರ್​​ ತಿರುಗೇಟು

ಕಾಂಗ್ರೆಸ್‌ ಪ್ರಣಾಳಿಕೆಯನ್ನು ನೀವು ಎಚ್ಚರಿಕೆಯಿಂದ ಓದಿ. ಅವರು ಅಧಿಕಾರಕ್ಕೆ ಬಂದರೆ ನಿಮ್ಮ ಸಂಪತ್ತಿನ ಸರ್ವೆ ನಡೆಸುತ್ತಾರಂತೆ. ಆ ಬಳಿಕ ಅದನ್ನು ಅಗತ್ಯ ಇದ್ದವರಿಗೆ ಹಂಚುತ್ತಾರಂತೆ. ಆ ಅಗತ್ಯ ಇದ್ದವರು ಯಾರು ಎಂಬುದು ನಿಮಗೆ ಗೊತ್ತಿರಲಿ ಎಂದು ಮೋದಿ ಹೇಳಿದ್ದರು.

Continue Reading
Advertisement
Lok Sabha Election 2024 BJP released Pick pocket Congress poster
Lok Sabha Election 20247 mins ago

LoK Sabha Election 2024: ಚೊಂಬು ಆರೋಪಕ್ಕೆ ಚಿಪ್ಪು ಕೊಟ್ಟ ಬಿಜೆಪಿ! ಪಿಕ್‌ ಪಾಕೆಟ್‌ ಕಾಂಗ್ರೆಸ್‌ ಪೋಸ್ಟರ್‌ ಬಿಡುಗಡೆ!

Match Fixing
ಕ್ರೀಡೆ9 mins ago

Match Fixing : ಇರ್ಫಾನ್​ ಪಠಾಣ್​, ಸುರೇಶ್ ರೈನಾ ಪಾಲ್ಗೊಂಡಿದ್ದ ​ ಕ್ರಿಕೆಟ್ ಲೀಗ್​ನಲ್ಲಿ ಮ್ಯಾಚ್​ ಫಿಕ್ಸಿಂಗ್?

Ballari lok sabha constituency congress candidate e Tukaram election campaign in Ballari city
ಬಳ್ಳಾರಿ12 mins ago

Lok Sabha Election 2024: ಪಂಚ ಗ್ಯಾರಂಟಿ ಜಾರಿ ಮಾಡಿ ನುಡಿದಂತೆ ನಡೆದಿದ್ದು ಕಾಂಗ್ರೆಸ್ ಸರ್ಕಾರ: ಈ.ತುಕಾರಾಂ

Murugha Seer
ಕರ್ನಾಟಕ15 mins ago

Murugha Seer: ಪೋಕ್ಸೊ ಕೇಸ್‌ನಲ್ಲಿ ಮುರುಘಾ ಶ್ರೀಗೆ ಮತ್ತೆ ಸಂಕಷ್ಟ; 4 ತಿಂಗಳು ಜೈಲಿಗೆ

T20 World Cup 2024
ಕ್ರಿಕೆಟ್24 mins ago

T20 World Cup 2024: ಟಿ20 ವಿಶ್ವಕಪ್​ಗೆ ಭಾರತ ತಂಡ ಪ್ರಕಟಿಸಲು ಮುಹೂರ್ತ ಫಿಕ್ಸ್‌​; ಈ ದಿನ ಘೋಷಣೆ

BrahMos Missiles
ಪ್ರಮುಖ ಸುದ್ದಿ32 mins ago

BrahMos Missiles: ಫಿಲಿಪ್ಪೀನ್ಸ್‌ಗೆ ನಾಲ್ಕನೇ ಬ್ರಹ್ಮೋಸ್‌ ಕ್ಷಿಪಣಿ ಬ್ಯಾಟರಿ ಕಳುಹಿಸಲು ಭಾರತ ಸಜ್ಜು

Reliance Jio
ವಾಣಿಜ್ಯ37 mins ago

Reliance Jio: ಡಾಟಾ ಟ್ರಾಫಿಕ್‌; ವಿಶ್ವದ ಅತಿದೊಡ್ಡ ಮೊಬೈಲ್ ಆಪರೇಟರ್ ಆಗಿ ಹೊರ ಹೊಮ್ಮಿದ ರಿಲಯನ್ಸ್ ಜಿಯೊ

CM Siddaramaiah Congress protests against Centre Go back to Modi and Amit Shah announced
ಕರ್ನಾಟಕ52 mins ago

CM Siddaramaiah: ಕೇಂದ್ರದ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ; ಮೋದಿ, ಅಮಿತ್ ಶಾಗೆ ಗೋ ಬ್ಯಾಕ್‌ ಘೋಷಣೆ

Mahesh Babu
ಕ್ರಿಕೆಟ್1 hour ago

IPL 2024: ಸನ್​ರೈಸರ್ಸ್​ ತಂಡದ ಆಟಗಾರರನ್ನು ಭೇಟಿ ಮಾಡಿದ ನಟ ಮಹೇಶ್‌ ಬಾಬು

arvind kejriwal in tihar jail
ದೇಶ1 hour ago

Arvind Kejriwal: ಕೇಜ್ರಿವಾಲ್‌, ಕವಿತಾ ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ11 hours ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು23 hours ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ24 hours ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು1 day ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು1 day ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ1 day ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ2 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ3 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20243 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20243 days ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

ಟ್ರೆಂಡಿಂಗ್‌